ಷೇರುಪೇಟೆಯಲ್ಲಿ ಮಂಡೇ ಧಮಾಕ; ಸತತ ಕುಸಿತದ ಬಳಿಕ ಸಖತ್ ಚೇತರಿಸಿಕೊಂಡ ಮಾರುಕಟ್ಟೆ; ಏನು ಕಾರಣ? – Kannada News | Indian stock market rises on July 27th after last week’s big fall, key reasons for this comeback
ನವದೆಹಲಿ, ಜುಲೈ 27: ಕಳೆದ ವಾರವಿಡೀ ಸತತವಾಗಿ ಕುಸಿತ ಕಂಡಿದ್ದ ಭಾರತೀಯ ಷೇರುಪೇಟೆಗೆ (stock market) ಇವತ್ತು ಸೋಮವಾರ ಸಖತ್ ಕಳೆ ಪಡೆದಿದೆ. ಸೆನ್ಸೆಕ್ಸ್ 800ಕ್ಕೂ ಹೆಚ್ಚು ಅಂಕಗಳನ್ನು ಗಳಿಸಿದೆ. ಶೇ. 1ಕ್ಕಿಂತಲೂ ಹೆಚ್ಚು ಉಬ್ಬಿದೆ. ನಿಫ್ಟಿ ಕೂಡ 24,000 ಅಂಕಗಳ ಗಡಿ ಮುಟ್ಟಲು ಯಶಸ್ವಿಯಾಗಿದೆ. ಕಳೆದ ವಾರ ಕಳೆದುಕೊಂಡಿದ್ದ ಸಾಕಷ್ಟ ಅಂಕಗಳಲ್ಲಿ ಒಂದಷ್ಟು ಚೇತರಿಕೆ ಸಿಕ್ಕಿದೆ. ಈ ವರದಿ ಬರೆಯುವ ಹೊತ್ತಲ್ಲಿ ಸೆನ್ಸೆಕ್ಸ್ 76,860 ಅಂಕಗಳಲ್ಲಿತ್ತು. ನಿಫ್ಟಿ 24,002 ಅಂಕಗಳ ಮಟ್ಟದಲ್ಲಿತ್ತು. ಬಿಎಸ್ಇ ಮತ್ತು ಎನ್ಎಸ್ಇ…