Headlines

ಕಾವೇರಿ ಸಂದಾನ ಸೂತ್ರಕ್ಕೆ‌ ದಿನಾಂಕ ಫಿಕ್ಸ್: ಆ.3ರಂದು ಕರ್ನಾಟಕ-ತಮಿಳುನಾಡು ಸಿಎಂ ಸಭೆ ನಿಗದಿ – Kannada News | Cauvery water issue: Tamil Nadu CM Vijay to meet Karnataka CM DK Shivakumar on August 3 In Bengaluru

ಬೆಂಗಳೂರು, (ಜುಲೈ 28): ಕಾವೇರಿ ನದಿ ನೀರು ಹಂಚಿಕೆ ವಿವಾದದ (Cauvery River Water Dispute) ನಡುವೆಯೇ ಕರ್ನಾಟಕ ಮತ್ತು ತಮಿಳುನಾಡು ನಡುವಿನ ಸಂಬಂಧಕ್ಕೆ ಹೊಸ ತಿರುವು ಸಿಗುವ ಸಾಧ್ಯತೆ ಕಾಣಿಸಿಕೊಂಡಿದೆ. ಕಾವೇರಿ ನೀರು ವಿವಾದ ವಿಚಾರವಾಗಿ ಕರ್ನಾಟಕ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಹಾಗೂ ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ನಡುವಿನ ಸಂದಾನ ಮಾತುಕತೆಗೆ ವೇದಿಕೆ ಸಿದ್ಧವಾಗಿದೆ. ಮಳೆ ಕೊರತೆಯ ಕಾರಣ ಜಲಾಶಯಗಳಲ್ಲಿನ ನೀರಿನ ಸಂಗ್ರಹ ತಳ ತಲುತ್ತಿದ್ದು, ಕಾವೇರಿ ನದಿ ನೀರು ಹಂಚಿಕೆ…

Read More

Success Story: ಕಿವುಡ ತಂದೆಯ ಕನಸು ನನಸಾಗಿಸಿದ ಮಗ; AI ಎಂಜಿನಿಯರ್ ಆಗಿ 1.06 ಕೋಟಿ ರೂ. ಪ್ಯಾಕೇಜ್ ಪಡೆದ ಅಖಿಲೇಶ್ – Kannada News | From Rural Poverty to Global Tech: Tailor’s Son Akhilesh Secures 1.06 Crore Package as AI Engineer

1.06 ಕೋಟಿ ರೂ. ಪ್ಯಾಕೇಜ್ ಪಡೆದ ಅಖಿಲೇಶ್ ಕಷ್ಟಪಟ್ಟು ದುಡಿಯುವ ಪೋಷಕರ ತ್ಯಾಗ, ಮಕ್ಕಳ ಪರಿಶ್ರಮ ಮತ್ತು ಸರಿಯಾದ ಮಾರ್ಗದರ್ಶನ ಒಂದಾದರೆ ಯಾವುದೇ ಕನಸನ್ನೂ ನನಸಾಗಿಸಬಹುದು ಎಂಬುದಕ್ಕೆ ಆಂಧ್ರ ಪ್ರದೇಶದ ಕಾಕಿನಾಡ ಮೂಲದ ಅಖಿಲೇಶ್ ಉತ್ತಮ ಉದಾಹರಣೆಯಾಗಿದ್ದಾರೆ. ಕಿವುಡ ಮತ್ತು ಮೂಕ ತಂದೆಯ ಮಗನಾದ ಅಖಿಲೇಶ್ ಇದೀಗ ಕೆನಡಾ ಮೂಲದ AI ಕಂಪನಿಯಲ್ಲಿ ವರ್ಷಕ್ಕೆ 1.06 ಕೋಟಿ ರೂ. (CTC) ವೇತನದೊಂದಿಗೆ AI ಎಂಜಿನಿಯರ್ ಆಗಿ ಆಯ್ಕೆಯಾಗಿದ್ದು, ಅವರ ಸಾಧನೆ ಎಲ್ಲೆಡೆ ಮೆಚ್ಚುಗೆಗೆ ಪಾತ್ರವಾಗಿದೆ. ಟೈಲರಿಂಗ್ ವೃತ್ತಿಯಲ್ಲೇ…

Read More

ಶಹಜಹಾನ್‌ಪುರದಲ್ಲಿ ಕನ್ವರ್ ಯಾತ್ರೆಗಾಗಿ 1,300 ಪೊಲೀಸರ ನಿಯೋಜನೆ, ಮಾಂಸದಂಗಡಿ ಬಂದ್ – Kannada News | 1300 police deployed for Kanwar Yatra 2026 in Shahjahanpur

ಶಹಜಹಾನ್‌ಪುರ, ಜುಲೈ 28: ಉತ್ತರ ಪ್ರದೇಶದ (Uttar Pradesh) ಶಹಜಹಾನ್‌ಪುರದಲ್ಲಿ ಕನ್ವರ್ ಯಾತ್ರೆಯನ್ನು (Kanwar Yatra) ಸುಸೂತ್ರವಾಗಿ ನಡೆಸಲು ಸೂಕ್ತ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶಿವಲಿಂಗಕ್ಕೆ ಜಲಾಭಿಷೇಕ ಮಾಡಲು ಗೋಲಾ ಗೋಕರ್ಣನಾಥಕ್ಕೆ ತೆರಳುವ ಮುನ್ನ ಭಕ್ತರು ಪಾಂಚಾಲ ಘಾಟ್‌ನಿಂದ ಗಂಗಾಜಲವನ್ನು ಸಂಗ್ರಹಿಸುತ್ತಾರೆ. ಭಕ್ತಾದಿಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಈ ಮಾರ್ಗದಲ್ಲಿ 1,100 ಕಾನ್ಸ್‌ಟೇಬಲ್‌ಗಳು, 210 ಸಬ್-ಇನ್ಸ್‌ಪೆಕ್ಟರ್‌ಗಳು, 17 ಇನ್ಸ್‌ಪೆಕ್ಟರ್‌ಗಳು, 7 ಸರ್ಕಲ್ ಆಫೀಸರ್‌ಗಳು ಮತ್ತು 44 ಮೋಟಾರ್ ಸೈಕಲ್ ಗಸ್ತು ಪಡೆಗಳನ್ನು ನಿಯೋಜಿಸಲಾಗಿದೆ. ಈ ಬಗ್ಗೆ…

Read More

ಮೀಸಲಾತಿ ಕುರಿತು ಶಿಲ್ಪಾ ಶೆಟ್ಟಿ ನಕಲಿ ಹೇಳಿಕೆ ವೈರಲ್: ‘ಸಂಪೂರ್ಣ ಸುಳ್ಳು’ ಎಂದು ಖಂಡಿಸಿದ ನಟಿ – Kannada News | Shilpa Shetty Slams Fake Reservation Statement Viral Post Clarification

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ (Shilpa Shetty) ಅವರ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಒಂದು ನಕಲಿ ಪೋಸ್ಟ್ ಹರಿದಾಡುತ್ತಿದೆ. ಅದನ್ನು ನೋಡಿದ ಅನೇಕರು ಶಿಲ್ಪಾ ಶೆಟ್ಟಿ ಅವರನ್ನು ಕಟುವಾಗಿ ಟೀಕಿಸಲು ಆರಂಭಿಸಿದ್ದಾರೆ. ವೈರಲ್ ಆಗಿರುವ ಪೋಸ್ಟ್​ನಲ್ಲಿ ಶಿಲ್ಪಾ ಶೆಟ್ಟಿ ಅವರು ಜಾತಿ ಆಧಾರಿತ ಮೀಸಲಾತಿ (Reservation) ಬಗ್ಗೆ ವಿರೋಧಿ ನಿಲುವು ಹೊಂದಿದ್ದಾರೆ ಎಂಬುದನ್ನು ಸೂಚಿಸಲಾಗಿದೆ. ಆದರೆ ಅದು ನಕಲಿ ಪೋಸ್ಟ್ ಆಗಿದ್ದು, ಅದರ ವಿರುದ್ಧ ಶಿಲ್ಪಾ ಶೆಟ್ಟಿ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಪಷ್ಟನೆ ನೀಡಿದ ಶಿಲ್ಪಾ…

Read More

‘ಪ್ರಧಾನಿ ಸರ್ ನೀವು ತಕ್ಷಣವೇ ಹಸ್ತಕ್ಷೇಪ ಮಾಡಿ’: ಮೇಕೆದಾಟು ಯೋಜನೆ ವಿರೋಧಿಸಿ ವಿಜಯ್ ಮೋದಿಗೆ ಪತ್ರ – Kannada News | Tamil Nadu CM Joseph Vijay Writes To PM Modi Opposing Karnataka Mekedatu Project

ಚೆನ್ನೈ ಜು .28: ಕರ್ನಾಟಕದ ಮೇಕೆದಾಟು ಅಣೆಕಟ್ಟು ಯೋಜನೆಗೆ (Mekedatu Dam Project) ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು ಕೇಂದ್ರ ಸರ್ಕಾರದ ತಕ್ಷಣದ ಹಸ್ತಕ್ಷೇಪಕ್ಕೆ ಆಗ್ರಹಿಸಿದ್ದಾರೆ. ನೆನ್ನೆ ಅಂದರೆ ಜು.27ರಂದು ದೆಹಲಿ ಮುಂಗಾರು ಅಧಿವೇಶದ ವೇಳೆ ಸಂಸತ್ತಿನಲ್ಲಿ ತಮಿಳುನಾಡಿನ ಸಂಸದ ಡಾ. ಅನ್ಬುಮಣಿ ರಾಮದಾಸ್ ಅವರು ಈ ಬಗ್ಗೆ ಕೇಳಿದ ಪ್ರಶ್ನೆಗೆ ಕೇಂದ್ರ ಜಲಶಕ್ತಿ ರಾಜ್ಯ ಸಚಿವ ರಾಜ್ ಭೂಷಣ್ ಚೌಧರಿ…

Read More

ಟೀಮ್ ಇಂಡಿಯಾಗೆ ಕ್ಲೀನ್ ಸ್ವೀಪ್ ಗೆಲುವು ಅನಿವಾರ್ಯ! – Kannada News | IND vs SL: Clean Sweep Crucial for Team India

ಆಗಸ್ಟ್ 15 ರಿಂದ ಆರಂಭವಾಗಲಿರುವ ಶ್ರೀಲಂಕಾ ಪ್ರವಾಸದ ಎರಡು ಪಂದ್ಯಗಳ ಟೆಸ್ಟ್ ಸರಣಿಯು ಟೀಮ್ ಇಂಡಿಯಾ ಪಾಲಿಗೆ ಕೇವಲ ಮತ್ತೊಂದು ದ್ವಿಪಕ್ಷೀಯ ಸರಣಿಯಲ್ಲ. ಇದು ಇಂಗ್ಲೆಂಡ್‌ನಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ (WTC) ಫೈನಲ್ ಟಿಕೆಟ್ ನಿರ್ಧರಿಸುವ ಪ್ರಮುಖ ಕೊಂಡಿಯಾಗಿದೆ. ಹೀಗಾಗಿ, ಭಾರತ ತಂಡ ಈ ಸರಣಿಯನ್ನು 2-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡುವುದು ಅನಿವಾರ್ಯವಾಗಿದೆ. ಇದಕ್ಕೆ ಪ್ರಮುಖ ಕಾರಣಗಳೇನು ಎಂಬುದರ ಸಂಪೂರ್ಣ ವಿಶ್ಲೇಷಣೆ ಇಲ್ಲಿದೆ. WTC ಅಂಕಪಟ್ಟಿ ಮತ್ತು PCT ಲೆಕ್ಕಾಚಾರ: ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್…

Read More

Japan Earthquake: ಜಪಾನ್‌ನಲ್ಲಿ 7.1 ತೀವ್ರತೆಯ ಪ್ರಬಲ ಭೂಕಂಪ: ಸುನಾಮಿ ಎಚ್ಚರಿಕೆ, ಕಟ್ಟಡಗಳು ನೆಲಸಮ – Kannada News | Japan Earthquake: 7.1 Magnitude Hits Kumamoto, Tsunami Warning Issued

ಟೋಕಿಯೋ, ಜುಲೈ 28: ಜಪಾನ್‌ನ ದಕ್ಷಿಣ ಮುಖ್ಯ ದ್ವೀಪವಾದ ಕ್ಯುಶುವಿನ ಕುಮಾಮೊಟೊ ಪ್ರಾಂತ್ಯದಲ್ಲಿ ಮಂಗಳವಾರ 7.1 ತೀವ್ರತೆಯ ಪ್ರಬಲ ಭೂಕಂಪ(Earthquake) ಸಂಭವಿಸಿದೆ. ಭೂಕಂಪದ ತೀವ್ರತೆಗೆ ಹಲವು ಕಟ್ಟಡಗಳು ಕುಸಿದು ಬಿದ್ದಿದ್ದು, ಹಲವಾರು ಜನರು ಗಾಯಗೊಂಡಿದ್ದಾರೆ ಎಂದು ಜಪಾನ್ ಪ್ರಧಾನಿ ಸನೇ ತಕೈಚಿ ಸ್ಪಷ್ಟಪಡಿಸಿದ್ದಾರೆ. ಭೂಕಂಪದ ಕೇಂದ್ರಬಿಂದು ಸಮುದ್ರ ಮಟ್ಟದಿಂದ 10 ಕಿಲೋಮೀಟರ್ ಆಳದಲ್ಲಿದ್ದು, ಕರಾವಳಿ ತೀರದಲ್ಲಿ 1 ಮೀಟರ್ (3.28 ಅಡಿ) ಎತ್ತರದ ಸುನಾಮಿ ಅಲೆಗಳು ಏಳುವ ಸಾಧ್ಯತೆಯಿರುವುದರಿಂದ ಕರಾವಳಿ ನಿವಾಸಿಗಳಿಗೆ ಎತ್ತರದ ಪ್ರದೇಶಗಳಿಗೆ ತೆರಳಲು ಜಪಾನ್…

Read More

ಬರದ ಮಧ್ಯೆ ಕರ್ನಾಟಕಕ್ಕೆ ಬರಸಿಡಿಲು: ತಮಿಳುನಾಡಿಗೆ ಕಾವೇರಿ ನೀರು ಹರಿಸಲು ಆದೇಶ – Kannada News | CWMA directs to Karnataka release Cauvery water to Tamil Nadu 15 days Daily 3 500 cusecs

ನವದೆಹಲಿ, (ಜುಲೈ 28): ಕರ್ನಾಟಕದಲ್ಲಿ ಮುಂಗಾರು ಮಳೆ (Rain) ಕೈ ಕೊಟ್ಟಿದ್ದು, ಬರದ ಭೀತಿ ಆವರಿಸಿದೆ. ರೈತರು ಬೆಳೆದ ಬೆಳೆಗೆ ನೀರಿಲ್ಲದೇ ಆಕಾಶದತ್ತ ನೋಡುತ್ತಾ ಕುಳಿತ್ತಿದ್ದಾರೆ. ಇನ್ನೊಂದೆಡೆ ರಾಜ್ಯದ ಜಲಾಶಯಗಳು ಸಹ ಖಾಲಿಯಾಗಿವೆ. ಇಂಥಹ ಪರಿಸ್ಥಿತಿಯಲ್ಲೂ ಸಹ ಕಾವೇರಿ (Cauvery Water) ನೀರನ್ನು ತಮಿಳುನಾಡಿಗೆ (Tamilnadu) ಬಿಡುವಂತೆ ಕಾವೇರಿ ನೀರು ನಿರ್ವಹಣಾ ಮಂಡಳಿ ಮಹತ್ವದ ಸೂಚನೆ ನೀಡಿದೆ. ಹೌದು….ಇಂದು (ಜುಲೈ 28) ನವದೆಹಲಿಯಲ್ಲಿ ನಡೆದ ಸಭೆಯಲ್ಲಿ ಕಾವೇರಿ ನೀರು ನಿಯಂತ್ರಣ ಸಮಿತಿಯು (Cauvery Water Regulation Committee…

Read More

ಮಂಡ್ಯ: ಕೆ.ಆರ್.ಪೇಟೆ ಕಾಂಗ್ರೆಸ್ ಸಭೆಯಲ್ಲಿ ಕಾರ್ಯಕರ್ತರ ಹೈಡ್ರಾಮಾ, ಅಧ್ಯಕ್ಷರ ವಿರುದ್ಧ ಆಕ್ರೋಶ! – Kannada News | Mandya: High Drama at KR Pete Congress Meeting as Workers Demand District President’s Ouster

ಮಂಡ್ಯ, ಜುಲೈ 28: ಕೆ.ಆರ್.ಪೇಟೆಯಲ್ಲಿ ಆಯೋಜಿಸಿದ್ದ ಕಾಂಗ್ರೆಸ್‌ನ ‘ಸಂಘಟನಾ ಸೃಜನ ಅಭಿಯಾನ’ ಸಭೆಯಲ್ಲಿ ಭಾರಿ ಹೈಡ್ರಾಮಾ ನಡೆದಿದೆ. ತಾಲೂಕಿನಲ್ಲಿ ಸ್ಪಂದಿಸುವ ನಾಯಕರೇ ಇಲ್ಲ ಹಾಗೂ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಡಿ. ಗಂಗಾಧರ್ ಜೆಡಿಎಸ್ ಜೊತೆ ಹೊಂದಾಣಿಕೆ ರಾಜಕಾರಣ ಮಾಡುತ್ತಿದ್ದಾರೆ ಎಂದು ಆಕ್ರೋಶಗೊಂಡ ಕಾರ್ಯಕರ್ತರು ನಾಯಕರನ್ನು ಏಕವಚನದಲ್ಲೇ ತರಾಟೆಗೆ ತೆಗೆದುಕೊಂಡರು. ಎಐಸಿಸಿ ವೀಕ್ಷಕ ಸೈಮನ್ ಅಲೆಕ್ಸ್ ಹಾಗೂ ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಸಮ್ಮುಖದಲ್ಲೇ ಜಿಲ್ಲಾಧ್ಯಕ್ಷರನ್ನು ಬದಲಾಯಿಸುವಂತೆ ಪಟ್ಟು ಹಿಡಿದರು. ಹೊಸ ಅಧ್ಯಕ್ಷರ ಆಯ್ಕೆಗೆ ಅಭಿಪ್ರಾಯ ಸಂಗ್ರಹಿಸಲು ಬಂದಿರುವುದಾಗಿ ನಾಯಕರು ಸಮಜಾಯಿಷಿ…

Read More

ಧಾರವಾಡದ ಅಳ್ನಾವರದಲ್ಲಿ ನಾಲ್ಕು ಗಂಟೆಗೂ ಹೆಚ್ಚು ರೈಲುಗಳ ನಿಲುಗಡೆ: ಪ್ರಯಾಣಿಕರ ಪರದಾಟ – Kannada News | Power Supply Disruption Halts Trains for Over Four Hours at Alnavar Railway Station

ಧಾರವಾಡ, ಜುಲೈ 28: ವಿದ್ಯುತ್ ಪೂರೈಕೆಯಲ್ಲಿ ಉಂಟಾದ ತಾಂತ್ರಿಕ ಸಮಸ್ಯೆಯಿಂದ ಧಾರವಾಡ ಜಿಲ್ಲೆಯ ಅಳ್ನಾವರ ರೈಲು ನಿಲ್ದಾಣದಲ್ಲಿ ನಾಲ್ಕು ಗಂಟೆಗೂ ಅಧಿಕ ಕಾಲ ಹಲವು ರೈಲುಗಳು ನಿಂತ ಪರಿಣಾಮ ಪ್ರಯಾಣಿಕರು ಪರದಾಡುವಂತಾಯಿತು. ಲೋಂಡಾ ಭಾಗದಲ್ಲಿ ಉಂಟಾದ ವಿದ್ಯುತ್ ಪೂರೈಕೆ ಸಮಸ್ಯೆಯಿಂದ ಬೆಂಗಳೂರು–ಬೆಳಗಾವಿ ಎಕ್ಸ್‌ಪ್ರೆಸ್ ಹಾಗೂ ರಾಣಿ ಚೆನ್ನಮ್ಮ ಎಕ್ಸ್‌ಪ್ರೆಸ್ ಸೇರಿದಂತೆ ಕೆಲವು ರೈಲುಗಳ ಸಂಚಾರಕ್ಕೆ ಅಡಚಣೆ ಉಂಟಾಯಿತು. ಪರಿಣಾಮವಾಗಿ ರೈಲುಗಳನ್ನು ಅಳ್ನಾವರ ರೈಲು ನಿಲ್ದಾಣದಲ್ಲೇ ನಿಲ್ಲಿಸಲಾಯಿತು. ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Source…

Read More