ಚಾಲಕರ ಕೊರತೆಯಿಂದ ಸಂಚಾರ ಮಾಡ್ತಿಲ್ಲ ಬಿಎಂಟಿಸಿಯ 500ಕ್ಕೂ ಹೆಚ್ಚು ಇವಿ ಬಸ್! ಸಮಯಕ್ಕೆ ಬಸ್ ಸಿಗದೆ ಪ್ರಯಾಣಿಕರ ಪರದಾಟ – Kannada News | BMTC Electric Buses Hit by Driver Shortage? Bengaluru Commuters Face Delays as Hundreds of EV Buses Stay Off Roads
ಬಿಎಂಟಿಸಿಯ ಎಲೆಕ್ಟ್ರಿಕ್ (ಇವಿ) ಬಸ್ (ಸಾಂದರ್ಭಿಕ ಚಿತ್ರ)Image Credit source: tv9 ಬೆಂಗಳೂರು, ಜುಲೈ 28: ರಾಜಧಾನಿ ಬೆಂಗಳೂರಿನಲ್ಲಿ (Bengaluru) ಕಳೆದ ಕೆಲವು ದಿನಗಳಿಂದ ಬಿಎಂಟಿಸಿ ಬಸ್‌ಗಳು ನಿಗದಿತ ಸಮಯಕ್ಕೆ ಸಿಗುತ್ತಿಲ್ಲ ಎಂಬ ದೂರುಗಳು ಹೆಚ್ಚುತ್ತಿವೆ. ಇದರಿಂದ ಶಾಲೆ, ಕಾಲೇಜು ಹಾಗೂ ಕಚೇರಿಗಳಿಗೆ ತೆರಳುವ ಸಾವಿರಾರು ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ. ಈ ಸಮಸ್ಯೆಗೆ ಪ್ರಮುಖ ಕಾರಣವಾಗಿ ಬಿಎಂಟಿಸಿಯ ಎಲೆಕ್ಟ್ರಿಕ್ (ಇವಿ) ಬಸ್‌ಗಳು ಸಮರ್ಪಕವಾಗಿ ಕಾರ್ಯಾಚರಣೆ ನಡೆಸದಿರುವುದು ಹಾಗೂ ಚಾಲಕರ ಕೊರತೆ ಎಂಬುದು ತಿಳಿದುಬಂದಿದೆ. ನಗರದಲ್ಲಿ ಬಿಎಂಟಿಸಿಯ 15…