Headlines

ಮೈಕ್ರೋವೇವ್‌ನಲ್ಲಿ ಆಹಾರ ಬಿಸಿ ಮಾಡುವ ಮುನ್ನ ಈ ವಿಷಯಗಳನ್ನು ತಿಳಿದಿಟ್ಟುಕೊಳ್ಳಿ! – Kannada News | Microwave Safety Tips: How to Heat Food the Right Way

ಇಂದಿನ ವೇಗದ ಜೀವನಶೈಲಿಯಲ್ಲಿ ಉಳಿದ ಆಹಾರವನ್ನು ಕೆಲವೇ ನಿಮಿಷಗಳಲ್ಲಿ ಬಿಸಿ ಮಾಡಲು ಅಥವಾ ತ್ವರಿತವಾಗಿ ಅಡುಗೆ ಮಾಡಲು ಮೈಕ್ರೋವೇವ್ ಓವನ್ (Microwave) ಅನಿವಾರ್ಯ ಸಾಧನವಾಗಿದೆ. ಆದರೆ ಮೈಕ್ರೋವೇವ್ ಬಳಕೆಯ ಬಗ್ಗೆ ಹಲವು ವರ್ಷಗಳಿಂದ ಅನೇಕ ಗೊಂದಲಗಳು ಹರಿದಾಡುತ್ತಿವೆ. “ಮೈಕ್ರೋವೇವ್‌ನ ರೇಡಿಯೇಷನ್‌ನಿಂದ ಕ್ಯಾನ್ಸರ್ ಬರುತ್ತದೆ”, “ಆಹಾರದಲ್ಲಿನ ಎಲ್ಲಾ ಪೋಷಕಾಂಶಗಳು ನಾಶವಾಗುತ್ತವೆ” ಎಂಬಂತಹ ನಂಬಿಕೆಗಳು ಸಾಮಾನ್ಯವಾಗಿವೆ. ಆದರೆ ವೈಜ್ಞಾನಿಕ ಅಧ್ಯಯನಗಳು ಈ ಹೇಳಿಕೆಗಳಿಗೆ ಸಂಪೂರ್ಣ ಬೆಂಬಲ ನೀಡುವುದಿಲ್ಲ. ಸರಿಯಾದ ವಿಧಾನದಲ್ಲಿ ಮೈಕ್ರೋವೇವ್ ಬಳಸಿದರೆ ಅದು ಸುರಕ್ಷಿತವಾಗಿದ್ದು, ಕೆಲವು ಸಂದರ್ಭಗಳಲ್ಲಿ ಪೋಷಕಾಂಶಗಳನ್ನು…

Read More

ರಾಮಮಂದಿರ ಹಗರಣದ ತನಿಖೆಯ ಎಸ್​ಐಟಿಗೆ ಚಾರ್ಟರ್ಡ್ ಅಕೌಂಟೆಂಟ್ ನೇಮಿಸಿ; ಯೋಗಿ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚನೆ – Kannada News | Appoint Chartered Accountant To Ram Temple Donation Theft Case SIT Supreme Court To UP Government

ನವದೆಹಲಿ, ಜುಲೈ 27: ಅಯೋಧ್ಯೆಯ ರಾಮಮಂದಿರದ ದೇಣಿಗೆ ಹಣ ಕಳ್ಳತನ ಪ್ರಕರಣದ (Ram Temple Donation Theft Case) ತನಿಖೆ ನಡೆಸುತ್ತಿರುವ ‘ವಿಶೇಷ ತನಿಖಾ ತಂಡ’ದ (SIT) ನೇತೃತ್ವವನ್ನು ಐಪಿಎಸ್ ಅಧಿಕಾರಿ ಎಸ್. ಕಿರಣ್ ವಹಿಸಲಿದ್ದಾರೆ ಎಂದು ಉತ್ತರ ಪ್ರದೇಶ ಸರ್ಕಾರ ಇಂದು ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. ಈ ಹೇಳಿಕೆಗೆ ಸ್ಪಂದಿಸಿದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಆ ತನಿಖಾ ತಂಡಕ್ಕೆ ಚಾರ್ಟರ್ಡ್ ಅಕೌಂಟೆಂಟ್ ಒಬ್ಬರನ್ನು ನೇಮಿಸುವಂತೆ ಹಾಗೂ 2 ವಾರಗಳಲ್ಲಿ ವರದಿ ಸಲ್ಲಿಸುವಂತೆ…

Read More

‘ಇಂಥ ಅಸಹ್ಯ ಎಲ್ಲೂ ನೋಡಿಲ್ಲ’: ಜೆನ್ ಜಿ ಪ್ರತಿಭಟನೆ ವಿರುದ್ಧ ಕಂಗನಾ ರಣಾವತ್ ಗರಂ – Kannada News | Kangana Ranaut slams Gen Z CJP protest reels calls them puke inducing

ದೆಹಲಿಯ ಜಂತರ್ ಮಂತರ್‌ನಲ್ಲಿ ‘ಕಾಕ್ರೋಚ್‌ ಜನತಾ ಪಾರ್ಟಿ’ (CJP) ನೇತೃತ್ವದಲ್ಲಿ ನಡೆದ Gen Z ವಿದ್ಯಾರ್ಥಿಗಳ ಪ್ರತಿಭಟನೆಯ ವೀಡಿಯೋಗಳ ವಿರುದ್ಧ ಸಂಸದೆ ಹಾಗೂ ನಟಿ ಕಂಗನಾ ರಣಾವತ್ (Kangana Ranaut) ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್‌ಸ್ಟಾಗ್ರಾಮ್‌ ಸ್ಟೋರೀಸ್‌ನಲ್ಲಿ ಸರಣಿ ಪೋಸ್ಟ್ ಮಾಡಿರುವ ಅವರು, ಪ್ರತಿಭಟನಾಕಾರರ ನಡವಳಿಕೆಯನ್ನು ‘ಅಸಹ್ಯ, ಕಸ ಮತ್ತು ವಾಂತಿ ಬರುವಂತಹದ್ದು’ ಎಂದು ಜರಿದಿದ್ದಾರೆ. ಅವರ ಈ ಹೇಳಿಕೆ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ. ‘ಇವರನ್ನು ಯಾರು ಹೆತ್ತು, ಹೇಗೆ ಬೆಳೆಸುತ್ತಿದ್ದಾರೋ?’ ಪ್ರತಿಭಟನೆಯ ವೀಡಿಯೋಗಳನ್ನು…

Read More

ಜಸ್ಟ್‌ ಈ ಟಿಪ್ಸ್‌ ಪಾಲಿಸುವ ಮೂಲಕ ಮನೆಯಂಗಳದಲ್ಲಿಯೇ ಸುಲಭವಾಗಿ ಬೆಳೆಯಬಹುದು ಕರಿಬೇವಿನ ಗಿಡ – Kannada News | Follow these tips to grow curry leaves plant during the rainy season

ಕರಿಬೇವು (curry leaves) ಅಡುಗೆಯ ಘಮ, ರುಚಿಯನ್ನು ಹೆಚ್ಚಿಸುವುದು ಮಾತ್ರವಲ್ಲ ಆರೋಗ್ಯಕ್ಕೂ ತುಂಬಾನೇ ಪ್ರಯೋಜನಕಾರಿ. ವಿಶೇಷವಾಗಿ ತಲೆ ಕೂದಲು, ಕಣ್ಣಿನ ಆರೋಗ್ಯಕ್ಕೆ ಕರಿಬೇವು ಪ್ರಯೋಜನಕಾರಿ. ಹಾಗಾಗಿ ಅಡುಗೆಗೆ ಕರಿಬೇವನ್ನು ಹೆಚ್ಚಾಗಿ ಬಳಸುತ್ತಾರೆ. ಅದಕ್ಕಾಗಿ ಈ ಗಿಡವನ್ನು ಮನೆಯಲ್ಲಿ ಬೆಳೆಯಲು ಪ್ರಯತ್ನಿಸುತ್ತಾರೆ. ಆದರೆ ಹೆಚ್ಚಿನವರ ಮನೆಗಳಲ್ಲಿ ಕರಿಬೇವು ಸೊಂಪಾಗಿ ಬೆಳೆಯುವುದೇ ಇಲ್ಲ, ನೆಟ್ಟ ಕೆಲವು ದಿನಗಳಲ್ಲಿಯೇ ಗಿಡ ಸತ್ತು ಹೋಗುತ್ತದೆ. ಹೀಗೆ ನಿಮ್ಮ ಮನೆಯಲ್ಲೂ ಕರಿಬೇವಿನ ಗಿಡ ಬೆಳೆಯುತ್ತಿಲ್ಲವೇ, ಹಾಗಿದ್ರೆ ಈ ಕೆಲವೊಂದು ಸಲಹೆಗಳನ್ನು ಪಾಲಿಸುವ ಮೂಲಕ ಈ…

Read More

August Festivals List 2026: ಆಗಸ್ಟ್ ತಿಂಗಳಲ್ಲಿ ಆಚರಿಸಲಾಗುವ ಪ್ರಮುಖ ಹಬ್ಬಗಳ ಪಟ್ಟಿ ಇಲ್ಲಿದೆ – Kannada News | August Festivals List 2026: festivals List of August month

ಹಿಂದೂ ಧರ್ಮದಲ್ಲಿ ವರ್ಷವಿಡೀ ಹಬ್ಬ ಹರಿದಿನಗಳು (festivals), ಧಾರ್ಮಿಕ ಆಚರಣೆಗಳಿಗೆ ಕೊರತೆಯಿಲ್ಲ. ಇದೀಗ ಜುಲೈ ತಿಂಗಳು ಕಳೆದು ಆಗಸ್ಟ್ ತಿಂಗಳಿಗೆ ಕೆಲವೇ ದಿನಗಳು ಬಾಕಿಯಿವೆ. ಈ ತಿಂಗಳಲ್ಲಿ ಪ್ರಮುಖ ಹಬ್ಬಗಳು ಹಾಗೂ ವ್ರತ ಆಚರಣೆಗಳಿವೆ. ಹೌದು, ವರಮಹಾಲಕ್ಷ್ಮಿ ವ್ರತ ಸೇರಿದಂತೆ ಹತ್ತು ಹಲವು ಹಬ್ಬಗಳನ್ನು ಆಚರಿಸಲು ಎಲ್ಲರೂ ಸಜ್ಜಾಗಿದ್ದಾರೆ. ಹಾಗಾದ್ರೆ ವರ್ಷದ ಏಳನೇ ತಿಂಗಳಲ್ಲಿ ಪ್ರಮುಖ ಹಬ್ಬಗಳ ಆಚರಣೆಗಳಿದ್ದು ಈ ಬಗ್ಗೆ ನೀವು ತಿಳಿದುಕೊಳ್ಳಿ. ಆಗಸ್ಟ್ ತಿಂಗಳಲ್ಲಿ ಆಚರಿಸಲಾಗುವ ಪ್ರಮುಖ ಹಬ್ಬಗಳ ಪಟ್ಟಿ ಇಲ್ಲಿದೆ ಆಗಸ್ಟ್ 2…

Read More

ಭಾರತದಲ್ಲಿ ನೂರು ಕೋಟಿ ರೂ ಕುಬೇರರ ಸಂಖ್ಯೆ 4 ವರ್ಷದಲ್ಲಿ 4 ಪಟ್ಟು ಹೆಚ್ಚಳ: ಸರ್ಕಾರದಿಂದ ಮಾಹಿತಿ – Kannada News | Number of Indians with wealth of over Rs 100 crore has risen 4 times since 22fy, govt report

ನವದೆಹಲಿ, ಜುಲೈ 27: ಭಾರತದಲ್ಲಿ ಕೋಟ್ಯಾಧೀಶರರ ಸಂಖ್ಯೆ ಸಿಕ್ಕಾಪಟ್ಟೆ ಏರುತ್ತಿದೆ. ನೂರು ಕೋಟಿ ರೂಗೂ ಹೆಚ್ಚಿನ ಹಣವಂತರ ಸಂಖ್ಯೆ ಕಳೆದ ಐದು ವರ್ಷದಲ್ಲಿ ನಾಲ್ಕು ಪಟ್ಟು ಹೆಚ್ಚಿದೆಯಂತೆ. ಅದೂ ನೂರು ಕೋಟಿ ರೂ ಎನ್ನುವುದು ಘೋಷಿತ ಆದಾಯ. ಅಂದರೆ, ಐಟಿಆರ್​ನಲ್ಲಿ (ITR) ತಮ್ಮ ಆದಾಯವನ್ನು ತೋರ್ಪಡಿಸಿರುವ ವ್ಯಕ್ತಿಗಳು ಇವರು. ಕೇಂದ್ರ ಹಣಕಾಸು ರಾಜ್ಯ ಸಚಿವ ಪಂಕಜ್ ಚೌಧರಿ ಅವರು ಲೋಕಸಭೆಯಲ್ಲಿ ನೀಡಿದ ಲಿಖಿತ ಉತ್ತರದಲ್ಲಿ ಈ ಅಂಕಿ-ಅಂಶಗಳನ್ನು ಹಂಚಿಕೊಂಡಿದ್ದಾರೆ. ಅಸೆಸ್‌ಮೆಂಟ್ ವರ್ಷ (AY) 2021-22 ರಲ್ಲಿ ₹100…

Read More

ಮೇಕೆದಾಟು ಯೋಜನೆ: ಕರ್ನಾಟಕಕ್ಕೆ ತಮಿಳುನಾಡಿನ ಒಪ್ಪಿಗೆ ಅಗತ್ಯವಿಲ್ಲ ಎಂದ ಕೇಂದ್ರ ಜಲಶಕ್ತಿ ಸಚಿವಾಲಯ – Kannada News | Karnataka mekedatu project no permission needed from other states Says union minister

ನವದೆಹಲಿ, (ಜುಲೈ,27): ಮೇಕೆದಾಟು ಯೋಜನೆಗೆ (mekedatu project )ಕರ್ನಾಟಕವು (Karnataka) ತಮಿಳುನಾಡು, ಕೇರಳ ಹಾಗೂ ಪುದುಚೇರಿಯಂತಹ ನೆರೆ ರಾಜ್ಯಗಳ ಪ್ರತ್ಯೇಕ ಒಪ್ಪಿಗೆ ಪಡೆಯುವ ಅಗತ್ಯವಿಲ್ಲ ಎಂದು ಕೇಂದ್ರ ಜಲಶಕ್ತಿ ಸಚಿವಾಲಯ ಸ್ಪಷ್ಟಪಡಿಸಿದೆ. ರಾಜ್ಯಸಭೆಯಲ್ಲಿ ಇಂದು (ಜುಲೈ 27) ನಡೆದ ಪ್ರಶ್ನೋತ್ತರ ಅವಧಿಯಲ್ಲಿ ತಮಿಳುನಾಡಿನ ಸಂಸದ ಡಾ. ಅನ್ಬುಮಣಿ ರಾಮದಾಸ್ ಕೇಳಿದ ಪ್ರಶ್ನೆಗೆ ಕೇಂದ್ರ ಜಲಶಕ್ತಿ ಖಾತೆ ರಾಜ್ಯ ಸಚಿವ ರಾಜ್ ಭೂಷಣ್ ಚೌಧರಿ ಲಿಖಿತ ಉತ್ತರ ನೀಡಿದ್ದು,  ಗಡಿಯೊಳಗೆ ನೀರು ಬಳಕೆಗೆ ಕರ್ನಾಟಕಕ್ಕೆ ಪೂರ್ಣ ಅಧಿಕಾರ ಇದೆ….

Read More

ಬೆಂಗಳೂರಿನ 2ನೇ ಏರ್​ಪೋರ್ಟ್​ ಬಗ್ಗೆ ರಾಜ್ಯ ಸರ್ಕಾರದಿಂದ ಯಾವುದೇ ಪ್ರಸ್ತಾವನೆ ಬಂದಿಲ್ಲ ಎಂದ ಕೇಂದ್ರ – Kannada News | Centre Says No Proposal Received from Karnataka Government for Bengaluru’s Second Airport

ಬೆಂಗಳೂರು, ಜುಲೈ 27: ಬೆಂಗಳೂರು ದಕ್ಷಿಣ ಮತ್ತು ತುಮಕೂರಿನಲ್ಲಿ ಎರಡನೇ ಏರ್​ಪೋರ್ಟ್​ ನಿಲ್ದಾಣ ನಿರ್ಮಾಣ (2nd airport proposal) ವಿಚಾರವಾಗಿ ಸ್ಥಳ ಆಯ್ಕೆ ಸಂಬಂಧ ಪೈಪೋಟಿ ಮಧ್ಯೆ ಇದೀಗ ರಾಜ್ಯ ಸರ್ಕಾರದಿಂದ ಯಾವುದೇ ಪ್ರಸ್ತಾವನೆ ಬಂದಿಲ್ಲ ಎಂದು ಕೇಂದ್ರ ಸ್ಪಷ್ಟನೆ ನೀಡಿದೆ. ಲೋಕಸಭೆಯಲ್ಲಿ ಸಂಸದ ಪಿ.ಸಿ.ಮೋಹನ್ ಪ್ರಶ್ನೆಗೆ ನಾಗರಿಕ ವಿಮಾನಯಾನ ರಾಜ್ಯ ಸಚಿವ ಮುರಳೀಧರ್ ಮೊಹೊಲ್​​​ (Murlidhar Mohol) ಈ ಬಗ್ಗೆ ಉತ್ತರ ನೀಡಿದ್ದಾರೆ. ರಾಜ್ಯ ಸರ್ಕಾರದಿಂದ ಯಾವುದೇ ಉತ್ತರ ಬಂದಿಲ್ಲ ಎಂದ ಸಚಿವಾಲಯ  ರಾಜ್ಯ ಸರ್ಕಾರದ…

Read More

ಟೀಂ ಇಂಡಿಯಾ ಟಿ20 ಮಾದರಿಯಲ್ಲಿ ಮತ್ತೆ ಕಣಕ್ಕಿಳಿಯುವುದು ಯಾವಾಗ? – Kannada News | Rising Star Vaibhav Sooryavanshi: India’s Next Big Batting Sensation and Asian Games Call

ಜಿಂಬಾಬ್ವೆ ವಿರುದ್ಧದ ಟಿ20 ಸರಣಿಯನ್ನು ಟೀಂ ಇಂಡಿಯಾ (Team India) 3-0 ಅಂತರದಿಂದ ಗೆದ್ದುಕೊಂಡಿತು. ತಂಡದ ಈ ಗೆಲುವಿನಲ್ಲಿ ಯುವ ಆರಂಭಿಕ ಆಟಗಾರ ವೈಭವ್ ಸೂರ್ಯವಂಶಿ (Vaibhav Sooryavanshi) ಅವರ ಪ್ರಮುಖವಾಗಿತ್ತು. ಆಡಿದ ಮೂರು ಇನ್ನಿಂಗ್ಸ್‌ಗಳಲ್ಲಿ 151 ರನ್‌ ಕಲೆಹಾಕುವ ಮೂಲಕ ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರನೆನಿಸಿಕೊಂಡರು. ಇದಕ್ಕೆ ಪ್ರತಿಫಲವಾಗಿ ವೈಭವ್ ಸೂರ್ಯವಂಶಿಗೆ ಮೂರನೇ ಟಿ20 ಪಂದ್ಯದಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಜೊತೆಗೆ ಇಡೀ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದಕ್ಕೆ ಸರಣಿಶ್ರೇಷ್ಠ ಪ್ರಶಸ್ತಿಯೂ ಲಭಿಸಿತು. ಹೀಗಾಗಿ…

Read More

Karnataka Weather Forecast: ನಾಳೆ 4 ಜಿಲ್ಲೆಗಳಿಗೆ ಆರೆಂಜ್​​ ಅಲರ್ಟ್​​, ತಿಂಗಳಾಂತ್ಯದವರೆಗೂ ಮಳೆ ಮುನ್ಸೂಚನೆ – Kannada News | Karnataka Weather Update: IMD Issues Orange Alert for 4 Districts; Heavy Rain Forecasted Across the State

ಬೆಂಗಳೂರು, ಜುಲೈ 27: ಭಾರತೀಯ ಹವಾಮಾನ ಇಲಾಖೆ (IMD) ಹಾಗೂ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ (KSNDMC) ಮಾಹಿತಿಯ ಪ್ರಕಾರ ರಾಜ್ಯದ ಹಲವು ಜಿಲ್ಲೆಗಳಲ್ಲಿ ಜುಲೈ ಅಂತ್ಯದವರೆಗೂ ಉತ್ತಮ ಮಳೆಯಾಗಲಿದೆ. ಕರಾವಳಿ ಕರ್ನಾಟಕ ಭಾಗದಲ್ಲಿ ಜುಲೈ 30ರ ವರೆಗೂ ಆರೆಂಜ್​​ ಅಲರ್ಟ್​​ ಘೋಷಿಸಲಾಗಿದ್ದರೆ, ದಕ್ಷಿಣ ಒಳನಾಡಿಗೆ ಜುಲೈ 28ರಂದು ಭಾರಿ ಮಳೆಯ ಎಚ್ಚರಿಕೆ ನೀಡಲಾಗಿದೆ. ಉತ್ತರ ಒಳನಾಡು ಭಾಗದ ಕೆಲವೆಡೆಯೂ ಇನ್ನೂ ಕೆಲ ದಿನಗಳು ವರ್ಷಧಾರೆಯ ಮುನ್ಸೂಚನೆ ಇರೋದಾಗಿ ಹವಾಮಾನ ಇಲಾಖೆ ತಿಳಿಸಿದೆ. ನಾಲ್ಕು…

Read More