ತಮಿಳುನಾಡಿಗೆ ನೀರು ಬಿಡಲು CWRC ಆದೇಶದ ವಿರುದ್ಧ ಮಂಡ್ಯದಲ್ಲಿ ರೈತರ ಆಕ್ರೋಶ: ರಾತ್ರಿ ಪಂಜಿನ ಪ್ರತಿಭಟನೆ – Kannada News | Mandya Farmers Protest CWRC Order on Cauvery Water Release to Tamil Nadu with Torchlight Rally

ಮಂಡ್ಯ, ಜುಲೈ 29: ಕಾವೇರಿ ನೀರು ಹಂಚಿಕೆ ವಿವಾದದ ಹಿನ್ನೆಲೆಯಲ್ಲಿ, ತಮಿಳುನಾಡಿಗೆ ನೀರು ಹರಿಸುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಆದೇಶ ನೀಡಿರುವುದರ ವಿರುದ್ಧ ಮಂಡ್ಯದಲ್ಲಿ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಆದೇಶವು ಮಂಡ್ಯ ಮಾತ್ರವಲ್ಲದೆ, ಕರ್ನಾಟಕದ ಕಾವೇರಿ ಜಲಾನಯನ ಪ್ರದೇಶದ ಇತರ ಭಾಗಗಳ ರೈತರನ್ನೂ ಕೆರಳಿಸಿದ್ದು, ದೊಡ್ಡ ಮಟ್ಟದ ಪ್ರತಿಭಟನೆಗೆ ಕಾರಣವಾಗಿದೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಕುವೆಂಪು ವೃತ್ತದಲ್ಲಿ, ಭೂಮಿ ತಾಯಿ ಹೋರಾಟ ಸಮಿತಿಯ ನೇತೃತ್ವದಲ್ಲಿ ರೈತರು ಮಂಗಳವಾರ ರಾತ್ರಿ ಪಂಜಿನ ಮೆರವಣಿಗೆ ನಡೆಸಿದರು. ರೈತ ಮುಖಂಡ ನಂಜುಂಡೇಗೌಡ ಅವರ ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ, ಯಾವುದೇ ಕಾರಣಕ್ಕೂ ತಮಿಳುನಾಡಿಗೆ ಕಾವೇರಿ ನೀರನ್ನು ಹರಿಸಬಾರದೆಂದು ರೈತರು ಸರಕಾರಕ್ಕೆ ಸ್ಪಷ್ಟ ಎಚ್ಚರಿಕೆ ನೀಡಿದ್ದಾರೆ. ಈಗಾಗಲೇ ರಾಜ್ಯದಲ್ಲಿ ಬೆಳೆಗಳಿಗೆ ನೀರಿನ ಕೊರತೆ ಎದುರಾಗಿದ್ದು, ಇದರಿಂದ ಬೆಳೆ ಹಾನಿಯಾಗುತ್ತಿದೆ. ಕುಡಿಯುವ ನೀರಿಗೂ ಸಮಸ್ಯೆ ಉಂಟಾಗುವ ಆತಂಕವಿದೆ. ಇಂತಹ ಪರಿಸ್ಥಿತಿಯಲ್ಲಿ ತಮಿಳುನಾಡಿಗೆ ನೀರು ಬಿಡುವುದು ರಾಜ್ಯಕ್ಕೆ ದೊಡ್ಡ ಹೊಡೆತ ನೀಡಲಿದೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ. ರೈತರು ತಮ್ಮ ಬೇಡಿಕೆ ಈಡೇರುವವರೆಗೂ ಹೋರಾಟ ಮುಂದುವರಿಸುವ ನಿರ್ಧಾರ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Guru Purnima 2026: ಇಂದು ಗುರು ಪೂರ್ಣಿಮೆಯ ವಿಶೇಷ ದಿನ, ಏನಿದರ ವಿಶೇಷತೆ? – Kannada News | Guru Purnima 2026: Significance, History, and Why It Is Celebrated

ಇಂದು ಭಾರತೀಯ ಸನಾತನ ಸಂಸ್ಕೃತಿಯಲ್ಲಿ ಅತ್ಯಂತ ಶ್ರೇಷ್ಠ ಹಾಗೂ ಪವಿತ್ರವಾದ ಗುರು ಪೂರ್ಣಿಮೆ. ನಮ್ಮ ಜೀವನದ ಕತ್ತಲೆಯನ್ನು ಕಳೆದು, ಜ್ಞಾನದ ಬೆಳಕಿನತ್ತ ಮುನ್ನಡೆಸುವ ಗುರುಗಳಿಗೆ ಗೌರವ ಸಲ್ಲಿಸುವ ದಿವ್ಯ ದಿನವಿದು.ಆಷಾಢ ಮಾಸದ ಈ ಪವಿತ್ರ ಹುಣ್ಣಿಮೆಯ ದಿನವನ್ನು ಜಗದ್ಗುರು ವೇದವ್ಯಾಸ ಮಹರ್ಷಿಗಳ ಜನ್ಮದಿನವಾಗಿ ‘ವ್ಯಾಸ ಪೂರ್ಣಿಮೆ’ ಎಂದೂ ಆಚರಿಸಲಾಗುತ್ತದೆ. ಇದಷ್ಟೇ ಅಲ್ಲದೆ, ಶಿವನು ‘ಆದಿಗುರು’ವಾಗಿ ಸಪ್ತರ್ಷಿಗಳಿಗೆ ಪ್ರಥಮ ಬಾರಿಗೆ ಯೋಗಜ್ಞಾನ ಬೋಧಿಸಿದ್ದು, ಗೌತಮ ಬುದ್ಧನು ತನ್ನ ಪ್ರಥಮ ಧರ್ಮೋಪದೇಶ ನೀಡಿದ್ದು ಹಾಗೂ ಮಹಾವೀರನು ತನ್ನ ಪ್ರಥಮ ಶಿಷ್ಯನನ್ನು ಸ್ವೀಕರಿಸಿದ್ದು ಇದೇ ಮಂಗಳಕರ ದಿನದಂದು.

ಗುರು ಪೂರ್ಣಿಮಾ ಎಂದರೇನು?

ಆಷಾಢ ಮಾಸದ ಪವಿತ್ರ ಹುಣ್ಣಿಮೆಯಂದು ಆಚರಿಸಲಾಗುವ ಗುರು ಪೂರ್ಣಿಮೆಯು ಭಾರತೀಯ ಸನಾತನ ಪರಂಪರೆ ಹಾಗೂ ಆಧ್ಯಾತ್ಮಿಕ ಚಿಂತನೆಯಲ್ಲಿ ಅತ್ಯಂತ ಶ್ರೇಷ್ಠವಾದ ಪರ್ವದಿನವಾಗಿದೆ. ‘ಗು’ ಎಂದರೆ ಅಜ್ಞಾನವೆಂಬ ಅಂಧಕಾರ, ‘ರು’ ಎಂದರೆ ಅದನ್ನು ನಿವಾರಿಸುವ ಪ್ರಕಾಶ. ನಮ್ಮಲ್ಲಿರುವ ತಮಸ್ಸನ್ನು ಕಳೆದು ಜ್ಞಾನದ ಬೆಳಕಿನತ್ತ ಮುನ್ನಡೆಸುವ, ಬದುಕಿಗೆ ಸರಿಯಾದ ದಾರಿ ತೋರಿಸುವ ಮಹಾನ್ ಚೇತನಗಳಿಗೆ ಹಾಗೂ ಗುರು ತತ್ತ್ವಕ್ಕೆ ಕೃತಜ್ಞತೆ ಸಲ್ಲಿಸುವ ಶುಭ ದಿನವೇ ಈ ಗುರು ಪೂರ್ಣಿಮೆ. ಆಧ್ಯಾತ್ಮಿಕ ದೃಷ್ಟಿಕೋನದಲ್ಲಿ ಗುರು ಎಂದರೆ ಕೇವಲ ಭೌತಿಕ ವ್ಯಕ್ತಿಯಲ್ಲ, ಅದೊಂದು ದಿವ್ಯ ಸತ್ಯ ಮತ್ತು ಸಾಧಕನನ್ನು ಅಜ್ಞಾನದ ಬಂಧನದಿಂದ ಮುಕ್ತಗೊಳಿಸಿ ಆತ್ಮಸಾಕ್ಷಾತ್ಕಾರದತ್ತ ಒಯ್ಯುವ ಪವಿತ್ರ ಶಕ್ತಿ.

ವ್ಯಾಸ ಪೂರ್ಣಿಮೆಯ ಇತಿಹಾಸವೇನು?

ಈ ಪವಿತ್ರ ದಿನಕ್ಕೆ ಸಾವಿರಾರು ವರ್ಷಗಳ ಸುದೀರ್ಘ ಐತಿಹಾಸಿಕ ಹಾಗೂ ಪೌರಾಣಿಕ ಹಿನ್ನೆಲೆಯಿದೆ. ನಾಲ್ಕು ವೇದಗಳನ್ನು ವಿಂಗಡಿಸಿ, ಮಹಾಭಾರತ ಹಾಗೂ 18 ಮಹಾಪುರಾಣಗಳನ್ನು ಮಾನವಕುಲಕ್ಕೆ ಕರುಣಿಸಿದ ಜಗದ್ಗುರು ಮಹರ್ಷಿ ವೇದವ್ಯಾಸರು ಜನಿಸಿದ್ದು ಇದೇ ಆಷಾಢ ಪೂರ್ಣಿಮೆಯಂದು. ಆದ್ದರಿಂದ ಈ ದಿನವನ್ನು ‘ವ್ಯಾಸ ಪೂರ್ಣಿಮೆ’ ಎಂದೂ ಪೂಜಿಸಲಾಗುತ್ತದೆ. ಯೋಗ ಪರಂಪರೆಯ ಪ್ರಕಾರ, ಶಿವನು ‘ಆದಿಗುರು’ವಾಗಿ ರೂಪಾಂತರಗೊಂಡು ಸಪ್ತರ್ಷಿಗಳಿಗೆ ಪ್ರಥಮ ಬಾರಿಗೆ ಬ್ರಹ್ಮಜ್ಞಾನವನ್ನು ಬೋಧಿಸಿದ್ದು ಇದೇ ದಿನ. ಬೌದ್ಧ ಧರ್ಮದಲ್ಲಿ ಗೌತಮ ಬುದ್ಧನು ಜ್ಞಾನೋದಯದ ನಂತರ ಸಾರನಾಥದಲ್ಲಿ ತನ್ನ ಪ್ರಥಮ ಧರ್ಮೋಪದೇಶ ನೀಡಿದ್ದು ಮತ್ತು ಜೈನ ಧರ್ಮದಲ್ಲಿ ಮಹಾವೀರನು ತನ್ನ ಪ್ರಥಮ ಶಿಷ್ಯ ಇಂದ್ರಭೂತಿ ಗೌತಮನನ್ನು ಸ್ವೀಕರಿಸಿದ್ದು ಇದೇ ಪವಿತ್ರ ಆಷಾಢ ಹುಣ್ಣಿಮೆಯಂದು.

ಈ ದಿನದ ವಿಶೇಷತೆಯೇನು?

ಗುರು ಪೂರ್ಣಿಮೆಯ ದಿವ್ಯ ವಿಶೇಷತೆಯೆಂದರೆ ಇದು ಸಾಧಕರಿಗೆ ಜಪ, ಧ್ಯಾನ, ಸ್ವಾಧ್ಯಾಯ ಮತ್ತು ಕಠಿಣ ಆಧ್ಯಾತ್ಮಿಕ ಸಾಧನೆಗೆ ಅತ್ಯಂತ ಶ್ರೇಷ್ಠ ಹಾಗೂ ಫಲದಾಯಕ ಸಮಯವಾಗಿದೆ. ಈ ದಿನದಂದು ಆಶ್ರಮಗಳಲ್ಲಿ ಹಾಗೂ ಮಠಗಳಲ್ಲಿ ಗುರುಗಳ ಪಾದುಕಾ ಪೂಜೆ ನಡೆಸಿ, ಗುರುಮಂತ್ರ ಜಪ ಮಾಡುವುದರಿಂದ ಮನಸ್ಸಿನ ಕಲುಷಿತತೆ ನಿವಾರಣೆಯಾಗಿ ದಿವ್ಯ ಚೈತನ್ಯವು ಜಾಗೃತಗೊಳ್ಳುತ್ತದೆ. ಚಾತುರ್ಮಾಸ ವ್ರತ ಪ್ರಾರಂಭವಾಗುವ ಈ ಸಮಯದಲ್ಲಿ ಸಂನ್ಯಾಸಿಗಳು ಮತ್ತು ಸಾಧಕರು ಒಂದೆಡೆ ಕುಳಿತು ಜ್ಞಾನಚಿಂತನೆ ಹಾಗೂ ಆತ್ಮಾವಲೋಕನದಲ್ಲಿ ತೊಡಗುತ್ತಾರೆ.

ಗುರುಬ್ರಹ್ಮ ಗುರುರ್ವಿಷ್ಣುಃ ಗುರುರ್ದೇವೋ ಮಹೇಶ್ವರಃ |

ಗುರುಃ ಸಾಕ್ಷಾತ್ ಪರಂಬ್ರಹ್ಮ ತಸ್ಮೈ ಶ್ರೀ ಗುರವೇ ನಮಃ ||

ಎಂಬಂತೆ ಗುರುವನ್ನು ತ್ರಿಮೂರ್ತಿಗಳ ಸ್ವರೂಪವೆಂದು ಭಾವಿಸಿ, ಅವರ ಚರಣಕಮಲಗಳಿಗೆ ನಮಿಸಿ ಅನುಗ್ರಹ ಪಡೆಯುವುದೇ ಈ ಹಬ್ಬದ ಮುಖ್ಯ ಉದ್ದೇಶ.

ಇನ್ನಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮೆಟ್ರೋಗೆ ಮೂರು ವರ್ಷದಲ್ಲಿ ₹1,614 ಕೋಟಿ ನಷ್ಟ: ಮತ್ತೆ ಟಿಕೆಟ್ ದರ ಏರಿಕೆಗೆ ಬಿಎಂಆರ್‌ಸಿಎಲ್ ಕಸರತ್ತು – Kannada News | BMRCL Reports Rs 1614 Crore Loss in 3 Years, Proposes 12 percent Metro Fare Hike Every Three Years

ಬೆಂಗಳೂರು, ಜುಲೈ 29: ಬೆಂಗಳೂರಿನ (Bengaluru) ನಮ್ಮ ಮೆಟ್ರೋದಲ್ಲಿ ದಿನದಿಂದ ದಿನಕ್ಕೆ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿದ್ದರೂ, ಬಿಎಂಆರ್‌ಸಿಎಲ್‌ಗೆ (BMRCL) ನಷ್ಟದ ಪ್ರಮಾಣವೂ ಏರಿಕೆಯಾಗುತ್ತಿದೆ. ಕಳೆದ ಮೂರು ಹಣಕಾಸು ವರ್ಷಗಳಲ್ಲಿ ಒಟ್ಟು 1,614 ಕೋಟಿ ರೂ. ನಷ್ಟ ದಾಖಲಾಗಿದ್ದು, ಇದೇ ಕಾರಣವನ್ನು ಮುಂದಿಟ್ಟುಕೊಂಡು ಪ್ರತಿ ಮೂರು ವರ್ಷಕ್ಕೊಮ್ಮೆ ಶೇ 12 ರ ಟಿಕೆಟ್ ದರ ಹೆಚ್ಚಳಕ್ಕೆ ಬಿಎಂಆರ್‌ಸಿಎಲ್ ಪ್ರಸ್ತಾವನೆ ಸಲ್ಲಿಸಿರುವ ಮಾಹಿತಿ ಲಭ್ಯವಾಗಿದೆ.

ನಗರದ ಪರ್ಪಲ್, ಗ್ರೀನ್ ಹಾಗೂ ಯೆಲ್ಲೋ ಮಾರ್ಗಗಳಲ್ಲಿ ಪ್ರಸ್ತುತ ಪ್ರತಿದಿನ 11 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ಮೆಟ್ರೋ ಸೇವೆ ಬಳಸುತ್ತಿದ್ದಾರೆ. ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಿರುವುದರಿಂದ ಆದಾಯದಲ್ಲೂ ಏರಿಕೆ ಕಂಡುಬಂದಿದ್ದರೂ, ಕಾರ್ಯಾಚರಣೆ ಮತ್ತು ಇತರೆ ವೆಚ್ಚಗಳ ಕಾರಣದಿಂದ ನಿಗಮ ನಿರಂತರ ನಷ್ಟ ಅನುಭವಿಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಮ್ಮ ಮೆಟ್ರೋ ನಷ್ಟದ ಲೆಕ್ಕಾಚಾರವನ್ನು ಬಿಎಂಆರ್‌ಸಿಎಲ್ ಸಾರ್ವಜನಿಕ ಸಂಪರ್ಕಾಧಿಕಾರಿ ಯಶವಂತ್ ಚೌವ್ಹಾಣ್ ಬಹಿರಂಗಪಡಿಸಿದ್ದಾರೆ. ಆ ವಿವರಗಳು ಇಲ್ಲಿವೆ;

ನಮ್ಮ ಮೆಟ್ರೋ ಮೂರು ವರ್ಷದ ಆದಾಯ-ವೆಚ್ಚದ ಲೆಕ್ಕ

2022-23 ಹಣಕಾಸು ವರ್ಷ

  • ಪ್ರಯಾಣಿಕರು: 17.72 ಕೋಟಿ
  • ಆದಾಯ: 784 ಕೋಟಿ ರೂ.
  • ವೆಚ್ಚ: 1,363 ಕೋಟಿ ರೂ.
  • ನಷ್ಟ: 641 ಕೋಟಿ ರೂ.

ಈ ವರ್ಷ ಮೆಟ್ರೋ ಸೇವೆ ಬಳಸಿದ ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ಆದಾಯ ಹೆಚ್ಚಾದರೂ, ವೆಚ್ಚವು ಆದಾಯಕ್ಕಿಂತ ಹೆಚ್ಚಿದ್ದರಿಂದ ನಿಗಮವು 641 ಕೋಟಿ ರೂ. ನಷ್ಟ ದಾಖಲಿಸಿದೆ.

2023-24 ಹಣಕಾಸು ವರ್ಷ

  • ಪ್ರಯಾಣಿಕರು: 23.28 ಕೋಟಿ
  • ಆದಾಯ: 990 ಕೋಟಿ ರೂ.
  • ವೆಚ್ಚ: 1,213 ಕೋಟಿ ರೂ.
  • ನಷ್ಟ: 350 ಕೋಟಿ ರೂ.

ಪ್ರಯಾಣಿಕರ ಸಂಖ್ಯೆಯಲ್ಲಿ ಏರಿಕೆ ಕಂಡರೂ, ಕಾರ್ಯಾಚರಣೆ ವೆಚ್ಚದ ಕಾರಣ ನಷ್ಟ ಮುಂದುವರಿದಿದೆ.

2024-25 ಹಣಕಾಸು ವರ್ಷ

  • ಪ್ರಯಾಣಿಕರು: 27.65 ಕೋಟಿ
  • ಆದಾಯ: 1,190 ಕೋಟಿ ರೂ.
  • ವೆಚ್ಚ: 1,935 ಕೋಟಿ ರೂ.
  • ನಷ್ಟ: 623 ಕೋಟಿ ರೂ.

ಮತ್ತೆ ಟಿಕೆಟ್ ದರ ಏರಿಕೆಗೆ ಪ್ರಸ್ತಾವನೆ

ಬಿಎಂಆರ್‌ಸಿಎಲ್ ಈಗಾಗಲೇ 2025ರ ಫೆಬ್ರವರಿ 9ರಂದು ಶೇ 71 ರಷ್ಟು ಟಿಕೆಟ್ ದರ ಹೆಚ್ಚಳ ಮಾಡಿತ್ತು. ಬಳಿಕ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕೆಲ ಮಟ್ಟಿಗೆ ದರವನ್ನು ಇಳಿಸಿತ್ತು.

ಅದರ ನಂತರ ಪ್ರತಿ ವರ್ಷ ಫೆಬ್ರವರಿ 9ರಂದು ಶೇ 5 ರ ವಾರ್ಷಿಕ ದರ ಹೆಚ್ಚಳ ಮಾಡುವ ಪ್ರಸ್ತಾವನೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿರಲಿಲ್ಲ ಎನ್ನಲಾಗಿದೆ. ಇದೀಗ ಬಿಎಂಆರ್‌ಸಿಎಲ್ ಹೊಸದಾಗಿ ಪ್ರತಿ ಮೂರು ವರ್ಷಕ್ಕೊಮ್ಮೆ ಶೇ 12 ಟಿಕೆಟ್ ದರ ಹೆಚ್ಚಳ ಮಾಡುವ ಪ್ರಸ್ತಾವನೆಯನ್ನು ಮುಂದಿಟ್ಟಿದೆ.

ನಷ್ಟದ ಲೆಕ್ಕ ಮುಂದಿಟ್ಟು ಬಿಎಂಆರ್‌ಸಿಎಲ್‌ ಮನವಿ

ಕಳೆದ ಮೂರು ವರ್ಷಗಳಲ್ಲಿ ಒಟ್ಟು 1,614 ಕೋಟಿ ರೂ. ನಷ್ಟ ಉಂಟಾಗಿದೆ ಎಂಬ ಅಂಕಿ-ಅಂಶವನ್ನು ದರ ನಿಗದಿ ಸಮಿತಿಯ ಮುಂದೆ ಬಿಎಂಆರ್‌ಸಿಎಲ್ ಮಂಡಿಸಿದೆ. ಮೂರು ವರ್ಷಕ್ಕೊಮ್ಮೆ ಟಿಕೆಟ್ ದರ ಪರಿಷ್ಕರಣೆ ಮಾಡದಿದ್ದರೆ ನಿಗಮವು ಸಾಲದ ಸುಳಿಯಲ್ಲಿ ಇನ್ನಷ್ಟು ಸಿಲುಕುವ ಸಾಧ್ಯತೆ ಇದೆ ಎಂದು ಮನವಿ ಮಾಡಿರುವುದಾಗಿ ತಿಳಿದುಬಂದಿದೆ.

ಇದನ್ನೂ ಓದಿ: ನಮ್ಮ ಮೆಟ್ರೋ ಟಿಕೆಟ್ ದರ ಏರಿಕೆ ಮತ್ತೆ ಮುನ್ನೆಲೆಗೆ: 3 ವರ್ಷಕ್ಕೊಮ್ಮೆ ದರ ಏರಿಕೆಗೆ ಪ್ಲ್ಯಾನ್!

ಇತರೆ ತೆರಿಗೆಗಳು ಹಾಗೂ ಕಾರ್ಯಾಚರಣೆ ವೆಚ್ಚಗಳ ಕಾರಣದಿಂದ ನಿಗಮ ನಷ್ಟದಲ್ಲಿದೆ ಎಂದು ಅಧಿಕಾರಿಗಳು ಹೇಳಿದ್ದರೆ, ಮತ್ತೊಂದೆಡೆ ಮತ್ತೆ ದರ ಏರಿಕೆ ಮಾಡುವ ಪ್ರಸ್ತಾವನೆಗೆ ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ರಾಜ್ಯ ಮತ್ತು ಕೇಂದ್ರ ಸರ್ಕಾರ ಈ ಪ್ರಸ್ತಾವನೆಗೆ ಒಪ್ಪಿಗೆ ನೀಡುತ್ತವೆಯೇ ಎಂಬುದು ಮುಂದಿನ ದಿನಗಳಲ್ಲಿ ಸ್ಪಷ್ಟವಾಗಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಭಿಮಾನಿಗಳಿಗೆ ಆಪತ್ಬಾಂಧವನಾದ ಅಲ್ಲು ಅರ್ಜುನ್; 900 ಫ್ಯಾನ್ಸ್​ಗೆ ಇನ್ಶೂರೆನ್ಸ್ – Kannada News | Actor Allu Arjun Provides Free Accident Insurance Cover to His Fans

ಟಾಲಿವುಡ್ ನಟ ಅಲ್ಲು ಅರ್ಜುನ್ (Allu Arjun) ತಮ್ಮ ಅಭಿಮಾನಿಗಳಿಗೆ ಏನಾದರೂ ಆದರೆ ಸ್ಪಂದಿಸುತ್ತಾರೆ. ಅವರು ಈ ಮೊದಲು ಕಷ್ಟದಲ್ಲಿ ಇರುವ ಸಾಕಷ್ಟು ಫ್ಯಾನ್ಸ್ ಭೇಟಿ ಮಾಡಿದ ಉದಾಹರಣೆ ಇದೆ. ಈಗ ಅವರು ಫ್ಯಾನ್ಸ್​ಗೆ ಬಂಪರ್ ಗಿಫ್ಟ್ ನೀಡಿದ್ದಾರೆ. ಹೈದರಾಬಾದ್‌ನಲ್ಲಿ ನಡೆದ ಅಭಿಮಾನಿಗಳ ಬೇಟಿ ಕಾರ್ಯಕ್ರಮದಲ್ಲಿ ಅವರು ತಮ್ಮ ಫ್ಯಾನ್ಸ್ ಅಸೋಸಿಯೇಷನ್ ಸದಸ್ಯರಿಗೆ ಉಚಿತ ಅಪಘಾತ ವಿಮೆ ಘೋಷಿಸಿದ್ದಾರೆ. ಈ ಮೂಲಕ ಸ್ಟಾರ್ ನಟನೊಬ್ಬ ತನ್ನ ಅಭಿಮಾನಿ ಬಳಗಕ್ಕೆ ನೇರವಾಗಿ ಇನ್ಶೂರೆನ್ಸ್ ಮಾಡಿಸಿದ ದೇಶದ ಮೊದಲ ಹೆಗ್ಗಳಿಕೆಗೆ ಇವರು ಪಾತ್ರರಾಗಿದ್ದಾರೆ.

ಆರು ಗಂಟೆ ಕಾಲ ನಿಂತೇ ಫೋಟೋ ನೀಡಿದ ಸ್ಟಾರ್

ಹೈದರಾಬಾದ್‌ನಲ್ಲಿ ನಡೆದ ಈ ಕಾರ್ಯಕ್ರಮ ಬರೋಬ್ಬರಿ ಆರು ಗಂಟೆಗಳ ಕಾಲ ನಡೆಯಿತು. ಅಲ್ಲು ಅರ್ಜುನ್ ಅವರು ಅಷ್ಟು ಸಮಯವೂ ನಿಂತುಕೊಂಡೇ ಅಭಿಮಾನಿಗಳನ್ನು ಬರಮಾಡಿಕೊಂಡರು. ಏಳು ರಾಜ್ಯಗಳಿಂದ ಬಂದ ಸುಮಾರು 1,000ಕ್ಕೂ ಹೆಚ್ಚು ಅಭಿಮಾನಿಗಳನ್ನು ವೈಯಕ್ತಿಕವಾಗಿ ಭೇಟಿಯಾದರು. ಪ್ರತಿಯೊಬ್ಬರ ಜೊತೆಗೂ ತಾಳ್ಮೆಯಿಂದ ಫೋಟೋಗೆ ಫೋಸ್ ನೀಡಿದರು. ಅಭಿಮಾನಿಗಳನ್ನು ಅಪ್ಪಿ, ಹಸ್ತಲಾಘವ ನೀಡಿ ಪ್ರೀತಿ ಹಂಚಿದರು. ಬಂದಿದ್ದ ಎಲ್ಲಾ ಅಭಿಮಾನಿಗಳಿಗೆ ವಿಶೇಷ ಊಟದ ವ್ಯವಸ್ಥೆ ಕೂಡ ಮಾಡಲಾಗಿತ್ತು.

ಅಭಿಮಾನಿಗಳಿಗೆ ಲಕ್ಷ ಲಕ್ಷ ರೂಪಾಯಿ ಇನ್ಶೂರೆನ್ಸ್

ಈ ಸಮಾರಂಭದ ಪ್ರಮುಖ ಹೈಲೈಟ್ ಎಂದರೆ ಅಪಘಾತ ವಿಮೆ ಘೋಷಣೆ. ಅಲ್ಲು ಅರ್ಜುನ್ ಫ್ಯಾನ್ಸ್ ಅಸೋಸಿಯೇಷನ್ ಸದಸ್ಯರಿಗೆ ಈ ಸೌಲಭ್ಯ ಸಿಗಲಿದೆ. ರಾಜ್ಯ ಸಮಿತಿ ಸದಸ್ಯರಿಗೆ 5 ಲಕ್ಷ ರೂಪಾಯಿ ವಿಮೆ ಸಿಗಲಿದೆ. ಜಿಲ್ಲಾ ಸಮಿತಿ ಸದಸ್ಯರಿಗೆ 3 ಲಕ್ಷ ರೂಪಾಯಿ ವಿಮೆ ದೊರೆಯಲಿದೆ. ಯಾವುದೇ ಪ್ರವೇಶ ಶುಲ್ಕ ಅಥವಾ ಪೇಯ್ಡ್ ಮೆಂಬರ್‌ಶಿಪ್ ಇಲ್ಲದೆ ಈ ವಿಮೆ ನೀಡಲಾಗುತ್ತಿದೆ. ಇದರಿಂದ ಸುಮಾರು 900ಕ್ಕೂ ಹೆಚ್ಚು ಅಭಿಮಾನಿಗಳಿಗೆ ನೇರ ಪ್ರಯೋಜನ ಸಿಗಲಿದೆ.

ಇದನ್ನೂ ಓದಿ: ಅಲ್ಲು ಅರ್ಜುನ್ ಮಾಡಿದ್ದು ನೋಡಿ ಭೇಷ್ ಎಂದ ಅಭಿಮಾನಿಗಳು: ವಿಡಿಯೋ ನೋಡಿ

ಟ್ರೋಲ್ ಮಾಡಬೇಡಿ, ಸಮಾಜಕ್ಕೆ ಒಳ್ಳೆಯದು ಮಾಡಿ

ಇದೇ ವೇಳೆ ಅಲ್ಲು ಅರ್ಜುನ್ ಅಭಿಮಾನಿಗಳಿಗೆ ಕಿವಿಮಾತು ಹೇಳಿದರು. ನಿಮ್ಮ ಶಕ್ತಿ ಮತ್ತು ಉತ್ಸಾಹವನ್ನು ಒಳ್ಳೆಯ ಕೆಲಸಗಳಿಗೆ ಬಳಸಿ ಎಂದು ಕರೆ ನೀಡಿದರು. ಸಮಾಜಕ್ಕೆ ಉಪಯುಕ್ತವಾಗುವ ನಿಟ್ಟಿನಲ್ಲಿ ಜವಾಬ್ದಾರಿಯುತವಾಗಿ ನಡೆದುಕೊಳ್ಳಿ ಎಂದರು. ಸಾಮಾಜಿಕ ಜಾಲತಾಣಗಳಲ್ಲಿ ಇತರ ನಟರನ್ನು ಅಥವಾ ಅವರ ಅಭಿಮಾನಿಗಳನ್ನು ಟ್ರೋಲ್ ಮಾಡಬೇಡಿ ಎಂದು ಮನವಿ ಮಾಡಿದರು. ನೆಚ್ಚಿನ ನಟನ ಈ ಕಾಳಜಿ ಮತ್ತು ಅಪೂರ್ವ ನಡೆಗೆ ಅಭಿಮಾನಿಗಳು ಮನಸೋತಿದ್ದಾರೆ.

ಪ್ರಶ್ನೆ: ಅಲ್ಲು ಅರ್ಜುನ್ ಮುಂದಿನ ಸಿನಿಮಾ ಯಾವುದು?
ಉತ್ತರ: 
ರಾಕಾ

ಪ್ರಶ್ನೆ: ಅಲ್ಲು ಅರ್ಜುನ್ ಪತ್ನಿ ಹೆಸರೇನು?
ಉತ್ತರ: 
ಸ್ನೇಹಾ ರೆಡ್ಡಿ

ಪ್ರಶ್ನೆ: ಅಲ್ಲು ಅರ್ಜುನ್ ಮಕ್ಕಳ ಹೆಸರೇನು?
ಉತ್ತರ:
ಅಲ್ಲು ಅಯಾನ್ ಹಾಗೂ ಅಲ್ಲ ಅರ್ಹಾ

Source link

ಇಂದು ಗುರು ಪೂರ್ಣಿಮೆ ಶುಭ ದಿನ: ಮೇಷಾದಿ 12 ರಾಶಿಗಳ ದಿನ ಭವಿಷ್ಯ – Kannada News | Guru Purnima 2026 Horoscope: July 29 Zodiac Predictions by Dr Basavaraj Guruji

ಇಂದು ಜುಲೈ 29, 2026, ಬುಧವಾರ, ಪರಾಭವನಾಮ ಸಂವತ್ಸರ, ದಕ್ಷಿಣಾಯನ, ಆಷಾಢ ಮಾಸ, ಶುಕ್ಲಪಕ್ಷದ ಹುಣ್ಣಿಮೆ ದಿನವಾದ ಇಂದು ಗುರು ಪೂರ್ಣಿಮಾ ಹಾಗೂ ವ್ಯಾಸ ಪೂರ್ಣಿಮಾ ಆಗಿರುತ್ತದೆ. ವೇದವ್ಯಾಸ ಮಹರ್ಷಿಗಳ ಜನ್ಮದಿನವನ್ನು ಆಚರಿಸುವ ಈ ದಿನ ಗುರುಗಳ ಸೇವೆ, ಗುರು ಆರಾಧನೆ, ಅನ್ನದಾನ ಮತ್ತು ಭಕ್ತಿಪೂರ್ವಕ ಸ್ಮರಣೆಗೆ ಹೆಚ್ಚಿನ ಮಹತ್ವವಿದೆ. ಇಂದು ರವಿ ಕರ್ಕಾಟಕ ರಾಶಿಯಲ್ಲಿ ಮತ್ತು ಚಂದ್ರ ಮಕರ ರಾಶಿಯ ಉತ್ತರಾಷಾಢ ನಕ್ಷತ್ರದಲ್ಲಿ ಸಂಚರಿಸಲಿದ್ದು, ರಾಹುಕಾಲ 12:25 PM ರಿಂದ 2:00 PM ರವರೆಗೆ ಇದ್ದು, ಸಂಕಲ್ಪ ಕಾಲ 10:50 AM ರಿಂದ 12:26 PM ರವರೆಗೆ ಇರಲಿದೆ. ಇಂದಿನ ರಾಶಿ ಭವಿಷ್ಯವನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಇಲ್ಲಿ ವಿವರಿಸಿದ್ದಾರೆ.

Source link

ದಿನ ಭವಿಷ್ಯ: ಇಂದು ಈ ರಾಶಿಯವರನ್ನು ದೈಹಿಕ ಹಾಗೂ ಮಾನಸಿಕವಾಗಿ ಗೆಲ್ಲುವುದು ಸುಲಭವಲ್ಲ‌‌… – Kannada News | Daily Horoscope for July 29, 2026: Uttarayan Greeshma season, Ashada Masa shukla Paksha Wednesday astrology Prediction

ಮೇಷ ರಾಶಿ:

ಇಂದು ನಿಮ್ಮ ಅಪೂರ್ಣ ಕಾರ್ಯಗಳೇ ತಲೆಯಲ್ಲಿ ಗಿರಕಿ ಹೊಡೆಯುತ್ತಿರುವುದು. ಪೂರ್ಣವಾಗವ ತನಕ ಸಮಾಧನಾವೇ ಇರದು. ಹೊಸ ಯೋಜನೆಯನ್ನು ಆರಂಭಿಸುವ ಸಾಧ್ಯತೆ ಇದೆ. ಅದನ್ನು ಸುಳ್ಳು ಎಂದು ಸಾಬೀತುಪಡಿಸಲು ನೀವು ಓಡಾಟ‌ಮಾಡಬೇಕಾದೀತು. ಸಂಗಾತಿಗೆ ನಿಮ್ಮ ಅರ್ಥಿಕತೆಯದ್ದೇ ಚಿಂತೆಯಾಗಲಿದೆ. ಇಂದಿನ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುವುದು. ಯಾರ ಮಾತನ್ನೂ ಆಲಿಸುವ ವ್ಯವಧಾನ ಇಂದು ಇರದು. ಹಿರಿಯರ ಪ್ರೀತಿಗೆ ಪಾತ್ರರಾಗುವಿರಿ.

ವೃಷಭ ರಾಶಿ:

ಸತ್ಯವನ್ನೇ ನಂಬಿ ಬದುಕುವವರು ಎಂದು ಇದುವರೆಗೆ ತಿಳಿದದ್ದು ಸುಳ್ಳು ಮಾಡುವಿರಿ. ಭವಿಷ್ಯದ ಬಗ್ಗೆ ಒಳ್ಳೆಯ ಯೋಜನೆಯನ್ನು ತಯಾರಿಸುವಿರಿ. ಇಂದು ನೀವು ನಿಮ್ಮ ಅನುಭವ ಹಾಗೂ ಬುದ್ಧಿವಂತಿಕೆಯ ಕಾರಣದಿಂದ ಉದ್ಯೋಗದಲ್ಲಿ ಹೊಸ ಬದಲಾವಣೆಗಳನ್ನು ಮಾಡುವಿರಿ. ಮರೆವನ್ನು ದೂರ ಮಾಡಿಕೊಂಡರೆ ಉತ್ತಮ. ಹೊಸತನ ಅನ್ವೇಷಣೆಯಲ್ಲಿ ನೀವು ಇರುವಿರಿ. ಎಲ್ಲದಕ್ಕೂ ದೈವವನ್ನು ದೂರುತ್ತ ಆಲಸ್ಯದಿಂದ ಇರುವುದು ಬೇಡ.‌ ಬಂಧುಗಳ ವಿಚಾರದಲ್ಲಿ ನಿಮಗೆ ಪೂರ್ಣವಾದ ನಂಬಿಕೆ ಇರದು.

ಮಿಥುನ ರಾಶಿ:

ಅಲ್ಪ ವಿಶ್ರಾಂತಿಯ ಅವಶ್ಯಕತೆ ಇರಲಿದೆ. ನೀವು ಇಂದು ಬೆಲೆಬಾಳುವ ಅಮೂಲ್ಯವಾದ ವಸ್ತುಗಳನ್ನು ಖರೀದಿಸುವಿರಿ. ವಿವಾಹಬಂಧವು ಬೆಸೆಯು ಸೂಚನೆ ಕಾಣಿಸುವುದು. ಇದು ನಿಮ್ಮ ನಿರೀಕ್ಷೆಯನ್ನು ದಾಟಿ ಮುಂದೆ ಹೋಗುವುದು. ನಿಮ್ಮನ್ನು ಹೊಗಳಬೇಕೆಂಬ ಆಸೆ ಇರುವುದು. ಯಾರದೋ ಒತ್ತಾಯಕ್ಕೆ ಮಣಿದು ಅವರ ಜೊತೆ ಪ್ರಯಾಣ ಮಾಡುವಿರಿ. ಒಳ್ಳೆಯ ಕಾರ್ಯಕ್ಕೆ ಧನನಷ್ಟವಾಗಲಿದೆ. ನಿಮ್ಮ ನಿಶ್ಚಿತ ಬುದ್ಧಿಯಂತೆ ನಿಮ್ಮ‌ ಕೆಲಸಗಳನ್ನು ಮಾಡಿ ಮುಗಿಸುವಿರಿ.

ಕರ್ಕಾಟಕ ರಾಶಿ :

ಇಂದು ನಿಮ್ಮ ಜಾಣತನವೇ ಮುಳುವಾಗಬಹುದು. ಸೂಕ್ಷ್ಮ ಮತಿಯಿಂದ ವ್ಯವಹಾರವನ್ನು ಮಾಡಬೇಕಾಗುವುದು. ವಿವೇಚನೆಯಿಲ್ಲದೇ ಯಾವ ಕೆಲಸವನ್ನೂ ಮಾಡಬೇಡಿ. ಯಾವ ಮಾತನ್ನೂ ನೋವಾಗುವಂತೆ ಆಡಬೇಡಿ. ನಿಮ್ಮ ಜ್ಞಾನದ ಬಗ್ಗೆ ನಿಮಗೇ ಹೆಮ್ಮಯಾಗಬಹುದು. ನಿಮ್ಮ ಇಂದಿನ ಎಲ್ಲ ಕೆಲಸಗಳೂ ಬಹಳ ವಿಳಂಬವಾಗಿ ಆಗುವುದು. ಹೂಡಿಕೆಯಲ್ಲಿ ಅಲ್ಪ ಲಾಭ ಸಿಗುವುದು. ನಿಮ್ಮ ಸಂಗಾತಿಯ ಮನಃಸ್ಥಿತಿಯು ಬದಲಾಗಿದ್ದು ನಿಮಗೆ ಸಮಸ್ಯೆಯಾಗುವುದು.

ಸಿಂಹ ರಾಶಿ:

ನಿಮಗೆ ಅತ್ಮಸ್ಥೈರ್ಯದ ಕೊರತೆ ಬಹುವಾಗಿ ಕಾಡುವುದು. ಯಾರಾದರೂ ಅಪಮಾನ ಮಾಡಬಹುದೆಂಬ ಭಯವೂ ಕಾಡುವುದು. ಬೇಸರದ ಮನಸ್ಸನ್ನು ಮನೆಯವರಿಗೆ ತೋರಿಸಲು ಇಷ್ಟಪಡುವುದಿಲ್ಲ. ಸಣ್ಣ ಸಣ್ಣ ವಿಚಾರಕ್ಕೂ ಮನಸ್ತಾಪಗಳು ನಿಮಗೆ ಇಂದು ಅಧಿಕವಾಗಬಹುದು. ಎಲ್ಲವೂ ಗೊಂದಲವಾಗಿ ಯಾವದೇ ನಿರ್ಧಾರವನ್ನು ತೆಗೆದುಕೊಳ್ಳಲು ವಿಲವಿಲನೆ ಒದ್ದಾಡಬಹುದು. ಧಾರ್ಮಿಕ ಕಾರ್ಯಗಳಿಗೆ ದೂರಪ್ರಯಾಣವನ್ನು ಮಾಡುವಿರಿ. ಕೆಲವು ಸಾಲಬಾಧೆಯಿಂದ ಮುಕ್ತಿಪಡೆಯುವಿರಿ.

ಕನ್ಯಾ ರಾಶಿ:

ನೀವು ಕಛೇರಿಯ ಕೆಲಸದಲ್ಲಿ ಅವಸರದ ನಿರ್ಧಾರವನ್ನು ತೆಗದುಕೊಳ್ಳುವುದು ಬೇಡ. ನಿಮ್ಮ ಮೇಲಧಿಕಾರಿಗಳ ಜೊತೆ ಚರ್ಚಿಸಿ. ಹಣವನ್ನು ಕೊಟ್ಟಾದರೂ ಮಾಡಬೇಕಾದ ಕಾರ್ಯವನ್ನು ಮಾಡಿಸಿಕೊಳ್ಳುವಿರಿ. ನಿಮ್ಮ ಕರ್ತವ್ಯಲೋಪವಿಲ್ಲದೇ ಮಾಡಿದ ಕೆಲಸದಿಂದ ನಿಮಗೆ ಈ ಧೈರ್ಯವು ಸಿದ್ಧವಾಗಿದೆ‌. ನಿಮ್ಮ ವ್ಯವಹಾರದಲ್ಲಿ ಉತ್ತಮ ಲಾಭವಿದೆ. ನಿರ್ಲಜ್ಜೆಯಿಂದ ಮಾತನಾಡುವಿರಿ. ಯಾರನ್ನೂ ಅಪ್ರಯೋಜಕರಂತೆ ನೋಡುವುದು ಬೇಡ. ಆಪ್ತರು ನಿಮಗೆ ದುಷ್ಕೃತ್ಯಕ್ಕೆ ಪ್ರೇರಣೆ ಕೊಡಬಹುದು.

ತುಲಾ ರಾಶಿ:

ಆಯಾಸದಿಂದ ಯಾವ ಉತ್ಸಾಹವೂ ನಿಮ್ಮಲ್ಲಿ ಇರದು. ನಿರ್ದಯೆಯು ನಿಮ್ಮ ಸ್ವಭಾವವಲ್ಲದಿದ್ದರೂ ಸಂದರ್ಭವು ಅದನ್ನು ಸೃಷ್ಟಿಸುವುದು. ಯಾವುದನ್ನೂ ಒಪ್ಪಿಕೊಳ್ಳುವ ಮನೋಭಾವ ನಿಮ್ಮದಾಗದು. ಸ್ತ್ರೀ ಸಮೂಹದ ಮುಖ್ಯಸ್ಥರಾಗುವಿರಿ. ಅನಗತ್ಯ ಖರ್ಚಿನ ನಡುವೆ ಸದುಪಯೋಗವಾಯಿತು ಎಂಬ ಸಂತೋಷವು ಇರಲಿದೆ. ಆಪ್ತರು ನಿಮಗೆ ಪ್ರೀತಿಯಿಂದ ಆತಿಥ್ಯವನ್ನು ಕೊಡಿಸುವರು. ಅನಾರೋಗ್ಯವು ತುರ್ತು ಚಿಕಿತ್ಸೆ ಮಾಡುವತನಕ ಕರೆದುಕೊಂಡು ಹೋಗುವುದು.

ವೃಶ್ಚಿಕ ರಾಶಿ:

ಅನುಭವಿಗಳ ಜೊತೆಗಿನ ಒಡನಾಟದದಿಂದ ಉದ್ಯಮವು ಹೆಚ್ಚಾಗುವುದು. ಭೂ ವಿವಾದವು ನಿಮಗೆ ಬೇಸರ ತರಿಸಬಹುದು. ವಿನಿಮಯ ಯಾವಾಗಲೂ ಸರಿಯಾಗಿ ಇರಲಿ. ನಿಮಗೆ ಪೋಷಕರ ಬೆಂಬಲವು ಪರೋಕ್ಷವಾಗಿ ಸಿಕ್ಕರೂ ಪ್ರತ್ಯಕ್ಷ ಬೆಂಬಲವನ್ನು ನೀವು ನಿರೀಕ್ಷಿಸುವಿರಿ. ಅಶಿಸ್ತಿನ ನಿಮ್ಮ ವರ್ತನೆಯು ಸಂಗಾತಿಗೆ ಕಿರಿಕಿರಿಯನ್ನು ಉಂಟುಮಾಡೀತು. ಮನೆಗೆ ಬೇಕಾದ ಹಲವಾರು ವಸ್ತುಗಳನ್ನು ಖರೀದಿಸುವಿರಿ. ವಿದ್ಯಾಭ್ಯಾಸದ ಕಾರಣಕ್ಕೆ ಮನೆಯನ್ನು ಬಿಡುವುದು ನಿಮಗೆ ಕಷ್ಟವಾದೀತು.

ಧನು ರಾಶಿ:

ನೀವು ಮಕ್ಕಳ ವಿಚಾರವಾಗಿ ಮಾಡಿದ ಶ್ರಮವು ಇಂದು ಫಲಿಸುವುದು. ಮಕ್ಕಳಿಂದ ನಿಮಗೆ ಅವಶ್ಯಕವಾದ ಸಹಕಾರವು ದೊರೆಯುವುದು. ಸಂಗಾತಿಯ ಬಗ್ಗೆ ಹೇಳಲು ಮುಜಗರ. ಪ್ರೇಮವೂ ನಿಮಗೆ ನೆಮ್ಮದಿಯನ್ನು ಹಾಳುಮಾಡುವುದು. ಮನೆಯಲ್ಲಿ ನಿಮ್ಮ ವಿವಾಹಕ್ಕೆ ಬೇಕಾದ ತಯಾರಿಯನ್ನು ಮಾಡುತ್ತಿರುವರು. ಹಿತಶತ್ರುಗಳಿಂದ ನೀವು ದೂರವಿರುವುದು ಅವಶ್ಯಕ. ಕೆಲಸದ ನಿಮಿತ್ತ ಪ್ರಯಾಣ ಮಾಡಬೇಕಾಗುವುದು.

ಮಕರ ರಾಶಿ:

ಭೂಮಿಯ ಕ್ರಯ ಮತ್ತು ವಿಕ್ರಯದಲ್ಲಿ ನಷ್ಟವನ್ನು ಅನುಭವಿಸಬೇಕಾಗಬಹುದು. ಇಂದು ನೀವು ಮಾಡಿದ ಖರ್ಚು ಸದುಪಯೋಗವಾಗಿದೆ ಎಂದುಕೊಳ್ಳುವುದು ಬೇಡ. ವೃತ್ತಿಯಲ್ಲಿ ಬೆಳೆಯುವ ಕನಸು ದೊಡ್ಡದಾಗುವುದು. ಕೊಟ್ಟ ಮಾತನ್ನು ಉಳಿಸಿಕೊಳ್ಳುವುದು ಕಷ್ಟ. ನಿಮ್ಮ ಸಾಮಾಜಿಕ ಚಟುವಟಿಕೆಗಳಿಗೆ ಅಡ್ಡಗಾಲು ಹಾಕಬಹುದು. ಅಮೂಲ್ಯ ವಸ್ತುವಿನ ಬಗ್ಗೆ ನಿಷ್ಕಾಳಜಿ ಸರಿಯಲ್ಲ.

ಕುಂಭ ರಾಶಿ:

ನಿಮಗೆ ಸಿಗಬೇಕಾದ ಸವಲತ್ತುಗಳನ್ನು ಪಡೆದುಕೊಳ್ಳಲು ಸಾಧ್ಯವಾಗದು. ಆಲಸ್ಯವು ನಿಮ್ಮ ಒಳ್ಳೆತನಕ್ಕೆ ಮುಳುವಾಗಬಹುದು. ನಿಮ್ಮ ಗುರಿಯನ್ನು ಯಾರಾದರೂ ತಪ್ಪಿಸಬಹುದು. ಇಂದು ನೀವು ಬಹಳ ಕಾರ್ಯದಲ್ಲಿ ಮಗ್ನರಾಗುವಿರಿ. ಬೇರೆಯವರ ಮಾತನ್ನೊಂದನ್ನೇ ನಂಬಿ ಮೋಸಹೋಗುವಿರಿ. ನಿಮ್ಮ ಸಂತೋಷವನ್ನು ಕಸಿದುಕೊಳ್ಳುವ ಮಾತುಗಳನ್ನು ನಿಮ್ಮವರು ಆಡಬಹುದು. ಕೇಳಿಸಿಕೊಂಡಿಲ್ಲ ಎಂಬ ಮನೋಭಾವವಿರಲಿ.

ಮೀನ ರಾಶಿ:

ಇಂದು ನೀವು ಮನೆಯವರಿಗೆ ತೊಂದರೆಯಾಗದಂತೆ ನೀವೇ ಉದ್ಯೋಗದ ಜೊತೆ ಉನ್ನತ ವಿದ್ಯಾಭ್ಯಾಸವನ್ನೂ ಮಾಡಬೇಕಾಗಬಹುದು. ನಿಮಗೆ ಇಂದು ಪರಿಚಿತ ವ್ಯಕ್ತಿಯ ಸಹಾಯದಿಂದ ಸಾಲವನ್ನು ಮಾಡುವಿರಿ. ಇಂದು ನೀವು ಸರ್ಕಾರದಿಂದ ಗೌರವಿಸಲ್ಪಡುವ ಸಾಧ್ಯತೆಯಿದೆ. ತಂದೆಯು ನಿಮಗೆ ಏನನ್ನಾದರೂ ಮಾಡಬೇಕು ಎಂಬ ಆಸೆಯನ್ನು ಇಟ್ಟುಕೊಂಡಿರುವರು. ತಾಳ್ಮೆಯಿಂದ ಇಂದಿನ ವ್ಯವಹಾರವನ್ನು ಮಾಡಿ.

ಇಂದಿನ ಪಂಚಾಂಗ:

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ದಕ್ಷಿಣಾಯನ, ಋತು : ಗ್ರೀಷ್ಮ, ಚಾಂದ್ರಮಾಸ : ಆಷಾಢ, ಸೌರ ಮಾಸ : ಕರ್ಕಾಟಕ, ಮಹಾನಕ್ಷತ್ರ : ಪುಷ್ಯಾ, ವಾರ : ಬುಧ, ಪಕ್ಷ : ಶುಕ್ಲ, ತಿಥಿ : ಪೂರ್ಣಿಮಾ, ನಿತ್ಯನಕ್ಷತ್ರ : ಶ್ರವಣಾ, ಯೋಗ : ಸೌಭಾಗ್ಯ, ಕರಣ : ಬಾಲವ, ಸೂರ್ಯೋದಯ – 06 – 05 am, ಸೂರ್ಯಾಸ್ತ – 06 – 46 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 12:26 – 14:01, ಯಮಗಂಡ ಕಾಲ 07:41 – 09:16, ಗುಳಿಕ ಕಾಲ 10:51 – 12:26

-ಲೋಹಿತ್ ಹೆಬ್ಬಾರ್-8762924271 (what’s app only)

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 12:31 am, Wed, 29 July 26

Source link

ಒಪ್ಪಂದದಂತೆ ಕೇಸ್ ಹಿಂಪಡೆಯದಿದ್ದರೆ ಮತ್ತೆ ಪ್ರತಿಭಟನೆ; ಸರ್ಕಾರಕ್ಕೆ ಸಿಜೆಪಿ ಕೊನೆಯ ಎಚ್ಚರಿಕೆ – Kannada News | Withdraw FIRs; CJP Threatens To Restart Fresh Protests As Deadline Ends Today

ನವದೆಹಲಿ, ಜುಲೈ 28: ಪ್ರತಿಭಟನಾಕಾರರ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗಳನ್ನು ಸರ್ಕಾರ ಹಿಂಪಡೆಯದಿದ್ದಲ್ಲಿ ದೇಶಾದ್ಯಂತ ಹೊಸ ಹಂತದ ಪ್ರತಿಭಟನೆಗಳನ್ನು ಪ್ರಾರಂಭಿಸುವುದಾಗಿ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಇಂದು ಮತ್ತೊಮ್ಮೆ ಎಚ್ಚರಿಕೆ ನೀಡಿದೆ. ಸಿಜೆಪಿ ಕೇಂದ್ರ ಸರ್ಕಾರಕ್ಕೆ ನೀಡಿದ್ದ ಗಡುವು ಇಂದು ಮುಕ್ತಾಯಗೊಳ್ಳುತ್ತಿದೆ. ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ CJP ವಕ್ತಾರ ಸೌರವ್ ದಾಸ್, “ದೇಶಾದ್ಯಂತ ನಡೆಯುತ್ತಿದ್ದ ಹೋರಾಟವನ್ನು ಹಿಂಪಡೆಯಲು ನೀಡಿದ್ದ ಭರವಸೆಗಳನ್ನು ಈಡೇರಿಸುವ ಸಮಯ ಕೇಂದ್ರ ಸರ್ಕಾರಕ್ಕೆ ಬಂದಿದೆ” ಎಂದು ಹೇಳಿದ್ದಾರೆ.

“ಭಾರತ ಸರ್ಕಾರವು ತನ್ನ ಭರವಸೆಗಳನ್ನು ಈಡೇರಿಸಲು ನೀಡಿದ್ದ ಗಡುವು ಇಂದು ಮುಕ್ತಾಯಗೊಳ್ಳುತ್ತಿದೆ. ನಾವು ನೀಡಿರುವ ಪ್ರತಿಯೊಂದು ಭರವಸೆಯನ್ನು ಈಡೇರಿಸುವಂತೆ ಸರ್ಕಾರವನ್ನು ಮತ್ತೊಮ್ಮೆ ಆಗ್ರಹಿಸುತ್ತೇವೆ. ಎಫ್‌ಐಆರ್‌ಗಳನ್ನು ಹಿಂಪಡೆಯಿರಿ, ಪ್ರತಿಭಟನಾಕಾರರ ವಿರುದ್ಧ ಭವಿಷ್ಯದಲ್ಲಿ ಯಾವುದೇ ದಂಡನಾತ್ಮಕ ಕ್ರಮ ಕೈಗೊಳ್ಳದಂತೆ ನೋಡಿಕೊಳ್ಳಿ. ಪ್ರತಿಭಟನೆಯನ್ನು ಅಂತ್ಯಗೊಳಿಸಲು ಕಾರಣವಾದ ಒಪ್ಪಂದವನ್ನು ಗೌರವಿಸಿ. ಅದಕ್ಕೆ ತಪ್ಪಿದರೆ ನಾವು ಈಗಾಗಲೇ ಘೋಷಿಸಿದಂತೆ ಈ ದೇಶದ ಭವಿಷ್ಯಕ್ಕಾಗಿ ಧ್ವನಿ ಎತ್ತಿದ ವಿದ್ಯಾರ್ಥಿಗಳು ಮತ್ತು ಯುವ ಪ್ರತಿಭಟನಾಕಾರರನ್ನು ರಕ್ಷಿಸಲು ಕಾಕ್ರೋಚ್ ಜನತಾ ಪಾರ್ಟಿಯು ದೇಶವ್ಯಾಪಿ ಪ್ರತಿಭಟನೆಯನ್ನು ಪುನರಾರಂಭಿಸುವುದನ್ನು ಬಿಟ್ಟು ಬೇರೆ ವಿಧಿಯಿಲ್ಲ” ಎಂದು ದಾಸ್ ಹೇಳಿದ್ದಾರೆ.

ಇದನ್ನೂ ಓದಿ: ವಿದ್ಯಾರ್ಥಿ ಪ್ರತಿಭಟನೆ ವೇಳೆ ಹಿಂಸಾಚಾರ; ಎಸ್‌ಐಟಿ ತನಿಖೆಗೆ ಸುಪ್ರೀಂ ಕೋರ್ಟ್ ಸೂಚನೆ

ಹಾಗೇ, ಸರ್ಕಾರ ಕೊಟ್ಟ ಮಾತಿಗೆ ತಪ್ಪಿರುವ ಹಿನ್ನೆಲೆಯಲ್ಲಿ ಮತ್ತೆ ಪ್ರತಿಭಟನೆ ನಡೆಸುವುದಾಗಿ ಸಿಜೆಪಿ ನಾಯಕ ಅಭಿಜೀತ್ ದಿಪ್ಕೆ ಎಚ್ಚರಿಕೆ ನೀಡಿದ್ದಾರೆ. “ಪೊಲೀಸರಿಂದ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿರುವ ಕಿರುಕುಳ ಹೀಗೆಯೇ ಮುಂದುವರಿದರೆ, ಕಾಕ್ರೋಚ್ ಜನತಾ ಪಾರ್ಟಿ ಶೀಘ್ರದಲ್ಲೇ ಬೃಹತ್ ಶಾಂತಿಯುತ ಪ್ರತಿಭಟನೆಯ ಮೂಲಕ ಉತ್ತರಿಸಲಿದೆ. ಸರ್ಕಾರವು ವಿದ್ಯಾರ್ಥಿಗಳನ್ನು ಗುರಿಯಾಗಿಸುವುದು ಮತ್ತು ಅವರ ಮೇಲೆ ದ್ವೇಷದ ಕ್ರಮ ಕೈಗೊಳ್ಳುವುದನ್ನು ತಕ್ಷಣವೇ ನಿಲ್ಲಿಸಬೇಕು” ಎಂದು ದಿಪ್ಕೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ದೆಹಲಿಯಲ್ಲಿ ನೀಟ್ ಪತ್ರಿಕೆ ಸೋರಿಕೆ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದವರ ವಿರುದ್ಧ ಯಾವುದೇ ಕಾನೂನು ಕ್ರಮ ಕೈಗೊಳ್ಳುವುದಿಲ್ಲ ಎಂಬ ಒಪ್ಪಂದವನ್ನು ಸರ್ಕಾರ ಉಲ್ಲಂಘಿಸಿದೆ ಎಂದು CJP ವಕ್ತಾರ ಅಶುತೋಶ್ ರಾಂಕಾ ವಾಗ್ದಾಳಿ ನಡೆಸಿದ್ದರು. “ಆತ್ಮೀಯ ಜೆ.ಪಿ. ನಡ್ಡಾ ಮತ್ತು ಜಿತೇಂದ್ರ ಸಿಂಗ್ ಅವರೇ, ಪ್ರತಿಭಟನಾಕಾರರ ವಿರುದ್ಧ ಯಾವುದೇ ಪೊಲೀಸ್ ಕ್ರಮ ಕೈಗೊಳ್ಳುವುದಿಲ್ಲ ಎಂಬ ಒಪ್ಪಂದದ ಸಂಪೂರ್ಣ ಉಲ್ಲಂಘನೆಯನ್ನು ನಾವು ಕಾಣುತ್ತಿದ್ದೇವೆ. ಬಿಹಾರ ಮತ್ತು ಬಂಗಾಳದಲ್ಲಿ ನೂರಾರು ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ, ದೆಹಲಿ ಮತ್ತು ಇತರ ರಾಜ್ಯಗಳಲ್ಲಿ ನೂರಾರು ವಿದ್ಯಾರ್ಥಿಗಳಿಗೆ ಕಿರುಕುಳ ನೀಡಲಾಗುತ್ತಿದೆ. ಪ್ರತಿಭಟನಾಕಾರರಿಗೆ ಸಾಮಗ್ರಿಗಳನ್ನು ನೀಡಿ ಬೆಂಬಲಿಸುತ್ತಿದ್ದ ಸ್ವಯಂಸೇವಕರನ್ನು ದೆಹಲಿಯಲ್ಲಿ ವಶಕ್ಕೆ ಪಡೆಯುತ್ತಿರುವ ಹಲವು ವರದಿಗಳು ಹೊರಬರುತ್ತಿವೆ” ಎಂದು ರಾಂಕಾ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು.

ಇದನ್ನೂ ಓದಿ: ನೀಟ್ ಪ್ರತಿಭಟನೆ, ಬಂಧಿತ 18 ವರ್ಷದೊಳಗಿನ ವಿದ್ಯಾರ್ಥಿಗಳ ಬಿಡುಗಡೆಗೊಳಿಸುವಂತೆ ಎಲ್ಲಾ ರಾಜ್ಯಗಳಿಗೆ ಸುಪ್ರೀಂ ಸೂಚನೆ

ಹಾಲಿ ದಾಖಲಾಗಿರುವ ಎಫ್‌ಐಆರ್‌ಗಳ ಕುರಿತು ತನಿಖೆಯನ್ನು ಮುಂದುವರಿಸಲು ರಾಜ್ಯ ಸರ್ಕಾರಗಳಿಗೆ ಅನುಮತಿ ನೀಡಿರುವ ಸುಪ್ರೀಂ ಕೋರ್ಟ್‌ನ ಇತ್ತೀಚಿನ ನಿರ್ದೇಶನಗಳ ಕುರಿತೂ ಸಿಜೆಪಿ ಕಳವಳ ವ್ಯಕ್ತಪಡಿಸಿದೆ. “ಈ ನಿರ್ದೇಶನವು ಜುಲೈ 25ರಂದು ಭಾರತ ಸರ್ಕಾರವು ಈ ದೇಶದ ಯುವಜನತೆಗೆ ನೀಡಿದ ಪವಿತ್ರ ಆಶ್ವಾಸನೆ ಮತ್ತು ಭರವಸೆಗೆ ವಿರುದ್ಧವಾಗಿದೆ. ಅಂದರೆ, ಎಫ್‌ಐಆರ್‌ಗಳನ್ನು ಹಿಂಪಡೆಯಲಾಗುವುದು ಮತ್ತು ಶಾಂತಿಯುತ ಚಳವಳಿಯಲ್ಲಿ ಭಾಗವಹಿಸಿದ್ದಕ್ಕಾಗಿ ಯಾವುದೇ ಪ್ರತಿಭಟನಾಕಾರರನ್ನು ನೇರವಾಗಿ ಅಥವಾ ಪರೋಕ್ಷವಾಗಿ ಗುರಿಯಾಗಿಸುವುದಿಲ್ಲ ಎಂಬ ಭರವಸೆಗೆ ಇದು ವ್ಯತಿರಿಕ್ತವಾಗಿದೆ” ಎಂದು ಸಿಜೆಪಿ ಕಳವಳ ವ್ಯಕ್ತಪಡಿಸಿದೆ.

“ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ನೇತೃತ್ವದ ಪೀಠದ ಈ ಆದೇಶವನ್ನು ಬಳಸಿಕೊಂಡು ಭಾರತ ಸರ್ಕಾರ ಮತ್ತು ಬಿಜೆಪಿ ಆಡಳಿತವಿರುವ ರಾಜ್ಯಗಳು ಪ್ರತ್ಯೇಕ ಪ್ರತಿಭಟನಾಕಾರರ ವಿರುದ್ಧ ಎಫ್‌ಐಆರ್‌ಗಳನ್ನು ಮುಂದುವರಿಸಲು ಮತ್ತು ಅವರಿಗೆ ತೀವ್ರ ಕಿರುಕುಳ ನೀಡಲು ಯತ್ನಿಸಬಹುದು ಎಂಬ ಆತಂಕ ನಮಗಿದೆ,” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಇನ್ನೊಂದೆಡೆ, ಬಿಹಾರ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ರಾಜ್ಯಗಳು ವಿದ್ಯಾರ್ಥಿ ಪ್ರತಿಭಟನಾಕಾರರ ಮೇಲಿನ ಪ್ರಕರಣಗಳನ್ನು ಹಿಂಪಡೆಯುವುದಾಗಿ ಈಗಾಗಲೇ ಘೋಷಿಸಿವೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ರಾಮಾಯಣ’ ಚಿತ್ರದ ಟ್ರೇಲರ್ ಬಿಡುಗಡೆಗೆ ದಿನಾಂಕ ನಿಗದಿ: ನಮಿತ್ ಮಲ್ಹೋತ್ರಾ ಅಧಿಕೃತ ಘೋಷಣೆ – Kannada News | Namit Malhotra announces Yash Ranbir Kapoor starrer Ramayana Movie Trailer Release Date and Time

ಭಾರತೀಯ ಚಿತ್ರರಂಗದದಲ್ಲಿ ಅತ್ಯಂತ ನಿರೀಕ್ಷೆ ಮೂಡಿಸಿರುವ ಪೌರಾಣಿಕ ಕಥಾಹಂದರದ ‘ರಾಮಾಯಣ’ ಸಿನಿಮಾದ ಟ್ರೇಲರ್ (Ramayana Movie Trailer) ಬಿಡುಗಡೆಗೆ ಕೊನೆಗೂ ದಿನಗಣನೆ ಶುರುವಾಗಿದೆ. ಚಿತ್ರದ ನಿರ್ಮಾಪಕ ನಮಿತ್ ಮಲ್ಹೋತ್ರಾ ಸೋಶಿಯಲ್ ಮೀಡಿಯಾದಲ್ಲಿ ವಿಶೇಷ ಪೋಸ್ಟರ್ ಹಂಚಿಕೊಳ್ಳುವ ಮೂಲಕ ‘ರಾಮಾಯಣ’ (Ramayana) ಚಿತ್ರದ ಟ್ರೇಲರ್ ಅನಾವರಣಗೊಳ್ಳುವ ದಿನಾಂಕ ಮತ್ತು ಸಮಯವನ್ನು ಅಧಿಕೃತವಾಗಿ ಪ್ರಕಟಿಸಿದ್ದಾರೆ. ಜುಲೈ 30ರ ಗುರುವಾರದಂದು ಬೆಳಗಿನ ಜಾವ 4.15ಕ್ಕೆ ಈ ಟ್ರೇಲರ್ ಬಿಡುಗಡೆಯಾಗಲಿದೆ ಎಂದು ನಮಿತ್ ಮಲ್ಹೋತ್ರಾ (Namit Malhotra) ಅವರು ತಿಳಿಸಿದ್ದಾರೆ.

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಈಗಾಗಲೇ ‘ರಾಮಾಯಣ’ ಸಿನಿಮಾದ ಟ್ರೇಲರ್ ಬಿಡುಗಡೆ ಆಗಬೇಕಿತ್ತು. ಆದರೆ ಸಿನಿಮಾದ ಬಿಸ್ನೆಸ್ ದೃಷ್ಟಿಯಿಂದ ಕೆಲವು ಹೊಸ ಬೆಳವಣಿಗೆಗಳು ನಡೆದಿದ್ದರಿಂದ ಟ್ರೇಲರ್ ಬಿಡುಗಡೆ ದಿನಾಂಕದಲ್ಲಿ ಬದಲಾವಣೆ ಆಗಿತ್ತು. ಈಗ ಸ್ವತಃ ನಿರ್ಮಾಪಕರೇ ಅಧಿಕೃತ ಪೋಸ್ಟರ್ ಮೂಲಕ ಟ್ರೇಲರ್ ಬಿಡುಗಡೆಯ ಡೇಟ್ ಮತ್ತು ಟೈಮ್ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ವಿಶೇಷ ಮುಹೂರ್ತದಲ್ಲಿ ಬರಲಿದೆ ಟ್ರೇಲರ್:

ಚಿತ್ರತಂಡ ಹಂಚಿಕೊಂಡಿರುವ ಹೊಸ ಪೋಸ್ಟರ್‌ನಲ್ಲಿ ಬ್ರಹ್ಮ ಮುಹೂರ್ತದ ವಿಶೇಷತೆಯನ್ನು ಎತ್ತಿಹಿಡಿಯಲಾಗಿದೆ. ‘ಅತ್ಯಂತ ಪವಿತ್ರವಾದ ಬ್ರಹ್ಮ ಮುಹೂರ್ತದಲ್ಲಿ, ಅಂದರೆ 2026ರ ಜುಲೈ 30 (ಗುರುವಾರ) ಬೆಳಗಿನ ಜಾವ 4.15ಕ್ಕೆ ವಿಶ್ವದಾದ್ಯಂತ ‘ದಿ ಡಾನ್ ಆಫ್ ರಾಮಾಯಣ’ ಟ್ರೇಲರ್ ಅನ್ನು ನಾವು ಅನಾವರಣಗೊಳಿಸುತ್ತಿದ್ದೇವೆ’ ಎಂಬ ಮಾಹಿತಿಯನ್ನು ಇದರಲ್ಲಿ ನೀಡಲಾಗಿದೆ. ಹಿಂದೂ ಸಂಸ್ಕೃತಿಯಲ್ಲಿ ಬ್ರಹ್ಮ ಮುಹೂರ್ತಕ್ಕೆ ಅತ್ಯಂತ ಆಧ್ಯಾತ್ಮಿಕ ಹಾಗೂ ಪವಿತ್ರ ಸ್ಥಾನವಿರುವುದರಿಂದ, ಅದೇ ಸಮಯದಲ್ಲಿ ಟ್ರೇಲರ್ ಬಿಡುಗಡೆ ಮಾಡಲು ನಿರ್ಮಾಪಕರು ನಿರ್ಧರಿಸಿದ್ದಾರೆ.

ಟ್ರೇಲರ್ ನೋಡಲು ಕಾದಿರುವ ಫ್ಯಾನ್ಸ್:

ಕಳೆದ ಹಲವು ತಿಂಗಳುಗಳಿಂದ ಈ ಬಿಗ್ ಬಜೆಟ್ ಸಿನಿಮಾದ ಪ್ರಥಮ ದೃಶ್ಯಾವಳಿಗಳನ್ನು ನೋಡಲು ಕಾತರದಿಂದ ಕಾಯುತ್ತಿದ್ದ ಪ್ರೇಕ್ಷಕರಲ್ಲಿ ಈ ಪ್ರಕಟಣೆ ಹೊಸ ಸಂಚಲನ ಮೂಡಿಸಿದೆ. ಪ್ರಸ್ತುತ ಹಂಚಿಕೊಳ್ಳಲಾದ ಪೋಸ್ಟರ್‌ನಲ್ಲಿ ಸಿನಿಮಾದ ಯಾವುದೇ ಹೊಸ ದೃಶ್ಯಗಳನ್ನು ತೋರಿಸದಿದ್ದರೂ, ಇನ್ನು ಕೆಲವೇ ದಿನಗಳಲ್ಲಿ ಸಿನಿಮಾದ ಅಧಿಕೃತ ಟ್ರೇಲರ್ ಪ್ರೇಕ್ಷಕರ ಮುಂದೆ ಬರಲಿದೆ ಎಂಬ ಖಾತರಿ ಸಿಕ್ಕಂತಾಗಿದೆ.

ಇದನ್ನೂ ಓದಿ: ರಾಮಾಯಣ: ಯಶ್ ಜತೆಗಿನ ಕ್ಲೈಮ್ಯಾಕ್ಸ್ ಶೂಟಿಂಗ್ ಇನ್ನೂ ಬಾಕಿಯಿದೆ ಎಂದ ರಣಬೀರ್ ಕಪೂರ್

‘ರಾಮಾಯಣ’ ಸಿನಿಮಾದ ಪಾತ್ರವರ್ಗ:

‘ದಂಗಲ್’ ಖ್ಯಾತಿಯ ನಿತೀಶ್ ತಿವಾರಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಬಿಗ್ ಬಜೆಟ್ ಸಿನಿಮಾದಲ್ಲಿ ರಣಬೀರ್ ಕಪೂರ್, ಸಾಯಿ ಪಲ್ಲವಿ ಮತ್ತು ಯಶ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಇದರೊಂದಿಗೆ ರವಿ ದುಬೆ, ಸನ್ನಿ ಡಿಯೋಲ್, ರಕುಲ್ ಪ್ರೀತ್ ಸಿಂಗ್ ಮುಂತಾದ ತಾರೆಯರು ಇತರ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ವರ್ಷ ದೀಪಾವಳಿ ಹಬ್ಬಕ್ಕೆ ಚಿತ್ರಮಂದಿರಗಳಲ್ಲಿ ವಿಶ್ವದಾದ್ಯಂತ ‘ರಾಮಾಯಣ’ ತೆರೆಕಾಣಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಗುರು ಪೂರ್ಣಿಮೆಯಂದು ಶ್ರೀ ರಾಘವೇಂದ್ರ ಸ್ವಾಮಿಗಳ ಪೂಜೆ ಏಕೆ ಶ್ರೇಷ್ಠ? – Kannada News | Vyasa Purnima: Worshipping Sri Raghavendra Swamy – Significance and Pooja Guide

ಆಷಾಢ ಮಾಸದ ಶುಕ್ಲ ಪಕ್ಷದ ಪೂರ್ಣಿಮೆಯನ್ನು ‘ಗುರು ಪೂರ್ಣಿಮೆ’ ಅಥವಾ ‘ವ್ಯಾಸ ಪೂರ್ಣಿಮೆ’ ಎಂದು ಅತ್ಯಂತ ಶ್ರದ್ಧಾ-ಭಕ್ತಿಯಿಂದ ಆಚರಿಸಲಾಗುತ್ತದೆ. ಸನಾತನ ಧರ್ಮದಲ್ಲಿ ಗುರುವಿಗೆ ಈಶ್ವರನಿಗಿಂತಲೂ ಹೆಚ್ಚಿನ ಸ್ಥಾನ ನೀಡಲಾಗಿದೆ. ಈ ಪವಿತ್ರ ದಿನದಂದು ಜಗದ್ಗುರು ಶ್ರೀ ರಾಘವೇಂದ್ರ ಸ್ವಾಮಿಗಳನ್ನು (ರಾಯರನ್ನು) ಪೂಜಿಸುವುದು ಮತ್ತು ಅವರ ಸ್ಮರಣೆ ಮಾಡುವುದು ಅತ್ಯಂತ ಫಲದಾಯಕ ಹಾಗೂ ಪವಿತ್ರ ಎಂದು ನಂಬಲಾಗಿದೆ.

ಗುರು ಪೂರ್ಣಿಮೆಯಂದು ರಾಯರ ಪೂಜೆ ಏಕೆ ವಿಶೇಷ?

ಜ್ಞಾನ ಹಾಗೂ ಮಂತ್ರ ಸಿದ್ಧಿ: ಗುರು ರಾಘವೇಂದ್ರ ಸ್ವಾಮಿಗಳು ‘ಕಲ್ಪವೃಕ್ಷ’ ಹಾಗೂ ‘ಕಾಮಧೇನು’ ಇದ್ದಂತೆ. ಗುರು ಪೂರ್ಣಿಮೆಯ ಶುಭ ದಿನದಂದು ರಾಯರನ್ನು ಭಕ್ತಿಯಿಂದ ನೆನೆದರೆ ಮನಸ್ಸಿಗೆ ಶಾಂತಿ, ಕುಟುಂಬದಲ್ಲಿ ಸಮೃದ್ಧಿ ಮತ್ತು ಜ್ಞಾನ ಸಿದ್ಧಿಸುತ್ತದೆ.

ಸಕಲ ಕಷ್ಟಗಳ ನಿವಾರಣೆ: ರಾಯರ ‘ಶ್ರೀ ರಾಘವೇಂದ್ರ ಸ್ತೋತ್ರ’ ಪಠಿಸುವುದರಿಂದ ಮತ್ತು ಅವರ ಬೃಂದಾವನದ ಧ್ಯಾನ ಮಾಡುವುದರಿಂದ ಜೀವನದಲ್ಲಿ ಎದುರಾಗುವ ಸಕಲ ವಿಘ್ನಗಳು ನಿವಾರಣೆಯಾಗುತ್ತವೆ.

ಗುರು ಕೃಪಾ ಕಟಾಕ್ಷ: ಗುರು ಪೂರ್ಣಿಮೆಯು ಶ್ರೀಗುರುಗಳ ಅನುಗ್ರಹವನ್ನು ಸಂಪೂರ್ಣವಾಗಿ ಪಡೆಯಲು ಸೂಕ್ತ ದಿನ. ಈ ದಿನ ರಾಯರ ಸೇವೆ ಮಾಡುವುದರಿಂದ ಜನ್ಮಾಂತರದ ಪಾಪಗಳು ತೊಳೆದುಹೋಗುತ್ತವೆ ಎಂಬ ನಂಬಿಕೆಯಿದೆ.

ಇದನ್ನೂ ಓದಿ: ಜಾತಕದಲ್ಲಿ ಗುರು ಬಲ ಹೆಚ್ಚಿಸಲು ಗುರು ಪೂರ್ಣಿಮೆಯಂದು ಈ ರೀತಿ ಮಾಡಿ

ಗುರು ಪೂರ್ಣಿಮೆಯಂದು ರಾಘವೇಂದ್ರ ಸ್ವಾಮಿಗಳ ಪೂಜೆ ಮಾಡುವ ಸರಳ ವಿಧಾನ

ಪೂರ್ವ ಸಿದ್ಧತೆ: ಬೆಳಿಗ್ಗೆ ಬೇಗ ಎದ್ದು ಮಂಗಳಸ್ನಾನ ಮಾಡಿ, ಹಳದಿ ಬಣ್ಣದ ವಸ್ತ್ರಗಳನ್ನು ಧರಿಸುವುದು ಶ್ರೇಷ್ಠ (ಹಳದಿ ಬಣ್ಣ ಗುರು ಗ್ರಹಕ್ಕೆ ಹಾಗೂ ರಾಯರಿಗೆ ಪ್ರಿಯವಾದದ್ದು).

ಪೂಜಾ ಸ್ಥಳದ ಅಲಂಕಾರ: ಪೂಜಾ ಮಂಟಪದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ಭಾವಚಿತ್ರ ಅಥವಾ ಪ್ರತಿಮೆಯನ್ನು ಶುಚಿಗೊಳಿಸಿ, ತುಳಸಿ ದಳಗಳು ಹಾಗೂ ಹಳದಿ ಬಣ್ಣದ ಹೂವುಗಳಿಂದ (ಸೇವಂತಿಕೆ, ಕನಕಾಂಬರ) ಸುಂದರವಾಗಿ ಅಲಂಕರಿಸಿ.

ದೀಪಾರಾಧನೆ: ರಾಯರ ಮುಂದೆ ಹಸುವಿನ ತುಪ್ಪದ ದೀಪ ಮತ್ತು ಧೂಪವನ್ನು ಹಚ್ಚಿ.

ನೈವೇದ್ಯ: ರಾಯರಿಗೆ ಪ್ರಿಯವಾದ ರವೆ ಹಲ್ವಾ, ಪಾಯಸ, ಅಥವಾ ತುಪ್ಪದ ದೋಸೆ/ಅನ್ನವನ್ನು ನೈವೇದ್ಯವಾಗಿ ಸಮರ್ಪಿಸಬಹುದು. ಹಣ್ಣು-ಹಂಪಲು ಹಾಗೂ ತಂಬೂಲವನ್ನು ಇಡಿ.

ಸ್ತೋತ್ರ ಪಠಣೆ: ಪೂಜೆಯ ಸಮಯದಲ್ಲಿ ‘ಶ್ರೀ ರಾಘವೇಂದ್ರ ಸ್ತೋತ್ರ’ (ಪೂಜ್ಯಾಯ ರಾಘವೇಂದ್ರಾಯ…) ವನ್ನು 108 ಬಾರಿ ಅಥವಾ ಕನಿಷ್ಠ 9 ಬಾರಿಯಾದರೂ ಶ್ರದ್ಧೆಯಿಂದ ಜಪಿಸಿ.

ಮಹಾ ಮಂಗಳಾರತಿ: ಕೊನೆಯಲ್ಲಿ ರಾಯರಿಗೆ ಮಹಾ ಮಂಗಳಾರತಿ ಬೆಳಗಿ, ತೀರ್ಥ ಪ್ರಸಾದವನ್ನು ಸ್ವೀಕರಿಸಿ.

ಅಧ್ಯಾತ್ಮ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಂಪುಟ ವಿಸ್ತರಣೆ ಕಸರತ್ತು ಕ್ಲೈಮ್ಯಾಕ್ಸ್ ಹಂತಕ್ಕೆ: ಅಂತಿಮ ಪಟ್ಟಿಗೆ ಇನ್ನೊಂದೆಜ್ಜೆ ಬಾಕಿ – Kannada News | Karnataka cabinet expansion Meeting Ends With KC Venugopal, final discussion By Rahul Gandhi On July 29

ನವದೆಹಲಿ, (ಜುಲೈ 28): ಕರ್ನಾಟಕ ಸಂಪುಟ ವಿಸ್ತರಣೆಯ (Karnataka Cabinet Expansion)  ಜಟಾಪಟಿ ಕೊನೇ ಹಂತಕ್ಕೆ ಬಂದು ನಿಂತಿದೆ. ಯಾವಾಗ ಸಂಪುಟ ವಿಸ್ತರಣೆ ಎಂಬ ಪ್ರಶ್ನೆಗೆ ಉತ್ತರ ಸಿಗುವ ಸಮಯ ಬಂದಿದೆ. ಯಾಕಂದ್ರೆ, ದೆಹಲಿಯ (New Delhi) ಕಾಂಗ್ರೆಸ್ ಹೈಕಮಾಂಡ್, 2ನೇ ಹಂತದ ಚರ್ಚೆ ನಡೆದಿದ್ದು, ಅಂತಿಮ ಮಾತುಕತೆಯೊಂದೇ ಬಾಕಿ ಇದೆ. ಹೌದು.. ಎಲ್ಲವೂ ಅಂದುಕೊಂಡಂತೆ ಇಂದು (ಜುಲೈ 28) ದೆಹಲಿಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ನಿವಾಸದಲ್ಲಿ ಮಹತ್ವದ ಸಭೆ ನಡೆದಿದ್ದು, ಮೊದಲು ವೇಣುಗೋಪಾಲ್ ಅವರು ರಾಜ್ಯ ನಾಯಕರ ಜತೆ ಪ್ರತ್ಯೇಕ ಸಭೆ ಮಾಡಿದ್ದಾರೆ. ಆದರೆ, ಅಂತಿಮವಾಗಿ ನಾಳೆ (ಜುಲೈ 29) ರಾಹುಲ್ ಗಾಂಧಿ ಜೊತೆ ಅಂತಿಮ ಸುತ್ತಿನ ಮಾತುಕತೆ ನಡೆಯಲಿದ್ದು, ಈ ವೇಳೆ ಸಂಪುಟ ಸೇರುವ ನಾಯಕರ 2ನೇ ಪಟ್ಟಿಗೆ ಅಂತಿಮ ಮುದ್ರೆ ಬೀಳಲಿದೆ.

ರಾಜ್ಯ ನಾಯಕರ ಜೊತೆ ವೇಣುಗೋಪಾಲ್ ಸುದೀರ್ಘ ಚರ್ಚೆ

ಹೌದು….. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಅವರು ಇಂದು (ಜುಲೈ 28) ದೆಹಲಿಯ ತಮ್ಮ ನಿವಾಸದಲ್ಲಿ ಕರ್ನಾಟಕ ಕಾಂಗ್ರೆಸ್ ನಾಯಕರ ಜತೆ ಸಭೆ ನಡೆಸಿದ್ದಾರೆ.  ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಹಾಗೂ ಸಿಎಂ ಡಿಕೆ ಶಿವಕುಮಾರ್ ಜೊತೆ ಪ್ರತ್ಯೇಕ ಸಭೆ ನಡೆಸಿದ್ದು, ಈ ವೇಳೆ ಅವರ ಪಟ್ಟಿಯನ್ನು ಸ್ವೀಕರಿಸಿ ಮಾತುಕತೆ ನಡೆಸಿದ್ದಾರೆ. ಕೊನೆಗೆ ಎಲ್ಲಾ ನಾಯಕರು ಒಟ್ಟಿಗೆ ಸೇರಿ ಮತ್ತೊಂದು ಸುತ್ತಿನ ಚರ್ಚೆ ಮಾಡಿದ್ದಾರೆ. ಆದ್ರೆ,  ಅಂತಿಮ ಮಾತುಕತೆ ನಾಳೆ (ಜುಲೈ29) ರಾಹುಲ್ ಗಾಂಧಿ ಜೊತೆಗಿನ ಸಭೆ ಬಳಿಕ ಪಟ್ಟಿಗೆ ಅಂತಿಮ ಮುದ್ರೆ ಬೀಳಲಿದೆ.

ಇದನ್ನೂ ನೋಡಿ: ಕಾವೇರಿ ಸಂಧಾನ ಸೂತ್ರಕ್ಕೆ‌ ದಿನಾಂಕ ಫಿಕ್ಸ್: ಆ.3ರಂದು ಕರ್ನಾಟಕ-ತಮಿಳುನಾಡು ಸಿಎಂ ಸಭೆ ನಿಗದಿ

ವೇಣುಗೋಪಾಲ್ ಸಭೆಯಲ್ಲಿ ಏನೇನಾಯ್ತು?

ವೇಣುಗೋಪಾಲ್ ನಿವಾಸದಲ್ಲಿ ರಾಜ್ಯ ನಾಯಕರ ಸಭೆಯಲ್ಲಿ ಸಚಿವ ಸ್ಥಾನದ ಮಾನದಂಡಗಳ ಬಗ್ಗೆ ಮಾತುಕತೆ ನಡೆದಿದೆ. ಕೆಲ ಸಮಾಜಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಹೊಸ ಮುಖಗಳಿಲ್ಲ. ಹೀಗಾಗಿ ಅಂತಹ ಸಮುದಾಯಗಳಿಗೆ ಪ್ರಾಧಾನ್ಯತೆ ನೀಡುವ ಬಗ್ಗೆ ಚರ್ಚೆ ಆಗಿದೆ. ಹಿರಿತನದ ಮೂಲಕವೇ ಪ್ರಾಧಾನ್ಯತೆ ನೀಡಬೇಕೆಂಬ ಬಗ್ಗೆಯೂ ಮಾತುಕತೆಗಳಾಗಿದ್ದು, ಜೊತೆ ಸಭೆಯಲ್ಲಿ ಜಿಲ್ಲಾವಾರು ಹೆಸರುಗಳು ಕೂಡ ಪ್ರಸ್ತಾಪವಾಗಿದೆ. ಈ ಎಲ್ಲಾ ಮಾನದಂಡಗಳ ಬಗ್ಗೆ ಚರ್ಚೆ ಆಗಿದ್ದು, ಇದೇ ಅಂಶಗಳೊಂದಿಗೆ ರಾಹುಲ್ ಗಾಂಧಿ ಸಹ ಅಂತಿಮ ಸಭೆ ಮಾಡಿ ನೂತನ ಸಚಿವ ಪಟ್ಟಿ ಸಿದ್ಧಪಡಿಸಲಿದ್ದಾರೆ.

ರಾಹುಲ್ ಗಾಂಧಿ ಜತೆ ಅಂತಿಮ ಸಭೆ

ಸಚಿವ ಸಂಪುಟ ಸಂಬಂಧ ಸಿಎಂ ಡಿಕೆ ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ, ಕೆಸಿಸಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಕಳೆದು ಎರಡು ದಿನಗಳಿಂದ ದೆಹಲಿಯಲ್ಲೇ ಠಿಕಾಣಿ ಹೂಡಿದ್ದು, ಇಂದು ಸೆಮಿಫೈನಲ್​​​ ಪಂದ್ಯದಂತೆ ಕೆಸಿ ವೇಣುಗೋಪಾಲ್ ಜೊತೆ ಸಭೆ ಆಗಿದೆ. ಈಗ ಇನ್ನೇನಿದ್ದರೂ ಫೈನಲ್​​ ಬಾಕಿ ಇದ್ದು, ಫೈನಲ್ ಮಾತುಕತೆ ನಾಳೆ (ಜುಲೈ 29) ರಾಹುಲ್ ಗಾಂಧಿಯೊಂದಿಗೆ ನಡೆಯಲಿದೆ.  ಆದರೆ, ಬುಧವಾರ ಸಂಸತ್​​ನಲ್ಲಿ ನೀಟ್​ ವಿಚಾರವಾಗಿ ವಿಪಕ್ಷ ನಾಯಕ ರಾಹುಲ್ ಗಾಂಧಿ ಮಾತನಾಡಲಿದ್ದಾರೆ. ಹೀಗಾಗಿ ಬೆಳಗ್ಗೆಯಿಂದ ಮಧ್ಯಾಹ್ನವರೆಗೂ ರಾಹುಲ್ ಸಂಸತ್​​​​ನಲ್ಲಿ ಬ್ಯುಸಿಯಾಗಿದ್ದು, ನಾಳೆ (ಜುಲೈ 29) ಸಂಜೆ 4 ಗಂಟೆ ಮೇಲೆ ದೆಹಲಿಯ 10 ಜನಪತ್​​ನ ರಾಹುಲ್ ನಿವಾಸದಲ್ಲಿ ಸಭೆ ನಡೆಯಲಿದೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಬಿ.ಕೆ.ಹರಿಪ್ರಸಾದ್, ಸಿದ್ದರಾಮಯ್ಯ ಜೊತೆ ರಾಹುಲ್ ಮಾತುಕತೆ ಮಾಡಿ ನೂತನ ಸಚಿವ ಪಟ್ಟಿಗೆ ಅಂತಿಮ ಮುದ್ರೆ ಒತ್ತಲಿದ್ದಾರೆ. ಇದರಿಂದ ಯಾರೆಲ್ಲಾ ಡಿಕೆಶಿ ಕ್ಯಾಬಿನೆಟ್ ಸೇರುತ್ತಾರೆ ಎನ್ನುವುದು ಮಂಗಳವಾರ ಸಂಜೆ ಮೇಲೆ ಗೊತ್ತಾಗಲಿದೆ.

ಜು.30ರಂದು ಪ್ರಮಾಣವಚನ ಸಾಧ್ಯತೆ

ರಾಜ್ಯ ಸಂಪುಟ ವಿಸ್ತರಣೆ ಕಸರತ್ತು ದೆಹಲಿಯಲ್ಲಿ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದಿದ್ದು, ರಾಹುಲ್ ಗಾಂಧಿ ಮುದ್ದೆ ಬೀಳುವುದೊಂದೇ ಬಾಕಿ ಇದ್ದು, ನಾಳೆ ರಾಹುಲ್ ಗಾಂಧಿ ಜೊತೆ ಅಂತಿಮ ಸಭೆ ಸಹ ಫಿಕ್ಸ್ ಆಗಿದೆ. ಹೀಗಾಗಿ ಇತ್ತ ನೂತನ ಸಚಿವ ಪ್ರಮಾಣವಚನಕ್ಕೆ ಸಿದ್ಧತೆಗಳು ಆರಂಭವಾಗಿವೆ. ಜುಲೈ 30ರಂದು ಸಂಜೆ 5 ಗಂಟೆಗೆ ನೂತನ ಪ್ರಮಾಣವಚನ ಕಾರ್ಯಕ್ರಮ ನಡೆಯುವ ಸಾಧ್ಯತೆ ಇದೆ..  ಯಾಕಂದ್ರೆ, ಮುಖ್ಯಮಂತ್ರಿ ಕಚೇರಿಯಿಂದ ಲೋಕಭವನಕ್ಕೆ ಮೌಖಿಕ ಮಾಹಿತಿ ಹೋಗಿದೆ. ಹೀಗಾಗಿ ರ ಲೋಕಭವನದಲ್ಲಿ ಸಿದ್ಧತೆಗಳು ನಡೆದಿವೆ.

ಹಲವು ಶಾಸಕರಿಗೆ ಢವ ಢವ

ಕೊನೆಯ ಎರಡು ವರ್ಷವಾದರೂ ಡಿಕೆ ಶಿವಕುಮಾರ್ ಸಂಪುಟದಲ್ಲಿ ಸಚಿವರಾಗಬೇಕೆಂದು ಸಾಕಷ್ಟು ಶಾಸಕರು ತುದಿಗಾಲಲ್ಲಿ ನಿಂತಿದ್ದಾರೆ. ತಮಗೂ ಸಚಿವ ಸ್ಥಾನಬೇಕೆಂದು ಹಲವು ಶಾಸಕ ಈಗಾಗಲೇ ಕಳೆದೊಂದು ವಾರದಿಂದ ದೆಹಲಿಯಲ್ಲೇ ಬೀಡುಬಿಟ್ಟಿದ್ದು, ಹೈಕಮಾಂಡ್ ನಾಯಕರ ಮೇಲೆ ಒತ್ತಡ ಹೇರುತ್ತಿದ್ದಾರೆ. ಆದ್ರೆ, ಹೈಕಮಾಂಡ್ ಯಾರಿಗೆ ಮಣೆ ಹಾಕುತ್ತೆ ಎನ್ನುವುದೇ ತೀವ್ರ ಕುತೂಹಲ ಮೂಡಿಸಿದ್ದು, ಬುಧವಾರ ರಾತ್ರಿ ವೇಳೆಗೆ ಯಾರಿಗೆ ಮಂತ್ರಿಪಟ್ಟು ಯಾರಿಗಿಲ್ಲ ಎನ್ನುವುದು ಒಂದು ಹಂತದ ಮಟ್ಟಿಗೆ ಗೊತ್ತಾಗಲಿದೆ.  ಇದರಿಂದ ಆ ಪಟ್ಟಿಯಲ್ಲಿ ತಮ್ಮದು ಹೆಸರು ಇರುತ್ತೋ ಇಲ್ವಾ ಎನ್ನುವ ಟೆನ್ಷನ್​​​ನಲ್ಲಿ ಶಾಸಕರಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 10:35 pm, Tue, 28 July 26

Source link

Exit mobile version