ಇನಾಪರೇಟಿವ್ ಇಪಿಎಫ್ ಅಕೌಂಟ್​ಗಳಲ್ಲಿ ಕೊಳೆಯುತ್ತಿದೆ 9,330 ಕೋಟಿ ರೂ.; ಏನು ಮಾಡಬೇಕು? – Kannada News | Inoperative EPF accounts have nearly Rs 10k crore in 26fy, govt tells Rajya Sabha

ನವದೆಹಲಿ, ಜುಲೈ 24: ನೌಕರರ ಭವಿಷ್ಯ ನಿಧಿ ಸಂಸ್ಥೆಯ (EPFO) ಸಕ್ರಿಯವಿಲ್ಲದ (Inoperative/Unclaimed) ಇಪಿಎಫ್‌ ಖಾತೆಗಳಲ್ಲಿ ಬರೋಬ್ಬರಿ 9,330 ಕೋಟಿ ರೂ ಮೊತ್ತದಷ್ಟು ಹಣ ಯಾರೂ ಹಿಂಪಡೆಯದೆ ಹಾಗೇ ಕೊಳೆಯುತ್ತಿದೆ. 2026ರ ಮಾರ್ಚ್ 31ರವರೆಗಿನ ಈ ಮಾಹಿತಿಯನ್ನು ಸರ್ಕಾರ ಹಂಚಿಕೊಂಡಿದೆ. ಕಾರ್ಮಿಕ ಮತ್ತು ಉದ್ಯೋಗ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ರಾಜ್ಯಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ಇನಾಪರೇಟಿವ್ ಇಪಿಎಫ್ ಅಕೌಂಟ್​ಗಳಲ್ಲಿರುವ ಹಣದ ಬಗ್ಗೆ ಮಾಹಿತಿ ನೀಡಿದ್ದಾರೆ.

ಈ ಖಾತೆಗಳು ಯಾವುವು, ನಿಮ್ಮ ಖಾತೆಯೂ ಇದರಲ್ಲಿ ಇದೆಯೇ ಮತ್ತು ಈ ಹಣವನ್ನು ಮರಳಿ ಪಡೆಯುವುದು (Claim) ಹೇಗೆ ಎಂಬುದರ ವಿವರಗಳು ಕೆಳಗಿನಂತಿವೆ:

‘ಇಪಿಎಫ್ ಇನ್‌ಆಪರೇಟಿವ್‌ ಅಕೌಂಟ್’ ಎಂದರೆ ಏನು?

ಈ ಕೆಳಗೆ ನಮೂದಿಸಲಾಗಿರುವ ಸನ್ನಿವೇಶದಲ್ಲಿ ಇಪಿಎಫ್‌ ಖಾತೆಯನ್ನು ಸಕ್ರಿಯವಿಲ್ಲದ (Inoperative) ಖಾತೆ ಎಂದು ಪರಿಗಣಿಸಲಾಗುತ್ತದೆ:

  • ಕೆಲಸ ಬದಲಾಯಿಸಿದಾಗ ಅಥವಾ ಕೆಲಸ ತೊರೆದಾಗ ಹಳೆಯ ಖಾತೆಯಿಂದ ಹೊಸ ಖಾತೆಗೆ ಹಣವನ್ನು ವರ್ಗಾಯಿಸದಿದ್ದಲ್ಲಿ (No Transfer) ಹಳೆಯ ಇಪಿಎಫ್ ಖಾತೆಯನ್ನು ಇನಾಪರೇಟಿವ್ ಅಕೌಂಟ್ ಎಂದು ಪರಿಗಣಿಸಲಾಗುತ್ತದೆ.
  • ನಿವೃತ್ತಿಯ ನಂತರ ಅಥವಾ ಕೆಲಸ ತೊರೆದ ನಂತರ ಸತತ 36 ತಿಂಗಳುಗಳ ಕಾಲ (3 ವರ್ಷಗಳು) ಖಾತೆಗೆ ಯಾವುದೇ ಹೊಸ ಕೊಡುಗೆ ಜಮೆಯಾಗದಿದ್ದಲ್ಲಿ, ಅದು ಇನಾಪರೇಟಿವ್ ಅಕೌಂಟ್ ಎನಿಸುತ್ತದೆ.
  • 55 ವರ್ಷ ವಯಸ್ಸಿನ ನಂತರವೂ ಖಾತೆಯಲ್ಲಿರುವ ಹಣವನ್ನು ಹಿಂಪಡೆಯದಿದ್ದಲ್ಲಿ.

ಇದನ್ನೂ ಓದಿ: ಶೇರುಪೇಟೆಗೆ ಈ ವಾರ ರಕ್ತದೋಕುಳಿ; ಸೆನ್ಸೆಕ್ಸ್​ನಿಂದ 2,092, ನಿಫ್ಟಿಯಿಂದ 567 ಅಂಕಗಳು ಕುಸಿತ

ಆದರೆ, ಸಕ್ರಿಯವಿಲ್ಲದ ಖಾತೆಗಳಿಗೆ 36 ತಿಂಗಳ ನಂತರ ಬಡ್ಡಿ ಜಮೆಯಾಗುವುದು ನಿಲ್ಲುತ್ತದಾ ಎನ್ನುವ ಪ್ರಶ್ನೆ ಇದೆ. ಸದ್ಯದ ಮಟ್ಟಿಗೆ ಎಲ್ಲಾ ಇಪಿಎಫ್ ಅಕೌಂಟ್​ಗಳಿಗೂ ಸರ್ಕಾರ ಬಡ್ಡಿ ಹಣ ಭರ್ತಿ ಮಾಡುತ್ತಿದೆ. ಮುಂದೆ ಇದು ಬದಲಾದರೂ ಆಗಬಹುದು. ಹೀಗಾಗಿ, ಇನಾಪರೇಟಿವ್ ಇರುವ ಅಕೌಂಟ್​ಗಳಿದ್ದಲ್ಲಿ ಹೊಸ ಸಕ್ರಿಯ ಅಕೌಂಟ್​ನೊಂದಿಗೆ ವಿಲೀನ ಮಾಡಬೇಕು. ಕೆಲಸದಲ್ಲಿ ಇಲ್ಲದಿದ್ದರೆ ಆ ಅಕೌಂಟ್​ನಲ್ಲಿರುವ ಹಣವನ್ನು ಹಿಂಪಡೆಯುವುದಾದರೂ ಮಾಡಬೇಕು.

ನಿಮ್ಮ ಖಾತೆಯಲ್ಲಿ ಹಣವಿದೆಯೇ ಎಂದು ತಿಳಿಯುವುದು ಹೇಗೆ?

ನಿಮ್ಮ ಬಳಿ ಹಳೆಯ UAN (Universal Account Number) ಅಥವಾ PF ಖಾತೆ ಸಂಖ್ಯೆ ಇದ್ದರೆ, ಅದನ್ನು ಈ ಕೆಳಗಿನ ವಿಧಾನಗಳ ಮೂಲಕ ಪರೀಕ್ಷಿಸಬಹುದು, ಒಂದು ಅನ್​ಕ್ಲೇಮ್ಡ್ ಅಕೌಂಟ್​ನ ಹೆಲ್ಪ್ ಡೆಸ್ಕ್, ಮತ್ತೊಂದು, ಉಮಾಂಗ್ ಆ್ಯಪ್ ಅಥವಾ ಇಪಿಎಫ್​ಒ ವೆಬ್​ಸೈಟ್ ಮೂಲಕ ಪರೀಕ್ಷಿಸಬಹುದು.

1. EPFO ನ ‘Unclaimed A/C Helpdesk’ ಮಾರ್ಗ

  • EPFO ನ ಅಧಿಕೃತ ಪೋರ್ಟಲ್‌ಗೆ ಭೇಟಿ ನೀಡಿ: epfindia.gov.in
  • ‘Services’ ವಿಭಾಗದಲ್ಲಿ ‘Inoperative A/C Helpdesk’ ಆಯ್ಕೆಯನ್ನು ಕ್ಲಿಕ್ ಮಾಡಿ.
  • ನಿಮ್ಮ ವೈಯಕ್ತಿಕ ವಿವರಗಳು (ಹೆಸರು, ಮೊಬೈಲ್ ಸಂಖ್ಯೆ, ಆಧಾರ್, ಹಳೆಯ ಕಂಪನಿಯ ಹೆಸರು, ಇತ್ಯಾದಿ) ನೀಡಿ ವಿನಂತಿ ಸಲ್ಲಿಸಿದರೆ EPFO ಅಧಿಕಾರಿಗಳು ಸಹಾಯ ಮಾಡುತ್ತಾರೆ.

2. Umang App ಅಥವಾ EPFO Member Portal

  • ಈ ಆ್ಯಪ್ ಅಥವಾ ಜಾಲತಾಣದಲ್ಲಿ UAN ಮತ್ತು ಪಾಸ್‌ವರ್ಡ್ ಬಳಸಿ ಲಾಗಿನ್ ಆಗಿ Passbook ವಿಭಾಗದಲ್ಲಿ ಹಳೆಯ ಕಂಪನಿಗಳ PF ಖಾತೆಯ ಬ್ಯಾಲೆನ್ಸ್ ಪರಿಶೀಲಿಸಬಹುದು.

ಇದನ್ನೂ ಓದಿ: ಗೂಗಲ್ ಅಕೌಂಟ್​ಗೆ ಸೈನ್ ಇನ್ ಆಗಲು, ರಿಕವರಿ ಮಾಡಲು ಸೆಲ್ಫಿ ವಿಡಿಯೊ

ಈ ಹಣವನ್ನು ಪಡೆಯುವುದು (Claim) ಹೇಗೆ?

ಹಳೆಯ ಖಾತೆಯಲ್ಲಿರುವ ಹಣವನ್ನು ಹಿಂಪಡೆಯಲು 2 ಪ್ರಮುಖ ಮಾರ್ಗಗಳಿವೆ:

  • ಹೊಸ PF ಖಾತೆಗೆ ವರ್ಗಾವಣೆ: ನೀವು ಪ್ರಸ್ತುತ ಬೇರೆ ಎಲ್ಲಾದರೂ ಕೆಲಸ ಮಾಡುತ್ತಿದ್ದರೆ, ಹಳೆಯ ಇನ್‌ಆಪರೇಟಿವ್‌ ಖಾತೆಯಲ್ಲಿರುವ ಹಣವನ್ನು ಪ್ರಸ್ತುತ ಸಕ್ರಿಯವಾಗಿರುವ UAN/PF ಖಾತೆಗೆ ಆನ್‌ಲೈನ್‌ನಲ್ಲೇ (Online Transfer Request) ವರ್ಗಾಯಿಸಿಕೊಳ್ಳುವುದು ಅತ್ಯಂತ ಉತ್ತಮ ಹಾಗೂ ಸುರಕ್ಷಿತ ಮಾರ್ಗ.
  • ನೇರವಾಗಿ ಹಣ ಹಿಂಪಡೆಯುವುದು: ನೀವು ಈಗ ಯಾವುದೇ ಉದ್ಯೋಗದಲ್ಲಿ ಇಲ್ಲದಿದ್ದರೆ, ಅಥವಾ ನಿವೃತ್ತರಾಗಿದ್ದರೆ ನೇರವಾಗಿ ಹಣ ವಿತ್​ಡ್ರಾ ಮಾಡಬಹುದು. EPFO ಆನ್‌ಲೈನ್ ಪೋರ್ಟಲ್‌ನಲ್ಲಿ ಲಾಗಿನ್ ಆಗಿ Claim Form (Form 19) ಸಲ್ಲಿಸುವ ಮೂಲಕ ಹಣವನ್ನು ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಜಮೆ ಮಾಡಿಸಿಕೊಳ್ಳಬಹುದು. ನಿಮ್ಮ KYC (ಆಧಾರ್, ಪಾನ್ ಕಾರ್ಡ್, ಬ್ಯಾಂಕ್ ವಿವರಗಳು) UAN ಗೆ ಸಂಪೂರ್ಣವಾಗಿ ಲಿಂಕ್ ಆಗಿರಬೇಕು.

ನಿಮ್ಮ ಬಳಿ ಹಳೆಯ ಪಿಎಫ್‌ ವಿವರಗಳಿದ್ದರೆ ವಿಳಂಬ ಮಾಡದೆ ಉಮಾಂಗ್ (Umang App) ಅಥವಾ EPFO ಪೋರ್ಟಲ್‌ನಲ್ಲಿ ಪರಿಶೀಲಿಸಿ ಹಣ ವರ್ಗಾವಣೆ ಅಥವಾ ವಿತ್​ಡ್ರಾಯಲ್​ಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On – 7:15 pm, Fri, 24 July 26

Source link

Ants: ಇರುವೆಗಳು ಸಾಲಾಗಿ ಚಲಿಸುವುದರ ಹಿಂದಿದೆ ಈ ಕಾರಣ – Kannada News | Ants: Why do ants move in a line?

ಮನೆಯಲ್ಲಿ ಸಿಹಿತಿಂಡಿ (sweets) ಏನಾದ್ರೂ ಕಂಡ್ರೆ ಇರುವೆಗಳು (Ants) ಮುತ್ತಿಕೊಳ್ಳುತ್ತವೆ. ಚುರುಕಿನ ಜೀವಿಗಳಾಗಿರುವ ಈ ಇರುವೆಗಳು ಸಾಲುಗಟ್ಟಿ ಅತ್ತಿಂದ ಇತ್ತ ಓಡಾಡುವುದನ್ನು ನೀವು ನೋಡುತ್ತೀರಿ. ಸಾಲುಗಟ್ಟಿ ಹೋಗುವ ಈ ಪುಟ್ಟ ಜೀವಿಗಳಿಗೆ ತೊಂದರೆ ಎದುರಾದರೆ ತನ್ನ ಬಳಗಕ್ಕೆ ಸೂಚನೆ ನೀಡುತ್ತವೆ. ಆದರೆ ನೀವು ಇರುವೆಗಳು ಸಾಲಾಗಿ ಯಾಕೆ ಓಡಾಡುತ್ತವೆ ಎಂದು ಒಮ್ಮೆಯಾದರೂ ಯೋಚಿಸಿದ್ದೀರಾ. ಇದಕ್ಕೆ ಕಾರಣ ಇರುವೆಗಳು ಬಿಡುಗಡೆ ಮಾಡುವ ಫೆರೋಮೋನ್ಸ್ ಎಂಬ ರಾಸಾಯನಿಕ ಅಂಶ. ಈ ಕುರಿತಾದ ಕಂಪ್ಲೀಟ್ ಮಾಹಿತಿ ಇಲ್ಲಿದೆ.

ಇರುವೆಗಳು ಸಾಲಿನಲ್ಲಿ ಚಲಿಸುವುದು ಏಕೆ?

ಇರುವೆ ತನ್ನ ಗೂಡಿನಿಂದ ಹೊರಬಂದಾಗ ಫೆರೋಮೋನ್ಸ್ ಎಂಬ ರಾಸಾಯನಿಕವನ್ನು ಬಿಡುಗಡೆ ಮಾಡುತ್ತವೆ. ಈ ರಾಸಾಯನಿಕವು ಒಂದು ರೀತಿಯ ವಾಸನೆಯ ರೂಪದಲ್ಲಿರುತ್ತದೆ. ಇದನ್ನು ಗ್ರಹಿಸುವ ಇರುವೆಗಳು ಸಾಲಾಗಿ ಒಂದರ ಹಿಂದೆ ಒಂದು ಸಾಗುತ್ತವೆ.

ಇದನ್ನೂ ಓದಿ: ಮರಿ ಹಕ್ಕಿಗಳಿಗೆ ಕೈ ತುತ್ತು ನೀಡಿ ಹಸಿವು ನೀಗಿಸಿದ ಮಹಿಳೆ

ಹೌದು, ಈ ಇರುವೆಗಳಿಗೆ ಕಣ್ಣಿನ ದೃಷ್ಟಿ ತುಂಬಾ ಕಡಿಮೆ. ಹೀಗಾಗಿ ಆಂಟೆನಾ ಮುಖಾಂತರ ವಾಸನೆ ಗ್ರಹಿಸಿ ಹಾಗೂ ಒಂದಕ್ಕೊಂದು ಸ್ಪರ್ಶಿಸಿಕೊಂಡು ಸೂಚನೆ ನೀಡುತ್ತಾ ಒಂದೇ ಸಾಲಿನಲ್ಲಿ ಸಾಗುತ್ತವೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 7:10 pm, Fri, 24 July 26

Source link

ವಿಂಡೀಸ್ ವಿರುದ್ಧದ ಏಕದಿನ ಸರಣಿಗೆ ಟೀಂ ಇಂಡಿಯಾದ ಸ್ಟಾರ್ ಆಟಗಾರರು ಅಲಭ್ಯ – Kannada News | Bumrah, Iyer, Kishan Miss WI ODIs for Asian Games 2026: Team India Squad Dilemma

ಪ್ರಸ್ತುತ ಟೀಂ ಇಂಡಿಯಾ (Team India), ಜಿಂಬಾಬ್ವೆ ವಿರುದ್ಧ ಮೂರು ಪಂದ್ಯಗಳ ಟಿ20 ಸರಣಿಯನ್ನು ಆಡುತ್ತಿದೆ. ಈ ಸರಣಿಯ ಬಳಿಕ ಶ್ರೀಲಂಕಾ ವಿರುದ್ಧ ಟೆಸ್ಟ್ ಸರಣಿಯನ್ನು ಆಡಲಿದೆ. ಈ ಸರಣಿಗಾಗಿ ಮುಂದಿನ ತಿಂಗಳು ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದೆ. ಅಲ್ಲಿಂದ ವಿವಿಧ ಸ್ವರೂಪಗಳಲ್ಲಿ ಬೇರೆ ಬೇರೆ ದೇಶಗಳ ವಿರುದ್ಧ ಟೀಂ ಇಂಡಿಯಾ ಪಂದ್ಯಗಳನ್ನು ಆಡಲಿದೆ. ಆ ಪ್ರಕಾರ ಟೀಂ ಇಂಡಿಯಾ ಸೆಪ್ಟೆಂಬರ್​ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ (India vs West Indies) ಏಕದಿನ ಸರಣಿಯನ್ನು ಆಡಲಿದೆ. ಆದರೆ ಈ ಸರಣಿಗೆ ಜಸ್ಪ್ರೀತ್ ಬುಮ್ರಾ, ಶ್ರೇಯಸ್ ಅಯ್ಯರ್ ಮತ್ತು ಇಶಾನ್ ಕಿಶನ್ ಸೇರಿದಂತೆ ಹಲವಾರು ಪ್ರಮುಖ ಆಟಗಾರರು ಅಲಭ್ಯರಾಗುವ ಸಾಧ್ಯತೆಗಳುವೆ. ಏಕೆಂದರೆ ಅವರೆಲ್ಲರೂ 2026 ರ ಏಷ್ಯನ್ ಗೇಮ್ಸ್​ನಲ್ಲಿ ತಂಡವನ್ನು ಪ್ರತಿನಿಧಿಸಲಿದ್ದಾರೆ.

ಏಷ್ಯನ್ ಗೇಮ್ಸ್ 2026

ಸೆಪ್ಟೆಂಬರ್ ಅಂತ್ಯದಲ್ಲಿ ಜಪಾನ್‌ನಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್ 2026 ರಲ್ಲಿ ಮತ್ತೊಮ್ಮೆ ಭಾರತ ತಂಡ ತನ್ನ ಚಾಂಪಿಯನ್ ಪಟ್ಟವನ್ನು ಉಳಿಸಿಕೊಳ್ಳುವ ಸಲುವಾಗಿ ಕಣಕ್ಕಿಳಿಯಲಿದೆ. ಹಿಂದಿನ ಕ್ರೀಡಾಕೂಟದಲ್ಲಿ ಭಾರತ ಚಿನ್ನದ ಪದಕ ಗೆದ್ದಿದೆ. ಆಗ ಬಿಸಿಸಿಐ ಯುವ ಆಟಗಾರರ ತಂಡವನ್ನು ಈ ಪಂದ್ಯಾವಳಿಗೆ ಕಳುಹಿಸಿಕೊಟ್ಟಿತ್ತು. ಆದರೆ ಈ ಬಾರಿ ಬಿಸಿಸಿಐ ಹೊಸ ನಾಯಕ ಶ್ರೇಯಸ್ ಅಯ್ಯರ್ ನೇತೃತ್ವದಲ್ಲಿ ಜಸ್ಪ್ರೀತ್ ಬುಮ್ರಾ ಅವರಂತಹ ಸ್ಟಾರ್ ಆಟಗಾರರನ್ನು ಒಳಗೊಂಡ ಅತ್ಯಂತ ಬಲಿಷ್ಠ ತಂಡವನ್ನು ಕಳುಹಿಸಿಕೊಡಲು ನಿರ್ಧರಿಸಿದೆ.

ಈ ಪಂದ್ಯಗಳಿಗೆ ತಂಡವನ್ನು ಈಗಾಗಲೇ ಘೋಷಿಸಲಾಗಿತ್ತು, ಇದೀಗ ಪಂದ್ಯಗಳ ವೇಳಾಪಟ್ಟಿಯನ್ನು ಇಂದು ಘೋಷಿಸಲಾಗಿದೆ. ಏಷ್ಯನ್ ಕ್ರೀಡಾಕೂಟದಲ್ಲಿ ಕ್ರಿಕೆಟ್ ಪಂದ್ಯಗಳು ಸೆಪ್ಟೆಂಬರ್ 24 ರಿಂದ ಅಕ್ಟೋಬರ್ 1 ರವರೆಗೆ ನಡೆಯಲಿದ್ದು, ಭಾರತ, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಶ್ರೀಲಂಕಾ ನೇರವಾಗಿ ಕ್ವಾರ್ಟರ್ ಫೈನಲ್‌ಗೆ ಅರ್ಹತೆ ಪಡೆಯುತ್ತವೆ.

ಭಾರತ-ವಿಂಡೀಸ್ ನಡುವೆ ಏಕದಿನ ಸರಣಿ

ಆದಾಗ್ಯೂ, ಇದು ಈ ಸಮಯದಲ್ಲಿ ನಡೆಯಲಿರುವ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಏಕದಿನ ಸರಣಿಯ ಮೇಲೆ ಪರಿಣಾಮ ಬೀರುತ್ತದೆ. ಎರಡೂ ದೇಶಗಳ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿ ಸೆಪ್ಟೆಂಬರ್ 27 ರಂದು ಪ್ರಾರಂಭವಾಗಿ ಅಕ್ಟೋಬರ್ 3 ರವರೆಗೆ ನಡೆಯಲಿದೆ. ಇದರರ್ಥ ಏಷ್ಯನ್ ಕ್ರೀಡಾಕೂಟ ಮತ್ತು ಏಕದಿನ ಸರಣಿ ಒಂದೇ ಸಮಯದಲ್ಲಿ ನಡೆಯಲಿವೆ. ಹೀಗಾಗಿ ಪ್ರಮುಖ ಆಟಗಾರರಿಲ್ಲದೆ ಟೀಂ ಇಂಡಿಯಾ ಏಕದಿನ ಸರಣಿಯನ್ನು ಆಡಬೇಕಾಗಿದೆ.

ಭಾರತ ಟಿ20 ತಂಡಕ್ಕೆ ಸೂರ್ಯಕುಮಾರ್ ಶೀಘ್ರದಲ್ಲೇ ಕಂಬ್ಯಾಕ್..!

ಈ ಏಕದಿನ ಸರಣಿಯಿಂದ ಹೊರಗುಳಿಯಬಹುದಾದ ಆಟಗಾರರನ್ನು ನೋಡುವುದಾದರೆ, ಇತ್ತೀಚೆಗೆ ಏಕದಿನ ತಂಡದ ಭಾಗವಾಗಿರುವ ಕೆಲವು ಪ್ರಮುಖ ಹೆಸರುಗಳು ಇದರಲ್ಲಿ ಸೇರಿವೆ. ಇದರಲ್ಲಿ ಉಪನಾಯಕ ಶ್ರೇಯಸ್ ಅಯ್ಯರ್ ಮತ್ತು ಸ್ಟಾರ್ ವೇಗಿ ಬುಮ್ರಾ, ಹಾಗೆಯೇ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಇಶಾನ್ ಕಿಶನ್, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಹರ್ಷಿತ್ ರಾಣಾ ಮತ್ತು ಅರ್ಷದೀಪ್ ಸಿಂಗ್ ಅವರಂತಹ ಪ್ರಮುಖ ಹೆಸರುಗಳು ಸೇರಿವೆ. ಈ ಎಲ್ಲಾ ಆಟಗಾರರು ಟಿ20 ತಂಡದ ಭಾಗವಾಗಿದ್ದಾರೆ. ಹೀಗಾಗಿ ಬಿಸಿಸಿಐ ಈ ತಂಡದಲ್ಲಿ ಬದಲಾವಣೆಗಳನ್ನು ಮಾಡುತ್ತದೆಯೇ ಅಥವಾ ಏಷ್ಯನ್ ಕ್ರೀಡಾಕೂಟಕ್ಕೆ ಆದ್ಯತೆ ನೀಡುತ್ತದೆಯೇ ಎಂಬುದನ್ನು ಕಾದುನೋಡಬೇಕಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸೂರ್ಯಾಸ್ತದ ಸುಂದರ ತಾಣಕ್ಕೀಗ ಕತ್ತಲ ಛಾಯೆ: ಕ್ಷಿತಿಜ ನೇಸರಧಾಮಕ್ಕೆ ಬೇಕಿದೆ ತುರ್ತು ಕಾಯಕಲ್ಪ – Kannada News | Nesargadhama Byndoor: Udupi’s Neglected Coastal Tourist Spot Needs Urgent Revival

ಉಡುಪಿ, ಜಿಲೈ 24: ಅರಬ್ಬಿ ಸಮುದ್ರದ ಅಪರೂಪದ ಸೂರ್ಯಾಸ್ತ ನೋಟ, ಹಚ್ಚಹಸಿರಿನ ಪ್ರಕೃತಿ, ಸಮುದ್ರದ ತಂಗಾಳಿ ಮತ್ತು ಪ್ರಶಾಂತ ವಾತಾವರಣದಿಂದ ಕರಾವಳಿಯ ಪ್ರಮುಖ ಪ್ರವಾಸಿ ತಾಣವಾಗಿ ಗುರುತಿಸಿಕೊಂಡಿರುವ ಬೈಂದೂರಿನ ನೇಸರಧಾಮ (kshitija nesara dhama) ಇಂದು ಅಭಿವೃದ್ಧಿಯ ನಿರೀಕ್ಷೆಯಲ್ಲಿ ನಿಂತಿದೆ. ಸಾವಿರಾರು ಪ್ರವಾಸಿಗರನ್ನು ಸೆಳೆಯುವ ಸಾಮರ್ಥ್ಯ ಹೊಂದಿದ್ದರೂ, ಸೂಕ್ತ ನಿರ್ವಹಣೆ ಮತ್ತು ಮೂಲ ಸೌಕರ್ಯಗಳ ಕೊರತೆಯಿಂದ ಈ ಸುಂದರ ತಾಣ ತನ್ನ ಕಳೆ ಕಳೆದುಕೊಳ್ಳುತ್ತಿದೆ.

ನೇಸರಧಾಮದಲ್ಲಿ ಮೂಲ ಸೌಕರ್ಯಗಳ ಕೊರತೆ

ಸದಾ ಪ್ರವಾಸಿಗರಿಂದ ಕಿಕ್ಕಿರಿದು ತುಂಬಿರುತ್ತಿದ್ದ ನೇಸರಧಾಮದಲ್ಲಿ ಇಂದು ನಿರ್ಲಕ್ಷ್ಯದ ಗುರುತುಗಳು ಎದ್ದುಕಾಣುತ್ತಿವೆ. ಹಲವು ವರ್ಷಗಳ ಹಿಂದೆ ನಿರ್ಮಿಸಲಾದ ಕಟ್ಟಡಗಳು ದುರಸ್ತಿ ಕಾಣದೆ ಶಿಥಿಲಾವಸ್ಥೆ ತಲುಪಿದ್ದು, ಉದ್ಯಾನವನಗಳು ನಿರ್ವಹಣೆಯ ಕೊರತೆಯಿಂದ ಸೊರಗಿವೆ. ಪ್ರವಾಸಿಗರ ವಿಶ್ರಾಂತಿ ಸ್ಥಳಗಳು ಹಾನಿಗೊಳಗಾಗಿದ್ದು, ತಾಣದ ಸೌಂದರ್ಯಕ್ಕೂ ಧಕ್ಕೆ ಉಂಟಾಗಿದೆ.

ಇದನ್ನೂ ಓದಿ: ಮಳೆರಾಯನ ಮುನಿಸು: KRS ನೀರಿನ ಮಟ್ಟ ಕುಸಿತ; ಮಂಡ್ಯದಲ್ಲಿ ಕೃಷಿ ಚಟುವಟಿಕೆ ಸಂಪೂರ್ಣ ಸ್ತಬ್ಧ

ಕ್ಷಿತಿಜ ನೇಸರಧಾಮದ ಪ್ರಮುಖ ಆಕರ್ಷಣೆ ಎಂದರೆ ಸೂರ್ಯಾಸ್ತ. ಈ ಸೂರ್ಯಾಸ್ತ ವೀಕ್ಷಣಾ ಸ್ಥಳವೂ ಇಂದು ದುಸ್ಥಿತಿಯಲ್ಲಿದೆ. ಪ್ರವಾಸಿಗರು ಕುಳಿತು ಸಮುದ್ರದ ಅಂಚಿನಲ್ಲಿ ಸೂರ್ಯಾಸ್ತವನ್ನು ಆಸ್ವಾದಿಸಲು ನಿರ್ಮಿಸಲಾದ ಕಾಂಕ್ರೀಟ್ ವೇದಿಕೆಯ ಹಲವೆಡೆ ಕಾಂಕ್ರೀಟ್ ಕಿತ್ತು ಹೋಗಿದ್ದು, ಸುರಕ್ಷತೆಯ ಪ್ರಶ್ನೆಯೂ ಉದ್ಭವಿಸಿದೆ. ದುರಸ್ತಿ ಇಲ್ಲದೆ ವರ್ಷಗಳಿಂದ ಇದೇ ಸ್ಥಿತಿ ಮುಂದುವರಿದಿದೆ. ಪ್ರವಾಸಿಗರ ಅನುಕೂಲಕ್ಕಾಗಿ ನಿರ್ಮಿಸಲಾಗಿದ್ದ, ಪ್ರವಾಸಿ ಬಂಗಲೆಗಳು ಸಾರ್ವಜನಿಕ ಬಳಕೆಗೆ ಸಮರ್ಪಕವಾಗಿ ಲಭ್ಯವಾಗುತ್ತಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ. ಕೆಲವೇ ಅಧಿಕಾರಿಗಳ ಬಳಕೆಗೆ ಸೀಮಿತವಾಗಿರುವಂತಿರುವ ಈ ಕಟ್ಟಡಗಳು ಸಾಮಾನ್ಯ ಪ್ರವಾಸಿಗರಿಗೆ ಹೆಚ್ಚಿನ ಪ್ರಯೋಜನವಾಗುತ್ತಿಲ್ಲ ಎನ್ನುವುದು ಸ್ಥಳೀಯರ ಅಸಮಾಧಾನ.

ನೈತಿಕ ಪೊಲೀಸ್‌ಗಿರಿ ಕಂಟಕ!

ಇಲ್ಲಿಗೆ ಭೇಟಿ ನೀಡುವ ಕೆಲವು ಯುವ ಜೋಡಿಗಳು ಹಾಗೂ ಪ್ರವಾಸಿಗರನ್ನು ಕೆಲ ವ್ಯಕ್ತಿಗಳು ನೈತಿಕ ಪೊಲೀಸ್‌ಗಿರಿ ಹೆಸರಿನಲ್ಲಿ ಪ್ರಶ್ನಿಸುವುದು, ಬೆದರಿಸುವುದು ಮತ್ತು ಅನಗತ್ಯವಾಗಿ ಕಿರಿಕಿರಿ ಉಂಟು ಮಾಡುತ್ತಿರುವ ಬಗ್ಗೆ ದೂರುಗಳು ಕೇಳಿಬರುತ್ತಿವೆ. ಇಂತಹ ಘಟನೆಗಳು ಪ್ರವಾಸೋದ್ಯಮದ ಮೇಲೆಯೇ ಪ್ರತಿಕೂಲ ಪರಿಣಾಮ ಬೀರುತ್ತಿದ್ದು, ಪ್ರವಾಸಿಗರಲ್ಲಿ ಆತಂಕ ಮೂಡಿಸಿದೆ. ಇಂತಹ ಕೃತ್ಯಗಳಿಗೆ ಕಡಿವಾಣ ಹಾಕುವಂತೆ ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

ಮೂಲಸೌಕರ್ಯಗಳನ್ನು ಕಲ್ಪಿಸಿದರೆ ಪ್ರವಾಸಿಗರ ಸಂಖ್ಯೆ ಹೆಚ್ಚಳ ಸಾಧ್ಯತೆ  

ಪ್ರಕೃತಿಯ ಸೌಂದರ್ಯ, ಸಮುದ್ರದ ವಿಹಂಗಮ ನೋಟ ಮತ್ತು ಪ್ರಶಾಂತ ವಾತಾವರಣ ಹೊಂದಿರುವ ಕ್ಷಿತಿಜ ನೇಸರಧಾಮವನ್ನು ಸಮರ್ಪಕವಾಗಿ ಅಭಿವೃದ್ಧಿಪಡಿಸಿದರೆ ರಾಜ್ಯದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿ ರೂಪಿಸಬಹುದಾಗಿದೆ. ಸುರಕ್ಷಿತ ವೀಕ್ಷಣಾ ಗ್ಯಾಲರಿ, ಮಕ್ಕಳ ಆಟದ ವಲಯ, ಸುಸಜ್ಜಿತ ಉದ್ಯಾನವನ, ಆಹಾರ ಮಳಿಗೆ, ಶೌಚಾಲಯಗಳು, ಸಮರ್ಪಕ ಬೆಳಕಿನ ವ್ಯವಸ್ಥೆ, ವಾಹನ ನಿಲುಗಡೆ, ಮಾಹಿತಿ ಕೇಂದ್ರ ಹಾಗೂ ಭದ್ರತಾ ಸಿಬ್ಬಂದಿ ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಿದರೆ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಹೆಚ್ಚುಳ ಸಾಧ್ಯತೆ ಇದೆ.

ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಮಳೆಯಬ್ಬರ: ಚಿಕ್ಕೋಡಿ, ನಿಪ್ಪಾಣಿ ತಾಲೂಕಿನ 8 ಸೇತುವೆಗಳು ಜಲಾವೃತ

ಪ್ರತಿ ವರ್ಷ ಸಾವಿರಾರು ಪ್ರವಾಸಿಗರನ್ನು ತನ್ನತ್ತ ಸೆಳೆಯುವ ಸಾಮರ್ಥ್ಯ ಹೊಂದಿರುವ ಈ ತಾಣ ನಿರ್ಲಕ್ಷ್ಯದಿಂದ ತನ್ನ ವೈಭವ ಕಳೆದುಕೊಳ್ಳುತ್ತಿರುವುದು ಬೇಸರದ ಸಂಗತಿ. ಪ್ರವಾಸೋದ್ಯಮ ಇಲಾಖೆ ಮತ್ತು ಜಿಲ್ಲಾಡಳಿತ ವಿಶೇಷ ಯೋಜನೆ ರೂಪಿಸಿ ಕ್ಷಿತಿಜ ನೇಸರಧಾಮದ ಸಮಗ್ರ ಅಭಿವೃದ್ಧಿಗೆ ಮುಂದಾದರೆ, ಬೈಂದೂರಿನ ಪ್ರವಾಸೋದ್ಯಮಕ್ಕೆ ಹೊಸ ಚೈತನ್ಯ ದೊರೆಯುವುದರ ಜೊತೆಗೆ ಸ್ಥಳೀಯರಿಗೂ ಉದ್ಯೋಗ ಮತ್ತು ಆರ್ಥಿಕ ಅವಕಾಶಗಳು ಹೆಚ್ಚಲಿವೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 6:59 pm, Fri, 24 July 26

Source link

‘ಜನ ನಾಯಗನ್’ ಸಿನಿಮಾ ತಂಡದ ವಿರುದ್ಧ ಬೇಸರ ಹೊರಹಾಕಿದ ಯುವನಟಿ – Kannada News | Actress Anandi Ajay cried after her scenes in Jana Nayagan movie edited out

ದಳಪತಿ ವಿಜಯ್ (Thalapathy Vijay) ನಟನೆಯ ‘ಜನ ನಾಯಗನ್’ ಸಿನಿಮಾ ನಿನ್ನೆಯಷ್ಟೆ ಬಿಡುಗಡೆ ಆಗಿದೆ. ಸಿನಿಮಾದ ಬಗ್ಗೆ ಋಣಾತ್ಮಕ ಅಭಿಪ್ರಾಯಗಳೇ ಹೆಚ್ಚು ವ್ಯಕ್ತವಾಗಿದೆ. ಆದರೂ ಸಹ ಸಿನಿಮಾ ಮೊದಲ ದಿನ ಬಾಕ್ಸ್ ಆಫೀಸ್​​ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದೆ. ನಟಿ ತ್ರಿಷಾ ಕೃಷ್ಣನ್ ಸೇರಿದಂತೆ ವಿಜಯ್ ಅವರ ಪಕ್ಷದ ಶಾಸಕರು, ಸಚಿವರುಗಳು ಸಿನಿಮಾ ನೋಡಿ ಸಂಭ್ರಮಿಸಿದ್ದಾರೆ. ಸಿನಿಮಾನಲ್ಲಿ ನಟಿಸಿರುವ ಕೆಲ ಕಲಾವಿದರು ಸಹ ಮೊದಲ ದಿನ ಸಿನಿಮಾ ನೋಡಿ, ಮಾಧ್ಯಮಗಳೊಟ್ಟಿಗೆ ಶೂಟಿಂಗ್ ಅನುಭವಗಳನ್ನು ಸಹ ಹಂಚಿಕೊಂಡಿದ್ದಾರೆ. ಆದರೆ ಈ ನಡುವೆ ಯುವ ನಟಿಯೊಬ್ಬರು ಕಣ್ಣೀರು ಹಾಕುತ್ತಿರುವ ವಿಡಿಯೋ ಒಂದನ್ನು ಹಂಚಿಕೊಂಡಿದ್ದು, ಚಿತ್ರತಂಡದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

ಆನಂದಿ ಅಜಯ್ ಎನ್ನುವರು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದು, ‘ಜನ ನಾಯಗನ್’ ಸಿನಿಮಾನಲ್ಲಿ ನಾನು ನಟಿಸಿದ್ದು, ಸಿನಿಮಾದಿಂದ ನನ್ನ ದೃಶ್ಯಗಳನ್ನು ಕತ್ತರಿಸಿ ತೆಗೆಯಲಾಗಿದೆ ಎಂದು ಬೇಸರ ಹೊರಹಾಕಿದ್ದಾರೆ. ಕಣ್ಣೀರು ಹಾಕುತ್ತಾ ವಿಡಿಯೋ ಮಾಡಿರುವ ನಟಿ ಆನಂದಿ, ‘ನಾನು ಹಲವು ಸಿನಿಮಾಗಳಲ್ಲಿ ನಟಿಸಿದ್ದೇನೆ. ಎಷ್ಟೋ ದೃಶ್ಯಗಳು ಎಡಿಟ್​​ನಲ್ಲಿ ಕಟ್ ಆಗಿವೆ. ಆದರೆ ನನಗೆ ಬೇಸರ ಆಗಿರಲಿಲ್ಲ. ಆದರೆ ಈ ಸಿನಿಮಾದ ಬಗ್ಗೆ ನನಗೆ ಬಹಳ ನಿರೀಕ್ಷೆ ಇತ್ತು, ನನ್ನ ಪಾತ್ರ, ನಾನು ನಟಿಸಿದ್ದ ದೃಶ್ಯಗಳ ಬಗ್ಗೆಯೂ ನಂಬಿಕೆ ಇತ್ತು. ಆದರೆ ಇದರಲ್ಲಿ ನನ್ನ ಪಾತ್ರವನ್ನು ಡಿಲೀಟ್ ಮಾಡಿರುವುದು ನನಗೆ ಹೇಳತೀರದ ದುಃಖ ತಂದಿದೆ’ ಎಂದಿದ್ದಾರೆ.

‘ನಾನು ನನ್ನ ಕಮ್ ಬ್ಯಾಕ್ ಸಿನಿಮಾ ರೀತಿಯಲ್ಲಿ ಇದನ್ನು ಎಣಿಸಿದ್ದೆ. ಈ ಸಿನಿಮಾಕ್ಕಾಗಿ ನಾನು ಒಂದೂವರೆ ವರ್ಷಗಳ ಕಾಲ ಕಾದಿದ್ದೆ. ವಿಜಯ್ ಅವರ ಜೊತೆ ನಟಿಸಿದ ಬಗ್ಗೆ ನನಗೆ ಅತೀವ ಖುಷಿ, ಸಂತೋಷ ಇತ್ತು. ನಾನು ಚಿತ್ರರಂಗಕ್ಕೆ ಬಂದಿದ್ದೇ, ದಳಪತಿ ವಿಜಯ್ ಅವರ ಜೊತೆಗೆ ನಟಿಸಬೇಕು ಎಂಬ ಆಸೆಯಿಂದ. ಆದರೆ ಅವರ ಕೊನೆಯ ಸಿನಿಮಾನಲ್ಲಿ ನನಗೆ ಅವರ ಜೊತೆ ನಟಿಸುವ ಅವಕಾಶ ಸಿಕ್ಕಿತ್ತು, ಆದರೆ ಅದು ತೆರೆಯ ಮೇಲೆ ಬರಲಿಲ್ಲ’ ಎಂದು ನೋವಿನಿಂದ ನುಡಿದಿದ್ದಾರೆ ನಟಿ.

ಇದನ್ನೂ ಓದಿ:Jana Nayagan First Half Review: ‘ಜನ ನಾಯಗನ್’ ಮೊದಲಾರ್ಧ ಹೇಗಿದೆ?

‘ಜನ ನಾಯಗನ್’ ಸಿನಿಮಾ ತುಂಬಾ ಚೆನ್ನಾಗಿದೆ ಎಂದು ನೋಡಿದವರು ಹೇಳುತ್ತಿದ್ದಾರೆ. ಇದು ಮಹಿಳಾ ಸಬಲೀಕರಣ ಬಗ್ಗೆ ಇರುವಂಥಹಾ ಸಿನಿಮಾ. ನಾನೂ ಕೂಡ ಬಹಳ ಖುಷಿಯಿಂದ ಸಿನಿಮಾಕ್ಕೆ ಹೋದೆ, ನನ್ನ ಪಾತ್ರ ನೋಡಲೆಂದು. ಆದರೆ ನನ್ನ ದೃಶ್ಯಗಳು ಡಿಲೀಟ್ ಆಗಿರುತ್ತವೆ ಎಂದು ನಾನು ಎಣಿಸಿಯೂ ಇರಲಿಲ್ಲ, ಇದು ನನಗೆ ಆಘಾತ ತಂದಿದೆ’ ಎಂದಿದ್ದಾರೆ ನಟಿ. ನಟಿಯ ವಿಡಿಯೋ ನೋಡಿದ ಹಲವರು ನಟಿಯ ಬಗ್ಗೆ ಕರುಣೆ ವ್ಯಕ್ತಪಡಿಸಿದ್ದು, ನಿಮಗೆ ಇನ್ನೂ ದೊಡ್ಡ ಅವಕಾಶಗಳು ಸಿಗುತ್ತವೆ ಎಂದು ಹಾರೈಸಿದ್ದಾರೆ.

ಆನಂದಿ ಅಜಯ್ ಅವರು ತಮಿಳು ಕಿರುತೆರೆ ರಂಗದಲ್ಲಿ ಜನಪ್ರಿಯ ನಟಿಯಾಗಿದ್ದು, ‘ಕಾರ್ತಿಗೈ ಪೆಂಗಳ್’, ‘ಯಮುನಾ’, ‘ಕಣ ಕಾಣುಂ ಕಾಲಂಗಲ್’ ಮುಂತಾದ ಜನಪ್ರಿಯ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಇವರು ಉತ್ತಮ ಶಾಸ್ತ್ರೀಯ ನೃತ್ಯಗಾರ್ತಿಯೂ ಆಗಿದ್ದು, ಕೆಲವು ನೃತ್ಯ ರಿಯಾಲಿಟಿ ಶೋಗಳಲ್ಲೂ ಕಾಣಿಸಿಕೊಂಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಶೇರುಪೇಟೆಗೆ ಈ ವಾರ ರಕ್ತದೋಕುಳಿ; ಸೆನ್ಸೆಕ್ಸ್​ನಿಂದ 2,092, ನಿಫ್ಟಿಯಿಂದ 567 ಅಂಕಗಳು ಕುಸಿತ – Kannada News | Indian stock market big crash this week, know reasons why shares are falling

ನವದೆಹಲಿ, ಜುಲೈ 24: ಭಾರತೀಯ ಶೇರು ಮಾರುಕಟ್ಟೆಯಲ್ಲಿ (Stock Market) ಭಾರಿ ಕುಸಿತ ಕಂಡಿದ್ದು, ಸೆನ್ಸೆಕ್ಸ್ ಹಾಗೂ ನಿಫ್ಟಿ 50 ಸೂಚ್ಯಂಕಗಳು ಶುಕ್ರವಾರ ಭಾರೀ ನಷ್ಟ ಅನುಭವಿಸಿವೆ. ಇದರಿಂದ ಹೂಡಿಕೆದಾರರ ಸುಮಾರು ₹4 ಲಕ್ಷ ಕೋಟಿ ರೂಪಾಯಿ ಸಂಪತ್ತು ಕೊಚ್ಚಿಹೋಗಿದೆ. ಇದು ಇವತ್ತು ಒಂದೇ ದಿನದಲ್ಲಿ ಕಂಡ ನಷ್ಟ. ಆದರೆ, ಈ ವಾರ ಸಂಪೂರ್ಣ ಕುಸಿತದ ವಾರವಾಗಿದೆ. ವಾರದ ಐದೂ ಸೆಷನ್​ಗಳೂ ಮಾರುಕಟ್ಟೆಗೆ ಹಿನ್ನಡೆ ತಂದಿವೆ.

ಸೋಮವಾರ (ಜುಲೈ 20) ನಿಫ್ಟಿ ಸೂಚ್ಯಂಕ 24,334 ಅಂಕಗಳಲ್ಲಿತ್ತು. ಇವತ್ತು ಅದು 23,767 ಅಂಕಗಳ ಮಟ್ಟಕ್ಕೆ ಇಳಿದಿದೆ. ಅಂದರೆ, ಐದು ದಿನದಲ್ಲಿ 567 ಅಂಕಗಳನ್ನು ಕಳೆದುಕೊಂಡಿದೆ. ಸೆನ್ಸೆಕ್ಸ್ ಈ ಐದು ದಿನದಲ್ಲಿ 2,092 ಅಂಕಗಳ ನಷ್ಟ ಮಾಡಿಕೊಂಡಿದೆ. 78,151 ಅಂಕಗಳಿಂದ 76,059 ಮಟ್ಟಕ್ಕೆ ಇಳಿದಿದೆ. ನಿಫ್ಟಿಗೆ ಸಪೋರ್ಟ್ ಲೆವೆಲ್ 23,650 ರೂ ಇತ್ತು. ಅದಕ್ಕೂ ಕೆಳಗೆ ಹೋಗಿ ನಂತರ ಸ್ವಲ್ಪ ಚೇತರಿಕೆ ಕಂಡಿದೆ.

ಇದನ್ನೂ ಓದಿ: ಗೂಗಲ್ ಅಕೌಂಟ್​ಗೆ ಸೈನ್ ಇನ್ ಆಗಲು, ರಿಕವರಿ ಮಾಡಲು ಸೆಲ್ಫಿ ವಿಡಿಯೊ

ಆಟೊಮೊಬೈಲ್, ಮೆಟಲ್, ಐಟಿ, ರಿಯಲ್ ಎಸ್ಟೇಟ್ ಕಂಪನಿಗಳ ಷೇರುಗಳು ಅತಿಹೆಚ್ಚು ಕುಸಿತ ಕಂಡಿವೆ. ಈ ಭಾರಿ ಕುಸಿತಕ್ಕೆ ಪ್ರಮುಖ ಕಾರಣಗಳು ಏನು ಎನ್ನುವ ಮಾಹಿತಿ ಇಲ್ಲಿ ಮುಂದಿದೆ:

ಮಾರುಕಟ್ಟೆ ಕುಸಿತಕ್ಕೆ 5 ಪ್ರಮುಖ ಕಾರಣಗಳು

  1. ಅಂತರರಾಷ್ಟ್ರೀಯ ಕಚ್ಚಾ ತೈಲ ಬೆಲೆ ಏರಿಕೆ: ಅಮೆರಿಕ ಮತ್ತು ಇರಾನ್ ನಡುವಿನ ಸಶಸ್ತ್ರ ಸಂಘರ್ಷ ತೀವ್ರಗೊಂಡಿರುವುದರಿಂದ ಕೆಂಪು ಸಮುದ್ರದಲ್ಲಿ (Red Sea) ತೈಲ ಸಾಗಣೆಗೆ ಅಡಚಣೆಯಾಗಿದೆ. ಪರಿಣಾಮವಾಗಿ ಬ್ರೆಂಟ್ ಕಚ್ಚಾ ತೈಲ (Brent Crude) ಬೆಲೆ ಬ್ಯಾರೆಲ್‌ಗೆ $100 ಗಡಿ ದಾಟಿದ್ದು, ಇದು ಭಾರತದಂತಹ ತೈಲ ಆಮದು ಮಾಡಿಕೊಳ್ಳುವ ದೇಶಗಳ ಆರ್ಥಿಕತೆ ಮತ್ತು ಹಣದುಬ್ಬರದ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ.
  2. ಅಮೆರಿಕದ ಹೊಸ ಸುಂಕ ನೀತಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತ ಸೇರಿದಂತೆ 60ಕ್ಕೂ ಹೆಚ್ಚು ದೇಶಗಳ ಮೇಲೆ ಶೇ. 10ರಿಂದ ಶೇ. 12.5ರಷ್ಟು ಹೊಸ ಸುಂಕಗಳನ್ನು ಜಾರಿಗೆ ತಂದಿದ್ದಾರೆ. ಇದು ಜಾಗತಿಕ ವ್ಯಾಪಾರ ಮತ್ತು ಭಾರತೀಯ ರಫ್ತುದಾರರಲ್ಲಿ ಆತಂಕ ಮೂಡಿಸಿದೆ.
  3. ಅಮೆರಿಕದ ಬಾಂಡ್ ಯೀಲ್ಡ್ ಏರಿಕೆ: ಅಮೆರಿಕದಲ್ಲಿ 10 ವರ್ಷಗಳ ಸರ್ಕಾರಿ ಬಾಂಡ್‌ಗಳ ಇಳುವರಿ ಶೇ. 4.7ಕ್ಕೆ ಏರಿಕೆಯಾಗಿದೆ. ಇದರಿಂದ ವಿದೇಶಿ ಹೂಡಿಕೆದಾರರು (FIIs) ಭಾರತದಂತಹ ಉದಯೋನ್ಮುಖ ಮಾರುಕಟ್ಟೆಗಳಿಂದ (Emerging Markets) ಹಣವನ್ನು ಹಿಂತೆಗೆದುಕೊಂಡು, ಅಮೆರಿಕದ ಸುರಕ್ಷಿತ ಹೂಡಿಕೆಗಳತ್ತ ಹೊರಳುತ್ತಿದ್ದಾರೆ.
  4. ವಿದೇಶಿ ಹೂಡಿಕೆಗಳ ಹೊರಹರಿವು: ಜಾಗತಿಕ ಅನಿಶ್ಚಿತತೆಯಿಂದಾಗಿ ವಿದೇಶಿ ಸಂಸ್ಥಾಗತ ಹೂಡಿಕೆದಾರರು ಭಾರತೀಯ ಶೇರು ಮಾರುಕಟ್ಟೆಯಲ್ಲಿ ನಿರಂತರವಾಗಿ ಶೇರುಗಳನ್ನು ಮಾರಾಟ ಮಾಡುತ್ತಿದ್ದಾರೆ.
  5. ಕಂಪನಿಗಳ ತ್ರೈಮಾಸಿಕ ಫಲಿತಾಂಶದ ಆತಂಕ: ಕಚ್ಚಾ ವಸ್ತುಗಳ ಬೆಲೆ ಏರಿಕೆ ಮತ್ತು ಜಾಗತಿಕ ಆರ್ಥಿಕ ಹಿಂಜರಿತದ ಭೀತಿಯಿಂದಾಗಿ ಭಾರತೀಯ ಕಂಪನಿಗಳ ಲಾಭಾಂಶದ (Corporate Earnings) ಮೇಲೆಯೂ ಒತ್ತಡ ಬಿದ್ದಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On – 5:45 pm, Fri, 24 July 26

Source link

ಪೋಷಕರೇ ಎಚ್ಚರ! ಮಕ್ಕಳಲ್ಲಿ ಜಂಕ್ ಫುಡ್ ಅಭ್ಯಾಸ ಹೆಚ್ಚಿದರೆ ಈ ಗಂಭೀರ ಆರೋಗ್ಯ ಸಮಸ್ಯೆಗಳು ಬರಬಹುದು! – Kannada News | Junk Food and Childhood Obesity: What Every Parent Should Know

ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಜಂಕ್ ಫುಡ್ (Junk Food) ಸೇವನೆ ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಶಾಲೆ, ಕಾಲೇಜು ಮತ್ತು ವಿದ್ಯಾರ್ಥಿ ವಸತಿ ನಿಲಯಗಳ ಸುತ್ತಮುತ್ತ ಮಾರಾಟವಾಗುವ ಜಂಕ್ ಫುಡ್‌ಗಳ ಗುಣಮಟ್ಟದ ಮೇಲೆ ಆಹಾರ ಸುರಕ್ಷತಾ ಅಧಿಕಾರಿಗಳು ವಿಶೇಷ ನಿಗಾ ವಹಿಸುತ್ತಿದ್ದಾರೆ. ವಿವಿಧ ಆಹಾರ ಪದಾರ್ಥಗಳ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಗಳಲ್ಲಿ ಪರೀಕ್ಷೆ ನಡೆಸಲಾಗುತ್ತಿದ್ದು, ಗುಣಮಟ್ಟದ ಮಾನದಂಡಗಳನ್ನು ಉಲ್ಲಂಘಿಸುವ ಆಹಾರಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ. ತಜ್ಞರ ಪ್ರಕಾರ, ಮಕ್ಕಳಲ್ಲಿ ಹೆಚ್ಚುತ್ತಿರುವ ಬೊಜ್ಜು (Obesity), ಟೈಪ್-2 ಮಧುಮೇಹ, ಕೊಲೆಸ್ಟ್ರಾಲ್, ರಕ್ತದೊತ್ತಡ ಮತ್ತು ಕೊಬ್ಬಿನ ಯಕೃತ್ (Fatty Liver) ಸಮಸ್ಯೆಗಳಿಗೆ ಅನಾರೋಗ್ಯಕರ ಆಹಾರ ಪದ್ಧತಿಯೇ ಪ್ರಮುಖ ಕಾರಣವಾಗಿದೆ.

ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, ಮಕ್ಕಳಲ್ಲಿ ಅಧಿಕ ತೂಕ ಮತ್ತು ಬೊಜ್ಜು ವಿಶ್ವದಾದ್ಯಂತ ವೇಗವಾಗಿ ಹೆಚ್ಚುತ್ತಿರುವ ಆರೋಗ್ಯ ಸಮಸ್ಯೆಯಾಗಿದೆ. ಬಾಲ್ಯದಲ್ಲೇ ಆರೋಗ್ಯಕರ ಆಹಾರ ಪದ್ಧತಿ ಮತ್ತು ನಿಯಮಿತ ದೈಹಿಕ ಚಟುವಟಿಕೆಯನ್ನು ರೂಢಿಸಿಕೊಂಡರೆ ಅನೇಕ ದೀರ್ಘಕಾಲದ ಕಾಯಿಲೆಗಳನ್ನು ತಡೆಯಬಹುದು.

ಮಕ್ಕಳ ಆರೋಗ್ಯಕ್ಕೆ ಜಂಕ್ ಫುಡ್ ಏಕೆ ಅಪಾಯಕಾರಿ?

ಜಂಕ್ ಫುಡ್‌ಗಳಲ್ಲಿ ಸಾಮಾನ್ಯವಾಗಿ ಹೆಚ್ಚಿನ ಪ್ರಮಾಣದ ಸಕ್ಕರೆ, ಉಪ್ಪು, ಟ್ರಾನ್ಸ್ ಫ್ಯಾಟ್, ಸ್ಯಾಚುರೇಟೆಡ್ ಕೊಬ್ಬು ಹಾಗೂ ಕ್ಯಾಲೊರಿಗಳು ಇರುತ್ತವೆ. ಆದರೆ ದೇಹಕ್ಕೆ ಅಗತ್ಯವಾದ ವಿಟಮಿನ್‌ಗಳು, ಖನಿಜಾಂಶಗಳು ಮತ್ತು ಫೈಬರ್ ಕಡಿಮೆ ಪ್ರಮಾಣದಲ್ಲಿರುತ್ತವೆ. ಇದರಿಂದ ಮಕ್ಕಳ ತೂಕ ವೇಗವಾಗಿ ಹೆಚ್ಚುವುದರ ಜೊತೆಗೆ ದೀರ್ಘಕಾಲದ ಆರೋಗ್ಯ ಸಮಸ್ಯೆಗಳ ಅಪಾಯವೂ ಹೆಚ್ಚುತ್ತದೆ.

ಯಾವ ಆಹಾರಗಳು ಜಂಕ್ ಫುಡ್ ಪಟ್ಟಿಯಲ್ಲಿವೆ?

  • ಆಲೂಗಡ್ಡೆ ಚಿಪ್ಸ್
  • ಫ್ರೆಂಚ್ ಫ್ರೈಸ್
  • ಬರ್ಗರ್
  • ಪಿಜ್ಜಾ
  • ಫ್ರೈಡ್ ಚಿಕನ್
  • ಹಾಟ್ ಡಾಗ್
  • ಇನ್‌ಸ್ಟಂಟ್ ನೂಡಲ್ಸ್
  • ಚಾಕೊಲೇಟ್
  • ಡೋನಟ್
  • ಕೇಕ್ ಮತ್ತು ಪೇಸ್ಟ್ರಿ
  • ಸಕ್ಕರೆ ಹೆಚ್ಚಿರುವ ತಂಪು ಪಾನೀಯಗಳು
  • ಎನರ್ಜಿ ಡ್ರಿಂಕ್ಸ್
  • ಪ್ಯಾಕೆಟ್ ಸ್ನ್ಯಾಕ್ಸ್

ಇದನ್ನೂ ಓದಿ: ಪದೇ ಪದೇ ಹಸಿವಾಗುವುದು ಮಧುಮೇಹ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳ ಸಂಕೇತವಾಗಿರಬಹುದು!

ಮಕ್ಕಳಲ್ಲಿ ಬೊಜ್ಜು ಹೆಚ್ಚಲು ಪ್ರಮುಖ ಕಾರಣಗಳು

  • ಜಂಕ್ ಫುಡ್ ಹೆಚ್ಚಾಗಿ ಸೇವಿಸುವುದು
  • ತಂಪು ಪಾನೀಯಗಳು ಮತ್ತು ಸಿಹಿ ಪಾನೀಯಗಳ ಅತಿಯಾದ ಸೇವನೆ
  • ದೈಹಿಕ ಚಟುವಟಿಕೆ ಕಡಿಮೆ ಇರುವುದು
  • ಮೊಬೈಲ್, ಟಿವಿ ಮತ್ತು ವಿಡಿಯೊ ಗೇಮ್‌ಗಳ ಮುಂದೆ ಹೆಚ್ಚು ಸಮಯ ಕಳೆಯುವುದು
  • ಸರಿಯಾಗಿ ನಿದ್ರೆ ಮಾಡದಿರುವುದು
  • ಅನಿಯಮಿತ ಆಹಾರ ಪದ್ಧತಿ

ಬಾಲ್ಯದಲ್ಲೇ ಬೊಜ್ಜು ಬಂದರೆ ಯಾವ ಸಮಸ್ಯೆಗಳು ಎದುರಾಗಬಹುದು?

  • ಟೈಪ್-2 ಮಧುಮೇಹ
  • ಅಧಿಕ ರಕ್ತದೊತ್ತಡ
  • ಹೃದಯ ಸಂಬಂಧಿ ಕಾಯಿಲೆಗಳು
  • ಹೆಚ್ಚಿನ ಕೊಲೆಸ್ಟ್ರಾಲ್
  • ಫ್ಯಾಟಿ ಲಿವರ್
  • ಉಸಿರಾಟದ ಸಮಸ್ಯೆಗಳು
  • ಕೀಲು ನೋವು ಮತ್ತು ಮೂಳೆ ಸಮಸ್ಯೆಗಳು
  • ಸ್ಲೀಪ್ ಅಪ್ನಿಯಾ
  • ಮಾನಸಿಕ ಒತ್ತಡ ಮತ್ತು ಆತ್ಮವಿಶ್ವಾಸದ ಕೊರತೆ
  • ಕೆಲವು ವಿಧದ ಕ್ಯಾನ್ಸರ್‌ಗಳ ಅಪಾಯ

ಮಕ್ಕಳಿಗೆ ಯಾವ ರೀತಿಯ ಆಹಾರವನ್ನು ನೀಡಬೇಕು?

ತಜ್ಞರ ಸಲಹೆಯಂತೆ ಮಕ್ಕಳ ಆಹಾರದಲ್ಲಿ ಈ ಪದಾರ್ಥಗಳನ್ನು ಸೇರಿಸುವುದು ಉತ್ತಮ.

  • ತಾಜಾ ಹಣ್ಣುಗಳು
  • ಹಸಿರು ತರಕಾರಿಗಳು
  • ಧಾನ್ಯಗಳು
  • ಬೇಳೆಕಾಳುಗಳು
  • ಹಾಲು ಮತ್ತು ಹಾಲಿನ ಉತ್ಪನ್ನಗಳು
  • ಮೊಟ್ಟೆ
  • ಮೀನು
  • ಒಣಹಣ್ಣುಗಳು ಮತ್ತು ಸೀಡ್ಸ್
  • ಪ್ರೋಟೀನ್ ಸಮೃದ್ಧ ಆಹಾರಗಳು

ಪೋಷಕರು ಪಾಲಿಸಬೇಕಾದ ಪ್ರಮುಖ ಸಲಹೆಗಳು

  • ವಾರಕ್ಕೆ ಒಮ್ಮೆ ಮಾತ್ರ ಜಂಕ್ ಫುಡ್ ನೀಡಲು ಪ್ರಯತ್ನಿಸಿ.
  • ಮನೆಯಲ್ಲಿ ಆರೋಗ್ಯಕರ ತಿಂಡಿಗಳನ್ನು ತಯಾರಿಸಿ.
  • ಮಕ್ಕಳಿಗೆ ದಿನಕ್ಕೆ ಕನಿಷ್ಠ ಒಂದು ಗಂಟೆ ಆಟ ಅಥವಾ ವ್ಯಾಯಾಮಕ್ಕೆ ಅವಕಾಶ ನೀಡಿ.
  • ಮೊಬೈಲ್ ಮತ್ತು ಟಿವಿ ಬಳಕೆಗೆ ಸಮಯ ನಿಗದಿಪಡಿಸಿ.
  • ಸಕ್ಕರೆ ಪಾನೀಯಗಳ ಬದಲು ನೀರು ಅಥವಾ ತಾಜಾ ಹಣ್ಣಿನ ಸೇವನೆಯನ್ನು ಉತ್ತೇಜಿಸಿ.
  • ಆಹಾರ ಪ್ಯಾಕೆಟ್‌ಗಳ ಲೇಬಲ್ ಓದುವ ಅಭ್ಯಾಸ ಬೆಳೆಸಿರಿ.

ಜಂಕ್ ಫುಡ್ ಅನ್ನು ಸಂಪೂರ್ಣವಾಗಿ ನಿಷೇಧಿಸುವುದಕ್ಕಿಂತ ಅದರ ಸೇವನೆಯನ್ನು ಮಿತಿಗೊಳಿಸುವುದು ಮತ್ತು ಆರೋಗ್ಯಕರ ಆಹಾರ ಪದ್ಧತಿಯನ್ನು ಮಕ್ಕಳಲ್ಲಿ ಬೆಳೆಸುವುದು ಅತ್ಯಂತ ಮುಖ್ಯ. ಪೋಷಕರು, ಶಾಲೆಗಳು ಮತ್ತು ಸಮಾಜ ಒಟ್ಟಾಗಿ ಕೆಲಸ ಮಾಡಿದರೆ ಮಕ್ಕಳಲ್ಲಿ ಬೊಜ್ಜು ಮತ್ತು ಜೀವನಶೈಲಿ ಸಂಬಂಧಿತ ಕಾಯಿಲೆಗಳನ್ನು ಪರಿಣಾಮಕಾರಿಯಾಗಿ ತಡೆಯಬಹುದು.

ಸೂಚನೆ: ಈ ಲೇಖನ ಮಾಹಿತಿಗಾಗಿ ಮಾತ್ರ. ಮಕ್ಕಳ ಆಹಾರ ಅಥವಾ ಆರೋಗ್ಯಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಗಳಿದ್ದರೆ ಮಕ್ಕಳ ತಜ್ಞರು ಅಥವಾ ಪೌಷ್ಟಿಕ ತಜ್ಞರ ಸಲಹೆ ಪಡೆಯಿರಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ವಾರಣಾಸಿ’ ಟೈಟಲ್ ವಿವಾದ ಸುಖಾಂತ್ಯ, ರಾಜಮೌಳಿ ನಿರಾಳ – Kannada News | Varanasi movie title confusion ends, director Subbareddy gave away title rights

ರಾಜಮೌಳಿ (Rajamouli) ನಿರ್ದೇಶನ ಮಾಡಿ, ಮಹೇಶ್ ಬಾಬು, ಪ್ರಿಯಾಂಕಾ ಚೋಪ್ರಾ ಮತ್ತು ಪೃಥ್ವಿರಾಜ್ ಸುಕುಮಾರ್ ನಟಿಸಿರುವ ‘ವಾರಣಾಸಿ’ ಸಿನಿಮಾ ವಿಶ್ವದ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದು ಎನಿಸಿಕೊಂಡಿದೆ. ‘ಆರ್​​ಆರ್​​ಆರ್’ ಸಿನಿಮಾದ ಬಳಿಕ ರಾಜಮೌಳಿಯ ಸಿನಿಮಾಗಳಿಗೆ ವಿಶ್ವ ಬಾಕ್ಸ್ ಆಫೀಸ್​​ನಲ್ಲಿ ಭಾರಿ ಬೇಡಿಕೆ ಕುದುರಿದ್ದು, ‘ವಾರಣಾಸಿ’ ಸಿನಿಮಾದ ಬಗ್ಗೆ ಸಿನಿಮಾ ಪ್ರೇಮಿಗಳಲ್ಲಿ ಈಗಿನಿಂದಲೇ ಕುತೂಹಲ ಜೋರಾಗಿದೆ. ಸಿನಿಮಾದ ಹೆಸರನ್ನು ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ರಾಜಮೌಳಿ ಘೋಷಣೆ ಮಾಡಿದ್ದರು. ಆದರೆ ಆ ಟೈಟಲ್ ಘೋಷಣೆಯ ಬಳಿಕ ಸಣ್ಣ ವಿವಾದವೊಂದು ಹುಟ್ಟಿಕೊಂಡಿತ್ತು. ಆದರೆ ಈಗ ಆ ವಿವಾದ ಸುಖಾಂತ್ಯವಾಗಿದೆ.

ರಾಜಮೌಳಿ ಅವರು ‘ವಾರಣಾಸಿ’ ಸಿನಿಮಾ ಘೋಷಣೆ ಮಾಡಿದ್ದಾಗ ನಿರ್ದೇಶಕ ಸುಬ್ಬಾರೆಡ್ಡಿ ಅವರು ‘ವಾರಣಾಸಿ’ ಸಿನಿಮಾದ ಟೈಟಲ್ ತಮ್ಮ ಬಳಿ ಇದ್ದು, ರಾಜಮೌಳಿ ತಮ್ಮ ಅನುಮತಿ ಪಡೆಯದೇ ಸಿನಿಮಾದ ಹೆಸರನ್ನು ಬಳಸಿಕೊಂಡಿದ್ದಾರೆ ಎಂದು ಹೇಳಿದ್ದರು. ಆದರೆ ಈಗ ‘ವಾರಣಾಸಿ’ ಸಿನಿಮಾದ ಹೆಸರನ್ನು ಸಿನಿಮಾದ ನಿರ್ಮಾಪಕರಿಗೆ ನೀಡಿದ್ದಾರೆ. ಆ ಮೂಲಕ ವಿವಾದವನ್ನು ಖುದ್ದು ತಾವೇ ಸುಖಾಂತ್ಯಗೊಳಿಸಿದ್ದಾರೆ.

ಚಲನಚಿತ್ರ ನಿರ್ಮಾಪಕರ ಮಂಡಳಿಯ ಕಾರ್ಯದರ್ಶಿ ಪ್ರಸನ್ನ ಕುಮಾರ್, ನಿರ್ದೇಶಕರ ಸಂಘದ ಮಾಜಿ ಅಧ್ಯಕ್ಷ ವೀರಶಂಕರ್ ಹಾಗೂ ನಿರ್ದೇಶಕ ಸುಬ್ಬಾರೆಡ್ಡಿ ಅವರುಗಳು ಚರ್ಚೆ ನಡೆಸಿದ ಬಳಿಕ ‘ವಾರಣಾಸಿ’ ಸಿನಿಮಾದ ಟೈಟಲ್ ಮೇಲಿನ ಹಕ್ಕನ್ನು ವರ್ಗಾವಣೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕ ಸುಬ್ಬಾರೆಡ್ಡಿ, ‘2023ರಲ್ಲೇ ‘ವಾರಣಾಸಿ’ ಶೀರ್ಷಿಕೆಯನ್ನು ತಮ್ಮ ಬ್ಯಾನರ್ ಅಡಿಯಲ್ಲಿ ನೋಂದಾಯಿಸಿ ಆ ಕಥೆಯ ಮೇಲಿನ ಕೆಲಸವನ್ನು ಆರಂಭಿಸಿದ್ದೆ. ಆದರೆ ಅದೇ ಶೀರ್ಷಿಕೆ ರಾಜಮೌಳಿ ಅವರ ಸಿನಿಮಾಗೆ ಅವಶ್ಯಕತೆಯಿದೆ ಎಂದು ತಿಳಿದ ತಕ್ಷಣ, ತೆಲುಗು ಚಿತ್ರರಂಗದ ಗೌರವವನ್ನು ದೃಷ್ಟಿಯಲ್ಲಿಟ್ಟುಕೊಂಡು ಯಾವುದೇ ಹಿಂಜರಿಕೆಯಿಲ್ಲದೆ ಅದನ್ನು ಬಿಟ್ಟುಕೊಡಲು ನಿರ್ಧರಿಸಿದೆ ಎಂದರು. ತಮ್ಮ ನೆಚ್ಚಿನ ನಟ ಮಹೇಶ್ ಬಾಬು, ನಿರ್ದೇಶಕ ರಾಜಮೌಳಿ ಮತ್ತು ನಿರ್ಮಾಪಕ ಕೆ.ಎಲ್. ನಾರಾಯಣ ಒಟ್ಟಾಗಿ ಮಾಡುತ್ತಿರುವ ಈ ಬ್ರಹ್ಮಾಂಡ ಚಿತ್ರಕ್ಕೆ ಶೀರ್ಷಿಕೆ ನೀಡುವುದನ್ನು ತಾವೇ ಭಾಗ್ಯವೆಂದು ಭಾವಿಸುವುದಾಗಿ ಹೇಳಿದ್ದಾರೆ.

ಇದನ್ನೂ ಓದಿ: ಈಗ ಚಿತ್ರಕ್ಕೆ ಸುದೀಪ್ ಅವರೇ ಫಸ್ಟ್ ಆ್ಯಂಡ್ ಲಾಸ್ಟ್ ಚಾಯ್ಸ್ ಆಗಿತ್ತು; ರಾಜಮೌಳಿ

ಈ ಶೀರ್ಷಿಕೆಯನ್ನು ತಾವೆಂದಿಗೂ ವ್ಯಾಪಾರಿಕೋನದಿಂದ ನೋಡಿಲ್ಲವೆಂದೂ, ಒಂದು ರೂಪಾಯಿಯನ್ನೂ ಪಡೆಯುವ ಯೋಚನೆ ತಮಗೆ ಬಂದಿರಲಿಲ್ಲವೆಂದೂ ಸುಬ್ಬಾರೆಡ್ಡಿ ಸ್ಪಷ್ಟಪಡಿಸಿದರು. ‘ಶೀರ್ಷಿಕೆ ಎನ್ನುವುದು ನನಗೆ ಕೇವಲ ಒಂದು ಭಾವನೆ. ಅದನ್ನು ಮಾರಾಟ ಮಾಡಲು ಅಲ್ಲ, ಬದಲಿಗೆ ಉತ್ತಮ ಸಿನಿಮಾಗಾಗಿ ನೀಡಲು ನಾನು ಸಿದ್ಧನಾದೆ’ ಎಂದು ಅವರು ಹೇಳಿದ್ದಾರೆ. ಆ ಮೂಲಕ ತಾವು ಈ ಟೈಟಲ್ ನೀಡಲು ನಿರ್ಮಾಣ ಸಂಸ್ಥೆಯಿಂದ ಹಣವನ್ನೇ ಪಡೆದಿಲ್ಲ ಎಂದು ಹೇಳಿದ್ದಾರೆ.

ನಿರ್ದೇಶಕರ ಸಂಘದ ಮಾಜಿ ಅಧ್ಯಕ್ಷ ವೀರಶಂಕರ್ ಮಾತನಾಡಿ, ಆರಂಭದಲ್ಲಿ ಸುಬ್ಬಾರೆಡ್ಡಿ ಆ ಶೀರ್ಷಿಕೆಯೊಂದಿಗೆ ಭಾವುಕವಾಗಿ ಗುರುತಿಸಿಕೊಂಡಿದ್ದರು, ಹಾಗಾಗಿ ತಕ್ಷಣವೇ ಅವರ ಬಳಿ ಮಾತನಾಡಲು ಸಾಧ್ಯವಾಗಿರಲಿಲ್ಲ ಎಂದರು. ನಂತರ ರಾಜಮೌಳಿ ಹಾಗೂ ಕೆ.ಎಲ್. ನಾರಾಯಣರಂತಹ ದಿಗ್ಗಜರ ಚಿತ್ರಕ್ಕೆ ಶೀರ್ಷಿಕೆ ನೀಡಿದರೆ ಇಡೀ ಚಿತ್ರರಂಗಕ್ಕೆ ಒಳ್ಳೆಯ ಸಂದೇಶ ರವಾನೆಯಾಗುತ್ತದೆ ಎಂದು ವಿವರಿಸಿದಾಗ, ಸುಬ್ಬಾರೆಡ್ಡಿ ತಕ್ಷಣವೇ ಒಪ್ಪಿಕೊಂಡರು ಎಂದು ತಿಳಿಸಿದರು. ಶೀರ್ಷಿಕೆಗಳನ್ನು ಹಣಕ್ಕಾಗಿ ಎದುರು ನೋಡದೆ, ಚಿತ್ರರಂಗದ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಪರಸ್ಪರ ಸಹಕರಿಸಿಕೊಳ್ಳಬೇಕು ಎಂಬುದಕ್ಕೆ ಈ ನಿರ್ಧಾರವು ಉತ್ತಮ ಉದಾಹರಣೆಯಾಗಿದೆ ಎಂದು ವೀರಶಂಕರ್ ಅಭಿಪ್ರಾಯಪಟ್ಟರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 5:47 pm, Fri, 24 July 26

Source link

ಸಾಮಾಜಿಕ ಜಾಲತಾಣಗಳಲ್ಲಿ ಕೋರ್ಟ್ ನೇರಪ್ರಸಾರದ ವಿಡಿಯೋ ಶೇರ್ ಮಾಡುವಂತಿಲ್ಲ; ಸುಪ್ರೀಂ ಕೋರ್ಟ್ ಆದೇಶ – Kannada News | Supreme Court restricts sharing of live streamed court videos on social media

ನವದೆಹಲಿ, ಜುಲೈ 24: ನ್ಯಾಯಾಲಯದ ವಿಚಾರಣೆಗಳ ನೇರಪ್ರಸಾರದ ಆಡಿಯೋಗಳನ್ನು ಅನುಮತಿಯಿಲ್ಲದೆ ಕಟ್ ಮಾಡುವುದು, ಎಡಿಟ್ ಮಾಡುವುದು, ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡುವುದು, ಮರುಪೋಸ್ಟ್ ಮಾಡುವುದು ಮತ್ತು ಅವುಗಳಿಂದ ಹಣ ಗಳಿಸುವುದನ್ನು ಸುಪ್ರೀಂ ಕೋರ್ಟ್ (Supreme Court) ಕಟ್ಟುನಿಟ್ಟಾಗಿ ನಿಷೇಧಿಸಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿ ಜೋಯ್‌ಮಲ್ಯ ಬಾಗ್ಚಿ ಮತ್ತು ನ್ಯಾಯಮೂರ್ತಿ ವಿ. ಮೋಹನ ಅವರನ್ನೊಳಗೊಂಡ ಪೀಠವು ಈ ಮಧ್ಯಂತರ ಆದೇಶವನ್ನು ಹೊರಡಿಸಿದೆ. ಸುಪ್ರೀಂ ಕೋರ್ಟ್‌ನ ಸೆಕ್ರೆಟರಿ ಜನರಲ್ ಅಥವಾ ಸಂಬಂಧಪಟ್ಟ ಹೈಕೋರ್ಟ್‌ಗಳ ರಿಜಿಸ್ಟ್ರಾರ್ ಜನರಲ್‌ಗಳ ಪೂರ್ವಾನುಮತಿ ಇಲ್ಲದೆ ಯಾವುದೇ ಕೋರ್ಟ್ ವಿಡಿಯೋ ತುಣುಕುಗಳನ್ನು ಸೋಷಿಯಲ್ ಮೀಡಿಯಾ ಅಥವಾ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಹಂಚಿಕೊಳ್ಳುವಂತಿಲ್ಲ.

ಮಾಧ್ಯಮಗಳಿಗೆ ಸಂಬಂಧಿಸಿಲ್ಲ:

ಈ ಆದೇಶವು ಪತ್ರಕರ್ತರ ಹಾಗೂ ಮಾಧ್ಯಮಗಳ ದಿನನಿತ್ಯದ ನ್ಯಾಯಾಂಗ ಸುದ್ದಿ ವರದಿಗಾರಿಕೆಗೆ ಯಾವುದೇ ಅಡ್ಡಿಪಡಿಸುವುದಿಲ್ಲ ಎಂದು ಕೋರ್ಟ್ ಸ್ಪಷ್ಟಪಡಿಸಿದೆ. ಆದರೆ, ವಿಡಿಯೋಗಳನ್ನು ಎಡಿಟ್ ಮಾಡಿ ಯೂಟ್ಯೂಬ್ ಶಾರ್ಟ್ಸ್, ಇನ್‌ಸ್ಟಾಗ್ರಾಮ್ ರೀಲ್ಸ್, ಮೀಮ್ಸ್ ರೂಪದಲ್ಲಿ ಹಂಚಿಕೊಳ್ಳುವುದು ಮತ್ತು ವ್ಯೂಸ್​ಗಾಗಿ ಅದನ್ನು ವಿಜೃಂಭಿಸಿ ಪ್ರಸಾರ ಮಾಡುವುದನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ.

ಇದನ್ನೂ ಓದಿ: ವಿಚ್ಛೇದನ ಪ್ರಕರಣದಲ್ಲಿ ಪತಿಯ ಕಂಪನಿ ಮಾಲೀಕರಿಗೆ ಹೆಂಡತಿ ಪತ್ರ ಬರೆಯುವುದೇಕೆ? ಸುಪ್ರೀಂ ಕೋರ್ಟ್ ತರಾಟೆ

ಕೇಂದ್ರ ಹಾಗೂ ರಾಜ್ಯಗಳಿಗೆ ನೋಟಿಸ್:

ಲೈವ್ ಸ್ಟ್ರೀಮ್ ವಿಡಿಯೋಗಳ ದುರ್ಬಳಕೆ ತಡೆಯಲು ಸೂಕ್ತ ನಿಯಮಾವಳಿ ರೂಪಿಸುವಂತೆ ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (PIL) ವಿಚಾರಣೆ ನಡೆಸಿದ ಪೀಠವು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನೋಟಿಸ್ ಜಾರಿ ಮಾಡಿದೆ. ನ್ಯಾಯಾಲಯದ ನೇರಪ್ರಸಾರದ ವಿಡಿಯೋಗಳನ್ನು ಪೂರ್ವಾಪರ ಅನುಮತಿಯಿಲ್ಲದೆ ಕಾಪಿ ಮಾಡುವುದು, ಎಡಿಟ್ ಮಾಡುವುದು, ಸಾಮಾಜಿಕ ಜಾಲತಾಣಗಳು ಹಾಗೂ ಇತರ ಡಿಜಿಟಲ್ ವೇದಿಕೆಗಳಲ್ಲಿ ಅಪ್‌ಲೋಡ್ ಮಾಡುವುದು ಅಥವಾ ಹಂಚಿಕೊಳ್ಳುವುದನ್ನು ಸುಪ್ರೀಂ ಕೋರ್ಟ್ ಕಟ್ಟುನಿಟ್ಟಾಗಿ ನಿಷೇಧಿಸಿದೆ. ಈ ಆದೇಶವು ಸುಪ್ರೀಂ ಕೋರ್ಟ್ ಸೇರಿದಂತೆ ದೇಶದ ಎಲ್ಲ ಹೈಕೋರ್ಟ್‌ಗಳ ನೇರಪ್ರಸಾರದ ವಿಡಿಯೋಗಳಿಗೆ ಅನ್ವಯಿಸುತ್ತದೆ.

ಇದನ್ನೂ ಓದಿ: 9ನೇ ತರಗತಿಯಿಂದಲೇ ಏಕೆ?; ಸಿಬಿಎಸ್​ಇ ತ್ರಿಭಾಷಾ ನೀತಿಗೆ ಸುಪ್ರೀಂ ಕೋರ್ಟ್ ಆಕ್ಷೇಪ

ನ್ಯಾಯಾಲಯದ ವಿಡಿಯೋಗಳಿಂದ ತುಣುಕುಗಳನ್ನು ತೆಗೆಯುವುದು, ಎಡಿಟ್ ಮಾಡುವುದು, ಪೋಸ್ಟ್ ಮಾಡುವುದು, ಮರುಪೋಸ್ಟ್ ಮಾಡುವುದು ಹಾಗೂ ಅಪ್‌ಲೋಡ್ ಮಾಡುವುದಕ್ಕೆ ಈ ನಿರ್ಬಂಧ ಅನ್ವಯಿಸಲಿದೆ. ವಿಡಿಯೋಗಳನ್ನು ಬಳಸಲು ಸುಪ್ರೀಂ ಕೋರ್ಟ್‌ನ ಸೆಕ್ರೆಟರಿ ಜನರಲ್ ಅಥವಾ ಸಂಬಂಧಪಟ್ಟ ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್ ಅವರಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕಾಗುತ್ತದೆ. ಆದರೆ, ಈ ನಿರ್ದೇಶನವು ಮಾಧ್ಯಮಗಳ ದಿನನಿತ್ಯದ ನ್ಯಾಯಾಂಗ ಸುದ್ದಿ ವರದಿಗಾರಿಕೆಗೆ ಯಾವುದೇ ಅಡ್ಡಿಪಡಿಸುವುದಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

ಸದ್ಯ ಸುಪ್ರೀಂ ಕೋರ್ಟ್‌ನ ಅಧಿಕೃತ ವೆಬ್‌ಸೈಟ್ ಕೆಲವು ನಿರ್ದಿಷ್ಟ ವಿಚಾರಣೆಗಳ ನೇರಪ್ರಸಾರ ಮತ್ತು ರೆಕಾರ್ಡ್ ಮಾಡಿದ ವೀಡಿಯೊಗಳನ್ನು ಒದಗಿಸುತ್ತದೆ. ಸಾರ್ವಜನಿಕರಿಗೆ ನ್ಯಾಯಾಂಗ ಪ್ರಕ್ರಿಯೆಯ ಸುಲಭ ಲಭ್ಯತೆ ಮತ್ತು ಮುಕ್ತ ನ್ಯಾಯದ ಭಾಗವಾಗಿ ಲೈವ್ ಸ್ಟ್ರೀಮಿಂಗ್ ನೀಡಲಾಗುತ್ತಿದ್ದರೂ, ಅದರ ದುರ್ಬಳಕೆಗೆ ಅವಕಾಶವಿಲ್ಲ ಎಂದು ಕೋರ್ಟ್ ಹೇಳಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕರ್ನಾಟಕದಲ್ಲಿ ಮಳೆ ಅಭಾವ: 31 ಜಿಲ್ಲೆಗಳ ಪೈಕಿ 25 ಕಡೆ ಶೇ.20ಕ್ಕಿಂತ ಹೆಚ್ಚು ಕೊರತೆ – Kannada News | Monsoon Crisis: 25 Out of 31 Districts in Karnataka Face Massive Rain Deficit; Vijayanagara Worst Hit

ಬೆಂಗಳೂರು, ಜುಲೈ 24: ರಾಜ್ಯದಲ್ಲಿ ಮುಂಗಾರು ಮಳೆ ಕೊರತೆ ಮುಂದುವರಿದಿದ್ದು, 31 ಜಿಲ್ಲೆಗಳ ಪೈಕಿ ಕೇವಲ 6 ಜಿಲ್ಲೆಗಳಲ್ಲಿ ಮಾತ್ರ ಸಾಮಾನ್ಯ ಪ್ರಮಾಣದ ಮಳೆ ದಾಖಲಾಗಿದೆ. ಉಳಿದ 25 ಜಿಲ್ಲೆಗಳಲ್ಲಿ ಶೇ.20ಕ್ಕಿಂತ ಹೆಚ್ಚು ಮಳೆ ಕೊರತೆ ಕಂಡುಬಂದಿದೆ. ವಿಜಯನಗರ ಜಿಲ್ಲೆಯಲ್ಲಿ ಶೇ.60ಕ್ಕೂ ಅಧಿಕ ಮಳೆ ಕೊರತೆ ದಾಖಲಾಗಿದ್ದು, ರಾಜ್ಯದಲ್ಲೇ ಅತಿ ಹೆಚ್ಚು ಅಭಾವ ಎದುರಾಗಿದೆ. ಮೈಸೂರು ಮತ್ತು ಹಾವೇರಿ ಜಿಲ್ಲೆಗಳು ಸಹ ಸಾಮಾನ್ಯ ಪ್ರಮಾಣದ ಅರ್ಧಕ್ಕಿಂತಲೂ ಕಡಿಮೆ ಮಳೆ ಪಡೆದಿವೆ. ಎರಡೂ ಜಿಲ್ಲೆಗಳಲ್ಲಿ ತಲಾ ಶೇ.-57 ಮತ್ತು ಶೇ. -50ರಷ್ಟು ಕಡಿಮೆ ಮಳೆಯಾಗಿದೆ.

ರಾಜ್ಯದಲ್ಲಿ ಶೇ.35ರಷ್ಟು ಮಳೆ ಕೊರತೆ

ಜುಲೈ 22ರವರೆಗೆ ರಾಜ್ಯದಲ್ಲಿ 253 ಮಿ.ಮೀ. ಮಳೆ ದಾಖಲಾಗಿದ್ದು, ಸಾಮಾನ್ಯವಾಗಿ ಈ ಅವಧಿಯಲ್ಲಿ 392 ಮಿ.ಮೀ. ಮಳೆ ಸುರಿಯಬೇಕಿತ್ತು. ಇದರಿಂದ ರಾಜ್ಯದಲ್ಲಿ ಒಟ್ಟಾರೆ ಶೇ.35ರಷ್ಟು ಮಳೆ ಕೊರತೆ ಉಂಟಾಗಿದೆ. ಜೂನ್ ಅಂತ್ಯಕ್ಕೆ ಈ ಕೊರತೆ ಶೇ.42 ಇದ್ದು, ಇದೀಗ ಸ್ವಲ್ಪ ಮಟ್ಟಿಗೆ ಸುಧಾರಣೆಯಾಗಿದೆ. ಭಾರತೀಯ ಹವಾಮಾನ ಇಲಾಖೆ (IMD) ಪ್ರಕಾರ, ಸಾಮಾನ್ಯ ಮಳೆಯಿಂದ ಶೇ.20ರವರೆಗೆ ಹೆಚ್ಚು ಅಥವಾ ಕಡಿಮೆ ದಾಖಲಾಗಿದ್ದರೆ ಅದನ್ನು ಸಾಮಾನ್ಯ ಎಂದು ಪರಿಗಣಿಸಲಾಗುತ್ತದೆ. ಶೇ.20ಕ್ಕಿಂತ ಹೆಚ್ಚು ಕೊರತೆ ಇದ್ದರೆ ‘ಕಡಿಮೆ’ ಹಾಗೂ ಶೇ.60ಕ್ಕಿಂತ ಹೆಚ್ಚು ಕೊರತೆ ಇದ್ದರೆ ‘ಅತ್ಯಂತ ಕಡಿಮೆ’ ಎಂದು ವರ್ಗೀಕರಿಸಲಾಗುತ್ತದೆ.

ಇದನ್ನೂ ಓದಿ: ಮಳೆರಾಯನ ಮುನಿಸು: KRS ನೀರಿನ ಮಟ್ಟ ಕುಸಿತ; ಮಂಡ್ಯದಲ್ಲಿ ಕೃಷಿ ಚಟುವಟಿಕೆ ಸಂಪೂರ್ಣ ಸ್ತಬ್ಧ

ಮಳೆ ಕೊರತೆಗೆ ಕಾರಣವೇನು?

ಹವಾಮಾನ ತಜ್ಞರ ಪ್ರಕಾರ, ಅರಬ್ಬಿ ಸಮುದ್ರದ ಮೇಲೆ ದುರ್ಬಲ ಗಾಳಿ,ಬಂಗಾಳ ಕೊಲ್ಲಿಯಲ್ಲಿ ಮುಂಗಾರು ವಾಯುಭಾರ ಕುಸಿತ (Monsoon Depressions) ರೂಪುಗೊಳ್ಳದಿರುವುದು ರಾಜ್ಯದಲ್ಲಿ ಮಳೆ ಕೊರತೆಗೆ ಪ್ರಮುಖ ಕಾರಣಗಳಾಗಿವೆ.

ಜುಲೈನಲ್ಲಿ ಮಳೆ ಹೆಚ್ಚಾದರೂ ಕೊರತೆ ಮುಂದುವರಿಕೆ

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಕೇಂದ್ರ (KSNDMC) ಮಾಹಿತಿ ಪ್ರಕಾರ, ಸಾಮಾನ್ಯವಾಗಿ ಜೂನ್‌ಗೆ ಹೋಲಿಸಿದರೆ ಜುಲೈನಲ್ಲಿ ಮಳೆ ಪ್ರಮಾಣ ಕಡಿಮೆಯಿರುತ್ತದೆ. ಆದರೆ ಈ ವರ್ಷ ಜುಲೈನಲ್ಲಿ ಜೂನ್‌ಗಿಂತ ಹೆಚ್ಚು ಮಳೆಯ ದಿನಗಳು ದಾಖಲಾಗಿವೆ. ಹಾಸನ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಉತ್ತರ ಕನ್ನಡ, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಜೂನ್‌ಗೆ ಹೋಲಿಸಿದರೆ ಜುಲೈನಲ್ಲಿ ಸುಮಾರು ಎರಡು ಪಟ್ಟು ಹೆಚ್ಚು ಮಳೆಯಾಗಿದೆ. ಆದರೂ ಈ ಜಿಲ್ಲೆಗಳು ತಮ್ಮ ಸಾಮಾನ್ಯ ಮಳೆಯ ಪ್ರಮಾಣವನ್ನು ತಲುಪಿಲ್ಲ.

ಬಾಗಲಕೋಟೆಯಲ್ಲಿ ಮಾತ್ರ ಸಾಮಾನ್ಯಕ್ಕಿಂತ ಹೆಚ್ಚು ಮಳೆ

ಜುಲೈ 22ರವರೆಗೆ ಬಾಗಲಕೋಟೆ ಜಿಲ್ಲೆಯಲ್ಲಿ ಮಾತ್ರ ಸಾಮಾನ್ಯಕ್ಕಿಂತ ಹೆಚ್ಚು ಮಳೆ ದಾಖಲಾಗಿದೆ. ಜಿಲ್ಲೆಯಲ್ಲಿ ಸಾಮಾನ್ಯ 128 ಮಿ.ಮೀ. ಬದಲು 134 ಮಿ.ಮೀ. ಮಳೆ ಸುರಿದಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 6:14 pm, Fri, 24 July 26

Source link

Exit mobile version