ಭಾರತ-ಅಮೆರಿಕ ಒಪ್ಪಂದದಿಂದ ಗಾಬರಿಗೊಂಡ ಯೂನಸ್, ಟ್ರಂಪ್ ಜತೆ ರಹಸ್ಯ ಒಪ್ಪಂದಕ್ಕೆ ಯತ್ನ – Kannada News | Bangladesh Alarmed: Yunus Secret US Trade Deal Raises Fears Amid Elections and India US Pact
ಢಾಕಾ, ಫೆಬ್ರವರಿ 06: ಭಾರತ ಹಾಗೂ ಅಮೆರಿಕ ನಡುವಿನ ಬಹು ಚರ್ಚಿತ ವ್ಯಾಪಾರ ಒಪ್ಪಂದವು ಬಾಂಗ್ಲಾದೇಶ(Bangladesh) ಸರ್ಕಾರದೊಳಗೆ ಕಳವಳವನ್ನು ಹುಟ್ಟುಹಾಕಿದೆ. ಡೊನಾಲ್ಡ್ ಟ್ರಂಪ್ ಭಾರತದೊಂದಿಗೆ ವ್ಯಾಪಾರ ಒಪ್ಪಂದವನ್ನು ಘೋಷಿಸಿದ ಬಳಿಕ, ಬಾಂಗ್ಲಾದೇಶ ಕೂಡ ಅಮೆರಿಕದೊಂದಿಗೆ ಸಾಧ್ಯವಾದಷ್ಟು ಬೇಗ ಒಪ್ಪಂದವನ್ನು ಮಾಡಿಕೊಳ್ಳಲು ಬಯಸುತ್ತಿದೆ. ಮುಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರವು ಫೆಬ್ರವರಿ 12ರ ಚುನಾವಣೆಗೆ ಮೊದಲು ಅದನ್ನು ಮುಕ್ತಾಯಗೊಳಿಸುವ ಆಶಯದೊಂದಿಗೆ ಅಮೆರಿಕದೊಂದಿಗಿನ ಈ ವ್ಯಾಪಾರ ಒಪ್ಪಂದವನ್ನು ರಹಸ್ಯವಾಗಿಟ್ಟಿದೆ. ಅಮೆರಿಕದ ಒಪ್ಪಂದಕ್ಕೆ ಸಂಬಂಧಿಸಿದಂತೆ ಯೂನಸ್ ಅವರ ಗೌಪ್ಯತೆಯು ಹಲವು ಪ್ರಶ್ನೆಗಳನ್ನು…