Headlines

ಪೊಲೀಸರು ನನ್ನನ್ನು ಅಪಹರಿಸಿ ಮಸ್ಸೂರಿಯಲ್ಲಿ ಬಿಟ್ಟರು; ಜಂತರ್ ಮಂತರ್‌ನಲ್ಲಿ ಆಹಾರ ವಿತರಿಸುತ್ತಿದ್ದ ವ್ಯಕ್ತಿ ಆರೋಪ – Kannada News | Junaid distributing food to Jantar Mantar protesters alleges delhi Police picked him and left him at Mussoorie

ನವದೆಹಲಿ, ಜುಲೈ 27: ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ (Delhi Protest) ನಡೆಸುತ್ತಿದ್ದ ವಿದ್ಯಾರ್ಥಿಗಳಿಗೆ ಮತ್ತು ಜನರಿಗೆ ಉಚಿತವಾಗಿ ಆಹಾರ ವಿತರಿಸುತ್ತಿದ್ದ ಸ್ವಯಂಸೇವಕರೊಬ್ಬರನ್ನು ದೆಹಲಿ ಪೊಲೀಸರು ಕಾನೂನುಬಾಹಿರವಾಗಿ ವಶಕ್ಕೆ ಪಡೆದು, ದೆಹಲಿಯಿಂದ ಸುಮಾರು 300 ಕಿ.ಮೀ. ದೂರದಲ್ಲಿರುವ ಉತ್ತರಾಖಂಡದ ಮಸ್ಸೂರಿಯಲ್ಲಿ ತಂದು ಬಿಟ್ಟಿದ್ದಾರೆ ಎಂದು ಗಂಭೀರ ಆರೋಪ ಕೇಳಿಬಂದಿದೆ. ಈ ಬಗ್ಗೆ ಪ್ರತಿಭಟನಾಕಾರರ ತಂಡದವರು ಮಾಹಿತಿ ಕಲೆಹಾಕಿದ್ದು, ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ವಿಡಿಯೋ ಕೂಡ ಅಪ್​ಲೋಡ್ ಮಾಡಿದ್ದಾರೆ. ಜುನೈದ್ ನೀಡಿದ ಮಾಹಿತಿಯ ಪ್ರಕಾರ, ಅವರನ್ನು ಇಡೀ…

Read More

ನಾನು ಬಾರ್ ಮುಂದೆ ನಿಂತು ಕುಡಿದು ತೂರಾಡೋದನ್ನ ನೋಡಿದ್ದಿರಾ? ಕುಡುಕ ಎಂದ ಕಾಂಗ್ರೆಸ್​​​​​ ವಿರುದ್ಧ ಸಿಟಿ ರವಿ ಕೆಂಡಾಮಂಡಲ – Kannada News | BJP MLC CT Ravi Hits Back at Congress For KPCC Called Drunker

ರಾಯಚೂರು, (ಜುಲೈ 27): ಬಿಜೆಪಿ ವಿಧಾನಪರಿಷತ್ ಸದಸ್ಯ ಸಿಟಿ ರವಿ (CT Ravi) ಅವರನ್ನು ಕುಡುಕ ಎನ್ನುವ ರೀತಿ ಕೆಪಿಸಿಸಿ ಅಧಿಕೃತ ಖಾತೆಯಿಂದ ಸೋಷಿಯಲ್ ಮಿಡಿಯಾದಲ್ಲಿ ಪೋಸ್ಟ್ ಮಾಡಿದ್ದು, ಇದಕ್ಕೆ ಸಿಟಿ ರವಿ ಅವರು ಕೆಂಡಾಮಂಡಲರಾಗಿದ್ದಾರೆ. ಈ ಬಗ್ಗೆ ರಾಯಚೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಿಟಿ ರವಿ, ಆ ಪಕ್ಷದ ಅಧಿಕೃತ ಸೋಶಿಯಲ್ ಮಿಡಿಯಾದಲ್ಲಿ ಕುಡುಕ ಅಂತ ಹಾಕ್ತಾರೆ ಅಂದ್ರೆ, ಆ ಪಕ್ಷ ಚರಂಡಿ ನೀರಿಗಿಂತ ಕಡೆಯಾಗಿದೆ ಅನ್ನೋದಕ್ಕೆ ಸಾಕ್ಷಿ. ನಾನು ಹೇಗೆ ಅಂತ ಎಲ್ಲರಿಗೂ ಗೊತ್ತು….

Read More

ಗೂಗಲ್ ಪೇನಿಂದ ಲಕ್ಷ ಲಕ್ಷ ಸಾಲ ಪಡೆಯಬಹುದು, ಹೀಗೆ ಅಪ್ಲೈ ಮಾಡಿ – Kannada News | Google Pay: How to get a loan on Google Pay

ಇತ್ತೀಚೆಗಿನ ದಿನಗಳಲ್ಲಿ ಗೂಗಲ್ ಪೇ, ಫೋನ್ ಪೇ ಮೂಲಕ ಆನ್ಲೈನ್ ಟ್ರಾನ್ಸಾಕ್ಷನ್ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಆದರೆ ಈ ಗೂಗಲ್ ಪೇ (Google Pay) ಮೂಲಕ ಹಣಕಾಸಿನ ವಹಿವಾಟಿನ ಜತೆಗೆ ಕರೆಂಟ್ ಬಿಲ್, ಗ್ಯಾಸ್ ಬಿಲ್, ಮೊಬೈಲ್ ಹಾಗೂ ಡಿಟಿಎಚ್ ರೀಚಾರ್ಜ್‌ಗಳನ್ನು ಕುಳಿತಲ್ಲಿಂದಲೇ ಮಾಡುತ್ತಿದ್ದಾರೆ. ಅದರ ಜತೆಗೆ ಗೂಗಲ್ ಪೇ ಮೂಲಕ ವೈಯಕ್ತಿಕ ಸಾಲ (Personal loan) ಪಡೆಯಬಹುದು ಎಂಬುದು ಎಷ್ಟೋ ಜನರಿಗೆ ತಿಳಿದಿಲ್ಲ. ಈ ಅಪ್ಲಿಕೇಶನ್ ನಲ್ಲಿ 30,000 ರೂ. 12,00,000 ರೂವರೆಗೆ ಸಾಲ ಸೌಲಭ್ಯ…

Read More

ಅಶ್ಲೀಲವಾಗಿ ಟ್ರೋಲ್ ಮಾಡಿದವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಧ್ರುವಂತ್ – Kannada News | BBK 12 fame Dhruvanth Charith Balappa files Police Complaint against Troll Pages for Vulgar posts

‘ಬಿಗ್ ಬಾಸ್ ಕನ್ನಡ ಸೀಸನ್ 12’ (BBK 12) ರಿಯಾಲಿಟಿ ಶೋ ಖ್ಯಾತಿಯ ಕಿರುತೆರೆ ನಟ ಧ್ರುವಂತ್ ಅಲಿಯಾಸ್ ಚರಿತ್ ಬಾಳಪ್ಪ ಅವರು ಪೊಲೀಸ್ ಠಾಣೆಯ ಮೆಟ್ಟಿಲು ಏರಿದ್ದಾರೆ. ತಮ್ಮ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಕೆಟ್ಟಿದಾಗಿ ಟ್ರೋಲ್ ಮಾಡಿದವರ ವಿರುದ್ಧ ಅವರು ದೂರು ನೀಡಿದ್ದಾರೆ. ಇತ್ತೀಚೆಗೆ ಧ್ರುವಂತ್ (Dhruvanth) ಅವರು ನೀಡಿದ ಒಂದು ಸಂದರ್ಶನದ ತುಣುಕುಗಳನ್ನು ಇಟ್ಟುಕೊಂಡು ಅಶ್ಲೀಲವಾಗಿ ಟ್ರೋಲ್ ಮಾಡಲಾಗುತ್ತಿದೆ. ಅದರಿಂದ ಅಸಮಾಧಾನಗೊಂಡಿರುವ ಅವರು ಕೆಲವು ಟ್ರೋಲ್ (Troll) ಪೇಜ್​ಗಳ ವಿರುದ್ಧ ದೂರು ನೀಡಿದ್ದು, ದೂರಿನ…

Read More

ಬೆಳಗಾವಿ ಕಾಂಗ್ರೆಸ್ ಕಚೇರಿಯಲ್ಲಿ ಹೈಡ್ರಾಮಾ: ಅಧ್ಯಕ್ಷರ ಆಯ್ಕೆ ಸಭೆಯಲ್ಲಿ ಕಾರ್ಯಕರ್ತರ ಗಲಾಟೆ! – Kannada News | High Drama in Belagavi Congress Office: Factional Feud & Clash During City President Election Meeting

ಬೆಳಗಾವಿ, ಜುಲೈ 27: ಇಲ್ಲಿನ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ನಗರ ಅಧ್ಯಕ್ಷರ ಆಯ್ಕೆ ಸಂಬಂಧ ನಡೆದ ಅಭಿಪ್ರಾಯ ಸಂಗ್ರಹ ಸಭೆ ರಣರಂಗವಾಗಿ ಮಾರ್ಪಟ್ಟಿದೆ. ಎಐಸಿಸಿ ವೀಕ್ಷಕ ಮನೋಜ್ ಚವ್ಹಾಣ್ ಅವರ ನೇತೃತ್ವದಲ್ಲಿ ಸಭೆ ನಡೆಯುತ್ತಿದ್ದಾಗಲೇ ನಗರ ಅಧ್ಯಕ್ಷ ಸ್ಥಾನಕ್ಕಾಗಿ ಕಾರ್ಯಕರ್ತರು ಕೈಕೈ ಮಿಲಾಯಿಸಿದ್ದಾರೆ. ವೀಕ್ಷಕರ ಎದುರಲ್ಲೇ ನಾಯಕರು ಹಾಗೂ ಕಾರ್ಯಕರ್ತರು ತೀವ್ರ ಗದ್ದಲ ಎಬ್ಬಿಸಿದ್ದು, ಮಾಜಿ ಶಾಸಕ ರಮೇಶ್ ಕುಡಚಿ ಆಪ್ತ ಹೇಮಂತ್ ಲಿಂಗಾಡೆ ಎಂಬಾತನ ಮೇಲೆ ಹಲ್ಲೆ ನಡೆಸಲಾಗಿದೆ ಎಂಬ ಆರೋಪ ಕೇಳಿಬಂದಿದೆ….

Read More

ಸೀಮಿತ ಓವರ್​ಗಳ ಸರಣಿಗಾಗಿ ಬಾಂಗ್ಲಾ ಪ್ರವಾಸ ಮಾಡಲಿದೆ ಟೀಂ ಇಂಡಿಯಾ – Kannada News | Team India’s Bangladesh Tour Likely in Sept; BCCI BCB mend ties

ಸರಿಸುಮಾರು ಒಂದು ವರ್ಷಗಳ ಬಳಿಕ ಬಿಸಿಸಿಐ ಹಾಗೂ ಬಾಂಗ್ಲಾದೇಶ ಕ್ರಿಕೆಟ್ ಮಂಡಳ (BCCI BCB ) ನಡುವಿನ ಸಂಬಂಧಗಳು ಸುಧಾರಿಸುವ ಸುಳಿವು ಸಿಕ್ಕಿದೆ. ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯವನ್ನು ಖಂಡಿಸಿ ಬಿಸಿಸಿಐ, ಬಾಂಗ್ಲಾದೇಶ ಆಟಗಾರರನ್ನು ಐಪಿಎಲ್​​ನಿಂದ ನಿಷೇಧಿಸಿತ್ತು. ಇದರಿಂದಾಗಿ ಬಾಂಗ್ಲಾದೇಶ ತಂಡ ಭಾರತಕ್ಕೆ ಬರಲು ನಿರಾಕರಿಸಿತ್ತು. ಹೀಗಾಗಿ ಉಭಯ ದೇಶಗಳ ತಂಡಗಳ ನಡುವೆ ಅಂದಿನಿಂದ ಯಾವುದೇ ಸರಣಿಗಳು ನಡೆದಿರಲಿಲ್ಲ. ಇದರ ಪರಿಣಾಮವಾಗಿ ಒಂದು ವರ್ಷದ ಹಿಂದೆಯೇ ಉಭಯ ತಂಡಗಳ ನಡುವೆ ನಡೆಯಬೇಕಿದ್ದ ಸರಣಿ ರದ್ದಾಗಿತ್ತು. ಇದೀಗ ಉಭಯ…

Read More

ಪ್ರವಾಸಿಗರ ಸ್ವರ್ಗ ಮಡಿಕೇರಿಯೀಗ ರಸ್ತೆ ಗುಂಡಿಗಳಿಂದ ತುಂಬಿರೋ ನರಕ!: ಆಡಳಿತದ ನಿರ್ಲಕ್ಷ್ಯಕ್ಕೆ ವಾಹನ ಸವಾರರ ಹಿಡಿಶಾಪ – Kannada News | From Paradise to Pothole Hell: Dilapidated Roads in Tourist Hub Madikeri Trigger Public Outrage

ಮಡಿಕೇರಿ, ಜುಲೈ 27: ಮಂಜಿನ ನಗರಿ, ಪ್ರವಾಸಿಗರ ಸ್ವರ್ಗ ಎಂದೆಲ್ಲ ಕರೆಸಿಕೊಳ್ಳುವ ಮಡಿಕೇರಿ ನಗರದ ರಸ್ತೆಗಳು ಶೋಚನೀಯ ಸ್ಥಿತಿಗೆ ತಲುಪಿದ್ದು, ನಗರಕ್ಕೆ ಭೇಟಿ ನೀಡುವವರು ಮತ್ತು ಸ್ಥಳೀಯ ನಿವಾಸಿಗಳಿಗೆ ನಿತ್ಯ ನರಕ ದರ್ಶನ ಮಾಡಿಸಯತ್ತಿವೆ. ರೋಡ್​​ ಸಂಪೂರ್ಣ ಹದಗೆಟ್ಟು ನೂರಾರು ಗುಂಡಿಗಳು ಬಿದ್ದಿರುವ ಕಾರಣ ಸಂಚಾರಕ್ಕೆ ವಾಹನ ಸವಾರರು ಸರ್ಕಸ್​​ ನಡೆಸಬೇಕಿದೆ. ಜನರಲ್ ತಿಮ್ಮಯ್ಯ ವೃತ್ತದಿಂದ ರಾಜಾಸೀಟ್ ತೆರಳುವ ರಸ್ತೆ, ಹೊಸ ಖಾಸಗಿ ಬಸ್ ನಿಲ್ದಾಣ ರಸ್ತೆ, ಅಬ್ಬಿಫಾಲ್ಸ್ ರಸ್ತೆ, ಸಂಪಿಗೆ ಕಟ್ಟೆ ರಸ್ತೆ ಸೇರಿ ಪ್ರಮುಖ…

Read More

ಇಸ್ರೇಲ್ ಪ್ರಧಾನಿ ನೆತನ್ಯಾಹು ವಾಷಿಂಗ್ಟನ್ ಭೇಟಿ: ಡೊನಾಲ್ಡ್ ಟ್ರಂಪ್ ಭೇಟಿ ಮತ್ತು ನ್ಯೂಯಾರ್ಕ್ ಪ್ರವಾಸದ ಸುತ್ತ ರಾಜಕೀಯ ವಿವಾದ – Kannada News | Netanyahu’s US Visit: Trump Meeting, Iran Talks and ICC Warrant Controversy

ವಾಷಿಂಗ್ಟನ್, ಜುಲೈ 27: ಅಂತಾರಾಷ್ಟ್ರೀಯ ರಾಜಕೀಯ ಮತ್ತು ಭೌಗೋಳಿಕ ಉದ್ವಿಗ್ನತೆಗಳ ನಡುವೆಯೇ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಶ್ವೇತಭವನದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಅವರನ್ನು ಭೇಟಿಯಾಗಲು ವಾಷಿಂಗ್ಟನ್‌ಗೆ ಆಗಮಿಸುತ್ತಿದ್ದಾರೆ. ಇತ್ತೀಚೆಗೆ ನಿಧನರಾದ ಇಸ್ರೇಲ್ ಬೆಂಬಲಿಗ ಸೆನೆಟರ್ ಲಿಂಡ್ಸೆ ಗ್ರಹಾಂ ಅವರ ಸ್ಮರಣಾರ್ಥ ಕಾರ್ಯಕ್ರಮದಲ್ಲೂ ಅವರು ಭಾಗವಹಿಸಲಿದ್ದಾರೆ. ಇರಾನ್ ವಿರುದ್ಧದ ಯುದ್ಧ, ಪರಮಾಣು ಯೋಜನೆಗಳ ವಿನಾಶ ಹಾಗೂ ಲೆಬನಾನ್‌ನಲ್ಲಿ ಹಿಜ್ಬುಲ್ಲಾ ನಿಶ್ಶಸ್ತ್ರೀಕರಣದ ಕುರಿತು ಉಭಯ ನಾಯಕರು ನಿರ್ಣಾಯಕ ಚರ್ಚೆ ನಡೆಸಲಿದ್ದಾರೆ.ಫಾಕ್ಸ್ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ…

Read More

ನಾನು ಬೀದಿ ಹೋರಾಟಗಾರ: ಜೈರಾಮ್ ರಮೇಶ್ ಹೇಳಿಕೆಗೆ ಧರ್ಮೇಂದ್ರ ಪ್ರಧಾನ್ ತಿರುಗೇಟು – Kannada News | Dharmendra Pradhan’s Street Fighter Reply to Jairam Ramesh Post NEET Resignation

ನವದೆಹಲಿ, ಜುಲೈ 27: ನೀಟ್(NEET) ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಬೆನ್ನಲ್ಲೇ ಶಿಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಮೊದಲ ಬಾರಿಗೆ ಸಂಸತ್ತಿಗೆ ಆಗಮಿಸಿದ ಧರ್ಮೇಂದ್ರ ಪ್ರಧಾನ್ ಅವರಿಗೆ ಎನ್‌ಡಿಎ ಸಂಸದರು ಭವ್ಯ ಸ್ವಾಗತ ಕೋರಿದರು. ಈ ವೇಳೆ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಅವರ ಹೇಳಿಕೆಗೆ ಪ್ರಧಾನ್ ನೀಡಿದ ತಿರುಗೇಟು ಸಂಸತ್ತಿನ ಅಂಗಳದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಸಂಸತ್ತಿನ ಆವರಣದಲ್ಲಿ ಪ್ರಧಾನ್ ಅವರನ್ನು ಎದುರುಗೊಂಡ ಕಾಂಗ್ರೆಸ್ ಸಂಸದ ಜೈರಾಮ್ ರಮೇಶ್, “ಇದೆಲ್ಲಾ ನಡೆಯುತ್ತಿರುತ್ತದೆ ಬಿಡಿ”…

Read More

ಹಾಸನ: ಪ್ರಿಯಕರನೊಂದಿಗೆ ಸೇರಿ ಸ್ವಂತ ಮನೆಗೆ ಕನ್ನ ಹಾಕಿದ ಸೊಸೆ; ಸಿಕ್ಕಿಬಿದ್ದಿದ್ಹೇಗೆ? – Kannada News | Hassan Robbery Case Solved: Daughter in Law and Her Lover Arrested, 56 Lakh Gold and Cash Recovered

ಪ್ರಾತಿನಿಧಿಕ ಚಿತ್ರImage Credit source: Getty images ಹಾಸನ, ಜುಲೈ 27: ಮನೆಗೆ ನುಗ್ಗಿ ಬೀರುವಿನಲ್ಲಿದ್ದ ಭಾರೀ ಪ್ರಮಾಣದ ಚಿನ್ನಾಭರಣ ಹಾಗೂ ನಗದು ದೋಚಿದ್ದ (robbery) ಪ್ರಕರಣವನ್ನು ಹಾಸನ ಗ್ರಾಮಾಂತರ ಠಾಣೆ ಪೊಲೀಸರು ಒಂದೇ ದಿನದಲ್ಲಿ ಯಶಸ್ವಿಯಾಗಿ ಭೇದಿಸಿದ್ದಾರೆ. ಈ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಕೇಶವೇಗೌಡ ಅವರ ಸೊಸೆ ಅಮೃತಾ ಹಾಗೂ ಆಕೆಯ ಪ್ರಿಯಕರ ಪರಮೇಶ್ ಅಲಿಯಾಸ್ ಚೇತನ್​​ನನ್ನು ಪೊಲೀಸರು ಬಂಧಿಸಿದ್ದು, ಒಟ್ಟು 56,16,000 ಮೌಲ್ಯದ 441.5 ಗ್ರಾಂ ಚಿನ್ನಾಭರಣ ಹಾಗೂ 13,40,000 ರೂ ಹಣ ವಶಪಡಿಸಿಕೊಂಡಿದ್ದಾರೆ….

Read More