Headlines

ಹಿಮಾಚಲ ಪ್ರದೇಶದ ಚಂಬಾದಲ್ಲಿ ಟಾಟಾ ಸುಮೋ ಮೇಲೆ ಬಿದ್ದ ಬಂಡೆ; 13 ಜನ ಸಾವು – Kannada News | 13 people dead as massive boulder crushes Tata Sumo in Himachal Pradesh Chamba after Landslide

ಶಿಮ್ಲಾ, ಜುಲೈ 24: ಹಿಮಾಚಲ ಪ್ರದೇಶದ ಲಾಹಾಲ್-ಸ್ಪಿತಿ ಜಿಲ್ಲೆಯಲ್ಲಿ ಪ್ರಯಾಣಿಕರಿದ್ದ ಟ್ಯಾಕ್ಸಿಯೊಂದರ ಮೇಲೆ ಬಂಡೆಗಳು ಬಿದ್ದು 13 ಜನರು ಪ್ರಾಣ ಕಳೆದುಕೊಂಡಿದ್ದಾರೆ, ಇಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ. ಉದಯಪುರ-ಕಿಲ್ಲಾರ್ ರಸ್ತೆಯ ಕಡು ನಾಲಾ ಬಳಿ ಟ್ಯಾಕ್ಸಿ ಚಲಿಸುತ್ತಿದ್ದಾಗ ಈ ದುರಂತ ಸಂಭವಿಸಿದೆ. ದಿಢೀರನೆ ಸಂಭವಿಸಿದ ಭೂಕುಸಿತದಿಂದಾಗಿ (Chamba Landslide) ದೊಡ್ಡ ಬಂಡೆಗಳು ಕಾರಿನ ಮೇಲೆ ಬಿದ್ದು, ಚಂಬಾ ಜಿಲ್ಲೆಗೆ ಸೇರಿದ ಪ್ರಯಾಣಿಕರು ಒಳಗಡೆ ಸಿಲುಕಿಕೊಂಡರು. ಆ ಪ್ರದೇಶದಲ್ಲಿ ಭೂಕುಸಿತವಾದ ನಂತರ ಗುರುವಾರ ರಾತ್ರಿ ಉದಯಪುರ-ಕಿಲ್ಲಾರ್ ರಸ್ತೆಯನ್ನು ಬಂದ್ ಮಾಡಲಾಗಿತ್ತು….

Read More

ಇನಾಪರೇಟಿವ್ ಇಪಿಎಫ್ ಅಕೌಂಟ್​ಗಳಲ್ಲಿ ಕೊಳೆಯುತ್ತಿದೆ 9,330 ಕೋಟಿ ರೂ.; ಏನು ಮಾಡಬೇಕು? – Kannada News | Inoperative EPF accounts have nearly Rs 10k crore in 26fy, govt tells Rajya Sabha

ನವದೆಹಲಿ, ಜುಲೈ 24: ನೌಕರರ ಭವಿಷ್ಯ ನಿಧಿ ಸಂಸ್ಥೆಯ (EPFO) ಸಕ್ರಿಯವಿಲ್ಲದ (Inoperative/Unclaimed) ಇಪಿಎಫ್‌ ಖಾತೆಗಳಲ್ಲಿ ಬರೋಬ್ಬರಿ 9,330 ಕೋಟಿ ರೂ ಮೊತ್ತದಷ್ಟು ಹಣ ಯಾರೂ ಹಿಂಪಡೆಯದೆ ಹಾಗೇ ಕೊಳೆಯುತ್ತಿದೆ. 2026ರ ಮಾರ್ಚ್ 31ರವರೆಗಿನ ಈ ಮಾಹಿತಿಯನ್ನು ಸರ್ಕಾರ ಹಂಚಿಕೊಂಡಿದೆ. ಕಾರ್ಮಿಕ ಮತ್ತು ಉದ್ಯೋಗ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ರಾಜ್ಯಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ಇನಾಪರೇಟಿವ್ ಇಪಿಎಫ್ ಅಕೌಂಟ್​ಗಳಲ್ಲಿರುವ ಹಣದ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಖಾತೆಗಳು ಯಾವುವು, ನಿಮ್ಮ ಖಾತೆಯೂ ಇದರಲ್ಲಿ ಇದೆಯೇ ಮತ್ತು…

Read More

Ants: ಇರುವೆಗಳು ಸಾಲಾಗಿ ಚಲಿಸುವುದರ ಹಿಂದಿದೆ ಈ ಕಾರಣ – Kannada News | Ants: Why do ants move in a line?

ಮನೆಯಲ್ಲಿ ಸಿಹಿತಿಂಡಿ (sweets) ಏನಾದ್ರೂ ಕಂಡ್ರೆ ಇರುವೆಗಳು (Ants) ಮುತ್ತಿಕೊಳ್ಳುತ್ತವೆ. ಚುರುಕಿನ ಜೀವಿಗಳಾಗಿರುವ ಈ ಇರುವೆಗಳು ಸಾಲುಗಟ್ಟಿ ಅತ್ತಿಂದ ಇತ್ತ ಓಡಾಡುವುದನ್ನು ನೀವು ನೋಡುತ್ತೀರಿ. ಸಾಲುಗಟ್ಟಿ ಹೋಗುವ ಈ ಪುಟ್ಟ ಜೀವಿಗಳಿಗೆ ತೊಂದರೆ ಎದುರಾದರೆ ತನ್ನ ಬಳಗಕ್ಕೆ ಸೂಚನೆ ನೀಡುತ್ತವೆ. ಆದರೆ ನೀವು ಇರುವೆಗಳು ಸಾಲಾಗಿ ಯಾಕೆ ಓಡಾಡುತ್ತವೆ ಎಂದು ಒಮ್ಮೆಯಾದರೂ ಯೋಚಿಸಿದ್ದೀರಾ. ಇದಕ್ಕೆ ಕಾರಣ ಇರುವೆಗಳು ಬಿಡುಗಡೆ ಮಾಡುವ ಫೆರೋಮೋನ್ಸ್ ಎಂಬ ರಾಸಾಯನಿಕ ಅಂಶ. ಈ ಕುರಿತಾದ ಕಂಪ್ಲೀಟ್ ಮಾಹಿತಿ ಇಲ್ಲಿದೆ. ಇರುವೆಗಳು ಸಾಲಿನಲ್ಲಿ ಚಲಿಸುವುದು…

Read More

ವಿಂಡೀಸ್ ವಿರುದ್ಧದ ಏಕದಿನ ಸರಣಿಗೆ ಟೀಂ ಇಂಡಿಯಾದ ಸ್ಟಾರ್ ಆಟಗಾರರು ಅಲಭ್ಯ – Kannada News | Bumrah, Iyer, Kishan Miss WI ODIs for Asian Games 2026: Team India Squad Dilemma

ಪ್ರಸ್ತುತ ಟೀಂ ಇಂಡಿಯಾ (Team India), ಜಿಂಬಾಬ್ವೆ ವಿರುದ್ಧ ಮೂರು ಪಂದ್ಯಗಳ ಟಿ20 ಸರಣಿಯನ್ನು ಆಡುತ್ತಿದೆ. ಈ ಸರಣಿಯ ಬಳಿಕ ಶ್ರೀಲಂಕಾ ವಿರುದ್ಧ ಟೆಸ್ಟ್ ಸರಣಿಯನ್ನು ಆಡಲಿದೆ. ಈ ಸರಣಿಗಾಗಿ ಮುಂದಿನ ತಿಂಗಳು ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದೆ. ಅಲ್ಲಿಂದ ವಿವಿಧ ಸ್ವರೂಪಗಳಲ್ಲಿ ಬೇರೆ ಬೇರೆ ದೇಶಗಳ ವಿರುದ್ಧ ಟೀಂ ಇಂಡಿಯಾ ಪಂದ್ಯಗಳನ್ನು ಆಡಲಿದೆ. ಆ ಪ್ರಕಾರ ಟೀಂ ಇಂಡಿಯಾ ಸೆಪ್ಟೆಂಬರ್​ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ (India vs West Indies) ಏಕದಿನ ಸರಣಿಯನ್ನು ಆಡಲಿದೆ. ಆದರೆ ಈ…

Read More

ಸೂರ್ಯಾಸ್ತದ ಸುಂದರ ತಾಣಕ್ಕೀಗ ಕತ್ತಲ ಛಾಯೆ: ಕ್ಷಿತಿಜ ನೇಸರಧಾಮಕ್ಕೆ ಬೇಕಿದೆ ತುರ್ತು ಕಾಯಕಲ್ಪ – Kannada News | Nesargadhama Byndoor: Udupi’s Neglected Coastal Tourist Spot Needs Urgent Revival

ಉಡುಪಿ, ಜಿಲೈ 24: ಅರಬ್ಬಿ ಸಮುದ್ರದ ಅಪರೂಪದ ಸೂರ್ಯಾಸ್ತ ನೋಟ, ಹಚ್ಚಹಸಿರಿನ ಪ್ರಕೃತಿ, ಸಮುದ್ರದ ತಂಗಾಳಿ ಮತ್ತು ಪ್ರಶಾಂತ ವಾತಾವರಣದಿಂದ ಕರಾವಳಿಯ ಪ್ರಮುಖ ಪ್ರವಾಸಿ ತಾಣವಾಗಿ ಗುರುತಿಸಿಕೊಂಡಿರುವ ಬೈಂದೂರಿನ ನೇಸರಧಾಮ (kshitija nesara dhama) ಇಂದು ಅಭಿವೃದ್ಧಿಯ ನಿರೀಕ್ಷೆಯಲ್ಲಿ ನಿಂತಿದೆ. ಸಾವಿರಾರು ಪ್ರವಾಸಿಗರನ್ನು ಸೆಳೆಯುವ ಸಾಮರ್ಥ್ಯ ಹೊಂದಿದ್ದರೂ, ಸೂಕ್ತ ನಿರ್ವಹಣೆ ಮತ್ತು ಮೂಲ ಸೌಕರ್ಯಗಳ ಕೊರತೆಯಿಂದ ಈ ಸುಂದರ ತಾಣ ತನ್ನ ಕಳೆ ಕಳೆದುಕೊಳ್ಳುತ್ತಿದೆ. ನೇಸರಧಾಮದಲ್ಲಿ ಮೂಲ ಸೌಕರ್ಯಗಳ ಕೊರತೆ ಸದಾ ಪ್ರವಾಸಿಗರಿಂದ ಕಿಕ್ಕಿರಿದು ತುಂಬಿರುತ್ತಿದ್ದ ನೇಸರಧಾಮದಲ್ಲಿ…

Read More

‘ಜನ ನಾಯಗನ್’ ಸಿನಿಮಾ ತಂಡದ ವಿರುದ್ಧ ಬೇಸರ ಹೊರಹಾಕಿದ ಯುವನಟಿ – Kannada News | Actress Anandi Ajay cried after her scenes in Jana Nayagan movie edited out

ದಳಪತಿ ವಿಜಯ್ (Thalapathy Vijay) ನಟನೆಯ ‘ಜನ ನಾಯಗನ್’ ಸಿನಿಮಾ ನಿನ್ನೆಯಷ್ಟೆ ಬಿಡುಗಡೆ ಆಗಿದೆ. ಸಿನಿಮಾದ ಬಗ್ಗೆ ಋಣಾತ್ಮಕ ಅಭಿಪ್ರಾಯಗಳೇ ಹೆಚ್ಚು ವ್ಯಕ್ತವಾಗಿದೆ. ಆದರೂ ಸಹ ಸಿನಿಮಾ ಮೊದಲ ದಿನ ಬಾಕ್ಸ್ ಆಫೀಸ್​​ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದೆ. ನಟಿ ತ್ರಿಷಾ ಕೃಷ್ಣನ್ ಸೇರಿದಂತೆ ವಿಜಯ್ ಅವರ ಪಕ್ಷದ ಶಾಸಕರು, ಸಚಿವರುಗಳು ಸಿನಿಮಾ ನೋಡಿ ಸಂಭ್ರಮಿಸಿದ್ದಾರೆ. ಸಿನಿಮಾನಲ್ಲಿ ನಟಿಸಿರುವ ಕೆಲ ಕಲಾವಿದರು ಸಹ ಮೊದಲ ದಿನ ಸಿನಿಮಾ ನೋಡಿ, ಮಾಧ್ಯಮಗಳೊಟ್ಟಿಗೆ ಶೂಟಿಂಗ್ ಅನುಭವಗಳನ್ನು ಸಹ ಹಂಚಿಕೊಂಡಿದ್ದಾರೆ. ಆದರೆ ಈ…

Read More

ಶೇರುಪೇಟೆಗೆ ಈ ವಾರ ರಕ್ತದೋಕುಳಿ; ಸೆನ್ಸೆಕ್ಸ್​ನಿಂದ 2,092, ನಿಫ್ಟಿಯಿಂದ 567 ಅಂಕಗಳು ಕುಸಿತ – Kannada News | Indian stock market big crash this week, know reasons why shares are falling

ನವದೆಹಲಿ, ಜುಲೈ 24: ಭಾರತೀಯ ಶೇರು ಮಾರುಕಟ್ಟೆಯಲ್ಲಿ (Stock Market) ಭಾರಿ ಕುಸಿತ ಕಂಡಿದ್ದು, ಸೆನ್ಸೆಕ್ಸ್ ಹಾಗೂ ನಿಫ್ಟಿ 50 ಸೂಚ್ಯಂಕಗಳು ಶುಕ್ರವಾರ ಭಾರೀ ನಷ್ಟ ಅನುಭವಿಸಿವೆ. ಇದರಿಂದ ಹೂಡಿಕೆದಾರರ ಸುಮಾರು ₹4 ಲಕ್ಷ ಕೋಟಿ ರೂಪಾಯಿ ಸಂಪತ್ತು ಕೊಚ್ಚಿಹೋಗಿದೆ. ಇದು ಇವತ್ತು ಒಂದೇ ದಿನದಲ್ಲಿ ಕಂಡ ನಷ್ಟ. ಆದರೆ, ಈ ವಾರ ಸಂಪೂರ್ಣ ಕುಸಿತದ ವಾರವಾಗಿದೆ. ವಾರದ ಐದೂ ಸೆಷನ್​ಗಳೂ ಮಾರುಕಟ್ಟೆಗೆ ಹಿನ್ನಡೆ ತಂದಿವೆ. ಸೋಮವಾರ (ಜುಲೈ 20) ನಿಫ್ಟಿ ಸೂಚ್ಯಂಕ 24,334 ಅಂಕಗಳಲ್ಲಿತ್ತು. ಇವತ್ತು…

Read More

ಪೋಷಕರೇ ಎಚ್ಚರ! ಮಕ್ಕಳಲ್ಲಿ ಜಂಕ್ ಫುಡ್ ಅಭ್ಯಾಸ ಹೆಚ್ಚಿದರೆ ಈ ಗಂಭೀರ ಆರೋಗ್ಯ ಸಮಸ್ಯೆಗಳು ಬರಬಹುದು! – Kannada News | Junk Food and Childhood Obesity: What Every Parent Should Know

ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಜಂಕ್ ಫುಡ್ (Junk Food) ಸೇವನೆ ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಶಾಲೆ, ಕಾಲೇಜು ಮತ್ತು ವಿದ್ಯಾರ್ಥಿ ವಸತಿ ನಿಲಯಗಳ ಸುತ್ತಮುತ್ತ ಮಾರಾಟವಾಗುವ ಜಂಕ್ ಫುಡ್‌ಗಳ ಗುಣಮಟ್ಟದ ಮೇಲೆ ಆಹಾರ ಸುರಕ್ಷತಾ ಅಧಿಕಾರಿಗಳು ವಿಶೇಷ ನಿಗಾ ವಹಿಸುತ್ತಿದ್ದಾರೆ. ವಿವಿಧ ಆಹಾರ ಪದಾರ್ಥಗಳ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಗಳಲ್ಲಿ ಪರೀಕ್ಷೆ ನಡೆಸಲಾಗುತ್ತಿದ್ದು, ಗುಣಮಟ್ಟದ ಮಾನದಂಡಗಳನ್ನು ಉಲ್ಲಂಘಿಸುವ ಆಹಾರಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ. ತಜ್ಞರ ಪ್ರಕಾರ, ಮಕ್ಕಳಲ್ಲಿ ಹೆಚ್ಚುತ್ತಿರುವ ಬೊಜ್ಜು (Obesity), ಟೈಪ್-2 ಮಧುಮೇಹ, ಕೊಲೆಸ್ಟ್ರಾಲ್,…

Read More

‘ವಾರಣಾಸಿ’ ಟೈಟಲ್ ವಿವಾದ ಸುಖಾಂತ್ಯ, ರಾಜಮೌಳಿ ನಿರಾಳ – Kannada News | Varanasi movie title confusion ends, director Subbareddy gave away title rights

ರಾಜಮೌಳಿ (Rajamouli) ನಿರ್ದೇಶನ ಮಾಡಿ, ಮಹೇಶ್ ಬಾಬು, ಪ್ರಿಯಾಂಕಾ ಚೋಪ್ರಾ ಮತ್ತು ಪೃಥ್ವಿರಾಜ್ ಸುಕುಮಾರ್ ನಟಿಸಿರುವ ‘ವಾರಣಾಸಿ’ ಸಿನಿಮಾ ವಿಶ್ವದ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದು ಎನಿಸಿಕೊಂಡಿದೆ. ‘ಆರ್​​ಆರ್​​ಆರ್’ ಸಿನಿಮಾದ ಬಳಿಕ ರಾಜಮೌಳಿಯ ಸಿನಿಮಾಗಳಿಗೆ ವಿಶ್ವ ಬಾಕ್ಸ್ ಆಫೀಸ್​​ನಲ್ಲಿ ಭಾರಿ ಬೇಡಿಕೆ ಕುದುರಿದ್ದು, ‘ವಾರಣಾಸಿ’ ಸಿನಿಮಾದ ಬಗ್ಗೆ ಸಿನಿಮಾ ಪ್ರೇಮಿಗಳಲ್ಲಿ ಈಗಿನಿಂದಲೇ ಕುತೂಹಲ ಜೋರಾಗಿದೆ. ಸಿನಿಮಾದ ಹೆಸರನ್ನು ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ರಾಜಮೌಳಿ ಘೋಷಣೆ ಮಾಡಿದ್ದರು. ಆದರೆ ಆ ಟೈಟಲ್ ಘೋಷಣೆಯ ಬಳಿಕ ಸಣ್ಣ ವಿವಾದವೊಂದು…

Read More

ಸಾಮಾಜಿಕ ಜಾಲತಾಣಗಳಲ್ಲಿ ಕೋರ್ಟ್ ನೇರಪ್ರಸಾರದ ವಿಡಿಯೋ ಶೇರ್ ಮಾಡುವಂತಿಲ್ಲ; ಸುಪ್ರೀಂ ಕೋರ್ಟ್ ಆದೇಶ – Kannada News | Supreme Court restricts sharing of live streamed court videos on social media

ನವದೆಹಲಿ, ಜುಲೈ 24: ನ್ಯಾಯಾಲಯದ ವಿಚಾರಣೆಗಳ ನೇರಪ್ರಸಾರದ ಆಡಿಯೋಗಳನ್ನು ಅನುಮತಿಯಿಲ್ಲದೆ ಕಟ್ ಮಾಡುವುದು, ಎಡಿಟ್ ಮಾಡುವುದು, ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡುವುದು, ಮರುಪೋಸ್ಟ್ ಮಾಡುವುದು ಮತ್ತು ಅವುಗಳಿಂದ ಹಣ ಗಳಿಸುವುದನ್ನು ಸುಪ್ರೀಂ ಕೋರ್ಟ್ (Supreme Court) ಕಟ್ಟುನಿಟ್ಟಾಗಿ ನಿಷೇಧಿಸಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿ ಜೋಯ್‌ಮಲ್ಯ ಬಾಗ್ಚಿ ಮತ್ತು ನ್ಯಾಯಮೂರ್ತಿ ವಿ. ಮೋಹನ ಅವರನ್ನೊಳಗೊಂಡ ಪೀಠವು ಈ ಮಧ್ಯಂತರ ಆದೇಶವನ್ನು ಹೊರಡಿಸಿದೆ. ಸುಪ್ರೀಂ ಕೋರ್ಟ್‌ನ ಸೆಕ್ರೆಟರಿ ಜನರಲ್ ಅಥವಾ ಸಂಬಂಧಪಟ್ಟ ಹೈಕೋರ್ಟ್‌ಗಳ ರಿಜಿಸ್ಟ್ರಾರ್ ಜನರಲ್‌ಗಳ ಪೂರ್ವಾನುಮತಿ ಇಲ್ಲದೆ…

Read More