Headlines

ಬಂಟ್ವಾಳ ಹಿಂದೂ ರಾಷ್ಟ್ರ ಸಭೆಗೆ SDPI ವಿರೋಧ: ಸಂವಿಧಾನ ಉಲ್ಲಂಘನೆ ಆರೋಪ, ದೂರು ದಾಖಲು – Kannada News | SDPI opposes Hindu Rashtra Sabha: Complaint filed, alleging violation of constitution

ಮಂಗಳೂರು, ಫೆಬ್ರವರಿ 15: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿರುವ ಅರಳ ಗರುಡ ಮಹಾಕಾಳಿ ದೇಗುಲದಲ್ಲಿ ಫೆ.22ರಂದು ನಡೆಯುವ ಹಿಂದೂ ರಾಷ್ಟ್ರ ಜಾಗೃತಿ ಸಭೆಗೆ (Hindu Rashtra Jagruti Sabha) SDPIನಿಂದ ವಿರೋಧ ವ್ಯಕ್ತವಾಗಿದೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ಆಯೋಜಕರ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಾಯಿಸಲಾಗಿದೆ. ಫೆ.22ರಂದು ನಡೆಯಲಿರುವ ಹಿಂದೂ ರಾಷ್ಟ್ರ ಜಾಗೃತಿ ಸಭೆಗೆ ಸದ್ಯ ವಿರೋಧ ವ್ಯಕ್ತವಾಗಿದೆ. SDPI ಮುಖಂಡ S.H.ಶಾಹುಲ್, ಕಬೀರ್ ಅಕ್ಕರಂಗಡಿ, ಅಕ್ಬರ್ ಅಲಿ ಪೊನ್ನೋಡಿ, ಇಮ್ರಾನ್ ಬಂಟ್ವಾಳ,…

Read More

ಶುಗರ್ ರಿಪೋರ್ಟ್ ನಾರ್ಮಲ್ ಬಂದ್ರೂ ಸುಸ್ತು ಅನಿಸುವುದಕ್ಕೆ ಈ ಹಿಡನ್ ಡಯಾಬಿಟಿಸ್ ಲಕ್ಷಣ ಕಾರಣವೇ? – Kannada News | Hidden Diabetes Symptoms: Don’t Ignore These Signs

ಮಧುಮೇಹ (Diabetes) ಸಾಮಾನ್ಯ ಕಾಯಿಲೆ ಅಲ್ಲವೇ ಅಲ್ಲ. ಅದರಿಂದ ದೂರ ಇರುವುದು ಈಗಿನ ಪರಿಸ್ಥಿತಿಯಲ್ಲಿ ಒಂದು ಸವಾಲಿನ ಕೆಲಸ. ಅದರಲ್ಲಿಯೂ ಕೆಲವರಿಗೆ ಶುಗರ್ ಲೆವೆಲ್ ಪರೀಕ್ಷೆ ಮಾಡಿದಾಗ ಯಾವಾಗಲೂ ಸಾಮಾನ್ಯವಾಗಿರುತ್ತದೆ ಆದರೆ ಸುಸ್ತು, ದಣಿವು ಕಡಿಮೆಯಾಗುವುದೇ ಇಲ್ಲ. ಈ ರೀತಿ ಆಗುವುದನ್ನು ಸಾಮಾನ್ಯ ಸಮಸ್ಯೆ ಎಂದು ನಿರ್ಲಕ್ಷ್ಯ ಮಾಡುತ್ತಾರೆ. ಆದ್ರೆ ಆರೋಗ್ಯ ತಜ್ಞರು ಹೇಳುವ ಪ್ರಕಾರ, ಇದು ದೇಹದಲ್ಲಿ ಗುಪ್ತ ಮಧುಮೇಹದ ಸಂಕೇತವೂ ಆಗಿರಬಹುದು. ಹಾಗಾದರೆ ಗುಪ್ತ ಮಧುಮೇಹ ಎಂದರೇನು ಮತ್ತು ಅದು ಪರೀಕ್ಷೆಗಳಲ್ಲಿ ಏಕೆ ಸುಲಭವಾಗಿ…

Read More

ಪತಂಜಲಿ ಲೋಹಾಸವ ಸಿರಪ್; ಏನಿದು, ಯಾಕಾಗಿ ಬೇಕು, ಇದು ಹೇಗೆ ಕೆಲಸ ಮಾಡುತ್ತೆ? ಇಲ್ಲಿದೆ ವಿವರ – Kannada News | Patanjali Lohasava syrup useful in treating anaemia and iron deficiency

ಇತ್ತೀಚಿನ ದಿನಗಳಲ್ಲಿ ರಕ್ತಹೀನತೆ ಸಾಮಾನ್ಯ ಸಮಸ್ಯೆಯಾಗುತ್ತಿದೆ. ಇದು ಮಹಿಳೆಯರಲ್ಲಿ ವಿಶೇಷವಾಗಿ ಕಂಡುಬರುತ್ತದೆ. ವೈದ್ಯರು ಕಬ್ಬಿಣಾಂಶವಿರುವ ಔಷಧಿಗಳು, ಸಿರಪ್‌ಗಳು ಮತ್ತು ಸಪ್ಲಿಮೆಂಟ್​ಗಳನ್ನು ಸೂಚಿಸುತ್ತಾರೆ. ಆದಾಗ್ಯೂ, ಆಯುರ್ವೇದದಲ್ಲಿ ಈ ಸ್ಥಿತಿಗೆ ಚಿಕಿತ್ಸೆ ಇದೆಯೇ? ಬಾಬಾ ರಾಮದೇವ್ ಈ ಸಮಸ್ಯೆಗೆ ಪರಿಹಾರ ತಿಳಿಸಿದ್ದಾರೆ. ಪತಂಜಲಿಯ ಲೋಹಾಸವ ಟಾನಿಕ್​ನಿಂದ (Patanjali Lohasava syrup) ರಕ್ತಹೀನತೆ ಮತ್ತು ಕಬ್ಬಿಣದ ಕೊರತೆಗೆ (iron deficiency) ಚಿಕಿತ್ಸೆ ನೀಡಬಹುದು ಎನ್ನುತ್ತಾರೆ. ಲೋಹ ಭಸ್ಮವನ್ನು ಬಳಸಿ ಲೋಹಾಸವ ಟಾನಿಕ್ ಅನ್ನು ತಯಾರಿಸಲಾಗುತ್ತದೆ. ಆಯುರ್ವೇದದ ಪ್ರಕಾರ, ದೇಹವು ಗಿಡಮೂಲಿಕೆಗಳನ್ನು (Herbal…

Read More

IND vs PAK Playing XI: ಪಾಕ್ ವಿರುದ್ಧದ ಪಂದ್ಯಕ್ಕೆ ಭಾರತ ತಂಡದಲ್ಲಿ 2 ಬದಲಾವಣೆ – Kannada News | IND vs PAK Playing XI India vs Pakistan Today 27th T20 World Cup 2026 match playing 11 details with name in kannada

2026 ರ ಟಿ20 ವಿಶ್ವಕಪ್‌ನ ಗುಂಪು ಹಂತದಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಇಂದು ನಡೆಯುತ್ತಿದೆ. ಈ ಪಂದ್ಯವು ಕೊಲಂಬೊದ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಸೂಪರ್ 8 ಸುತ್ತಿಗೆ ಅರ್ಹತೆ ಪಡೆಯಲು ಈ ಪಂದ್ಯದ ಗೆಲುವು ಉಭಯ ತಂಡಗಳಿಗೆ ಅಗತ್ಯವಾಗಿರುವುದರಿಂದ ಎರಡೂ ತಂಡಗಳು ಶತಾಯಗತಾಯ ಗೆಲ್ಲುವ ಇರಾದೆಯೊಂದಿಗೆ ಕಣಕ್ಕಿಳಿಯುತ್ತಿವೆ. ಇದರ ಜೊತೆಗೆ ಟೀಂ ಇಂಡಿಯಾ, ಪಾಕಿಸ್ತಾನದ ವಿರುದ್ಧ ತನ್ನ ಅಜೇಯ ಓಟವನ್ನು ಮುಂದುವರೆಸಲು ನೋಡುತ್ತಿದೆ. ಇದೀಗ ಈ ಪಂದ್ಯದ ಟಾಸ್ ಕೂಡ ನಡೆದಿದ್ದು, ಟಾಸ್…

Read More

Shani Mahadasha: ಶನಿಯ ಮಹಾದಶಾ ಪ್ರಾರಂಭವಾಗುವ ಮುನ್ನ ಕಂಡುಬರುವ ಲಕ್ಷಣಗಳಿವು! – Kannada News | Shani Mahadasha: Understand Its Impact and Effective Remedies for Challenges

ಹಿಂದೂ ಧರ್ಮದಲ್ಲಿ ಶನಿ ದೇವರನ್ನು ನ್ಯಾಯದ ದೇವರು ಹಾಗೂ ಕರ್ಮಫಲದ ದಾತನೆಂದು ಪರಿಗಣಿಸಲಾಗುತ್ತದೆ. ವ್ಯಕ್ತಿಯು ಜೀವನದಲ್ಲಿ ಮಾಡಿದ ಸತ್ಕರ್ಮ ಮತ್ತು ದುಷ್ಕರ್ಮಗಳಿಗೆ ಅನುಗುಣವಾಗಿ ಫಲ ನೀಡುವವನೆಂಬ ನಂಬಿಕೆ ಇದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಶನಿ ನವಗ್ರಹಗಳಲ್ಲಿ ಅತ್ಯಂತ ಪ್ರಭಾವಶಾಲಿ ಗ್ರಹವೆಂದು ಪರಿಗಣಿಸಲಾಗಿದ್ದು, ಅವರ ಸಂಚಾರ, ಸಾಡೇ ಸತಿ, ಧೈಯ್ಯಾ ಹಾಗೂ ಮಹಾದಶೆಗಳು ಮಾನವನ ಜೀವನದ ಮೇಲೆ ಆಳವಾದ ಪರಿಣಾಮ ಬೀರುತ್ತವೆ ಎಂದು ಹೇಳಲಾಗುತ್ತದೆ. ಶನಿಯ ಹೆಸರು ಕೇಳಿದಾಗ ಕೆಲವರು ಭಯಪಡುತ್ತಾರೆ, ಆದರೆ ಜ್ಯೋತಿಷ್ಯವು ಶನಿ ದಂಡನೆ ಮಾತ್ರ ನೀಡುವುದಿಲ್ಲ,…

Read More

Viral: 3 ಬಿಹೆಚ್‌ಕೆ ಮನೆಗೆ 16,883 ರೂ ವಿದ್ಯುತ್ ಬಿಲ್, ಮನೆಮಾಲೀಕ ಫುಲ್ ಶಾಕ್ – Kannada News | Bengaluru: Electricity bill of Rs 16,883 for 3 BHK house in Bengaluru

ಬೆಂಗಳೂರು, ಫೆಬ್ರವರಿ 15: ಬೆಂಗಳೂರು (Bengaluru) ಅಂದ್ರೆ ಸಾಕು, ದುಡಿಮೆಗಿಂತ ಖರ್ಚೆ ಹೆಚ್ಚು. ಊರು ಬಿಟ್ಟು ಬಂದು ಕಷ್ಟ ಪಟ್ಟು ದುಡಿದು ಅಲ್ಪ ಸ್ವಲ್ಪ ಉಳಿತಾಯ ಮಾಡೋಣ ಅಂದ್ರೆ ಖರ್ಚು ಮಾತ್ರ ಹೆಚ್ಚಾಗುತ್ತೆ ಹೊರತು ಕಡಿಮೆಯಾಗಲ್ಲ ಅನ್ನೋದು ಎಷ್ಟೋ ಜನರ ಅಭಿಪ್ರಾಯ. ಆದರೆ ಬೆಂಗಳೂರಿನಲ್ಲಿ ವಾಸಿಸುವ ನಿವಾಸಿ ಎಷ್ಟೇ ದುಬಾರಿಯಾಗಿದ್ರು ಇಲ್ಲಿ ಜೀವನ ನಡೆಸಲೇಬೇಕು. ಆದರೆ ಬೆಂಗಳೂರಿಗನೊಬ್ಬ ವಿದ್ಯುತ್ ಬಿಲ್ ನೋಡಿಯೇ ಶಾಕ್ ಆಗಿದ್ದಾನೆ. 3 ಬಿಎಚ್‌ಕೆ ಮನೆಯಲ್ಲಿ ವಾಸಿಸುತ್ತಿರುವ ವ್ಯಕ್ತಿಯೊಬ್ಬನಿಗೆ 16,883 ರೂಪಾಯಿಗಳ ವಿದ್ಯುತ್ ಬಿಲ್…

Read More

IND vs AUS: ಆಸ್ಟ್ರೇಲಿಯಾವನ್ನು ಅವರ ನೆಲದಲ್ಲೇ ಬಗ್ಗುಬಡಿದ ಟೀಂ ಇಂಡಿಯಾ – Kannada News | India Women Beat Australia in 1st T20 by DLS Method, Win Series Opener in Sydney*

ಒಂದೆಡೆ ಭಾರತದ ಪುರುಷರ ತಂಡ ಭಾರತದಲ್ಲಿ ಟಿ20 ವಿಶ್ವಕಪ್ ಆಡುತ್ತಿದ್ದರೆ, ಇನ್ನೊಂದೆಡೆ ಭಾರತದ ಮಹಿಳಾ ಪಡೆ ಮೂರು ಮಾದರಿಗಳ ಸರಣಿಗಾಗಿ ಆಸ್ಟ್ರೇಲಿಯಾಕ್ಕೆ (India vs Australia) ತೆರಳಿದೆ. ಅದರಂತೆ ಉಭಯ ತಂಡಗಳ ನಡುವಿನ ಇಂದಿನಿಂದ ಮೂರು ಪಂದ್ಯಗಳ ಟಿ20 ಸರಣಿ ಶುರುವಾಗಿದೆ. ಸಿಡ್ನಿಯಲ್ಲಿ ನಡೆದ ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯಾವನ್ನು ಮಣಿಸಿದ ಟೀಂ ಇಂಡಿಯಾ ಸರಣಿಯಲ್ಲಿ ಶುಭಾರಂಭ ಮಾಡಿದೆ. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತನ್ನ ಎಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು 18 ಓವರ್‌ಗಳಲ್ಲಿ…

Read More

50ನೇ ಸಿನಿಮಾ ‘ಕಿಂಗ್’ ಬಗ್ಗೆ ಲೂಸ್ ಮಾದ ಯೋಗಿ ಮಾತು: ವಿಡಿಯೋ ನೋಡಿ – Kannada News | Loose Mada Yogi’s 50th movie releasing soon, here is his speech

ಲೂಸ್ ಮಾದ (Loose Mada) ಎಂದೇ ಖ್ಯಾತರಾಗಿರುವ ಯೋಗಿ ಚಿತ್ರರಂಗಕ್ಕೆ ಕಾಲಿಟ್ಟು ದಶಕಗಳೇ ಕಳೆದಿವೆ. ವಿಲನ್ ಪಾತ್ರದ ಮೂಲಕ ಚಿತ್ರರಂಗಕ್ಕೆ ಬಂದ ಯೋಗಿ ಬಹು ಬೇಗ ನಾಯಕನಾಗಿ ನಟಿಸಲು ಆರಂಭಿಸಿದರು. ನೋಡ-ನೋಡುತ್ತಲೇ 49ಸಿನಿಮಾಗಳನ್ನು ಪೂರೈಸಿರುವ ಯೋಗಿ ಇದೀಗ ತಮ್ಮ 50ನೇ ಸಿನಿಮಾದ ಚಿತ್ರೀಕರಣವನ್ನೂ ಸಹ ಮುಗಿಸಿದ್ದಾರೆ. ಯಾವುದೇ ನಟನ ಜೀವನದಲ್ಲಿ 25, 50, 75, 100ನೇ ಸಿನಿಮಾ ಮಹತ್ವದ್ದಾಗಿರುತ್ತದೆ. ಅಂತೆಯೇ ಯೋಗಿ ಅವರಿಗೂ ಸಹ ಅವರ ನಟನೆಯ 50ನೇ ಸಿನಿಮಾ ‘ಕಿಂಗ್’ ಬಹಳ ಮಹತ್ವದ್ದಾಗಿದೆ. ಸಿನಿಮಾ ಬಗ್ಗೆ,…

Read More

ಇಶಾ ಫೌಂಡೇಷನ್​​ನಲ್ಲಿ ಅದ್ದೂರಿ ಶಿವರಾತ್ರಿ ಸಂಭ್ರಮ; ನೇರ ಪ್ರಸಾರ ಇಲ್ಲಿದೆ – Kannada News | Isha Foundation Maha Shivaratri 2026 Live: Rajnath Singh, VIPs and Celebrations in Coimbatore

ಕೊಯಮತ್ತೂರಿನ ಇಶಾ ಯೋಗ ಕೇಂದ್ರದಲ್ಲಿ ನಡೆಯುತ್ತಿರುವ ಶಿವರಾತ್ರಿ ಸಂಭ್ರಮದ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ. ಈ ಬಾರಿಯ ಉತ್ಸವದಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಸಂಸದೀಯ ವ್ಯವಹಾರಗಳ ಸಚಿವ ಎಲ್. ಮುರುಗನ್ ಮತ್ತು ಇತರ ಗಣ್ಯರು ಕೂಡ ಪಾಲ್ಗೊಳ್ಳಲಿದ್ದಾರೆ. ಮಹಾ ಶಿವರಾತ್ರಿ ಉತ್ಸವವು ಇಂದು ಸಂಜೆ6 ಗಂಟೆಯಿಂದ ಪ್ರಾರಂಭವಾಗಿದ್ದು, ಮರುದಿನ ಬೆಳಿಗ್ಗೆ 6 ಗಂಟೆಯವರೆಗೆ ನಡೆಯಲಿದೆ. ಈ ವೇಳೆ ಧ್ಯಾನ, ಮಂತ್ರ ಪಠಣ, ಯೋಗೇಶ್ವರಲಿಂಗ ಮಹಾ…

Read More

ಈ ಪೋಸ್ಟ್ ಆಫೀಸ್ ಸ್ಕೀಮ್​ನಿಂದ ತೆರಿಗೆ ಉಳಿತಾಯದ ಜೊತೆಗೆ ತಿಂಗಳಿಗೆ 20,000 ರೂ ಆದಾಯ ಸೃಷ್ಟಿಸುವುದು ಹೇಗೆ? ಇಲ್ಲಿದೆ ಡೀಟೇಲ್ಸ್ – Kannada News | Post Office SCSS scheme offers max interest, generate over 20k monthly income

ಪೋಸ್ಟ್ ಆಫೀಸ್​ನಲ್ಲಿ ಲಭ್ಯ ಇರುವ ವಿವಿಧ ಸ್ಕೀಮ್​ಗಳಲ್ಲಿ ಎಸ್​ಸಿಎಸ್​ಎಸ್ (SCSS- Senior Citizen Savings Scheme) ಒಂದು. ಇದು ಸೀನಿಯರ್ ಸಿಟಿಜನ್ಸ್ ಸೇವಿಂಗ್ಸ್ ಸ್ಕೀಮ್. ಪೋಸ್ಟ್ ಆಫೀಸ್​ನ ಉಳಿತಾಯ ಯೋಜನೆಗಳ ಪೈಕಿ ಗರಿಷ್ಠ ರಿಟರ್ನ್ ತರುವಂತಹ ಸ್ಕೀಮ್ ಕೂಡ ಹೌದು. ಈ ಹಿರಿಯ ನಾಗರಿಕರ ಉಳಿತಾಯ ಯೋಜನೆ ಕೇವಲ ಪೋಸ್ಟ್ ಆಫೀಸ್​ನಲ್ಲಷ್ಟೇ ಅಲ್ಲ, ಬ್ಯಾಂಕುಗಳಲ್ಲೂ ಲಭ್ಯ ಇರುತ್ತದೆ. ರಿಟೈರ್ಮೆಂಟ್ ನಂತರ ಪಿಂಚಣಿ ಸೌಲಭ್ಯ ಇಲ್ಲದವರಿಗೆ ಈ ಎಸ್​ಸಿಎಸ್​ಎಸ್ ಹೇಳಿ ಮಾಡಿಸಿದೆ. ಎಸ್​ಸಿಎಸ್​ಎಸ್​ನಿಂದ ಮೂರು ಲಾಭಗಳು ಸೀನಿಯರ್ ಸಿಟಿಜನ್…

Read More