TV9 Kannada News Live: ಕರ್ನಾಟಕಕ್ಕೆ ತಟ್ಟಿದ ಕಾವೇರಿ ನೀರು ಹಂಚಿಕೆಯ ಕಾವು! ಈ ಹೊತ್ತಿನ ಪ್ರಮುಖ ಸುದ್ದಿಗಳು ಇಲ್ಲಿವೆ – Kannada News | TV9 Kannada Live Breaking News 29 July 2026 Parliament Monsoon Session, August Rule Changes Cauvery Water issue DK Shivakumar, Weather Latest Updates Online

Breaking News Today Live Updates in Kannada: ಇಂದು ದೇಶಾದ್ಯಂತ ಗುರು ಪೂರ್ಣಿಮೆಯ ಪವಿತ್ರ ಆಚರಣೆ ಜೋರಾಗಿದ್ದು, ಜ್ಞಾನದ ಬೆಳಕು ತೋರಿದ ಗುರುಗಳಿಗೆ ಗೌರವ ಸಲ್ಲಿಸಲಾಗುತ್ತಿದೆ. ಇನ್ನೊಂದೆಡೆ, ತಮಿಳುನಾಡಿಗೆ ನೀರು ಹರಿಸುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಆದೇಶಿಸಿರುವುದನ್ನು ವಿರೋಧಿಸಿ ಮಂಡ್ಯದಲ್ಲಿ ಭೂಮಿ ತಾಯಿ ಹೋರಾಟ ಸಮಿತಿ ನೇತೃತ್ವದಲ್ಲಿ ರೈತರು ಪಂಜಿನ ಮೆರವಣಿಗೆ ನಡೆಸಿ, ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಈ ನಡುವೆ, ರಾಜ್ಯದ ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಮುಂಗಾರು ಅಬ್ಬರಿಸುತ್ತಿದ್ದು, ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಿಗೆ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ. ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜ್ಯ, ರಾಜಕೀಯ, ಸಿನಿಮಾ, ಕ್ರೀಡೆ ಇತ್ಯಾದಿ ಲೇಟೆಸ್ಟ್ ಮಾಹಿತಿ ತಿಳಿಯಲು ಈ ಪುಟವನ್ನು ರಿಫ್ರೆಶ್ ಮಾಡುತ್ತಿರಿ.

Tv9 Kannada Live TV ಇಲ್ಲಿ ವೀಕ್ಷಿಸಿ

Source link

‘ಪುಷ್ಪ 2’ ದಾಖಲೆ ಮುರಿದ ‘ರಾಮಾಯಣ’? ಕೋಟಿ ಕೋಟಿಗೆ ಮಾರಾಟವಾಯ್ತು ಮ್ಯೂಸಿಕ್ ಹಕ್ಕು – Kannada News | Ranbir Kapoor Ramayana Breaks Pushpa 2 Record With Massive Rs 75 Crore Music Deal

ವಿಶ್ವ ಮಟ್ಟದಲ್ಲಿ ಸಖತ್ ಹೈಪ್ ಕ್ರಿಯೇಟ್ ಮಾಡಿರುವ ‘ರಾಮಾಯಣ’ ಸಿನಿಮಾ (Ramayana Movie) ಈಗ ಹೊಸ ಇತಿಹಾಸ ಬರೆಯಲು ರೆಡಿ ಆಗಿದೆ. ಬಿಡುಗಡೆಗೂ ಮುನ್ನವೇ ಈ ಚಿತ್ರ ಒಳ್ಳೆಯ ಬಿಸ್ನೆಸ್ ಮಾಡುತ್ತಿದೆ. ಟಿ-ಸೀರೀಸ್ ಸಂಸ್ಥೆಯು ಭಾರಿ ಮೊತ್ತಕ್ಕೆ ಈ ಚಿತ್ರದ ಆಡಿಯೋ ಹಕ್ಕುಗಳನ್ನು ತನ್ನದಾಗಿಸಿಕೊಂಡಿದೆ. ಈ ಮೂಲಕ ಭಾರತೀಯ ಚಿತ್ರರಂಗದಲ್ಲೇ ಅತ್ಯಂತ ದುಬಾರಿ ಮ್ಯೂಸಿಕ್ ಡೀಲ್ ಕುದುರಿಸಿದ ಹೆಗ್ಗಳಿಕೆಗೆ ಈ ಸಿನಿಮಾ ಪಾತ್ರವಾಗಿದೆ.

75 ಕೋಟಿ ರೂಪಾಯಿಗೆ ಆಡಿಯೋ ಹಕ್ಕು ಮಾರಾಟ

ರಣಬೀರ್ ಕಪೂರ್ ನಟನೆಯ ‘ರಾಮಾಯಣ’ ಚಿತ್ರದ ಮ್ಯೂಸಿಕ್ ರೈಟ್ಸ್ ಬರೋಬ್ಬರಿ 75 ಕೋಟಿ ರೂಪಾಯಿಗೆ ಮಾರಾಟವಾಗಿದೆ ಎಂದು ವರದಿಯಾಗಿದೆ. ಸಿನಿಮಾ ವಲಯದಲ್ಲಿ ಈ ಸುದ್ದಿ ದೊಡ್ಡ ಸಂಚಲನ ಮೂಡಿಸಿದೆ. ಇದು ನಿಜವೇ ಆದಲ್ಲಿ ಭಾರತೀಯ ಸಿನಿಮಾ ರಂಗದಲ್ಲಿ ಇದು ಹೊಸ ಮೈಲಿಗಲ್ಲು ಸೃಷ್ಟಿಸಲಿದೆ. ಈ ಡೀಲ್ ಮೂಲಕ ಸಿನಿಮಾ ತನ್ನ ಗತ್ತನ್ನು ಪ್ರದರ್ಶಿಸಿದೆ.

‘ಪುಷ್ಪ 2’ ದಾಖಲೆ ಧೂಳೀಪಟ ಮಾಡಿದ ರಾಮ

ಇಲ್ಲಿಯವರೆಗೆ ಅತಿ ಹೆಚ್ಚು ಮೊತ್ತಕ್ಕೆ ಆಡಿಯೋ ಹಕ್ಕು ಮಾರಾಟವಾದ ದಾಖಲೆ ಅಲ್ಲು ಅರ್ಜುನ್ ನಟನೆಯ ‘ಪುಷ್ಪ 2’ ಹೆಸರಿನಲ್ಲಿತ್ತು. ‘ಪುಷ್ಪ 2’ ಚಿತ್ರದ ಮ್ಯೂಸಿಕ್ ರೈಟ್ಸ್ ಸುಮಾರು 65 ಕೋಟಿ ರೂಪಾಯಿಗೆ ಸೇಲ್ ಆಗಿತ್ತು. ಈಗ ‘ರಾಮಾಯಣ’ ಸಿನಿಮಾ ಆ ದಾಖಲೆಯನ್ನು ಸುಲಭವಾಗಿ ಮೀರಿ ನಿಂತಿದೆ. ಆ ಮೂಲಕ ‘ಪುಷ್ಪ’ ಚಿತ್ರದ ದಾಖಲೆ ಧೂಳೀಪಟವಾಗಿದೆ.

ಇದನ್ನೂ ಓದಿ: ‘ರಾಮಾಯಣ’ ಚಿತ್ರದ ಟ್ರೇಲರ್ ಬಿಡುಗಡೆಗೆ ದಿನಾಂಕ ನಿಗದಿ: ನಮಿತ್ ಮಲ್ಹೋತ್ರಾ ಅಧಿಕೃತ ಘೋಷಣೆ

ಯಶ್ ನಟನೆಯ ಚಿತ್ರದ ಟ್ರೈಲರ್ ರಿಲೀಸ್ ಡೇಟ್ ಫಿಕ್ಸ್

ಖ್ಯಾತ ನಿರ್ದೇಶಕ ನಿತೇಶ್ ತಿವಾರಿ ಈ ಬಿಗ್ ಬಜೆಟ್ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ. ರಣಬೀರ್ ಕಪೂರ್ ರಾಮನಾಗಿ ನಟಿಸುತ್ತಿದ್ದರೆ ಸಾಯಿ ಪಲ್ಲವಿ ಸೀತೆಯಾಗಿ ಕಾಣಿಸಿಕೊಳ್ಳಲಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಇಲ್ಲಿ ರಾವಣನ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಜುಲೈ 30 ರಂದು ‘ರಾಮಾಯಣ ಭಾಗ 1’ ಚಿತ್ರದ ಬಹುನಿರೀಕ್ಷಿತ ಟ್ರೈಲರ್ ಬಿಡುಗಡೆಯಾಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಅಬ್ಬರ ಸಿಡಿಲಬ್ಬರ… ಏಕಾಂಗಿಯಾಗಿ ಪಂದ್ಯ ಗೆಲ್ಲಿಸಿದ ಸ್ಮೃತಿ ಮಂಧಾನ! – Kannada News | Smriti Mandhana won the Match single handedly for Supergiants

ಇಂಗ್ಲೆಂಡ್​ನಲ್ಲಿ ನಡೆಯುತ್ತಿರುವ ಮಹಿಳಾ ದಿ ಹಂಡ್ರೆಡ್ ಕ್ರಿಕೆಟ್ ಟೂರ್ನಿಯಲ್ಲಿ ಮ್ಯಾಂಚೆಸ್ಟರ್ ಸೂಪರ್‌ ಜೈಂಟ್ಸ್​ ತಂಡವು ಮತ್ತೊಂದು ಜಯ ಸಾಧಿಸಿದೆ. ಈ ಗೆಲುವು ತಂದುಕೊಟ್ಟಿದ್ದು ಭಾರತದ ಸ್ಟಾರ್ ಓಪನರ್ ಸ್ಮೃತಿ ಮಂಧಾನ ಎಂಬುದು ವಿಶೇಷ. ಅದು ಸಹ ಏಕಾಂಗಿ ಹೋರಾಟದೊಂದಿಗೆ ಎಂಬುದು ಮತ್ತೊಂದು ವಿಶೇಷ.

ಲೀಡ್ಸ್​ನ ಹೆಡಿಂಗ್ಲೆ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಮ್ಯಾಂಚೆಸ್ಟರ್ ಸೂಪರ್ ಜೈಂಟ್ಸ್ ಹಾಗೂ ಸನ್​ರೈಸರ್ಸ್​ ಲೀಡ್ಸ್​ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಟಾಸ್ ಗೆದ್ದ ಮ್ಯಾಂಚೆಸ್ಟರ್ ತಂಡದ ನಾಯಕಿ ಮೆಗ್ ಲ್ಯಾನಿಂಗ್ ಬೌಲಿಂಗ್ ಆಯ್ದುಕೊಂಡಿದ್ದರು.

ಸನ್​ರೈಸರ್ಸ್​ ಲೀಡ್ಸ್​ ಬ್ಯಾಟಿಂಗ್:

ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಸನ್​ರೈಸರ್ಸ್​ ಲೀಡ್ಸ್​ ತಂಡವು ನಿರೀಕ್ಷಿತ ಆರಂಭ ಪಡೆದಿರಲಿಲ್ಲ. ಇದಾಗ್ಯೂ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದ ಫೀಬಿ ಲಿಚ್​ಫೀಲ್ಡ್​ 31 ರನ್ ಬಾರಿಸಿದರೆ, ಅನ್ನಾಬೆಲ್ ಸದರ್​ಲ್ಯಾಂಡ್ 35 ರನ್ ಗಳಿಸಿದರು. ಈ ಮೂಲಕ ಸನ್​ರೈಸರ್ಸ್​ ಲೀಡ್ಸ್​ ತಂಡವು 100 ಎಸೆತಗಳಲ್ಲಿ 4 ವಿಕೆಟ್ ನಷ್ಟಕ್ಕೆ 142 ರನ್ ಕಲೆಹಾಕಿತು.

ಮ್ಯಾಂಚೆಸ್ಟರ್ ಸೂಪರ್ ಜೈಂಟ್ಸ್ ಚೇಸಿಂಗ್:

143 ರನ್​ಗಳ ಗುರಿಯನ್ನು ಬೆನ್ನತ್ತಿದ ಮ್ಯಾಂಚೆಸ್ಟರ್ ಸೂಪರ್ ಜೈಂಟ್ಸ್ ತಂಡಕ್ಕೆ ಸ್ಮೃತಿ ಮಂಧಾನ ಹಾಗೂ ಮೆಗ್ ಲ್ಯಾನಿಂಗ್ ಉತ್ತಮ ಆರಂಭ ಒದಗಿಸಿದ್ದರು. ಈ ಜೋಡಿಯು ಮೊದಲ ವಿಕೆಟ್​ಗೆ 41 ರನ್ ಪೇರಿಸಿದ ಬಳಿಕ ಲ್ಯಾನಿಂಗ್ (24) ವಿಕೆಟ್ ಒಪ್ಪಿಸಿದರು.

ಆ ಬಳಿಕ ಬಂದ ಪೈಜ್ ಸ್ಕೋಲ್ಫೀಲ್ಡ್ (5), ರಿಚಾ ಘೋಷ್ (4) ಬಂದ ವೇಗದಲ್ಲೇ ಹಿಂತಿರುಗಿದರೆ, ಮೈಟ್ಲಾನ್ ಬ್ರೌನ್ (0), ಮ್ಯಾಡಿ ವಿಲಿಯರ್ಸ್ (0), ಗ್ರೇಸ್ ಸ್ಕ್ರಿವೆನ್ಸ್ (9) ಬ್ಯಾಕ್ ಟು ಬ್ಯಾಕ್ ವಿಕೆಟ್ ಕೈಚೆಲ್ಲಿದರು.

ಹೀಗೆ ದಿಢೀರ್ ಕುಸಿತಕ್ಕೊಳಗಾಗಿ ಮ್ಯಾಂಚೆಸ್ಟರ್ ಸೂಪರ್ ಜೈಂಟ್ಸ್ ಸೋಲಿನತ್ತ ಮುಖ ಮಾಡಿದರೂ ಸ್ಮೃತಿ ಮಂಧಾನ ಮಾತ್ರ ಧೃತಿಗೆಡಲಿಲ್ಲ. ಅಲ್ಲದೆ ಏಕಾಂಗಿ ಹೋರಾಟ ಮುಂದುವರೆಸಿದರು.

ಸ್ಮೃತಿ ಏಕಾಂಗಿ ಹೋರಾಟ:

ಒಂದೆಡೆ ವಿಕೆಟ್‌ಗಳು ಉರುಳುತ್ತಿದ್ದರೂ ಧೃತಿಗೆಡದ ಸ್ಮೃತಿ ಮಂಧಾನ, ಸನ್​ರೈಸರ್ಸ್​ ಲೀಡ್ಸ್ ಬೌಲರ್‌ಗಳ ಬೆಂಡೆತ್ತಲಾರಂಭಿಸಿದರು. ಮೈದಾನದ ಮೂಲೆ ಮೂಲೆಗೂ ಬೌಂಡರಿ, ಸಿಕ್ಸರ್‌ಗಳ ಸುರಿಮಳೆಗೈದ ಸ್ಮೃತಿ ಕೇವಲ 50 ಎಸೆತಗಳಲ್ಲಿ 7 ಬೌಂಡರಿ ಹಾಗೂ 4 ಭರ್ಜರಿ ಸಿಕ್ಸರ್‌ಗಳ ನೆರವಿನಿಂದ ಅಜೇಯ 88 ರನ್ ಗಳಿಸಿದರು.

ಈ ಅಜೇಯ 88 ರನ್​ಗಳೊಂದಿಗೆ ಸ್ಮೃತಿ ಮಂಧಾನ ಮ್ಯಾಂಚೆಸ್ಟರ್ ಸೂಪರ್ ಜೈಂಟ್ಸ್ ತಂಡವನ್ನು 96 ಎಸೆತಗಳಲ್ಲಿ ಗುರಿ ತಲುಪಿಸಿ 4 ವಿಕೆಟ್​ಗಳ ಜಯ ತಂದುಕೊಟ್ಟರು. ಈ ಗೆಲುವಿನೊಂದಿಗೆ ಮ್ಯಾಂಚೆಸ್ಟರ್ ಸೂಪರ್ ಜೈಂಟ್ಸ್ ತಂಡವು ಅಂಕ ಪಟ್ಟಿಯಲ್ಲಿ ದ್ವಿತೀಯ ಸ್ಥಾನಕ್ಕೇರಿದೆ.

Source link

ಬಿಹಾರ, ಅಸ್ಸಾಂ ಬೆನ್ನಲ್ಲೇ ಪಶ್ಚಿಮ ಬಂಗಾಳದಿಂದಲೂ ನೀಟ್ ಪ್ರತಿಭಟನಾಕಾರರಿಗೆ ಅಭಯ: ಪ್ರಕರಣ ಹಿಂಪಡೆಯಲು ನಿರ್ಧಾರ, ಕ್ರಿಮಿನಲ್‌ಗಳಿಗೆ ಇಲ್ಲ ವಿನಾಯಿತಿ – Kannada News | NEET Protest Cases: West Bengal Joins Bihar, Assam in Withdrawing Charges Against Students

ಕೋಲ್ಕತ್ತಾ, ಜುಲೈ 29: ಬಿಹಾರ ಮತ್ತು ಅಸ್ಸಾಂ ರಾಜ್ಯಗಳ ಹಾದಿಯನ್ನೇ ಅನುಸರಿಸಿರುವ ಪಶ್ಚಿಮ ಬಂಗಾಳ ಸರ್ಕಾರವು, ನೀಟ್-ಯುಜಿ(NEET-UG) ಪರೀಕ್ಷಾ ಅಕ್ರಮ ಖಂಡಿಸಿ ನಡೆದ ಪ್ರತಿಭಟನೆಗಳಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು ಹಾಗೂ ಪ್ರತಿಭಟನಾಕಾರರ ವಿರುದ್ಧ ಯಾವುದೇ ಕಠಿಣ ಅಥವಾ ಬಲವಂತದ ಕಾನೂನು ಕ್ರಮಗಳನ್ನು ಕೈಗೊಳ್ಳುವುದಿಲ್ಲ ಎಂದು ಮಂಗಳವಾರ ಅಧಿಕೃತವಾಗಿ ಘೋಷಿಸಿದೆ. ಆದಾಗ್ಯೂ, ಈ ಸಡಿಲಿಕೆ ಮತ್ತು ರಕ್ಷಣೆಯು ಕೇವಲ ಸಾಮಾನ್ಯ ವಿದ್ಯಾರ್ಥಿಗಳಿಗೆ ಮಾತ್ರ ಅನ್ವಯಿಸಲಿದ್ದು, ಅಪರಾಧ ಹಿನ್ನೆಲೆ ಹೊಂದಿರುವ ವ್ಯಕ್ತಿಗಳಿಗೆ ಯಾವುದೇ ವಿನಾಯಿತಿ ನೀಡಲಾಗುವುದಿಲ್ಲ ಎಂದು ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರ ಸ್ಪಷ್ಟಪಡಿಸಿದೆ.

ಜುಲೈ 28 ರಂದು ಸುಪ್ರೀಂ ಕೋರ್ಟ್ ನೀಡಿದ ನಿರ್ದೇಶನಗಳನ್ನು ಗಮನದಲ್ಲಿಟ್ಟುಕೊಂಡು ಪಶ್ಚಿಮ ಬಂಗಾಳದ ಗೃಹ ಇಲಾಖೆಯು ಈ ಆದೇಶ ಹೊರಡಿಸಿದೆ. ಜುಲೈ 26 ರ ಸಂಜೆ 6 ಗಂಟೆಯವರೆಗೆ ದಾಖಲಾದ ಪ್ರಕರಣಗಳಲ್ಲಿ ಭಾಗಿಯಾಗಿರುವ ಸಾಮಾನ್ಯ ವಿದ್ಯಾರ್ಥಿಗಳ ಮೇಲೆ ಯಾವುದೇ ದಂಡನಾತ್ಮಕ ಕ್ರಮ ಜರುಗಿಸುವುದಿಲ್ಲ ಎಂದು ತಿಳಿಸಲಾಗಿದೆ. ನೀಟ್ ಅಕ್ರಮ ವಿರೋಧಿ ಪ್ರತಿಭಟನೆಗೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಪೊಲೀಸರು ದೂರು ದಾಖಲಿಸಿಕೊಂಡು ಈವರೆಗೆ 16 ಮಂದಿಯನ್ನು ಬಂಧಿಸಿದ್ದರು.

ಜುಲೈ 25 ರಂದು ನಡೆದ ‘ಬಿಹಾರ ಬಂದ್’ ವೇಳೆ ಬಂಧಿತರಾಗಿದ್ದ694 ಮಂದಿಯ ಪೈಕಿ 339 ಅಪ್ರಾಪ್ತ ವಿದ್ಯಾರ್ಥಿಗಳನ್ನು ತಕ್ಷಣವೇ ಬಿಡುಗಡೆ ಮಾಡಲಾಗಿದೆ. ಉಳಿದವರ ಮೇಲಿದ್ದ ಪ್ರಕರಣಗಳನ್ನು ಹಿಂಪಡೆಯುವುದಾಗಿ ಬಿಹಾರ ಗೃಹ ಇಲಾಖೆ ಸೋಮವಾರ ಪ್ರಕಟಿಸಿದೆ. ಅಸ್ಸಾಂನಲ್ಲಿ ಪ್ರತಿಭಟನೆಗೆ ಸಂಬಂಧಿಸಿದಂತೆ 5 ಪ್ರಕರಣಗಳು ದಾಖಲಾಗಿದ್ದು, 13 ಜನರನ್ನು ಬಂಧಿಸಲಾಗಿತ್ತು. ಶಿಕ್ಷಣ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ ಅಸ್ಸಾಂ ಸರ್ಕಾರವೂ ಎಲ್ಲ ಪ್ರಕರಣಗಳನ್ನು ಹಿಂತೆಗೆದುಕೊಳ್ಳಲು ನಿರ್ಧರಿಸಿದೆ.

ಮತ್ತಷ್ಟು ಓದಿ: ನಿಟ್ಟುಸಿರು ಬಿಟ್ಟ ನೀಟ್ ಪ್ರತಿಭಟನಾಕಾರರು: ಬಿಹಾರದ ಬೆನ್ನಲ್ಲೇ ಪ್ರಕರಣ ಹಿಂಪಡೆಯಲು ಅಸ್ಸಾಂ ಸರ್ಕಾರ ನಿರ್ಧಾರ

ಪ್ರತಿಭಟನೆಗಳ ಅಂತ್ಯ ಹಾಗೂ ಸರ್ಕಾರದ ಒಪ್ಪಂದ: ದೇಶಾದ್ಯಂತ 36 ದಿನಗಳ ಕಾಲ ನಡೆದ ಭಾರಿ ವಿದ್ಯಾರ್ಥಿ ಆಂದೋಲನ ಹಾಗೂ ಜುಲೈ 25 ರಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ ನಂತರ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳಲಾಗಿತ್ತು.

ಸೋನಮ್ ವಾಂಗ್ಚುಕ್ ಹಾಗೂ ಸಿಜೆಪಿ ಮಧ್ಯಸ್ಥಿಕೆ: ಕಾಕ್ರೋಚ್ ಜನತಾ ಪಕ್ಷ (CJP) ಹಾಗೂ ಖ್ಯಾತ ಸಮಾಜ ಸುಧಾರಕ ಸೋನಮ್ ವಾಂಗ್ಚುಕ್ ಅವರ ಜೊತೆ ಕೇಂದ್ರ ಸರ್ಕಾರ ನಡೆಸಿದ ಸಂಧಾನದ ವೇಳೆ, ಪ್ರತಿಭಟನಾಕಾರರ ಮೇಲಿನ ಪ್ರಕರಣಗಳನ್ನು ಹಿಂಪಡೆಯಲು ಹಾಗೂ ಪರೀಕ್ಷಾ ಮಾಫಿಯಾ ವಿರುದ್ಧ ಕಠಿಣ ಕಾನೂನು ತರಲು ಸರ್ಕಾರ ಒಪ್ಪಿಕೊಂಡಿತ್ತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಬೆಂಗಳೂರಿನಲ್ಲಿ ಖಾಲಿ ಜಾಗವೇ ಕಸದ ತೊಟ್ಟಿಯಾಗಿದ್ಯಾ? ಜಿಬಿಎ ಬಿಗ್ ಶಾಕ್: 1 ಲಕ್ಷ ರೂ.ವರೆಗೆ ಬೀಳುತ್ತೆ ದಂಡ! – Kannada News | Greater Bengaluru Authority Warns Plot Owners: Clear Garbage by Aug 15 or Face Rs 1 Lakh Fine

ಬೆಂಗಳೂರಿನಲ್ಲಿ ಖಾಲಿ ಜಾಗವೇ ಕಸದ ತೊಟ್ಟಿಯಾಗಿದ್ಯಾ? ಜಿಬಿಎ ಬಿಗ್ ಶಾಕ್

ಬೆಂಗಳೂರು, ಜುಲೈ 29: ರಾಜಧಾನಿಯಲ್ಲಿ ಖಾಲಿ ನಿವೇಶನಗಳನ್ನು ಇಟ್ಟುಕೊಂಡು, ಅವುಗಳನ್ನು ತ್ಯಾಜ್ಯ ಸುರಿಯುವ ತಾಣಗಳನ್ನಾಗಿ ಮಾಡಿರುವ ನಿವೇಶನದಾರರಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಬಿಗ್ ಶಾಕ್ ನೀಡಿದೆ. ಮುಂಬರುವ ಆಗಸ್ಟ್ 15ರೊಳಗೆ ಮಾಲೀಕರು ತಮ್ಮ ಖಾಲಿ ಜಾಗವನ್ನು ಸ್ವತಃ ಸ್ವಚ್ಛಗೊಳಿಸದಿದ್ದರೆ, ಪಾಲಿಕೆಯಿಂದಲೇ ಕಠಿಣ ಕ್ರಮದ ಜೊತೆಗೆ ಭಾರಿ ದಂಡ ವಿಧಿಸಲು ಜಿಬಿಎ ಮುಖ್ಯ ಆಯುಕ್ತ ಎಂ. ಮಹೇಶ್ವರರಾವ್ ಖಡಕ್ ಆದೇಶ ಹೊರಡಿಸಿದ್ದಾರೆ.

ಆಗಸ್ಟ್ 15 ಡೆಡ್‌ಲೈನ್: ತ್ಯಾಜ್ಯದಿಂದ ಸ್ವಾತಂತ್ರ್ಯ ಅಭಿಯಾನ

ನಗರದಲ್ಲಿ ರಸ್ತೆಬದಿ ಕಸ ಎಸೆಯುವುದು ಮತ್ತು ಖಾಲಿ ನಿವೇಶನಗಳನ್ನು ತ್ಯಾಜ್ಯದ ತೊಟ್ಟಿ ಮಾಡಿಕೊಳ್ಳುವುದಕ್ಕೆ ಬ್ರೇಕ್ ಹಾಕಲು ಜಿಬಿಎ ಮುಂದಾಗಿದೆ. ಆಗಸ್ಟ್ ತಿಂಗಳಿನಿಂದ ‘ತ್ಯಾಜ್ಯದಿಂದ ಸ್ವಾತಂತ್ರ್ಯ’ ಎಂಬ ಬೃಹತ್ ಅಭಿಯಾನ ಪ್ರಾರಂಭವಾಗುತ್ತಿದ್ದು, ನಗರದ ಬ್ಲಾಕ್ ಸ್ಪಾಟ್‌ಗಳು, ಕಟ್ಟಡ ತ್ಯಾಜ್ಯ ಹಾಗೂ ರಸ್ತೆಬದಿಯ ಮಾಲಿನ್ಯವನ್ನು ಸಾಮೂಹಿಕವಾಗಿ ತೆರವುಗೊಳಿಸಲು ನಿರ್ಧರಿಸಲಾಗಿದೆ. ಇದರ ಅಂಗವಾಗಿ ಎಲ್ಲಾ ಖಾಲಿ ನಿವೇಶನ ಮಾಲೀಕರಿಗೆ ಆಗಸ್ಟ್ 15ರವರೆಗೆ ಕಾಲಾವಕಾಶ ನೀಡಲಾಗಿದೆ.

ಸ್ವಚ್ಛಗೊಳಿಸದಿದ್ದರೆ ಆಸ್ತಿ ತೆರಿಗೆಯೊಂದಿಗೆ ವೆಚ್ಚ ವಸೂಲಿ

ಆಗಸ್ಟ್ 15ರೊಳಗೆ ಮಾಲೀಕರು ಜಾಗ ಸ್ವಚ್ಛಗೊಳಿಸದಿದ್ದರೆ, ಪಾಲಿಕೆಯೇ ತ್ಯಾಜ್ಯ ತೆರವುಗೊಳಿಸಲಿದೆ. ಆದರೆ, ಅದಕ್ಕೆ ತಗುಲುವ ವೆಚ್ಚವನ್ನು ನಿವೇಶನದ ವಿಸ್ತೀರ್ಣಕ್ಕೆ ಅನುಗುಣವಾಗಿ ಮಾಲೀಕರಿಂದಲೇ ವಸೂಲಿ ಮಾಡಲಾಗುತ್ತದೆ. ಘನತ್ಯಾಜ್ಯ ನಿರ್ವಹಣಾ ಉಪವಿಧಿಗಳು-2020 ಮತ್ತು ಗ್ರೇಟರ್ ಬೆಂಗಳೂರು ಆಡಳಿತ ಅಧಿನಿಯಮ 2024ರ ಅಡಿಯಲ್ಲಿ ಈ ವೆಚ್ಚವನ್ನು ಆಸ್ತಿ ತೆರಿಗೆಯೊಂದಿಗೆ ಸೇರಿಸಿ ವಸೂಲಿ ಮಾಡಲಾಗುವುದು. ತೆರಿಗೆ ಬಾಕಿ ಉಳಿಸಿಕೊಂಡರೆ ‘ಕರ್ನಾಟಕ ಭೂಕಂದಾಯ ಕಾಯ್ದೆ 1964’ರ ಪ್ರಕಾರ ಕಠಿಣ ಕಾನೂನು ಕ್ರಮ ಎದುರಿಸಬೇಕಾಗುತ್ತದೆ.

ವಾಟ್ಸ್‌ಆಪ್ ದೂರು ಸಂಖ್ಯೆ

ನಿಯಮ ಉಲ್ಲಂಘಿಸುವ ನಿವೇಶನದಾರರಿಗೆ ಮೊದಲ ಬಾರಿಗೆ 25,000 ರೂ. ದಂಡ ವಿಧಿಸಿದರೆ, ನಂತರದ ಉಲ್ಲಂಘನೆಗಳಿಗೆ 50,000 ದಿಂದ 1 ಲಕ್ಷ ರೂ.ಗಳವರೆಗೆ ದಂಡ ಹಾಕಲಾಗುತ್ತದೆ. ನಿವೇಶನ ಸ್ವಚ್ಛಗೊಳಿಸಿದ ಬಳಿಕ ಸುತ್ತಲೂ ಕಾಂಪೌಂಡ್ ಅಥವಾ ಬೇಲಿ ಹಾಕುವುದು ಮಾಲೀಕರ ಜವಾಬ್ದಾರಿಯಾಗಿದೆ.

ಒಂದು ವೇಳೆ ನಿಮ್ಮ ಸುತ್ತಮುತ್ತಲಿನ ಖಾಲಿ ನಿವೇಶನಗಳನ್ನು ಮಾಲೀಕರು ಸ್ವಚ್ಛಗೊಳಿಸದಿದ್ದರೆ, ಸಾರ್ವಜನಿಕರು ಆ ಜಾಗದ ಫೋಟೋ ಮತ್ತು ಜಿಪಿಎಸ್ ಲೋಕೇಶನ್ (GPS Co-ordinates) ಜೊತೆಗೆ 9448197197 ವಾಟ್ಸ್‌ಆಪ್ ಸಂಖ್ಯೆಗೆ ದೂರು ಸಲ್ಲಿಸಬಹುದು. ದೂರುದಾರರ ಮಾಹಿತಿಯನ್ನು ರಹಸ್ಯವಾಗಿಡಲಾಗುವುದು.

ವರದಿ: ಅರುಣ್ ಕುಮಾರ್, ಟಿವಿ9 ಬೆಂಗಳೂರು

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರಾಜಮೌಳಿ ಸಿನಿಮಾದಲ್ಲಿದ್ದರೂ ಬಿಡುವಿಲ್ಲದ ಪೃಥ್ವಿರಾಜ್; ಬ್ಯಾಕ್ ಟು ಬ್ಯಾಕ್ ಚಿತ್ರಗಳ ಮೂಲಕ ದಾಖಲೆ – Kannada News | Even Rajamouli Varanasi Cannot Stop Prithviraj Sukumaran Non Stop Movie Releases

ಮಲಯಾಳಂ ಚಿತ್ರರಂಗದ ಸ್ಟಾರ್ ನಟ ಹಾಗೂ ನಿರ್ದೇಶಕ ಪೃಥ್ವಿರಾಜ್ ಸುಕುಮಾರನ್ (Prithviraj) ತಮ್ಮ ಬಹುಮುಖ ಪ್ರತಿಭೆಯಿಂದ ಸದಾ ಸುದ್ದಿಯಲ್ಲಿರುತ್ತಾರೆ. ಸದ್ಯ ಅವರು ಮತ್ತೊಂದು ಅಪರೂಪದ ಸಾಧನೆಗೆ ಕಾರಣವಾಗಿದ್ದಾರೆ. ಎಸ್‌ಎಸ್‌ ರಾಜಮೌಳಿ ಅವರ ಬಿಗ್ ಬಜೆಟ್ ಸಿನಿಮಾ ‘ವಾರಣಾಸಿ’ ಚಿತ್ರದಲ್ಲಿ ನಟಿಸುತ್ತಿದ್ದರೂ ಪೃಥ್ವಿರಾಜ್ ಸಾಲು ಸಾಲು ಸಿನಿಮಾಗಳನ್ನು ರಿಲೀಸ್ ಮಾಡುತ್ತಿದ್ದಾರೆ. ರಾಜಮೌಳಿ ಜೊತೆ ಕೆಲಸ ಮಾಡುತ್ತಾ ಬೇರೆ ಚಿತ್ರಗಳಲ್ಲಿ ಸಕ್ರಿಯರಾಗಿರುವ ಏಕೈಕ ನಟ ಇವರಾಗಿದ್ದಾರೆ.

ಇತ್ತೀಚೆಗಷ್ಟೇ ತೆರೆಕಂಡಿತ್ತು ‘ಐ, ನೋಬಡಿ’ ಸಿನಿಮಾ

ಇತ್ತೀಚೆಗಷ್ಟೇ ಅಂದರೆ ಜುಲೈ 9 ರಂದು ಪೃಥ್ವಿರಾಜ್ ನಟನೆಯ ‘ಐ, ನೋಬಡಿ’ ಚಿತ್ರ ಬಿಡುಗಡೆಯಾಗಿತ್ತು. ಈ ಹಿಸ್ಟ್ ಥ್ರಿಲ್ಲರ್ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದೆ. ಚಿತ್ರದ ತಾಂತ್ರಿಕ ಶ್ರೀಮಂತಿಕೆ ಮತ್ತು ಮೊದಲ ಭಾಗ ಸಖತ್ ಗ್ರಿಪ್ಪಿಂಗ್ ಆಗಿದೆ ಎಂದು ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ಆದರೆ ಚಿತ್ರದ ದ್ವಿತೀಯಾರ್ಧ ಕೊಂಚ ಗೊಂದಲದಿಂದ ಕೂಡಿದೆ ಎಂಬ ಟಾಕ್ ಕೇಳಿಬಂದಿದೆ. ಈ ಸಿನಿಮಾ ಮಲಯಾಳಂ, ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ರಿಲೀಸ್ ಆಗಿತ್ತು.

ಓಣಂ ಹಬ್ಬಕ್ಕೆ ಬರ್ತಿದೆ ‘ಖಲೀಫಾ’ ಧಮಾಕಾ

‘ಐ, ನೋಬಡಿ’ ಬೆನ್ನಲ್ಲೇ ಪೃಥ್ವಿರಾಜ್ ಅವರ ಮುಂದಿನ ಸಿನಿಮಾ ‘ಖಲೀಫಾ’ ಬಿಡುಗಡೆಗೆ ಸಜ್ಜಾಗಿದೆ. ಈ ಚಿತ್ರದ ಶೂಟಿಂಗ್ ಮುಕ್ತಾಯಗೊಂಡಿದೆ. ಆಗಸ್ಟ್ 20 ರಂದು ಓಣಂ ಹಬ್ಬದ ವಿಶೇಷವಾಗಿ ಈ ಸಿನಿಮಾ ಥಿಯೇಟರ್‌ಗಳಿಗೆ ಅಪ್ಪಳಿಸಲಿದೆ ಎಂದು ಪೃಥ್ವಿರಾಜ್ ಅಧಿಕೃತವಾಗಿ ಅನೌನ್ಸ್ ಮಾಡಿದ್ದಾರೆ. ಈ ಚಿತ್ರ ಕೂಡ ಮಲಯಾಳಂ ಜೊತೆಗೆ ತೆಲುಗು ಹಾಗೂ ತಮಿಳು ಭಾಷೆಗಳಲ್ಲಿ ಏಕಕಾಲಕ್ಕೆ ತೆರೆಕಾಣಲಿದೆ.

ಇದನ್ನೂ ಓದಿ: ಪರಭಾಷೆಯಲ್ಲಿ ಮಿಂಚಿ ತಾಯ್ನಾಡಿನಲ್ಲಿ ಸೋಲುತ್ತಿದ್ದಾರಾ ಸ್ಟಾರ್ ನಟ ಪೃಥ್ವಿರಾಜ್?

ನಿರ್ಮಾಪಕರಾಗಿಯೂ ಪೃಥ್ವಿರಾಜ್ ಸಖತ್ ಬ್ಯುಸಿ

ಕೇವಲ ನಟನೆ ಅಷ್ಟೇ ಅಲ್ಲದೆ ಪೃಥ್ವಿರಾಜ್ ಚಿತ್ರ ನಿರ್ಮಾಣದಲ್ಲೂ ಬ್ಯುಸಿಯಾಗಿದ್ದಾರೆ. ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಕ್ರಿಶಾಂತ್ ಅವರ ಮುಂದಿನ ಸಿನಿಮಾವನ್ನು ಪೃಥ್ವಿರಾಜ್ ನಿರ್ಮಿಸುತ್ತಿದ್ದಾರೆ. ಈ ಚಿತ್ರದಲ್ಲಿ ಸಂಜು ಶಿವ್ರಾಮ್ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ. ಸಂಜು ಅವರು ಪೃಥ್ವಿರಾಜ್ ಅವರ ‘ಐ, ನೋಬಡಿ’ ಮತ್ತು ‘ಖಲೀಫಾ’ ಚಿತ್ರಗಳಲ್ಲೂ ನಟಿಸಿದ್ದಾರೆ. ರಾಜಮೌಳಿ ಅವರ ‘ವಾರಣಾಸಿ’ ಸಿನಿಮಾದ ಶೂಟಿಂಗ್ ಮಧ್ಯೆಯೂ ಪೃಥ್ವಿರಾಜ್ ಅವರ ಈ ವೇಗ ನೋಡಿ ಚಿತ್ರರಂಗವೇ ಆಶ್ಚರ್ಯಪಟ್ಟಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 8:03 am, Wed, 29 July 26

Source link

ಗೌತಮ್ ಗಂಭೀರ್ ‘ಬಲಗೈ ಬಂಟ’ ರಾಜೀನಾಮೆ! – Kannada News | Ryan Ten Doechate steps down as India’s assistant coach

ಭಾರತ ತಂಡದ ಸಹಾಯಕ ಕೋಚ್ ರಯಾನ್ ಟೆನ್ ಡೊಶ್ಚೆಟ್ ತಮ್ಮ ಸ್ಥಾನಕ್ಕೆ ಅಧಿಕೃತವಾಗಿ ರಾಜೀನಾಮೆ ನೀಡಿದ್ದಾರೆ. ಇತ್ತೀಚೆಗಷ್ಟೇ ಮುಕ್ತಾಯಗೊಂಡ ಇಂಗ್ಲೆಂಡ್ ವಿರುದ್ಧದ ಸರಣಿಯ ಬಳಿಕ ಅವರು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಜೊತೆಗಿನ ತಮ್ಮ ಎರಡು ವರ್ಷಗಳ ಒಪ್ಪಂದವನ್ನು ನವೀಕರಿಸದಿರಲು ನಿರ್ಧರಿಸಿದ್ದಾರೆ. ಇದಕ್ಕೆ ಮುಖ್ಯ ಕಾರಣ ಕೋಲ್ಕತ್ತಾ ನೈಟ್ ರೈಡರ್ಸ್ (KKR) ಕಡೆಯಿಂದ ಸಿಕ್ಕ ಭರ್ಜರಿ ಆಫರ್ ಎನ್ನಲಾಗಿದೆ.

ಟೀಮ್ ಇಂಡಿಯಾದ ಸಹಾಯಕ ಕೋಚ್ ಹುದ್ದೆಗೆ ರಾಜೀನಾಮೆ ನೀಡಿರುವ ರಯಾನ್ ಟೆನ್ ಡೊಶ್ಚೆಟ್ ಮುಂಬರುವ IPL 2027 ರಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಪರ ಪ್ರಮುಖ ಕೋಚಿಂಗ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ.

ಗಂಭೀರ್ ಬಲಗೈ ಬಂಟ:

ರಯಾನ್ ಟೆನ್ ಡೊಶ್ಚೆಟ್ ಅವರು ಟೀಮ್ ಇಂಡಿಯಾದ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರ ‘ಬಲಗೈ ಬಂಟ’ (Right-ಆಗಿದ್ದರು.

2011–2017ರ ನಡುವೆ ಗೌತಮ್ ಗಂಭೀರ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕರಾಗಿದ್ದಾಗ, ರಯಾನ್ ಟೆನ್ ಡೊಶ್ಚೆಟ್ ಆ ತಂಡದ ಪ್ರಮುಖ ಆಟಗಾರರಾಗಿದ್ದರು. ಗಂಭೀರ್ ನಾಯಕತ್ವದಲ್ಲಿ ತಂಡ ಎರಡು ಬಾರಿ ಐಪಿಎಲ್ ಟ್ರೋಫಿ ಗೆದ್ದಾಗ ಇಬ್ಬರ ನಡುವೆ ಬಲವಾದ ಸ್ನೇಹ ಬೆಳೆಯಿತು.

2024 ರಲ್ಲಿ ಗಂಭೀರ್ ಕೆಕೆಆರ್ ತಂಡದ ಮೆಂಟರ್ ಆಗಿ ಮರಳಿದಾಗ, ಟೆನ್ ಡೊಶ್ಚೆಟ್ ಅವರನ್ನು ಫೀಲ್ಡಿಂಗ್ ಕೋಚ್ ಆಗಿ ನೇಮಿಸಿದ್ದರು. ಇದೇ ಅವಧಿಯಲ್ಲಿ ಕೆಕೆಆರ್ ತಂಡ ಮತ್ತೊಮ್ಮೆ ಚಾಂಪಿಯನ್ ಪಟ್ಟ ಅಲಂಕರಿಸಿತು.

ಇನ್ನು ಗೌತಮ್ ಗಂಭೀರ್ ಅವರು ಭಾರತ ತಂಡದ ಮುಖ್ಯ ತರಬೇತುದಾರರಾಗಿ ಜವಾಬ್ದಾರಿ ವಹಿಸಿಕೊಂಡಾಗ, ಬಿಸಿಸಿಐ  ಮುಂದೆ ತಮಗೆ ಸಹಾಯಕ ತರಬೇತುದಾರರಾಗಿ ರಯಾನ್ ಟೆನ್ ಡೊಶ್ಚೆಟ್ ಮತ್ತು ಅಭಿಷೇಕ್ ನಾಯರ್ ಅವರೇ ಬೇಕು ಎಂದು ಪಟ್ಟುಹಿಡಿದು ಕರೆತಂದಿದ್ದರು.

ಗಂಭೀರ್ ಅವರ ಯೋಜನೆಗಳನ್ನು ಮೈದಾನದಲ್ಲಿ ಜಾರಿಗೆ ತರುತ್ತಿದ್ದ ಅತ್ಯಂತ ಆಪ್ತರು ಇವರೇ ಆಗಿದ್ದರು. ಇದೀಗ ರಯಾನ್ ಟೆನ್ ಡೊಶ್ಚೆಟ್ ತಮ್ಮ ಸ್ಥಾನಕ್ಕೆ ಅಧಿಕೃತವಾಗಿ ರಾಜೀನಾಮೆ ನೀಡಿ ಐಪಿಎಲ್​ನತ್ತ ಮುಖ ಮಾಡಿದ್ದಾರೆ.

ರಾಜೀನಾಮೆಗೆ ಪ್ರಮುಖ ಕಾರಣಗಳೇನು?

ಸ್ಥಾನದ ಗೊಂದಲ: ಜುಲೈ 2024 ರಲ್ಲಿ ಗೌತಮ್ ಗಂಭೀರ್ ಅವರು ಟೀಮ್ ಇಂಡಿಯಾದ ಜವಾಬ್ದಾರಿ ವಹಿಸಿಕೊಂಡಾಗ ರಯಾನ್ ಅವರನ್ನು ಪ್ರಮುಖವಾಗಿ ‘ಫೀಲ್ಡಿಂಗ್ ಕೋಚ್’ ಹುದ್ದೆಗಾಗಿ ಆಯ್ಕೆ ಮಾಡಿದ್ದರು. ಆದರೆ, ಹಿರಿಯ ಆಟಗಾರರ ಶಿಫಾರಸಿನ ಮೇರೆಗೆ ಟಿ. ದಿಲೀಪ್ ಅವರನ್ನೇ ಫೀಲ್ಡಿಂಗ್ ಕೋಚ್ ಆಗಿ ಮುಂದುವರಿಸಲಾಯಿತು.

ಇದರಿಂದಾಗಿ ರಯಾನ್ ಟೆನ್ ಡೊಶ್ಚೆಟ್ ಅವರು ಬ್ಯಾಟಿಂಗ್ ಮತ್ತು ಫೀಲ್ಡಿಂಗ್ ಎರಡೂ ವಿಭಾಗಗಳನ್ನು ನಿಭಾಯಿಸುವ ಸಾಮಾನ್ಯ ಸಹಾಯಕ ಕೋಚ್ ಪಾತ್ರಕ್ಕೆ ಸೀಮಿತವಾಗಬೇಕಾಯಿತು. ಹೀಗಾಗಿ ಅವರು ಈ ಹಿಂದೆಯೇ ರಾಜೀನಾಮೆ ನೀಡಲಿದ್ದಾರೆ ಎಂಬ ಸುದ್ದಿಗಳು ಹರಿದಾಡಿದ್ದವು.

ನಿರಂತರ ಪ್ರಯಾಣದ ಒತ್ತಡ: ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವರ್ಷಪೂರ್ತಿ ಇರುವ ನಿರಂತರ ಪ್ರಯಾಣದ ವೇಳಾಪಟ್ಟಿಯಿಂದ ಬಿಡುಗಡೆ ಪಡೆದು, ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯಲು ರಯಾನ್ ಬಯಸಿದ್ದಾರೆ. ಫ್ರಾಂಚೈಸಿ ಕ್ರಿಕೆಟ್ (IPL) ಕೇವಲ ಎರಡು ತಿಂಗಳ ಅವಧಿಯದ್ದಾಗಿರುವುದರಿಂದ ಇದು ಅವರಿಗೆ ಹೆಚ್ಚು ಅನುಕೂಲಕರವಾಗಿದೆ.

ರಯಾನ್ ಅವಧಿಯಲ್ಲಿ ಭಾರತದ ಪ್ರದರ್ಶನ:

2024 ರ ಟಿ20 ವಿಶ್ವಕಪ್ ಬಳಿಕ ಭಾರತ ತಂಡದ ಸಪೋರ್ಟ್ ಸ್ಟಾಫ್ ಆಗಿ ಸೇರಿದ್ದ ರಯಾನ್ ಟೆನ್ ಡೊಶ್ಚೆಟ್ ಅವರ ಅವಧಿಯಲ್ಲಿ ಭಾರತ ಮಿಶ್ರ ಫಲಿತಾಂಶಗಳನ್ನು ಕಂಡಿದೆ.

ಇವರ ಮಾರ್ಗದರ್ಶನದಲ್ಲಿ ಭಾರತ ತಂಡವು 2025ರ ಚಾಂಪಿಯನ್ಸ್ ಟ್ರೋಫಿ, 2025ರ ಏಷ್ಯಾ ಕಪ್ ಗೆದ್ದುಕೊಂಡಿದ್ದಲ್ಲದೆ, 2026ರ ಟಿ20 ವಿಶ್ವಕಪ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.

ಮತ್ತೊಂದೆಡೆ ಇತ್ತೀಚಿನ ಇಂಗ್ಲೆಂಡ್ ಪ್ರವಾಸದ ವೈಟ್-ಬಾಲ್ ಸರಣಿಯಲ್ಲಿ ಭಾರತ ಸೋಲನುಭವಿಸಿತು. ಅಲ್ಲದೆ ಟೆಸ್ಟ್ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಬಾರ್ಡರ್-ಗವಾಸ್ಕರ್ ಟ್ರೋಫಿ ಸೋತಿದ್ದು ಮತ್ತು ತಾಯ್ನಾಡಿನಲ್ಲಿ ನ್ಯೂಝಿಲೆಂಡ್ ಹಾಗೂ ಸೌತ್ ಆಫ್ರಿಕಾ ವಿರುದ್ಧ ವೈಟ್‌ವಾಶ್ ಮುಖಭಂಗ ಅನುಭವಿಸಿದ್ದು ಕೋಚಿಂಗ್ ಬಳಗದ ಮೇಲೆ ಒತ್ತಡ ತಂದಿತ್ತು.

ಮರಳಿ ಗೂಡಿಗೆ ರಯಾನ್:

ಕೋಲ್ಕತ್ತಾ ನೈಟ್ ರೈಡರ್ಸ್ ಜೊತೆ ರಯಾನ್ ಟೆನ್ ಡೊಶ್ಚೆಟ್ ಅವರಿಗೆ ದಶಕಕ್ಕೂ ಮೀರಿದ ಸುದೀರ್ಘ ಸಂಬಂಧವಿದೆ. ಅದು ಆಟಗಾರನಾಗಿ ಹಾಗೂ ಕೋಚ್ ಆಗಿ ಎಂಬುದು ವಿಶೇಷ.

  • ಆಟಗಾರನಾಗಿ ಕೆಕೆಆರ್ ಪರ ಅವರು 2012 ಮತ್ತು 2014 ರಲ್ಲಿ ಐಪಿಎಲ್ ಟ್ರೋಫಿ ಗೆದ್ದಿದ್ದರು.
  • 2022 ರಿಂದ 2024 ರವರೆಗೆ ಅವರು ಅದೇ ತಂಡದ ಫೀಲ್ಡಿಂಗ್ ಕೋಚ್ ಆಗಿ ಯಶಸ್ವಿಯಾಗಿ ಸೇವೆ ಸಲ್ಲಿಸಿದ್ದರು.

ಇದನ್ನೂ ಓದಿ: CWG 2026: ಐದನೇ ದಿನ ಭಾರತಕ್ಕೆ ಮತ್ತೆರಡು ಬೆಳ್ಳಿ ಪದಕ!

ಇದೀಗ ಐಪಿಎಲ್ 2027 ಕ್ಕೂ ಮುನ್ನ ರಯಾನ್ ಟೆನ್ ಡೊಶ್ಚೆಟ್ ಕೆಕೆಆರ್ ತಂಡದಲ್ಲಿ ತಮ್ಮ ಹಳೆಯ ಕೋಚಿಂಗ್ ಜೊತೆಗಾರರಾದ ಅಭಿಷೇಕ್ ನಾಯರ್ ಅವರೊಂದಿಗೆ ಮತ್ತೆ ಕೈಜೋಡಿಸಲಿರುವುದು ವಿಶೇಷ.

Source link

Karnataka Weather Forecast: ಕರಾವಳಿ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್, ಶಿವಮೊಗ್ಗ-ಚಿಕ್ಕಮಗಳೂರಲ್ಲೂ ಭಾರೀ ಮಳೆ ಮುನ್ಸೂಚನೆ – Kannada News | Karnataka Weather Forecast July 29: Orange Alert for Coastal Districts, Heavy Rain Forecast for Shivamogga and Chikkamagaluru

ಮಂಗಳೂರಿನಲ್ಲಿ ಬುಧವಾರ ಮುಂಜಾನೆಯೇ ಭಾರಿ ಮಳೆಯಾಗಿದ್ದು, ಯೆಯ್ಯಾಡಿ ಬಳಿ ದಟ್ಟ ಮೋಡ ಕವಿದ ವಾತಾವರಣImage Credit source: tv9

ಬೆಂಗಳೂರು, ಜುಲೈ 29: ಕರ್ನಾಟಕದ ಕರಾವಳಿ ಭಾಗದಲ್ಲಿ ಮುಂಗಾರು ಚುರುಕುಗೊಂಡಿದ್ದು, ಮುಂದಿನ ಎರಡು ದಿನಗಳ ಕಾಲ ಕರಾವಳಿ ಸೇರಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆ ಅಬ್ಬರಿಸುವ ಸಾಧ್ಯತೆ ಇದೆ. ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆಯ (Weather Forecast) ಪ್ರಕಾರ, ಕರಾವಳಿ ಭಾಗದ ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಇದೇ ವೇಳೆ, ಮಲೆನಾಡಿನ ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲೂ ಭಾರೀ ಮಳೆಯ ಮುನ್ಸೂಚನೆ ನೀಡಲಾಗಿದೆ.

ಕರಾವಳಿ ಕರ್ನಾಟಕದ ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಜುಲೈ 29 ಮತ್ತು 30ರಂದು ಭಾರೀ ಮಳೆಯಾಗುವ ಸಾಧ್ಯತೆ ಇದೆ. ಈ ಅವಧಿಯಲ್ಲಿ ಗಂಟೆಗೆ 30 ರಿಂದ 40 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ನಿರೀಕ್ಷೆಯೂ ಇದೆ.

ಉತ್ತರ ಒಳನಾಡಿನಲ್ಲೂ ಭಾರಿ ಮಳೆ ಸಾಧ್ಯತೆ

ಉತ್ತರ ಒಳನಾಡಿನ ಬೆಳಗಾವಿ ಜಿಲ್ಲೆಯಲ್ಲಿ ಭಾರೀ ಮಳೆಯ ಮುನ್ಸೂಚನೆ ನೀಡಲಾಗಿದೆ. ಬಾಗಲಕೋಟೆ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ಸಾಧಾರಣದಿಂದ ಮಧ್ಯಮ ಪ್ರಮಾಣದ ಮಳೆಯೊಂದಿಗೆ ಗಂಟೆಗೆ 40 ರಿಂದ 50 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ.

ಬೆಂಗಳೂರಿನಲ್ಲಿ ಸಾಧಾರಣ ಮಳೆ ಸಾಧ್ಯತೆ

ದಕ್ಷಿಣ ಒಳನಾಡಿನ ಶಿವಮೊಗ್ಗ ಜಿಲ್ಲೆಯಲ್ಲಿ ಜುಲೈ 30ರಂದು ಭಾರೀದಿಂದ ಅತಿ ಭಾರೀ ಮಳೆಯಾಗುವ ಸಾಧ್ಯತೆ ಇದ್ದರೆ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಜುಲೈ 29 ಮತ್ತು 30ರಂದು ಭಾರೀ ಮಳೆಯ ಮುನ್ಸೂಚನೆ ನೀಡಲಾಗಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ಮಂಡ್ಯ, ಹಾಸನ, ಕೊಡಗು, ರಾಮನಗರ, ತುಮಕೂರು, ದಾವಣಗೆರೆ, ಚಿತ್ರದುರ್ಗ, ಚಿಕ್ಕಬಳ್ಳಾಪುರ, ಕೋಲಾರ, ವಿಜಯನಗರ, ಬಳ್ಳಾರಿ ಹಾಗೂ ಚಾಮರಾಜನಗರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.

ಎಲ್ಲೆಲ್ಲಿ ಹೆಚ್ಚು ಮಳೆಯಾಗಿದೆ?

ಮಂಗಳವಾರ ಸಂಜೆಗೆ ಕೊನೆಗೊಂಡಂತೆ 24 ಗಂಟೆಗಳ ಅವಧಿಯಲ್ಲಿ ಕರಾವಳಿ ಕರ್ನಾಟಕ ಹಾಗೂ ಉತ್ತರ ಒಳನಾಡಿನಲ್ಲಿ ಮುಂಗಾರು ಸಾಮಾನ್ಯವಾಗಿದ್ದರೆ, ದಕ್ಷಿಣ ಒಳನಾಡಿನಲ್ಲಿ ದುರ್ಬಲವಾಗಿತ್ತು. ಕರಾವಳಿ ಭಾಗದ ಬಹುತೇಕ ಕಡೆಗಳಲ್ಲಿ ಹಾಗೂ ಒಳನಾಡಿನ ಕೆಲವು ಭಾಗಗಳಲ್ಲಿ ಮಳೆಯಾಗಿದೆ.

  • ಗೇರುಸೊಪ್ಪ (ಉತ್ತರ ಕನ್ನಡ) – 10 ಸೆಂ.ಮೀ.
  • ಕುಮಟಾ (ಉತ್ತರ ಕನ್ನಡ) – 7 ಸೆಂ.ಮೀ.
  • ಮಂಕಿ (ಉತ್ತರ ಕನ್ನಡ) – 7 ಸೆಂ.ಮೀ.
  • ಹೊನ್ನಾವರ ವೀಕ್ಷಣಾಲಯ (ಉತ್ತರ ಕನ್ನಡ) – 7 ಸೆಂ.ಮೀ.
  • ಅಗುಂಬೆ (ಶಿವಮೊಗ್ಗ) – 7 ಸೆಂ.ಮೀ.

ಹವಾಮಾನ ಇಲಾಖೆ ಮುನ್ಸೂಚನೆಯಂತೆ, ಕರಾವಳಿ ಹಾಗೂ ಮಲೆನಾಡು ಭಾಗದ ಜನರು ಭಾರೀ ಮಳೆ, ಬಲವಾದ ಗಾಳಿ ಹಾಗೂ ಮಳೆ ಸಂಬಂಧಿತ ಅವಘಡಗಳ ಬಗ್ಗೆ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಗುರು ಪೂರ್ಣಿಮಾ ವಿಶೇಷ: ಅಜ್ಞಾನದಿಂದ ಜ್ಞಾನದತ್ತ, ಪ್ರತಿಯೊಬ್ಬರ ಜೀವನದಲ್ಲಿ ಗುರು ಏಕೆ ಮುಖ್ಯ? – Kannada News | Guru Purnima: From Ignorance to Knowledge Why a Guru is Essential for Life’s Journey

ಕತ್ತಲೆ ಎಂಬುದು ಕೇವಲ ಬೆಳಕಿನ ಗೈರುಹಾಜರಿಯಲ್ಲ, ಅದು ದಿಕ್ಕು ತೋಚದ ಸ್ಥಿತಿ. ಆದರೆ ಒಂದು ಸಣ್ಣ ಹಣತೆಯು ಎಂಥಾ ಭೀಕರ ಕತ್ತಲೆಯನ್ನು ಓಡಿಸುವಂತೆ ಗುರುವಿನ ಕೃಪೆಯು ಮಾನವನ ಜೀವನದಲ್ಲಿದ್ದ ಅಜ್ಞಾನವೆಂಬ ಅಂಧಕಾರವನ್ನು ಓಡಿಸಿ ಜ್ಞಾನದ ಬೆಳಕನ್ನು ನೀಡುತ್ತದೆ. ‘ಗು’ ಎಂದರೆ ಅಂಧಕಾರ, ‘ರು’ ಎಂದರೆ ಅದನ್ನು ನಿವಾರಿಸುವವನು ಎಂದರ್ಥ.
ಒಮ್ಮೆ ಒಬ್ಬ ಶಿಷ್ಯ ತನ್ನ ಗುರುವಿನಲ್ಲಿ ಕೇಳಿದನಂತೆ ‘ಗುರುದೇವ, ಈ ಸಂಸಾರ ಸಾಗರದಲ್ಲಿ ನಾನು ಮುಕ್ತಿ, ಶಾಂತಿಯನ್ನು ಪಡೆಯುವುದು ಹೇಗೆ ಎಂದು’ ಅದನ್ನು ಕೇಳಿದ ಗುರುಗಳು ಮುಗುಳ್ನಕ್ಕು, ಆತನ ಕೈಗೆ ಒಂದು ಸಣ್ಣ ದೀಪ ನೀಡಿ, ಈ ದೀಪದ ಬೆಳಕಿನಲ್ಲಿ ಹೆಜ್ಜೆ ಇಡುತ್ತಾ ಸಾಗು ಎಂದು ಹೇಳಿದ್ದರಂತೆ. ಶಿಷ್ಟಯ ಕತ್ತಲೆಯಲ್ಲಿ ನಡೆಯ ತೊಡಗಿದ.

ದೀಪವು ಕೈಗೆ ಕೇವಲ ಕಾಲ ಬುಡದಲ್ಲಿನ ಜಾಗವನ್ನು ಮಾತ್ರ ಬೆಳಗುತ್ತಿತ್ತು. ಆತ ಭಯದಿಂದ ಗುರುಗಳೇ ಈ ಸಣ್ಣ ದೀಪ ಇಡೀ ಹಾದಿಯನ್ನು ಬೆಳಗುತ್ತಿಲ್ಲವಲ್ಲ ಎಂದು ಕೂಗಿದ. ಆಗ ಗುರುಗಳು ಮಗನೇ ನೀನು ಇಡುವ ಪ್ರತಿಯೊಂದು ಹೆಜ್ಜೆಗೂ ಈ ದೀಪ ಬೆಳಕು ನೀಡುತ್ತದೆ,ಮುನ್ನಡೆಯುತ್ತಾ ಹೋಗು, ಪೂರ್ತಿ ಹಾದಿ ತಾನಾಗಿಯೇ ಕಾಣಿಸುತ್ತದೆ ಎಂದು ಹೇಳಿದ್ದರಂತೆ.

ಈ ಕಥೆಯ ಸಾರಾಂಶವೇನೆಂದರೆ, ಜೀವನವೆಂಬ ಪಯಣದಲ್ಲಿ ನಮಗೆ ಇಡೀ ಭವಿಷ್ಯ ಒಮ್ಮೆಲೇ ತಿಳಿಯುವುದಿಲ್ಲ, ಆದರೆ ಧರ್ಮ ಮತ್ತು ಸತ್ಯದ ಹಾದಿಯಲ್ಲಿ ನಡೆಯಲು ಗುರು ನೀಡುವ ಮಾರ್ಗದರ್ಶನ ಹಾಗೂ ಆಶೀರ್ವಾದವೇ ಆ ದಿವ್ಯ ದೀಪ. ಗುರು ಎಂದರೆ ಕೇವಲ ಅಕ್ಷರ ಕಲಿಸುವ ಶಿಕ್ಷಕನಷ್ಟೇ ಅಲ್ಲ; ಮನಸ್ಸಿನ ಅಹಂಕಾರವನ್ನು ಅಳಿಸಿ, ಜೀವನದ ನಿಜವಾದ ಅರ್ಥವನ್ನು ಸಾಕ್ಷಾತ್ಕರಿಸುವ ದಿವ್ಯ ಚೇತನ. ಅಜ್ಞಾನ, ಕಾಮ, ಕ್ರೋಧ, ಮೋಹಗಳೆಂಬ ಸುಂಟರಗಾಳಿಯಲ್ಲಿ ಸಿಲುಕಿದ ಜೀವಕ್ಕೆ ಗುರುವಿನ ಬೋಧನೆಗಳೇ ದಿಕ್ಸೂಚಿ. ಪ್ರತಿಯೊಬ್ಬರ ಜೀವನದಲ್ಲೂ ಗುರುವಿನ ಉಪಸ್ಥಿತಿ ಅತ್ಯಗತ್ಯ. ಏಕೆಂದರೆ ಗುರುವಿಲ್ಲದ ಜೀವನವು ನಾವಿಕನಿಲ್ಲದ ದೋಣಿಯಂತೆ.

ಮತ್ತಷ್ಟು ಓದಿ: Guru Purnima 2026: ಇಂದು ಗುರು ಪೂರ್ಣಿಮೆಯ ವಿಶೇಷ ದಿನ, ಏನಿದರ ವಿಶೇಷತೆ?

ಗುರು ಎಂಬುದು ಕೇವಲ ಒಬ್ಬ ವ್ಯಕ್ತಿಯಲ್ಲ, ಅದೊಂದು ಜಾಗೃತ ಶಕ್ತಿ. ಸೂರ್ಯನು ಕಮಲವನ್ನು ಅರಳಿಸುವಂತೆ, ಗುರುವಿನ ದಿವ್ಯ ಸಾನ್ನಿಧ್ಯವು ಮನುಷ್ಯನಲ್ಲಿ ಅಡಗಿರುವ ಸುಪ್ತ ಚೇತನ ಮತ್ತು ಸತ್ಗುಣಗಳನ್ನು ಹೊರತರುತ್ತದೆ. ನಾವು ಪ್ರಪಂಚದ ಎಲ್ಲಾ ವಿದ್ಯೆಗಳನ್ನು ಕಲಿತರೂ, ನಮ್ಮೊಳಗಿನ ಅಹಂಕಾರ ಮತ್ತು ಮಮಕಾರಗಳನ್ನು ಕಳೆದುಕೊಳ್ಳದಿದ್ದರೆ ಆ ವಿದ್ಯೆಗೆ ಬೆಲೆಯಿರುವುದಿಲ್ಲ. ಸದ್ಗುರುವು ನಮ್ಮ ಅಹಂ ಅನ್ನು ಕಳೆದು, ತಾಳ್ಮೆ, ಕರುಣೆ ಹಾಗೂ ಪ್ರೀತಿಯನ್ನು ಬಿತ್ತುತ್ತಾರೆ. ಬದುಕಿನ ಕಷ್ಟ-ಸುಖಗಳೆಂಬ ಬಿರುಗಾಳಿಯಲ್ಲಿ ಮನಸ್ಸು ತೂಗಾಡಿದಾಗ, ಅಚಲವಾದ ನೆಮ್ಮದಿ ಮತ್ತು ಆತ್ಮವಿಶ್ವಾಸವನ್ನು ಕರುಣಿಸುವುದೇ ಗುರುವಿನ ನುಡಿಮುತ್ತುಗಳು.

ಅಜ್ಞಾನದ ಬಂಧನದಿಂದ ಬಿಡುಗಡೆಗೊಳಿಸಿ, ನಮ್ಮ ನಿಜವಾದ ‘ಆತ್ಮ ಸ್ವರೂಪ’ವನ್ನು ದರ್ಶನ ಮಾಡಿಸುವುದೇ ಗುರುವಿನ ಪರಮೋಚ್ಛ ಗುರಿ. ಆದ್ದರಿಂದಲೇ, ಭಗವಂತನಿಗಿಂತಲೂ ಮುಂಚಿತವಾಗಿ ಗುರುವಿಗೆ ಮೊದಲ ನಮನ ಸಲ್ಲಿಸಬೇಕೆಂದು ನಮ್ಮ ಸಂಸ್ಕೃತಿ ಬೋಧಿಸುತ್ತದೆ. ಈ ಶುಭ ಗುರು ಪೂರ್ಣಿಮೆಯಂದು ನಮ್ಮ ಜೀವನಕ್ಕೆ ಜ್ಞಾನದ ಬೆಳಕು ನೀಡಿ, ಸರಿ-ತಪ್ಪುಗಳ ದಾರಿ ತೋರಿದ ಸಕಲ ಗುರುಪರಂಪರೆಗೆ ಕೋಟಿ ಕೋಟಿ ಪ್ರಣಾಮಗಳು.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ನಟಿ ಶಿಲ್ಪಾ ಶೆಟ್ಟಿ ಏಕಾಏಕಿ ಸಿಟ್ಟಾಗಿದ್ದೇಕೆ? ಇಲ್ಲಿದೆ ವಿವರ – Kannada News | Fake Statement on Reservation Goes Viral: Actress Shilpa Shetty Furious Over Fake Posts

ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಹೆಸರಿನಲ್ಲಿ ಹರಡಲಾಗುತ್ತಿರುವ ಜಾತಿ ಮೀಸಲಾತಿ ಕುರಿತಾದ ವಿವಾದಾತ್ಮಕ ಪೋಸ್ಟ್‌ಗಳ ವಿರುದ್ಧ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆ ಪೋಸ್ಟ್‌ಗಳಲ್ಲಿ ಉಲ್ಲೇಖಿಸಲಾಗಿರುವ ಮಾತುಗಳಿಗೂ ತಮಗೂ ಯಾವುದೇ ಸಂಬಂಧವಿಲ್ಲ. ಅದೆಲ್ಲವೂ ಸಂಪೂರ್ಣ ಸುಳ್ಳು ಮತ್ತು ಕಟ್ಟುಕಥೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ದಾರಿತಪ್ಪಿಸುವ ಇಂತಹ ವದಂತಿಗಳನ್ನು ಯಾರೂ ನಂಬಬಾರದು ಎಂದು ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ವೈದ್ಯರ ಚಿಕಿತ್ಸೆ ಹೆಸರಲ್ಲಿ ಹರಡಲಾಗಿತ್ತು ಸುಳ್ಳು ಸುದ್ದಿ

ಇನ್‌ಸ್ಟಾಗ್ರಾಮ್ ಸೇರಿದಂತೆ ವಿವಿಧ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದ ಪೋಸ್ಟ್ ಒಂದರಲ್ಲಿ ಶಿಲ್ಪಾ ಶೆಟ್ಟಿ ಅವರ ಫೋಟೋ ಬಳಸಿ ವಿವಾದಾತ್ಮಕ ಬರಹವೊಂದನ್ನು ಹಂಚಿಕೊಳ್ಳಲಾಗಿತ್ತು. ‘ಸಾಮಾನ್ಯ ವರ್ಗದ ವೈದ್ಯರು ಸಾಮಾನ್ಯ ವರ್ಗದ ರೋಗಿಗಳಿಗೆ ಮಾತ್ರ ಚಿಕಿತ್ಸೆ ನೀಡಬೇಕು. ಮೀಸಲಾತಿ ವರ್ಗದ ವೈದ್ಯರು ತಮ್ಮದೇ ಸಮುದಾಯದ ರೋಗಿಗಳಿಗೆ ಚಿಕಿತ್ಸೆ ನೀಡಬೇಕು. ಆಗ ಜನರೇ ಮೀಸಲಾತಿ ರದ್ದು ಮಾಡಲು ಒತ್ತಾಯಿಸುತ್ತಾರೆ’ ಎಂಬ ಆಘಾತಕಾರಿ ಹೇಳಿಕೆಯನ್ನು ಶಿಲ್ಪಾ ಶೆಟ್ಟಿ ಹೇಳಿದ್ದಾರೆ ಎಂದು ಬಿಂಬಿಸಲು ಕಿಡಿಗೇಡಿಗಳು ಯತ್ನಿಸಿದ್ದರು. ಸೂಕ್ಷ್ಮ ವಿಷಯವಾಗಿದ್ದರಿಂದ ಈ ಪೋಸ್ಟ್ ಜಾಲತಾಣಗಳಲ್ಲಿ ಭಾರಿ ಸಂಚಲನ ಮೂಡಿಸಿತ್ತು.

ಶಿಲ್ಪಾ ಶೆಟ್ಟಿ ಸ್ಪಷ್ಟನೆ

ಈ ಸುಳ್ಳು ಸುದ್ದಿ ತಮ್ಮ ಗಮನಕ್ಕೆ ಬರುತ್ತಿದ್ದಂತೆ ಎಚ್ಚೆತ್ತ ನಟಿ ಶಿಲ್ಪಾ ಶೆಟ್ಟಿ, ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಹಾಕುವ ಮೂಲಕ ಸುಳ್ಳು ಪ್ರಚಾರಕ್ಕೆ ಬ್ರೇಕ್ ಹಾಕಿದ್ದಾರೆ. ‘ನನ್ನ ಹೆಸರನ್ನು ಬಳಸಿ ಮೀಸಲಾತಿ ವ್ಯವಸ್ಥೆಯ ಬಗ್ಗೆ ತಪ್ಪು ಹೇಳಿಕೆಗಳನ್ನು ಹರಡಲಾಗುತ್ತಿದೆ. ಇದನ್ನು ನೋಡಿ ನನಗೆ ಆಘಾತವಾಗಿದೆ. ಇದು ಸಂಪೂರ್ಣವಾಗಿ ನಕಲಿ ಮತ್ತು ದ್ವೇಷಪೂರಿತ ಸುಳ್ಳು ಪ್ರಚಾರವಾಗಿದೆ. ದಯವಿಟ್ಟು ಇಂತಹ ವದಂತಿಗಳಿಗೆ ಕಿವಿಗೊಡಬೇಡಿ’ ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಮೀಸಲಾತಿ ಕುರಿತು ಶಿಲ್ಪಾ ಶೆಟ್ಟಿ ನಕಲಿ ಹೇಳಿಕೆ ವೈರಲ್: ‘ಸಂಪೂರ್ಣ ಸುಳ್ಳು’ ಎಂದು ಖಂಡಿಸಿದ ನಟಿ

ಸೆಲೆಬ್ರಿಟಿಗಳ ಹೆಸರ ದುರ್ಬಳಕೆ ಬಗ್ಗೆ ಆತಂಕ

ಶಿಲ್ಪಾ ಶೆಟ್ಟಿ ಅವರ ಈ ತಕ್ಷಣದ ಪ್ರತಿಕ್ರಿಯೆಯು ಸಾಮಾಜಿಕ ಜಾಲತಾಣಗಳಲ್ಲಿ ಸೆಲೆಬ್ರಿಟಿಗಳ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಗಂಭೀರ ಸಮಸ್ಯೆಯನ್ನು ಎತ್ತಿ ತೋರಿಸಿದೆ. ಯಾವುದೇ ಒಂದು ಸೂಕ್ಷ್ಮ ವಿಷಯದ ಪೋಸ್ಟ್ ಅನ್ನು ಲೈಕ್ ಮಾಡುವ ಮುನ್ನ ಅಥವಾ ಶೇರ್ ಮಾಡುವ ಮುನ್ನ ಅದರ ಸತ್ಯಾಸತ್ಯತೆಯನ್ನು ಪರಿಶೀಲಿಸುವುದು ಎಷ್ಟು ಮುಖ್ಯ ಎಂಬುದನ್ನು ಈ ಘಟನೆ ಮತ್ತೊಮ್ಮೆ ಸಾಬೀತುಪಡಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version