Headlines

ಡಿಕೆಶಿ ಸಂಪುಟದಲ್ಲಿ ನನಗೇನೂ ಬೇಡ, ಸಚಿವ ಸ್ಥಾನದ ರೇಸ್​ನಲ್ಲೂ ಇಲ್ಲ: ರಾಜಣ್ಣ ಖಡಕ್ ಮಾತು – Kannada News

ಬೆಂಗಳೂರು, ಜೂನ್ 9: ನೂತನ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಂಪುಟದಲ್ಲಿ ಸಚಿವ ಸ್ಥಾನಕ್ಕಾಗಿ ಯಾವುದೇ ಬೇಡಿಕೆ ಇಟ್ಟಿಲ್ಲ ಮತ್ತು ಆ ರೇಸ್‌ನಲ್ಲೂ ಇಲ್ಲ ಎಂದು ಶಾಸಕ ಕೆಎನ್ ರಾಜಣ್ಣ ಸ್ಪಷ್ಟಪಡಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸಮುದಾಯವಾರು ಉಪಮುಖ್ಯಮಂತ್ರಿ (ಡಿಸಿಎಂ) ಸ್ಥಾನಗಳನ್ನು ನೀಡುವ ಬೇಡಿಕೆಯನ್ನು ಬೆಂಬಲಿಸಿದ್ದಾರೆ. ಇದು ಬಹಳ ಹಿಂದಿನಿಂದಲೂ ಇರುವ ವಾದ ಎಂದು ಹೇಳಿದ್ದಾರೆ. ಪರಿಶಿಷ್ಟ ಜಾತಿ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತ ಸಮುದಾಯಗಳಿಗೆ ಡಿಸಿಎಂ ಸ್ಥಾನಗಳನ್ನು ನೀಡಬೇಕೆಂಬ ವಾದಕ್ಕೆ ಬದ್ಧವಾಗಿರುವುದಾಗಿ ರಾಜಣ್ಣ ತಿಳಿಸಿದ್ದಾರೆ. ಸ್ಥಳೀಯ ಸಂಸ್ಥೆಗಳ…

Read More

ಡಿ.ಕೆ. ಶಿವಕುಮಾರ್​​ ಸಂಪುಟದಲ್ಲಿ ಮುಗಿಯದ ಖಾತೆ ಕ್ಯಾತೆ: ವರಿಷ್ಠರ ಭೇಟಿಗಾಗಿ ದೆಹಲಿಗೆ ತೆರಳಿದ ಸಚಿವ ಕೃಷ್ಣ ಭೈರೇಗೌಡ

ಬೆಂಗಳೂರು, ಜೂನ್​​ 09: ಕರ್ನಾಟಕದಲ್ಲಿ ಖಾತೆ ಹಂಚಿಕೆ ಗೊಂದಲಗಳು ಮುಂದುವರಿದಿದ್ದು, ಸಚಿವ ಕೃಷ್ಣ ಭೈರೇಗೌಡ ಅವರು ತಮ್ಮ ಇಲಾಖೆಯ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬೆಂಗಳೂರು ನಗರಾಭಿವೃದ್ಧಿ ಖಾತೆಯನ್ನು ಸ್ವೀಕರಿಸಲು ಅವರು ನಿರಾಕರಿಸಿದ್ದು, ಬಿಡಿಎ (ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ) ಮತ್ತು ಬಿಎಂಆರ್‌ಡಿಎ (ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರ) ಗಳನ್ನು ತನ್ನ ಖಾತೆಗೆ ಸೇರಿಸಬೇಕೆಂದು ಪಟ್ಟು ಹಿಡಿದಿದ್ದಾರೆ. ಬಿಡಿಎ ಮತ್ತು ಬಿಎಂಆರ್‌ಡಿಎ ಹೊರತುಪಡಿಸಿ ಬೆಂಗಳೂರು ನಗರಾಭಿವೃದ್ಧಿ ಖಾತೆಗೆ ಯಾವುದೇ ಮೌಲ್ಯವಿಲ್ಲ ಎಂಬುದು ಕೃಷ್ಣ ಭೈರೇಗೌಡರ ಅಭಿಪ್ರಾಯ. ಈ ಸಂಬಂಧ…

Read More

ಶ್ರೀಲಂಕಾಕ್ಕೆ ಹೊರಟ ಪ್ರಶಾಂತ್ ನೀಲ್ ಮತ್ತು ಜೂ ಎನ್​​ಟಿಆರ್ – Kannada News

ಪ್ರಶಾಂತ್ ನೀಲ್ (Prashanth Neel) ಸಾಮಾನ್ಯವಾಗಿ ತಮ್ಮ ಸಿನಿಮಾಗಳನ್ನು ಸೆಟ್​​ಗಳಲ್ಲಿಯೇ ಚಿತ್ರೀಕರಿಸುತ್ತಾರೆ. ಅವರು ಚಿತ್ರೀಕರಣಕ್ಕಾಗಿ ಬೇರೆ ಬೇರೆ ಸ್ಥಳಗಳಿಗೆ ಹೋಗುವುದು ಬಹಳ ಕಡಿಮೆ. ಅದರಲ್ಲೂ ವಿದೇಶದಲ್ಲಿ ಚಿತ್ರೀಕರಣವೆಂದರೆ ಅವರಿಗೆ ಆಗದು. ಇದೀಗ ಜೂ ಎನ್​​ಟಿಆರ್ ನಟನೆಯ ‘ಡ್ರ್ಯಾಗನ್’ ಸಿನಿಮಾ ಚಿತ್ರೀಕರಣವನ್ನು ನೀಲ್ ಮಾಡುತ್ತಿದ್ದು, ಈ ಸಿನಿಮಾಕ್ಕಾಗಿ ತಮ್ಮ ಹಳೆಯ ಪದ್ಧತಿಗಳನ್ನು ಮುರಿದಿದ್ದಾರೆ ಪ್ರಶಾಂತ್ ನೀಲ್. ‘ಡ್ರ್ಯಾಗನ್’ ಸಿನಿಮಾಕ್ಕಾಗಿ ಪ್ರಶಾಂತ್ ನೀಲ್ ವಿದೇಶಗಳನ್ನು ಸುತ್ತುತ್ತಿದ್ದಾರೆ. ಈಗಾಗಲೇ ಒಂದು ದೇಶಕ್ಕೆ ಹೋಗಿ ಬಂದಿರುವ ನೀಲ್ ಮತ್ತು ಎನ್​​ಟಿಆರ್, ಈಗ ಶ್ರೀಲಂಕಾದತ್ತ…

Read More

ಶೂಟಿಂಗ್ ಮಾಡುವಾಗಲೇ ನಟಿಯರು ಈ ಬಗ್ಗೆ ಮಾತನಾಡಬೇಕು; ಕಂಗನಾ ನೇರ ಮಾತು

ಚಿತ್ರರಂಗದಲ್ಲಿ ನಾಯಕಿಯರನ್ನು ಅತಿಯಾಗಿ ಗ್ಲಾಮರೈಸ್ ಮಾಡುವ ಹಾಗೂ ಕಾಮಪ್ರಚೋದಕವಾಗಿ ಬಿಂಬಿಸುವ ವಿಚಾರ ಸದ್ಯ ದೇಶಾದ್ಯಂತ ದೊಡ್ಡ ಚರ್ಚೆಗೆ ಗ್ರಾಸವಾಗಿದೆ. ಇತ್ತೀಚೆಗೆ ಬಿಡುಗಡೆಯಾದ ರಾಮ್ ಚರಣ್ ಅವರ ‘ಪೆದ್ದಿ’ ಚಿತ್ರದಲ್ಲಿ ನಾಯಕಿ ಜಾನ್ವಿ ಕಪೂರ್ ಅವರ ಪಾತ್ರವನ್ನು ತೋರಿಸಿರುವ ರೀತಿಗೆ ತೀವ್ರ ಆಕ್ಷೇಪ ವ್ಯಕ್ತವಾದ ಬೆನ್ನಲ್ಲೇ ಈ ಚರ್ಚೆ ಮತ್ತಷ್ಟು ಜೋರಾಗಿದೆ. ಹಲವು ಹಿರಿಯ ನಟಿಯರು ಈ ಬಗ್ಗೆ ಮಾತನಾಡಿದ್ದರು. ಈಗ ಬಾಲಿವುಡ್ ನಟಿ ಹಾಗೂ ಮಂಡಿ ಲೋಕಸಭಾ ಕ್ಷೇತ್ರದ ಸಂಸದೆ ಕಂಗನಾ ರನೌತ್ ಕೂಡ ಈ ಬಗ್ಗೆ…

Read More

ಲ್ಯಾಡಲ್ ಸ್ಫೋಟಕ್ಕೆ 8 ಕಾರ್ಮಿಕರು ಬಲಿ, ಮೃತರ ಕುಟುಂಬಗಳಿಗೆ 25 ಲಕ್ಷ ರೂ. ಪರಿಹಾರ ಘೋಷಿಸಿದ ಹೆಚ್​ಡಿ ಕುಮಾರಸ್ವಾಮಿ – Kannada News

ವಿಶಾಖಪಟ್ಟಣಂ, ಜೂನ್ 09: ವಿಶಾಖಪಟ್ಟಣಂನ ರಾಷ್ಟ್ರೀಯ ಇಸ್ಪತ್ ನಿಗಮ್ ಲಿಮಿಟೆಡ್ (RINL) ಉಕ್ಕು ಸ್ಥಾವರದಲ್ಲಿ ಸಂಭವಿಸಿದ ಭೀಕರ ದುರಂತದಲ್ಲಿ ಎಂಟು ಕಾರ್ಮಿಕರು ಬಲಿಯಾಗಿದ್ದಾರೆ. ಕರಗಿದ ಕಬ್ಬಿಣವನ್ನು ಸಾಗಿಸುವಾಗ ಕ್ರೇನ್ ಕುಸಿದು, ಬಿಸಿ ಲೋಹ ಚೆಲ್ಲಿದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ. ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಮೃತರ ಕುಟುಂಬಗಳಿಗೆ ತಲಾ 25 ಲಕ್ಷ ರೂಪಾಯಿ ಪರಿಹಾರವನ್ನು ಘೋಷಿಸಿದ್ದಾರೆ. ಈ ಪರಿಹಾರ ಕಾಯಂ ನೌಕರರು ಹಾಗೂ ಹೊರಗುತ್ತಿಗೆ…

Read More

Gold Rate: ಹಲವು ದಿನಗಳ ನಂತರ ಚಿನ್ನದ ಬೆಲೆಯಲ್ಲಿ ಏರಿಕೆ; ಬೆಳ್ಳಿ ಸ್ಥಿರ – Kannada News

ನವದೆಹಲಿ, ಜೂನ್ 9: ಹಲವು ದಿನಗಳ ನಂತರ ಚಿನ್ನದ ಬೆಲೆ (Gold Rates) ಮೊದಲ ಬಾರಿಗೆ ಹೆಚ್ಚಳಗೊಂಡಿದೆ. ನಿನ್ನೆ 95 ರೂ ಕಡಿಮೆಗೊಂಡಿದ್ದ ಇದರ ಬೆಲೆ ಇವತ್ತು ಮಂಗಳವಾರ ಗ್ರಾಮ್​ಗೆ 135 ರೂ ಏರಿದೆ. ವಿದೇಶಗಳಲ್ಲೂ ಇದರ ಬೆಲೆಯಲ್ಲಿ ಅಲ್ಪ ಹೆಚ್ಚಳವಾಗಿದೆ. ಇನ್ನೊಂದೆಡೆ, ಬೆಳ್ಳಿ ಬೆಲೆ ಇವತ್ತು ಬದಲಾವಣೆಗೊಳ್ಳದೆ ಯಥಾಸ್ಥಿತಿಯಲ್ಲಿ ಇದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,40,400 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,53,160 ರುಪಾಯಿ…

Read More

Japa: ವಿವಿಧ ಜಪಮಾಲೆಗಳ ಮಹತ್ವ; ಇಷ್ಟಾರ್ಥ ಸಿದ್ಧಿಗೆ ಯಾವ ಮಾಲೆಯಿಂದ ಜಪ ಮಾಡಬೇಕು ಗೊತ್ತಾ? – Kannada News

ವಿವಿಧ ಜಪಮಾಲೆಗಳ ಮಹತ್ವImage Credit source: Pinterest ಜಪ ಎಂದರೆ ಕೇವಲ ಮಂತ್ರ ಪಠಣವಲ್ಲ, ಅದು ಭಗವಂತನೊಂದಿಗೆ ಭಾವನಾತ್ಮಕವಾಗಿ ಸಂಪರ್ಕ ಸಾಧಿಸುವ ಒಂದು ಪ್ರಕ್ರಿಯೆ. ಭಗವದ್ಗೀತೆಯಲ್ಲಿ ಶ್ರೀಕೃಷ್ಣನು “ಪತ್ರಂ ಪುಷ್ಪಂ ಫಲಂ ತೋಯಂ ಯೋ ಮೇ ಭಕ್ತ್ಯಾ ಪ್ರಯಚ್ಛತಿ, ತದಹಂ ಭಕ್ತ್ಯುಪಹೃತಮಶ್ನಾಮಿ ಪ್ರಯತಾತ್ಮನಃ” ಎಂದು ಹೇಳಿದ್ದು, ಭಕ್ತಿಯಿಂದ ಅರ್ಪಿಸಿದ ಒಂದು ಎಲೆ, ಹೂವು, ಹಣ್ಣು ಅಥವಾ ನೀರನ್ನೂ ಸಂತೋಷದಿಂದ ಸ್ವೀಕರಿಸುವುದಾಗಿ ತಿಳಿಸಿದ್ದಾನೆ. ಹಾಗೆಯೇ, ಜಪವು ನಮ್ಮ ಪ್ರೀತಿ ಮತ್ತು ಭಕ್ತಿಯ ಸಂಕೇತವಾಗಿದೆ. ಪ್ರಾಚೀನ ಕೃತ, ತ್ರೇತಾ, ದ್ವಾಪರ…

Read More

ನನ್ನ ಅಭಿಮಾನಿಗಳೇ ಆದರೂ ಸರಿ, ಸುಮ್ಮನೆ ಬಿಡಲ್ಲ; ನಟಿಯ ಎಚ್ಚರಿಕೆ – Kannada News

ಬಾಲಿವುಡ್ ಹಾಗೂ ಟಿವಿ ರಂಗದ ಖ್ಯಾತ ನಟಿ ಹಿನಾ ಖಾನ್ ಸೋಶಿಯಲ್ ಮೀಡಿಯಾ ಟ್ರೋಲಿಂಗ್ ಮತ್ತು ದ್ವೇಷದ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ.ಇನ್‌ಸ್ಟಾಗ್ರಾಮ್‌ನಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಂಡಿರುವ ಅವರು, ಸಾಮಾಜಿಕ ಜಾಲತಾಣಗಳಲ್ಲಿ ಸಭ್ಯತೆ ಕಾಯ್ದುಕೊಳ್ಳುವಂತೆ ತಮ್ಮ ಅಭಿಮಾನಿಗಳಿಗೆ ಖಡಕ್ ಸಂದೇಶ ನೀಡಿದ್ದಾರೆ. ನನ್ನನ್ನು ಬೆಂಬಲಿಸುವ ನೆಪದಲ್ಲಿ ಇತರರನ್ನು ನಿಂದಿಸುವುದನ್ನು ಸಹಿಸುವುದಿಲ್ಲ ಎಂದು ಎಚ್ಚರಿಸಿದ್ದಾರೆ. ಇತ್ತೀಚೆಗೆ ನಟಿ ಹಿನಾ ಖಾನ್ ಮತ್ತು ಶಿಲ್ಪಾ ಶಿಂದೆ ಸೋಶಿಯಲ್ ಮೀಡಿಯಾದಲ್ಲಿ ಪರೋಕ್ಷವಾಗಿ ಪೋಸ್ಟ್‌ಗಳನ್ನು ಹಾಕಿದ್ದರು. ಇಬ್ಬರೂ ಯಾರ ಹೆಸರನ್ನೂ ನೇರವಾಗಿ ಪ್ರಸ್ತಾಪಿಸದಿದ್ದರೂ,…

Read More

ಸರಿಯಾದ ನಿರ್ಧಾರ… ರಜತ್ ಪಾಟಿದಾರ್ ಆಯ್ಕೆಯಾಗದಿರಲು ಇದುವೇ ಕಾರಣ!

ಐಪಿಎಲ್ 2026ರ ಸೀಸನ್‌ನಲ್ಲಿ ಆರ್‌ಸಿಬಿ ತಂಡವನ್ನು ಮುನ್ನಡೆಸಿ ಅತ್ಯುತ್ತಮ ಪ್ರದರ್ಶನ ನೀಡಿದ ಹೊರಾಗಿಯೂ, ಮಧ್ಯಪ್ರದೇಶದ ಬ್ಯಾಟರ್ ರಜತ್ ಪಾಟಿದಾರ್​​ ಅವರಿಗೆ ಭಾರತ ಟಿ20 ತಂಡದಲ್ಲಿ ಸ್ಥಾನ ನೀಡಲಾಗಿಲ್ಲ. ಆಯ್ಕೆಗಾರರ ಈ ನಡೆಗೆ ಅಭಿಮಾನಿಗಳಿಂದ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಆದರೆ, ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ಆಟಗಾರ ಸುಬ್ರಮಣ್ಯಂ ಬದ್ರೀನಾಥ್ ಮಾತ್ರ ಬಿಸಿಸಿಐ ಆಯ್ಕೆ ಸಮಿತಿಯ ಈ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ. ಈ ಬಗ್ಗೆ ತಮ್ಮ ಅಧಿಕೃತ ಯೂಟ್ಯೂಬ್ ಚಾನೆಲ್ ಕ್ರಿಕ್ ವಿತ್ ಬದ್ರಿಯಲ್ಲಿ ಮಾತನಾಡಿರುವ ಬದ್ರೀನಾಥ್, ರಜತ್…

Read More

Video: ಗೋಲ್ಗಪ್ಪಾ ವಿಭಿನ್ನವಾಗಿ ತಿನ್ಬಹುದೆಂದು ತೋರಿಸಿಕೊಟ್ಟ ಪುಟಾಣಿ – Kannada News

ಗೋಲ್ಗಪ್ಪಾ (golgappa) ಎಲ್ಲರ ನೆಚ್ಚಿನ ಭಾರತದ ಸ್ಟ್ರೀಟ್ ಫುಡ್ ಗಳಲ್ಲಿ ಒಂದು. ಪುಟಾಣಿ ಮಕ್ಕಳಿಗೂ (little girl) ಗೋಲ್ಗಪ್ಪಾ ಅಂದ್ರೆ ಪಂಚ ಪ್ರಾಣ. ಇನ್ನು ಸಂಜೆ ವೇಳೆ ಫ್ರೆಂಡ್ಸ್ ಜತೆಗೆ ಹೊರಗಡೆ ಹೋದಾಗ ಯುವಕ ಯುವತಿಯರು ಗೋಲ್ಗಪ್ಪಾ ತಿನ್ನದೇ ಇರಲ್ಲ. ಇದೀಗ ಪುಟಾಣಿಯೊಬ್ಬಳು ಗೋಲ್ಗಪ್ಪಾ ತಿನ್ನುವ ಅಸಾಂಪ್ರದಾಯಿಕ ವಿಧಾನದ ವಿಡಿಯೋ ವೈರಲ್ ಆಗಿದೆ. ನೆಟ್ಟಿಗರು ಪುಟಾಣಿಯ ಬುದ್ಧಿವಂತಿಕೆಯನ್ನು ಮೆಚ್ಚಿಕೊಂಡಿದ್ದಾರೆ. ಟೆನ್ಸಿಂಗ್ ಸೆಲ್ಡನ್ (tenz_seldon19) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪುಟಾಣಿ ಗೋಲ್ಗಪ್ಪಾ ತಿನ್ನುವ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ವಿಡಿಯೋಗೆ…

Read More