ಒಟ್ಟಿಗೆ ನಾಲ್ಕು ಸ್ಟಾರ್ ನಟರಿಗೆ ಇಂಜೂರಿ; ಆತಂಕ್ಕೆ ಒಳಗಾದ ಟಾಲಿವುಡ್ ಫ್ಯಾನ್ಸ್ – Kannada News | Balayya To JR NTR  Tollywood Stars Injured On Sets Shooting Delays And Fan Anxiety Loom Large

ಒಟ್ಟಿಗೆ ನಾಲ್ಕು ಸ್ಟಾರ್ ನಟರಿಗೆ ಇಂಜೂರಿ

ಸಿನಿಮಾ ಶೂಟಿಂಗ್ ವೇಳೆ ಎಷ್ಟೇ ಮುನ್ನೆಚ್ಚರಿಕೆ ತೆಗೆದುಕೊಂಡರೂ ಗಾಯಗೊಳ್ಳೋದು ಸಾಮಾನ್ಯ ಎಂಬಂತಹ ಪರಿಸ್ಥಿತಿ ನಿರ್ಮಾಣ ಆಗಿದೆ. ಈಗ ಟಾಲಿವುಡ್‌ನ ಸ್ಟಾರ್ ನಟರು ಶೂಟಿಂಗ್ ವೇಳೆ ಸಾಲು ಸಾಲಾಗಿ ಗಾಯಗೊಳ್ಳುತ್ತಿರುವುದು ಅಭಿಮಾನಿಗಳಲ್ಲಿ ತೀವ್ರ ಆತಂಕ ಮೂಡಿಸಿದೆ. ನೆಚ್ಚಿನ ನಟರ ಆರೋಗ್ಯದ ಸ್ಥಿತಿ ಕೇಳಿ ಫ್ಯಾನ್ಸ್ ಕಂಗಾಲಾಗಿದ್ದಾರೆ. ಎನ್‌ಟಿಆರ್ (NTR), ರಾಮ್ ಚರಣ್ ಮತ್ತು ಬಾಲಕೃಷ್ಣ ಸಿನಿಮಾ ಸೆಟ್‌ಗಳಲ್ಲಿ ಗಾಯಗೊಂಡಿರುವ ಪ್ರಮುಖರು. ಎಲ್ಲರೂ ಸರ್ಜರಿಗೆ ಒಳಗಾಗಿದ್ದು ಒಂದಷ್ಟು ಸಮಯ ವಿಶ್ರಾಂತಿ ಪಡೆಯುವ ಅಗತ್ಯವಿದೆ.

ಇತ್ತೀಚೆಗಷ್ಟೇ ನಟ ಜೂನಿಯರ್ ಎನ್‌ಟಿಆರ್ ‘ಡ್ರಾಗನ್’ ಸಿನಿಮಾ ಶೂಟಿಂಗ್ ವೇಳೆ ಭುಜದ ಗಾಯಕ್ಕೆ ಒಳಗಾಗಿದ್ದಾರೆ. ಇದರಿಂದ ಅವರು ಸರ್ಜರಿ ಮಾಡಿಸಿಕೊಂಡಿದ್ದಾರೆ. ವೈದ್ಯರು ಅವರಿಗೆ ಆರರಿಂದ ಎಂಟು ವಾರಗಳ ಕಾಲ ಸಂಪೂರ್ಣ ವಿಶ್ರಾಂತಿ ಪಡೆಯಲು ಸೂಚಿಸಿದ್ದಾರೆ. ಇದರಿಂದಾಗಿ ಸಿನಿಮಾದ ಚಿತ್ರೀಕರಣ ಸದ್ಯಕ್ಕೆ ಸ್ಥಗಿತಗೊಂಡಿದೆ. ಹೀಗಾಗಿ, ಸಿನಿಮಾ ಶೂಟ್ ಮುಂದಕ್ಕೆ ಹೋಗುವ ಭಯ ಕಾಡಿದೆ.

ಮತ್ತೊಂದೆಡೆ ನಟ ರಾಮ್ ಚರಣ್ ‘ಪೆದ್ದಿ’ ಚಿತ್ರದ ಕುಸ್ತಿ ದೃಶ್ಯಗಳ ಚಿತ್ರೀಕರಣದ ವೇಳೆ ಮಣಿಕಟ್ಟಿನ ಗಾಯಕ್ಕೆ ಒಳಗಾಗಿದ್ದರು. ಇತ್ತೀಚೆಗೆ ಕೊಯಮತ್ತೂರಿನ ಆಸ್ಪತ್ರೆಯಲ್ಲಿ ಅವರಿಗೆ ಮಣಿಕಟ್ಟಿನ ಶಸ್ತ್ರಚಿಕಿತ್ಸೆ ನಡೆದಿದೆ. ಅವರು ಕೂಡ ಸದ್ಯ ವಿಶ್ರಾಂತಿಯಲ್ಲಿದ್ದಾರೆ.

ಹಿರಿಯ ನಟ ನಂದಮೂರಿ ಬಾಲಕೃಷ್ಣ ‘NBK111’ ಚಿತ್ರದ ಸಾಹಸ ದೃಶ್ಯದ ವೇಳೆ ಮೊಣಕಾಲಿಗೆ ತೀವ್ರವಾಗಿ ಗಾಯ ಮಾಡಿಕೊಂಡಿದ್ದಾರೆ. ಹೈದರಾಬಾದ್‌ನ ಎಐಜಿ ಆಸ್ಪತ್ರೆಯಲ್ಲಿ ಅವರಿಗೆ ಮೂರು ಗಂಟೆಗಳ ಕಾಲ ಸುದೀರ್ಘ ಶಸ್ತ್ರಚಿಕಿತ್ಸೆ ನಡೆದಿದೆ. ಅವರು ಕೂಡ ಹಲವು ವಾರಗಳ ವಿಶ್ರಾಂತಿಪಡೆಯಬೇಕಿದೆ.

ಇತ್ತೀಚೆಗೆ ನಟ ಹಾಗೂ ರಾಜಕಾರಣಿ ಪವನ್ ಕಲ್ಯಾಣ್ ಕೂಡ ಮುಂಬೈನಲ್ಲಿ ಭುಜದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ರಾಜಕೀಯ ಪ್ರಚಾರ ಮತ್ತು ಸಿನಿಮಾ ಶೂಟ್ ಕಾರಣಕ್ಕೆ ಹಳೆಯ ಗಾಯಗಳು ಉಲ್ಬಣಗೊಂಡಿತ್ತು. ಇನ್ನೂ ವಿಳಂಬ ಮಾಡೋದು ಬೇಡ ಎಂಬ ಕಾರಣಕ್ಕೆ ಅವರು ಸರ್ಜರಿ ಮಾಡಿಸಿಕೊಂಡಿದ್ದಾರೆ.

ಇದನ್ನೂ ಓದಿ: ‘ಡ್ರ್ಯಾಗನ್’ ಶೂಟಿಂಗ್ ವೇಳೆ ಜೂ. ಎನ್​ಟಿಆರ್​ ಭುಜಕ್ಕೆ ಗಾಯ; 2 ತಿಂಗಳು ವಿಶ್ರಾಂತಿ ಅಗತ್ಯ

ಸಿನಿಮಾಗಳ ಬಜೆಟ್ ಕೋಟಿ ದಾಟುತ್ತಿರುವ ಈ ಸಮಯದಲ್ಲಿ ಶೂಟಿಂಗ್ ವಿಳಂಬವಾದರೆ ನಿರ್ಮಾಪಕರಿಗೆ ಕೋಟ್ಯಂತರ ರೂಪಾಯಿ ನಷ್ಟವಾಗುತ್ತದೆ. ಹೀಗಾಗಿ ಸಿನಿಮಾ ಸೆಟ್‌ಗಳಲ್ಲಿ ಸ್ಟಾರ್ ನಟರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುವುದು ಈಗ ಅನಿವಾರ್ಯವಾಗಿದೆ. ನೆಚ್ಚಿನ ನಟರು ಗಾಯಗೊಂಡರೆ ಅಭಿಮಾನಿಗಳಲ್ಲೂ ಸಹಜವಾಗಿಯೇ ಆತಂಕ ಹೆಚ್ಚುತ್ತದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಇನ್​​ಸ್ಟಾಗ್ರಾಂನಲ್ಲಿ ಪ್ರಧಾನಿ ಮೋದಿ ಹೊಸ ದಾಖಲೆ, 105 ಮಿಲಿಯನ್‌ ತಲುಪಿದ ಫಾಲೋವರ್ಸ್ ಸಂಖ್ಯೆ – Kannada News | Modi Breaks the Internet: Hits Historic 105M Insta Followers After Viral Gen Z Selfie Video

ನವದೆಹಲಿ, ಜುಲೈ 28: ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು ಹೊಸ ಇತಿಹಾಸ ಬರೆದಿದ್ದಾರೆ. ಅವರ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯ ಫಾಲೋವರ್ಸ್ ಸಂಖ್ಯೆ 105 ಮಿಲಿಯನ್ (10.5 ಕೋಟಿ) ಗಡಿ ದಾಟಿದ್ದು, ಜಾಗತಿಕ ಮಟ್ಟದಲ್ಲಿ ಈ ಮೈಲಿಗಲ್ಲು ತಲುಪಿದ ವಿಶ್ವದ ಮೊದಲ ರಾಜಕೀಯ ನಾಯಕ ಎನಿಸಿಕೊಂಡಿದ್ದಾರೆ. ವಿಶೇಷವೆಂದರೆ, ಕೇವಲ ಒಂದೇ ವಾರದಲ್ಲಿ ಪ್ರಧಾನಿ ಮೋದಿ ಅವರ ಖಾತೆಗೆ 4 ಮಿಲಿಯನ್ (40 ಲಕ್ಷ) ಹೊಸ ಫಾಲೋವರ್ಸ್‌ಗಳು ಸೇರ್ಪಡೆಯಾಗಿದ್ದಾರೆ.

ಫಾಲೋವರ್ಸ್ ಏರಿಕೆಗೆ ಪ್ರಮುಖ ಕಾರಣವೇನು?
ದೇಶಾದ್ಯಂತ ನಡೆಯುತ್ತಿರುವ ನೀಟ್ ಯುಜಿ ಪರೀಕ್ಷಾ ಅಕ್ರಮ ಹಾಗೂ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ (CJP) ಮತ್ತು ‘ಜೆನ್ ಝಿ’ಗಳು (Gen Z) ನಡೆಸುತ್ತಿದ್ದ ಪ್ರತಿಭಟನೆಗಳ ಹಿನ್ನೆಲೆಯಲ್ಲಿ, ಪ್ರಧಾನಿ ಮೋದಿ ಅವರು ‘ಸೆಲ್ಫಿ ವೀಡಿಯೊ’ ಮಾದರಿಯಲ್ಲಿ ಇನ್‌ಸ್ಟಾಗ್ರಾಂ ರೀಲ್ಸ್ ಬಿಡುಗಡೆ ಮಾಡಿದ್ದರು.

ಫ್ರೆಂಡ್ಸ್ ಎಂದು ಆತ್ಮೀಯವಾಗಿ ಯುವಜನತೆಯನ್ನು ಉದ್ದೇಶಿಸಿ ಮಾತನಾಡಿದ್ದ ಈ ವೀಡಿಯೊದಲ್ಲಿ, ಪರೀಕ್ಷಾ ಮಾಫಿಯಾ ವಿರುದ್ಧ ಕಠಿಣ ಕಾನೂನು ತರುವುದು ಹಾಗೂ ಫಾಸ್ಟ್ ಟ್ರ್ಯಾಕ್ ನ್ಯಾಯಾಲಯಗಳನ್ನು ಸ್ಥಾಪಿಸುವ ಭರವಸೆ ನೀಡಿದ್ದರು. ಈ ವೀಡಿಯೊ ಬಿಡುಗಡೆಯಾದ ಕೇವಲ 24 ಗಂಟೆಗಳಲ್ಲಿ 300 ಮಿಲಿಯನ್‌ಗಿಂತಲೂ (30 ಕೋಟಿ) ಹೆಚ್ಚು ವೀಕ್ಷಣೆಗಳನ್ನು ಗಳಿಸಿ ಇನ್‌ಸ್ಟಾಗ್ರಾಂ ಇತಿಹಾಸದಲ್ಲೇ ಭಾರಿ ಸದ್ದು ಮಾಡಿತು. ಇದರಿಂದಾಗಿ ಲಕ್ಷಾಂತರ ಯುವಕರು ಒಂದೇ ರಾತ್ರಿಯಲ್ಲಿ ಮೋದಿಯವರ ಖಾತೆಯನ್ನು ಫಾಲೋ ಮಾಡಲು ಪ್ರಾರಂಭಿಸಿದರು.

ಮತ್ತಷ್ಟು ಓದಿ: ಮೋದಿ ವಿಡಿಯೋ ಡಿಲೀಟ್, ಮೆಟಾ ಸಂಸ್ಥೆಯ ಗ್ಲೋಬಲ್ ಪಬ್ಲಿಕ್ ಪಾಲಿಸಿ ಹೆಡ್‌ಗೆ ಸಮನ್ಸ್: ‘ಮೆಟಾ’ ವಿವರಣೆಗೆ ಕೇಂದ್ರ ಅಸಮಾಧಾನ

ಇನ್‌ಸ್ಟಾಗ್ರಾಂನಲ್ಲಿ ವಿಶ್ವದ ಯಾವುದೇ ರಾಜಕೀಯ ನಾಯಕನಿಗಿಂತ ಮೋದಿ ಅತ್ಯಂತ ಮುಂಚೂಣಿಯಲ್ಲಿದ್ದಾರೆ. ಎರಡನೇ ಸ್ಥಾನದಲ್ಲಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸುಮಾರು 43.2 ಮಿಲಿಯನ್ ಫಾಲೋವರ್ಸ್‌ಗಳನ್ನು ಹೊಂದಿದ್ದು, ಅವರಿಗಿಂತ ಮೋದಿ ಅವರ ಫಾಲೋವರ್ಸ್ ಸಂಖ್ಯೆ ದುಪ್ಪಟ್ಟು ಅಧಿಕವಾಗಿದೆ.

ಭಾರತೀಯ ರಾಜಕಾರಣದಲ್ಲಿ ಭಾರಿ ಅಂತರ: ಭಾರತದ ಇತರ ಪ್ರಮುಖ ರಾಜಕಾರಣಿಗಳಾದ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ (16.1 ಮಿಲಿಯನ್) ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (12.6 ಮಿಲಿಯನ್) ಅವರಿಗಿಂತ ಮೋದಿ ಮುಂಚೂಣಿಯಲ್ಲಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ: ಅವಧಿ ವಿಸ್ತರಣೆ ಕೋರಿದ್ದ PIL ಇತ್ಯರ್ಥಗೊಳಿಸಿದ ಹೈಕೋರ್ಟ್ – Kannada News | Karnataka HC Disposes PIL Seeking Extension for Voter List Revision

ಬೆಂಗಳೂರು, ಜುಲೈ 28: ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (SIR) ಪ್ರಕ್ರಿಯೆಯ ಅವಧಿ ವಿಸ್ತರಿಸುವಂತೆ ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (PIL) ಕರ್ನಾಟಕ ಹೈಕೋರ್ಟ್ ಇತ್ಯರ್ಥಪಡಿಸಿದೆ.ಸಾಹಿತಿ ದೇವನೂರು ಮಹದೇವ, ಇತಿಹಾಸ ತಜ್ಞ ರಾಮಚಂದ್ರ ಗುಹಾ, ನಿವೃತ್ತ ಮೇಜರ್ ಜನರಲ್ ಎಸ್.ಜಿ. ವಂಬಟ್ಕೆರೆ ಹಾಗೂ ಲೇಖಕಿ ಸಬೀಹಾ ಭೂಮಿಗೌಡ ಅವರು ಈ ಅರ್ಜಿ ಸಲ್ಲಿಸಿದ್ದರು. ಬಿಎಲ್‌ಒಗಳಿಗೆ ಸಮರ್ಪಕ ಮಾಹಿತಿ ಹಾಗೂ ತರಬೇತಿ ಇಲ್ಲದಿರುವುದು ಮತ್ತು ಮತದಾರರ ನೆರವು ಕೇಂದ್ರಗಳ ಸರಿಯಾದ ಕಾರ್ಯನಿರ್ವಹಣೆ ಕೊರತೆಯಿಂದ ಸುಮಾರು 70 ಲಕ್ಷ ಮತದಾರರು ಪಟ್ಟಿಯಿಂದ ಹೊರಗುಳಿಯುವ ಸಾಧ್ಯತೆಯಿದೆ ಎಂದು ಅರ್ಜಿದಾರರ ಪರ ಹಿರಿಯ ವಕೀಲ ವಿಕ್ರಮ್ ಹುಯಿಲಗೋಳ ವಾದ ಮಂಡಿಸಿದ್ದರು.

ಹೈಕೋರ್ಟ್‌ ಮಧ್ಯಪ್ರವೇಶ ಅನಗತ್ಯ ಎಂದ ಪೀಠ

ಇದಕ್ಕೆ ಚುನಾವಣಾ ಆಯೋಗದ ಪರ ವಕೀಲ ಶರತ್ ದೊಡ್ವಾಡ್ ಪ್ರತಿಕ್ರಿಯಿಸಿ, “ಅಗತ್ಯ ಬಿದ್ದರೆ SIR ಅವಧಿಯನ್ನು ವಿಸ್ತರಿಸಲಾಗುವುದು. ಕರಡು ಪಟ್ಟಿ ಪ್ರಕಟವಾದ ನಂತರವೂ ಬಿಟ್ಟುಹೋದ ಮತದಾರರು ಅರ್ಜಿ ಸಲ್ಲಿಸಲು ಅವಕಾಶವಿದೆ” ಎಂದು ಕೋರ್ಟ್‌ಗೆ ತಿಳಿಸಿದರು. ರಾಜ್ಯ ಸರ್ಕಾರದ ಪರ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ವಾದಿಸಿ, ಸರ್ಕಾರವೂ ಮತದಾರರ ಹಕ್ಕು ರಕ್ಷಿಸುವಂತೆ ಆಯೋಗಕ್ಕೆ ಮನವಿ ಸಲ್ಲಿಸಿದೆ ಎಂದರು. ಚುನಾವಣಾ ಆಯೋಗವು ಈ ಸಮಸ್ಯೆಗಳನ್ನು ಬಗೆಹರಿಸಲು ಸಮರ್ಥವಾಗಿದೆ ಹಾಗೂ ಇದೇ ವಿಷಯಗಳು ಸುಪ್ರೀಂಕೋರ್ಟ್‌ನಲ್ಲಿಯೂ ಪರಿಶೀಲನೆಯಲ್ಲಿರುವುದರಿಂದ ಈ ಹಂತದಲ್ಲಿ ಹೈಕೋರ್ಟ್‌ ಮಧ್ಯಪ್ರವೇಶ ಅನಗತ್ಯವೆಂದು ಪೀಠವು ಅರ್ಜಿಯನ್ನು ಇತ್ಯರ್ಥಗೊಳಿಸಿದೆ.

ಡಿಜಿಟಲೀಕರಣ ವಿಳಂಬ

ಮನೆ-ಮನೆ ಸಮೀಕ್ಷೆಯಲ್ಲಿ ಜೂನ್ 29ರಿಂದ 59,050 ಬಿಎಲ್‌ಒಗಳು ನಮೂನೆಗಳನ್ನು ವಿತರಿಸಿದ್ದರೂ, ಭರ್ತಿ ಮಾಡಿದ ಫಾರಂಗಳನ್ನು ಆ್ಯಪ್‌ಗೆ ಅಪ್‌ಲೋಡ್ ಮಾಡುವ ಡಿಜಿಟಲೀಕರಣ ಕಾರ್ಯ ಪ್ರಸ್ತುತ ಶೇ.69.51ರಷ್ಟು ಮಾತ್ರ ಪೂರ್ಣಗೊಂಡಿದೆ. 2002ರ SIR ದಾಖಲೆಗಳ ‘ಸೆಲ್ಫ್ ಮ್ಯಾಪಿಂಗ್’ ಹಾಗೂ ‘ಪ್ರೊಜೆನಿ ಮ್ಯಾಪಿಂಗ್’ ಮಾಹಿತಿ ಪತ್ತೆಹಚ್ಚುವಲ್ಲಿ ಉಂಟಾಗಿರುವ ತಾಂತ್ರಿಕ ತೊಡಕಿನಿಂದ ಈ ಪ್ರಕ್ರಿಯೆ ವಿಳಂಬವಾಗಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ ಮತದಾರರ ಪಟ್ಟಿ ಪರಿಷ್ಕರಣೆ: 5.54 ಕೋಟಿ ನಮೂನೆಗಳ ವಿತರಣೆ ಪೂರ್ಣ; ASDDO ಪಟ್ಟಿಯಲ್ಲಿ 52.97 ಲಕ್ಷ ಮತದಾರರು !

ಇದುವರೆಗೆ ಸಲ್ಲಿಕೆಯಾದ 3.85 ಕೋಟಿ ನಮೂನೆಗಳಲ್ಲಿ 1.56 ಕೋಟಿ ಮತದಾರರು ಸೆಲ್ಫ್ ಮ್ಯಾಪಿಂಗ್ ಹಾಗೂ 1.93 ಕೋಟಿ ಮಂದಿ ಪ್ರೊಜೆನಿ ಮ್ಯಾಪಿಂಗ್ ಪೂರ್ಣಗೊಳಿಸಿದ್ದಾರೆ. ಯಾವುದೇ ಮ್ಯಾಪಿಂಗ್ ಮಾಹಿತಿ ಇಲ್ಲದೆ ಸಲ್ಲಿಕೆಯಾಗಿರುವ 17.19 ಲಕ್ಷ (ಶೇ. 3.1) ನಮೂನೆದಾರರಿಗೆ ಕರಡು ಪಟ್ಟಿ ಪ್ರಕಟವಾದ ನಂತರ ಅಗತ್ಯ ದಾಖಲೆ ಸಲ್ಲಿಸಲು ನೋಟಿಸ್ ನೀಡಲಾಗುವುದು ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಿನಿಮಾ ಪೈರಸಿ ತಡೆಯಲು ಹೊಸ ಪ್ಲ್ಯಾನ್​​ನೊಂದಿಗೆ ಬಂದ ಕೇಂದ್ರ ಸರ್ಕಾರ – Kannada News | Indian Government Intensive Steps To Curb Film Piracy Industry Welcomes Move

ಕನ್ನಡ, ಬಾಲಿವುಡ್ ಸೇರಿದಂತೆ ಎಲ್ಲಾ ಚಿತ್ರರಂಗಕ್ಕೂ ಪೈರಸಿ ದೊಡ್ಡ ಪಿಡುಗಾಗಿ ಪರಿಣಮಿಸಿದೆ. ನಿರ್ಮಾಪಕರು ಮತ್ತು ಆ್ಯಂಟಿ ಪೈರಸಿ ತಂಡಗಳು ಎಷ್ಟೇ ಪ್ರಯತ್ನಿಸಿದರೂ ಸಿನಿಮಾಗಳು ಆನ್​​ಲೈನ್​ ಅಲ್ಲಿ ಲೀಕ್ ಆಗುತ್ತಿವೆ. ಈ ಹಿನ್ನೆಲೆಯಲ್ಲಿ ಭಾರತ ಸರ್ಕಾರ ಈಗ ಹೊಸ ಅಸ್ತ್ರದೊಂದಿಗೆ ಬರಲು ರೆಡಿ ಆಗಿದೆ. ಪೈರಸಿ ತಡೆಗಟ್ಟಲು ಕೇಂದ್ರ ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದೆ. ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್ ಅವರು ಈ ಬಗ್ಗೆ ದೊಡ್ಡ ಸೂಚನೆ ನೀಡಿದ್ದಾರೆ.

ಈಗಾಗಲೇ ಕೇಂದ್ರ ಸರ್ಕಾರವು ಪೈರಸಿಗೆ ಸಂಬಂಧಿಸಿದ 7,393 ಲಿಂಕ್‌ಗಳನ್ನು ನಿಷ್ಕ್ರಿಯಗೊಳಿಸಿದೆ. ಇದರಲ್ಲಿ 1,263 ವೆಬ್‌ಸೈಟ್‌ಗಳು ಹಾಗೂ 4,996 ಟೆಲಿಗ್ರಾಂ ಚಾನಲ್‌ಗಳು ಸೇರಿವೆ. ದೂರುಗಳನ್ನು ದಾಖಲಿಸಲು ಕೇಂದ್ರ ಸರ್ಕಾರವು ಪ್ರತ್ಯೇಕ ಆ್ಯಂಟಿ-ಪೈರಸಿ ಪೋರ್ಟಲ್ ಅನ್ನು ಸಿದ್ಧಪಡಿಸುತ್ತಿದೆ. ಇದರಿಂದಾಗಿ ಕಾನೂನು ಜಾರಿ ಪ್ರಕ್ರಿಯೆ ಇನ್ನುಮುಂದೆ ವೇಗವಾಗಿ ನಡೆಯಲಿದೆ.

ಸರ್ಕಾರದ ಕ್ರಮ ಚಿತ್ರರಂಗಕ್ಕೆ ದೊಡ್ಡ ಆನೆಬಲ ತಂದಿದೆ. ಇತ್ತೀಚೆಗಷ್ಟೇ ಪೊಲೀಸರು ‘ಐಬೊಮ್ಮ’ ರವಿಯನ್ನು ಬಂಧಿಸಿರುವುದು ಇದಕ್ಕೆ ಉತ್ತಮ ಉದಾಹರಣೆ. ದೇಶೀಯ ಪೊಲೀಸ್ ಇಲಾಖೆಯೂ ಈ ನಿಟ್ಟಿನಲ್ಲಿ ಚುರುಕಾಗಿ ಕೆಲಸ ಮಾಡುತ್ತಿದೆ.

ಇದನ್ನೂ ಓದಿ: ‘ಜನ ನಾಯಗನ್’ ಪೈರಸಿ ಕಾಪಿ ಡೌನ್​ಲೋಡ್ ಮಾಡಿದವರಿಗೂ ಎದುರಾಗಲಿದೆ ಸಂಕಷ್ಟ

ಗಲ್ಫ್ ದೇಶಗಳಲ್ಲಿ ಪ್ರದರ್ಶನಗೊಳ್ಳುವ ಪ್ರಿಂಟ್‌ಗಳಿಂದ ಪೈರಸಿ ಆಗುತ್ತಿದೆ ಎಂದು ಕೆಲವು ನಿರ್ಮಾಪಕರು ಅಭಿಪ್ರಾಯ ಹೊರಹಾಕಿದ್ದಾರೆಬ. ಚಿತ್ರಮಂದಿರಗಳಿಗೆ ಪ್ರೇಕ್ಷಕರು ಬರುವುದು ಕಡಿಮೆಯಾಗುತ್ತಿರುವ ಈ ಸಮಯದಲ್ಲಿ ಸರ್ಕಾರದ ಈ ನಡೆ ಚಿತ್ರರಂಗಕ್ಕೆ ಹೊಸ ಆಶಾಕಿರಣ ಮೂಡಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

UPI-linked PF Claim: EPFO ಚಂದಾದಾರರ ಗಮನಕ್ಕೆ; UPI ಆಧಾರಿತ PF ಕ್ಲೇಮ್ ಸೌಲಭ್ಯ ಜಾರಿಗೆ ಮತ್ತಷ್ಟು ವಿಳಂಬ! – Kannada News | EPFO Delays UPI Linked PF Claim Settlement Facility to August Due to Technical Glitches

ನೌಕರರ ಭವಿಷ್ಯ ನಿಧಿ ಸಂಸ್ಥೆಯ (EPFO) ಚಂದಾದಾರರು ಬಹುನಿರೀಕ್ಷಿತ ಯುಪಿಐ (UPI) ಆಧಾರಿತ ಪಿಎಫ್ ಕ್ಲೇಮ್ ಸೆಟಲ್ಮೆಂಟ್ ಸೌಲಭ್ಯಕ್ಕಾಗಿ ಇನ್ನು ಕೆಲವು ದಿನ ಕಾಯಬೇಕಾಗಿದೆ. ತಾಂತ್ರಿಕ ಕಾರಣಗಳಿಂದಾಗಿ ಈ ಹೊಸ ಯೋಜನೆಯ ಚಾಲನೆಯನ್ನು ಆಗಸ್ಟ್ ತಿಂಗಳಿಗೆ ಮುಂದೂಡಲಾಗಿದೆ. ಈ ಮೊದಲು 2026ರ ಮಾರ್ಚ್‌ ವೇಳೆಗೆ (2025-26ನೇ ಹಣಕಾಸು ವರ್ಷದ ಅಂತ್ಯಕ್ಕೆ) ಈ ಸೌಲಭ್ಯವನ್ನು ಬಿಡುಗಡೆ ಮಾಡಲು ಉದ್ದೇಶಿಸಲಾಗಿತ್ತು. ಆದರೆ, ನವೀಕರಿಸಲಾದ ನೂತನ ಡಿಜಿಟಲ್ ಪೋರ್ಟಲ್‌ನಲ್ಲಿ ಕಾಣಿಸಿಕೊಂಡಿರುವ ಸಾಫ್ಟ್‌ವೇರ್ ದೋಷಗಳು ಹಾಗೂ ತಾಂತ್ರಿಕ ಸಮಸ್ಯೆಗಳನ್ನು ಸರಿಪಡಿಸಲು ಆದ್ಯತೆ ನೀಡಿರುವುದರಿಂದ ಈ ವಿಳಂಬ ಉಂಟಾಗಿದೆ.

ಯುಪಿಐ ಸೌಲಭ್ಯ ಜಾರಿಗೆ ವಿಳಂಬವೇಕೆ?

ಇತ್ತೀಚೆಗಷ್ಟೇ ಈ ಆಡಳಿತ ಮಂಡಳಿಯು ತನ್ನ ನವೀಕೃತ ಡಿಜಿಟಲ್ ವೇದಿಕೆಯಾದ CITES 2.01 (Centralised IT Enabled Services) ಅನ್ನು ಬಿಡುಗಡೆ ಮಾಡಿತ್ತು. ಈ ಹೊಸ ವ್ಯವಸ್ಥೆಗೆ ಸಿಸ್ಟಮ್ ಬದಲಾಯಿಸಿದ ನಂತರ ಬಳಕೆದಾರರಿಂದ ಹಲವು ದೂರುಗಳು ಬಂದಿದ್ದವು.

ಚಂದಾದಾರರು ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳು:

  • ಹಳೆಯ ಖಾತೆಗಳ ವಿವರಗಳು ಪೋರ್ಟಲ್‌ನಲ್ಲಿ ಕಾಣಿಸದಿರುವುದು.
  •  ಲಾಗಿನ್ ಮಾಡುವಾಗ ಆಗಾಗ ಎದುರಾಗುತ್ತಿರುವ ತಾಂತ್ರಿಕ ಅಡಚಣೆಗಳು.
  • ವೆಬ್‌ಸೈಟ್ ತೆರೆಯಲು ಹಾಗೂ ಪ್ರಕ್ರಿಯೆಗೊಳ್ಳಲು ಹೆಚ್ಚಿನ ಸಮಯ ತಗಲುತ್ತಿರುವುದು.
  • ಪಿಎಫ್ ಕ್ಲೇಮ್ ಅರ್ಜಿ ಸಲ್ಲಿಕೆ ಮತ್ತು ಇತ್ಯರ್ಥ ಪ್ರಕ್ರಿಯೆಯಲ್ಲಿನ ತಡೆ.

ಇದನ್ನೂ ಓದಿ: ಐಟಿ ರಿಟರ್ನ್ಸ್ ಸಲ್ಲಿಕೆಗೆ ಜುಲೈ 31 ಡೆಡ್​​ಲೈನ್; ಐಟಿಆರ್ ಸಬ್ಮಿಟ್ ಮಾಡುವ ಮುನ್ನ ಈ ಚೆಕ್​ಲಿಸ್ಟ್ ಪರಿಶೀಲಿಸಿ

ಪ್ರಮುಖ ಮಾಹಿತಿ:

ನೂತನ CITES 2.01 ಪೋರ್ಟಲ್‌ನಲ್ಲಿ ಎದುರಾಗಿರುವ ಪ್ರಮುಖ ತಾಂತ್ರಿಕ ಸಮಸ್ಯೆಗಳನ್ನು ಆಗಸ್ಟ್ ಮೊದಲ ವಾರದ ವೇಳೆಗೆ ಪೂರ್ಣವಾಗಿ ಬಗೆಹರಿಸಲು ನಿರ್ಧರಿಸಲಾಗಿದೆ. ಪೋರ್ಟಲ್ ಪೂರ್ಣಪ್ರಮಾಣದಲ್ಲಿ ಸುಸ್ಥಿರಗೊಂಡ ನಂತರವೇ ಈ ಯುಪಿಐ ಆಧಾರಿತ ವ್ಯವಸ್ಥೆಯನ್ನು ಅಧಿಕೃತವಾಗಿ ಜಾರಿಗೆ ತರಲಾಗುವುದು.

UPI ಆಧಾರಿತ ಕ್ಲೇಮ್ ವ್ಯವಸ್ಥೆಯಿಂದ ಚಂದಾದಾರರಿಗೆ ಸಿಗುವ ಲಾಭಗಳೇನು?

ಸಾಂಪ್ರದಾಯಿಕ ಬ್ಯಾಂಕ್ ಖಾತೆ ವರ್ಗಾವಣೆಗಿಂತ ಯುಪಿಐ ಮೂಲಕ ನೇರವಾಗಿ ಹಣ ಖಾತೆಗೆ ವೇಗವಾಗಿ ಜಮೆಯಾಗಲಿದೆ. ಇದಲ್ಲದೇ ಬ್ಯಾಂಕ್ ಖಾತೆ ಪರಿಶೀಲನೆ ಪ್ರಕ್ರಿಯೆ ಮತ್ತಷ್ಟು ಸುಲಭವಾಗಲಿದ್ದು, ಮಧ್ಯವರ್ತಿಗಳಿಲ್ಲದೆ ನೇರ ಹಣ ಪಾವತಿಗೆ ಅನುಕೂಲವಾಗಲಿದೆ. ಜೊತೆಗೆ ಸಮಯವೂ ಉಳಿತಾಯವಾಗಲಿದೆ. ಕ್ಲೇಮ್ ಅನುಮೋದನೆಯಾದ ತಕ್ಷಣವೇ ಯುಪಿಐ ಖಾತೆಗೆ ನೇರವಾಗಿ ಹಣ ತಲುಪುವುದರಿಂದ ದಿನಗಟ್ಟಲೆ ಕಾಯುವ ಅಗತ್ಯವಿರುವುದಿಲ್ಲ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On – 1:00 pm, Tue, 28 July 26

Source link

‘ರನ್ನಿಂಗ್’ ಪ್ರೊಟೆಸ್ಟ್: ಸಚಿವರ ಗಮನ ಸೆಳೆಯಲು ಹದಗೆಟ್ಟ ರಸ್ತೆಯಲ್ಲೇ ಓಡಿದ ಬೆಂಗಳೂರಿನ ಯುವಕ! – Kannada News | Bengaluru Engineer Runs on Dusty Road in Unique Protest for Asphalt

ಸಚಿವರ ಗಮನ ಸೆಳೆಯಲು ಹದಗೆಟ್ಟ ರಸ್ತೆಯಲ್ಲೇ ಓಡಿದ ಬೆಂಗಳೂರಿನ ಯುವಕ!

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹದಗೆಟ್ಟ ರಸ್ತೆಗಳು ಮತ್ತು ಸರಿಹೋಗದ ಮೂಲಸೌಕರ್ಯಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುವುದು ಹೊಸದೇನಲ್ಲ. ಆದರೆ ಪಶ್ಚಿಮ ಬೆಂಗಳೂರಿನ ಯುವಕನೊಬ್ಬ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಕಣ್ಣು ತೆರೆಸಲು ಕೈಗೊಂಡಿರುವ ‘ವಿಭಿನ್ನ ಪ್ರತಿಭಟನೆ’ ಈಗ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಪೀಣ್ಯ ಸಮೀಪದ ಅಂದರಹಳ್ಳಿ ಮುಖ್ಯರಸ್ತೆ ಬಳಿಯಿರುವ ರುದ್ರಪ್ಪ ಲೇಔಟ್ ನಿವಾಸಿ, 34 ವರ್ಷದ ಎಂಜಿನಿಯರ್ ಹಾಗೂ ಉದ್ಯಮಿ ಧನಂಜಯ ಭಂಡಾರ್ಕರ್, ತಮ್ಮ ಬಡಾವಣೆಯ ಧೂಳು ಹಾಗೂ ಕಲ್ಲುಗಳಿಂದ ಕೂಡಿದ ಹದಗೆಟ್ಟ ರಸ್ತೆಯಲ್ಲೇ ಓಡುತ್ತಿರುವ (Running) ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

1.5 ಕಿ.ಮೀ. ಧೂಳಿನ ರಸ್ತೆ; ಅಸಹಾಯಕ ನಿವಾಸಿಗಳು

ರುದ್ರಪ್ಪ ಲೇಔಟ್‌ ರಚನೆಯಾಗಿ ಒಂದು ದಶಕ ಕಳೆದಿದೆ. ಸುಮಾರು 20ಕ್ಕೂ ಹೆಚ್ಚು ಕುಟುಂಬಗಳು ಇಲ್ಲಿ ವಾಸಿಸುತ್ತಿವೆ. ಆದರೆ ಇಡೀ ಲೇಔಟ್‌ನ 1.7 ಕಿ.ಮೀ. ರಸ್ತೆಯಲ್ಲಿ ಕೇವಲ ಮೊದಲ 200 ಮೀಟರ್‌ಗೆ ಮಾತ್ರ ಡಾಂಬರು ಹಾಕಲಾಗಿದ್ದು, ಉಳಿದ 1.5 ಕಿ.ಮೀ. ರಸ್ತೆ ಕಳೆದ ಎರಡು ವರ್ಷಗಳಿಂದ ಅರೆಬರೆ ಮತ್ತು ಧೂಳುಮಯ ಸ್ಥಿತಿಯಲ್ಲೇ ಇದೆ. ಕಾವೇರಿ ಕುಡಿಯುವ ನೀರಿನ ಪೈಪ್‌ಲೈನ್ ಕಾಮಗಾರಿ ಮುಗಿದ ತಕ್ಷಣ ರಸ್ತೆ ಡಾಂಬರೀಕರಣ ಮಾಡಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದ್ದರು. ಕಾವೇರಿ ನೀರು ಬಂದು ವರ್ಷ ಕಳೆದರೂ ರಸ್ತೆ ಭಾಗ್ಯ ಮಾತ್ರ ಲಭಿಸಿಲ್ಲ!

ಸಚಿವ ಕೃಷ್ಣ ಬೈರೇಗೌಡ ಮತ್ತು ಶಾಸಕರಿಗೆ ಮನವಿ

ಅಧಿಕಾರಿಗಳಿಗೆ ಆನ್‌ಲೈನ್ ಪೋರ್ಟಲ್ ಮೂಲಕ ದೂರು ನೀಡಿದರೂ ಯಾವುದೇ ಸ್ಪಂದನೆ ಸಿಗದಿದ್ದಾಗ ಧನಂಜಯ ಈ ವಿಭಿನ್ನ ಹಾದಿ ತುಳಿದಿದ್ದಾರೆ. ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಹಾಗೂ ಯಶವಂತಪುರ ಶಾಸಕ ಎಸ್‌ಟಿ ಸೋಮಶೇಖರ್ ಅವರ ಗಮನ ಸೆಳೆಯಲು ತಾವು ನಿತ್ಯ ನಡೆಸುವ ‘ರನ್ನಿಂಗ್’ ಅನ್ನೇ ಪ್ರತಿಭಟನೆಯ ಆಸ್ತ್ರವನ್ನಾಗಿಸಿಕೊಂಡಿದ್ದಾರೆ. “ನಗರದ ರಸ್ತೆಗಳಲ್ಲಿರುವ ‘ಗುಂಡಿಗಳನ್ನು’ (pot ‘holes’) ಮುಚ್ಚಲು, ಅಧಿಕಾರಿಗಳು ಪೂರ್ಣ ಮನಸ್ಸಿನಿಂದ ಕೆಲಸ ಮಾಡಬೇಕು” ಎಂದು ಧನಂಜಯ ತಮ್ಮ ವಿಡಿಯೋದಲ್ಲಿ ಚಾಟಿ ಬೀಸಿದ್ದಾರೆ.

ಸಾಮಾನ್ಯವಾಗಿ ರಸ್ತೆ ಗುಂಡಿ ಪಕ್ಕ ನಿಂತು ಮಾತನಾಡುವ ವಿಡಿಯೋಗಳನ್ನು ಯಾರೂ ಗಮನಿಸುವುದಿಲ್ಲ. ಹೀಗಾಗಿ ಈ ರೀತಿ ರನ್ ಮಾಡಿ ಗಮನ ಸೆಳೆಯಲು ಯತ್ನಿಸಿದ್ದೇನೆ, ರಸ್ತೆ ಡಾಂಬರೀಕರಣವಾಗುವುದೇ ನನ್ನ ಅಂತಿಮ ಗುರಿ ಎಂದಿದ್ದಾರೆ. ಮುಂದಿನ ಬಾರಿ ರಸ್ತೆಯಲ್ಲಿ ‘ಹ್ಯಾಂಡ್‌ಸ್ಟ್ಯಾಂಡ್’ (Handstand) ಮಾಡಿ ವಿಡಿಯೋ ಮಾಡುವುದಾಗಿ ಅವರು ತಿಳಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವಿದ್ಯಾ ಬಾಲನ್ ಕೈತಪ್ಪಿದ ‘ಕಹಾನಿ’, ಆದಿತ್ಯ ಧರ್ ಪತ್ನಿಯ ಪಾಲಾದ ಸಿನಿಮಾ – Kannada News | Yaami Gautham to replace Vidya Balan in Kahaani 3

‘ಕಹಾನಿ’ ಬಾಲಿವುಡ್​​ನ (Bollywood) ಜನಪ್ರಿಯ ಮತ್ತು ಯಶಸ್ವಿ ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ಒಂದು. ಈವರೆಗೆ ‘ಕಹಾನಿ’ ಸಿನಿಮಾದ ಎರಡು ಭಾಗಗಳು ಬಿಡುಗಡೆ ಆಗಿವೆ. ಎರಡೂ ಸಿನಿಮಾಗಳಲ್ಲಿ ವಿದ್ಯಾ ಬಾಲನ್ ನಾಯಕಿ. ಮಹಿಳಾ ಪ್ರಧಾನ ಸಿನಿಮಾ ಆದರೂ ಸಸ್ಪೆನ್ಸ್ ಥ್ರಿಲ್ಲರ್ ಜೊತೆಗೆ ಭಾವುಕತೆಯನ್ನು ಸೇರಿಸಿ ಕತೆ ಕಟ್ಟುವುದು ‘ಕಹಾನಿ’ ಸಿನಿಮಾದ ವಿಶೇಷ. 2012 ರಲ್ಲಿ ಈ ಸರಣಿಯ ಮೊದಲ ಸಿನಿಮಾ ರಿಲೀಸ್ ಆಗಿತ್ತು. 2016ರಲ್ಲಿ ಎರಡನೇ ಸಿನಿಮಾ ಬಿಡುಗಡೆ ಆಗಿತ್ತು. ಇದೀಗ ಮೂರನೇ ಸಿನಿಮಾ ನಿರ್ಮಾಣಕ್ಕೆ ಯೋಜನೆ ಸಿದ್ಧವಾಗಿದೆ. ಆದರೆ ಸಿನಿಮಾನಲ್ಲಿ ವಿದ್ಯಾ ಬಾಲನ್ ನಾಯಕಿಯಲ್ಲ. ಬದಲಿಗೆ ‘ಧುರಂಧರ್’ ನಿರ್ದೇಶಕ ಆದಿತ್ಯ ಧರ್ ಪತ್ನಿ ನಟಿ ಯಾಮಿ ಗೌತಮ್ ನಾಯಕಿ.

ಇತ್​ತೀಚೆಗಷ್ಟೆ ‘ಆರ್ಟಿಕಲ್ 370’ ಸಿನಿಮಾದ ನಟನೆಗಾಗಿ ರಾಷ್ಟ್ರಪ್ರಶಸ್ತಿ ಸಹ ಪಡೆದಿರುವ ಯಾಮಿ ಗೌತಮ್, ಇದೀಗ ‘ಕಹಾನಿ 3’ ಸಿನಿಮಾದ ನಾಯಕಿಯಾಗಿ ಆಯ್ಕೆ ಆಗಿದ್ದಾರೆ. ಆ ಮೂಲಕ ವಿದ್ಯಾ ಬಾಲನ್ ಅವರಿಂದ ‘ಕಹಾನಿ’ ಕತೆ ಕೈತಪ್ಪಿದಂತಾಗಿದೆ. ‘ಕಹಾನಿ’ ಸಿನಿಮಾವು ಈ ಬಾರಿ ಯುವ ತಾಯಿಯ ಕತೆಯನ್ನು ತೆರೆ ಮೇಲೆ ತರುವ ಪ್ರಯತ್ನದಲ್ಲಿದೆಯಂತೆ. ಇದೇ ಕಾರಣಕ್ಕೆ ವಿದ್ಯಾ ಅವರಿಗಿಂತಲೂ ಕಿರಿಯರಾದ ಯಾಮಿ ಗೌತಮ್ ಅವರನ್ನು ಆಯ್ಕೆ ಮಾಡಿಕೊಂಡಿದೆ.

‘ಕಹಾನಿ’ ಸಿನಿಮಾಗಳನ್ನು ಸುಜೋಯ್ ಘೋಷ್ ನಿರ್ದೇಶನ ಮಾಡುತ್ತಾ ಬರುತ್ತಿದ್ದಾರೆ. ‘ಕಹಾನಿ 3’ ಸಿನಿಮಾವನ್ನೂ ಸಹ ಸುಜೋಯ್ ಘೋಷ್ ಅವರೇ ನಿರ್ದೇಶನ ಮಾಡಲಿದ್ದಾರೆ. ನಾಯಕಿ ಪಾತ್ರಕ್ಕೆ ಮಾತ್ರ ವಿದ್ಯಾ ಬಾಲನ್ ಬದಲಿಗೆ ಯಾಮಿ ಗೌತಮ್ ಅವರು ನಟಿಸುತ್ತಿದ್ದಾರೆ. ಹೊಸ ಸಿನಿಮಾ ಬಗ್ಗೆ ಮಾತನಾಡಿರುವ ನಿರ್ದೇಶಕ ಸುಜೋಯ್, ‘ಕಹಾನಿ 3 ಸಂಪೂರ್ಣವಾಗಿ ಹೊಸ ಕಥೆ. ಮೊದಲೆರಡು ಕತೆಯ ಸಾರವನ್ನು ಉಳಿಸಿಕೊಂಡು ಫ್ರಾಂಚೈಸಿಯನ್ನು ಮುಂದಕ್ಕೆ ಕೊಂಡೊಯ್ಯುವುದು ಇದರ ಉದ್ದೇಶ. ಯಾಮಿ ಗೌತಮ್ ನಾಯಕಿಯಾಗಿ ನಟಿಸುತ್ತಿದ್ದಾರೆ, ಪಾತ್ರವು ತುಂಬಾ ಬಲವಾದ ವ್ಯಕ್ತಿತ್ವ ಹೊಂದಿರುತ್ತದೆ. ಚಿತ್ರವು ಇನ್ನೂ ಪ್ರೀ ಪ್ರೊಡಕ್ಷನ್​​ ಹಂತದಲ್ಲಿದೆ ಮತ್ತು ಶೀಘ್ರವೇ ಚಿತ್ರೀಕರಣ ಪ್ರಾರಂಭಿಸಲಿದ್ದೇವೆ’ ಎಂದಿದ್ದಾರೆ.

ಇದನ್ನೂ ಓದಿ:ಸಿನಿಮಾ ಪೈರಸಿ ತಡೆಯಲು ಹೊಸ ಪ್ಲ್ಯಾನ್​​ನೊಂದಿಗೆ ಬಂದ ಕೇಂದ್ರ ಸರ್ಕಾರ

2012 ರಲ್ಲಿ ಬಿಡುಗಡೆ ಆದ ಮೊದಲ ‘ಕಹಾನಿ’ ಸಿನಿಮಾ 100 ಕೋಟಿ ಗಳಿಸಿತ್ತು. ಆ ಸಿನಿಮಾನಲ್ಲಿ ಕೊಲೆಯಾದ ಪತಿಯ ರಹಸ್ಯವನ್ನು ಅನ್ವೇಷಿಸುವ ಪತ್ನಿಯ ಕತೆ ಒಳಗೊಂಡಿತ್ತು. 2016 ರಲ್ಲಿ ಬಿಡುಗಡೆ ಆದ ‘ಕಹಾನಿ 2’ ಸಿನಿಮಾ ಅಪಹರಣಕ್ಕೆ ಒಳಗಾದ ಅಂಗವಿಕಲ ಮಗಳ ಹುಡುಕುವ ತಾಯಿಯ ಕತೆಯನ್ನು ಒಳಗೊಂಡಿತ್ತು. ಎರಡೂ ಸಿನಿಮಾಗಳಲ್ಲಿ ವಿದ್ಯಾ ಬಾಲನ್ ಅದ್ಭುತ ನಟನೆ ಮಾಡಿದ್ದರು. ಈಗ ಮೂರನೇ ಸಿನಿಮಾಕ್ಕೆ ಯಾಮಿ ಗೌತಮ್ ನಾಯಕಿ ಆಗಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ನೀಟ್ ಪ್ರತಿಭಟನೆ, ಬಂಧಿತ 18 ವರ್ಷದೊಳಗಿನ ವಿದ್ಯಾರ್ಥಿಗಳ ಬಿಡುಗಡೆಗೊಳಿಸುವಂತೆ ಎಲ್ಲಾ ರಾಜ್ಯಗಳಿಗೆ ಸುಪ್ರೀಂ ಸೂಚನೆ – Kannada News | SC Orders Release of Minor NEET Protesters: Upholds Right to Peaceful Protest

ನವದೆಹಲಿ, ಜುಲೈ 28: ನೀಟ್(NEET) ಅಕ್ರಮದ ವಿರುದ್ಧ ದೆಹಲಿಯ ಜಂತರ್ ಮಂತರ್ ಸೇರಿ ರಾಜ್ಯದೆಲ್ಲೆಡೆ ಪ್ರತಿಭಟನೆಯಲ್ಲಿ ಭಾಗಿಯಾಗಿ ಬಂಧನಕ್ಕೊಳಗಾಗಿದ್ದ 18 ವರ್ಷದೊಳಗಿನ ವಿದ್ಯಾರ್ಥಿಗಳನ್ನು ಬಿಡುಗಡೆ ಮಾಡುವಂತೆ ಎಲ್ಲಾ ರಾಜ್ಯಗಳಿಗೆ ಸುಪ್ರೀಂಕೋರ್ಟ್​ ಸೂಚನೆ ನೀಡಿದೆ. ಸುಪ್ರೀಂ ವಿದ್ಯಾರ್ಥಿಗಳನ್ನು ದಂಡನಾತ್ಮಕ ಕ್ರಮದಿಂದ ರಕ್ಷಿಸಿದೆ. ಮಂಗಳವಾರ, ಸುಪ್ರೀಂ ಕೋರ್ಟ್ ಕ್ರಿಮಿನಲ್ ದಾಖಲೆಗಳಿಲ್ಲದವರನ್ನು ಬಿಡುಗಡೆ ಮಾಡಲು ಆದೇಶಿಸಿದೆ.

ಕಾಕ್ರೋಚ್ ಜನತಾ ಪಾರ್ಟಿ ಹಾಗೂ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆಯ ಸಂದರ್ಭದಲ್ಲಿ ಸಂಭವಿಸಿದ ಹಿಂಸಾಚಾರ ಮತ್ತು ಪೊಲೀಸ್ ದೌರ್ಜನ್ಯದ ವಿರುದ್ಧ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಅತ್ಯಂತ ಮಹತ್ವದ ಆದೇಶ ಹೊರಡಿಸಿದೆ. ಈ ಪ್ರತಿಭಟನೆಗಳ ವೇಳೆ ಬಂಧನಕ್ಕೊಳಗಾಗಿರುವ 18 ವರ್ಷದೊಳಗಿನ ಎಲ್ಲಾ ವಿದ್ಯಾರ್ಥಿಗಳನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ದೇಶದ ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ನೇತೃತ್ವದ ಪೀಠ ಸೂಚನೆ ನೀಡಿದೆ.

ಸಾಂವಿಧಾನಿಕ ಹಕ್ಕು:ಶಾಂತಿಯುತ ಮತ್ತು ಕಾನೂನುಬದ್ಧ ಪ್ರತಿಭಟನೆ ನಡೆಸುವುದು ಸಂವಿಧಾನ ನೀಡಿರುವ ಮೂಲಭೂತ ಹಕ್ಕು. ಶಾಂತಿಯುತ ಆಂದೋಲನ ನಡೆಯುತ್ತಿರುವಾಗ ಕೇವಲ ಪ್ರತಿಭಟನೆ ಎಂಬ ಕಾರಣಕ್ಕೆ ಪೊಲೀಸರು ಅತಿಯಾದ ಬಲಪ್ರಯೋಗ ಅಥವಾ ದೌರ್ಜನ್ಯ ಎಸಗಲು ಸಾಧ್ಯವಿಲ್ಲ ಎಂದು ಪೀಠ ಸ್ಪಷ್ಟಪಡಿಸಿದೆ.

ಮತ್ತಷ್ಟು ಓದಿ: ನಿಟ್ಟುಸಿರು ಬಿಟ್ಟ ನೀಟ್ ಪ್ರತಿಭಟನಾಕಾರರು: ಬಿಹಾರದ ಬೆನ್ನಲ್ಲೇ ಪ್ರಕರಣ ಹಿಂಪಡೆಯಲು ಅಸ್ಸಾಂ ಸರ್ಕಾರ ನಿರ್ಧಾರ

ಬಲಪ್ರಯೋಗ ನಡೆಸಿದ ಅಧಿಕಾರಿಗಳ ಜವಾಬ್ದಾರಿಯನ್ನು ನಿಗದಿಪಡಿಸದಿದ್ದರೆ ತನಿಖೆಗೆ ಬೆಲೆ ಇರುವುದಿಲ್ಲ. ಹಾಗಾಗಿ ಸ್ವತಂತ್ರ ತನಿಖೆ ನಡೆಸುವುದು ಅಗತ್ಯ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಪ್ರತಿಭಟನೆಗಳ ವೇಳೆ ಅಶ್ರುವಾಯು, ವಿದ್ಯುತ್ ಲಾಠಿ, ಪೆಲೆಟ್ ಗನ್‌ಗಳ ಬಳಕೆಯನ್ನು ನಿಯಂತ್ರಿಸಲು ಹಾಗೂ ಪೊಲೀಸರಿಗೆ ಸೂಕ್ತ ರಕ್ಷಣಾ ಕವಚ ಒದಗಿಸಲು ದೇಶಾದ್ಯಂತ ಹೊಸ ಭದ್ರತಾ ಶಿಷ್ಟಾಚಾರ ರೂಪಿಸುವ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.

ಜುಲೈ 20 ರಿಂದ 25 ರವರೆಗೆ ಜಂತರ್ ಮಂತರ್ ಸೇರಿದಂತೆ ವಿವಿಧೆಡೆ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಅತಿಯಾದ ಪೊಲೀಸ್ ಬಲಪ್ರಯೋಗ ನಡೆದಿದೆ ಎಂದು ಆರೋಪಿಸಿ ಆರ್‌ಜೆಡಿ (RJD) ರಾಜ್ಯಸಭಾ ಸಂಸದ ಪ್ರೊ. ಮನೋಜ್ ಝಾ ಸೇರಿದಂತೆ ಹಲವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಪೊಲೀಸ್ ದೌರ್ಜನ್ಯದ ಕುರಿತು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳ ಮಾರ್ಗದರ್ಶನದಲ್ಲಿ ಹಾಗೂ ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಯಬೇಕು. ಇದಕ್ಕಾಗಿ ಡಿಜಿಪಿ ದರ್ಜೆಯ ಅಧಿಕಾರಿ ಹಾಗೂ ಇಬ್ಬರು ಹಿರಿಯ ಮಹಿಳಾ ಐಪಿಎಸ್ (IPS) ಅಧಿಕಾರಿಗಳನ್ನು ಒಳಗೊಂಡ ವಿಶೇಷ ತನಿಖಾ ತಂಡವನ್ನು (SIT) ರಚಿಸಬೇಕೆಂದು ಅರ್ಜಿದಾರರು ಕೋರಿದ್ದಾರೆ. ದ್ರದ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ಹಿಂಸಾಚಾರದಲ್ಲಿ 250 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದು, ಪ್ರತಿಭಟನೆಯೊಳಗೆ ಕೊಲೆ, ಅತ್ಯಾಚಾರ ಪ್ರಕರಣಗಳಲ್ಲಿ ಭಾಗಿಯಾದ ಸಮಾಜವಿರೋಧಿ ಶಕ್ತಿಗಳು ನುಸುಳಿದ್ದವು ಎಂದು ವಿವರಣೆ ನೀಡಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಮಳೆ ಅಭಾವಕ್ಕೆ ತುಮಕೂರು ಮಂದಿ ಕಂಗಾಲು: ಸಂಪೂರ್ಣ ಬತ್ತಿದ 300ಕ್ಕೂ ಹೆಚ್ಚು ಕೆರೆಗಳು

ತುಮಕೂರು, ಜುಲೈ 28: ಜಿಲ್ಲೆಯಲ್ಲಿ ಮಳೆ ಕೊರತೆಯಿಂದಾಗಿ ತೀವ್ರ ಬರಗಾಲ ಎದುರಾಗಿದ್ದು, ಪರಿಸ್ಥಿತಿ ಚಿಂತಾಜನಕವಾಗಿದೆ. ತುಮಕೂರಿನ ಒಟ್ಟು 2,047 ಕೆರೆಗಳ ಪೈಕಿ 400 ದೊಡ್ಡ ಕೆರೆಗಳಲ್ಲಿ 300ಕ್ಕೂ ಹೆಚ್ಚು ಕೆರೆಗಳು ಸಂಪೂರ್ಣವಾಗಿ ಖಾಲಿಯಾಗಿವೆ. ಉಳಿದ 100 ಕೆರೆಗಳಲ್ಲೂ ನೀರು ಡೆಡ್ ಸ್ಟೋರೇಜ್ ಹಂತಕ್ಕೆ ತಲುಪಿರುವುದು ಆತಂಕ ಮೂಡಿಸಿದೆ. ಹೀಗಾಗಿ ಜನ, ಜಾನುವಾರು ಹಾಗೂ ಪ್ರಾಣಿ-ಪಕ್ಷಿಗಳಿಗೆ ಕುಡಿಯುವ ನೀರಿಲ್ಲದೆ ತೀವ್ರ ಪರದಾಟ ಉಂಟಾಗಿದೆ. ರೈತರು ತಮ್ಮ ತೆಂಗು ಮತ್ತು ಅಡಿಕೆ ತೋಟಗಳನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ. ಮಳ್ಳೂರು ಕೆರೆ, ಮರಳೂರು ದಿಣ್ಣೆ ಕೆರೆಯಂತಹ ಪ್ರಮುಖ ಜಲಮೂಲಗಳೂ ಬತ್ತಿ ಹೋಗಿವೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

Video: ಇದು ದೇಸಿ ಕ್ರೀಡೆಯ ಸೊಬಗು; ದುಡಿಮೆಯ ನಡುವೆ ಖೋಖೋ ಆಟ ಆಡಿದ ನಾರಿಮಣಿಗಳು – Kannada News | Village women playing traditional kho kho game, video goes viral

ಹಳ್ಳಿ ಬದುಕೇ (village life) ಹಾಗೆ, ಕೃಷಿ ಕೆಲಸ, ಕಣ್ಣ ತುಂಬಾ ನಿದ್ದೆ, ಇರಲು ಪುಟ್ಟ ಸೂರು. ಕೃಷಿ ಕಾಯಕವನ್ನೇ ನಂಬಿಕೊಂಡು ಬದುಕು ಸಾಗಿಸುವವರು ಈ ಹಳ್ಳಿ ಮಕ್ಕಳು. ವಿರಾಮದ ಸಮಯದಲ್ಲಿ ಊರ ಮಂದಿ ಬೆರೆಯುತ ಹಳ್ಳಿಯ ಸಾಂಪ್ರಾದಾಯಿಕ ಆಟ ಆಡುತ್ತಾ ಸಮಯ ಕಳೆಯುತ್ತಾರೆ. ಇದಕ್ಕೆ ಸಾಕ್ಷಿಯಾಗಿದೆ ಈ ದೃಶ್ಯ. ಇದೀಗ ಕೆಲಸದ ಒತ್ತಡವನ್ನು ಬದಿಗಿರಿಸಿ ಖೋ ಖೋ (Kho Kho) ಆಟ ಆಡುತ್ತಾ ತಮ್ಮ ಪ್ರತಿಭೆಗಳ ಅನಾವರಣ ಮಾಡಿರುವ ಮಹಿಳಾಮಣಿಗಳ ವಿಡಿಯೋ ಸದ್ಯ ವೈರಲ್ ಆಗಿದೆ. ಈ ದೃಶ್ಯವನ್ನು ನೆಟ್ಟಿಗರು ಕಣ್ತುಂಬಿಸಿಕೊಂಡಿದ್ದಾರೆ.

ಖೋ ಖೋ ಚಾಂಪಿಯನ್ಸ್ (Kho Kho Champions) ಹೆಸರಿನ ಇನ್ಸ್ಟಾಗ್ರಾಮ್ ವಿಡಿಯೋ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್ ನಲ್ಲಿ ಹಳ್ಳಿಯ ಮಹಿಳೆಯರು ತಮ್ಮ ಕೆಲಸದ ಬಿಡುವಿನ ಸಮಯದಲ್ಲಿ ಖೋ ಖೋ ಆಟ ಆಡಿ ಖುಷಿ ಪಡುತ್ತಿರುವುದನ್ನು ಕಾಣಬಹುದು. ಹೆಂಗಳೆಯರು ದೇಸಿ ಆಟ ಆಡಿ ಖುಷಿ ಪಡುತ್ತಿದ್ದರೆ ಪುರುಷರು ಈ ದೃಶ್ಯವನ್ನು ಕಣ್ತುಂಬಿಸಿಕೊಳ್ಳುತ್ತಿದ್ದಾರೆ.

ವೈರಲ್‌ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಇದು ದೇಸಿ ಕ್ರೀಡೆಯ ಕರಾಮತ್ತು; ಸೀರೆಯುಟ್ಟ ನಾರಿಮಣಿಗಳ ಕಬಡ್ಡಿ ಆಟ ಹೇಗಿದೆ ನೋಡಿ

ಈ ವಿಡಿಯೋ ಒಂದು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಖೋ ಖೋ ಆಟದಲ್ಲಿ ಮಿಂಚಿದ ಪ್ರತಿಭೆಗಳು ಎಂದು ಹೇಳಿದ್ದಾರೆ. ಕೆಲವರು ಹಾರ್ಟ್ ಸಿಂಬಲ್ ಕಳುಹಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version