Viral News: ಹೆಂಡತಿಗೆ ಕೈಕೊಟ್ಟು ಅತ್ತೆಯನ್ನೇ ಮದುವೆಯಾದ ಅಳಿಯ! – Kannada News

ಕಾನ್ಪುರ, ಜೂನ್ 8: ಉತ್ತರ ಪ್ರದೇಶದ ಕಾನ್ಪುರದಲ್ಲಿ ಅತ್ಯಂತ ಅಚ್ಚರಿಯ ಘಟನೆಯೊಂದು ನಡೆದಿದೆ. ವ್ಯಕ್ತಿಯೊಬ್ಬ ತನ್ನ ಅತ್ತೆಯನ್ನೇ ವಿವಾಹವಾಗಿದ್ದಾನೆ. ಸದ್ಯ ಈ ವಿಲಕ್ಷಣ ಮದುವೆಯ ವಿಡಿಯೋ (Viral Video) ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ಅಳಿಯ ಮತ್ತು ಅತ್ತೆ ಪರಸ್ಪರ ಹಾರ ಬದಲಾಯಿಸಿಕೊಳ್ಳುವ ಫೋಟೋ ಎಲ್ಲೆಡೆ ಹರಿದಾಡುತ್ತಿದೆ. ಇವರಿಬ್ಬರು ನ್ಯಾಯಾಲಯದಲ್ಲಿ ನೋಂದಾಯಿತ ವಿವಾಹ (ಕೋರ್ಟ್ ಮ್ಯಾರೇಜ್) ಮಾಡಿಕೊಂಡಿದ್ದಾರೆ. ಈ ಘಟನೆಯು ಸ್ಥಳೀಯವಾಗಿ ಭಾರಿ ಸಂಚಲನ ಮೂಡಿಸಿದ್ದು, ಕೌಟುಂಬಿಕ ಸಂಬಂಧಗಳ ಪವಿತ್ರತೆಗೆ ಧಕ್ಕೆ ತಂದಿದೆ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ. ಈ ವಿಲಕ್ಷಣ ಕೌಟುಂಬಿಕ ಬಿಕ್ಕಟ್ಟು ಸದ್ಯ ಕಾನ್ಪುರದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಏನಿದು ಘಟನೆ?:

ಕಾನ್ಪುರದ ನಿವಾಸಿಯೊಬ್ಬರಿಗೆ ಕೆಲವು ವರ್ಷಗಳ ಹಿಂದೆ ವಿವಾಹವಾಗಿತ್ತು. ಮದುವೆಯಾದ ಆರಂಭದಲ್ಲಿ ದಂಪತಿಯ ನಡುವೆ ಎಲ್ಲವೂ ಸರಿಯಾಗಿಯೇ ಇತ್ತು. ಆದರೆ, ಕಾಲಕ್ರಮೇಣ ಪತ್ನಿಯ ತಾಯಿ ಈ ದಂಪತಿಗಳ ಮನೆಗೆ ಆಗಾಗ ಬಂದು ಉಳಿದುಕೊಳ್ಳಲು ಆರಂಭಿಸಿದ್ದರು. ಈ ಸಮಯದಲ್ಲಿ ಅಳಿಯ ಮತ್ತು ಅತ್ತೆಯ ನಡುವೆ ಪ್ರೇಮಾಂಕುರವಾಗಿದೆ ಎನ್ನಲಾಗಿದೆ.

ಇದನ್ನೂ ಓದಿ: Video: ಕೇಕ್ ತೆಗೆದುಕೊಂಡು ಅತ್ತೆ ಮನೆಗೆ ಹೋಗಿ ನನ್ನ ಹೆಂಡ್ತಿನಾ ವಾಪಸ್‌ ಕಳಿಸಿ ಎಂದ ಅಳಿಯ

ಅತ್ತೆಯೊಂದಿಗಿನ ಸಂಬಂಧ ದಿನದಿಂದ ದಿನಕ್ಕೆ ಆಳವಾಗುತ್ತಿದ್ದಂತೆ, ಆ ವ್ಯಕ್ತಿ ತನ್ನ ಪತ್ನಿಯಿಂದ ದೂರವಾಗಲು ನಿರ್ಧರಿಸಿದ್ದ. ಕೌಟುಂಬಿಕ ಕಲಹ ಹಾಗೂ ಭಿನ್ನಾಭಿಪ್ರಾಯಗಳ ನೆಪವೊಡ್ಡಿ ಆತ ನ್ಯಾಯಾಲಯದ ಮೂಲಕ ತನ್ನ ಪತ್ನಿಗೆ ಕಾನೂನುಬದ್ಧವಾಗಿ ವಿಚ್ಛೇದನ ನೀಡಿದ್ದ. ವಿಚ್ಛೇದನ ಪ್ರಕ್ರಿಯೆ ಪೂರ್ಣಗೊಂಡ ಬೆನ್ನಲ್ಲೇ, ಆ ವ್ಯಕ್ತಿ ತನ್ನ ಮಾಜಿ ಪತ್ನಿಯ ತಾಯಿಯನ್ನು ಅಂದರೆ ತನ್ನ ಅತ್ತೆಯನ್ನು ಮದುವೆಯಾಗಲು ನಿರ್ಧರಿಸಿದ್ದ. ಇಬ್ಬರೂ ಒಮ್ಮತದಿಂದ ನ್ಯಾಯಾಲಯದಲ್ಲಿ ವಿವಾಹವಾಗಿದ್ದಾರೆ ಎಂದು ವರದಿಗಳು ತಿಳಿಸಿವೆ. ಈ ವಿಚಿತ್ರವಾದ ಮದುವೆಗೆ ಕುಟುಂಬದ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಕಲಿಯುಗದ ‘ಶ್ರವಣ ಕುಮಾರ’; 90 ವರ್ಷದ ಅತ್ತೆಯನ್ನು ತಲೆ ಮೇಲೆ ಹೊತ್ತು 260 ಕಿ.ಮೀ ಪಾದಯಾತ್ರೆ ಮಾಡಿದ ಗಾಯಕಿ!

ಈ ಫೋಟೋ ಮತ್ತು ವಿಡಿಯೋ ಎಕ್ಸ್ (ಟ್ವಿಟರ್)ನಲ್ಲಿ ವೈರಲ್ ಆಗಿದ್ದು, “ತಾಯಿಯೇ ತನ್ನ ಸ್ವಂತ ಮಗಳ ಸಂಸಾರವನ್ನು ಹೇಗೆ ಮುರಿಯಬಹುದು? ಈಕೆ ತಾಯಿ ಎಂದು ಕರೆಸಿಕೊಳ್ಳಲು ಲಾಯಕ್ಕಿಲ್ಲ” ಎಂಬ ಕ್ಯಾಪ್ಷನ್ ನೀಡಿ ಹಂಚಿಕೊಳ್ಳಲಾಗಿದೆ. ಇವರಿಬ್ಬರ ಈ ವರ್ತನೆ ಕೌಟುಂಬಿಕ ಸಂಬಂಧಗಳ ವ್ಯಾಖ್ಯಾನಕ್ಕೇ ಮಸಿ ಬಳಿದಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತನ್ನ ಸ್ವಂತ ಮಗಳ ಸಂಸಾರವನ್ನು ಹಾಳುಗೆಡವಿ ಒಬ್ಬ ತಾಯಿಗೆ ಏನು ಸಿಗಲು ಸಾಧ್ಯ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. ಈ ಮಹಿಳೆಯು ಮಗಳು ಮತ್ತು ಗಂಡನ ಮನೆಯವರನ್ನು ಧಿಕ್ಕರಿಸಿ ತನ್ನ ಅಳಿಯನೊಂದಿಗೆ ಮನೆಯಿಂದ ಓಡಿಹೋಗಿ, ನಂತರ ಕೋರ್ಟ್‌ನಲ್ಲಿ ಮದುವೆಯಾಗಿದ್ದಾಳೆ ಎಂದು ವರದಿಯಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 7:37 pm, Mon, 8 June 26

Source link

ನಿತ್ಯ ಭವಿಷ್ಯ: ಯಾರಿಗೆ ಹೊಸ ಉದ್ಯೋಗದ ಶುಭ ಯೋಗ? ಸಾಲದ ಹಣ ವಾಪಸ್ ಬರದೇ ಆತಂಕಪಡುವವರಿಗೆ ಶುಭ ಸುದ್ದಿ – Kannada News

ಶಾಲಿವಾಹನ ಶಕವರ್ಷ 1949ರ ಉತ್ತರಾಯಣ, ಗ್ರೀಷ್ಮ ಋತುವಿನ ಅಧಿಕ ಜ್ಯೇಷ್ಠ ಮಾಸದ ಕೃಷ್ಣ ಪಕ್ಷದ ನವಮೀ ತಿಥಿಯ ಮಂಗಳವಾರದಂದು ಬಂಧನದ ಅನುಭವ, ಹೊಸ ಉದ್ಯೋಗ, ಶಿಕ್ಷೆಯ ಭಯ, ಪ್ರೀತಿಯಲ್ಲಿ ವಿವಾದ, ಹಿಂಪಡೆವ ಹೂಡಿಕೆ ಇವೆಲ್ಲ ಈ‌ ದಿನದ ಭವಿಷ್ಯ.

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ಉತ್ತರಾಯಣ, ಋತು : ಗ್ರೀಷ್ಮ, ಚಾಂದ್ರಮಾಸ : ಅಧಿಕ ಜ್ಯೇಷ್ಠ, ಸೌರ ಮಾಸ : ವೃಷಭ, ಮಹಾನಕ್ಷತ್ರ : ಮೃಗಶಿರಾ, ವಾರ : ಮಂಗಳ, ಪಕ್ಷ : ಕೃಷ್ಣ, ತಿಥಿ : ನವಮೀ, ನಿತ್ಯನಕ್ಷತ್ರ : ಉತ್ತರಾಭಾದ್ರ, ಯೋಗ : ವಿಷ್ಕಂಭ, ಕರಣ : ಗರಜ, ಸೂರ್ಯೋದಯ – 05 – 56 am, ಸೂರ್ಯಾಸ್ತ – 06 – 50 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 15:37 – 17:14, ಯಮಗಂಡ ಕಾಲ 09:10 – 10:47, ಗುಳಿಕ ಕಾಲ 12:24 – 14:01

ಮೇಷ ರಾಶಿ :

ಹಣಕಾಸಿನ ಅಡಚಣೆಗಳಿಂದ ಹೊರಬರಲು ಸಾಧ್ಯವಿದೆ. ವ್ಯಾಪಾರಿಗಳಿಗೆ ಇದು ಶುಭಕರವಾದ ಸಮಯವಾಗಿದ್ದು, ಹೊಸ ಒಪ್ಪಂದಗಳು ಲಾಭ ತರಬಹುದು. ನಕಾರಾತ್ಮಕ ಸುದ್ದಿಗಳು ಬರುವ ಬಗ್ಗೆ ಗಮನ ಹೆಚ್ಚು. ಉದ್ಯೋಗದಲ್ಲಿ ನಿಮ್ಮ ಪ್ರತಿಭೆಯನ್ನು ತೋರಿಸಲು ಹೆಚ್ಚಿನ ಶ್ರಮ ಬೇಕಾಗುತ್ತದೆ. ಹೇಳಿದ ಸಮಯಕ್ಕೆ ಕೆಲಸವನ್ನು ಮಾಡಿಕೊಡಲಾಗುವುದು. ಹಿರಿಯರ ಸೇವೆಯಲ್ಲಿ ನೀವು ಇರುವಿರಿ.

ವೃಷಭ ರಾಶಿ :

ವೈಯಕ್ತಿಕ ಜೀವನದಲ್ಲಿ ಹಾಗೂ ಉದ್ಯೋಗ ಕ್ಷೇತ್ರದಲ್ಲಿ ಕೆಲವು ಅನಿರೀಕ್ಷಿತ ಸವಾಲುಗಳು ಎದುರಾಗಲಿವೆ. ದಿನದ ಪ್ರಾರಂಭದಲ್ಲಿ ಸಂಕಷ್ಟಗಳು ಹೆಚ್ಚಿದ್ದರೂ ನಿವಾರಣೆಯಾಗುತ್ತವೆ. ವ್ಯಾಪಾರದಲ್ಲಿ ತಾತ್ಕಾಲಿಕ ಏರಿಳಿತಗಳು ಕಂಡುಬಂದರೂ, ದೈರ್ಯದಿಂದ ಮುಂದುವರಿಯುವುದು ಮುಖ್ಯ. ಇಂದು ಆಸ್ತಿಯ ವಿವಾದವು ಬಗೆಹರಿಯಲಿದೆ. ಯಾರಾದರೂ ನಿಮ್ಮನ್ನು ಕಂಡು ಅವಮಾನಿಸುವರು. ಉತ್ತರಿಸಿ ಇನ್ನಷ್ಟು ಹತಾಶರಾಗಬೇಡಿ.

ಮಿಥುನ ರಾಶಿ :

ಅನಿವಾರ್ಯ ಕಾರಣಗಳಿಂದ ಖರ್ಚಿಗೆ ನಾನಾ ಮಾರ್ಗಗಳು ತೆರದುಕೊಳ್ಳಬಹುದು. ಕೆಲಸದ ಒತ್ತಡ ಹೆಚ್ಚಿದರೂ, ಎಲ್ಲ ಕೆಲಸಗಳು ಅಡೆತಡೆಯಿಲ್ಲದೇ ಪೂರ್ಣಗೊಳ್ಳುತ್ತವೆ. ಶೀತಬಾಧೆಯಿಂದ ಕೂಡಲೇ ಆರಾಮ ಸಿಗದು. ಉದ್ಯೋಗದಲ್ಲಿ ಬಡ್ತಿ ಅಥವಾ ಹೊಸ ಅವಕಾಶಗಳ ಕುರಿತು ವಿಷಯಗಳು ಕೇಳಿಬರಬಹುದು. ನಿಮ್ಮವರಿಂದ ನಿಮಗೆ ಕಷ್ಟಗಳು ಬರಬಹುದು ಎಂಬ ನಿರೀಕ್ಷೆಯಲ್ಲಿ ಇರುವಿರಿ. ಆಸ್ತಿ ಖರೀದಿಯ ಬಗ್ಗೆ ಚಿಂತನೆ ಇರುವುದು.

ಕರ್ಕಾಟಕ ರಾಶಿ :

ಆದಾಯದಲ್ಲಿ ಏರಿಳಿತ ಕಾಣಬಹುದು ಮತ್ತು ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ಶುಭವಾರ್ತೆ ಕೇಳುವ ಸಾಧ್ಯತೆ ಇದೆ. ಅದು ನಿಮ್ಮ ಮನಸ್ಸಿಗೆ ಖುಷಿ ನೀಡಲಿದೆ. ಹೊಸತನಕ್ಕೆ ತಹತಹಿಸುವಿರಿ. ಉದ್ಯೋಗದಲ್ಲಿ ಬದಲಿ ಅಥವಾ ಸ್ಥಾನೋನ್ನತಿಗೆ ಸಂಭಾವ್ಯತೆ ಇರುವುದು. ವೈವಾಹಿಕ ಜೀವನದಲ್ಲಿ ಪ್ರೀತಿಯ ಬಾಂಧವ್ಯ ಹೆಚ್ಚಾಗುತ್ತದೆ. ಮನೆಯ ಸ್ಥಳವನ್ನು ಬದಲಾಯಿಸುವ ಅನಿವಾರ್ಯತೆ ಬಂದೀತು. ಅನ್ಯಾನ್ಯ ಮಾರ್ಗಗಳಿಂದ ಹಣವು ಬರಬಹುದು. ‌ಕಳೆದಕೊಂಡ ವಸ್ತುವಿಗೆ ತೀವ್ರ ಹುಡುಕಾಟ ಇರುವುದು.‌

ಸಿಂಹ ರಾಶಿ :

ಮಾತು ಕಡಿಮೆ, ಕಾರ್ಯ ಹೆಚ್ಚು ಮಾಡುವತ್ತ ಗಮನ ಹರಿಸುವುದು ಉತ್ತಮ. ನಿರ್ಧರಿಸಿದ ಕೆಲಸಗಳು ಯಶಸ್ವಿಯಾಗಿ ಪೂರ್ಣಗೊಳ್ಳಲಿವೆ. ಮಹಿಳೆಯರು ತಮ್ಮನ್ನು ಅತಿಮಾನುಷ ರೀತಿಯಲ್ಲಿ ಅಂದುಕೊಳ್ಳಬಹುದು. ಬೇರೆಯವರು ನೀಡುವ ಒತ್ತಡದಿಂದ ದೂರವಿರಿ. ಉದ್ಯೋಗವನ್ನು ಬಿಡುವುದಾಗಿ ಬೆದರಿಸಿಯಾರು. ಮನೆಯ ಹಿರಿಯರ ಮಾರ್ಗದರ್ಶನದಲ್ಲಿ ಕುಟುಂಬ ವ್ಯವಹಾರವು ಮತ್ತೆ ಬೆಳೆಯುತ್ತದೆ. ನಿಮ್ಮ ಬುದ್ಧಿಯನ್ನು ಪ್ರದರ್ಶಿಸಬೇಡಿ.

ಕನ್ಯಾ ರಾಶಿ :

ನಿಮ್ಮ ಮಕ್ಕಳ ಆರೋಗ್ಯದ ವಿಷಯದಲ್ಲಿ ಗಮನವಿರಲಿ. ವಿದೇಶದ ವ್ಯಕ್ತಿಗಳ ಸ್ನೇಹವಾಗಲಿದೆ. ಹಣಕಾಸಿನ ಲಾಭದ ಸೂಚನೆ ಇದೆ, ಆದರೆ ಖರ್ಚುಗಳ ಮೇಲೂ ನಿಯಂತ್ರಣ ಅಗತ್ಯ. ಉದ್ಯೋಗದಲ್ಲಿ ಕೆಲಸದ ಒತ್ತಡ ಜಾಸ್ತಿಯಾಗಬಹುದು. ನಿಮ್ಮ ವೈವಾಹಿಕ ಜೀವನದಲ್ಲಿ ಶಾಂತಿ ಮತ್ತು ಸಂತೋಷ ಇರುತ್ತದೆ. ಬೇಸರದ ನಿವಾರಣೆಗೆ ಒಳ್ಳೆಯ ಕೆಲಸದ ಕಡೆಗೆ ಗಮನಹರಿಸುವಿರಿ. ಕಾನೂನು ಪ್ರಕರಣದಲ್ಲಿ ನೀವು ಗೆಲ್ಲುವ ಎಲ್ಲ ಸಾಧ್ಯತೆಗಳಿವೆ.

ತುಲಾ ರಾಶಿ :

ನೀವು ನಿಮ್ಮ ಕೆಲಸದ ಮೇಲೆ ಮಾತ್ರ ಗಮನಹರಿಸಿದರೆ ಉತ್ತಮ. ನಿಮ್ಮ ಯೋಜನೆಗಳು ಯಶಸ್ವಿಯಾಗಿ ಮುಂದುವರೆಯುವ ಸಾಧ್ಯತೆ ಇದೆ. ಉದ್ಯೋಗದಲ್ಲಿ ಕೆಲವೊಂದು ತೊಂದರೆಗಳು ಎದುರಾಗಬಹುದು. ಆದರೆ ನೀವು ಅದರಲ್ಲಿಂದ ಹೊರಬಂದು ಗೆಲುವು ಸಾಧಿಸುವಿರಿ. ಯಾವುದೇ ಕಾರಣಕ್ಕೂ ವಿಷಾದಕ್ಕೆ ಆಸ್ಪದ ಬೇಡ. ಸಕಾರಾತ್ಮಕ ಆಲೋಚನೆ ಇರಲಿ. ವಿರಳ ಲಾಭದ ಅವಕಾಶಗಳ ಬಗ್ಗೆಯೂ ನೀವು ಗಮನ ಹರಿಸಬೇಕು. ಇದು ಜಾಣತನವೂ ಹೌದು.

ವೃಶ್ಚಿಕ ರಾಶಿ :

ಇಲ್ಲದಿದ್ದರೆ ಚಿತ್ರಣದ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಅವಿವಾಹಿತರಿಗೆ ಮಾಂಗಲ್ಯ ಭಾಗ್ಯ ಕೂಡಿಬರಲಿದೆ. ಸ್ಪರ್ಧಾತ್ಮಕ ಕ್ರೀಡೆಗಳಲ್ಲಿ ಜಯಗಳಿಸುವ ಸಾಧ್ಯತೆ ಇದೆ. ನಿಮ್ಮ ಸಹಾಯದಿಂದ ಸದುಪಯೋಗ ಪಡೆದು ನಿಮ್ಮನ್ನು ಬಿಟ್ಟುಹೋಗಿದವರು ಕಳಪೆ ನಡೆ ತೋರುತ್ತಾರೆ. ಕಾರ್ಯಕ್ಷೇತ್ರದಲ್ಲಿ ನೀವು ಉತ್ತಮ ಪ್ರದರ್ಶನ ನೀಡುವಿರಿ. ನೀವು ಯಾರಿಗಾದರೂ ಹಣವನ್ನು ಸಾಲವಾಗಿ ನೀಡಿದ್ದರೆ, ಅದನ್ನು ಮರಳಿ ಪಡೆಯುವ ಸಾಧ್ಯತೆ ತುಂಬಾ ಕಡಿಮೆ.

ಧನು ರಾಶಿ :

ಅನಿರೀಕ್ಷಿತ ರೂಪದಲ್ಲಿ ವೈವಾಹಿಕ ಸಂಬಂಧಗಳು ಕೂಡಿ ಬರಲಿದೆ. ಆರ್ಥಿಕವಾಗಿ ಲಾಭದ ಸಾಧ್ಯತೆ ಇದೆ, ಆದರೆ ಸಂಯಮ ಅಗತ್ಯ. ಅಲಕ್ಷ್ಯದಿಂದ ನಿಗದಿತ ಕಾರ್ಯಗಳಲ್ಲಿ ವಿಳಂಬ ಸಂಭವಿಸಬಹುದು. ಭಯ ಅಥವಾ ಆತಂಕ ಕಡಿಮೆಯಾಗುತ್ತದೆ, ಶಾಂತಿಗೆ ದಾರಿ ತೆರೆಯುತ್ತದೆ. ವಾಹನ ಚಾಲನೆಗೆ ಹೆಚ್ಚಿನ ಎಚ್ಚರತೆ ಅಗತ್ಯ. ವಿದೇಶಕ್ಕೆ ಬೇಕಾದ ತಯಾರಿಗಳನ್ನು ಮಾಡುವಿರಿ. ಸ್ನೇಹಿತನ ಮನೆಯಲ್ಲಿ ಇಂದು ಹಬ್ಬದ ವಾತಾವರಣವು ಇರಲಿದೆ.

ಮಕರ ರಾಶಿ :

ಸಾರ್ವತ್ರಿಕವಾಗಿ ನಿಮ್ಮ ಸಂಗಾತಿಯ ಪ್ರೀತಿಯನ್ನು ಅನುಭವಿಸುತ್ತೀರಿ.‌ ಕುಟುಂಬದಲ್ಲಿ ಕೆಲವು ಸಮಸ್ಯೆಗಳಿರುತ್ತವೆ. ಸಾಮಾಜಿಕ ಜೀವನ ಚಟುವಟಿಕೆಯಿಂದ ತುಂಬಿರುತ್ತದೆ. ಸ್ನೇಹಿತರೊಂದಿಗೆ ಸಮಯ ಕಳೆಯುವುದು ಸಂತೋಷ ನೀಡುತ್ತದೆ ಮತ್ತು ಹೊಸ ಸಂಪರ್ಕಗಳು ಉದಯಿಸುತ್ತವೆ. ಕೆಲಸದಲ್ಲಿ ಗಮನ ಕಡಿಮೆಯಾಗಬಹುದು. ಆಸ್ತಿಯ ಭಾಗವನ್ನು ಮಾರಾಟ ಮಾಡಬೇಕಾದೀತು. ಎಷ್ಟೋ ಕೆಲಸಗಳು ನಿಮ್ಮ ಬಳಿಯೇ ಬಾಕಿ ಇರುವುದು.

ಕುಂಭ ರಾಶಿ :

ಕಾನೂನಿನಲ್ಲಿ ನಿಮಗೆಬಜಯ ಸಿಗದೆಂಬ ಬೇಸರ. ತಂದೆಗೆ ಸಮಾನವಾದವರ ಬಳಿ ಹಿತೋಪದೇಶವನ್ನು ಆಲಿಸಿ. ಸೌಮ್ಯವಾಗಿ ಕಾರ್ಯನಿರ್ವಹಿಸಬೇಕು. ಹಳೆಯ ವಿಚಾರಗಳು ಭುಗಿಲೇಳುವ ಸಾಧ್ಯತೆ ಇದೆ. ಭಾವನೆಗಳ ಮೇಲೆ ನಿಯಂತ್ರಣ ಇರಿಸಿಕೊಳ್ಳುವುದು ಅಗತ್ಯ. ತೊಂದರೆಯಾಗುವುದು ಗೊತ್ತಿದ್ದರೂ ಬೇಕೆಂದೇ ಸಿಕ್ಕಿಹಾಕಿಕೊಳ್ಳುವಿರಿ. ವಿಷಯದಲ್ಲಿ ನೀವು ಗೊಂದಲವಿರಬಹುದು. ಮಕ್ಕಳ ವಿದ್ಯಾಭ್ಯಾಸಕ್ಕೆ ಪೂರಕವಾದ ವ್ಯವಸ್ಥೆಯನ್ನು ಮಾಡುವಿರಿ.

ಇದನ್ನೂ ಓದಿ: ವಾರ ಭವಿಷ್ಯ: ಗ್ರಹಗಳ ಉಚ್ಚಸ್ಥಾನ ಸಂಚಾರದಿಂದ ಈ 4 ರಾಶಿಯವರಿಗೆ ಭರ್ಜರಿ ರಾಜಯೋಗ; ನಿಮಗಿದೆಯೇ ಧನಲಾಭದ ಲಕ್?

ಮೀನ ರಾಶಿ :

ನೀವು ನಿಮ್ಮ ಕೆಲಸದ ಮೇಲೆ ಮಾತ್ರ ಗಮನಹರಿಸಿದರೆ ಉತ್ತಮ. ಅಪ್ರಬುದ್ಧರ ಎದುರು ನಿಮ್ಮ ಮನೆಯ ವ್ಯವಹಾರಗಳನ್ನು ಹೇಳಬೇಡಿ. ಉದ್ಯೋಗದಲ್ಲಿ ಪ್ರಗತಿಯ ಸೂಚನೆಗಳಿವೆ. ಆದರೆ ಸಹನೆ ಮತ್ತು ಅಂತರಾಳದ ನಿರ್ವಹಣೆ ಅಗತ್ಯ. ಕುಟುಂಬದೊಂದಿಗೆ ಕಳೆಯುವ ಸಮಯದಿಂದ ಮಾನಸಿಕ ಶಾಂತಿ ಲಭಿಸುತ್ತದೆ. ನಿಮ್ಮ ಆರ್ಥಿಕ ಪರಿಸ್ಥಿತಿಯು ಮೊದಲಿಗಿಂತ ಉತ್ತಮವಾಗಿದ್ದು, ಹೂಡಿಕೆಯ ಕಡೆ ಗಮನವಿರುವುದು. ನಿಮ್ಮ ಪ್ರಮುಖ ಕಾರ್ಯಗಳನ್ನು ಸಮಯಕ್ಕೆ ಮುಗಿಸಿಬಿಡಿ, ಕಾಯುವುದು ಬೇಡ.

– ಲೋಹಿತ್ ಹೆಬ್ಬಾರ್-8762924271 (what’s app only)

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಐಡಿ ಇಲ್ಲದಿದ್ರೆ ಪ್ರವೇಶವಿಲ್ಲ: ಅಪ್ರಾಪ್ತರ ಮದ್ಯಪಾನ ತಡೆಗೆ ಹೊಸ ರೂಲ್ಸ್ ಜಾರಿಗೆ ತಂದ ಗೃಹ ಸಚಿವ ಖರ್ಗೆ – Kannada News

ಬೆಂಗಳೂರು, (ಜೂನ್ 08): ಹದಿಹರೆಯದವರಲ್ಲಿ ಹೆಚ್ಚುತ್ತಿರುವ ಮದ್ಯಪಾನ ಮತ್ತು ಮಾದಕ ದ್ರವ್ಯಗಳ ಅತಿಯಾದ ಬಳಕೆಯು ಸರ್ಕಾರಕ್ಕೆ ದೊಡ್ಡ ಆತಂಕವನ್ನುಂಟುಮಾಡಿದೆ. ಅಲ್ಲದೇ ಚಿಕ್ಕವಯಸ್ಸಿನಲ್ಲೇ ದುಶ್ಚಟಗಳಿಗೆ ದಾಸರಾಗಿ ಆರೋಗ್ಯ ಹಾಳು ಮಾಡುಕೊಳ್ಳುತ್ತಿದ್ದಾರೆ. ಹೀಗಾಗಿ ಇದನ್ನು ತಡೆಗಟ್ಟಲು ನೂತನ ಗೃಹ ಸಚಿವ ಪ್ರಿಯಾಂಕ್ ಖರ್ಗೆ (Priyank Kharge)  ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ಈ ಸಂಬಂಧ ಬೆಂಗಳೂರು ನಗರದ ಪಬ್‌ಗಳು, ಬಾರ್‌ಗಳು ಮತ್ತು ಮದ್ಯ ಸರಬರಾಜು ಮಾಡುವ ಎಲ್ಲಾ ವಾಣಿಜ್ಯ ಸಂಸ್ಥೆಗಳ ಮೇಲೆ ಕಠಿಣ ನಿಗಾ ವಹಿಸಲು ಪೊಲೀಸ್ ಇಲಾಖೆಗೆ ಖಡಕ್ ಸೂಚನೆ ನೀಡಿದ್ದಾರೆ.

ಅಪ್ರಾಪ್ತ ವಯಸ್ಕರ ಪ್ರವೇಶವನ್ನು ಕಟ್ಟುನಿಟ್ಟಾಗಿ ತಡೆಯಲು ಮತ್ತು ಅವರಿಗೆ ಮದ್ಯ ಸರಬರಾಜು ಮಾಡುವುದನ್ನು ನಿಷೇಧಿಸಲು ಬೆಂಗಳೂರಿನ ಎಲ್ಲಾ ಪಬ್‌ಗಳು, ಬ್ರೆವರೀಸ್‌, ಬಾರ್‌ಗಳು, ಕ್ಲಬ್‌ಗಳು, ಲಾಂಜ್‌ಗಳು, ರೆಸ್ಟೋರೆಂಟ್‌ಗಳು ಹಾಗೂ ಮದ್ಯ ಸರಬರಾಜು ಮಾಡುವ ಇತರ ಸಂಸ್ಥೆಗಳಿಗೆ ನೋಟಿಸ್ ಜಾರಿ ಮಾಡುವಂತೆ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಸೇಂಟ್ ಜಾನ್ಸ್ ಮೆಡಿಕಲ್ ಕಾಲೇಜು, ಕ್ರೈಸ್ಟ್ ವಿಶ್ವವಿದ್ಯಾಲಯ ಮತ್ತು ಮಣಿಪಾಲದ ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ಸಂಶೋಧಕರು ನಡೆಸಿದ ಅಧ್ಯಯನದಿಂದಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ವಯಸ್ಸಿನ ಪರಿಶೀಲನೆ ಕಡ್ಡಾಯ

ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿಕೊಂಡಿರುವ ಪ್ರಿಯಾಂಕ್ ಖರ್ಗೆ, ಎಲ್ಲ ಪಬ್‌ಗಳು, ಬ್ರೂವರೀಸ್, ಬಾರ್‌, ಕ್ಲಬ್‌ಗಳು, ಲಾಂಜ್, ರೆಸ್ಟೋರೆಂಟ್ ಮತ್ತು ಮದ್ಯ ಮಾರಾಟ ಮಾಡುವ ಸಂಸ್ಥೆಗಳಿಗೆ ಅಪ್ರಾಪ್ತ ವಯಸ್ಕರ ಪ್ರವೇಶ ಮತ್ತು ಅಪ್ರಾಪ್ತ ವಯಸ್ಕರ ಮದ್ಯಪಾನವನ್ನು ಕಟ್ಟುನಿಟ್ಟಾಗಿ ತಡೆಗಟ್ಟಲು ನೋಟಿಸ್ ನೀಡುವಂತೆ ನಗರ ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ 4,093 ವಿದ್ಯಾರ್ಥಿಗಳನ್ನು ಒಳಗೊಂಡ ಇತ್ತೀಚಿನ ಅಧ್ಯಯನವು ಗಂಭೀರ ಕಳವಳಗಳನ್ನು ಹುಟ್ಟುಹಾಕಿದೆ. ಪ್ರತಿ ಮೂವರು ಹದಿಹರೆಯದವರಲ್ಲಿ ಒಬ್ಬರು ಮದ್ಯ ಅಥವಾ ತಂಬಾಕು ಸೇವನೆಯಿಂದಾಗಿ ಆರೋಗ್ಯ ಸಮಸ್ಯೆಗಳ ಅಪಾಯದಲ್ಲಿದ್ದಾರೆ. ಸಮೀಕ್ಷೆಯಲ್ಲಿ ಭಾಗವಹಿಸಿದ 33% ಜನರು ಮದ್ಯಪಾನಕ್ಕೆ ದಾಸರಾಗಿದ್ದಾರೆ. ಸುಮಾರು 18% ಜನರು ತಂಬಾಕು ವ್ಯಸನಕ್ಕೆ ಒಳಗಾಗಿದ್ದಾರೆ. ಮದ್ಯಪಾನವನ್ನು ಪ್ರಾರಂಭಿಸುವ ಸರಾಸರಿ ವಯಸ್ಸು 17 ವರ್ಷ ಎಂದು ವರದಿಯಾಗಿದೆ. ಕೆಲವು ಪ್ರಕರಣಗಳಲ್ಲಿ 8 ವರ್ಷಕ್ಕೇ ಮಕ್ಕಳು ಮದ್ಯಪಾನ ಆರಂಭಿಸಿರುವುದೂ ದಾಖಲಾಗಿದೆ. ಇದು ಕೇವಲ ಪರವಾನಗಿ ಸಮಸ್ಯೆಯಲ್ಲ. ಇದು ಯುವ ಸುರಕ್ಷತೆ ಮತ್ತು ಸಾರ್ವಜನಿಕ-ಆರೋಗ್ಯದ ವಿಚಾರ. ಮದ್ಯ ಮಾರಾಟ ಮಾಡುವ ಎಲ್ಲ ಸಂಸ್ಥೆಗಳು ಗ್ರಾಹಕರ ಪ್ರವೇಶ ಮತ್ತು ಮದ್ಯ ಪೂರೈಕೆಯ ಮೊದಲು ಕಟ್ಟುನಿಟ್ಟಾದ ವಯಸ್ಸಿನ ಪರಿಶೀಲನಾ ನಿಯಮಗಳನ್ನು ಜಾರಿಗೆ ತರಬೇಕು ಎಂದು ಸೂಚಿಸಿದ್ದಾರೆ.

ಪ್ರಮುಖ ನಿರ್ದೇಶನಗಳು

  •  ಮಾನ್ಯವಾದ ಗುರುತಿನ ಚೀಟಿ ಇಲ್ಲದಿದ್ದರೆ, ಪ್ರವೇಶವಿಲ್ಲ
  •  ಸರ್ಕಾರ ನೀಡಿದ ವಯಸ್ಸಿನ ಪುರಾವೆ ಕಡ್ಡಾಯ
  •  ಅಪ್ರಾಪ್ತ ವಯಸ್ಕರಿಗೆ ಸೇವೆ ಸಲ್ಲಿಸುವ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ
  • ಮಾಲೀಕರು, ವ್ಯವಸ್ಥಾಪಕರು ಮತ್ತು ಪರವಾನಗಿ ಹೊಂದಿರುವವರೇ ಹೊಣೆಗಾರರು
  • ಪ್ರವೇಶ ದ್ವಾರದಲ್ಲಿರುವ ಸಿಸಿಟಿವಿ ಕಾರ್ಯನಿರ್ವಹಿಸಬೇಕು ಮತ್ತು ದೃಶ್ಯಾವಳಿಗಳನ್ನು ಸಂರಕ್ಷಿಸಬೇಕು
  •  ಸಂಸ್ಥೆಗಳು, ಆರ್‌ಡಬ್ಲ್ಯೂಎಗಳು ಮತ್ತು ನಾಗರಿಕ ಗುಂಪುಗಳೊಂದಿಗೆ ಪೊಲೀಸ್ ಸಮನ್ವಯ
  •  ವಾಣಿಜ್ಯ ಲಾಭಕ್ಕಾಗಿ ನಮ್ಮ ಮಕ್ಕಳ ಸುರಕ್ಷತೆ ಮತ್ತು ಭವಿಷ್ಯದ ನಷ್ಟವನ್ನು ಭರಿಸಲು ಸಾಧ್ಯವಿಲ್ಲ.
  • ಕರ್ನಾಟಕವು ಅದಕ್ಕೆ ಅವಕಾಶ ಕೊಡುವ ಸಂಸ್ಥೆಗಳ ವಿರುದ್ಧ ಶೂನ್ಯ ಸಹಿಷ್ಣುತೆಯ ವಿಧಾನವನ್ನು ಅನುಸರಿಸುತ್ತದೆ.
  • ಗುರುತಿನ ಚೀಟಿ ಇಲ್ಲದಿದ್ದರೆ, ಪ್ರವೇಶವಿಲ್ಲ”. ಅಪ್ರಾಪ್ತ ವಯಸ್ಕರಿಗೆ ಮದ್ಯ ಮಾರಾಟ ಅಪರಾಧ.

ಹೀಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಕಟ್ಟುನಿಟ್ಟಿನಲ ನಿರ್ದೇಶನಗಳ ನೀಡುವ ಮೂಲಕ ಅಪ್ರಾಪ್ತರ ಮದ್ಯದ ಚಟದಿಂದ ದೂರ ಮಾಡುವ ಪ್ರಯತ್ನ ನಡೆಸಿದ್ದಾರೆ.

Source link

1.8 ಕೋಟಿ ರೂಪಾಯಿಗೆ ಕುಸಿಯಿತಾ ಅಕ್ಷಯ್ ಕುಮಾರ್ ಸಂಭಾವನೆ? ಇಲ್ಲಿದೆ ಟ್ವಿಸ್ಟ್

ಬಾಲಿವುಡ್‌ನ ಖ್ಯಾತ ನಟ ಅಕ್ಷಯ್ ಕುಮಾರ್ ಅವರ ಬಹುನಿರೀಕ್ಷಿತ ಕಾಮಿಡಿ ಎಂಟರ್‌ಟೈನರ್ ಸಿನಿಮಾ ‘ವೆಲ್ಕಮ್ ಟು ದಿ ಜಂಗಲ್’ (Welcome To The Jungle) ಬಗ್ಗೆ ಒಂದಿಷ್ಟು ಬಿಗ್ ಅಪ್‌ಡೇಟ್ ಹೊರಬಿದ್ದಿದೆ. ಈ ಚಿತ್ರಕ್ಕಾಗಿ ಅಕ್ಷಯ್ ಕುಮಾರ್ ಕೇವಲ 1.8 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎಂಬ ಹೊಸ ಸುದ್ದಿ ಈಗ ಸಿನಿವಲಯದಲ್ಲಿ ಭಾರಿ ಸಂಚಲನ ಮೂಡಿಸಿದೆ. ಸಾಮಾನ್ಯವಾಗಿ ಒಂದು ಚಿತ್ರಕ್ಕೆ ಬಹುಕೋಟಿ ರೂಪಾಯಿ ಬೇಡಿಕೆ ಇಡುವ ಅಕ್ಷಯ್ ಕುಮಾರ್ (Akshay Kumar) ಅವರು ಈ ಚಿತ್ರಕ್ಕೆ ಇಷ್ಟು ಕಡಿಮೆ ಮೊತ್ತ ಪಡೆದಿರುವುದರ ಹಿಂದೆ ದೊಡ್ಡದೊಂದು ಪ್ಲ್ಯಾನ್ ಅಡಗಿದೆ.

ವರದಿಗಳ ಪ್ರಕಾರ, ಅಕ್ಷಯ್ ಕುಮಾರ್ ಅವರು ‘ವೆಲ್ಕಮ್ ಟು ದಿ ಜಂಗಲ್’ ಚಿತ್ರಕ್ಕಾಗಿ ದೊಡ್ಡ ಮೊತ್ತದ ಸಂಭಾವನೆ ಪಡೆಯುವ ಬದಲು ಪ್ರಾಫಿಟ್ ಶೇರಿಂಗ್, ಅಂದರೆ ಚಿತ್ರದ ಲಾಭದಲ್ಲಿ ಪಾಲು ಪಡೆಯುವ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಚಿತ್ರದ ಕಥೆ ಹಾಗೂ ಮಾರುಕಟ್ಟೆಯ ಮೇಲಿರುವ ನಂಬಿಕೆಯಿಂದಾಗಿ ಅವರು ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ.

ಈ ಒಪ್ಪಂದದ ಪ್ರಕಾರ, ಸಿನಿಮಾ ಬಿಡುಗಡೆಯಾದ ನಂತರ ಗಳಿಸುವ ಒಟ್ಟು ಆದಾಯದಲ್ಲಿ ಬರೋಬ್ಬರಿ ಶೇ.72ರಷ್ಟು ದೊಡ್ಡ ಪಾಲು ಅಕ್ಷಯ್ ಕುಮಾರ್ ಅವರ ಜೇಬು ಸೇರಲಿದೆ. ಉಳಿದ ಶೇ.28ರಷ್ಟು ಪಾಲು ಮಾತ್ರ ನಿರ್ಮಾಪಕರ ಬಳಿ ಉಳಿಯಲಿದೆ. ಹೀಗಾಗಿ, ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದರೆ ಅಕ್ಷಯ್ ಕುಮಾರ್ ಅವರಿಗೆ ನೂರಾರು ಕೋಟಿ ರೂಪಾಯಿ ಲಾಭ ಸಿಗಲಿದೆ.

‘ಫ್ರೀ ಪ್ರೆಸ್ ಜರ್ನಲ್’ ವರದಿಯ ಪ್ರಕಾರ, ‘ವೆಲ್ಕಮ್ ಟು ದಿ ಜಂಗಲ್’ ಸಿನಿಮಾ ಥಿಯೇಟರ್‌ಗೆ ಬರುವ ಮುನ್ನವೇ ತನ್ನ ಬಂಡವಾಳದ ಬಹುದೊಡ್ಡ ಭಾಗವನ್ನು ಸುರಕ್ಷಿತವಾಗಿ ರಿಕವರಿ ಮಾಡಿಕೊಂಡಿದೆ. ಚಿತ್ರದ ಒಟಿಟಿ, ಸ್ಯಾಟಲೈಟ್ ಮತ್ತು ಆಡಿಯೋ ಹಕ್ಕುಗಳ ಮಾರಾಟದಿಂದಲೇ ನಿರ್ಮಾಪಕರು ಈಗಾಗಲೇ ಸುಮಾರು 120 ಕೋಟಿ ರೂಪಾಯಿಗಳನ್ನು ಗಳಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: 7.1 ಕೋಟಿ ರೂಪಾಯಿಗೆ 2 ಫ್ಲಾಟ್‌ ಮಾರಾಟ ಮಾಡಿದ ನಟ ಅಕ್ಷಯ್ ಕುಮಾರ್

ಬಾಲಿವುಡ್‌ನಲ್ಲಿ ಶಾರುಖ್ ಖಾನ್, ಸಲ್ಮಾನ್ ಖಾನ್ ಮತ್ತು ಆಮಿರ್ ಖಾನ್ ಅವರಂತಹ ಸೂಪರ್‌ಸ್ಟಾರ್‌ಗಳು ಹೆಚ್ಚಾಗಿ ಇಂತಹ ಪ್ರಾಫಿಟ್ ಶೇರಿಂಗ್ ಮಾದರಿಯನ್ನೇ ಅನುಸರಿಸುತ್ತಾರೆ. ಇತ್ತೀಚೆಗೆ ‘ಧುರಂಧರ್’ ಚಿತ್ರಕ್ಕಾಗಿ ನಟ ರಣವೀರ್ ಸಿಂಗ್ ಕೂಡ ಇದೇ ಹಾದಿ ಹಿಡಿದಿದ್ದರು. ಈಗ ಅಕ್ಷಯ್ ಕುಮಾರ್ ಕೂಡ ಅದೇ ಮಾದರಿಯನ್ನು ಅಳವಡಿಸಿಕೊಂಡಿದ್ದು, ಈ ಮಲ್ಟಿಸ್ಟಾರರ್ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಎಷ್ಟರ ಮಟ್ಟಿಗೆ ಕಮಾಲ್ ಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ವಾರ ಭವಿಷ್ಯ: ಗ್ರಹಗಳ ಉಚ್ಚಸ್ಥಾನ ಸಂಚಾರದಿಂದ ಈ 4 ರಾಶಿಯವರಿಗೆ ಭರ್ಜರಿ ರಾಜಯೋಗ; ನಿಮಗಿದೆಯೇ ಧನಲಾಭದ ಲಕ್? – Kannada News

2026ರ ಜೂನ್ 07ರಿಂದ ಜೂನ್ 13ರವರೆಗೆ ಎರಡನೇ ವಾರವಾಗಿದ್ದು ಗ್ರಹಗಳ ಉಚ್ಚಸ್ಥಾನ ಸ್ವಕ್ಷೇತ್ರ ಸಂಚಾರದ ಫಲವಾಗಿ ಶುಭ ಫಲಗಳು ನಿಮಗೆ ಲಭ್ಯವಾಗಲಿ.

ಮೇಷ ರಾಶಿ:

ಸ್ವಕ್ಷೇತ್ರದಲ್ಲಿರುವ ಲಗ್ನಾಧಿಪತಿ ಮಂಗಳ ನಿಮಗೆ ಅದ್ಭುತ ಶಕ್ತಿ ನೀಡಲಿದ್ದಾನೆ. ರಿಯಲ್ ಎಸ್ಟೇಟ್ ಹಾಗೂ ಭೂಮಿಗೆ ಸಂಬಂಧಿಸಿದ ವ್ಯವಹಾರಗಳಲ್ಲಿ ತಕ್ಷಣದ ಧನಲಾಭ ಕಾಯ್ದಿರಿಸಿದೆ. ಉದ್ಯೋಗದಲ್ಲಿ ನಿಮ್ಮ ನಿರ್ಧಾರಗಳಿಗೆ ಮನ್ನಣೆ ಸಿಗಲಿದ್ದು, ಶತ್ರುಗಳು ಪರಾಜಯಗೊಳ್ಳಲಿದ್ದಾರೆ. ಮಾತು ಕಠಿಣವಾಗದಂತೆ ನೋಡಿಕೊಳ್ಳಿ.

​ವೃಷಭ ರಾಶಿ:

ನಿಮ್ಮ ರಾಶಿಯಲ್ಲೇ ಸೂರ್ಯ ಮತ್ತು ಚಂದ್ರರ ಜುಗಲ್ಬಂದಿ ಇರುವುದರಿಂದ ಸಮಾಜದಲ್ಲಿ ಗೌರವ, ಕೀರ್ತಿ ಹೆಚ್ಚಲಿದೆ. ಆಡಳಿತಾತ್ಮಕ ಕೆಲಸಗಳು ಸುಲಭವಾಗಿ ಪೂರ್ಣಗೊಳ್ಳಲಿವೆ. ಕಣ್ಣಿನ ಸಣ್ಣಪುಟ್ಟ ಸಮಸ್ಯೆ ಅಥವಾ ಉಷ್ಣ ಬಾಧೆ ಇರಬಹುದು. ಹಳೆಯ ಹೂಡಿಕೆಗಳಿಂದ ಉತ್ತಮ ಲಾಭ ಹರಿದುಬರಲಿದೆ.

​ಮಿಥುನ ರಾಶಿ:

ಬುಧನು ನಿಮ್ಮದೇ ರಾಶಿಯಲ್ಲಿ ಬಲಿಷ್ಠನಾಗಿರುವುದರಿಂದ ಕೌಶಲ್ಯ ಹಾಗೂ ಬುದ್ಧಿವಂತಿಕೆಗೆ ಭಾರಿ ಮನ್ನಣೆ ಸಿಗಲಿದೆ. ವ್ಯಾಪಾರಸ್ಥರಿಗೆ ಹೊಸ ಒಪ್ಪಂದಗಳು ಕೈಗೂಡಲಿವೆ. ಕಲಾತ್ಮಕ ಮತ್ತು ಬರವಣಿಗೆ ಕ್ಷೇತ್ರದಲ್ಲಿರುವವರಿಗೆ ಸುವರ್ಣ ಅವಕಾಶಗಳು ಲಭಿಸಲಿವೆ. ದೂರದ ಪ್ರಯಾಣ ಯಶಸ್ವಿಯಾಗಲಿದೆ.

​ಕರ್ಕಾಟಕ ರಾಶಿ:

ಗುರು ಮತ್ತು ಶುಕ್ರರು ನಿಮ್ಮ ರಾಶಿಯಲ್ಲಿ ಉಚ್ಛ ಸ್ಥಿತಿಗೆ ಹತ್ತಿರ ಇರುವುದರಿಂದ ರಾಜಯೋಗದ ಅನುಭವವಾಗಲಿದೆ. ಧನಾಗಮನಕ್ಕೆ ಇದ್ದ ಅಡೆತಡೆಗಳು ಸಂಪೂರ್ಣ ನಿವಾರಣೆಯಾಗಲಿವೆ. ಮನೆಯಲ್ಲಿ ಮದುವೆ ಅಥವಾ ಶುಭ ಕಾರ್ಯಗಳ ಚರ್ಚೆ ಮುನ್ನೆಲೆಗೆ ಬರಲಿದೆ. ಆಭರಣ ಮತ್ತು ವಾಹನ ಖರೀದಿ ಯೋಗವಿದೆ.

ಸಿಂಹ ರಾಶಿ:

ವ್ಯಯ ಮತ್ತು ಲಾಭ ಸ್ಥಾನಗಳ ಏರುಪೇರಿನಿಂದಾಗಿ ಈ ವಾರ ಖರ್ಚುಗಳು ಹೆಚ್ಚಾಗಲಿವೆ. ಆದಾಗ್ಯೂ, ಪಿತ್ರಾರ್ಜಿತ ಆಸ್ತಿಯಿಂದ ಬರಬೇಕಿದ್ದ ಪಾಲು ನಿಮ್ಮ ಕೈ ಸೇರಬಹುದು. ತಾಯಿಯ ಆರೋಗ್ಯದ ಕಡೆ ಗಮನಹರಿಸಿ. ಆಧ್ಯಾತ್ಮಿಕ ಕ್ಷೇತ್ರ ಹಾಗೂ ಧಾರ್ಮಿಕ ಪ್ರವಾಸಗಳಿಗೆ ಮನಸ್ಸು ವಾಲುವುದರಿಂದ ನೆಮ್ಮದಿ ಸಿಗಲಿದೆ.

ಕನ್ಯಾ ರಾಶಿ:

ಹತ್ತನೇ ಮನೆಯ ಬುಧನ ದೃಷ್ಟಿಯಿಂದಾಗಿ ವೃತ್ತಿಜೀವನದಲ್ಲಿ ದೊಡ್ಡ ಜಿಗಿತ ಕಂಡುಬರಲಿದೆ. ಉದ್ಯೋಗ ಬದಲಾವಣೆಗೆ ಪ್ರಯತ್ನಿಸುತ್ತಿದ್ದರೆ ಈ ವಾರ ಶುಭ ವಾರ್ತೆ ಕೇಳುವಿರಿ. ಹಿರಿಯ ಅಧಿಕಾರಿಗಳು ಹಾಗೂ ಮಿತ್ರರಿಂದ ಸಂಪೂರ್ಣ ಸಹಕಾರ ಸಿಗಲಿದೆ. ಆರ್ಥಿಕ ಪರಿಸ್ಥಿತಿ ಅತ್ಯಂತ ಆಶಾದಾಯಕವಾಗಿರುತ್ತದೆ.

​ತುಲಾ ರಾಶಿ:

ಭಾಗ್ಯಸ್ಥಾನ ಮತ್ತು ಕರ್ಮಸ್ಥಾನಗಳ ಗ್ರಹಬಲದಿಂದಾಗಿ ಹೊಸ ಉದ್ಯೋಗಾವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರಲಿವೆ. ಆದರೆ, ಶನಿಯ ದೃಷ್ಟಿಯಿಂದಾಗಿ ಕೆಲಸಗಳು ಕೊನೆಯ ಕ್ಷಣದಲ್ಲಿ ವಿಳಂಬವಾಗಬಹುದು. ದಾಂಪತ್ಯದಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯ ಮೂಡದಂತೆ ಪರಸ್ಪರ ಹೊಂದಾಣಿಕೆ ಕಾಯ್ದುಕೊಳ್ಳುವುದು ಅನಿವಾರ್ಯ.

ವೃಶ್ಚಿಕ ರಾಶಿ:

ಅಷ್ಟಮದಲ್ಲಿರುವ ಗ್ರಹಗಳ ಪ್ರಭಾವದಿಂದಾಗಿ ಅನಿರೀಕ್ಷಿತ ಧನಲಾಭ ಅಥವಾ ವಿಮೆಯ ಹಣ ಕೈಸೇರಲಿದೆ. ಆದರೆ ರಸ್ತೆ ಸಂಚಾರದಲ್ಲಿ ಅತಿ ಹೆಚ್ಚಿನ ಜಾಗ್ರತೆ ಅಗತ್ಯ. ರಹಸ್ಯ ಶತ್ರುಗಳ ಕಾಟವಿದ್ದರೂ ನಿಮ್ಮ ಆಂತರಿಕ ಶಕ್ತಿಯಿಂದ ಅವರನ್ನು ಮೆಟ್ಟಿ ನಿಲ್ಲುವಿರಿ. ದೇವತಾ ಆರಾಧನೆಯಿಂದ ಮಾನಸಿಕ ಶಾಂತಿ ಸಿಗಲಿದೆ.

ಧನು ರಾಶಿ:

ನಿಮ್ಮದೇ ಲಗ್ನದಲ್ಲಿ ಗುರು-ಶುಕ್ರರ ಶುಭ ದೃಷ್ಟಿ ಇರುವುದರಿಂದ ವ್ಯಕ್ತಿತ್ವದಲ್ಲಿ ಹೊಸ ತೇಜಸ್ಸು ಕಾಣಿಸಿಕೊಳ್ಳಲಿದೆ. ಸಾರ್ವಜನಿಕ ರಂಗದಲ್ಲಿ ಗುರುತಿಸಿಕೊಂಡವರಿಗೆ ಉತ್ತಮ ಜನಬೆಂಬಲ ಸಿಗಲಿದೆ. ಪಾಲುದಾರಿಕೆ ವ್ಯವಹಾರಗಳಲ್ಲಿ ಪಾರದರ್ಶಕತೆ ಇರಲಿ. ಆರೋಗ್ಯದಲ್ಲಿನ ಏರುಪೇರುಗಳು ಸುಧಾರಿಸಲಿವೆ.

ಮಕರ ರಾಶಿ:

ಆರನೇ ಮನೆಯ ಗ್ರಹಬಲದಿಂದಾಗಿ ಕೋರ್ಟ್ ಕಚೇರಿ ಕಲಾಪಗಳು ಹಾಗೂ ಹಳೆಯ ಸಾಲದ ಬಾಧ್ಯತೆಗಳಿಂದ ಮುಕ್ತಿ ಸಿಗಲಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧರಾಗುತ್ತಿರುವವರಿಗೆ ಈ ವಾರ ಅತ್ಯಂತ ಅನುಕೂಲಕರವಾಗಿದೆ. ಕೃಷಿ ಅಥವಾ ತಾಂತ್ರಿಕ ವಲಯದಲ್ಲಿರುವವರಿಗೆ ಆದಾಯದ ಮೂಲಗಳು ಹೆಚ್ಚಾಗಲಿವೆ.

​ಕುಂಭ ರಾಶಿ:

ಪಂಚಮ ಸ್ಥಾನದ ಗ್ರಹಚಾರದಿಂದಾಗಿ ಮಕ್ಕಳ ಕಡೆಯಿಂದ ಸಂತಸದ ಸುದ್ದಿ ಬರಲಿದೆ. ಷೇರು ಮಾರುಕಟ್ಟೆ ಅಥವಾ ಹಠಾತ್ ಲಾಭ ತರುವ ವ್ಯವಹಾರಗಳಲ್ಲಿ ಯೋಚಿಸಿ ಹೂಡಿಕೆ ಮಾಡಿ. ಪ್ರೇಮ ಜೀವನದಲ್ಲಿ ಮಧುರತೆ ಇರಲಿದೆ. ಹಳೆಯ ಬಾಕಿ ವಸೂಲಿಯಾಗುವುದರಿಂದ ನೆಮ್ಮದಿಯ ನಿಟ್ಟುಸಿರು ಬಿಡುವಿರಿ.

ಇದನ್ನೂ ಓದಿ: ಗ್ರಹ ದೋಷ ಎಂದರೇನು? ಭಯಪಡುವ ಅಗತ್ಯವಿಲ್ಲ, ಇಲ್ಲಿವೆ ಸರಳ ಪರಿಹಾರಗಳು!

​ಮೀನ ರಾಶಿ:

ನಿಮ್ಮದೇ ರಾಶಿಯಲ್ಲಿ ಶನಿ ದೇವನ ಸಂಚಾರವಿರುವುದರಿಂದ ಜವಾಬ್ದಾರಿಗಳ ಹೊರೆ ಹೆಚ್ಚಾಗಲಿದೆ. ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ತಡವಾಗಿ ಸಿಕ್ಕರೂ ನಿರಾಸೆಯಾಗುವುದಿಲ್ಲ. ಗೃಹೋಪಯೋಗಿ ವಸ್ತುಗಳ ಖರೀದಿಗೆ ಹಣ ವ್ಯಯವಾಗಲಿದೆ. ಉದ್ಯೋಗಸ್ಥರು ಸಹೋದ್ಯೋಗಿಗಳೊಂದಿಗೆ ವಾದ ಮಾಡುವುದನ್ನು ತಪ್ಪಿಸಿ.

– ಲೋಹಿತ್ ಹೆಬ್ಬಾರ್

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹಸಿವಾದಾಗ ಸಿಕ್ಕಾಪಟ್ಟೆ ಕೋಪ ಬರೋದೇಕೆ? ಇದರ ಹಿಂದಿನ ಕಾರಣವೇನು ಗೊತ್ತಾ? – Kannada News

ಆಹಾರವು ನಮ್ಮ ದೇಹಕ್ಕೆ ಅತ್ಯಗತ್ಯವಾಗಿ ಬೇಕೇಬೇಕು. ನೀರಿನಂತೆ ಆಹಾರವು ನಮ್ಮ ದೇಹಕ್ಕೆ ಮೂಲಭೂತ ಅವಶ್ಯಕತೆಯಾಗಿದೆ. ಇದು ನಮ್ಮ ಸಕ್ರಿಯರಾಗಿಲು, ಚೈತನ್ಯಶೀಲರಾಗಿರಲು ಸಹಾಯ ಮಾಡುತ್ತದೆ. ಅದೇ ಹೊಟ್ಟೆಗೆ ಸರಿಯಾಗಿ ಊಟ ಬೀಳದಿದ್ದರೆ ಅಥವಾ ಸಿಕ್ಕಾಪಟ್ಟೆ ಹಸಿದಾಗ (hungry) ಹೆಚ್ಚಿನವರಿಗೆ ಕಿರಿಕಿರಿ ಉಂಟಾಗುತ್ತದೆ, ಸಣ್ಣಪುಟ್ಟ ವಿಚಾರಗಳಿಗೂ ಕೋಪ ಬರುತ್ತದೆ. ಇದೇ ರೀತಿ ನಿಮಗೂ ಹಸಿವಾದಾಗ ಜಾಸ್ತಿ ಕೋಪ ಬರುತ್ತಾ? ಹಸಿದಾಗ ಕೋಪ ಬರೋದೇಕೆ, ಇದರ ಹಿಂದಿನ ವೈಜ್ಞಾನಿಕ ಕಾರಣವೇನು ಎಂಬುದರ ಸಂಪೂರ್ಣ ವಿವರವನ್ನು ತಿಳಿಯಿರಿ.

ಹಸಿವಾದಾಗ ಕೋಪ ಬರೋದೇಕೆ?

ನಾವು ಊಟ ಮಾಡದಿದ್ದಾಗ, ನಮ್ಮ ರಕ್ತದಲ್ಲಿನ ಸಕ್ಕರೆ ಕಡಿಮೆಯಾಗುತ್ತದೆ, ಇದು ನಮ್ಮನ್ನು ಕಿರಿಕಿರಿಗೊಳಿಸುತ್ತದೆ.  ರಕ್ತದಲ್ಲಿನ ಸಕ್ಕರೆ ಕಡಿಮೆಯಾದಾಗ,  ದೇಹವು ಗ್ಲೂಕೋಸ್ ಮಟ್ಟವನ್ನು ಸಾಮಾನ್ಯಗೊಳಿಸಲು ಕಾರ್ಟಿಸೋಲ್ (ಒತ್ತಡದ ಹಾರ್ಮೋನ್) ಮತ್ತು ಅಡ್ರಿನಾಲಿನ್ (ಅಪಾಯದ ಸಂದರ್ಭಗಳಲ್ಲಿ ಸಕ್ರಿಯಗೊಳ್ಳುವ ಹಾರ್ಮೋನ್)  ಹಾರ್ಮೋನ್ ಅನ್ನು ಬಿಡುಗಡೆ ಮಾಡುತ್ತದೆ. ಈ ಎರಡೂ  ವ್ಯಕ್ತಿಯ ಹೋರಾಟ ಅಥವಾ ಒತ್ತಡ, ಕೋಪದ ಸ್ಥಿತಿಯನ್ನು ಪ್ರಚೋದಿಸುವ  ಹಾರ್ಮೋನುಗಳಾಗಿವೆ. ಈ ಹಾರ್ಮೋನ್‌ ಬಿಡುಗಡೆ ಕಾರಣದಿಂದಲೇ ಹೆಚ್ಚಿನವರು ಹಸಿವಾದಾಗ ಕೋಪಗೊಳ್ಳುವುದು. ಅಲ್ಲದೆ ದೇಹದಲ್ಲಿ ಗ್ಲೂಕೋಸ್‌ ಮಟ್ಟ ಕಡಿಮೆಯಾದ ತಕ್ಷಣ, ಮೆದುಳು ಒತ್ತಡಕ್ಕೊಳಗಾಗುತ್ತದೆ ಮತ್ತು ಮನಸ್ಥಿತಿ ಕಿರಿಕಿರಿಗೊಳ್ಳುತ್ತದೆ. ಇದೇ ಕಾರಣದಿಂದಲೇ ನಾವು ಹಸಿದಾಗ ಸುಲಭವಾಗಿ ಕೋಪಗೊಳ್ಳುವುದು.

ಹಸಿವಾದಾಗ ದೇಹದಲ್ಲಿ ಯಾವ ಬದಲಾವಣೆಗಳು ಸಂಭವಿಸುತ್ತವೆ?

ಹಸಿವಿನ ನಂತರ, ಕಿರಿಕಿರಿ ಹೆಚ್ಚಾಗುತ್ತದೆ, ಗಮನಹರಿಸಲು ಕಷ್ಟವಾಗುತ್ತದೆ. ತಲೆನೋವು ಅಥವಾ ಆಯಾಸ, ಹೆಚ್ಚಿದ ಹೃದಯ ಬಡಿತ, ನಿದ್ರೆ ಮನಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ. ಈ ಎಲ್ಲಾ ಸಂಕೇತಗಳು ನಿಮ್ಮ ದೇಹಕ್ಕೆ ಈಗ ಆಹಾರದ ಅಗತ್ಯವಿದೆ ಎಂದು ಸೂಚಿಸುತ್ತವೆ. ಆದರೆ ನೀವು ಅದನ್ನು ನಿರ್ಲಕ್ಷಿಸಿದರೆ, ನಿಮ್ಮ ಅಭ್ಯಾಸ ಕ್ರಮೇಣ ನಿಮ್ಮ ಮನಸ್ಥಿತಿ ಹದಗೆಡಲು ಕಾರಣವಾಗುತ್ತದೆ.

ಇದನ್ನೂ ಓದಿ: ಮೊಬೈಲ್‌ ಇಂಟರ್ನೆಟ್‌ ವ್ಯವಸ್ಥೆಯೇ ಇಲ್ಲದ ಜಗತ್ತಿನ ಏಕೈಕ ದೇಶವಿದು

ಹಸಿವಾಗಲು ಪ್ರಾರಂಭಿಸಿದಾಗ ಅದು ನಮ್ಮ ಭಾವನೆಗಳನ್ನು ಇನ್ನಷ್ಟು ಹದಗೆಡಿಸಬಹುದು. ಇದು ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಹಸಿವಾದಾಗ ಗ್ಲೂಕೋಸ್‌ ಮಟ್ಟ ಕಡಿಮೆಯಾಗುತ್ತದೆ. ಗ್ಲೂಕೋಸ್ ಕೊರತೆಯು ನಮ್ಮ ಭಾವನೆಗಳು ಮತ್ತು ನಡವಳಿಕೆಯನ್ನು ನಿಯಂತ್ರಿಸಲು ಸಹಾಯ ಮಾಡುವ ಮೆದುಳಿನ ಭಾಗದ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಹಸಿದಾಗ ನಮ್ಮ ಭಾವನೆ ಹದಗೆಡುತ್ತವೆ. ಭಾವನೆಗಳನ್ನು ನಿರ್ವಹಿಸುವ ಸಾಮರ್ಥ್ಯ ಕಡಿಮೆಯಾಗುತ್ತದೆ, ಇದು ಸಣ್ಣ ವಿಷಯಗಳ ಮೇಲೂ ನಿಯಂತ್ರಣ ಕಳೆದುಕೊಳ್ಳಲು ಕಾರಣವಾಗುತ್ತದೆ.

ಹಾಗಾಗಿ ದೇಹದಲ್ಲಿ ಗ್ಲೂಕೋಸ್ ಮಟ್ಟವನ್ನು ಕಾಪಾಡಿಕೊಳ್ಳಲು ನಿಯಮಿತವಾಗಿ ಸಣ್ಣ ಭಾಗಗಳಲ್ಲಿ ಊಟ ಮಾಡಬೇಕು, ಹಸಿವಾದ ತಕ್ಷಣ ಆರೋಗ್ಯಕ ಆಹಾರವನ್ನು ಸೇವಿಸಿ. ಆರೋಗ್ಯಕರ ಆಹಾರವು ನಿಮಿಷಗಳಲ್ಲಿ ನಿಮ್ಮನ್ನು ಮನಸ್ಥಿತಿಯನ್ನು  ಉತ್ತಮಗೊಳಿಸುತ್ತದೆ. ಅಲ್ಲದೆ ಹಸಿವನ್ನು ನಿಯಂತ್ರಿಸಲು ನೀವು ಹಣ್ಣುಗಳು ಅಥವಾ ಒಣಗಿದ ಹಣ್ಣುಗಳಂತಹ ಆರೋಗ್ಯಕರ ತಿನಿಸುಗಳನ್ನು ಸೇವಿಸಿ. ಪ್ರತಿ ಗಂಟೆಗೊಮ್ಮೆ ನೀರನ್ನು ಕುಡಿಯಿರಿ. ಇದು ದೇಹವನ್ನು ಹೈಡ್ರೇಟ್‌ ಆಗಿಡಲು ಕೂಡ ಸಹಾಯ ಮಾಡುತ್ತದೆ. ಯಾವುದೇ ಕಾರಣಕ್ಕೂ ಜಂಕ್‌ ಫುಡ್‌ ತಿನ್ನಲು ಹೋಗಬೇಡಿ, ಇವು ಆರೋಗ್ಯಕ್ಕೆ ಮತ್ತಷ್ಟು ಹಾನಿ ಮಾಡಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಓಮನ್ ಕರಾವಳಿಯಲ್ಲಿ 24 ಭಾರತೀಯ ನಾವಿಕರಿದ್ದ ಹಡಗಿನಲ್ಲಿ ಬೆಂಕಿ ಅವಘಡ – Kannada News

ನವದೆಹಲಿ, ಜೂನ್ 8: ಓಮನ್ ಕರಾವಳಿಯ ಹಾರ್ಮುಜ್ ಜಲಸಂಧಿಯ ಬಳಿ ವಾಣಿಜ್ಯ ಸರಕು ಹಡಗಿನ ಮೇಲೆ ಶಂಕಿತ ಡ್ರೋನ್ ಅಥವಾ ಕ್ಷಿಪಣಿ ದಾಳಿ ನಡೆದಿದೆ. 24 ಭಾರತೀಯ ನಾವಿಕರು ಈ ಹಡಗಿನಲ್ಲಿದ್ದರು. ಈ ದಾಳಿಯು ಹಡಗಿನ ಎಂಜಿನ್ ಕೋಣೆಯಲ್ಲಿ ಭಾರಿ ಸ್ಫೋಟಕ್ಕೆ ಕಾರಣವಾಯಿತು. ಇದರಿಂದ ಹಡಿಗಿನಲ್ಲಿ ಬೆಂಕಿ ಹೊತ್ತಿಕೊಂಡಿತು, ಇದು ಸಿಬ್ಬಂದಿಗಳಲ್ಲಿ ಭೀತಿಯನ್ನುಂಟುಮಾಡಿತು. ಇರಾನ್ (Iran) ಮತ್ತು ಇಸ್ರೇಲ್ ನಡುವಿನ ಯುದ್ಧವು ಪುನರಾರಂಭಗೊಂಡಿರುವ ಪಶ್ಚಿಮ ಏಷ್ಯಾದಲ್ಲಿ ಹೆಚ್ಚುತ್ತಿರುವ ಭದ್ರತಾ ಆತಂಕದ ಮಧ್ಯೆ ಈ ಘಟನೆ ನಡೆದಿದೆ.

ವರದಿಗಳ ಪ್ರಕಾರ, ಪಲಾವ್ ಧ್ವಜ ಹೊತ್ತ ಸರಕು ಹಡಗು ಓಮನ್ ಕರಾವಳಿಯಿಂದ ಸುಮಾರು 15 ನಾಟಿಕಲ್ ಮೈಲು ದೂರದಲ್ಲಿದ್ದಾಗ ಅಪಘಾತಕ್ಕೀಡಾಯಿತು. ಸ್ಫೋಟ ಎಷ್ಟು ಪ್ರಬಲವಾಗಿತ್ತೆಂದರೆ ಹಡಗಿನ ಎಂಜಿನ್ ಕೋಣೆಯಲ್ಲಿ ದೊಡ್ಡ ರಂಧ್ರ ಉಂಟಾಗಿ, ಅದು ನೀರಿನಿಂದ ಬೇಗನೆ ತುಂಬಿ ಸಮತೋಲನ ಕಳೆದುಕೊಂಡಿತು. ಸ್ಫೋಟದ ನಂತರ, ಎಂಜಿನ್ ಕೋಣೆಯಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿತು.

ಇದನ್ನೂ ಓದಿ: ಹಾರ್ಮುಜ್ ಜಲಸಂಧಿ ಮಾರ್ಗ ತೆರೆಯುವ ಸುಳಿವು ನೀಡಿದ ಟ್ರಂಪ್

ಪರಿಸ್ಥಿತಿ ಹದಗೆಡುತ್ತಿದ್ದಂತೆ, ಸಿಬ್ಬಂದಿ ತುರ್ತು ಕರೆಗಳನ್ನು ಮಾಡಿದರು. ಫಾರ್ವರ್ಡ್ ಸೀಮೆನ್ಸ್ ಯೂನಿಯನ್ ಆಫ್ ಇಂಡಿಯಾ (FSUI) ದಾಳಿಯನ್ನು ದೃಢಪಡಿಸಿತು. ಹಡಗಿನಲ್ಲಿ ಭಾರತೀಯ ನಾವಿಕರು ಇದ್ದಾರೆ ಎಂದು ಒಕ್ಕೂಟ ತಿಳಿಸಿದೆ. ಮೂಲಗಳ ಪ್ರಕಾರ, ದಾಳಿಯಲ್ಲಿ ಹಡಗಿನ ಲೈಫ್ ಬೋಟ್ ಕೂಡ ಹಾನಿಗೊಳಗಾಗಿದ್ದು, ನಾವಿಕರನ್ನು ರಕ್ಷಿಸುವುದು ಕಷ್ಟಕರವಾಗಿದೆ. ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳು ಪ್ರಸ್ತುತ ನಡೆಯುತ್ತಿವೆ. ಸದ್ಯದ ಮಟ್ಟಿಗೆ ಎಲ್ಲ ಭಾರತೀಯರೂ ಸುರಕ್ಷಿತವಾಗಿದ್ದಾರೆ.

ಈ ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಭಾರತ ಸರ್ಕಾರ ಮತ್ತು ಭಾರತೀಯ ನೌಕಾಪಡೆ ತಕ್ಷಣವೇ ಕಾರ್ಯಪ್ರವೃತ್ತವಾಗಿವೆ. ಆ ಪ್ರದೇಶದಲ್ಲಿ ಕಡಲ್ಗಳ್ಳರ ನಿಗ್ರಹ ಮತ್ತು ರಕ್ಷಣಾ ಕಾರ್ಯಾಚರಣೆಗಾಗಿ ಈಗಾಗಲೇ ಗಸ್ತಿನಲ್ಲಿದ್ದ ಭಾರತೀಯ ನೌಕಾಪಡೆಯ ಅತ್ಯಾಧುನಿಕ ಯುದ್ಧನೌಕೆ ಮತ್ತು ಕಡಲ ಗಸ್ತು ವಿಮಾನವನ್ನು (P-8I) ತಕ್ಷಣವೇ ಆಪತ್ತಿನಲ್ಲಿರುವ ಹಡಗಿನ ರಕ್ಷಣೆಗೆ ಧಾವಿಸುವಂತೆ ಸೂಚಿಸಲಾಗಿದೆ. ಓಮನ್ ದೇಶದ ನೌಕಾಪಡೆ ಮತ್ತು ಪ್ರಾದೇಶಿಕ ಕಡಲ ರಕ್ಷಣಾ ಸಮನ್ವಯ ಕೇಂದ್ರಗಳ (MRCC) ಜೊತೆಗೆ ಭಾರತೀಯ ಅಧಿಕಾರಿಗಳು ನಿರಂತರ ಸಂಪರ್ಕದಲ್ಲಿದ್ದು, ಜಂಟಿ ರಕ್ಷಣಾ ಕಾರ್ಯಾಚರಣೆಯನ್ನು ಕೈಗೊಂಡಿದ್ದಾರೆ.

ಇದನ್ನೂ ಓದಿ: ಇಸ್ರೇಲ್-ಇರಾನ್ ತಕ್ಷಣದ ಕದನ ವಿರಾಮಕ್ಕೆ ಒಪ್ಪಿವೆ; ಟ್ರಂಪ್ ಘೋಷಣೆ

ನಾವಿಕರ ಪ್ರಸ್ತುತ ಆರೋಗ್ಯ ಸ್ಥಿತಿಯ ಬಗ್ಗೆ ನಿಖರ ಮಾಹಿತಿ ಇನ್ನಷ್ಟೇ ಹೊರಬರಬೇಕಾಗಿದೆ. ಆದರೆ ಭಾರತೀಯ ನೌಕಾಪಡೆಯು ಅವರ ಸುರಕ್ಷತೆಗೆ ಮೊದಲ ಆದ್ಯತೆ ನೀಡಿದೆ ಎಂದು ರಕ್ಷಣಾ ಸಚಿವಾಲಯದ ಮೂಲಗಳು ತಿಳಿಸಿವೆ. ಇತ್ತೀಚಿನ ತಿಂಗಳುಗಳಲ್ಲಿ ಕೆಂಪು ಸಮುದ್ರ ಮತ್ತು ಅರೇಬಿಯನ್ ಸಮುದ್ರದ ಮಾರ್ಗಗಳಲ್ಲಿ ವಾಣಿಜ್ಯ ಹಡಗುಗಳ ಮೇಲಿನ ದಾಳಿಗಳು ಗಣನೀಯವಾಗಿ ಹೆಚ್ಚಾಗಿದ್ದು, ಜಾಗತಿಕ ವ್ಯಾಪಾರಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಸಿಎಂ ಡಿಕೆಶಿ ಸೂಚನೆ ಬೆನ್ನಲ್ಲೇ ರೌಡಿಗಳ ವಿರುದ್ಧ ಸಮರ ಸಾರಿದ ಪೊಲೀಸ್ರು, ವಿಚಾರಣೆಗೆ ಬರದೇ ಆಟವಾಡ್ತಿದ್ದ ರೌಡಿ ಅರೆಸ್ಟ್​ – Kannada News

ಬೆಂಗಳೂರು, (ಜೂನ್ 08): ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಅವರ ಖಡಕ್ ಸೂಚನೆ ಬೆನ್ನಲ್ಲೇ ಪೊಲೀಸರು (Police), ರೌಡಿಗಳನ್ನು (Rowdy)  ಮಟ್ಟಹಾಕಲು ಮುಂದಾಗಿದ್ದಾರೆ. ಇದಕ್ಕೆ ಪೂರಕವೆಂತೆ ಪ್ರಕರಣಗಳ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ರೌಡಿಯನ್ನು ಬೆಂಗಳೂರು ಸಿಸಿಬಿ ಹೆಡೆಮುರಿಕಟ್ಟಿದೆ. ಹೌದು….ಕೋರ್ಟ್​​ ವಾರಂಟ್ ಆದೇಶ ಉಲ್ಲಂಘಿಸಿ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಕೆ.ಜೆ.ಹಳ್ಳಿ ಠಾಣಾ ವ್ಯಾಪ್ತಿಯ ವಿನೋಬನಗರದ ರೌಡಿಶೀಟರ್ ಶಾಹಿದ್ ಪಾಷಾನನ್ನು ಬಂಧಿಸಿದ್ದಾರೆ.  ಶಾಹಿದ್ ಪಾಷಾ ವಿರುದ್ಧ ಬೆಂಗಳೂರಿನ ವಿವಿಧ ಪೊಲೀಸ್ ಠಾಣೆಗಳಲ್ಲಿ 20ಕ್ಕೂ ಹೆಚ್ಚು ಕೇಸ್ ದಾಖಲಾಗಿದ್ದು, ಪ್ರಕರಣಗಳ ವಿಚಾರಣೆಗೆ ಹಾಜರಾಗದೆ ಆಟವಾಡುತ್ತಿದ್ದ. ಇದೀಗ ಸಿಎಂ ಡಿಕೆಶಿ ಖಡಕ್ ಎಚ್ಚರಿಕೆ ಬೆನ್ನಲ್ಲೇ ರೌಡಿಶೀಟರ್ ಶಾಹಿದ್ ಪಾಷಾ​​ನಿಗೆ ಬಿಸಿ ಮುಟ್ಟಿಸಿದ್ದಾರೆ.

ಸಿಎಂ ಸೂಚನೆ ಬೆನ್ನಲ್ಲೇ ರೌಡಿ ನಿಗ್ರಹ ದಳ ರಚನೆ

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ ಮಾರನೇ ದಿನವೇ ಉನ್ನತ ಅಧಿಕಾರಿಗಳ ಜೊತೆ ಮೊದಲ ಸಭೆ ನಡೆಸಿದ್ದು, ಆ ಸಭೆಯಲ್ಲಿ ಪ್ರಮುಖವಾಗಿ ರೌಡಿಗಳ ಆಟಾಟೋಪಗಳಿಗೆ ಬ್ರೇಕ್ ಹಾಕಬೇಕೆಂದು ಎಂದಿದ್ದರು. ಇದಕ್ಕೆ ಪ್ರತಿ ಠಾಣೆ ವ್ಯಾಪ್ತಿಯಲ್ಲೂ ಆ್ಯಂಟಿ ರೌಡಿ ಸ್ಕ್ವಾಡ್ ರಚನೆಗೆ ಸೂಚನೆ ನೀಡಿದ್ದರು. ಇದರ ಬೆನ್ನಲ್ಲೇ ನಿನ್ನೆ(ಜೂನ್ 07) ರಾಜ್ಯ ಪೊಲೀಸ್‌ ಮಹಾ ನಿರ್ದೇಶಕ (ಡಿಜಿ-ಐಜಿಪಿ) ಡಾ.ಎಂ.ಎ.ಸಲೀಂ ಅವರು ಪ್ರತಿ ಪೊಲೀಸ್‌ ವಲಯ ಹಾಗೂ ಠಾಣೆ ಮಟ್ಟದಲ್ಲಿ ರೌಡಿ ನಿಗ್ರಹ ದಳ ರಚಿಸುವಂತೆ ಆದೇಶ ಹೊರಡಿಸಿದ್ದಾರೆ.

ಇದನ್ನೂ ಓದಿ: ಸಿಎಂ ಡಿಕೆಶಿ ಸೂಚನೆ ಬೆನ್ನಲ್ಲೇ ಪ್ರತಿ ಪೊಲೀಸ್ ಠಾಣೆಯಲ್ಲಿ ರೌಡಿ ಸ್ಕ್ವಾಡ್ ರಚನೆಗೆ ಆದೇಶ

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಬಲಪಡಿಸಲು ಹಾಗೂ ರೌಡಿಗಳ ವಿರುದ್ಧ ಶೂನ್ಯ ಸಹಿಷ್ಣುತೆ ನೀತಿಗಾಗಿ ಪ್ರತಿ ಪೊಲೀಸ್‌ ವಲಯ ಮತ್ತು ಪೊಲೀಸ್‌ ಠಾಣೆ ಮಟ್ಟದಲ್ಲಿ ರೌಡಿ ನಿಗ್ರಹ ದಳ ಆರಂಭಿಸುತ್ತಿರುವುದಾಗಿ ಸಲೀಂ ಆದೇಶದಲ್ಲಿ ತಿಳಿಸಿದ್ದಾರೆ.

ರೌಡಿ ನಿಗ್ರಹ ದಳವು ಅಪರಾಧ ಪ್ರಕರಣಗಳನ್ನು ಪರಿಶೀಲಿಸಿ, ಹೊಸ ರೌಡಿ ಪಟ್ಟಿ ತೆರೆಯಬೇಕು. ರೌಡಿ ಶೀಟರ್‌ಗಳ ಚಲನವಲನ ಮತ್ತು ಚಟುವಟಿಕೆಗಳ ಮೇಲೆ ನಿಗಾ ವಹಿಸಬೇಕು. ಹೊಸ ರೌಡಿಗಳು, ಗ್ಯಾಂಗ್‌ಗಳು ಮತ್ತು ಅಪರಾಧ ಗುಂಪುಗಳನ್ನು ಗುರುತಿಸಿ ಗುಪ್ತಚರ ಮಾಹಿತಿ ಸಂಗ್ರಹಿಸಬೇಕು. ಪಿಎಆರ್‌, ಗೂಂಡಾ ಕಾಯಿದೆ, ಕೆಸಿಒಸಿಎ ಕಾಯಿದೆ ಮುಂತಾದ ಕಾನೂನು ಕ್ರಮಗಳನ್ನು ತಕ್ಷಣ ಕೈಗೊಳ್ಳಬೇಕು. ಗಸ್ತು ಸಿಬ್ಬಂದಿ ಮತ್ತು ಸ್ಥಳೀಯ ಗುಪ್ತಚರ ಮೂಲಗಳೊಂದಿಗೆ ನಿಕಟ ಸಂಪರ್ಕ ಕಾಯ್ದುಕೊಳ್ಳಬೇಕು. ಅಪಾಯದ ಪ್ರದೇಶಗಳಲ್ಲಿ ವಿಶೇಷ ಕಾರ್ಯಾಚರಣೆ ಮತ್ತು ದಿಢೀರ್‌ ತಪಾಸಣೆ ನಡೆಸಬೇಕು. ಈ ಆದೇಶವನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕು ಎಂದು ಸಲೀಂ ಸೂಚಿಸಿದ್ದಾರೆ.

ಖಡಕ್ ನಿರ್ದೇಶನ ನೀಡಿದ್ದ ಸಿಎಂ

ರೌಡಿಶೀಟರ್‌ಗಳ ಪಟ್ಟಿಯನ್ನು ಕಡ್ಡಾಯವಾಗಿ ಸಿದ್ಧಪಡಿಸಿ ಅವರ ಚಟುವಟಿಕೆಗಳ ಮೇಲೆ ನಿರಂತರ ನಿಗಾ ವಹಿಸಬೇಕು. ರಾಜ್ಯದಲ್ಲಿ ಶಾಂತಿ ಮತ್ತು ಭದ್ರತೆಯನ್ನು ಕಾಪಾಡುವಲ್ಲಿ ಯಾವುದೇ ರಾಜಿ ಇರಬಾರದು ಎಂದು ಡಿಕೆ ಶಿವಕುಮಾರ್ ಅವರು ಪೊಲೀಸ್ ಇಲಾಖೆಗೆ ನಿರ್ದೇಶನ ನೀಡಿದ್ದರು. ಇದರ ಬೆನ್ನಲ್ಲೇ ಪೊಲೀಸರು ಸಹ ರೌಡಿಗಳ ವಿರುದ್ಧ ಸಮರ ಸಾರಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಕರ್ನಾಟಕದಲ್ಲಿ ಹೆಚ್ಚುತ್ತಿದೆ ಎಚ್‌ಐವಿ ಭೀತಿ!: ಇದು ಯುವಕರಲ್ಲಿ ಹೆಚ್ಚಿದ ‘ಸಲಿಂಗ’ ಸಂಪರ್ಕದ ಎಫೆಕ್ಟ್ – Kannada News

ಬೆಂಗಳೂರು, ಜೂ.8 : ಕರ್ನಾಟಕದಲ್ಲಿ ಪುರುಷರ ನಡುವಿನ ಲೈಂಗಿಕ ಸಂಪರ್ಕದ (Male-to-Male Sexual Contact) ಕಾರಣದಿಂದಾಗಿ ಎಚ್‌ಐವಿ/ಏಡ್ಸ್ ಪ್ರಕರಣಗಳ ಸಂಖ್ಯೆ ನಿರಂತರವಾಗಿ ಹೆಚ್ಚಾಗುತ್ತಿರುವುದು ಬೆಳಕಿಗೆ ಬಂದಿದೆ. ಕರ್ನಾಟಕ ರಾಜ್ಯ ಏಡ್ಸ್ ಪ್ರತಿಬಂಧಕ ಸೊಸೈಟಿ (KSAPS) ನೀಡಿರುವ ಇತ್ತೀಚಿನ ಅಂಕಿ-ಅಂಶಗಳ ಪ್ರಕಾರ, ರಾಜ್ಯದಲ್ಲಿ ಸಕ್ರಿಯ ಎಚ್‌ಐವಿ ಪ್ರಕರಣಗಳ ಸಂಖ್ಯೆಯು ವರ್ಷದಿಂದ ವರ್ಷಕ್ಕೆ ದೊಡ್ಡ ಮಟ್ಟದಲ್ಲಿ ಜಿಗಿತ ಕಂಡಿದೆ.

ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಪ್ರಕರಣ:

2023-2024ರ ಅವಧಿಯಲ್ಲಿ: 44,581 ಪ್ರಕರಣಗಳು

2024-2025ರ ಅವಧಿಯಲ್ಲಿ: 62,664 ಪ್ರಕರಣಗಳು

2025-2026ರ ಪ್ರಸ್ತುತ ಅವಧಿಯಲ್ಲಿ: 66,606 ಪ್ರಕರಣಗಳು

ಈ ಅಂಕಿ-ಅಂಶಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಕೇವಲ ಮೂರೇ ವರ್ಷಗಳಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ ಭಾರಿ ಏರಿಕೆ ಕಂಡುಬಂದಿರುವುದು ಸ್ಪಷ್ಟವಾಗಿದೆ. ವರದಿಯ ಪ್ರಕಾರ, 18 ರಿಂದ 25 ಮತ್ತು 26 ರಿಂದ 35 ವರ್ಷದೊಳಗಿನ ಯುವಕರಲ್ಲಿ ಈ ಸೋಂಕು ಅತಿ ಹೆಚ್ಚು ಪತ್ತೆಯಾಗುತ್ತಿದೆ. 18-25 ವರ್ಷದ ವಯೋಮಾನದವರಲ್ಲಿ 2023-24ರಲ್ಲಿ 3,732 ಇದ್ದ ಪ್ರಕರಣಗಳು, 2024-25ರ ವೇಳೆಗೆ 6,962 ಕ್ಕೆ ಏರಿಕೆಯಾಗಿದ್ದವು. ಪ್ರಸ್ತುತ ಸಾಲಿನಲ್ಲಿ ಇದು 6,283 ಕ್ಕೆ ತಲುಪಿದೆ. ಇನ್ನುಳಿದಂತೆ 26-35 ವರ್ಷದ ವಯೋಮಾನದವರಲ್ಲಿ ಪ್ರಕರಣಗಳ ಸಂಖ್ಯೆ 9,351 ರಿಂದ ಬರೋಬ್ಬರಿ 14,555 ಕ್ಕೆ ಏರಿಕೆಯಾಗಿದೆ. ಲೈಂಗಿಕವಾಗಿ ಹರಡುವ ರೋಗಗಳ ಪೈಕಿ (STDs) ಎಚ್‌ಐವಿ ಸೋಂಕು ರಾಜ್ಯದಲ್ಲಿ ಅತ್ಯಂತ ಪ್ರಮುಖ ಸಮಸ್ಯೆಯಾಗಿ ಮುಂದುವರಿದಿದ್ದು, ಈ ವರ್ಷವೇ 417 ಹೊಸ ಪ್ರಕರಣಗಳು ದಾಖಲಾಗಿವೆ.

“ಸಲಿಂಗ ಕಾಮದ ವೇಳೆ ಸುರಕ್ಷಿತ ಲೈಂಗಿಕ ಕ್ರಿಯೆಯ ಬಗ್ಗೆ ನಾವು ನಿರಂತರ ಜಾಗೃತಿ ಮೂಡಿಸುತ್ತಿದ್ದೇವೆ. ಮುಖ್ಯವಾಗಿ ಕಾಲೇಜು ಹಾಸ್ಟೆಲ್‌ಗಳಲ್ಲಿ ಉಂಟಾಗಿರುವ ಸೋಂಕಿನ ಹರಡುವಿಕೆಯಿಂದಾಗಿ ಪ್ರಕರಣಗಳು ಹೆಚ್ಚಾಗಿವೆ. ಕೆಲವು ಪುರುಷರು ಮಹಿಳಾ ಲೈಂಗಿಕ ಕಾರ್ಯಕರ್ತೆಯರೊಂದಿಗೆ ಮತ್ತು ನಂತರ ತಮ್ಮದೇ ಗುಂಪಿನ ಇತರ ಪುರುಷರೊಂದಿಗೆ ಸಂಪರ್ಕ ಹೊಂದುವುದರಿಂದ ಸೋಂಕು ವೇಗವಾಗಿ ಹರಡುತ್ತಿದೆ” ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರಿನ ಹಿರಿಯ ಸಾಂಕ್ರಾಮಿಕ ರೋಗಗಳ ತಜ್ಞರಾದ ಡಾ. ಸ್ವಾತಿ ರಾಜಗೋಪಾಲ್ ಅವರು ಹೇಳಿರುವ ಪ್ರಕಾರ “ಇತ್ತೀಚಿನ ದಿನಗಳಲ್ಲಿ ಲೈಂಗಿಕ ಡೇಟಿಂಗ್ ಆ್ಯಪ್‌ಗಳ ಬಳಕೆ ಹೆಚ್ಚಾಗಿದ್ದು, ಸುಲಭವಾಗಿ ಸಂಗಾತಿಗಳು ಸಿಗುತ್ತಿರುವುದರಿಂದ ಸುರಕ್ಷತೆ ಇಲ್ಲದ ದೈಹಿಕ ಸಂಪರ್ಕ ಹೆಚ್ಚಾಗುತ್ತಿದೆ. ಇದರ ಜೊತೆಗೆ ಸಿಫಿಲಿಸ್ ಮತ್ತು ಗೊನೊರಿಯಾದಂತಹ ಇತರ ಲೈಂಗಿಕ ರೋಗಗಳೂ ಹೆಚ್ಚುತ್ತಿದ್ದು, ಇವು ಎಚ್‌ಐವಿ ಹರಡುವಿಕೆಯನ್ನು ಮತ್ತಷ್ಟು ತೀವ್ರಗೊಳಿಸುತ್ತವೆ” ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಜಗಳೂರಿನಲ್ಲಿ ಭುಗಿಲೆದ್ದ ಕುಡಿಯುವ ನೀರಿನ ಆಕ್ರೋಶ!: ಇಒ, ಪಿಡಿಒ ಅಧಿಕಾರಿಗಳನ್ನು ಕತ್ತಲೆ ಕೋಣೆಯಲ್ಲಿ ಕೂಡಿ ಹಾಕಿದ ಗ್ರಾಮಸ್ಥರು

ಕಾಲೇಜು ಹಾಸ್ಟೆಲ್‌ಗಳು ಮತ್ತು ಕಾರ್ಪೊರೇಟ್ ಕಚೇರಿಗಳನ್ನು ಗುರಿಯಾಗಿಸಿಕೊಂಡು ಸರ್ಕಾರವು ವಿಶೇಷ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಸಾರ್ವಜನಿಕರು ತಮ್ಮ ಆರೋಗ್ಯದ ಅಪಾಯವನ್ನು ಸ್ವಯಂ ಮೌಲ್ಯಮಾಪನ ಮಾಡಿಕೊಳ್ಳಲು ಮತ್ತು ಮಾರ್ಗದರ್ಶನ ಪಡೆಯಲು ಸರ್ಕಾರದ ‘ಬ್ರೇಕ್‌ಫ್ರೀ’ ಮೊಬೈಲ್ ಆಪ್ ಅನ್ನು ಬಳಸಲು ಉತ್ತೇಜಿಸಲಾಗುತ್ತಿದೆ. ಇದರೊಂದಿಗೆ ಉಚಿತ ಮಾಹಿತಿ ಹಾಗೂ ಬೆಂಬಲಕ್ಕಾಗಿ 1097 ಸಹಾಯವಾಣಿ ಸದಾ ಕಾರ್ಯನಿರ್ವಹಿಸುತ್ತಿದ್ದು, ಕಾರ್ಪೊರೇಟ್ ವಲಯಗಳಲ್ಲಿ ಮುಂದಿನ ಎರಡು ತಿಂಗಳ ಕಾಲ ನಿರಂತರ ತಪಾಸಣಾ ಶಿಬಿರಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಇಲಾಖೆ ತಿಳಿಸಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Viral: ತಿಂಗಳಿಗೆ ಲಕ್ಷ ಸಂಪಾದನೆಯಿದ್ರೂ ವೀಕೆಂಡ್‌ನಲ್ಲಿ ರ‍್ಯಾಪಿಡೋ ಬೈಕ್ ಓಡಿಸುವ ಬೆಂಗಳೂರಿನ ಸಾಫ್ಟ್‌ವೇರ್‌ ಇಂಜಿನಿಯರ್ – Kannada News

ಬೆಂಗಳೂರು, ಜೂನ್ 08: ಈಗಿನ ಕಾಲದಲ್ಲಿ ಸಂಪಾದನೆ ಎಷ್ಟಿದ್ರು ಕಡಿಮೆಯೇ. ಹೌದು, ಬೆಂಗಳೂರು (Bengaluru) ಸೇರಿದಂತೆ ದೊಡ್ಡ ದೊಡ್ಡ ನಗರಗಳಲ್ಲಿ ಕೆಲಸಕ್ಕೆಂದು ಬಂದವರಲ್ಲಿ ಅನೇಕರು ಕೈಯಲ್ಲಿ ಒಂದು ಉದ್ಯೋಗವಿದ್ರೂ ಪಾರ್ಟ್ ಟೈಮ್ ಆಗಿ ಇನ್ನೊಂದು ಕೆಲಸ ಮಾಡ್ತಾರೆ. ಇದೀಗ ಎಂಎನ್‌ಸಿ ಕಂಪೆನಿಯಲ್ಲಿ ಕೈ ತುಂಬಾ ಸಂಬಳ ಪಡೆಯುವ ವ್ಯಕ್ತಿಯದ್ದು ಅದೇ ಕಥೆ. ಬೆಂಗಳೂರಿನ ಸಾಫ್ಟ್ ವೇರ್ ಉದ್ಯೋಗಿಯೊಬ್ಬರು ವಾರಾಂತ್ಯದಲ್ಲಿ ರ‍್ಯಾಪಿಡೋ ಬೈಕ್ ಚಾಲಕನಾಗಿ ಕೆಲಸ ಮಾಡುತ್ತಿದ್ದಾರೆ. ಎಕ್ಸ್ ಖಾತೆಯಲ್ಲಿ ಹಂಚಿಕೊಂಡ ಈ ಪೋಸ್ಟ್ ಸದ್ಯ  ವೈರಲ್ ಆಗಿದ್ದು, ಆರ್ಥಿಕ ಅಭದ್ರತೆಯ ಕುರಿತು ಚರ್ಚೆಯನ್ನು ಹುಟ್ಟು ಹಾಕಿದೆ.

ಶಬಾಜ್ (Shabaz) ಎಂಬ ಬಳಕೆದಾರರು ತಮ್ಮ ಎಕ್ಸ್ ಖಾತೆಯಲ್ಲಿ ಈ ಪೋಸ್ಟ್ ಹಂಚಿಕೊಂಡಿದ್ದಾರೆ. ನಾನು ನಗರದ ಬನ್ನೇರುಘಟ್ಟಕ್ಕೆ ಪ್ರಯಾಣಿಸಲು ರ‍್ಯಾಪಿಡೋ ಬೈಕ್ ಬುಕ್ ಮಾಡಿದೆ. ಪ್ರಯಾಣದ ವೇಳೆ ರ‍್ಯಾಪಿಡೋ ಬೈಕ್ ಚಾಲಕನನ್ನು ಮಾತನಾಡಿಸಿದೆ. ಮೊದಲು ನಾನು ಕನ್ನಡದಲ್ಲಿ ಮಾತನಾಡಿ, ನಂತರ ನನಗೆ ಕನ್ನಡ ಸರಿಯಾಗಿ ಬಾರದಿರುವುದನ್ನು ಅವರು ಗಮನಿಸಿದ್ರು. ತಕ್ಷಣವೇ ನನ್ನ ಜತೆಗೆ ಇಂಗ್ಲಿಷ್‌ ನಲ್ಲಿ ಮಾತನಾಡಲು ಶುರು ಮಾಡಿದ್ದಾರೆ. ಹೀಗೆ ಮಾತನಾಡುತ್ತಿದ್ದ ವೇಳೆ ನಾನು ಸಾಫ್ಟ್‌ವೇರ್ ಇಂಜಿನಿಯರ್ ಎಂದು ಹೇಳಿದೆ. ಆದರೆ ರ‍್ಯಾಪಿಡೋ  ಚಾಲಕ ಎಂಎನ್‌ಸಿ ಕಂಪನಿಯಲ್ಲಿ ಹಿರಿಯ ಸಾಫ್ಟ್‌ವೇರ್ ಡೆವಲಪರ್ ಆಗಿ ಕೆಲಸ ಮಾಡುತ್ತಿದ್ದೇನೆ ಎಂದರು.

ವೈರಲ್ ಪೋಸ್ಟ್ ಇಲ್ಲಿದೆ

ತಿಂಗಳಿಗೆ ಲಕ್ಷಕ್ಕೂ ಅಧಿಕ ಸಂಬಳವಿದೆ ಕೇಳಿ ನನಗೆ ಆಶ್ಚರ್ಯ ಆಯ್ತು. ಈ ಕೆಲಸ ಯಾಕಾಗಿ ಎಂದು ಕೇಳಿದ್ದಕ್ಕೆ ತಮಗೆ ಮದುವೆಯಾಗಿದ್ದು, ಒಂದು ಸಣ್ಣ ಮಗುವಿದೆ. ಹೆಚ್ಚುವರಿ ಆದಾಯವನ್ನು ಬಯಸುವುದರಿಂದ ಬೈಕ್‌ ಓಡಿಸುತ್ತೇನೆ ಎಂದರು. ಈ ಮಾತು ನಿಜವಾಗಿಯೂ ನನ್ನನ್ನು ಯೋಚಿಸುವಂತೆ ಮಾಡಿತು. ಉತ್ತಮ ತಾಂತ್ರಿಕ ಕೆಲಸ ಮತ್ತು ಆರು ಅಂಕಿಗಳ ಸಂಬಳ ಹೊಂದಿರುವ ಯಾರಾದರೂ ಇನ್ನೂ ವಾರಾಂತ್ಯದ ಟೈಮ್ ಸೈಡ್ ಹಸ್ಸಲ್ ಅಗತ್ಯವನ್ನು ಅನುಭವಿಸಿದರೆ, ಬೆಂಗಳೂರು ಮತ್ತು ಇತರ ಟೈಯರ್-1 ನಗರಗಳಲ್ಲಿ ಜೀವನ ಎಷ್ಟು ದುಬಾರಿಯಾಗಿದೆ? ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: 9 ಟು 5 ಲೈಫ್ ಬೇಡಪ್ಪಾ: ಬೆಂಗಳೂರಲ್ಲಿ 60 ಸಾವಿರ ಸಂಬಳದ ಕೆಲಸಕ್ಕೆ 22ರ ಯುವತಿ ದಿಢೀರ್ ರಿಸೈನ್!

ಈ ಪೋಸ್ಟ್ ಎಂಭತ್ತು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ದುಡಿಮೆಯಿದ್ರೂ ಜವಾಬ್ದಾರಿಗಳು ಎಲ್ಲವನ್ನು ಮಾಡಿಸುತ್ತದೆ ಎಂದು ಹೇಳಿದ್ದಾರೆ. ಇನ್ನೊಬ್ಬರು, ನಿಮ್ಮ ಮನೆಯಲ್ಲಿ ನೀವೇ ಏಕೈಕ ಜೀವನಾಧಾರವಾಗಿದ್ದಾಗ ಒತ್ತಡದಿಂದ ಕೂಡಿರುತ್ತದೆ ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗುತ್ತದೆ. ಜೊತೆಗೆ, ಇಎಂಐ, ಮಕ್ಕಳ ಶಿಕ್ಷಣ ಮತ್ತು ಪೋಷಕರನ್ನು ಬೆಂಬಲಿಸುವ ಆರು ಅಂಕಿಗಳ ಸಂಬಳದಲ್ಲೂ ಉಳಿತಾಯ ಮಾಡಲಾಗದು ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಹೆಗಲ ಮೇಲಿರುವ ಜವಾಬ್ದಾರಿಗಳು ಎಲ್ಲವನ್ನೂ ಮಾಡಿಸುತ್ತದೆ ಎಂದು ಕಾಮೆಂಟ್ ನಲ್ಲಿ ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version