ತಮಿಳುನಾಡಲ್ಲಿ ವ್ಯರ್ಥವಾಗಿ ಸಮುದ್ರ ಸೇರುತ್ತಿರುವ ಕಾವೇರಿ ನೀರು: ಮಹತ್ವದ ವಿಡಿಯೋ ರಿಲೀಸ್​​ ಮಾಡಿದ ಕಾಂಗ್ರೆಸ್​​ ಶಾಸಕ – Kannada News | Cauvery Row: Mandya MLA Ganiga Ravi Kumar Releases Video Showing Water Wasted Into Sea; Slams Tamil Nadu Over Mekedatu Opposition

ಮಂಡ್ಯ, ಜುಲೈ 28: ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸಬೇಕೆಂಬ CWRC ಆದೇಶದ ನಡುವೆ ಮಂಡ್ಯ ಶಾಸಕ ಗಣಿಗ ರವಿಕುಮಾರ್​​ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದಾರೆ. ತಮಿಳುನಾಡಿನ ಚಿದಂಬರಂನಲ್ಲಿ ಸಮುದ್ರಕ್ಕೆ ವ್ಯರ್ಥವಾಗಿ ಕಾವೇರಿ ನೀರು ಹರಿಯುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ತಮಿಳುನಾಡಿಗೆ ಹೋಗಿದ್ದಾಗ ಗಣಿಗ ರವಿ ಈ ವಿಡಿಯೋ ಮಾಡಿದ್ದರು ಎನ್ನಲಾಗಿದ್ದು, ಮೇಕೆದಾಟು ಯೋಜನೆಗೆ ಸುಮ್ಮನೆ‌ ಕ್ಯಾತೆ ತೆಗೆಯುತ್ತಿದ್ದಾರೆ. ನಾವು ಮೇಕೆದಾಟು ಅಣೆಕಟ್ಟೆ‌ ಕಟ್ಟುತ್ತೇವೆ. ಮೆಟ್ಟೂರಿನ ಜಲಾಶಯದ ನಂತರ ನೀವು ಅಣೆಕಟ್ಟು ಕಟ್ಟಿ ವ್ಯರ್ಥವಾಗಿ ಸಮುದ್ರಕ್ಕೆ ಹರಿಯುವ ನೀರನ್ನ ಉಳಿಸಬಹುದು ಎಂದು ಶಾಸಕರು ಆಡಿರುವ ಮಾತುಗಳು ವಿಡಿಯೋದಲ್ಲಿವೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ನಮಗೇ ಕುಡಿಯೋಕೆ ನೀರಿಲ್ಲ: ತಮಿಳುನಾಡಿಗೆ ಕಾವೇರು ನೀರು ಬಿಡದಂತೆ ಸರ್ಕಾರಕ್ಕೆ ಎಚ್ಚರಿಕೆ – Kannada News | Mandya People Warns to Karnataka Government For don’t release Cauvery water to Tamil Nadu

ಮಂಡ್ಯ, (ಜುಲೈ 28): ಕರ್ನಾಟಕದಲ್ಲಿ ಮಳೆ ಕೊರತೆಯಿಂದ ಕಾವೇರಿ ನದಿಯ ಕೆಆರ್‌ಎಸ್ ಜಲಾಶಯದಲ್ಲಿ ನೀರಿಲ್ಲದೇ ಬೆಂಗಳೂರು, ಮೈಸೂರು, ಮಂಡ್ಯ, ರಾಮನಗರ ಸೇರಿದಂತೆ ಹಲವು ಜಿಲ್ಲೆಗಳ ಜನರು ಪರದಾಡುತ್ತಿದ್ದಾರೆ. ರಾಜ್ಯದಲ್ಲಿ ಮಳೆಯಿಲ್ಲದೇ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದರ ನಡುವೆ ಇಂದು (ಜುಲೈ 28) ದೆಹಲಿಯಲ್ಲಿ ನಡೆದ ಕಾವೇರಿ ನೀರು ನಿರ್ವಹಣಾ ಸಮಿತಿ ಸಭೆಯಲ್ ತಮಿಳುನಾಡಿಗೆ ನೀರು ಹರಿಸುವಂತೆ ಕರ್ನಾಟಕಕ್ಕೆ ಸೂಚಿಸಲಾಗಿದೆ. 15 ದಿನಗಳ ಕಾಲ ನಿತ್ಯ 3500 ಕ್ಯೂಸೆಕ್​ ನೀರು ಹರಿಸುವಂತೆ ಆದೇಶಿಸಿದ್ದು, ಇದು ಕನ್ನಡಗರ ಆಕ್ರೋಕ್ಕೆ ಕಾರಣವಾಗಿದೆ. ಅದರಲ್ಲೂ ಮುಖ್ಯವಾಗಿ ಮಂಡ್ಯ ಜನತೆ ಆಕ್ರೋಶದ ಕಟ್ಟೆ ಹೊಡೆದಿದ್ದು, ರಸ್ತೆಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಒಂದು ವೇಳೆ ತಮಿಳುನಾಡಿಗೆ ನೀರು ಬಿಟ್ಟರೆ ಬೆಂಗಳೂರಿಗೆ ಹರಿಯುವ ನೀರಿನ ಪೈಪ್ ಹೊಡೆದು ಹಾಕುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಅತ್ತ ತಮಿಳುನಾಡಿಗೆ ಕಾವೇರಿ ನೀರು ಬಿಡುವಂತೆ CWRC ಸೂಚನೆ: ಇತ್ತ ಸಂಧಾನ ಸೂತ್ರಕ್ಕೆ ಕರ್ನಾಟಕದ ಸಿದ್ಧತೆ – Kannada News | Cauvery Dispute: CWRC Orders Water Release to Tamil Nadu; Karnataka Prepares for High Stakes CM Level Talks on August 3

ಸಂಧಾನ ಸೂತ್ರಕ್ಕೆ ಕರ್ನಾಟಕದ ಸಿದ್ಧತೆ
Image Credit source: PTI

ಬೆಂಗಳೂರು, ಜುಲೈ 28: ಕರ್ನಾಟಕ ಮತ್ತು ತಮಿಳುನಾಡಿನ ನಡುವೆ ಕಾವೇರಿ ಜಲ ವಿವಾದ ಮತ್ತೆ ಸಂಘರ್ಷದ ರೂಪ ಪಡೆದಿದೆ. ರಾಜ್ಯದಲ್ಲಿ ತೀವ್ರ ಬರ ಸ್ಥಿತಿಯ ನಡುವೆಯೂ ತಮಿಳುನಾಡಿಗೆ ಮುಂದಿನ‌ 15 ದಿನ 3,500 ಕ್ಯೂಸೆಕ್ ನೀರು ಹರಿಸಲು ಕಾವೇರಿ ನೀರು ನಿಯಂತ್ರಣ ಸಮಿತಿ ಕರ್ನಾಟಕಕ್ಕೆ ಸೂಚಿಸಿದೆ. ಮತ್ತೊಂದೆಡೆ ಮೇಕೆದಾಟು ಯೋಜನೆ ವಿರೋಧಿಸಿ ತಮಿಳುನಾಡು ಸಿಎಂ ವಿಜಯ್​​ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ. ಈ ಎಲ್ಲ ಬೆಳವಣಿಗೆಗಳ ನಡುವೆಯೂ ಮೊದಲೇ ತೀರ್ಮಾನಿಸಿದ್ದಂತೆ ಆಗಸ್ಟ್​​ 3ರ ಸಂಧಾನ ಸಭೆಗೆ ಕರ್ನಾಟಕ ಸಿದ್ಧತೆ ನಡೆಸಿದೆ.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆಯಲಿರುವ ಸಭೆಯಲ್ಲಿ ಎರಡು ರಾಜ್ಯಗಳ ಮುಖ್ಯಮಂತ್ರಿಗಳು ಭಾಗಿಯಾಗಲಿದ್ದು, ಮೇಕೆದಾಟುವಿನಲ್ಲಿ ಕಾವೇರಿ ನದಿಗೆ ಅಣೆಕಟ್ಟು ನಿರ್ಮಿಸುವ ಪ್ರಸ್ತಾವನೆ ಸೇರಿ ಮತ್ತಿತರ ನದಿ ನೀರು ಹಂಚಿಕೆ ವಿಷಯಗಳ ಕುರಿತು ದ್ವಿಪಕ್ಷೀಯ ಮಾತುಕತೆ ನಡೆಯಲಿದೆ. ತಮಿಳುನಾಡು ಸಿಎಂಜೊತೆ ಕೆಲ ಸಚಿವರುಗಳು ಸಹ ಸಭೆಯಲ್ಲಿ ಭಾಗಿಯಾಗುವ ಸಾಧ್ಯತೆ ಇದೆ. ಮಧ್ಯಾಹ್ನ 12 ಗಂಟೆಗೆ ಸಭೆ ನಡೆಯಲಿದೆ ಎನ್ನಲಾಗಿರುವ ಕಾರಣಕ್ಕೆ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ.

ಇದನ್ನೂ ಓದಿ: ಬರದ ಮಧ್ಯೆ ಕರ್ನಾಟಕಕ್ಕೆ ಬರಸಿಡಿಲು: ತಮಿಳುನಾಡಿಗೆ ಕಾವೇರಿ ನೀರು ಹರಿಸಲು ಆದೇಶ

14 ವರ್ಷಗಳ ಬಳಿಕ ಮತ್ತೆ ಕಾವೇರಿ ವಿಚಾರವಾಗಿ ಮಾತುಕತೆ!

ಸುಪ್ರೀಂಕೋರ್ಟ್ ಸಲಹೆಯಂತೆ 2012ರ ನವೆಂಬರ್ 29ರಂದು ಕರ್ನಾಟಕ ಮತ್ತು ತಮಿಳುನಾಡು ಸಿಎಂಗಳ ನಡುವೆ ಬೆಂಗಳೂರಿನ ಹಳೆ ಮದ್ರಾಸ್ ರಸ್ತೆಯ ಖಾಸಗಿ ಹೋಟೆಲ್​​ನಲ್ಲಿ ಮಾತುಕತೆ ನಡೆದಿತ್ತು. ಅಂದಿನ ಕರ್ನಾಟಕದ ಸಿಎಂ ಜಗದೀಶ್ ಶೆಟ್ಟರ್ ಮತ್ತು ತಮಿಳುನಾಡು ಸಿಎಂ ದಿ. ಜೆ. ಜಯಲಲಿತಾ ಸಭೆಯಲ್ಲಿ ಭಾಗಿಯಾಗಿದ್ದರು. ತಮಿಳುನಾಡಿನ ಸಾಂಬಾ ಬೆಳೆಗೆ ತಕ್ಷಣ 30 ಟಿಎಂಸಿ‌ ನೀರು ಹರಿಸುವಂತೆ ಸಭೆಯಲ್ಲಿ ಜಯಲಲಿತಾ ಒತ್ತಡ ಹೇರಿದ್ದರೆ, ಆಗ್ರಹವನ್ನು ಜಗದೀಶ್​​ ಶೆಟ್ಟರ್​​ ತಿರಸ್ಕರಿಸಿದ್ದರು. ಬದಲಾಗಿ ಮೂರು ಅಂಶಗಳ ದೀರ್ಘಾವಧಿ ಪರಿಹಾರ ಸೂತ್ರವನ್ನು ಸಭೆಯಲ್ಲಿ ಪ್ರಸ್ತಾಪಿಸಿದ್ದರು. ಆದರೆ ಮಾತುಕತೆ ಫಲಪ್ರದವಾಗದೇ ಮುಕ್ಕಾಲು ಗಂಟೆಯಲ್ಲೇ ಸಭೆ ಅಂತ್ಯವಾಗಿತ್ತು.

ಏನಾಗಲಿದೆ ಆಗಸ್ಟ್​​ 3ರ ಸಭೆಯ ಭವಿಷ್ಯ?

ಆಗಸ್ಟ್​​ 3ರಂದು ಉಭಯ ರಾಜ್ಯಗಳ ನಡುವೆ ಸಂಧಾನ ಸೂತ್ರಕ್ಕೆ ಸಭೆ ನಿಗದಿಯಾಗಿದೆಯಾದರೂ ಪ್ರಸ್ತುತ ಬೆಳವಣಿಗೆಗಳನ್ನು ಗಮನಿಸಿದಾಗ ವಿಜಯ್​​ ಬೆಂಗಳೂರಿಗೆ ಬರ್ತಾರಾ ಎಂಬ ಅನುಮಾನವೂ ವ್ಯಕ್ತವಾಗಿದೆ. ಕಾವೇರಿ ನೀರು ನಿಯಂತ್ರಣ ಸಮಿತಿ ಆದೇಶದ ಬೆನ್ನಲ್ಲೇ ಕರ್ನಾಟಕದಲ್ಲಿ ಪ್ರತಿಭಟನೆಗಳು ಆರಂಭವಾಗಿರುವ ಕಾರಣಗ ಪರಿಸ್ಥಿತಿ ಪ್ರಕ್ಷುಬ್ಧಗೊಳ್ಳುತ್ತಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Mandya Protest: ತಮಿಳುನಾಡಿಗೆ ನೀರು ಹರಿಸಲು CWRC ಆದೇಶ ಖಂಡಿಸಿ ಮಂಡ್ಯದಲ್ಲಿ ರೈತರ ಪ್ರತಿಭಟನೆ – Kannada News | Mandya Farmers Protest Cauvery Water Release: CWRC Order Backlash

ಮಂಡ್ಯ, ಜುಲೈ 28: ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ತಮಿಳುನಾಡಿಗೆ ನೀರು ಹರಿಸಲು ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ಮಂಡ್ಯದಲ್ಲಿ ರೈತರು ತೀವ್ರ ಪ್ರತಿಭಟನೆ ನಡೆಸಿದ್ದಾರೆ. ಸಿಡಬ್ಲ್ಯೂಆರ್​ಸಿ ಆದೇಶವನ್ನು ಖಂಡಿಸಿ ರೈತರು ಮಂಡ್ಯದ ಸಂಜಯ್ ವೃತ್ತದಲ್ಲಿ ಹೆದ್ದಾರಿ ತಡೆದು ಆಕ್ರೋಶ ವ್ಯಕ್ತಪಡಿಸಿದರು. ಅನ್ನದಾತರ ಗೋಳು ಕೇಳದ ಸರ್ಕಾರಕ್ಕೆ ಧಿಕ್ಕಾರ ಕೂಗುತ್ತಾ, ಕಾವೇರಿ ನೀರು ಬಿಡಬೇಡಿ ಎಂದು ಒತ್ತಾಯಿಸಿದರು.

ರೈತರಿಗೆ ನ್ಯಾಯ ಸಿಗುವವರೆಗೂ ಹೋರಾಟ ನಿಲ್ಲುವುದಿಲ್ಲ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಲ್ಲದೆ, ತಮಿಳುನಾಡಿನ ನೀರು ಕಟ್ಟಿ ರೀತಿ ವರ್ತನೆ ಮಾಡುತ್ತಿರುವ ರಾಜ್ಯ ಸರ್ಕಾರಕ್ಕೆ ಧಿಕ್ಕಾರ ಕೂಗಿದರು. ಒಟ್ಟಾರೆ, ಕಾವೇರಿ ನೀರಿನ ಹಂಚಿಕೆ ವಿಷಯದಲ್ಲಿ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ ಎಂದು ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: “ಕಳೆದ 2 ವರ್ಷಗಳಲ್ಲಿ 3000ಕ್ಕೂ ಹೆಚ್ಚು ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ನಡೆದಿದೆ” – Kannada News | CT Ravi Demands Comprehensive Probe into KPSC Recruitment Irregularities

ಬಿಜೆಪಿ ಎಂಎಲ್‌ಸಿ ಸಿ.ಟಿ. ರವಿ ಅವರು ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ನಡೆಸಿದ ವಿವಿಧ ಹುದ್ದೆಗಳ ನೇಮಕಾತಿಯಲ್ಲಿ ನಡೆದಿರುವ ಅಕ್ರಮಗಳ ಕುರಿತು ಸಮಗ್ರ ತನಿಖೆಗೆ ಆಗ್ರಹಿಸಿದ್ದಾರೆ. ವೆಟೆನರಿ ಇನ್ಸ್ಪೆಕ್ಟರ್ ಹುದ್ದೆಗಳ ನೇಮಕಾತಿಯಲ್ಲಿ ಹುದ್ದೆಗಳ ವ್ಯಾಪಾರ ನಡೆದಿರುವ ಆಡಿಯೋ, ವಿಡಿಯೋಗಳು ಲೀಕ್ ಆಗಿರುವ ಬಗ್ಗೆ ಅವರು ಉಲ್ಲೇಖಿಸಿದ್ದಾರೆ. ಸಾಮಾನ್ಯ ಪರೀಕ್ಷೆಗಳಲ್ಲಿ ಕಡಿಮೆ ಅಂಕ ಗಳಿಸಿದವರು ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿರುವುದು ಅನುಮಾನಕ್ಕೆ ಎಡೆಮಾಡಿದೆ ಎಂದು ರವಿ ಹೇಳಿದ್ದಾರೆ.

ಈ ಅಕ್ರಮವು ವೆಟೆನರಿ ಇನ್ಸ್ಪೆಕ್ಟರ್ ಹುದ್ದೆಗಳಿಗೆ ಮಾತ್ರ ಸೀಮಿತವಾಗಿಲ್ಲ. ಹಿಂದೆಯೂ ಎಡಬ್ಲ್ಯೂಇ ಮತ್ತು ಪಿಡಿಒ ಆಯ್ಕೆಗಳ ಸಂದರ್ಭದಲ್ಲಿಯೂ ಇಂತಹ ಘಟನೆಗಳು ನಡೆದಿವೆ. ಕಳೆದ ಎರಡು ವರ್ಷಗಳಲ್ಲಿ ವಿವಿಧ ಇಲಾಖೆಗಳಲ್ಲಿ ಸುಮಾರು 3000ಕ್ಕೂ ಹೆಚ್ಚು ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂಬ ಮಾಹಿತಿ ಮೂಲಗಳಿಂದ ತಿಳಿದುಬಂದಿದೆ ಎಂದು ಸಿ.ಟಿ. ರವಿ ಆರೋಪಿಸಿದ್ದಾರೆ. ಈ ಅಕ್ರಮಗಳಲ್ಲಿ ಆಡಳಿತಾರೂಢ ಪಕ್ಷದ ಪಾಲುದಾರಿಕೆಯೂ ಇದೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ತಮಿಳುನಾಡಿಗೆ ಕಾವೇರಿ ನೀರು ಬಿಡಲು CWRC ಆದೇಶ: ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಸಮರ – Kannada News | Karnataka’s Cauvery Crisis: CWRC Orders Water to TN, Govt Faces Drought Dilemma and Backlash

ಬೆಂಗಳೂರು ಜು. 28: ತಮಿಳುನಾಡಿಗೆ ದಿನಕ್ಕೆ 3,500 ಕ್ಯೂಸೆಕ್ ಕಾವೇರಿ ನೀರನ್ನು ಹರಿಸುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಆದೇಶ ನೀಡಿರುವುದು ರಾಜ್ಯ ರಾಜಕೀಯದಲ್ಲಿ ಭಾರಿ ಸಂಚಲನ ಮೂಡಿಸಿದೆ. ರಾಜ್ಯದಲ್ಲಿ ಮಳೆ ಕೊರತೆ ಮತ್ತು ಕುಡಿಯುವ ನೀರಿನ ಅಭಾವವಿರುವಾಗ ಈ ಆದೇಶ ಹೊರಬಿದ್ದಿರುವುದು ಬಿಜೆಪಿ ನಾಯಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದರೆ, ರಾಜ್ಯ ಸರ್ಕಾರ ನಿಯಮಗಳ ಚೌಕಟ್ಟಿನಲ್ಲಿ ನಿರ್ಧಾರ ಕೈಗೊಳ್ಳುವ ಮುನ್ಸೂಚನೆ ನೀಡಿದೆ.

ಈ ಸಂಬಂಧ ವಿಪಕ್ಷ ನಾಯಕ ಆರ್​​​. ಅಶೋಕ್​ ಅವರು ಭಾರೀ ವಿರೋಧ ವ್ಯಕ್ತಪಡಿಸಿದ್ದಾರೆ. ಆರ್. ಅಶೋಕ್ ತಮ್ಮ ಎಕ್ಸ್ (X) ಖಾತೆಯಲ್ಲಿ ಪೋಸ್ಟ್ ಮಾಡಿ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ರಾಜ್ಯದಲ್ಲಿ ಭೀಕರ ಬರಗಾಲ ಇರುವಾಗ ತಮಿಳುನಾಡಿಗೆ 3,500 ಕ್ಯೂಸೆಕ್ ನೀರು ಬಿಡಲು ಒಪ್ಪಿರುವುದು ಕನ್ನಡಿಗರಿಗೆ ಬಗೆದ ದ್ರೋಹ. ಕಾಂಗ್ರೆಸ್​​ ಸರ್ಕಾರ ಹೈಕಮಾಂಡ್ ಮುಲಾಜಿಗೆ ಬಿದ್ದು, ತಮಿಳುನಾಡಿನ ಮೈತ್ರಿ ಸರ್ಕಾರವನ್ನು ಮೆಚ್ಚಿಸಲು ಕಾವೇರಿಯ ಮಡಿಲನ್ನು ಬರಿದು ಮಾಡುತ್ತಿದ್ದಾರೆ. ಸಿಡಬ್ಲ್ಯುಆರ್‌ಸಿ ಶಿಫಾರಸಿನ ವಿರುದ್ಧ ತಕ್ಷಣವೇ ವಕೀಲರು ಮತ್ತು ಅಧಿಕಾರಿಗಳ ಸಭೆ ಕರೆದು, ಮರುಪರಿಶೀಲನಾ ಅರ್ಜಿ ಅಥವಾ ಮೇಲ್ಮನವಿ ಸಲ್ಲಿಸಿ ಬಲವಾದ ವಾದ ಮಂಡಿಸಬೇಕು. ಯಾವುದೇ ಕಾರಣಕ್ಕೂ ಒಂದು ಹನಿ ನೀರು ಹೊರಹೋಗದಂತೆ ತಡೆಯಬೇಕು, ಇಲ್ಲವಾದರೆ ಉಗ್ರ ಹೋರಾಟ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಇಲ್ಲಿದೆ ನೋಡಿ ಆರ್​​​.ಅಶೋಕ್​​​​ ಪೋಸ್ಟ್​:

ಕ್ಯಾಚ್‌ಮೆಂಟ್‌ನಲ್ಲಿ ಮಳೆಯೇ ಇಲ್ಲ, ನೀರು ಎಲ್ಲಿಂದ ಬಿಡೋದು?”: ಆರಗ ಜ್ಞಾನೇಂದ್ರ

ಬಿಜೆಪಿ ಶಾಸಕ ಆರಗ ಜ್ಞಾನೇಂದ್ರ, ಸಿಡಬ್ಲ್ಯುಆರ್‌ಸಿ ತೀರ್ಮಾನವನ್ನು ವಿಚಿತ್ರ ನಿರ್ಧಾರ ಎಂದು ಹೇಳಿದ್ದಾರೆ. ಸರ್ಕಾರ ಕೋರ್ಟ್ ಅಥವಾ ಪ್ರಾಧಿಕಾರದ ಮುಂದೆ ಸೂಕ್ತ ಅಂಕಿ-ಅಂಶಗಳೊಂದಿಗೆ ವಾದ ಮಂಡಿಸುವಲ್ಲಿ ವಿಫಲವಾಗಿದೆ. ಕ್ಯಾಚ್‌ಮೆಂಟ್ ಏರಿಯಾದಲ್ಲಿ ಮಳೆಯೇ ಇಲ್ಲದಿರುವಾಗ, ಬೆಂಗಳೂರು ಸೇರಿದಂತೆ ರಾಜ್ಯಕ್ಕೆ ಕುಡಿಯುವ ನೀರೇ ಇಲ್ಲದಿರುವಾಗ ತಮಿಳುನಾಡಿಗೆ ನೀರು ಹರಿಸುವುದು ಹೇಗೆ? ಎಂದು ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: ‘ಪ್ರಧಾನಿ ಸರ್ ನೀವು ತಕ್ಷಣವೇ ಹಸ್ತಕ್ಷೇಪ ಮಾಡಿ’: ಮೇಕೆದಾಟು ಯೋಜನೆ ವಿರೋಧಿಸಿ ವಿಜಯ್ ಮೋದಿಗೆ ಪತ್ರ

“ಪ್ರಾಧಿಕಾರದ ತೀರ್ಮಾನಕ್ಕೆ ಬದ್ಧವಾಗಬೇಕಾದ ಅನಿವಾರ್ಯತೆ ಇದೆ”: ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ

ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ, ಕಾವೇರಿ ವಿಚಾರದಲ್ಲಿ ಸರ್ಕಾರದ ಇಕ್ಕಟ್ಟಿನ ಪರಿಸ್ಥಿತಿ ಬಗ್ಗೆ ವಿವರಿಸಿದ್ದಾರ. ಮಳೆ ಕಡಿಮೆಯಾಗಿ ಕಾವೇರಿಯಲ್ಲಿ ನೀರು ಕಡಿಮೆಯಾಗಿರುವುದು ನಿಜ. ಆದರೆ, ನಾವು ಕಾವೇರಿ ನಿರ್ವಹಣಾ ಪ್ರಾಧಿಕಾರದ ಚೌಕಟ್ಟಿನಲ್ಲಿದ್ದು, ಅವರ ಆದೇಶಕ್ಕೆ ಬದ್ಧವಾಗಬೇಕಾದ ಅನಿವಾರ್ಯತೆ ನಮಗಿದೆ. ರಾಜ್ಯಕ್ಕೆ ಬೇಕಾದ ಕುಡಿಯುವ ನೀರನ್ನು ಇಟ್ಟುಕೊಂಡು ತಮಿಳುನಾಡಿಗೆ ನೀರು ನೀಡುವ ಬಗ್ಗೆ ಪರಿಶೀಲಿಸಲಾಗುವುದು. ಈ ವಿಷಯದಲ್ಲಿ ಮುಖ್ಯಮಂತ್ರಿಗಳು ಕೈಗೊಳ್ಳುವ ತೀರ್ಮಾನವೇ ಅಂತಿಮವಾಗಿದ್ದು, ನೀರಿನ ಪರಿಸ್ಥಿತಿಯನ್ನು ನೋಡಿಕೊಂಡು ಮುಂದಿನ ಹೆಜ್ಜೆ ಇಡಲಾಗುವುದು ಎಂದು ಹೇಳಿದರು.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಜನ ನಾಯಗನ್’ ಸಿನಿಮಾಗೆ 6 ಹೊಸ ದೃಶ್ಯಗಳ ಸೇರ್ಪಡೆ ಬಗ್ಗೆ ಸುಳಿವು ನೀಡಿದ ನಿರ್ದೇಶಕ – Kannada News | CM Vijay starrer Jana Nayagan director H Vinoth says 6 Deleted Scenes to be added in theatres

ತಮಿಳುನಾಡು ಮುಖ್ಯಮಂತ್ರಿ, ಕಾಲಿವುಡ್ ನಟ ವಿಜಯ್ (CM Vijay) ಅವರ ಅಭಿನಯದ ಕೊನೆಯ ಸಿನಿಮಾ ‘ಜನ ನಾಯಗನ್’ ಜುಲೈ 23ರಂದು ತೆರೆಕಂಡು ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದಿದೆ. ಇದರ ಬೆನ್ನಲ್ಲೇ ಅಭಿಮಾನಿಗಳಿಗೆ ನಿರ್ದೇಶಕ ಹೆಚ್. ವಿನೋದ್ ಅವರು ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ. ಮುಂದಿನ ವಾರದಿಂದ ‘ಜನ ನಾಯಗನ್’ (Jana Nayagan) ಚಿತ್ರಕ್ಕೆ ಡಿಲೀಟ್ ಮಾಡಲಾಗಿದ್ದ 6 ಹೊಸ ದೃಶ್ಯಗಳನ್ನು ಸೇರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಚೆನ್ನೈನಲ್ಲಿ ಸೋಮವಾರ (ಜುಲೈ 27) ನಡೆದ ‘ಜನ ನಾಯಗನ್’ ಸಕ್ಸಸ್ ಮೀಟ್ ಕಾರ್ಯಕ್ರಮದಲ್ಲಿ ನಿರ್ದೇಶಕ ಹೆಚ್. ವಿನೋದ್ ಭಾಗವಹಿಸಿ ಚಿತ್ರದ ಕುರಿತು ಹಲವು ವಿಷಯಗಳನ್ನು ಹಂಚಿಕೊಂಡರು. ಈ ವೇಳೆ ನಿರೂಪಕರು, ‘ಸಿನಿಮಾದಲ್ಲಿ ಡಿಲೀಟ್ ಮಾಡಿದ ದೃಶ್ಯಗಳಿವೆಯೇ’ ಎಂದು ಪ್ರಶ್ನಿಸಿದಾಗ, ನಿರ್ದೇಶಕರು ಈ ವಿಚಾರವನ್ನು ಬಹಿರಂಗಪಡಿಸಿದರು.

ಯಾವೆಲ್ಲಾ ದೃಶ್ಯಗಳು ಸೇರ್ಪಡೆಯಾಗಲಿವೆ?

‘ಹೌದು, ನಾವು ಸಿನಿಮಾದಿಂದ ಡಿಲೀಟ್ ಮಾಡಿದ್ದ 6 ದೃಶ್ಯಗಳಿವೆ. ಅದರಲ್ಲಿ ವಿಜಯ್ ಅವರ 2 ಕಾಮಿಡಿ ದೃಶ್ಯಗಳು, 2 ಆಕ್ಷನ್ ದೃಶ್ಯಗಳು ಹಾಗೂ 2 ಎಮೋಷನಲ್ ದೃಶ್ಯಗಳಿವೆ. ಇವುಗಳನ್ನು ಥಿಯೇಟರ್‌ಗಳಲ್ಲಿ ಪ್ರದರ್ಶಿಸುವ ಕುರಿತು ನಿರ್ಮಾಣ ಸಂಸ್ಥೆ ಯೋಜನೆ ರೂಪಿಸುತ್ತಿದೆ. ನನ್ನ ಕಡೆಯಿಂದ ನಾನು ಸಿದ್ಧನಿದ್ದು, ಮುಂದಿನ ವಾರದಿಂದ ಇವುಗಳನ್ನು ಚಿತ್ರಮಂದಿರಗಳಲ್ಲಿ ಸೇರಿಸಲು ಆಲೋಚಿಸುತ್ತಿದ್ದೇವೆ’ ಎಂದು ಹೆಚ್. ವಿನೋದ್ ಸ್ಪಷ್ಟಪಡಿಸಿದ್ದಾರೆ.

ಅನಿರುದ್ಧ್ ರವಿಚಂದರ್ ಭಾವುಕ ಪೋಸ್ಟ್:

‘ಜನ ನಾಯಗನ್’ ಬಿಡುಗಡೆಯಾದ ಬೆನ್ನಲ್ಲೇ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಸೋಶಿಯಲ್ ಮೀಡಿಯಾದಲ್ಲಿ ವಿಶೇಷ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ವಿಜಯ್ ಅವರ ಕೊನೆಯ ಸಿನಿಮಾಗೆ ಸಂಗೀತ ಸಂಯೋಜಿಸುವ ಅವಕಾಶ ಸಿಕ್ಕಿದ್ದಕ್ಕೆ ಧನ್ಯವಾದ ತಿಳಿಸಿರುವ ಅವರು, ವಿಜಯ್ ಜೊತೆಗಿನ ಅಪರೂಪದ ಫೋಟೋ ಒಂದನ್ನು ಹಂಚಿಕೊಂಡು ಭಾವುಕರಾಗಿದ್ದಾರೆ.

ಚಿತ್ರದ ತಾರಾಗಣ ಹಾಗೂ ಹಿನ್ನೆಲೆ:

ಕೆವಿಎನ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ವೆಂಕಟ್ ಕೆ. ನಾರಾಯಣ್ ನಿರ್ಮಿಸಿರುವ ‘ಜನ ನಾಯಗನ್’ ಚಿತ್ರವನ್ನು ಹೆಚ್. ವಿನೋದ್ ನಿರ್ದೇಶಿಸಿದ್ದಾರೆ. ಜನವರಿಯಲ್ಲಿ ಬಿಡುಗಡೆಯಾಗಬೇಕಿದ್ದ ಈ ಸಿನಿಮಾ ಸೆನ್ಸಾರ್ ಮಂಡಳಿಯ ಪ್ರಮಾಣಪತ್ರ ವಿಳಂಬ ಮತ್ತು ಏಪ್ರಿಲ್‌ನಲ್ಲಿ ಎದುರಾದ ಪೈರಸಿ ಸಮಸ್ಯೆಯಿಂದಾಗಿ ಜುಲೈಗೆ ಮುಂದೂಡಲ್ಪಟ್ಟಿತ್ತು.

ಇದನ್ನೂ ಓದಿ: ಎ ಸರ್ಟಿಫಿಕೇಟ್ ಸಿನಿಮಾಗೆ ಮಕ್ಕಳನ್ನು ಕರೆತಂದ ಪೋಷಕರು; ‘ಜನ ನಾಯಗನ್’ ಪ್ರದರ್ಶನ ಬಂದ್

ಈ ಸಿನಿಮಾದಲ್ಲಿ ದಳಪತಿ ವಿಜಯ್ ಜೊತೆ ಬಾಬಿ ಡಿಯೋಲ್, ಪೂಜಾ ಹೆಗ್ಡೆ ಹಾಗೂ ಮಮಿತಾ ಬೈಜು ಅವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ನಾಸರ್, ಪ್ರಕಾಶ್ ರಾಜ್, ಗೌತಮ್ ವಾಸುದೇವ್ ಮೆನನ್, ನಾರಾಯಣ್ ಮತ್ತು ಪ್ರಿಯಾಮಣಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರವು 2023ರಲ್ಲಿ ತೆಲುಗಿನಲ್ಲಿ ಮೂಡಿಬಂದಿದ್ದ ‘ಭಗವಂತ್ ಕೇಸರಿ’ ಸಿನಿಮಾದ ರಿಮೇಕ್ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಪ್ರಧಾನ್ ಅವರನ್ನು ತೆಗೆದುಹಾಕಿ ಪ್ರಧಾನ ಮಂತ್ರಿಯನ್ನು ಉಳಿಸಿಕೊಂಡಿರಿ; ಸಂಸತ್​​ನಲ್ಲಿ ಅಖಿಲೇಶ್ ಯಾದವ್ ವ್ಯಂಗ್ಯ – Kannada News | You removed Pradhan to save Pradhan Mantri Akhilesh Yadav jibe in Parliament Session

ನವದೆಹಲಿ, ಜುಲೈ 28: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ ಬೆನ್ನಲ್ಲೇ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ (Dharmendra Pradhan) ರಾಜೀನಾಮೆ ನೀಡಿದ್ದರು. ಈ ಬಗ್ಗೆ ಇಂದು ಲೋಕಸಭಾ ಅಧಿವೇಶನದಲ್ಲಿ ಮಾತನಾಡಿರುವ ಸಮಾಜವಾದಿ ಪಾರ್ಟಿ (SP) ಅಧ್ಯಕ್ಷ ಅಖಿಲೇಶ್ ಯಾದವ್, “ಕೇಂದ್ರ ಸರ್ಕಾರ ಪ್ರಧಾನ್ ಅವರನ್ನು ತೆಗೆದುಹಾಕುವ ಮೂಲಕ ಪ್ರಧಾನ ಮಂತ್ರಿಯನ್ನು ಉಳಿಸಿಕೊಂಡಿದೆ” ಎಂದು ವ್ಯಂಗ್ಯವಾಡಿದ್ದಾರೆ.

ಪ್ರಶ್ನೆ ಪತ್ರಿಕೆ ಸೋರಿಕೆ ತಡೆ ವಿಧೇಯಕದ ಕುರಿತು ಲೋಕಸಭೆಯಲ್ಲಿ ನಡೆದ 10 ಗಂಟೆಗಳ ಸುದೀರ್ಘ ಚರ್ಚೆಯ ವೇಳೆ ಮಾತನಾಡಿದ ಅಖಿಲೇಶ್ ಯಾದವ್, “ಧರ್ಮೇಂದ್ರ ಪ್ರಧಾನ್ ಅವರನ್ನು ಹುದ್ದೆಯಿಂದ ತೆಗೆದುಹಾಕುವ ಮೂಲಕ ಸರ್ಕಾರವು ತನ್ನ ಪ್ರಧಾನ ಮಂತ್ರಿಯನ್ನು ಉಳಿಸಿಕೊಂಡಿದೆ. ಸರ್ಕಾರವನ್ನು ತಲೆಬಾಗುವಂತೆ ಮಾಡಿದ ಯುವಜನತೆಯ ಮನೋಬಲ ಮತ್ತು ಒಗ್ಗಟ್ಟಿಗೆ ನಾನು ಸಲಾಂ ಹೇಳುತ್ತೇನೆ. ಪ್ರಧಾನ್ ಅವರನ್ನು ಪದಚ್ಯುತಿಗೊಳಿಸಿ ಮಂತ್ರಿಯನ್ನು ಉಳಿಸಿದ್ದಕ್ಕೆ ಬಿಜೆಪಿ ಸಂಸದರು ನಿಟ್ಟುಸಿರು ಬಿಟ್ಟಿದ್ದಾರೆ” ಎಂದು ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವೃತ್ತಿಪರ ಫುಟ್‌ಬಾಲ್ ಆಟಗಾರ ಆಗಲಿದ್ದಾರೆ ಬಾಲಿವುಡ್ ನಟ ಟೈಗರ್ ಶ್ರಾಫ್ – Kannada News | Actor Tiger Shroff All Set To Make Professional Football Debut In Durand Cup

ಬಾಲಿವುಡ್‌ ನಟ ಟೈಗರ್ ಶ್ರಾಫ್ (Tiger Shroff) ಈಗ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ. ತಮ್ಮ ಮಾರ್ಷಲ್ ಆರ್ಟ್ಸ್ ಮತ್ತು ಫಿಟ್ನೆಸ್‌ಗೆ ಹೆಸರಾಗಿರುವ ಅವರು ಫುಟ್​​ಬಾಲ್ ಮೈದಾನಕ್ಕೆ ಇಳಿಯುತ್ತಿದ್ದಾರೆ. ಹಾಗಂತ ಅವರು ಫುಟ್​​ಬಾಲ್ ಆಧರಿಸಿ ಸಿನಿಮಾ ಮಾಡುತ್ತಿದ್ದಾರೆ ಎಂದುಕೊಳ್ಳಬೇಡಿ. ಅವರು ಈಗ ವೃತ್ತಿಪರ ಫುಟ್‌ಬಾಲ್‌ ಜಗತ್ತಿಗೆ ಕಾಲಿಡಲಿದ್ದಾರೆ ಎಂಬ ವರದಿಗಳು ಹೇಳಿವೆ. ಪ್ರತಿಷ್ಠಿತ ಡ್ಯುರಾಂಡ್ ಕಪ್ ಟೂರ್ನಿಯಲ್ಲಿ ಅವರು ಮುಂಬೈ ಎಫ್‌ಸಿ ತಂಡವನ್ನು ಪ್ರತಿನಿಧಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಇದು ಅವರ ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ.

ಉದ್ಯಮಿ ಅಲಿ ಅಹ್ಮದ್ ಒಡೆತನದ ಮುಂಬೈ ಎಫ್‌ಸಿ ತಂಡದೊಂದಿಗೆ ಟೈಗರ್ ಶ್ರಾಫ್ ತರಬೇತಿ ಪಡೆಯುತ್ತಿದ್ದಾರೆ. ಅವರು ತಂಡದೊಂದಿಗೆ ನಿಯಮಿತವಾಗಿ ಅಭ್ಯಾಸ ಅವಧಿಗಳಲ್ಲಿ ಭಾಗವಹಿಸುತ್ತಿದ್ದಾರೆ. ಅವರ ಕ್ರೀಡಾ ಕೌಶಲ್ಯ ಮತ್ತು ಬದ್ಧತೆಗೆ ತರಬೇತುದಾರರು ಫುಲ್ ಫಿದಾ ಆಗಿದ್ದಾರೆ. ಭವಿಷ್ಯದಲ್ಲಿ ಅವರು ತಂಡದ ಖಾಯಂ ಸದಸ್ಯರಾಗುವ ಸಾಧ್ಯತೆಯೂ ಇದೆ.

ಡ್ಯುರಾಂಡ್ ಕಪ್ ಪಂದ್ಯಾವಳಿಗಳಿಗಾಗಿ ಟೈಗರ್ ಶ್ರಾಫ್ ಮತ್ತು ಅವರ ತಂಡ ಜುಲೈ 30ರಂದು ಶಿಲ್ಲಾಂಗ್‌ಗೆ ಪ್ರಯಾಣ ಬೆಳೆಸಲಿದೆ. ನಟ ಅಥವಾ ಕ್ಲಬ್‌ನಿಂದ ಈ ಬಗ್ಗೆ ಇನ್ನು ಅಧಿಕೃತ ಪ್ರಕಟಣೆ ಹೊರಬೀಳಬೇಕಿದೆ.

ಇದನ್ನೂ ಓದಿ: ಅಬ್ಬಾ ಅದು ಹೆಂಗೆ ಫ್ಲಿಪ್ ಮಾಡ್ತಾರೆ ನೋಡಿ ಟೈಗರ್ ಶ್ರಾಫ್

ಟೈಗರ್ ಶ್ರಾಫ್ ಅವರು ಕ್ರಿಕೆಟ್ ಹಾಗೂ ಫುಟ್​​ಬಾಲ್ ಬಗ್ಗೆ ಆಸಕ್ತಿ ಹೊಂದಿದ್ದಾರೆ. ಅವರು ಆಟ ಆಡೋದು ಆಗಾಗ ಕಾಣಿಸುತ್ತದೆ. ಈ ವಿಡಿಯೋಗಳು ಆಗಾಗ ವೈರಲ್ ಆಗಿ ಸದ್ದು ಮಾಡುತ್ತವೆ. ಸಿನಿಮಾ ವಿಷಯಕ್ಕೆ ಬಂದರೆ ಟೈಗರ್ ಶ್ರಾಫ್ ಇತ್ತೀಚೆಗೆ ಸಂಜಯ್ ದತ್ ಜೊತೆ ‘ಬಾಗಿ 4’ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಪ್ರಸ್ತುತ ಅವರು ರಾಮ್ ಮಾಧ್ವಾನಿ ನಿರ್ದೇಶನದ ಹೊಸ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಇದರೊಂದಿಗೆ ಧರ್ಮ ಪ್ರೊಡಕ್ಷನ್ಸ್ ಸಂಸ್ಥೆಯ ‘ಲಗ್ ಜಾ ಗಲೇ’ ಸಿನಿಮಾದಲ್ಲೂ ನಟಿಸುತ್ತಿದ್ದಾರೆ. ಇದೀಗ ಅವರು ಫುಟ್‌ಬಾಲ್ ಮೈದಾನಕ್ಕೆ ಇಳಿಯುತ್ತಿರುವುದು ಕುತೂಹಲ ಮೂಡಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಇಂದು ಸಿಎಂ ಡಿಕೆ ಶಿವಕುಮಾರ್​​ ವಿವಾಹ ವಾರ್ಷಿಕೋತ್ಸವ: ಮದುವೆ ಆಮಂತ್ರಣ ಪತ್ರ ವೈರಲ್​ – Kannada News | Retro Vibes: 1993 Wedding Invitation of Karnataka CM DK Shivakumar Goes Viral on His 33rd Anniversary

ಡಿಕೆಶಿ ಮದುವೆ ಆಮಂತ್ರಣಪತ್ರ ವೈರಲ್​

ಬೆಂಗಳೂರು, ಜುಲೈ 28: ಕರ್ನಾಟಕದ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar)​​ ಇಂದು (ಜುಲೈ 28) ವಿವಾಹ ವಾರ್ಷಿಕೋತ್ಸವ (Wedding Anniversary) ಆಚರಿಸಿಕೊಳ್ಳುತ್ತಿದ್ದು, ಉಷಾ ಅವರ ಜೊತೆ ದಾಂಪತ್ಯ ಜೀವನ ಆರಂಭಿಸಿ 33 ವರ್ಷಗಳು ಕಳೆದಿವೆ. ಈ ಶುಭ ಸಂದರ್ಭದಲ್ಲಿ ಸಿಎಂಗೆ ಶುಭಾಶಯದ ಮಹಾಪೂರವೇ ಹರಿದುಬರುತ್ತಿದ್ದು, ಅವರ ಮದುವೆಯ ಆಮಂತ್ರಣ ಪತ್ರವೂ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್​​ ಆಗಿದೆ. ರಾಜಕೀಯ ನಾಯಕರು, ಡಿಕೆಶಿ ಅಭಿಮಾನಿಗಳು ಇದನ್ನು ಹಂಚಿಕೊಳ್ಳುವ ಮೂಲಕ ಶುಭ ಹಾರೈಸುತ್ತಿದ್ದಾರೆ.

ವೈರಲ್​​ ಆದ ಆಮಂತ್ರಣದಲ್ಲಿ ಏನಿದೆ?

27 ಜುಲೈ 1993ರಲ್ಲಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಡಿಕೆ ಶಿವಕುಮಾರ್ ಮತ್ತು ಉಷಾ ಅವರ ವಿವಾಹ ಬೆಳಿಗ್ಗೆ 9.45ರಿಂದ 10.25ರ ಕನ್ಯಾ ಲಗ್ನ ಮುಹೂರ್ತದಲ್ಲಿ ನೆರವೇರಿತ್ತು. ಮದುವೆ ಸಂದರ್ಭದಲ್ಲಿಯೇ ಡಿಕೆಶಿ​​ ಅವರು ಸಾತನೂರು ಕ್ಷೇತ್ರದ ಶಾಸಕರಾಗಿದ್ದರು ಎಂಬುದನ್ನು ವಿವಾಹ ಆಮಂತ್ರಣ ಪತ್ರದಲ್ಲಿ ಗಮನಿಸಬಹುದಾಗಿದೆ.

ಇದನ್ನೂ ಓದಿ: ಸಂಪುಟ ವಿಸ್ತರಣೆಗೆ ಇಂದೇ ಗ್ರೀನ್ ಸಿಗ್ನಲ್? ದೆಹಲಿಯಲ್ಲಿ ಡಿಕೆಶಿ, ಸಿದ್ದರಾಮಯ್ಯ, ಹರಿಪ್ರಸಾದ್ ಮಹತ್ವದ ಸಭೆ

ನೆಟ್ಟಿಗರ ಪ್ರತಿಕ್ರಿಯೆ ಏನು?

ವೈರಲ್​​ ಆಗಿರುವ ಡಿಕೆಶಿ ಮದುವೆ ಆಮಂತ್ರಣ ಪತ್ರಿಕೆ ಕಂಡು ನೆಟ್ಟಿಗರು ನಾನಾ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹಳೆಯ ನೆನಪುಗಳು ಯಾವಾಗಲೂ ಶ್ರೇಷ್ಠ ಎಂದು ಒಬ್ಬರು ತಿಳಿಸಿದ್ದರೆ, ಮತ್ತೊಬ್ಬರು ಇಂತಹ ನೆನಪುಗಳು ಮಧುರ ಎಂದು ತಿಳಿಸಿದ್ದಾರೆ.

ಡಿಕೆಶಿ ಮತ್ತು ಉಷಾ ದಂಪತಿಗೆ ಐಶ್ವರ್ಯಾ, ಆಭರಣ ಎಂಬ ಇಬ್ಬರು ಪುತ್ರಿಯರು ಹಾಗೂ ಆಕಾಶ್ ಎಂಬ ಒರ್ವ ಪುತ್ರ ಇದ್ದು, ಈ ಪೈಕಿ ಐಶ್ವರ್ಯಾ ಅವರ ವಿವಾಹ ಅದಾಗಲೇ ನೆರವೇರಿದೆ. ಕೆಫೆ ಕಾಫಿ ಡೇ ಸಂಸ್ಥಾಪಕ ದಿವಂಗತ ವಿ.ಜಿ. ಸಿದ್ಧಾರ್ಥ ಹಾಗೂ ಮಾಳವಿಕಾ ಕೃಷ್ಣ ಅವರ ಪುತ್ರ (ಮಾಜಿ ಸಿಎಂ ಎಸ್.ಎಂ. ಕೃಷ್ಣ ಅವರ ಮೊಮ್ಮಗ) ಅಮರ್ತ್ಯ ಹೆಗ್ಡೆ ಅವರೊಂದಿಗೆ 14 ಫೆಬ್ರವರಿ 2021 ರಂದು ಇವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮೇ 2026 ರಲ್ಲಿ ಈ ದಂಪತಿಗೆ ಹೆಣ್ಣು ಮಗು ಜನಿಸಿದ್ದು, ಡಿಕೆಶಿ ತಾತ ಕೂಡ ಆಗಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 3:19 pm, Tue, 28 July 26

Source link

Exit mobile version