Headlines

ಅತ್ತ ಗ್ಯಾಸ್​​ಗಾಗಿ ಆಟೋ ಚಾಲಕರ ಪರದಾಟ: ಇತ್ತ ಐಪಿಎಲ್ ಟಿಕೆಟ್​ಗಾಗಿ ಕ್ಯೂನಿಂತ ಶಾಸಕರ ಪಿಎಗಳು

ಬೆಂಗಳೂರು, ಏಪ್ರಿಲ್​ 04: ಗಲ್ಫ್​​​ ರಾಷ್ಟ್ರಗಳಲ್ಲಿನ ಯುದ್ಧದಿಂದ ಜನರು ಸಮಸ್ಯೆ ಅನುಭವಿಸುತ್ತಿದ್ದಾರೆ. ಇತ್ತ ಗ್ಯಾಸ್​ಗಾಗಿ ಬಂಕ್​ಗಳ ಮುಂದೆ ಆಟೋ ಚಾಲಕರು ಕ್ಯೂನಿಂತಿದ್ದಾರೆ. ಈ ಮಧ್ಯೆ ವಿಧಾನಸೌಧದಲ್ಲಿ ಐಪಿಎಲ್ ಟಿಕೆಟ್​ಗಾಗಿ ಶಾಸಕರ ಪಿಎಗಳು ಕ್ಯೂನಿಂತಿದ್ದಾರೆ. ನಾಳೆ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್​ಸಿಬಿ ಮತ್ತು ಸಿಎಸ್​ಕೆ ನಡುವೆ ಪಂದ್ಯ ನಡೆಯಲಿದೆ. ಹೀಗಾಗಿ ವಿಧಾನಸೌಧದ ಸ್ಪೀಕರ್ ಆಪ್ತ ಕಾರ್ಯದರ್ಶಿ ಮಹೇಶ್ ಕರ್ಜಗಿ ಕೊಠಡಿಯಲ್ಲಿ ಪ್ರತಿಯೊಬ್ಬ ಶಾಸಕರಿಗೆ ತಲಾ 3 ಐಪಿಎಲ್ ಟಿಕೆಟ್ ವಿತರಣೆ ಮಾಡಲಾಗಿದೆ. ಸರತಿಸಾಲಿನಲ್ಲಿ ನಿಂತು ಶಾಸಕರ ಪಿಎಗಳು ಟಿಕೆಟ್ ಪಡೆದುಕೊಂಡಿದ್ದಾರೆ….

Read More

ಹಾಸನ: ಮಹಿಳೆಯ ಬಲಿ ಪಡೆದಿದ್ದ ಕಾಡಾನೆ ಕೊನೆಗೂ ಸೆರೆ – Kannada News | Rogue Elephant That Killed Woman Captured After Four Hour Operation in Hassan

ಹಾಸನ, ಜನವರಿ 17: ಹಾಸನದ ಸಕಲೇಶಪುರದ ಗ್ರಾಮದಲ್ಲಿ ಮಹಿಳೆಯ ಬಲಿ ಪಡೆದಿದ್ದ, ಜನರಿಗೆ ತೊಂದರೆ ನೀಡುತ್ತಿದ್ದ ಪುಂಡಾನೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿ ಸೆರೆ ಹಿಡಿದಿದ್ದಾರೆ. ಬೇಲೂರು ತಾಲೂಕಿನ ಬೆಳ್ಳಾವರ ಕಾಫಿ ತೋಟದಲ್ಲಿ ನಾಲ್ಕು ಗಂಟೆಗಳ ಸುದೀರ್ಘ ಕಾರ್ಯಾಚರಣೆ ನಡೆಸಿ ಈ ಆನೆಯನ್ನು ಹಿಡಿಯಲಾಗಿದೆ. ಜನವರಿ 13ರಂದು ಮೊಗಲಿಯಲ್ಲಿ ಓರ್ವ ಮಹಿಳೆಯನ್ನು ಬಲಿತೆಗೆದುಕೊಂಡಿದ್ದ ಈ ಕಾಡಾನೆ ಸೆರೆಯಿಂದಾಗಿ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ. ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Source link

Read More

ಚಾಮರಾಜನಗರ: ಅಪರಿಚಿತ ವಾಹನ ಡಿಕ್ಕಿ; ಹಿಟ್ ಆ್ಯಂಡ್ ರನ್​​ಗೆ ಬೈಕ್ ಸವಾರರಿಬ್ಬರು ಸಾವು – Kannada News | Hit and Run: 2 Bike Riders Die in Konanakere Tragedy; Police Hunt Driver

ಪ್ರಾತಿನಿಧಿಕ ಚಿತ್ರImage Credit source: Getty images ಚಾಮರಾಜನಗರ, ಆಗಸ್ಟ್​​ 09: ಜಿಲ್ಲೆಯ ಹನೂರು ತಾಲೂಕಿನ ಕೋಣನಕೆರೆ ಗ್ರಾಮದ ಬಳಿ ಭಾನುವಾರ ಭೀಕರ ಹಿಟ್ ಆ್ಯಂಡ್ ರನ್ (Hit and Run) ಸಂಭವಿಸಿದ್ದು, ಅಪರಿಚಿತ ವಾಹನ ಡಿಕ್ಕಿಯಾಗಿ ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ದುರ್ಮರಣ (death) ಹೊಂದಿರುವ ಘಟನೆ ನಡೆದಿದೆ. ಯುವರಾಜ್(50) ಮತ್ತು ಶಶಾಂಕ್(25) ಮೃತ ಬೈಕ್ ಸವಾರರು. ರಾಮಾಪುರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಡೆದಿದ್ದೇನು? ಹನೂರು ತಾಲೂಕಿನ ಮಾರ್ಟಳ್ಳಿ ಗ್ರಾಮದ ನಿವಾಸಿ ಯುವರಾಜ್ (50)…

Read More

ನಾಯಕರೊಂದಿಗೆ ಹಾಸಿಗೆ ಹಂಚಿಕೊಳ್ಳದೆ ಮಹಿಳೆಯರು ರಾಜಕೀಯಕ್ಕೆ ಬರುವುದು ಅಸಾಧ್ಯ; ನಾಲಿಗೆ ಹರಿಬಿಟ್ಟ ಪಪ್ಪು ಯಾದವ್ – Kannada News | Women cannot enter politics without entering Male Leader Room Pappu Yadav controversial remarks

ನವದೆಹಲಿ, ಏಪ್ರಿಲ್ 21: ಸ್ವತಂತ್ರವಾಗಿ ಸ್ಪರ್ಧಿಸಿ ಬಿಹಾರದ ಸಂಸದರಾಗಿರುವ ರಾಜೇಶ್ ರಂಜನ್ ಅಲಿಯಾಸ್ ಪಪ್ಪು ಯಾದವ್ (Pappu Yadav) ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಭಾರೀ ಸುದ್ದಿಯಲ್ಲಿದ್ದಾರೆ. ಮಹಿಳೆಯರು ರಾಜಕೀಯಕ್ಕೆ ಬರುವುದು ಬಹಳ ಕಷ್ಟ. ಶೇ. 90ರಷ್ಟು ಮಹಿಳೆಯರು ಹಿರಿಯ ನಾಯಕರ ರೂಂನೊಳಗೆ ಹೋಗಿ ಅವರೊಂದಿಗೆ ಮಂಚ ಹಂಚಿಕೊಳ್ಳದೆ ರಾಜಕಾರಣಿಯಾಗಲು ಸಾಧ್ಯವಿಲ್ಲ. ಬಹುತೇಕ ಮಹಿಳೆಯರು ಹಿರಿಯರ ರಾಜಕಾರಣಿಗಳೊಂದಿಗೆ ಲೈಂಗಿಕತೆಯ ರಾಜಿ ಮಾಡಿಕೊಂಡಿರುತ್ತಾರೆ ಎಂದು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಪಪ್ಪು ಯಾದವ್ ಅವರಿಗೆ ಮಹಿಳಾ ಆಯೋಗ ನೋಟಿಸ್ ಜಾರಿ…

Read More

Bangalore Rain: ಬೆಂಗಳೂರಿನ ಹಲವೆಡೆ ಗುಡುಗು ಸಹಿತ ಧಾರಾಕಾರ ಮಳೆ; ಜನರು ಪರದಾಟ – Kannada News | Bangalore rain Severe Hailstorm Lashes Bengaluru; Traffic Gridlock Reported

ಬೆಂಗಳೂರು, ಏಪ್ರಿಲ್​ 29: ಹಲವು ದಿನಗಳಿಂದ ಸತತ ಬಿಸಿಲ ಝಳಕ್ಕೆ ಕಂಗಾಲಾಗಿದ್ದ ಸಿಲಿಕಾನ್ ಸಿಟಿ ಜನತೆಗೆ ವರುಣ ಶಾಕ್​ ನೀಡಿದೆ. ಸಂಜೆಯಾಗುತ್ತಿದ್ದಂತೆ ನಗರದಾದ್ಯಂತ ಬಿರುಗಾಳಿ ಸಮೇತ ದಿಢೀರ್ ಧಾರಾಕಾರ ಮಳೆ ಸುರಿದಿದ್ದು, ವಾಹನ ಸವಾರರು ಪರದಾಡುವಂತಾಗಿದೆ. ಏಲ್ಲೆಲ್ಲಿ ಮಳೆ? ಮೆಜೆಸ್ಟಿಕ್, ಮಾರುಕಟ್ಟೆ (ಮಾರ್ಕೆಟ್), ಶಾಂತಿನಗರ, ರಿಚ್ಮಂಡ್ ಸರ್ಕಲ್ ಹಾಗೂ ಕೋರಮಂಗಲ ಸೇರಿದಂತೆ ಹಲವಡೆ ಭಾರಿ ಮಳೆ ಸುರಿಯುತ್ತಿದೆ. ಮತ್ತಷ್ಟು ಮಾಹಿತಿ ಅಪ್​ಡೇಟ್ ಆಗಲಿದೆ. Source link

Read More

ಮನೆಯಲ್ಲಿ ಪಿಎನ್​ಜಿ ಕನೆಕ್ಷನ್ ಇದ್ದರೂ ಬಳಸದಿದ್ದರೆ ಎಲ್​ಪಿಜಿ ಪೂರೈಕೆ ಸ್ಥಗಿತ; ಸರ್ಕಾರದಿಂದ ಎಚ್ಚರಿಕೆ

ನವದೆಹಲಿ, ಮಾರ್ಚ್ 25: ಕೇಂದ್ರ ಸರ್ಕಾರ ಅಗತ್ಯವಿರುವಷ್ಟು ಇಂಧನ ಹಾಗೂ ಎಲ್​ಪಿಜಿ ಸಂಗ್ರಹವಿದೆ ಎಂದು ಹೇಳಿಕೆ ನೀಡುತ್ತಿದ್ದರೂ ಎಲ್​ಪಿಜಿ (LPG) ಬುಕ್ ಮಾಡಿದ ಹಲವು ದಿನಗಳ ಬಳಿಕ ಸಿಲಿಂಡರ್​ಗಳು ಸಿಗುತ್ತಿವೆ. ಇದೆಲ್ಲದರ ನಡುವೆ ಸರ್ಕಾರ ಮಹತ್ವದ ಆದೇಶವೊಂದನ್ನು ಹೊರಡಿಸಿದೆ. ಒಂದುವೇಳೆ ನಿಮ್ಮ ಮನೆಯಲ್ಲಿ ಪೈಪ್ಡ್ ಗ್ಯಾಸ್ (ಪಿಎನ್​ಜಿ) ಕನೆಕ್ಷನ್ ಇದ್ದರೂ ನೀವು ಅದನ್ನು ಬಳಸದಿದ್ದರೆ ನಿಮ್ಮ ಎಲ್​ಪಿಜಿ ಪೂರೈಕೆ ಕೂಡ ಕಟ್ ಆಗುತ್ತದೆ. ಪಿಎನ್​ಜಿ ಹಾಗೂ ಎಲ್​ಪಿಜಿ ಎರಡನ್ನೂ ಬಳಸುವಂತಿಲ್ಲ ಎಂದು ಸರ್ಕಾರ ಎಚ್ಚರಿಕೆ ನೀಡಿದೆ. ನಿಮ್ಮ…

Read More

ರೀಲ್ಸ್​​ಗಾಗಿ ರಸ್ತೆಯಲ್ಲಿ ಸ್ಪೋಟ: ಬಿಗ್​​ಬಾಸ್ ರಜತ್ ವಿರುದ್ಧ ಪ್ರಕರಣ ದಾಖಲು – Kannada News | Instagram Reels: Case registered against Bigg Boss Rajat

ಬಿಗ್​​ಬಾಸ್ ಮಾಜಿ ಸ್ಪರ್ಧಿ, ನಟ ರಜತ್ (Rajath) ವಿರುದ್ಧ ಮತ್ತೊಂದು ಪ್ರಕರಣ ದಾಖಲಾಗಿದೆ. ಈ ಹಿಂದೆ ಒಮ್ಮೆ ಮಚ್ಚು ಹಿಡಿದು ರೀಲ್ಸ್ ಮಾಡಿ ಸಂಕಷ್ಟಕ್ಕೆ ಸಿಲುಕಿದ್ದ ರಜತ್ ವಿರುದ್ಧ ಈಗ ಮತ್ತೊಮ್ಮೆ ಅದೇ ರೀತಿಯ ಕೇಸು ದಾಖಲಾಗಿದೆ. ಈ ಬಾರಿಯೂ ಸಹ ರಜತ್ ಅವರು ರೀಲ್ಸ್ ಕಾರಣದಿಂದಾಗಿಯೇ ಇಕ್ಕಟ್ಟಿಗೆ ಸಿಲುಕಿದ್ದಾರೆ. ಕೆಲ ದಿನಗಳ ಹಿಂದಷ್ಟೆ ರಜತ್ ಅವರು ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್ ಒಂದನ್ನು ಅಪ್​ಲೋಡ್ ಮಾಡಿದ್ದರು. ಬೈಕ್​​ನಲ್ಲಿ ಸ್ಟೈಲ್ ಆಗಿ ಬರುವ ರಜತ್ ಹಿಂದೆ ಪೆಟ್ರೋಲ್ ಬಾಂಬ್…

Read More

ಡಿಕೆ ಶಿವಕುಮಾರ್ ಆಪ್ತ, ಮಾಜಿ ಎಂಎಲ್‌ಸಿ ಕರಿಯಣ್ಣ ಸಂಗಟಿ ನಿಧನ

ಕೊಪ್ಪಳ,ಮಾರ್ಚ್​ 23: ಮಾಜಿ ವಿಧಾನ ಪರಿಷತ್ ಸದಸ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಅವರ ಆಪ್ತರಾಗಿದ್ದ ಕರಿಯಣ್ಣ ಸಂಗಟಿ (60) ಅನಾರೋಗ್ಯದಿಂದ ನಿಧನರಾಗಿದ್ದಾರೆ. ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ. ಬಹು ಅಂಗಾಗ ವೈಫಲ್ಯದಿಂದ ಬಳಲುತ್ತಿದ್ದ ಸಂಗಟಿ ಕರಿಯಣ್ಣ ಸಂಗಟಿ ಅವರು ರಾಜಕೀಯವಾಗಿ ಸಕ್ರಿಯರಾಗಿದ್ದು, ಎರಡು ಬಾರಿ ಕೊಪ್ಪಳ ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಸರಳ ವ್ಯಕ್ತಿತ್ವ ಮತ್ತು…

Read More

ಗುಡ್​ ನ್ಯೂಸ್: ಏ.5ರಂದು ಬೆಂಗಳೂರು ನಮ್ಮ ಮೆಟ್ರೋ ಸಂಚಾರ ಮಧ್ಯರಾತ್ರಿ ವರೆಗೂ ವಿಸ್ತರಣೆ

ಬೆಂಗಳೂರು, ಏಪ್ರಿಲ್ 02): ಇಂಡಿಯನ್ ಪ್ರೀಮಿಯರ್ ಲೀಗ್(IPL 2026) ಮ್ಯಾಚ್ ಹಿನ್ನೆಲೆಯಲ್ಲಿ ಬೆಂಗಳೂರು ನಮ್ಮ ಮೆಟ್ರೋ (Bengaluru Namma Metro) ಸೇವೆ ಮತ್ತೆ ವಿಸ್ತರಣೆ ಮಾಡಲಾಗಿದೆ. ಮಾರ್ಚ್ 28ರಂದು ಬೆಂಗಳೂರಿನಲ್ಲಿ ನಡೆದಿದ್ದ ಐಪಿಎಲ್ ಉದ್ಘಾಟನಾ ಪಂದ್ಯದ ಸಂದರ್ಭದಲ್ಲೂ ಸಹ ಸಾರ್ವಜನಿಕರ ಅನುಕೂಲಕ್ಕಾಗಿ ಮೆಟ್ರೋ ಸಮಯ ವಿಸ್ತರಣೆ ಮಾಡಲಾಗಿತ್ತು. ಇದೀಗ ಏಪ್ರಿಲ್ 5ರಂದು ಆರ್​​ಸಿಬಿ ಹಾಗೂ ಚೆನ್ನೈ ಸೂಪರ್ ಕಿಂಗ್ಸ್  ಪಂದ್ಯ ಇರುವುದರಿಂದ ಅಂದು ಮೆಟ್ರೋ ಸಂಚಾರ ರಾತ್ರಿ 2 ಗಂಟೆವರೆಗೆ ಇರಲಿದೆ. ಪ್ರಯಾಣಿಕರಿಗೆ ಸುಲಭ ಹಾಗೂ ಸುರಕ್ಷಿತ…

Read More

ಅಮೆರಿಕ ಸುಪ್ರೀಂ ಕೋರ್ಟ್​ನಲ್ಲಿ ಟ್ರಂಪ್ ಸೊಕ್ಕು ಮುರಿಯಲು ಕಾರಣರಾಗಿದ್ದು ಭಾರತೀಯ ಮೂಲದ ವಕೀಲ! ಯಾರು ಗೊತ್ತೇ ಈ ನೀಲ್ ಕತ್ಯಾಲ್? – Kannada News | Who Is Neal Katyal? Indian Origin Lawyer Behind US Supreme Court Setback to Donald Trump on Tariffs

ವಾಷಿಂಗ್ಟನ್, ಫೆಬ್ರವರಿ 21: ಭಾರತವೂ ಸೇರಿದಂತೆ ವಿವಿಧ ದೇಶಗಳ ಉತ್ಪನ್ನಗಳ ಆಮದಿನ ಮೇಲೆ ಯದ್ವಾತದ್ವಾ ಸುಂಕ ವಿಧಿಸಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ಗೆ (Donald Trump) ಅಲ್ಲಿನ ಸುಪ್ರೀಂ ಕೋರ್ಟ್ ತೀರ್ಪು ಭಾರೀ ಹಿನ್ನಡೆ ಉಂಟುಮಾಡಿದೆ. ಅಮೆರಿಕ ಸುಪ್ರೀಂ ಕೋರ್ಟ್ ತೀರ್ಪಿನಿಂದ (US Supreme court) ಸದ್ಯದ ಮಟ್ಟಿಗೆ ಭಾರತಕ್ಕೂ ಪ್ರಯೋಜನವಾಗಿದೆ. ಅಂದಹಾಗೆ, ಟ್ರಂಪ್ ಸೊಕ್ಕುಮುರಿಯುವಂತಹ ತೀರ್ಪು ಬರುವುದಕ್ಕೆ ಕಾರಣರಾಗಿದ್ದು ಕೂಡ ಭಾರತೀಯ ಮೂಲದವರೇ! ಸುಪ್ರೀಂ ಕೋರ್ಟ್​​ಮಲ್ಲಿ 6-3 ಅನುಪಾತದಲ್ಲಿ ಪ್ರಕಟವಾದ ತೀರ್ಪು ಅಮೆರಿಕದ ಹಾಗೂ ಜಾಗತಿಕ…

Read More