Chanakya Niti: ಈ ನಾಲ್ಕು ತಪ್ಪುಗಳು ವ್ಯಕ್ತಿಯ ಜೀವನವನ್ನೇ ಹಾಳು ಮಾಡುತ್ತವೆ – Kannada News | Chanakya Niti: These four mistakes can ruin a person’s life

ಆಚಾರ್ಯ ಚಾಣಕ್ಯರು (Acharya Chanakya) ರಾಜಕೀಯ ಮಾತ್ರವಲ್ಲ ಜೀವನಕ್ಕೆ ಸಂಬಂಧಿಸಿದ ಸಾಕಷ್ಟು ವಿಚಾರಗಳ ಬಗ್ಗೆ ತನ್ನ ನೀತಿಶಾಸ್ತ್ರದಲ್ಲಿ ತಿಳಿಸಿಕೊಟ್ಟಿದ್ದಾರೆ. ಹೌದು ಶ್ರೀಮಂತಿಕೆ ಗಳಿಸುವುದು ಹೇಗೆ, ಯಶಸ್ಸನ್ನು ಸಾಧಿಸಲು ಏನು ಮಾಡಬೇಕು, ದಾಂಪತ್ಯ ಜೀವನ ಸುಖಕರವಾಗಿರಲು ಏನು ಮಾಡಬೇಕು, ಎಂತಹ ಸ್ನೇಹಿತರನ್ನು ಆಯ್ಕೆ ಮಾಡಬೇಕು ಹೀಗೆ ಪ್ರತಿಯೊಂದು ಸೂಕ್ಷ್ಮ ವಿಚಾರಗಳ ಬಗ್ಗೆಯೂ ಹೇಳಿದ್ದಾರೆ. ಅದೇ ರೀತಿ ಅವರು ವ್ಯಕ್ತಿಯ ಈ ಕೆಲವೊಂದು ಅಭ್ಯಾಸಗಳು ಆತನ ಜೀವನವನ್ನೇ ಸಂಪೂರ್ಣವಾಗಿ ಹಾಳು ಮಾಡುತ್ತದೆ ಎಂದಿದ್ದಾರೆ.  ಹಾಗಿದ್ರೆ ಯಾವೆಲ್ಲಾ ಅಭ್ಯಾಸಗಳು ವ್ಯಕ್ತಿಯ ಜೀವನವನ್ನು ಹಾಳು ಮಾಡುತ್ತದೆ, ಯಶಸ್ಸನ್ನು ಸಾಧಿಸಲು ಯಾವೆಲ್ಲಾ ಅಭ್ಯಾಸಗಳನ್ನು ಬದಲಾಯಿಸಬೇಕು  ಎಂಬುದನ್ನು ನೋಡೋಣ ಬನ್ನಿ.

ವ್ಯಕ್ತಿಯ ಜೀವನವನ್ನು ಹಾಳು ಮಾಡುವ ಅಭ್ಯಾಸಗಳು:

ಸೋಮಾರಿತನ: ಆಚಾರ್ಯ ಚಾಣಕ್ಯರ ಪ್ರಕಾರ ಸೋಮಾರಿತನವು ವ್ಯಕ್ತಿಯ ದೊಡ್ಡ ಶತ್ರುವಾಗಿದ್ದು, ಇದು  ಜೀವನದ ಪ್ರಗತಿಗೆ ಅಡ್ಡಿಯಾಗುತ್ತದೆ. ಸೋಮಾರಿತನವಿದ್ದರೆ ಜೀವನದಲ್ಲಿ ಪ್ರಗತಿ ಸಾಧಿಸಲು ಸಾಧ್ಯವಿಲ್ಲ, ಈ ಒಂದು ಅಭ್ಯಾಸದಿಂದ ಸಂಪೂರ್ಣ ಜೀವನವೇ ಹಾಳಾಗುತ್ತದೆ. ಆದ್ದರಿಂದ, ಜೀವನವನ್ನು ಹಾಳು ಮಾಡುವ ಈ ಅಭ್ಯಾಸವನ್ನು ತ್ಯಜಿಸಿ. ಸೋಮಾರಿತನವನ್ನು ಬದಿಗಿಟ್ಟು, ಶ್ರದ್ಧೆಯಿಂದ ಕೆಲಸ ಮಾಡಿದರೆ ಮಾತ್ರ ಜೀವನದಲ್ಲಿ ಪ್ರಗತಿ ಸಾಧಿಸಲು ಸಾಧ್ಯ.

ಯೋಚಿಸದೆ ವರ್ತಿಸುವುದು: ಯಾವುದೇ ಕೆಲಸವನ್ನು ಸಹ ಯೋಚಿಸದೆ ಕೈಗೊಳ್ಳಬಾರದು ಎಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ. ಯೋಚಿಸದೆ ನಿರ್ಧಾರವನ್ನು ತೆಗೆದುಕೊಳ್ಳುವುದರಿಂದ, ಯೋಚಿಸದೆ ಯಾವುದೇ ಕಾರ್ಯವನ್ನು ಕೈಗೊಳ್ಳುವುದರಿಂದ ಅದರಿಂದ ತೊಂದರೆಗಳಾಗುವುದೇ ಹೆಚ್ಚು. ಇದು ಜೀವನದ ಮೇಲೆ ಸಾಕಷ್ಟು ಪರಿಣಾಮಗಳನ್ನು ಬೀರುತ್ತವೆ. ಆದ್ದರಿಂದ ಎಂದಿಗೂ ಯೋಚಿಸದೆ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ.

ಇದನ್ನೂ ಓದಿ: ರೀತಿಯ ಜನರು ಮೋಸ ಹೋಗ್ತಾರೆ ಎನ್ನುತ್ತಾರೆ ಚಾಣಕ್ಯ

ಕೆಟ್ಟವರ ಸಹವಾಸ: ಕೆಟ್ಟವರ ಸಹವಾಸ ಒಳ್ಳೆಯದಲ್ಲ. ಈ ಸಹವಾಸ ದೋಷವು ಜೀವನವನ್ನು ಸರ್ವನಾಶ ಮಾಡುತ್ತದೆ. ಹೌದು ಕೆಟ್ಟವರ ಜೊತೆ ಸೇರಿದಾಗ ಅವರ ಕೆಟ್ಟ ಅಭ್ಯಾಸಗಳನ್ನೇ ನಾವು ಅಳವಡಿಸಿಕೊಳ್ಳುತ್ತೇವೆ. ಇದರಿಂದ ಜೀವನದಲ್ಲಿ ಯಾವುದೇ ಪ್ರಗತಿ ಸಾಧಿಸಲು ಸಾಧ್ಯವಾಗುವುದಿಲ್ಲ ಎನ್ನುತ್ತಾರೆ ಆಚಾರ್ಯ ಚಾಣಕ್ಯ. ಹಾಗಾಗಿ ಕೆಟ್ಟವರ ಸಹವಾಸದಿಂದ ದೂರವಿರಿ, ಒಳ್ಳೆಯರು ಹಾಗೂ ಸಕಾರಾತ್ಮಕ ಮನೋಭಾವವಿರುವ ಜನರೊಂದಿಗೆ ಬೆರೆಯಿರಿ.

ಸಮಯ ವ್ಯರ್ಥ ಮಾಡುವುದು: ಸಮಯ ವ್ಯರ್ಥ ಮಾಡುವುದು ಒಳ್ಳೆಯ ಅಭ್ಯಾಸವಲ್ಲ ಎನ್ನುತ್ತಾರೆ ಚಾಣಕ್ಯ. ಕಠಿಣ ಪರಿಶ್ರಮದ ಮೂಲಕ ಕಳೆದುಹೋದ ಹಣವನ್ನು ಮರುಪಡೆಯಬಹುದು, ಆದರೆ ಒಮ್ಮೆ ಕಳೆದು ಹೋದ ಸಮಯವನ್ನು ಮರಳಿ ಪಡೆಯಲು ಸಾಧ್ಯವಿಲ್ಲ. ಆದ್ದರಿಂದ ಎಂದಿಗೂ ಸಮಯವನ್ನು ವ್ಯರ್ಥ ಮಾಡಬೇಡಿ. ಸಮಯ ವ್ಯರ್ಥ ಮಾಡುವುದರಿಂದ ಏನನ್ನೂ ಸಾಧಿಸಲು ಸಾಧ್ಯವಾಗುವುದಿಲ್ಲ. ಈ ಅಭ್ಯಾಸವಿರುವವರ ಸಂಪೂರ್ಣ ಜೀವನವೇ ಹಾಳಾಗುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 9:16 pm, Mon, 27 July 26

Source link

ಪಶುವೈದ್ಯ ನೇಮಕಾತಿ ಹಗರಣ: ಸಿಬಿಐ ತನಿಖೆಗೆ ಒಪ್ಪಿಸುವುದು ಸೂಕ್ತ ಎಂದ ಶಾಸಕ ಸುರೇಶ್ ಕುಮಾರ್ – Kannada News | KPSC Veterinary Recruitment Scam: Suresh Kumar Calls for CBI Investigation

ಬೆಂಗಳೂರು, ಜುಲೈ 27: ‘ಕರ್ನಾಟಕ ಲೋಕಸೇವಾ ಆಯೋಗದಲ್ಲಿ ಸೇವೆ ಎಂಬುದು ಸಂಪೂರ್ಣವಾಗಿ ಮಾಯವಾಗಿದೆ. ಅದು ಸಾರ್ವಜನಿಕ ಸೇವಾ ಆಯೋಗವಾಗಿ ಉಳಿಯದೆ, ಖಾಸಗಿ ಕಮಿಷನ್ ರೂಪ ಪಡೆದುಕೊಂಡಿದೆ’ ಎಂದು ಬಿಜೆಪಿ ಶಾಸಕ ಎಸ್​.ಸುರೇಶ್ ಕುಮಾರ್​ ಟೀಕಿಸಿದ್ದಾರೆ. ಕೆಪಿಎಸ್‌ಸಿ ಕಚೇರಿಗೆ ಬಿಜೆಪಿ ನಿಯೋಗ ಭೇಟಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು,  ‘ಕೆಪಿಎಸ್​ಸಿ ಇಂದು ಪ್ರೈವೇಟ್ ಸರ್ವೀಸ್ ಕಮಿಷನ್ ಆಗಿದೆ. ಕೆಪಿಎಸ್​ಸಿಗೆ ಕೂಡ ಮುಜುಗರ ಆಗುವ ರೀತಿ ಹಗರಣ ಆಗಿದೆ. ಹೀಗಾಗಿ ಸಿಬಿಐ ತನಿಖೆಗೆ ಆಗ್ರಹ ಬಗ್ಗೆ ಸಭೆಯಲ್ಲಿ ತಿಳಿಸುವುದಾಗಿ ಹೇಳಿದ್ದಾರೆ. ಸರ್ಕಾರ ಕೂಡ ಕ್ರಮ ವಹಿಸಬೇಕು’ ಎಂದಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಮಕ್ಕಳ ಆರೋಗ್ಯ ಕಾಪಾಡಲು ಡಯಟ್‌ನಲ್ಲಿ ಇರಬೇಕಾದ ಪ್ರಮುಖ ಆಹಾರಗಳು – Kannada News | Healthy Lifestyle Habits to Keep Kids Fit and Active

ಇತ್ತೀಚಿನ ದಿನಗಳಲ್ಲಿ ಮಕ್ಕಳ ಜೀವನಶೈಲಿಯಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಹಿಂದೆ ಮಕ್ಕಳು ಹೊರಾಂಗಣದಲ್ಲಿ ಹೆಚ್ಚು ಸಮಯ ಆಟವಾಡುತ್ತಾ ತಮ್ಮ ಸಮಯವನ್ನು ಕಳೆಯುತ್ತಿದ್ದರು. ಆದರೆ ಈಗ ಮೊಬೈಲ್, ಟಿವಿ, ಟ್ಯಾಬ್ಲೆಟ್ ಮತ್ತು ವಿಡಿಯೊ ಗೇಮ್‌ಗಳ ಬಳಕೆ ಹೆಚ್ಚಿರುವುದರಿಂದ ದೈಹಿಕ ಚಟುವಟಿಕೆ ಕಡಿಮೆಯಾಗಿದೆ. ಇದರ ಜೊತೆಗೆ ಫಾಸ್ಟ್ ಫುಡ್, ಸಕ್ಕರೆ ಹೆಚ್ಚಿರುವ ಪಾನೀಯಗಳು ಮತ್ತು ಪ್ಯಾಕೆಟ್ ಸ್ನ್ಯಾಕ್ಸ್‌ಗಳ ಸೇವನೆಯೂ ಹೆಚ್ಚಾಗಿದೆ. ಪರಿಣಾಮವಾಗಿ ಮಕ್ಕಳಲ್ಲಿ ಸ್ಥೂಲಕಾಯ (Childhood Obesity) ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಮಕ್ಕಳಲ್ಲಿ ಅಧಿಕ ತೂಕವು ಕೇವಲ ದೇಹದ ಆಕಾರದ ಸಮಸ್ಯೆಯಲ್ಲ. ಇದು ಮುಂದಿನ ದಿನಗಳಲ್ಲಿ ಮಧುಮೇಹ, ಅಧಿಕ ರಕ್ತದೊತ್ತಡ, ಕೊಬ್ಬಿನ ಯಕೃತ್ತು (Fatty Liver), ಹೃದಯ ಸಂಬಂಧಿ ಕಾಯಿಲೆಗಳು ಹಾಗೂ ಮಾನಸಿಕ ಆರೋಗ್ಯದ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸಬಹುದು. ಆದ್ದರಿಂದ ಬಾಲ್ಯದಿಂದಲೇ ಆರೋಗ್ಯಕರ ಜೀವನಶೈಲಿ ರೂಢಿಸಿಕೊಳ್ಳುವುದು ಅತ್ಯಗತ್ಯ.

ಮಕ್ಕಳ ತೂಕ ನಿಯಂತ್ರಣಕ್ಕೆ ಈ ಆರೋಗ್ಯಕರ ಅಭ್ಯಾಸಗಳನ್ನು ಅಳವಡಿಸಿಕೊಳ್ಳಿ:

ಪ್ರತಿದಿನ ದೈಹಿಕ ಚಟುವಟಿಕೆಗೆ ಉತ್ತೇಜನ ನೀಡಿ: ಮಕ್ಕಳು ಪ್ರತಿದಿನ ಕನಿಷ್ಠ 60 ನಿಮಿಷಗಳ ಕಾಲ ರನ್ನಿಂಗ್, ಸೈಕಲ್ ಸವಾರಿ, ಈಜು, ಕ್ರೀಡೆ ಅಥವಾ ಇತರೆ ದೈಹಿಕ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ಇದರಿಂದ ಹೆಚ್ಚುವರಿ ಕ್ಯಾಲೊರಿಗಳು ಕರಗುತ್ತವೆ ಮತ್ತು ದೇಹ ಫಿಟ್ ಆಗಿರುತ್ತದೆ.

ಸಕ್ಕರೆ ಹೆಚ್ಚಿರುವ ಪಾನೀಯಗಳನ್ನು ಕಡಿಮೆ ಮಾಡಿ: ಕೋಲ್ಡ್ ಡ್ರಿಂಕ್ಸ್, ಪ್ಯಾಕೆಟ್ ಜ್ಯೂಸ್, ಎನರ್ಜಿ ಡ್ರಿಂಕ್ಸ್ ಮತ್ತು ಹೆಚ್ಚು ಸಕ್ಕರೆ ಇರುವ ಪಾನೀಯಗಳ ಬದಲು ನೀರು, ಹಾಲು, ಮಜ್ಜಿಗೆ ಅಥವಾ ಮನೆಯಲ್ಲಿ ತಯಾರಿಸಿದ ಸಕ್ಕರೆ ರಹಿತ ಪಾನೀಯಗಳನ್ನು ನೀಡಿ.

ಮನೆಯಲ್ಲೇ ತಯಾರಿಸಿದ ಆರೋಗ್ಯಕರ ಆಹಾರ ನೀಡಿ: ಪಿಜ್ಜಾ, ಬರ್ಗರ್, ಫ್ರೆಂಚ್ ಫ್ರೈಸ್, ಚಿಪ್ಸ್ ಹಾಗೂ ಇನ್‌ಸ್ಟಂಟ್ ಆಹಾರಗಳ ಬದಲು ಮನೆಯಲ್ಲಿ ತಯಾರಿಸಿದ ಪೌಷ್ಟಿಕ ಆಹಾರವನ್ನು ಮಕ್ಕಳಿಗೆ ನೀಡಿ. ಮನೆಯ ಆಹಾರದಲ್ಲಿ ಅಗತ್ಯ ಪೋಷಕಾಂಶಗಳು ಸಮತೋಲನವಾಗಿ ದೊರೆಯುತ್ತವೆ.

ಇದನ್ನೂ ಓದಿ: ಶಾಲಾ ಮಕ್ಕಳಲ್ಲಿ ಹೆಚ್ಚಿದ ಆರೋಗ್ಯ ಸಮಸ್ಯೆ: ಜಂಕ್​​ ಫುಡ್​​​ ವಿರುದ್ಧ ಸಮರ ಸಾರಿದ ಆಹಾರ ಸುರಕ್ಷಿತ ಇಲಾಖೆ

ಸ್ಕ್ರೀನ್ ಟೈಮ್‌ಗೆ ಮಿತಿ ಹಾಕಿ: ಮೊಬೈಲ್, ಟಿವಿ ಮತ್ತು ಟ್ಯಾಬ್ಲೆಟ್ ಬಳಕೆಯನ್ನು ನಿಯಂತ್ರಿಸಿ. ಹೆಚ್ಚು ಸಮಯ ಸ್ಕ್ರೀನ್ ಮುಂದೆ ಕಳೆಯುವುದರಿಂದ ಮಕ್ಕಳು ಚಟುವಟಿಕೆ ಕಡಿಮೆ ಮಾಡುತ್ತಾರೆ ಮತ್ತು ತೂಕ ಹೆಚ್ಚಾಗುವ ಸಾಧ್ಯತೆ ಇರುತ್ತದೆ.

ಸಾಕಷ್ಟು ನಿದ್ರೆ ಮಾಡಿಸಿರಿ: ವಯಸ್ಸಿಗೆ ತಕ್ಕಷ್ಟು ನಿದ್ರೆ ಮಕ್ಕಳ ಬೆಳವಣಿಗೆ ಮತ್ತು ಹಾರ್ಮೋನ್ ಸಮತೋಲನಕ್ಕೆ ಅಗತ್ಯ. ನಿದ್ರೆಯ ಕೊರತೆ ಹಸಿವಿನ ಹಾರ್ಮೋನ್‌ಗಳ ಮೇಲೆ ಪರಿಣಾಮ ಬೀರಬಹುದು ಮತ್ತು ಹೆಚ್ಚು ತಿನ್ನುವ ಪ್ರವೃತ್ತಿಯನ್ನು ಹೆಚ್ಚಿಸಬಹುದು.

ಮಕ್ಕಳ ಆಹಾರದಲ್ಲಿ ಏನೆಲ್ಲ ಇರಬೇಕು?

ಮಕ್ಕಳ ದೈನಂದಿನ ಆಹಾರದಲ್ಲಿ ಈ ಪೌಷ್ಟಿಕ ಆಹಾರಗಳನ್ನು ಸೇರಿಸಿ:

  • ತಾಜಾ ಹಣ್ಣುಗಳು
  • ಹಸಿರು ತರಕಾರಿಗಳು
  • ಸಂಪೂರ್ಣ ಧಾನ್ಯಗಳು
  • ಬೇಳೆಕಾಳುಗಳು
  • ಹಾಲು, ಮೊಸರು, ಪನ್ನೀರ್
  • ಮೊಟ್ಟೆ
  • ಮೀನು ಮತ್ತು ಕೋಳಿ (ಸೇವಿಸುವವರಲ್ಲಿ)
  • ಒಣಹಣ್ಣುಗಳು ಮತ್ತು ಬೀಜಗಳು
  • ಸಕ್ಕರೆ, ಉಪ್ಪು ಮತ್ತು ಎಣ್ಣೆ ಹೆಚ್ಚಿರುವ ಆಹಾರಗಳನ್ನು ಮಿತವಾಗಿ ನೀಡಬೇಕು.

ಪೋಷಕರು ಗಮನಿಸಬೇಕಾದ ಪ್ರಮುಖ ವಿಷಯಗಳು

  • ಮಕ್ಕಳಿಗೆ ಹಸಿವಾದಾಗ ಮಾತ್ರ ಆಹಾರ ನೀಡಿ.
  • ಟಿವಿ ಅಥವಾ ಮೊಬೈಲ್ ನೋಡುತ್ತಾ ಊಟ ಮಾಡುವ ಅಭ್ಯಾಸ ಬಿಡಿಸಿ.
  • ಕುಟುಂಬದ ಎಲ್ಲರೂ ಆರೋಗ್ಯಕರ ಆಹಾರ ಪದ್ಧತಿ ಅನುಸರಿಸಿದರೆ ಮಕ್ಕಳು ಕೂಡ ಅದನ್ನು ಅನುಸರಿಸುತ್ತಾರೆ.
  • ಮಕ್ಕಳ ತೂಕವನ್ನು ನಿಯಮಿತವಾಗಿ ಪರಿಶೀಲಿಸಿ.

ಮಕ್ಕಳಲ್ಲಿ ಹೆಚ್ಚುತ್ತಿರುವ ತೂಕದಿಂದ ಉಂಟಾಗಬಹುದಾದ ಸಮಸ್ಯೆಗಳು

  • ಬಾಲ್ಯದಲ್ಲೇ ಟೈಪ್-2 ಮಧುಮೇಹ
  • ಅಧಿಕ ರಕ್ತದೊತ್ತಡ
  • ಕೊಲೆಸ್ಟ್ರಾಲ್ ಹೆಚ್ಚಳ
  • ಫ್ಯಾಟಿ ಲಿವರ್
  • ಉಸಿರಾಟದ ತೊಂದರೆ
  • ಕೀಲು ನೋವು
  • ಆತ್ಮವಿಶ್ವಾಸದ ಕೊರತೆ
  • ಖಿನ್ನತೆ ಮತ್ತು ಆತಂಕ

ಮಕ್ಕಳಿಗೆ ಆರೋಗ್ಯಕರ ಸ್ನ್ಯಾಕ್ಸ್ ಯಾವುವು?

  • ಸೇಬು, ಬಾಳೆಹಣ್ಣು, ಪಪ್ಪಾಯಿ
  • ಮೊಳಕೆ ಬಂದ ಕಾಳುಗಳು
  • ಬೇಯಿಸಿದ ಜೋಳ
  • ಕಡಲೆಕಾಯಿ
  • ಮೊಸರು
  • ಬೇಯಿಸಿದ ಮೊಟ್ಟೆ
  • ರಾಗಿ ಲಡ್ಡು ಅಥವಾ ರಾಗಿ ಮಾಲ್ಟ್
  • ಮನೆಯಲ್ಲೇ ತಯಾರಿಸಿದ ಸ್ಯಾಂಡ್‌ವಿಚ್

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅತ್ಯಾಚಾರ, ಕೊಲೆ, ದರೋಡೆ ಮಾಡಿದ್ದ 2873 ಕ್ರಿಮಿನಲ್​ಗಳು ದೆಹಲಿ ಪ್ರತಿಭಟನೆಯಲ್ಲಿ ಭಾಗಿ; ಹೊಸ ತಂತ್ರಜ್ಞಾನದಿಂದ ಪತ್ತೆ – Kannada News | Delhi Police alleges 2873 with criminal Records were present at the protest site

ನವದೆಹಲಿ, ಜುಲೈ 27: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ (Delhi Protest) ನಡೆದ ಕಾಕ್ರೋಚ್ ಜನತಾ ಪಾರ್ಟಿ (CJP) ಪ್ರತಿಭಟನೆಯಲ್ಲಿ ವಿವಿಧ ಅಪರಾಧ ಹಿನ್ನೆಲೆ ಹೊಂದಿರುವ ಸುಮಾರು 2,873 ವ್ಯಕ್ತಿಗಳು ಭಾಗಿಯಾಗಿದ್ದರು ಎಂದು ಪತ್ತೆಹಚ್ಚಲಾಗಿದೆ ಎಂದು ದೆಹಲಿ ಪೊಲೀಸ್ ಮೂಲಗಳು ತಿಳಿಸಿವೆ. ‘ಫೇಶಿಯಲ್ ರೆಕಗ್ನಿಷನ್ ಸಿಸ್ಟಮ್’ (FRS) ಕ್ಯಾಮೆರಾಗಳ ಮೂಲಕ ಗುರುತಿಸಲಾದ ಈ ಪೈಕಿ ಹೆಚ್ಚಿನವರು ಈ ಹಿಂದೆ ಕೊಲೆ, ದರೋಡೆ, ಅತ್ಯಾಚಾರ, ಅಪಹರಣ, ಶಸ್ತ್ರಾಸ್ತ್ರ ಕಾಯ್ದೆ ಹಾಗೂ ಮಾದಕದ್ರವ್ಯ ಪ್ರಕರಣಗಳು ಸೇರಿದಂತೆ ಗಂಭೀರ ಅಪರಾಧಗಳಲ್ಲಿ ಭಾಗಿಯಾಗಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಜುಲೈ 20ರಂದು ಹಿಂಸಾಚಾರ ಭುಗಿಲೆದ್ದ ಪ್ರತಿಭಟನಾ ಸ್ಥಳಗಳಲ್ಲಿ ಅಥವಾ ಅದರ ಸುತ್ತಮುತ್ತ ಈ ವ್ಯಕ್ತಿಗಳು ಭಾಗವಹಿಸಿದ್ದರು ಎಂದು ಅಧಿಕಾರಿಗಳು ಆರೋಪಿಸಿದ್ದಾರೆ. ಈ ಹೊಸ ತಂತ್ರಜ್ಞಾನದಿಂದ ಗುರುತಿಸಲಾದ ಹೆಚ್ಚಿನ ವ್ಯಕ್ತಿಗಳು ಈಶಾನ್ಯ ದೆಹಲಿಯ ಜಾಫರಾಬಾದ್, ಚಂದ್ ಬಾಗ್ ಮತ್ತು ಸೀಲಂಪುರ ಹಾಗೂ ಆಗ್ನೇಯ ದೆಹಲಿಯ ಜಾಮಿಯಾ ನಗರ, ಶಾಹೀನ್ ಬಾಗ್ ಮತ್ತು ಓಖ್ಲಾ ಪ್ರದೇಶಗಳಲ್ಲಿ ಕಂಡುಬಂದಿದ್ದಾರೆ. ಕೆಲವರನ್ನು ಮಧ್ಯ ದೆಹಲಿಯ ಭಾಗಗಳಲ್ಲೂ ಪತ್ತೆ ಹಚ್ಚಲಾಗಿದೆ.

ಪ್ರತಿಭಟನೆಯ ವೇಳೆ ನಡೆದ ಹಿಂಸಾಚಾರದ ಸಿಸಿಟಿವಿ ದೃಶ್ಯಾವಳಿಗಳನ್ನು ದೆಹಲಿ ಪೊಲೀಸರು ಬಿಡುಗಡೆ ಮಾಡಿದ್ದಾರೆ. ಈ ವಿಡಿಯೋಗಳಲ್ಲಿ ಪ್ರತಿಭಟನಾಕಾರರು ಬ್ಯಾರಿಕೇಡ್‌ಗಳನ್ನು ಮುರಿದು, ಭದ್ರತಾ ಸಿಬ್ಬಂದಿಯ ಮೇಲೆ ಕಲ್ಲು ತೂರಾಟ ನಡೆಸುವುದು, ಪೆಪ್ಪರ್ ಸ್ಪ್ರೇ ಬಳಸುವುದು, ವಾಹನಗಳನ್ನು ಪಲ್ಟಿ ಮಾಡುವುದು ಮತ್ತು ಪೊಲೀಸ್ ಆಸ್ತಿಯನ್ನು ಹಾನಿಗೊಳಿಸುವುದು ಕಂಡುಬಂದಿದೆ.

ಇದನ್ನೂ ಓದಿ: ಪ್ರತಿಭಟನೆ ನಡೆಸಿದ ಮಾತ್ರಕ್ಕೆ ಲಾಠಿಚಾರ್ಜ್ ಮಾಡುವಂತಿಲ್ಲ: ಸಿಜೆಪಿ ಪ್ರತಿಭಟನೆ ವೇಳೆ ಪೊಲೀಸ್ ಕ್ರಮಕ್ಕೆ ಸುಪ್ರೀಂ ಅಸಮಾಧಾನ

ಇದಷ್ಟೇ ಅಲ್ಲದೆ, ಪೋಲಿಸ್ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿ, ವಾಹನಗಳಿಗೆ ಹಾನಿ ಮಾಡಲಾಗಿದೆ. ಕೆಲವು ಪ್ರತಿಭಟನಾಕಾರರು ಭದ್ರತಾ ಸಿಬ್ಬಂದಿಯ ಶೂಗಳನ್ನೂ ಕಿತ್ತುಕೊಂಡಿದ್ದಾರೆ. ನಿಷೇಧಾಜ್ಞೆ ಉಲ್ಲಂಘನೆ ಮತ್ತು ಕಾನೂನು ಸುವ್ಯವಸ್ಥೆಗೆ ಭಂಗ ತರಲು ಯತ್ನಿಸಿರುವ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಗಂಭೀರ ಅಪರಾಧಗಳಲ್ಲಿ ಭಾಗಿಯಾದ 1,000 ಜನರು:

ಮುಖ ಗುರುತಿಸುವ ತಂತ್ರಜ್ಞಾನದ ಮೂಲಕ ಪತ್ತೆಯಾದ 2,873 ವ್ಯಕ್ತಿಗಳಲ್ಲಿ 989 ಜನರು ಗಂಭೀರ ಕ್ರಿಮಿನಲ್ ಪ್ರಕರಣಗಳ ದಾಖಲೆ ಹೊಂದಿದ್ದಾರೆ ಎಂದು ದೆಹಲಿ ಪೊಲೀಸ್ ಮೂಲಗಳು ಹೇಳಿವೆ. ಅವುಗಳಲ್ಲಿ ಕೊಲೆ ಪ್ರಕರಣಗಳು: 101, ಕೊಲೆ ಯತ್ನ: 62, ದರೋಡೆ ಮತ್ತು ಸುಲಿಗೆ: 284, ಅತ್ಯಾಚಾರ: 61, ಪೋಕ್ಸೋ (POCSO) ಕಾಯ್ದೆ ಉಲ್ಲಂಘನೆ: 6, ಮಹಿಳೆಯರ ಮೇಲಿನ ದೌರ್ಜನ್ಯ/ ಚೇಷ್ಟೆ: 25, ಶಸ್ತ್ರಾಸ್ತ್ರ ಕಾಯ್ದೆ ಪ್ರಕರಣಗಳು: 229, ದರೋಡೆ: 135, ಅಪಹರಣ: 19, ಎನ್‌ಡಿಪಿಎಸ್ ಮತ್ತು ಮಾದಕದ್ರವ್ಯ ಪ್ರಕರಣಗಳು: 67.

ಇದನ್ನೂ ಓದಿ: ಎಲ್ಲ ಬೇಡಿಕೆಗೂ ಕೇಂದ್ರ ಸರ್ಕಾರ ಒಪ್ಪಿಗೆ; ಪ್ರತಿಭಟನೆ ಹಿಂಪಡೆದ ಸಿಜೆಪಿ, ಶಾಂತಿಯುತವಾಗಿ ತೆರಳಲು ವಿದ್ಯಾರ್ಥಿಗಳಿಗೆ ಕರೆ

ಈ ಪ್ರತಿಭಟನೆಯಲ್ಲಿದ್ದ ಅನೇಕ ವ್ಯಕ್ತಿಗಳು ಒಂದಕ್ಕಿಂತ ಹೆಚ್ಚು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ ಹಳೆಯ ಅಪರಾಧಿಗಳು ಎಂಬುದು ಅಂಕಿ-ಅಂಶಗಳಿಂದ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕೊಲೆ, ದರೋಡೆ, ಅತ್ಯಾಚಾರ, ಅಪಹರಣ ಮತ್ತು ಮಾದಕದ್ರವ್ಯ ಸಂಬಂಧಿತ ಅಪರಾಧಗಳಂತಹ ಗಂಭೀರ ಪ್ರಕರಣಗಳಲ್ಲಿ ಆರೋಪಿಗಳಾಗಿರುವ ವ್ಯಕ್ತಿಗಳು ಈ ಪ್ರತಿಭಟನೆಯಲ್ಲಿದ್ದರು ಎಂಬುದು ಈ ವರದಿಯಿಂದ ತಿಳಿದುಬಂದಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

CWG 2026: ಭಾರತಕ್ಕೆ 5ನೇ ಪದಕ; ವೇಟ್‌ಲಿಫ್ಟಿಂಗ್‌ನಲ್ಲಿ ಬೆಳ್ಳಿ ಗೆದ್ದ ಜ್ಞಾನೇಶ್ವರಿ ಯಾದವ್ – Kannada News | Gyaneshwari Yadav Wins Silver at 2026 Commonwealth Games: India’s Weightlifting Pride

ಇದಕ್ಕೂ ಮೊದಲು, ಭಾರತ ವೇಟ್‌ಲಿಫ್ಟಿಂಗ್‌ನಲ್ಲಿ ಮೂರು ಪದಕಗಳನ್ನು ಗೆದ್ದಿತ್ತು. ಮೀರಾಬಾಯಿ ಚಾನು ಸತತ ಮೂರನೇ ಬಾರಿಗೆ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡರೆ, ರಾಜಾ ಮುತ್ತುಪಾಡಿ ಮತ್ತು ರಿಷಿಕಾಂತ ಸಿಂಗ್ ಬೆಳ್ಳಿ ಪದಕವನ್ನು ಗೆದ್ದಿದ್ದರು(PC-PTI).

Source link

ಗಂಭೀರ್ ಅಥವಾ ಲಕ್ಷ್ಮಣ್ ಯಾರು ಬೆಸ್ಟ್ ಕೋಚ್? ಅಂಕಿ ಅಂಶಗಳು ಏನು ಹೇಳುತ್ತವೆ? – Kannada News | Gambhir vs Laxman: Who is Team India’s better coach? Coaching records compared for top post

ಟೀಂ ಇಂಡಿಯಾದ (Team India) ಮಾಜಿ ಆಟಗಾರ ವಿವಿಎಸ್ ಲಕ್ಷ್ಮಣ್ (VVS Laxman) ಅವರ ಕೋಚಿಂಗ್​ನಲ್ಲಿ ಟೀಂ ಇಂಡಿಯಾ ಜಿಂಬಾಬ್ವೆ ಪ್ರವಾಸ ಮಾಡಿತ್ತು. ಈ ಪ್ರವಾಸದಲ್ಲಿ ಆಡಿದ ಮೂರು ಪಂದ್ಯಗಳನ್ನು ಟೀಂ ಇಂಡಿಯಾ ಗೆದ್ದುಕೊಂಡು ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿತು. ಈ ಪ್ರವಾಸಕ್ಕೂ ಮುನ್ನ ಟೀಂ ಇಂಡಿಯಾ ಗೌತಮ್ ಗಂಭೀರ್ (Gautam Gambhir) ನೇತೃತ್ವದಲ್ಲಿ ಐರ್ಲೆಂಡ್ ಮತ್ತು ಇಂಗ್ಲೆಂಡ್‌ ಪ್ರವಾಸ ಮಾಡಿತ್ತು. ಈ ಪ್ರವಾಸದಲ್ಲಿ ಭಾರತಕ್ಕೆ ಒಂದೇ ಒಂದು ಪಂದ್ಯವನ್ನು ಗೆಲ್ಲಲು ಸಾಧ್ಯವಾಗಲಿಲ್ಲ. ತಂಡದ ಈ ಹೀನಾಯ ಪ್ರದರ್ಶನಕ್ಕೆ ಗಂಭೀರ್ ಅವರ ನಿರ್ಧಾರಗಳೇ ಕಾರಣ ಎನ್ನಲಾಗುತ್ತಿದೆ. ಅಲ್ಲದೆ ಗಂಭೀರ್ ಬದಲಿಗೆ ಲಕ್ಷ್ಮಣ್ ಅವರನ್ನು ತಂಡದ ಮುಖ್ಯ ಕೋಚ್ ಆಗಿ ಮಾಡಬೇಕು ಎಂಬ ಕೂಗು ಜೋರಾಗಿ ಕೇಳಿಬರುತ್ತಿದೆ. ಹಾಗಿದ್ದರೆ ಯಾರ ಕೋಚಿಂಗ್​​ನಲ್ಲಿ ಟೀಂ ಇಂಡಿಯಾ ಹೆಚ್ಚು ಯಶಸ್ಸು ಸಾಧಿಸಿದೆ ಎಂಬುದನ್ನು ನೋಡುವುದಾದರೆ..

ಗೌತಮ್ ಗಂಭೀರ್ ದಾಖಲೆ

ಜುಲೈ 9, 2026 ರಂದು, ಗೌತಮ್ ಗಂಭೀರ್ ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿ ಎರಡು ವರ್ಷಗಳನ್ನು ಪೂರ್ಣಗೊಳಿಸಿದರು. ಈ ಎರಡು ವರ್ಷಗಳಲ್ಲಿ ಟೀಂ ಇಂಡಿಯಾ ಅನೇಕ ಏರಿಳಿತಗಳನ್ನು ಕಂಡಿದೆ. ಗಂಭೀರ್ ಅವರ ತರಬೇತಿಯಲ್ಲಿ, ಟೀಂ ಇಂಡಿಯಾ 2025 ರ ಚಾಂಪಿಯನ್ಸ್ ಟ್ರೋಫಿ ಮತ್ತು 2026 ರ ಟಿ20 ವಿಶ್ವಕಪ್ ಅನ್ನು ಗೆದ್ದಿತು, ಆದರೆ ಹಲವಾರು ಐತಿಹಾಸಿಕ ಸರಣಿಗಳಲ್ಲಿ ಸೋಲುಗಳನ್ನು ಅನುಭವಿಸಿತು.

ಗಂಭೀರ್ ತರಬೇತಿಯಲ್ಲಿ ತಂಡದ ಸೋಲುಗಳು

  • ಭಾರತದಲ್ಲಿ ನ್ಯೂಜಿಲೆಂಡ್ 0-3 ಅಂತರದಿಂದ ವೈಟ್‌ವಾಶ್ (2024)
  • 2024-25ರ ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನು ಭಾರತ 1-3 ಅಂತರದಿಂದ ಸೋತಿತು.
  • ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ (2025) ಟೀಂ ಇಂಡಿಯಾ ಫೈನಲ್ ತಲುಪಲಿಲ್ಲ.
  • ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯನ್ನು ಭಾರತ 0-2 (2025) ಅಂತರದಲ್ಲಿ ಸೋತಿತು.
  • 27 ವರ್ಷಗಳ ನಂತರ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯನ್ನು ಟೀಂ ಇಂಡಿಯಾ ಸೋತಿದೆ (2024)
  • ಐರ್ಲೆಂಡ್ ವಿರುದ್ಧದ ದ್ವಿಪಕ್ಷೀಯ ಸರಣಿಯಲ್ಲಿ ಮೊದಲ ಸೋಲು (2026)
  • ಇಂಗ್ಲೆಂಡ್ ವಿರುದ್ಧದ ಟಿ20 ಸರಣಿ ಸೋಲು (2026)
  • ಗಂಭೀರ್ ತರಬೇತಿಯಲ್ಲಿ ತಂಡದ ಗೆಲುವುಗಳು
  • 2025 ರ ಚಾಂಪಿಯನ್ಸ್ ಟ್ರೋಫಿ ಪ್ರಶಸ್ತಿಯನ್ನು ಗೆದ್ದಿದೆ
  • 2026 ರ ಟಿ20 ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದಿದೆ.
  • 2025 ರ ಏಷ್ಯಾಕಪ್ ಪ್ರಶಸ್ತಿಯನ್ನು ಗೆದ್ದಿದೆ
  • ಬಾಂಗ್ಲಾದೇಶ ಮತ್ತು ಶ್ರೀಲಂಕಾ ವಿರುದ್ಧದ ಟಿ20 ಸರಣಿ ಗೆಲುವು

ಗಂಭೀರ್ ಅವರ ತರಬೇತಿಯಲ್ಲಿ, ಟೀಂ ಇಂಡಿಯಾ ಸರಿಸುಮಾರು 95 ಪಂದ್ಯಗಳನ್ನು ಆಡಿದ್ದು, ಇದರಲ್ಲಿ 59 ಪಂದ್ಯಗಳನ್ನು ಗೆದ್ದಿದ್ದರೆ, 29 ಪಂದ್ಯಗಳಲ್ಲಿ ಸೋತಿದೆ. ಉಳಿದಂತೆ ಐದು ಪಂದ್ಯಗಳು ಫಲಿತಾಂಶವಿಲ್ಲದೆ ಅಂತ್ಯಗೊಂಡಿವೆ. ಅಂದರೆ ಗಂಭೀರ್ ನೇತೃತ್ವದಲ್ಲಿ ತಂಡದ ಗೆಲುವಿನ ಶೇಕಡಾವಾರು ಸರಿಸುಮಾರು 62.11%.

ವಿವಿಎಸ್ ಲಕ್ಷ್ಮಣ್ ದಾಖಲೆ

  • 2022 ರಲ್ಲಿ ಐರ್ಲೆಂಡ್ ವಿರುದ್ಧ – 2-0 ಗೆಲುವು
  • 2022 ರಲ್ಲಿ ಜಿಂಬಾಬ್ವೆ ವಿರುದ್ಧ – 3-0 ಅಂತರದ ಗೆಲುವು
  • 2022 ರಲ್ಲಿ ನ್ಯೂಜಿಲೆಂಡ್ ವಿರುದ್ಧ – 1-0 ಗೆಲುವು
  • 2022 ರಲ್ಲಿ ನ್ಯೂಜಿಲೆಂಡ್ ವಿರುದ್ಧ – 0-1 ಅಂತರದಲ್ಲಿ ಸೋಲು.
  • 2024 ರಲ್ಲಿ ಜಿಂಬಾಬ್ವೆ ವಿರುದ್ಧ – 4-1 ಅಂತರದ ಗೆಲುವು
  • 2024 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ – 3-1 ಅಂತರದಲ್ಲಿ ಗೆಲುವು
  • 2026 ರಲ್ಲಿ ಜಿಂಬಾಬ್ವೆ ವಿರುದ್ಧ – 3-0 ಅಂತರದಿಂದ ಜಯ.

ಈ ದ್ವಿಪಕ್ಷೀಯ ಸರಣಿಗಳ ಜೊತೆಗೆ, ಲಕ್ಷ್ಮಣ್ 2023 ರ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತ ತಂಡವನ್ನು ಚಿನ್ನದ ಪದಕಕ್ಕೆ ಕೊಂಡೊಯ್ದಿದ್ದಾರೆ. ಲಕ್ಷ್ಮಣ್ 2022 ರ ಏಷ್ಯಾಕಪ್‌ನಲ್ಲಿ ಭಾರತವನ್ನು ಸೂಪರ್ ಫೋರ್‌ಗೆ ಮುನ್ನಡೆಸಿದ್ದರು.

ಟೀಂ ಇಂಡಿಯಾದಲ್ಲಿ ಒಬ್ಬರಿಗೊಂದು ನ್ಯಾಯ; ಬಿಸಿಸಿಐ ವಿರುದ್ಧ ಮಾಜಿ ಕ್ರಿಕೆಟಿಗ ಗರಂ

ಲಕ್ಷ್ಮಣ್ ಅವರ ತರಬೇತಿಯಲ್ಲಿ, ಟೀಂ ಇಂಡಿಯಾ ಇಲ್ಲಿಯವರೆಗೆ ಸರಿಸುಮಾರು 23 ಪಂದ್ಯಗಳನ್ನು ಆಡಿದೆ. ಈ ಪಂದ್ಯಗಳಲ್ಲಿ, ತಂಡವು 18 ಪಂದ್ಯಗಳನ್ನು ಗೆದ್ದಿದ್ದರೆ, 4 ಪಂದ್ಯಗಳಲ್ಲಿ ಸೋತಿದೆ. ಒಂದು ಪಂದ್ಯವನ್ನು ಡ್ರಾ ಮಾಡಿಕೊಂಡಿದೆ. ಗೆಲುವಿನ ಶೇಕಡಾವಾರು ಸರಿಸುಮಾರು 78.3%.

ಗೆಲುವಿನ ಶೇಕಡಾವಾರು ವಿಷಯದಲ್ಲಿ ಲಕ್ಷ್ಮಣ್ ಅವರ ದಾಖಲೆ ಚೆನ್ನಾಗಿ ಕಾಣುತ್ತಿದೆ, ಆದರೆ ಅವರ ತರಬೇತಿಯಲ್ಲಿ ಟೀಂ ಇಂಡಿಯಾ ಕಡಿಮೆ ಪಂದ್ಯಗಳನ್ನು ಆಡಿದೆ. ಗಂಭೀರ್ ಅವರ ತರಬೇತಿಯಲ್ಲಿ ಭಾರತ ಹೆಚ್ಚು ಪಂದ್ಯಗಳನ್ನು ಆಡಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಕಾಲಾ ಹಿರಣ್’ ಟೀಸರ್ ಡಿಲೀಟ್ ಮಾಡುವಂತೆ ಕೋರ್ಟ್ ಆದೇಶ: ಸಲ್ಮಾನ್ ಖಾನ್‌ಗೆ ರಿಲೀಫ್ – Kannada News | Delhi High Court orders removal of Kala Hiran Teaser promotional content linked to Salman Khan

ಬಾಲಿವುಡ್ ನಟ ಸಲ್ಮಾನ್ ಖಾನ್ (Salman Khan) ಅವರಿಗೆ ದೆಹಲಿ ಹೈಕೋರ್ಟ್​ನಿಂದ ದೊಡ್ಡ ರಿಲೀಫ್ ಸಿಕ್ಕಿದೆ. ಶೀಘ್ರದಲ್ಲೇ ತೆರೆಕಾಣಲಿರುವ ‘ಕಾಲಾ ಹಿರಣ್: ದಿ ಬ್ಯಾಟಲ್ ಫಾರ್ ಲೆಗೆಸಿ’ (Kala Hiran: The Battle for Legacy) ಹಿಂದಿ ಸಿನಿಮಾದ ಟೀಸರ್ ಹಾಗೂ ಸೋಶಿಯಲ್ ಮೀಡಿಯಾದಲ್ಲಿರುವ ಪ್ರಚಾರದ ಲಿಂಕ್‌ಗಳನ್ನು ತಕ್ಷಣವೇ ಡಿಲೀಟ್ ಮಾಡುವಂತೆ ದೆಹಲಿ ಹೈಕೋರ್ಟ್ ಆದೇಶಿಸಿದೆ. ಈ ಚಿತ್ರದ ಪ್ರಚಾರದ ಸಾಮಗ್ರಿಗಳು 1998ರ ಕೃಷ್ಣಮೃಗ ಬೇಟೆ (Blackbuck Poaching Case) ಪ್ರಕರಣಕ್ಕೆ ಸಲ್ಮಾನ್ ಖಾನ್ ಅವರ ಹೆಸರನ್ನು ನೇರವಾಗಿ ಲಿಂಕ್ ಮಾಡುವಂತಿದ್ದು, ಇದು ನಟನ ಗೌರವಕ್ಕೆ ಧಕ್ಕೆ ತರುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

‘ಒಮ್ಮೆ ಹೋದ ಗೌರವ ಮತ್ತೆ ಸಿಗಲ್ಲ’: ಹೈಕೋರ್ಟ್

ಚಿತ್ರದ ಬಿಡುಗಡೆ ಹಾಗೂ ಪ್ರಚಾರಕ್ಕೆ ಮಧ್ಯಂತರ ತಡೆ ಕೋರಿ ಸಲ್ಮಾನ್ ಖಾನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜ್ಯೋತಿ ಸಿಂಗ್ ಅವರಿದ್ದ ಪೀಠವು ಚಿತ್ರ ನಿರ್ಮಾಪಕ ಅಮಿತ್ ಜಾನಿ ನೀಡಿದ್ದ ಸಂದರ್ಶನಗಳ ವೀಡಿಯೋಗಳನ್ನು ಡಿಲೀಟ್ ಮಾಡುವಂತೆ ಸೂಚಿಸಿದೆ. ವಿಚಾರಣೆ ವೇಳೆ ಮೌಖಿಕವಾಗಿ ಗರಂ ಆದ ನ್ಯಾಯಪೀಠ, ‘ಇದು ಇಲ್ಲಿಗೆ ನಿಲ್ಲಬೇಕು. ಒಮ್ಮೆ ಹೋದ ಗೌರವ ಮತ್ತೆ ಎಂದಿಗೂ ಸಿಗುವುದಿಲ್ಲ’ ಎಂದು ಎಚ್ಚರಿಸಿದೆ.

ಅಲ್ಲದೆ, ಚಿತ್ರದ ಪ್ರಚಾರದ ವೀಡಿಯೋಗಳು ಸಲ್ಮಾನ್ ಖಾನ್ ಹಾಗೂ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ನಡುವಿನ ವಿವಾದವನ್ನು ಮತ್ತೆ ಪ್ರಚೋದಿಸುವಂತಿವೆ ಎಂದು ಕೋರ್ಟ್ ಕಳವಳ ವ್ಯಕ್ತಪಡಿಸಿದೆ. ಈ ಸಿನಿಮಾದ ಪ್ರಚಾರ ಕಾರ್ಯ ಆರಂಭ ಆಗುತ್ತಿದ್ದಂತೆಯೇ ಸಲ್ಮಾನ್ ಖಾನ್ ಅವರು ಚಿತ್ರತಂಡಕ್ಕೆ ಲೀಗಲ್ ನೋಟಿಸ್ ಕಳಿಸಿದ್ದರು. ಬಳಿಕ ನ್ಯಾಯಾಲಯ ಮೆಟ್ಟಿಲೇರಿದ್ದರು.

ಸಲ್ಮಾನ್ ಖಾನ್ ಅರ್ಜಿಯಲ್ಲೇನಿತ್ತು?

ಸಿನಿಮಾದಲ್ಲಿ ಸಲ್ಮಾನ್ ಖಾನ್ ಹೆಸರು ಬಳಸದಿದ್ದರೂ, ಪ್ರಚಾರದ ಪೋಸ್ಟರ್ ಹಾಗೂ ಟೀಸರ್‌ನಲ್ಲಿ ಸಲ್ಮಾನ್ ಅವರನ್ನೇ ಹೋಲುವ ನಟ, ಅವರ ಪ್ರಸಿದ್ಧ ಬ್ಲೂ ಬ್ರೇಸ್‌ಲೆಟ್ ಧರಿಸಿರುವುದನ್ನು ತೋರಿಸಲಾಗಿತ್ತು. ಗನ್ ಹಿಡಿದಿರುವ ದೃಶ್ಯಗಳನ್ನು ತೋರಿಸಿ ಸಲ್ಮಾನ್ ಖಾನ್ ಅವರ ಇಮೇಜ್‌ಗೆ ಧಕ್ಕೆ ತರಲು ಯತ್ನಿಸಲಾಗಿದೆ. ಶಸ್ತ್ರಾಸ್ತ್ರ ಕಾಯ್ದೆ ಪ್ರಕರಣದಲ್ಲಿ ಸಲ್ಮಾನ್ ಈಗಾಗಲೇ ಖುಲಾಸೆಯಾಗಿದ್ದರೂ, ತಪ್ಪು ಮಾಹಿತಿ ಹರಡಲಾಗುತ್ತಿದೆ ಎಂದು ನಟ ದೂರಿದ್ದಾರೆ.

ಇದನ್ನೂ ಓದಿ: 2027ಕ್ಕೆ ಮುಂದೂಡಿಕೆ ಆಯ್ತಾ ಸಲ್ಮಾನ್ ಖಾನ್ ನಟನೆಯ ‘ಮಾತೃಭೂಮಿ’ ಚಿತ್ರದ ರಿಲೀಸ್?

ವ್ಯಕ್ತಿತ್ವದ ಹಕ್ಕಿನ ಉಲ್ಲಂಘನೆ:

ನಿರ್ಮಾಪಕ ಅಮಿತ್ ಜಾನಿ ಅವರು ತಮ್ಮ ಸಂದರ್ಶನ ಹಾಗೂ ಪೋಸ್ಟ್‌ಗಳಲ್ಲಿ ಸಲ್ಮಾನ್ ಖಾನ್, ಕೃಷ್ಣಮೃಗ ಪ್ರಕರಣ ಹಾಗೂ ಲಾರೆನ್ಸ್ ಬಿಷ್ಣೋಯ್ ಹೆಸರನ್ನು ಬಳಸಿ ಪಬ್ಲಿಸಿಟಿ ಗಿಮಿಕ್ ಮಾಡುತ್ತಿದ್ದಾರೆ. ಸಮ್ಮತಿಯಿಲ್ಲದೆ ನಟನ ವೈಯಕ್ತಿಕ ಇಮೇಜ್ ಬಳಸಿಕೊಳ್ಳುವುದು ವ್ಯಕ್ತಿತ್ವದ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಸಲ್ಮಾನ್ ಖಾನ್ ಅವರ ವಕೀಲರು ವಾದಿಸಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಅಕ್ರಮ ಮರಳು ಗಣಿಗಾರಿಕೆಗೆ ಬ್ರೇಕ್: ಕಠಿಣ ಕ್ರಮಕ್ಕೆ ಪ್ರಿಯಾಂಕ್ ಖರ್ಗೆ ಖಡಕ್ ಸೂಚನೆ – Kannada News | Priyank Kharge Orders Strict Crackdown on Illegal Sand Mining, Issues Stern Directive

ಬೆಂಗಳೂರು, ಜುಲೈ 27: ಕರ್ನಾಟಕದಲ್ಲಿ (karnataka) ಅಕ್ರಮ ಮರಳು ಗಣಿಗಾರಿಕೆ ಹಾಗೂ ಅಕ್ರಮ ಮರಳು ಸಾಗಣೆಗೆ ಸಂಪೂರ್ಣ ಬ್ರೇಕ್ ಹಾಕಲು ಗೃಹ ಇಲಾಖೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಈ ಕುರಿತು ರಾಜ್ಯಾದ್ಯಂತ ‘ಝೀರೋ ಟಾಲರೆನ್ಸ್’ ನೀತಿ ಅಡಿಯಲ್ಲಿ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಡಿಜಿ ಮತ್ತು ಐಜಿಪಿ ಎಂ.ಎ. ಸಲೀಂ ಅವರಿಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಖಡಕ್​​ ಸೂಚನೆ ನೀಡಿದ್ದಾರೆ.

ರಾಜ್ಯಾದ್ಯಂತ ಕಟ್ಟುನಿಟ್ಟಿನ ಕ್ರಮ ಜಾರಿ

ಈ ಕುರಿತಾಗಿ ಗೃಹ ಇಲಾಖೆಯಿಂದ ಮಾಧ್ಯಮ ಪ್ರಕಟಣೆ ಹೊರಡಿಸಲಾಗಿದೆ. “ಅಕ್ರಮ ಮರಳು ಗಣಿಗಾರಿಕೆ ಪರಿಸರಕ್ಕೆ ಹಾನಿ ಉಂಟುಮಾಡುವುದಲ್ಲದೆ, ಕಾನೂನು ಸುವ್ಯವಸ್ಥೆ ಮತ್ತು ಸರ್ಕಾರದ ಆದಾಯಕ್ಕೂ ಧಕ್ಕೆ ತರುತ್ತಿದೆ. ಇಂತಹ ಅಕ್ರಮ ಚಟುವಟಿಕೆಗಳನ್ನು ಯಾವುದೇ ಕಾರಣಕ್ಕೂ ಸಹಿಸದೆ ‘ಶೂನ್ಯ ಸಹಿಷ್ಣುತೆ’ ನೀತಿಯನ್ನು ಸರ್ಕಾರ ಅನುಸರಿಸುತ್ತಿದ್ದು, ರಾಜ್ಯಾದ್ಯಂತ ಕಟ್ಟುನಿಟ್ಟಿನ ಕ್ರಮವನ್ನು ಜಾರಿಗೊಳಿಸಲಾಗುತ್ತಿದೆ”.

ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪೋಸ್ಟ್​

“ಅಕ್ರಮ ಮರಳು ಗಣಿಗಾರಿಕೆ ಮತ್ತು ಸಾಗಾಣಿಕೆ ರಾಜ್ಯದ ನೈಸರ್ಗಿಕ ಸಂಪತ್ತಿನ ಲೂಟಿ ಮಾತ್ರವಲ್ಲ, ಇದು ಕಾನೂನು ಸುವ್ಯವಸ್ಥೆ ಹಾಗೂ ಸಾರ್ವಜನಿಕ ಹಿತಾಸಕ್ತಿಗೆ ಸವಾಲು ಎಸೆಯುವ ಗಂಭೀರ ಅಪರಾಧವಾಗಿದೆ. ಸರ್ಕಾರ ಯಾವುದೇ ಅಕ್ರಮ ಚಟುವಟಿಕೆಯನ್ನು ಸಹಿಸುವುದಿಲ್ಲ. ಕಾನೂನನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿ, ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು”.

ಇದನ್ನೂ ಓದಿ: ಮೇಕೆದಾಟು ಯೋಜನೆ: ಕರ್ನಾಟಕಕ್ಕೆ ತಮಿಳುನಾಡಿನ ಒಪ್ಪಿಗೆ ಅಗತ್ಯವಿಲ್ಲ ಎಂದ ಕೇಂದ್ರ ಜಲಶಕ್ತಿ ಸಚಿವಾಲಯ

“ಜಿಲ್ಲೆ ಹಾಗೂ ತಾಲ್ಲೂಕು ಮಟ್ಟದಲ್ಲಿ ಈಗಾಗಲೇ ರಚಿಸಲಾಗಿರುವ ಟಾಸ್ಕ್ ಫೋರ್ಸ್‌ಗಳನ್ನು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವಂತೆ ಸೂಚಿಸಲಾಗಿದೆ. ಅಕ್ರಮ ಮರಳು ಗಣಿಗಾರಿಕೆ ನಡೆಯುವ ಪ್ರದೇಶಗಳನ್ನು ಗುರುತಿಸಿ ನಿರಂತರ ನಿಗಾ ವಹಿಸುವುದು, ಅಕ್ರಮ ಸಾಗಾಣಿಕೆ ಮತ್ತು ಸಂಗ್ರಹಣೆಯನ್ನು ತಡೆಯುವುದು ಹಾಗೂ ಕಾನೂನು ಕ್ರಮ ಕೈಗೊಳ್ಳುವುದು ಸಂಬಂಧಿತ ಪೊಲೀಸ್ ಅಧಿಕಾರಿಗಳ ಜವಾಬ್ದಾರಿಯಾಗಿದೆ”.

ಸಮನ್ವಯ ಸಾಧಿಸಿ ಕಾರ್ಯನಿರ್ವಹಿಸುವಂತೆ ಸೂಚನೆ

‘‘ರಾಜ್ಯದ ಗಡಿ ಪ್ರದೇಶಗಳು ಸೇರಿದಂತೆ ಅಂತಾರಾಜ್ಯ ಮಾರ್ಗಗಳಲ್ಲಿ ಅಕ್ರಮ ಮರಳು ಸಾಗಾಣಿಕೆಯನ್ನು ತಡೆಗಟ್ಟಲು ಗಣಿ ಮತ್ತು ಭೂವಿಜ್ಞಾನ ಇಲಾಖೆ, ಕಂದಾಯ ಇಲಾಖೆ ಹಾಗೂ ಅರಣ್ಯ ಇಲಾಖೆಯೊಂದಿಗೆ ಸಮನ್ವಯ ಸಾಧಿಸಿ ಕಾರ್ಯನಿರ್ವಹಿಸುವಂತೆ ಸೂಚಿಸಲಾಗಿದೆ. ತನಿಖಾ ಕೇಂದ್ರಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿರುವುದನ್ನು ಖಚಿತಪಡಿಸಿಕೊಳ್ಳಲು ಹಾಗೂ ಅಗತ್ಯ ಮೂಲಸೌಕರ್ಯಗಳ ಕೊರತೆ ಕಂಡುಬಂದರೆ ಸಂಬಂಧಿತ ಇಲಾಖೆಯ ಗಮನಕ್ಕೆ ತರುವಂತೆ ನಿರ್ದೇಶಿಸಲಾಗಿದೆ’’

ಇದನ್ನೂ ಓದಿ: ಬೆಂಗಳೂರಿನ 2ನೇ ಏರ್​ಪೋರ್ಟ್​ ಬಗ್ಗೆ ರಾಜ್ಯ ಸರ್ಕಾರದಿಂದ ಯಾವುದೇ ಪ್ರಸ್ತಾವನೆ ಬಂದಿಲ್ಲ ಎಂದ ಕೇಂದ್ರ

‘‘ಪ್ರತಿ ಪೊಲೀಸ್ ಘಟಕವು ತನ್ನ ವ್ಯಾಪ್ತಿಯಲ್ಲಿರುವ ಅಕ್ರಮ ಮರಳು ಚಟುವಟಿಕೆಗಳ ಬಗ್ಗೆ ಗುಪ್ತಚರ ಮಾಹಿತಿ ಸಂಗ್ರಹಿಸಿ, ಅಗತ್ಯವಿದ್ದಲ್ಲಿ ದಿಢೀರ್ ದಾಳಿ ನಡೆಸಬೇಕು. ಈ ಅಕ್ರಮ ದಂಧೆಯಲ್ಲಿ ನಿರಂತರವಾಗಿ ತೊಡಗಿರುವವರ ವಿರುದ್ಧ ಗೂಂಡಾ ಕಾಯ್ದೆಯಡಿ ಕ್ರಮ ಕೈಗೊಳ್ಳುವಂತೆಯೂ ಸೂಚಿಸಲಾಗಿದೆ. ಪ್ರತಿ ತಿಂಗಳ ಅಪರಾಧ ಪರಿಶೀಲನಾ ಸಭೆಯಲ್ಲಿ ಅಕ್ರಮ ಮರಳು ಗಣಿಗಾರಿಕೆ, ಸಾಗಾಣಿಕೆ ಹಾಗೂ ಸಂಗ್ರಹಣೆ ಪ್ರಕರಣಗಳ ಕುರಿತು ಠಾಣಾವಾರು ಪರಿಶೀಲನೆ ನಡೆಸಿ, ಅಧೀನ ಅಧಿಕಾರಿಗಳಿಗೆ ಅಗತ್ಯ ಸೂಚನೆಗಳನ್ನು ನೀಡಬೇಕು. ಅಲ್ಲದೆ, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಟಾಸ್ಕ್ ಫೋರ್ಸ್ ಸಭೆಗಳನ್ನು ನಿಯಮಿತವಾಗಿ ನಡೆಸಿ ಎಲ್ಲ ಇಲಾಖೆಗಳ ಸಮನ್ವಯದೊಂದಿಗೆ ಅಕ್ರಮ ಚಟುವಟಿಕೆಗಳನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳುವಂತೆ’’ ನಿರ್ದೇಶಿಸಲಾಗಿದೆ.

ಮರಳು ದಂಧೆ ತಡೆಯಲು ವಿಫಲರಾದವರ ವಿರುದ್ಧ ಶಿಸ್ತುಕ್ರಮದ ಎಚ್ಚರಿಕೆ

‘‘ಯಾವುದೇ ಪೊಲೀಸ್ ಘಟಕವು ತನ್ನ ವ್ಯಾಪ್ತಿಯಲ್ಲಿ ಅಕ್ರಮ ಮರಳು ಗಣಿಗಾರಿಕೆ ಹಾಗೂ ಸಾಗಾಣಿಕೆಯನ್ನು ತಡೆಯುವಲ್ಲಿ ವಿಫಲವಾದರೆ, ಸಂಬಂಧಿತ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು.
ಕಾನೂನಿಗಿಂತ ಯಾರೂ ದೊಡ್ಡವರಲ್ಲ. ಅಕ್ರಮ ಮರಳು ದಂಧೆಯಲ್ಲಿ ತೊಡಗಿರುವವರ ವಿರುದ್ಧ ಕಾನೂನು ಪ್ರಕಾರ ಕಠಿಣ ಕ್ರಮ ಜರುಗಿಸಲಾಗುವುದು. ಜೊತೆಗೆ ಕರ್ತವ್ಯ ಲೋಪ ಎಸಗುವ ಅಧಿಕಾರಿಗಳ ವಿರುದ್ಧವೂ ನಿರ್ದಾಕ್ಷಿಣ್ಯ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ನೈಸರ್ಗಿಕ ಸಂಪತ್ತಿನ ಸಂರಕ್ಷಣೆ ಮತ್ತು ಕಾನೂನು ಲೋಪವಾಗದಂತೆ ಕಣ್ಗಾವಲು ಇರಿಸುವುದು ಸರ್ಕಾರದ ಆದ್ಯತೆಯಾಗಿದೆ’’ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 8:45 pm, Mon, 27 July 26

Source link

ನೀವು ಖರೀದಿಸುವ ಕೇಸರಿ ಅಸಲಿಯೋ, ನಕಲಿಯೋ ಎಂಬುದನ್ನು ತಿಳಿಯಲು ಈ ಟ್ರಿಕ್ಸ್‌ ಬಳಸಿ – Kannada News | How to test whether saffron is real or fake?

ಕೇಸರಿ (saffron) ವಿಶ್ವದ ಅತ್ಯಂತ ದುಬಾರಿ ಮಸಾಲೆ ಪದಾರ್ಥವಾಗಿದ್ದು, ಇದನ್ನು  ವಿವಿಧ ಭಕ್ಷ್ಯಗಳಿಂದ ಹಿಡಿದು ಆಯುರ್ವೇದ ಮತ್ತು ಸೌಂದರ್ಯವರ್ಧಕಗಳಲ್ಲೂ ವ್ಯಾಪಕವಾಗಿ  ಬಳಸಲಾಗುತ್ತದೆ. ಇದರಲ್ಲಿ ಸಾಕಷ್ಟು ಆರೋಗ್ಯ ಪ್ರಯೋಜನಗಳು ಕೂಡ ಇದ್ದು, ಇದಕ್ಕಾಗಿ ಹೆಚ್ಚಿನವರು ಕೇಸರಿ ಸೇವನೆ ಮಾಡುತ್ತಾರೆ. ಇದರ ಹೆಚ್ಚಿನ ಬೆಲೆಯ ಕಾರಣದಿಂದಾಗಿ ಮಾರುಕಟ್ಟೆಯಲ್ಲಿ ನಕಲಿ ಕೇಸರಿಯ ಹಾವಳಿ ಹೆಚ್ಚಾಗಿದೆ. ಈ ನಕಲಿ ಕೇಸರಿ ಆರೋಗ್ಯದ ಮೇಲೂ ಪರಿಣಾಮವನ್ನು ಬೀರುತ್ತದೆ. ಹಾಗಾಗಿ ನೀವು ಖರೀದಿಸುವಂತಹ ಕೇಸರಿ ಅಸಲಿಯೋ ಅಥವಾ ನಕಲಿಯೋ ಎಂಬುದನ್ನು ತಿಳಿಯುವುದು ತುಂಬಾನೇ ಮುಖ್ಯ. ಇದನ್ನು ಪರೀಕ್ಷಿಸಲು ನೀವು ಈ ಟ್ರಿಕ್ಸ್‌ ಪಾಲಿಸಿ.

ಕೇಸರಿ ಅಸಲಿಯೋ, ನಕಲಿಯೋ ಎಂದು ಪತ್ತೆ ಹಚ್ಚುವುದು ಹೇಗೆ?

ಬಣ್ಣ ಬಿಡುಗಡೆಯನ್ನು ನೋಡಿ: ನಿಜವಾದ ಕೇಸರಿ ನೀರು ಅಥವಾ ಹಾಲಿಗೆ ಸೇರಿಸಿದಾಗ ನಿಧಾನವಾಗಿ ತಿಳಿ ಹಳದಿ ಅಥವಾ ಚಿನ್ನದ ಬಣ್ಣವನ್ನು ಬಿಡುಗಡೆ ಮಾಡುತ್ತದೆ. ನಿಜವಾದ ಕೇಸರಿ ಬಣ್ಣವು ನೀರಿನಲ್ಲಿ ಬೆರೆಯಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಅದೇ
ನಕಲಿ ಕೇಸರಿ ತಕ್ಷಣವೇ ಗಾಢ ಕೆಂಪು ಅಥವಾ ಕಿತ್ತಳೆ ಬಣ್ಣವನ್ನು ಬಿಡುಗಡೆ ಮಾಡುತ್ತದೆ.

ದಳಗಳ ವಿನ್ಯಾಸಕ್ಕೆ ಗಮನ ಕೊಡಿ: ಅಸಲಿ ಕೇಸರಿ ದಳಗಳು ತೆಳ್ಳಗಿರುತ್ತವೆ, ಮೇಲ್ಭಾಗದಲ್ಲಿ ಸ್ವಲ್ಪ ಅಗಲವಾಗಿರುತ್ತವೆ ಮತ್ತು ತುತ್ತೂರಿಯ ಆಕಾರದಲ್ಲಿರುತ್ತವೆ.
ಅದೇ ನಕಲಿ ಕೇಸರಿ ದಳಗಳು ಏಕರೂಪವಾಗಿರುತ್ತವೆ ಮತ್ತು ನೇರವಾಗಿರುತ್ತವೆ. ಈ ಬಗ್ಗೆ ಸೂಕ್ಷ್ಮವಾಗಿ ಗಮನಿಸುವ ಮೂಲಕ ನೀವು ಖರೀದಿ ಮಾಡುವ ಕೇಸರಿ ಅಸಲಿಯೋ ಅಥವಾ ನಕಲಿಯೋ ಎಂಬುದನ್ನು ಸುಲಭವಾಗಿ ಪರೀಕ್ಷಿಸಬಹುದು.

ವಾಸನೆ ಪರೀಕ್ಷಿಸಿ: ಅಸಲಿ ಕೇಸರಿಯು ಸೌಮ್ಯ, ಸಿಹಿ ಮತ್ತು ಹುಲ್ಲಿನ ಪರಿಮಳವನ್ನು ಹೊಂದಿರುತ್ತದೆ. ಅದೇ ನಕಲಿ ಕೇಸರಿ ಬಲವಾದ ಅಥವಾ ಕೃತಕ ಪರಿಮಳವನ್ನು ಹೊಂದಿರುತ್ತವೆ.

ರುಚಿ ಪರೀಕ್ಷೆ: ಕೇಸರಿಯ ರುಚಿ ಅದರ ಶುದ್ಧತೆಯ ಸ್ಪಷ್ಟ ಸೂಚನೆಯಾಗಿದೆ. ನಿಮ್ಮ ನಾಲಿಗೆಯ ಮೇಲೆ ಕೇಸರಿಯ ದಳವನ್ನು ಇಟ್ಟುಕೊಳ್ಳಿ. ಅದು ಅಸಲಿಯೇ ಆಗಿದ್ದರೆ, 15 ರಿಂದ 20 ನಿಮಿಷಗಳಲ್ಲಿ ನಿಮ್ಮ ದೇಹದಲ್ಲಿ ಬೆಚ್ಚಗಿನ ಸಂವೇದನೆಯನ್ನು ಅನುಭವಿಸುವಿರಿ. ಆದರೆ, ನಕಲಿ ಕೇಸರಿ ತಿನ್ನುವುದರಿಂದ ನಿಮಗೆ ಅಂತಹ ಯಾವುದೇ ಅನುಭವ ದೊರೆಯುವುದಿಲ್ಲ. ಇದಲ್ಲದೆ ನಿಜವಾದ ಕೇಸರಿಯ ರುಚಿ ಸ್ವಲ್ಪ ಕಹಿ ಮತ್ತು ಸಂಕೋಚಕವಾಗಿರುತ್ತದೆ. ನೀವು ಅದನ್ನು ಬಾಯಲ್ಲಿ ಇರಿಸಿದಾಗ ಸಿಹಿ ಅಥವಾ ಹುಳಿ ರುಚಿ ನೋಡಿದರೆ, ಅದು ನಕಲಿ. ಜೊತೆಗೆ ನಕಲಿ ಕೇಸರಿ ನಾಲಿಗೆಯಲ್ಲಿ ಇಟ್ಟ ತಕ್ಷಣ  ಬಣ್ಣವನ್ನು ಕಳೆದುಕೊಳ್ಳಲು ಪ್ರಾರಂಭಿಸುತ್ತದೆ.

ಇದನ್ನೂ ಓದಿ: ಜಸ್ಟ್‌ ಟಿಪ್ಸ್‌ ಪಾಲಿಸುವ ಮೂಲಕ ಮನೆಯಂಗಳದಲ್ಲಿಯೇ ಸುಲಭವಾಗಿ ಬೆಳೆಯಬಹುದು ಕರಿಬೇವಿನ ಗಿಡ

ಕೈಯಲ್ಲಿ ಉಜ್ಜುವ ಮೂಲಕ ಪರೀಕ್ಷಿಸಿ: ಕೇಸರಿಯನ್ನು ಕೈಯಲ್ಲಿ ಉಜ್ಜುವ ಮೂಲಕವೂ ಅದು ಅಸಲಿಯೋ ಅಥವಾ ನಕಲಿಯೇ ಎಂಬುದನ್ನು ಪರೀಕ್ಷಿಸಬಹುದು. ಇದಕ್ಕಾಗಿ ಕೇಸರಿ ದಳವನ್ನು ತೆಗೆದುಕೊಂಡು ಕೈಯಲ್ಲಿಟ್ಟು ಸ್ವಲ್ಪ ಉಜ್ಜಿಕೊಳ್ಳಿ, ನೀವು ಅದನ್ನು ನಿಮ್ಮ ಕೈಯಲ್ಲಿ ಹಿಡಿದಾಗ ಅದು ಮುರಿದರೆ, ಅದು ಅಸಲಿ ಎಂದರ್ಥ. ಕೇಸರಿ ತುಂಬಾ ಮೃದುವಾಗಿದ್ದು ನೀವು ಅದನ್ನು ನಿಮ್ಮ ಕೈಯಲ್ಲಿ ಹಿಡಿದ ತಕ್ಷಣ ತುಂಡುಗಳಾಗಿ ಒಡೆಯುತ್ತದೆ. ಅದೇ ನಕಲಿ ಕೇಸರಿ ಅಷ್ಟು ಸುಲಭವಾಗಿ ತುಂಡಾಗುವುದಿಲ್ಲ.

ನೀರಿನ ಪ್ರಯೋಗ: ಕೇಸರಿ ಅಸಲಿಯೇ ಅಥವಾ ನಕಲಿಯೇ  ಎಂದು ಪರೀಕ್ಷಿಸಲು, ಒಂದು ಲೋಟ ನೀರಿಗೆ 1 ಚಿಟಿಕೆ ಅಡಿಗೆ ಸೋಡಾ ಸೇರಿಸಿ ಮತ್ತು ಅದಕ್ಕೆ ಕೇಸರಿ ದಳವನ್ನು ಸೇರಿಸಿ. ಕೇಸರಿ ನಿಜಕ್ಕೂ ಅಸಲಿಯಾಗಿದ್ದರೆ, ಮಿಶ್ರಣವು ಹಳದಿ ಬಣ್ಣಕ್ಕೆ ತಿರುಗುತ್ತದೆ ಮತ್ತು ಅದು ನಕಲಿಯಾಗಿದ್ದರೆ, ನೀರಿನ ಮಿಶ್ರಣವು ಕೆಂಪು ಬಣ್ಣಕ್ಕೆ ತಿರುಗುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 8:40 pm, Mon, 27 July 26

Source link

ಭಾರತದ ಇತಿಹಾಸದಲ್ಲೇ ಹೀಗಾಗಿರಲಿಲ್ಲ; ಪ್ರತಿಭಟನಾಕಾರರ ಮೇಲಿನ ಲಾಠಿಚಾರ್ಜ್​ಗೆ ಸದನದಲ್ಲಿ ಖರ್ಗೆ ಖಂಡನೆ – Kannada News | Never happened in history Mallikarjun Kharge slams NDA Government for Lathi Charge on student protesters

ನವದೆಹಲಿ, ಜುಲೈ 27: ಜುಲೈ 20ರಂದು ನಡೆದ ‘ಸಂಸದ್ ಚಲೋ’ ಪ್ರತಿಭಟನೆಯ ಸಮಯದಲ್ಲಿ ವಿದ್ಯಾರ್ಥಿಗಳ ವಿರುದ್ಧ ನಡೆದ ಪೊಲೀಸರ ಲಾಠಿ ಚಾರ್ಜ್ ಕ್ರಮವನ್ನು ಖಂಡಿಸಿ ವಿರೋಧ ಪಕ್ಷಗಳು ರಾಜ್ಯಸಭೆಯಲ್ಲಿ ಇಂದು ಗಲಾಟೆ ನಡೆಸಿದವು. ಪ್ರತಿಭಟನಾಕಾರರ ವಿರುದ್ಧದ ಹಿಂಸಾಚಾರಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೇ ಹೊಣೆ ಎಂದು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಆರೋಪಿಸಿದರು. ಭಾರತದ ಇತಿಹಾಸದಲ್ಲಿ ಈ ಹಿಂದೆ ಎಂದೂ ಈ ರೀತಿ ಆಗಿರಲಿಲ್ಲ ಎಂದು ಖರ್ಗೆ ಆಕ್ರೋಶ ವ್ಯಕ್ತಪಡಿಸಿದರು.

“ವಿದ್ಯಾರ್ಥಿಗಳಿಗೆ ಪೆಟ್ಟು ಬಿದ್ದು, ಅವರನ್ನು ಎಳೆದೊಯ್ದ ಘಟನೆ ಭಾರತದ ಇತಿಹಾಸದಲ್ಲೇ ಎಂದೂ ಸಂಭವಿಸಿರಲಿಲ್ಲ. ಇದಕ್ಕೆ ಅಮಿತ್ ಶಾ ಅವರೇ ಹೊಣೆ!” ಎಂದು ಖರ್ಗೆ ಸದನದ ಗದ್ದಲದ ನಡುವೆಯೇ ಕಿಡಿಕಾರಿದರು. ಸಂಸತ್ ಅಧಿವೇಶನ ಆರಂಭಕ್ಕೂ ಮುನ್ನ, ಪ್ರತಿಭಟನಾನಿರತ ವಿದ್ಯಾರ್ಥಿಗಳ ಮೇಲಿನ ಪೊಲೀಸ್ ಕ್ರಮವನ್ನು ಖಂಡಿಸಿ ವಿಪಕ್ಷದ ಸಂಸದರು ಸಂಸತ್ತಿನ ಮಕರ ದ್ವಾರದ ಬಳಿ ಧರಣಿ ನಡೆಸಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version