IND vs ZIM: ವೈಭವ್ ತೋಳ್ಬಲಕ್ಕೆ 102 ಮೀ. ದೂರ ಹೋಗಿ ಬಿದ್ದ ಚೆಂಡು; ವಿಡಿಯೋ – Kannada News | Vaibhav Sooryavanshi’s Explosive 81: India Dominates Zimbabwe 3rd T20 with 102m Six

ಹರಾರೆಯಲ್ಲಿ ನಡೆದ ಜಿಂಬಾಬ್ವೆ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾದ ಆರಂಭಿಕ ಆಟಗಾರ ವೈಭವ್ ಸೂರ್ಯವಂಶಿ 81 ರನ್​ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರು. ತಮ್ಮ ಇನ್ನಿಂಗ್ಸ್​ನಲ್ಲಿ 49 ಎಸೆತಗಳನ್ನು ಎದುರಿಸಿದ ವೈಭವ್ 9 ಬೌಂಡರಿ ಹಾಗೂ 4 ಸಿಕ್ಸರ್ ಕೂಡ ಬಾರಿಸಿದರು. ಈ 4 ಸಿಕ್ಸರ್​ನಲ್ಲಿ ಒಂದು ಸಿಕ್ಸರ್ ಬರೋಬ್ಬರಿ 102 ಮೀಟರ್ ದೂರ ಹೋಗಿ ಬಿದ್ದಿತು. ಜಿಂಬಾಬ್ವೆ ತಂಡದ ನಾಯಕ ಸಿಕಂದರ್ ರಝಾ ಓವರ್​ನಲ್ಲಿ ವೈಭವ್ ಈ ಬೃಹತ್ ಸಿಕ್ಸರ್ ಬಾರಿಸಿದರು. ಮೊದಲ ಪಂದ್ಯದಲ್ಲೂ ವೈಭವ್ 99 ಮೀಟರ್ ಉದ್ದದ ಸಿಕ್ಸರ್ ಬಾರಿಸಿದ್ದರು. ಇನ್ನು ಈ ಪಂದ್ಯದಲ್ಲಿ ವೈಭವ್ ಶತಕ ವಂಚಿತರಾದರೂ ತಂಡವನ್ನು ಬೃಹತ್ ಮೊತ್ತದತ್ತ ಕೊಂಡೊಯ್ದರು.

Source link

ಪವನ್ ಕಲ್ಯಾಣ್ ಬಳಿಕ ಈಗ ರಾಮ್ ಚರಣ್​ಗೂ ಶಸ್ತ್ರಚಿಕಿತ್ಸೆ – Kannada News | Ram Charan to under go minor surgery for his hand injury

ಇತ್ತೀಚೆಗಷ್ಟೆ ನಟ, ಆಂಧ್ರ ಪ್ರದೇಶ ಡಿಸಿಎಂ ಪವನ್ ಕಲ್ಯಾಣ್ (Pawan Kalyan) ಅವರಿಗೆ ಮುಂಬೈನ ಧೀರೂಬಾಯಿ ಅಂಬಾನಿ ಆಸ್ಪತ್ರೆಯಲ್ಲಿ ಭುಜದ ಶಸ್ತ್ರಚಿಕಿತ್ಸೆ ಮಾಡಲಾಯ್ತು. ಪವನ್ ಕಲ್ಯಾಣ್ ಅವರಿಗೆ ಭುಜದ ಹಾಗೂ ತೋಳಿನ ಭಾಗದ ಮಾಂಸಖಂಡಗಳಲ್ಲಿ ಗಾಯಗಳು ಹಾಗೂ ಹರಿತ ಉಂಟಾಗಿತ್ತು. ತೋಳು ಹಾಗೂ ಭುಜದಲ್ಲಿ ಪದೇ ಪದೇ ನೋವುಗಳು ಕಾಣಿಸಿಕೊಳ್ಳುತ್ತಿದ್ದ ಕಾರಣ ಕೊನೆಗೆ ಇತ್ತೀಚೆಗಷ್ಟೆ ನಟ ಪವನ್ ಕಲ್ಯಾಣ್ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಆದರೆ ಇದೀಗ ಅವರದ್ದೇ ಕುಟುಂಬದ ಸ್ಟಾರ್ ನಟ ರಾಮ್ ಚರಣ್ ಸಹ ಭುಜದ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ.

ನಟ ರಾಮ್ ಚರಣ್ ಸಹ ‘ಪೆದ್ದಿ’ ಸಿನಿಮಾದ ಪ್ರಚಾರದ ಸಮಯದಲ್ಲಿ ಕೈಗೆ ಪ್ಲಾಸ್ಟರ್ ಹಾಕಿಕೊಂಡು ಓಡಾಡುತ್ತಿದ್ದಿದ್ದನ್ನು ಅಭಿಮಾನಿಗಳು ಗಮನಿಸಿದ್ದರು. ‘ಪೆದ್ದಿ’ ಸಿನಿಮಾದ ಶೂಟಿಂಗ್ ಸಮಯದಲ್ಲಿ ಬಿದ್ದು ರಾಮ್ ಚರಣ್ ಅವರಿಗೆ ಮಣಿಕಟ್ಟಿಗೆ ಗಾಯವಾಗಿತ್ತು. ಆದರೆ ಪ್ರಚಾರಕ್ಕೆ ಸಮಸ್ಯೆ ಆಗಬಾರದೆಂಬ ಕಾರಣಕ್ಕೆ ರಾಮ್ ಚರಣ್ ವೈದ್ಯರ ಸಲಹೆಯಂತೆ ಕೇವಲ ಪ್ಲಾಸ್ಟರ್ ಧರಿಸಿಕೊಂಡು ಓಡಾಡುತ್ತಿದ್ದರು. ಆದರೆ ದಿನೇ-ದಿನೇ ನೋವು ಉಲ್ಬಣಗೊಳ್ಳುತ್ತಿರುವ ಕಾರಣ, ಹಾಗೂ ಕಸರತ್ತು ಮಾಡುವ ವೇಳೆ ಮಣಿಕಟ್ಟಿನ ಮೇಲೆ ಹೆಚ್ಚು ಒತ್ತಡ ಬಿದ್ದು ನೋವು ತೀವ್ರವಾದ ಕಾರಣಕ್ಕೆ ಇದೀಗ ಭುಜದ ಶಸ್ತ್ರ ಚಿಕಿತ್ಸೆಗೆ ರಾಮ್ ಚರಣ್ ಒಳಗಾಗುತ್ತಿದ್ದಾರೆ.

‘ಪೆದ್ದಿ’ ಸಿನಿಮಾದ ಚಿತ್ರೀಕರಣದ ವೇಳೆ ಆಕ್ಷನ್ ದೃಶ್ಯದ ಶೂಟಿಂಗ್ ವೇಳೆ ರಾಮ್ ಚರಣ್ ಅವರ ಮಣಿಕಟ್ಟಿಗೆ ಗಾಯವಾಗಿತ್ತು. ಆಗಲೇ ಅವರು ಕೆಲ ಸಮಯ ಚಿತ್ರೀಕರಣದಿಂದ ವಿರಾಮ ಪಡೆದು ಚಿಕಿತ್ಸೆ ಪಡೆದಿದ್ದರು. ಬಳಿಕ ಮಣಿಕಟ್ಟಿಗೆ ಆರ್ಥೋ ಪ್ಲಾಸ್ಟರ್ ಅನ್ನು ಧರಿಸಿ ಓಡಾಡುತ್ತಿದ್ದರು. ಆದರೆ ಇತ್ತೀಚೆಗಿನ ಸ್ಕ್ಯಾನಿಂಗ್​​ ಗಮನಿಸಿದ ವೈದ್ಯರು, ಮಣಿಕಟ್ಟಿಗೆ ಮೈನರ್ ಶಸ್ತ್ರಚಿಕಿತ್ಸೆ ಮಾಡಿಸುವ ಸಲಹೆಯನ್ನು ನೀಡಿದ್ದಾರೆ.

ಇದನ್ನೂ ಓದಿ:ರಾಮ್ ಚರಣ್ ಎದುರು ಹೊಸ ಬೇಡಿಕೆ ಇಟ್ಟ ಅಭಿಮಾನಿಗಳು

ಇದೇ ಕಾರಣಕ್ಕೆ ರಾಮ್ ಚರಣ್ ಅವರು, ಮೂಳೆ ಚಿಕಿತ್ಸೆಗೆ ಹೆಸರುವಾಸಿಯಾಗಿರುವ ಕೊಯಮತ್ತೂರಿನ ಪ್ರತಿಷ್ಠಿತ ಗಂಗಾ ಆಸ್ಪತ್ರೆಯಲ್ಲಿ ಶೀಘ್ರವೇ ಮಣಿಕಟ್ಟಿಗೆ ಶಸ್ತ್ರಚಿಕಿತ್ಸೆ ಒಳಗಾಗಲಿದ್ದಾರೆ. ಈ ಸಂದರ್ಭದಲ್ಲಿ ಮೆಗಾಸ್ಟಾರ್ ಚಿರಂಜೀವಿ, ಸುರೇಕಾ, ಉಪಾಸನಾ ಮತ್ತು ಕುಟುಂಬದ ಇತ್ತೀಚಿನ ಇತರ ಸದಸ್ಯರು ಶಸ್ತ್ರಚಿಕಿತ್ಸೆಯ ಪೂರ್ತಿ ಅವಧಿಯಲ್ಲಿ ಅವರೊಂದಿಗೆ ಇರಲು ಮತ್ತು ಮಾನಸಿಕ ಧೈರ್ಯ ತುಂಬಲು ಕೊಯಮತ್ತೂರಿಗೆ ಪ್ರಯಾಣ ಬೆಳೆಸುತ್ತಿದ್ದಾರೆ. ಪ್ರಸಿದ್ಧ ಮೂಳೆ ತಜ್ಞ ಡಾ ರಾಜಶೇಖರ್ ಅವರ ನೇತೃತ್ವದಲ್ಲಿ, ಅತ್ಯಂತ ನುರಿತ ತಜ್ಞ ವೈದ್ಯರ ತಂಡವು ಈ ಶಸ್ತ್ರಚಿಕಿತ್ಸೆಯನ್ನು ನೆರವೇರಿಸಲಿದೆ.

ರಾಮ್ ಚರಣ್ ಅವರು ‘ಪೆದ್ದಿ’ ಸಿನಿಮಾ ಮೂಲಕ ದೊಡ್ಡ ಗೆಲುವು ಕಂಡಿದ್ದಾರೆ. ಇದೀಗ ಅವರ ಮುಂದಿನ ಸಿನಿಮಾ ಸುಕುಮಾರ್ ಅವರೊಟ್ಟಿಗೆ ಇರಲಿದೆ. ಸುಕುಮಾರ್ ಈಗಾಗಲೇ ಚಿತ್ರಕತೆ ರೆಡಿ ಮಾಡಿಟ್ಟುಕೊಂಡಿದ್ದು ಶೀಘ್ರವೇ ಪ್ರೀ ಪ್ರೊಡಕ್ಷನ್ ಶುರು ಮಾಡಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರಿನಲ್ಲಿ ನೀಟ್ ಪ್ರತಿಭಟನೆಯಲ್ಲಿ ಪ್ರಚೋದನಕಾರಿ ಪೋಸ್ಟರ್ ಪ್ರದರ್ಶನ: ಯುವತಿ ವಿರುದ್ಧ FIR – Kannada News | Fir against young woman in bengaluru Who provocative poster display During neet protest

ಬೆಂಗಳೂರು, (ಜುಲೈ 26): 2020ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆ ಪ್ರಕರಣದ ಆರೋಪಿಗಳಾದ ಉಮರ್ ಖಾಲಿದ್ (Umar Khalid) ಮತ್ತು ಶಾರ್ಜೀಲ್ ಇಮಾಮ್ ಪರ ಪೋಸ್ಟರ್‌ ಪ್ರದರ್ಶಿಸಿದ್ದ ಯುವತಿ ವಿರುದ್ಧ ಎಫ್‌ಐಆರ್‌ (FIR) ದಾಖಲಾಗಿದೆ. ಭದ್ರತಾ ಕರ್ತವ್ಯದಲ್ಲಿದ್ದ ಮಹಿಳಾ ಪೊಲೀಸ್‌ ಅಧಿಕಾರಿಯೊಬ್ಬರು ಬೆಂಗಳೂರಿನ ಉಪ್ಪಾರಪೇಟೆ ಠಾಣೆಗೆ (Upparpet Police Station) ನೀಡಿದ ದೂರಿನ ಮೇರೆಗೆ ಎಫ್‌ಐಆರ್‌ ದಾಖಲಾಗಿದೆ. ʻಗಲಭೆ ಉದ್ದೇಶದಿಂದ ಪ್ರಚೋದನೆʼ ನೀಡುವ ಆರೋಪದ ಮೇಲೆ ಕೇಸ್‌ ದಾಖಲಾಗಿದೆ. ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಏನಿದು ವಿವಾದ?

ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಶುಕ್ರವಾರ (ಜು.24) ಯುವತಿಯೊಬ್ಬಳು ಹಿಡಿದಿದ್ದ ಪೋಸ್ಟರ್‌ ಭಾರೀ ವಿವಾದಕ್ಕೆ ಕಾರಣವಾಗಿದೆ. ಪ್ರತಿಭಟನೆಗೆ ಬಂದಿದ್ದ ಆಕೆ ಗಲಭೆ ಪ್ರಕರಣದ ಆರೋಪಿಗಳಾದ ಉಮರ್‌ ಖಾಲಿದ್‌ ಹಾಗೂ ಶಾರ್ಜೀಲ್ ಇಮಾಮ್ ಪರವಾಗಿ ಘೋಷಣೆಗಳಿರುವ ಪೋಸ್ಟರ್‌ಗಳನ್ನ ಪ್ರದರ್ಶಿಸಿದ್ದಳು. ಅಷ್ಟೇ ಅಲ್ಲದೇ ʻUkhad Le BLR Policeʼ ಎಂಬ ಬರಹವನ್ನು ಪೋಸ್ಟರ್‌ನಲ್ಲಿ ಪ್ರದರ್ಶಿಸಿ, ಬೆಂಗಳೂರು ಪೊಲೀಸರ ವಿರುದ್ಧ ನಾಲಿಗೆ ಹರಿಬಿಟ್ಟಿದ್ದಳು.

ಇದನ್ನೂ ಓದಿ: Cockroach Janta Party: ಏನಿದು ‘ಕಾಕ್ರೋಚ್ ಜನತಾ ಪಾರ್ಟಿ’? ಇಂಟರ್‌ನೆಟ್ ಮೀಮ್‌ನಿಂದ ಶಿಕ್ಷಣ ಸಚಿವರ ರಾಜೀನಾಮೆಯವರೆಗೆ ಯುವ ಕ್ರಾಂತಿಯ ಪೂರ್ಣ ವರದಿ

ಈ ಪೋಸ್ಟರ್‌ಗಳು ಅಲ್ಲಿದ್ದ ಪೊಲೀಸರ ಗಮನ ಸೆಳೆದು, ಪರಿಸ್ಥಿತಿ ಉದ್ವಿಗ್ನವಾಗದಂತೆ ಪೊಲೀಸರು ತಕ್ಷಣವೇ ಪೋಸ್ಟರ್‌ಗಳನ್ನ ವಶಪಡಿಸಿಕೊಂಡಿದ್ದರು. ಇದೇ ವೇಳೆ ಅಲ್ಲಿದ್ದ ಇತರ ವಿದ್ಯಾರ್ಥಿಗಳು ಆಕೆಗೆ ಕ್ಲಾಸ್‌ ತೆಗದುಕೊಂಡು, ಪ್ರತಿಭಟನಾ ಸ್ಥಳದಿಂದ ಕಳುಹಿಸಿದ್ದರು. ಇದೀಗ ಈ ಸಂಬಂಧ ಪೊಲೀಸರು ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಆ್ಯಂಬುಲೆನ್ಸ್​ನ್ನೇ ಡ್ರಗ್ಸ್​ ಪೂರೈಕೆ ಅಡ್ಡೆ ಮಾಡಿಕೊಂಡಿದ್ದ ಆರೋಪಿ: ಜಲೀಲ್ ಬಾಬಾ ಕರಾಳ ಮುಖವಾಡ ಬಯಲಾಗಿದ್ದೇಗೆ? – Kannada News | Ambulance Driver’s Drug Smuggling Racket Busted; Police Uncover Illegal Operation

ಮಂಗಳೂರು, ಜುಲೈ 26: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ಸಮಾಜ ಸೇವಕ ಹಾಗೂ ಆಪದ್ಬಾಂಧವ ಎಂದೇ ಗುರುತಿಸಿಕೊಂಡಿದ್ದ ಆ್ಯಂಬುಲೆನ್ಸ್‌ ಚಾಲಕ ಜಲೀಲ್ ಆಲಿಯಾಸ್ ಜಲೀಲ್ ಬಾಬಾ ಎಂಬಾತನ ಮತ್ತೊಂದು ಕರಾಳ ಮುಖ ಬಯಲಾಗಿದೆ. ಸಮಾಜ ಸೇವೆಯ ನೆಪದಲ್ಲಿ ಈತ ಆ್ಯಂಬುಲೆನ್ಸ್‌ ಬಳಸಿ ಭಾರೀ ಪ್ರಮಾಣದ ಡ್ರಗ್ಸ್ (drug) ಪೂರೈಕೆ ಮಾಡುತ್ತಿದ್ದ ಸ್ಪೋಟಕ ಸಂಗತಿಯನ್ನು ಮಂಗಳೂರು ಸಿಸಿಬಿ ಪೊಲೀಸರು ಪತ್ತೆ ಹಚ್ಚಿದ್ದಾರೆ.

ಆಪದ್ಬಾಂಧವನ ಮತ್ತೊಂದು ಮುಖವಾಡ ಬಯಲು

ಜಲೀಲ್ ಅಲಿಯಾಸ್ ಜಲೀಲ್ ಬಾಬಾ ಬಹುಶಃ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಜನರಿಗೆ ಈತನ ಮುಖ ಚಿರಪರಿಚಿತ. ಇಡೀ ತಾಲೂಕಿನಲ್ಲಿ ಎಲ್ಲೇ ಅಪಘಾತವಾಗಲೀ, ಯಾವುದೇ ಅನಾಹುತವಾಗಲೀ ಈ ಜಲೀಲ್ ಬಾಬಾ ಆ ಜಾಗಕ್ಕೆ ತನ್ನ ಆ್ಯಂಬುಲೆನ್ಸ್‌ ಸಮೇತ ಎಂಟ್ರಿ ಕೊಡುತ್ತಿದ್ದ. ಇದೇ ಕಾರಣಕ್ಕೆ ಜನ ಈತನನ್ನ‌ ಆಪದ್ಬಾಂಧವ ಅಂತಾನೇ ಕರೆಯುತ್ತಿದ್ದರು. ಆದರೆ ಸದ್ಯ ಈತನ ಮತ್ತೊಂದು ಮುಖವಾಡ ಬಯಲಾಗಿದೆ. ಸಮಾಜ ಸೇವೆಯ ಹೆಸರಿನಲ್ಲಿ ಈತ‌ ನಡೆಸುತ್ತಿದ್ದ ಭಾರೀ ಡ್ರಗ್ಸ್ ದಂಧೆ ಬಯಲಿಗೆ ಬಂದಿದೆ.

ಇದನ್ನೂ ಓದಿ: ಉಪ್ಪಿನಂಗಡಿಯಲ್ಲಿ ಹೈಟೆಕ್ ನಕಲಿ ನೋಟು ದಂಧೆ ಪತ್ತೆ: ಅಡಿಂಜೆಯಲ್ಲಿ ಪ್ರಿಂಟಿಂಗ್ ಮೆಷಿನ್ ಜಪ್ತಿ

ಸಮಾಜ ಸೇವೆಯ ಹೆಸರಿನಲ್ಲಿ ಆ್ಯಂಬುಲೆನ್ಸ್‌ ಓಡಿಸುತ್ತಿದ್ದ ಜಲೀಲ್ ಡ್ರಗ್ಸ್ ಪೂರೈಕೆಗೆ ಅದನ್ನೇ ಬಳಸುತ್ತಿದ್ದ ಎಂಬ ಸ್ಫೋಟಕ ಮಾಹಿತಿ ಮಂಗಳೂರು ಸಿಸಿಬಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ. 5 ಕೋಟಿ ರೂ ಮೌಲ್ಯದ ಎಂಡಿಎಂಎ ವಶಪಡಿಸಿಕೊಂಡ ಪ್ರಕರಣದ ತನಿಖೆ ವೇಳೆ ಬೆಳ್ತಂಗಡಿಯ ಆ್ಯಂಬುಲೆನ್ಸ್‌ ಚಾಲಕ ಜಲೀಲ್ ಬಾಬಾನ ಪಾತ್ರ ಪತ್ತೆಯಾಗಿದ್ದು, ಆತ ಸದ್ಯ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿರುವ ವರದಿಯಲ್ಲಿ ಉಲ್ಲೇಖಿಸಲಾದೆ.

ಜಲೀಲ್ ಬಾಬಾ ಸಿಕ್ಕಿಬಿದ್ದಿದ್ದು ಹೇಗೆ?

ಅಸಲಿಗೆ ಜೂನ್ 25ರಂದು ಮಂಗಳೂರಿನಲ್ಲಿ ಅಣ್ಣಪ್ಪ ಸ್ವಾಮಿ ಅಲಿಯಾಸ್ ಮನು ಎಂಬಾತನನ್ನು ಎಂಡಿಎಂಎ ಸಹಿತ ಬಂಧಿಸಲಾಗಿತ್ತು. ಆತನ ವಿಚಾರಣೆ ವೇಳೆ ದೆಹಲಿಯಿಂದ ಡ್ರಗ್ಸ್ ಬರುತ್ತಿರುವ ಮಾಹಿತಿ ಸಿಕ್ಕಿತ್ತು. ಈ ಮಾಹಿತಿ ಆಧರಿಸಿ ಜುಲೈ 15ರಂದು ಬಾಗಲಕೋಟೆಯ ಲಾಡ್ಜ್ ಮೇಲೆ ಮಂಗಳೂರು ಸಿಸಿಬಿ ಪೊಲೀಸರು ದಾಳಿ ನಡೆಸಿ ಇಬ್ಬರನ್ನು ಬಂಧಿಸಿದ್ದರು. ಕಾರ್ಯಾಚರಣೆಯಲ್ಲಿ ಸುಮಾರು 5 ಕೋಟಿ ರೂ ಮೌಲ್ಯದ 5 ಕೆಜಿ ಎಂಡಿಎಂಎ ವಶಪಡಿಸಿಕೊಳ್ಳಲಾಗಿತ್ತು. ಬೆಳ್ತಂಗಡಿ ಮೂಲದ ಮಹಮ್ಮದ್ ಅಲ್ಫಾಜ್ ಹಾಗೂ ಮಹಮ್ಮದ್ ಮುಸ್ತಾಫಾ ಎಂಬುವವರನ್ನು ಬಂಧಿಸಲಾಗಿತ್ತು.

ಇದನ್ನೂ ಓದಿ: ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳ ಭರ್ಜರಿ ಕಾರ್ಯಾಚರಣೆ: ಲಗೇಜ್ ಬ್ಯಾಗ್‌ನಲ್ಲಿ ಅಡಗಿಸಿಟ್ಟಿದ್ದ 12 ಕೆಜಿ ಗಾಂಜಾ ಜಪ್ತಿ; ಆರೋಪಿ ಬಂಧನ

ಬಂಧಿತರ ವಿಚಾರಣೆ ವೇಳೆ ಬೆಳ್ತಂಗಡಿಯ ಜಲೀಲ್ ಬಾಬಾ ಎಂಬ ಸ್ಥಳೀಯ ಡ್ರಗ್ಸ್​ ಪೆಡ್ಲರ್‌ಗೆ ಎಂಡಿಎಂಎ ಪೂರೈಕೆ ಮಾಡಲಾಗುತ್ತಿತ್ತು ಎಂಬ ಮಾಹಿತಿ ತನಿಖೆಯಲ್ಲಿ ಲಭ್ಯವಾಗಿದೆ. ಜಲೀಲ್ ತನ್ನ ಆ್ಯಂಬುಲೆನ್ಸ್​ನ್ನೇ ಡ್ರಗ್ಸ್​ ಸಾಗಣೆ ಹಾಗೂ ಪೂರೈಕೆಗೆ ಬಳಸುತ್ತಿದ್ದ. ವೈದ್ಯರು, ವಿದ್ಯಾರ್ಥಿಗಳು ಹಾಗೂ ಯುವಕರಿಗೆ ಡ್ರಗ್ಸ್​ ಪೂರೈಕೆ ಮಾಡುತ್ತಿದ್ದ ಎಂದು ಗೊತ್ತಾಗಿದೆ.

ತಲೆಮರೆಸಿಕೊಂಡಿರುವ ಜಲೀಲ್ ಬಾಬಾ

ಈ ಸಂಬಂಧ ಮಂಗಳೂರು ನ್ಯಾಯಾಲಯಕ್ಕೆ ಸಲ್ಲಿಸಿರುವ ವರದಿಯಲ್ಲಿ ಜಲೀಲ್ ಬಾಬಾ ತಲೆಮರೆಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಕಳೆದ ಎಂಟು ದಿನಗಳಿಂದ ಆತ ತನ್ನ ಮೊಬೈಲ್‌ ಸ್ವಿಚ್ ಆಫ್ ಮಾಡಿಕೊಂಡಿದ್ದು, ಆತನ ಪತ್ತೆಗಾಗಿ ವಿಶೇಷ ತಂಡಗಳನ್ನ ರಚಿಸಿ ಪೊಲೀಸರು ಶೋಧ ನಡೆಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 5:31 pm, Sun, 26 July 26

Source link

IND vs ZIM: ಭಾರತ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ಕೆಟ್ಟ ದಾಖಲೆ ಬರೆದ ಅಭಿಷೇಕ್ – Kannada News | Abhishek Sharma’s Zimbabwe T20 Failure: Sets Unwanted Record for Lowest Runs

ಜಿಂಬಾಬ್ವೆ ಪ್ರವಾಸದಲ್ಲಿ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಅವರ ಕಳಪೆ ಪ್ರದರ್ಶನ ಮೂರನೇ ಪಂದ್ಯದಲ್ಲೂ ಮುಂದುವರೆದಿದೆ. ಈ ಸರಣಿಯಲ್ಲಿ ಒಮ್ಮೆಯೂ ಒಂದಂಕಿ ಗಡಿ ದಾಟದ ಅಭಿಷೇಕ್ ಮೂರನೇ ಪಂದ್ಯದಲ್ಲಿ ಕೇವಲ 2 ರನ್​ಗಳಿಗೆ ಔಟಾದರು. ಗಮನಿಸಬೇಕಾದ ಸಂಗತಿಯೆಂದರೆ ಅಭಿಷೇಕ್ ಮೂರು ಪಂದ್ಯಗಳಲ್ಲೂ ಒಂದೇ ಬೌಲರ್‌ಗೆ ವಿಕೆಟ್‌ ಒಪ್ಪಿಸಿದರು(PC-PTI).

ಐಪಿಎಲ್‌ನಲ್ಲಿ ಬೌಂಡರಿ ಮತ್ತು ಸಿಕ್ಸರ್‌ಗಳನ್ನು ಬಾರಿಸಿ ಅಬ್ಬರಿಸುವ ಯುವ ಬ್ಯಾಟ್ಸ್‌ಮನ್ ಅಭಿಷೇಕ್ ಶರ್ಮಾ ಕಳೆದ ಐದು ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ನೀಡಿದ್ದಾರೆ. ಅಲ್ಲದೆ ಜಿಂಬಾಬ್ವೆ ವಿರುದ್ಧ ಒಂದಂಕಿಗೆ ಔಟಾಗುವ ಮೂಲಕ ದ್ವಿಪಕ್ಷೀಯ ಸರಣಿಯಲ್ಲಿ ಭಾರತೀಯ ಆರಂಭಿಕ ಆಟಗಾರನೊಬ್ಬನ ಅತಿ ಕಡಿಮೆ ರನ್ ಗಳಿಸಿದ ಅನಗತ್ಯ ದಾಖಲೆಯನ್ನು ಸೃಷ್ಟಿಸಿದ್ದಾರೆ(PC-PTI).

ಮೊದಲ ಪಂದ್ಯದಲ್ಲಿ 8 ಎಸೆತಗಳನ್ನು ಎದುರಿಸಿದ ಕೇವಲ 1 ರನ್ ಗಳಿಸಿ ಔಟಾಗಿದ್ದ ಅಭಿಷೇಕ್ ಎರಡನೇ ಪಂದ್ಯದಲ್ಲಿಯೂ 8 ಎಸೆತಗಳನ್ನು ಎದುರಿಸಿ ಕೇವಲ 8 ರನ್ ಗಳಿಸಿ ಔಟಾಗಿದ್ದರು. ಇದೀಗ ಮೂರನೇ ಟಿ20 ಪಂದ್ಯದಲ್ಲಿಯೂ ಅಭಿಷೇಕ್ ಕೇವಲ 2 ರನ್ ಗಳಿಸಿ ಔಟಾದರು. ಈ 3 ಪಂದ್ಯಗಳಲ್ಲೂ ಬ್ಲೆಸಿಂಗ್ ಮುಜರಬಾನಿ, ಅಭಿಷೇಕ್ ಅವರ ವಿಕೆಟ್ ಪಡೆದರು(PC-PTI).

ಈ ಮೂಲಕ ಅಭಿಷೇಕ್ ಮೂರು ಅಥವಾ ಅದಕ್ಕಿಂತ ಹೆಚ್ಚು ಪಂದ್ಯಗಳ ದ್ವಿಪಕ್ಷೀಯ ಟಿ20 ಸರಣಿಯಲ್ಲಿ ಆರಂಭಿಕನಾಗಿ ಅತಿ ಕಡಿಮೆ ರನ್ ಗಳಿಸಿದ ಭಾರತೀಯ ಬ್ಯಾಟ್ಸ್‌ಮನ್ ಎಂಬ ಬೇಡದ ದಾಖಲೆಯನ್ನು ತಮ್ಮ ಖಾತೆಗೆ ಹಾಕಿಕೊಂಡಿದ್ದಾರೆ. ಸರಣಿಯ ಮೂರು ಇನ್ನಿಂಗ್ಸ್‌ಗಳಲ್ಲಿ ಕೇವಲ 11 ರನ್ ಗಳಿಸುವ ಮೂಲಕ, ಹಿರಿಯ ಆಟಗಾರರು ಹೊಂದಿದ್ದ ಈ ಬೇಡದ ದಾಖಲೆಯನ್ನು ಮುರಿದಿದ್ದಾರೆ(PC-PTI).

2021 ರಲ್ಲಿ ಇಂಗ್ಲೆಂಡ್ ವಿರುದ್ಧ ಕೆಎಲ್ ರಾಹುಲ್ ಗಳಿಸಿದ 15 ರನ್‌ಗಳು ಇದುವರೆಗಿನ ಅತ್ಯಂತ ಕೆಟ್ಟ ದಾಖಲೆಯಾಗಿದ್ದರೆ, ಅಭಿಷೇಕ್ ಶರ್ಮಾ ಈಗ 11 ರನ್‌ಗಳೊಂದಿಗೆ ಆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಜಿಂಬಾಬ್ವೆ ವಿರುದ್ಧ ಕಳಪೆ ಪ್ರದರ್ಶನ ನೀಡಿರುವ ಅಭಿಷೇಕ್ ಮುಂದಿನ ಸರಣಿಗೆ ತಂಡದಿಂದ ಹೊರಗುಳಿಯುವ ಸಾಧ್ಯತೆಗಳಿವೆ(PC-PTI).

Published On – 5:33 pm, Sun, 26 July 26

Source link

Video: ಎಷ್ಟು ಚಂದ ಈ ಬಾಂಧವ್ಯ; ಮಗಳ ಕಾಳಜಿಯುತ ಮಾತು ಕೇಳಿ ತಂದೆ ಭಾವುಕ – Kannada News | The father became emotional upon hearing his daughter’s caring words.

ತಂದೆ ಮಗಳ ಸಂಬಂಧವನ್ನು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ. ಅಪ್ಪನಿಗೆ (father) ಮಗಳು ಪ್ರಪಂಚವಾದರೆ, ಮಗಳಿಗೆ ಅಪ್ಪನೇ ಫಸ್ಟ್ ಹೀರೋ ಆಗಿರುತ್ತಾನೆ. ಇದೀಗ ಮಗಳ ಕಾಳಜಿಯುತ ಮಾತು ವೈರಲ್ ಆಗಿದೆ. ಆಟೋ ಡ್ರೈವರ್ ಆಗಿರುವ ಅಪ್ಪನಿಗೆ ಹುಷಾರಾಗಿ ವಾಹನ ಓಡಿಸು, ಮನೆಯಲ್ಲಿ ನಾನು ನನ್ನ ಅಮ್ಮ ಕಾಯುತ್ತಿರುತ್ತೇವೆ ಎನ್ನುತ್ತಿದ್ದಂತೆ ತಂದೆಯ ಕಣ್ಣು ಒದ್ದೆಯಾಗಿದೆ. ಈ ಹೃದಯ ಸ್ಪರ್ಶಿ ವಿಡಿಯೋ ನೆಟ್ಟಿಗರ ಹೃದಯ ಗೆದ್ದಿದೆ.

ರಜಿತಾ (rajitha494) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಮಗಳ ಕಾಳಜಿಯುತ ಮಾತು ಕೇಳಿ ತಂದೆಯ ಕಣ್ಣಲ್ಲಿ ನೀರು ತುಂಬಿದೆ. ಆಟೋ ಡ್ರೈವರ್ ಆಗಿರುವ ತಂದೆಯ ಮಡಿಲಿನಲ್ಲಿ ಕುಳಿತುಕೊಂಡಿರುವ ಮಗಳು, ಅಪ್ಪ ಗಾಡಿ ನಿಧಾನವಾಗಿ ಓಡಿಸು, ವೇಗವಾಗಿ ಓಡಿಸಿದ್ರೆ ರೋಡಲ್ಲಿ ಇರ್ತಾನೆ ಯಮ. ನೀನು ನಿಧಾನವಾಗಿ ಹೋದ್ರೆ ಮನೆಯಲ್ಲಿ ಕಾಯ್ತಾ ಇರ್ತೇವೆ ನಾನು ಅಮ್ಮ ಎಂದು ಹೇಳಿದ್ದಾಳೆ. ಮಗಳ ಮಾತು ಕೇಳಿದ ತಂದೆಯ ಕಣ್ಣು ಒದ್ದೆಯಾಗಿದೆ. ಕೊನೆಗೆ ತಂದೆ ತನ್ನ ಮಗಳನ್ನು ತಬ್ಬಿಕೊಂಡು ಮುದ್ದಿಸುತ್ತಿರುವ ದೃಶ್ಯವನ್ನು ನೋಡಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಮಗಳು ಕೆಲಸಕ್ಕೆ ಸೇರಿದ ಒಂದೇ ವಾರಕ್ಕೆ ಸರ್ಪ್ರೈಸ್ ಕೊಟ್ಟ ತಂದೆ, ಇದೇ ನೋಡಿ ತಂದೆ ಪ್ರೀತಿ

ಈ ವಿಡಿಯೋ 19 ಲಕ್ಷ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಇಷ್ಟು ಸಣ್ಣ ವಯಸ್ಸಿನಲ್ಲಿ ಎಷ್ಟು ಚಂದ ಮಾತು ಆಡಿದ್ರಿ ತಂಗ್ಯಮ್ಮ ಎಂದು ಹೇಳಿದ್ದಾರೆ. ಮತ್ತೊಬ್ಬರು, ಹೃದಯ ಮುಟ್ಟುವ ಅರ್ಥ ಪೂರ್ಣ ಮಾತು ಎಂದಿದ್ದಾರೆ. ಇನ್ನೊಬ್ಬರು, ಸೈಡಲ್ಲು ಹೋದ್ರು ಬಿಡಲ್ಲ ಯಮ ಕಣಮ್ಮ. ಗ್ರಹಚಾರ ಕೆಟ್ರೆ ಮನೆಯಲ್ಲಿ ಮಲಗಿದ್ರು ಬಿಡಲ್ಲ ಯಮ. ಇದ್ದಾಗ ಜಾಲಿ. ಹೊದಮೇಲೆ ಖಾಲಿ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Viksit Vibrant Village Programme: ವಿದ್ಯಾರ್ಥಿಗಳೊಂದಿಗೆ ಪಿಎಂ ನರೇಂದ್ರ ಮೋದಿ ಸಂವಾದ – Kannada News | PM Modi interacts with students and youth at Viksit Vibrant Village Programme

ವಿದ್ಯಾರ್ಥಿಗಳೊಂದಿಗೆ ಮೋದಿ ಸಂವಾದ

ನವದೆಹಲಿ, ಜುಲೈ 20: ಪ್ರಧಾನಿ ನರೇಂದ್ರ ಮೋದಿ ಅವರು ವಿಕಸಿತ್ ವೈಬ್ರೆಂಟ್ ವಿಲೇಜ್ ಪ್ರೋಗ್ರಾಮ್​ನಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಮೈ ಭಾರತ್ ಅಭಿಯಾನದ ಭಾಗವಾಗಿ ಆಯೋಜನೆಯಾದ ವಿವಿವಿಪಿ ಕಾರ್ಯಕ್ರಮದಲ್ಲಿ 400ಕ್ಕೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಜೂನ್ 4ರಿಂದ 30ರವರೆಗೆ ನಡೆದ ಕಾರ್ಯಕ್ರಮದಲ್ಲಿ ತಮ್ಮ ಅನುಭವವನ್ನು ಈ ಮಕ್ಕಳು ಪ್ರಧಾನಿ ಜೊತೆ ಹಂಚಿಕೊಂಡರು. ಗ್ರಾಮಸ್ಥರೊಂದಿಗಿನ ಒಡನಾಟ, ಅಲ್ಲಿ ಕಂಡಿರುವ ಅಭಿವೃದ್ಧಿ ಇತ್ಯಾದಿ ಎಲ್ಲವನ್ನೂ ಅವರು ಮೋದಿ ಜೊತೆ ಹಂಚಿಕೊಂಡಿದ್ದಾರೆ.

ವಿಕಸಿತ್ ವೈಬ್ರೆಂಟ್ ವಿಲೇಜ್ ಪ್ರೋಗ್ರಾಮ್ 2026 ಅನ್ನು ಎರಡು ಹಂತಗಳಲ್ಲಿ ಆಯೋಜನೆ ಮಾಡಲಾಗಿತ್ತು. ಲಡಾಖ್, ಹಿಮಾಚಲಪ್ರದೇಶ ಮತ್ತು ಉತ್ತರಾಖಂಡ್​ನಾದ್ಯಂತ 74 ಗ್ರಾಮಗಳಲ್ಲಿ ಜೂನ್ 4ರಿಂದ 30ರವರೆಗೆ ಎರಡು ಹಂತಗಳಲ್ಲಿ ಈ ಗ್ರಾಮ ಸೇವೆಯ ಕಾರ್ಯಕ್ರಮ ನಡೆಸಲಾಯಿತು.

ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳು ಮತ್ತು ಯುವಜನರು ಈ ಗ್ರಾಮಗಳ ಸಮುದಾಯದೊಂದಿಗೆ ವಾಸವಿದ್ದರು. ಸರ್ಕಾರದ ಯೋಜನೆಗಳ ಬಗ್ಗೆ ಅರಿವು ಮೂಡಿಸುವುದು, ಸ್ವಚ್ಛತಾ ಕಾರ್ಯ, ಸಸಿ ನೆಡುವುದು, ಯುವ ಸಮ್ಮೇಳನ ನಡೆಸುವುದು, ಸಾಂಸ್ಕೃತ ವಿನಿಯಮ ಕಾರ್ಯಕ್ರಮಗಳನ್ನು ನಡೆಸುವುದು ಇತ್ಯಾದಿ ಕಾರ್ಯಗಳನ್ನು ಈ ಯುವಜನರು ಕೈಗೊಂಡಿದ್ದು ವಿಶೇಷ.

ಆನ್​ಲೈನ್ ಕ್ವಿಜ್ ಸ್ಪರ್ಧೆ ಮೂಲಕ ಈ ಯೋಜನೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಯಿತು. ರಾಷ್ಟ್ರ ಮಟ್ಟದಲ್ಲಿ ನಡೆದ ಕ್ವಿಜ್ ಸ್ಪರ್ಧೆಯಲ್ಲಿ 3 ಲಕ್ಷಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು. ಅವರಲ್ಲಿ 400 ಮಂದಿಯನ್ನು ವಿಕಸಿತ್ ವೈಬ್ರೆಂಟ್ ವಿಲೇಜ್ ಪ್ರೋಗ್ರಾಮ್​ಗೆ ಆಯ್ಕೆ ಮಾಡಲಾಗಿತ್ತು. ಇದರಲ್ಲಿ ಪಾಲ್ಗೊಂಡಿದ್ದ ಯುವಜನರಿಗೆ ಗ್ರಾಮೀಣ ಭಾಗದ ಸಂಸ್ಕೃತಿಯ ಸಮೀಪ ದರ್ಶನವಾಗಿದೆ. ಸ್ಥಳೀಯ ಕಲಾವಿದರು, ಸಂಸ್ಥೆಗಳನ್ನು ಭೇಟಿ ಮಾಡಿ ಅನುಭವ ಕೂಡ ಪಡೆದಿದ್ದಾರೆ.

ಈ ವಿಕಸಿತ್ ವೈಬ್ರೆಂಟ್ ವಿಲೇಜ್ ಪ್ರೋಗ್ರಾಮ್ ಅನ್ನು ಮೈ ಭಾರತ್ ಯೋಜನೆಯ ಭಾಗವಾಗಿ ಹಮ್ಮಿಕೊಳ್ಳಲಾಗಿತ್ತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On – 5:10 pm, Sun, 26 July 26

Source link

Viksit Vibrant Village Programme: ವಿದ್ಯಾರ್ಥಿಗಳೊಂದಿಗೆ ಪಿಎಂ ನರೇಂದ್ರ ಮೋದಿ ಸಂವಾದ – Kannada News | PM Modi interacts with students and youth at Viksit Vibrant Village Programme

ನವದೆಹಲಿ, ಜುಲೈ 20: ಪ್ರಧಾನಿ ನರೇಂದ್ರ ಮೋದಿ ಅವರು ವಿಕಸಿತ್ ವೈಬ್ರೆಂಟ್ ವಿಲೇಜ್ ಪ್ರೋಗ್ರಾಮ್​ನಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಮೈ ಭಾರತ್ ಅಭಿಯಾನದ ಭಾಗವಾಗಿ ಆಯೋಜನೆಯಾದ ವಿವಿವಿಪಿ ಕಾರ್ಯಕ್ರಮದಲ್ಲಿ 400ಕ್ಕೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಜೂನ್ 4ರಿಂದ 30ರವರೆಗೆ ನಡೆದ ಕಾರ್ಯಕ್ರಮದಲ್ಲಿ ತಮ್ಮ ಅನುಭವವನ್ನು ಈ ಮಕ್ಕಳು ಪ್ರಧಾನಿ ಜೊತೆ ಹಂಚಿಕೊಂಡರು. ಗ್ರಾಮಸ್ಥರೊಂದಿಗಿನ ಒಡನಾಟ, ಅಲ್ಲಿ ಕಂಡಿರುವ ಅಭಿವೃದ್ಧಿ ಇತ್ಯಾದಿ ಎಲ್ಲವನ್ನೂ ಅವರು ಮೋದಿ ಜೊತೆ ಹಂಚಿಕೊಂಡಿದ್ದಾರೆ.

ಇನ್ನಷ್ಟು ವಿಡಿಯೋ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

PM Narendra Modi Interaction Live: ವಿಕಸಿತ್ ವೈಬ್ರೆಂಟ್‌ ವಿಲೇಜ್‌-2026: ಯುವಕರೊಂದಿಗೆ ನರೇಂದ್ರ ಮೋದಿ ಸಂವಾದದ ನೇರ ಪ್ರಸಾರ – Kannada News | PM Modi Interaction with Participants of Viksit Vibrant Village Program 2026 Live Streaming in Kannada

ನವದೆಹಲಿ, (ಜುಲೈ 26): ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ‘ವಿಕಸಿತ ರೋಮಾಂಚಕ ಗ್ರಾಮ ಕಾರ್ಯಕ್ರಮ-2026’ದಲ್ಲಿ ಭಾಗವಹಿಸಿದವರೊಂದಿಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಸಂವಾದ ನಡೆಸಿದ್ದಾರೆ. ‘ಮೈ ಭಾರತ್’ ಮೂಲಕ ಜಾರಿಗೆ ತರಲಾದ ‘ವಿಕಸಿತ ರೋಮಾಂಚಕ ಗ್ರಾಮ ಕಾರ್ಯಕ್ರಮ’ವನ್ನು ಭಾರತದ ಗಡಿ ಗ್ರಾಮಗಳನ್ನು ರಾಷ್ಟ್ರದ ಮೊದಲ ಗ್ರಾಮಗಳೆಂದು ಪರಿಗಣಿಸುವ ಮತ್ತು ವಿಕಸಿತ ಭಾರತದ ಪ್ರಯಾಣದಲ್ಲಿ ಅವುಗಳನ್ನು ಸಕ್ರಿಯ ಪಾಲುದಾರರನ್ನಾಗಿ ಮಾಡುವ ಪ್ರಧಾನಮಂತ್ರಿಯವರ ದೂರದೃಷ್ಟಿಯನ್ನು ಸಾಕಾರಗೊಳಿಸಲು ರೂಪಿಸಲಾಗಿದೆ. ದೇಶಾದ್ಯಂತ ಆಯ್ದ 400 ಯುವಜನತೆ ಜೊತೆ ಮೋದಿ ವೀಡಿಯೋ ಕಾನ್ಫರೆನ್ಸ್ ಸಂವಾದ ನಡಸಿದ್ದು, ಇದರ ನೇರ ಪ್ರಸಾರವನ್ನು ನೋಡಿ.

Source link

ರಕ್ತ-ಸಿಕ್ತ ರಾಯ: ‘ಟಾಕ್ಸಿಕ್’ ಹೊಸ ಪೋಸ್ಟರ್ ರಿಲೀಸ್ – Kannada News | New poster of Yash from Toxic movie released

ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ (Toxic) ಬಿಡುಗಡೆಗೆ ಸರಿಯಾಗಿ ಒಂದು ತಿಂಗಳು ಬಾಕಿ ಉಳಿದಿದೆ. ಇಂದಿಗೆ ಸರಿಯಾಗಿ ಒಂದು ತಿಂಗಳ ಬಳಿಕ ಅಂದರೆ ಆಗಸ್ಟ್ 26ಕ್ಕೆ ಸಿನಿಮಾ ರಿಲೀಸ್ ಆಗಲಿದೆ. ಸಿನಿಮಾದ ಕೆಲ ಹಾಡುಗಳು ಈಗಾಗಲೇ ಬಿಡುಗಡೆ ಆಗಿದ್ದು ಸಖತ್ ಸದ್ದು ಮಾಡುತ್ತಿವೆ. ಸಿನಿಮಾದ ಟೀಸರ್​​ಗೆ ಸಹ ಭರ್ಜರಿ ಪ್ರತಿಕ್ರಿಯೆ ದೊರೆತಿದೆ. ಯಶ್ ಅವರು ಎರಡು ಭಿನ್ನ ಪಾತ್ರಗಳಲ್ಲಿ ಈ ಸಿನಿಮಾಗಳಲ್ಲಿ ನಟಿಸಿದ್ದು, ಎರಡೂ ಪಾತ್ರಗಳ ಟೀಸರ್ ಈಗಾಗಲೇ ಬಿಡುಗಡೆ ಆಗಿದೆ. ಇದೀಗ ‘ಟಾಕ್ಸಿಕ್’ ಸಿನಿಮಾದ ಹೊಸ ಪೋಸ್ಟರ್ ಒಂದನ್ನು ಚಿತ್ರತಂಡ ಹಂಚಿಕೊಂಡಿದೆ.

ಈ ಹಿಂದೆ ಬಿಡುಗಡೆಯಾದ ಟೀಸರ್‌ನಲ್ಲಿ ಯಶ್ ಅವರ ಮಾಸ್ ಎಂಟ್ರಿ ಮತ್ತು ಅತಿಯಾದ ರಕ್ತಪಾತ ಹಾಗೂ ವೈಲೆನ್ಸ್ ಸಿನಿಪ್ರೇಮಿಗಳ ಗಮನ ಸೆಳೆದಿತ್ತು. ಆಕ್ಷನ್ ಸಿನಿಮಾಗಳನ್ನು ಇಷ್ಟಪಡುವವರಿಗೆ ಈ ಚಿತ್ರದಲ್ಲಿ ರಾಕಿಂಗ್ ಸ್ಟಾರ್ ರೌದ್ರಾವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬುದು ಸ್ಪಷ್ಟವಾಗಿತ್ತು. ಈಗ ಬಂದಿರುವ ಹೊಸ ಪೋಸ್ಟರ್ ಕೂಡ ಅದೇ ಮಟ್ಟದ ಹೈಪ್ ಸೃಷ್ಟಿಸಿದೆ. ಮತ್ತೊಮ್ಮೆ ರಕ್ತ-ಸಿಕ್ತವಾಗಿ ನಟ ಯಶ್ ಕಾಣಿಸಿಕೊಂಡಿದ್ದಾರೆ.

ಯಶ್ ಅವರು ರಾಯ ಮತ್ತು ಟಿಕೆಟ್ ಎಂಬ ಎರಡು ಪಾತ್ರಗಳಲ್ಲಿ ‘ಟಾಕ್ಸಿಕ್’ ಸಿನಿಮಾನಲ್ಲಿ ನಟಿಸಿದ್ದಾರೆ. ಇದೀಗ ಯಶ್ ಅವರ ರಾಯ ಪಾತ್ರದ ಪೋಸ್ಟರ್ ಅನ್ನು ಬಿಡುಗಡೆ ಮಾಡಾಗಿದೆ. ಈ ಬಾರಿ ಸಂಪೂರ್ಣವಾಗಿ ಭಿನ್ನವಾದ ಮತ್ತು ಸ್ಟೈಲಿಶ್ ಆದ ಲುಕ್‌ನಲ್ಲಿ ಮಿಂಚಿದ್ದಾರೆ. ಮೆರೂನ್ ಬಣ್ಣದ ಜಾಕೆಟ್ ಧರಿಸಿ, ಕೈಯಲ್ಲಿ ರಕ್ತಸಿಕ್ತ ಬೆರಳುಗಳೊಂದಿಗೆ, ತುಂಟ ಹಾಗೂ ಗೆಲುವಿನ ನಗೆ ಬೀರುತ್ತಾ ಸಿಗರೇಟಿಗೆ ಬೆಂಕಿ ಹಚ್ಚುತ್ತಿರುವ ಯಶ್ ಅವರ ಈ ಹೊಸ ಲುಕ್ ಅಭಿಮಾನಿಗಳಿಗೆ ಇಷ್ಟವಾಗುವಂತಿದೆ.

ಇದನ್ನೂ ಓದಿ:‘ಟಾಕ್ಸಿಕ್’ ಸಿನಿಮಾ ಬಗ್ಗೆ ನಿರ್ಮಾಪಕ ಕೆವಿಎನ್ ಹೇಳಿದ್ದೇನು?

‘ಟಾಕ್ಸಿಕ್’ ಸಿನಿಮಾನಲ್ಲಿ ಯಶ್ ಜೊತೆಗೆ ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ, ರುಕ್ಮಿಣಿ ವಸಂತ್, ತಾರಾ ಸುತಾರಿಯಾ ಅವರುಗಳು ನಾಯಕಿಯರಾಗಿ ನಟಿಸಿದ್ದಾರೆ. ಸಿನಿಮಾ ನಿರ್ದೇಶನ ಮಾಡಿರುವುದು ಗೀತು ಮೋಹನ್​​ದಾಸ್. ಸಿನಿಮಾಕ್ಕೆ ರವಿ ಬಸ್ರೂರು ಸಂಗೀತ ನೀಡಿದ್ದಾರೆ. ಕೆಲ ಹಾಡುಗಳನ್ನು ಹಿಂದಿ ಸಂಗೀತ ನಿರ್ದೇಶಕರು ಸಂಗೀತ ನೀಡಿದ್ದಾರೆ. ಸಿನಿಮಾ ಆಗಸ್ಟ್ 26ಕ್ಕೆ ವಿಶ್ವದಾದ್ಯಂತ ಬಲು ಅದ್ಧೂರಿಯಾಗಿ ರಿಲೀಸ್ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Exit mobile version