ಹಸಿವಿನಿಂದ ಅಳುತ್ತಿದ್ದ 5 ವರ್ಷದ ಮಗಳಿಗೆ ಹೆಂಡ ಕುಡಿಸಿ, ಕತ್ತು ಹಿಸುಕಿ ಕೊಂದ ಕುಡುಕ! – Kannada News | Punjab Drunk father Killed 5 Year Old Daughter After She Cried For Food
ಜಲಂಧರ್, ಫೆಬ್ರವರಿ 5: ಪಂಜಾಬ್‌ನ ಜಲಂಧರ್‌ನಲ್ಲಿ ತಂದೆಯೊಬ್ಬ ತನ್ನ ಐದು ವರ್ಷದ ಮಗಳು ಹಸಿವಿನಿಂದ ಅಳುತ್ತಿದ್ದ ಕಾರಣ ಆಕೆಯ ಬಾಯಿಗೆ ಆಲ್ಕೋಹಾಲ್ (Alcohol) ಹಾಕಿ, ಆಕೆಯ ಕತ್ತು ಹಿಸುಕಿ ಕೊಂದಿದ್ದಾನೆ. ಜಲಂಧರ್‌ನಲ್ಲಿ ವಾಸಿಸುತ್ತಿರುವ ಛತ್ತೀಸ್‌ಗಢ ಮೂಲದ ಆರೋಪಿ ಅರವಿಂದ್ನನ್ನು ಆತನ ನೆರೆಯ ಮನೆಯ ಹಿಮ್ಮತ್ ಕುಮಾರ್ ನೀಡಿದ ದೂರಿನ ಮೇರೆಗೆ ಬಂಧಿಸಲಾಗಿದೆ. ಅರವಿಂದ್ ದಿನಗೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ, ವಿಪರೀತ ಕುಡಿಯುತ್ತಿದ್ದ. 5 ವರ್ಷದ ಬಾಲಕಿಯ ತಾಯಿ ಕೆಲಸಕ್ಕೆ ಹೋಗಿದ್ದಾಗ ಈ ಘಟನೆ ನಡೆದಿದೆ. ಅರವಿಂದ್ ತನ್ನ…