Headlines

ನೀಟ್ ಅಕ್ರಮ ವಿರೋಧಿಸಿ ಪ್ರತಿಭಟನೆಯಲ್ಲಿ 2,823 ಕ್ರಿಮಿನಲ್‌ಗಳು ಪತ್ತೆ: ದೆಹಲಿ ಪೊಲೀಸರಿಂದ ಕಾರ್ಯಾಚರಣೆ – Kannada News | Delhi Police Identify Thousands With Criminal Backgrounds During NEET Protest Screening

ನವದೆಹಲಿ,ಜುಲೈ 28: ದೆಹಲಿಯ ಜಂತರ್​ ಮಂತರ್​ನಲ್ಲಿ ಜುಲೈ 20ರಿಂದ 25ರವರೆಗೆ ನೀಟ್(NEET)  ಪರೀಕ್ಷಾ ಅಕ್ರಮವನ್ನು ಖಂಡಿಸಿ ನಡೆದ ಪ್ರತಿಭಟನೆಯಲ್ಲಿ 2,823 ಕ್ರಿಮಿನಲ್​ಗಳು ಕೂಡ ಭಾಗಿಯಾಗಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ. ದೆಹಲಿಯ ಪೊಲೀಸರು ಎಐ ಆಧಾರಿತ ಫೇಶಿಯಲ್ ರೆಕಗ್ನಿಷನ್ ಸಿಸ್ಟಂ ತಂತ್ರಜ್ಞಾನ ಬಳಸಿ 2,823 ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಗಳನ್ನು ಗುರುತಿಸಿದ್ದಾರೆ. ಇವರಲ್ಲಿ 989 ವ್ಯಕ್ತಿಗಳು ಕೊಲೆ,ಅತ್ಯಾಚಾರ ಸೇರಿದಂತೆ ತೀವ್ರ ಸ್ವರೂಪದ ಗಂಭೀರ ಅಪರಾಧಗಳಲ್ಲಿ ಭಾಗಿಯಾದ ಹಿನ್ನೆಲೆ ಹೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪತ್ತೆಯಾದ ಅಪರಾಧಿಗಳ ಪೈಕಿ 101 ಜನರು…

Read More

‘ಟಾಕ್ಸಿಕ್ ನೋಡಿದವರು ವಾಟ್​ ದ ಹೆಲ್​ ವಾಸ್ ದ್ಯಾಟ್ ಅಂತ ಹೊರಗೆ ಬರ್ತಾರೆ’; ಯಶ್ – Kannada News | Yash Opens Up on Toxic Promises a Roller Coaster Ride of Action and Emotion

ಸ್ಯಾನ್ ಡಿಯಾಗೋ ಕಾಮಿಕ್-ಕಾನ್‌ನಲ್ಲಿ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದ ನಟ ಯಶ್ ಅವರು ತಮ್ಮ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ಟಾಕ್ಸಿಕ್ ಟೀಸರ್​​ನ ಅದ್ಭುತ ಯಶಸ್ಸಿನ ಬಗ್ಗೆ ಪ್ರಸ್ತಾಪಿಸಿದಾಗ, ಯಶ್ ಅವರು ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದರು. ‘ಟಾಕ್ಸಿಕ್ ಸಿನಿಮಾ ಪ್ರೇಕ್ಷಕರಿಗೆ ಒಂದು ರೋಲರ್ ಕೋಸ್ಟರ್ ರೈಡ್ ಇದ್ದಂತೆ ಇರಲಿದೆ. ಇದು ತುಂಬಾನೇ ವೈಲ್ಡ್ ಆಗಿದ್ದು, ಎಲ್ಲರ ಮನಸೂರೆಗೊಳ್ಳಲಿದೆ’ ಎಂದು ಯಶ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ‘ಮೇಲ್ನೋಟಕ್ಕೆ ಇದು ಒಂದು ದೊಡ್ಡ ಮಟ್ಟದ ಆಕ್ಷನ್ ಸಿನಿಮಾದಂತೆ ಕಂಡರೂ, ಸಿನಿಮಾದ ಒಳಗೆ ಆಳವಾದ…

Read More

Charanasparsha: ಹಿರಿಯರ ಕಾಲು ಮುಟ್ಟಿ ನಮಸ್ಕರಿಸುವುದೇಕೆ? ಚರಣಸ್ಪರ್ಶದ ಹಿಂದಿನ ರಹಸ್ಯ ಇಲ್ಲಿದೆ – Kannada News | What is the real logic behind touching the feet of elders?

ಭಾರತೀಯ ಸಂಸ್ಕೃತಿಯಲ್ಲಿ ಬಾಲ್ಯದಿಂದಲೂ ನಾವು ನೋಡಿಕೊಂಡು ಬಂದಿರುವ ಸುಂದರ ಸಂಪ್ರದಾಯ ಎಂದರೆ ‘ಹಿರಿಯರ ಪಾದಗಳಿಗೆ ನಮಸ್ಕರಿಸುವುದು’ (ಚರಣಸ್ಪರ್ಶ ಅಥವಾ ಪ್ರಣಾಮ). ಪರೀಕ್ಷೆಗೆ ಹೋಗುವ ಮುನ್ನ ಪೋಷಕರು ಮತ್ತು ಅಜ್ಜಿಯರ ಪಾದಗಳನ್ನು ಮುಟ್ಟುವುದು, ನವವಿವಾಹಿತರು ಹಿರಿಯರ ಆಶೀರ್ವಾದ ಪಡೆಯುವುದು ಅಥವಾ ಶುಭ ಸಮಾರಂಭಗಳಲ್ಲಿ ಕಾಲಿಗೆ ಎರಗುವುದು ನಮ್ಮಲ್ಲಿ ಪವಿತ್ರ ಆಚರಣೆಯಾಗಿದೆ. ಆದರೆ, “ನಾವು ಹಿರಿಯರ ಕಾಲುಗಳಿಗೆ ನಮಸ್ಕರಿಸುವುದೇಕೆ?” ಎಂಬ ಪ್ರಶ್ನೆ ಇಂದಿನ ಯುವ ಪೀಳಿಗೆಯಲ್ಲಿ ಉದ್ಭವಿಸುವುದು ಸಹಜ. ಈ ಪದ್ಧತಿಯ ಹಿಂದೆ ಸಾವಿರಾರು ವರ್ಷಗಳ ಇತಿಹಾಸ, ಆಧ್ಯಾತ್ಮಿಕ ಪರಿಕಲ್ಪನೆಗಳು,…

Read More

Karnataka Dam Water Level: ಆಲಮಟ್ಟಿ ಡ್ಯಾಂ ಭರ್ತಿಗೆ ಕೆಲವೇ ಅಡಿ ಬಾಕಿ; ಇಲ್ಲಿದೆ ರಾಜ್ಯದ ಪ್ರಮುಖ ಡ್ಯಾಂಗಳ ಇಂದಿನ ನೀರಿನ ಮಟ್ಟ – Kannada News | Karnataka Dam Water Level Today: KRS, Alamatti, Kabini Storage Details

ಆಲಮಟ್ಟಿ ಡ್ಯಾಂ ಭರ್ತಿಗೆ ಕೆಲವೇ ಅಡಿ ಬಾಕಿ; ಇಲ್ಲಿದೆ ರಾಜ್ಯದ ಪ್ರಮುಖ ಡ್ಯಾಂಗಳ ಇಂದಿನ ನೀರಿನ ಮಟ್ಟ ಬೆಂಗಳೂರು, ಜುಲೈ 28: ಕರ್ನಾಟಕದ ಪ್ರಮುಖ ಜಲಾಶಯಗಳಲ್ಲಿ ನೀರಿನ ಸಂಗ್ರಹದ ಮಟ್ಟದಲ್ಲಿ ಸ್ಪಷ್ಟ ವ್ಯತ್ಯಾಸ ಗೋಚರಿಸುತ್ತಿದ್ದು, ಉತ್ತರ ಕರ್ನಾಟಕ ಮತ್ತು ದಕ್ಷಿಣ ಒಳನಾಡಿನ ನದಿ ಪಾತ್ರಗಳಲ್ಲಿ ಮಿಶ್ರ ವಾತಾವರಣ ಕಂಡುಬಂದಿದೆ. ಕೃಷ್ಣಾ ನದಿ ಪಾತ್ರದ ಆಲಮಟ್ಟಿ ಹಾಗೂ ಬಸವಸಾಗರ ಜಲಾಶಯಗಳು ಭರ್ತಿಯಾಗುವ ಹಂತ ತಲುಪಿದ್ದರೆ, ಕಾವೇರಿ ಕೊಳ್ಳದ ಕೆಆರ್‌ಎಸ್, ಕಬಿನಿ ಹಾಗೂ ಹೇಮಾವತಿ ಜಲಾಶಯಗಳಲ್ಲಿ ಕಳೆದ ವರ್ಷಕ್ಕಿಂತ ನೀರಿನ…

Read More

ಭಾರತ ಟೆಸ್ಟ್ ತಂಡ ಪ್ರಕಟ: ಕನ್ನಡಿಗ ಉಪನಾಯಕ – Kannada News | India’s squad for the Test series in Sri Lanka

ಶ್ರೀಲಂಕಾ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಗಾಗಿ ಭಾರತ ತಂಡವನ್ನು ಪ್ರಕಟಿಸಲಾಗಿದೆ. 15 ಸದಸ್ಯರ ಈ ಬಲಿಷ್ಠ ತಂಡವನ್ನು ಶುಭ್​ಮನ್ ಗಿಲ್ ಮುನ್ನಡೆಸಲಿದ್ದು, ಉಪನಾಯಕನಾಗಿ ಕನ್ನಡಿಗ ಕೆ.ಎಲ್. ರಾಹುಲ್ ಜವಾಬ್ದಾರಿ ಹೊತ್ತಿದ್ದಾರೆ. ಇನ್ನುಳಿದಂತೆ, ಮಧ್ಯಪ್ರದೇಶದ ಸ್ಪಿನ್ನರ್ ಸರಂಶ್ ಜೈನ್‌ಗೆ ತಂಡದಲ್ಲಿ ಚೊಚ್ಚಲ ಅವಕಾಶ ದೊರೆತಿದೆ. ಭಾರತ ಟೆಸ್ಟ್ ತಂಡದ ವಿವರ: ಬ್ಯಾಟರ್‌ಗಳು: ಶುಭ್‌ಮನ್ ಗಿಲ್ (ನಾಯಕ), ಯಶಸ್ವಿ ಜೈಸ್ವಾಲ್, ದೇವದತ್ ಪಡಿಕ್ಕಲ್, ಸಾಯಿ ಸುದರ್ಶನ್* ವಿಕೆಟ್ ಕೀಪರ್‌ಗಳು: ಕೆ.ಎಲ್. ರಾಹುಲ್ (ಉಪನಾಯಕ), ರಿಷಭ್ ಪಂತ್, ಧ್ರುವ್ ಜುರೆಲ್…

Read More

ಟೀಮ್ ಇಂಡಿಯಾಗೆ 33 ವರ್ಷದ ಆಲ್​ರೌಂಡರ್ ಎಂಟ್ರಿ! – Kannada News | Who is Saransh Jain? Meet Team India’s new all rounder

ಶ್ರೀಲಂಕಾ ವಿರುದ್ಧದ ಸರಣಿಗೆ ಭಾರತ ಟೆಸ್ಟ್ ತಂಡವನ್ನು ಪ್ರಕಟಿಸಲಾಗಿದೆ. 15 ಸದಸ್ಯರುಗಳ ಈ ತಂಡದಲ್ಲಿ ಕಾಣಿಸಿಕೊಂಡ ಏಕೈಕ ಹೊಸಮುಖ ಸರಂಶ್ ಜೈನ್. ಮಧ್ಯಪ್ರದೇಶದ 33 ವರ್ಷದ ಅನುಭವಿ ಆಫ್-ಸ್ಪಿನ್ ಆಲ್‌ರೌಂಡರ್ ಸರಂಶ್ ಜೈನ್ ಗಾಯಾಳು ವಾಷಿಂಗ್ಟನ್ ಸುಂದರ್​ಗೆ ಬದಲಿಗೆ ಆಯ್ಕೆಯಾಗಿದ್ದಾರೆ. ಈ ಆಯ್ಕೆ ಬೆನ್ನಲ್ಲೇ ಯಾರು ಈ ಸರಂಶ್ ಜೈನ್ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಈ ಪ್ರಶ್ನೆಗೆ ಇಲ್ಲಿದೆ ಉತ್ತರ… ಸರಂಶ್ ಜೈನ್ ಪ್ರಥಮ ದರ್ಜೆ ಕ್ರಿಕೆಟ್ ಕೆರಿಯರ್ ಆರಂಭವಾಗಿದ್ದು 2014 ರಲ್ಲಿ. ಮಧ್ಯಪ್ರದೇಶ್ ಪರ ಕಣಕ್ಕಿಳಿಯುವ…

Read More

World Nature Conservation Day 2026: ದೈನಂದಿನ ಜೀವನದಲ್ಲಿ ಈ ಸಣ್ಣ ಕಾರ್ಯಗಳನ್ನು ಮಾಡುವ ಮೂಲಕ ಪ್ರಕೃತಿಯ ರಕ್ಷಣೆಗೆ ದೊಡ್ಡ ಕೊಡುಗೆ ನೀಡಬಹುದು – Kannada News | World Nature Conservation Day 2026: What is the purpose of celebrating World Nature Conservation Day?

ವಿಶ್ವ ಪ್ರಕೃತಿ ಸಂರಕ್ಷಣಾ ದಿನImage Credit source: Getty Images ಪ್ರಕೃತಿಯು (Nature) ನಮಗೆಲ್ಲರಿಗೂ ಶುದ್ಧ ಗಾಳಿ, ನೀರು, ಆಹಾರ ಸೇರಿದಂತೆ ಬದುಕಲು ಬೇಕಾದ ಪ್ರತಿಯೊಂದನ್ನು ಸಹ ನೀಡುತ್ತಿವೆ. ಆದರೆ ಇಂದು ಮನುಷ್ಯನ ಸ್ವಾರ್ಥದ ಕಾರಣದಿಂದಾಗಿ ನೀರು, ಗಾಳಿ ಕುಲುಷಿತಗೊಂಡಿವೆ. ಅದೆಷ್ಟೋ ಪ್ರಾಣಿ, ಪಕ್ಷಿ, ಸಸ್ಯ ಪ್ರಬೇಧಗಳು ಅಳಿವಿನಂಚಿಗೆ ತಲುಪಿವೆ. ಜಾಗತಿಕ ತಾಪಮಾನವೂ ಏರಿಕೆ, ಹವಾಮಾನ ಬದಲಾವಣೆಯಿಂದಾಗಿ ಪರಿಸರದ ಆರೋಗ್ಯ ಹದಗೆಡುತ್ತಿವೆ. ಹಾಗಾಗಿ ಸ್ಥಿರ ಮತ್ತು ಆರೋಗ್ಯಕರ ಸಮಾಜಕ್ಕಾಗಿ ಪರಿಸರ ಮತ್ತು ನೈಸರ್ಗಿಕ ಸಂಪನ್ಮೂಲಗಳನ್ನು ರಕ್ಷಿಸುವುದು ಎಷ್ಟು…

Read More

ಮುಲ್ಲಾ ಹೇಳಿಕೆ ವಿವಾದ: ಸಿಟಿ ರವಿ ಚಿಕ್ಕಮಗಳೂರಿಗೆ ಬರದಂತೆ ತಡೆಯುತ್ತೇವೆ, ಮುಸ್ಲಿಂ ಮುಖಂಡರ ಎಚ್ಚರಿಕೆ – Kannada News | Muslim Leaders Warn of Protest Against BJP MLC C.T. Ravi Over ‘Mulla’ Remark in Chikkamagaluru

ಚಿಕ್ಕಮಗಳೂರು, ಜುಲೈ 28: ‘ಮುಲ್ಲಾಗಳಿಗೆ ಎದೆ ಸೀಳಿದರೆ ಮೂರು ಅಕ್ಷರ ಬರಲ್ಲ’ ಎಂಬ ಬಿಜೆಪಿ ಎಂಎಲ್​​ಸಿ ಸಿಟಿ ರವಿ ಹೇಳಿಕೆಯನ್ನು ಮುಸ್ಲಿಂ ನಾಯಕರು ಖಂಡಿಸಿದ್ದಾರೆ. ಚಿಕ್ಕಮಗಳೂರಿನಲ್ಲಿ ಎಸ್.ಡಿ.ಪಿ.ಐ. ಮುಖಂಡ ಅತೀಕ್ ಮಾತನಾಡಿ, ಮುಸಲ್ಮಾನರನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುವುದನ್ನು ನಿಲ್ಲಿಸುವಂತೆ ಸಿಟಿ ರವಿಗೆ ಆಗ್ರಹಿಸಿದ್ದಾರೆ. ಮುಲ್ಲಾಗಳು ಯಾರೂ ಅನಕ್ಷರಸ್ಥರಲ್ಲ ಎಂದು ಸ್ಪಷ್ಟಪಡಿಸಿದ ಅತೀಕ್, ಪ್ರತಿಯೊಬ್ಬರೂ ಶಿಕ್ಷಿತರು ಮತ್ತು ಜವಾಬ್ದಾರಿಯುತ ವ್ಯಕ್ತಿಗಳಾಗಿದ್ದಾರೆ ಎಂದು ಹೇಳಿದರು. ದೇಶದ ಅಭಿವೃದ್ಧಿಗೆ ಮುಸ್ಲಿಂ ಸಮುದಾಯದ ಕೊಡುಗೆಯನ್ನು ಉಲ್ಲೇಖಿಸಿದ ಅವರು, ಬಿಳಿ ಕೂದಲಿನ ರಾಜಕೀಯ ಈಗ…

Read More

ಪ್ರಧಾನಿ ಮೋದಿ ಪೋಸ್ಟ್ ತಡೆಹಿಡಿದ ಫೇಸ್‌ಬುಕ್: ಇದು ಭಾರತದ ಪ್ರಜಾಪ್ರಭುತ್ವದ ಮೇಲಿನ ಹಸ್ತಕ್ಷೇಪ, ತಜಿಂದರ್ ಬಗ್ಗಾ ಆಕ್ರೋಶ – Kannada News | BJP Leader Bagga Questions Meta After PM Modi’s Social Media Post Faces Access Restrictions

ನವದೆಹಲಿ,ಜುಲೈ 28: ದೇಶದಲ್ಲಿ ನೀಟ್(NEET) ಪ್ರಶ್ನೆ ಪತ್ರಿಕೆ ಸೋರಿಕೆ ತಡೆಯಲು ಕೇಂದ್ರ ಸರ್ಕಾರ ತಂದಿರುವ ಕಠಿಣ ಕಾನೂನು ಮತ್ತು ಕೈಗೊಂಡಿರುವ ಕ್ರಮಗಳ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿದ್ದ ಸಾಮಾಜಿಕ ಮಾಧ್ಯಮ ಪೋಸ್ಟ್ ಅನ್ನು ಭಾರತದಲ್ಲಿ ವೀಕ್ಷಿಸದಂತೆ ಫೇಸ್‌ಬುಕ್ ತಡೆಹಿಡಿದಿರುವುದು ಭಾರಿ ವಿವಾದಕ್ಕೆ ಕಾರಣವಾಗಿದೆ. ಈ ಕುರಿತು ಬಿಜೆಪಿ ನಾಯಕ ತಜಿಂದರ್ ಪಾಲ್ ಸಿಂಗ್ ಬಗ್ಗಾ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಫೇಸ್‌ಬುಕ್ ಸಂಸ್ಥೆಯು ಭಾರತದ ಡಿಜಿಟಲ್ ಸಾರ್ವಭೌಮತ್ವ ಮತ್ತು ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ನಿಯಮಬಾಹಿರವಾಗಿ ಹಸ್ತಕ್ಷೇಪ…

Read More

ಅಸ್ಸಾಂ ಮೆಟಲ್ ಫ್ಯಾಕ್ಟರಿಯಲ್ಲಿ ಭೀಕರ ಸ್ಫೋಟ: ನಾಲ್ವರು ಕಾರ್ಮಿಕರ ಸಾವು, ಮಾಲೀಕ ಸೇರಿ ಐವರ ಬಂಧನ – Kannada News | Four Workers Lose Lives in Assam Metal Plant Blast, Factory Owner Among Five Held

ಕಚಾರ್,ಜುಲೈ 28: ಅಸ್ಸಾಂನ ಕಚಾರ್ ಜಿಲ್ಲೆಯ ಲೋಹ ಸಂಸ್ಕರಣಾ ಕಾರ್ಖಾನೆಯೊಂದರಲ್ಲಿ ಸಂಭವಿಸಿದ ಪ್ರಬಲ ಸ್ಫೋಟ(Blast)ದಲ್ಲಿ ನಾಲ್ವರು ಕಾರ್ಮಿಕರು ದಾರುಣವಾಗಿ ಮೃತಪಟ್ಟಿದ್ದು, ಇಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಕಾರ್ಯಾಚರಣೆ ನಡೆಸಿ ಕಾರ್ಖಾನೆಯ ಮಾಲೀಕ ಹಾಗೂ ಮಂಡಳಿಯ ನಾಲ್ವರು ಸದಸ್ಯರು ಸೇರಿ ಐವರನ್ನು ಬಂಧಿಸಿದ್ದಾರೆ. ಕಾರ್ಖಾನೆಯ ಒಳಗೆ ಕೆಲಸ ನಡೆಯುತ್ತಿದ್ದಾಗ ಏಕಾಏಕಿ ಈ ಸ್ಫೋಟ ಸಂಭವಿಸಿದೆ. ಸ್ಫೋಟದ ತೀವ್ರತೆಗೆ ಕರಗಿದ ಬಿಸಿ ಲೋಹವು ಸುತ್ತಲೂ ಸಿಡಿದು ಹತ್ತಿರದಲ್ಲಿದ್ದ ಕಾರ್ಮಿಕರ ಮೇಲೆ ಬಿದ್ದಿದೆ. ಇದರ ಪರಿಣಾಮವಾಗಿ ನಾಲ್ವರು ಕಾರ್ಮಿಕರು…

Read More