ಸಿಜೆಪಿ ಜೊತೆಗಿನ ಕೇಂದ್ರದ ಸಂಧಾನ ಸಕ್ಸಸ್, ಜಿರಳೆ ಪಾರ್ಟಿ ಹೋರಾಟ ವಾಪಸ್! – Kannada News | “Govt considered all demands, has accepted them: JP Nadda after CJP calls off protest

ನವದೆಹಲಿ, (ಜುಲೈ 25): ದೇಶಾದ್ಯಂತ ಭಾರಿ ಚರ್ಚೆಗೆ ಕಾರಣವಾಗಿದ್ದ ನೀಟ್ (NEET UG) ಪರೀಕ್ಷಾ ಅಕ್ರಮದ ವಿರುದ್ಧ ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆಯುತ್ತಿದ್ದ (Breaking) ವಿದ್ಯಾರ್ಥಿಗಳ ಬೃಹತ್ ಪ್ರತಿಭಟನೆ ಅಂತ್ಯವಾಗಿದೆ. ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಹಿನ್ನೆಲೆಯಲ್ಲಿ ದೇಶಾದ್ಯಂತ ಬೃಹತ್ ಪ್ರತಿಭಟನೆ ನಡೆಸಿದ್ದ ಸಿಜೆಪಿ ಜೊತೆ ಕೇಂದ್ರ ಸರ್ಕಾರದ ಪರವಾಗಿ ಸಚಿವ ಜೆಪಿ ನಡ್ಡಾ ಅವರು ನಡೆಸಿದ್ದ ಸಂಧಾನ ಮಾತುಕತೆ ಸಕ್ಸಸ್ ಆಗಿದೆ. ಸರ್ಕಾರದ ಮುಂದೆ 3 ಪ್ರಮುಖ ಬೇಡಿಕೆಗಳನ್ನು ಇಟ್ಟಿದ್ದ ಸಿಜೆಪಿಯ ಎಲ್ಲ ಬೇಡಿಕೆಗಳೂ ಈಡೇರಿಕೆ ಒಪ್ಪಿಗೆ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ವಾಪಾಸ್ ಪಡೆಯುವುದಾಗಿ ಸಿಜೆಪಿ ಘೋಷಿಸಿದೆ.

ಇದನ್ನೂ ಓದಿ: ಎಲ್ಲ ಬೇಡಿಕೆಗೂ ಕೇಂದ್ರ ಸರ್ಕಾರ ಒಪ್ಪಿಗೆ; ಪ್ರತಿಭಟನೆ ಹಿಂಪಡೆದ ಸಿಜೆಪಿ, ಶಾಂತಿಯುತವಾಗಿ ತೆರಳಲು ವಿದ್ಯಾರ್ಥಿಗಳಿಗೆ ಕರೆ

Source link

Karnataka Weather Forecast: ಕರ್ನಾಟಕದಲ್ಲಿ ತಿಂಗಳಾಂತ್ಯದವರೆಗೂ ಮಳೆ,7 ದಿನ ವರುಣನ ಆರ್ಭಟ – Kannada News | Karnataka Weather Forecast: Heavy Rain Likely in Karavali ,Malenadu And Other Parts Next 7 Days

ಬೆಂಗಳೂರು, (ಜುಲೈ 25): ಮುಂದಿನ ಏಳು ದಿನಗಳ ಕಾಲ ಕರ್ನಾಟಕದಾದ್ಯಂತ (Karnataka) ಅಲ್ಲಲ್ಲಿ ಗುಡುಗು, ಸಿಡಿಲು ಸಹಿತ ಜೋರಾದ ಗಾಳಿಯೊಂದಿಗೆ ಹಗುರದಿಂದ ಸಾದಾರಣ ಮಳೆಯಾಗಲಿದೆ ಎಂದು ಭಾರತೀಯ ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಅಲ್ಲಲ್ಲಿ ಭಾರಿ ಮಳೆ ಹಾಗೂ ಒಳನಾಡು ಜಿಲ್ಲೆಗಳಲ್ಲಿ ಜುಲೈ 28 ರಿಂದ ಅಲ್ಲಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ಇದೆ.

ಕರಾವಳಿ-ಮಲೆನಾಡಿನಲ್ಲಿ ಭಾರೀ ಮಳೆ ಮುನ್ಸೂಚನೆ

ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಸೇರಿದಂತೆ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಲ್ಲಿ ಭಾರೀ ಮಳೆಯ ಸಾಧ್ಯತೆ ಇದ್ದು, ಹಲವು ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.  ಇನ್ನು ಈ ಭಾಗಗಳಲ್ಲಿ ಬಿರುಗಾಳಿ ಸಹಿತ (ಗಂಟೆಗೆ 30-40 ಕಿ.ಮೀ ವೇಗ) ಭಾರಿಯಿಂದ ಅತಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಕರಾವಳಿ ತೀರದ ಜನರಿಗೆ ಜಾಗರೂಕರಾಗಿರಲು ಸೂಚಿಸಲಾಗಿದೆ.

ಉತ್ತರ ಒಳನಾಡು ಜಿಲ್ಲೆಗಳಾದ ಬೆಳಗಾವಿ, ಬಾಗಲಕೋಟೆ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ ಮತ್ತು ಯಾದಗಿರಿಯಲ್ಲಿ ಬಿರುಗಾಳಿ ಸಮೇತ ಸಾಧಾರಣ ಮಳೆಯಾಗುವ ಸಾಧ್ಯತೆಗಳಿವೆ. ಇನ್ನು ಬೆಳಗಾವಿ ಜಿಲ್ಲೆಯಲ್ಲಿ ಭಾರೀ ಮಳೆಯೊಂದಿಗೆ ಗಂಟೆಗೆ 40-50 ಕಿ.ಮೀ ವೇಗದ ಬಿರುಗಾಳಿ ಬೀಸುವ ಸಾಧ್ಯತೆಯಿದೆ, ಉಳಿದ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಪರೀಕ್ಷಾ ಅಕ್ರಮ ತಡೆಗೆ ಕಠಿಣ ಕ್ರಮ: 10 ವರ್ಷ ಜೈಲು, 10 ಕೋಟಿ ರೂ ದಂಡ ಎಂದ ಸಚಿವ ಜೋಶಿ – Kannada News | Strict Law Against Exam Malpractices to Combat NEET Fraud: Pralhad Joshi

ಧಾರವಾಡ, ಜುಲೈ 25: ‘‘ಪರೀಕ್ಷೆಗಳಲ್ಲಿ ನಡೆಯುವ ಅಕ್ರಮಗಳನ್ನು ತಡೆಯಲು ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಂಡಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಈ ವಿಷಯವನ್ನು ಬಹಳ ಗಂಭೀರವಾಗಿ ಪರಿಗಣಿಸಿದ್ದು, “ಪಬ್ಲಿಕ್ ಎಕ್ಸಾಮಿನೇಷನ್ ಪ್ರಿವೆನ್ಷನ್ ಆಫ್ ಆಕ್ಟ್, 2024” ಅನ್ನು ಜಾರಿಗೆ ತಂದಿದೆ’’ ಎಂದು ಕೇಂದ್ರ ಸಚಿವ ಪ್ರಲ್ಹಾದ್​​ ಜೋಶಿ ಹೇಳಿದರು. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘‘ಈ ಕಾಯ್ದೆಯಡಿ, ಅಕ್ರಮ ಎಸಗುವವರಿಗೆ ನೀಡಲಾಗುತ್ತಿದ್ದ ಶಿಕ್ಷೆಯನ್ನು ಐದು ವರ್ಷಗಳಿಂದ ಹತ್ತು ವರ್ಷಕ್ಕೆ ಹೆಚ್ಚಿಸಲಾಗಿದೆ ಮತ್ತು 10 ಕೋಟಿ ರೂ ದಂಡವನ್ನು ವಿಧಿಸಲಾಗುತ್ತದೆ. ಹಿಂದೆ ಇಂಥ ಘಟನೆ ಆದಾಗ ಗಂಭೀರ ಕ್ರಮ ಕೈಗೊಂಡಿರಲಿಲ್ಲ. ಹಿಂದೆ 58 ಬಾರಿ UPSC ಪರೀಕ್ಷೆಯ ಪತ್ರಿಕೆ ಲೀಕ್ ಆಗಿದ್ದವು. ಅವುಗಳ ಬಗ್ಗೆ ನಾವು ಮಾತನಾಡುವುದಿಲ್ಲ. ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದ್ದಾರೋ ಅವರನ್ನ ಬಂಧಿಸಲಾಗಿದೆ. ಅವರ ಮೇಲೆ ಜಾಮೀನುರಹಿತ ಕೇಸ್ ದಾಖಲಾಗಿದೆ. 22 ಲಕ್ಷ ವಿದ್ಯಾರ್ಥಿಗಳಿಗೆ ಮರು ನೀಟ್ ಪರೀಕ್ಷೆ ಮಾಡಲಾಗಿದೆ. ನೀಟ್ ವಿಚಾರದಲ್ಲಿ ಕೇಂದ್ರ ಸರ್ಕಾರ ಬಹಳ ಗಂಭೀರವಾಗಿದೆ’’ ಎಂದಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ದಕ್ಷಿಣ ಭಾರತ ಚಿತ್ರರಂಗದಿಂದ ವ್ಯಕ್ತವಾಗಿತ್ತು ಸಿಜೆಪಿಗೆ ಭರ್ಜರಿ ಬೆಂಬಲ

Source link

ಎಲ್ಲ ಬೇಡಿಕೆಗೂ ಕೇಂದ್ರ ಸರ್ಕಾರ ಒಪ್ಪಿಗೆ; ಪ್ರತಿಭಟನೆ ಹಿಂಪಡೆದ ಸಿಜೆಪಿ, ಶಾಂತಿಯುತವಾಗಿ ತೆರಳಲು ವಿದ್ಯಾರ್ಥಿಗಳಿಗೆ ಕರೆ – Kannada News | CJP ends Jantar Mantar protest after Centre agrees to all demands

ನವದೆಹಲಿ, ಜುಲೈ 25: ನೀಟ್ (NEET-UG) ಪರೀಕ್ಷಾ ಅಕ್ರಮಗಳನ್ನು ಖಂಡಿಸಿ ಹಾಗೂ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ಕೇಂದ್ರ ಶಿಕ್ಷಣ ಸಚಿವಾಲಯದ ವಿರುದ್ಧ ನಡೆದಿದ್ದ ಬೃಹತ್ ಪ್ರತಿಭಟನೆ ಕೊನೆಗೂ ಅಂತ್ಯಗೊಂಡಿದೆ. ಕೇಂದ್ರ ಸರ್ಕಾರವು ಪ್ರತಿಭಟನಾಕಾರರ ಎಲ್ಲಾ ಪ್ರಮುಖ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಇಂದು ತನ್ನ 50 ದಿನಗಳ ಸುದೀರ್ಘ ರಾಷ್ಟ್ರವ್ಯಾಪಿ ಚಳವಳಿಯನ್ನು ಹಿಂಪಡೆಯುತ್ತಿರುವುದಾಗಿ ಅಧಿಕೃತವಾಗಿ ಘೋಷಿಸಿದೆ. ದೆಹಲಿಯ ಜಂತರ್ ಮಂತರ್‌ನಲ್ಲಿ ನೆರೆದಿದ್ದ ಪ್ರತಿಭಟನಾಕಾರರಿಗೆ ಶಾಂತಿಯುತವಾಗಿ ಮನೆಗೆ ಹಿಂತಿರುಗುವಂತೆ ಮನವಿ ಮಾಡಿದೆ.

Published On – 5:50 pm, Sat, 25 July 26

Source link

IND vs ZIM: ಜಿಂಬಾಬ್ವೆ ವಿರುದ್ಧ ದಾಖಲೆಯ ಅರ್ಧಶತಕ ಬಾರಿಸಿದ ಇಶಾನ್ ಕಿಶನ್ – Kannada News | Ishan Kishan Blazes Fifty: IND vs ZIM T20, Ends Run Drought, New Records in Harare

ಜಿಂಬಾಬ್ವೆ ವಿರುದ್ಧ ಹರಾರೆಯಲ್ಲಿ ನಡೆಯುತ್ತಿರುವ ಎರಡನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಇಶಾನ್ ಕಿಶನ್ ಕೇವಲ 31 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಈ ಮೂಲಕ ಕಳೆದ ಕೆಲವು ಪಂದ್ಯಗಳಿಂದ ಎದುರಿಸುತ್ತಿದ್ದ ರನ್ ಬರವನ್ನು ನೀಗಿಸಿಕೊಂಡರು. ಕಿಶನ್ ಅವರ ಈ ಅರ್ಧಶತಕದಿಂದಾಗಿ ಟೀಂ ಇಂಡಿಯಾ ಕೂಡ ಶತಕದ ಗಡಿ ದಾಟಿತು(PC-BCCI).

Source link

IND vs ZIM: 4,6,4,4.. ಔಟ್; 3ನೇ ಓವರ್​ನಲ್ಲೇ ಆಟ ಮುಗಿಸಿದ ವೈಭವ್ – Kannada News | India vs Zimbabwe 2nd T20: Early Wickets in Harare, Sooryavanshi and Abhishek Fall

ಹರಾರೆಯಲ್ಲಿ ನಡೆಯುತ್ತಿರುವ ಭಾರತ ಮತ್ತು ಜಿಂಬಾಬ್ವೆ ನಡುವಿನ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಟಾಸ್ ಗೆದ್ದ ಜಿಂಬಾಬ್ವೆ ಮೊದಲು ಬೌಲಿಂಗ್ ಆಯ್ದುಕೊಂಡಿತು. ಹೀಗಾಗಿ ಮೊದಲು ಬ್ಯಾಟಿಂಗ್‌ ಆರಂಭಿಸಿದ ಭಾರತ ತಂಡಕ್ಕೆ ಮತ್ತೊಮ್ಮೆ ಕಳಪೆ ಆರಂಭ ಸಿಕ್ಕಿದೆ. ಆರಂಭಿಕರಿಬ್ಬರು 3ನೇ ಓವರ್ ಮುಗಿಯುವುದಕ್ಕೂ ಮುನ್ನವೇ ಪೆವಿಲಿಯನ್ ಸೇರಿಕೊಂಡಿದ್ದಾರೆ(PC-BCCI).

ಆರಂಭಿಕ ಅಭಿಷೇಕ್ ಶರ್ಮಾ ಮತ್ತೊಮ್ಮೆ ಕಳಪೆ ಪ್ರದರ್ಶನ ನೀಡಿ 8 ರನ್​ಗಳಿಗೆ ವಿಕೆಟ್ ಒಪ್ಪಿಸಿದರೆ, ಕಳೆದ ಪಂದ್ಯದಲ್ಲಿ ಸ್ಫೋಟಕ ಅರ್ಧಶತಕದ ಇನ್ನಿಂಗ್ಸ್ ಆಡಿದ್ದ ವೈಭವ್ ಸೂರ್ಯವಂಶಿ ಕೂಡ ಈ ಪಂದ್ಯದಲ್ಲಿ ಬಹುಬೇಗನೇ ವಿಕೆಟ್ ಕಳೆದುಕೊಂಡರು. ಹೀಗಾಗಿ ಟೀಂ ಇಂಡಿಯಾ ಕೇವಲ 29 ರನ್​ಗಳಿಗೆ ತನ್ನ ಆರಂಭಿಕರಿಬ್ಬರನ್ನು ಕಳೆದುಕೊಂಡಿತು(PC-BCCI).

ಈ ಪಂದ್ಯದಲ್ಲಿ ಸಿಂಗಲ್ ತೆಗೆದುಕೊಳ್ಳುವ ಮೂಲಕ ತಮ್ಮ ಇನ್ನಿಂಗ್ಸ್ ಆರಂಭಿಸಿದ ವೈಭವ್, ರಿಚರ್ಡ್ ನಗರ್ವಾ ಬೌಲ್ ಮಾಡಿದ ಇನ್ನಿಂಗ್ಸ್​ನ 4ನೇ ಓವರ್​ನಲ್ಲಿ ಸತತ ಬೌಂಡರಿಗಳ ಮಳೆಗರೆದರು. ಈ ಓವರ್​ನಲ್ಲಿ ಮೂರು ಬೌಂಡರಿ ಹಾಗೂ 1 ಸಿಕ್ಸರ್ ಬಾರಿಸಿದ ವೈಭವ್ ಕೊನೆಯ ಎಸೆತದಲ್ಲಿ ಮತ್ತದೇ ದೊಡ್ಡ ಹೊಡೆತಕ್ಕೆ ಕೈಹಾಕಿ ವಿಕೆಟ್ ಒಪ್ಪಿಸಿದರು(PC-BCCI).

ಈ ಪಂದ್ಯದಲ್ಲಿ ವೈಭವ್ 9 ಎಸೆತಗಳನ್ನು ಎದುರಿಸಿ 3 ಬೌಂಡರಿ ಮತ್ತು 1 ಸಿಕ್ಸರ್ ಸೇರಿದಂತೆ 20 ರನ್ ಗಳಿಸಿ ಔಟಾದರು. ಮೊದಲ ಪಂದ್ಯದಲ್ಲಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ವೈಭವ್ ಕೇವಲ 18 ಎಸೆತಗಳಲ್ಲಿ 4 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 50 ರನ್​ಗಳ ಇನ್ನಿಂಗ್ಸ್ ಆಡಿದ್ದರು. ಈ ಮೂಲಕ ದಾಖಲೆಯನ್ನು ನಿರ್ಮಿಸಿದ್ದರು. ಆದರೆ ಈ ಪಂದ್ಯದಲ್ಲಿ ಮತ್ತೊಮ್ಮೆ ಮಿಂಚಲು ವೈಭವ್​ಗೆ ಸಾಧ್ಯವಾಗಲಿಲ್ಲ(PC-BCCI).

ಪಂದ್ಯದ ವಿಚಾರಕ್ಕೆ ಬರುವುದಾದರೆ.. ಆರಂಭಿಕ ಆಘಾತದ ನಡುವೆಯೂ ಟೀಂ ಇಂಡಿಯಾ ಉತ್ತಮವಾಗಿ ಬ್ಯಾಟಿಂಗ್‌ ಮಾಡುತ್ತಿದೆ. ಈ ಸುದ್ದಿ ಬರೆಯುವ ಹೊತ್ತಿಗೆ ಟೀಂ ಇಂಡಿಯಾ ಇನ್ನಿಂಗ್ಸ್​ನ 10 ಓವರ್​ಗಳು ಪೂರ್ಣಗೊಂಡಿದ್ದು, ಪ್ರಮುಖ 3 ವಿಕೆಟ್‌ಗಳನ್ನು ಕಳೆದುಕೊಂಡು 95 ರನ್ ಕಲೆಹಾಕಿದೆ(PC-BCCI).

Published On – 5:21 pm, Sat, 25 July 26

Source link

ದೆಹಲಿಯಲ್ಲಿ ಸಿಜೆಪಿ ವಕ್ತಾರರ ಜೊತೆ ಕೇಂದ್ರ ಸರ್ಕಾರದ 3ನೇ ಸುತ್ತಿನ ಮಾತುಕತೆ – Kannada News | Government Holds Meeting With CJP Leaders At Constitution Club after Dharmendra Pradhgan Resign

ನವದೆಹಲಿ, ಜುಲೈ 25: ದೆಹಲಿಯ ಕಾನ್‌ಸ್ಟಿಟ್ಯೂಷನ್ ಕ್ಲಬ್‌ನಲ್ಲಿ ಕೇಂದ್ರ ಸರ್ಕಾರ ಮತ್ತು ‘ಕಾಕ್ರೋಚ್ ಜನತಾ ಪಾರ್ಟಿ’ (CJP) ನಿಯೋಗದ ನಡುವೆ 3ನೇ ಸುತ್ತಿನ ಸಭೆ ನಡೆಯುತ್ತಿದೆ. ನೀಟ್ (NEET) ಪೇಪರ್ ಲೀಕ್ ವಿವಾದ, ಪರೀಕ್ಷಾ ಅಕ್ರಮಗಳು ಮತ್ತು ವಿದ್ಯಾರ್ಥಿಗಳ ವಿವಿಧ ಬೇಡಿಕೆಗಳ ಕುರಿತು ಸರ್ಕಾರದ ಪ್ರತಿನಿಧಿಗಳು ಹಾಗೂ ಪ್ರತಿಭಟನಾನಿರತ ಸಿಜೆಪಿ ನಾಯಕರ ನಡುವೆ ಈ ಸಭೆ ಏರ್ಪಟ್ಟಿದೆ. ಕೇಂದ್ರ ಸರ್ಕಾರದ ಪರವಾಗಿ ಸಚಿವರಾದ ಜೆ.ಪಿ ನಡ್ಡಾ ಮತ್ತು ಜಿತೇಂದ್ರ ಸಿಂಗ್ ಹಾಜರಾಗಿದ್ದರೆ ಸಿಜೆಪಿ ಪರವಾಗಿ ರಾಷ್ಟ್ರೀಯ ವಕ್ತಾರರಾದ ಸೌರವ್ ದಾಸ್ ಮತ್ತು ಅಶುತೋಷ್ ರಾಂಕಾ ಭಾಗಿಯಾಗಿದ್ದಾರೆ. ಈಗಾಗಲೇ ಧರ್ಮೇಂದ್ರ ಪ್ರಧಾನ್ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವುದರಿಂದ ಸಿಜೆಪಿ ತನ್ನ ಪ್ರತಿಭಟನೆಯನ್ನು ನಿಲ್ಲಿಸುತ್ತದೆಯೇ ಅಥವಾ ಮುಂದುವರೆಸುತ್ತದೆಯೇ ಎಂಬುದು ಈ ಸಭೆಯ ಬಳಿಕ ಬಹಿರಂಗವಾಗುವ ಸಾಧ್ಯತೆಯಿದೆ.

 

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

50 ವರ್ಷ ದಾಟಿದ ಮೇಲೆ ಈ 5 ಆಹಾರಗಳ ಸೇವನೆ ಮಾಡುವುದನ್ನು ಕಡಿಮೆ ಮಾಡಿ – Kannada News | Experts Reveal the Worst Foods to Avoid After Age 50

50 ವರ್ಷ ದಾಟಿದ ನಂತರ ದೇಹದಲ್ಲಿ ಹಲವು ಸ್ವಾಭಾವಿಕ ಬದಲಾವಣೆಗಳು ಆರಂಭವಾಗುತ್ತವೆ. ಚಯಾಪಚಯ ಕ್ರಿಯೆ (Metabolism) ನಿಧಾನಗೊಳ್ಳುವುದು, ಸ್ನಾಯುಗಳ ಬಲ ಕಡಿಮೆಯಾಗುವುದು, ಮೂಳೆ ಸಾಂದ್ರತೆ ಕಡಿಮೆಯಾಗುವುದು, ಹಾರ್ಮೋನ್ ಬದಲಾವಣೆಗಳು ಹಾಗೂ ರೋಗನಿರೋಧಕ ಶಕ್ತಿ ಕುಗ್ಗುವುದು ಸಾಮಾನ್ಯ. ಇಂತಹ ಕಾರಣದಿಂದ ಈ ವಯಸ್ಸಿನಲ್ಲಿ ಆರೋಗ್ಯಕರ ಆಹಾರ ಪದ್ಧತಿಯನ್ನು ಅನುಸರಿಸುವುದು ಅತ್ಯಂತ ಮುಖ್ಯ. ತಜ್ಞರ ಪ್ರಕಾರ, ಪೌಷ್ಟಿಕ ಆಹಾರ ಸೇವಿಸುವುದಷ್ಟೇ ಅಲ್ಲ, ಆರೋಗ್ಯಕ್ಕೆ ಹಾನಿ ಉಂಟುಮಾಡುವ ಕೆಲವು ಆಹಾರಗಳನ್ನು ಮಿತಿಗೊಳಿಸುವುದು ಅಥವಾ ಸಾಧ್ಯವಾದಷ್ಟು ದೂರವಿರುವುದು ಹೃದಯ, ಮಧುಮೇಹ, ರಕ್ತದೊತ್ತಡ ಹಾಗೂ ಕಿಡ್ನಿ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ.

ಮೈದಾ ಮತ್ತು ರಿಫೈನ್ಡ್ ಕಾರ್ಬೋಹೈಡ್ರೇಟ್ ಆಹಾರಗಳು: ವೈಟ್ ಬ್ರೆಡ್, ಪಾಸ್ತಾ, ಕೇಕ್, ಬಿಸ್ಕತ್ ಹಾಗೂ ಮೈದಾದಿಂದ ತಯಾರಿಸಿದ ಆಹಾರಗಳಲ್ಲಿ ಫೈಬರ್ ಪ್ರಮಾಣ ತುಂಬಾ ಕಡಿಮೆ ಇರುತ್ತದೆ. ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ರಕ್ತದಲ್ಲಿನ ಸಕ್ಕರೆ ಮಟ್ಟ ವೇಗವಾಗಿ ಏರಬಹುದು, ತೂಕ ಹೆಚ್ಚಾಗುವ ಸಾಧ್ಯತೆ, ಟೈಪ್-2 ಮಧುಮೇಹದ ಅಪಾಯ ಹೆಚ್ಚಾಗಬಹುದು, ಜೀರ್ಣಕ್ರಿಯೆ ನಿಧಾನವಾಗಬಹುದು. ಸಂಪೂರ್ಣ ಧಾನ್ಯಗಳು, ಓಟ್ಸ್, ರಾಗಿ, ಜೋಳ, ಬ್ರೌನ್ ರೈಸ್ ಉತ್ತಮ ಆಯ್ಕೆಯಾಗಿದೆ.

ಪ್ರಾಸೆಸ್ಡ್ ಮಾಂಸಾಹಾರ: ಸಾಸೇಜ್, ಬೇಕನ್, ಸಲಾಮಿ, ಕ್ಯಾಂಡ್ ಮೀಟ್ ಮುಂತಾದ ಆಹಾರಗಳಲ್ಲಿ ಹೆಚ್ಚಿನ ಪ್ರಮಾಣದ ಉಪ್ಪು ಮತ್ತು ಸಂರಕ್ಷಕ ರಾಸಾಯನಿಕಗಳು (Preservatives) ಇರುತ್ತವೆ. ಇದರ ಸೇವನೆಯಿಂದ ರಕ್ತದೊತ್ತಡ ಹೆಚ್ಚಾಗುವುದು, ಹೃದಯರೋಗದ ಅಪಾಯ, ಕೊಲೆಸ್ಟ್ರಾಲ್ ಹೆಚ್ಚಾಗುವುದು, ಕಿಡ್ನಿ ಮೇಲಿನ ಒತ್ತಡ ಹೆಚ್ಚಾಗಬಹುದು. ಹಾಗಾಗಿ ತಾಜಾ ಮೀನು, ಚರ್ಮವಿಲ್ಲದ ಕೋಳಿ ಮಾಂಸ ಅಥವಾ ಸಸ್ಯಾಹಾರ ಪ್ರೋಟೀನ್ ಸೇವನೆ ಉತ್ತಮ ಆಯ್ಕೆಯಾಗಿದೆ.

ಕೃತಕ ಸಿಹಿ ಪದಾರ್ಥಗಳು ಮತ್ತು ಪ್ಯಾಕ್ ಮಾಡಿದ ಜ್ಯೂಸ್: ಡಯಟ್ ಸೋಡಾ, ಪ್ಯಾಕ್ ಮಾಡಿದ ಜ್ಯೂಸ್ ಹಾಗೂ ಕೃತಕ ಸಿಹಿ ಪದಾರ್ಥಗಳನ್ನು ಹೊಂದಿರುವ ಪಾನೀಯಗಳು ಆರೋಗ್ಯಕರವೆಂದು ಅನೇಕರು ಭಾವಿಸುತ್ತಾರೆ. ಆದರೆ ಇವುಗಳಲ್ಲಿ ಕೃತಕ ಸಿಹಿಕಾರಕಗಳು ಮತ್ತು ಸಂರಕ್ಷಕಗಳು ಇರಬಹುದು. ಇವುಗಳನ್ನು ಸೇವನೆಯಿಂದ ಕರುಳಿನ ಉತ್ತಮ ಬ್ಯಾಕ್ಟೀರಿಯಾ ಹಾನಿಗೊಳಗಾಗಬಹುದು, ಇನ್ಸುಲಿನ್ ಪ್ರತಿರೋಧ (Insulin Resistance) ಹೆಚ್ಚಾಗಬಹುದು, ಕೊಬ್ಬಿನ ಯಕೃತ್ತಿನ (Fatty Liver) ಅಪಾಯ ಹೆಚ್ಚಾಗಬಹುದು ಜೊತೆಗೆ ಮಧುಮೇಹದ ಅಪಾಯವೂ ಕಡಿಮೆಯಾಗಬಹುದು. ಇವುಗಳ ಬದಲಾಗಿ ತಾಜಾ ಹಣ್ಣು, ನಿಂಬೆ ನೀರು, ಸಕ್ಕರೆ ಇಲ್ಲದ ಮಜ್ಜಿಗೆ, ತೆಂಗಿನಕಾಯಿ ನೀರು ಉತ್ತಮ ಆಯ್ಕೆಯಾಗಿದೆ.

ಹೆಚ್ಚು ಉಪ್ಪು ಮತ್ತು ಎಣ್ಣೆಯಲ್ಲಿ ಕರಿದ ಆಹಾರ: ಚಿಪ್ಸ್, ಬಜ್ಜಿ, ಪಕೋಡಾ, ಫ್ರೆಂಚ್ ಫ್ರೈಸ್ ಹಾಗೂ ಹೆಚ್ಚು ಉಪ್ಪು ಇರುವ ಉಪ್ಪಿನಕಾಯಿ ಸೇವನೆಯನ್ನು ಮಿತಿಗೊಳಿಸಬೇಕು. ಇವು ರಕ್ತದೊತ್ತಡ ಏರಿಕೆ, ದೇಹದಲ್ಲಿ ನೀರು ಸಂಗ್ರಹವಾಗಿ ಕಾಲಿನಲ್ಲಿ ಊತ, ಹೃದಯ ಹಾಗೂ ಕಿಡ್ನಿ ಸಮಸ್ಯೆಗಳ ಅಪಾಯ, ಫ್ರೀ ರಾಡಿಕಲ್‌ಗಳಿಂದ ಜೀವಕೋಶಗಳಿಗೆ ಹಾನಿಯಾಗುತ್ತದೆ.

ಇದನ್ನೂ ಓದಿ: ಪೋಷಕರೇ ಎಚ್ಚರ! ಮಕ್ಕಳಲ್ಲಿ ಜಂಕ್ ಫುಡ್ ಅಭ್ಯಾಸ ಹೆಚ್ಚಿದರೆ ಈ ಗಂಭೀರ ಆರೋಗ್ಯ ಸಮಸ್ಯೆಗಳು ಬರಬಹುದು!

ಫುಲ್ ಫ್ಯಾಟ್ ಡೈರಿ ಉತ್ಪನ್ನಗಳು: ಹಾಲು, ಚೀಸ್, ಬೆಣ್ಣೆ ಮತ್ತು ಕ್ರೀಮ್‌ನಲ್ಲಿ ಸ್ಯಾಚುರೇಟೆಡ್ ಕೊಬ್ಬು ಹೆಚ್ಚಾಗಿ ಇರುತ್ತದೆ. ಇವು ಕೆಟ್ಟ ಕೊಲೆಸ್ಟ್ರಾಲ್ (LDL) ಹೆಚ್ಚಾಗಬಹುದು. ಹೃದಯರೋಗದ ಅಪಾಯ ಮತ್ತು ತೂಕ ಹೆಚ್ಚಾಗುವ ಸಾಧ್ಯತೆ ಇರುತ್ತದೆ ಇಂತಹ ಸಮಸ್ಯೆ ತಡೆಯಲು ಸ್ಕಿಮ್ಡ್ ಹಾಲು, ಕಡಿಮೆ ಕೊಬ್ಬಿನ ಮೊಸರು, ಮಜ್ಜಿಗೆ ಉತ್ತಮ ಆಯ್ಕೆಯಾಗಿದೆ.

50 ವರ್ಷವಾದವರು ಆಹಾರದಲ್ಲಿ ಸೇರಿಸಬೇಕಾದ ಪೌಷ್ಟಿಕಾಂಶಗಳು

  • ಹಸಿರು ಸೊಪ್ಪು
  • ಬೇಳೆ ಮತ್ತು ಕಾಳುಗಳು
  • ತಾಜಾ ಹಣ್ಣುಗಳು
  • ಒಣಹಣ್ಣು ಮತ್ತು ಬೀಜಗಳು
  • ಓಟ್ಸ್ ಮತ್ತು ಸಂಪೂರ್ಣ ಧಾನ್ಯಗಳು
  • ಮೀನು (ಒಮೆಗಾ-3 ಸಮೃದ್ಧ)
  • ಕಡಿಮೆ ಕೊಬ್ಬಿನ ಹಾಲು ಉತ್ಪನ್ನಗಳು

50 ವರ್ಷ ದಾಟಿದವರು ಅನುಸರಿಸಬೇಕಾದ ಆರೋಗ್ಯಕರ ಅಭ್ಯಾಸಗಳು

  • ಪ್ರತಿದಿನ ಕನಿಷ್ಠ 30 ನಿಮಿಷ ವಾಕಿಂಗ್ ಮಾಡಿ.
  • ವಾರದಲ್ಲಿ 2–3 ಬಾರಿ ಲಘು ವ್ಯಾಯಾಮ ಮಾಡಿ.
  • ದಿನಕ್ಕೆ 7–8 ಗಂಟೆ ನಿದ್ರೆ ಮಾಡಿ.
  • ದಿನಕ್ಕೆ 2–3 ಲೀಟರ್ ನೀರು ಕುಡಿಯಿರಿ.
  • ಧೂಮಪಾನ ಮತ್ತು ಮದ್ಯಪಾನದಿಂದ ದೂರವಿರಿ.
  • ವರ್ಷಕ್ಕೊಮ್ಮೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಿ.

ಈ ಪರೀಕ್ಷೆಗಳನ್ನು ನಿಯಮಿತವಾಗಿ ಮಾಡಿಸಿಕೊಳ್ಳಿ

  • ರಕ್ತದೊತ್ತಡ (BP)
  • ರಕ್ತದಲ್ಲಿನ ಸಕ್ಕರೆ (Blood Sugar)
  • HbA1c
  • ಲಿಪಿಡ್ ಪ್ರೊಫೈಲ್
  • ಕಿಡ್ನಿ ಕಾರ್ಯ ಪರೀಕ್ಷೆ
  • ಲಿವರ್ ಕಾರ್ಯ ಪರೀಕ್ಷೆ
  • ವಿಟಮಿನ್ D ಮತ್ತು B12
  • ಮೂಳೆ ಸಾಂದ್ರತೆ ಪರೀಕ್ಷೆ (Bone Density) – ಅಗತ್ಯವಿದ್ದರೆ

ಗಮನಿಸಿ: ಈ ಲೇಖನವು ಸಾಮಾನ್ಯ ಆರೋಗ್ಯ ಮಾಹಿತಿಗಾಗಿ ಮಾತ್ರ. ನಿಮ್ಮ ಆರೋಗ್ಯ ಸ್ಥಿತಿ, ಮಧುಮೇಹ, ರಕ್ತದೊತ್ತಡ ಅಥವಾ ಇತರ ಕಾಯಿಲೆಗಳಿಗೆ ಅನುಗುಣವಾಗಿ ಆಹಾರ ಯೋಜನೆ ರೂಪಿಸಿಕೊಳ್ಳಲು ವೈದ್ಯರು ಅಥವಾ ಪೌಷ್ಟಿಕ ತಜ್ಞರ ಸಲಹೆ ಪಡೆಯಿರಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಇದು ವಿದ್ಯಾರ್ಥಿಗಳ ಗೆಲುವು’: ಪ್ರಧಾನ್ ರಾಜೀನಾಮೆ ಕ್ರೆಡಿಟ್ ಬಗ್ಗೆ ಬಿಕೆ ಹರಿಪ್ರಸಾದ್ ಮಾತು​ – Kannada News | This Is a Victory for Students: BK Hariprasad talk about Credit for Dharmendra Pradhan’s Resignation

ಬೆಂಗಳೂರು, ಜುಲೈ 25: ‘ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್​ ರಾಜೀನಾಮೆ ನೀಡಿರುವುದು ವಿದ್ಯಾರ್ಥಿಗಳ ಗೆಲುವು. ನಾವು ಕಾಕ್ರೋಚ್ ಪಾರ್ಟಿನೋ, ಇನ್ನೊಂದು ಪಾರ್ಟಿನೋ ಅಲ್ಲ. ವಿದ್ಯಾರ್ಥಿಗಳಿಗೆ ನ್ಯಾಯ ಸಿಗಬೇಕು, ಅವರ ಭವಿಷ್ಯ ಹಾಳು ಮಾಡಬಾರದು’ ಎಂದು ನಾವು ಹೋರಾಟ ಮಾಡಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್​ ಹೇಳಿದ್ದಾರೆ. ಪ್ರಧಾನ್ ರಾಜೀನಾಮೆ ಕ್ರೆಡಿಟ್ ವಿಚಾರವಾಗಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿದಾಗ ಅವರನ್ನು ದೇಶದ್ರೋಹಿಗಳು ಎಂದು ಕರೆದರು. ಆದರೆ, ಇಡೀ ಬಿಜೆಪಿ ಮತ್ತು ನಾಗಪುರ್ ಯುನಿವರ್ಸಿಟಿನಲ್ಲಿರುವವರು ನಕಲಿ ದೇಶಭಕ್ತರು’ ಎಂದು ಹರಿಪ್ರಸಾದ್ ತೀವ್ರ ವಾಗ್ದಾಳಿ ಮಾಡಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

Exit mobile version