Headlines

ವಿರಾಟ್ ಕೊಹ್ಲಿ ಟೆಸ್ಟ್​ ನಿವೃತ್ತಿಗೆ ಒಂದು ವರ್ಷ; ಕಂಬ್ಯಾಕ್ ಅಸಾಧ್ಯ – Kannada News | Virat Kohli Test Legacy: One Year Since His Absence; Unlikely Comeback and Records

ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿ ಇಂದಿಗೆ (ಮೇ 12) ಸರಿಯಾಗಿ ಒಂದು ವರ್ಷ ಕಳೆದಿದೆ. ಆಧುನಿಕ ಕ್ರಿಕೆಟ್‌ನ ‘ರನ್ ಮಷೀನ್’ ಎಂದೇ ಖ್ಯಾತರಾಗಿದ್ದ ಕೊಹ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತಕ್ಕೆ ಹೊಸ ಆಕ್ರಮಣಕಾರಿ ಗುಣವನ್ನು ತಂದುಕೊಟ್ಟವರು. ಈ ದಿನವನ್ನು ಎಲ್ಲರೂ ನೆನಪಿಸಿಕೊಳ್ಳಿತ್ತಿದ್ದಾರೆ. ವಿರಾಟ್ ಕೊಹ್ಲಿ ಕೇವಲ ಒಬ್ಬ ಬ್ಯಾಟರ್ ಆಗಿ ಮಾತ್ರವಲ್ಲದೆ, ಭಾರತದ ಅತ್ಯಂತ ಯಶಸ್ವಿ ಟೆಸ್ಟ್ ನಾಯಕನಾಗಿಯೂ ಗುರುತಿಸಿಕೊಂಡಿದ್ದಾರೆ. ಒಟ್ಟು 123 ಪಂದ್ಯಗಳನ್ನು ಆಡಿರೋ ಅವರು, 9,230 ರನ್​ ಬಾರಿಸಿದ್ದಾರೆ. ಬ್ಯಾಟಿಂಗ್ ಸರಾಸರಿ 49.15…

Read More

ತಮಿಳುನಾಡು ರಾಜಕಾರಣದಲ್ಲಿ ಸ್ಫೋಟಕ ಬೆಳವಣಿಗೆ: ಎಐಎಡಿಎಂಕೆಯಲ್ಲಿ ಭಾರಿ ಬಂಡಾಯ, ಟಿವಿಕೆಗೆ ಷಣ್ಮುಗಂ ನೇತೃತ್ವದ 30 ಶಾಸಕರ ಬೆಂಬಲ – Kannada News | AIADMK Faces Split as Shanmugam Faction Backs CM Vijays TVK

ಚೆನ್ನೈ, ಮೇ 12: ತಮಿಳುನಾಡು ರಾಜಕಾರಣದಲ್ಲಿ ಅಣ್ಣಾ ಡಿಎಂಕೆ ಪಕ್ಷವು ಆಂತರಿಕ ಭಿನ್ನಾಭಿಪ್ರಾಯಗಳಿಂದಾಗಿ ಇಬ್ಭಾಗವಾಗಿದೆ. ಸಿ.ವಿ. ಷಣ್ಮುಗಂ ನೇತೃತ್ವದ 30 ಶಾಸಕರ ಬಣವು ಮುಖ್ಯಮಂತ್ರಿ ವಿಜಯ್​ ಅವರ ಟಿವಿಕೆ ಪಕ್ಷಕ್ಕೆ ಬೆಂಬಲ ಘೋಷಿಸಿದೆ. ಅಣ್ಣಾ ಡಿಎಂಕೆ ಸ್ಥಾಪನಾ ತತ್ವಗಳಿಗೆ ವಿರುದ್ಧವಾಗಿ, ಎಡಪ್ಪಾಡಿ ಪಳನಿಸ್ವಾಮಿ ಅವರು ಡಿಎಂಕೆ ಜೊತೆ ಮೈತ್ರಿ ಮಾಡಿಕೊಳ್ಳಲು ಮುಂದಾಗಿದ್ದರು ಎಂಬ ಆರೋಪವೇ ಈ ಬಂಡಾಯಕ್ಕೆ ಮುಖ್ಯ ಕಾರಣ. ಡಿಎಂಕೆಯನ್ನು ಸೈದ್ಧಾಂತಿಕ ವಿರೋಧಿ ಎಂದು ಪರಿಗಣಿಸುವ ಷಣ್ಮುಗಂ ಬಣ, ಜನಾಭಿಪ್ರಾಯವು ಸಿಎಂ ವಿಜಯ್​ ಅವರ ಪರವಾಗಿದೆ…

Read More

Assam CM Himanth Biswa Sharma Oath Taking Live: ಅಸ್ಸಾಂ ಸಿಎಂ ಆಗಿ ಹಿಮಂತ್ ಬಿಸ್ವಾ ಶರ್ಮಾ ಪದಗ್ರಹಣದ ನೇರಪ್ರಸಾರ – Kannada News | Assam CM Oath Ceremony Live: Himanta Biswa Sarma Sworn In as CM for Second Term in Guwahati

ಅಸ್ಸಾಂ, ಮೇ 12: ಇಂದು ಅಸ್ಸಾಂನ ಖಾನಪಾರ ಪಶುವೈದ್ಯಕೀಯ ಕಾಲೇಜು ಮೈದಾನದಲ್ಲಿ ಹಿಮಂತ ಬಿಸ್ವ ಶರ್ಮಾ ಅವರು ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಾರೆ. 126 ಸದಸ್ಯ ಬಲದ ವಿಧಾನಸಭೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ 102 ಸ್ಥಾನಗಳನ್ನು ಗೆಲ್ಲುವ ಮೂಲಕ ಭರ್ಜರಿ ಜಯ ಸಾಧಿಸಿದೆ. ಈ ಐತಿಹಾಸಿಕ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಮತ್ತು ರಾಜನಾಥ್ ಸಿಂಗ್ ಅಂತಹ ಗಣ್ಯರು ಉಪಸ್ಥಿತರಿದ್ದು, ಖಾನಾಪಾರ ಮೈದಾನದಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳ ಜೊತೆಗೆ ಸಚಿವರು…

Read More

ಶೃಂಗೇರಿಯಲ್ಲಿ ವೋಟ್ ಟ್ಯಾಂಪರಿಂಗ್ ಆರೋಪ: ಎಫ್​ಎಸ್​ಎಲ್​ನಲ್ಲಿ ಎಲ್ಲವೂ ಗೊತ್ತಾಗಲಿದೆ ಎಂದ ಪರಮೇಶ್ವರ್ – Kannada News | Sringeri Vote Tampering Allegations: G Parameshwara Says FSL Report Will Reveal the Truth; Investigation Underway

ಬೆಂಗಳೂರು, ಮೇ 12: ಶೃಂಗೇರಿ ಎಂಎಲ್ಎ ಸ್ಥಾನದ ಗೊಂದಲದ ಬಗ್ಗೆ ಹಾಗೂ ಸುಪ್ರೀಂ ಕೋರ್ಟ್​ ತೀರ್ಪಿನ ಕುರಿತು ಗೃಹ ಸಚಿವ ಜಿ ಪರಮೇಶ್ವರ್ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ್ದಾರೆ. ವೋಟ್ ಟ್ಯಾಂಪರಿಂಗ್ ಆರೋಪ ಸಂಬಂಧ ತನಿಖೆ ನಡೆಯುತ್ತಿದ್ದು, ತನಿಖೆ ಮುಗಿದ ನಂತರ ಎಲ್ಲವೂ ಗೊತ್ತಾಗಲಿದೆ ಎಂದಿದ್ದಾರೆ. ಟ್ಯಾಂಪರಿಂಗ್ ಆರೋಪಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಈಗಾಗಲೇ ದೂರು ದಾಖಲಿಸಿಕೊಂಡು ಎಫ್ಐಆರ್ ನೊಂದಾಯಿಸಲಾಗಿದೆ. ರಾಜ್ಯ ಪೊಲೀಸರು ಈ ಟ್ಯಾಂಪರಿಂಗ್ ಆರೋಪಗಳ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ದೂರಿನ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಎಫ್ಎಸ್ಎಲ್ (Forensic Science…

Read More

ಧರ್ಮಸ್ಥಳ ಬುರುಡೆ ಕೇಸ್​​: ಉತ್ಖನನ ನಡೆದು 10 ತಿಂಗಳಾದರೂ ಕೆಲಸಗಾರರ ಕೈ ಸೇರದ ಕೂಲಿ ಹಣ, ವಾಹನಗಳ ಬಾಡಿಗೆ – Kannada News | 10 Months After Dharmasthala Excavation, Labourers Still Await Pending Payments

ಧರ್ಮಸ್ಥಳದಲ್ಲಿ ನಡೆದಿದ್ದ ಉತ್ಖನನ ಮಂಗಳೂರು, ಮೇ 12: ದೇಶಾದ್ಯಂತ ಭಾರಿ ಸುದ್ದಿಯಾಗಿದ್ದ ಧರ್ಮಸ್ಥಳ ಬುರುಡೆ ಪ್ರಕರಣ ಈಗ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ನೂರಾರು ಹೆಣಗಳನ್ನು ಹೂತಿದ್ದೇನೆ ಎಂಬ ಚಿನ್ನಯ್ಯ ಆರೋಪ ಹಿನ್ನೆಲೆ ಒಟ್ಟು 17 ಸ್ಥಳಗಳಲ್ಲಿ ಉತ್ಖನನ ಕಾರ್ಯ ನಡೆಸಲಾಗಿತ್ತು. ದುರ್ದೈವ ಅಂದರೆ ಇದು ನಡೆದು 10 ತಿಂಗಳಾದರೂ ಉತ್ಖನನ ಕೆಲಸ ಮಾಡಿದ್ದ ಕಾರ್ಮಿಕರಿಗೆ ಕೂಲಿ ಮತ್ತು ಯಂತ್ರೋಪಕರಣಗಳ ಬಾಡಿಗೆ ಹಣ ಇನ್ನೂ ಪಾವತಿಯಾಗಿಲ್ಲ ಎಂಬ ಆರೋಪ ಕೇಳಿಬಂದಿದೆ. ಎಸ್‌ಐಟಿ (SIT) ಸೂಚನೆಯಂತೆ ಅಹೋರಾತ್ರಿ ದುಡಿದರೂ ಬಿಲ್…

Read More

Video: ಪುಟ್ಟ ಪುಟ್ಟ ಹೆಜ್ಜೆಯಿಟ್ಟು ಕಂದಮ್ಮ ನಡೆಯುತ್ತಿದ್ದಂತೆ ಭಾವುಕಳಾದ ತಾಯಿ – Kannada News | Mother reacts cutely as little girl takes tiny steps

ತಾಯಿಯ (mother love) ಪ್ರೀತಿಯೇ ಹಾಗೇ, ಮಕ್ಕಳ ಆರೈಕೆಯಲ್ಲೇ ಖುಷಿ ಕಾಣುವ ಜೀವವದು. ಮಗುವಿಗೆ ಎಣ್ಣೆ ಹಚ್ಚಿ ಸ್ನಾನ ಮಾಡಿಸುವುದು, ಆಹಾರ ನೀಡುವುದು ಆಕೆಯ ದಿನನಿತ್ಯ ರೂಟೀನ್ ಆಗಿರುತ್ತದೆ. ಮಗುವಿನ ತೊದಲು ನುಡಿ ಕೇಳುತ್ತ ತನ್ನೆಲ್ಲಾ ನೋವುಗಳನ್ನು ಮರೆಯುತ್ತಾಳೆ. ಇದೀಗ ಪುಟಾಣಿಯೊಂದು  ಮೊದಲ ಬಾರಿಗೆ ಹೆಜ್ಜೆ ಇಟ್ಟು ನಡೆಯುತ್ತಿದ್ದರೆ, ತಾಯಿ ತನ್ನ ಮಗಳ ಮೊದಲ ನಡಿಗೆಯನ್ನು ಕಣ್ತುಂಬಿಸಿಕೊಂಡು ಭಾವುಕಳಾಗಿದ್ದಾಳೆ. ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ fun_factorss ಹೆಸರಿನ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಈ…

Read More

ಶಾಪದ ನಂಬರ್​ ಆಯ್ತಾ 49? ಆರ್​​ಸಿಬಿ ಟ್ರೋಲ್ ಮಾಡಿದವರಿಗೆ ಕಾಡುತ್ತಿದೆ ಶನಿ – Kannada News | IPL’s ’49 Curse’: Is Karma Hitting Teams Who Trolled RCB’s Lowest Score?

ಐಪಿಎಲ್​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೆಕೆಆರ್ ವಿರುದ್ಧ 49 ರನ್‌ಗಳಿಗೆ ಆಲೌಟ್ ಆಗಿದ್ದನ್ನು ಯಾರೂ ಮರೆತಿಲ್ಲ. ಈ ಬಾರಿ ಆರ್​​ಸಿಬಿ ಉತ್ತಮ ಪ್ರದರ್ಶನ ನೀಡಿ, ಟಾಪ್​​ನಲ್ಲಿದೆ. ಬೆಂಗಳೂರು ಕಪ್ ಗೆದ್ದ ಹೊರತಾಗಿಯೂ ಟ್ರೋಲ್ ಮಾಡಲು ಸಿಗುವುದು ಇದೊಂದೇ ವಿಷಯ. ಪ್ರತಿ ಸೀಸನ್‌ನಲ್ಲೂ ಆರ್‌ಸಿಬಿಯನ್ನು ಕೆಣಕಲು ವಿರೋಧಿ ತಂಡದವರು ಮತ್ತು ಕೆಲವು ಫ್ರಾಂಚೈಸಿಗಳು ಇದೇ ‘49’ ಸಂಖ್ಯೆಯನ್ನು ಬಳಸಿಕೊಳ್ಳುತ್ತಿದ್ದಾರೆ. ಆದರೆ, ಈ ಬಾರಿ ಈ ಸಂಖ್ಯೆಯನ್ನು ಟ್ರೋಲ್ ಮಾಡಿದವರಿಗೆ ಶನಿದೆಸೆ ಹಿಡಿಯುತ್ತಿದೆ. 1. ಶಾಪದ ನಂಬರ್ ಆಯ್ತಾ…

Read More

‘ದ್ರಾವಿಡ’ ರಾಜಕಾರಣದ ‘ಯೂನಿಫಾರ್ಮ್’ ಬದಲಿಸಿದ ವಿಜಯ್ – Kannada News | Why Vijay wore back suit on his oath taking ceremony

ತಮಿಳುನಾಡಿನಲ್ಲಿ ಕಳೆದ 60 ವರ್ಷಗಳಿಂದಲೂ ‘ದ್ರಾವಿಡ’ ರಾಜಕೀಯದ್ದೆ (Politics) ಕಾರುಬಾರು. ಕಳೆದ ಆರು ದಶಕಗಳಲ್ಲಿ ಡಿಎಂಕೆ (ದ್ರಾವಿಡ ಮುನ್ನೇಟ್ರ ಕಳಗಂ) ಮತ್ತು ಎಐಎಡಿಎಂಕೆ (ಆಲ್ ಇಂಡಿಯಾ ಅನ್ನಾ ದ್ರಾವಿಡ ಮುನ್ನೇಟ್ರ ಕಳಗಂ) ಬಿಟ್ಟರೆ ಇನ್ಯಾವ ಪಕ್ಷವೂ ಸಹ ತಮಿಳುನಾಡಿನಲ್ಲಿ ಗೆದ್ದಿರಲಿಲ್ಲ. ಈ 60 ವರ್ಷಗಳ ‘ದ್ರಾವಿಡ’ ರಾಜಕೀಯ ಪ್ರಾಬಲ್ಯವನ್ನು ಮುರಿದಿರುವ ದಳಪತಿ ವಿಜಯ್ (Thalapathy Vijay) ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ವಿಜಯ್, ‘ದ್ರಾವಿಡ’ ರಾಜಕೀಯಕ್ಕೆ ಬ್ರೇಕ್ ಹಾಕಿದ್ದು ಮಾತ್ರವೇ ಅಲ್ಲದೆ, ದಶಕಗಳಿಂದಲೂ ಪಾಲಿಸಿಕೊಂಡು…

Read More

ತಮಿಳುನಾಡಲ್ಲಿ ಧಾರ್ಮಿಕ ಸ್ಥಳಗಳು, ಶಾಲೆಗಳ ಬಳಿ ಇದ್ದ 717 ಮದ್ಯದಂಗಡಿ ಮುಚ್ಚಲು ವಿಜಯ್‌ ಆದೇಶ: ಸಿಎಂ ಆದ ಬೆನ್ನಲ್ಲೇ ಮಹತ್ವದ ಕ್ರಮ – Kannada News | CM Vijay Orders Closure of 717 TASMAC Liquor Shops in Tamil Nadu; First Major Move as Chief Minister

ತಮಿಳುನಾಡು ಸಿಎಂ ದಳಪತಿ ವಿಜಯ್Image Credit source: tv9 ಚೆನ್ನೈ, ಮೇ 12: ತಮಿಳುನಾಡಿನ (Tamil Nadu) ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ದಳಪತಿ ವಿಜಯ್ (Joseph Vijay) ಮೊದಲ ಭಾಷಣದಲ್ಲೇ ರಾಜ್ಯದ ಸಾಲದ ಬಗ್ಗೆ ಮಾತನಾಡಿದ್ದು ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಮೊದಲ ಮಹತ್ವದ ನಿರ್ಧಾರವನ್ನೂ ಪ್ರಕಟಿಸಿದ್ದಾರೆ. ರಾಜ್ಯಾದ್ಯಂತ ದೇವಸ್ಥಾನಗಳು, ಶಾಲೆಗಳು ಮತ್ತು ಬಸ್ ನಿಲ್ದಾಣಗಳ 500 ಮೀಟರ್ ವ್ಯಾಪ್ತಿಯಲ್ಲಿರುವ ಒಟ್ಟು 717 ಸರ್ಕಾರಿ ಸ್ವಾಮ್ಯದ ಟಾಸ್ಮಾಕ್ (TASMAC) ಮದ್ಯದ ಅಂಗಡಿಗಳನ್ನು ಮುಚ್ಚುವಂತೆ ಅವರು ಆದೇಶಿಸಿದ್ದಾರೆ. ಮುಖ್ಯಾಂಶಗಳು…

Read More

ಶೃಂಗೇರಿ ಮರುಮತ ಎಣಿಕೆಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ: ಆದೇಶವನ್ನು ಒಪ್ಪಿಕೊಳ್ಳುತ್ತೇನೆ ಎಂದ ಜೀವರಾಜ್ – Kannada News | Supreme Court Stays Recounting Process in Sringeri Assembly Constituency Case, Jeevraj Reaction

ಬೆಂಗಳೂರು, ಮೇ 12: ಶೃಂಗೇರಿ ಕ್ಷೇತ್ರದ ಮರುಮತ ಎಣಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ. ಬಿಜೆಪಿಯ ಜೀವರಾಜ್ ಅವರ ಗೆಲುವಿನ ಹಿನ್ನೆಲೆಯಲ್ಲಿ ಟಿ.ಡಿ. ರಾಜೇಗೌಡರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ಸುಪ್ರೀಂ ಕೋರ್ಟ್, ಮರುಮತ ಎಣಿಕೆಯ ಪ್ರಕ್ರಿಯೆಗೆ ತಡೆಯಾಜ್ಞೆ ನೀಡಿ ಆದೇಶ ಹೊರಡಿಸಿದೆ. ಈ ಕುರಿತು ಪ್ರತಿಕ್ರಿಯಿಸಿದ ಶಾಸಕ ಜೀವರಾಜ್, ನ್ಯಾಯಾಲಯದ ಆದೇಶವನ್ನು ಗೌರವಿಸುವುದಾಗಿ ತಿಳಿಸಿದ್ದಾರೆ. ಸುಪ್ರೀಂ ಕೋರ್ಟ್ ಪ್ರಕರಣದ ಬಗ್ಗೆ ಅವಲೋಕಿಸಿ, ಚುನಾವಣಾ ಆಯೋಗಕ್ಕೆ ನೋಟಿಸ್ ಜಾರಿ ಮಾಡಿದೆ ಮತ್ತು ಮುಂದಿನ…

Read More