Headlines

‘ದ್ರಾವಿಡ’ ರಾಜಕಾರಣದ ‘ಯೂನಿಫಾರ್ಮ್’ ಬದಲಿಸಿದ ವಿಜಯ್ – Kannada News | Why Vijay wore back suit on his oath taking ceremony

ತಮಿಳುನಾಡಿನಲ್ಲಿ ಕಳೆದ 60 ವರ್ಷಗಳಿಂದಲೂ ‘ದ್ರಾವಿಡ’ ರಾಜಕೀಯದ್ದೆ (Politics) ಕಾರುಬಾರು. ಕಳೆದ ಆರು ದಶಕಗಳಲ್ಲಿ ಡಿಎಂಕೆ (ದ್ರಾವಿಡ ಮುನ್ನೇಟ್ರ ಕಳಗಂ) ಮತ್ತು ಎಐಎಡಿಎಂಕೆ (ಆಲ್ ಇಂಡಿಯಾ ಅನ್ನಾ ದ್ರಾವಿಡ ಮುನ್ನೇಟ್ರ ಕಳಗಂ) ಬಿಟ್ಟರೆ ಇನ್ಯಾವ ಪಕ್ಷವೂ ಸಹ ತಮಿಳುನಾಡಿನಲ್ಲಿ ಗೆದ್ದಿರಲಿಲ್ಲ. ಈ 60 ವರ್ಷಗಳ ‘ದ್ರಾವಿಡ’ ರಾಜಕೀಯ ಪ್ರಾಬಲ್ಯವನ್ನು ಮುರಿದಿರುವ ದಳಪತಿ ವಿಜಯ್ (Thalapathy Vijay) ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ವಿಜಯ್, ‘ದ್ರಾವಿಡ’ ರಾಜಕೀಯಕ್ಕೆ ಬ್ರೇಕ್ ಹಾಕಿದ್ದು ಮಾತ್ರವೇ ಅಲ್ಲದೆ, ದಶಕಗಳಿಂದಲೂ ಪಾಲಿಸಿಕೊಂಡು…

Read More

ತಮಿಳುನಾಡಲ್ಲಿ ಧಾರ್ಮಿಕ ಸ್ಥಳಗಳು, ಶಾಲೆಗಳ ಬಳಿ ಇದ್ದ 717 ಮದ್ಯದಂಗಡಿ ಮುಚ್ಚಲು ವಿಜಯ್‌ ಆದೇಶ: ಸಿಎಂ ಆದ ಬೆನ್ನಲ್ಲೇ ಮಹತ್ವದ ಕ್ರಮ – Kannada News | CM Vijay Orders Closure of 717 TASMAC Liquor Shops in Tamil Nadu; First Major Move as Chief Minister

ತಮಿಳುನಾಡು ಸಿಎಂ ದಳಪತಿ ವಿಜಯ್Image Credit source: tv9 ಚೆನ್ನೈ, ಮೇ 12: ತಮಿಳುನಾಡಿನ (Tamil Nadu) ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ದಳಪತಿ ವಿಜಯ್ (Joseph Vijay) ಮೊದಲ ಭಾಷಣದಲ್ಲೇ ರಾಜ್ಯದ ಸಾಲದ ಬಗ್ಗೆ ಮಾತನಾಡಿದ್ದು ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಮೊದಲ ಮಹತ್ವದ ನಿರ್ಧಾರವನ್ನೂ ಪ್ರಕಟಿಸಿದ್ದಾರೆ. ರಾಜ್ಯಾದ್ಯಂತ ದೇವಸ್ಥಾನಗಳು, ಶಾಲೆಗಳು ಮತ್ತು ಬಸ್ ನಿಲ್ದಾಣಗಳ 500 ಮೀಟರ್ ವ್ಯಾಪ್ತಿಯಲ್ಲಿರುವ ಒಟ್ಟು 717 ಸರ್ಕಾರಿ ಸ್ವಾಮ್ಯದ ಟಾಸ್ಮಾಕ್ (TASMAC) ಮದ್ಯದ ಅಂಗಡಿಗಳನ್ನು ಮುಚ್ಚುವಂತೆ ಅವರು ಆದೇಶಿಸಿದ್ದಾರೆ. ಮುಖ್ಯಾಂಶಗಳು…

Read More

ಶೃಂಗೇರಿ ಮರುಮತ ಎಣಿಕೆಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ: ಆದೇಶವನ್ನು ಒಪ್ಪಿಕೊಳ್ಳುತ್ತೇನೆ ಎಂದ ಜೀವರಾಜ್ – Kannada News | Supreme Court Stays Recounting Process in Sringeri Assembly Constituency Case, Jeevraj Reaction

ಬೆಂಗಳೂರು, ಮೇ 12: ಶೃಂಗೇರಿ ಕ್ಷೇತ್ರದ ಮರುಮತ ಎಣಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ. ಬಿಜೆಪಿಯ ಜೀವರಾಜ್ ಅವರ ಗೆಲುವಿನ ಹಿನ್ನೆಲೆಯಲ್ಲಿ ಟಿ.ಡಿ. ರಾಜೇಗೌಡರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ಸುಪ್ರೀಂ ಕೋರ್ಟ್, ಮರುಮತ ಎಣಿಕೆಯ ಪ್ರಕ್ರಿಯೆಗೆ ತಡೆಯಾಜ್ಞೆ ನೀಡಿ ಆದೇಶ ಹೊರಡಿಸಿದೆ. ಈ ಕುರಿತು ಪ್ರತಿಕ್ರಿಯಿಸಿದ ಶಾಸಕ ಜೀವರಾಜ್, ನ್ಯಾಯಾಲಯದ ಆದೇಶವನ್ನು ಗೌರವಿಸುವುದಾಗಿ ತಿಳಿಸಿದ್ದಾರೆ. ಸುಪ್ರೀಂ ಕೋರ್ಟ್ ಪ್ರಕರಣದ ಬಗ್ಗೆ ಅವಲೋಕಿಸಿ, ಚುನಾವಣಾ ಆಯೋಗಕ್ಕೆ ನೋಟಿಸ್ ಜಾರಿ ಮಾಡಿದೆ ಮತ್ತು ಮುಂದಿನ…

Read More

Vasthu Tips: ಹೊಸ ಮನೆಗೆ ಶಿಫ್ಟ್ ಆಗ್ತಾ ಇದ್ದೀರಾ? ಹಾಗಿದ್ರೆ ತಪ್ಪಿಯೂ ಈ ವಸ್ತು ಕೊಂಡೊಯ್ಯಬೇಡಿ – Kannada News | Vastu Tips: Don’t Carry These 7 Old Items to Your New Home for Prosperity and Peace

ಹೊಸ ಮನೆಗೆ ಹೋಗುವುದು ಹೊಸ ಭರವಸೆ ಮತ್ತು ಸಂತೋಷದ ಸಂಕೇತ. ಆದರೆ ವಾಸ್ತು ಶಾಸ್ತ್ರದ ಪ್ರಕಾರ, ಹಳೆಯ ಮನೆಯ ಕೆಲವು ವಸ್ತುಗಳನ್ನು ಹೊಸ ಮನೆಗೆ ಕೊಂಡೊಯ್ಯುವುದು ಅಶುಭ ಎಂದು ಪರಿಗಣಿಸಲಾಗಿದೆ. ಅಂತಹ ವಸ್ತುಗಳು ಯಾವುವು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ. ಹಳೆಯ ಪೊರಕೆ (Old Broom): ವಾಸ್ತು ಶಾಸ್ತ್ರದಲ್ಲಿ ಪೊರಕೆಯನ್ನು ಲಕ್ಷ್ಮಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಆದರೆ ಹೊಸ ಮನೆಗೆ ಹಳೆಯ ಪೊರಕೆಯನ್ನು ಕೊಂಡೊಯ್ಯಬಾರದು. ಹಳೆಯ ಪೊರಕೆಯು ಹಳೆಯ ಮನೆಯ ನಕಾರಾತ್ಮಕತೆ ಮತ್ತು ದಾರಿದ್ರ್ಯವನ್ನು ಹೊಂದಿರುತ್ತದೆ ಎಂದು ನಂಬಲಾಗಿದೆ. ಹೊಸ…

Read More

ಬಂಕ್‌ಗಳ ಮುಂದೆ ಮತ್ತೆ ಶುರುವಾಗುತ್ತಾ ಕ್ಯೂ? ಕೈಗಾರಿಕೆಗಳ ‘ಬಲ್ಕ್’ ಖರೀದಿಯಿಂದ ಸಾಮಾನ್ಯ ಗ್ರಾಹಕರಿಗೆ ಡೀಸೆಲ್ ಸಂಕಷ್ಟ! – Kannada News | India Diesel Shortage Alert: Petroleum Dealers Complain to PMO Over Fuel Supply Crisis

ಕೈಗಾರಿಕೆಗಳ ‘ಬಲ್ಕ್’ ಖರೀದಿಯಿಂದ ಸಾಮಾನ್ಯ ಗ್ರಾಹಕರಿಗೆ ಡೀಸೆಲ್ ಸಂಕಷ್ಟ! Image Credit source: google Gemini ಬೆಂಗಳೂರು, ಮೇ 12: ಎರಡು ದಿನಗಳ ಹಿಂದೆ ಪ್ರಧಾನಿ ಮೋದಿಯವರು (Narendra Modi) ಚಿನ್ನ, ಇಂಧನ ಖರೀದಿ ಮಿತಗೊಳಿಸಿ ಎಂದು ಹೇಳಿದ್ದು ಸಾಕಷ್ಟು ಚರ್ಚೆ ಹುಟ್ಟಿಹಾಕಿದೆ.  ಈ ಬೆನ್ನಲ್ಲೇ ದೇಶದಲ್ಲಿ ಡೀಸೆಲ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದ್ದು, ಚಿಲ್ಲರೆ ಪೆಟ್ರೋಲ್ ಬಂಕ್‌ಗಳಲ್ಲಿ ಹೈ ಸ್ಪೀಡ್ ಡೀಸೆಲ್ (HSD) ಕೊರತೆ ಉಂಟಾಗುವ ಆತಂಕ ಎದುರಾಗಿದೆ. ಈ ಗಂಭೀರ ಪರಿಸ್ಥಿತಿಯ ಕುರಿತು ‘ನಮ್ಮ ಇಂಡಿಯನ್…

Read More

ಪ್ಲೇ-ಆಫ್ ರೇಸ್‌ನಿಂದ ಹೊರಬೀಳುವ ಭೀತಿಯಲ್ಲಿ ಪಂಜಾಬ್; ಸೋಲಿಗೆ ಅಯ್ಯರ್ ದೂರಿದ್ದು ಯಾರನ್ನ? – Kannada News | PBKS Playoff Hopes Dim: Iyer Blames Poor Bowling After Delhi Capitals Defeat

ಧರ್ಮಶಾಲಾದಲ್ಲಿ ಸೋಮವಾರ ನಡೆದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಸೋತಿದೆ. ಆರಂಭದಲ್ಲಿ ಒಂದೇ ಒಂದು ಸೋಲನ್ನು ಕಾಣದೆ ನಾಗಾಲೋಟ ಮುಂದುವರಿಸಿದ್ದ ಈ ತಂಡ ಈಗ ಸತತ ನಾಲ್ಕನೇ ಸೋಲನ್ನು ಕಂಡಿದೆ. ಪಂಜಾಬ್ ನಾಯಕ ಶ್ರೇಯಸ್ ಅಯ್ಯರ್ ತಂಡದ ಪ್ರದರ್ಶನದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪಂದ್ಯದ ನಂತರ ಮಾತನಾಡಿದ ಅವರು, ಸೋಲಿಗೆ ತಂಡದ ಕಳಪೆ ಬೌಲಿಂಗ್ ಮತ್ತು ಫೀಲ್ಡಿಂಗ್ ಪ್ರದರ್ಶನವೇ ನೇರ ಕಾರಣ ಎಂದು ಮುಚ್ಚುಮರೆಯಿಲ್ಲದೆ ಒಪ್ಪಿಕೊಂಡಿದ್ದಾರೆ. ಮೊದಲು ಬ್ಯಾಟ್ ಮಾಡಿದ ಪಂಜಾಬ್, ಪ್ರಿಯಾಂಶ್…

Read More

International Nurses Day 2026: ರೋಗಿಗಳ ಆರೈಕೆಗಾಗಿ ಹಗಲಿರುಳು ಶ್ರಮಿಸುವ ದಾದಿಯರಿಗೆ ನಮನ – Kannada News | International Nurses Day 2026: Why is Nurses Day celebrated on May 12th?

ಅಂತಾರಾಷ್ಟ್ರೀಯ ದಾದಿಯರ ದಿನImage Credit source: png magic ಅಮೂಲ್ಯವಾದ ಜೀವಗಳನ್ನು ಉಳಿಸುವಲ್ಲಿ ವೈದ್ಯರಷ್ಟೇ ನರ್ಸ್‌ಗಳು (Nurses) ಕೂಡ ಪ್ರಮುಖ ಪಾತ್ರವನ್ನು ವಹಿಸುತ್ತಾರೆ. ಹೌದು ರೋಗಿಗಳು ಅನಾರೋಗ್ಯದಿಂದ ಚೇತರಿಸಿಕೊಳ್ಳಲು ಔಷಧಿಗಳು ಮತ್ತು  ವೈದ್ಯರ ಸೂಕ್ತ ಚಿಕಿತ್ಸೆಯು ಮಹತ್ವದ ಪಾತ್ರ ವಹಿಸುವಂತೆ ರೋಗಿಗಳು ಬೇಗನೇ ಚೇತರಿಸಿಕೊಳ್ಳಲು ಸರಿಯಾದ ಆರೈಕೆಯೂ ಮುಖ್ಯ. ರೋಗಿಗಳಿಗೆ ಈ ಸರಿಯಾದ ಆರೈಕೆ, ಉಪಚಾರ ನೀಡುವವರು ದಾದಿಯರು. ಇವರು ಅತ್ಯಂತ ನಿಷ್ಠೆಯಿಂದ ಪ್ರಾಮಾಣಿಕವಾಗಿ ಜೀವ ರಕ್ಷಣೆ ಮಾಡುವ ನಿಸ್ವಾರ್ಥ ಸೇವೆಯನ್ನು ಮಾಡುತ್ತಿದ್ದಾರೆ. ಒಟ್ಟಾರೆಯಾಗಿ ದಾದಿಯರು ಆರೋಗ್ಯ…

Read More

Baldness and Luck: ಬೋಳುತಲೆ ಅದೃಷ್ಟವೇ? ಜ್ಯೋತಿಷ್ಯಶಾಸ್ತ್ರ ಹೇಳುವುದೇನು ಗೊತ್ತಾ? – Kannada News | The Astrological and Spiritual Significance of Baldness; Checkout the details here

ಮನುಷ್ಯನ ಜೀವನದಲ್ಲಿ ಬಾಲ್ಯದಿಂದ ವೃದ್ಧಾಪ್ಯದವರೆಗೂ ದೇಹದಲ್ಲಿ ಅನೇಕ ಬದಲಾವಣೆಗಳು ನಡೆಯುತ್ತವೆ. ಈ ಬದಲಾವಣೆಗಳಲ್ಲಿ ಕೂದಲು ಉದುರಿ ಬೋಳುತಲೆ ಆಗುವುದು ಸಾಮಾನ್ಯ. ಸಮಾಜದಲ್ಲಿ ಕೆಲವರು ಬೋಳುತಲೆಯನ್ನು ಸಂಕೋಚದ ವಿಷಯವೆಂದು ಪರಿಗಣಿಸಿ, ವಿಗ್ ಅಥವಾ ಇತರ ಮಾರ್ಪಾಡುಗಳ ಮೂಲಕ ಮರೆಮಾಚಲು ಪ್ರಯತ್ನಿಸುತ್ತಾರೆ. ಆದರೆ, ವೈಜ್ಞಾನಿಕವಾಗಿ, ಧಾರ್ಮಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಈ ಬೋಳುತಲೆಯನ್ನು ವಿಭಿನ್ನ ದೃಷ್ಟಿಕೋನಗಳಿಂದ ವಿಶ್ಲೇಷಿಸಲಾಗಿದೆ. ಈ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ. ಗುರೂಜಿಯವರು…

Read More

ಜೈಲುಗಳಲ್ಲಿ ಅಕ್ರಮಕ್ಕೆ ಬ್ರೇಕ್: ಕೈದಿಗಳು ಮತ್ತು ಅಧಿಕಾರಿಗಳ ಮೇಲೆ ನಿಗಾ ಇಡಲು ‘ಪ್ರಿಸನರ್ಸ್ ಟ್ರ್ಯಾಕಿಂಗ್’ ಸಿಸ್ಟಮ್! – Kannada News | Prison Tracking System in Karnataka: DGP Alok Kumar Implements Biometrics for Inmates and Staff to Curb Illegal Activities

ಬೆಂಗಳೂರು, ಮೇ 12: ಪರಪ್ಪನ ಅಗ್ರಹಾರ ಜೈಲು (Parappana Agrahara Jail) ಸೇರಿದಂತೆ ರಾಜ್ಯದ ಕಾರಾಗೃಹಗಳಲ್ಲಿ ಸರಣಿ ಅಕ್ರಮಗಳು ಬಯಲಾದ ಬೆನ್ನಲ್ಲೇ, ಕಾರಾಗೃಹ ಡಿಜಿಪಿ ಅಲೋಕ್ ಕುಮಾರ್ (DGP Alok Kumar) ಅವರು ಕಠಿಣ ನಿಯಮಗಳನ್ನು ಜಾರಿಗೆ ತಂದಿದ್ದಾರೆ. ಜೈಲಿನಲ್ಲಿ ಕೈದಿಗಳು ಮತ್ತು ಸಿಬ್ಬಂದಿಯ ಪ್ರತಿಯೊಂದು ಚಲನವಲನವನ್ನು ಪತ್ತೆಹಚ್ಚಲು ‘ಪ್ರಿಸನರ್ಸ್ ಟ್ರ್ಯಾಕಿಂಗ್ ಮೂವ್‌ಮೆಂಟ್’ ಮತ್ತು ಬಯೋಮೆಟ್ರಿಕ್ ವ್ಯವಸ್ಥೆಯನ್ನು ಕಡ್ಡಾಯಗೊಳಿಸಲಾಗಿದೆ. ಪ್ರಾಯೋಗಿಕವಾಗಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಈ ತಂತ್ರಜ್ಞಾನ ಆಧಾರಿತ ಕಣ್ಗಾವಲು ವ್ಯವಸ್ಥೆ ಜಾರಿಗೆ ಬಂದಿದ್ದು, ಇನ್ನು…

Read More

ವಿಜಯನಗರ: ಮನೆಗಳಿಗೆ ಕನ್ನ ಹಾಕ್ತಿದ್ದ ಇಬ್ಬರು ಖದೀಮರು ಅರೆಸ್ಟ್, 14 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶ – Kannada News | Vijayanagara Police Arrest Two Notorious Burglars; Gold Worth Rs 14 Lakh Recovered in Kudligi Sub Division

ವಿಜಯನಗರ, ಮೇ 12: ವಿಜಯನಗರ ಜಿಲ್ಲೆಯ ಕೂಡ್ಲಿಗಿ ಉಪವಿಭಾಗದಲ್ಲಿ ಇತ್ತೀಚೆಗೆ ನಡೆದಿದ್ದ ನಾಲ್ಕು ಪ್ರಮುಖ ಮನೆಗಳ್ಳತನ ಪ್ರಕರಣಗಳನ್ನು ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ಕೂಡ್ಲಿಗಿ ಉಪವಿಭಾಗದ ಪೊಲೀಸರು ನಡೆಸಿದ ಸತತ ಕಾರ್ಯಾಚರಣೆಯಲ್ಲಿ ಆರೋಪಿಗಳಿಬ್ಬರನ್ನು ಬಂಧಿಸಲಾಗಿದ್ದು, ಕಳುವಾಗಿದ್ದ ಅಪಾರ ಪ್ರಮಾಣದ ಚಿನ್ನಾಭರಣ ಹಾಗೂ ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡಿರುವ ಆಭರಣಗಳ ಮೌಲ್ಯ 14.06 ರೂಪಾಯಿ ಎಂದು ಅಂದಾಜಿಸಲಾಗಿದೆ. ಇದರೊಂದಿಗೆ, ಹಗರಿಬೊಮ್ಮನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿದ್ದ ಎರಡು ಪ್ರಕರಣಗಳು, ತಂಬ್ರಹಳ್ಳಿ ಪೊಲೀಸ್ ಠಾಣೆಯ 23/2026ನೇ ಕೇಸು ಮತ್ತು ಮರಿಯಮ್ಮನಹಳ್ಳಿ ಪೊಲೀಸ್…

Read More