Headlines

‘ಬಟ್ವಾರಾ 1947’ ಟ್ರೇಲರ್: ಹಿಂದೂ-ಮುಸ್ಲಿಂ ಸೌಹಾರ್ದತೆಯ ಕಥೆಯಲ್ಲಿ ಸನ್ನಿ ಡಿಯೋಲ್ ಅಬ್ಬರ – Kannada News | Sunny Deol Batwara 1947 Movie Trailer Film Story CBFC A Certificate

ಬಾಲಿವುಡ್ ಹಿರಿಯ ನಟ ಸನ್ನಿ ಡಿಯೋಲ್ (Sunny Deol) ಅಭಿನಯದ ಬಹುನಿರೀಕ್ಷಿತ ‘ಬಟ್ವಾರಾ 1947’ (Batwara 1947) ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. 1947ರ ಭಾರತ-ಪಾಕಿಸ್ತಾನ ವಿಭಜನೆಯ ಭೀಕರ ಹಿನ್ನೆಲೆಯಲ್ಲಿ ಸಾಗುವ ಈ ಚಿತ್ರದ ಟ್ರೇಲರ್, ಸೌಹಾರ್ದತೆ ಮತ್ತು ಮಾನವೀಯತೆಯ ಸಂದೇಶದೊಂದಿಗೆ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಆಗಸ್ಟ್ 14ರಂದು ಈ ಸಿನಿಮಾ ರಿಲೀಸ್ ಆಗಲಿದೆ. ಆಮಿರ್ ಖಾನ್ (Aamir Khan) ಅವರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಈಗ ಬಿಡುಗಡೆ ಆಗಿರುವ ಟ್ರೇಲರ್​ನಲ್ಲಿ ಸಿನಿಮಾದ ಕಥೆಯ ಬಗ್ಗೆ ವಿವರ…

Read More

ಬೆಂಗಳೂರಿನಲ್ಲಿ ಅಕ್ರಮ ಬಾಂಗ್ಲಾ ವಲಸಿಗರ ಮಾಹಿತಿ ನೀಡಿದವರ ಬಂಧನ, ಗೃಹ ಇಲಾಖೆಗೆ ಹೈಕೋರ್ಟ್ ತರಾಟೆ – Kannada News | Karnataka High court class to Police Department Over Arrested Who Gave Information Illegal Bangladeshi Immigrants

ಕರ್ನಾಟಕ ಉಚ್ಛ ನ್ಯಾಯಾಲಯImage Credit source: Karnataka High court website ಬೆಂಗಳೂರು, (ಜುಲೈ 28): ಬೆಂಗಳೂರಿನಲ್ಲಿ ನೆಲೆಸಿದ್ದ ಅಕ್ರಮ ಬಾಂಗ್ಲಾ ವಲಸಿಗರ (Illegal Bangladeshi Immigrants) ಮಾಹಿತಿ ನೀಡಿದ್ದ ವ್ಯಕ್ತಿಯನ್ನು ಬಂಧಿಸಿದ್ದ ಬೆಳ್ಳಂದೂರು ಪೊಲೀಸರ ಕ್ರಮಕ್ಕೆ ಹೈಕೋರ್ಟ್ (Karnataka High court)  ತೀವ್ರ ಅಸಮಾಧಾನ ಹೊರಹಾಕಿದೆ. ನಾಗೇಂದ್ರ ಎಂಬುವರು ಜುಲೈ 22ರ ರಾತ್ರಿ 11.30ಕ್ಕೆ ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ದೂರು ನೀಡಿದ್ದರು. ಬಳಿಕ ಅಂದೇ 11.45ಕ್ಕೆ ದೂರು ನೀಡಿದ್ದ ನಾಗೇಂದ್ರ ವಿರುದ್ಧವೇ ಕೇಸ್ ದಾಖಲಿಸಿ…

Read More

1695 ಬೆಲೆಯ ಎಲ್‌ಪಿಜಿ ಸಿಲಿಂಡರ್ 942 ರೂ.ಗೆ ಸಿಗುತ್ತಿರುವುದು ಹೇಗೆ? ಪೂರ್ತಿ ವಿವರ ಇಲ್ಲಿದೆ – Kannada News | How is an LPG cylinder priced at Rs 1,695 available for Rs 942? Here are the complete details

ನವದೆಹಲಿ, ಜುಲೈ 28: ಅಡುಗೆ ಅನಿಲ (ಎಲ್‌ಪಿಜಿ) ಬೆಲೆ ಏರಿಕೆಯ ಸುದ್ದಿಗಳು ಸಹಜವಾಗಿಯೇ ಜನರಲ್ಲಿ ಕಳವಳವನ್ನುಂಟುಮಾಡುತ್ತವೆ. ಪ್ರತಿ ತಿಂಗಳು ಲಕ್ಷಾಂತರ ಕುಟುಂಬಗಳ ಬಜೆಟ್ ಗ್ಯಾಸ್ ಸಿಲಿಂಡರ್ ಬೆಲೆಯನ್ನು ಅವಲಂಬಿಸಿರುತ್ತದೆ. ಆದರೆ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಗ್ಯಾಸ್ ತುಂಬಾ ದುಬಾರಿಯಾಗಿದ್ದರೂ ಭಾರತದಲ್ಲಿ ದೇಶೀಯ ಗ್ಯಾಸ್ ಸಿಲಿಂಡರ್‌ನ (LPG) ಬೆಲೆ ಇದ್ದಕ್ಕಿದ್ದಂತೆ ಏಕೆ ಹೆಚ್ಚಾಗುತ್ತಿಲ್ಲ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಆ ಬಗ್ಗೆ ಮಾಹಿತಿ ಇಲ್ಲಿದೆ. ದೇಶದ ಜನರಿಗೆ ಕೈಗೆಟುಕುವ ಬೆಲೆಯಲ್ಲಿ ದೇಶೀಯ ಎಲ್‌ಪಿಜಿ ಒದಗಿಸಲು ಕೇಂದ್ರ ಸರ್ಕಾರವು ನಿರಂತರವಾಗಿ ಸಾವಿರಾರು…

Read More

ಎಲ್ಲೆಲ್ಲೂ ಜೆನ್‌ ಝೀಗಳದ್ದೇ ಹವಾ; Gen-Z ಅಂದ್ರೆ ಯಾರು? ಈ ಪೀಳಿಗೆ ಏಕೆ ಇಷ್ಟೊಂದು ಪವರ್‌ಫುಲ್? – Kannada News | Who Is Gen Z generation? Why is this generation so powerful compared to others?

ಇಂದಿನ ಯುವ ಸಮೂಹ ಅದರಲ್ಲೂ ಈ ಜೆನ್‌ ಝೀ ಗಳು (Gen Z) ಸಮಾಜದಲ್ಲಿ ಸಾಕಷ್ಟು ಬದಲಾವಣೆಗಳನ್ನು ತರುತ್ತಿದ್ದಾರೆ. ತಮ್ಮ ಮೋಜು-ಮಸ್ತಿಯ ಹೊರತಾಗಿ ತಪ್ಪುಗಳು ನಡೆದಾಗ ಅದನ್ನು ಧೈರ್ಯದಿಂದ ಪ್ರಶ್ನಿಸುತ್ತಿದ್ದಾರೆ. ಸ್ವಾತಂತ್ರ್ಯ ಸಮಾನತೆ, ಹಕ್ಕುಗಳ ಬಗ್ಗೆ ಧ್ವನಿಯೆತ್ತಿ ಮಾತನಾಡುತ್ತಿದ್ದಾರೆ. ಹೌದು ಕೆಲವು ತಿಂಗಳುಗಳ ಹಿಂದೆಯಷ್ಟೇ ನೇಪಾಳದ ಜೆನ್‌ ಝೀಗಳು ಅಲ್ಲಿನ ಭ್ರಷ್ಟಾಚಾರ ಮತ್ತು ಹಳೆಯ ರಾಜಕೀಯ ವ್ಯವಸ್ಥೆಯ ವಿರುದ್ಧ ತಿರುಗಿ ಬಿದ್ದು, ಸರ್ಕಾರವನ್ನೇ ಬದಲಿಸಿದರು. ಇದನ್ನೇ ಪ್ರೇರಣೆಯನ್ನಾಗಿಟ್ಟುಕೊಂಡು ಭಾರತದಲ್ಲಿನ ಯುವ ಸಮುದಾಯ ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ…

Read More

Karnataka Weather Forecast: ಮೂರು ಜಿಲ್ಲೆಗಳಿಗೆ ನಾಳೆ ಆರೆಂಜ್​​ ಅಲರ್ಟ್​​; ಹೊನ್ನಾವರದಲ್ಲಿ ಅಧಿಕ ಮಳೆ – Kannada News | Karnataka Weather Update: IMD Issues Orange Alert for 3 Districts; Honnavar Records Highest Rainfall

ಬೆಂಗಳೂರು, ಜುಲೈ 28: ಕರ್ನಾಟಕದಲ್ಲಿ (Karnataka) ಮುಂಗಾರು ಮಳೆ (Rain) ಮತ್ತೆ ಚುರುಕು ಪಡೆದಿದ್ದು, ಹಲವು ಜಿಲ್ಲೆಗಳಲ್ಲಿ ಉತ್ತಮ ವರ್ಷಧಾರೆಯಾಗುತ್ತಿದೆ. ಈ ನಡುವೆ ರಾಜ್ಯಾದ್ಯ ಕೆಲವೆಡೆ ನಾಳೆ ಉತ್ತಮ ಮಳೆಯ ನಿರೀಕ್ಷೆ ಇದ್ದು ಕರಾವಳಿಯ ಎರಡು ಮತ್ತು ಮಲೆನಾಡು ಭಾಗದ ಒಟ್ಟು 3 ಜಿಲ್ಲೆಗಳಿಗೆ ಆರೆಂಜ್​​ ಅಲರ್ಟ್​​ ಘೋಷಿಸಲಾಗಿದೆ. ಉತ್ತರ ಮತ್ತು ದಕ್ಷಿಣ ಒಳನಾಡಿನಲ್ಲಿಯೂ ಮಳೆಯ ಸಾಧ್ಯತೆ ಅಂದಾಜಿಸಲಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಕರಾವಳಿ-ಮಲೆನಾಡಲ್ಲಿ ಮಳೆ ಅಬ್ಬರ 24-Hour #Rainfall #Forecast for #Karnataka:…

Read More

ಅತ್ತೆ ವಿರುದ್ಧ ಖುದ್ದು ವಾದ ಮಂಡಿಸಿದ ಸೊಸೆ: ದೋಸೆ ಅಕ್ಕಿ ಅನ್ನ, ಡೌ ಶ್ಯಾಂಪೂ ಒತ್ತಾಯ 498A ಅಡಿ ಕ್ರೌರ್ಯವೇ?; ಹೈಕೋರ್ಟ್ ತೀವ್ರ ಪ್ರಶ್ನೆ – Kannada News | 498A Cases: Karnataka HC Questions Definition of ‘Cruelty’ in Domestic Disputes

ಬೆಂಗಳೂರು ಜು. 28: ಅತ್ತೆಯ ವಿರುದ್ಧ ತಾವು ದಾಖಲಿಸಿದ್ದ 498ಎ ಮತ್ತು ವರದಕ್ಷಿಣೆ ಕಿರುಕುಳ ಪ್ರಕರಣಕ್ಕೆ ನೀಡಲಾಗಿದ್ದ ತಡೆಯಾಜ್ಞೆಯನ್ನು (Stay) ತೆರವುಗೊಳಿಸುವಂತೆ ಕೋರಿ ಸೊಸೆಯೊಬ್ಬರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್, “ಸಂಸಾರದ ದೈನಂದಿನ ಸಣ್ಣಪುಟ್ಟ ಸಮಸ್ಯೆಗಳನ್ನು ಅಪರಾಧ ಅಥವಾ 498ಎ ಅಡಿಯ ಕ್ರೌರ್ಯ ಎಂದು ವ್ಯಾಖ್ಯಾನಿಸಲು ಸಾಧ್ಯವೇ?” ಎಂದು ತೀವ್ರವಾಗಿ ಪ್ರಶ್ನಿಸಿದೆ. ಅರ್ಜಿದಾರ ಸೊಸೆಯು ಕೋರ್ಟ್‌ನಲ್ಲಿ ಖುದ್ದು ವಾದ ಮಂಡಿಸಿದ್ದು, ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠವು ಪ್ರಕರಣದ…

Read More

ವಿಶ್ವದ ಟಾಪ್ ಸಿನಿಮಾ ನಿರ್ದೇಶಕನಿಗೆ ಭಾರತದ ಈ ನಿರ್ದೇಶಕ ಅಚ್ಚು-ಮೆಚ್ಚು – Kannada News | Christopher Nolan Gives talks about India director Satyajit Ray

ಕ್ರಿಸ್ಟೊಫರ್ ನೋಲನ್, ಹಾಲಿವುಡ್​​ನ (Hollywood) ಸೂಪರ್ ಸ್ಟಾರ್ ನಟರನ್ನೂ ಮೀರಿಸಬಹುದಾದ ಅಪ್ಪಟ ಅಭಿಮಾನಿಗಳನ್ನು ಹೊಂದಿರುವ ನಿರ್ದೇಶಕ. ಹಾಲಿವುಡ್​​ನಲ್ಲಿ ಫ್ರಾಂಚೈಸ್ ಅಭಿಮಾನಿಗಳು ಬಹಳ ಹೆಚ್ಚು. ಅಂದರೆ ‘ಸ್ಪೈಡರ್ ಮ್ಯಾನ್’ ಅಭಿಮಾನಿಗಳು, ‘ಸೂಪರ್ ಮ್ಯಾನ್’ ಅಭಿಮಾನಿಗಳು, ‘ಮಿಷನ್ ಇಂಪಾಸಿಬಲ್’ ಅಭಿಮಾನಿಗಳು, ‘ಫಾಸ್ಟ್ ಆಂಡ್ ಫ್ಯೂರಿಯಸ್’ ಅಭಿಮಾನಿಗಳು ಹೀಗೆ. ಆದರೆ ಒಬ್ಬ ನಿರ್ದೇಶಕ ಯಾವುದೇ ರೀತಿಯ ಸಿನಿಮಾ ಮಾಡಿದರೂ ನೋಡಲು ವರ್ಷಗಳ ಗಟ್ಟಲೆ ಕಾದು ಕೂರುತ್ತಾರೆಂದರೆ ಅದು ಕ್ರಿಸ್ಟೊಫರ್ ನೋಲನ್​​ಗೆ ಮಾತ್ರ. ತಮ್ಮ ಭಿನ್ನ ನಿರೂಪಣಾ ಶೈಲಿಯಿಂದಲೇ ವಿಶ್ವದಾದ್ಯಂತ ನೂರಾರು ಕೋಟಿ…

Read More

ಪ್ರಲ್ಹಾದ್ ಜೋಶಿ ಕುರಿತು ಸದನದಲ್ಲಿ ಪ್ರಿಯಾಂಕಾ ಗಾಂಧಿ ವಿವಾದಾತ್ಮಕ ಹೇಳಿಕೆ; ಕ್ಷಮೆಯಾಚನೆಗೆ ಬಿಜೆಪಿ ಪಟ್ಟು – Kannada News | Priyanka Gandhis Controversial Remarks On Pralhad Joshi in Parliament Session BJP demands apology

ನವದೆಹಲಿ, ಜುಲೈ 28: ಲೋಕಸಭಾ ಅಧಿವೇಶನದಲ್ಲಿ ಇಂದು ಮಾತನಾಡಿದ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ (Priyanka Gandhi) ಕೇಂದ್ರ ಸರ್ಕಾರದ ನೂತನ ಶಿಕ್ಷಣ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ವಿರುದ್ಧ ವಾಗ್ದಾಳಿ ನಡೆಸಿದರು. “ಪ್ರಧಾನಿ ಮೋದಿ ಅವರು ಹೊಸ ಶಿಕ್ಷಣ ಸಚಿವರಾಗಿ ಪ್ರಲ್ಹಾದ್ ಜೋಶಿಯವರನ್ನು ಆಯ್ಕೆ ಮಾಡಿದ್ದಾರೆ. ಗರ್ಭಿಣಿ ಮಹಿಳೆಯ ಅತ್ಯಾಚಾರಿಗಳ ಬಿಡುಗಡೆಗೆ ಬೆಂಬಲ ವ್ಯಕ್ತಪಡಿಸಿದ್ದ ವ್ಯಕ್ತಿಯನ್ನು ಈ ಹುದ್ದೆಗೆ ನೇಮಿಸಲಾಗಿದೆ. ಈ ನಿರ್ಧಾರದ ಮೂಲಕ ಪ್ರಧಾನಿಯವರು ದೇಶದ ಕೋಟ್ಯಂತರ ಹೆಣ್ಣುಮಕ್ಕಳಿಗೆ ನೀಡಿದ ಸಂದೇಶವೇನು? ಆ…

Read More

ಅಲ್ಲು ಅರ್ಜುನ್ ಮಾಡಿದ್ದು ನೋಡಿ ಭೇಷ್ ಎಂದ ಅಭಿಮಾನಿಗಳು: ವಿಡಿಯೋ ನೋಡಿ – Kannada News | Allu Arjun removed shoes before taking the gift

ನಟ ಅಲ್ಲು ಅರ್ಜುನ್ (Allu Arjun) ತಮ್ಮ ಅಭಿಮಾನಿಗಳ ಸಮಾವೇಶದಲ್ಲಿ ಭಾಗಿ ಆಗಿದ್ದರು. ಎಎಎಫ್​​ಎ (ಅಲ್ಲು ಅರ್ಜುನ್ ಫ್ಯಾನ್ಸ್ ಅಸೋಸಿಯೇಷನ್) ವತಿಯಿಂದ ಈ ಸಮಾವೇಶ ಆಯೋಜಿಸಲಾಗಿತ್ತು. ನಟ ಅಲ್ಲು ಅರ್ಜುನ್ ಅವರು ಸಮಾವೇಶದಲ್ಲಿ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದರು. ತಮ್ಮ ಮುಂದಿನ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಈ ವೇಳೆ ಹಲವಾರು ಮಂದಿ ಅಲ್ಲು ಅರ್ಜುನ್ ಅವರಿಗಾಗಿ ವಿಶೇಷ ಉಡುಗೊರೆಗಳನ್ನು ಸಹ ತಂದಿದ್ದರು. ಅವರಲ್ಲಿ ಒಬ್ಬರು ತಮ್ಮ ಊರಿನ ವಿಶೇಷವೆಂದು ದೇವತೆಗಳ ‘ಬಾಗಿನ’ ರೀತಿಯ ಉಡುಗೊರೆಯೊಂದನ್ನು ತಂದಿದ್ದ. ಈ…

Read More

ನುಗ್ಗೆ ಸೊಪ್ಪು: ಹಾಲು-ಬಾಳೆಹಣ್ಣಿಗಿಂತಲೂ ಹೆಚ್ಚು ಪೌಷ್ಟಿಕಾಂಶವಿರುವ ಈ ಸೊಪ್ಪಿನಲ್ಲಿದೆ ಅನೇಕ ಪ್ರಯೋಜನ! – Kannada News | Moringa Powder Benefits: Health Experts Explain the Real Facts

ಇತ್ತೀಚಿನ ದಿನಗಳಲ್ಲಿ “ಸೂಪರ್‌ಫುಡ್”ಗಳ ಬಗ್ಗೆ ಜನರಲ್ಲಿ ಆಸಕ್ತಿ ಹೆಚ್ಚುತ್ತಿದೆ. ಆದರೆ ನಮ್ಮ ಸುತ್ತಮುತ್ತ ಸುಲಭವಾಗಿ ಸಿಗುವ ನುಗ್ಗೆ ಸೊಪ್ಪು (Moringa Leaves) ಪೌಷ್ಟಿಕಾಂಶಗಳ ಭಂಡಾರವಾಗಿದೆ. ಇದರಲ್ಲಿ ವಿಟಮಿನ್‌ಗಳು, ಖನಿಜಾಂಶಗಳು, ಆಂಟಿಆಕ್ಸಿಡೆಂಟ್‌ಗಳು ಮತ್ತು ಸಸ್ಯಾಧಾರಿತ ಪ್ರೋಟೀನ್‌ಗಳು ಸಮೃದ್ಧವಾಗಿದ್ದು, ದೇಹದ ಒಟ್ಟಾರೆ ಆರೋಗ್ಯವನ್ನು ಕಾಪಾಡಲು ಸಹಕಾರಿಯಾಗಿದೆ. ಈ ಸೊಪ್ಪು ಕಾಯಿಲೆಗೆ ಔಷಧವಲ್ಲದಿದ್ದರೂ ಆರೋಗ್ಯ ಕಾಪಾಡಿಕೊಳ್ಳಲು ನಮ್ಮ ಆಹಾರದ ಭಾಗವಾಗುವುದರಲ್ಲಿ ಸಂಶಯವಿಲ್ಲ. ಹಾಗಾದರೆ ಇದು ಯಾವ ರೀತಿ ಪ್ರಯೋಜನಕಾರಿ ಮತ್ತು ಯಾವ ರೀತಿ ಸೇವನೆ ಮಾಡಬೇಕು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ….

Read More