Headlines

ಸಂಸದ ಸೆಂಥಿಲ್ ವಿರುದ್ಧ ಆರೋಪ: ಶಾಸಕ ಜನಾರ್ದನ ರೆಡ್ಡಿಗೆ ಕೋರ್ಟ್ ಶಾಕ್ – Kannada News | Dharmasthala mass burial case: Court summons janardhan reddy for shashikanth sinthil defamation case

ಬೆಂಗಳೂರು, (ಜುಲೈ 28): ಧರ್ಮಸ್ಥಳದ ಬುರುಡೆ ಕೇಸ್​ನಲ್ಲಿ (dharmasthala mass burial case) ಮಾಜಿ ಐಎಎಸ್ ಅಧಿಕಾರಿ ಹಾಗೂ ಹಾಲಿ ಸಂಸದ ಸಸಿಕಾಂತ್ ಸೆಂಥಿಲ್ (Sasikanth Senthil) ಅವರು ಕೈವಾಡ ಇದೆ ಎಂದು ಗಂಭೀರ ಆರೋಪ ಮಾಡಿದ್ದ ಶಾಸಕ ಜನಾರ್ದನ ರೆಡ್ಡಿ (gali janardhan reddy) ವಿರುದ್ಧ ಮಾನನಷ್ಟ ದಾಖಲಿಸಿದ್ದಾರೆ. ಸಸಿಕಾಂತ್ ಸೆಂಥಿಲ್ ಅವರ ಖಾಸಗಿ ದೂರು ಸ್ವೀಕರಿಸಿದ ಬೆಂಗಳೂರಿನ 42ನೇ ಎಸಿಜೆಎಂ ಕೋರ್ಟ್, ಆಗಸ್ಟ್ 24ರಂದು ಖುದ್ದಾಗಿ ಹಾಜರಾಗುವಂತೆ ಜನಾರ್ದನ ರೆಡ್ಡಿ ಸಮನ್ಸ್ ಜಾರಿ ಮಾಡಿ…

Read More

ವೈಮನಸ್ಸು ಮರೆತು ದರ್ಶನ್ ಭೇಟಿ ಮಾಡಲು ಜೈಲಿಗೆ ಬಂದ ನಟ ಧನ್ವೀರ್ – Kannada News | Actor Dhanveer visits jail to meet Darshan putting aside differences

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ನಟ ದರ್ಶನ್ ಅವರು ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದಾರೆ. ಅವರ ಆಪ್ತವಲಯದಲ್ಲಿ ನಟ ಧನ್ವೀರ್ ಗುರುತಿಸಿಕೊಂಡಿದ್ದಾರೆ. ಆದರೆ ಕಳೆದ ಕೆಲವು ದಿನಗಳಿಂದ ದರ್ಶನ್ ಕುಟುಂಬದ ಜೊತೆ ಧನ್ವೀರ್ ಅವರಿಗೆ ಮನಸ್ತಾಪ ಉಂಟಾಗಿದೆ ಎಂಬ ಮಾತು ಕೇಳಿಬಂದಿತ್ತು. ಇತ್ತೀಚಿನ ದಿನಗಳಲ್ಲಿ ದರ್ಶನ್ ಅವರನ್ನು ಭೇಟಿ ಮಾಡಲು ಧನ್ವೀರ್ (Dhanveer) ಅವರು ಜೈಲಿನ ಬಳಿ ಸುಳಿದಿರಲಿಲ್ಲ. ಆದರೆ ಈಗ ವೈಮನಸ್ಸು ಮರೆತು ಮತ್ತೆ ಜೈಲಿಗೆ ಬಂದಿದ್ದಾರೆ. ದರ್ಶನ್ ಅವರನ್ನು ಭೇಟಿ ಮಾಡಲು ಧನ್ವೀರ್ ಅವರು…

Read More

India Post: ಆಗಸ್ಟ್ 1ರಿಂದ ಹೊಸ ಸ್ಪೀಡ್ ಪೋಸ್ಟ್ ಶುಲ್ಕ ಜಾರಿ, ದಾಖಲೆ- ಪಾರ್ಸೆಲ್‌ಗೆ ಪ್ರತ್ಯೇಕ ವ್ಯಾಖ್ಯಾನ – Kannada News | India Post Revises Speed Post Tariffs from August 1; Clarifies Letter and Parcel Categories

ನವದೆಹಲಿ, ಜುಲೈ 28: ಮೊದಲ ಬಾರಿಗೆ ಅಂಚೆ ಇಲಾಖೆ (India Post) ದಾಖಲೆ (Document) ಎಂಬ ಪದಕ್ಕೆ ಅಧಿಕೃತ ವ್ಯಾಖ್ಯಾನ ನೀಡಿದ್ದು, ಪತ್ರಗಳು, ಮುದ್ರಿತ ವಸ್ತುಗಳು ಹಾಗೂ ಮರುಮಾರಾಟ ಮೌಲ್ಯವಿಲ್ಲದ ಉಚಿತ (Complimentary) ವಸ್ತುಗಳನ್ನು ದಾಖಲೆಗಳೆಂದು ಪರಿಗಣಿಸಲಾಗುವುದು ಎಂದು ತಿಳಿಸಿದೆ. ಇವುಗಳಿಗೆ ಕಡಿಮೆ ಶುಲ್ಕ ವಿಧಿಸಲಾಗಲಿದ್ದು, ಉಳಿದ ಎಲ್ಲ ವಸ್ತುಗಳನ್ನು ಪಾರ್ಸೆಲ್ (Parcel) ವಿಭಾಗದಲ್ಲಿ ಇನ್ನು ಸಾಗಾಟ ನಡೆಯಲಿದೆ. ಇದರ ಜೊತೆಗೆ, ಚಿಲ್ಲರೆ (Retail) ಹಾಗೂ ಸಗಟು (Wholesale) ಗ್ರಾಹಕರಿಗಾಗಿ 24 ಸ್ಪೀಡ್ ಪೋಸ್ಟ್ ಮತ್ತು 48…

Read More

ಹಾರ ಹಾಕಿ ಸನ್ಮಾನಿಸಲು ಧರ್ಮೇಂದ್ರ ಪ್ರಧಾನ್ ಪಾಕ್ ವಿರುದ್ಧ ಯುದ್ಧ ಗೆದ್ದು ಬಂದಿದ್ದಾರಾ?; ಕಾಂಗ್ರೆಸ್ ವಾಗ್ದಾಳಿ – Kannada News | BJP Garlanded Dharmendra Pradhan as if he won war with Pakistan Congress mp Gaurav Gogoi slams in Parliament

ನವದೆಹಲಿ, ಜುಲೈ 28: ನೀಟ್ (NEET) ಪ್ರಶ್ನೆ ಪತ್ರಿಕೆ ಸೋರಿಕೆಯನ್ನು ಖಂಡಿಸಿ ವಿದ್ಯಾರ್ಥಿಗಳು ನಡೆಸಿದ ಸುದೀರ್ಘ ಪ್ರತಿಭಟನೆಯ ನಂತರ ಧರ್ಮೇಂದ್ರ ಪ್ರಧಾನ್ (Dharmendra Pradhan) ಅವರು ಶಿಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇಂದು ಸಂಸತ್​​ಗೆ ಆಗಮಿಸಿದ ಅವರಿಗೆ ಹಾರ ಹಾಕಿ ಸ್ವಾಗತಿಸಲಾಯಿತು. ಈ ಬಗ್ಗೆ ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. “ಬಿಜೆಪಿ ಸಂಸದರು ಧರ್ಮೇಂದ್ರ ಪ್ರಧಾನ್ ಅವರನ್ನು ಪಾಕಿಸ್ತಾನದ ವಿರುದ್ಧ ಯುದ್ಧ ಮಾಡಿ ಮರಳಿದವರಂತೆ ಸಂಸತ್ತಿಗೆ ಸ್ವಾಗತಿಸಿದ್ದಾರೆ” ಎಂದು ಟೀಕಿಸಿದ್ದಾರೆ. ಕಳೆದ…

Read More

ಹಿಂದೂ ಯುವತಿಯರ ಬಗ್ಗೆ ವಿವಾದಾತ್ಮಕ ಪೋಸ್ಟ್ ಹಂಚಿಕೊಂಡ ಕಂಗನಾ ರಣಾವತ್ – Kannada News | Kangana Ranaut calls young Hindu Women Generation Gutter Instagram Post over CJP Protest

ಬಾಲಿವುಡ್ ನಟಿ ಹಾಗೂ ಬಿಜೆಪಿ ಸಂಸದೆ ಕಂಗನಾ ರಣಾವತ್ (Kangana Ranaut) ಮತ್ತೆ ತಮ್ಮ ವಿವಾದಾತ್ಮಕ ಹೇಳಿಕೆಗಳ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದ್ದಾರೆ. ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ಇಂದಿನ ಪಾಶ್ಚಿಮಾತ್ಯ ಸಂಸ್ಕೃತಿಗೆ ಮರುಳಾಗಿರುವ ಯುವ ಹಿಂದೂ (Hindu) ಮಹಿಳೆಯರನ್ನು ‘ಗಟಾರ ತಲೆಮಾರು’ ಎಂದು ಕರೆದಿದ್ದಾರೆ. ಅವರ ಈ ರೀತಿಯ ಹೇಳಿಕೆಗೆ ಜಿನ್ ಜಿ (Gen Z) ಯುವಕ-ಯುವತಿಯರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಜೆನ್ ಜಿ ಯುವತಿಯರ ಬಗ್ಗೆ ಕಂಗನಾ ಹೇಳಿಕೆ: ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ…

Read More

ತಮಿಳುನಾಡಿಗೆ ಕಾವೇರಿ ನೀರು ಬಿಟ್ಟರೆ 1991ರ ಮಾದರಿ ಕ್ರಾಂತಿ: ಸರ್ಕಾರಕ್ಕೆ ಕರವೇ ಎಚ್ಚರಿಕೆ – Kannada News | Cauvery Water Row: Karnataka Leaders Warn of Conflict Over Tamil Nadu Water Release

ಬೆಂಗಳೂರು, ಜು.28 : ತಮಿಳುನಾಡಿಗೆ ಪ್ರತಿದಿನ 3,500 ಕ್ಯೂಸೆಕ್ (ಒಟ್ಟು 4.5 ಟಿಎಂಸಿ) ಕಾವೇರಿ ನೀರನ್ನು ಹರಿಸುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಆದೇಶ ನೀಡಿರುವುದನ್ನು ಖಂಡಿಸಿ ಕನ್ನಡಪರ ಸಂಘಟನೆಗಳು ಹಾಗೂ ಶಾಸಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಮುಂಗಾರು ಕೈಕೊಟ್ಟು, ಕುಡಿಯುವ ನೀರಿಗೂ ತೊಂದರೆಯಾಗಿರುವಾಗ ತಮಿಳುನಾಡಿಗೆ ನೀರು ಹರಿಸಿದರೆ 1991ರ ಮಾದರಿಯ ಕಾವೇರಿ ಸಂಘರ್ಷ ಎದುರಾಗಲಿದೆ ಹಾಗೂ ರಾಜ್ಯದಲ್ಲಿ ಬೆಂಕಿ ಬೀಳಲಿದೆ ಎಂದು ಹೋರಾಟಗಾರರು ಸರ್ಕಾರಕ್ಕೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ. ಟಿವಿ9 ಜೊತೆ ಮಾತನಾಡಿದ…

Read More

‘ಬಡ ಅಭ್ಯರ್ಥಿಯ ಅವಕಾಶ ಕಸಿದುಕೊಂಡಿಲ್ಲವೇ?’: KPSC ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕರ್ ಪುತ್ರಿಗೆ ಹೈಕೋರ್ಟ್ ಪ್ರಶ್ನೆ – Kannada News | ‘Did You Not Rob a Poor Candidate’s Opportunity?’: Karnataka HC Slams Former KPSC Chief’s Daughter Over Fake Income Declaration

KPSC ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕರ್ ಪುತ್ರಿಗೆ ಹೈಕೋರ್ಟ್ ಪ್ರಶ್ನೆ ಬೆಂಗಳೂರು, ಜುಲೈ 28: ಕರ್ನಾಟಕ ಲೋಕಸೇವಾ ಆಯೋಗದ (KPSC) ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕರ್ ಅವರ ಪುತ್ರಿ ಸುಮಾ ಸಾಹುಕರ್ ಸಲ್ಲಿಸಿದ್ದ ಆದಾಯ ಘೋಷಣೆ ಕುರಿತ ಪ್ರಕರಣದ ವಿಚಾರಣೆ ವೇಳೆ ಕರ್ನಾಟಕ ಹೈಕೋರ್ಟ್ ಗಂಭೀರ ಪ್ರಶ್ನೆಗಳನ್ನು ಎತ್ತಿದೆ.  ಕುಟುಂಬದ ವಾರ್ಷಿಕ ಆದಾಯ 40 ಸಾವಿರ ಎಂದು ಘೋಷಣೆ ಸಲ್ಲಿಸಿರುವುದು ದಾಖಲೆಗಳಿಂದ ಸ್ಪಷ್ಟವಾಗಿರುವಾಗ, ಆ ಸಮಯದಲ್ಲಿ ಅವರ ತಂದೆ ಕೆಪಿಎಸ್‌ಸಿ ಅಧ್ಯಕ್ಷರಾಗಿದ್ದ ಹಿನ್ನೆಲೆಯಲ್ಲಿ ಈ ಘೋಷಣೆ ಹೇಗೆ…

Read More

ದಾಖಲೆಯ ಮೊತ್ತಕ್ಕೆ ಮಾರಾಟ ಆಗಲಿದೆ ‘ರಾಮಾಯಣ’ ಆಡಿಯೋ ಹಕ್ಕು – Kannada News | Ramayana movie audio rights may sell for more than 100 crore rs

ರಣ್​​ಬೀರ್ ಕಪೂರ್, ಯಶ್ (Yash), ಸಾಯಿ ಪಲ್ಲವಿ ಇನ್ನೂ ಹಲವಾರು ಸ್ಟಾರ್ ನಟ-ನಟಿಯರು ನಟಿಸಿರುವ ‘ರಾಮಾಯಣ’ ಸಿನಿಮಾ ಭಾರಿ ದೊಡ್ಡ ಮಟ್ಟದಲ್ಲಿ ಬಿಡುಗಡೆ ಆಗಲಿದೆ. ಸಿನಿಮಾದ ಪ್ರಚಾರವನ್ನು ಬಲು ಅದ್ಧೂರಿಯಾಗಿ ನಿರ್ಮಾಪಕ ನಮಿತ್ ಮಲ್ಹೋತ್ರಾ ಮಾಡುತ್ತಿದ್ದಾರೆ. ಸಿನಿಮಾದ ಭಾರತದ ವಿತರಣೆ ಹಕ್ಕುಗಳ ಮಾರಾಟವನ್ನು ನಿರ್ಮಾಪಕರು ಇತ್ತೀಚೆಗಷ್ಟೆ ಮಾಡಿದ್ದು, ಕರಣ್ ಜೋಹರ್ ಹಾಗೂ ಇತರೆ ಕೆಲವರು ಸುಮಾರು 250 ಕೋಟಿಗೆ ಖರೀದಿ ಮಾಡಿದ್ದಾರೆ. ಇದೀಗ ಸಿನಿಮಾದ ಆಡಿಯೋ ಹಕ್ಕುಗಳನ್ನು ದಾಖಲೆಯ ಮೊತ್ತಕ್ಕೆ ಮಾರಾಟ ಮಾಡಲು ನಮಿತ್ ಮಲ್ಹೋತ್ರಾ ಪ್ರಯತ್ನಿಸುತ್ತಿದ್ದಾರೆ….

Read More

ತಮಿಳುನಾಡಲ್ಲಿ ವ್ಯರ್ಥವಾಗಿ ಸಮುದ್ರ ಸೇರುತ್ತಿರುವ ಕಾವೇರಿ ನೀರು: ಮಹತ್ವದ ವಿಡಿಯೋ ರಿಲೀಸ್​​ ಮಾಡಿದ ಕಾಂಗ್ರೆಸ್​​ ಶಾಸಕ – Kannada News | Cauvery Row: Mandya MLA Ganiga Ravi Kumar Releases Video Showing Water Wasted Into Sea; Slams Tamil Nadu Over Mekedatu Opposition

ಮಂಡ್ಯ, ಜುಲೈ 28: ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸಬೇಕೆಂಬ CWRC ಆದೇಶದ ನಡುವೆ ಮಂಡ್ಯ ಶಾಸಕ ಗಣಿಗ ರವಿಕುಮಾರ್​​ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದಾರೆ. ತಮಿಳುನಾಡಿನ ಚಿದಂಬರಂನಲ್ಲಿ ಸಮುದ್ರಕ್ಕೆ ವ್ಯರ್ಥವಾಗಿ ಕಾವೇರಿ ನೀರು ಹರಿಯುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ತಮಿಳುನಾಡಿಗೆ ಹೋಗಿದ್ದಾಗ ಗಣಿಗ ರವಿ ಈ ವಿಡಿಯೋ ಮಾಡಿದ್ದರು ಎನ್ನಲಾಗಿದ್ದು, ಮೇಕೆದಾಟು ಯೋಜನೆಗೆ ಸುಮ್ಮನೆ‌ ಕ್ಯಾತೆ ತೆಗೆಯುತ್ತಿದ್ದಾರೆ. ನಾವು ಮೇಕೆದಾಟು ಅಣೆಕಟ್ಟೆ‌ ಕಟ್ಟುತ್ತೇವೆ. ಮೆಟ್ಟೂರಿನ ಜಲಾಶಯದ ನಂತರ ನೀವು ಅಣೆಕಟ್ಟು ಕಟ್ಟಿ ವ್ಯರ್ಥವಾಗಿ ಸಮುದ್ರಕ್ಕೆ ಹರಿಯುವ ನೀರನ್ನ…

Read More

ನಮಗೇ ಕುಡಿಯೋಕೆ ನೀರಿಲ್ಲ: ತಮಿಳುನಾಡಿಗೆ ಕಾವೇರು ನೀರು ಬಿಡದಂತೆ ಸರ್ಕಾರಕ್ಕೆ ಎಚ್ಚರಿಕೆ – Kannada News | Mandya People Warns to Karnataka Government For don’t release Cauvery water to Tamil Nadu

ಮಂಡ್ಯ, (ಜುಲೈ 28): ಕರ್ನಾಟಕದಲ್ಲಿ ಮಳೆ ಕೊರತೆಯಿಂದ ಕಾವೇರಿ ನದಿಯ ಕೆಆರ್‌ಎಸ್ ಜಲಾಶಯದಲ್ಲಿ ನೀರಿಲ್ಲದೇ ಬೆಂಗಳೂರು, ಮೈಸೂರು, ಮಂಡ್ಯ, ರಾಮನಗರ ಸೇರಿದಂತೆ ಹಲವು ಜಿಲ್ಲೆಗಳ ಜನರು ಪರದಾಡುತ್ತಿದ್ದಾರೆ. ರಾಜ್ಯದಲ್ಲಿ ಮಳೆಯಿಲ್ಲದೇ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದರ ನಡುವೆ ಇಂದು (ಜುಲೈ 28) ದೆಹಲಿಯಲ್ಲಿ ನಡೆದ ಕಾವೇರಿ ನೀರು ನಿರ್ವಹಣಾ ಸಮಿತಿ ಸಭೆಯಲ್ ತಮಿಳುನಾಡಿಗೆ ನೀರು ಹರಿಸುವಂತೆ ಕರ್ನಾಟಕಕ್ಕೆ ಸೂಚಿಸಲಾಗಿದೆ. 15 ದಿನಗಳ ಕಾಲ ನಿತ್ಯ 3500 ಕ್ಯೂಸೆಕ್​ ನೀರು ಹರಿಸುವಂತೆ ಆದೇಶಿಸಿದ್ದು, ಇದು ಕನ್ನಡಗರ ಆಕ್ರೋಕ್ಕೆ ಕಾರಣವಾಗಿದೆ….

Read More