5 ಓವರ್, 5 ಮೇಡನ್, 5 ವಿಕೆಟ್​: ಹಿಂದೆಂದೂ ಕಂಡರಿಯದ ವಿಶ್ವ ದಾಖಲೆ ಬರೆದ ಗ್ರೀವ್ಸ್

Source link

August Horoscope 2026: ಆಗಸ್ಟ್‌ನಲ್ಲಿ ಈ 4 ರಾಶಿಗೆ ಸ್ವಂತ ಮನೆ ಯೋಗ ಮತ್ತು ಅನಿರೀಕ್ಷಿತ ಧನಲಾಭ! – Kannada News | August Horoscope 2026: 4 Zodiac Signs to Gain New House and Huge Wealth

ಜುಲೈ ತಿಂಗಳು ಮುಗಿದು ಆಗಸ್ಟ್ ತಿಂಗಳು ಪ್ರಾರಂಭವಾಗುತ್ತಿದ್ದಂತೆ, ಹಲವು ಪ್ರಮುಖ ಗ್ರಹಗಳ ಸಂಚಾರ (Transits) ಸಂಭವಿಸಲಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗ್ರಹಗಳ ಈ ಬದಲಾವಣೆಯು ಕೆಲವು ರಾಶಿಯವರ ಜೀವನದಲ್ಲಿ ಸುವರ್ಣ ಅಧ್ಯಾಯವನ್ನು ಪ್ರಾರಂಭಿಸಲಿದೆ. ಮುಖ್ಯವಾಗಿ 4 ರಾಶಿಯ ಜನರಿಗೆ ಅನಿರೀಕ್ಷಿತ ಲಾಭಗಳು ದೊರೆಯಲಿದ್ದು, ಅವರ ಬಹುದಿನಗಳ ‘ಸ್ವಂತ ಮನೆ’ ಕಟ್ಟುವ ಕನಸು ಈ ಸಮಯದಲ್ಲಿ ನನಸಾಗುವ ಸಾಧ್ಯತೆಯಿದೆ.

ಆ ಅದೃಷ್ಟದ 4 ರಾಶಿಗಳು ಯಾವುವು ಮತ್ತು ಅವರಿಗೆ ಸಿಗುವ ಯೋಗಗಳೇನು ಎಂಬುದರ ವಿವರ ಇಲ್ಲಿದೆ:

ವೃಷಭ ರಾಶಿಯವರ ಸ್ವಂತ ಮನೆಯ ಕನಸು ನನಸು:

ವೃಷಭ ರಾಶಿಯ ಜನರಿಗೆ ಆಗಸ್ಟ್ ತಿಂಗಳು ಅತ್ಯಂತ ಅದೃಷ್ಟದಾಯಕವಾಗಿರಲಿದೆ. ಬಹಳ ದಿನಗಳಿಂದ ತಮಗೊಂದು ಸ್ವಂತ ಮನೆ ಇರಬೇಕು ಎಂದು ಶ್ರಮಿಸುತ್ತಿದ್ದವರಿಗೆ ಇದು ಸೂಕ್ತ ಸಮಯ. ಗ್ರಹಗಳ ಶುಭ ದೃಷ್ಟಿಯಿಂದಾಗಿ ಮನೆ ನಿರ್ಮಾಣ ಅಥವಾ ಹೊಸ ಆಸ್ತಿ ಖರೀದಿ ಪ್ರಕ್ರಿಯೆಗಳು ತಡೆರಹಿತವಾಗಿ ಸಾಗಲಿವೆ. ಒಟ್ಟಾರೆಯಾಗಿ ಕುಟುಂಬದಲ್ಲಿ ನೆಮ್ಮದಿ ಮತ್ತು ಸಂತೋಷದ ವಾತಾವರಣ ನೆಲೆಸಲಿದೆ.

ಸಿಂಹ ರಾಶಿಗೆ ಆರ್ಥಿಕ ಸಂಕಷ್ಟಕ್ಕೆ ಮುಕ್ತಿ, ಹೆಚ್ಚಾಗಲಿದೆ ಆತ್ಮವಿಶ್ವಾಸ:

ಸಿಂಹ ರಾಶಿಯವರಿಗೆ ಈ ತಿಂಗಳು ಅದ್ಭುತವಾದ ಧನಾತ್ಮಕ ಬದಲಾವಣೆಗಳನ್ನು ತರಲಿದೆ. ಪ್ರಮುಖವಾಗಿ ಇವರ ಆದಾಯದಲ್ಲಿ ಅಗಾಧ ಪ್ರಮಾಣದ ಏರಿಕೆಯನ್ನು ಕಾಣಬಹುದು. ಹಳೆಯ ಸಾಲ ಹಾಗೂ ಆರ್ಥಿಕ ಸಮಸ್ಯೆಗಳಿಂದ ಸಂಪೂರ್ಣ ಮುಕ್ತಿ ಸಿಗಲಿದೆ. ಆರ್ಥಿಕ ಭದ್ರತೆ ಸಿಗುತ್ತಿದ್ದಂತೆ ಇವರ ಆತ್ಮವಿಶ್ವಾಸ ದ್ವಿಗುಣಗೊಳ್ಳಲಿದ್ದು, ವೃತ್ತಿ ಮತ್ತು ವೈಯಕ್ತಿಕ ಜೀವನ ಎರಡರಲ್ಲೂ ಸಕಾರಾತ್ಮಕ ವಾತಾವರಣ ಇರಲಿದೆ.

ಇದನ್ನೂ ಓದಿ: ಚಿಕ್ಕ ಮಕ್ಕಳಿಗೆ ಕನ್ನಡಿ ತೋರಿಸಬಾರದು ಏಕೆ? ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ಕಾರಣ ಇಲ್ಲಿದೆ

ತುಲಾ ರಾಶಿಗೆ ಉದ್ಯೋಗದಲ್ಲಿ ಬಡ್ತಿ ಮತ್ತು ಅನಿರೀಕ್ಷಿತ ಧನಲಾಭ:

ತುಲಾ ರಾಶಿಯ ಜನರಿಗೆ ಆಗಸ್ಟ್ ತಿಂಗಳಲ್ಲಿ ಅನಿರೀಕ್ಷಿತ ಮೂಲಗಳಿಂದ ಲಾಭ ಹರಿದು ಬರಲಿದೆ. ಉದ್ಯೋಗಿಗಳಿಗೆ ಬಡ್ತಿ (Promotion) ಮತ್ತು ಸಂಬಳ ಏರಿಕೆಯಾಗುವ ಬಲವಾದ ಸಾಧ್ಯತೆಗಳಿವೆ. ಕೆಲಸದ ಸ್ಥಳದಲ್ಲಿ ಬಹಳ ದಿನಗಳಿಂದ ಬಾಕಿ ಉಳಿದಿದ್ದ ಕೆಲಸಗಳು ವೇಗವಾಗಿ ಪೂರ್ಣಗೊಳ್ಳಲಿವೆ. ಮನೆಯ ಒಳಗೂ ಮತ್ತು ಹೊರಗೂ ನಿರೀಕ್ಷೆಗೂ ಮೀರಿದ ಸಂತಸದ ವಾತಾವರಣ ಇರಲಿದೆ.

ಮಕರ ರಾಶಿಗೆ ಶುಭ ಕಾರ್ಯಗಳ ಸುವರ್ಣ ಕಾಲ:

ಮಕರ ರಾಶಿಯವರಿಗೆ ಈ ಗ್ರಹ ಸಂಚಾರವು ಆದಾಯವನ್ನು ದ್ವಿಗುಣಗೊಳಿಸಲಿದೆ. ಉದ್ಯೋಗಿಗಳಿಗೆ ಇದು ಅತ್ಯಂತ ಅನುಕೂಲಕರ ಸಮಯವಾಗಿದ್ದು, ಕಚೇರಿಯಲ್ಲಿ ನಿಮ್ಮ ಶ್ರಮಕ್ಕೆ ತಕ್ಕ ಮನ್ನಣೆ ಸಿಗಲಿದೆ. ನೀವು ಯೋಜಿಸಿದ ಪ್ರತಿಯೊಂದು ಕೆಲಸವೂ ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳಲಿದೆ. ಜೊತೆಗೆ, ಕುಟುಂಬದಲ್ಲಿ ಮದುವೆ ಅಥವಾ ಸೀಮಂತದಂತಹ ಶುಭ ಸಮಾರಂಭಗಳನ್ನು ಆಯೋಜಿಸುವ ಯೋಗವಿದೆ.

ವಿಶೇಷ ಸೂಚನೆ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜ್ಯೋತಿಷ್ಯ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ವೈಯಕ್ತಿಕ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು ಸಂಬಂಧಪಟ್ಟ ತಜ್ಞರ ಸಲಹೆ ಪಡೆಯುವುದು ಸೂಕ್ತ.

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪಿಒಕೆ ಚುನಾವಣೆ ವೇಳೆ ಹಿಂಸಾಚಾರ: ಮತಪೆಟ್ಟಿಗೆಗೆ ಬೆಂಕಿ, ಪಿಪಿಪಿ ಕಾರ್ಯಕರ್ತನ ಹತ್ಯೆ – Kannada News | POK Election Violence: Ballot Box Burned, PPP Worker Killed Amid Widespread Protests

ಮುಜಫರಾಬಾದ್,ಜುಲೈ 28: ಪಾಕ್ ಆಕ್ರಮಿತ ಕಾಶ್ಮೀರದಲ್ಲಿ (PoK) ಸೋಮವಾರ ನಡೆದ ಶಾಸಕಾಂಗ ಸಭೆಯ ಮೊದಲ ಹಂತದ ಚುನಾವಣೆ(Election)ಯು ತೀವ್ರ ಹಿಂಸಾಚಾರ, ಅಕ್ರಮಗಳ ಆರೋಪ ಹಾಗೂ ಭದ್ರತಾ ಪಡೆಗಳ ಬಲಪ್ರಯೋಗದ ನಡುವೆ ಮುಕ್ತಾಯಗೊಂಡಿದೆ. ಸುಮಾರು 38 ಲಕ್ಷ ಮತದಾರರನ್ನು ಹೊಂದಿರುವ ಈ ಪ್ರದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಹದಗೆಟ್ಟ ವಾತಾವರಣದಿಂದಾಗಿ ಆಡಳಿತವು ಇತಿಹಾಸದಲ್ಲೇ ಮೊದಲ ಬಾರಿಗೆ ಮತದಾನವನ್ನು ಮೂರು ಹಂತಗಳಾಗಿ ವಿಂಗಡಿಸಿದೆ.

ಭಿಂಬರ್‌ನಲ್ಲಿರುವ ಮತದಾನ ಕೇಂದ್ರವೊಂದರಲ್ಲಿ ರಾಜಕೀಯ ಗುಂಪುಗಳ ನಡುವೆ ಭೀಕರ ಘರ್ಷಣೆ ಸಂಭವಿಸಿದ್ದು, ಶಸ್ತ್ರಸಜ್ಜಿತ ಕಿಡಿಗೇಡಿಗಳು ಮತಪೆಟ್ಟಿಗೆಯನ್ನು ವಶಪಡಿಸಿಕೊಂಡು ಅದಕ್ಕೆ ಬೆಂಕಿ ಹಚ್ಚಿದ್ದಾರೆ. ಇದರಿಂದಾಗಿ ಒಳಗಿದ್ದ ಮತಗಳು ಸಂಪೂರ್ಣವಾಗಿ ಭಸ್ಮವಾಗಿವೆ. ಕೋಟ್ಲಿ ಜಿಲ್ಲೆಯ ನಕ್ಯಾಲ್‌ನಲ್ಲಿ ನಡೆದ ರಾಜಕೀಯ ಘರ್ಷಣೆಯಲ್ಲಿ ಪಾಕಿಸ್ತಾನ ಪೀಪಲ್ಸ್ ಪಾರ್ಟಿ (PPP) ಕಾರ್ಯಕರ್ತ ಮುಕ್ತಾರ್ ಯೂನಸ್ ಕೊಲ್ಲಲ್ಪಟ್ಟಿದ್ದಾರೆ. ರಾಜಕೀಯ ಪ್ರತಿಸ್ಪರ್ಧಿಗಳೇ ಈ ಕೊಲೆಗೆ ಕಾರಣ ಎಂದು ಪಿಪಿಪಿ ಆರೋಪಿಸಿದೆ.

LA-1 ಮಿರ್ಪುರ್ ಸೇರಿದಂತೆ ಹಲವು ಮತದಾನ ಕೇಂದ್ರಗಳಿಗೆ ಶಸ್ತ್ರಸಜ್ಜಿತ ವ್ಯಕ್ತಿಗಳು ಅಕ್ರಮವಾಗಿ ಪ್ರವೇಶಿಸಿ ಮತ ಎಣಿಕೆ ಪ್ರಕ್ರಿಯೆಗೆ ಅಡ್ಡಿಪಡಿಸಿದ್ದಾರೆ ಎಂದು ದೂರು ನೀಡಲಾಗಿದೆ.ರಾವಲಕೋಟ್‌ನಲ್ಲಿ ಪ್ರತಿಭಟನಾ ನಿರತ ನಾಗರಿಕರ ಮೇಲೆ ಭದ್ರತಾ ಪಡೆಗಳು ಗುಂಡು ಹಾರಿಸಿದ್ದು, ಹಲವು ಜನರು ಮೃತಪಟ್ಟು ಅನೇಕರು ಗಾಯಗೊಂಡಿದ್ದಾರೆ ಎಂದು ನಾಗರಿಕ ಹಕ್ಕುಗಳ ಸಂಘಟನೆ ‘ಜಮ್ಮು ಕಾಶ್ಮೀರ ಜಂಟಿ ಅವಾಮಿ ಕ್ರಿಯಾ ಸಮಿತಿ’ (JAAC) ಆರೋಪಿಸಿದೆ.

ಮತ್ತಷ್ಟು ಓದಿ: ಎಸ್ಐಆರ್ ಪ್ರಕ್ರಿಯೆಯಲ್ಲಿ ಅಕ್ರಮ: ಮುಖ್ಯ ಚುನಾವಣಾ ಅಧಿಕಾರಿಗೆ ಬಿಜೆಪಿ, ಜೆಡಿಎಸ್ ದೂರು

ಪಿಒಕೆಯಲ್ಲಿ ಸತತ ಎರಡು ತಿಂಗಳುಗಳಿಂದ ಭ್ರಷ್ಟಾಚಾರ, ಹಣದುಬ್ಬರ ಹಾಗೂ ಶೋಷಣೆಯ ವಿರುದ್ಧ ‘ಜೆಎಎಸಿ’ ನೇತೃತ್ವದಲ್ಲಿ ವ್ಯಾಪಕ ಸಾರ್ವಜನಿಕ ಪ್ರತಿಭಟನೆಗಳು ನಡೆಯುತ್ತಿದ್ದವು. 1947 ರ ನಂತರ ಬಂದು ನೆಲೆಸಿದ ನಿರಾಶ್ರಿತರಿಗೆ ಮೀಸಲಾಗಿರುವ 12 ಶಾಸಕಾಂಗ ಸ್ಥಾನಗಳನ್ನು ರದ್ದುಗೊಳಿಸುವುದು ಇವರ ಮುಖ್ಯ ಬೇಡಿಕೆಯಾಗಿತ್ತು. ಈ ಪ್ರತಿಭಟನೆಗಳನ್ನು ಹತೋಟಿಗೆ ತರಲಾಗದೆ ಪಾಕಿಸ್ತಾನ ಸರ್ಕಾರವು ಕಳೆದ ತಿಂಗಳು ಈ ಸಂಘಟನೆಯನ್ನು ನಿಷೇಧಿಸಿತ್ತು.

ತೀವ್ರ ಅಶಾಂತಿಯ ಹಿನ್ನೆಲೆಯಲ್ಲಿ ಮತದಾನದ ವೇಳಾಪಟ್ಟಿಯನ್ನು ಬದಲಾಯಿಸಲಾಗಿದ್ದು, ಅತಿ ಹೆಚ್ಚು ಪ್ರತಿಭಟನೆಗಳು ನಡೆದ ಪೂಂಚ್ ಜಿಲ್ಲೆಯಲ್ಲಿ ಆಗಸ್ಟ್ 10 ರಂದು ಅಂತಿಮ ಹಂತದ ಮತದಾನ ನಡೆಯಲಿದೆ.

ಜಮ್ಮು-ಕಾಶ್ಮೀರ ಮತ್ತು ಲಡಾಖ್ ಪ್ರದೇಶಗಳು ಭಾರತದ ಅವಿಭಾಜ್ಯ ಅಂಗವಾಗಿದ್ದು, ಪಾಕಿಸ್ತಾನವು ಪಿಒಕೆಯನ್ನು ಅಕ್ರಮವಾಗಿ ಆಕ್ರಮಿಸಿಕೊಂಡಿದೆ ಎಂದು ಭಾರತ ಸ್ಪಷ್ಟಪಡಿಸಿದೆ. ಪಿಒಕೆಯಲ್ಲಿ ನಡೆಯುತ್ತಿರುವ ಪ್ರತಿಭಟನೆಗಳು ಮತ್ತು ಹಿಂಸಾಚಾರವು ಇಸ್ಲಾಮಾಬಾದ್ ನೆರವೇರಿಸುತ್ತಿರುವ ದಶಕಗಳ ಶೋಷಣೆ ಹಾಗೂ ದಬ್ಬಾಳಿಕೆಯ ನೇರ ಪರಿಣಾಮವಾಗಿದೆ ಎಂದು ಭಾರತೀಯ ವಿದೇಶಾಂಗ ಸಚಿವಾಲಯ ಇತ್ತೀಚೆಗೆ ಕಟುವಾಗಿ ಟೀಕಿಸಿತ್ತು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

32 ತಂಡಗಳ ಟಿ20 ವಿಶ್ವಕಪ್​ಗೆ ಐಸಿಸಿ ಮಾಸ್ಟರ್ ಪ್ಲ್ಯಾನ್! – Kannada News | ICC Eyes 24 Team T20 World Cup by 2032

ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯು (ICC) ಪುರುಷರ ಟಿ20 ವಿಶ್ವಕಪ್ ಪಂದ್ಯಾವಳಿಯನ್ನು 24 ತಂಡಗಳಿಗೆ ವಿಸ್ತರಿಸಲು ಗಂಭೀರ ಚಿಂತನೆ ನಡೆಸುತ್ತಿದೆ. ಅಲ್ಲದೆ ಮುಂಬರುವ ದಿನಗಳಲ್ಲಿ ಇದನ್ನು ಬರೋಬ್ಬರಿ 32 ತಂಡಗಳ ಬೃಹತ್ ಟೂರ್ನಿಯನ್ನಾಗಿ ಮಾಡುವ ದೀರ್ಘಾವಧಿ ಯೋಜನೆಯನ್ನು ಹೊಂದಿದೆ. ಇಂಗ್ಲೆಂಡ್‌ನ ‘ದಿ ಟೆಲಿಗ್ರಾಫ್’ ಪತ್ರಿಕೆಯ ವರದಿಯ ಪ್ರಕಾರ, ಈ ಐತಿಹಾಸಿಕ ಬದಲಾವಣೆಯು 2032ರ ಆವೃತ್ತಿಯಿಂದ ಜಾರಿಗೆ ಬರುವ ಸಾಧ್ಯತೆಯಿದೆ.

ಕ್ರಿಕೆಟ್ ಆಟವನ್ನು ಜಾಗತಿಕ ಮಟ್ಟದಲ್ಲಿ ಮತ್ತಷ್ಟು ಜನಪ್ರಿಯಗೊಳಿಸಲು ಐಸಿಸಿ ಈಗ ಫಿಫಾ ವಿಶ್ವಕಪ್ ಮಾದರಿಯ ದೊಡ್ಡ ಹೆಜ್ಜೆಯನ್ನಿಟ್ಟಿದೆ. ಇತ್ತೀಚೆಗಷ್ಟೇ ಮುಕ್ತಾಯಗೊಂಡ 2026ರ ಟಿ20 ವಿಶ್ವಕಪ್‌ನಲ್ಲಿ ಅಸೋಸಿಯೇಟ್  ದೇಶಗಳು ನೀಡಿದ ಅದ್ಭುತ ಪ್ರದರ್ಶನವೇ ಈ ಹೊಸ ಯೋಜನೆಗೆ ಮುಖ್ಯ ಪ್ರೇರಣೆಯಾಗಿದೆ.

32 ತಂಡಗಳ ಟೂರ್ನಿ:

ಸದ್ಯದ ಮಾಹಿತಿ ಪ್ರಕಾರ, 24 ತಂಡಗಳ ವಿಶ್ವಕಪ್ ಪಂದ್ಯಾವಳಿಯು 2032 ರಲ್ಲಿ ಆರಂಭವಾಗಲಿದೆ. ಆದರೆ, ಆಡಳಿತ ಮಂಡಳಿಯು ಇದನ್ನು 2030 ರ ಆವೃತ್ತಿಯಲ್ಲೇ ತರಲು ಉತ್ಸುಕವಾಗಿದೆ.

ಕ್ರಿಕೆಟ್ ಅನ್ನು ಸಂಪೂರ್ಣ ಜಾಗತಿಕ ಕ್ರೀಡೆಯನ್ನಾಗಿ ಮಾಡಲು, ಟೂರ್ನಿಯನ್ನು ಭವಿಷ್ಯದಲ್ಲಿ 32 ರಾಷ್ಟ್ರಗಳಿಗೆ ವಿಸ್ತರಿಸುವ ಬದ್ಧತೆಯನ್ನು ಐಸಿಸಿ ಹೊಂದಿದೆ.

  • 2028 ರಲ್ಲಿ 20 ತಂಡಗಳ ಟೂರ್ನಿ
  • 2030 ಅಥವಾ 2032 ರಲ್ಲಿ 24 ತಂಡಗಳ ಟೂರ್ನಿ
  • 2034 ಅಥವಾ 2036 ರಲ್ಲಿ 32 ತಂಡಗಳ ಟೂರ್ನಿ.

ಹೇಗಿರಲಿದೆ ಟೂರ್ನಿ?

24 ತಂಡಗಳು ಕಣಕ್ಕಿಳಿದಾಗ ಟೂರ್ನಿಯು ಈ ಕೆಳಗಿನ ಹಂತಗಳಲ್ಲಿ ನಡೆಯುವ ಸಾಧ್ಯತೆಯಿದೆ:

  • ಲೀಗ್ ಹಂತ: ತಲಾ 4 ತಂಡಗಳಿರುವ 6 ಗ್ರೂಪ್‌ಗಳನ್ನು ಮಾಡಲಾಗುತ್ತದೆ.
  • ಸೂಪರ್ 12 ಹಂತ: ಪ್ರತಿ ಗ್ರೂಪ್‌ನಿಂದ ಅಗ್ರ 2 ತಂಡಗಳು (ಒಟ್ಟು 12 ತಂಡಗಳು) ಮುಂದಿನ ಹಂತಕ್ಕೆ ಅರ್ಹತೆ ಪಡೆಯುತ್ತವೆ.
  • ನಾಕೌಟ್ ಹಂತ: ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳು ಜರುಗಲಿವೆ.

ಈ ಬದಲಾವಣೆಗೆ ಕಾರಣಗಳೇನು?

ತಂಡಗಳ ವಿಸ್ತರಣೆಯ ಹಿಂದೆ ದೊಡ್ಡ ವಾಣಿಜ್ಯ ಲಾಭವಿದೆ. ಭಾರತದಂತಹ ದೊಡ್ಡ ಮಾರುಕಟ್ಟೆಯಿರುವ ತಂಡಗಳಿಗೆ ಹೆಚ್ಚಿನ ಪಂದ್ಯಗಳು ಸಿಗುವಂತೆ ಹೊಸ ಸ್ವರೂಪವನ್ನು ವಿನ್ಯಾಸಗೊಳಿಸಲಾಗುತ್ತದೆ. ಇದರಿಂದ ಪ್ರಸಾರ ಹಕ್ಕುಗಳ ಮೌಲ್ಯ ದುಪ್ಪಟ್ಟಾಗಲಿದೆ.

ಯಾಹೂ ಸ್ಪೋರ್ಟ್ಸ್​ ವರದಿಯ ಪ್ರಕಾರ, 2026ರ ವಿಶ್ವಕಪ್‌ನಲ್ಲಿ ಝಿಂಬಾಬ್ವೆ ತಂಡವು ಆಸ್ಟ್ರೇಲಿಯಾ ಹಾಗೂ ಶ್ರೀಲಂಕಾವನ್ನು ಸೋಲಿಸಿ ಅಚ್ಚರಿ ಮೂಡಿಸಿತ್ತು. ಇಟಲಿ, ನೇಪಾಳದಂತಹ ದೇಶಗಳು ದೊಡ್ಡ ತಂಡಗಳಿಗೆ ಕಠಿಣ ಪೈಪೋಟಿ ನೀಡಿದ್ದವು. ಹೀಗಾಗಿ ಸಣ್ಣ ದೇಶಗಳಿಗೆ ಹೆಚ್ಚಿನ ಅವಕಾಶ ನೀಡಲು ಐಸಿಸಿ ಮುಂದಾಗಿದೆ.

ಯಾವ ದೇಶಗಳಿಗೆ ಅತಿ ಹೆಚ್ಚು ಲಾಭ?

ಈ ನಿರ್ಧಾರದಿಂದಾಗಿ ಪ್ರಸ್ತುತ ಐಸಿಸಿ ಶ್ರೇಯಾಂಕದಲ್ಲಿರುವ ಉಗಾಂಡ, ಪಪುವಾ ನ್ಯೂಗಿನಿ, ಇಟಲಿ, ಹಾಂಗ್ ಕಾಂಗ್, ಜರ್ಮನಿ ಮತ್ತು ನೈಜೀರಿಯಾ ನಂತಹ ಉದಯೋನ್ಮುಖ ಕ್ರಿಕೆಟ್ ರಾಷ್ಟ್ರಗಳು ನೇರವಾಗಿ ವಿಶ್ವಕಪ್ ಆಡುವ ಸುವರ್ಣ ಅವಕಾಶ ಪಡೆಯಲಿವೆ.

ಇದನ್ನೂ ಓದಿ: CWG 2026: 2 ಚಿನ್ನ, 5 ಬೆಳ್ಳಿ, 3 ಕಂಚಿನ ಪದಕ ಗೆದ್ದ ಭಾರತ

ಒಟ್ಟಾರೆಯಾಗಿ ಹೇಳುವುದಾದರೆ, ಏಕದಿನ ವಿಶ್ವಕಪ್‌ನಲ್ಲಿ ತಂಡಗಳ ಸಂಖ್ಯೆಯನ್ನು ಕಡಿಮೆ ಮಾಡುತ್ತಿರುವ ಐಸಿಸಿ, ಟಿ20 ಮಾದರಿಯಲ್ಲಿ ಮಾತ್ರ ಕ್ರಾಂತಿಕಾರಿ ಜಾಗತೀಕರಣಕ್ಕೆ ಕೈಹಾಕಿದೆ. ಇದು ಕ್ರಿಕೆಟ್ ಪ್ರೇಮಿಗಳಿಗೆ ಮತ್ತಷ್ಟು ಮನರಂಜನೆ ನೀಡುವುದರಲ್ಲಿ ಅನುಮಾನವಿಲ್ಲ.

Source link

ತ್ರಿವಿಕ್ರಮ್ ಸಿನಿಮಾದಲ್ಲಿ ಶ್ರೀನಿಧಿ ಶೆಟ್ಟಿ; ‘ಕೆಜಿಎಫ್’ ಸುಂದರಿಗೆ ಸಿಗಲಿದೆಯೇ ಬಹುದೊಡ್ಡ ಬ್ರೇಕ್? – Kannada News | English Title: Srinidhi Shetty Bags a Solid Role in Trivikram Srinivas Next Film Aadarsha Kutumbam

‘ಕೆಜಿಎಫ್’ ಸಿನಿಮಾ ಮೂಲಕ ನಟಿ ಶ್ರೀನಿಧಿ ಶೆಟ್ಟಿ (Srinidhi Shetty) ದೇಶಾದ್ಯಂತ ಮನೆಮಾತಾಗಿದ್ದರು. ಯಶ್ ಜೊತೆಗಿನ ಅವರ ನಟನೆಗೆ ಸಿನಿಪ್ರೇಕ್ಷಕರು ಫಿದಾ ಆಗಿದ್ದರು. ಆದರೆ ‘ಕೆಜಿಎಫ್’ ಸರಣಿಯ ಭರ್ಜರಿ ಯಶಸ್ಸಿನ ನಂತರವೂ ಅವರಿಗೆ ನಿರೀಕ್ಷಿತ ಮಟ್ಟದ ದೊಡ್ಡ ಆಫರ್‌ಗಳು ಸಿಗಲಿಲ್ಲ. ಅವರ ಕೆರಿಯರ್ ಮುಂದಿನ ಹಂತಕ್ಕೆ ಕೊಂಡೊಯ್ಯಲು ಒಂದು ಭದ್ರವಾದ ಗೆಲುವು ಬೇಕಾಗಿದೆ.

ಇತ್ತೀಚೆಗೆ ಶ್ರೀನಿಧಿ ಶೆಟ್ಟಿ ತೆಲುಗು ಚಿತ್ರರಂಗದತ್ತ ಮುಖ ಮಾಡಿದ್ದರು. ಅವರ ಅಭಿನಯದ ‘ಹಿಟ್ 3’ ಮತ್ತು ‘ತೆಲುಗು ಕದಾ’ ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ಅಷ್ಟಾಗಿ ಕೈಹಿಡಿಯಲಿಲ್ಲ. ಈ ಸಿನಿಮಾಗಳು ನಟಿಗೆ ಸೂಕ್ತ ಯಶಸ್ಸು ತಂದುಕೊಡಲು ವಿಫಲವಾದವು. ಆದರೆ ಈಗ ಶ್ರೀನಿಧಿ ಶೆಟ್ಟಿ ಅವರಿಗೆ ಸ್ಟಾರ್ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ದೊಡ್ಡ ಆಸರೆಯಾಗಿದ್ದಾರೆ.

ತ್ರಿವಿಕ್ರಮ್ ನಿರ್ದೇಶನದ ಕೌಟುಂಬಿಕ ಸಿನಿಮಾ ‘ಆದರ್ಶ ಕುಟುಂಬಂ – ಎಕೆ 47’ ಚಿತ್ರಕ್ಕೆ ಶ್ರೀನಿಧಿ ಆಯ್ಕೆಯಾಗಿದ್ದಾರೆ. ಈ ಸಿನಿಮಾದಲ್ಲಿ ಹಿರಿಯ ನಟ ವೆಂಕಟೇಶ್ ದಗ್ಗುಬಾಟಿ ಮುಖ್ಯ ಭೂಮಿಕೆಯಲ್ಲಿದ್ದಾರೆ. ವೆಂಕಟೇಶ್ ‘ಚಿಟ್ಟಿ ಬಾಬು’ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಶ್ರೀನಿಧಿ ಶೆಟ್ಟಿ ‘ಸ್ವರ್ಣ’ ಎಂಬ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದ ಟೀಸರ್ ರಿಲೀಸ್ ಆಗಿದೆ.

ಇದನ್ನೂ ಓದಿ: ಇಶಾ ಫೌಂಡೇಶನ್​​ನಲ್ಲಿ ಶಿವರಾತ್ರಿ ಆಚರಿಸಿದ ‘ಕೆಜಿಎಫ್’ ಚೆಲುವೆ ಶ್ರೀನಿಧಿ ಶೆಟ್ಟಿ

ನಿರ್ದೇಶಕ ತ್ರಿವಿಕ್ರಮ್ ತಮ್ಮ ಸಿನಿಮಾಗಳಲ್ಲಿ ಹೆಣ್ಣುಮಕ್ಕಳ ಪಾತ್ರಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ. ಹೀಗಾಗಿ ಈ ಸಿನಿಮಾದಲ್ಲಿಯೂ ಶ್ರೀನಿಧಿ ಅವರಿಗೆ ಬಲಿಷ್ಠವಾದ ಪಾತ್ರ ಸಿಗುವ ಭರವಸೆ ಇದೆ. ಹಿಂದೆ ಬಂದ ‘ಅಲಾ ವೈಕುಂಠಪುರಮುಲೋ’ ಮತ್ತು ‘ಅತ್ತಾರಿಂಟಿಕಿ ದಾರೇದಿ’ ಸಿನಿಮಾಗಳಂತೆ ಈ ಚಿತ್ರವೂ ಸೂಪರ್ ಹಿಟ್ ಆಗುವ ನಿರೀಕ್ಷೆ ಇದೆ. ಈ ಸಿನಿಮಾ ಗೆದ್ದರೆ ಕನ್ನಡದ ಈ ಸುಂದರಿಯ ಅದೃಷ್ಟ ಬದಲಾಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಆಗಸ್ಟ್‌ 1ರಂದು ಮೈಸೂರಿಗೆ ಪ್ರಧಾನಿ ಮೋದಿ ಭೇಟಿ: 45 ಕೋಟಿ ರೂ ವೆಚ್ಚದ ವಿವೇಕಾನಂದ ಸ್ಮಾರಕ ಲೋಕಾರ್ಪಣೆ – Kannada News | PM Narendra Modi to Inaugurate Rs 45 Crore Swami Vivekananda Memorial in Mysuru on August 1

ಮೈಸೂರು, ಜುಲೈ 28: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಆಗಸ್ಟ್‌ 1ರಂದು ಮೈಸೂರಿಗೆ (Mysuru) ಭೇಟಿ ನೀಡಲಿದ್ದು, 45 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಸ್ವಾಮಿ ವಿವೇಕಾನಂದ ಸ್ಮಾರಕ ಹಾಗೂ ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಯುವ ಕೇಂದ್ರವನ್ನು ಉದ್ಘಾಟಿಸಲಿದ್ದಾರೆ. ಮೈಸೂರಿನ ದೇವರಾಜ ಮೊಹಲ್ಲಾದ ನಾರಾಯಣ ಶಾಸ್ತ್ರಿ ರಸ್ತೆಯಲ್ಲಿರುವ ಈ ಸ್ಮಾರಕದಲ್ಲಿ ಸ್ವಾಮಿ ವಿವೇಕಾನಂದರು ತಂಗಿದ್ದ ಐತಿಹಾಸಿಕ ಹಿನ್ನೆಲೆಯಿದ್ದು, ಅದನ್ನು ಸಾಂಸ್ಕೃತಿಕ ಮತ್ತು ಯುವಜನ ಚಟುವಟಿಕೆಗಳ ಕೇಂದ್ರವಾಗಿ ಅಭಿವೃದ್ಧಿಪಡಿಸಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಮೈಸೂರಿಗೆ ಆಗಮಿಸಿದ ಬಳಿಕ ಮೊದಲು ಸ್ವಾಮಿ ವಿವೇಕಾನಂದ ಸ್ಮಾರಕ ಹಾಗೂ ಸಾಂಸ್ಕೃತಿಕ ಯುವ ಕೇಂದ್ರವನ್ನು ಲೋಕಾರ್ಪಣೆ ಮಾಡಲಿದ್ದಾರೆ. ನಂತರ ರಾಮಕೃಷ್ಣ ಆಶ್ರಮಕ್ಕೆ ತೆರಳಿ ಸ್ವಾಮಿ ವಿವೇಕಾನಂದರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಲಿದ್ದಾರೆ.

ರಾಮಕೃಷ್ಣ ಆಶ್ರಮದಲ್ಲಿ ವಿಶೇಷ ಕಾರ್ಯಕ್ರಮ

ರಾಮಕೃಷ್ಣ ಆಶ್ರಮದ ಆಡಿಟೋರಿಯಂನಲ್ಲಿ ವಿಶೇಷ ವೇದಿಕೆ ಕಾರ್ಯಕ್ರಮ ಆಯೋಜಿಸಲಾಗಿದ್ದು, ಪ್ರಧಾನಿ ಮೋದಿ ಸುಮಾರು 30 ನಿಮಿಷಗಳ ಕಾಲ ಆಶ್ರಮದಲ್ಲಿ ಇರಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಸುಮಾರು 6 ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆಯಿದೆ. ಕಾರ್ಯಕ್ರಮಕ್ಕೆ ಆಗಮಿಸುವವರಿಗೆ ವಿಶೇಷ ಪಾಸ್ ವಿತರಿಸಲಾಗುತ್ತದೆ. ಪಾಸ್ ಹೊಂದಿರುವವರಿಗೆ ಮಾತ್ರ ಪ್ರವೇಶ ನೀಡಲಾಗುವುದು. ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಮೋದಿಗೆ ಅರುಣ್ ಯೋಗಿರಾಜ್ ಕೆತ್ತನೆಯ ವಿಶೇಷ ನೆನಪಿನ ಕಾಣಿಕೆ

ಈ ಸಂದರ್ಭದಲ್ಲಿ ಖ್ಯಾತ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತನೆಯ ಸ್ವಾಮಿ ವಿವೇಕಾನಂದರ ಪ್ರತಿಮೆಯನ್ನು ಪ್ರಧಾನಿ ಮೋದಿಯವರಿಗೆ ಉಡುಗೊರೆಯಾಗಿ ನೀಡಲಾಗುತ್ತದೆ. ಜೊತೆಗೆ ಮೈಸೂರಿನ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸುವ ವಿಶೇಷ ನೆನಪಿನ ಕಾಣಿಕೆಯನ್ನೂ ಪ್ರಧಾನಿಗೆ ಅರ್ಪಿಸಲಾಗುತ್ತದೆ ಎಂದು ಮೈಸೂರು ರಾಮಕೃಷ್ಣ ಆಶ್ರಮದ ಮುಕ್ತಿದಾನಂದ ಜೀ ಮಹಾರಾಜ್ ತಿಳಿಸಿದ್ದಾರೆ.

ಮೋದಿ ಜತೆ ಯಾರು ವೇದಿಕೆ ಹಂಚಿಕೊಳ್ಳಲಿದ್ದಾರೆ?

ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್, ಸಂಸದ ಯದುವೀರ್, ಶಾಸಕ ಹರೀಶ್ ಗೌಡ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವೇದಿಕೆ ಹಂಚಿಕೊಳ್ಳಲಿದ್ದಾರೆ. ವೇದಿಕೆಯಲ್ಲಿ ಕೆಲವೇ ಗಣ್ಯರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.

ಇತ್ತೀಚೆಗೆ ಬೆಂಗಳೂರಿಗೂ ಭೇಟಿ ನೀಡಿದ್ದ ಪ್ರಧಾನಿ

ಮೇ 10 ರಂದು ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿನ ಕನಕಪುರ ರಸ್ತೆಯಲ್ಲಿರುವ ಆರ್ಟ್ ಆಫ್ ಲಿವಿಂಗ್ ಆಶ್ರಮಕ್ಕೆ ಭೇಟಿ ನೀಡಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ 45ನೇ ವಾರ್ಷಿಕೋತ್ಸವ, ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರ 70ನೇ ಜನ್ಮೋತ್ಸವ ಹಾಗೂ ನೂತನ ಧ್ಯಾನ ಮಂದಿರ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಇದನ್ನೂ ಓದಿ: ವಿಕಸಿತ್ ವೈಬ್ರೆಂಟ್‌ ವಿಲೇಜ್‌-2026: ಯುವಕರೊಂದಿಗೆ ನರೇಂದ್ರ ಮೋದಿ ಸಂವಾದ ನೇರ ಪ್ರಸಾರ

ಇದೀಗ ಮೈಸೂರಿನಲ್ಲಿ ಸ್ವಾಮಿ ವಿವೇಕಾನಂದ ಸ್ಮಾರಕ ಉದ್ಘಾಟನೆ ಹಾಗೂ ರಾಮಕೃಷ್ಣ ಆಶ್ರಮದ ಕಾರ್ಯಕ್ರಮದಲ್ಲಿ ಭಾಗವಹಿಸುವುದಕ್ಕಾಗಿ ಮತ್ತೊಮ್ಮೆ ಕರ್ನಾಟಕ ಪ್ರವಾಸ ಕೈಗೊಳ್ಳುತ್ತಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮಾತುಕತೆ ವಿಫಲವಾದರೆ ಇರಾನ್ ವಿರುದ್ಧ ಮತ್ತೆ ಕಠಿಣ ಮಿಲಿಟರಿ ದಾಳಿ, ಇರಾನ್​ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಖಡಕ್ ಎಚ್ಚರಿಕೆ – Kannada News | Trump Warns of Strong Military Response if Iran Talks Collaps

ವಾಷಿಂಗ್ಟನ್, ಜುಲೈ 28: ಪ್ರಸ್ತುತ ನಡೆಯುತ್ತಿರುವ ರಾಜತಾಂತ್ರಿಕ ಮಾತುಕತೆಗಳು ಮತ್ತು ಚರ್ಚೆಗಳು ವಿಫಲವಾದರೆ ಇರಾನ್ ವಿರುದ್ಧ “ಅತ್ಯಂತ ಬಲವಾದ ಮಿಲಿಟರಿ ಕ್ರಮ” ಕೈಗೊಳ್ಳಲು ಅಮೆರಿಕ ಸಿದ್ಧವಾಗಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಎಚ್ಚರಿಸಿದ್ದಾರೆ. ಟೆಹ್ರಾನ್‌ಗೆ ಮತ್ತೊಂದು ಅವಕಾಶ ನೀಡುವ ಉದ್ದೇಶದಿಂದ ಶುಕ್ರವಾರ ನಡೆಸಬೇಕಿದ್ದ ಯೋಜಿತ ಮಿಲಿಟರಿ ದಾಳಿಗಳನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ ಎಂದು ಅವರು ದೃಢಪಡಿಸಿದ್ದಾರೆ.

‘ಆಕ್ಸಿಯೋಸ್’ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಟ್ರಂಪ್, “ನಾವು ಇರಾನ್ ಜೊತೆ ಅತ್ಯಂತ ಆಳವಾದ ಮಾತುಕತೆ ನಡೆಸುತ್ತಿದ್ದೇವೆ. ಆದರೆ ಈ ರಾಜತಾಂತ್ರಿಕತೆಗೆ ನಾವು ಹೆಚ್ಚಿನ ಸಮಯ ನೀಡುವುದಿಲ್ಲ. ಮಾತುಕತೆ ಫಲಿಸದಿದ್ದರೆ ತಕ್ಷಣವೇ ಬಲವಾದ ಮಿಲಿಟರಿ ಕಾರ್ಯಾಚರಣೆಗೆ ಮರಳುತ್ತೇವೆ” ಎಂದು ಸ್ಪಷ್ಟಪಡಿಸಿದ್ದಾರೆ.

ಮಧ್ಯಸ್ಥಿಕೆ ವಹಿಸಿರುವ ರಾಷ್ಟ್ರಗಳು: ಪ್ರಸ್ತುತ ವಾಷಿಂಗ್ಟನ್ ಮತ್ತು ಟೆಹ್ರಾನ್ ನಡುವೆ ಓಮನ್ ಪ್ರಮುಖವಾಗಿ ನೇರ ಹಾಗೂ ಪರೋಕ್ಷ ಮಾತುಕತೆಗಳ ಮಧ್ಯಸ್ಥಿಕೆ ವಹಿಸುತ್ತಿದೆ. ಇದರ ಜೊತೆಗೆ ಕತಾರ್, ಪಾಕಿಸ್ತಾನ, ಈಜಿಪ್ಟ್ ಹಾಗೂ ಟ್ರಂಪ್ ಅವರ ವಿಶೇಷ ರಾಯಭಾರಿ ಸ್ಟೀವ್ ವಿಟ್ಕಾಫ್ ಮತ್ತು ಹಿರಿಯ ಸಲಹೆಗಾರ ಜೇರೆಡ್ ಕುಶ್ನರ್ ಸಕ್ರಿಯ ಪಾತ್ರ ವಹಿಸುತ್ತಿದ್ದಾರೆ. ಜಾಗತಿಕ ತೈಲ ಸಾಗಣೆಗೆ ಅತ್ಯಂತ ನಿರ್ಣಾಯಕವಾಗಿರುವ ಹಾರ್ಮುಜ್ ಜಲಸಂಧಿಯನ್ನು ಸುಗಮ ಸಂಚಾರಕ್ಕೆ ಮುಕ್ತಗೊಳಿಸುವುದು ಮತ್ತು ಇರಾನ್ ಜೊತೆ ಹೊಸ ಪರಮಾಣು ಒಪ್ಪಂದ ರೂಪಿಸುವುದು ಈ ಮಾತುಕತೆಯ ಮುಖ್ಯ ಉದ್ದೇಶವಾಗಿದೆ.

ಮತ್ತಷ್ಟು ಓದಿ: ವೆನೆಜುವೆಲಾ ದರೋಡೆಕೋರನ ಮೇಲಿನ ವೈಮಾನಿಕ ದಾಳಿಯ ವಿಡಿಯೋ ಹಂಚಿಕೊಂಡ ಟ್ರಂಪ್

ಮಿಲಿಟರಿ ಕ್ರಮ ಕೈಗೊಳ್ಳುವ ಮೊದಲು ಶಮನಕ್ಕೆ ಮತ್ತೊಂದು ಅವಕಾಶ ನೀಡಿ ಎಂದು ಮಧ್ಯಸ್ಥಿಕೆ ರಾಷ್ಟ್ರಗಳು ಕೋರಿದ ಹಿನ್ನೆಲೆಯಲ್ಲಿ ದಾಳಿಯನ್ನು ಅಮಾನತಿನಲ್ಲಿಡಲಾಗಿದೆ ಎಂದು ಟ್ರಂಪ್ ತಿಳಿಸಿದ್ದಾರೆ. ಒಂದೆಡೆ ರಾಜತಾಂತ್ರಿಕ ಮಾತುಕತೆಗಳು ನಡೆಯುತ್ತಿದ್ದರೂ, ಮಂಗಳವಾರ ಮುಂಜಾನೆ ಉತ್ತರ ಇರಾಕ್‌ನ ಎರ್ಬಿಲ್‌ನಲ್ಲಿರುವ ಅಮೆರಿಕ ಕಾನ್ಸುಲೇಟ್ (ರಾಯಭಾರ ಕಚೇರಿ) ಬಳಿ ಇರಾನ್ ಬೆಂಬಲಿತ ಕನಿಷ್ಠ ನಾಲ್ಕು ಡ್ರೋನ್‌ಗಳು ಭೀಕರ ದಾಳಿ ನಡೆಸಿವೆ.

ದಾಳಿಯ ಪರಿಣಾಮವಾಗಿ ಖಲೀಫನ್ ಮತ್ತು ಸೊರಾನ್ ಪ್ರದೇಶಗಳಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದೆ. ಈ ಶಂಕಿತ ಇರಾನಿ ಡ್ರೋನ್ ದಾಳಿಗೆ ತಕ್ಷಣವೇ ತಿರುಗೇಟು ನೀಡಿದ ಅಮೆರಿಕ, ಎರ್ಬಿಲ್ ಆಕಾಶಭಾಗದಲ್ಲಿ 10 ಕ್ಕೂ ಹೆಚ್ಚು ಯುಎಸ್ ಯುದ್ಧವಿಮಾನಗಳು ಮತ್ತು ಡ್ರೋನ್‌ಗಳನ್ನು ಗಸ್ತು ತಿರುಗಲು ನಿಯೋಜಿಸಿದೆ.

ಇರಾನ್ ಮತ್ತು ಅಮೆರಿಕ ನಡುವಿನ ಈ ಸಂಘರ್ಷ ಶಮನದ ಸೂಚನೆ ಸಿಗುತ್ತಿದ್ದಂತೆಯೇ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಗಳು ಪ್ರತಿ ಬ್ಯಾರೆಲ್‌ಗೆ 92 ಡಾಲರ್‌ಗೆ ಇಳಿಕೆಯಾಗಿದ್ದವು. ಆದರೆ ಇರಾಕ್‌ನಲ್ಲಿ ಮತ್ತೆ ಡ್ರೋನ್ ದಾಳಿಗಳು ವರದಿಯಾಗಿರುವುದರಿಂದ ಇಂಧನ ಮಾರುಕಟ್ಟೆಯಲ್ಲಿ ಮತ್ತೆ ಅನಿಶ್ಚಿತತೆ ಮೂಡುವ ಲಕ್ಷಣಗಳು ಕಂಡುಬರುತ್ತಿವ ಮಧ್ಯಪ್ರಾಚ್ಯದಲ್ಲಿ ಯುದ್ಧ ಸಂಪೂರ್ಣವಾಗಿ ಭುಗಿಲೆದ್ದರೆ ಜಾಗತಿಕ ಪೂರೈಕೆ ಸರಪಳಿ ಹಾಗೂ ಆರ್ಥಿಕತೆಯ ಮೇಲೆ ತೀವ್ರ ಪರಿಣಾಮ ಬೀರುವ ಭೀತಿಯಿಂದಾಗಿ ಜಾಗತಿಕ ನಾಯಕರು ರಾಜತಾಂತ್ರಿಕ ಪರಿಹಾರಕ್ಕೆ ತೀವ್ರ ಒತ್ತಡ ಹೇರುತ್ತಿದ್ದಾರೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಚುನಾವಣೆಗೆ ಸ್ಪರ್ಧಿಸಲು ಹೇಮಾ ಮಾಲಿನಿ ಹಾಕಿದ್ದ ಒಂದೇ ಒಂದು ಷರತ್ತು ಏನು? – Kannada News | Hema Malini Reveals Her One Strict Condition Before Joining Electoral Politics

ಬಾಲಿವುಡ್‌ನ ‘ಡ್ರೀಮ್ ಗರ್ಲ್’ ಹೇಮಾ ಮಾಲಿನಿ  (Hema Malini) ಇಂದು ಯಶಸ್ವಿ ರಾಜಕಾರಣಿ. ಅವರು ಮಥುರಾ ಲೋಕಸಭಾ ಕ್ಷೇತ್ರದ ಸಂಸದೆಯಾಗಿ ಸಕ್ರಿಯರಾಗಿದ್ದಾರೆ. ಆದರೆ ಅವರ ರಾಜಕೀಯ ಪ್ರಯಾಣ ಅಷ್ಟು ಸುಲಭವಾಗಿರಲಿಲ್ಲ. ಆರಂಭದಲ್ಲಿ ಅವರ ಪತಿ ಧರ್ಮೇಂದ್ರ ಅವರಿಗೆ ರಾಜಕೀಯ ಸೇರುವುದು ಇಷ್ಟವಿರಲಿಲ್ಲ. ಇತ್ತೀಚಿನ ಸಂದರ್ಶನವೊಂದರಲ್ಲಿ ಹೇಮಾ ಮಾಲಿನಿ ತಮ್ಮ ರಾಜಕೀಯ ಬದುಕಿನ ಆಸಕ್ತಿದಾಯಕ ವಿಷಯಗಳನ್ನು ಹಂಚಿಕೊಂಡಿದ್ದಾರೆ.

ಧರ್ಮೇಂದ್ರ ಅವರಿಗೆ ಹೇಮಾ ಮಾಲಿನಿ ಸುರಕ್ಷತೆಯ ಬಗ್ಗೆ ಭೀತಿ ಇತ್ತು. ರಾಜಕೀಯ ಪ್ರಚಾರದ ವೇಳೆ ಸೇರುತ್ತಿದ್ದ ಜನಸಂದಣಿಯನ್ನು ನೋಡಿ ಅವರು ಹೆದರುತ್ತಿದ್ದರು. ಹೆಲಿಕಾಪ್ಟರ್ ಪ್ರಯಾಣದ ಬಗ್ಗೆಯೂ ಅವರಿಗೆ ಆತಂಕವಿತ್ತು. ರಾಜಕೀಯ ನಿನಗೆ ಅಗತ್ಯವಿದೆಯೇ ಎಂದು ಧರ್ಮೇಂದ್ರ ಕೇಳುತ್ತಿದ್ದರು. ಆದರೆ ಪಕ್ಷದ ಕರೆಯ ಮೇರೆಗೆ ಹೇಮಾ ಮಾಲಿನಿ ಪ್ರಚಾರಕ್ಕೆ ಹೋಗುತ್ತಿದ್ದರು.

ಹೇಮಾ ಮಾಲಿನಿ 1999 ರಲ್ಲಿ ಮೊದಲ ಬಾರಿಗೆ ವಿನೋದ್ ಖನ್ನಾ ಪರ ಪ್ರಚಾರ ಮಾಡಿದರು. ಈ ಸಂದರ್ಭದಲ್ಲಿ ಅವರಿಗೆ ತಮ್ಮ ಜನಪ್ರಿಯತೆಯ ಅರಿವಾಯಿತು. ಜನ ತನ್ನನ್ನು ನೋಡಲು ಇಷ್ಟೊಂದು ಸಂಖ್ಯೆಯಲ್ಲಿ ಬರುತ್ತಿರುವುದನ್ನು ಕಂಡು ಅವರು ಬೆರಗಾಗಿದ್ದರು. ಇದು ಅವರಿಗೆ ರಾಜಕೀಯಕ್ಕೆ ಬರಲು ಪ್ರೇರಣೆ ನೀಡಿತು.

ಅವರ ತಾಯಿ ಕೂಡ ಬಿಜೆಪಿಗೆ ಸೇರಲು ಪ್ರೋತ್ಸಾಹ ನೀಡಿದ್ದರು. ಅಟಲ್ ಬಿಹಾರಿ ವಾಜಪೇಯಿ ಮತ್ತು ಅಡ್ವಾಣಿ ಅವರಂತಹ ನಾಯಕರಿರುವ ಕಾರಣ ಬಿಜೆಪಿ ಒಳ್ಳೆಯ ಪಕ್ಷ ಎಂದು ತಾಯಿ ಹೇಳಿದ್ದರು. ದೇಶಕ್ಕಾಗಿ ಏನಾದರೂ ಸೇವೆ ಮಾಡಲು ಇದು ಒಳ್ಳೆಯ ಅವಕಾಶ ಎಂದು ತಾಯಿ ಬೆನ್ನು ತಟ್ಟಿದ್ದರು.

ಇದನ್ನೂ ಓದಿ: ಧರ್ಮೇಂದ್ರಗೆ ಮರಣೋತ್ತರ ಪದ್ಮವಿಭೂಷಣ ಪ್ರಶಸ್ತಿ; ಭಾವುಕರಾದ ಹೇಮಾ ಮಾಲಿನಿ ಮಗಳು

ಕೊನೆಗೆ ಹೇಮಾ ಮಾಲಿನಿ ರಾಜಕೀಯಕ್ಕೆ ಬರಲು ಒಂದು ಷರತ್ತು ವಿಧಿಸಿದರು. ತಾನು ಸ್ಪರ್ಧಿಸುವುದಾದರೆ ಕೇವಲ ಮಥುರಾ ಕ್ಷೇತ್ರದಿಂದ ಮಾತ್ರ ಎಂದು ಅವರು ಪಟ್ಟು ಹಿಡಿದರು. ಏಕೆಂದರೆ ಅವರು ಕೃಷ್ಣನ ಪರಮ ಭಕ್ತರಾಗಿದ್ದರು. ಮೊದಲು ಆ ಕ್ಷೇತ್ರ ಬೇರೆಯವರಿಗೆ ನಿಗದಿಯಾಗಿತ್ತು. ಆದರೆ ನಂತರ ಅದನ್ನು ಹೇಮಾ ಮಾಲಿನಿ ಅವರಿಗೆ ನೀಡಲಾಯಿತು. ಸುಷ್ಮಾ ಸ್ವರಾಜ್ ಮತ್ತು ಅರುಣ್ ಜೇಟ್ಲಿ ತಮಗೆ ತುಂಬಾ ಬೆಂಬಲ ನೀಡಿದ್ದರು ಎಂದು ಹೇಮಾ ಮಾಲಿನಿ ನೆನಪಿಸಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 7:53 am, Tue, 28 July 26

Source link

CWG 2026: 2 ಚಿನ್ನ, 5 ಬೆಳ್ಳಿ, 3 ಕಂಚಿನ ಪದಕ ಗೆದ್ದ ಭಾರತ – Kannada News | CWG 2026: India Shines With 10 Medals

ಸ್ಕಾಟ್‌ಲ್ಯಾಂಡ್‌ನ ಗ್ಲಾಸ್ಗೋದಲ್ಲಿ ನಡೆಯುತ್ತಿರುವ 2026ರ ಕಾಮನ್‌ವೆಲ್ತ್ ಗೇಮ್ಸ್​ನಲ್ಲಿ ಭಾರತೀಯ ಕ್ರೀಡಾಪಟುಗಳು ಅದ್ಭುತ ಪ್ರದರ್ಶನವನ್ನು ಮುಂದುವರಿಸಿದ್ದಾರೆ. ಕ್ರೀಡಾಕೂಟದ ಆರಂಭಿಕ ದಿನಗಳಲ್ಲೇ ಭಾರತವು 2 ಚಿನ್ನ, 5 ಬೆಳ್ಳಿ ಹಾಗೂ 3 ಕಂಚು ಸೇರಿದಂತೆ ಒಟ್ಟು 10 ಪದಕಗಳನ್ನು ತನ್ನ ಮುಡಿಗೇರಿಸಿಕೊಂಡಿದೆ. ವೇಟ್‌ಲಿಫ್ಟಿಂಗ್ ಮತ್ತು ಪ್ಯಾರಾ ಅಥ್ಲೆಟಿಕ್ಸ್ ವಿಭಾಗಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿರುವ ಭಾರತೀಯ ಕ್ರೀಡಾಪಟುಗಳು ದೇಶದ ಕೀರ್ತಿ ಪತಾಕೆಯನ್ನು ಮುಗಿಲೆತ್ತರಕ್ಕೆ ಹಾರಿಸಿದ್ದಾರೆ.

ಗೋಲ್ಡನ್ ಗರ್ಲ್ಸ್​:

ಮೀರಾಬಾಯಿ ಚಾನು ಮಹಿಳೆಯರ 48 ಕೆಜಿ ವಿಭಾಗದಲ್ಲಿ ಚಿನ್ನ ಗೆದ್ದು ಇತಿಹಾಸ ಸೃಷ್ಟಿಸಿದ್ದಾರೆ. ಇದು ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಅವರ ಸತತ ಮೂರನೇ ಚಿನ್ನದ ಪದಕವಾಗಿದೆ.

ಮತ್ತೊಂದೆಡೆ, ಪ್ಯಾರಾ ಅಥ್ಲೆಟಿಕ್ಸ್‌ನ ಮಹಿಳೆಯರ ಶಾಟ್‌ಪುಟ್ F57 ವಿಭಾಗದಲ್ಲಿ ಶರ್ಮಿಳಾ ಧಂಕರ್ ಚಿನ್ನದ ಪದಕ ಮುಡಿಗೇರಿಸಿಕೊಂಡು ದೇಶ ಹೆಮ್ಮೆಪಡುವಂತೆ ಮಾಡಿದ್ದಾರೆ.

ವೇಟ್​ಲಿಫ್ಟರ್​ಗಳ ಬೆಳ್ಳಿ ಬೇಟೆ:

ಭಾರತ ಗೆದ್ದಿರುವ 5 ಬೆಳ್ಳಿ ಪದಕಗಳಲ್ಲಿ 4 ಪದಕಗಳು ವೇಟ್‌ಲಿಫ್ಟಿಂಗ್‌ನಲ್ಲೇ ಬಂದಿರುವುದು ವಿಶೇಷ.

  • ರಿಷಿಕಾಂತ ಸಿಂಗ್ (ಪುರುಷರ 60 ಕೆಜಿ ವೇಟ್‌ಲಿಫ್ಟಿಂಗ್)
  • ಮುತ್ತುಪಾಂಡಿ ರಾಜ (ಪುರುಷರ 65 ಕೆಜಿ ವೇಟ್‌ಲಿಫ್ಟಿಂಗ್)
  • ಜ್ಞಾನೇಶ್ವರಿ ಯಾದವ್ (ಮಹಿಳೆಯರ 53 ಕೆಜಿ ವೇಟ್‌ಲಿಫ್ಟಿಂಗ್)
  • ವಲ್ಲೂರಿ ಅಜಯ್ ಬಾಬು (ಪುರುಷರ 79 ಕೆಜಿ ವೇಟ್‌ಲಿಫ್ಟಿಂಗ್)
  • ಸರ್ವೇಶ್ ಕುಶಾರೆ (ಪುರುಷರ ಹೈಜಂಪ್ – ಅಥ್ಲೆಟಿಕ್ಸ್)

ಕಂಚಿನ ಕಮಾಲ್:

ಈ ಬಾರಿಯ ಕ್ರೀಡಾಕೂಟದಲ್ಲಿ ಭಾರತಕ್ಕೆ ಮೊದಲ ಪದಕ ತಂದುಕೊಟ್ಟಿದ್ದು ಪ್ಯಾರಾ ಪವರ್‌ಲಿಫ್ಟರ್ ಝಂಡು ಕುಮಾರ್. ಅವರು ಪುರುಷರ ಹೆವಿವೈಟ್ ಪ್ಯಾರಾಲಿಫ್ಟಿಂಗ್​ ವಿಭಾಗದಲ್ಲಿ ಕಂಚು ಗೆದ್ದು ಸಾಧನೆಗೆ ನಾಂದಿ ಹಾಡಿದರು.

ಇವರ ಜೊತೆಗೆ ಮಹಿಳೆಯರ 58 ಕೆಜಿ ವೇಟ್‌ಲಿಫ್ಟಿಂಗ್‌ನಲ್ಲಿ ಬಿಂದ್ಯಾರಾಣಿ ದೇವಿ ಹಾಗೂ ಮಹಿಳೆಯರ ಶಾಟ್‌ಪುಟ್ F57 ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ ಶಿಲ್ಪಾ ಕೆ. ಶೈಲಾ ಕಂಚಿನ ಪದಕಗಳನ್ನು ಗೆದ್ದಿದ್ದಾರೆ.

ಈವರೆಗೆ ಭಾರತ ಗೆದ್ದಿರುವ ಪಕದಗಳ ಪಟ್ಟಿ ಇಲ್ಲಿದೆ (ಜುಲೈ 27 ರವರೆಗೆ):

ಕ್ರಮ ಸಂಖ್ಯೆ ಕ್ರೀಡಾಪಟುವಿನ ಹೆಸರು ಕ್ರೀಡೆ / ವಿಭಾಗ ಪದಕ
1 ಮೀರಾಬಾಯಿ ಚಾನು ಮಹಿಳೆಯರ 48 ಕೆಜಿ ವೇಟ್‌ಲಿಫ್ಟಿಂಗ್ 🥇 ಚಿನ್ನ
2 ಶರ್ಮಿಳಾ ಧಂಕರ್ ಮಹಿಳೆಯರ ಶಾಟ್‌ಪುಟ್ F57 ಪ್ಯಾರಾ ಅಥ್ಲೆಟಿಕ್ಸ್ 🥇 ಚಿನ್ನ
3 ರಿಷಿಕಾಂತ ಸಿಂಗ್  ಪುರುಷರ 60 ಕೆಜಿ ವೇಟ್‌ಲಿಫ್ಟಿಂಗ್ 🥈 ಬೆಳ್ಳಿ
4 ಮುತ್ತುಪಾಂಡಿ ರಾಜ ಪುರುಷರ 65 ಕೆಜಿ ವೇಟ್‌ಲಿಫ್ಟಿಂಗ್ 🥈 ಬೆಳ್ಳಿ
5 ಜ್ಞಾನೇಶ್ವರಿ ಯಾದವ್ ಮಹಿಳೆಯರ 53 ಕೆಜಿ ವೇಟ್‌ಲಿಫ್ಟಿಂಗ್ 🥈 ಬೆಳ್ಳಿ
6 ವಲ್ಲೂರಿ ಅಜಯ್ ಬಾಬು ಪುರುಷರ 79 ಕೆಜಿ ವೇಟ್‌ಲಿಫ್ಟಿಂಗ್ 🥈 ಬೆಳ್ಳಿ
7 ಸರ್ವೇಶ್ ಕುಶಾರೆ ಪುರುಷರ ಹೈಜಂಪ್ (ಅಥ್ಲೆಟಿಕ್ಸ್) 🥈 ಬೆಳ್ಳಿ
8 ಝಂಡು ಕುಮಾರ್ ಪುರುಷರ ಹೆವಿವೈಟ್ ಪ್ಯಾರಾ ಪವರ್‌ಲಿಫ್ಟಿಂಗ್ 🥉 ಕಂಚು
9 ಬಿಂದ್ಯಾರಾಣಿ ದೇವಿ ಮಹಿಳೆಯರ 58 ಕೆಜಿ ವೇಟ್‌ಲಿಫ್ಟಿಂಗ್ 🥉 ಕಂಚು
10 ಶಿಲ್ಪಾ ಕೆ. ಶೈಲಾ ಮಹಿಳೆಯರ ಶಾಟ್‌ಪುಟ್ F57 ಪ್ಯಾರಾ ಅಥ್ಲೆಟಿಕ್ಸ್ 🥉 ಕಂಚು

ಇದನ್ನೂ ಓದಿ: ಟೀಮ್ ಇಂಡಿಯಾಗೆ ಇಬ್ಬರು ರಿಟರ್ನ್​, ಮೂವರು ಅಲಭ್ಯ!

ಈ 10 ಪದಕಗಳೊಂದಿಗೆ ಸದ್ಯ ಭಾರತ ಪದಕ ಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದೆ. ಇನ್ನುಳಿದ ಸ್ಪರ್ಧೆಗಳ ಮೂಲಕ ಮತ್ತಷ್ಟು ಪದಕ ಗೆದ್ದು ಟಾಪ್-5 ನಲ್ಲಿ ಕಾಣಿಸಿಕೊಳ್ಳುವ ನಿರೀಕ್ಷೆಯಿದೆ.

Source link

‘ರಾಮಾಯಣ’ ಶೂಟಿಂಗ್ ಸೆಟ್‌ನಲ್ಲಿ ಶಿವನ ಹಾಡುಗಳನ್ನು ದೊಡ್ಡದಾಗಿ ಹಾಕುತ್ತಿದ್ದ ನಟ ಯಶ್ – Kannada News | Yash Plays Loud Shiva Songs on Ramayana Set Ranbir Hints at Second Half Face Off

ನಿತೇಶ್ ತಿವಾರಿ ನಿರ್ದೇಶನದ ‘ರಾಮಾಯಣ’ ಚಿತ್ರದ ಮೇಲಿನ ಕುತೂಹಲ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸ್ಯಾನ್ ಡಿಯಾಗೋ ಕಾಮಿಕ್-ಕಾನ್ ಕಾರ್ಯಕ್ರಮದಲ್ಲಿ ಚಿತ್ರದ ನಾಯಕರಾದ ರಣಬೀರ್ ಕಪೂರ್ ಮತ್ತು ಯಶ್ (Yash) ಭಾಗವಹಿಸಿದ್ದರು. ಈ ವೇಳೆ ಸಿನಿಮಾ ಮೇಕಿಂಗ್ ಕುರಿತು ಹಲವು ಆಸಕ್ತಿದಾಯಕ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ರಾವಣನ ಪಾತ್ರಕ್ಕಾಗಿ ತಾವೂ ನಡೆಸುತ್ತಿದ್ದ ವಿಶೇಷ ಸಿದ್ಧತೆಗಳ ಬಗ್ಗೆ ಯಶ್ ಮುಕ್ತವಾಗಿ ಮಾತನಾಡಿದ್ದಾರೆ. ಚಿತ್ರದ ಶೂಟಿಂಗ್ ಸೆಟ್ ಅನುಭವಗಳನ್ನು ಹಂಚಿಕೊಂಡಿದ್ದಾರೆ.

ರಾವಣನ ಪಾತ್ರಕ್ಕೆ ಜೀವ ತುಂಬಲು ಯಶ್ ಪ್ರತಿದಿನ ಒಂದು ವಿಶೇಷ ಕೆಲಸ ಮಾಡುತ್ತಿದ್ದರು. ರಾವಣನು ಪರಮ ಶಿವಭಕ್ತನಾಗಿದ್ದ ಕಾರಣ ಸೆಟ್‌ನಲ್ಲಿ ದೊಡ್ಡ ಸ್ಪೀಕರ್‌ಗಳನ್ನು ತರಿಸುತ್ತಿದ್ದರು. ಅದರಲ್ಲಿ ಶಿವನ ಭಕ್ತಿಗೀತೆಗಳನ್ನು ಅತಿ ಹೆಚ್ಚಿನ ಸೌಂಡ್‌ನಲ್ಲಿ ಹಾಕುತ್ತಿದ್ದರು. ಆ ಹಾಡುಗಳನ್ನು ಕೇಳುತ್ತಾ ರಾವಣನ ಪಾತ್ರದ ಮೂಡ್‌ಗೆ ಹೋಗುತ್ತಿದ್ದರು. ಸಂಗೀತದ ಸೌಂಡ್ ಎಷ್ಟು ಹೆಚ್ಚಾಗಿರುತ್ತಿತ್ತೆಂದರೆ ಸೆಟ್‌ನಲ್ಲಿದ್ದ ಉಳಿದವರು ಮಾತನಾಡಲು ಕಷ್ಟಪಡುತ್ತಿದ್ದರು. ಯಶ್ ಈ ತಮಾಷೆಯ ನೆನಪನ್ನು ನಗುತ್ತಲೇ ನೆನಪಿಸಿಕೊಂಡಿದ್ದಾರೆ.

ಚಿತ್ರದಲ್ಲಿ ಶ್ರೀರಾಮ ಮತ್ತು ರಾವಣನ ಮುಖಾಮುಖಿ ದೃಶ್ಯಗಳು ಇನ್ನೂ ಚಿತ್ರೀಕರಣಗೊಂಡಿಲ್ಲ. ಕಥೆಯ ಪ್ರಕಾರ ಇವರಿಬ್ಬರ ಭೇಟಿ ಚಿತ್ರದ ದ್ವಿತೀಯಾರ್ಧದಲ್ಲಿ ಬರುವ ಸಾಧ್ಯತೆ ಇದೆ. ಚಿತ್ರದ ಕೊನೆಯ ಭಾಗದಲ್ಲಿ ಇವರಿಬ್ಬರ ನಡುವೆ ಭೀಕರ ಯುದ್ಧ ನಡೆಯಲಿದೆ. ಈ ಕಾರಣದಿಂದ ರಣಬೀರ್ ಮತ್ತು ಯಶ್ ಇನ್ನೂ ಒಟ್ಟಿಗೆ ತೆರೆ ಹಂಚಿಕೊಂಡಿಲ್ಲ. ಯಶ್ ಅವರ ಸ್ಟಾರ್‌ಡಮ್ ಮತ್ತು ನಟನೆಯನ್ನು ರಣಬೀರ್ ಕಪೂರ್ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಈ ಬಾರಿ ಪ್ರೇಕ್ಷಕರು ವಿಭಿನ್ನ ಶೈಲಿಯ ರಾವಣನನ್ನು ನೋಡಲಿದ್ದಾರೆ ಎಂದು ರಣಬೀರ್ ಹೇಳಿದ್ದಾರೆ.

ಇದನ್ನೂ ಓದಿ: ಹೊಸ ರೀತಿಯಲ್ಲಿ ರಾವಣನ ಪಾತ್ರ ತೋರಿಸಲು ಹೊರಟ ಯಶ್

ರಾವಣನ ಭಾರವಾದ ಕಿರೀಟ ಮತ್ತು ಕಾಸ್ಟ್ಯೂಮ್ ಧರಿಸಿ ನಟಿಸುವುದು ದೊಡ್ಡ ಸವಾಲಾಗಿತ್ತು ಎಂದು ಯಶ್ ತಿಳಿಸಿದ್ದಾರೆ. ಆಧುನಿಕ ತಂತ್ರಜ್ಞಾನ ಬಳಸಿ ಇಡೀ ಚಿತ್ರವನ್ನು ಪ್ರಾಮಾಣಿಕವಾಗಿ ತೆರೆಗೆ ತರಲಾಗುತ್ತಿದೆ. ಚಿತ್ರದಲ್ಲಿ ಸಾಯಿ ಪಲ್ಲವಿ ಸೀತೆಯಾಗಿ ಮತ್ತು ಸನ್ನಿ ಡಿಯೋಲ್ ಹನುಮಂತನಾಗಿ ನಟಿಸುತ್ತಿದ್ದಾರೆ. ಚಿತ್ರದ ಮೊದಲ ಭಾಗವು ಈ ವರ್ಷದ ದೀಪಾವಳಿಗೆ ಬಿಡುಗಡೆಯಾಗಲಿದೆ. ಎರಡನೇ ಭಾಗವು ಮುಂದಿನ ವರ್ಷದ ದೀಪಾವಳಿಗೆ ಚಿತ್ರಮಂದಿರಗಳಲ್ಲಿ ಅಪ್ಪಳಿಸಲಿದೆ.

ಪ್ರಶ್ನೆ: ರಾಮಾಯಣ ರಿಲೀಸ್ ಯಾವಾಗ? 
ಉತ್ತರ:
ದೀಪಾವಳಿ

ಪ್ರಶ್ನೆ: ರಾಮಾಯಣದಲ್ಲಿ ರಾವಣ ಪಾತ್ರಧಾರಿ ಯಾರು? 
ಉತ್ತರ:
ಯಶ್​

ಪ್ರಶ್ನೆ: ರಾಮಾಯಣದಲ್ಲಿ ರಾಮನ ಪಾತ್ರಧಾರಿ ಯಾರು?
ಉತ್ತರ:
ರಣಬೀರ್ ಕಪೂರ್

Source link

Exit mobile version