ಪ್ರತಿಭಟನೆ ತೀವ್ರ ಸ್ವರೂಪ ಸಾಧ್ಯತೆ, ಮುಂಜಾಗ್ರತಾ ಕ್ರಮವಾಗಿ ಪೊಲೀಸರ ರಜೆ ರದ್ದು – Kannada News | NEET Leak Row: Delhi Police Cancels Routine Leave Amid Law And Order Concerns Over CJP Protests

ನವದೆಹಲಿ, (ಜುಲೈ 24): ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್‌ ಜನತಾ ಪಾರ್ಟಿ ದೆಹಲಿಯ ಜಂತರ್ ಮಂತರ್​​​​ನಲ್ಲಿ ಪ್ರತಿಭಟನೆ ನಡೆಸಿದ್ದು, ಇದೀಗ ಮತ್ತೊಂದು ಹೆಜ್ಜೆ ಮುಂದೆ ಹೋಗಿ ರಾಷ್ಟ್ರವ್ಯಾಪಿ ಪ್ರತಿಭಟನೆಗೆ (CJP Nationwide Protest) ಕರೆ ನೀಡಿದೆ. ಅಲ್ಲದೇ ದೆಹಲಿಯಲ್ಲಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಳ್ಳಲು ಸಾಧ್ಯತೆಗಳಿವೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ದೆಹಲಿ ಗೃಹ ಇಲಾಖೆಯು ಎಲ್ಲಾ ಪೊಲೀಸ್‌ ಸಿಬ್ಬಂದಿಯ ರಜೆಗಳನ್ನ (leaves) ರದ್ದುಪಡಿಸಿ ಕಟ್ಟೆಚ್ಚರ ವಹಿಸಲು ಸೂಚಿಸಲಾಗಿದೆ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಮುಟ್ಟಿನ ನೋವಿನ ನಡುವೆಯೂ 42 ಕಿ.ಮೀ. ಮ್ಯಾರಥಾನ್ ಪೂರ್ಣಗೊಳಿಸಿ ಇತಿಹಾಸ ಬರೆದ ಅಥ್ಲೀಟ್ ಲೀ ಮೇಝೆನ್ – Kannada News | Period Defying Marathoner Li Meizhen’s Triumph: Unyielding Spirit and Global Acclaim

ಬೀಜಿಂಗ್, ಜು.24 : ಕ್ರೀಡಾ ಅಂಗಳದಲ್ಲಿ ಮಹಿಳೆಯರು ಎದುರಿಸುವ ದೈಹಿಕ ಸವಾಲುಗಳು ಮತ್ತು ಅವರ ಅದಮ್ಯ ಛಲಕ್ಕೆ ಜಾಗತಿಕ ಮಟ್ಟದಲ್ಲಿ ದೊಡ್ಡ ನಿದರ್ಶನವೊಂದು ಸಿಕ್ಕಿದೆ. ಚೀನಾದ 25 ವರ್ಷದ ಮ್ಯಾರಥಾನ್ ಓಟಗಾರ್ತಿ ಲೀ ಮೇಝೆನ್, ಓಟದ ಮಧ್ಯದಲ್ಲೇ ನಿರೀಕ್ಷಿಸದ ರೀತಿಯಲ್ಲಿ ಮುಟ್ಟು (ಮಹಿಳೆಯರ ಮಾಸಿಕ ಋತುಚಕ್ರ) ಪ್ರಾರಂಭವಾದರೂ ಹಿಂಜರಿಯದೆ, 42 ಕಿಲೋಮೀಟರ್ ಸುದೀರ್ಘ ಮ್ಯಾರಥಾನ್ ಪೂರ್ಣಗೊಳಿಸಿ ವಿಶ್ವದಾದ್ಯಂತ ಅಪಾರ ಪ್ರಶಂಸೆ ಹಾಗೂ ಗೌರವಕ್ಕೆ ಪಾತ್ರರಾಗಿದ್ದಾರೆ.

2024ರ ಸೆಪ್ಟೆಂಬರ್ 22 ರಂದು ಚೀನಾದ ಹೆಬೈ ಪ್ರಾಂತ್ಯದಲ್ಲಿ ನಡೆದ ‘ಹೆಂಗ್‌ಶುಯಿ ಲೇಕ್ ಮ್ಯಾರಥಾನ್’ ಸ್ಪರ್ಧೆಯಲ್ಲಿ ಈ ಅಭೂತಪೂರ್ವ ಘಟನೆ ನಡೆದಿತ್ತು. 42 ಕಿಲೋಮೀಟರ್ ಮ್ಯಾರಥಾನ್ ಓಟದಲ್ಲಿ 34 ರಿಂದ 35ನೇ ಕಿಲೋಮೀಟರ್ ತಲುಪುವ ಹಂತವನ್ನು ಅತ್ಯಂತ ಕಠಿಣ ಹಾಗೂ ದೈಹಿಕ ಶಕ್ತಿ ಕುಸಿಯುವ ಘಟ್ಟ ಎಂದು ಪರಿಗಣಿಸಲಾಗುತ್ತದೆ. ಸರಿ ಸುಮಾರು ಇದೇ ಹಂತದಲ್ಲಿ ಲೀ ಮೇಝೆನ್ ಅವರಿಗೆ ದಿಢೀರನೆ ಮಾಸಿಕ ಋತುಚಕ್ರ ಆರಂಭವಾಯಿತು.

ಇಲ್ಲಿದೆ ನೋಡಿ ವಿಡಿಯೋ:

ಸುದೀರ್ಘ ಓಟದ ದಣಿವು, ತೀವ್ರ ದೈಹಿಕ ನೋವು ಮತ್ತು ಮಾನಸಿಕ ಒತ್ತಡದ ನಡುವೆಯೂ, ಬಟ್ಟೆಯ ಮೇಲೆ ರಕ್ತದ ಕಲೆಗಳು ಸ್ಪಷ್ಟವಾಗಿ ಕಾಣಿಸುತ್ತಿದ್ದರೂ ಅವರು ಓಟವನ್ನು ಎಲ್ಲೂ ನಿಲ್ಲಿಸಲಿಲ್ಲ. ನಿಸರ್ಗದ ಸಹಜ ಕ್ರಿಯೆಗೆ ಮಣಿಯದೆ, ಓಟವನ್ನು ಪೂರ್ಣಗೊಳಿಸುವ ಕಡೆಗಷ್ಟೇ ತಮ್ಮ ಗಮನ ನೆಟ್ಟಿದ್ದರು. ತಮ್ಮ ಈ ಕಠಿಣ ನಿರ್ಧಾರದ ಕುರಿತು ಮಾತನಾಡಿದ ಲೀ ಮೇಝೆನ್, “ನಾನೇನಾದರೂ ಆ ಹಂತದಲ್ಲಿ ಸ್ಪರ್ಧೆಯಿಂದ ಹಿಂದೆ ಸರಿದಿದ್ದರೆ, ನನ್ನ ಗುರಿ ತಲುಪಲು ನಾನು ಮತ್ತೊಂದು ಮ್ಯಾರಥಾನ್‌ನಲ್ಲಿ ಓಡಬೇಕಾಗುತ್ತಿತ್ತು” ಎಂದು ತಮ್ಮ ವೃತ್ತಿಪರ ಬದ್ಧತೆಯನ್ನು ವ್ಯಕ್ತಪಡಿಸಿದರು.

ಇದನ್ನೂ ಓದಿ: ಫುಡ್ ಡೆಲಿವರಿ ಕ್ಷೇತ್ರಕ್ಕೆ ಫ್ಲಿಪ್‌ಕಾರ್ಟ್ ಗ್ರ್ಯಾಂಡ್ ಎಂಟ್ರಿ: ಮೊದಲ ಹಂತದಲ್ಲಿ ಬೆಂಗಳೂರಿನಲ್ಲಿ ಸೇವೆ ಆರಂಭ

ಅವರ ಈ ಸಾಹಸ ಮತ್ತು ಧೈರ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ “God Is A Woman” (ದೇವರೆಂದರೆ ಮಹಿಳೆ) ಎಂಬ ಶೀರ್ಷಿಕೆಯಡಿ ಜಾಗತಿಕ ಮಟ್ಟದಲ್ಲಿ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ. ಕ್ರೀಡಾ ಕ್ಷೇತ್ರದಲ್ಲಿ ಮಹಿಳೆಯರ ಮುಟ್ಟಿನ ಕುರಿತಾದ ಸಂಕೋಚ ಹಾಗೂ ಸಾಮಾಜಿಕ ಮುಜುಗರವನ್ನು ಮೆಟ್ಟಿನಿಲ್ಲಲು ಈ ಘಟನೆ ದೊಡ್ಡ ಪ್ರೇರಣೆಯಾಗಿದೆ.

ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕರ್ನಾಟಕಕ್ಕೆ ಒಳ್ಳೆ ಸುದ್ದಿ; ಬಳ್ಳಾರಿ- ಗುಂತಕಲ್ ನಡುವಿನ ರೈಲು ಮಾರ್ಗಕ್ಕೆ ಸಂಪುಟ ಒಪ್ಪಿಗೆ – Kannada News | Modi Cabinet approves Bellary Guntakal Line railway project linking Karnataka and Andhra Pradesh

ನವದೆಹಲಿ, ಜುಲೈ 24: ಕರ್ನಾಟಕದ ರೈಲ್ವೆ ಯೋಜನೆ ಬಗ್ಗೆ ಇಂದು ನಡೆದ ಸಂಪುಟ ಸಭೆಯಲ್ಲಿ (Cabinet Meeting) ಮುಖ್ಯವಾದ ನಿರ್ಧಾರ ತೆಗೆದುಕೊಳ್ಳಲಾಗಿದೆ. ಕೇಂದ್ರ ಸಂಪುಟ ನಿರ್ಧಾರಗಳ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw), ಆಂಧ್ರಪ್ರದೇಶ ಮತ್ತು ಕರ್ನಾಟಕವನ್ನು ಸಂಪರ್ಕಿಸುವ 1,264 ಕೋಟಿ ರೂ. ವೆಚ್ಚದ ಬಳ್ಳಾರಿ-ಗುಂತಕಲ್ (Ballari-Guntakal Railway lines) ರೈಲ್ವೆ ಯೋಜನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.

ಕರ್ನಾಟಕದ ಬಳ್ಳಾರಿ ಮತ್ತು ಆಂಧ್ರಪ್ರದೇಶದ ಗುಂತಕಲ್ ನಡುವೆ ಮೂರನೇ ಮತ್ತು ನಾಲ್ಕನೇ ರೈಲು ಮಾರ್ಗಗಳನ್ನು ನಿರ್ಮಿಸುವ 1,264 ಕೋಟಿ ವೆಚ್ಚದ ಬೃಹತ್ ಯೋಜನೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಂಪುಟದ ಆರ್ಥಿಕ ವ್ಯವಹಾರಗಳ ಸಮಿತಿಯು (CCEA) ಅನುಮೋದನೆ ನೀಡಿದೆ. ಕರ್ನಾಟಕ ಮತ್ತು ಆಂಧ್ರಪ್ರದೇಶದ ಒಟ್ಟು ಮೂರು ಜಿಲ್ಲೆಗಳಲ್ಲಿ ವ್ಯಾಪಿಸಿರುವ ಈ ಯೋಜನೆಯು ಭಾರತೀಯ ರೈಲ್ವೆ ಜಾಲವನ್ನು ಸುಮಾರು 46 ಕಿ.ಮೀ ನಷ್ಟು ವಿಸ್ತರಿಸಲಿದ್ದು, ಸುಮಾರು 7 ಲಕ್ಷ ಜನಸಂಖ್ಯೆ ಹೊಂದಿರುವ ಸುಮಾರು 99 ಗ್ರಾಮಗಳಿಗೆ ಸಾರಿಗೆ ಸಂಪರ್ಕವನ್ನು ಸುಧಾರಿಸಲಿದೆ.

ಪಿಎಂ ಗತಿ ಶಕ್ತಿ ರಾಷ್ಟ್ರೀಯ ಬೃಹತ್ ಯೋಜನೆ ಅಡಿಯಲ್ಲಿ ಕೈಗೆತ್ತಿಕೊಳ್ಳಲಾಗಿರುವ ಈ 46 ಕಿ.ಮೀ ಉದ್ದದ ಮಲ್ಟಿ-ಟ್ರ್ಯಾಕಿಂಗ್ ಯೋಜನೆಯು, ರೈಲು ಮಾರ್ಗದ ಸಾಮರ್ಥ್ಯವನ್ನು ಹೆಚ್ಚಿಸುವುದು, ಸರಕು ಸಾಗಣೆಯನ್ನು ಸುಗಮಗೊಳಿಸುವುದು ಮತ್ತು ಬಹುಮಾದರಿ ಸಂಪರ್ಕವನ್ನು ಬಲಪಡಿಸುವ ಗುರಿಯನ್ನು ಹೊಂದಿದ್ದು, 2028-29ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.

Source link

‘ಜನ ನಾಯಗನ್’ ಕರ್ನಾಟಕದಲ್ಲಿ ಗಳಿಸಿದ್ದೆಷ್ಟು? ಇಲ್ಲಿದೆ ಕಲೆಕ್ಷನ್ ವಿವರ – Kannada News | Jana Nayagan Box Office Collection Karnataka Day 1: Vijay Starrer Earns 11 Crore in Karnataka

ದಳಪತಿ ವಿಜಯ್ ನಟನೆಯ ‘ಜನ ನಾಯಗನ್’ ಸಿನಿಮಾ (Jana Nayagan Movie) ಜುಲೈ 23ರಂದು ವಿಶ್ವಾದ್ಯಂತ ತೆರೆಗೆ ಬಂದಿದೆ. ತಮಿಳುನಾಡು ಮಾತ್ರವಲ್ಲದೆ, ಕರ್ನಾಟಕದಲ್ಲೂ ಈ ಚಿತ್ರ ಉತ್ತಮ ಓಪನಿಂಗ್ ಸಿಕ್ಕಿದೆ. ಈ ಮೂಲಕ ದಳಪತಿ ವಿಜಯ್ ಹವಾ ಕರ್ನಾಟಕದಲ್ಲಿ ಜೋರಾಗಿಯೇ ಇದೆ ಎಂಬುದು ಸ್ಪಷ್ಟವಾಗಿದೆ. ಹಾಗಾದರೆ, ದಳಪತಿ ವಿಜಯ್ ಸಿನಿಮಾ ಕರ್ನಾಟಕದಲ್ಲಿ ಎಷ್ಟು ಗಳಿಕೆ ಮಾಡಿದೆ? ಇಲ್ಲಿ ಆಕ್ಯುಪೆನ್ಸಿ ಎಷ್ಟಿತ್ತು ಎಂಬುದರ ವಿವರ ಇಲ್ಲಿದೆ.

ತಮಿಳು ಸಿನಿಮಾಗಳಿಗೆ ಬೆಂಗಳೂರಿನಲ್ಲಿ ದೊಡ್ಡ ಮಾರುಕಟ್ಟೆ ಇದೆ. ಈ ಮೊದಲು ರಿಲೀಸ್ ಆದ ಸಾಕಷ್ಟು ತಮಿಳು ಹೀರೋ ಸಿನಿಮಾಗಳು ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿದ್ದವು. ಈಗ ಆ ಸಾಲಿಗೆ ‘ಜನ ನಾಯಗನ್’ ಕೂಡ ಸೇರ್ಪಡೆ ಆಗಿದೆ. ಈ ಚಿತ್ರ ಕರ್ನಾಟಕದಲ್ಲಿ 11.57 ಕೋಟಿ ರೂಪಾಯಿ ಗಳಿಕೆ ಮಾಡಿದೆ ಎಂದು ವರದಿ ಆಗಿದೆ. ಇದರಲ್ಲಿ ಬೆಂಗಳೂರಿನದ್ದು ಸಿಂಹಪಾಲು ಎಂಬುದು ವಿಶೇಷ. ಬೆಂಗಳೂರಲ್ಲಿ ಒಟ್ಟೂ 54 ಪರ್ಸೆಂಟ್ ಆಕ್ಯುಪೆನ್ಸಿ ಇತ್ತು. ಚೆನ್ನೈನಲ್ಲಿ 97 ಪರ್ಸೆಂಟ್ ಆಕ್ಯುಪೆನ್ಸಿ ಇತ್ತು. ಅಂದರೆ, ಅಲ್ಲಿ ಬಹುತೇಕ ಶೋಗಳು ಹೌಸ್​​ಫುಲ್ ಪ್ರದರ್ಶನ ಕಂಡಿದೆ ಎಂದರ್ಥ
ಭಾರತದಲ್ಲಿ ಗಳಿಸಿದ್ದೆಷ್ಟು?

ಇದನ್ನೂ ಓದಿ: ನೆಗೆಟಿವ್ ವಿಮರ್ಶೆ ಮಧ್ಯೆ ‘ಜನ ನಾಯಗನ್’ ಸಿನಿಮಾ ಮೊದಲ ದಿನ ಗಳಿಸಿದ್ದೆಷ್ಟು?

‘ಜನ ನಾಯಗನ್’ ಸಿನಿಮಾ ತಮಿಳು ಭಾಷೆಯ ಜೊತೆಗೆ ತೆಲುಗು ಹಾಗೂ ಹಿಂದಿ ಭಾಷೆಗೆ ಡಬ್ ಆಗಿ ರಿಲೀಸ್ ಆಗಿದೆ. ದೇಶಾದ್ಯಂತ ಮೊದಲ ದಿನ 13 ಸಾವಿರ ಶೋಗಳು ಸಿಕ್ಕಿವೆ. ಇದರಿಂದ ಸಿನಿಮಾ 48 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಹಾಗೂ 41 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಗಳಿಸಿದೆ. ತಮಿಳಿನಿಂದ 38.20 ಕೋಟಿ ರೂಪಾಯಿ, ಹಿಂದಿಯಿಂದ 1.75 ಕೋಟಿ ರೂಪಾಯಿ ಹಾಗೂ ತೆಲುಗಿನಿಂದ 2.75 ಕೋಟಿ ರೂಪಾಯಿ ಗಳಿಕೆ ಮಾಡಿದೆ.

ಒಟ್ಟೂ ಗಳಿಕೆ

‘ಜನ ನಾಯಗನ್’ ಸಿನಿಮಾ ದುಬೈ, ಅಮೆರಿಕ ಸೇರಿದಂತೆ ಅನೇಕ ಭಾಷೆಗಳಲ್ಲಿ ತೆರೆಗೆ ಬಂದಿದೆ. ಈ ಚಿತ್ರಕ್ಕೆ ವಿಶ್ವ ಮಾರುಕಟ್ಟೆಯಿಂದ 30 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. ಈ ಮೂಲಕ ಚಿತ್ರದ ಒಟ್ಟೂ ಗಳಿಕ 78.27 ಕೋಟಿ ರೂಪಾಯಿ ಆಗಿದೆ. ‘ಜನ ನಾಯಗನ್’ ಸಿನಿಮಾಗೆ ಎಚ್​. ವಿನೋದ್ ನಿರ್ದೇಶನ ಮಾಡಿದ್ದಾರೆ. ಇದು ವಿಜಯ್ ಅವರ ಕೊನೆಯ ಸಿನಿಮಾ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಏಷ್ಯನ್ ಗೇಮ್ಸ್‌ ಕ್ರಿಕೆಟ್ ವೇಳಾಪಟ್ಟಿ ಪ್ರಕಟ; ಹೀಗಾದ್ರೆ ಮಾತ್ರ ಭಾರತ- ಪಾಕ್ ಮುಖಾಮುಖಿ – Kannada News | Asian Games 2026 Cricket: India vs Pakistan Showdown? Full Schedule and QF Draw

ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯಲಿರುವ 2026 ರ ಏಷ್ಯನ್ ಗೇಮ್ಸ್‌ನ (Asian Games 2026) ಕ್ರಿಕೆಟ್ ಪಂದ್ಯಾವಳಿಯ ವೇಳಾಪಟ್ಟಿ ಮತ್ತು ಡ್ರಾವನ್ನು ಪ್ರಕಟಿಸಲಾಗಿದೆ. ಅದರಂತೆ ನಾಲ್ಕನೇ ಬಾರಿಗೆ ಕ್ರಿಕೆಟ್ ಅನ್ನು ಏಷ್ಯನ್ ಗೇಮ್ಸ್‌ನಲ್ಲಿ ಸೇರಿಸಲಾಗಿದೆ. ಭಾರತವು ಪುರುಷ ಮತ್ತು ಮಹಿಳಾ ಎರಡೂ ವಿಭಾಗಗಳಲ್ಲಿ ಹಾಲಿ ಚಾಂಪಿಯನ್ ಆಗಿ ಪಂದ್ಯಾವಳಿಯನ್ನು ಪ್ರವೇಶಿಸಲಿದೆ. ಪಂದ್ಯಾವಳಿಯ ವೇಳಾಪಟ್ಟಿಯ ಪ್ರಕಾರ, ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ಈ ಪಂದ್ಯಾವಳಿಯಲ್ಲಿ ಒಮ್ಮೆ ಮಾತ್ರ ಮುಖಾಮುಖಿಯಾಗುವ ನಿರೀಕ್ಷೆಯಿದೆ.

ಏಷ್ಯನ್ ಗೇಮ್ಸ್‌ನ ಕ್ರಿಕೆಟ್ ವೇಳಾಪಟ್ಟಿ

ಪುರುಷ ಮತ್ತು ಮಹಿಳಾ ವಿಭಾಗಗಳೆರಡರಲ್ಲೂ ಪಂದ್ಯಗಳು ಟಿ20 ಸ್ವರೂಪದಲ್ಲಿ ನಡೆಯಲಿದ್ದು, ಎಲ್ಲಾ ಪಂದ್ಯಗಳು ಅಧಿಕೃತ ಅಂತರರಾಷ್ಟ್ರೀಯ ಸ್ಥಾನಮಾನವನ್ನು ಹೊಂದಿರುತ್ತವೆ. ಮಹಿಳಾ ಟೂರ್ನಿಯು ಸೆಪ್ಟೆಂಬರ್ 17 ರಿಂದ ಸೆಪ್ಟೆಂಬರ್ 22, 2026 ರವರೆಗೆ ನಡೆಯಲಿದ್ದು, ಪುರುಷರ ಟೂರ್ನಿಯು ಸೆಪ್ಟೆಂಬರ್ 24 ರಿಂದ ಅಕ್ಟೋಬರ್ 1, 2026 ರವರೆಗೆ ನಡೆಯಲಿದೆ. ಪುರುಷರ ವಿಭಾಗದಲ್ಲಿ ಭಾರತ, ಪಾಕಿಸ್ತಾನ, ಶ್ರೀಲಂಕಾ ಮತ್ತು ಬಾಂಗ್ಲಾದೇಶ ತಂಡಗಳು ನೇರವಾಗಿ ಕ್ವಾರ್ಟರ್ ಫೈನಲ್ ಸುತ್ತಿಗೆ ಮುನ್ನಡೆಯುತ್ತವೆ. ಉಳಿದ ನಾಲ್ಕು ಕ್ವಾರ್ಟರ್ ಫೈನಲ್ ಸ್ಥಾನಗಳನ್ನು ತುಂಬಲು ಆರು ತಂಡಗಳ ನಡುವೆ ಅರ್ಹತಾ ಸುತ್ತು ನಡೆಯಲಿದೆ. ಈ 6 ತಂಡಗಳನ್ನು ತಲಾ 3 ತಂಡಗಳ ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಅದರಂತೆ ಪ್ರತಿ ಗುಂಪಿನಿಂದ ಅಗ್ರ ಎರಡು ತಂಡಗಳು ಕ್ವಾರ್ಟರ್ ಫೈನಲ್‌ಗೆ ಮುನ್ನಡೆಯುತ್ತವೆ.

  • ಗುಂಪು ಎ: ಅಫ್ಘಾನಿಸ್ತಾನ, ಜಪಾನ್, ನೇಪಾಳ
  • ಗುಂಪು ಬಿ: ಹಾಂಗ್ ಕಾಂಗ್, ಚೀನಾ, ಮಲೇಷ್ಯಾ, ಓಮನ್

IND vs ENG: ಸೆನಾ ದೇಶಗಳಲ್ಲಿ ಈ ಸಾಧನೆ ಮಾಡಿದ ಏಕೈಕ ಏಷ್ಯನ್ ಬೌಲರ್ ಜಸ್ಪ್ರೀತ್ ಬುಮ್ರಾ

ಕ್ವಾರ್ಟರ್ ಫೈನಲ್‌ ಸುತ್ತು ಹೀಗಿರಲಿದೆ

ಶ್ರೇಯಾಂಕಿತ ತಂಡವಾಗಿ ಭಾರತೀಯ ಮಹಿಳಾ ತಂಡವು ಕ್ವಾರ್ಟರ್ ಫೈನಲ್‌ನಲ್ಲಿ ನೇರವಾಗಿ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ. ಪ್ರಶಸ್ತಿಯನ್ನು ಉಳಿಸಿಕೊಳ್ಳುವ ಗುರಿಯನ್ನು ಹೊಂದಿರುವ ಭಾರತೀಯ ಮಹಿಳಾ ತಂಡವು ಮೊದಲ ಕ್ವಾರ್ಟರ್ ಫೈನಲ್‌ನಲ್ಲಿ ಆತಿಥೇಯ ಜಪಾನ್ ತಂಡವನ್ನು ಎದುರಿಸಲಿದೆ. ಭಾರತ-ಜಪಾನ್ ಪಂದ್ಯದ ವಿಜೇತರು ಸೆಮಿಫೈನಲ್‌ನಲ್ಲಿ ಬಾಂಗ್ಲಾದೇಶ ಅಥವಾ ಚೀನಾ ತಂಡವನ್ನು ಎದುರಿಸಲಿದ್ದಾರೆ. ಎರಡನೇ ಸೆಮಿಫೈನಲ್‌ನಲ್ಲಿ, ಶ್ರೀಲಂಕಾ ಹಾಗೂ ಮಲೇಷ್ಯಾ ನಡುವಿನ ಪಂದ್ಯದಲ್ಲಿ ಗೆದ್ದವರು, ಪಾಕಿಸ್ತಾನ ಮತ್ತು ಥೈಲ್ಯಾಂಡ್ ನಡುವಿನ ಪಂದ್ಯದಲ್ಲಿ ಗೆದ್ದ ತಂಡವನ್ನು ಎದುರಿಸಲಿದ್ದಾರೆ. ಇದರರ್ಥ ಮಹಿಳಾ ವಿಭಾಗದಲ್ಲಿಯೂ ಸಹ, ಭಾರತ ಮತ್ತು ಪಾಕಿಸ್ತಾನ ನಡುವಿನ ಮುಖಾಮುಖಿ ಫೈನಲ್‌ನಲ್ಲಿ ಮಾತ್ರ ಸಾಧ್ಯ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

4000 ಕೋಟಿ ಗಳಿಸಿದ ‘ದಿ ಆಡಸ್ಸಿ’, ಭಾರತದಲ್ಲಿ ಗಳಿಸಿದ್ದೆಷ್ಟು? – Kannada News | The Odyssey movie world box office collection and Indian box office collection

ಕ್ರಿಸ್ಟೋಫರ್ ನೊಲನ್ ‘ದಿ ಆಡಸ್ಸಿ’ (The Odyssey) ಸಿನಿಮಾ ಬಿಡುಗಡೆ ಆಗಿ ಒಂದು ವಾರವಾಗಿದೆಯಷ್ಟೆ. ಜುಲೈ 17ಕ್ಕೆ ಈ ಸಿನಿಮಾ ಭಾರತ ಸೇರಿದಂತೆ ವಿಶ್ವದಾದ್ಯಂತ ಬಿಡುಗಡೆ ಆಗಿತ್ತು. ಸಂಪೂರ್ಣ ಐಮ್ಯಾಕ್ಸ್​​​ನಲ್ಲೇ ಚಿತ್ರೀಕರಣಗೊಂಡಿದ್ದ ಈ ಸಿನಿಮಾ, ವಿಶ್ವದ ಅತ್ಯಂತ ನಿರೀಕ್ಷಿತ ಸಿನಿಮಾ ಎನಿಸಿಕೊಂಡಿತ್ತು. ಇದೀಗ ‘ದಿ ಆಡಸ್ಸಿ’ ಸಿನಿಮಾ ಕೇವಲ ಒಂದು ವಾರದಲ್ಲಿ ವಿಶ್ವದಾದ್ಯಂತ ಸುಮಾರು 4000 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಭಾರತದಲ್ಲೂ ಈ ಸಿನಿಮಾಕ್ಕೆ ಭಾರಿ ಬೇಡಿಕೆ ಇತ್ತು. ಅಷ್ಟಕ್ಕೂ ಭಾರತದಲ್ಲಿ ಈ ಸಿನಿಮಾ ಮೊದಲ ವಾರ ಎಷ್ಟು ಮೊತ್ತ ಗಳಿಕೆ ಮಾಡಿದೆ?

ಹಾಲಿವುಡ್​​ನ ಸೂಪರ್ ಸ್ಟಾರ್ ನಟರುಗಳಾಗಿರುವ ಮ್ಯಾಟ್ ಡೇಮನ್, ಸ್ಪೈಡರ್​ಮ್ಯಾನ್ ಖ್ಯಾತಿಯ ಟಾಮ್ ಹಾಲಂಡ್, ಅನ್ನಾ ಹಾಥ್​​ವೇ, ಜೆಂಡೆಯಾ, ಪ್ಯಾಟ್ರಿಕ್ ಇನ್ನೂ ಕೆಲವರು ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಸಿನಿಮಾ, ಭಾರತದಲ್ಲಿ ದಾಖಲೆಯನ್ನೇ ಬರೆದಿದೆ. ಸಿನಿಮಾ ಬಿಡುಗಡೆ ಆದ ಕೇವಲ ಒಂದು ವಾರದಲ್ಲಿ 100 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ಮಾಡಿದ ಅತ್ಯಂತ ವಿರಳ ಹಾಲಿವುಡ್ ಸಿನಿಮಾಗಳಲ್ಲಿ ಒಂದೆನಿಸಿಕೊಂಡಿದೆ ‘ದಿ ಆಡಸ್ಸಿ’.

‘ದಿ ಆಡಸ್ಸಿ’ ಸಿನಿಮಾ ಬಿಡುಗಡೆ ಆದ ಮೊದಲ ವಾರಾಂತ್ಯಕ್ಕೆ ಅಂದರೆ ಮೊದಲ ಮೂರೇ ದಿನದಲ್ಲಿ ಸುಮಾರು 60 ಕೋಟಿಗೂ ಹೆಚ್ಚು ಮೊತ್ತ ಗಳಿಕೆ ಮಾಡಿತ್ತು. ಆ ಬಳಿಕವೂ ಸಹ ಸಿನಿಮಾದ ಕಲೆಕ್ಷನ್ ತಗ್ಗಿಲ್ಲ, ವಾರದ ದಿನಗಳಲ್ಲಿಯೂ ಸಹ ಸಿನಿಮಾ ಅನ್ನು ಪ್ರೇಕ್ಷಕರು ನಿಯಮಿತವಾಗಿ ವೀಕ್ಷಿಸಿದ್ದು, ಇದೇ ಕಾರಣಕ್ಕೆ ಸಿನಿಮಾ ಈಗ ಕೇವಲ ಒಂದು ವಾರದಲ್ಲೇ 100 ಕೋಟಿ ಗಳಿಕೆ ಮಾಡಿದೆ. ಆದರೆ ಸಿನಿಮಾದ ಗಳಿಕೆ ದಿನದಿಂದ ದಿನಕ್ಕೆ ಕುಸಿಯುತ್ತಿದ್ದು, ಇನ್ನೊಂದು ವಾರದ ಒಳಗೆ ಈ ಸಿನಿಮಾ ಭಾರತದಲ್ಲಿ ತನ್ನ ಬಾಕ್ಸ್ ಆಫೀಸ್ ಪಯಣ ಮುಗಿಸಬಹುದಾಗಿದೆ.

ಇದನ್ನೂ ಓದಿ:‘ದಿ ಆಡಸ್ಸಿ’ ಅಡ್ವಾನ್ಸ್ ಬುಕಿಂಗ್: ಐಮ್ಯಾಕ್ಸ್ ಟಿಕೆಟ್​​ಗಳು ಸೋಲ್ಡ್ ಔಟ್

‘ದಿ ಆಡಸ್ಸಿ’ ಸಿನಿಮಾ ವಿಶ್ವದಾದ್ಯಂತ ನಾಲ್ಕು ಸಾವಿರ ಕೋಟಿ ರೂಪಾಯಿ ಗಳಿಕೆ ಮಾಡಿದ್ದು, ಅದರಲ್ಲಿ ಅಮೆರಿಕ ಮತ್ತು ಕೆನಡಾನಲ್ಲಿ ಅತಿ ಹೆಚ್ಚು ಮೊತ್ತ ಗಳಿಕೆ ಮಾಡಿದೆ ಸಿನಿಮಾ. ಈ ಎರಡು ದೇಶಗಳಲ್ಲಿ ಸುಮಾರು 1800 ಕೋಟಿಗೂ ಹೆಚ್ಚು ಮೊತ್ತ ಗಳಿಕೆ ಮಾಡಿದೆ. ಮುಂದಿನ ವಾರ ಅಂದರೆ ಜುಲೈ 30ರಂದು ‘ಸ್ಪೈಡರ್​​ಮ್ಯಾನ್’ ಸರಣಿಯ ಹೊಸ ಸಿನಿಮಾ ಆಗಿರುವ ‘ಸ್ಪೈಡರ್​​ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’ ಸಿನಿಮಾ ಬಿಡುಗಡೆ ಆಗಲಿದೆ. ಆ ಸಿನಿಮಾಕ್ಕೆ ‘ದಿ ಆಡಸ್ಸಿ’ಗಿಂತಲೂ ಹೆಚ್ಚಿನ ಪ್ರೇಕ್ಷಕರು, ಅಭಿಮಾನಿಗಳು ಭಾರತದಲ್ಲಿದ್ದಾರೆ. ಈಗಾಗಲೇ ಸಿನಿಮಾದ ಅಡ್ವಾನ್ಸ್ ಬುಕಿಂಗ್ ಭಾರತದಲ್ಲಿ ಬಲು ಜೋರಾಗಿ ನಡೆಯುತ್ತಿದೆ. ‘ಸ್ಪೈಡರ್​​ಮ್ಯಾನ್’ ಸಿನಿಮಾ ಬಿಡುಗಡೆ ಆದರೆ ‘ದಿ ಆಡಸ್ಸಿ’ ಸಿನಿಮಾ ಅದಕ್ಕಾಗಿ ಜಾಗ ಬಿಟ್ಟುಕೊಡಬೇಕಾಗಿದೆ. ಹಾಗಾಗಿ ‘ದಿ ಆಡಸ್ಸಿ’ ಸಿನಿಮಾದ ಮೇಲೆ ‘ಸ್ಪೈಡರ್​​ಮ್ಯಾನ್’ ದೊಡ್ಡ ಪರಿಣಾಮವನ್ನೇ ಬೀರಲಿದೆ.

‘ದಿ ಆಡಸ್ಸಿ’ ಸಿನಿಮಾವನ್ನು ಕ್ರಿಸ್ಟೊಫರ್ ನೋಲನ್ ನಿರ್ದೇಶಿಸಿದ್ದು, 8ನೇ ಶತಮಾನದಲ್ಲಿ ಕುರುಡು ಕವಿ ಹೋಮರ್ ಎಂಬಾತ ಬರೆದಿದ್ದಾನೆ ಎನ್ನಲಾದ ಸಾಹಿತ್ಯವನ್ನು ಆಧರಿಸಿದ ಕತೆಯನ್ನು ಸಿನಿಮಾ ಒಳಗೊಂಡಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಗೂಗಲ್ ಅಕೌಂಟ್​ಗೆ ಸೈನ್ ಇನ್ ಆಗಲು, ರಿಕವರಿ ಮಾಡಲು ಸೆಲ್ಫಿ ವಿಡಿಯೊ – Kannada News | Selfie video option to sign in and recovery of Google account

ಬೆಂಗಳೂರು, ಜುಲೈ 24: ಗೂಗಲ್ ತನ್ನ ಬಳಕೆದಾರರಿಗಾಗಿ ‘ಸೆಲ್ಫಿ ವೀಡಿಯೊ’ (Selfie Video) ಮೂಲಕ ಖಾತೆಗೆ ಸೈನ್-ಇನ್ (Sign-in) ಹಾಗೂ ಖಾತೆ ಮರುಪಡೆಯುವ (Account Recovery) ಹೊಸ ಫೀಚರ್ ಅನ್ನು ಪರಿಚಯಿಸಿದೆ. ಪಾಸ್‌ವರ್ಡ್ ಮರೆತಾಗ ಅಥವಾ ರಿಕವರಿ ಫೋನ್ ಸಂಖ್ಯೆ/ಇಮೇಲ್ ಲಭ್ಯವಿಲ್ಲದಿದ್ದಾಗ ಬಳಕೆದಾರರು ತಮ್ಮ ಖಾತೆಯನ್ನು ಸುಲಭವಾಗಿ ಮರಳಿ ಪಡೆಯಲು ಇದು ನೆರವಾಗುತ್ತದೆ. ಇದು ಕೇವಲ ಐಚ್ಛಿಕವಾಗಿರುತ್ತದೆ. ಅಕೌಂಟ್ ರಿಕವರಿಗೆ ಈಗಿರುವ ಪಾಸ್​ಕೀ, ಒಟಿಪಿ ವಿಧಾನಗಳೂ ಇರುತ್ತವೆ. ಈಗ ಹೆಚ್ಚುವರಿ ಆಯ್ಕೆಯಾಗಿ ಸೆಲ್ಫಿ ವಿಡಿಯೋ ಫೀಚರ್ ಬಿಡುಗಡೆ ಮಾಡಲಾಗಿದೆ.

ಸೆಲ್ಫಿ ವಿಡಿಯೋ ಸೆಟಪ್ ಮಾಡುವ ಕ್ರಮ

  • ನಿಮ್ಮ ಗೂಗಲ್ ಖಾತೆಯ Security & Sign-in ವಿಭಾಗಕ್ಕೆ ಹೋಗಿ ‘Selfie Video’ ಆಯ್ಕೆಯನ್ನು ಆರಿಸಿಕೊಳ್ಳಿ.
  • ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್ ಕ್ಯಾಮೆರಾವನ್ನು ನೋಡಿ, ಪರದೆಯ ಮೇಲಿನ ಸೂಚನೆಯಂತೆ ತಲೆಯನ್ನು ಬೇರೆ ಬೇರೆ ಕೋನಗಳಲ್ಲಿ ತಿರುಗಿಸಿ (Guided Head Movements).
  • ಇದು ನಿಮ್ಮ ಮುಖದ ವಿವರಗಳನ್ನು ಸುರಕ್ಷಿತವಾಗಿ ದಾಖಲಿಸಿ ‘ರೆಫರೆನ್ಸ್ ವೀಡಿಯೊ’ ಆಗಿ ಸಂಗ್ರಹಿಸಿಟ್ಟುಕೊಳ್ಳುತ್ತದೆ.

ಇದನ್ನೂ ಓದಿ: ಯುಪಿಐ ಬಳಕೆದಾರರ ಆ್ಯಪ್ ಆಯ್ಕೆಗಳ ಮೇಲೆ ಪ್ರಭಾವ ಬೀರುತ್ತಿವೆಯಾ ರಿವಾರ್ಡ್ಸ್, ಕ್ಯಾಷ್​​ಬ್ಯಾಕ್ ಆಫರ್​ಗಳು?

ಖಾತೆಗೆ ಲಾಗಿನ್ ಅಥವಾ ರಿಕವರಿಗೆ ಸೆಲ್ಫಿ ವಿಡಿಯೋ ಬಳಸುವ ಕ್ರಮ

  • ಲಾಗಿನ್ ಆಗಲು ತೊಂದರೆಯಾದಾಗ “Sign in with Selfie Video” ಆಯ್ಕೆಯನ್ನು ಬಳಸಿ.
  • ಗೂಗಲ್ ಸೂಚಿಸಿದಂತೆ ಕ್ಯಾಮೆರಾ ಮುಂದೆ ಲೈವ್ ಆಗಿ ಮುಖ ತೋರಿಸಿ ತಲೆ ತಿರುಗಿಸಬೇಕು.
  • ಗೂಗಲ್ ತನ್ನ ಸಿಸ್ಟಮ್‌ನಲ್ಲಿ ಸಂಗ್ರಹವಾಗಿರುವ ಹಳೆಯ ವೀಡಿಯೊಗೆ ಹೊಸ ವೀಡಿಯೊವನ್ನು ಹೋಲಿಸಿ, ನೀವೇ ನಿಜವಾದ ಬಳಕೆದಾರರೆಂದು ಖಚಿತಪಡಿಸಿಕೊಂಡು ಲಾಗಿನ್ ಮಾಡಲು ಅನುಮತಿ ನೀಡುತ್ತದೆ.

ಇದನ್ನೂ ಓದಿ: ಇಸ್ರೇಲ್​ಗೆ ಶೇ 12.5, ಭಾರತಕ್ಕೆ ಶೇ. 10 ಸುಂಕ; ಅಮೆರಿಕದ ಪರಮಮಿತ್ರ ದೇಶಕ್ಕೆ ಹೆಚ್ಚಿನ ಟ್ಯಾರಿಫ್ ಯಾಕೆ?

ಸುರಕ್ಷತೆ ಮತ್ತು ಗೌಪ್ಯತೆ (Privacy & Security)

  • ಈ ವೀಡಿಯೊವನ್ನು ಎನ್‌ಕ್ರಿಪ್ಟ್ ಮಾಡಿ ಸುರಕ್ಷಿತವಾಗಿ ಸಂಗ್ರಹಿಸಲಾಗುತ್ತದೆ.
  • ಬಳಕೆದಾರರು ಬಯಸಿದಾಗ ತಮ್ಮ ಗೂಗಲ್ ಸೆಟ್ಟಿಂಗ್ಸ್‌ನಿಂದ ಈ ವೀಡಿಯೊವನ್ನು ಸಂಪೂರ್ಣವಾಗಿ ಅಳಿಸಿಹಾಕಬಹುದು.
  • ಎಐ (AI) ಫೋಟೋಗಳು ಅಥವಾ ನಕಲಿ ವೀಡಿಯೊಗಳನ್ನು (Deepfake) ಬಳಸಿ ಖಾತೆ ದುರುಪಯೋಗಪಡಿಸಿಕೊಳ್ಳುವುದನ್ನು ತಡೆಯಲು ‘ಲೈವ್ ಮೂವ್‌ಮೆಂಟ್ಸ್’ (ಚಲನೆಗಳು) ಕಡ್ಡಾಯಗೊಳಿಸಲಾಗಿದೆ.

ಗಮನಿಸಬೇಕಾದ ಇನ್ನೊಂದು ಸಂಗತಿ ಎಂದರೆ, Workspace ಖಾತೆಗಳು, ಮಕ್ಕಳ ಖಾತೆಗಳು (Child Accounts) ಮತ್ತು ಅಡ್ವಾನ್ಸ್ಡ್ ಪ್ರೊಟೆಕ್ಷನ್ ಪ್ರೋಗ್ರಾಂನಲ್ಲಿರುವ ಖಾತೆಗಳಿಗೆ ಈ ಸೌಲಭ್ಯ ಲಭ್ಯವಿರುವುದಿಲ್ಲ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

SBI Asha Scholarship 2026: ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗುಡ್​​​ನ್ಯೂಸ್​​​​; ಎಸ್‌ಬಿಐ ಆಶಾ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ! – Kannada News | SBI Asha Scholarship 2026: Financial Aid for Students – Apply Now

ಎಸ್‌ಬಿಐ ಆಶಾ ವಿದ್ಯಾರ್ಥಿವೇತನ ಕಾರ್ಯಕ್ರಮ

ಆರ್ಥಿಕ ಸಮಸ್ಯೆ ಎದುರಿಸುತ್ತಿರುವ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಒಳ್ಳೆಯ ಸುದ್ದಿ ಇಲ್ಲಿದೆ. ಎಸ್‌ಬಿಐ ಫೌಂಡೇಶನ್ 2026 ರ ಎಸ್‌ಬಿಐ ಆಶಾ ವಿದ್ಯಾರ್ಥಿವೇತನ ಕಾರ್ಯಕ್ರಮಕ್ಕೆ (SBI Asha Scholarship 2026) ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ತೆರೆದಿದೆ. ಈ ಕಾರ್ಯಕ್ರಮವು ದೇಶಾದ್ಯಂತ ಸಾವಿರಾರು ವಿದ್ಯಾರ್ಥಿಗಳಿಗೆ ತಮ್ಮ ಅಧ್ಯಯನವನ್ನು ಮುಂದುವರಿಸಲು ಆರ್ಥಿಕ ನೆರವು ನೀಡುತ್ತದೆ. ಈ ವರ್ಷ, ಒಟ್ಟು 100 ಕೋಟಿ ರೂ. ಗಳನ್ನು ವಿದ್ಯಾರ್ಥಿವೇತನಕ್ಕಾಗಿ ಖರ್ಚು ಮಾಡಲಾಗುತ್ತಿದ್ದು, 25,707 ವಿದ್ಯಾರ್ಥಿಗಳಿಗೆ ಪ್ರಯೋಜನವನ್ನು ನೀಡುವ ಗುರಿಯನ್ನು ಹೊಂದಿದೆ. ಶಾಲೆಯಿಂದ ಉನ್ನತ ಶಿಕ್ಷಣದವರೆಗೆ ಮತ್ತು ವಿದೇಶದಲ್ಲಿ ಸ್ನಾತಕೋತ್ತರ ಪದವಿ ಪಡೆಯುವ ಅರ್ಹ ವಿದ್ಯಾರ್ಥಿಗಳು ಸಹ ಈ ಯೋಜನೆಯ ಪ್ರಯೋಜನವನ್ನು ಪಡೆಯಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಸೆಪ್ಟೆಂಬರ್ 4, 2026.

ವಿದ್ಯಾರ್ಥಿವೇತನದ ಉದ್ದೇಶವೇನು?

ಪ್ರತಿಷ್ಠಾನದ ಉದ್ದೇಶವೆಂದರೆ, ತಮ್ಮ ಪ್ರತಿಭೆಯ ಹೊರತಾಗಿಯೂ, ಆರ್ಥಿಕ ತೊಂದರೆಗಳಿಂದಾಗಿ ತಮ್ಮ ಅಧ್ಯಯನಕ್ಕೆ ಅಡ್ಡಿಯಾಗುವ ಬಗ್ಗೆ ಕಳವಳ ವ್ಯಕ್ತಪಡಿಸುವ ವಿದ್ಯಾರ್ಥಿಗಳಿಗೆ ಸಹಾಯ ಮಾಡುವುದು. ಈ ವಿದ್ಯಾರ್ಥಿವೇತನವು ವಿದೇಶದಲ್ಲಿ ಪ್ರೌಢಶಾಲೆ, ಪದವಿಪೂರ್ವ, ಸ್ನಾತಕೋತ್ತರ ಪದವಿ, MBBS, IIT, IIM ಮತ್ತು ಸ್ನಾತಕೋತ್ತರ ಪದವಿಗಳನ್ನು ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಲಭ್ಯವಿದೆ. ಅರ್ಹ ಅಭ್ಯರ್ಥಿಗಳು ತಮ್ಮ ಶೈಕ್ಷಣಿಕ ಮಟ್ಟವನ್ನು ಆಧರಿಸಿ ಅರ್ಜಿ ಸಲ್ಲಿಸಬಹುದು.

ಈ ಯೋಜನೆಯಡಿಯಲ್ಲಿ ವಿದ್ಯಾರ್ಥಿವೇತನದ ಮೊತ್ತವು 15,000 ದಿಂದ 1.5 ಮಿಲಿಯನ್ (15 ಲಕ್ಷ ರೂ.) ವರೆಗೆ ಇರಲಿದೆ. ವಿದ್ಯಾರ್ಥಿಯ ವರ್ಗ ಮತ್ತು ಕೋರ್ಸ್ ಆಧರಿಸಿ ಮೊತ್ತವನ್ನು ನಿರ್ಧರಿಸಲಾಗುತ್ತದೆ. ವಿದ್ಯಾರ್ಥಿಯು ನಿಗದಿತ ಮಾನದಂಡಗಳನ್ನು ಪೂರೈಸಿದರೆ, ಅವರು ಕೋರ್ಸ್‌ನಾದ್ಯಂತ ಹಣಕಾಸಿನ ನೆರವು ಪಡೆಯಬಹುದು.

ಅರ್ಜಿ ಸಲ್ಲಿಸುವುದು ಹೇಗೆ?

ಆಸಕ್ತ ಅಭ್ಯರ್ಥಿಗಳು ಅಧಿಕೃತ ವಿದ್ಯಾರ್ಥಿವೇತನ ಪೋರ್ಟಲ್‌ಗೆ sbiashascholarship.co.in ಭೇಟಿ ನೀಡಿ ತಮ್ಮ ವರ್ಗದ ಅರ್ಹತೆಯನ್ನು ಪರಿಶೀಲಿಸುವ ಮೂಲಕ ಆನ್‌ಲೈನ್ ಅರ್ಜಿಯನ್ನು ಭರ್ತಿ ಮಾಡಬಹುದು. ಅರ್ಜಿಯೊಂದಿಗೆ ಅಗತ್ಯವಿರುವ ದಾಖಲೆಗಳನ್ನು ಅಪ್‌ಲೋಡ್ ಮಾಡುವುದು ಕಡ್ಡಾಯವಾಗಿದೆ. ಸಲ್ಲಿಸಿದ ನಂತರ, ನೋಂದಾಯಿತ ಮೊಬೈಲ್ ಸಂಖ್ಯೆ ಅಥವಾ ಇಮೇಲ್ ಮೂಲಕ ಹೆಚ್ಚಿನ ಮಾಹಿತಿಯನ್ನು ಒದಗಿಸಲಾಗುತ್ತದೆ. ಅಭ್ಯರ್ಥಿಗಳು ಅರ್ಜಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಮತ್ತು ತಿರಸ್ಕಾರವನ್ನು ತಪ್ಪಿಸಲು ಸೆಪ್ಟೆಂಬರ್ 4 ರ ಮೊದಲು ಎಲ್ಲಾ ದಾಖಲೆಗಳನ್ನು ಸರಿಯಾಗಿ ಅಪ್‌ಲೋಡ್ ಮಾಡಲು ಸೂಚಿಸಲಾಗಿದೆ.

ಉದ್ಯೋಗಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On – 4:25 pm, Fri, 24 July 26

Source link

ಫುಡ್ ಡೆಲಿವರಿ ಕ್ಷೇತ್ರಕ್ಕೆ ಫ್ಲಿಪ್‌ಕಾರ್ಟ್ ಗ್ರ್ಯಾಂಡ್ ಎಂಟ್ರಿ: ಮೊದಲ ಹಂತದಲ್ಲಿ ಬೆಂಗಳೂರಿನಲ್ಲಿ ಸೇವೆ ಆರಂಭ – Kannada News | Flipkart’s Bengaluru Food Delivery Launch Clouded by 3000 Cr Tax Evasion Complaint

ಬೆಂಗಳೂರು, ಜು.24: ದೇಶದ ಪ್ರಮುಖ ಇ-ಕಾಮರ್ಸ್ ದೈತ್ಯ ಹಾಗೂ ವಾಲ್‌ಮಾರ್ಟ್ ಒಡೆತನದ ಫ್ಲಿಪ್‌ಕಾರ್ಟ್ (Flipkart), ಭಾರತದಲ್ಲಿ ತನ್ನದೇ ಆದ ಆಹಾರ ಸರಬರಾಜು (Food Delivery) ಸೇವೆಯನ್ನು ಶೀಘ್ರದಲ್ಲೇ ಆರಂಭಿಸಲು ಸಜ್ಜಾಗಿದೆ. ಮುಂದಿನ ಒಂದು ತಿಂಗಳ ಒಳಗಾಗಿ ರಾಜಧಾನಿ ಬೆಂಗಳೂರಿನಲ್ಲಿ ಪ್ರಾಯೋಗಿಕವಾಗಿ (Pilot Rollout) ಈ ಸೇವೆಗೆ ಚಾಲನೆ ನೀಡಲಿದೆ ಎಂದು ಎನ್‌ಡಿಟಿವಿ ಪ್ರಾಫಿಟ್ ವರದಿ ಮಾಡಿದೆ.

ಬೆಂಗಳೂರಿನಲ್ಲಿ ಗ್ರಾಹಕರ ಪ್ರತಿಕ್ರಿಯೆಯನ್ನು ಪರೀಕ್ಷಿಸಿದ ಬಳಿಕ, ಸೇವೆಯನ್ನು ದೇಶದ ಇತರೆ ಪ್ರಮುಖ ನಗರಗಳಿಗೂ ವಿಸ್ತರಿಸಲು ಕಂಪನಿ ಯೋಜಿಸಿದೆ. ಫ್ಲಿಪ್‌ಕಾರ್ಟ್ ತನ್ನ ಫುಡ್ ಡೆಲಿವರಿ ಸೇವೆಗಾಗಿ ಪ್ರತ್ಯೇಕ ಆ್ಯಪ್ ಬಿಡುಗಡೆ ಮಾಡುವ ಆಲೋಚನೆಯಲ್ಲಿದೆ. ಇದರ ಜೊತೆಗೆ, ಸರ್ಕಾರದ ಬೆಂಬಲಿತ ಒಎನ್‌ಡಿಸಿ ನೆಟ್‌ವರ್ಕ್ ಮೂಲಕವೂ ಗ್ರಾಹಕರಿಗೆ ಸೇವೆ ಲಭ್ಯವಾಗುವಂತೆ ಮಾಡಲು ತಂತ್ರ ರೂಪಿಸುತ್ತಿದೆ.

ಈಗಾಗಲೇ ಸ್ವಿಗ್ಗಿ, ಝೊಮ್ಯಾಟೋಗಳಂತಹ ದೈತ್ಯ ಸಂಸ್ಥೆಗಳಿರುವ ತೀವ್ರ ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ತನ್ನದೇ ಆದ ಬಲವಾದ ಹೆಜ್ಜೆಗುರುತು ಮೂಡಿಸಲು ಫ್ಲಿಪ್‌ಕಾರ್ಟ್ ಸಿದ್ಧತೆ ನಡೆಸುತ್ತಿದೆ. ಆದರೆ, ಈ ಸೇವೆ ಆರಂಭವಾಗುವ ಅಧಿಕೃತ ದಿನಾಂಕವನ್ನು ಕಂಪನಿ ಇನ್ನೂ ಬಹಿರಂಗಪಡಿಸಿಲ್ಲ.

ಇದನ್ನೂ ಓದಿ: ಭಾರತೀಯ ಸೇನೆಯಲ್ಲಿ ಆಫೀಸರ್ ಹುದ್ದೆಗೆ ಅರ್ಜಿ ಆಹ್ವಾನ; B.Tech ಪದವೀಧರರಿಗೆ ಸುವರ್ಣಾವಕಾಶ

ಮತ್ತೊಂದೆಡೆ, ಆನ್‌ಲೈನ್ ಮಾರಾಟಗಾರರ ಒಕ್ಕೂಟವಾದ ‘ಫೋರಂ ಫಾರ್ ಇಂಟರ್ನೆಟ್ ರಿಟೇಲರ್ಸ್, ಸೆಲ್ಲರ್ಸ್ ಅಂಡ್ ಟ್ರೇಡರ್ಸ್’ ಸಂಸ್ಥೆಯು ಭಾರತೀಯ ಸ್ಪರ್ಧಾತ್ಮಕ ಆಯೋಗಕ್ಕೆ ಫ್ಲಿಪ್‌ಕಾರ್ಟ್ ವಿರುದ್ಧ ದೂರು ನೀಡಿದೆ. ಫ್ಲಿಪ್‌ಕಾರ್ಟ್ ತೆರಿಗೆ ವಂಚನೆಯಿಂದ ಅಂದಾಜು 3,000 ಕೋಟಿ ರೂ. ನಿಧಿಯನ್ನು ಸೃಷ್ಟಿಸಿಕೊಂಡು, ಸ್ವತಂತ್ರ ಮಾರಾಟಗಾರರಿಗೆ ಧಕ್ಕೆಯಾಗುವಂತೆ ಭಾರಿ ರಿಯಾಯಿತಿಗಳನ್ನು ನೀಡುತ್ತಿದೆ ಹಾಗೂ ಮಾರುಕಟ್ಟೆಯಲ್ಲಿ ಅನುಚಿತ ಸ್ಪರ್ಧೆಯನ್ನು ಸೃಷ್ಟಿಸುತ್ತಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ನಾಳೆಯವರೆಗೆ ಸಮಯ ಕೇಳಿದ ಸರ್ಕಾರ’; ಸಚಿವರ ಜೊತೆ ಸಭೆ ಬಳಿಕ ಸಿಜೆಪಿ ಮಾಹಿತಿ – Kannada News | Modi Government Sought Time Till Tomorrow On Dharmendra Pradhan’s Resignation CJP Claims After Talks With Union Ministers

ನವದೆಹಲಿ, ಜುಲೈ 24: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ (Dharmendra Pradhan) ಅವರ ರಾಜೀನಾಮೆಗೆ ಆಗ್ರಹಿಸಿ ನಡೆಯುತ್ತಿರುವ ಚಳವಳಿಗೆ ಸಂಬಂಧಿಸಿದಂತೆ, ರಾಷ್ಟ್ರ ರಾಜಧಾನಿಯಲ್ಲಿ ಹಿರಿಯ ಕೇಂದ್ರ ಸಚಿವರು ಮತ್ತು ಪ್ರತಿಭಟನಾಕಾರರ ಪ್ರತಿನಿಧಿಗಳ ನಡುವೆ ನಡೆದ ಸಭೆಯ ಬಳಿಕ, ತಮ್ಮ ಪ್ರಮುಖ ಬೇಡಿಕೆಯ ಕುರಿತು ತೀರ್ಮಾನ ಕೈಗೊಳ್ಳಲು ಕೇಂದ್ರ ಸರ್ಕಾರವು ಶನಿವಾರ ಮಧ್ಯಾಹ್ನದವರೆಗೆ ಕಾಲಾವಕಾಶ ಕೋರಿದೆ ಎಂದು ಕಾಕ್ರೋಚ್ ಜನತಾ ಪಾರ್ಟಿ (CJP) ಮಾಹಿತಿ ನೀಡಿದೆ. ಈ ಸಭೆಯಲ್ಲಿ ಸರ್ಕಾರದ ಪರವಾಗಿ ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಮತ್ತು ಪಿಎಮ್‌ಒ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಭಾಗವಹಿಸಿದ್ದರೆ, ಸಿಜೆಪಿ ಪರವಾಗಿ ಅದರ ರಾಷ್ಟ್ರೀಯ ವಕ್ತಾರರಾದ ಸೌರವ್ ದಾಸ್ ಮತ್ತು ಅಶುತೋಷ್ ರಾಂಕಾ ಭಾಗವಹಿಸಿದ್ದರು.

ಇಂದು (ಶುಕ್ರವಾರ) ಮಧ್ಯಾಹ್ನ ‘ಕಾನ್​ಸ್ಟಿಟ್ಯೂಷನ್ ಕ್ಲಬ್ ಆಫ್ ಇಂಡಿಯಾ’ದಲ್ಲಿ ನಡೆದ ಸಭೆಯ ನಂತರ, ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಬೇಡಿಕೆಯ ಕುರಿತು ತೀರ್ಮಾನಿಸಲು ಕೇಂದ್ರ ಸರ್ಕಾರವು ಶನಿವಾರ ಮಧ್ಯಾಹ್ನದವರೆಗೆ ಕಾಲಾವಕಾಶ ಕೋರಿದೆ ಎಂದು ಸಿಜೆಪಿ ತಿಳಿಸಿದೆ.

ಸಭೆಯಲ್ಲಿ ಏನೇನಾಯ್ತು?:

“ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಬೇಡಿಕೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ನಾಳೆ ಮಧ್ಯಾಹ್ನದವರೆಗೆ ಸಮಯ ಕೇಳಿದೆ. ಸರ್ಕಾರ ಅವರನ್ನು ಶೀಘ್ರದಲ್ಲೇ ಹುದ್ದೆಯಿಂದ ತೆಗೆದುಹಾಕುತ್ತದೆ ಎಂಬ ಭರವಸೆ ನಮಗಿದೆ. ನೀಟ್ ಅಕ್ರಮದಿಂದಾಗಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಕುಟುಂಬಗಳಿಗೆ ಪರಿಹಾರ ಒದಗಿಸುವುದು ಮತ್ತು ವಿದ್ಯಾರ್ಥಿಗಳ ಮೇಲಿನ ಎಫ್‌ಐಆರ್ ಹಾಗೂ ಕಾನೂನು ಪ್ರಕರಣಗಳನ್ನು ಹಿಂಪಡೆಯುವ ಎರಡು ಬೇಡಿಕೆಗಳಿಗೆ ಸರ್ಕಾರ ಈಗಾಗಲೇ ಒಪ್ಪಿಗೆ ಸೂಚಿಸಿದೆ” ಎಂದು ಸಿಜೆಪಿ ನಾಯಕ ಅಶುತೋಷ್ ರಾಂಕಾ ಹೇಳಿದ್ದಾರೆ.

ಇದನ್ನೂ ಓದಿ: ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡುವವರೆಗೂ ನಡೆಯುತ್ತೆ ನಮ್ಮ ಪ್ರತಿಭಟನೆ: ಅಭಿಜಿತ್ ದೀಪ್ಕೆ

ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಿಜೆಪಿ ಮುಖ್ಯ ವಕ್ತಾರ ಸೌರವ್ ದಾಸ್, ನಿಯೋಗವು ತನ್ನ ಎಲ್ಲಾ ಬೇಡಿಕೆಗಳನ್ನು ಸರ್ಕಾರದ ಮುಂದೆ ಇಟ್ಟಿದ್ದು, ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಯೇ ನಮ್ಮ ಪ್ರಮುಖ ಮತ್ತು ಮುಖ್ಯ ಬೇಡಿಕೆಯಾಗಿದೆ ಎಂದು ತಿಳಿಸಿದರು. “ನಮ್ಮ ಮೊದಲ ಬೇಡಿಕೆಯೇ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ. ಇದರ ಜೊತೆಗೆ, ನೀಟ್ (NEET) ಪರೀಕ್ಷೆಯ ಅಕ್ರಮದಿಂದಾಗಿ ತಮ್ಮ ಮಕ್ಕಳನ್ನು ಕಳೆದುಕೊಂಡ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಬೇಕು ಮತ್ತು ಪ್ರತಿಭಟನೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಹಾಗೂ ಯುವಕರ ವಿರುದ್ಧ ಯಾವುದೇ ಎಫ್‌ಐಆರ್ ಅಥವಾ ಕಾನೂನು ಪ್ರಕರಣಗಳನ್ನು ದಾಖಲಿಸಬಾರದು. ಈಗಾಗಲೇ ದಾಖಲಾಗಿದ್ದರೆ ಅವುಗಳನ್ನು ತಕ್ಷಣವೇ ಹಿಂಪಡೆಯಬೇಕು ಎಂದು ನಾವು ಆಗ್ರಹಿಸಿದ್ದೇವೆ” ಎಂದು ಅವರು ತಿಳಿಸಿದ್ದಾರೆ.

ಶಾಂತಿಯುತವಾಗಿ ಪ್ರತಿಭಟನೆ ನಡೆಸಿದವರ ವಿರುದ್ಧ ಯಾವುದೇ ಕಾನೂನು ಕ್ರಮ ಕೈಗೊಳ್ಳುವುದಿಲ್ಲ. ಪರೀಕ್ಷಾ ಅಕ್ರಮದಿಂದ ಸಂಕಷ್ಟಕ್ಕೊಳಗಾದ ವಿದ್ಯಾರ್ಥಿಗಳ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಲಾಗುವುದು ಎಂಬ ಎರಡು ಷರತ್ತುಬದ್ಧ ಬೇಡಿಕೆಗಳನ್ನು ಸರ್ಕಾರ ಒಪ್ಪಿಕೊಂಡ ನಂತರವೇ ಸಿಜೆಪಿ ಮಾತುಕತೆಗೆ ಸಮ್ಮತಿಸಿತ್ತು.

ಇದನ್ನೂ ಓದಿ: ಪ್ರತಿಭಟನಾಕಾರರು ಮಾತುಕತೆಗೆ ನನ್ನ ಮನೆ, ಕಚೇರಿಗೆ ಬರಬಹುದು; ಕೇಂದ್ರ ಸಚಿವ ಜೆ.ಪಿ. ನಡ್ಡಾ

ಜೆ.ಪಿ. ನಡ್ಡಾ ಪ್ರತಿಕ್ರಿಯೆ:

ಸಿಜೆಪಿ ವಕ್ತಾರರ ಜೊತೆಗಿನ ಸಭೆಯ ನಂತರ ಮಾತನಾಡಿದ ಕೇಂದ್ರ ಸಚಿವ ಜೆ.ಪಿ. ನಡ್ಡಾ, “ಮಾತುಕತೆ ಸುಮಾರು 2 ಗಂಟೆಗಳ ಕಾಲ ನಡೆಯಿತು. ಅವರು 3 ಪ್ರಮುಖ ಬೇಡಿಕೆಗಳು ಮತ್ತು ಪರೀಕ್ಷಾ ಸುಧಾರಣೆಗಾಗಿ 5 ಸಲಹೆಗಳನ್ನು ನಮ್ಮ ಮುಂದಿಟ್ಟಿದ್ದಾರೆ. ನಾವು ನಾಳೆ ಮಧ್ಯಾಹ್ನ ಮತ್ತೆ ಭೇಟಿಯಾಗಲಿದ್ದು, ಸರ್ಕಾರದ ಮಟ್ಟದಲ್ಲಿ ನಡೆಸಿದ ಚರ್ಚೆಯ ವಿವರಗಳನ್ನು ಅವರಿಗೆ ತಿಳಿಸಲಿದ್ದೇವೆ” ಎಂದಿದ್ದಾರೆ.

ಸೋನಮ್ ವಾಂಗ್ಚುಕ್ ಉಪವಾಸ ಸತ್ಯಾಗ್ರಹ ಅಂತ್ಯ:

ತಮ್ಮ ಪ್ರಮುಖ ಬೇಡಿಕೆಗಳ ಕುರಿತು ಸರ್ಕಾರದಿಂದ ಲಿಖಿತ ಭರವಸೆ ಲಭಿಸಿದ ನಂತರ, ಸಾಮಾಜಿಕ ಕಾರ್ಯಕರ್ತ ಸೋನಮ್ ವಾಂಗ್ಚುಕ್ ನಿನ್ನೆ ತಡರಾತ್ರಿ ತಮ್ಮ 26 ದಿನಗಳ ಸುದೀರ್ಘ ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸಿದ ಕೆಲವೇ ಗಂಟೆಗಳಲ್ಲಿ ಈ ಸಭೆ ನಡೆದಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version