ಕೊಡಗಿನ ಮಾಲ್ದಾರೆಯಲ್ಲಿ ಉದ್ವಿಗ್ನ ಪರಿಸ್ಥಿತಿ: ದೇವಾಲಯದ ಆವರಣದಲ್ಲಿ ‘ಸಮಾಧಿ ಪೂಜೆ’? ಭಾರಿ ಪ್ರತಿಭಟನೆ – Kannada News | Tension in Kodagu After Tomb Like Structure Found Inside Temple Premises, Villagers Stage Massive Protest

ಗದ್ದಿಗೆಬೆಟ್ಟ ಶ್ರೀ ಸಿದ್ಧೇಶ್ವರ ದೇವಸ್ಥಾನದ ಆವರಣImage Credit source: The New Indian Express

ಮಡಿಕೇರಿ, ಜುಲೈ 28: ಕೊಡಗು (Kodagu) ಜಿಲ್ಲೆಯ ಸಿದ್ದಾಪುರ ಸಮೀಪದ ಮಾಲ್ದಾರೆ ಗ್ರಾಮದಲ್ಲಿರುವ ಗದ್ದಿಗೆಬೆಟ್ಟ ಶ್ರೀ ಸಿದ್ಧೇಶ್ವರ ದೇವಸ್ಥಾನದ ಆವರಣದಲ್ಲಿ ಸಮಾಧಿ ಮಾದರಿಯ ರಚನೆ (‘ಸಮಾಧಿ ಪೂಜೆ’ ಮಾಡಿದ ಕುರುಹು) ಪತ್ತೆಯಾದ ಹಿನ್ನೆಲೆಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಘಟನೆಗೆ ಆಕ್ರೋಶ ವ್ಯಕ್ತಪಡಿಸಿದ ನೂರಾರು ಗ್ರಾಮಸ್ಥರು, ಬಿಜೆಪಿ ಹಾಗೂ ಹಿಂದೂ ಸಂಘಟನೆಗಳೊಂದಿಗೆ ಸೇರಿ ದೇವಾಲಯದ ಎದುರು ಪ್ರತಿಭಟನೆ ನಡೆಸಿ, ಘಟನೆಗೆ ಕಾರಣರಾದವರನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿದರು.

ದೇವಾಲಯದ ಆವರಣದಲ್ಲಿ ‘ಸಮಾಧಿ ಪೂಜೆ’!

ದೇವಾಲಯದ ಆಡಳಿತ ಮಂಡಳಿಯ ಮಾಹಿತಿ ಪ್ರಕಾರ, ಭಾನುವಾರ ಬೆಳಗ್ಗೆ ಸಿಬ್ಬಂದಿ ದೇವಸ್ಥಾನಕ್ಕೆ ಆಗಮಿಸಿದ ವೇಳೆ ಹೂಗಳಿಂದ ಅಲಂಕರಿಸಲಾದ ಸಮಾಧಿ ಮಾದರಿಯ ರಚನೆ ದೇವಾಲಯದ ಆವರಣದಲ್ಲಿ ಕಂಡುಬಂದಿದೆ. ಇದರಿಂದ ಮುಸ್ಲಿಂ ಸಂಪ್ರದಾಯದ ‘ಸಮಾಧಿ ಪೂಜೆ’ ಮಾಡಿರುವ ಅನುಮಾನ ವ್ಯಕ್ತವಾಗಿದ್ದು, ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿ ದೂರು ದಾಖಲಿಸಲಾಗಿದೆ.

ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ಉಂಟುಮಾಡುವ ಹಾಗೂ ಕೋಮು ಸೌಹಾರ್ದ ಕದಡುವ ಉದ್ದೇಶದಿಂದ ಕೆಲ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ ಎಂದು ದೇವಾಲಯದ ಆಡಳಿತ ಮಂಡಳಿ ಆರೋಪಿಸಿದೆ. ಇಬ್ಬರು ವ್ಯಕ್ತಿಗಳು ಈ ಕೃತ್ಯ ಎಸಗಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ ಎಂದು ತಿಳಿಸಿದ್ದು, ಅದರ ದೃಶ್ಯಾವಳಿಗಳನ್ನು ಪೊಲೀಸರಿಗೆ ಸಲ್ಲಿಸಲಾಗಿದೆ.

ಭಾರಿ ಪ್ರತಿಭಟನೆ, ರಸ್ತೆ ತಡೆ

ಈ ಘಟನೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು, ಬಿಜೆಪಿ ಮತ್ತು ವಿವಿಧ ಹಿಂದೂ ಸಂಘಟನೆಗಳ ಬೆಂಬಲದೊಂದಿಗೆ ಸೋಮವಾರ ದೇವಾಲಯದ ಎದುರು ಭಾರಿ ಪ್ರತಿಭಟನೆ ನಡೆಸಿದರು. ಪ್ರತಿಭಟನಾಕಾರರು ರಸ್ತೆ ತಡೆ ನಡೆಸಿ, ಆರೋಪಿಗಳನ್ನು ಇನ್ನೂ ಬಂಧಿಸದಿರುವುದಕ್ಕೆ ಪೊಲೀಸ್ ಇಲಾಖೆಯ ವಿರುದ್ಧ ಘೋಷಣೆ ಕೂಗಿದರು. ಘಟನೆ ನಡೆದ ಪ್ರದೇಶ ಅರಣ್ಯ ಇಲಾಖೆಯ ವ್ಯಾಪ್ತಿಗೆ ಸೇರಿರುವುದರಿಂದ ಅರಣ್ಯ ಇಲಾಖೆಯ ಅಧಿಕಾರಿಗಳೂ ಸ್ಥಳಕ್ಕೆ ಆಗಮಿಸಿದ್ದು, ಪ್ರತಿಭಟನಾಕಾರರು ಅವರ ವಿರುದ್ಧವೂ ಅಸಮಾಧಾನ ವ್ಯಕ್ತಪಡಿಸಿದರು.

ಸಮಾಧಿ ಮಾದರಿಯ ರಚನೆ ತೆರವುಗೊಳಿಸಿದ ಪ್ರತಿಭಟನಾಕಾರರು

ಪ್ರತಿಭಟನೆಯ ವೇಳೆ ಸ್ಥಳದಲ್ಲಿದ್ದ ಸಮಾಧಿ ಮಾದರಿಯ ರಚನೆಯನ್ನು ಪ್ರತಿಭಟನಾಕಾರರು ತೆರವುಗೊಳಿಸಿದರು. ಅದರೊಳಗೆ ಯಾವುದೇ ವಸ್ತು ಇರಲಿಲ್ಲ ಎಂದು ಅವರು ಹೇಳಿದ್ದು, ಹೂವುಗಳನ್ನು ತೆರವುಗೊಳಿಸಿದರು. ಇದೇ ವೇಳೆ, ದೇವಾಲಯದ ಆವರಣದಲ್ಲಿ ಮಾಂಸಾಹಾರ ಸೇವಿಸಲಾಗಿದೆ ಎಂಬ ಆರೋಪವನ್ನೂ ಪ್ರತಿಭಟನಾಕಾರರು ಮಾಡಿದ್ದು, ಈ ಎಲ್ಲ ಬೆಳವಣಿಗೆಗಳ ಕುರಿತು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಪೊಲೀಸರಿಂದ ಕಠಿಣ ಕ್ರಮದ ಭರವಸೆ

ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ, ಅರಣ್ಯ ಇಲಾಖೆಯ ಆರ್‌ಎಫ್‌ಒ ನವೀನ್ ಕುಮಾರ್ ಹಾಗೂ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಪ್ರಕರಣ ದಾಖಲಿಸಿ ಆರೋಪಿಗಳನ್ನು ಶೀಘ್ರ ಪತ್ತೆಹಚ್ಚುವ ಭರವಸೆ ನೀಡಿದರು. ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಪ್ರದೇಶದಲ್ಲಿ 100ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಪರಿಸ್ಥಿತಿಯ ಮೇಲೆ ನಿಗಾ ವಹಿಸಲಾಗಿದೆ.

ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡರಾದ ರಾಬಿನ್ ದೇವಯ್ಯ, ರವಿ ಕುಶಾಲಪ್ಪ ಸೇರಿದಂತೆ ಆರ್‌ಎಸ್‌ಎಸ್ ಹಾಗೂ ವಿವಿಧ ಹಿಂದೂ ಸಂಘಟನೆಗಳ ಕಾರ್ಯಕರ್ತರು ಭಾಗವಹಿಸಿದ್ದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 11:36 am, Tue, 28 July 26

Source link

ಬಿಹಾರ, ಯುಪಿಗಿಂತ ಕರ್ನಾಟಕದಲ್ಲೇ ಹೆಚ್ಚು ಶಾಲೆ ತೊರೆಯುತ್ತಿರುವ ಹೆಣ್ಣುಮಕ್ಕಳು! – Kannada News | Karnataka Girls Dropout Rate Higher Than Bihar, UP: UDISE Report

ಬೆಂಗಳೂರು, ಜುಲೈ 28: ಪ್ರೌಢಶಾಲೆ (9 ಮತ್ತು 10ನೇ ತರಗತಿ) ಹಂತದಲ್ಲಿ ಶಾಲೆ ತೊರೆಯುವ (Dropout) ಹೆಣ್ಣುಮಕ್ಕಳ ಪ್ರಮಾಣದಲ್ಲಿ ಕರ್ನಾಟಕವು ದೇಶದ ದೊಡ್ಡ ರಾಜ್ಯಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಬಿಹಾರ ಮತ್ತು ಉತ್ತರ ಪ್ರದೇಶದಂತಹ ಹಿಂದುಳಿದ ರಾಜ್ಯಗಳಿಗಿಂತಲೂ ಕರ್ನಾಟಕದಲ್ಲೇ ಹೆಚ್ಚು ಹೆಣ್ಣುಮಕ್ಕಳು ಶಿಕ್ಷಣವನ್ನು ಅರ್ಧಕ್ಕೇ ಮೊಟಕುಗೊಳಿಸುತ್ತಿದ್ದಾರೆ ಎಂಬ ಆತಂಕಕಾರಿ ವಿಷಯ ಲೋಕಸಭೆಯಲ್ಲಿ ಮಂಡಿಸಲಾದ ಕೇಂದ್ರ ಸರ್ಕಾರದ ಯುಡೈಸ್ ಪ್ಲಸ್ (UDISE+) ವರದಿಯಿಂದ ತಿಳಿದುಬಂದಿದೆ.

ರಾಷ್ಟ್ರೀಯ ಸರಾಸರಿಗಿಂತ ಕರ್ನಾಟಕದಲ್ಲಿ ಡ್ರಾಪ್‌ಔಟ್ ದರ ಹೆಚ್ಚು

2025-26ರ ಇತ್ತೀಚಿನ ವರದಿಯ ಪ್ರಕಾರ, ಕರ್ನಾಟಕದಲ್ಲಿ ಪ್ರೌಢಶಾಲಾ ಹಂತದಲ್ಲಿ ಶಾಲೆ ತೊರೆಯುತ್ತಿರುವ ಹೆಣ್ಣುಮಕ್ಕಳ ಪ್ರಮಾಣ ಶೇ 13.9ರಷ್ಟಿದೆ. ಇದು ದೇಶದ ರಾಷ್ಟ್ರೀಯ ಸರಾಸರಿಯಾದ ಶೇ. 8 ಕ್ಕಿಂತ ಗಮನಾರ್ಹವಾಗಿ ಹೆಚ್ಚಾಗಿದೆ.

ಕಳೆದ ಮೂರು ವರ್ಷಗಳಲ್ಲಿ ಕರ್ನಾಟಕದ ಪರಿಸ್ಥಿತಿಯಲ್ಲಿ ಸ್ವಲ್ಪ ಮಟ್ಟಿಗೆ ಸುಧಾರಣೆ ಕಂಡುಬಂದಿದೆಯಾದರೂ (2023-24ರಲ್ಲಿ ಶೇ 19.6, 2024-25ರಲ್ಲಿ ಶೇ 14.6), ದೇಶದ ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದ ಪ್ರಗತಿಯು ಅತ್ಯಂತ ಮಂದಗತಿಯಲ್ಲಿದೆ. ಲಡಾಖ್ ಕೇಂದ್ರಾಡಳಿತ ಪ್ರದೇಶದಲ್ಲಿ ಈ ಪ್ರಮಾಣ ಶೇ. 15.6 ಇದ್ದು, ಇಡೀ ದೇಶದಲ್ಲೇ ಅಗ್ರಸ್ಥಾನದಲ್ಲಿದ್ದರೆ, ದೊಡ್ಡ ರಾಜ್ಯಗಳಲ್ಲಿ ಕರ್ನಾಟಕ ಮತ್ತು ಅಸ್ಸಾಂ (ತಲಾ ಶೇ 13.9) ಮೊದಲ ಸ್ಥಾನದಲ್ಲಿವೆ.

ದಕ್ಷಿಣದ ಇತರ ರಾಜ್ಯಗಳು ಮುಂದೆ

ಒಮ್ಮೆ ಶಿಕ್ಷಣ ಕ್ಷೇತ್ರದಲ್ಲಿ ಹಿಂದುಳಿದಿದ್ದ ಬಿಹಾರವು 2023-24ರಲ್ಲಿ ಶೇ 25.1 ಇದ್ದ ಡ್ರಾಪ್‌ಔಟ್ ಪ್ರಮಾಣವನ್ನು 2025-26ರ ವೇಳೆಗೆ ಶೇ 9.1 ಕ್ಕೆ ತಗ್ಗಿಸುವ ಮೂಲಕ ಅಭೂತಪೂರ್ವ ಸುಧಾರಣೆ ಕಂಡಿದೆ. ಉತ್ತರ ಪ್ರದೇಶದಲ್ಲಿ ಈ ಪ್ರಮಾಣ ಶೇ 7.3 ರಷ್ಟಿದೆ.

ದಕ್ಷಿಣ ಭಾರತದ ನೆರೆಯ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದ ಪ್ರದರ್ಶನ ತೀರಾ ಕಳಪೆಯಾಗಿದೆ. ಕೇರಳದಲ್ಲಿ ಕೇವಲ ಶೇ 3, ತಮಿಳುನಾಡಿನಲ್ಲಿ ಶೇ 3.2 ಹಾಗೂ ಹರಿಯಾಣದಲ್ಲಿ ಶೇ 3.8 ರಷ್ಟು ಹೆಣ್ಣುಮಕ್ಕಳು ಮಾತ್ರ ಶಾಲೆ ತೊರೆಯುತ್ತಿದ್ದು, ಅತ್ಯಂತ ಕಡಿಮೆ ಡ್ರಾಪ್‌ಔಟ್ ದರ ಹೊಂದಿದ ರಾಜ್ಯಗಳಾಗಿ ಹೊರಹೊಮ್ಮಿವೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Chamarajeshwara Rathotsava: ಚಾಮರಾಜೇಶ್ವರಸ್ವಾಮಿ ಆಷಾಢ ಮಾಸದ ರಥೋತ್ಸವಕ್ಕೆ ಕ್ಷಣಗಣನೆ ಆರಂಭ – Kannada News | Chamarajeshwara Rathotsava 2026: Ashada Masas Unique Chariot Festival in Chamarajanagara

ಚಾಮರಾಜನಗರದ ಪ್ರಸಿದ್ಧ ಚಾಮರಾಜೇಶ್ವರಸ್ವಾಮಿ ರಥೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ. ರಾಜ್ಯದಲ್ಲಿ ಆಷಾಢ ಮಾಸದಲ್ಲಿ ನಡೆಯುವ ಏಕೈಕ ಮತ್ತು ಅತ್ಯಂತ ವಿಶೇಷವಾದ ರಥೋತ್ಸವ ಇದಾಗಿದೆ. ಈ ರಥೋತ್ಸವದ ವಿಶೇಷತೆಯೆಂದರೆ ಆಷಾಢ ಮಾಸದಲ್ಲಿ ಬೇರೆ ಬೇರೆಯಾಗಿರುವ ನವ ದಂಪತಿಗಳನ್ನು ಒಂದಾಗಿಸುವ ವಿಶಿಷ್ಟ ಜಾತ್ರೆಯಾಗಿ ಇದು ಗುರುತಿಸಿಕೊಂಡಿದೆ.

ಈ ರಥೋತ್ಸವದಲ್ಲಿ ನವ ದಂಪತಿಗಳು ಭಕ್ತಿಭಾವದಿಂದ ಹಣ್ಣು ಮತ್ತು ದವನವನ್ನು ರಥಕ್ಕೆ ಎಸೆದರೆ ತಮ್ಮ ಇಷ್ಟಾರ್ಥಗಳು ಸಿದ್ಧಿಸುತ್ತವೆ ಎಂಬ ದೃಢ ನಂಬಿಕೆಯಿದೆ. ಇದೇ ಕಾರಣದಿಂದ ರಾಜ್ಯದ ವಿವಿಧ ಭಾಗಗಳಿಂದ ನೂರಾರು ದಂಪತಿಗಳು ಇಲ್ಲಿಗೆ ಆಗಮಿಸಿ ಪುಣ್ಯ ಕಾರ್ಯದಲ್ಲಿ ಪಾಲ್ಗೊಳ್ಳುತ್ತಾರೆ. ಚಾಮರಾಜನಗರದ ಚಾಮರಾಜೇಶ್ವರಸ್ವಾಮಿ ದೇವಾಲಯ ಮತ್ತು ನಗರದ ಪ್ರಮುಖ ರಾಜ ಬೀದಿಗಳು ರಥೋತ್ಸವಕ್ಕಾಗಿ ಸುಂದರವಾಗಿ ಅಲಂಕೃತಗೊಂಡಿವೆ. ಭಕ್ತರು ಮತ್ತು ಪ್ರವಾಸಿಗರನ್ನು ಸ್ವಾಗತಿಸಲು ಎಲ್ಲ ಸಿದ್ಧತೆಗಳು ಪೂರ್ಣಗೊಂಡಿವೆ. ಈ ಬಾರಿಯ ಆಷಾಢ ಮಾಸದ ರಥೋತ್ಸವ ಕೂಡ ಎಂದಿನಂತೆ ಅದ್ದೂರಿಯಾಗಿ ನೆರವೇರಲು ಸಜ್ಜಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Source link

ಟಾಲಿವುಡ್ ಜನಪ್ರಿಯ ಪೋಷಕ ನಟಿ ಪಾವಲ ಶಾಮಲ ನಿಧನ – Kannada News | Telugu Movie actress Pavala Shyamala passed away

ತೆಲುಗು ಸಿನಿಮಾಗಳಲ್ಲಿ (Telugu Cinema) ಪೋಷಕ ನಟಿಯಾಗಿ, ಹಾಸ್ಯ ನಟಿಯಾಗಿ ನಟಿಸಿದ್ದ ಪಾವಲ ಶಾಮಲ ನಿಧನ ಹೊಂದಿದ್ದಾರೆ. ಅವರಿಗೆ 75 ವರ್ಷ ವಯಸ್ಸಾಗಿತ್ತು. ಪಾವಲ ಶಾಮಲ ಅವರು ಕಳೆದ ಕೆಲ ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರಿಗೆ ಮೆಗಾಸ್ಟಾರ್ ಚಿರಂಜೀವಿ ಸೇರಿದಂತೆ ಚಿತ್ರರಂಗದ ಇನ್ನೂ ಹಲವರು ಆರ್ಥಿಕ ಸಹಾಯ ಸಹ ಮಾಡಿದ್ದರು. ಆದರೆ ಕೊನೆಗೂ ಅವರು ಇಂದು (ಜುಲೈ 28) ಬೆಳಿಗ್ಗೆ ಹೈದರಾಬಾದ್​​ನ ಒಸ್ಮಾನಿಯಾ ಆಸ್ಪತ್ರೆಯಲ್ಲಿ ಕೊನೆ ಉಸಿರೆಳೆದಿದ್ದಾರೆ.

ರಂಗಭೂಮಿಯಿಂದ ನಟನೆ ಶುರು ಮಾಡಿದ್ದ ಶಾಮಲ ಅವರಿಗೆ ‘ಪಾವಲ’ ಹೆಸರಿನ ನಾಟಕ ದೊಡ್ಡ ಹೆಸರು ತಂದುಕೊಟ್ಟಿತ್ತು. ಅದೇ ಕಾರಣಕ್ಕೆ ಅವರನ್ನು ಪಾವಲ ಶಾಮಲ ಎಂದೇ ಕರೆಯಲಾಗುತ್ತಿತ್ತು. 1984 ರಲ್ಲಿ ಅವರು ಮೊದಲ ಬಾರಿಗೆ ‘ಚಾಲೆಂಜ್’ ಸಿನಿಮಾನಲ್ಲಿ ನಟಿಸಿದರು. ಮೂರಕ್ಕೂ ಹೆಚ್ಚು ದಶಕಗಳಲ್ಲಿ ಅವರು ನೂರಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ತೆಲುಗು ಚಿತ್ರರಂಗದ ಎಲ್ಲ ದೊಡ್ಡ ಸ್ಟಾರ್ ನಟರ ಸಿನಿಮಾಗಳಲ್ಲಿಯೂ ಪಾವಲ ಶಾಮಲ ನಟಿಸಿದ್ದಾರೆ.

ಪಾವಲ ಶಾಮಲ ತಮ್ಮ ಚುರುಕು ನಟನೆ, ಅದ್ಭುತ ಟೈಮಿಂಗ್​​ನಿಂದಾಗಿ ಚಿತ್ರರಂಗದಲ್ಲಿ ಹೆಸರಾಗಿದ್ದರು. ಅವರು ನಟಿಸಿರುವ ಹಲವು ಹಾಸ್ಯ ದೃಶ್ಯಗಳು ಈಗಲೂ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುತ್ತವೆ. ಅವರ ನಟನೆಯ ದೃಶ್ಯಗಳನ್ನು ಮೀಮ್​​ಗಳನ್ನಾಗಿ ಸಹ ಬಳಸಿಕೊಳ್ಳಲಾಗುತ್ತದೆ. 2019 ರಲ್ಲಿ ಬಿಡುಗಡೆ ಆದ ‘ಮತ್ತು ವದಲರಾ’ ಅವರ ಕೊನೆಯ ಸಿನಿಮಾ ಆಗಿತ್ತು.

ಇದನ್ನೂ ಓದಿ:ಎ ಸರ್ಟಿಫಿಕೇಟ್ ಸಿನಿಮಾಗೆ ಮಕ್ಕಳನ್ನು ಕರೆತಂದ ಪೋಷಕರು; ‘ಜನ ನಾಯಗನ್’ ಪ್ರದರ್ಶನ ಬಂದ್

ಜೀವನದುದ್ದಕ್ಕೂ ಕಷ್ಟಗಳನ್ನೇ ನೋಡಿದ್ದ ಶಾಮಲ, ಸಣ್ಣ ವಯಸ್ಸಿನಲ್ಲೇ ತಂದೆ-ತಾಯಿಯನ್ನು ಕಳೆದುಕೊಂಡರು. ಹತ್ತನೇ ತರಗತಿ ವರೆಗೆ ವಿದ್ಯಾಭ್ಯಾಸ ಮಾಡಿದ್ದ ಶಾಮಲ ಆ ಬಳಿಕ ಮದುವೆ ಆದರು ಆದರೆ ಮಗಳು ಜನಿಸಿದ ಬಳಿಕ ಪತಿಯೂ ನಿಧನ ಹೊಂದಿದರು. ಸಿನಿಮಾ, ನಾಟಕಗಳಲ್ಲಿ ನಟಿಸುತ್ತಾ ಜೀವನ ಮಾಡಿದ್ದ ಶಾಮಲಗೆ ಅನಾರೋಗ್ಯ ಕಾಡಿತ್ತು. ಅವರು ಪಾರ್ಕಿನ್​​ಸನ್ ರೋಗಕ್ಕೆ ತುತ್ತಾದರು. ಆ ಬಳಿಕ ಹೃದಯ ಸಂಬಂಧಿ ಅನಾರೋಗ್ಯವೂ ಅವರನ್ನು ಕಾಡಲು ಆರಂಭಿಸಿತು. ಅವರ ಪುತ್ರಿ ಮಾಧವಿ ಸಹ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದರು. ಆರ್ಥಿಕವಾಗಿ ಸಂಪೂರ್ಣವಾಗಿ ಜರ್ಜರಿತವಾಗಿದ್ದರು ಶ್ಯಾಮಲ.

ಮೆಗಾಸ್ಟಾರ್ ಚಿರಂಜೀವಿ, ಪವನ್ ಕಲ್ಯಾಣ್ ಇನ್ನೂ ಕೆಲವು ಸ್ಟಾರ್ ನಟರು ಶಾಮಲ ಅವರಿಗೆ ಆರ್ಥಿಕ ಸಹಾಯ ಮಾಡಿದರು. ತೆಲಂಗಾಣ ಸರ್ಕಾರವು ಪ್ರತಿ ತಿಂಗಳು ಹತ್ತು ಸಾವಿರ ರೂಪಾಯಿ ಮಾಸಾಶನ ಘೋಷಿಸಿತು. ಜೊತೆಗೆ ಡಬ್ಬಲ್ ಬೆಡ್ ರೂಂ ಮನೆ ನೀಡುವುದಾಗಿಯೂ ಘೋಷಿಸಿತ್ತು. ಇಂದು ಬೆಳಿಗ್ಗೆ ಒಸ್ಮಾನಿಯಾ ಆಸ್ಪತ್ರೆಯಲ್ಲಿ ಅವರು ನಿಧನ ಹೊಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Video: ಭಾರತೀಯರ ಆತ್ಮೀಯ ಆತಿಥ್ಯಕ್ಕೆ ಮನಸೋತ ವಿದೇಶಿ ಮಹಿಳೆ – Kannada News | A foreign woman who succumbed to the loving hospitality of Indians

ಅತಿಥಿ ದೇವೋಭವ ಎನ್ನುವುದು ನಮ್ಮ ದೇಶದ ಸಂಸ್ಕೃತಿ. ಅಪರಿಚಿತರನ್ನು ಇಲ್ಲಿ ನಾವು ಅತಿಥಿಗಳನ್ನು ನಗುಮೊಗದಿಂದ ಸ್ವಾಗತಿಸಿ ಸತ್ಕರಿಸುತ್ತೇವೆ. ಇಲ್ಲೊಬ್ರು ವಿದೇಶಿ ಮಹಿಳೆ (foreign woman) ಭಾರತೀಯರ ಈ ಪ್ರೀತಿ ತುಂಬಿದ ಆತಿಥ್ಯಕ್ಕೆ ಮನಸೋತಿದ್ದಾರೆ. ಭಾರತಕ್ಕೆ ಬಂದ ವಿದೇಶಿ ಮಹಿಳೆಯೊಬ್ಬರು ಅಸ್ಸಾಂನ (Assam) ಹಳ್ಳಿಯ ಜನರ ಒಳ್ಳೆಯ ಮನಸ್ಸಿಗೆ ಫುಲ್ ಫಿದಾ ಆಗಿದ್ದಾರೆ. ಈ ವಿಡಿಯೋ ಹಂಚಿಕೊಳ್ಳುತ್ತಿದ್ದಂತೆ  ಇಲ್ಲಿ ಅಪರಿಚಿತರಿಗೂ ಶುದ್ಧ ಪ್ರೀತಿ ಸಿಗುತ್ತದೆ ಎಂದು ನೆಟ್ಟಿಗರು ಹೇಳಿದ್ದಾರೆ.

ನೆದರ್‌ಲ್ಯಾಂಡ್‌ನ ಮೈಕೆ (Meike) ಎಂಬ ಮಹಿಳೆ ತಮ್ಮ ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಭಾರತಕ್ಕೆ ಭೇಟಿ ನೀಡಿದ ಸುಂದರ ಕ್ಷಣಗಳನ್ನು ಹಂಚಿಕೊಂಡಿದ್ದಾರೆ. ಸೌಂದರ್ಯ ಸವಿಯಲು ಅಸ್ಸಾಂನ ಹಳ್ಳಿಯ ಭೇಟಿ ನೀಡಿದ್ದಾರೆ. ಇದೇ ವೇಳೆ ಈ ಹಳ್ಳಿಯ ಜನರು ತಮ್ಮನ್ನು ನಡೆಸಿಕೊಂಡ ರೀತಿಗೆ ಮನಸೋತಿದ್ದು ವಿಡಿಯೋ ಮಾಡಿದ್ದಾರೆ.

ವೈರಲ್ ವಿಡಿಯೋ ಇಲ್ಲಿದೆ

ಈ ಕ್ಲಿಪಿಂಗ್ ನಲ್ಲಿ ವಿದೇಶಿ ಮಹಿಳೆ ಅಸ್ಸಾಂನ ಹಳ್ಳಿಯ ಜನರೊಂದಿಗೆ ಬೆರೆತು ಊಟ ಮಾಡುತ್ತಿರುವುದನ್ನು ಕಾಣಬಹುದು. ಈ ವಿಡಿಯೋದಲ್ಲಿ ಮೊದಲು ನನಗೆ ಬಿಸಿಬಿಸಿ ಅನ್ನ ಹಾಗೂ ಮೊಟ್ಟೆಯ ಸಾರನ್ನು ಸವಿಯುವ ಅವಕಾಶ ಸಿಕ್ಕಿತ್ತು. ಇದು ಮೊದಲ ಊಟ, ಇಲ್ಲಿಂದ ನಾನು ಮತ್ತೊಂದು ಮನೆಯ ಊಟಕ್ಕೆ ಹೋಗಬೇಕು‌. ಭಾರತೀಯ ಜನರು ನನಗೆ ಹೊಟ್ಟೆ ತುಂಬಾ ಉಣ ಬಡಿಸುತ್ತಾರೆ. ತುಂಬಾ ರುಚಿಕರ ಆಹಾರ ಎಂದಿದ್ದಾರೆ. ಅಲ್ಲೇ ಪಕ್ಕದಲ್ಲಿ ಯುವಕ ಬಳಿ ನಿಮ್ಮ ತಾಯಿ ತುಂಬಾ ಅದ್ಭುತವಾಗಿ ಅಡುಗೆ ಮಾಡುತ್ತಾರೆ ಎಂದು ಇಲ್ಲಿನ ಆಹಾರವನ್ನು ಮೆಚ್ಚಿಕೊಂಡಿದ್ದಾರೆ.

ಸಂಜೆಯ ವೇಳೆ ಎರಡೆರಡು ಸಲ ಊಟ ಮಾಡುತ್ತಿದ್ದೇನೆ. ಇಲ್ಲಿನ ಜನ್ರು ನಾನು ಅವರ ಮನೆಯಲ್ಲಿ ಊಟ ಮಾಡಬೇಕು ಎಂದು ಆಸೆ ಪಟ್ಟಿದ್ದಾರೆ. ಹೀಗಾಗಿ ನಾನು ಎರಡು ಬಾರಿ ಊಟ ಮಾಡುತ್ತೇನೆ. ಇಲ್ಲಿನ ಜನರು ತುಂಬಾ ಒಳ್ಳೆಯವರು ಎಂದು ಅತಿಥಿ ಸತ್ಕಾರದೊಂದಿಗೆ ಇಲ್ಲಿನ ಜನರ ಒಳ್ಳೆಯ ಮನಸ್ಸನ್ನು ಮೆಚ್ಚಿಕೊಂಡಿದ್ದಾರೆ.

ಇದನ್ನೂ ಓದಿ: ಮನೆಯಲ್ಲೇ ರಕ್ತ ಪರೀಕ್ಷೆ ಮಾಡುವ ಸೇವೆ ಕಂಡು ಅಚ್ಚರಿ ವ್ಯಕ್ತಪಡಿಸಿದ ವಿದೇಶಿ ಮಹಿಳೆ

ಈ ವಿಡಿಯೋ 23 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಶುದ್ಧ ಪ್ರೀತಿ ಹಾಗೂ ಸತ್ಕಾರ ಭಾರತದಲ್ಲಿ ಮಾತ್ರ ಕಾಣಲು ಸಾಧ್ಯ ಎಂದಿದ್ದಾರೆ. ಇನ್ನೊಬ್ಬರು, ನಮ್ಮ ಮನೆಗೂ ನೀವು ಬರುವಿರಾ ಎಂದು ಕೇಳಿದ್ದಾರೆ. ಮತ್ತೊಬ್ಬರು, ನಿಮ್ಮ ಈ ಪೋಸ್ಟ್ ನನ್ನ ಮೊಗದಲ್ಲಿ ನಗು ತರಿಸಿತು ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಜೀ ಕನ್ನಡದಲ್ಲಿ ಆಗಸ್ಟ್ 8ರಿಂದ ‘ಹಳ್ಳಿ ಪವರ್ ರೀಲೋಡೆಡ್’ ಧಮಾಕಾ – Kannada News | Halli Power Reloaded to Premiere on Zee Kannada from August 8: City Girls Set for Rural Challenges

ಕಿರುತೆರೆ ವೀಕ್ಷಕರಿಗೆ ಜೀ ಕನ್ನಡ ವಾಹಿನಿ ಮತ್ತೊಂದು ಜಬರ್ದಸ್ತ್ ಮನರಂಜನೆಯ ಉಡುಗೊರೆ ನೀಡಲು ಸಜ್ಜಾಗಿದೆ. ಈ ಹಿಂದೆ ಭಾರಿ ಜನಪ್ರಿಯತೆ ಗಳಿಸಿದ್ದ ರಿಯಾಲಿಟಿ ಶೋ ‘ಹಳ್ಳಿ ಪವರ್’, ಈಗ ಮತ್ತಷ್ಟು ಮಜಾವಾಗಿ ‘ಹಳ್ಳಿ ಪವರ್ ರೀಲೋಡೆಡ್’ ಎಂಬ ಹೊಸ ರೂಪದೊಂದಿಗೆ ಪ್ರೇಕ್ಷಕರ ಮುಂದೆ ಬರುತ್ತಿದೆ. ಇದೇ ಆಗಸ್ಟ್ 8ರಿಂದ ಈ ಶೋ ಅಧಿಕೃತವಾಗಿ ಚಾಲನೆ ಪಡೆಯಲಿದೆ. ಈ ಬಗ್ಗೆ ಜೀ ಕನ್ನಡ ವಾಹಿನಿ ಘೋಷಣೆ ಮಾಡಿದೆ. ಅಕುಲ್ ಬಾಲಾಜಿ ಶೋನ ನಡೆಸಿಕೊಡಲಿದ್ದಾರೆ.

ಸಿಟಿ ಹುಡುಗಿಯರಿಗೆ ಹಳ್ಳಿ ಸವಾಲು

ಈ ಶೋನ ಮುಖ್ಯ ಆಕರ್ಷಣೆಯೇ ಇದರ ವಿಭಿನ್ನ ಪರಿಕಲ್ಪನೆ. ಐಷಾರಾಮಿ ಜೀವನ ನಡೆಸುವ ಸಿಟಿ ಹುಡುಗಿಯರು ಹಳ್ಳಿಗೆ ಬಂದು, ಅಲ್ಲಿನ ಅಪ್ಪಟ ಗ್ರಾಮೀಣ ವಾತಾವರಣದಲ್ಲಿ ವಾಸಿಸಬೇಕಾಗುತ್ತದೆ. ಹಳ್ಳಿಯ ದೈನಂದಿನ ಕೆಲಸಗಳು ಹಾಗೂ ಅಲ್ಲಿ ನೀಡಲಾಗುವ ಕಠಿಣ ಟಾಸ್ಕ್‌ಗಳನ್ನು ಎದುರಿಸುತ್ತಾ ಅವರು ಹೇಗೆ ಸರ್ವೈವ್ ಆಗುತ್ತಾರೆ ಎಂಬುದೇ ಶೋನ ಹೈಲೈಟ್. ಇತ್ತೀಚೆಗೆ ಬಿಡುಗಡೆಯಾಗಿರುವ ಪ್ರೋಮೋದಲ್ಲಿ ಸಿಟಿ ಕನ್ಯೆಯರು ಹಳ್ಳಿಯ ಟಾಸ್ಕ್‌ಗಳನ್ನು ನೋಡಿ ಬೆದರುತ್ತಿರುವುದು ಸಖತ್ ತಮಾಷೆಯಾಗಿ ಮೂಡಿಬಂದಿದೆ.

ಜೀ ಕನ್ನಡದಲ್ಲಿ ಸಾಕಷ್ಟು ರಿಯಾಲಿಟಿ ಶೋಗಳು ಬಂದು ಹೋಗಿವೆ. ಬಹುತೇಕವು ವೀಕೆಂಡ್​​ನಲ್ಲಿ ಪ್ರಸಾರ ಕಂಡಿದೆ. ನಿತ್ಯವೂ ಪ್ರಸಾರ ಕಾಣುವ ರಿಯಾಲಿಟಿ ಶೋ ಬಂದಿದ್ದು ಇಲ್ಲಿ ಕಡಿಮೆ. ಹೀಗಾಗಿ, ಹಳ್ಳಿ ಪವರ್ ಬಗ್ಗೆ ಕುತೂಹಲ ಮೂಡಿದೆ.

ಇದನ್ನೂ ಓದಿ: ಜೀ ಕನ್ನಡದಲ್ಲಿ ಬರ್ತಿದೆ ‘ಹಳ್ಳಿ ಪವರ್’; ಆಡಿಷನ್ ವಿವರ ಇಲ್ಲಿದೆ

ಸಮಯದ ಕುರಿತು ಮುಂದುವರಿದ ಕುತೂಹಲ

ಶೋ ಆರಂಭದ ದಿನಾಂಕ ಘೋಷಣೆಯಾಗಿದ್ದರೂ, ಇದು ಯಾವ ಸಮಯದಲ್ಲಿ ಪ್ರಸಾರವಾಗಲಿದೆ ಎಂಬ ರಹಸ್ಯವನ್ನು ವಾಹಿನಿ ಇನ್ನು ಬಿಟ್ಟುಕೊಟ್ಟಿಲ್ಲ. ವಾರದ ದಿನಗಳ ಪ್ರೈಮ್ ಟೈಮ್‌ನಲ್ಲಿ ಈ ಶೋ ಬರೋ ಸಾಧ್ಯತೆ ಇದೆ. ಈ ಬಗ್ಗೆ ಸದ್ಯ ವೀಕ್ಷಕರಲ್ಲಿ ಕುತೂಹಲ ಮನೆಮಾಡಿದೆ. ಒಟ್ಟಿನಲ್ಲಿ, ಹಳ್ಳಿಯ ಸೊಗಡು ಮತ್ತು ಸಿಟಿಯ ಸ್ಟೈಲ್ ನಡುವಿನ ಈ ಜುಗಲ್‌ಬಂದಿ ಪ್ರೇಕ್ಷಕರಿಗೆ ಭರಪೂರ ಮನರಂಜನೆ ನೀಡುವುದಂತೂ ಗ್ಯಾರಂಟಿ.

ಪ್ರಶ್ನೆ: ಹಳ್ಳಿ ಪವರ್ ಶೋ ಯಾವಾಗಿನಿಂದ ಆರಂಭ?
ಉತ್ತರ:
ಆಗಸ್ಟ್​ 08

ಪ್ರಶ್ನೆ: ಹಳ್ಳಿ ಪವರ್ ಶೋ ನಡೆಸಿಕೊಡುವವರು ಯಾರು?
ಉತ್ತರ: 
ಅಕುಲ್ ಬಾಲಾಜಿ

ಪ್ರಶ್ನೆ: ಹಳ್ಳಿ ಪವರ್ ಥೀಮ್ ಏನು?
ಉತ್ತರ:
ಸಿಟಿ ಹುಡುಗಿಯರ ಹಳ್ಳಿ ಲೈಫ್

Source link

ಜಮ್ಮು-ಕಾಶ್ಮೀರದಲ್ಲಿ ಬಸ್ ಅಪಘಾತ: 39 ಅಮರನಾಥ ಯಾತ್ರಿಕರಿಗೆ ಗಾಯ, ಪವಾಡದಂತೆ ಪಾರಾದ ಜನ – Kannada News | Amarnath Yatra Bus Mishap Leaves 39 Pilgrims Injured in Jammu and Kashmir

ಶ್ರೀನಗರ,ಜುಲೈ 28: ಜಮ್ಮು ಮತ್ತು ಕಾಶ್ಮೀರದ ಗಂಡೇರ್‌ಬಾಲ್ ಜಿಲ್ಲೆಯ ಕಂಗನ್ ಪ್ರದೇಶದ ಹರಿಗನ್ವಾನ್ ಬಳಿ ಭೀಕರ ರಸ್ತೆ ಅಪಘಾತ(Accident) ಸಂಭವಿಸಿದ್ದು, ಪವಿತ್ರ ಅಮರನಾಥ ಯಾತ್ರೆ ಮುಗಿಸಿ ಹಿಂತಿರುಗುತ್ತಿದ್ದ ಬಸ್ ನಿಯಂತ್ರಣ ತಪ್ಪಿ ಮನೆಗೆ ಉರುಳಿದ ಪರಿಣಾಮ 39 ಯಾತ್ರಿಕರು ಗಾಯಗೊಂಡಿದ್ದಾರೆ.ಪವಿತ್ರ ಅಮರನಾಥ ಗುಹಾ ದೇವಾಲಯದಲ್ಲಿ ಬಾಬಾ ಬರ್ಫಾನಿ ದರ್ಶನ ಪಡೆದು ಹಿಂತಿರುಗುತ್ತಿದ್ದ ಯಾತ್ರಿಕರಿದ್ದ ಬಸ್, ಹರಿಗನ್ವಾನ್ ಬಳಿಯ ತೀಕ್ಷ್ಣವಾದ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದಲ್ಲಿದ್ದ ಖಾಲಿ ಮನೆಗೆ ಡಿಕ್ಕಿ ಹೊಡೆದಿದೆ.

ಅದೃಷ್ಟವಶಾತ್ ಬಸ್ ಹತ್ತಿರದಲ್ಲೇ ಹರಿಯುತ್ತಿದ್ದ ಸಿಂಧ್ ನದಿಗೆ ಬೀಳುವುದರಿಂದ ಕೂದಲೆಳೆಯ ಅಂತರದಲ್ಲಿ ತಪ್ಪಿದ್ದು, ಭಾರಿ ಪ್ರಾಣಾಪಾಯ ಹಾಗೂ ದೊಡ್ಡ ದುರಂತವೊಂದು ತಪ್ಪಿದಂತಾಗಿದೆ. ಅಪಘಾತದ ಸಮಯದಲ್ಲಿ ಮನೆಯೊಳಗೆ ಯಾರೂ ಇಲ್ಲದ ಕಾರಣ ಹೆಚ್ಚಿನ ಅನಾಹುತ ಸಂಭವಿಸಿಲ್ಲ.

ಘಟನೆ ತಿಳಿದ ತಕ್ಷಣವೇ ಸ್ಥಳೀಯ ನಿವಾಸಿಗಳು, ಜಮ್ಮು-ಕಾಶ್ಮೀರ ಪೊಲೀಸರು, ಐಟಿಬಿಪಿ , ಸಿಆರ್‌ಪಿಎಫ್ ಹಾಗೂ ಭಾರತೀಯ ಸೇನೆಯ ಪಡೆಗಳು ಜಂಟಿ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಗಾಯಾಳುಗಳನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗಳು ಹಾಗೂ ‘ಸ್ಕಿಮ್ಸ್’ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆಚ್ಚಿನ ಯಾತ್ರಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಎಲ್ಲರ ಸ್ಥಿತಿ ಸ್ಥಿರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜಮ್ಮು-ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ (ಎಲ್‌ಜಿ) ಮನೋಜ್ ಸಿನ್ಹಾ ಅವರು ಗಂಡೇರ್‌ಬಾಲ್ ಜಿಲ್ಲಾಧಿಕಾರಿ ಮತ್ತು ಆರೋಗ್ಯ ಅಧಿಕಾರಿಗಳೊಂದಿಗೆ ಮಾತನಾಡಿ ಗಾಯಾಳುಗಳ ಸ್ಥಿತಿಗತಿಯನ್ನು ವಿಚಾರಿಸಿದ್ದಾರೆ.

ಪೋಸ್ಟ್​

ಗಾಯಗೊಂಡ ಯಾತ್ರಿಕರಿಗೆ ಅಗತ್ಯವಿರುವ ಎಲ್ಲಾ ಸಹಾಯ ಮತ್ತು ಅತ್ಯುತ್ತಮ ವೈದ್ಯಕೀಯ ಆರೈಕೆಯನ್ನು ಖಚಿತಪಡಿಸಲು ಸೂಚಿಸಿದ್ದೇನೆ. ಗಾಯಗೊಂಡ ಭಕ್ತರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಶಿವನಲ್ಲಿ ಪ್ರಾರ್ಥಿಸುತ್ತೇನೆ ಎಂದು ಸಿನ್ಹಾ ತಿಳಿಸಿದ್ದಾರೆ. ಜುಲೈ 2 ರಂದು ಪ್ರಾರಂಭವಾದ ಈ ವರ್ಷದ ವಾರ್ಷಿಕ ಅಮರನಾಥ ಯಾತ್ರೆಯಲ್ಲಿ ಇದುವರೆಗೆ 4.15 ಲಕ್ಷಕ್ಕೂ ಹೆಚ್ಚು ಯಾತ್ರಿಕರು ಪವಿತ್ರ ಹಿಮಲಿಂಗದ ದರ್ಶನ ಪಡೆದಿದ್ದಾರೆ. 57 ದಿನಗಳ ಕಾಲ ನಡೆಯುವ ಈ ವಾರ್ಷಿಕ ತೀರ್ಥಯಾತ್ರೆಯು ಆಗಸ್ಟ್ 28 ರಂದು ಮುಕ್ತಾಯಗೊಳ್ಳಲಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Vasthu Tips: ಮನೆಯಲ್ಲಿ ಮನಿ ಪ್ಲಾಂಟ್ ಒಂದಿದ್ದರೆ ಸಾಲದು; ಸಂಪತ್ತು ದ್ವಿಗುಣಗೊಳಿಸಲು ಈ ಗಿಡಗಳೂ ಬೇಕು! – Kannada News | Beyond Money Plant: 2 Must Have Vastu Plants for Wealth and Prosperity at Home

ಇಂದಿನ ದಿನಗಳಲ್ಲಿ ಪ್ರತಿಯೊಬ್ಬರ ಮನೆಯಲ್ಲೂ ಮನಿ ಪ್ಲಾಂಟ್ (Money Plant) ಇರುವುದು ಸಾಮಾನ್ಯ. ಮನೆಗೆ ಸುಂದರ ರೂಪ ನೀಡುವ ಜೊತೆಗೆ, ಆರ್ಥಿಕ ಸ್ಥಿತಿ ಉತ್ತಮಗೊಳ್ಳಲಿ ಎಂಬ ನಂಬಿಕೆಯಿಂದ ಹೆಚ್ಚಿನವರು ಇದನ್ನು ಬೆಳೆಸುತ್ತಾರೆ. ಆದರೆ, ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಕೇವಲ ಮನಿ ಪ್ಲಾಂಟ್ ಒಂದಿದ್ದರೆ ಸಾಲದು. ಅದರ ಜೊತೆಗೆ ಕೆಲವು ವಿಶೇಷ ಗಿಡಗಳನ್ನು ನೆಡುವುದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚಿ, ಆರ್ಥಿಕ ಮುಗ್ಗಟ್ಟು ದೂರವಾಗುತ್ತದೆ. ವಾಸ್ತು ವಿದ್ವಾಂಸರ ಪ್ರಕಾರ, ಮನಿ ಪ್ಲಾಂಟ್ ಹೊರತುಪಡಿಸಿ ನಿಮ್ಮ ಮನೆಯಲ್ಲಿರಬೇಕಾದ ಅತ್ಯಂತ ಶುಭ ತರುವ ಸಸ್ಯಗಳ ವಿವರ ಇಲ್ಲಿದೆ.

ತುಳಸಿ ಗಿಡ (Tulsi Plant):

ಭಾರತೀಯ ಸಂಸ್ಕೃತಿಯಲ್ಲಿ ತುಳಸಿ ಗಿಡಕ್ಕೆ ಪೂಜನೀಯ ಸ್ಥಾನವಿದೆ. ಈ ಸಸ್ಯ ಮನೆಯಲ್ಲಿರುವ ದುಷ್ಟ ಶಕ್ತಿ ಹಾಗೂ ನಕಾರಾತ್ಮಕತೆಯನ್ನು ತುಳಸಿ ಧೂಳೀಪಟ ಮಾಡುತ್ತದೆ. ತುಳಸಿ ಗಿಡವನ್ನು ಮನೆಯ ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿ ಇಡುವುದು ಅತ್ಯಂತ ಶುಭ. ಇದು ಕುಟುಂಬದಲ್ಲಿ ಶಾಂತಿ, ನೆಮ್ಮದಿ ತರುವುದಲ್ಲದೆ ಲಕ್ಷ್ಮೀ ದೇವಿಯ ಅನುಗ್ರಹದಿಂದ ಆರ್ಥಿಕ ಅಭಿವೃದ್ಧಿಗೆ ಹಾದಿ ಮಾಡಿಕೊಡುತ್ತದೆ.

ಇದನ್ನೂ ಓದಿ: ಚಿಕ್ಕ ಮಕ್ಕಳಿಗೆ ಕನ್ನಡಿ ತೋರಿಸಬಾರದು ಏಕೆ? ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ಕಾರಣ ಇಲ್ಲಿದೆ

ಬಿದಿರಿನ ಗಿಡ (Lucky Bamboo):

ಅನೇಕರು ಮನಿ ಪ್ಲಾಂಟ್ ಇಟ್ಟರೆ ಸಾಕು ಆದಾಯ ದ್ವಿಗುಣಗೊಳ್ಳುತ್ತದೆ ಎಂದು ಭಾವಿಸುತ್ತಾರೆ. ಆದರೆ ವಾಸ್ತು ಪ್ರಕಾರ ಬಿದಿರಿನ ಗಿಡ (Bamboo Plant) ಅದಕ್ಕಿಂತಲೂ ಶಕ್ತಿಶಾಲಿ. ಮನೆಯಲ್ಲಿ ಬಿದಿರಿನ ಗಿಡವನ್ನು ಬೆಳೆಸುವುದರಿಂದ ಅದೃಷ್ಟ ಒಲಿದುಬರುತ್ತದೆ. ಇದು ವ್ಯಾಪಾರ ಮತ್ತು ಉದ್ಯೋಗದಲ್ಲಿ ಪ್ರಗತಿ ತಂದುಕೊಟ್ಟು, ಮನೆಯ ಸಂಪತ್ತನ್ನು ದ್ವಿಗುಣಗೊಳಿಸಲು ಸಹಕಾರಿಯಾಗಿದೆ.

ವಿಶೇಷ ಸೂಚನೆ: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿಯು ಧಾರ್ಮಿಕ ನಂಬಿಕೆಗಳು ಮತ್ತು ವಾಸ್ತು ಶಾಸ್ತ್ರವನ್ನು ಆಧರಿಸಿದೆ. ನಿಮ್ಮ ಮನೆಯಲ್ಲಿ ಯಾವುದೇ ರೀತಿಯ ಬದಲಾವಣೆ ಮಾಡುವ ಮುನ್ನ ಹತ್ತಿರದ ವಾಸ್ತು ತಜ್ಞರನ್ನು ಸಂಪರ್ಕಿಸಿ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 10:54 am, Tue, 28 July 26

Source link

ನೀಟ್ ಅಕ್ರಮ ವಿರೋಧಿಸಿ ಪ್ರತಿಭಟನೆಯಲ್ಲಿ 2,823 ಕ್ರಿಮಿನಲ್‌ಗಳು ಪತ್ತೆ: ದೆಹಲಿ ಪೊಲೀಸರಿಂದ ಕಾರ್ಯಾಚರಣೆ – Kannada News | Delhi Police Identify Thousands With Criminal Backgrounds During NEET Protest Screening

ನವದೆಹಲಿ,ಜುಲೈ 28: ದೆಹಲಿಯ ಜಂತರ್​ ಮಂತರ್​ನಲ್ಲಿ ಜುಲೈ 20ರಿಂದ 25ರವರೆಗೆ ನೀಟ್(NEET)  ಪರೀಕ್ಷಾ ಅಕ್ರಮವನ್ನು ಖಂಡಿಸಿ ನಡೆದ ಪ್ರತಿಭಟನೆಯಲ್ಲಿ 2,823 ಕ್ರಿಮಿನಲ್​ಗಳು ಕೂಡ ಭಾಗಿಯಾಗಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ. ದೆಹಲಿಯ ಪೊಲೀಸರು ಎಐ ಆಧಾರಿತ ಫೇಶಿಯಲ್ ರೆಕಗ್ನಿಷನ್ ಸಿಸ್ಟಂ ತಂತ್ರಜ್ಞಾನ ಬಳಸಿ 2,823 ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಗಳನ್ನು ಗುರುತಿಸಿದ್ದಾರೆ. ಇವರಲ್ಲಿ 989 ವ್ಯಕ್ತಿಗಳು ಕೊಲೆ,ಅತ್ಯಾಚಾರ ಸೇರಿದಂತೆ ತೀವ್ರ ಸ್ವರೂಪದ ಗಂಭೀರ ಅಪರಾಧಗಳಲ್ಲಿ ಭಾಗಿಯಾದ ಹಿನ್ನೆಲೆ ಹೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪತ್ತೆಯಾದ ಅಪರಾಧಿಗಳ ಪೈಕಿ 101 ಜನರು ಕೊಲೆ ಪ್ರಕರಣಗಳಲ್ಲಿ, 61 ಜನರು ಅತ್ಯಾಚಾರ ಪ್ರಕರಣಗಳಲ್ಲಿ, 284 ಜನರು ದರೋಡೆ, 229 ಜನರು ಶಸ್ತ್ರಾಸ್ತ್ರ ಕಾಯ್ದೆಯಡಿ (Arms Act) ಹಾಗೂ 67 ಜನರು ಮಾದಕದ್ರವ್ಯ ಕಾಯ್ದೆಯಡಿ ಆರೋಪಿಗಳಾಗಿದ್ದಾರೆ.

ಈ ತಂತ್ರಜ್ಞಾನ ಮತ್ತು ಪರಿಶೀಲನಾ ವ್ಯವಸ್ಥೆಯು ಸಾಮಾನ್ಯ ವಿದ್ಯಾರ್ಥಿಗಳು ಅಥವಾ ಪ್ರತಿಭಟನಾಕಾರರನ್ನು ಗುರಿಯಾಗಿಸಿಕೊಂಡಿಲ್ಲ. ಪ್ರತಿಭಟನೆಯ ಸಾಲಿನಲ್ಲಿ ನುಸುಳಿ ಗಲಭೆ ಎಬ್ಬಿಸಲು ಯತ್ನಿಸುವ ಅಪರಾಧಿಗಳನ್ನು ಪತ್ತೆಹಚ್ಚಲು ಮಾತ್ರ ಇದನ್ನು ಬಳಸಲಾಗಿದೆ ಎಂದು ದೆಹಲಿ ಪೊಲೀಸ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಮತ್ತಷ್ಟು ಓದಿ: ನಾನು ಬೀದಿ ಹೋರಾಟಗಾರ: ಜೈರಾಮ್ ರಮೇಶ್ ಹೇಳಿಕೆಗೆ ಧರ್ಮೇಂದ್ರ ಪ್ರಧಾನ್ ತಿರುಗೇಟು

ನೀಟ್ ಯುಜಿ ಪರೀಕ್ಷಾ ಅಕ್ರಮ ಮತ್ತು ಸಿಬಿಎಸ್​ಇ ಸಮಸ್ಯೆಗಳ ವಿರುದ್ಧ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ನೇತೃತ್ವದಲ್ಲಿ ಜೂನ್‌ನಿಂದ ಸತತ ಪ್ರತಿಭಟನೆಗಳು ನಡೆಯುತ್ತಿದ್ದವು. ಜುಲೈ 20 ರಂದು ಪ್ರತಿಭಟನೆ ವಿಕೋಪಕ್ಕೆ ತಿರುಗಿ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಸಂಘರ್ಷ ಉಂಟಾದ ಹಿನ್ನೆಲೆಯಲ್ಲಿ, ಜುಲೈ 25 ರಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಎಫ್‌ಐಆರ್ (FIR) ಹಿಂಪಡೆಯುವಿಕೆ ಭರವಸೆ: ವಿದ್ಯಾರ್ಥಿಗಳ ಮೇಲಿನ ಎಫ್‌ಐಆರ್ ಮತ್ತು ಪ್ರಕರಣಗಳನ್ನು ಹಿಂಪಡೆಯಲಾಗುವುದು ಎಂದು ಸಿಜೆಪಿ ನಾಯಕರಿಗೆ ಸರ್ಕಾರ ಭರವಸೆ ನೀಡಿದೆ. ಬಂಧಿತ ಪ್ರತಿಭಟನಾಕಾರರು ಮತ್ತು ವಿದ್ಯಾರ್ಥಿಗಳಿಗೆ ಉಚಿತ ಕಾನೂನು ನೆರವು ನೀಡಲು ಹಿರಿಯ ವಕೀಲ ಹಾಗೂ ಸಂಸದ ಕಪಿಲ್ ಸಿಬಲ್ ಅವರು ತಮ್ಮ ಕಡೆಯಿಂದ 1 ಕೋಟಿ ರೂ. ಪರಿಹಾರ ನಿಧಿ ಘೋಷಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 10:40 am, Tue, 28 July 26

Source link

‘ಟಾಕ್ಸಿಕ್ ನೋಡಿದವರು ವಾಟ್​ ದ ಹೆಲ್​ ವಾಸ್ ದ್ಯಾಟ್ ಅಂತ ಹೊರಗೆ ಬರ್ತಾರೆ’; ಯಶ್ – Kannada News | Yash Opens Up on Toxic Promises a Roller Coaster Ride of Action and Emotion

ಸ್ಯಾನ್ ಡಿಯಾಗೋ ಕಾಮಿಕ್-ಕಾನ್‌ನಲ್ಲಿ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದ ನಟ ಯಶ್ ಅವರು ತಮ್ಮ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ಟಾಕ್ಸಿಕ್ ಟೀಸರ್​​ನ ಅದ್ಭುತ ಯಶಸ್ಸಿನ ಬಗ್ಗೆ ಪ್ರಸ್ತಾಪಿಸಿದಾಗ, ಯಶ್ ಅವರು ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದರು. ‘ಟಾಕ್ಸಿಕ್ ಸಿನಿಮಾ ಪ್ರೇಕ್ಷಕರಿಗೆ ಒಂದು ರೋಲರ್ ಕೋಸ್ಟರ್ ರೈಡ್ ಇದ್ದಂತೆ ಇರಲಿದೆ. ಇದು ತುಂಬಾನೇ ವೈಲ್ಡ್ ಆಗಿದ್ದು, ಎಲ್ಲರ ಮನಸೂರೆಗೊಳ್ಳಲಿದೆ’ ಎಂದು ಯಶ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

‘ಮೇಲ್ನೋಟಕ್ಕೆ ಇದು ಒಂದು ದೊಡ್ಡ ಮಟ್ಟದ ಆಕ್ಷನ್ ಸಿನಿಮಾದಂತೆ ಕಂಡರೂ, ಸಿನಿಮಾದ ಒಳಗೆ ಆಳವಾದ ಭಾವನಾತ್ಮಕ ಕಥೆಯಿದೆ ಎಂದು ತಿಳಿಸಿದ್ದಾರೆ. ಥಿಯೇಟರ್‌ನಿಂದ ಹೊರಬರುವಾಗ ಪ್ರೇಕ್ಷಕರು ಖಂಡಿತವಾಗಿಯೂ ಬೆರಗಾಗುತ್ತಾರೆ. ವಾಟ್​ ದಿ ಹೆಲ್​ ವಾಸ್ ದ್ಯಾಟ್ ಅಂತಾರೆ’ ಎಂದಿದ್ದಾರೆ ಯಶ್.

ತಮಗೆ ಮೊದಲಿನಿಂದಲೂ ಆಕ್ಷನ್ ಸಿನಿಮಾಗಳೆಂದರೆ ಇಷ್ಟ ಎಂದು ಹೇಳಿದ ಯಶ್, ಈ ಚಿತ್ರಕ್ಕಾಗಿ ಖ್ಯಾತ ಆಕ್ಷನ್ ಡೈರೆಕ್ಟರ್ ಜೆಜೆ ಪೆರ್ರಿ (ಅವರೊಂದಿಗೆ ಕೆಲಸ ಮಾಡಿರುವುದಾಗಿ ತಿಳಿಸಿದ್ದಾರೆ. ಜಾನ್ ವಿಕ್ ಅಂತಹ ಹಾಲಿವುಡ್ ಸಿನಿಮಾಗಳ ಆಕ್ಷನ್‌ನಿಂದ ಪ್ರೇರಿತರಾಗಿ ಈ ಚಿತ್ರದಲ್ಲೂ ಅತ್ಯುನ್ನತ ಗುಣಮಟ್ಟದ ಆಕ್ಷನ್ ದೃಶ್ಯಗಳನ್ನು ಅಳವಡಿಸಲಾಗಿದೆ. ಕೇವಲ ಆಕ್ಷನ್ ಮಾತ್ರವಲ್ಲದೆ, ಆ ದೃಶ್ಯಗಳ ಹಿಂದೆ ಬಲವಾದ ಭಾವನಾತ್ಮಕ ಹಿನ್ನೆಲೆಯೂ ಇರಲಿದೆ ಎಂದು ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version