Headlines

BS6 ವಾಹನ ಸವಾರರಿಗೆ ಗುಡ್ ನ್ಯೂಸ್: ಇನ್ಮುಂದೆ ವರ್ಷಕ್ಕೊಮ್ಮೆ ಅಲ್ಲ, ಮೂರು ವರ್ಷಕ್ಕೊಮ್ಮೆ ಪೊಲ್ಯೂಷನ್ ಸರ್ಟಿಫಿಕೇಟ್ ಸಾಕಾಗಬಹುದು! – Kannada News | BS6 Vehicle Owners May Get 3 Year PUC Validity as Centre Proposes New Pollution Certificate Rules

ನವದೆಹಲಿ, ಜುಲೈ 28: ದೇಶದ ಲಕ್ಷಾಂತರ ಕಾರು ಮತ್ತು ದ್ವಿಚಕ್ರ ವಾಹನ ಮಾಲೀಕರಿಗೆ ಗುಡ್ ನ್ಯೂಸ್ ನೀಡುವ ನಿಟ್ಟಿನಲ್ಲಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ (MoRTH) ಹೊಸ ಪ್ರಸ್ತಾವನೆ ಮುಂದಿಟ್ಟಿದೆ. BS6 (ಭಾರತ್ ಸ್ಟೇಜ್-6) ಖಾಸಗಿ ವಾಹನಗಳಿಗೆ ನೀಡುವ ಪೊಲ್ಯೂಷನ್ ಅಂಡರ್ ಕಂಟ್ರೋಲ್ ಸರ್ಟಿಫಿಕೇಟ್ (PUC/PUCC) ಅಥವಾ ಮಾಲಿನ್ಯ ಪ್ರಮಾಣಪತ್ರ ನವೀಕರಣ ಅವಧಿಯನ್ನು ಈಗಿನ ಒಂದು ವರ್ಷದ ಬದಲು ಮೂರು ವರ್ಷಗಳಿಗೆ ವಿಸ್ತರಿಸುವ ಕರಡು ಅಧಿಸೂಚನೆಯನ್ನು ಸಚಿವಾಲಯ ಪ್ರಕಟಿಸಿದೆ. ಪ್ರಸ್ತಾವನೆ ಅಂತಿಮಗೊಂಡರೆ, ಆರು ವರ್ಷಕ್ಕಿಂತ…

Read More

ಒಟ್ಟಿಗೆ ನಾಲ್ಕು ಸ್ಟಾರ್ ನಟರಿಗೆ ಇಂಜೂರಿ; ಆತಂಕ್ಕೆ ಒಳಗಾದ ಟಾಲಿವುಡ್ ಫ್ಯಾನ್ಸ್ – Kannada News | Balayya To JR NTR  Tollywood Stars Injured On Sets Shooting Delays And Fan Anxiety Loom Large

ಒಟ್ಟಿಗೆ ನಾಲ್ಕು ಸ್ಟಾರ್ ನಟರಿಗೆ ಇಂಜೂರಿ ಸಿನಿಮಾ ಶೂಟಿಂಗ್ ವೇಳೆ ಎಷ್ಟೇ ಮುನ್ನೆಚ್ಚರಿಕೆ ತೆಗೆದುಕೊಂಡರೂ ಗಾಯಗೊಳ್ಳೋದು ಸಾಮಾನ್ಯ ಎಂಬಂತಹ ಪರಿಸ್ಥಿತಿ ನಿರ್ಮಾಣ ಆಗಿದೆ. ಈಗ ಟಾಲಿವುಡ್‌ನ ಸ್ಟಾರ್ ನಟರು ಶೂಟಿಂಗ್ ವೇಳೆ ಸಾಲು ಸಾಲಾಗಿ ಗಾಯಗೊಳ್ಳುತ್ತಿರುವುದು ಅಭಿಮಾನಿಗಳಲ್ಲಿ ತೀವ್ರ ಆತಂಕ ಮೂಡಿಸಿದೆ. ನೆಚ್ಚಿನ ನಟರ ಆರೋಗ್ಯದ ಸ್ಥಿತಿ ಕೇಳಿ ಫ್ಯಾನ್ಸ್ ಕಂಗಾಲಾಗಿದ್ದಾರೆ. ಎನ್‌ಟಿಆರ್ (NTR), ರಾಮ್ ಚರಣ್ ಮತ್ತು ಬಾಲಕೃಷ್ಣ ಸಿನಿಮಾ ಸೆಟ್‌ಗಳಲ್ಲಿ ಗಾಯಗೊಂಡಿರುವ ಪ್ರಮುಖರು. ಎಲ್ಲರೂ ಸರ್ಜರಿಗೆ ಒಳಗಾಗಿದ್ದು ಒಂದಷ್ಟು ಸಮಯ ವಿಶ್ರಾಂತಿ ಪಡೆಯುವ ಅಗತ್ಯವಿದೆ….

Read More

ಇನ್​​ಸ್ಟಾಗ್ರಾಂನಲ್ಲಿ ಪ್ರಧಾನಿ ಮೋದಿ ಹೊಸ ದಾಖಲೆ, 105 ಮಿಲಿಯನ್‌ ತಲುಪಿದ ಫಾಲೋವರ್ಸ್ ಸಂಖ್ಯೆ – Kannada News | Modi Breaks the Internet: Hits Historic 105M Insta Followers After Viral Gen Z Selfie Video

ನವದೆಹಲಿ, ಜುಲೈ 28: ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು ಹೊಸ ಇತಿಹಾಸ ಬರೆದಿದ್ದಾರೆ. ಅವರ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯ ಫಾಲೋವರ್ಸ್ ಸಂಖ್ಯೆ 105 ಮಿಲಿಯನ್ (10.5 ಕೋಟಿ) ಗಡಿ ದಾಟಿದ್ದು, ಜಾಗತಿಕ ಮಟ್ಟದಲ್ಲಿ ಈ ಮೈಲಿಗಲ್ಲು ತಲುಪಿದ ವಿಶ್ವದ ಮೊದಲ ರಾಜಕೀಯ ನಾಯಕ ಎನಿಸಿಕೊಂಡಿದ್ದಾರೆ. ವಿಶೇಷವೆಂದರೆ, ಕೇವಲ ಒಂದೇ ವಾರದಲ್ಲಿ ಪ್ರಧಾನಿ ಮೋದಿ ಅವರ ಖಾತೆಗೆ 4 ಮಿಲಿಯನ್ (40 ಲಕ್ಷ) ಹೊಸ ಫಾಲೋವರ್ಸ್‌ಗಳು ಸೇರ್ಪಡೆಯಾಗಿದ್ದಾರೆ. ಫಾಲೋವರ್ಸ್ ಏರಿಕೆಗೆ ಪ್ರಮುಖ…

Read More

ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ: ಅವಧಿ ವಿಸ್ತರಣೆ ಕೋರಿದ್ದ PIL ಇತ್ಯರ್ಥಗೊಳಿಸಿದ ಹೈಕೋರ್ಟ್ – Kannada News | Karnataka HC Disposes PIL Seeking Extension for Voter List Revision

ಬೆಂಗಳೂರು, ಜುಲೈ 28: ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (SIR) ಪ್ರಕ್ರಿಯೆಯ ಅವಧಿ ವಿಸ್ತರಿಸುವಂತೆ ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (PIL) ಕರ್ನಾಟಕ ಹೈಕೋರ್ಟ್ ಇತ್ಯರ್ಥಪಡಿಸಿದೆ.ಸಾಹಿತಿ ದೇವನೂರು ಮಹದೇವ, ಇತಿಹಾಸ ತಜ್ಞ ರಾಮಚಂದ್ರ ಗುಹಾ, ನಿವೃತ್ತ ಮೇಜರ್ ಜನರಲ್ ಎಸ್.ಜಿ. ವಂಬಟ್ಕೆರೆ ಹಾಗೂ ಲೇಖಕಿ ಸಬೀಹಾ ಭೂಮಿಗೌಡ ಅವರು ಈ ಅರ್ಜಿ ಸಲ್ಲಿಸಿದ್ದರು. ಬಿಎಲ್‌ಒಗಳಿಗೆ ಸಮರ್ಪಕ ಮಾಹಿತಿ ಹಾಗೂ ತರಬೇತಿ ಇಲ್ಲದಿರುವುದು ಮತ್ತು ಮತದಾರರ ನೆರವು ಕೇಂದ್ರಗಳ ಸರಿಯಾದ ಕಾರ್ಯನಿರ್ವಹಣೆ ಕೊರತೆಯಿಂದ ಸುಮಾರು 70 ಲಕ್ಷ…

Read More

ಸಿನಿಮಾ ಪೈರಸಿ ತಡೆಯಲು ಹೊಸ ಪ್ಲ್ಯಾನ್​​ನೊಂದಿಗೆ ಬಂದ ಕೇಂದ್ರ ಸರ್ಕಾರ – Kannada News | Indian Government Intensive Steps To Curb Film Piracy Industry Welcomes Move

ಕನ್ನಡ, ಬಾಲಿವುಡ್ ಸೇರಿದಂತೆ ಎಲ್ಲಾ ಚಿತ್ರರಂಗಕ್ಕೂ ಪೈರಸಿ ದೊಡ್ಡ ಪಿಡುಗಾಗಿ ಪರಿಣಮಿಸಿದೆ. ನಿರ್ಮಾಪಕರು ಮತ್ತು ಆ್ಯಂಟಿ ಪೈರಸಿ ತಂಡಗಳು ಎಷ್ಟೇ ಪ್ರಯತ್ನಿಸಿದರೂ ಸಿನಿಮಾಗಳು ಆನ್​​ಲೈನ್​ ಅಲ್ಲಿ ಲೀಕ್ ಆಗುತ್ತಿವೆ. ಈ ಹಿನ್ನೆಲೆಯಲ್ಲಿ ಭಾರತ ಸರ್ಕಾರ ಈಗ ಹೊಸ ಅಸ್ತ್ರದೊಂದಿಗೆ ಬರಲು ರೆಡಿ ಆಗಿದೆ. ಪೈರಸಿ ತಡೆಗಟ್ಟಲು ಕೇಂದ್ರ ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದೆ. ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್ ಅವರು ಈ ಬಗ್ಗೆ ದೊಡ್ಡ ಸೂಚನೆ ನೀಡಿದ್ದಾರೆ. ಈಗಾಗಲೇ ಕೇಂದ್ರ ಸರ್ಕಾರವು ಪೈರಸಿಗೆ…

Read More

UPI-linked PF Claim: EPFO ಚಂದಾದಾರರ ಗಮನಕ್ಕೆ; UPI ಆಧಾರಿತ PF ಕ್ಲೇಮ್ ಸೌಲಭ್ಯ ಜಾರಿಗೆ ಮತ್ತಷ್ಟು ವಿಳಂಬ! – Kannada News | EPFO Delays UPI Linked PF Claim Settlement Facility to August Due to Technical Glitches

ನೌಕರರ ಭವಿಷ್ಯ ನಿಧಿ ಸಂಸ್ಥೆಯ (EPFO) ಚಂದಾದಾರರು ಬಹುನಿರೀಕ್ಷಿತ ಯುಪಿಐ (UPI) ಆಧಾರಿತ ಪಿಎಫ್ ಕ್ಲೇಮ್ ಸೆಟಲ್ಮೆಂಟ್ ಸೌಲಭ್ಯಕ್ಕಾಗಿ ಇನ್ನು ಕೆಲವು ದಿನ ಕಾಯಬೇಕಾಗಿದೆ. ತಾಂತ್ರಿಕ ಕಾರಣಗಳಿಂದಾಗಿ ಈ ಹೊಸ ಯೋಜನೆಯ ಚಾಲನೆಯನ್ನು ಆಗಸ್ಟ್ ತಿಂಗಳಿಗೆ ಮುಂದೂಡಲಾಗಿದೆ. ಈ ಮೊದಲು 2026ರ ಮಾರ್ಚ್‌ ವೇಳೆಗೆ (2025-26ನೇ ಹಣಕಾಸು ವರ್ಷದ ಅಂತ್ಯಕ್ಕೆ) ಈ ಸೌಲಭ್ಯವನ್ನು ಬಿಡುಗಡೆ ಮಾಡಲು ಉದ್ದೇಶಿಸಲಾಗಿತ್ತು. ಆದರೆ, ನವೀಕರಿಸಲಾದ ನೂತನ ಡಿಜಿಟಲ್ ಪೋರ್ಟಲ್‌ನಲ್ಲಿ ಕಾಣಿಸಿಕೊಂಡಿರುವ ಸಾಫ್ಟ್‌ವೇರ್ ದೋಷಗಳು ಹಾಗೂ ತಾಂತ್ರಿಕ ಸಮಸ್ಯೆಗಳನ್ನು ಸರಿಪಡಿಸಲು ಆದ್ಯತೆ ನೀಡಿರುವುದರಿಂದ ಈ…

Read More

‘ರನ್ನಿಂಗ್’ ಪ್ರೊಟೆಸ್ಟ್: ಸಚಿವರ ಗಮನ ಸೆಳೆಯಲು ಹದಗೆಟ್ಟ ರಸ್ತೆಯಲ್ಲೇ ಓಡಿದ ಬೆಂಗಳೂರಿನ ಯುವಕ! – Kannada News | Bengaluru Engineer Runs on Dusty Road in Unique Protest for Asphalt

ಸಚಿವರ ಗಮನ ಸೆಳೆಯಲು ಹದಗೆಟ್ಟ ರಸ್ತೆಯಲ್ಲೇ ಓಡಿದ ಬೆಂಗಳೂರಿನ ಯುವಕ! ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹದಗೆಟ್ಟ ರಸ್ತೆಗಳು ಮತ್ತು ಸರಿಹೋಗದ ಮೂಲಸೌಕರ್ಯಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುವುದು ಹೊಸದೇನಲ್ಲ. ಆದರೆ ಪಶ್ಚಿಮ ಬೆಂಗಳೂರಿನ ಯುವಕನೊಬ್ಬ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಕಣ್ಣು ತೆರೆಸಲು ಕೈಗೊಂಡಿರುವ ‘ವಿಭಿನ್ನ ಪ್ರತಿಭಟನೆ’ ಈಗ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಪೀಣ್ಯ ಸಮೀಪದ ಅಂದರಹಳ್ಳಿ ಮುಖ್ಯರಸ್ತೆ ಬಳಿಯಿರುವ ರುದ್ರಪ್ಪ ಲೇಔಟ್ ನಿವಾಸಿ, 34 ವರ್ಷದ ಎಂಜಿನಿಯರ್ ಹಾಗೂ ಉದ್ಯಮಿ ಧನಂಜಯ ಭಂಡಾರ್ಕರ್, ತಮ್ಮ…

Read More

ವಿದ್ಯಾ ಬಾಲನ್ ಕೈತಪ್ಪಿದ ‘ಕಹಾನಿ’, ಆದಿತ್ಯ ಧರ್ ಪತ್ನಿಯ ಪಾಲಾದ ಸಿನಿಮಾ – Kannada News | Yaami Gautham to replace Vidya Balan in Kahaani 3

‘ಕಹಾನಿ’ ಬಾಲಿವುಡ್​​ನ (Bollywood) ಜನಪ್ರಿಯ ಮತ್ತು ಯಶಸ್ವಿ ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ಒಂದು. ಈವರೆಗೆ ‘ಕಹಾನಿ’ ಸಿನಿಮಾದ ಎರಡು ಭಾಗಗಳು ಬಿಡುಗಡೆ ಆಗಿವೆ. ಎರಡೂ ಸಿನಿಮಾಗಳಲ್ಲಿ ವಿದ್ಯಾ ಬಾಲನ್ ನಾಯಕಿ. ಮಹಿಳಾ ಪ್ರಧಾನ ಸಿನಿಮಾ ಆದರೂ ಸಸ್ಪೆನ್ಸ್ ಥ್ರಿಲ್ಲರ್ ಜೊತೆಗೆ ಭಾವುಕತೆಯನ್ನು ಸೇರಿಸಿ ಕತೆ ಕಟ್ಟುವುದು ‘ಕಹಾನಿ’ ಸಿನಿಮಾದ ವಿಶೇಷ. 2012 ರಲ್ಲಿ ಈ ಸರಣಿಯ ಮೊದಲ ಸಿನಿಮಾ ರಿಲೀಸ್ ಆಗಿತ್ತು. 2016ರಲ್ಲಿ ಎರಡನೇ ಸಿನಿಮಾ ಬಿಡುಗಡೆ ಆಗಿತ್ತು. ಇದೀಗ ಮೂರನೇ ಸಿನಿಮಾ ನಿರ್ಮಾಣಕ್ಕೆ ಯೋಜನೆ ಸಿದ್ಧವಾಗಿದೆ….

Read More

ನೀಟ್ ಪ್ರತಿಭಟನೆ, ಬಂಧಿತ 18 ವರ್ಷದೊಳಗಿನ ವಿದ್ಯಾರ್ಥಿಗಳ ಬಿಡುಗಡೆಗೊಳಿಸುವಂತೆ ಎಲ್ಲಾ ರಾಜ್ಯಗಳಿಗೆ ಸುಪ್ರೀಂ ಸೂಚನೆ – Kannada News | SC Orders Release of Minor NEET Protesters: Upholds Right to Peaceful Protest

ನವದೆಹಲಿ, ಜುಲೈ 28: ನೀಟ್(NEET) ಅಕ್ರಮದ ವಿರುದ್ಧ ದೆಹಲಿಯ ಜಂತರ್ ಮಂತರ್ ಸೇರಿ ರಾಜ್ಯದೆಲ್ಲೆಡೆ ಪ್ರತಿಭಟನೆಯಲ್ಲಿ ಭಾಗಿಯಾಗಿ ಬಂಧನಕ್ಕೊಳಗಾಗಿದ್ದ 18 ವರ್ಷದೊಳಗಿನ ವಿದ್ಯಾರ್ಥಿಗಳನ್ನು ಬಿಡುಗಡೆ ಮಾಡುವಂತೆ ಎಲ್ಲಾ ರಾಜ್ಯಗಳಿಗೆ ಸುಪ್ರೀಂಕೋರ್ಟ್​ ಸೂಚನೆ ನೀಡಿದೆ. ಸುಪ್ರೀಂ ವಿದ್ಯಾರ್ಥಿಗಳನ್ನು ದಂಡನಾತ್ಮಕ ಕ್ರಮದಿಂದ ರಕ್ಷಿಸಿದೆ. ಮಂಗಳವಾರ, ಸುಪ್ರೀಂ ಕೋರ್ಟ್ ಕ್ರಿಮಿನಲ್ ದಾಖಲೆಗಳಿಲ್ಲದವರನ್ನು ಬಿಡುಗಡೆ ಮಾಡಲು ಆದೇಶಿಸಿದೆ. ಕಾಕ್ರೋಚ್ ಜನತಾ ಪಾರ್ಟಿ ಹಾಗೂ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆಯ ಸಂದರ್ಭದಲ್ಲಿ ಸಂಭವಿಸಿದ ಹಿಂಸಾಚಾರ ಮತ್ತು ಪೊಲೀಸ್ ದೌರ್ಜನ್ಯದ ವಿರುದ್ಧ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ನಡೆಸಿದ…

Read More

ಮಳೆ ಅಭಾವಕ್ಕೆ ತುಮಕೂರು ಮಂದಿ ಕಂಗಾಲು: ಸಂಪೂರ್ಣ ಬತ್ತಿದ 300ಕ್ಕೂ ಹೆಚ್ಚು ಕೆರೆಗಳು

ತುಮಕೂರು, ಜುಲೈ 28: ಜಿಲ್ಲೆಯಲ್ಲಿ ಮಳೆ ಕೊರತೆಯಿಂದಾಗಿ ತೀವ್ರ ಬರಗಾಲ ಎದುರಾಗಿದ್ದು, ಪರಿಸ್ಥಿತಿ ಚಿಂತಾಜನಕವಾಗಿದೆ. ತುಮಕೂರಿನ ಒಟ್ಟು 2,047 ಕೆರೆಗಳ ಪೈಕಿ 400 ದೊಡ್ಡ ಕೆರೆಗಳಲ್ಲಿ 300ಕ್ಕೂ ಹೆಚ್ಚು ಕೆರೆಗಳು ಸಂಪೂರ್ಣವಾಗಿ ಖಾಲಿಯಾಗಿವೆ. ಉಳಿದ 100 ಕೆರೆಗಳಲ್ಲೂ ನೀರು ಡೆಡ್ ಸ್ಟೋರೇಜ್ ಹಂತಕ್ಕೆ ತಲುಪಿರುವುದು ಆತಂಕ ಮೂಡಿಸಿದೆ. ಹೀಗಾಗಿ ಜನ, ಜಾನುವಾರು ಹಾಗೂ ಪ್ರಾಣಿ-ಪಕ್ಷಿಗಳಿಗೆ ಕುಡಿಯುವ ನೀರಿಲ್ಲದೆ ತೀವ್ರ ಪರದಾಟ ಉಂಟಾಗಿದೆ. ರೈತರು ತಮ್ಮ ತೆಂಗು ಮತ್ತು ಅಡಿಕೆ ತೋಟಗಳನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ. ಮಳ್ಳೂರು ಕೆರೆ, ಮರಳೂರು…

Read More