CWG 2026: ವೇಟ್‌ಲಿಫ್ಟಿಂಗ್‌ನಲ್ಲೇ ಭಾರತಕ್ಕೆ 5ನೇ ಪದಕ; ಕಂಚು ಗೆದ್ದ ಬಿಂದಿಯಾರಾಣಿ – Kannada News | Bindyarani Devi Claims Bronze in 2026 CWG Weightlifting: India’s 6th Medal!

ಇದು ವೇಟ್‌ಲಿಫ್ಟಿಂಗ್‌ನಲ್ಲಿ ಭಾರತಕ್ಕೆ ಲಭಿಸಿದ ಐದನೇ ಪದಕವಾಗಿದೆ. ಬಿಂದಿಯಾರಾಣಿ ದೇವಿ ಅವರಿಗೂ ಮೊದಲು ಜ್ಞಾನೇಶ್ವರಿ ಯಾದವ್ 53 ಕೆಜಿ ವೇಟ್‌ಲಿಫ್ಟಿಂಗ್ ವಿಭಾಗದಲ್ಲಿ ಬೆಳ್ಳಿ ಪದಕ, ಮೀರಾಬಾಯಿ ಚಾನು ಚಿನ್ನದ ಪದಕ, ರಿಷಿಕಾಂತ ಸಿಂಗ್ ಚಾನ್‌ಬಮ್ ಬೆಳ್ಳಿ ಪದಕ, ರಾಜ ಮುತ್ತುಪಾಂಡಿ ಬೆಳ್ಳಿ ಪದಕ, ಝಂಡು ಕುಮಾರ್ ಕಂಚಿನ ಪದಕ ಗೆದ್ದಿದ್ದರು(PC-PTI).

Source link

ಕೇಸ್​ಗಳನ್ನು ಹಿಂಪಡೆಯದಿದ್ದರೆ ನಾಳೆಯಿಂದ ಮತ್ತೆ ಪ್ರತಿಭಟನೆ; ಕೇಂದ್ರ ಸರ್ಕಾರಕ್ಕೆ ಸಿಜೆಪಿ ಎಚ್ಚರಿಕೆ – Kannada News | CJP warns of fresh protests from Tomorrow if cases against protesters not withdrawn

ನವದೆಹಲಿ, ಜುಲೈ 27: ದೆಹಲಿಯ ಜಂತರ್ ಮಂತರ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಪ್ರತಿಭಟನಾಕಾರರ ಮೇಲಿನ ಎಫ್‌ಐಆರ್‌ಗಳನ್ನು ಹಿಂಪಡೆಯುವ ಬೇಡಿಕೆ ಈಡೇರದಿದ್ದರೆ ಹೊಸದಾಗಿ ಮತ್ತೆ ಪ್ರತಿಭಟನೆ ಆರಂಭಿಸುವುದಾಗಿ ಕಾಕ್ರೋಚ್ ಜನತಾ ಪಾರ್ಟಿ (CJP) ಎಚ್ಚರಿಸಿದೆ. ಬಿಹಾರ ಮತ್ತು ಪಶ್ಚಿಮ ಬಂಗಾಳದಲ್ಲಿ ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ, ದೆಹಲಿಯಲ್ಲೂ ಪ್ರತಿಭಟನಾಕಾರರನ್ನು ವಶಕ್ಕೆ ಪಡೆಯಲಾಗಿದೆ ಎಂದು ಸಿಜೆಪಿ ವಕ್ತಾರ ಅಶುತೋಷ್ ರಾಂಕಾ ಹೇಳಿದ್ದಾರೆ. ಕೇಂದ್ರ ಸರ್ಕಾರ ಸಂಧಾನದ ಮಾತುಕತೆಯ ವೇಳೆ ಭರವಸೆ ನೀಡಿದಂತೆ ಪ್ರತಿಭಟನಾಕಾರರ ಮೇಲೆ ಯಾವುದೇ ಎಫ್​ಐಆರ್​ ಹಾಕದಿದ್ದರೆ ಮಾತ್ರ ಪ್ರತಿಭಟನೆಯನ್ನು ನಿಲ್ಲಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ನೀಟ್ (NEET) ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ದೆಹಲಿಯಲ್ಲಿ ಚಳವಳಿಯ ನೇತೃತ್ವ ವಹಿಸಿದ್ದ ವಿದ್ಯಾರ್ಥಿಗಳ ಗುಂಪಿನ ಪ್ರಮುಖ ಬೇಡಿಕೆಗಳಲ್ಲೊಂದಾದ ಪ್ರತಿಭಟನಾಕಾರರ ವಿರುದ್ಧ ಯಾವುದೇ ಕಾನೂನು ಕ್ರಮ ಕೈಗೊಳ್ಳಬಾರದು ಎಂಬ ಒಪ್ಪಂದವನ್ನು ಸರ್ಕಾರ ಉಲ್ಲಂಘಿಸಿದೆ ಎಂದು ಸಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.

“ಆತ್ಮೀಯ ಜೆ.ಪಿ. ನಡ್ಡಾ ಮತ್ತು ಜಿತೇಂದ್ರ ಸಿಂಗ್ ಅವರೇ, ಪ್ರತಿಭಟನಾಕಾರರ ವಿರುದ್ಧ ಯಾವುದೇ ಪೊಲೀಸ್ ಕ್ರಮ ಕೈಗೊಳ್ಳುವುದಿಲ್ಲ ಎಂಬ ಒಪ್ಪಂದದ ಸಂಪೂರ್ಣ ಉಲ್ಲಂಘನೆಯಾಗುತ್ತಿರುವುದನ್ನು ನಾವು ಗಮನಿಸುತ್ತಿದ್ದೇವೆ. ಬಿಹಾರ ಮತ್ತು ಬಂಗಾಳದಲ್ಲಿ ನೂರಾರು ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ. ದೆಹಲಿ ಮತ್ತು ಇತರ ರಾಜ್ಯಗಳಲ್ಲಿ ನೂರಾರು ಜನರಿಗೆ ಕಿರುಕುಳ ನೀಡಲಾಗುತ್ತಿದೆ. ದೆಹಲಿಯಲ್ಲಿ ಪ್ರತಿಭಟನಾಕಾರರಿಗೆ ಅಗತ್ಯ ನೆರವು ನೀಡುತ್ತಿದ್ದ ಸ್ವಯಂಸೇವಕರನ್ನು ವಶಕ್ಕೆ ಪಡೆಯುತ್ತಿರುವ ಬಗ್ಗೆ ಹಲವು ವರದಿಗಳು ಬರುತ್ತಿವೆ” ಎಂದು ಅಶುತೋಶ್ ರಾಂಕಾ ಸಾಮಾಜಿಕ ಜಾಲತಾಣ ಎಕ್ಸ್​​ನ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಪ್ರತಿಭಟನಾಕಾರರ ಕಾನೂನು ನೆರವಿಗೆ ಸಿಜೆಪಿಯಿಂದ ವೆಬ್​ಸೈಟ್ ಆರಂಭ; 1 ಕೋಟಿ ರೂ. ದೇಣಿಗೆ ನೀಡಿದ ಕಪಿಲ್ ಸಿಬಲ್

“ಪ್ರತಿಭಟನಾಕಾರರ ಮೇಲಿನ ಎಲ್ಲಾ ಎಫ್‌ಐಆರ್‌ಗಳನ್ನು ತಕ್ಷಣವೇ ಹಿಂಪಡೆಯಬೇಕು, ವಿದ್ಯಾರ್ಥಿಗಳನ್ನು ಬಿಡುಗಡೆ ಮಾಡಬೇಕು. ನಮ್ಮ ಒಪ್ಪಂದದಂತೆ ದೆಹಲಿ ಪೊಲೀಸರು ಅಥವಾ ಕೇಂದ್ರ ತನಿಖಾ ಸಂಸ್ಥೆಗಳು ಅಥವಾ ಬಿಜೆಪಿ ಆಡಳಿತವಿರುವ ರಾಜ್ಯಗಳ ಪೊಲೀಸರು ಭವಿಷ್ಯದಲ್ಲಿ ಯಾವುದೇ ಎಫ್‌ಐಆರ್ ದಾಖಲಿಸಬಾರದು ಎಂದು ನಾವು ಆಗ್ರಹಿಸುತ್ತೇವೆ. ಅದಕ್ಕೆ ತಪ್ಪಿದರೆ ನಾವು ಮತ್ತೆ ಧರಣಿ ಕುಳಿತುಕೊಳ್ಳಲು ನಿರ್ಧರಿಸಬೇಕಾಗುತ್ತದೆ. ಕಾನೂನು ಪ್ರಕರಣಗಳಿಗೆ ಸಂಬಂಧಿಸಿದ ಲಿಖಿತ ಒಪ್ಪಂದದ ಪ್ರತಿ ಹಾಗೂ ಭಾರತ ಸರ್ಕಾರದೊಂದಿಗಿನ ಕಾಲಮಿತಿಯ ವಿವರಗಳನ್ನು ನಾಳೆಯೊಳಗೆ ನಮಗೆ ತಲುಪಿಸಬೇಕೆಂದು ನಾವು ಆಗ್ರಹಿಸುತ್ತೇವೆ” ಎಂದು ಅವರು ಬರೆದಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಚೀನಾದಿಂದ ಭಾರತಕ್ಕೆ ಟಿಬಿಎಂ ಆಘಾತ; ಮಹತ್ವದ ಪ್ರಾಜೆಕ್ಟ್​ಗಳಿಗೆ ತೊಡರುಗಾಲು; ಭಾರತದ ಹೊಸ ಮಾಸ್ಟರ್ ಪ್ಲಾನ್ – Kannada News | India’s master plan to get rid off China dependency after TBM shock

ಕೋಲ್ಕತಾದಲ್ಲಿ ಬಳಸಲಾದ ಟಿಬಿಎಂ ಯಂತ್ರದ ಚಿತ್ರImage Credit source: PTI

ನವದೆಹಲಿ, ಜುಲೈ 27: ಮೆಟ್ರೋ, ರೈಲ್ವೆ ಮತ್ತು ಹೈವೇ ಸುರಂಗ ಯೋಜನೆಗಳಲ್ಲಿ ಬಳಸಲಾಗುವ ಅತ್ಯಾಧುನಿಕ ಟನಲ್ ಬೋರಿಂಗ್ ಮೆಷಿನ್‌ಗಳ (TBM) ಪೂರೈಕೆಯಲ್ಲಿ ಚೀನಾ ಅಡ್ಡಗಾಲು ಹಾಕಿದ್ದು ಭಾರತ ಹೊಸ ಮಾಸ್ಟರ್ ಪ್ಲಾನ್ ಹಾಕಿದೆ. ಭಾರತ ಸರ್ಕಾರವು ತನ್ನ ಮೂಲಸೌಕರ್ಯ (Infrastructure) ವಲಯವನ್ನು ಚೀನಾದ ಮೇಲಿನ ಅವಲಂಬನೆಯಿಂದ ಮುಕ್ತಗೊಳಿಸಲು ಸಮರೋಪಾದಿಯ ಕೆಲಸ ಆರಂಭಿಸಿದೆ. ಇನ್​ಫ್ರಾಸ್ಟ್ರಕ್ಚರ್ ಕ್ಷೇತ್ರದ ದೊಡ್ಡ ದೊಡ್ಡ ಪ್ರಾಜೆಕ್ಟ್​ಗಳಲ್ಲಿ ಚೀನಾದ (China) ಯಂತ್ರೋಪಕರಣಗಳ ಬಳಕೆ ವ್ಯಾಪಕವಾಗಿದೆ. ಅವುಗಳ ರಫ್ತಿಗೆ ಚೀನಾ ಅಡ್ಡಗಾಲು ಹಾಕಿದ್ದು ಭಾರತವನ್ನು ಸ್ವಾವಲಂಬನೆಯ ದಾರಿ ಹಿಡಿಯುವಂತೆ ಮಾಡಿದೆ.

ಏನಿದು TBM ಆಘಾತ?

ಭಾರತದ ಪ್ರಮುಖ ಮೆಟ್ರೋ ಯೋಜನೆಗಳು (ಬೆಂಗಳೂರು, ಮುಂಬೈ, ಡೆಹ್ರಾಡೂನ್ ಮುಂತಾದವು) ಮತ್ತು ಹಿಮಾಲಯನ್ ಪ್ರದೇಶದ ಸುರಂಗ ಯೋಜನೆಗಳಿಗಾಗಿ ಚೀನಾದಲ್ಲಿ ತಯಾರಾದ TBM ಯಂತ್ರಗಳನ್ನು ಹೆಚ್ಚಾಗಿ ಆಮದು ಮಾಡಿಕೊಳ್ಳಲಾಗುತ್ತಿತ್ತು. ಆದರೆ, ಚೀನಾದ ರಫ್ತು ನಿರ್ಬಂಧಗಳಿಂದಾಗಿ ಈ ಸುರಂಗ ಕೊರಕ ಯಂತ್ರಗಳು ಚೀನಾದಿಂದ ಹೊರಗೆ ಬರಲೇ ಇಲ್ಲ.

ಇದರಿಂದಾಗಿ ಭಾರತದ ಹಲವು ಪ್ರಾಜೆಕ್ಟ್​ಗಳ ಕೆಲಸ ನಿಂತುಹೋಗುವ ಅಥವಾ ತೀವ್ರ ವಿಳಂಬವಾಗುವ ಭೀತಿ ಎದುರಾಯಿತು. ಈ ‘TBM ಆಘಾತ’ ಭಾರತಕ್ಕೆ ಮೂಲಸೌಕರ್ಯ ವಲಯದಲ್ಲಿ ಚೀನಾದ ಮೇಲಿನ ಅತಿಯಾದ ಅವಲಂಬನೆಯ ಅಪಾಯವನ್ನು ಮನವರಿಕೆ ಮಾಡಿಕೊಟ್ಟಿತು.

ಇದನ್ನೂ ಓದಿ: ಚೀನಾದ ಉತ್ಪನ್ನಗಳು ಇಷ್ಟು ಕಡಿಮೆ ಬೆಲೆಗೆ ಸಿಗುವುದು ಹೇಗೆ? ಚೀನೀ ಸಿಇಒವೊಬ್ಬರು ಬಿಚ್ಚಿಟ್ಟ ವಾಸ್ತವ ಇದು

ಸ್ವಾವಲಂಬನೆಗೆ ಭಾರತದ ಪ್ರಮುಖ ಕಾರ್ಯತಂತ್ರಗಳು

  1. ದೇಶೀಯವಾಗಿ ತಯಾರಿಕೆಗೆ ಉತ್ತೇಜನ: ಭಾರತವು ಈಗ ದೇಶೀಯವಾಗಿಯೇ (Indigenous) ಅತ್ಯಾಧುನಿಕ ಸುರಂಗ ಕೊರೆಯುವ ಯಂತ್ರಗಳನ್ನು (TBMs) ಹಾಗೂ ಭಾರೀ ನಿರ್ಮಾಣ ಉಪಕರಣಗಳನ್ನು ತಯಾರಿಸಲು (Local Manufacturing) ಸ್ಥಳೀಯ ಮತ್ತು ಜಾಗತಿಕ ಕಂಪನಿಗಳೊಂದಿಗೆ (ಜಪಾನ್, ಜರ್ಮನಿ) ಸಹಭಾಗಿತ್ವ ವಹಿಸುತ್ತಿದೆ.
  2. ಪೂರೈಕೆ ಸರಪಳಿ ವೈವಿಧ್ಯೀಕರಣ: ಚೀನಾದ ಕಂಪನಿಗಳಿಗೆ ಪರ್ಯಾಯವಾಗಿ ಜಪಾನ್, ಜರ್ಮನಿ ಮತ್ತು ಯುರೋಪಿಯನ್ ಒಕ್ಕೂಟದ ಪ್ರಮುಖ ಯಂತ್ರೋಪಕರಣ ತಯಾರಕ ಸಂಸ್ಥೆಗಳಿಗೆ (Diversifying Supply Chain) ಭಾರತ ಆದ್ಯತೆ ನೀಡುತ್ತಿದೆ.
  3. PLI ಯೋಜನೆಗಳು: ಭಾರೀ ಯಂತ್ರೋಪಕರಣಗಳು ಮತ್ತು ನಿರ್ಮಾಣ ಉಪಕರಣಗಳ ಸ್ಥಳೀಯ ಉತ್ಪಾದನೆಯನ್ನು ಉತ್ತೇಜಿಸಲು ಸರ್ಕಾರ ವಿಶೇಷ ಸಬ್ಸಿಡಿ ಮತ್ತು ನಿಯಮಾವಳಿಗಳ ಬೆಂಬಲ ನೀಡುತ್ತಿದೆ.
  4. ಸುರಕ್ಷತೆಯ ಪರಿಶೀಲನೆ, ಕಟ್ಟುನಿಟ್ಟಿನ ನಿಯಮ: ಮೂಲಸೌಕರ್ಯ ಯೋಜನೆಗಳಲ್ಲಿ ಬಳಸುವ ವಿದೇಶಿ ತಂತ್ರಜ್ಞಾನ ಮತ್ತು ಉಪಕರಣಗಳ ಮೇಲೆ, ಅದರಲ್ಲೂ ವಿಶೇಷವಾಗಿ ಚೀನಾದಿಂದ ಬರುವ ಯಂತ್ರಗಳ ಸಾಫ್ಟ್‌ವೇರ್ ಮತ್ತು ಹಾರ್ಡ್‌ವೇರ್‌ಗಳ ಮೇಲೆ ಕಟ್ಟುನಿಟ್ಟಿನ ಭದ್ರತಾ ತಪಾಸಣೆಗಳನ್ನು ಕಡ್ಡಾಯಗೊಳಿಸಲಾಗಿದೆ.

ಇದನ್ನೂ ಓದಿ: ಬ್ರಹ್ಮಪುತ್ರಾ ನದಿಗೆ ಚೀನಾ ಅಡ್ಡಗಾಲು; ಅಣೆಕಟ್ಟೆ ಜಾಗವೇ ಬಹಳ ಡೇಂಜರ್- ಸ್ವತಃ ಚೀನೀ ವಿಜ್ಞಾನಿಗಳಿಂದಲೇ ವರದಿ

ಮೂಲಸೌಕರ್ಯ ಯೋಜನೆಗಳು ಯಾವುದೇ ಜಾಗತಿಕ ಅಥವಾ ರಾಜಕೀಯ ಬಿಕ್ಕಟ್ಟುಗಳಿಂದ ಸ್ಥಗಿತಗೊಳ್ಳಬಾರದು ಮತ್ತು ಮುಂಬರುವ ದಶಕಗಳಲ್ಲಿ ದೇಶದ ಮೆಟ್ರೋ, ರೈಲ್ವೆ ಹಾಗೂ ರಕ್ಷಣಾತ್ಮಕ ಸುರಂಗ ನಿರ್ಮಾಣಗಳು’ಆತ್ಮನಿರ್ಭರ’ (ಸ್ವಾವಲಂಬಿ) ತಂತ್ರಜ್ಞಾನದ ಆಧಾರದ ಮೇಲೆ ನಡೆಯಬೇಕು ಎಂಬುದು ಭಾರತ ಸರ್ಕಾರದ ಮುಖ್ಯ ಗುರಿಯಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ವಾಹನ ಸವಾರರ ಗಮನಕ್ಕೆ: 10 ದಿನ ಪೀಣ್ಯ ಫ್ಲೈಓವರ್ ಬಂದ್; ಹೀಗಿವೆ ಪರ್ಯಾಯ ಮಾರ್ಗಗಳು – Kannada News | Bengaluru Traffic Alert: Peenya Flyover Closed for 10 Days, Check Alternative Routes

ಪೀಣ್ಯ ಫ್ಲೈಓವರ್ ಬಂದ್Image Credit source: tv9 kannada

ಬೆಂಗಳೂರು, ಜುಲೈ 27: ರಾಷ್ಟ್ರೀಯ ಹೆದ್ದಾರಿಯ ಪೀಣ್ಯ ಫ್ಲೈಓವರ್ (Peenya Flyover) ಮೇಲೆ ಡಾಂಬರೀಕರಣ ಕಾಮಗಾರಿ ಹಿನ್ನೆಲೆ ಇಂದಿನಿಂದ ಆಗಸ್ಟ್ 5ರವರೆಗೆ ಒಟ್ಟು 10 ದಿನಗಳ ಕಾಲ ಬೆಂಗಳೂರು (bangaluru) ನಗರ ಕಡೆಗೆ ಬರುವ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ. ವಾಹನ ಸವಾರರು ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಬೆಂಗಳೂರು ಸಂಚಾರ ವಿಭಾಗ ಪೊಲೀಸರು ಮಾಹಿತಿ ನೀಡಿದ್ದಾರೆ.

ಮಾಧ್ಯಮ ಪ್ರಕಟಣೆಯಲ್ಲಿ ಏನಿದೆ?

ಈ ಕುರಿತಾಗಿ ಬೆಂಗಳೂರು ಸಂಚಾರ ವಿಭಾಗ ಪೊಲೀಸರು ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ. ‘‘ಪೀಣ್ಯ ಸಂಚಾರ ಪೊಲೀಸ್ ಠಾಣೆಯ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ-4ರ ಪೀಣ್ಯ ಎಲಿವೇಟೆಡ್ ಫ್ಲೈಓವರ್ (ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಮೇಲ್ಸೇತುವೆ) ಮೇಲೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಡಾಂಬರೀಕರಣ ಕಾಮಗಾರಿ
ಕೈಗೊಂಡಿದೆ.’’

ಬೆಂಗಳೂರು ಸಂಚಾರ ಪೊಲೀಸ್ ಟ್ವೀಟ್​

‘‘ಸಾರ್ವಜನಿಕರ ಸುಗಮ ಸಂಚಾರದ ದೃಷ್ಟಿಯಿಂದ ಇಂದಿನಿಂದ ಆಗಸ್ಟ್​​ 05 ರವರೆಗೆ ರಾತ್ರಿ 10 ಗಂಟೆಯಿಂದ ಬೆಳಗೆ 5 ಗಂಟೆಯವರೆಗೆ ಹಾಗೂ ಈ ಅವಧಿಯಲ್ಲಿ ಶನಿವಾರ ಮತ್ತು ಭಾನುವಾರ ರಾತ್ರಿ 12 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ ಪೀಣ್ಯ ಎಲಿವೇಟೆಡ್ ಫ್ಲೈಓವರ್ ಮೇಲೆ ಬೆಂಗಳೂರು ನಗರ ಕಡೆಗೆ ಬರುವ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ’’.

ಈ ಮಾರ್ಗದಲ್ಲಿ  ಸಂಚಾರ ನಿರ್ಬಂಧ

ರಾಷ್ಟ್ರೀಯ ಹೆದ್ಮಾರಿ-4ರ ಪೀಣ್ಯ ಎಲಿವೇಟೆಡ್ ಫ್ಲೈಓವರ್ (ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಮೇಲ್ಸೇತುವೆ) ಮೇಲೆ ಕೆನ್ನಮೆಟಲ್ ಮೀಡಿಯಾ (upper ramp)ದಿಂದ ಎಸ್​​ಆರ್​​ಎಸ್​​ (down ramp) ವರೆಗೆ ಫ್ಲೈಓವರ್ ಮೇಲೆ ಸಂಚಾರ ನಿರ್ಬಂಧಿಸಲಾಗಿದೆ.

ಪರ್ಯಾಯ ಮಾರ್ಗಗಳು ಹೀಗಿವೆ 

ನೆಲಮಂಗಲದಿಂದ ಬೆಂಗಳೂರು ಕಡೆಗೆ ಸಂಚರಿಸುವ ವಾಹನಗಳು ಕೆನ್ನಮೆಟಲ್ ಫ್ಯಾಕ್ಟರಿ ಹತ್ತಿರ ಫ್ಲೈಓವರ್ ಕೆಳಭಾಗದ ಎನ್.ಹೆಚ್.-4 ಮತ್ತು ಸರ್ವಿಸ್ ರಸ್ತೆ ಮೂಲಕ 8ನೇ ಮೈಲಿ ತಲುಪಿ, ದಾಸರಹಳ್ಳಿ, ಜಾಲಹಳ್ಳಿ ಕ್ರಾಸ್, ಪೀಣ್ಯ ಪೊಲೀಸ್ ಠಾಣೆ ಜಂಕ್ಷನ್, ಎಸ್.ಆರ್.ಎಸ್ ಜಂಕ್ಷನ್ ಹಾಗೂ ಗೊರಗುಂಟೆಪಾಳ್ಯ ಮೂಲಕ ಸಂಚರಿಸಬಹುದಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

WI vs PAK: ನಾಯಕತ್ವದಿಂದ ಕೆಳಗಿಳಿದ ಬೆನ್ನಲ್ಲೇ ಶತಕ ಸಿಡಿಸಿದ ಶಾನ್ ಮಸೂದ್ – Kannada News | Shan Masood’s Resurgent Century Powers Pakistan in WI vs Pak 1st Test

ಪಾಕಿಸ್ತಾನ ಹಾಗೂ ವೆಸ್ಟ್ ಇಂಡೀಸ್ (Pakistan vs West Indies) ನಡುವೆ ನಡೆಯುತ್ತಿರುವ ಎರಡು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಟಾಸ್ ಗೆದ್ದ ವೆಸ್ಟ್ ಇಂಡೀಸ್ ಮೊದಲು ಬ್ಯಾಟಿಂಗ್‌ ಮಾಡಿ ಮೊದಲ ಇನ್ನಿಂಗ್ಸ್​ನಲ್ಲಿ 311 ರನ್​ಗಳಿಗೆ ಆಲೌಟ್ ಆಯಿತು. ತಂಡದ ಪರ ಶೈ ಹೋಪ್ 92 ರನ್ ಬಾರಿಸಿದರೆ, ಕವೆಮ್ ಹಾಡ್ಜ್ 84 ರನ್ ಬಾರಿಸಿದರು. ಇತ್ತ ಮೊದಲ ಇನ್ನಿಂಗ್ಸ್ ಆರಂಭಿಸಿರುವ ಪಾಕಿಸ್ತಾನ ತಂಡ ಮೂರನೇ ದಿನದಾಟದಲ್ಲಿ ಭೋಜನ ವಿರಾಮದ ವೇಳೆಗೆ 8 ವಿಕೆಟ್​ಗಳನ್ನು ಕಳೆದುಕೊಂಡು 267 ರನ್ ಕಲೆಹಾಕಿದೆ. ಪಾಕ್ ತಂಡದ ಪರ ಮಾಜಿ ನಾಯಕ ಶಾನ್ ಮಸೂದ್ (Shan Masood) ಭರ್ಜರಿ ಶತಕ ಸಿಡಿಸಿದ್ದಾರೆ.

19 ತಿಂಗಳ ನಂತರ ಶತಕ

ಈ ಮೊದಲು ಪಾಕ್ ತಂಡದ ನಾಯಕನಾಗಿದ್ದ ಶಾನ್ ಮಸೂದ್ ತಮ್ಮ ನಾಯಕತ್ವದಲ್ಲಿ ತಂಡಕ್ಕೆ ಹೇಳಿಕೊಳ್ಳುವಂತಹ ಯಶಸ್ಸು ತಂದುಕೊಡಲಿಲ್ಲ. ಹೀಗಾಗಿ ಅವರನ್ನು ನಾಯಕತ್ವದಿಂದ ಕೆಳಗಿಳಿಸಲಾಯಿತು. ಇದೀಗ ನಾಯಕತ್ವ ಕಳೆದುಕೊಂಡ ಬಳಿಕ ಮಸೂದ್ ಬ್ಯಾಟ್​ನಿಂದ ಶತಕ ಸಿಡಿದಿದೆ. 19 ತಿಂಗಳ ನಂತರ ಶತಕ ಬಾರಿಸಿರುವ ಮಸೂದ್ ಬ್ರಿಯಾನ್ ಲಾರಾ ಕ್ರಿಕೆಟ್ ಅಕಾಡೆಮಿ ಕ್ರೀಡಾಂಗಣದಲ್ಲಿ ಟೆಸ್ಟ್ ಶತಕ ಗಳಿಸಿದ ಮೊದಲ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

7 ನೇ ಟೆಸ್ಟ್ ಶತಕ

57 ನೇ ಓವರ್‌ನ ಎರಡನೇ ಎಸೆತದಲ್ಲಿ ಸಿಂಗಲ್ ಗಳಿಸುವ ಮೂಲಕ ಶಾನ್ ಮಸೂದ್ ತಮ್ಮ 7 ನೇ ಟೆಸ್ಟ್ ಶತಕವನ್ನು ಪೂರೈಸಿದರು. 12 ಟೆಸ್ಟ್ ಇನ್ನಿಂಗ್ಸ್‌ಗಳ ನಂತರ ಶತಕ ಬಾರಿಸಿದ ಮಸೂದ್ ತಂಡದಲ್ಲಿ ತಮ್ಮ ಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಂಡಿದ್ದಾರೆ. ಮೊದಲಿಗೆ ಮಸೂದ್ ಒಂಬತ್ತು ಬೌಂಡರಿಗಳನ್ನು ಒಳಗೊಂಡಂತೆ ಕೇವಲ 46 ಎಸೆತಗಳಲ್ಲಿ ತಮ್ಮ ಮೊದಲ ಅರ್ಧಶತ ಬಾರಿಸಿದರು. ಎರಡನೇ ದಿನದಾಟದ ಅಂತ್ಯದ ವೇಳೆಗೆ ಅವರು 88 ರನ್‌ಗಳೊಂದಿಗೆ ಅಜೇಯರಾಗಿ ಉಳಿದಿದ್ದರು. ಇದೀಗ ಮೂರನೇ ದಿನದಂದು ತಮ್ಮ ಟೆಸ್ಟ್ ಶತಕವನ್ನು ಪೂರ್ಣಗೊಳಿಸಿದರು.

IND U19 vs SL U19: ಶ್ರೀಲಂಕಾ ವಿರುದ್ಧ ಟೆಸ್ಟ್ ಸರಣಿ ಗೆದ್ದ ಭಾರತ ಯುವ ಪಡೆ

155 ರನ್‌ಗಳ ಜೊತೆಯಾಟ

ಆದಾಗ್ಯೂ ಈ ಪಂದ್ಯದಲ್ಲಿ ಪಾಕಿಸ್ತಾನ ಕಳಪೆ ಆರಂಭ ಪಡೆಯಿತು. ಆರಂಭಿಕ ಆಟಗಾರ ಅಜಾನ್ ಅವೈಸ್ ಖಾತೆ ತೆರೆಯದೆಯೇ ಬೌಲ್ಡ್ ಆದರು. ಆ ಬಳಿಕ ಜೊತೆಯಾದ, ಶಾನ್ ಮಸೂದ್, ಇಮಾಮ್-ಉಲ್-ಹಕ್ 155 ರನ್‌ಗಳ ಪಾಲುದಾರಿಕೆ ನೀಡಿದರು. ಇಮಾಮ್ 63 ರನ್‌ಗಳ ನಿರ್ಣಾಯಕ ಇನ್ನಿಂಗ್ಸ್ ಆಡಿದರು. ಇಮಾಮ್ ಔಟಾದ ನಂತರ, ಬಂದ ಬಾಬರ್ ಅಜಮ್ ಅವರೊಂದಿಗೆ ಮಸೂದ್ 41 ರನ್‌ಗಳ ಜೊತೆಯಾಟ ನಡೆಸಿದರು. ಆದರೆ ನಾಯಕ ಬಾಬರ್ ಅಜಮ್ 23 ರನ್‌ಗಳಿಗೆ ಔಟಾದರು. ಆದಾಗ್ಯೂ, ಶಾನ್ ಮಸೂದ್ ತಮ್ಮ ಅಟವನ್ನು ಮುಂದುವರೆಸಿ ಶತಕವನ್ನು ಪೂರೈಸಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 10:11 pm, Mon, 27 July 26

Source link

ಕರ್ನಾಟಕ ವಿಚಾರ ಬಂದಾಗ ನಾವು ಸರ್ಕಾರದ ಜೊತೆ ಇರುತ್ತೇವೆ: ಡಿಕೆಶಿಗೆ ತೇಜಸ್ವಿ ಸೂರ್ಯ ಭರವಸೆ – Kannada News | We will with Karnataka Government Says BJP MP Tejaswi Surya after DK Shivakumar Meeting

ನವದೆಹಲಿ, (ಜುಲೈ 27): ಸಿಎಂ ಡಿಕೆ ಶಿವಕುಮಾರ್ ಅವರ ನೇತೃತ್ವದಲ್ಲಿ ದೆಹಲಿಯಲ್ಲಿ ನಡೆದ ಕರ್ನಾಟಕದ ಎಲ್ಲಾ ಸಂಸದರ ಸಭೆ ಅಂತ್ಯವಾಗಿದ್ದು, ಕೇಂದ್ರ ಸರ್ಕಾರದ ಮುಂದೆ ಬಾಕಿ ಇರುವ 13 ಅಂಶಗಳ ಬಗ್ಗೆ ಚರ್ಚೆಯಾಗಿದೆ. ಇನ್ನು ಸಭೆ ಬಳಿಕ ಬಿಜೆಪಿ ಎಂಪಿ ತೇಜಸ್ವಿ ಸೂರ್ಯ ಮಾತನಾಡಿ, ಸಿಎಂ ಮೊದಲ ಬಾರಿಗೆ ರಾಜ್ಯದ ಸಂಸದರ ಸಭೆ ಕರೆದಿದ್ದರು. ರಾಜ್ಯ ಸರ್ಕಾರದ ಬಾಕಿ ಯೋಜನೆಗಳ ಬಗ್ಗೆ ಚರ್ಚಿಸಲಾಗಿದೆ. ರಾಜ್ಯದ ವಿಚಾರ ಬಂದಾಗ ಪಕ್ಷಾತೀತವಾಗಿ ಕೆಲಸ ಮಾಡುತ್ತೇವೆ. ರಾಜ್ಯದ ವಿಚಾರ ಬಂದಾಗ ನಾವು ಸರ್ಕಾರದ ಜೊತೆ ಇರುತ್ತೇವೆ. ರಾಜ್ಯಕ್ಕಾಗಿ ಪಕ್ಷಾತೀತವಾಗಿ ಕೆಲಸ ಮಾಡುವುದು ನಮ್ಮ ಕರ್ತವ್ಯ ಎಂದರು.

ಇದನ್ನೂ ಓದಿ: ಕರ್ನಾಟಕದ ಎಲ್ಲ ಸಂಸದರ ಜೊತೆ ಡಿಕೆ ಶಿವಕುಮಾರ್ ಸಭೆ , ಏನೇನು ಚರ್ಚೆ ಆಯ್ತು? ಇಲ್ಲಿದೆ ಡಿಟೇಲ್ಸ್

Source link

ಪ್ರತಿಭಟನಾಕಾರರ ಕಾನೂನು ನೆರವಿಗೆ ಸಿಜೆಪಿಯಿಂದ ವೆಬ್​ಸೈಟ್ ಆರಂಭ; 1 ಕೋಟಿ ರೂ. ದೇಣಿಗೆ ನೀಡಿದ ಕಪಿಲ್ ಸಿಬಲ್ – Kannada News | CJP to launch legal aid fund website linking protesters with lawyers Kapil Sibal announces 1 crore fund

ನವದೆಹಲಿ, ಜುಲೈ 27: ಪ್ರತಿಭಟನೆಯಲ್ಲಿ ಭಾಗವಹಿಸಿ ಕಾನೂನು ಕ್ರಮಗಳನ್ನು ಎದುರಿಸುತ್ತಿರುವವರ ನೆರವಿಗೆ ಕಾನೂನು ನೆರವು ನಿಧಿ (Legal Aid Fund) ಸಂಗ್ರಹಿಸಲು ವೆಬ್​ಸೈಟ್ ಆರಂಭಿಸುವುದಾಗಿ ಕಾಕ್ರೋಚ್ ಜನತಾ ಪಾರ್ಟಿ (CJP) ಇಂದು ಘೋಷಿಸಿದೆ. ಪ್ರತಿಭಟನಾಕಾರರ ವಿರುದ್ಧ ಕೈಗೊಳ್ಳಲಾದ ಕಾನೂನು ಕ್ರಮಗಳನ್ನು ಮೇಲ್ವಿಚಾರಣೆ ಮಾಡುವ ಹಾಗೂ ಅವರಿಗೆ ವಕೀಲರ ಸಂಪರ್ಕ ಕಲ್ಪಿಸುವ ವೆಬ್​ಸೈಟ್ ಅನ್ನು ಕಾಕ್ರೋಚ್ ಜನತಾ ಪಾರ್ಟಿ (CJP) ಶೀಘ್ರದಲ್ಲೇ ಆರಂಭಿಸಲಿದೆ ಎಂದು ರಾಜ್ಯಸಭಾ ಸಂಸದ ಕಪಿಲ್ ಸಿಬಲ್ ಸೋಮವಾರ ತಿಳಿಸಿದ್ದಾರೆ. ಜೊತೆಗೆ, ಈ ವೆಬ್​ಸೈಟ್​ನ ಕಾನೂನು ನೆರವು ನಿಧಿಗಾಗಿ ಕಪಿಲ್ ಸಿಬಲ್ 1 ಕೋಟಿ ರೂ. ದೇಣಿಗೆ ಘೋಷಿಸಿದ್ದು, ದೇಶಾದ್ಯಂತ ಇರುವ ವಕೀಲರು ಈ ನಿಧಿಗೆ ಬೆಂಬಲ ನೀಡುವಂತೆ ಕರೆ ನೀಡಿದ್ದಾರೆ.

1 ಕೋಟಿ ನೆರವು ಘೋಷಿಸಿದ ಕಪಿಲ್ ಸಿಬಲ್:

ಇಂದು ಸಿಜೆಪಿಯ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ ಹಿರಿಯ ವಕೀಲ ಕಪಿಲ್ ಸಿಬಲ್ ಪ್ರತಿಭಟನಾಕಾರರಿಗೆ ಕಾನೂನು ಮತ್ತು ಆರ್ಥಿಕ ಬೆಂಬಲವನ್ನು ಘೋಷಿಸಿದರು. “ಶಾಂತಿಯುತವಾಗಿ ಪ್ರತಿಭಟನೆ ನಡೆಸಿದವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವುದನ್ನು ನಾವು ಬಯಸುವುದಿಲ್ಲ. ಅದೊಂದು ತಾನಾಗಿಯೇ ಉದ್ಭವಿಸಿದ ಪ್ರತಿಭಟನೆಯಾಗಿತ್ತು. ಅನೇಕ ಬಾರಿ ಸರ್ಕಾರಗಳು ಯಾವುದೇ ಭಿನ್ನಾಭಿಪ್ರಾಯ ಅಥವಾ ಪ್ರತಿಭಟನೆಯನ್ನು ಸಹಿಸುವುದಿಲ್ಲ. ಎಲ್ಲೆಲ್ಲಿ ಶಾಂತಿಯುತ ಪ್ರತಿಭಟನೆಗಳು ನಡೆದಿವೆಯೋ ಮತ್ತು ಎಲ್ಲೆಲ್ಲಿ ಪ್ರತಿಭಟನಾಕಾರರನ್ನು ಗುರಿಯಾಗಿಸಲಾಗಿದೆಯೋ, ಅವರಿಗಾಗಿ ವೆಬ್‌ಸೈಟ್ ಒಂದನ್ನು ತೆರೆಯಲಾಗುತ್ತದೆ. ಇದಕ್ಕೆ ನಾನು 1 ಕೋಟಿ ರೂ. ದೇಣಿಗೆ ನೀಡುತ್ತೇನೆ. ಭಾರತದಲ್ಲಿ ಎಲ್ಲೇ ವಿಚಾರಣೆ ನಡೆದರೂ ನಮ್ಮ ವಕೀಲರು ಸಂತ್ರಸ್ತರಿಗೆ ನೆರವಾಗಲು ಅನುಕೂಲವಾಗುವಂತೆ ಇತರ ವಕೀಲರೂ ಸಹಾಯ ಮಾಡಬೇಕೆಂದು ಮನವಿ ಮಾಡುತ್ತೇನೆ” ಎಂದು ಕಪಿಲ್ ಸಿಬಲ್ ಹೇಳಿದ್ದಾರೆ.

ಇದನ್ನೂ ಓದಿ: ಎಲ್ಲ ಬೇಡಿಕೆಗೂ ಕೇಂದ್ರ ಸರ್ಕಾರ ಒಪ್ಪಿಗೆ; ಪ್ರತಿಭಟನೆ ಹಿಂಪಡೆದ ಸಿಜೆಪಿ, ಶಾಂತಿಯುತವಾಗಿ ತೆರಳಲು ವಿದ್ಯಾರ್ಥಿಗಳಿಗೆ ಕರೆ

“ಪ್ರತಿಯೊಂದು ಸ್ಥಳದಲ್ಲೂ ಏನು ನಡೆಯಿತು, ಯಾವ ವಿದ್ಯಾರ್ಥಿ ಅಥವಾ ಪ್ರತಿಭಟನಾಕಾರರು ತೊಂದರೆಗೆ ಒಳಗಾಗಿದ್ದಾರೆ ಮತ್ತು ಅವರ ವಿರುದ್ಧ ಏನು ಕ್ರಮ ಕೈಗೊಳ್ಳಲಾಗಿದೆ ಎಂಬುದನ್ನು ಪತ್ತೆಹಚ್ಚಲು ಈ ಸಿಜೆಪಿ ಒಂದು ಫ್ರೇಮ್​​ವರ್ಕ್​ ಅನ್ನು ರೂಪಿಸಲಿದೆ” ಎಂದು ರಾಜ್ಯಸಭಾ ಸಂಸದ ಕಪಿಲ್ ಸಿಬಲ್ ಹೇಳಿದ್ದಾರೆ.

ವಿದ್ಯಾರ್ಥಿಗಳಿಗೆ ಕಾನೂನು ಹೋರಾಟದಲ್ಲಿ ನೆರವಾಗಬಲ್ಲ ವಕೀಲರನ್ನು ಗುರುತಿಸಲು ಈ ವೆಬ್​ಸೈಟ್ ಸಹಾಯ ಮಾಡಲಿದೆ ಎಂದು ಕಪಿಲ್ ಸಿಬಲ್ ಹೇಳಿದ್ದಾರೆ. “ಕಾನೂನು ನೆರವು ನೀಡಲು ಇಚ್ಛಿಸುವ ವಕೀಲರು ತಮ್ಮ ಹೆಸರು, ಸ್ಥಳ ಮತ್ತು ನೀಡಬಹುದಾದ ನೆರವಿನ ಸ್ವರೂಪವನ್ನು ನೋಂದಾಯಿಸಿಕೊಳ್ಳಲು ವೇದಿಕೆಯೊಂದನ್ನು ನಿರ್ಮಿಸಲಾಗುವುದು” ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: Dharmendra Pradhan: ಸಿಜೆಪಿ ಬೇಡಿಕೆಗೆ ಮಣಿದ ಸರ್ಕಾರ; ಕೇಂದ್ರ ಶಿಕ್ಷಣ ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್ ರಾಜೀನಾಮೆ

ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲರಾಗಿರುವ ಕಪಿಲ್ ಸಿಬಲ್, ಪ್ರಧಾನಿ ಮನಮೋಹನ್ ಸಿಂಗ್ ಅವರ ಸಂಪುಟದಲ್ಲಿ ಮೇ 2009ರಿಂದ ಅಕ್ಟೋಬರ್ 2012ರವರೆಗೆ ಭಾರತದ ಮಾನವ ಸಂಪನ್ಮೂಲ ಅಭಿವೃದ್ಧಿ (HRD) ಅಥವಾ ಶಿಕ್ಷಣ ಸಚಿವರಾಗಿ ಸೇವೆ ಸಲ್ಲಿಸಿದ್ದರು.

ದೆಹಲಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸಿಜೆಪಿ ಮುಖ್ಯ ವಕ್ತಾರ ಸೌರವ್ ದಾಸ್, ಜುಲೈ 25ರಂದು 37 ದಿನಗಳ ಸುದೀರ್ಘ ಪ್ರತಿಭಟನೆಯನ್ನು ಹಿಂಪಡೆಯುವ ಮುನ್ನ ಹಿರಿಯ ವಕೀಲ ಹಾಗೂ ರಾಜ್ಯಸಭಾ ಸಂಸದ ಕಪಿಲ್ ಸಿಬಲ್ ಅವರಿಂದ ಕಾನೂನು ಸಲಹೆ ಪಡೆಯಲಾಗಿತ್ತು ಎಂದು ತಿಳಿಸಿದರು. ಈ ಹಿಂದಿನ ಪ್ರತಿಭಟನೆಗಳಲ್ಲೂ ಪ್ರತಿಭಟನಾಕಾರರನ್ನು ಸುಳ್ಳು ಪ್ರಕರಣಗಳಲ್ಲಿ ಸಿಲುಕಿಸಲು ಬಳಸಲಾದ ತಂತ್ರವನ್ನು ಉಲ್ಲೇಖಿಸಿದ ಸಿಜೆಪಿ, ಪ್ರತಿಭಟನೆ ಮುಗಿದ ನಂತರ ವ್ಯಕ್ತಿಗಳನ್ನು ಟಾರ್ಗೆಟ್ ಮಾಡಬಹುದು ಎಂಬ ಆತಂಕವನ್ನು ವ್ಯಕ್ತಪಡಿಸಿದೆ.

“ನಾವು ಕಪಿಲ್ ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೆವು ಮತ್ತು ಕಾನೂನು ಮಾರ್ಗದರ್ಶನ ಕೋರಿದ್ದೆವು. ಜುಲೈ 25ರಂದು ಪ್ರತಿಭಟನೆಯನ್ನು ಹಿಂಪಡೆದಾಗ, ಚಳವಳಿ ಅಂತ್ಯಗೊಂಡ ನಂತರ ಸರ್ಕಾರವು ಪ್ರತ್ಯೇಕವಾಗಿ ವ್ಯಕ್ತಿಗಳನ್ನು ಟಾರ್ಗೆಟ್ ಮಾಡಲು ಪ್ರಾರಂಭಿಸಬಹುದು ಎಂಬ ಆತಂಕ ನಮಗಿತ್ತು. ಇತರ ಪ್ರಮುಖ ಪ್ರತಿಭಟನೆಗಳಲ್ಲೂ ಜನರನ್ನು ಪ್ರತ್ಯೇಕಿಸಿ ಸುಳ್ಳು ಪ್ರಕರಣಗಳಲ್ಲಿ ಸಿಲುಕಿಸಿದ ಉದಾಹರಣೆಗಳಿರುವುದರಿಂದ ಈ ಆತಂಕ ಸಹಜವಾಗಿಯೇ ಇತ್ತು. ಹೀಗಾಗಿ, ಯಾವುದೇ ಪ್ರತಿಭಟನಾಕಾರರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಬಾರದು ಎಂಬುದನ್ನು ನಮ್ಮ ಬೇಡಿಕೆಯಲ್ಲಿ ಸೇರಿಸಲಾಗಿತ್ತು” ಎಂದು ಸೌರವ್ ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಸ್ವತಃ ನಾನೇ ನಿರ್ಧರಿಸುತ್ತೇನೆ’; ವೃತ್ತಿಜೀವನದ ಬಗ್ಗೆ ಮೌನ ಮುರಿದ ಸಂಜು ಸ್ಯಾಮ್ಸನ್‌ – Kannada News | Sanju Samson Speaks Out: “I Play My Own Way” After T20 WC Heroics and Team India Snub

ಟೀಂ ಇಂಡಿಯಾ (Team India) ಸತತ ಎರಡನೇ ಬಾರಿಗೆ ಟಿ20 ವಿಶ್ವಕಪ್ ಗೆಲ್ಲುವಲ್ಲಿ ತಂಡದ ಅನುಭವಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್ (Sanju Samson) ಪ್ರಮುಖ ಪಾತ್ರವಹಿಸಿದರು. ತಂಡದ ಪರ ಅಮೋಘ ಪ್ರದರ್ಶನ ಜೀಡಿದ ಸಂಜು ಪಂದ್ಯಾವಳಿಯ ಆಟಗಾರ ಪ್ರಶಸ್ತಿಗೂ ಭಾಜನರಾದರು. ಆದರೆ ಐಪಿಎಲ್ ಮುಗಿದ ಬಳಿಕ ತಂಡವನ್ನು ಸೇರಿಕೊಂಡಿದ್ದ ಸಂಜುಗೆ ಸ್ಥಿರ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಆಡಿದ ಸತತ ಐದು ಪಂದ್ಯಗಳಲ್ಲಿ ಸಂಜು ನಿರಸ ಪ್ರದರ್ಶನ ನೀಡಿದರು. ಹೀಗಾಗಿ ಅವರನ್ನು ತಂಡದಿಂದ ಕೈಬಿಟ್ಟು ಅವರ ಸ್ಥಾನದಲ್ಲಿ ವೈಭವ್ ಸೂರ್ಯವಂಶಿಗೆ ಆಡಲು ಅವಕಾಶ ನೀಡಲಾಗುತ್ತಿದೆ. ಇದೆಲ್ಲದರ ನಡುವೆ ಸಂಜು ಸ್ಯಾಮ್ಸನ್‌ ಮೊದಲ ಬಾರಿಗೆ ತನ್ನ ಮನದಾಳವನ್ನು ತೆರೆದಿಡುವ ಕೆಲಸ ಮಾಡಿದ್ದಾರೆ.

ಕೆಲವು ವರ್ಷಗಳು ಉಳಿದಿವೆ

ತಮ್ಮ ವೃತ್ತಿಜೀವನ ಮತ್ತು ತಂಡದಲ್ಲಿ ಅವರ ಸ್ಥಾನದ ಬಗ್ಗೆ ಜಿಯೋಹಾಟ್‌ಸ್ಟಾರ್‌ ಜೊತೆ ಮಾತನಾಡಿರುವ ಸಂಜು, ‘ನನ್ನದೇ ಆದ ರೀತಿಯಲ್ಲಿ ಕ್ರಿಕೆಟ್ ಆಡಲು ಬಯಸುತ್ತೇನೆ. ನಮ್ಮ ದೇಶದಲ್ಲಿ ನಿರಂತರ ಸ್ಪರ್ಧೆ ಇದೆ ಎಂದು ನಾನು ಅರಿತುಕೊಂಡೆ. ಹೀಗಾಗಿ ನಾನು ಈ ರೇಸ್​ನ ಭಾಗವಾಗಬಾರದು ಎಂದು ನಿರ್ಧರಿಸಿದೆ. ನಾನು ಆಟವನ್ನು ಆನಂದಿಸಲು ಬಯಸುತ್ತೇನೆ. ದೇವರ ದಯೆಯಿಂದ, ನಾನು ಬಹಳಷ್ಟು ಸಾಧಿಸಿದ್ದೇನೆ. ನನಗೆ ಈಗ 31 ವರ್ಷ, ಮತ್ತು ನನಗೆ ಇನ್ನೂ ಕೆಲವು ವರ್ಷಗಳು ಉಳಿದಿವೆ. ಹಾಗಾಗಿ, ನಾನು ನನ್ನ ಸ್ವಂತ ನಿಯಮಗಳ ಮೇಲೆ ಆಡಲು ನಿರ್ಧರಿಸಿದ್ದೇನೆ. ಹೇಗೆ ಬ್ಯಾಟಿಂಗ್ ಮಾಡಬೇಕೆಂದು ಅಥವಾ ಏನು ಮಾಡಬೇಕೆಂದು ಯಾರೂ ನನಗೆ ಹೇಳುವುದಿಲ್ಲ. ಅದನ್ನು ಸ್ವತಃ ನಾನೇ ನಿರ್ಧರಿಸುತ್ತೇನೆ.

IND vs IRE: ಸೊನ್ನೆಗೆ ಔಟ್; ವೈಭವ್ ಪಾದಾರ್ಪಣೆಗೆ ದಾರಿ ಮಾಡಿಕೊಟ್ಟ ಸಂಜು ಸ್ಯಾಮ್ಸನ್

ಆಟವನ್ನು ಆನಂದಿಸುತ್ತೇನೆ

ಎಲ್ಲ ಗೌರವಗಳೊಂದಿಗೆ ನಾನು ಆಡುತ್ತೇನೆ ಮತ್ತು ಆಟವನ್ನು ಆನಂದಿಸುತ್ತೇನೆ. ಉತ್ತಮ ತಂಡದ ಸಹ ಆಟಗಾರನಾಗಿರುತ್ತೇನೆ ಹಾಗೂ ತಂಡವನ್ನು ಬೆಂಬಲಿಸುತ್ತೇನೆ, ಆದರೆ ನಾನು ಅದನ್ನು ನನ್ನ ರೀತಿಯಲ್ಲಿ ಮಾಡುತ್ತೇನೆ. 2024 ರ ವಿಶ್ವಕಪ್ ನಂತರ, ನಾನು 2026 ರ ವಿಶ್ವಕಪ್‌ನಲ್ಲಿ ಆಡುತ್ತೇನೆ ಎಂದು ನಿರೀಕ್ಷಿಸಿರಲಿಲ್ಲ. ಒಂದು ಹಂತದಲ್ಲಿ, ನಾನು 14 ಅಥವಾ 15 ಸದಸ್ಯರ ತಂಡದಲ್ಲೂ ಇರಲಿಲ್ಲ. ಹೀಗಿರುವಾಗ ನಾನು 2028 ರ ವಿಶ್ವಕಪ್ ಬಗ್ಗೆ ಈಗಲೇ ಹೇಗೆ ಯೋಜಿಸಲಿ?. ನಾನು ಅಲ್ಲಿದ್ದರೆ, ತಂಡಕ್ಕೆ ನನ್ನ ಅಗತ್ಯವಿದ್ದರೆ, ಮತ್ತು ನಾನು ಚೆನ್ನಾಗಿ ಆಡುತ್ತಿದ್ದರೆ, ಎಲ್ಲವೂ ಚೆನ್ನಾಗಿರುತ್ತದೆ. ಇಲ್ಲದಿದ್ದರೆ, ನಾನು ತುಂಬಾ ಕೃತಜ್ಞನಾಗಿದ್ದೇನೆ. ಈ ಸಾಧನೆಯನ್ನು ಯಾರೂ ನನ್ನಿಂದ ಕಸಿದುಕೊಳ್ಳಲು ಸಾಧ್ಯವಿಲ್ಲ’ ಎಂದಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕರ್ನಾಟಕದ ಎಲ್ಲ ಸಂಸದರ ಜೊತೆ ಡಿಕೆ ಶಿವಕುಮಾರ್ ಸಭೆ , ಏನೇನು ಚರ್ಚೆ ಆಯ್ತು? ಇಲ್ಲಿದೆ ಡಿಟೇಲ್ಸ್ – Kannada News | DK Shivakumar Meeting With Karnataka All Party MPs In Delhi, here Is Meeting highlights

ನವದೆಹಲಿ, (ಜುಲೈ 27): ಸಿಎಂ ಡಿಕೆ ಶಿವಕುಮಾರ್ (DK Shivakumar) ಅವರ ನೇತೃತ್ವದಲ್ಲಿ ದೆಹಲಿಯಲ್ಲಿ (New Delhi) ನಡೆದ ಕರ್ನಾಟಕದ ಎಲ್ಲಾ ಸಂಸದರ ಸಭೆ (Karnataka MPs Meeting) ಅಂತ್ಯವಾಗಿದ್ದು, ಕೇಂದ್ರ ಸರ್ಕಾರದ ಮುಂದೆ ಬಾಕಿ ಇರುವ 13 ಅಂಶಗಳ ಬಗ್ಗೆ ಚರ್ಚೆಯಾಗಿದೆ. 15ನೇ ಹಣಕಾಸು ಆಯೋಗದ ಗ್ರಾಮ ಪಂಚಾಯಿತಿಗಳ ಅನುದಾನ, ಬೆಂಗಳೂರಿನ STRR ಯೋಜನೆ, ಕೋಲಾರದಲ್ಲಿ ರೈಲ್ವೇ ಕೋಚ್ ಕಾರ್ಖಾನೆ ಸೇರಿದಂತೆ ಇತರೆ ರಾಜ್ಯದ ಬಾಕಿ ಇರುವ ಯೋಜನೆಗಳ ಬಗ್ಗೆ ಚರ್ಚಿಸಿದ್ದು, ಇವುಗಳ ಜಾರಿಗೆಗೆ ಒಗ್ಗಟ್ಟಾಗಿ ಸಂಬಂಧಪಟ್ಟ ಸಚಿವರ ಮೇಲೆ ಒತ್ತಡ ಹೇರಲು ಸಿಎಂ ಡಿಕೆ ಶಿವಕುಮಾರ್ ಮನವಿ ಮಾಡಿದ್ದಾರೆ.

ಸಭೆಯಲ್ಲಿ ನಡೆದ ಚರ್ಚೆಯ ಅಂಶಗಳು

  • 15ನೇ ಹಣಕಾಸು ಆಯೋಗದ ಗ್ರಾಮ ಪಂಚಾಯಿತಿಗಳ ಅನುದಾನ ಬಿಡುಗಡೆಗೆ ಮನವಿ
  • ಬೆಂಗಳೂರಿನ STRR (ಸ್ಯಾಟಲೈಟ್ ಟೌನ್ ರಿಂಗ್ ರಸ್ತೆ) ಯೋಜನೆ ಅನುಮೋದನೆ ಬಾಕಿ ಬಗ್ಗೆ ಚರ್ಚೆ
  • ಬೆಂಗಳೂರು ಉಪನಗರ ರೈಲು ಯೋಜನೆಗೆ ಅನುಮೋದನೆ ದೊರಕಿಸಿಕೊಡಲು ಕೋರಿಕೆ
  • ಕೋಲಾರದಲ್ಲಿ ರೈಲ್ವೇ ಕೋಚ್ ಕಾರ್ಖಾನೆ ಜಾರಿ ಕ್ರಮಕ್ಕೆ ಮನವಿ
  • ವಾಣಿಜ್ಯ ಉದ್ದೇಶಕ್ಕೆ ಹೆಚ್ಎಎಲ್ ವಿಮಾನ ನಿಲ್ದಾಣ ಪುನರಾರಂಭಕ್ಕೆ ಒತ್ತಡ
  • ಸಾಗರಮಾಲಾ 2.0 ಕಾರ್ಯಯೋಜನೆಗೆ ತಕ್ಷಣ ಅನುಮೋದನೆ ಬೇಕು
  • ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆಗೆ ಮನವಿ
  • ತೆಂಗು ಮತ್ತು ಅಡಿಕೆ ಬೆಳೆಗಳ ಕೀಟ ನಿಯಂತ್ರಣಕ್ಕೆ ನೆರವು ಅಗತ್ಯ
  • ಕುದುರೆಮುಖ ರಾಷ್ಟ್ರೀಯ ಉದ್ಯಾನದಿಂದ ಕುಟುಂಬಗಳ ಸ್ಥಳಾಂತರ CAMPA ಯೋಜನೆಯಡಿ ₹300 ಕೋಟಿ ಅನುದಾನವನ್ನು 02.04.2025ರಂದು ಕೋರಲಾಗಿದ್ದು, ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಅನುಮೋದನೆ ಬಾಕಿಯಿದೆ.
  • ರಕ್ಷಣಾ ಇಲಾಖೆಯ ಭೂಮಿ ರಾಜ್ಯಕ್ಕೆ ವರ್ಗಾವಣೆ ಸಂಬಂಧ 15.12.2025ರಂದು ಪ್ರಸ್ತಾವನೆ ಸಲ್ಲಿಸಲಾಗಿದ್ದು, ಬೆಂಗಳೂರಿನಲ್ಲಿ 40 ಎಕರೆ, ಬೆಳಗಾವಿಯಲ್ಲಿ 668 ಎಕರೆ ಭೂಮಿ ವರ್ಗಾವಣೆಗೆ ರಕ್ಷಣಾ ಸಚಿವಾಲಯದಿಂದ ಅನುಮೋದನೆ ಪಡೆಯಬೇಕು.
  • ಬೆಂಗಳೂರು–ಮೈಸೂರು ಹಾಗೂ ಬೆಂಗಳೂರು–ಮುಂಬೈ ಮಾರ್ಗವನ್ನು ಹೈಸ್ಪೀಡ್ ಮಾರ್ಗಕ್ಕೆ ಸೇರಿಸಲು ರಾಜ್ಯ ಮನವಿ ಮಾಡಿದ್ದು, ಕಿತ್ತೂರು ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ಕೈಗಾರಿಕಾ ಬೆಳವಣಿಗೆ, ವೇಗದ ಸಂಚಾರ ಹಾಗೂ ಪ್ರಾದೇಶಿಕ ಸಮತೋಲನಕ್ಕೆ ಸಹಕಾರಿಯಾಗಲಿದೆ. ಈ ಯೋಜನೆಗೆ ಸಂಬಂಧಿತ ಕೇಂದ್ರ ಸಚಿವಾಲಯದಿಂದ ಅನುಮೋದನೆ ಕೊಡಿಸಬೇಕು.
  • ಪೊಲೀಸ್ ಆಧುನೀಕರಣಕ್ಕೆ ICJS 2.0 ಯೋಜನೆಗೆ ₹270.71 ಕೋಟಿ. ASUMP ಯೋಜನೆಯಡಿ ₹280 ಕೋಟಿ ಬಿಡುಗಡೆ ಬಾಕಿ. ಗೃಹ ಸಚಿವಾಲಯದೊಂದಿಗೆ ಚರ್ಚಿಸಿ ಅನುದಾನ ಕೊಡಿಸಬೇಕು.

ರಾಜ್ಯದ ವಿವಿಧ ವಿಧೇಯಕಗಳು

  • ಉಚಿತ ಮತ್ತು ಕಡ್ಡಾಯ ಶಿಕ್ಷಣ (ಕರ್ನಾಟಕ ತಿದ್ದುಪಡಿ) ವಿಧೇಯಕ, 2015.
  •  ಕರ್ನಾಟಕ ಖನಿಜ ಹಕ್ಕುಗಳು ಮತ್ತು ಖನಿಜಭರಿತ ಭೂಮಿ ತೆರಿಗೆ ವಿಧೇಯಕ, 2024.
  •  ಔಷಧ ಮತ್ತು ಸೌಂದರ್ಯವರ್ಧಕ (ಕರ್ನಾಟಕ ತಿದ್ದುಪಡಿ) ವಿಧೇಯಕ, 2025.
  •  ನೋಟರೀಸ್ (ಕರ್ನಾಟಕ ತಿದ್ದುಪಡಿ) ವಿಧೇಯಕ, 2025.

ಈ ವಿಧೇಯಕಗಳಿಗೆ ಗೃಹ ಸಚಿವಾಲಯ ಹಾಗೂ ಸಂಬಂಧಿತ ಕೇಂದ್ರ ಸಚಿವಾಲಯಗಳೊಂದಿಗೆ ತ್ವರಿತ ಒಪ್ಪಿಗೆ ಕೊಡಿಸಬೇಕು ಎಂದು ಎಲ್ಲಾ ಸಂದರಿಗೆ ಡಿಕೆ ಶಿವಕುಮಾರ್ ಮವವಿ ಮಾಡಿದ್ದಾರೆ.

ಸಭೆಯಲ್ಲಾದ ಚರ್ಚೆ ಬಗ್ಗೆ ವಿವರಣೆ ನೀಡಿದ ಪ್ರಲ್ಹಾದ್ ಜೋಶಿ

ಸಭೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಮುಖ್ಯಮಂತ್ರಿ ರಾಜ್ಯದ ಎಲ್ಲ ಸಂಸದರ ಸಭೆ ಕರೆದಿದ್ದರು ತೆರಿಗೆ ಹಂಚಿಕೆ ಸೇರಿ ಹಲವು ವಿಚಾರಗಳು ಚರ್ಚೆಗೆ ಬಂದಿತ್ತು. ಸಭೆಯಲ್ಲಿ ನಾನು ಒಂದು ಸಲಹೆ ನೀಡಿದ್ದೇನೆ. ಸಂಸತ್ ಅಧಿವೇಶನಕ್ಕೂ ಮುನ್ನ ಸಭೆ ನಡೆಸಲು ಹೇಳಿದ್ದೇನೆ. ಸಂಘರ್ಷ ಬೇಡ ಸಹಕಾರದಲ್ಲಿ ಕೆಲಸ ಮಾಡೋಣ ಎಂದು ಸಿಎಂ ಹೇಳಿದ್ದು, ರಾಜ್ಯದ ಹಿತಕ್ಕಾಗಿ ಸಹಕಾರ ನೀಡುವ ಭರವಸೆ ನೀಡಿದ್ದೇವೆ. ಕರ್ನಾಟಕ ತೆರಿಗೆ ಹಂಚಿಕೆ ಹೆಚ್ಚಾಗಿದೆ, ಮೂಲ ಸೌಕರ್ಯಗಳು, ನೀರಾವರಿ, ರೈಲ್ವೆಗೆ ಅನುದಾನವನ್ನ ಕೇಂದ್ರ ಸರ್ಕಾರ ಹೆಚ್ಚಿಸಿದೆ ಎಂದರು.

ಮೇಕೆದಾಟು ವಿಚಾರದಲ್ಲಿ ರಾಜಕೀಯ ಹೇಳಿಕೆ ನೀಡುವುದಿಲ್ಲ. ರಾಜ್ಯ ಪರಿಷ್ಕೃತ DPR ಕೊಡಬೇಕು, ಕಾವೇರಿ, ಗೋವಾವರಿ, ಕೃಷ್ಣಾ ನದಿಗಳನ್ನು ಸಂಪರ್ಕಿಸಬೇಕಿದೆ. ಜಲಾಶಯಗಳ ಹೂಳು ಎತ್ತಲು ಕೇಂದ್ರ ಕ್ರಮ ತೆಗೆದುಕೊಳ್ಳುತ್ತಿದೆ. ನಿಮ್ಮ ಸಹಕಾರ ಬೇಕು ಎಂದು ನಾವು ಕೇಳಿದ್ದೇವೆ. ಮೇಕೆದಾಟು ವಿಚಾರದಲ್ಲಿ ನಾವು ಸಹಕರಿಸಿದ್ದಕ್ಕೆ ಕೇಂದ್ರ ಸರ್ಕಾರದಿಂದ ರಾಜ್ಯದ ಪರವಾಗಿ ಉತ್ತರ ಬಂದಿದೆ. ಪರಿಷ್ಕೃತ ಡಿಪಿಆರ್ ಮಾಡಲು ಕೇಂದ್ರ ಸರ್ಕಾರ ಹೇಳಿದೆ. ನೀವು ತಮಿಳುನಾಡು ಸಿಎಂ ಜೊತೆಗೂ ಮಾತನಾಡಿ ಎಂದಿದ್ದೇವೆ. ಮಹದಾಯಿ ವಿಚಾರದಲ್ಲಿ ಪರಿಸರ ಅನುಮತಿ ಬಗ್ಗೆ ನೀಡಿಲ್ಲ.ಕಾನೂನು ವ್ಯಾಪ್ತಿಯಲ್ಲಿದೆ ಎಂದಿದೆ, ಈ ಸಮಸ್ಯೆ ಇತ್ಯರ್ಥವಾಗಬೇಕಿದೆ ಎಂದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 9:45 pm, Mon, 27 July 26

Source link

ರಿಷಬ್ ಶೆಟ್ಟಿ ಸಿನಿಮಾಗೆ ಬಾಲಿವುಡ್ ನಟಿ ಎಂಟ್ರಿ: ಬೆಳವಡಿ ಮಲ್ಲಮ್ಮ ಪಾತ್ರದಲ್ಲಿ ಭೂಮಿ ಪೆಡ್ನೇಕರ್ – Kannada News | Bhumi Pednekar to play Belawadi Mallamma in Rishab Shetty movie Chhatrapati Shivaji

ನ್ಯಾಷನಲ್ ಅವಾರ್ಡ್ ವಿಜೇತ ನಟ ರಿಷಬ್ ಶೆಟ್ಟಿ (Rishab Shetty) ಅಭಿನಯದ ಬಹುನಿರೀಕ್ಷಿತ ಐರಿಹಾಸಿಕ ಸಿನಿಮಾ ‘ದಿ ಪ್ರೈಡ್ ಆಫ್ ಭಾರತ್: ಛತ್ರಪತಿ ಶಿವಾಜಿ ಮಹಾರಾಜ್’ (The Pride of Bharat: Chhatrapati Shivaji Maharaj) ಚಿತ್ರತಂಡಕ್ಕೆ ಇದೀಗ ಬಾಲಿವುಡ್ ನಟಿ ಭೂಮಿ ಪೆಡ್ನೇಕರ್ (Bhumi Pednekar) ಸೇರ್ಪಡೆಯಾಗಿದ್ದಾರೆ. ಈ ಬಿಗ್ ಬಜೆಟ್ ಸಿನಿಮಾದಲ್ಲಿ ಅವರು ಕರ್ನಾಟಕದ ಧೀರ ಮಹಿಳೆ ಬೆಳವಡಿ ಮಲ್ಲಮ್ಮನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಪಾತ್ರ ಸಿಕ್ಕಿರುವುದಕ್ಕೆ ಅವರು ಸಂತಸ ವ್ಯಕ್ತಪಡಿಸಿದ್ದಾರೆ.

ಸಂದೀಪ್ ಸಿಂಗ್ ನಿರ್ದೇಶಿಸಿ, ನಿರ್ಮಿಸುತ್ತಿರುವ ‘ಛತ್ರಪತಿ ಶಿವಾಜಿ ಮಹಾರಾಜ್’ ಸಿನಿಮಾ ಮಹಾರಾಷ್ಟ್ರ ಹಾಗೂ ಕರ್ನಾಟಕದ ಇತಿಹಾಸದ ಮಹತ್ವದ ಘಟನೆಗಳನ್ನು ಆಧರಿಸಿದೆ. ಛತ್ರಪತಿ ಶಿವಾಜಿ ಮಹಾರಾಜರ ಜೀವನ ಹಾಗೂ ಸಾಧನೆಗಳ ಸುತ್ತ ಸಾಗುವ ಈ ಬೃಹತ್ ಚಿತ್ರದಲ್ಲಿ ರಿಷಬ್ ಶೆಟ್ಟಿ ಅವರು ಶಿವಾಜಿ ಮಹಾರಾಜರಾಗಿ ಮಿಂಚಲಿದ್ದು, ಅರ್ಜುನ್ ರಾಂಪಾಲ್ ಮತ್ತು ವಿವೇಕ್ ಒಬೆರಾಯ್ ಪ್ರಮುಖ ಪಾತ್ರಗಳಲ್ಲಿದ್ದಾರೆ.

‘ಕಾಂತಾರ’ ಫ್ಯಾನ್ ಎಂದ ಭೂಮಿ ಪೆಡ್ನೇಕರ್:

‘ಛತ್ರಪತಿ ಶಿವಾಜಿ ಮಹಾರಾಜ್’ ಸಿನಿಮಾದಲ್ಲಿ ಅಭಿನಯಿಸುತ್ತಿರುವ ಬಗ್ಗೆ ಸಂತಸ ಹಂಚಿಕೊಂಡಿರುವ ಭೂಮಿ ಪೆಡ್ನೇಕರ್, ‘ಶಿವಾಜಿ ಮಹಾರಾಜರ ಜೀವನಾಧಾರಿತ ಈ ಐತಿಹಾಸಿಕ ಚಿತ್ರದಲ್ಲಿ ಭಾಗಿಯಾಗುತ್ತಿರುವುದು ನನ್ನ ಪಾಲಿನ ಗೌರವ. ಅದರಲ್ಲಿಯೂ ಕರ್ನಾಟಕದ ಸಾಹಸಿ ವೀರಾಂಗನೆ ಬೆಳವಡಿ ಮಲ್ಲಮ್ಮ ಅವರ ಪಾತ್ರವನ್ನು ತೆರೆಮೇಲೆ ತರುತ್ತಿರುವುದು ಅತ್ಯಂತ ಹೆಮ್ಮೆಯ ವಿಷಯ. ನಾನು ಕಾಂತಾರ ಸಿನಿಮಾದ ದೊಡ್ಡ ಫ್ಯಾನ್. ಅದರಲ್ಲಿ ರಿಷಬ್ ಶೆಟ್ಟಿ ಅವರ ಅಭಿನಯ ನನ್ನನ್ನು ಬೆರಗುಗೊಳಿಸಿತ್ತು’ ಎಂದು ಹೇಳಿದ್ದಾರೆ.

ಇದನ್ನೂ ಓದಿ: ರಿಷಬ್ ಶೆಟ್ಟಿ ನಟನೆಯ ‘ಛತ್ರಪತಿ ಶಿವಾಜಿ ಮಹಾರಾಜ್’ ಚಿತ್ರಕ್ಕೆ ‘ಗೇಮ್ ಆಫ್ ಥ್ರೋನ್ಸ್’ ಸಾಹಸ ನಿರ್ದೇಶಕ

ಎರಡು ಭಾಗಗಳಲ್ಲಿ ಅದ್ಧೂರಿ ಸಿನಿಮಾ:

ಈ ಚಿತ್ರವನ್ನು ಎರಡು ಭಾಗಗಳಲ್ಲಿ ತೆರೆಗೆ ತರಲು ಚಿತ್ರತಂಡ ಯೋಜಿಸಿದೆ. ರಿಷಿ ವಿರ್ಮಾನಿ ಚಿತ್ರಕಥೆ ಬರೆಯುತ್ತಿದ್ದು, ರಾಷ್ಟ್ರಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ಅಮಿತ್ ತ್ರಿವೇದಿ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಪ್ರಸೂನ್ ಜೋಶಿ ಸಾಹಿತ್ಯ ಒದಗಿಸುತ್ತಿದ್ದಾರೆ. ದೊಡ್ಡ ಮಟ್ಟದ ತಾಂತ್ರಿಕ ತಂಡದೊಂದಿಗೆ ಸಿನಿಮಾ ಪ್ರೀ-ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version