ಮುಂದಿನ ತಿಂಗಳಿನಿಂದ ಹೊಸ ಕಾರುಗಳ ಬೆಲೆ ಭಾರೀ ಏರಿಕೆ: ಈ ತಿಂಗಳೇ ಬುಕ್ಕಿಂಗ್ ಮಾಡಲು ಮುಗಿಬಿದ್ದ ಜನ! – Kannada News | New Car Prices to Rise From Next Month, Buyers Rush to Book Vehicles This Month

ಬೆಂಗಳೂರು, ಜುಲೈ 24: ಜಿಎಸ್ಟಿ- 2.0 ಜಾರಿಯಾದ ಮೇಲೆ ಹೊಸ ಕಾರುಗಳನ್ನು ಖರೀದಿ ಮಾಡುವವರ ಸಂಖ್ಯೆ ವಿಪರೀತ ಹೆಚ್ಚಾಗಿತ್ತು. ಇದೀಗ ಯುದ್ದದ ಎಫೆಕ್ಟ್​ನಿಂದ ಕಚ್ಚಾವಸ್ತುಗಳ ಬೆಲೆ ಏರಿಕೆ (Car Price Hike) ಆಗಿದ್ದು, ಮುಂದಿನ ತಿಂಗಳಿನಿಂದ ಹೊಸ ಕಾರುಗಳ ಮೇಲೆ 50 ರಿಂದ 60 ಸಾವಿರ ರೂ.ಯಷ್ಟು ಹೆಚ್ಚಳವಾಗಲಿದ್ದು, ಹೀಗಾಗಿ ಜನರು ಈ ತಿಂಗಳೇ ಕಾರು ಬುಕ್ಕಿಂಗ್ ಮಾಡಲು ಮುಂದಾಗಿದ್ದಾರೆ.

ಯುದ್ಧದ ಎಫೆಕ್ಟ್​: ಕಾರುಗಳ ಬೆಲೆ ಏರಿಕೆ

ಜಿಎಸ್ಟಿ 2-0 ಜಾರಿಯಾದ ಮೇಲೆ ಕಾರುಗಳ ಮೇಲೆ 50 ರಿಂದ 1 ಲಕ್ಷ ರೂ.ವರೆಗೆ, ದ್ವಿಚಕ್ರ ವಾಹನಗಳ ಮೇಲೆ 10 ರಿಂದ 20 ಸಾವಿರ ರೂ.ವರೆಗೆ ಬೆಲೆ ಕಡಿಮೆ ಆಗಿತ್ತು. ಈ ಹಿನ್ನೆಲೆ ಹೊಸ ವಾಹನ ಖರೀದಿ ಮಾಡುವವರ ಸಂಖ್ಯೆ ವಿಪರೀತವಾಗಿ ಹೆಚ್ಚಳವಾಗಿತ್ತು. ಇದೀಗ ಯುದ್ಧದ ಎಫೆಕ್ಟ್​ನಿಂದ ಕಚ್ಚಾ ವಸ್ತುಗಳ ಬೆಲೆ ಏರಿಕೆ ಆಗಿರುವ ಹಿನ್ನೆಲೆ, ಹೊಸ ಕಾರುಗಳ ಮೇಲೆ ಎಕ್ಸ್ ಶೋ ರೂಂ ಬೆಲೆ ಮೇಲೆ 45 ರಿಂದ 50 ಸಾವಿರ ರೂ.ವರೆಗೆ ಏರಿಕೆ ಆದರೆ, ಆನ್-ರೋಡ್ ಬೆಲೆ ಮೇಲೆ 15 ರಿಂದ 20 ರೂ.ವರೆಗೆ ಏರಿಕೆ ಆಗುವ ಸಾಧ್ಯತೆ ಇದೆ. ಅಂದರೆ ಹೊಸ ಕಾರು ಕೊಳ್ಳುವವರಿಗೆ 60 ರಿಂದ 70 ಸಾವಿರ ರೂ. ಹೆಚ್ಚಾಗಲಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿವೆ ಬರೋಬ್ಬರಿ 25 ಲಕ್ಷ ಪ್ರೈವೆಟ್ ಕಾರುಗಳು! ದೆಹಲಿ, ಮುಂಬೈಗೇ ಸೆಡ್ಡು ಹೊಡೆದ ಸಿಲಿಕಾನ್ ಸಿಟಿ

ಇನ್ನು ಕಳೆದ ಕೆಲ ತಿಂಗಳಿನಿಂದ ಕಾರುಗಳ ಬೆಲೆ ನಿರಂತರವಾಗಿ ಏರಿಕೆ ಆಗುತ್ತಲೇ ಇದೆ. ಆಗಸ್ಟ್​ ತಿಂಗಳಿನಿಂದ ಹೊಸ ದರ ಜಾರಿ ಆಗಲಿದೆ. ವಾಹನ ತಯಾರಿಕಾ ಸಂಸ್ಥೆಗಳು ತಮ್ಮ ಉತ್ಪಾದನಾ ವೆಚ್ಚವನ್ನು ಸರಿದೂಗಿಸಲು ಬೆಲೆ ಏರಿಕೆಯ ಹಾದಿ ಹಿಡಿದಿವೆ. ಪ್ರತಿ ಮಾಡೆಲ್​ಗಳ ಮೇಲೆ 20 ರಿಂದ 50 ಸಾವಿರ ರೂ. ದರ ಏರಿಕೆ ಆಗುವ ಸಾಧ್ಯತೆ ಇದೆ.

ಐಷಾರಾಮಿ ಕಾರುಗಳ ಬೆಲೆ ಏರಿಕೆ ಇಲ್ಲ

ಐಷಾರಾಮಿ ಕಾರುಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ ಎನ್ನಲಾಗುತ್ತಿದೆ. ಸಾಮಾನ್ಯ ಜನರು ಖರೀದಿ ಮಾಡುವ ಕಾರುಗಳ ಮೇಲೆ ಮಾತ್ರ ಬೆಲೆ ಏರಿಕೆ ಆಗಲಿದೆ. ಅಂದರೆ 10ರಿಂದ 15 ಲಕ್ಷದೊಳಗಿನ ಕಾರುಗಳ ಬೆಲೆ ಹೆಚ್ಚಳವಾಗಲಿದೆ.

ಗ್ರಾಹಕರು ಹೇಳಿದ್ದಿಷ್ಟು 

ಈ ಬಗ್ಗೆ ಗ್ರಾಹಕರಾದ ವೆಂಕಟ್ ಅವರು ಮಾತನಾಡಿದ್ದು, ‘ಮುಂದಿನ ತಿಂಗಳಿನಿಂದ ಕಾರಿನ ಬೆಲೆ ಏರಿಕೆ ಆಗಲಿರುವ ಹಿನ್ನೆಲೆ, ನಾವು ಈ ತಿಂಗಳೇ ಕಾರು ಬುಕ್ ಮಾಡಿದ್ದೇವೆ. ಇದರಿಂದ ನಮಗೆ ತುಂಬಾ ಹಣ ಉಳಿತಾಯವಾಗಿದೆ’ ಎಂದಿದ್ದಾರೆ.

ಇದನ್ನೂ ಓದಿ: ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್‌ ವೇ ಟೋಲ್ ದರ ಒಂದೇ ವರ್ಷದಲ್ಲಿ 2ನೇ ಬಾರಿ ಏರಿಕೆ, ವಾಹನ ಸವಾರರು ಆಕ್ರೋಶ

ಒಟ್ಟಿನಲ್ಲಿ ಜಿಎಸ್​​ಟಿ ಕಡಿಮೆ ಆದ ಮೇಲೆ ಕಾರುಗಳನ್ನು ಕೊಳ್ಳುವವರ ಸಂಖ್ಯೆ ಹೆಚ್ಚಾಗಿತ್ತು, ಆದರೆ ಮುಂದಿನ ತಿಂಗಳಿನಿಂದ ಕಾರುಗಳ ಮೇಲೆ ಬೆಲೆ ಏರಿಕೆ ಆಗ್ತಿರೋದ್ರಿಂದ ಒಂದಷ್ಟು ಗ್ರಾಹಕರಿಗೆ ಹೊರೆ ಆಗುವುದಂತು ಸುಳ್ಳಲ್ಲ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ವಿದ್ಯಾರ್ಥಿ ಪ್ರತಿಭಟನೆ: ಮೌನ ವಹಿಸಿದ್ದಕ್ಕೆ ಕಾರಣ ತಿಳಿಸಿದ ಆಮಿರ್ ಖಾನ್ ಪುತ್ರಿ ಇರಾ ಖಾನ್ – Kannada News | Aamir Khan Daughter Ira Khan explains why she did not speak about CJP student protests

ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಪ್ರತಿಭಟನೆಯ (CJP Student Protests) ಕುರಿತು ಕಳೆದ ಕೆಲವು ದಿನಗಳಿಂದ ಬಾಲಿವುಡ್‌ನ ಹಲವು ತಾರೆಯರು ಧ್ವನಿ ಎತ್ತಿದ್ದಾರೆ. ಸಲ್ಮಾನ್ ಖಾನ್, ಆಲಿಯಾ ಭಟ್, ಸೋನಾಕ್ಷಿ ಸಿನ್ಹಾ ಮತ್ತು ಕರೀನಾ ಕಪೂರ್ ಸೇರಿದಂತೆ ಅನೇಕ ಪ್ರಮುಖರು ಸಾಮಾಜಿಕ ಜಾಲತಾಣಗಳಲ್ಲಿ ಸಿಜೆಪಿ (CJP) ಪ್ರತಿಭಟನೆಯನ್ನು ಬೆಂಬಲಿಸಿ ವಿದ್ಯಾರ್ಥಿಗಳಿಗೆ ಬೆಂಬಲ ವ್ಯಕ್ತಪಡಿಸಿದ್ದರು. ಆದರೆ, ಈ ವಿಷಯದಲ್ಲಿ ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡದಿದ್ದ ಆಮಿರ್ ಖಾನ್ ಅವರ ಪುತ್ರಿ ಇರಾ ಖಾನ್ (Ira Khan), ತಾವು ಮೌನವಾಗಿದ್ದಕ್ಕೆ ಕಾರಣವೇನೆಂಬುದನ್ನು ಸ್ಪಷ್ಟಪಡಿಸಿದ್ದಾರೆ.

ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ದೀರ್ಘ ವೀಡಿಯೋ ಒಂದನ್ನು ಹಂಚಿಕೊಂಡಿರುವ ಇರಾ ಖಾನ್ ಅವರು, ಈ ವಿಷಯದ ಕುರಿತು ಸುದೀರ್ಘವಾಗಿ ಮಾತನಾಡಿದ್ದಾರೆ ‘ನಾನು ಮಾನಸಿಕ ಆರೋಗ್ಯದ ಕುರಿತು ಸದಾ ಜಾಗೃತಿ ಮೂಡಿಸುವ ಕೆಲಸ ಮಾಡುತ್ತೇನೆ ಮತ್ತು ಆ ವಿಷಯಗಳ ಬಗ್ಗೆ ಮಾತನಾಡಿದಾಗಲೆಲ್ಲಾ ಜನರ ಗಮನವನ್ನು ಕೋರುತ್ತೇನೆ. ಮಾನಸಿಕ ಆರೋಗ್ಯ ಎಂಬುದು ಜೀವನದ ಪ್ರತಿಯೊಂದು ಭಾಗದಲ್ಲೂ ಮುಖ್ಯ. ಆದರೆ, ನಾನು ಈ ಪ್ರತಿಭಟನೆಯ ಬಗ್ಗೆ ಮಾತನಾಡದೇ ಇರಲು ಕೆಲವು ನಿರ್ದಿಷ್ಟ ಕಾರಣಗಳಿವೆ’ ಎಂದು ವೀಡಿಯೋದ ಆರಂಭದಲ್ಲಿ ಇರಾ ತಿಳಿಸಿದ್ದಾರೆ.

‘ಸುದ್ದಿ ಮತ್ತು ವೀಡಿಯೋಗಳಿಂದ ದೂರವಿರುತ್ತೇನೆ’

ತಮ್ಮ ಮೌನಕ್ಕೆ ಕಾರಣವನ್ನು ವಿವರಿಸಿದ ಇರಾ ಖಾನ್ ಅವರು, ‘ಮೊದಲನೆಯದಾಗಿ, ಈ ವಿಷಯದಲ್ಲಿ ಚರ್ಚೆಗೆ ಹೊಸದಾಗಿ ಸೇರಿಸಲು ನನ್ನ ಬಳಿ ಏನೂ ಇಲ್ಲ ಎನಿಸಿತು. ಮುಖ್ಯವಾಗಿ ನಾನು ಸುದ್ದಿಗಳನ್ನು ನೋಡಿ ತಕ್ಷಣಕ್ಕೆ ಭಾವುಕಳಾಗುವುದಿಲ್ಲ. ಯಾವುದೇ ರೀತಿಯ ಹಿಂಸಾಚಾರ ಅಥವಾ ಪ್ರತಿಭಟನೆಯ ವೀಡಿಯೋಗಳನ್ನು ನಾನು ನೋಡುವುದಿಲ್ಲ. ಪ್ರತಿಭಟನೆ ನಡೆಯುತ್ತಿದೆ ಎಂಬುದು ನನಗೆ ತಿಳಿದಿದೆ. ಆದರೆ ಅವುಗಳನ್ನು ಭಾವುಕವಾಗಿ ನನ್ನ ಮನಸ್ಸಿಗೆ ತೆಗೆದುಕೊಳ್ಳುವುದಿಲ್ಲ. ಏಕೆಂದರೆ ಅದು ನನ್ನನ್ನು ತೀವ್ರವಾಗಿ ಕಾಡುತ್ತದೆ. ನಾನು ಅಸಹಾಯಕಳಾಗುತ್ತೇನೆ. ವ್ಯವಸ್ಥೆಯ ಹೊರತಾಗಿ ಅಥವಾ ಯಾವುದೇ ವ್ಯವಸ್ಥೆಯ ಹಂಗಿಲ್ಲದೆ ಒಬ್ಬ ವ್ಯಕ್ತಿಯಾಗಿ ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ಹೇಗೆ ಉತ್ತಮವಾಗಿ ಕಾರ್ಯನಿರ್ವಹಿಸಬಹುದು ಎಂಬುದರತ್ತ ನಾನು ಗಮನ ಹರಿಸುತ್ತೇನೆ. ಇದು ಅತ್ಯುತ್ತಮ ಮಾರ್ಗ ಎಂದು ನಾನು ಹೇಳುತ್ತಿಲ್ಲ, ಆದರೆ ನಾನು ಅನುಸರಿಸುವುದು ಇದನ್ನೇ’ ಎಂದಿದ್ದಾರೆ.

‘ಸಹೋದರಿಯ ವೀಡಿಯೋ ನೋಡಿ ಗಾಬರಿಯಾಗಿದ್ದೆ’

ಇದೇ ವೇಳೆ ತಮ್ಮ ಕುಟುಂಬದ ಅನುಭವವೊಂದನ್ನು ಹಂಚಿಕೊಂಡ ಇರಾ, ‘ಸುದ್ದಿ ಮತ್ತು ಸಾಮಾಜಿಕ ಜಾಲತಾಣಗಳಿಂದ ದೂರವಿರುವ ಕಾರಣ ನನಗೆ ಈ ಬಗ್ಗೆ ಯಾವುದೇ ಭಾವನೆಗಳು ಮೂಡಿರಲಿಲ್ಲ. ಆದರೆ ಯಾರೋ ಒಬ್ಬರು ನನಗೆ ರೀಲ್ಸ್‌ ಒಂದನ್ನು ಕಳುಹಿಸಿ, ಅದರಲ್ಲಿ ನನ್ನ ಸಹೋದರಿ ಇದ್ದಾಳೆ ಮತ್ತು ಆಕೆಯನ್ನು ಪ್ರತಿಭಟನೆಯಲ್ಲಿ ಬಂಧಿಸುವ ಸಾಧ್ಯತೆಯಿದೆ ಎಂದು ತಿಳಿಸಿದಾಗ ನಾನು ತೀವ್ರವಾಗಿ ಗಾಬರಿಯಾಗಿದ್ದೆ. ಆದರೆ ಆಕೆ ಸುರಕ್ಷಿತವಾಗಿದ್ದಾಳೆ ಎಂದು ತಿಳಿದ ತಕ್ಷಣ ನಾನು ಮತ್ತೆ ನನ್ನ ಕೆಲಸಕ್ಕೆ ಮರಳಿದೆ. ನಾನು ಈ ಬಗ್ಗೆ ಮಾತನಾಡದಿರುವುದು ನನಗೆ ಕಾಳಜಿಯಿಲ್ಲ ಎಂಬ ಅರ್ಥವನ್ನು ನೀಡಿದ್ದರೆ ಕ್ಷಮಿಸಿ, ಅದು ನನ್ನ ಉದ್ದೇಶವಾಗಿರಲಿಲ್ಲ’ ಎಂದು ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: ‘ಮನೆಗೆ ವಾಪಸ್ ಹೋಗಿ’: ಮೋದಿ ಟ್ವೀಟ್ ಬಳಿಕ ವಿದ್ಯಾರ್ಥಿಗಳಿಗೆ ಸಲ್ಮಾನ್ ಖಾನ್ ಮನವಿ

ಈ ಪ್ರತಿಭಟನೆಯು ಪರೀಕ್ಷೆಗಳಿಗೆ ಸಂಬಂಧಿಸಿದ್ದು ಎಂಬ ಅರಿವು ನನಗಿದೆ ಎಂದಿರುವ ಇರಾ, ಮಾತುಕತೆ ಮತ್ತು ಭಿನ್ನಾಭಿಪ್ರಾಯಗಳಿಗೆ ಸದಾ ಜಾಗವಿರಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ‘ಸುದ್ದಿಗಳಿಂದ ಕಣ್ಣು ಮುಚ್ಚಿ ಕುಳಿತುಕೊಳ್ಳುವುದು ಕೂಡ ಒಂದು ಸೌಲಭ್ಯವೇ ಆಗಿದೆ. ನನ್ನ ಮೌಲ್ಯಗಳಿಗೆ ತಕ್ಕಂತೆ ನಾನು ಹೇಗೆ ಸಹಾಯ ಮಾಡಲು ಸಾಧ್ಯ ಎಂಬುದನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದೇನೆ’ ಎಂದು ಅವರು ವೀಡಿಯೋದ ಕ್ಯಾಪ್ಷನ್‌ನಲ್ಲಿ ಬರೆದುಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಜೋ ರೂಟ್​ಗೆ ಮತ್ತೆ ಇಂಗ್ಲೆಂಡ್‌ ಟೆಸ್ಟ್ ತಂಡದ ನಾಯಕತ್ವ – Kannada News | Joe Root to Return as England Test Captain? ECB Search Nears End After Stokes’ Exit

ಜೋ ರೂಟ್ 65 ಟೆಸ್ಟ್ ಪಂದ್ಯಗಳಲ್ಲಿ ಇಂಗ್ಲೆಂಡ್ ತಂಡದ ನಾಯಕತ್ವ ವಹಿಸಿದ್ದು, 27 ಪಂದ್ಯಗಳಲ್ಲಿ ಗೆಲುವು ಸಾಧಿಸಿ 27 ಪಂದ್ಯಗಳಲ್ಲಿ ಸೋತಿದ್ದಾರೆ. ಹಾಗೆಯೇ ನಾಯಕನಾಗಿ ಜೋ ರೂಟ್ ಟೆಸ್ಟ್‌ನಲ್ಲಿ ಅಸಾಧಾರಣ ಪ್ರದರ್ಶನ ನೀಡಿದ್ದು, 46.71 ಸರಾಸರಿಯಲ್ಲಿ 5418 ರನ್ ಗಳಿಸಿದ್ದಾರೆ, ಇದರಲ್ಲಿ 15 ಶತಕಗಳು ಸೇರಿವೆ(PC-PTI).

Source link

ನಮೋ ಕ್ರೇಜ್; ಇನ್‌ಸ್ಟಾಗ್ರಾಮ್‌ನಲ್ಲಿ ಪ್ರಧಾನಿ ಮೋದಿಗೆ ರಾತ್ರೋರಾತ್ರಿ 1.1 ಮಿಲಿಯನ್ ಫಾಲೋವರ್ಸ್ ಹೆಚ್ಚಳ – Kannada News | PM Narendra Modi gained over 1 million followers on Instagram overnight after his Selfie video Release

ನವದೆಹಲಿ, ಜುಲೈ 24: ಪ್ರಧಾನಿ ನರೇಂದ್ರ ಮೋದಿ (Prime Minsiter Narendra Modi) ನಿನ್ನೆ ರಾತ್ರಿ ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯ (NEET Paper Leak) ಬಗ್ಗೆ ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಸೆಲ್ಫಿ ವಿಡಿಯೋ ಅಪ್​ಲೋಡ್ ಮಾಡಿದ್ದರು. ಇದಾದ ಬಳಿಕ ಅವರಿಗೆ ರಾತ್ರೋರಾತ್ರಿ 1.1 ಮಿಲಿಯನ್ ಇನ್‌ಸ್ಟಾಗ್ರಾಮ್ ಫಾಲೋವರ್ಸ್ ಹೆಚ್ಚಾಗಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ (PM Modi Instagram) ಅವರು ನಿನ್ನೆ ಅಪ್​ಲೋಡ್ ಮಾಡಿದ ಸೆಲ್ಫಿ ವಿಡಿಯೋ ಬಳಿಕ, ಕೇವಲ ಒಂದೇ ರಾತ್ರಿಯಲ್ಲಿ ಸುಮಾರು 11 ಲಕ್ಷ ಹೊಸ ಇನ್‌ಸ್ಟಾಗ್ರಾಮ್ ಅನುಯಾಯಿಗಳನ್ನು ಗಳಿಸಿಕೊಂಡಿದ್ದಾರೆ.

ಇನ್​ಸ್ಟಾಗ್ರಾಂನಲ್ಲಿ ಈ ವಿಡಿಯೋ ಅಪ್‌ಲೋಡ್ ಮಾಡುವ ಮೊದಲು ಪ್ರಧಾನಿ ಮೋದಿ 101 ಮಿಲಿಯನ್ ಫಾಲೋವರ್ಸ್ ಹೊಂದಿದ್ದರು. ಈ ವಿಡಿಯೋ ಅಪ್‌ಲೋಡ್ ಮಾಡಿದ ನಂತರ ಆ ಸಂಖ್ಯೆ 102 ಮಿಲಿಯನ್ ದಾಟಿದೆ. ಫಾಲೋವರ್ಸ್‌ಗಳ ಈ ಹೆಚ್ಚಳವು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜನಪ್ರಿಯತೆ ಎಷ್ಟಿದೆ ಎಂಬುದನ್ನು ಸ್ಪಷ್ಟಪಡಿಸುತ್ತದೆ.

ಇದನ್ನೂ ಓದಿ: ನೀಟ್ ಪ್ರತಿಭಟನೆ, ಪ್ರಧಾನಿ ಮೋದಿ ಹೇಳಿಕೆ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮಹತ್ವದ ಹೇಳಿಕೆ

ಮೋದಿಯ ಸೆಲ್ಫಿ ವಿಡಿಯೋ:

ನೀಟ್ (NEET) ಪರೀಕ್ಷಾ ಪೇಪರ್ ಸೋರಿಕೆ ವಿವಾದ ಮತ್ತು ವಿದ್ಯಾರ್ಥಿಗಳ ಪ್ರತಿಭಟನೆಗಳ ನಡುವೆ, ಪ್ರಧಾನಿ ಮೋದಿ ಅವರು ನಿನ್ನೆ ಮಧ್ಯರಾತ್ರಿ ತಮ್ಮ ಮೊಬೈಲ್‌ನ ಸೆಲ್ಫಿ ಕ್ಯಾಮೆರಾದಲ್ಲಿ ಸೆಲ್ಫಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಯಾವುದೇ ಅಧಿಕೃತ ಸ್ಟುಡಿಯೋ ಅಥವಾ ಪೋಡಿಯಂ ಇಲ್ಲದೆ, ನೇರವಾಗಿ ಯುವಜನತೆಯನ್ನು ಉದ್ದೇಶಿಸಿ ಮಾತನಾಡಿದ ಈ ‘ಜೆನ್-ಝಡ್’ (Gen-Z) ಶೈಲಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಮೂಡಿಸಿತ್ತು.

ಪೇಪರ್ ಲೀಕ್ ವಿರುದ್ಧ ಕಠಿಣ ಕಾನೂನುಗಳು ಮತ್ತು ಫಾಸ್ಟ್ ಟ್ರ್ಯಾಕ್ ಕೋರ್ಟ್‌ಗಳ ಸ್ಥಾಪನೆಯ ಕುರಿತು ಪ್ರಕಟಿಸಿದ ಈ ವಿಡಿಯೋ ಕೋಟ್ಯಂತರ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಇದರ ಬೆನ್ನಲ್ಲೇ ಅವರ ಇನ್‌ಸ್ಟಾಗ್ರಾಮ್ ಖಾತೆಗೆ ಲಕ್ಷಾಂತರ ಜನ ಹೊಸ ಫಾಲೋವರ್ಸ್ ಸೇರ್ಪಡೆಗೊಂಡಿದ್ದಾರೆ. ಇದರೊಂದಿಗೆ ಪ್ರಧಾನಿ ಮೋದಿ ಅವರ ಒಟ್ಟು ಇನ್‌ಸ್ಟಾಗ್ರಾಮ್ ಫಾಲೋವರ್ಸ್ ಸಂಖ್ಯೆ 102 ಮಿಲಿಯನ್‌ಗೆ ತಲುಪಿದೆ.

ಇದನ್ನೂ ಓದಿ: ಪ್ರಶ್ನೆಪತ್ರಿಕೆ ಸೋರಿಕೆ ಸಣ್ಣ ವಿಷಯವಲ್ಲ, ಕಠಿಣ ಕಾನೂನು ರೂಪಿಸ್ತೇವೆ: ತಡರಾತ್ರಿ ಸೆಲ್ಫಿ ವಿಡಿಯೋ ಮಾಡಿ ಮೋದಿ ಭರವಸೆ

ಮೋದಿಯ ಜನಪ್ರಿಯತೆ ಕಡಿಮೆಯೇನಿಲ್ಲ!:

ಪ್ರಧಾನಿ ನರೇಂದ್ರ ಮೋದಿ ಈಗಾಗಲೇ ಇನ್‌ಸ್ಟಾಗ್ರಾಮ್‌ನಲ್ಲಿ ಅತಿ ಹೆಚ್ಚು ಫಾಲೋವರ್‌ಗಳನ್ನು ಹೊಂದಿರುವ ಜಾಗತಿಕ ನಾಯಕ ಎಂಬ ದಾಖಲೆಯನ್ನು ನಿರ್ಮಿಸಿದ್ದಾರೆ. ನರೇಂದ್ರ ಮೋದಿ ಈಗಾಗಲೇ 100 ಮಿಲಿಯನ್‌ಗಿಂತಲೂ ಹೆಚ್ಚು ಫಾಲೋವರ್‌ಗಳ ಅಪರೂಪದ ಮೈಲಿಗಲ್ಲನ್ನು ದಾಟುವ ಮೂಲಕ ಇತಿಹಾಸವನ್ನು ಸೃಷ್ಟಿಸಿದ್ದಾರೆ. ಪ್ರಧಾನಿ ಮೋದಿಯವರ ಫಾಲೋವರ್‌ಗಳ ಸಂಖ್ಯೆ ಅಮೆರಿಕದ ಅಧ್ಯಕ್ಷ ಟ್ರಂಪ್, ಯುಕೆ ಪ್ರಧಾನಿ ಮತ್ತು ಇತರ ಜಾಗತಿಕ ನಾಯಕರಿಗಿಂತ ಹಲವು ಪಟ್ಟು ಹೆಚ್ಚಾಗಿದೆ ಎಂಬುದು ಅವರ ಜನಪ್ರಿಯತೆಯನ್ನು ಸಾರುತ್ತದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 8:26 pm, Fri, 24 July 26

Source link

ಜಿಎಸ್​ಟಿ ಕಾಂಪೆನ್ಸೇಶನ್ ಸೆಸ್ ಅಂತ್ಯವಾದರೂ ರಾಜ್ಯಗಳಿಗೆ ತಗ್ಗಲ್ಲ ತೆರಿಗೆ ಸುಗ್ಗಿ; ಸಿಗಲಿದೆ 1.43 ಲಕ್ಷ ಕೋಟಿ ರೂ ಹೆಚ್ಚುವರಿ ಆದಾಯ – Kannada News | States to gain lot taxes despite the end of GST compensation cess, says SBI research report

ನವದೆಹಲಿ, ಜುಲೈ 24: ಜಿಎಸ್‌ಟಿ ಪರಿಹಾರ ಕರ (GST Compensation Cess) ಮುಕ್ತಾಯಗೊಂಡಿದ್ದರೂ ಮುಂಬರುವ 2026-27ನೇ ಹಣಕಾಸು ವರ್ಷದಲ್ಲಿ (FY27) ಭಾರತದ ರಾಜ್ಯಗಳು ಸುಮಾರು ₹1.43 ಲಕ್ಷ ಕೋಟಿ ಹೆಚ್ಚುವರಿ ಆದಾಯವನ್ನು (Net Gain) ಗಳಿಸಲಿವೆ ಎಂದು ಎಸ್‌ಬಿಐ ರಿಸರ್ಚ್ (SBI Research) ತನ್ನ ‘Ecowrap’ ವರದಿಯಲ್ಲಿ ತಿಳಿಸಿದೆ.

2017ರಲ್ಲಿ ಜಿಎಸ್‌ಟಿ ಜಾರಿಗೆ ಬಂದಾಗ ರಾಜ್ಯಗಳಿಗಾಗುವ ಆದಾಯ ನಷ್ಟವನ್ನು ಸರಿದೂಗಿಸಲು ಜಿಎಸ್‌ಟಿ ಪರಿಹಾರ ಕರವನ್ನು (ವಿಶೇಷವಾಗಿ ತಂಬಾಕು, ಪಾನ್ ಮಸಾಲಾ ಮುಂತಾದ ವಸ್ತುಗಳ ಮೇಲೆ) ಜಾರಿಗೊಳಿಸಲಾಗಿತ್ತು. ಈ ಕಾಂಪೆನ್ಸೇಶನ್ ಸೆಸ್ ಫೆಬ್ರವರಿ 1, 2026 ರಂದು ಅಧಿಕೃತವಾಗಿ ಅಂತ್ಯಗೊಂಡಿತು. ಪರಿಹಾರ ಕರ ರದ್ದಾದ ಕಾರಣ ರಾಜ್ಯಗಳಿಗೆ ವರ್ಷಕ್ಕೆ ₹15,000 ದಿಂದ ₹20,000 ಕೋಟಿ ನಷ್ಟವಾಗಬಹುದು ಎಂಬ ಆತಂಕ ಕೆಲ ಆರ್ಥಿಕ ತಜ್ಞರಲ್ಲಿ ಮೂಡಿತ್ತು.

ಎಸ್‌ಬಿಐ ರಿಸರ್ಚ್ ಭಿನ್ನ ಅಭಿಪ್ರಾಯ

ಕೇಂದ್ರೀಯ ಅಬಕಾರಿ ಕಾಯ್ದೆಯಡಿ (Central Excise Act) ಹೆಚ್ಚುವರಿ ಅಬಕಾರಿ ಸುಂಕವನ್ನು (AED) ತಂದಿರುವುದರಿಂದ ಮತ್ತು ಜಿಎಸ್‌ಟಿ ಸಂಗ್ರಹ ಹೆಚ್ಚಿರುವುದರಿಂದ ರಾಜ್ಯಗಳಿಗೆ ನಷ್ಟವಾಗುವುದಿಲ್ಲ, ಬದಲಿಗೆ ಲಾಭವಾಗಲಿದೆ ಎಂದು ಎಸ್‌ಬಿಐ ಹೇಳಿದೆ.

ಇದನ್ನೂ ಓದಿ: ಇನಾಪರೇಟಿವ್ ಇಪಿಎಫ್ ಅಕೌಂಟ್​ಗಳಲ್ಲಿ ಕೊಳೆಯುತ್ತಿದೆ 9,330 ಕೋಟಿ ರೂ.; ಏನು ಮಾಡಬೇಕು?

FY27 ರಲ್ಲಿ ಜಿಎಸ್‌ಟಿ ಮತ್ತು ಅಬಕಾರಿ ಸುಂಕದಿಂದ ರಾಜ್ಯಗಳಿಗೆ ಸಿಗುವ ಒಟ್ಟು ಪಾಲು ₹19.1 ಲಕ್ಷ ಕೋಟಿಗೆ ಏರಿಕೆಯಾಗುವ ನಿರೀಕ್ಷೆ ಇದೆ (FY26 ರಲ್ಲಿ ಇದು ₹17.7 ಲಕ್ಷ ಕೋಟಿಯಷ್ಟಿತ್ತು). ಇದು ನಿವ್ವಳ ₹1.43 ಲಕ್ಷ ಕೋಟಿಯಷ್ಟು ಹೆಚ್ಚಳವಾಗಿದೆ.

ಆದಾಯ ಹೆಚ್ಚಳಕ್ಕೆ ಮುಖ್ಯ ಕಾರಣಗಳು

ಕೆಲವು ವಿಶೇಷ ವಸ್ತುಗಳ ಮೇಲಿನ ಜಿಎಸ್‌ಟಿ ದರವನ್ನು ಶೇ. 28 ರಿಂದ ಶೇ. 40 ಕ್ಕೆ ಹೆಚ್ಚಿಸಲಾಗಿದೆ. ಇದರಿಂದ ರಾಜ್ಯಗಳ ಆದಾಯದ ಪಾಲು (SGST) ಹೆಚ್ಚಾಗಿದೆ. ಉದಾಹರಣೆಗೆ, ಮೊದಲು ₹100 ಮೌಲ್ಯದ ವಹಿವಾಟಿನಲ್ಲಿ ರಾಜ್ಯಕ್ಕೆ ₹19.74 ಸಿಗುತ್ತಿದ್ದರೆ, ಹೊಸ ತೆರಿಗೆ ವ್ಯವಸ್ಥೆಯಲ್ಲಿ ರಾಜ್ಯಕ್ಕೆ ₹28.20 ದೊರೆಯುತ್ತದೆ.

ಸುಸ್ಥಿರ ಆದಾಯ ಬೆಳವಣಿಗೆ

ಜಿಎಸ್‌ಟಿ ಜಾರಿಯಾದ ನಂತರದ ಅವಧಿಯಲ್ಲಿ ರಾಜ್ಯಗಳ ಎಸ್‌ಜಿಎಸ್‌ಟಿ (SGST) ಆದಾಯವು ಸರಾಸರಿ ಶೇ. 13 ರಷ್ಟು ಸತತ ಬೆಳವಣಿಗೆ ಕಾಣುತ್ತಿದೆ (ಜಿಎಸ್‌ಟಿ ಜೂನ್‌ಗೆ 9 ವರ್ಷ ಪೂರೈಸಿದೆ). ಹೀಗಾಗಿ ಪರಿಹಾರ ಕರದ ಬೆಂಬಲವಿಲ್ಲದೆಯೂ ರಾಜ್ಯಗಳು ದೃಢವಾದ ಆದಾಯ ಬೆಳವಣಿಗೆ ಸಾಧಿಸಲು ಶಕ್ತವಾಗಿವೆ ಎಂದು ಎಸ್‌ಬಿಐ ವರದಿ ಸ್ಪಷ್ಟಪಡಿಸಿದೆ.

ಇದನ್ನೂ ಓದಿ: ಶೇರುಪೇಟೆಗೆ ಈ ವಾರ ರಕ್ತದೋಕುಳಿ; ಸೆನ್ಸೆಕ್ಸ್​ನಿಂದ 2,092, ನಿಫ್ಟಿಯಿಂದ 567 ಅಂಕಗಳು ಕುಸಿತ

ಒಟ್ಟಾರೆ, ಜಿಎಸ್‌ಟಿ ಪರಿಹಾರ ಕರ ಕೊನೆಗೊಂಡಿದ್ದರೂ, ಜಿಎಸ್‌ಟಿ ತೆರಿಗೆ ಸಂಗ್ರಹದಲ್ಲಿನ ಸತತ ಏರಿಕೆ ಮತ್ತು ಪರಿಷ್ಕೃತ ಹಂಚಿಕೆ ವ್ಯವಸ್ಥೆಯಿಂದಾಗಿ ರಾಜ್ಯಗಳ ಖಜಾನೆಗೆ ನಷ್ಟವಾಗುವ ಬದಲು ಬೃಹತ್ ಪ್ರಮಾಣದ ಲಾಭವಾಗಲಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On – 8:22 pm, Fri, 24 July 26

Source link

ನಿರ್ಲಕ್ಷಿತ ವೃದ್ಧರ ರಕ್ಷಣೆಗೆ ಹೊಸ ಕಾಯ್ದೆ: 24/7 ಸೇವೆ, ಆಶ್ರಯ ತಾಣಗಳಿಗೆ ಹೈಕೋರ್ಟ್ ಸೂಚನೆ – Kannada News | High Court Calls for Comprehensive Law to Protect Neglected Senior Citizens

ಬೆಂಗಳೂರು, ಜುಲೈ 24: ರಾಜ್ಯದಲ್ಲಿ ಆಶ್ರಯವಿಲ್ಲದೆ ನಿರ್ಲಕ್ಷಿಸಲ್ಪಟ್ಟ ಹಾಗೂ ವಿವಿಧ ರೀತಿಯ ಶೋಷಣೆಗೆ ಒಳಗಾಗಿರುವ ಅಸಹಾಯಕ ಹಿರಿಯ ನಾಗರಿಕರ (Senior Citizen) ರಕ್ಷಣೆ ಮತ್ತು ಆರೈಕೆಗಾಗಿ ‘ಬಾಲ ನ್ಯಾಯ (ಆರೈಕೆ ಮತ್ತು ರಕ್ಷಣೆ) ಕಾಯ್ದೆ’ಯ ಮಾದರಿಯಲ್ಲಿ ಸಮಗ್ರವಾದ ನೂತನ ಕಾಯ್ದೆಯನ್ನು ಜಾರಿಗೆ ತರುವಂತೆ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ (Karnataka High Court) ಮಹತ್ವದ ನಿರ್ದೇಶನ ನೀಡಿದ್ದು, ಪ್ರಕರಣದ ಮುಂದಿನ ವಿಚಾರಣೆಯನ್ನು ಆಗಸ್ಟ್ 10ಕ್ಕೆ ಮುಂದೂಡಿದೆ.

ಅಸಹಾಯಕ ವೃದ್ಧರಿಗೆ ರಕ್ಷಣೆ, ಆರೈಕೆ ಅಗತ್ಯ

ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ಪೀಠವು ಶುಕ್ರವಾರ ಆದೇಶ ಹೊರಡಿಸಿದ್ದು, ವೃದ್ಧಾಪ್ಯದಲ್ಲಿ ಸೂಕ್ತ ಆರೈಕೆಯಿಲ್ಲದೆ ಕಷ್ಟಪಡುತ್ತಿರುವ ಪ್ರತಿಯೊಬ್ಬರಿಗೂ ಕಾನೂನಾತ್ಮಕ ಬೆಂಬಲ ಸಿಗಬೇಕು ಎಂದು ಅಭಿಪ್ರಾಯಪಟ್ಟಿದೆ.

ಇದನ್ನೂ ಓದಿ: ಪಿತ್ರಾರ್ಜಿತ ಆಸ್ತಿ ಎಂದು ಪರಿಗಣಿಸುವುದು ಹೇಗೆ? ಮಕ್ಕಳಿಗೆ ಹಕ್ಕು ಬರುವುದು ಹೇಗೆ? ಮಹತ್ವದ ಕೋರ್ಟ್ ತೀರ್ಪಿನ ಮಾಹಿತಿ ಇಲ್ಲಿದೆ

ಆಶ್ರಯವಿಲ್ಲದವರು, ಮಕ್ಕಳಿಲ್ಲದ ವೃದ್ಧರು, ದೈಹಿಕ, ಮಾನಸಿಕ, ಭಾವನಾತ್ಮಕ ಹಾಗೂ ಆರ್ಥಿಕ ಶೋಷಣೆಗೆ ಒಳಗಾದವರು ಮತ್ತು ದೀರ್ಘಕಾಲಿಕ ಕಾಯಿಲೆಗಳಿಂದ ಬಳಲುತ್ತಿದ್ದರೂ ಆರೈಕೆ ಸಿಗದ ಅಶಕ್ತ ಹಿರಿಯ ನಾಗರಿಕರನ್ನು ಈ ನೂತನ ಕಾಯ್ದೆಯ ವ್ಯಾಪ್ತಿಗೆ ಸೇರಿಸಬೇಕು ಎಂದು ನ್ಯಾಯಪೀಠ ಸೂಚಿಸಿದೆ.

24 ಗಂಟೆಗಳ ತುರ್ತು ಸ್ಪಂದನಾ ವ್ಯವಸ್ಥೆ

ಹಿರಿಯ ನಾಗರಿಕರ ಸುರಕ್ಷತೆಗಾಗಿ ಜಾರಿಗೆ ತರಬೇಕಾದ ಈ ವ್ಯವಸ್ಥೆಯಲ್ಲಿ 24 ಗಂಟೆಗಳ ತುರ್ತು ಸ್ಪಂದನಾ ವ್ಯವಸ್ಥೆ, ಉಚಿತ ಸಹಾಯವಾಣಿ, ತಾತ್ಕಾಲಿಕ ಆಶ್ರಯ ತಾಣಗಳು ಹಾಗೂ ವಸತಿ ಸೌಲಭ್ಯಗಳನ್ನು ಕಲ್ಪಿಸಬೇಕು. ಜೊತೆಗೆ, ಸಮಗ್ರ ವೃದ್ಧಾಪ್ಯ ಆರೋಗ್ಯ ಸೇವೆ, ನರ್ಸಿಂಗ್ ನೆರವು, ಮಾನಸಿಕ ಆರೋಗ್ಯ ಸೇವೆ, ಅಗತ್ಯ ಸಮಾಲೋಚನೆ ಮತ್ತು ಉಚಿತ ಕಾನೂನು ನೆರವಿನ ಅಂಶಗಳನ್ನು ಒಳಗೊಂಡಿರಬೇಕು ಎಂದು ಪೀಠ ನಿರ್ದೇಶನ ನೀಡಿದೆ.

ಇದನ್ನೂ ಓದಿ: ಹಿಂದೂ ವಿವಾಹ ಒಪ್ಪಂದವಲ್ಲ, ಪವಿತ್ರ ಸಂಸ್ಕಾರ; ಆಸಕ್ತಿ ಇಲ್ಲ ಎಂದು ಹೇಳಿ ಸಂಗಾತಿಯನ್ನು ತೊರೆಯಲು ಸಾಧ್ಯವಿಲ್ಲ: ಕರ್ನಾಟಕ ಹೈಕೋರ್ಟ್

ಗ್ಯಾಂಗ್ರಿನ್ ಹಾಗೂ ಇತರೆ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ವೃದ್ಧೆಯೊಬ್ಬರ ವೈದ್ಯಕೀಯ ತುರ್ತು ಪರಿಸ್ಥಿತಿಗೆ ಸಂಬಂಧಿಸಿದ ಅರ್ಜಿಯ ವಿಚಾರಣೆಗೆ ಸಂಬಂಧಿಸಿದಂತೆ ನ್ಯಾಯಾಲಯ ಈ ನಿರ್ದೇಶನ ನೀಡಿದೆ. ವೃದ್ಧೆಯ ಮಗ ಮತ್ತು ಮಗಳು ತಮ್ಮ ತಾಯಿಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ. ಅತ್ತ ವೈದ್ಯರು ಚಿಕಿತ್ಸೆಯಿಂದ ಚೇತರಿಕೆ ಸಾಧ್ಯವಿಲ್ಲವೆಂದು ಡಿಸ್ಚಾರ್ಜ್ ಮಾಡಿದ್ದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

IPL 2027: ಮತ್ತೊಬ್ಬ ಸ್ಟಾರ್ ಆಟಗಾರನನ್ನು ಬಿಟ್ಟುಕೊಡಲು ಮುಂದಾದ ಲಕ್ನೋ

Source link

ಬಾಂಗ್ಲಾದೇಶದ ಅಧ್ಯಕ್ಷ ಮೊಹಮ್ಮದ್ ಶಹಾಬುದ್ದೀನ್ ರಾಜೀನಾಮೆ – Kannada News | Close Ally Of Sheikh Hasina Bangladesh President Mohammed Shahabuddin Resigns

ಢಾಕಾ, ಜುಲೈ 24: ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ನಿಕಟವರ್ತಿಯಾಗಿದ್ದ ಬಾಂಗ್ಲಾದೇಶದ ಅಧ್ಯಕ್ಷ ಮೊಹಮ್ಮದ್ ಶಹಾಬುದ್ದೀನ್ ಅವರು ತೀವ್ರ ಆರೋಗ್ಯ ಸಮಸ್ಯೆಯನ್ನು ಉಲ್ಲೇಖಿಸಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. 76 ವರ್ಷದ ಶಹಾಬುದ್ದೀನ್ ಏಪ್ರಿಲ್ 2023ರಿಂದ ನಾಮಕಾವಸ್ತೆ ಎಂಬಂತೆ ಬಾಂಗ್ಲಾದೇಶದ ಅಧ್ಯಕ್ಷೀಯ ಹುದ್ದೆಯಲ್ಲಿದ್ದರು. 2024ರಲ್ಲಿ ಅವರ ಆಡಳಿತದ ವಿರುದ್ಧ ವಿದ್ಯಾರ್ಥಿಗಳ ನೇತೃತ್ವದಲ್ಲಿ ನಡೆದ ದಂಗೆಯ ನಂತರ ಶೇಖ್ ಹಸೀನಾ (Sheikh Hasina) ಭಾರತಕ್ಕೆ ಪಲಾಯನ ಮಾಡಿದ ನಂತರದ ಅವಧಿಯಲ್ಲೂ ಶಹಾಬುದ್ದೀನ್ ಅಧ್ಯಕ್ಷ ಹುದ್ದೆಯಲ್ಲಿ ಮುಂದುವರಿದಿದ್ದರು.

ಕಳೆದ ಕೆಲವು ತಿಂಗಳುಗಳಿಂದ ತಮ್ಮ ಆರೋಗ್ಯ ತೀವ್ರವಾಗಿ ಕ್ಷೀಣಿಸಿದೆ ಎಂದು ಶಹಾಬುದ್ದೀನ್ ತಿಳಿಸಿದ್ದಾರೆ. ತಾವು ಆಟೋನಾಮಿಕ್ ನ್ಯೂರೋಪತಿ ಎಂಬ ನರಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು, ಇದು ತಮ್ಮ ಶಾರೀರಿಕ ಸ್ಥಿತಿಯ ಮೇಲೆ ತೀವ್ರ ಪರಿಣಾಮ ಬೀರಿದೆ ಎಂದು ಅವರು ರಾಜೀನಾಮೆ ಪತ್ರದಲ್ಲಿ ಬರೆದಿದ್ದಾರೆ.

ರಾಷ್ಟ್ರದ ಮುಖ್ಯಸ್ಥರಾಗಿ ಶಹಾಬುದ್ದೀನ್ ಅವರು ಸಶಸ್ತ್ರ ಪಡೆಗಳ ಸುಪ್ರೀಂ ಕಮಾಂಡರ್ ಆಗಿದ್ದರಾದರೂ, 17.3 ಕೋಟಿ ಜನಸಂಖ್ಯೆಯನ್ನು ಹೊಂದಿರುವ ಈ ಮುಸ್ಲಿಂ ಪ್ರಾಬಲ್ಯದ ದೇಶದಲ್ಲಿ ಕಾರ್ಯಾಂಗದ ಅಧಿಕಾರವು ಪ್ರಧಾನಿ ಮತ್ತು ಸಂಪುಟದ ಬಳಿಯಲ್ಲೇ ಇರುತ್ತದೆ.

ಇದನ್ನೂ ಓದಿ: ಗಲ್ಲು ಶಿಕ್ಷೆಗೆ ಒಳಗಾಗಿರುವ ಶೇಖ್ ಹಸೀನಾ ಭಾರತದಲ್ಲಿ ಎಷ್ಟು ದಿನ ಇರಬಹುದು? ಸರ್ಕಾರದ ಉತ್ತರ ಇಲ್ಲಿದೆ

ಮಾಜಿ ನ್ಯಾಯಾಧೀಶರೂ ಆಗಿದ್ದ ಶಹಾಬುದ್ದೀನ್, 2023ರ ಏಪ್ರಿಲ್​ನಲ್ಲಿ ಬಾಂಗ್ಲಾದೇಶದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದರು. ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ಸರ್ಕಾರವು 2010ರಲ್ಲಿ ಸ್ಥಾಪಿಸಿದ್ದ ‘ಇಂಟರ್ ನ್ಯಾಷನಲ್ ಕ್ರೈಮ್ಸ್ ಟ್ರಿಬ್ಯೂನಲ್-ಬಾಂಗ್ಲಾದೇಶ’ ನಂತರದ ದಿನಗಳಲ್ಲಿ ಶೇಖ್ ಹಸೀನಾ ಅವರಿಗೇ ಶಿಕ್ಷೆ ವಿಧಿಸಿತ್ತು. ಶೇಖ್ ಹಸೀನಾ ಅವರ ಸರ್ಕಾರದ ಪತನದ ನಂತರ, ಮುಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರವು ಈ ಟ್ರಿಬ್ಯೂನಲ್‌ನ ಕಾಯಿದೆಗೆ ತಿದ್ದುಪಡಿ ತಂದು, ಮಾಜಿ ಅವಾಮಿ ಲೀಗ್ ನಾಯಕರು ಮತ್ತು ಸರ್ಕಾರಿ ಅಧಿಕಾರಿಗಳ ಮೇಲಿನ ಮಾನವೀಯತೆಯ ವಿರುದ್ಧದ ಅಪರಾಧಗಳ ವಿಚಾರಣೆ ನಡೆಸಲು ಹೆಚ್ಚಿನ ಅಧಿಕಾರ ನೀಡಿತು.

ಇನ್ನು, ಭಾರತದಲ್ಲಿ ಆಶ್ರಯ ಪಡೆದಿರುವ ಶೇಖ್ ಹಸೀನಾ ಈ ವರ್ಷದ ಅಂತ್ಯದೊಳಗೆ ಬಾಂಗ್ಲಾದೇಶಕ್ಕೆ ಮರಳಲು ಯೋಜಿಸಿರುವುದಾಗಿ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ್ದ ಬಾಂಗ್ಲಾದೇಶ ಸರ್ಕಾರ, ಅವರ ಆಗಮನವನ್ನು ಸ್ವಾಗತಿಸುವುದಾಗಿ ಹೇಳಿತ್ತಾದರೂ ದೇಶಕ್ಕೆ ಬಂದ ತಕ್ಷಣ ಅವರು ಕಾನೂನು ಪ್ರಕ್ರಿಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಸ್ಪಷ್ಟಪಡಿಸಿತ್ತು.

ಇದನ್ನೂ ಓದಿ: “ನಾನು ಈ ವರ್ಷವೇ ನನ್ನ ದೇಶಕ್ಕೆ ಮರಳುತ್ತೇನೆ”; ಬಾಂಗ್ಲಾ ಮಾಜಿ ಪ್ರಧಾನಿ ಶೇಖ್ ಹಸೀನಾ

ಶಹಾಬುದ್ದೀನ್ ಅವರ ರಾಜೀನಾಮೆಯಿಂದಾಗಿ, ಈ ವರ್ಷಾಂತ್ಯದಲ್ಲಿ ದೇಶಕ್ಕೆ ಮರಳಲು ಯೋಜಿಸುತ್ತಿರುವ ಶೇಖ್ ಹಸೀನಾ ಅವರಿಗೆ ಉನ್ನತ ಸಾಂವಿಧಾನಿಕ ಹುದ್ದೆಯಲ್ಲಿದ್ದ ಏಕೈಕ ಬೆಂಬಲಿಗನ ರಕ್ಷಣೆಯೂ ಇಲ್ಲದಂತಾಗಿದೆ. 2024ರಲ್ಲಿ ಅವರ ಸರ್ಕಾರವನ್ನು ಪತನಗೊಳಿಸಿದ ಹಿಂಸಾತ್ಮಕ ವಿದ್ಯಾರ್ಥಿ ದಂಗೆಯ ನಂತರ ಅವರ ‘ಅವಾಮಿ ಲೀಗ್’ ಪಕ್ಷವನ್ನು ನಿಷೇಧಿಸಲಾಗಿದೆ. ಆ ಪಕ್ಷದ ಅನೇಕ ನಾಯಕರು ಮತ್ತು ಕಾರ್ಯಕರ್ತರು ಜೈಲುಪಾಲಾಗಿದ್ದಾರೆ ಹಾಗೂ ತಲೆಮರೆಸಿಕೊಂಡಿದ್ದಾರೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ನಮ್ಮ ತಂದೆ ತಾಯಿ ಸಂಸಾರು ಶುರು ಮಾಡಿದ್ದೇ ಬಾಡಿಗೆ ಮನೆಯಿಂದ, ನಾನು ಹುಟ್ಟುವಾಗಲೇ ಅಪ್ಪ ಶಾಸಕ – Kannada News | HD Devegowda daughter Shailaja Talks about Her Mother Chennamma

ಬೆಂಗಳೂರು, (ಜುಲೈ 24): ಮಾಜಿ ಪ್ರಧಾನಿ ಹೆಚ್​​​ಡಿ ದೇವೇಗೌಡ ಅವರ ಪುತ್ರಿಯರಾದ ಅನುಸೂಯಾ ಹಾಗೂ ಶೈಲಾಜಾ ಅವರು ಜಂಟಿ ಸುದ್ದಿಗೋಷ್ಠಿ ನಡೆಸಿ ತಾಯಿ ಚೆನ್ನಮ್ಮರ ಬಗ್ಗೆ ಕೆಲವೊಂದಿರಷ್ಟು ಸಂಗತಿಳಗನ್ನು ಬಿಚ್ಚಿಟ್ಟಿದ್ದಾರೆ. ಪುತ್ರ ಶೈಲಜಾ ಮಾತನಾಡಿ, ನಮ್ಮ ತಂದೆ ತಾಯಿ ಸಂಸಾರು ಶುರು ಮಾಡಿದ್ದೇ ಬಾಡಿಗೆ ಮನೆಯಿಂದ. ನಾನು ಹುಟ್ಟುವಾಗಲೇ ಅಪ್ಪ ಶಾಸಕರಾಗಿದ್ದರು. ಲೋಕೋಪಯೋಗಿ ಸಚಿವರಾಗಿದ್ದಾಗ ಸರ್ಕಾರಿ ನಿವಾಸ ಕೊಟ್ಟಿದ್ರು. ಬಾಡಿಗೆ ಮನೆಗೆ ಹೋಗ್ತೀವಿ ಅಂತ ಅಮ್ಮ ಅಪ್ಪ ಹೇಳಿದ್ರು. ಆಗ ಸಮೀಪದಲ್ಲೇ ಬಾಡಿಗೆ ಮನೆ ಹುಡುಕಲು ಹೋದ್ವಿ. ನಮ್ಮನ್ನ ನೋಡೋಕೆ ಹೋದಾಗ ಪ್ರಧಾನಮಂತ್ರಿ ಹೆಂಡ್ತಿ ಬಾಡಿಗೆಗೆ ಬರ್ತಾರಾ ಅಂತ ಪ್ರಶ್ನೆ ಮಾಡಿದ್ರು. ಮನೆ ಕೊಡೋಕೆ ಹಿಂದೆಮುಂದೆ ನೋಡಿದ್ರು. ರಾಜಕೀಯವಾಗಿ ಏನಾದ್ರೂ ಹೇಳ್ತಿದ್ದಾರಾ ಅಂತ ಅನುಮಾನದಿಂದ ನೋಡಿದ್ರು. ಅಗ್ರಿಮೆಂಟ್ ಹಾಕಿಸಿಕೊಳ್ತೀರಾ? ಅದು ಇದು ಅಂತ ಸಾಕಷ್ಟು ಪ್ರಶ್ನೆ ಮಾಡಿದ್ರು ಎಂದು ಹಿಂದಿನ ನೆನಪುಗಳನ್ನ ಮೆಲುಕು ಹಾಕಿದ್ದಾರೆ.

ಅಮ್ಮ ಬದುಕಿನಲ್ಲಿ ತಮಗಾಗಿ ಏನನ್ನೂ ಕೇಳಿಲ್ಲ. ಕೇಳಿದ್ದೇ ಒಂದು ಚಿಕ್ಕ ಮನೆ. ಹಕ್ಕಿ ಕೂಡ ತನಗಾಗಿ ಗೂಡು ಕಟ್ಟಿಕೊಳ್ಳುತ್ತೆ. ನನ್ನ ಆಸೆ ಸಣ್ಣದೊಂದು ಮನೆ, ಅದೊಂದನ್ನ ನೆರವೇರಿಸಿ ಕೊಡಿ ಅಂತ ತಾಯಿ ಕೇಳಿದ್ರು.ಆರು ಜನ ಮಕ್ಕಳು ಸೇರಿ ಬ್ಯಾಂಕ್ ನಲ್ಲಿ‌ಲೋನ್‌ ತೆಗೆದುಕೊಂಡು ಮನೆ ಕಟ್ಟಿದ್ವಿ. ಐದು ವರ್ಷ ಆ ಮನೆಯಲ್ಲಿ ಪುಟ್ಟ ಮಗು ರೀತಿ ಸಂಭ್ರಮದಿಂದ ವಾಸ ಮಾಡಿದ್ರು. ಆಮೇಲೆ ಇಲ್ಲಿಗೆ ವಾಪಸ್ ಕರೆದುಕೊಂಡು ಬಂದ್ರು. ನಮ್ಮ‌ ಸಂಸ್ಕಾರ, ಸಂಸ್ಕೃತಿ ಅಂತ ಇದೆ. ಕುಟುಂಬಂದ ನೆಮ್ಮದಿ ಈಗ ಹಾಳು ಮಾಡಿಕೊಳ್ತಿದ್ದಾರೆ. ಆದ್ರೆ ತಾಯಿ ಕುಟುಂಬವನ್ನ ಹಿಡಿದಿಟ್ಟಿದ್ದರು. ತಾಯಿ ರಾಜಕೀಯದ ಬಗ್ಗೆ ಎಂದೂ ಮಾತಾಡಿಲ್ಲ. ಮಕ್ಕಳಿಗೆ‌ ಶಿಕ್ಷಣ ಕೊಡಬೇಕು ಅಂತ ಆಸೆ ಇತ್ತು ಎಂದು ತಾಯಿ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಟ್ಟರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಹಿಮಾಚಲ ಪ್ರದೇಶದ ಚಂಬಾದಲ್ಲಿ ಟಾಟಾ ಸುಮೋ ಮೇಲೆ ಬಿದ್ದ ಬಂಡೆ; 13 ಜನ ಸಾವು – Kannada News | 13 people dead as massive boulder crushes Tata Sumo in Himachal Pradesh Chamba after Landslide

ಶಿಮ್ಲಾ, ಜುಲೈ 24: ಹಿಮಾಚಲ ಪ್ರದೇಶದ ಲಾಹಾಲ್-ಸ್ಪಿತಿ ಜಿಲ್ಲೆಯಲ್ಲಿ ಪ್ರಯಾಣಿಕರಿದ್ದ ಟ್ಯಾಕ್ಸಿಯೊಂದರ ಮೇಲೆ ಬಂಡೆಗಳು ಬಿದ್ದು 13 ಜನರು ಪ್ರಾಣ ಕಳೆದುಕೊಂಡಿದ್ದಾರೆ, ಇಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ. ಉದಯಪುರ-ಕಿಲ್ಲಾರ್ ರಸ್ತೆಯ ಕಡು ನಾಲಾ ಬಳಿ ಟ್ಯಾಕ್ಸಿ ಚಲಿಸುತ್ತಿದ್ದಾಗ ಈ ದುರಂತ ಸಂಭವಿಸಿದೆ. ದಿಢೀರನೆ ಸಂಭವಿಸಿದ ಭೂಕುಸಿತದಿಂದಾಗಿ (Chamba Landslide) ದೊಡ್ಡ ಬಂಡೆಗಳು ಕಾರಿನ ಮೇಲೆ ಬಿದ್ದು, ಚಂಬಾ ಜಿಲ್ಲೆಗೆ ಸೇರಿದ ಪ್ರಯಾಣಿಕರು ಒಳಗಡೆ ಸಿಲುಕಿಕೊಂಡರು.

ಆ ಪ್ರದೇಶದಲ್ಲಿ ಭೂಕುಸಿತವಾದ ನಂತರ ಗುರುವಾರ ರಾತ್ರಿ ಉದಯಪುರ-ಕಿಲ್ಲಾರ್ ರಸ್ತೆಯನ್ನು ಬಂದ್ ಮಾಡಲಾಗಿತ್ತು. ಈ ರಸ್ತೆಯನ್ನು ಸಂಚಾರಕ್ಕೆ ಮುಕ್ತಗೊಳಿಸಿದ ನಂತರ ಪ್ರಯಾಣಿಕರು ತಮ್ಮ ಪ್ರಯಾಣವನ್ನು ಮುಂದುವರಿಸಿದರು. ಆದರೆ ಕಡು ನಾಲಾ ಬಳಿ ಟಾಟಾ ಸುಮೊ ಟ್ಯಾಕ್ಸಿಯ ಮೇಲೆ ಭಾರಿ ಬಂಡೆಗಳು ಬಿದ್ದು ನಜ್ಜುಗುಜ್ಜಾಯಿತು.

ಇದನ್ನೂ ಓದಿ: ಜಮ್ಮು-ಕಾಶ್ಮೀರದಲ್ಲಿ ಭೀಕರ ಮೇಘಸ್ಫೋಟ, ಭೂಕುಸಿತ; 11 ಜನ ಸಾವು, ಹಲವರು ನಾಪತ್ತೆ

ಈ ಅಪಘಾತದ ನಂತರ ಸ್ಥಳೀಯ ಪೊಲೀಸರು, ಆಡಳಿತ ಮಂಡಳಿ ಮತ್ತು ವಿಪತ್ತು ಸ್ಪಂದನಾ ಪಡೆಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದವು. ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ತಲುಪಿದಾಗ 13 ಜನರು ಸಾವನ್ನಪ್ಪಿರುವುದು ಮತ್ತು ಇಬ್ಬರು ಗಾಯಗೊಂಡಿರುವುದು ಕಂಡುಬಂದಿದೆ.

“ಪರಿಹಾರ ಕಾರ್ಯಾಚರಣೆಯನ್ನು ಚುರುಕುಗೊಳಿಸುವಂತೆ ನಾವು ಚಂಬಾ ಮತ್ತು ಲಾಹಾಲ್ ಸ್ಪಿತಿ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದೇವೆ. ಪೊಲೀಸ್ ಮತ್ತು ರಕ್ಷಣಾ ಪಡೆಗಳು ಸ್ಥಳದಲ್ಲಿಯೇ ಇವೆ” ಎಂದು ಬಿಜೆಪಿ (BJP) ನಾಯಕ ಜನಕ ರಾಜ್ ತಿಳಿಸಿದ್ದಾರೆ.

ಇದನ್ನೂ ಓದಿ: Wayanad Landslide: ವಯನಾಡು ಭೂಕುಸಿತ, ರಕ್ಷಣಾ ಕಾರ್ಯಾಚರಣೆ ತೀವ್ರ, ಮೂವರು ಸಾವು, ಐವರು ನಾಪತ್ತೆ

ಹಿಮಾಚಲ ಪ್ರದೇಶದಲ್ಲಿ ನಿರಂತರ ಮಳೆ:

ಹಿಮಾಚಲ ಪ್ರದೇಶದಲ್ಲಿ ಸುರಿಯುತ್ತಿರುವ ಭಾರಿ ಮಳೆಯ ನಡುವೆಯೇ ಈ ದುರಂತ ಸಂಭವಿಸಿದೆ. ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರದ (SEOC) ಪ್ರಕಾರ, ಹಿಮಾಲಯನ್ ರಾಜ್ಯದಾದ್ಯಂತ 130ಕ್ಕೂ ಹೆಚ್ಚು ರಸ್ತೆಗಳು ಬಂದ್ ಆಗಿದ್ದು, 64 ಟ್ರಾನ್ಸ್‌ಫಾರ್ಮರ್‌ಗಳು ಹಾನಿಗೊಳಗಾಗಿವೆ. ಮುಂದಿನ ಕೆಲವು ದಿನಗಳ ಕಾಲ ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಹವಾಮಾನ ಇಲಾಖೆಯ ಪ್ರಕಾರ, ಜುಲೈ 26ರವರೆಗೆ ಕೆಲವು ಪ್ರದೇಶಗಳಿಗೆ ‘ಹಳದಿ ಅಲರ್ಟ್’ ನೀಡಲಾಗಿದೆ. ಅಲ್ಲದೆ ಜುಲೈ 27ರಿಂದ 29ರವರೆಗೆ ಭಾರಿ ಮುನ್ನೆಚ್ಚರಿಕೆಯಾಗಿ ‘ಆರೆಂಜ್ ಅಲರ್ಟ್’ ಘೋಷಿಸಲಾಗಿದ್ದು, ಭಾರಿ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version