ಹಾರ್ದಿಕ್ ಪಾಂಡ್ಯ ಕಂಬ್ಯಾಕ್ ಯಾವಾಗ? ಹೊರಬಿತ್ತು ಬಿಗ್ ಅಪ್ಡೇಟ್
ಟೀಂ ಇಂಡಿಯಾದ ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಗಾಯಗಳಿಂದಾಗಿ ಕಳೆದ ಕೆಲವು ತಿಂಗಳುಗಳಿಂದ ತಂಡದಿಂದ ದೂರವಿದ್ದಾರೆ. ಈ ಗಾಯದಿಂದಾಗಿ ಹಾರ್ದಿಕ್, ಐರ್ಲೆಂಡ್, ಇಂಗ್ಲೆಂಡ್ ಹಾಗೂ ಜಿಂಬಾಬ್ವೆ ಪ್ರವಾಸದಿಂದಲೂ ಹೊರಗುಳಿಯಬೇಕಾಯಿತು. ಗಾಯದಿಂದ ಚೇತರಿಸಿಕೊಳ್ಳಲು ಬೆಂಗಳೂರಿನಲ್ಲಿ ನೆಲೆಸಿರುವ ಹಾರ್ದಿಕ್ ಶ್ರೀಘ್ರದಲ್ಲೇ ಚೇತರಿಸಿಕೊಳ್ಳಲಿದ್ದು ಮತ್ತೆ ಮೈದಾನಕ್ಕೆ ಕಾಲಿಡಲು ಸಿದ್ಧರಾಗಿದ್ದಾರೆ. ವರದಿ ಪ್ರಕಾರ, ಹಾರ್ದಿಕ್ ಆಗಸ್ಟ್ನಿಂದ ಆಯ್ಕೆಗೆ ಲಭ್ಯವಾಗಲಿದ್ದಾರೆ(PC-PTI). 2026 ರ ಐಪಿಎಲ್ನಿಂದಲೂ ಹಾರ್ದಿಕ್ ಪಾಂಡ್ಯ ಗಾಯಗಳಿಂದ ಬಳಲುತ್ತಿದ್ದಾರೆ. ಆರಂಭದಲ್ಲಿ, ಬೆನ್ನುನೋವಿನಿಂದಾಗಿ ಅವರು ಕೆಲವು ಪಂದ್ಯಗಳನ್ನು ತಪ್ಪಿಸಿಕೊಂಡರು. ಆ ನಂತರ ಚೇತರಿಸಿಕೊಂಡು…