ಕಾಂಗ್ರೆಸ್ ಮುಖಂಡ ಅಬ್ದುಲ್‌ ಜಬ್ಬಾರ್ ರಾಜೀನಾಮೆ ವಿಚಾರಕ್ಕೆ ಟ್ವಿಸ್ಟ್​​: ಸ್ವ ಇಚ್ಛೆಯಿಂದ ಹುದ್ದೆ ತೊರೆದಿದ್ದೇನೆ ಎಂದ ಪರಿಷತ್​​ ಸದಸ್ಯ

ಕಾಂಗ್ರೆಸ್ ಮುಖಂಡ ಅಬ್ದುಲ್‌ ಜಬ್ಬಾರ್ ರಾಜೀನಾಮೆ ವಿಚಾರಕ್ಕೆ ಟ್ವಿಸ್ಟ್​​: ಸ್ವ ಇಚ್ಛೆಯಿಂದ ಹುದ್ದೆ ತೊರೆದಿದ್ದೇನೆ ಎಂದ ಪರಿಷತ್​​ ಸದಸ್ಯ

ದಾವಣಗೆರೆ, ಏಪ್ರಿಲ್​​ 12: ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಮುಖಂಡ ಅಬ್ದುಲ್‌ ಜಬ್ಬಾರ್ ರಾಜೀನಾಮೆ ವಿಚಾರಕ್ಕೆ ಟ್ವಿಸ್ಟ್​​ ಸಿಕ್ಕಿದೆ. ದಾವಣಗೆರೆ ಉಪ ಚುನಾವಣೆ ವೇಳೆ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್​​ ವಿರುದ್ಧ ಷಡ್ಯಂತ್ರ ಆರೋಪ ಸಂಬಂಧ ಹೈಕಮಾಂಡ್​​ ಕೆಲ ನಾಯಕರ ರಾಜೀನಾಮೆ ಕೇಳಿದೆ ಎನ್ನಲಾಗಿತ್ತು. ಆದರೆ ಈ ಬಗ್ಗೆ ಪ್ರತಿಕ್ರಿಯಿಸಿರುವ ವಿಧಾನ ಪರಿಷತ್ ಸದಸ್ಯ ಅಬ್ದುಲ್‌ ಜಬ್ಬಾರ್, ಸ್ವ ಇಚ್ಛೆಯಿಂದ ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಈ ಬಗ್ಗೆ ನನಗೆ ಯಾರೂ ಒತ್ತಡ ಹಾಕಿಲ್ಲ ಎಂದು ಹೇಳಿದ್ದಾರೆ.

ಸಾಮಾಜಿಕ‌ ಜಾಲತಾಣದಲ್ಲಿ ಸ್ಪಷ್ಟನೆ

ಸಾಮಾಜಿಕ‌ ಜಾಲತಾಣದಲ್ಲಿ ಅಬ್ದುಲ್ ಜಬ್ಬಾರ್​​ ಈ ಬಗ್ಗೆ ಸಂದೇಶ ಪೋಸ್ಟ್​​ ಮಾಡಿದ್ದು, ಕೆಪಿಸಿಸಿ ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ಹಾಗೂ ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷನಾಗಿ ಸೇವೆ ಸಲ್ಲಿಸಿದ್ದೇನೆ. 45 ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ದುಡಿಯುತ್ತಿದ್ದೇನೆ. ವಿಧಾ‌ನ ಪರಿಷತ್ ಸದಸ್ಯನಾಗಿ ಸಹ ಸೇವೆ ಮಾಡುತ್ತಿದ್ದೇನೆ. ಹೀಗಿರುವಾಗ ನಮ್ಮ ಪಕ್ಷದ ಮುಖಂಡರೇ ನಮ್ಮ ವಿರುದ್ಧ ಮಾತಾಡಿದ್ದು ಬೇಸರವಾಗಿದೆ. ಆ ಕಾರಣಕ್ಕೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಮುಸ್ಲಿಂ ಸಮಾಜದ ಮುಖಂಡ ಸಚಿವ ಜಮೀರ್ ಅಹ್ಮದ್​​ಗೂ ಅವಮಾನ ಮಾಡಲಾಗಿದ್ದು, ಏಕವಚನದಲ್ಲಿ ವಾಗ್ದಾಳಿ ನಡೆಸಿರೋದು ಬೇಸರ ತಂದಿದೆ ಎಂದಿದ್ದಾರೆ. ಆ ಮೂಲಕ ಪರೋಕ್ಷವಾಗಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ: ನನ್ನಿಂದ ಅಂತಾ ತಪ್ಪು‌ ಏನಾಗಿದೆ? ರಾಜೀನಾಮೆ ಬೆನ್ನಲ್ಲೇ ಗುಡುಗಿದ ಕಾಂಗ್ರೆಸ್ ಮುಖಂಡ ಅಬ್ದುಲ್‌ ಜಬ್ಬಾರ್

ನಿನ್ನೆ ರಾಜ್ಯ ಕೆಪಿಸಿಸಿ ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ಸ್ಥಾನಕ್ಕೆ ಅಬ್ದುಲ್ ಜಬ್ಬಾರ್ ರಾಜೀನಾಮೆ ಬೆನ್ನಲ್ಲೇ ಅವರ ಆಪ್ತರಾದ ಅಹಮ್ಮದ್ ಸಿರಾಜ್, ಅಬ್ದುಲ್ ಗನಿ ತಾಹೀರ್, ನೂರ್ ಅಹ್ಮದ್, ಹುಸೇನ್ ಉಕ್ಕಡಗಾತ್ರಿ ಸೇರಿದಂತೆ ಪ್ರಮುಖರು ಸಾಮೂಹಿಕ ರಾಜೀನಾಮೆ ನೀಡಿದ್ದಾರೆ. ಮಹಮ್ಮದ್ ಸಿರಾಜ್ ಕೆಪಿಸಿಸಿ ರಾಜ್ಯ ಅಲ್ಪಸಂಖ್ಯಾತ ಘಟಕ ಉಪಾಧ್ಯಕ್ಷ ಹಾಗೂ ವಕ್ಫ ಮಂಡಳಿ ಮಾಜಿ ಅಧ್ಯಕ್ಷರಾಗಿದ್ದರೆ, ಉಳಿದ ಮೂವರುನ ಕೆಪಿಸಿಸಿ ಅಲ್ಪ ಸಂಖ್ಯಾತ ಘಟಕದ ಕಾರ್ಯದರ್ಶಿಗಳಾಗಿದ್ದರು. ಒಟ್ಟಿಗೆ ಮಾತುಕತೆ ಬಳಿಕ ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ವಿವಿಧ ಹುದ್ದೆಗಳಿಗೆ ಇವರು ರಾಜೀನಾಮೆ ಸಲ್ಲಿಸಿದ್ದಾರೆ ಎನ್ನಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಡಾ. ರಾಜ್​ಕುಮಾರ್ 20ನೇ ವರ್ಷದ ಪುಣ್ಯಸ್ಮರಣೆ: ಅಭಿಮಾನಿಗಳಿಗೆ ಅನ್ನದಾನ

ಕನ್ನಡ ಚಿತ್ರರಂಗದ ದಿಗ್ಗಜ ನಟ ಡಾ. ರಾಜ್​ಕುಮಾರ್ ಅವರು ನಿಧನರಾಗಿ ಇಂದಿಗೆ (ಏಪ್ರಿಲ್ 12) ಇಪ್ಪತ್ತು ವರ್ಷಗಳು ಕಳೆದಿವೆ. ಅವರ ಪುಣ್ಯಸ್ಮರಣೆ (Death Anniversary) ಅಂಗವಾಗಿ ಅಪಾರ ಸಂಖ್ಯೆಯ ಅಭಿಮಾನಿಗಳು ಬೆಂಗಳೂರಿನ ಕಂಠೀರವ ಸ್ಟುಡಿಯೋ ಆವರಣದಲ್ಲಿ ಇರುವ ಸಮಾಧಿಗೆ ನಮಿಸಿದ್ದಾರೆ. ಆಗಮಿಸಿದ ಎಲ್ಲರಿಗೂ ಅನ್ನದಾನದ ವ್ಯವಸ್ಥೆ ಮಾಡಲಾಗಿದೆ. ಅಣ್ಣಾವ್ರು ಇಲ್ಲವಾಗಿ 20 ವರ್ಷಗಳು ಕಳೆದರೂ ಕೂಡ ಜನರಿಗೆ ಅವರ ಮೇಲಿನ ಅಭಿಮಾನ ಕಡಿಮೆ ಆಗಿಲ್ಲ. ಮಕ್ಕಳು, ಮಹಿಳೆಯರು ಸೇರಿದಂತೆ ಅಪಾರ ಸಂಖ್ಯೆ ಅಭಿಮಾನಿಗಳು ಇಂದು ಅಣ್ಣಾವ್ರ ಸಮಾಧಿಗೆ ನಮಿಸಿದ್ದಾರೆ. ಪ್ರತಿ ವರ್ಷದಂತೆ ಈ ವರ್ಷ ಕೂಡ ಅಭಿಮಾನಿಗಳು ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಡಾ. ರಾಜ್​ಕುಮಾರ್ (Dr Rajkumar) ಕುಟುಂಬದ ಸದಸ್ಯರು ಬಂದು ಸಮಾಧಿಗೆ ಎಡೆ ಇಟ್ಟು ಪೂಜೆ ಸಲ್ಲಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Axar Patel: ನಮ್ಮ ಬೌಲಿಂಗ್ ಚೆನ್ನಾಗಿತ್ತು: ಸೋಲಿಗೆ ಈ ತಪ್ಪುಗಳೇ ಕಾರಣ..!

IPL 2026: ಐಪಿಎಲ್ 2026ರ 18ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ವಿರುದ್ಧ 23 ರನ್‌ಗಳ ಸೋಲು ಕಂಡ ನಂತರ ಡೆಲ್ಲಿ ಕ್ಯಾಪಿಟಲ್ಸ್ (DC) ನಾಯಕ ಅಕ್ಷರ್ ಪಟೇಲ್ ತಮ್ಮ ತಂಡದ ಪ್ರದರ್ಶನದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಚೆನ್ನೈನಲ್ಲಿ ನಡೆದ ಈ ಪಂದ್ಯದ ನಂತರದ ಮಾತನಾಡಿದ ಅವರು, ಸೋಲಿಗೆ ಮುಖ್ಯ ಕಾರಣಗಳನ್ನು ವಿಶ್ಲೇಷಿಸಿದ್ದಾರೆ.

ಫೀಲ್ಡಿಂಗ್ ವೈಫಲ್ಯವೇ ಪಂದ್ಯದ ತಿರುವು:

ಅಕ್ಷರ್ ಪಟೇಲ್ ಅವರ ಪ್ರಕಾರ, ಈ ಪಂದ್ಯದ ಫಲಿತಾಂಶವನ್ನು ಬದಲಿಸಿದ್ದು ತಂಡದ ಕಳಪೆ ಫೀಲ್ಡಿಂಗ್. “ನನ್ನ ಪ್ರಕಾರ ಫೀಲ್ಡಿಂಗ್‌ನಲ್ಲಿನ ವ್ಯತ್ಯಾಸವೇ ಪಂದ್ಯದ ಹಣೆಬರಹ ನಿರ್ಧರಿಸಿತು. ನಾವು ಒಂದು ಅಥವಾ ಎರಡು ಪ್ರಮುಖ ಕ್ಯಾಚ್‌ಗಳನ್ನು ಕೈಬಿಟ್ಟೆವು. ಆ ತಪ್ಪುಗಳನ್ನು ಮಾಡದಿದ್ದರೆ ಪಂದ್ಯದ ಫಲಿತಾಂಶವೇ ಬೇರೆಯಾಗಿರುತ್ತಿತ್ತು,” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ದಿಢೀರ್ ಕುಸಿತವೇ ಹಿನ್ನಡೆ:

ಚೇಸಿಂಗ್ ಬಗ್ಗೆ ಮಾತನಾಡಿದ ಅಕ್ಷರ್ ಪಟೇಲ್, ತಂಡಕ್ಕೆ ಉತ್ತಮ ಆರಂಭ ಸಿಕ್ಕರೂ ಅದನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದಿದ್ದಾರೆ. “ಪವರ್‌ಪ್ಲೇ ನಂತರ ನಾವು ಸತತವಾಗಿ ಎರಡು-ಮೂರು ವಿಕೆಟ್ ಕಳೆದುಕೊಂಡೆವು. ಇದು ನಮ್ಮ ಬ್ಯಾಟಿಂಗ್ ಲಯವನ್ನು ಪೂರ್ತಿ ಹಾಳುಮಾಡಿತು. ಬ್ಯಾಟರ್‌ಗಳು ಶ್ರಮವಹಿಸಿದರೂ, ಬ್ಯಾಕ್ ಟು ಬ್ಯಾಕ್ ವಿಕೆಟ್ ಕಳೆದುಕೊಂಡಿದ್ದು ನಮಗೆ ಹಿನ್ನಡೆಯಾಯಿತು,” ಎಂದಿದ್ದಾರೆ.

ಬೌಲರ್‌ಗಳಿಗೆ ಪ್ರಶಂಸೆ:

ಸೋಲಿನ ನಡುವೆಯೂ ಅಕ್ಷರ್ ತಮ್ಮ ಬೌಲರ್‌ಗಳ ಕಾರ್ಯವೈಖರಿಯನ್ನು ಶ್ಲಾಘಿಸಿದ್ದಾರೆ. “ಸಿಎಸ್‌ಕೆ ಬ್ಯಾಟರ್‌ಗಳು ಕ್ರೀಸ್‌ಗೆ ಭದ್ರವಾಗಿ ಅಂಟಿಕೊಂಡಿದ್ದರೂ, ಅವರನ್ನು 212 ರನ್‌ಗಳಿಗೆ ನಿಯಂತ್ರಿಸಿದ್ದು ದೊಡ್ಡ ವಿಷಯ. ಬೌಲರ್‌ಗಳು ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ. ಇದೊಂದು ಅತ್ಯುತ್ತಮ ಬ್ಯಾಟಿಂಗ್ ಪಿಚ್ ಆಗಿತ್ತು. ಇದಾಗ್ಯೂ ನಮ್ಮ ಬೌಲರ್​ಗಳನ್ನು ಎದುರಾಳಿಗಳನ್ನು 212 ರನ್​ಗಳಿಗೆ ನಿಯಂತ್ರಿಸಿರುವುದು ಶ್ಲಾಘನೀಯ ” ಎಂದು ತಿಳಿಸಿದ್ದಾರೆ.

ಇನ್ನು ಪಿಚ್ ಬಗ್ಗೆ ಮಾತನಾಡುತ್ತಾ, “ಪಿಚ್ ನಿಧಾನಗತಿಯಾಯಿತು ಎಂದು ನನಗನ್ನಿಸುವುದಿಲ್ಲ. ಇಬ್ಬನಿ ಇದ್ದ ಕಾರಣ ಬೌಲಿಂಗ್ ಮಾಡುವುದು ಸಿಎಸ್‌ಕೆ ತಂಡಕ್ಕೆ ಸವಾಲಾಗಿತ್ತು. ಆದರೆ ಅವರು ಆ ಪರಿಸ್ಥಿತಿಯಲ್ಲೂ ಅತ್ಯುತ್ತಮವಾಗಿ ಬೌಲಿಂಗ್ ಮಾಡಿದರು,” ಎಂದು ಎದುರಾಳಿ ತಂಡದ ಬೌಲಿಂಗ್‌ ಅನ್ನು ಕೂಡ ಅಕ್ಷರ್ ಪಟೇಲ್ ಹೊಗಳಿದ್ದಾರೆ.

ಇದನ್ನೂ ಓದಿ: ಮೈದಾನಕ್ಕಿಳಿಯದಿದ್ದರೂ ನಿತೀಶ್ ರಾಣಾಗೆ ಬಿತ್ತು ಭಾರೀ ದಂಡ..!

ಒಟ್ಟಾರೆಯಾಗಿ, ಬ್ಯಾಟಿಂಗ್ ಮತ್ತು ಬೌಲಿಂಗ್​ನಲ್ಲಿ ನಮ್ಮ ಆಟಗಾರರು ಉತ್ತಮ ಪ್ರದರ್ಶನ ನೀಡಿದ್ದಾರೆ. ಇದಾಗ್ಯೂ ಫೀಲ್ಡಿಂಗ್‌ನಲ್ಲಿನ ತಪ್ಪುಗಳೇ ಸೋಲಿಗೆ ಮೂಲ ಕಾರಣ ಎಂದು ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಅಕ್ಷರ್ ಪಟೇಲ್ ಅಭಿಪ್ರಾಯಪಟ್ಟಿದ್ದಾರೆ.

 

Source link

ಪಿಪಿಎಫ್​ನಲ್ಲಿ ಒಂದು ಕೋಟಿ ರೂ ಹಣ ಪಡೆಯುವುದು ಹೇಗೆ? 61,000 ರೂ ಮಾಸಿಕ ಆದಾಯ ಪಡೆಯಲು ಹೀಗೆ ಮಾಡಿ

ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಅಥವಾ ಪಿಪಿಎಫ್ (PPF- Public Provident Fund) ಸರ್ಕಾರದಿಂದ ನಡೆಸಲಾಗುವ ಸಣ್ಣ ಉಳಿತಾಯ ಯೋಜನೆಗಳಲ್ಲಿ ಒಂದು. ದೀರ್ಘಾವಧಿ ಹೂಡಿಕೆಗೆ ಅವಕಾಶ ಕೊಡುವ ಸ್ಕೀಮ್. ಪಿಪಿಎಫ್​ನನಲ್ಲಿ ವಾರ್ಷಿಕ ಬಡ್ಡಿದರ ಶೇ. 7.1 ಇದೆ. ಬ್ಯಾಂಕ್ ಡೆಪಾಸಿಟ್​ಗಳಿಗಿಂತ ತುಸು ಹೆಚ್ಚು. ವರ್ಷಕ್ಕೆ ಒಂದೂವರೆ ಲಕ್ಷ ರೂವರೆಗೆ ಹೂಡಿಕೆಗೆ ಅವಕಾಶ ಕೊಡುತ್ತದೆ. ತಿಂಗಳಿಗೆ 12,500 ರೂವರೆಗೂ ಹೂಡಿಕೆ ಮಾಡಬಹುದು. ಕೋಟಿ ರೂ ಕಾರ್ಪಸ್ ನಿರ್ಮಿಸಬಯಸುವವರು ಪಿಪಿಎಫ್ ಮೂಲಕ ಅದನ್ನು ಸಾಕಾರಗೊಳಿಸಬಹುದು.

ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಸ್ಕೀಮ್​ನ ವಿವರ

  • ಯಾರು ಮಾಡಿಸಬಹುದು?: ಯಾರು ಬೇಕಾದರೂ ಪಿಪಿಎಫ್ ಅಕೌಂಟ್ ತೆರೆಯಬಹುದು.
  • ಎಷ್ಟು ಹೂಡಿಕೆ: ವರ್ಷಕ್ಕೆ 1.5 ಲಕ್ಷ ರೂವರೆಗೆ ಹೂಡಿಕೆ
  • ಎಷ್ಟು ಅವಧಿ: ಪಿಪಿಎಫ್ ಸ್ಕೀಮ್​ನ ಮೆಚ್ಯೂರಿಟಿ ಅವಧಿ 15 ವರ್ಷ. ಆ ಬಳಿಕ ಐದೈದು ವರ್ಷ ಅವಧಿ ಹೆಚ್ಚಿಸಲು ಅವಕಾಶ.

ಇದನ್ನೂ ಓದಿ: ಪಿಪಿಎಫ್​ನಲ್ಲಿ ಕೇವಲ 1 ಪರ್ಸಂಟ್ ಬಡ್ಡಿಗೆ ಸಾಲ? ಯಾವ ವರ್ಷ, ಎಷ್ಟು ಅವಧಿ ಇತ್ಯಾದಿ ನಿಯಮಗಳು ತಿಳಿದಿರಿ

ಪಿಪಿಎಫ್ ಮೂಲಕ 1 ಕೋಟಿ ರೂ ಕಾರ್ಪಸ್ ಹೊಂದಲು ಎಷ್ಟು ವರ್ಷ ಬೇಕು?

ನೀವು ಪಿಪಿಎಫ್​ನಲ್ಲಿ ವರ್ಷಕ್ಕೆ ಒಂದೂವರೆ ಲಕ್ಷ ರೂನಂತೆ 15 ವರ್ಷ ಹೂಡಿಕೆ ಮಾಡಿದರೆ, ಒಟ್ಟು ಕಾರ್ಪಸ್ 40.68 ಲಕ್ಷ ರೂ ಆಗುತ್ತದೆ. ಐದು ವರ್ಷ ಹೂಡಿಕೆ ವಿಸ್ತರಣೆ ಮಾಡಿದರೆ ಕಾರ್ಪಸ್ 66.58 ಲಕ್ಷ ರೂಗೆ ಏರುತ್ತದೆ. ಇನ್ನೂ ಐದು ವರ್ಷ ಮುಂದುವರಿಸಿದರೆ ಒಟ್ಟು ಕಾರ್ಪಸ್ 1.03 ಕೋಟಿ ರೂ ಆಗುತ್ತದೆ. ಅಂದರೆ, 25 ವರ್ಷ ಕಾಲ ನೀವು ಒಂದೂವರೆ ಲಕ್ಷ ವಾರ್ಷಿಕ ಹೂಡಿಕೆ ಮಾಡುತ್ತಾ ಹೋದಾಗ ಒಂದು ಕೋಟಿ ರೂ ಹೊಂದಲು ಸಾಧ್ಯವಾಗುತ್ತದೆ.

25 ವರ್ಷದ ನಂತರವೂ ನೀವು ಹೂಡಿಕೆ ಮುಂದುವರಿಸಬಹುದು. 30 ವರ್ಷಕ್ಕೆ ನಿಮ್ಮ ಹೂಡಿಕೆಯ ಫಲವು 1.54 ಲಕ್ಷ ರೂ ಆಗಿರುತ್ತದೆ. ಹೀಗೆ ಹೂಡಿಕೆ ಅವಧಿ ಹೆಚ್ಚಿಸುತ್ತಾ ಹೋದಂತೆ ಹೆಚ್ಚೆಚ್ಚು ಫಲ ದೊರಕುತ್ತಾ ಹೋಗುತ್ತದೆ.

ಇದನ್ನೂ ಓದಿ: ಮುಖ್ಯ ಬ್ಯಾಂಕುಗಳಲ್ಲಿ ಶೇ. 7.75ರವರೆಗೆ ಫಿಕ್ಸೆಡ್ ಡೆಪಾಸಿಟ್ ದರಗಳು

ಪಿಪಿಎಫ್ ಮೂಲಕ ಮಾಸಿಕ ಆದಾಯ

ಪಿಪಿಎಫ್​ನಲ್ಲಿ ನೀವು 25 ವರ್ಷ ಹೂಡಿಕೆ ಮಾಡಿದಾಗ ಒಟ್ಟು ಕಾರ್ಪಸ್ 1.03 ಕೋಟಿ ರೂ ಆಗುತ್ತದೆ. ಈ ಸಂದರ್ಭದಲ್ಲಿ ನೀವು ಬಡ್ಡಿಯನ್ನು ಮಾತ್ರವೇ ಹಿಂಪಡೆಯುವ ಅವಕಾಶ ನೀಡಲಾಗುತ್ತದೆ. 1.03 ಕೋಟಿ ರೂಗೆ ಒಂದು ವರ್ಷದಲ್ಲಿ ಸಿಗುವ ಬಡ್ಡಿ 7.32 ಲಕ್ಷ ರೂ ಆಗುತ್ತದೆ. ವರ್ಷಕ್ಕೆ ಒಮ್ಮೆ ಬಡ್ಡಿ ಹಿಂಪಡೆಯಬಹುದು. ಅದನ್ನು 12 ತಿಂಗಳಿಗೆ ಭಾಗಿಸಿದರೆ ಒಂದು ತಿಂಗಳಿಗೆ ಸುಮಾರು 61,000 ರೂ ಹಣವಾಗುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

‘ಲವ್ ಇನ್ಶೂರೆನ್ಸ್ ಕಂಪನಿ’ ಬಾಕ್ಸ್ ಆಫೀಸ್ ಕಲೆಕ್ಷನ್: 2ನೇ ದಿನವೂ ಮಂದಗತಿ

ವಿಘ್ನೇಶ್ ಶಿವನ್ ನಿರ್ದೇಶನದ, ಪ್ರದೀಪ್ ರಂಗನಾಥನ್ ನಟನೆಯ ‘ಲವ್ ಇನ್ಶೂರೆನ್ಸ್ ಕಂಪನಿ’ (Love Insurance Kompany) ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಸಾಧಾರಣ ಕಲೆಕ್ಷನ್ ಮಾಡುತ್ತಿದೆ. ವಾರಾಂತ್ಯದ ರಜಾ ದಿನಗಳಿದ್ದರೂ ಸಹ ಚಿತ್ರದ ಕಲೆಕ್ಷನ್‌ನಲ್ಲಿ ದೊಡ್ಡ ಮಟ್ಟದ ಏರಿಕೆ ಕಂಡುಬಂದಿಲ್ಲ. ಸೈನ್ಸ್ ಫಿಕ್ಷನ್ ರೊಮ್ಯಾಂಟಿಕ್ ಕಾಮಿಡಿ ಈ ಸಿನಿಮಾದಲ್ಲಿದೆ. ಈ ಸಿನಿಮಾ ಮೇಲೆ ಪ್ರದೀಪ್ ರಂಗನಾಥನ್ (Pradeep Ranganathan) ಫ್ಯಾನ್ಸ್ ಬಹಳ ನಿರೀಕ್ಷೆ ಹೊಂದಿದ್ದರು. ಆದರೆ ಆ ನಿರೀಕ್ಷೆಯ ಮಟ್ಟವನ್ನು ತಲುಪಲು ಈ ಸಿನಿಮಾಗೆ ಸಾಧ್ಯವಾಗಿಲ್ಲ.

Sacnilk ವರದಿಯ ಪ್ರಕಾರ ಮೊದಲ ದಿನ ಈ ಸಿನಿಮಾಗೆ 7.05 ಕೋಟಿ ರೂಪಾಯಿ ಕಲೆಕ್ಷನ್ ಆಯಿತು. ಎರಡನೇ ದಿನ 7.70 ಕೋಟಿ ರೂಪಾಯಿ ಗಳಿಸಿದೆ. 2 ದಿನಗಳಲ್ಲಿ ಒಟ್ಟು ಗಳಿಕೆ 14.75 ಕೋಟಿ ರೂಪಾಯಿ ಆಗಿದೆ. ಪ್ರದೀಪ್ ರಂಗನಾಥನ್ ಅವರ ಈ ಹಿಂದಿನ ಸಿನಿಮಾಗಳಿಗೆ ಹೋಲಿಸಿದರೆ ಇದು ಉತ್ತಮ ಕಲೆಕ್ಷನ್ ಆಲ್ಲ ಎಂಬುದು ತಿಳಿಯುತ್ತದೆ.

ಪ್ರದೀಪ್ ರಂಗನಾಥನ್ ಅವರ ಮೊದಲ ಸಿನಿಮಾ ‘ಲವ್ ಟುಡೇ’ಗೆ ಹೋಲಿಸಿದರೆ ‘ಲವ್ ಇನ್ಶೂರೆನ್ಸ್ ಕಂಪನಿ’ ಉತ್ತಮ ಆರಂಭ ಪಡೆದಿದೆ. ‘ಲವ್ ಟುಡೇ’ ಮೊದಲ ಎರಡು ದಿನಗಳಲ್ಲಿ ಕೇವಲ ₹7 ಕೋಟಿ ಗಳಿಸಿತ್ತು. ಆದರೆ, ಪ್ರದೀಪ್ ಅವರ ಇತ್ತೀಚಿನ ಹಿಟ್ ಚಿತ್ರಗಳಾದ ‘ಡ್ಯೂಡ್’ (20 ಕೋಟಿ) ಮತ್ತು ‘ಡ್ರ್ಯಾಗನ್’ (17 ಕೋಟಿ) ಸಿನಿಮಾಗಳಿಗೆ ಹೋಲಿಸಿದರೆ ಈ ಸಲ ಕಲೆಕ್ಷನ್ ಕೊಂಚ ಕುಸಿದಿದೆ.

ಸಾಮಾನ್ಯವಾಗಿ ಶನಿವಾರದಂದು ಸಿನಿಮಾಗಳ ಗಳಿಕೆಯಲ್ಲಿ ಭಾರೀ ಏರಿಕೆ ಇರುತ್ತಿತ್ತು. ಆದರೆ ‘ಲವ್ ಇನ್ಶೂರೆನ್ಸ್ ಕಂಪನಿ’ ಚಿತ್ರದಲ್ಲಿ ಅಂತಹ ಮ್ಯಾಜಿಕ್ ನಡೆದಿಲ್ಲ. ಈ ಚಿತ್ರದ ಜೊತೆ ರಿಲೀಸ್ ಆದ ಅಡಿವಿ ಶೇಷ್ ಅವರ ‘ಡಕಾಯ್ತ್’ ಚಿತ್ರಕ್ಕೆ ಹೋಲಿಸಿದರೆ ಪ್ರದೀಪ್ ಸಿನಿಮಾ ಉತ್ತಮ ಗಳಿಕೆ ಮಾಡುತ್ತಿದ್ದರೂ, ನಿರೀಕ್ಷಿತ ವೇಗ ಕಾಣುತ್ತಿಲ್ಲ. ಈ ಚಿತ್ರಕ್ಕೆ ಜನರಿಂದ ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ.

ಇದನ್ನೂ ಓದಿ: ವೃತ್ತಿಜೀವನದ ಆರಂಭದಲ್ಲೇ 100 ಕೋಟಿ ರೂ. ಹ್ಯಾಟ್ರಿಕ್ ಸಾಧಿಸಿದ ಪ್ರದೀಪ್ ರಂಗನಾಥನ್

ವಿಘ್ನೇಶ್ ಶಿವನ್ ನಿರ್ದೇಶನದ ಈ ಸಿನಿಮಾಗೆ ‘ರೌಡಿ ಪಿಕ್ಚರ್ಸ್’ ಮತ್ತು ‘ಸೆವೆನ್ ಸ್ಕ್ರೀನ್ ಸ್ಟುಡಿಯೋ’ ಜಂಟಿಯಾಗಿ ಬಂಡವಾಳ ಹೂಡಿವೆ. 2040ರ ಕಾಲಘಟ್ಟದಲ್ಲಿ ನಡೆಯುವ ಕಥೆಯನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ. ಪ್ರದೀಪ್ ರಂಗನಾಥನ್ ಅವರಿಗೆ ಜೋಡಿಯಾಗಿ ಕೃತಿ ಶೆಟ್ಟಿ ನಟಿಸಿದ್ದಾರೆ. ಯೋಗಿ ಬಾಬು, ಸೀಮನ್, ಗೌರಿ ಜಿ ಕಿಶನ್, ಸುನೀಲ್ ರೆಡ್ಡಿ ಮುಂತಾದವರು ಪಾತ್ರವರ್ಗದಲ್ಲಿ ಇದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Breaking: ಖ್ಯಾತ ಗಾಯಕಿ ಆಶಾ ಭೋಸ್ಲೆ ನಿಧನ

ಭಾರತೀಯ ಚಿತ್ರರಂಗದ ದಿಗ್ಗಜ ಗಾಯಕಿ ಆಶಾ ಭೋಸ್ಲೆ ಇಂದು (ಏಪ್ರಿಲ್ 12) ನಿಧನ ಹೊಂದಿದ್ದಾರೆ. ಅವರಿಗೆ 92 ವರ್ಷ ವಯಸ್ಸಾಗಿತ್ತು. ನಿನ್ನೆಯಷ್ಟೆ ಅವರು ತೀವ್ರ ಉಸಿರಾಟದ ಸಮಸ್ಯೆ ಮತ್ತೆ ಎದೆನೋವಿನಿಂದ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರನ್ನು ತೀವ್ರ ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆಗೆ ಸ್ಪಂದಿಸದ ಅವರು ಇಂದು ಮಧ್ಯಾಹ್ನದ ವೇಳೆಗೆ ನಿಧನ ಹೊಂದಿದ್ದಾರೆ.

 

 

Source link

Women’s Reservation Bill 2026: ಮಹಿಳಾ ಮೀಸಲಾತಿ ಕಾಯ್ದೆ ಜಾರಿಗೆ ಬೆಂಬಲ ಕೋರಿ ಸಂಸದರಿಗೆ ಪ್ರಧಾನಿ ಮೋದಿ ಪತ್ರ

ನವದೆಹಲಿ, ಏಪ್ರಿಲ್ 12: ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು ಲೋಕಸಭೆ ಮತ್ತು ರಾಜ್ಯಸಭೆಯ ಎಲ್ಲಾ ಸಂಸದೀಯ ಪಕ್ಷಗಳ ನಾಯಕರಿಗೆ ಪತ್ರ ಬರೆದು ನಾರಿ ಶಕ್ತಿ ವಂದನಾ ಕಾಯ್ದೆ(ಮಹಿಳಾ ಮೀಸಲಾತಿ ಕಾಯ್ದೆ) ತಿದ್ದುಪಡಿಗೆ ಸಂಪೂರ್ಣ ಬೆಂಬಲ ನೀಡುವಂತೆ ಕೇಳಿಕೊಂಡಿದ್ದಾರೆ. ಈ ಪತ್ರದಲ್ಲಿ ಪ್ರಧಾನಿ ಮೋದಿ ಅವರು ಏಪ್ರಿಲ್ 16ರಂದು ಪ್ರಾರಂಭವಾಗುತ್ತಿರುವ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಈ ಐತಿಹಾಸಿಕ ತಿದ್ದುಪಡಿಯನ್ನು ಸರ್ವಾನುಮತದಿಂದ ಅಂಗೀಕರಿಸಬೇಕೆಂದು ಕರೆ ನೀಡಿದ್ದಾರೆ. ಇದಲ್ಲದೆ, ಬಿಜೆಪಿ ತನ್ನ ಎಲ್ಲಾ ಸಂಸದರಿಗೆ ವಿಪ್ ಜಾರಿ ಮಾಡಿದ್ದು, ಏಪ್ರಿಲ್ 16,17,18ರಂದು ಸದನದಲ್ಲಿ ಹಾಜರಿರುವಂತೆ ನಿರ್ದೇಶಿಸಿದೆ.

ನಾರಿ ಶಕ್ತಿ ವಂದನಾ ಕಾಯ್ದೆಯಲ್ಲಿ ಪೂರ್ಣ ಉತ್ಸಾಹದಲ್ಲಿ ಜಾರಿಗೆ ತರುವ ಸಮಯ ಬಂದಿದೆ. 2029ರ ಲೋಕಸಭಾ ಚುನಾವಣೆಗಳು ಮತ್ತು ಮುಂಬರುವ ಎಲ್ಲಾ ವಿಧಾನಸಭಾ ಚುನಾವಣೆಗಳಲ್ಲಿ ಮಹಿಳೆಯರಿಗೆ ಶೇಕಡಾ 33ರಷ್ಟು ಮೀಸಲಾತಿಯನ್ನು ಸಂಪೂರ್ಣವಾಗಿ ಜಾರಿಗೆ ತರುವುದು ಸೂಕ್ತ.

ಏಪ್ರಿಲ್ 16ರಿಂದ ದೇಶದ ಸಂಸತ್ತಿನಲ್ಲಿ ನಾರಿ ಶಕ್ತಿ ವಂದನಾ ಕಾಯ್ದೆಯ ಕುರಿತು ಐತಿಹಾಸಿಕ ಚರ್ಚೆ ನಡೆಯಲಿದೆ. ಈ ವಿಶೇಷ ಸಭೆಯು ನಮ್ಮ ಪ್ರಜಾಪ್ರಭುತ್ವವನ್ನು ಮತ್ತಷ್ಟು ಬಲಪಡಿಸಲು ಒಂದು ಅವಕಾಶವಾಗಿದೆ. ಎಲ್ಲರನ್ನೂ ಜತೆಗೆ ಕರೆದೊಯ್ಯುವ ನಮ್ಮ ಬದ್ಧತೆಯನ್ನು ಪುನರುಚ್ಚರಿಸಲು ಇದು ಒಂದು ಅವಕಾಶ. ಈ ಉತ್ಸಾಹ ಮತ್ತು ಉದ್ದೇಶದಿಂದ ನಾನು ನಿಮಗೆ ಪತ್ರ ಬರೆಯುತ್ತಿದ್ದೇನೆ ಎಂದು ಪ್ರಧಾನಿ ಮೋದಿ ಪತ್ರದಲ್ಲಿ ಬರೆದಿದ್ದಾರೆ.

ಮಹಿಳೆಯರಿಗೆ ಮುನ್ನಡೆಯಲು , ನಿರ್ಧಾರಗಳನ್ನು ತೆಗೆದುಕೊಳ್ಳಲು ಅವಕಾಶ ಸಿಕ್ಕಾಗ ಮಾತ್ರ ಯಾವುದೇ ಸಮಾಜ ಪ್ರಗತಿ ಹೊಂದುತ್ತದೆ. ಅಭಿವೃದ್ಧಿ ಹೊಂದಿದ ಭಾರತಕ್ಕಾಗಿ ದೇಶದ ಸಂಕಲ್ಪವನ್ನು ಸಾಧಿಸಲು ಮಹಿಳಾ ಶಕ್ತಿಯು ಈ ಪ್ರಯಾಣದಲ್ಲಿ ಸಂಪೂರ್ಣವಾಗಿ ಪಾಲ್ಗೊಳ್ಳುವುದು ಮುಖ್ಯ.

ಮತ್ತಷ್ಟು ಓದಿ:  ಮಹಿಳಾ ಸಬಲೀಕರಣದತ್ತ ಐತಿಹಾಸಿಕ ಹೆಜ್ಜೆ: 2029 ರಿಂದ ಶೇ. 33 ಮಹಿಳಾ ಮೀಸಲಾತಿ ಜಾರಿ, ವಿಶೇಷ ಅಧಿವೇಶನಕ್ಕೆ ಕೇಂದ್ರದ ಕರೆ

ಸಾರ್ವಜನಿಕ ಜೀವನದಲ್ಲಿ ನಮ್ಮ ಸಹೋದರಿಯರು ಮತ್ತು ಹೆಣ್ಣುಮಕ್ಕಳು ಬಾಹ್ಯಾಕಾಶದಿಂದ ಕ್ರೀಡೆವರೆಗೆ, ಸಶಸ್ತ್ರ ಪಡೆಗಳಿಂದ ಸ್ಟಾರ್ಟ್​ ಅಪ್​ಗಳವರೆಗೆ ಪ್ರತಿಯೊಂದು ಕ್ಷೇತ್ರದಲ್ಲೂ ತಮ್ಮ ಛಾಪು ಮೂಡಿಸುತ್ತಿದ್ದಾರೆ. ತಮ್ಮ ದೊಡ್ಡ ದೃಷ್ಟಿಕೋನ ಮತ್ತು ಉತ್ಸಾಹದಿಂದ ಅವರು ಶ್ರಮಿಸುತ್ತಾರೆ ಮತ್ತು ತಮ್ಮನ್ನು ತಾವು ಸಾಬೀತುಪಡಿಸುತ್ತಾರೆ.

ದಶಕಗಳಿಂದ ಏಶದ ಸಂಸತ್ತು ಮತ್ತು ಶಾಸಕಾಂಗ ಸಭೆಗಳಲ್ಲಿ ಮಹಿಳಾ ಮೀಸಲಾತಿ ಕುರಿತು ಚರ್ಚೆಗಳು ನಡೆಯುತ್ತಿವೆ ಎಂದು ಪ್ರಧಾನಿ ನೆನಪಿಸಿಕೊಂಡಿದ್ದಾರೆ. 2023ರಲ್ಲಿ, ಎಲ್ಲಾ ಪಕ್ಷಗಳ ಸಂಸದರು ನಾರಿ ಶಕ್ತಿ ವಂದನಾ ಕಾಯ್ದೆಯನ್ನು ಬೆಂಬಲಿಸಲು ಸಂಸತ್ತಿನಲ್ಲಿ ಒಗ್ಗೂಡಿದ್ದರು. ಇದು ನಮ್ಮ ಇದು ನಮ್ಮ ಒಗ್ಗಟ್ಟನ್ನು ಪ್ರದರ್ಶಿಸುವ ಮರೆಯಲಾಗದ ಸಂದರ್ಭವಾಗಿತ್ತು. ಸಂಸತ್ತಿನ ಎಲ್ಲಾ ಸದಸ್ಯರು ನಾರಿ ಶಕ್ತಿ ವಂದನ ಕಾಯ್ದೆಯ ಚರ್ಚೆಗೆ ಕೊಡುಗೆ ನೀಡಿದರು .

ಆ ಸಮಯದಲ್ಲಿ, ಹೊಸ ಕಾನೂನಿನ ನಿಬಂಧನೆಗಳನ್ನು ಸಾಧ್ಯವಾದಷ್ಟು ಬೇಗ ಜಾರಿಗೆ ತರಬೇಕು ಎಂದು ಎಲ್ಲರೂ ಒಮ್ಮತದಿಂದ ಒಪ್ಪಿಕೊಂಡರು. ಎಲ್ಲಾ ಪಕ್ಷಗಳ ನಾಯಕರು ಈ ವಿಚಾರವನ್ನು ಬಲವಾಗಿ ಬೆಂಬಲಿಸಿದರು. ಕಳೆದ ಕೆಲವು ವರ್ಷಗಳಿಂದ, ನಾವು ಈ ವಿಷಯದ ಬಗ್ಗೆ ತಜ್ಞರೊಂದಿಗೆ ಚರ್ಚಿಸಿದ್ದೇವೆ.

ಸರ್ಕಾರವು 2029 ರ ಲೋಕಸಭಾ ಚುನಾವಣೆಗಳನ್ನು ಮಹಿಳಾ ಮೀಸಲಾತಿ ಗುರಿಯಾಗಿಟ್ಟುಕೊಂಡು ನಡೆಸಬೇಕೆಂದು ತೀರ್ಮಾನಿಸಿದೆ. ಇದು ಸಾರ್ವಜನಿಕ ವಿಶ್ವಾಸವನ್ನು ಹೆಚ್ಚಿಸುತ್ತದೆ ಮತ್ತು ಪ್ರಾತಿನಿಧ್ಯದ ಆಕಾಂಕ್ಷೆಯನ್ನು ಈಡೇರಿಸುತ್ತದೆ. ಈ ಅವಕಾಶವು ಯಾವುದೇ ಒಂದು ಪಕ್ಷ ಅಥವಾ ವ್ಯಕ್ತಿಯನ್ನು ಮೀರಿಸುತ್ತದೆ ಎಂದರು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

IPL 2026: ಸತತ ಸೋಲುಗಳಿಂದ ಕಂಗೆಟ್ಟ KKRಗೆ ಸಿಕ್ತು ಗುಡ್ ನ್ಯೂಸ್

Source link

ಗಾಯಾಳುವಿಗೆ ನೆರವಾದ ಹೆಚ್.ಡಿ. ಕುಮಾರಸ್ವಾಮಿ: ಕೇಂದ್ರ ಸಚಿವರ ಮಾನವೀಯ ಕಾರ್ಯಕ್ಕೆ ಮೆಚ್ಚುಗೆ

ಬೆಂಗಳೂರು, ಏಪ್ರಿಲ್​​ 12: ಬೆಂಗಳೂರು-ಹಾಸನ ಹೆದ್ದಾರಿಯಲ್ಲಿ ನಡೆದ ರಸ್ತೆ ಅಪಘಾತವೊಂದರಲ್ಲಿ ಗಾಯಗೊಂಡಿದ್ದ ವ್ಯಕ್ತಿಯೊಬ್ಬರಿಗೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ತಕ್ಷಣ ಸ್ಪಂದಿಸಿ ಮಾನವೀಯ ನೆರವು ನೀಡಿದ್ದಾರೆ. ಖಾಸಗಿ ಕಾರ್ಯಕ್ರಮದ ನಿಮಿತ್ತ ಹಾಸನಕ್ಕೆ ತೆರಳುತ್ತಿದ್ದ ಕುಮಾರಸ್ವಾಮಿ, ಬೆಂಗಳೂರು-ಹಾಸನ ಹೆದ್ದಾರಿಯಲ್ಲಿ ಆಟೋ ಮತ್ತು ಕಾರು ನಡುವೆ ಸಂಭವಿಸಿದ ಅಪಘಾತವನ್ನು ಗಮನಿಸಿದ್ದಾರೆ. ಈ ಅಪಘಾತದಲ್ಲಿ ವಿಕ್ರಂ ಎಂಬ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದು, ಸುಮಾರು ಅರ್ಧ ಗಂಟೆಯಿಂದ ರಸ್ತೆಯಲ್ಲೇ ಬಿದ್ದಿದ್ದರು. ಸಚಿವರು ಕೂಡಲೇ ಕಾರ್ಯಪ್ರವೃತ್ತರಾಗಿ, ಗಾಯಾಳುವನ್ನು ಪೊಲೀಸ್ ವಾಹನದಲ್ಲಿ ಆದಿಚುಂಚನಗಿರಿ ಆಸ್ಪತ್ರೆಗೆ ಕಳುಹಿಸಿಕೊಡಲು ವ್ಯವಸ್ಥೆ ಮಾಡಿದ್ದಾರೆ. ಅಲ್ಲದೆ, ಆಸ್ಪತ್ರೆಯ ವೈದ್ಯರಿಗೆ ದೂರವಾಣಿ ಕರೆ ಮಾಡಿ, ವಿಕ್ರಂಗೆ ತಕ್ಷಣವೇ ಸೂಕ್ತ ಮತ್ತು ತುರ್ತು ಚಿಕಿತ್ಸೆ ನೀಡುವಂತೆ ಸೂಚಿಸಿದ್ದಾರೆ. ಕೇಂದ್ರ ಸಚಿವರ ಈ ಸಮಯೋಚಿತ ಮತ್ತು ಮಾನವೀಯ ಕಾರ್ಯವು ಸ್ಥಳೀಯರಿಂದ ಮತ್ತು ಸಾರ್ವಜನಿಕರಿಂದ ಪ್ರಶಂಸೆಗೊಳಗಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಪೆಟ್ರೋಲಿಯಂ ಉತ್ಪನ್ನಗಳ ರಫ್ತು ಸುಂಕದಲ್ಲಿ ಭರ್ಜರಿ ಹೆಚ್ಚಳ; ಡೀಸಲ್​ಗೆ 55.5 ರೂ, ಎಟಿಎಫ್​ಗೆ 42 ರೂ ಸುಂಕ

ನವದೆಹಲಿ, ಏಪ್ರಿಲ್ 12: ಕೆಲ ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಕೇಂದ್ರ ಸರ್ಕಾರ ರಫ್ತು ಸುಂಕವನ್ನು (Exports Duty) ಗಣನೀಯವಾಗಿ ಹೆಚ್ಚಿಸಿದೆ. ಆಂತರಿಕವಾಗಿ ಈ ಇಂಧನ ಲಭ್ಯತೆ ಕಡಿಮೆ ಆಗದಂತೆ ನೋಡಿಕೊಳ್ಳಲು ಈ ಕ್ರಮ ತೆಗೆದುಕೊಳ್ಳಲಾಗಿದೆ. ಡೀಸಲ್ ಮತ್ತು ಜೆಟ್ ಇಂಧನದ ಮೇಲಿನ ಸುಂಕ ಹೆಚ್ಚಿದೆ. ಅಚ್ಚರಿ ಎಂಬಂತೆ ಪೆಟ್ರೋಲ್ ಮೇಲೆ ಯಾವುದೇ ರಫ್ತು ಸುಂಕ ಹಾಕಲಾಗಿಲ್ಲ.

ಡೀಸಲ್ ಮೇಲಿನ ರಫ್ತು ಸುಂಕವನ್ನು ಲೀಟರ್​ಗೆ 34 ರೂಗಳಷ್ಟು ಏರಿಸಲಾಗಿದೆ. 21.5 ರೂ ಇದ್ದ ಇದರ ರಫ್ತು ಸುಂಕವನ್ನು 55.5 ರೂಗೆ ಹೆಚ್ಚಿಸಲಾಗಿದೆ. ಹಾಗೆಯೇ, ಎಟಿಎಫ್ (ಏವಿಯೇಶನ್ ಟರ್ಬೈನ್ ಫುಯೆಲ್) ಅಥವಾ ಜೆಟ್ ಇಂಧನದ ಮೇಲಿನ ರಫ್ತು ಸುಂಕವನ್ನು 12.5 ರೂಗಳಷ್ಟು ಹೆಚ್ಚಿಸಲಾಗಿದೆ. 29.5 ರೂ ಇದ್ದ ಇದರ ಬೆಲೆಯನ್ನು 42 ರೂಗೆ ಏರಿಸಲಾಗಿದೆ.

ಇದನ್ನೂ ಓದಿ: ಟೋಲ್ ಬೂತ್​ನಲ್ಲಿ ಇನ್ಮುಂದೆ ಕ್ಯಾಷ್ ಪೇಮೆಂಟ್​ಗೆ ಅವಕಾಶವೇ ಇಲ್ಲ; ಫಾಸ್​ಟ್ಯಾಗ್ ಕಡ್ಡಾಯ

ಪೆಟ್ರೋಲ್ ಮೇಲಿನ ರಫ್ತು ಸುಂಕವನ್ನು ಸರ್ಕಾರ ಹೆಚ್ಚಿಸಿಲ್ಲ. ಸದ್ಯ ಈ ವ್ಯಾಪಕ ಬಳಕೆಯ ಇಂಧನಕ್ಕೆ ಸರ್ಕಾರ ಶೂನ್ಯ ಸುಂಕ ಹಾಕುತ್ತಿದೆ. ಈ ಕ್ರಮ ಮುಂದುವರಿಯುತ್ತದೆ.

ಇದೇ ವೇಳೆ, ಆಂತರಿಕವಾಗಿ ಕೆಲ ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಅಬಕಾರಿ ಸುಂಕ ಹಾಗು ಸೆಸ್ ಅನ್ನು ಪರಿಷ್ಕರಿಸಲಾಗಿದೆ. ಹೈಸ್ಪೀಡ್ ಡೀಸಲ್ ಅಥವಾ ಪ್ರೀಮಿಯಮ್ ಡೀಸಲ್ ಮೇಲಿನ ವಿಶೇಷ ಹೆಚ್ಚುವರಿ ಅಬಕಾರಿ ಸುಂಕವನ್ನು (ಎಸ್​ಎಇಡಿ) ಲೀಟರ್​ಗೆ 24 ರೂಗೆ ಏರಿಸಲಾಗಿದೆ. ರಸ್ತೆ ಮತ್ತು ಮೂಲಸೌಕರ್ಯ ಸೆಸ್ ದರವನ್ನು 36 ರೂಗೆ ಹೆಚ್ಚಳಗೊಳಿಸಲಾಗಿದೆ.

ಇದನ್ನೂ ಓದಿ: AMFI data: ಮಾರ್ಚ್​ನಲ್ಲಿ ಈಕ್ವಿಟಿ ಫಂಡ್​ಗಳಿಗೆ ಹೂಡಿಕೆ ಸುಗ್ಗಿ; ಶೇ. 55ರಷ್ಟು ಹೆಚ್ಚಿದ ಒಳಹರಿವು

ರಫ್ತು ಸುಂಕ ಪರಿಷ್ಕರಣೆ ಯಾಕೆ?

ಅತಿಹೆಚ್ಚು ಪೆಟ್ರೋಲಿಯಂ ರಫ್ತು ಮಾಡುವ ದೇಶಗಳ ಪಟ್ಟಿಯಲ್ಲಿ ಭಾರತ ಐದನೇ ಸ್ಥಾನ ಪಡೆಯುತ್ತದೆ. ಕಚ್ಚಾ ತೈಲವನ್ನು ಆಮದು ಮಾಡಿಕೊಂಡು, ಅದನ್ನು ಸಂಸ್ಕರಿಸಿ, ಪೆಟ್ರೋಲ್, ಡೀಸಲ್, ಜೆಟ್ ಫುಯಲ್ ಇತ್ಯಾದಿ ವಿವಿಧ ಪೆಟ್ರೋಲಿಯಂ ಉತ್ಪನ್ನಗಳಾಗಿ ತಯಾರಿಸುತ್ತದೆ. ಆಂತರಿಕ ಬಳಕೆ ಬೇಕಾಗುವಷ್ಟು ಇಟ್ಟುಕೊಂಡು, ಉಳಿದವನ್ನು ರಫ್ತು ಮಾಡಲು ಅವಕಾಶ ಕೊಡಲಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Exit mobile version