ಆಸಿಡ್ ದಾಳಿ ಆಗದಿದ್ರೆ ನಮ್ಮ ತಾಯಿ ಇನ್ನೂ 10 ವರ್ಷ ಬದುಕುತ್ತಿದ್ರು ಎಂದ HD ರೇವಣ್ಣ – Kannada News | JDS MLA HD Revanna Revels Acid Attack On His Mother Chennamma On 2001

ಹಾಸನ, (ಜುಲೈ 23): ಜೆಡಿಎಸ್ ಶಾಸಕ ಹೆಚ್​​ಡಿ ರೇವಣ್ಣ ಅವರು ತಮ್ಮ ತಾಯಿ ನಿಧನದ ಬಳಿಕ ಮೊದಲ ಸುದ್ದಿಗೋಷ್ಠಿ ಮಾಡಿದ್ದು, ತಮ್ಮ ತಾಯಿ ಚೆನ್ನಮ್ಮರ ಕೆಲ ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ. ಅದರಲ್ಲೂ ಪ್ರಮುಖವಾಗಿ ಆ್ಯಸಿಡ್ ದಾಳಿ ಘಟನೆ ಬಗ್ಗೆಯೂ ಬಹಿರಂಗಪಡಿಸಿದ್ದಾರೆ. ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರೇವಣ್ಣ, 2001ರಲ್ಲಿ ಆಸಿಡ್ ದಾಳಿ ಆಗದೆ ಹೋಗಿದ್ದರೆ ಅವರಿಗೆ (ಚೆನ್ನಮ್ಮ) ಇಷ್ಟು ಬೇಗ ಸಾವು ಬರ್ತಿರಲಿಲ್ಲ. ರೇವಣ್ಣನನ್ನ ಮುಗಿಸಲೇ ಬೇಕು ಎಂದು ಸಂಚು ರೂಪಿಸಿದ್ದರು. ಅಂದು ನಾನು ಇದ್ದಿದ್ದರೆ ನನ್ನ ಮೇಲೆ ದಾಳಿ ಆಗೋದು. ನಾನು ಇಲ್ಲದ ಕಾರಣ ನಮ್ಮ ತಾಯಿ ನೋವು ತಿಂದರು ಎಂದು ತಾಯಿ ಮೇಲೆ ನಡೆದಿದ್ದ ಆಸಿಡ್ ದಾಳಿ ಪ್ರಕರಣದ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಟ್ಟರು.

ನಮ್ಮ ತಾಯಿ ದೇವತೆಯಾಗಿ ನಮ್ಮ ಕುಟುಂಬ ಸಾಕಿದ್ದಾರೆ. ನಮ್ಮ ಅಮ್ಮನನ್ನ ನಮ್ಮ ತಂಗಿಯರು ನೋಡಿಕೊಂಡರು. ನಾವು ಹೋಗಿ ನೋಡಿಕೊಂಡು ಬರ್ತಿದ್ವಿ. ರಂಗನಾಥ ಸ್ವಾಮಿ ಪಾದದಡಿಯಲ್ಲಿ ಇರಬೇಕು ಎಂದು ಅಲ್ಲಿ ಅಂತ್ಯಕ್ರಿಯೆ ಮಾಡಿದ್ದೇವೆ. ನಮ್ಮ ತಂದೆ ಪಡುವಲಹಿಪ್ಪೆಯಲ್ಲಿ ಮಾಡೋಣ ಎಂದರು. ಆದ್ರೆ, ನಮ್ಮ ತಮ್ಮ ಕುಮಾರಸ್ವಾಮಿ ಇಲ್ಲೇ ಮಾಡೋಣ ಎಂದು ಹಠ ಹಿಡಿದರು. ಅವರು ಮೊದಲೇ ಅಲ್ಲಿ ಜಾಗ ಖರೀದಿ ಮಾಡಿದ್ರು. ಹಾಗಾಗಿ ಮಾವಿನಕೆರೆ ಬೆಟ್ಟದ ರಂಗನಾಥಸ್ವಾಮಿ ಸನ್ನಿದಾನದ ತಟದಲ್ಲಿ ಅಂತ್ಯಕ್ರಿಯೆ ಮಾಡಿದೆವು ಎಂದು ಹೇಳಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ  ಕ್ಲಿಕ್ ಮಾಡಿ

Source link

ರಾಜ್ಯದ CSR ನಿಧಿಯ ಪ್ರತಿ ಪೈಸೆಯೂ ಪ್ರಾಥಮಿಕ ಶಿಕ್ಷಣಕ್ಕೆ ವಿನಿಯೋಗ: ಡಿಕೆ ಶಿವಕುಮಾರ್ – Kannada News | CSR fund Use primary education Says CM DK Shivakumar And He calls Adoption Governmnet Schools

ಬೆಂಗಳೂರು, (ಜು.23): “ರಾಜ್ಯದಲ್ಲಿ ಸುಮಾರು 10 ಸಾವಿರ ಕೋಟಿಯಷ್ಟು ಸಿಎಸ್ಆರ್ ನಿಧಿ ಇದ್ದು, ಇದರ ಪ್ರತಿಯೊಂದು ಪೈಸೆ ಗ್ರಾಮೀಣ ಭಾಗದ ಪ್ರಾಥಮಿಕ ಶಿಕ್ಷಣಕ್ಕೆ(Education) ವಿನಿಯೋಗವಾಗಬೇಕು” ಎಂದು ಸಿಎಂ ಡಿ ಕೆ ಶಿವಕುಮಾರ್ (DK Shivakumar) ಅವರು ಕರೆ ನೀಡಿದ್ದಾರೆ. ಬೆಂಗಳೂರಿನ ಕೆ.ಜಿ ರಸ್ತೆಯಲ್ಲಿರುವ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್ ಕೆಸಿಸಿಐ)ಯ ಎಂ.ವಿ ಸಭಾಂಗಣದಲ್ಲಿ ಎಫ್ ಕೆಸಿಸಿಐ ಜಾಗತಿಕ ಸಿಎಸ್ಆರ್ ಮತ್ತು ಸುಸ್ಥಿರ ಅಭಿವೃದ್ಧಿ ಶೃಂಗಸಭೆಯನ್ನು ಶಿವಕುಮಾರ್ ಅವರು ಗುರುವಾರ ಉದ್ಘಾಟಿಸಿ ಮಾತನಾಡಿದ ಸಿಎಂ, “ನಾವು ಅಧಿಕಾರಕ್ಕೆ ಬಂದ ಬಳಿಕ ನಮ್ಮ ಸಚಿವರ ಜೊತೆ ಚರ್ಚೆ ಮಾಡಿ, ಸಿಎಸ್ಆರ್ ನಿಧಿಯನ್ನು ಶಿಕ್ಷಣ ಕ್ಷೇತ್ರಕ್ಕೆ ಬಳಸಲು ತೀರ್ಮಾನಿಸಿದ್ದೇವೆ. ಕೆಲವರು ತಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ. ಆದರೆ 50% ಉದ್ಯಮಿಗಳು ಈ ಸಿಎಸ್ಆರ್ ನಿಧಿ ದುರುಪಯೋಗ ಮಾಡುತ್ತಿದ್ದಾರೆ. ಹೀಗಾಗಿ ಪ್ರತ್ಯೇಕ ಅಧಿಕಾರಿಗಳ ತಂಡ ನೇಮಿಸಿ ನಿಧಿಯನ್ನು ಎಲ್ಲೆಲ್ಲಿ ಬಳಸಲಾಗುತ್ತಿದೆ ಎಂದು ಪರಿಶೀಲನೆ ಮಾಡಲಾಗುವುದು” ಎಂದು ತಿಳಿಸಿದರು.

“ಗ್ರಾಮೀಣ ಭಾಗದ ಮಕ್ಕಳಿಗೆ ನಗರ ಪ್ರದೇಶದಂತೆ ಗುಣಮಟ್ಟದ ಶಿಕ್ಷಣ ಸಿಗಬೇಕು. ಹೀಗಾಗಿ ನಾವು ನೀತಿ ರೂಪಿಸುತ್ತಿದ್ದು, ಎಲ್ಲರೂ ಸಿಎಸ್ಆರ್ ನಿಧಿಯನ್ನು ಪ್ರಾಥಮಿಕ ಶಿಕ್ಷಣಕ್ಕೆ ವಿನಿಯೋಗಿಸಬೇಕು. ಸಿಎಸ್ಆರ್ ನಿಧಿಯಲ್ಲಿ ಶಾಲೆಗಳನ್ನು ಗ್ರಾಮೀಣ ಭಾಗದಲ್ಲಿ ನಿರ್ಮಾಣ ಮಾಡಬೇಕು. ನಮ್ಮ ಸರ್ಕಾರ ರಾಜ್ಯದಲ್ಲಿ 2 ಸಾವಿರ ಜಾಗಗಳನ್ನು ಗುರುತಿಸಿದ್ದು, ಪ್ರತಿ ಕಾರ್ಪೊರೇಟ್ ಸಂಸ್ಥೆ ಈ ಜಾಗಗಳಲ್ಲಿ ಅತ್ಯುತ್ತಮ ಮೂಲಸೌಕರ್ಯವಿರುವ ಶಾಲೆಗಳನ್ನು ನಿರ್ಮಾಣ ಮಾಡಬೇಕು. ನೀವು ನಮಗೆ ಹಣ ನೀಡಬೇಡಿ, ನೀವೇ ಹಣ ಹಾಕಿ ಶಾಲೆ ನಿರ್ಮಿಸಿ. ಶಾಲೆಗೆ ನಿಮ್ಮ ಸಂಸ್ಥೆಯ ಹೆಸರನ್ನು ಸೇರಿಸಿ. ಟೊಯೋಟಾ ಬೆಂಗಳೂರಿನಲ್ಲಿ 7-8 ಶಾಲೆಗಳನ್ನು ನಿರ್ಮಿಸುತ್ತಿವೆ. ಟೋಯೋಟಾದವರು ಪ್ರತಿ ಶಾಲೆಗೆ 10-15 ಕೋಟಿ ಹಣ ವೆಚ್ಚ ಮಾಡಿ ನಿರ್ಮಿಸುತ್ತಿದ್ದಾರೆ ಉಪಆಯುಕ್ತರು ನಿಮಗೆ ಜಾಗ ನೀಡುತ್ತಾರೆ. ಆ ಜಾಗದಲ್ಲಿ ನೀವು ಶಾಲೆ ನಿರ್ಮಿಸಬಹುದು. ನಿಮಗೆ ಒಬ್ಬರಿಂದಲೇ ಸಂಪೂರ್ಣ ಶಾಲೆಗಳನ್ನು ನಿರ್ಮಾಣ ಮಾಡಲು ಸಾಧ್ಯವಾಗದಿದ್ದರೆ, ಶಾಲೆಯ ಕೆಲವೊಂದು ಭಾಗವನ್ನು ನಿರ್ಮಾಣ ಮಾಡಲು ಅವಕಾಶ ಮಾಡಿಕೊಡಲಾಗುವುದು. ಇದಕ್ಕಾಗಿಯೇ ಒಂದು ವೇದಿಕೆ ರೂಪಿಸಲಾಗುವುದು” ಎಂದರು.

ಇದನ್ನೂ ಓದಿ:  KPSCಯಲ್ಲಿ ಮತ್ತೊಂದು ಬ್ರಹ್ಮಾಂಡ ಅಕ್ರಮ? 80 ಲಕ್ಷ ರೂಪಾಯಿಗೆ ಒಂದು ಪಶು ವೈದ್ಯಾಧಿಕಾರಿ ಸೀಟ್​​ ಬಿಕರಿ?

ಸರ್ಕಾರಿ ಶಾಲೆಗಳನ್ನು ನಗರದ ಖಾಸಗಿ ಶಾಲೆಗಳು ದತ್ತು ಪಡೆಬೇಕು

“ನಗರ ಪ್ರದೇಶಗಳಲ್ಲಿ 50 ಸಾವಿರಕ್ಕಿಂತ ಹೆಚ್ಚು ಶುಲ್ಕ ಪಡೆಯುತ್ತಿರುವ ಶಾಲೆಗಳು ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳನ್ನು ಕಡ್ಡಾಯವಾಗಿ ದತ್ತು ಪಡೆಯಬೇಕು. ಒಂದು ವೇಳೆ ಈ ಶಾಲೆಗಳು ದತ್ತು ಪಡೆಯದೇ ಇದ್ದರೆ ಈ ಶಾಲೆಗಳ ಶುಲ್ಕಗಳಿಗೆ ಮಿತಿ ಹಾಕಲಾಗುವುದು. ಈ ಶಾಲೆಗಳು ಸರ್ಕಾರಿ ಶಾಲೆಗಳ ಕಟ್ಟಡ ನಿರ್ಮಾಣಕ್ಕೆ ಹಣ ಹಾಕುವುದು ಬೇಡ, ಅವರು ಕೇವಲ ಬೋಧಕರನ್ನು ನಿಯೋಜಿಸಿದರೆ ಸಾಕು. ನಮ್ಮ ರಾಜ್ಯದಲ್ಲಿ ಶಿಕ್ಷಕರ ಕೊರತೆ ಇದೆ. ಸರ್ಕಾರಿ ಶಾಲಾ ಶಿಕ್ಷಕರಿಗೆ ನಾವು ಖಾಸಗಿ ಶಾಲೆಗಳಿಗಿಂತ ಉತ್ತಮ ವೇತನ ನೀಡುತ್ತಿದ್ದೇವೆ. ನೀವೆಲ್ಲರೂ ಇದರ ಭಾಗವಾಗಬೇಕು. ನಾನು ಕೂಡ ಮೂರು ಶಾಲೆ ನಡೆಸುತ್ತಿದ್ದೇನೆ. ನಮ್ಮ ಶಾಲೆಗಳು ಕೂಡ ಗ್ರಾಮೀಣ ಭಾಗದ ಸರ್ಕಾರಿ ಶಾಲೆ ದತ್ತು ಪಡೆಯಬೇಕು ಎಂದು ನನ್ನ ಮಗಳಿಗೆ ತಿಳಿಸಿದ್ದೇನೆ. ಆಕೆ ಮೂರು ಶಾಲೆ ದತ್ತು ಪಡೆದಿದ್ದಾರೆ” ಎಂದು ತಿಳಿಸಿದರು.

“ಸಿಎಸ್ಆರ್ ನಿಧಿಯನ್ನು ಮೊದಲು ಪ್ರಾಥಮಿಕ ಶಿಕ್ಷಣಕ್ಕೆ ವಿನಿಯೋಗಿಸಿ, ನಂತರ ಆರೋಗ್ಯ ಕ್ಷೇತ್ರದತ್ತ ಗಮನಹರಿಸಬಹುದು. ನಾವು ಈ ವಿಚಾರವಾಗಿ ನೀತಿ ರೂಪಿಸಿ, ಎಲ್ಲಾ ಕೈಗಾರಿಕೋದ್ಯಮಿಗಳ ಜೊತೆ ಚರ್ಚೆ ಮಾಡಲಾಗುವುದು. ಸಧ್ಯದಲ್ಲೇ ನಾನು ವಿವಿಧ ಕ್ಷೇತ್ರಗಳ ಉದ್ಯಮಗಳ ಜೊತೆ ಸಭೆ ಮಾಡಲಿದ್ದೇನೆಇದರಿಂದ ಶಿಕ್ಷಣಕ್ಕೆ ನಗರಗಳತ್ತ ವಲಸೆ ಹೋಗುವುದನ್ನು ತಪ್ಪಿಸಬಹುದು. ನಮ್ಮ ಹಳ್ಳಿಯ ಮಕ್ಕಳು ಕೇವಲ ಬೆಂಗಳೂರು ಅಥವಾ ಇತರೆ ಭಾಗದ ಮಕ್ಕಳ ಜೊತೆ ಸ್ಪರ್ಧೆ ಮಾಡುತ್ತಿಲ್ಲ. ನಮ್ಮ ಮಕ್ಕಳು ಜಾಗತಿಕ ಮಟ್ಟದಲ್ಲಿ ಸ್ಪರ್ಧೆ ಮಾಡುತ್ತಿದ್ದಾರೆ” ಎಂದರು.

ರಾಜ್ಯದ ಪ್ರಗತಿಯಲ್ಲಿ ಎಫ್ ಕೆಸಿಸಿಐ ಕೊಡುಗೆ

“ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್ ಕೆಸಿಸಿಐ) ಮಹಾರಾಜರ ಕಾಲದಿಂದ ಇಂದಿನವರೆಗೂ ಎಲ್ಲರನ್ನು ಒಟ್ಟಾಗಿ ಮುನ್ನಡೆಸಿಕೊಂಡು ಬಂದು ಅತ್ಯುತ್ತಮ ಕೆಲಸ ಮಾಡುತ್ತಿದೆ. ಜತೆಗೂಡುವುದು ಆರಂಭ, ಜತೆಗೂಡಿ ಆಲೋಚಿಸುವುದು ಪ್ರಗತಿ, ಜತೆಗೂಡಿ ಕೆಲಸ ಮಾಡುವುದು ಯಶಸ್ಸು ಎಂದು ನಾನು ಹೇಳುತ್ತಿರುತ್ತೇನೆ. ಎಫ್ ಕೆಸಿಸಿಐ ಕರ್ನಾಟಕ ಹಾಗೂ ಭಾರತದ ಪ್ರಗತಿಗೆ ತನ್ನದೇ ಆದ ಕೊಡುಗೆ ನೀಡಿದೆ. ಪ್ರತಿ ಕ್ಷೇತ್ರದಲ್ಲೂ ತನ್ನ ಸೇವೆ ಸಲ್ಲಿಸಿದ್ದು, ಕರ್ನಾಟಕದ ಯಶಸ್ಸು ಈ ಸಂಸ್ಥೆಯ ಜೊತೆಯಲ್ಲಿದೆ. ಇಂದು ಐಟಿ ಬಿಟಿ, ಎಐ ಕ್ಷೇತ್ರಗಳು ಬಂದಿವೆ. ಆದರೆ ಇದ್ಯಾವುದೂ ಇಲ್ಲದಿರುವಾಗಲೂ ಎಫ್ ಕೆಸಿಸಿಐ ಕೆಲಸ ಮಾಡಿಕೊಂಡು ಬಂದಿದೆ. ರಾಜ್ಯವನ್ನು ಹೀಗೆ ಪ್ರಗತಿಯ ಹಾದಿಯಲ್ಲಿ ಮುನ್ನಡೆಸಿಕೊಂಡು ಹೋಗಬೇಕು” ಎಂದು ತಿಳಿಸಿದರು.

“ಇಂದು ನಾವು ಸಿಎಸ್ಆರ್ ವಿಚಾರವಾಗಿ ಚರ್ಚೆ ಮಾಡುತ್ತಿದ್ದೇವೆ. ಈ ಸಂಸ್ಥೆ ಗ್ಲೋಬಲ್ ಸಿಎಸ್ಆರ್ ವಿಚಾರ ಪ್ರಸ್ತಾಪಿಸಿದೆ. ಈ ಸಂದರ್ಭದಲ್ಲಿ ನಾನು ಪ್ರಣಬ್ ಮುಖರ್ಜಿ ಅವರನ್ನು ಸ್ಮರಿಸಲೇಬೇಕು. ಅವರು ಆರ್ಥಿಕ ಸಚಿವರಾಗಿದ್ದಾಗ ಈ ಸಿಎಸ್ಆರ್ ಅನ್ನು ಜಾರಿಗೆ ತಂದರು. ಪರಿಣಾಮ ಇಂದು ಸಿಎಸ್ಆರ್ ಸೇವೆಯಾಗಿ ಉಳಿದಿಲ್ಲ. ಇದು ಸುಸ್ಥಿರ ಅಭಿವೃದ್ಧಿಗೆ ತಂತ್ರಗಾರಿಕಾ ಹೂಡಿಕೆಯಾಗಿದೆ. ಲಾಭ ಮಾಡಿ ಬೆಳವಣಿಗೆ ಕಂಡಿದ್ದವರು ಸಮಾಜಕ್ಕಾಗಿ ತಮ್ಮ ಲಾಭಾಂಶವನ್ನು ಹಂಚಿಕೊಳ್ಳುವುದು ಸಿಎಸ್ಆರ್ ಉದ್ದೇಶವಾಗಿದೆ” ಎಂದರು.

ಶಿಕ್ಷಣಕ್ಕಾಗಿ ಹಳ್ಳಿಗಳಿಂದ ನಗರಕ್ಕೆ ವಲಸೆ

“ನಾನು ಹಳ್ಳಿಯಿಂದ ನಗರಕ್ಕೆ ವಿದ್ಯಾಭ್ಯಾಸಕ್ಕಾಗಿ ಬಂದವನು. ನನಗೆ ಉತ್ತಮ ಶಿಕ್ಷಣ ಕೊಡಿಸಬೇಕು ಎಂದು ನಮ್ಮ ಪೋಷಕರು ನನ್ನನ್ನು ಬೆಂಗಳೂರಿಗೆ ಕಳುಹಿಸಿದರು. ನಾನು ಇಲ್ಲೇ ವಿದ್ಯಾರ್ಥಿಯಾಗಿದ್ದಾಗಿನಿಂದ ರಾಜಕಾರಣದಲ್ಲಿ ತೊಡಗಿಕೊಂಡು ಮತ್ತೆ ಊರಿಗೆ ವಾಪಸ್ ಹೋಗಲೇ ಇಲ್ಲ. ಇದು ಕೇವಲ ನನ್ನ ಕಥೆ ಮಾತ್ರವಲ್ಲ. ನಗರ ಪ್ರದೇಶದ ಎಲ್ಲರ ಪರಿಸ್ಥಿತಿಯಾಗಿದೆ. ಇಂದು ನಗರಗಳ ಜನಸಂಖ್ಯೆ 43%ನಷ್ಟಿದೆ. ಈ ಹಿಂದೆ 31% ಇತ್ತು. ಕೃಷ್ಣ ಅವರ ಸರ್ಕಾರದಲ್ಲಿ ನಾನು ನಗರಾಭಿವೃದ್ಧಿ ಸಚಿವನಾಗಿದ್ದಾಗ ಬೆಂಗಳೂರಿನ ಜನಸಂಖ್ಯೆ 70 ಲಕ್ಷ ಇತ್ತು. ಇಂದು 1.40 ಕೋಟಿಯಷ್ಟಾಗಿದೆ. 1.35 ಕೋಟಿ ವಾಹನಗಳು ಬೆಂಗಳೂರು ರಸ್ತೆಗಳಲ್ಲಿವೆ. ಇಡೀ ವಿಶ್ವದಾದ್ಯಂತ ಜನ ಬೆಂಗಳೂರಿನತ್ತ ಮುಖ ಮಾಡಿದ್ದಾರೆ” ಎಂದು ತಿಳಿಸಿದರು.

ರಾಜ್ಯದ ಮಾನವ ಸಂಪನ್ಮೂಲ ಬೇರೆ ಎಲ್ಲೂ ಇಲ್ಲ:

“ಇಲ್ಲಿನ ಮಾನವ ಸಂಪನ್ಮೂಲ, ಇಲ್ಲಿನ ಶಿಕ್ಷಣದ ಗುಣಮಟ್ಟ ದೇಶದಲ್ಲಿ ಬೇರೆಲ್ಲೂ ಇಲ್ಲ. ನಮ್ಮ ದೇಶದಲ್ಲಿ 140 ಅಂತಾರಾಷ್ಟ್ರೀಯ ಶಾಲೆಗಳಿದ್ದು, ನಮ್ಮ ರಾಜ್ಯದಲ್ಲೇ 38 ಅಂತಾರಾಷ್ಟ್ರೀಯ ಶಾಲೆಗಳಿವೆ. ನಮ್ಮಲ್ಲಿರುವ ಪ್ರಾಥಮಿಕ ಶಿಕ್ಷಣ ಅತ್ಯುತ್ತಮವಾಗಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಶಂಕುಸ್ಥಾಪನೆ ಕಾರ್ಯಕ್ರಮದ ವೇಳೆ ಅಂದಿನ ಪ್ರಧಾನಮಂತ್ರಿಗಳಾದ ವಾಜಪೇಯಿ ಅವರು, ಇಷ್ಟು ದಿನ ವಿಶ್ವದ ನಾಯಕರುಗಳು ಮೊದಲು ದೆಹಲಿಗೆ ಬಂದು ನಂತರ ದೇಶದ ಇತರೆ ನಗರಗಳಿಗೆ ಭೇಟಿ ನೀಡುತ್ತಿದ್ದರು. ಈಗ ಕಾಲ ಬದಲಾಗಿದೆ. ವಿಶ್ವದ ನಾಯಕರು ಈಗ ಮೊದಲು ಬೆಂಗಳೂರಿಗೆ ಬಂದು ನಂತರ ದೇಶದ ಇತರ ನಗರಗಳಿಗೆ ಹೋಗುತ್ತಾರೆ ಎಂದು ಹೇಳಿದ್ದರು. ಬೆಂಗಳೂರಿನಲ್ಲಿರುವ ಪ್ರತಿಭೆಗಳು ಈ ನಗರವನ್ನು ಜಾಗತಿಕ ನಗರವನ್ನಾಗಿ ರೂಪಿಸಿದೆ. ನಾವು 70ರ ದಶಕದಲ್ಲಿ ಎಲೆಕ್ಟ್ರಾನಿಕ್ ಸಿಟಿ ಮಾಡಿದರೂ ಈಗ ಆ ಪ್ರದೇಶ ಹೇಗಾಗಿದೆ ನೋಡಿ. ಕೇವಲ ಐಟಿ ಮಾತ್ರವಲ್ಲ, ಉತ್ಪಾದನಾ ಕ್ಷೇತ್ರಗಳಲ್ಲಿ ಬೆಂಗಳೂರು ಪ್ರಗತಿ ಸಾಧಿಸಿದೆ. ಕ್ಯಾಲಿಫೋರ್ನಿಯಾದಲ್ಲಿ 13 ಲಕ್ಷ ಇಂಜಿನಿಯರ್ ಗಳಿದ್ದರೆ, ಬೆಂಗಳೂರಿನಲ್ಲಿ 26 ಲಕ್ಷ ಇಂಜಿನಿಯರ್ ಗಳು ಕೆಲಸ ಮಾಡುತ್ತಿದ್ದಾರೆ. ಕ್ಯಾಲಿಫೋರ್ನಿಯಾದಲ್ಲಿರುವ 13 ಲಕ್ಷ ಇಂಜಿನಿಯರ್ ಗಳ ಪೈಕಿ 8 ಲಕ್ಷ ಜನ ಭಾರತದವರಾಗಿದ್ದು, ಅದರಲ್ಲಿ 6 ಲಕ್ಷ ಜನ ಕರ್ನಾಟಕದವರಾಗಿದ್ದಾರೆ. ಇದು ನಮ್ಮಲ್ಲಿರುವ ಪ್ರತಿಭೆ ದೇಶದ ಹೊರಗೆ ಹೋಗುತ್ತಿರುವುದಕ್ಕೆ ಈ ಅಂಕಿಅಂಶಗಳು ಸಾಕ್ಷಿಯಾಗಿವೆ” ಎಂದರು.

“ಇನ್ನು ವೈದ್ಯಕೀಯ ಕ್ಷೇತ್ರವನ್ನು ನೋಡುವುದಾದರೆ, ಬೆಂಗಳೂರು ಹೆಲ್ತ್ ಟೂರಿಸಂ ನಲ್ಲಿ ಮುಂದೆ ಇದೆ. ನಮ್ಮ ರಾಜ್ಯದಲ್ಲಿ 71 ಮೆಡಿಕಲ್ ಕಾಲೇಜುಗಳಿದ್ದು, ಬೇರೆ ಯಾವುದೇ ರಾಜ್ಯಗಳಲ್ಲಿ ಇಷ್ಟು ಮೆಡಿಕಲ್ ಕಾಲೇಜುಗಳಿಲ್ಲ. ನಾವು ಪ್ರತಿ ವರ್ಷ ಸುಮಾರು 13 ಸಾವಿರ ವೈದ್ಯರು, ಸುಮಾರು 1 ಲಕ್ಷ ವೈದ್ಯಕೀಯ ಕ್ಷೇತ್ರದ ಸಿಬ್ಬಂದಿ ತಯಾರು ಮಾಡುತ್ತಿದ್ದೇವೆ. ನಮ್ಮಲ್ಲಿರುವ ಅತ್ಯಂತ ಪ್ರತಿಭಾನ್ವಿತರು ಹೊರ ದೇಶಗಳಿಗೆ ಹೋಗುತ್ತಿದ್ದಾರೆ” ಎಂದರು.

ಉದ್ಯೋಗದಾತರ ಹಿತ ಕಾಯಲು ಬದ್ಧ

“ಉದ್ಯೋಗಿಗಳ ಜೊತೆಗೆ ಉದ್ಯೋಗದಾತರ ಹಿತವನ್ನು ನಾವು ಕಾಪಾಡಬೇಕು. ಉದ್ಯೋಗದಾತರು ಶಕ್ತಿಶಾಲಿಯಾಗಿದ್ದರೆ ಉದ್ಯೋಗಿಗಳು ಶಕ್ತಿಶಾಲಿಯಾಗಿರುತ್ತಾರೆ. ಉದ್ಯೋಗಿಗಳಿಗೆ ನೀಡಬೇಕಾದ ಕನಿಷ್ಠ ವೇತನಗಳನ್ನು ನಾವು ನೀಡಲೇಬೇಕು. ಜೊತೆಗೆ ಉದ್ಯೋಗದಾತರ ಮೇಲೂ ಹೆಚ್ಚಿನ ಹೊರೆಯಾಗದಂತೆ ನೋಡಿಕೊಳ್ಳಬೇಕು. ನಿಮ್ಮ ಉದ್ಯಮ ವ್ಯಾಪಾರಕ್ಕೆ ನೆರವಾಗಿರುವುದಕ್ಕೆ ಅಗತ್ಯವಿರುವಂತೆ ಉದ್ಯಮಸ್ನೇಹಿ ವಾತಾವರಣ ಸೃಷ್ಟಿಸಲು ನಾವು ಮುಂದಾಗಿದ್ದೇವೆ. ನೀವು ಬಲಿಷ್ಠವಾಗಿದ್ದರೆ, ನಾವು ಬಲಿಷ್ಠವಾಗುತ್ತೇವೆ, ನೀವು ನಿಶಕ್ತರಾದರೆ, ನಾವು ದುರ್ಬಲರಾಗುತ್ತೇವೆ. ನೀವು ಬಲಿಷ್ಠರಾಗಿ ಎಲ್ಲರೂ ಒಟ್ಟಾಗಿ ರಾಜ್ಯವನ್ನು ನಿರ್ಮಾಣ ಮಾಡೋಣ” ಎಂದು ಕರೆ ನೀಡಿದರು.

“ನಾನು ರತನ್ ಟಾಟಾ ಅವರನ್ನು ಒಮ್ಮೆ ಭೇಟಿ ನೀಡಿದಾಗ ಅವರು ನನಗೆ ಒಂದು ಸಲಹೆ ನೀಡಿದ್ದರು. ನೀವು ವೇಗವಾಗಿ ಸಾಗಬೇಕಾದರೆ, ಒಬ್ಬರೇ ಹೋಗಿ. ನೀವು ಬಹುದೂರ ಸಾಗಬೇಕಾದರೆ ಬೇರೆಯವರ ಜತೆಗೂಡಿ ಹೋಗಿ. ನಮ್ಮ ಸರ್ಕಾರವಾಗಲಿ, ಎಫ್ ಕೆಸಿಸಿಐ ಎಲ್ಲರೂ ಒಟ್ಟಾಗಿ ಸಾಗೋಣ. ನಮ್ಮ ಸರ್ಕಾರ ಶಿಕ್ಷಣ, ಆರೋಗ್ಯ, ಹಸಿರು ಉಳಿಸುವತ್ತ ನಾವು ಗಮನಹರಿಸುತ್ತಿದ್ದೇವೆ. ಬೆಂಗಳೂರಿನಲ್ಲಿರುವ ಅರಣ್ಯ ಜಾಗಗಳಲ್ಲಿ ಜೈವಿಕ ಉದ್ಯಾನವನ ಸ್ಥಾಪಿಸಲು ಮುಂದಾಗಿದ್ದೇವೆ. ನಮ್ಮ ಸರ್ಕಾರ ಯುವ ಉದ್ಯೋಗ ಸೇತು ಎಂಬ ಖಾಸಗಿ ಉದ್ಯೋಗ ವಿನಿಮಯ ಕೇಂದ್ರ ಸ್ಥಾಪಿಸುತ್ತಿದ್ದು, ನಿಮಗೆ ಯಾವ ರೀತಿ ಕೌಶಲ್ಯ ಆಧಾರಿತ ಉದ್ಯೋಗಿಗಳು ಬೇಕು ಎಂದು ತಿಳಿಸಿದರೆ, ನಮ್ಮ ಸರ್ಕಾರ ಯುವಕರಿಗೆ ತರಬೇತಿ ನೀಡಿ ನಿಮಗೆ ನೀಡುತ್ತದೆ. ನೀವು ಅವರಿಗೆ ಉದ್ಯೋಗ ನೀಡಬಹುದು. ನೀವು ಇಂತಹವರಿಗೆ ಉದ್ಯೋಗ ನೀಡಬೇಕು, ನೀಡಬಾರದು ಎಂಬ ವಿಚಾರವಾಗಿ ನಾವು ನಿಮ್ಮ ಆಡಳಿತ ವ್ಯವಸ್ಥೆಯಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಈಗ ಸರ್ಕಾರಿ ಶಾಲೆಗಳಲ್ಲಿ ಓದಿದ ಮಕ್ಕಳಿಗೆ 15% ಮೀಸಲಾತಿ ನೀಡಲಾಗುತ್ತಿದ್ದು, ಸದ್ಯದಲ್ಲೇ ಈ 15% ನಲ್ಲಿ 7.5% ಅನ್ನು ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳ ಮಕ್ಕಳಿಗೆ ನೀಡಲಾಗುವುದು. ನಾನು ರಾಜ್ಯದ ಮುಖ್ಯಮಂತ್ರಿಯಾದರೂ ನಿಮ್ಮವನಾಗಿದ್ದೇನೆ. ನಿಮ್ಮ ಪರವಾಗಿ ನಿಲ್ಲುತ್ತೇನೆ” ಎಂದು ಭರವಸೆ ನೀಡಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

WTC Final 2026-27: 4ನೇ ಆವೃತ್ತಿಯ ಡಬ್ಲ್ಯೂಟಿಸಿ ಫೈನಲ್ ವೇಳಾಪಟ್ಟಿ ಪ್ರಕಟ – Kannada News | WTC Final 2027 Schedule Announced: Oval to Host Key Clash and Ashes Dates Revealed

2025-27 ರ ನಾಲ್ಕನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ (WTC Final 2027) ಪಂದ್ಯದ ವೇಳಾಪಟ್ಟಿಯನ್ನು ಐಸಿಸಿ (ICC) ಇಂದು ಪ್ರಕಟಿಸಿದೆ. ಅದರಂತೆ ಈ ಆವೃತ್ತಿಯ ಫೈನಲ್ ಪಂದ್ಯ 2027 ರ ಜೂನ್ 9 ರಂದು ಆರಂಭವಾಗಲಿದ್ದು, ಜೂನ್ 13 ರವರೆಗೆ ನಡೆಯಲಿದೆ. ಐಸಿಸಿ ಈಗಾಗಲೇ 2027, 2029 ಮತ್ತು 2031 ರ ಡಬ್ಲ್ಯೂಟಿಸಿ ಫೈನಲ್‌ಗಳ ಆತಿಥ್ಯದ ಹಕ್ಕುಗಳನ್ನು ಇಂಗ್ಲೆಂಡ್‌ಗೆ ನೀಡಿದೆ. 2027ರ ಆವೃತ್ತಿಯ ಫೈನಲ್ ಪಂದ್ಯಕ್ಕೆ ಲಂಡನ್‌ನ ಐಕಾನಿಕ್ ದಿ ಓವಲ್ ಮೈದಾನ ಆತಿಥ್ಯವಹಿಸುತ್ತಿದೆ. ಈ ಮೈದಾನದಲ್ಲಿ ಎರಡನೇ ಬಾರಿಗೆ ಡಬ್ಲ್ಯೂಟಿಸಿ ಫೈನಲ್ ನಡೆಯುತ್ತಿದ್ದು, ಈ ಮೊದಲು ಅಂದರೆ 2023 ರಲ್ಲಿ ನಡೆದಿದ್ದ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಟೀಂ ಇಂಡಿಯಾವನ್ನು ಮಣಿಸಿ ಚಾಂಪಿಯನ್ ಪಟ್ಟಕ್ಕೇರಿತ್ತು.

9 ತಂಡಗಳ ನಡುವೆ ರೇಸ್

2027 ರ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್‌ ರೇಸ್​ ತೀವ್ರ ಕುತೂಹಲ ಮೂಡಿಸಿದೆ. ಏಕೆಂದರೆ ಎಲ್ಲಾ 9 ತಂಡಗಳು ಫೈನಲ್‌ಗೆ ಟಿಕೆಟ್ ಪಡೆಯುವ ಪೈಪೋಟಿಯಲ್ಲಿವೆ. ಅಂತಹ ಪರಿಸ್ಥಿತಿಯಲ್ಲಿ, ಮುಂಬರುವ ಟೆಸ್ಟ್ ಸರಣಿಯು ಡಬ್ಲ್ಯೂಟಿಸಿ ಪಾಯಿಂಟ್ ಟೇಬಲ್‌ನಲ್ಲಿ ಸಾಕಷ್ಟು ಬದಲಾವಣೆಗಳನ್ನು ತರಲಿದೆ. ಅದರಂತೆ ಜುಲೈ ಮತ್ತು ಆಗಸ್ಟ್‌ನಲ್ಲಿ ಹಲವಾರು ನಿರ್ಣಾಯಕ ಟೆಸ್ಟ್ ಸರಣಿಗಳು ನಡೆಯಲಿವೆ. ಈ ಸರಣಿಗಳಿಂದ ಹೊರಬರುವ ಫಲಿತಾಂಶ ಯಾವ ತಂಡ ರೇಸ್​ನಲ್ಲಿ ಉಳಿಯಲಿದೆ ಎಂಬುದನ್ನು ನಿರ್ಧರಿಸಲಿದೆ.

ಮುಂಬರುವ ಪ್ರಮುಖ ಟೆಸ್ಟ್ ಸರಣಿಗಳನ್ನು ನೋಡುವುದಾದರೆ.. ಜುಲೈ 25 ರಿಂದ ವೆಸ್ಟ್ ಇಂಡೀಸ್, ಪಾಕಿಸ್ತಾನ ವಿರುದ್ಧ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ತವರಿನಲ್ಲಿ ಆಡಲಿದೆ. ಅದೇ ಸಮಯದಲ್ಲಿ, ಆಸ್ಟ್ರೇಲಿಯಾ ತಂಡವು ಆಗಸ್ಟ್ 13 ರಿಂದ ಬಾಂಗ್ಲಾದೇಶ ವಿರುದ್ಧ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ. ಆಸ್ಟ್ರೇಲಿಯಾ, ಬಾಂಗ್ಲ ವಿರುದ್ಧ ಗೆದ್ದು ಅಗ್ರಸ್ಥಾನದಲ್ಲಿ ಮುಂದುವರೆಯುವ ಇರಾದೆಯಲ್ಲಿದೆ.

ಭಾರತ- ಲಂಕಾ ಮುಖಾಮುಖಿ

ಇದಾದ ನಂತರ, ಆಗಸ್ಟ್ 15 ರಿಂದ ಶ್ರೀಲಂಕಾ ಮತ್ತು ಭಾರತ ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿ ಆರಂಭವಾಗಲಿದೆ. WTC ಪಾಯಿಂಟ್ ಟೇಬಲ್ ವಿಷಯದಲ್ಲಿ ಈ ಸರಣಿ ಎರಡೂ ತಂಡಗಳಿಗೆ ಬಹಳ ಮುಖ್ಯವಾಗಿದೆ. ಏತನ್ಮಧ್ಯೆ, ಪಾಕಿಸ್ತಾನ ತಂಡವು ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ ಇಂಗ್ಲೆಂಡ್ ಪ್ರವಾಸ ಕೈಗೊಂಡು ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ.

IND vs ENG: ಹಿಟ್​ಮ್ಯಾನ್ ಅಲ್ಲ, ಟೆಸ್ಟ್ ಮ್ಯಾನ್..! ಏನಾಯ್ತು ರೋಹಿತ್ ಶರ್ಮಾ?

ಆಶಸ್ ಸರಣಿ ವೇಳಾಪಟ್ಟಿ ಪ್ರಕಟ

ಡಬ್ಲ್ಯೂಟಿಸಿ ಫೈನಲ್ ಜೊತೆಗೆ ಪ್ರತಿಷ್ಠಿತ ಆಶಸ್ ಸರಣಿಯ ವೇಳಾಪಟ್ಟಿಯೂ ಹೊರಬಿದ್ದಿದೆ. ಅದರಂತೆ ಆಶಸ್ ಸರಣಿಯು ಜೂನ್ 18, 2027 ರಂದು ನಾಟಿಂಗ್‌ಹ್ಯಾಮ್‌ನಲ್ಲಿ ಪ್ರಾರಂಭವಾಗಲಿದೆ. ಎರಡನೇ ಟೆಸ್ಟ್ ಜೂನ್ 30 ರಂದು ಲಾರ್ಡ್ಸ್‌ನಲ್ಲಿ ನಡೆಯಲಿದೆ. ಮೂರನೇ ಟೆಸ್ಟ್ ಜುಲೈ 8 ರಂದು ಎಡ್ಜ್‌ಬಾಸ್ಟನ್‌ನಲ್ಲಿ ನಡೆಯಲಿದೆ. ಆಶಸ್ ಸರಣಿಯ ನಾಲ್ಕನೇ ಟೆಸ್ಟ್ ಪಂದ್ಯ ಜುಲೈ 21 ರಂದು ಸೌತಾಂಪ್ಟನ್‌ನಲ್ಲಿ ನಡೆಯಲಿದೆ. ಐದನೇ ಟೆಸ್ಟ್ ಪಂದ್ಯ ಜುಲೈ 29 ರಂದು ಓವಲ್‌ನಲ್ಲಿ ನಡೆಯಲಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 5:03 pm, Thu, 23 July 26

Source link

IND vs ZIM: ಸತತ 8ನೇ ಪಂದ್ಯದಲ್ಲಿ ಟಾಸ್ ಗೆದ್ದ ಅಯ್ಯರ್; ತಂಡದ ಪರ ಯುವ ವೇಗಿ ಪಾದಾರ್ಪಣೆ – Kannada News | Shreyas Iyer’s Team India Seeks First Win in Zimbabwe T20 Series Opener

ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧ ಸತತ ಎರಡು ಟಿ20 ಸರಣಿಗಳನ್ನು ಸೋತ ಟೀಂ ಇಂಡಯಾ ಇದೀಗ ಮತ್ತೊಮ್ಮೆ ಮೈದಾನಕ್ಕಿಳಿದಿದೆ. ಈ ಬಾರಿ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಜಿಂಬಾಬ್ವೆ (India vs Zimbabwe ) ತಂಡವನ್ನು ಎದುರಿಸುತ್ತಿರುವ ಶ್ರೇಯಸ್ ಅಯ್ಯರ್ ಪಡೆ ಮೊದಲ ಗೆಲುವಿನ ನಿರೀಕ್ಷೆಯಲ್ಲಿದೆ. ಶ್ರೇಯಸ್ ಅಯ್ಯರ್ (Shreyas Iyer) ತಂಡದ ನಾಯಕನಾದ ಬಳಿಕ ಇದುವರೆಗೆ 7 ಪಂದ್ಯಗಳನ್ನು ಆಡಲಾಗಿದೆ. ಆದರೆ ಈ 7 ಪಂದ್ಯಗಳಲ್ಲಿ ಒಂದರಲ್ಲೂ ಗೆಲುವು ಸಾಧಿಸಲು ಸಾಧ್ಯವಾಗಿಲ್ಲ. ಇದೀಗ ಕಳೆದ ಸರಣಿಗಳಲ್ಲಿ ಮಾಡಿದ್ದ ತಪ್ಪುಗಳನ್ನು ತಿದ್ದಿಕೊಂಡು ಅಖಾಡಕ್ಕಿಳಿದಿರುವ ಯುವ ಟೀಂ ಇಂಡಿಯಾ, ಜಿಂಬಾಬ್ವೆ ಸವಾಲನ್ನು ಯಾವ ರೀತಿಯಾಗಿ ಎದುರಿಸುತ್ತದೆ ಎಂಬುದು ಕುತೂಹಲಕಾರಿಯಾಗಿದೆ.

ಸತತ 8ನೇ ಪಂದ್ಯದಲ್ಲಿ ಟಾಸ್ ಗೆದ್ದ ಅಯ್ಯರ್

ಹರಾರೆಯಲ್ಲಿ ನಡೆಯುತ್ತಿರುವ ಮೊದಲ ಟಿ20 ಪಂದ್ಯದಲ್ಲಿ ಟಾಸ್ ಗೆದ್ದಿರುವ ಟೀಂ ಇಂಡಿಯಾ ನಾಯಕ ಶ್ರೇಯಸ್ ಅಯ್ಯರ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ. ಇಲ್ಲಿ ಕಳವಳಕರವಾದ ಸಂಗತಿಯೆಂದರೆ ಶ್ರೇಯಸ್ ಅಯ್ಯರ್ ನಾಯಕನಾಗಿ ಆಡಿದ ಎಲ್ಲಾ ಪಂದ್ಯಗಳಲ್ಲೂ ಟಾಸ್ ಗೆದ್ದಿದ್ದಾರೆ. ಆದರೆ ಒಂದೇ ಒಂದು ಪಂದ್ಯವನ್ನು ಗೆಲ್ಲಲು ಅವರಿಗೆ ಸಾಧ್ಯವಾಗಿಲ್ಲ. ಹೀಗಾಗಿ ಈ ಪಂದ್ಯದಲ್ಲೂ ಟಾಸ್ ಗೆದ್ದಿರುವ ಅಯ್ಯರ್ ತಂಡವನ್ನು ಗೆಲುವಿನತ್ತ ಕೊಂಡೊಯ್ಯುತ್ತಾರಾ ಕಾದು ನೋಡಬೇಕಿದೆ.

ಅಶೋಕ್ ಶರ್ಮಾ ಪಾದಾರ್ಪಣೆ

ಟಾಸ್ ಜೊತೆಗೆ ಉಭಯ ತಂಡಗಳ ಆಡುವ ಹನ್ನೊಂದರ ಬಳಗವೂ ಹೊರಬಿದ್ದಿದೆ. ಎರಡೂ ತಂಡಗಳ ಪರ ಯುವ ಆಟಗಾರರಿಗೆ ಚೊಚ್ಚಲ ಅಂತರರಾಷ್ಟ್ರೀಯ ಪಂದ್ಯವನ್ನಾಡುವ ಅವಕಾಶ ಸಿಕ್ಕಿದೆ. ಅದರಂತೆ ಟೀಂ ಇಂಡಿಯಾ ಪರ ವೇಗದ ಬೌಲರ್ ಅಶೋಕ್ ಶರ್ಮಾ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಇತ್ತ ಆರಂಭಿಕರಾದ ಬೆನ್ ಕರನ್ ಮತ್ತು ನ್ಯೂಮನ್ ನ್ಯಾಮುರಿ ಜಿಂಬಾಬ್ವೆ ಪರ ಚೊಚ್ಚಲ ಪಂದ್ಯವಾಡುತ್ತಿದ್ದಾರೆ.

Zimbabwe vs India T20, Live Score: ಟಾಸ್ ಗೆದ್ದ ಟೀಂ ಇಂಡಿಯಾ ಬೌಲಿಂಗ್ ಆಯ್ಕೆ

ಉಭಯ ತಂಡಗಳ ಪ್ಲೇಯಿಂಗ್ 11

ಭಾರತ ತಂಡ: ವೈಭವ್ ಸೂರ್ಯವಂಶಿ, ಅಭಿಷೇಕ್ ಶರ್ಮಾ, ಇಶಾನ್ ಕಿಶನ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮಾ, ರಿಂಕು ಸಿಂಗ್, ಶಿವಂ ದುಬೆ, ರವಿ ಬಿಷ್ಣೋಯ್, ಪ್ರಿನ್ಸ್ ಯಾದವ್, ಅಶೋಕ್ ಶರ್ಮಾ ( ಚೊಚ್ಚಲ ಪಂದ್ಯ) ಮತ್ತು ಮಯಾಂಕ್ ಯಾದವ್.

ಜಿಂಬಾಬ್ವೆ ತಂಡ: ಬ್ರಿಯಾನ್ ಬೆನೆಟ್, ಬೆನ್ ಕರ್ರನ್ (ಚೊಚ್ಚಲ ಪಂದ್ಯ), ಡಿಯೋನ್ ಮೈಯರ್ಸ್, ಸಿಕಂದರ್ ರಝಾ (ನಾಯಕ), ರಿಯಾನ್ ಬರ್ಲ್, ವೆಸ್ಲಿ ಮಾಧೆವೆರೆ, ತಡಿವಾನಾಶೆ ಮರುಮಾನಿ (ವಿಕೆಟ್ ಕೀಪರ್), ಬ್ರಾಡ್ ಇವಾನ್ಸ್, ನ್ಯೂಮನ್ ನ್ಯಾಮ್ಹುರಿ (ಚೊಚ್ಚಲ ಪಂದ್ಯ), ರಿಚರ್ಡ್ ನಾಗರವಾ ಮತ್ತು ಬ್ಲೆಸ್ಸಿಂಗ್ ಮುಜರಬಾನಿ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 4:23 pm, Thu, 23 July 26

Source link

‘ಜನ ನಾಯಗನ್’ ಸಿನಿಮಾನಲ್ಲಿ ಮ್ಯೂಟ್ ಆಗಿವೆ ಹಲವು ಸಂಭಾಷಣೆ – Kannada News | Jana Nayagan movie any scenes have been muted and edited out

ವಿಜಯ್ (Vijay) ನಟಿಸಿರುವ ‘ಜನ ನಾಯಗನ್’ ಸಿನಿಮಾ ಇಂದು (ಜುಲೈ 23) ಬಿಡುಗಡೆ ಆಗಿದೆ. ಜನವರಿಯಲ್ಲೇ ಬಿಡುಗಡೆ ಆಗಬೇಕಿದ್ದ ಸಿನಿಮಾ ಈಗ ಏಳು ತಿಂಗಳ ಬಿಡುಗಡೆ ಆಗಿದೆ. ಸಿಬಿಎಫ್​​ಸಿಯಲ್ಲಿ ಸುಮಾರು ಏಳು ತಿಂಗಳುಗಳ ಕಾಲ ಈ ಸಿನಿಮಾ ಸಿಕ್ಕಿಕೊಂಡಿತ್ತು. ಸಿಬಿಎಫ್​​ಸಿಯು ಈ ಸಿನಿಮಾಕ್ಕೆ ಪ್ರಮಾಣ ಪತ್ರ ನೀಡಲು ನಿರಾಕರಿಸಿತ್ತು. ಕೌಟುಂಬಿಕ ಸಿನಿಮಾ ಪ್ರೇಮಿಗಳ ಮೆಚ್ಚಿನ ನಾಯಕ ಆಗಿರುವ ವಿಜಯ್ ಅವರ ಸಿನಿಮಾಕ್ಕೆ ಸಿಬಿಎಫ್​​ಸಿ ಪ್ರಮಾಣ ಪತ್ರ ನೀಡಿದ್ದು ಹಲವರಿಗೆ ಅಚ್ಚರಿ ತಂದಿತ್ತು. ಅಲ್ಲದೆ, ಸಿಬಿಎಫ್​​ಸಿ ಪ್ರಮಾಣ ಪತ್ರ ನೀಡಿದಾಗಲೂ ‘ಎ’ ಪ್ರಮಾಣ ಪತ್ರ ನೀಡಲಾಗಿದೆ. ‘ಎ’ ಪ್ರಮಾಣ ಪತ್ರ ನೀಡುವಂಥಹದ್ದು ಸಿನಿಮಾನಲ್ಲಿ ಏನಿದೆ?

‘ಜನ ನಾಯಗನ್’ ಸಿನಿಮಾಕ್ಕೆ ‘ಎ’ ಪ್ರಮಾಣ ಪತ್ರ ನೀಡುವುದಕ್ಕೂ ಮುಂಚೆ ಬರೋಬ್ಬರಿ 12 ಕಟ್​​ಗಳನ್ನು ಸಿನಿಮಾಕ್ಕೆ ಮಾಡಲಾಗಿದೆ. ವಿಜಯ್ ಅವರ ಸಿನಿಮಾಕ್ಕೆ ‘ಎ’ ಪ್ರಮಾಣ ಪತ್ರ ನೀಡುವುದೇ ಅಪರೂಪ, ಅದರಲ್ಲೂ 12 ಕಟ್​​ಗಳು, ಮ್ಯೂಟ್​​ಗಳು ಕಡಿಮೆ ಏನಲ್ಲ. ಸಿನಿಮಾನಲ್ಲಿ ಹಲವಾರು ಸಂಭಾಷಣೆಗಳನ್ನು ಮ್ಯೂಟ್ ಮಾಡಲಾಗಿದೆ. ಕೆಲವಂತೂ ಏಕೆ ಮ್ಯೂಟ್ ಮಾಡಲಾಗಿದೆ ಎಂಬುದು ಸಹ ಅರ್ಥವಾಗುವುದಿಲ್ಲ.

ಬಾಬಿ ಡಿಯೋಲ್ ಅಮೆರಿಕ ಮತ್ತು ಸದ್ದಾಂ ಹುಸೇನ್​​ಗೆ ಸಂಬಂಧಿಸಿದ ಸಂಭಾಷಣೆ ಹೇಳುತ್ತಾರೆ. ಅದನ್ನು ಕಟ್ ಮಾಡಲಾಗಿದೆ. ಪ್ರಕಾಶ್ ರೈ, ‘ದರ್ಶನ’ಕ್ಕೆ ಹೋಗಿ ಬರುವಾಗ ಬಿಯರ್ ಕುಡಿಯೋಣ ಎಂದು ಹೇಳುವ ಸಂಭಾಷಣೆ ಇದೆ, ಪ್ರಕಾಶ್ ರೈ ‘ದರ್ಶನ’ ಎನ್ನುವ ಪದಕ್ಕೆ ಮುಂಚೆ ಹೇಳುವ ಪದವನ್ನು ಮ್ಯೂಟ್ ಮಾಡಲಾಗಿದೆ. ಹೀಗೆ ಇನ್ನೂ ಹಲವು ಸಂಭಾಷಣೆಗಳಲ್ಲಿ ಮ್ಯೂಟ್​​ಗಳನ್ನು ಮಾಡಲಾಗಿದೆ. ಸಂವಿಧಾನದ ಬಗ್ಗೆ ಹೇಳಲಾಗುವ ಸಂಭಾಷಣೆಯಲ್ಲೂ ಮ್ಯೂಟ್ ಮಾಡಲಾಗಿದೆ. ಪ್ರಕಾಶ್ ರೈ ಪಾತ್ರ, ಬಾಲಕಿಯ ಅತ್ಯಾಚಾರದ ವಿಷಯವಾಗಿ ಮಾತನಾಡುವಾಗ ಹೇಳಿರುವ ಸಂಭಾಷಣೆ, ಟಿವಿಕೆ ಎಂದು ಹೇಳುವ ಸಂಭಾಷಣೆಗಳಿಗೆ ಮ್ಯೂಟ್ ಮಾಡಲಾಗಿದೆ.

ಇದನ್ನೂ ಓದಿ:Jana Nayagan First Half Review: ‘ಜನ ನಾಯಗನ್’ ಮೊದಲಾರ್ಧ ಹೇಗಿದೆ?

ಮ್ಯೂಟ್ ಮಾತ್ರವೇ ಅಲ್ಲದೆ ಹಲವು ದೃಶ್ಯಗಳಿಗೆ ಸಹ ಕತ್ತರಿ ಹಾಕಲಾಗಿದೆಯಂತೆ. ವಿಜಯ್ ಎಂಟ್ರಿ ಸೀನ್​​ನಲ್ಲಿ ಅವರ ಕೈಮೇಲೆ ‘ಟಿವಿಕೆ’ ಎಂದು ಹಚ್ಚೆ ಹಾಕಿಸಿಕೊಂಡಿರು ದೃಶ್ಯ ತೋರಿಸಲಾಗುತ್ತದೆ. ಅದಕ್ಕೆ ಸೆನ್ಸಾರ್ ಕತ್ತರಿ ಹಾಕಿದೆ. ವಿಜಯ್, ಒಂದು ದೃಶ್ಯದಲ್ಲಿ ಪುಸ್ತಕ ಹಿಡಿದಿರುತ್ತಾರೆ, ಆ ಪುಸ್ತಕದ ಮೇಲೆ ಅಂಬೇಡ್ಕರ್ ಚಿತ್ರ ಇರುತ್ತದೆ, ಅದಕ್ಕೂ ಸೆನ್ಸಾರ್ ಕತ್ತರಿ ಹಾಕಿದೆ. ಬಾವುಟದ ದೃಶ್ಯಕ್ಕೆ ಕತ್ತರಿ ಹಾಕಲಾಗಿದೆ, ಓಂ ಅಕ್ಷರದ ದೃಶ್ಯವಿರುವ ದೃಶ್ಯಕ್ಕೆ ಕತ್ತರಿ ಹಾಕಲಾಗಿದೆ.

ಸಿನಿಮಾನಲ್ಲಿ ಸಾಕಷ್ಟು ಆಕ್ಷನ್ ದೃಶ್ಯಗಳಿವೆ. ವಿಜಯ್ ಅಂತೂ ಕತ್ತಿ ತೆಗೆದುಕೊಂಡು ಕೆಲವರ ಕೈ, ಕೆಲವರ ರುಂಡಗಳನ್ನು ಕತ್ತರಿಸುತ್ತಾರೆ. ರಕ್ತವನ್ನು ಧಾರೆಯ ರೀತಿ ಹರಿಸುತ್ತಾರೆ. ಆದರೆ ಅದಕ್ಕೆಲ್ಲ ಹೆಚ್ಚಿಗೇನೂ ಕತ್ತರಿ ಹಾಕಿದಂತೆ ಕಾಣಲಿಲ್ಲ. ಆಕ್ಷನ್​​ ದೃಶ್ಯಗಳ ಪೈಕಿ ಕೆಲವಷ್ಟಕ್ಕೆ ಮಾತ್ರವೇ ಕತ್ತರಿ ಹಾಕಲಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಕಾವೇರಿ ನದಿ ನೀರು ವಿವಾದ: ತಮಿಳುನಾಡಿನ ಜೊತೆ ಸಂಧಾನಕ್ಕೆ ಮುಂದಾದ ಕರ್ನಾಟಕ; ಆ. 3ರಂದು ಮಾತುಕತೆಗೆ ಬರುವಂತೆ ವಿಜಯ್​​ಗೆ ಆಹ್ವಾನ – Kannada News | Cauvery Dispute: Karnataka Initiates Talks, Invites Tamil Nadu CM Vijay for High Level Meeting on August 3

ಕಾವೇರಿ ನದಿ ನೀರು ವಿವಾದ: ತಮಿಳುನಾಡಿನ ಜೊತೆ ಸಂಧಾನಕ್ಕೆ ಮುಂದಾದ ಕರ್ನಾಟಕImage Credit source: PTI

ಬೆಂಗಳೂರು, ಜುಲೈ 23: ಕಾವೇರಿ ನೀರು ಹಂಚಿಕೆ ಸಮಸ್ಯೆ ಮತ್ತು ಮೇಕೆದಾಟು ಯೋಜನೆ ವಿಚಾರ ಸಂಬಂಧ ಸದಾ ಒಂದಿಲ್ಲೊಂದು ಕ್ಯಾತೆ ತೆಗೆಯುತ್ತಿರುವ ನೆರೆ ರಾಜ್ಯ ತಮಿಳುನಾಡಿನೊಂದಿಗೆ ಸಂಧಾನಕ್ಕೆ ಕರ್ನಾಟಕ ಮುಂದಾಗಿದೆ. ಈ ವಿಚಾರವಾಗಿ ಆಗಸ್ಟ್ 3ರಂದು ಮಾತುಕತೆಗೆ ಬರುವಂತೆ ತಮಿಳುನಾಡು ಸಿಎಂ ವಿಜಯ್​ಗೆ ಕರ್ನಾಟಕ ಆಹ್ವಾನ ನೀಡಿದೆ. ಕರ್ನಾಟಕ ಮತ್ತು ತಮಿಳುನಾಡು ನಡುವೆ ಪತ್ರ ವ್ಯವಹಾರ ನಡೆದಿದ್ದರೂ ಮಾತುಕತೆಗೆ ಬರುವ ವಿಚಾರವಾಗಿ ವಿಜಯ್​​ರಿಂದ ಈವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎನ್ನಲಾಗಿದೆ. ಹೀಗಾಗಿ ತಮಿಳುನಾಡಿನ ಮುಂದಿನ ನಿರ್ಧಾರ ಏನಿರಬಹುದು ಎಂಬ ಕುತೂಹಲ ಹೆಚ್ಚಿದೆ. ಒಂದೊಮ್ಮೆ ಕರ್ನಾಟಕದ ಆಹ್ವಾನ ಒಪ್ಪಿ ವಿಜಯ್​​ ಬಂದಿದ್ದೇ ಆದಲ್ಲಿ ಸಂಕಷ್ಟ ಪರಿಹಾರ ಸೂತ್ರದ ಬಗ್ಗೆ ಉಭಯ ರಾಜ್ಯಗಳ ಮುಖ್ಯಮಂತ್ರಿಗಳು ಮಹತ್ವದ ಚರ್ಚೆ ನಡೆಸಲಿದ್ದಾರೆ.

ನೀರು ಬಿಡದಿರಲು ಆದೇಶಿಸಿದ್ದ CWMA

ಕರ್ನಾಟಕದಲ್ಲಿ ಬರ ಪರಿಸ್ಥಿತಿ ಉಂಟಾಗಿರುವ ಹಿನ್ನೆಲೆ ತಮಿಳುನಾಡಿಗೆ ನೀರು ಬಿಡದಿರಲು CWMA ನಿನ್ನೆಯಷ್ಟೇ ಆದೇಶಿಸಿತ್ತು. ಜುಲೈ 26ರ ಬಳಿಕ ಕರ್ನಾಟಕದಲ್ಲಿ ಮಳೆಯಾಗುವ ಸಾಧ್ಯತೆಯಿದೆ . ಈ ಹಿನ್ನೆಲೆ ಒಂದು ವಾರದ ಬಳಿಕ ಅಂದರೆ ,ಜು.28ಕ್ಕೆ ದೆಹಲಿಯಲ್ಲಿ ಕಾವೇರಿ ನೀರು ನಿರ್ವಹಣಾ ಸಮಿತಿ ಸಭೆ ನಡೆಸಿ ನೀರು ಬಿಡುವುದೋ ಅಥವಾ ಬೇಡವೋ ಎಂಬ ಬಗ್ಗೆ ನಿರ್ಧಾರ ಮಾಡುವುದಾಗಿ ತಿಳಿಸಿತ್ತು. ಈ ನಡುವೆಯೇ ಮಹತ್ವದ ಬೆಳವಣಿಗೆ ನಡೆದಿದೆ.

ಇದನ್ನೂ ಓದಿ: ಸಂಪೂರ್ಣ ಬತ್ತಿದ ಕಾವೇರಿ ನದಿ; ಮೈಸೂರು, ಬೆಂಗಳೂರಲ್ಲಿ ಕುಡಿಯುವ ನೀರಿಗೂ ಬರದ ಭೀತಿ

ಲೋಕಸಭೆಯಲ್ಲಿ ಪ್ರತಿಭಟಿಸಿದ್ದ ಡಿಎಂಕೆ

ಇನ್ನು ಲೋಕಸಭೆ ಅಧಿವೇಶನದ ಮೊದಲ ದಿನವೇ ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ನೆರೆ ರಾಜ್ಯ ತಮಿಳುನಾಡು ಮತ್ತೆ ಕ್ಯಾತೆ ತೆಗೆದಿತ್ತು. ಕರ್ನಾಟಕದ ಮೇಕೆದಾಟು ಯೋಜನೆಗೆ ಲೋಕಸಭೆಯಲ್ಲಿ ಡಿಎಂಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಕಲಾಪ ಆರಂಭವಾಗುತ್ತಿದ್ದಂತೆಯೇ ವಿಷಯ ಪ್ರಸ್ತಾಪ ಮಾಡಿತ್ತು. ಮೇಕೆದಾಟು ವಿಚಾರವಾಗಿ ನಿಲುವಳಿ ಸೂಚನೆಗೆ ಅವಕಾಶ ಡಿಎಂಕೆ ಕೋರಿದ್ದು, ತಕ್ಷಣವೇ ಚರ್ಚೆ ನಡೆಸಬೇಕು ಎಂದು ಪಟ್ಟು ಹಿಡಿದ ಪ್ರಸಂಗ ನಡೆದಿತ್ತು. ಆದರೆ ಪ್ರಸ್ತಾವನೆಗೆ ಸ್ಪೀಕರ್ ಓಂ ಬಿರ್ಲಾ ನಿರಾಕರಿಸಿದ ಕಾರಣ ಲೋಕಸಭೆ ಸದನದ ಬಾವಿಗಿಳಿದು ಡಿಎಂಕೆ‌ ಸಂಸದರು ಪ್ರತಿಭಟನೆ ನಡೆಸಿದ್ದರು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಬೆಂಗಳೂರಿನಲ್ಲಿ ‘ಜನ ನಾಯಗನ್’ ಚಿತ್ರಕ್ಕೆ ಕ್ರೇಜ್ ಹೇಗಿದೆ? ವಿಡಿಯೋ ನೋಡಿ.. – Kannada News | Thalapathy Vijay fans reaction after watching Jana Nayagan movie in Bengaluru

ದಳಪತಿ ವಿಜಯ್ ನಟನೆಯ ಕೊನೇ ಸಿನಿಮಾ ‘ಜನ ನಾಯಗನ್’ (Jana Nayagan) ಇಂದು (ಜುಲೈ 23) ಬಿಡುಗಡೆ ಆಗಿದೆ. ಬೆಂಗಳೂರಿನಲ್ಲಿ ಇರುವ ಅಭಿಮಾನಿಗಳು ಸಿನಿಮಾವನ್ನು ನೋಡಲು ಚಿತ್ರಮಂದಿರಕ್ಕೆ ಬಂದಿದ್ದಾರೆ. ಮಾಗಡಿ ರಸ್ತೆಯಲ್ಲಿರುವ ‘ಅಂಜನ್’ ಚಿತ್ರಮಂದಿರದಲ್ಲಿ ಸಂಭ್ರಮ ಜೋರಾಗಿದೆ. ವಿಜಯ್ ಅವರ ಕಟೌಟ್​​ಗಳು ರಾರಾಜಿಸುತ್ತಿವೆ. ‘ಸಿನಿಮಾದಲ್ಲಿ ಒಳ್ಳೆಯ ಮೆಸೇಜ್ ಇದೆ. ಬೆಳಗ್ಗೆ 6 ಗಂಟೆಯ ಶೋ ನೋಡಿದ್ದೇನೆ. ಈಗ ಎರಡನೇ ಬಾರಿ ಸಿನಿಮಾ ನೋಡುತ್ತಿದ್ದೇವೆ. ಎಲ್ಲರೂ ಬಂದು ಸಿನಿಮಾ ನೋಡಿ. ಯಾರೂ ಮಿಸ್ ಮಾಡಿಕೊಳ್ಳಬೇಡಿ’ ಎಂದು ಚಿತ್ರಮಂದಿರದ ಮುಂದೆ ನೆರೆದಿದ್ದ ಅಭಿಮಾನಿಗಳು ಹೇಳಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಈ ಮೊದಲೇ ‘ಜನ ನಾಯಗನ್’ ಬಿಡುಗಡೆ ಆಗಿರಬೇಕಿತ್ತು. ಆದರೆ ಸೆನ್ಸಾರ್ ಸಮಸ್ಯೆಯಿಂದ 7 ತಿಂಗಳ ಬಳಿಕ ರಿಲೀಸ್ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ನೀವು ಐಟಿ ರಿಟರ್ನ್ಸ್ ಸಲ್ಲಿಸಿ 6 ವರ್ಷಗಳವರೆಗೆ ಈ ದಾಖಲೆಗಳು ಜೊತೆಯಲ್ಲಿರಲಿ: ತೆರಿಗೆ ತಜ್ಞರ ಸಲಹೆ – Kannada News | Income Tax Return, experts suggests to keep these ITR documents for 6 years after filing

ಆದಾಯ ತೆರಿಗೆ ರಿಟರ್ನ್ ಸಲ್ಲಿಕೆಯಲ್ಲಿ (IT Returns) ಒಂದಷ್ಟು ತಪ್ಪು ತಿಳಿವಳಿಕೆ ಬಹಳ ಜನರಲ್ಲಿ ಇದೆ. ಐಟಿಆರ್ ಸಲ್ಲಿಕೆ ಯಶಸ್ವಿಯಾಗಿಬಿಟ್ಟರೆ ತಮ್ಮ ಜವಾಬ್ದಾರಿ ಮುಗಿಯಿತು ಎಂದು ಭಾವಿಸುವುದು ತಪ್ಪು. ತಜ್ಞರ ಪ್ರಕಾರ, ಐಟಿಆರ್ ಸಲ್ಲಿಸಿದ ನಂತರವೂ ಪರಿಶೀಲನೆಗಳು ನಡೆಯುತ್ತಿರುತ್ತವೆ. ನಿಮ್ಮ ಹಿಂದಿನ ವರ್ಷಗಳಲ್ಲಿ ಗಮನಾರ್ಹವಾದ ಯಾವುದಾದರೂ ವ್ಯತ್ಯಾಸಗಳು ಕಂಡುಬಂದಲ್ಲಿ ಇಲಾಖೆಯು ನಿಮ್ಮ ಐಟಿಆರ್​ಗಳನ್ನು ಕೂಲಂಕಷವಾಗಿ ಪರಿಶೀಲಿಸುತ್ತದೆ. ಹೀಗಾಗಿ, ಐಟಿಆರ್ ಸಲ್ಲಿಕೆಯಾಗಿ 6 ವರ್ಷಗಳವರೆಗೆ ಕೆಲ ದಾಖಲೆಗಳನ್ನು ಇಟ್ಟುಕೊಂಡಿರಬೇಕು ಎಂದು ತಜ್ಞರು ಹೇಳುತ್ತಾರೆ.

  1. ಐಟಿಆರ್ ಪ್ರತಿ: ನೀವು ಅಸೆಸ್ಮೆಂಟ್ ವರ್ಷಕ್ಕೆ ಸಲ್ಲಿಸಿದ ಐಟಿಆರ್ ಫಾರ್ಮ್ ಅನ್ನು ಇಟ್ಟುಕೊಂಡಿರಬೇಕು. ಇದು ಒಂದು ರೀತಿಯಲ್ಲಿ ಚೆಕ್​ಲಿಸ್ಟ್ ಇದ್ದಂತೆ. ನೀವು ಏನೇನು ನಮೂದಿಸಿದ್ದೀರಿ ಎಂಬುದನ್ನು ನೋಡಲು ಈ ಫಾರ್ಮ್ ಅಗತ್ಯ.
  2. ITR-V ಸ್ವೀಕೃತಿ: ನೀವು ಸಲ್ಲಿಸಿದ ರಿಟರ್ನ್ ಯಶಸ್ವಿಯಾಗಿದ್ದು, ಇ-ವೆರಿಫಿಕೇಶನ್ ಪಡೆದಿರುವುದಕ್ಕೆ ಇದು ಸಾಕ್ಷಿ. ಯಾವ ಸಮಯಕ್ಕೆ ಸಲ್ಲಿಕೆಯಾಯಿತು ಎನ್ನುವುದಕ್ಕೆ ಇದು ಸಾಕ್ಷಿಯಾಗಿರುತ್ತದೆ.
  3. ಟಿಡಿಎಸ್ ಸರ್ಟಿಫಿಕೇಟ್, ಫಾರ್ಮ್ 26ಎಎಸ್: ನಿಮ್ಮ ಪ್ಯಾನ್ ಬಳಸಿ ಮಾಡಲಾದ ವಹಿವಾಟುಗಳು, ಪಾವತಿಗಳು ಎಐಎಸ್ ರೆಕಾರ್ಡ್, ಫಾರ್ಮ್ 26ಎಎಸ್, ಟಿಡಿಎಸ್ ಸರ್ಟಿಫಿಕೇಟ್​ಗಳಲ್ಲಿ ನಮೂದಾಗಿರುತ್ತವೆ. ಈ ದಾಖಲೆಗಳು ನಿಮ್ಮ ತೆರಿಗೆ ಪಾವತಿಗೆ ಸಾಕ್ಷಿಯಾಗಿರುತ್ತವೆ.
  4. ಬ್ಯಾಂಕ್ ಸ್ಟೇಟ್ಮೆಂಟ್ಸ್: ನಿಮ್ಮ ಖಾತೆಗಳಿಗೆ ಹಣ ಎಲ್ಲಿಂದ, ಎಷ್ಟೆಷ್ಟು ಬಂತು ಎಂಬುದಕ್ಕೆ ಬ್ಯಾಂಕ್ ಅಕೌಂಟ್ ಸ್ಟೇಟ್ಮೆಂಟ್​ಗಳು ಸಾಕ್ಷಿಯಾಗಿರುತ್ತವೆ. ತೆರಿಗೆ ಅಧಿಕಾರಿಗಳು ಬೇಗ ಕನ್ವಿನ್ಸ್ ಆಗುವುದು ಬ್ಯಾಂಕ್ ಸ್ಟೇಟ್ಮೆಂಟ್ಸ್​ನಿಂದಲೇ.
  5. ಆಸ್ತಿ ಖರೀದಿ ಪತ್ರ, ಕ್ಯಾಪಿಟಲ್ ಗೇನ್: ಆಸ್ತಿ ಖರೀದಿ ಪತ್ರ, ಆಸ್ತಿ ಮಾರಾಟ ಪತ್ರ, ಹೋಮ್ ಲೋನ್ ಸ್ಟೇಟ್ಮೆಂಟ್, ಕ್ಯಾಪಿಟಲ್ ಗೇನ್ಸ್ ವರ್ಕ್​ಶೀಟ್ ಇತ್ಯಾದಿ ಕಾಗದಪತ್ರಗಳನ್ನು ಇಟ್ಟುಕೊಂಡಿರುವುದು ಉತ್ತಮ.
  6. ಫಾರ್ಮ್ 16/ ಸ್ಯಾಲರಿ ಸರ್ಟಿಫಿಕೇಟ್: ನಿಮ್ಮ ಸಂಬಳದ ಆದಾಯ, ಸಂಬಳದಲ್ಲಿ ಮುರಿದುಕೊಳ್ಳಲಾದ ತೆರಿಗೆಯನ್ನು ಈ ದಾಖಲೆಗಳು ತೋರಿಸುತ್ತವೆ. ಸರಿಯಾದ ಮೊತ್ತದ ರೀಫಂಡ್ ಕ್ಲೇಮ್ ಮಾಡಲಾಗಿದೆಯಾ ಎಂದು ಪರಿಶೀಲಿಸಲು ಇರುವ ದಾಖಲೆಗಳಲ್ಲಿ ಇದೂ ಒಂದು.

ಇದನ್ನೂ ಓದಿ: ತಿಳಿವಳಿಕಸ್ಥರಿಗೆ ಪಿಎಫ್ ಸಾಕು ಎನ್ನುತ್ತಿದೆ ಇಪಿಎಫ್​ಒ; ಇಪಿಎಫ್ ಮತ್ತು ವಿಪಿಎಫ್ ಸಂಯೋಜನೆಯಿಂದ ಕೋಟಿ ಗಳಿಕೆ ಹೇಗೆ ಸಾಧ್ಯ?

ನೀವು ಮನೆ, ಜಮೀನು, ನಿವೇಶನದಂತಹ ಚಿರಾಸ್ತಿಯನ್ನು ಮಾರಾಟ ಮಾಡಿದಾಗ ಕ್ಯಾಪಿಟಲ್ ಗೇನ್ ಟ್ಯಾಕ್ಸ್ ಕಟ್ಟಬೇಕಾಗುತ್ತದೆ. ನೀವು ಹಿಂದೆ ಖರೀದಿಸಿದ ಆಸ್ತಿಯ ದಾಖಲೆಯಲ್ಲಿ ನಮೂದಾಗಿರುವ ಹಣವೆಷ್ಟು, ಕ್ಯಾಪಿಟಲ್ ಗೇನ್ ಎಷ್ಟು, ಅದಕ್ಕೆ ತೆರಿಗೆ ಎಷ್ಟು ಎಂದು ಲೆಕ್ಕ ಮಾಡಬೇಕಾಗುತ್ತದೆ. ಹೀಗಾಗಿ, ಆ ದಾಖಲೆಗಳು ಬೇಕಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಉಸಿರಾಟ ಸಂಬಂಧಿ ಕಾಯಿಲೆಗಳು: ಸಾರ್ವಜನಿಕ ಸ್ಥಳಗಳಲ್ಲಿ ಪಾರಿವಾಳಗಳಿಗೆ ಆಹಾರ ಹಾಕುವಂತಿಲ್ಲ; ಮಾರ್ಗಸೂಚಿ ಪ್ರಕಟ – Kannada News | Feeding Pigeons in Public Places Prohibited: Health Department Issues Public Safety Guidelines

ಬೆಂಗಳೂರು, ಜುಲೈ 23: ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ರಾಜಧಾನಿ ಬೆಂಗಳೂರಿನಲ್ಲಿ (Bengaluru) ಪಾರಿವಾಳಗಳಿಗೆ ಆಹಾರ (pigeon feeding) ಹಾಕುವುದನ್ನು ನಿಯಂತ್ರಿಸಲು ಆರೋಗ್ಯ ಇಲಾಖೆ ಮಾರ್ಗಸೂಚಿ ಹೊರಡಿಸಿದೆ. ನಿಯಂತ್ರಣವಿಲ್ಲದೆ ಆಹಾರ ಹಾಕುವುದರಿಂದ ಪಾರಿವಾಳಗಳ ಸಂಖ್ಯೆ ಹೆಚ್ಚಳವಾಗಿ ಅವುಗಳ ಮಲ ಮತ್ತು ಗರಿಗಳಿಂದ ಉಸಿರಾಟ ಸಂಬಂಧಿ ಕಾಯಿಲೆಗಳ ಅಪಾಯ ಹೆಚ್ಚುತ್ತಿರುವ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದೆ. ಹೀಗಾಗಿ ಆರೋಗ್ಯಕ್ಕೆ ಅಪಾಯ ಅಥವಾ ಸಾರ್ವಜನಿಕರಿಗೆ ತೊಂದರೆ ಉಂಟಾಗುವ ಪ್ರದೇಶಗಳಲ್ಲಿ ಪಾರಿವಾಳಗಳಿಗೆ ಆಹಾರ ಹಾಕುವುದಕ್ಕೆ ಸಂಪೂರ್ಣ ನಿರ್ಬಂಧ ವಿಧಿಸಲಾಗಿದೆ.

ಮಕ್ಕಳು, ವೃದ್ಧರ ಆರೋಗ್ಯದ ಮೇಲೆ ಪರಿಣಾಮ

ಪಾರಿವಾಳಗಳ ಮಲ ಮತ್ತು ಗರಿಗಳಿಂದ ಹರಡುವ ಸೂಕ್ಷ್ಮ ಕಣಗಳು ಶ್ವಾಸಕೋಶದ ಉರಿಯೂತ, ಅಲರ್ಜಿ ಹಾಗೂ ತೀವ್ರ ಉಸಿರಾಟದ ತೊಂದರೆಗೆ ಕಾರಣವಾಗುತ್ತಿವೆ. ವಿಶೇಷವಾಗಿ ಮಕ್ಕಳು, ವೃದ್ಧರು ಮತ್ತು ಈಗಾಗಲೇ ಶ್ವಾಸಕೋಶದ ಕಾಯಿಲೆಯಿಂದ ಬಳಲುತ್ತಿರುವವರಿಗೆ ಇದರಿಂದ ಹೆಚ್ಚಿನ ಅಪಾಯ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಗ್ರೇಟರ್ ಬೆಂಗಳೂರು ಅಥಾರಿಟಿ ಹಾಗೂ ಸ್ಥಳೀಯ ಸಂಸ್ಥೆಗಳು ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಸೂಚಿಸಲಾಗಿದೆ.

ಇದನ್ನೂ ಓದಿ: ಎಚ್ಚರ ಎಚ್ಚರ: ಇನ್ಮುಂದೆ ಪಾರಿವಾಳಗಳಿಗೆ ಆಹಾರ ಹಾಕುವಂತಿಲ್ಲ, ಉಲ್ಲಂಘನೆ ಮಾಡಿದ್ರೆ ಜೈಲು

ಹೊಸ ಮಾರ್ಗಸೂಚಿಯಲ್ಲೇನಿದೆ?

  • ಸ್ಥಳ ಮತ್ತು ಸಮಯದ ಮಿತಿ: ರಸ್ತೆ, ಪಾದಚಾರಿ ಮಾರ್ಗ, ಉದ್ಯಾನವನ ಹಾಗೂ ಖಾಸಗಿ ಜಾಗಗಳಲ್ಲಿ ಅನಿಯಂತ್ರಿತವಾಗಿ ಆಹಾರ ಹಾಕುವಂತಿಲ್ಲ. ಸ್ಥಳೀಯ ಸಂಸ್ಥೆಗಳು ಗುರುತಿಸಿದ ನಿಗದಿತ ಸ್ಥಳಗಳಲ್ಲಿ ಮಾತ್ರ, ಅದೂ ಬೆಳಿಗ್ಗೆ 7 ಗಂಟೆಯಿಂದ 9 ಗಂಟೆಯವರೆಗೆ ಮಾತ್ರ ಆಹಾರ ನೀಡಲು ಅನುಮತಿ ನೀಡಲಾಗಿದೆ.
  • ಎನ್‌ಜಿಒಗಳಿಗೆ ಜವಾಬ್ದಾರಿ: ಆಹಾರ ನೀಡುವ ಜವಾಬ್ದಾರಿಯನ್ನು ಮಾನ್ಯತೆ ಪಡೆದ ಎನ್‌ಜಿಒ ಅಥವಾ ದತ್ತಿ ಸಂಸ್ಥೆಗಳು ವಹಿಸಿಕೊಳ್ಳಬೇಕು. ನಿಗದಿತ ಸ್ಥಳದ ಸ್ವಚ್ಛತೆ, ನಿರ್ವಹಣೆ ಹಾಗೂ ಸಾರ್ವಜನಿಕರ ದೂರುಗಳನ್ನು ಈ ಸಂಸ್ಥೆಗಳೇ ನಿರ್ವಹಿಸಬೇಕು.
  • ಅಪಾರ್ಟ್‌ಮೆಂಟ್ ಮತ್ತು ಮನೆಗಳಿಗೆ ಸೂಚನೆ: ಮನೆಗಳ ಮೇಲ್ಚಾವಣಿ (ಟೆರೇಸ್), ಬಾಲ್ಕನಿ ಹಾಗೂ ಕಟ್ಟಡಗಳ ಸುತ್ತಮುತ್ತ ಹೆಚ್ಚಿನ ಪ್ರಮಾಣದಲ್ಲಿ ಪಾರಿವಾಳಗಳಿಗೆ ಆಹಾರ ಹಾಕದಂತೆ ನಿವಾಸಿಗಳಿಗೆ ಹಾಗೂ ಅಪಾರ್ಟ್‌ಮೆಂಟ್ ಸಂಘಗಳಿಗೆ ಸ್ಪಷ್ಟ ನಿರ್ದೇಶನ ನೀಡಲಾಗಿದೆ.
  • ವಿಮಾನ ಸುರಕ್ಷತೆ: ವಿಮಾನ ಯಾನಕ್ಕೆ ಧಕ್ಕೆಯಾಗದಂತೆ ವಿಮಾನ ನಿಲ್ದಾಣಗಳ ಸುತ್ತಮುತ್ತ ಪಾರಿವಾಳಗಳಿಗೆ ಆಹಾರ ನೀಡುವ ಕೇಂದ್ರಗಳನ್ನು ಸ್ಥಾಪಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
  • ಇನ್ನು ಸಾರ್ವಜನಿಕರಲ್ಲಿ ಈ ಕುರಿತು ಜಾಗೃತಿ ಮೂಡಿಸಲು ಬ್ಯಾನರ್, ಮಾಹಿತಿ ಫಲಕ ಹಾಗೂ ಡಿಜಿಟಲ್ ಅಭಿಯಾನಗಳನ್ನು ಕೈಗೊಳ್ಳಲು ಸ್ಥಳೀಯ ಸಂಸ್ಥೆಗಳಿಗೆ ಸೂಚಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

‘ಯಾವುದೇ ಸ್ಥಳದಲ್ಲಿ ಯಾವ ಸಮಯದಲ್ಲಾದರೂ ಚರ್ಚೆಗೆ ಸಿದ್ಧ’; 4ನೇ ಬಾರಿಗೆ ಸಿಜೆಪಿಗೆ ಆಹ್ವಾನ ನೀಡಿದ ಕೇಂದ್ರ ಸರ್ಕಾರ – Kannada News | ‘Your Convenience, Any Place, Any Time’; Modi Government invites CJP Protesters For Talks For Fourth Time

ನವದೆಹಲಿ, ಜುಲೈ 23: ಕಾಕ್ರೋಚ್ ಜನತಾ ಪಾರ್ಟಿಯ (CJP) ಪ್ರತಿನಿಧಿಗಳನ್ನು ಚರ್ಚೆಗೆ ಬರುವಂತೆ ಕೇಂದ್ರ ಸರ್ಕಾರ 4ನೇ ಬಾರಿಗೆ ಆಹ್ವಾನಿಸುತ್ತಿದೆ ಎಂದು ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್ (Jitendra Singh) ಇಂದು ತಿಳಿಸಿದ್ದಾರೆ. ಚರ್ಚೆಗಾಗಿ ಸರ್ಕಾರ ಈಗಾಗಲೇ 4 ಅಧಿಕೃತ ಪ್ರಸ್ತಾವನೆಗಳನ್ನು ಕಳುಹಿಸಿಕೊಟ್ಟಿದ್ದು, ಯಾವುದೇ ಸಮಯದಲ್ಲಿಯಾದರೂ ಮಾತುಕತೆ ನಡೆಸಲು ಮುಕ್ತವಾಗಿದೆ ಎಂದು ಅವರು ಹೇಳಿದ್ದಾರೆ. ಈ ಪರಿಷ್ಕೃತ ಪ್ರಸ್ತಾವನೆಯ ಕುರಿತು ಮಾತನಾಡಿದ ಕೇಂದ್ರ ಸಚಿವ ಜಿತೇಂದ್ರ ಸಿಂಗ್, ನಿನ್ನೆ ಮಧ್ಯಾಹ್ನದಿಂದಲೇ ಸಿಜೆಪಿ ಪ್ರತಿನಿಧಿಗಳಿಗೆ ಆಹ್ವಾನ ಕಳುಹಿಸಲಾಗಿದೆ. ನಿನ್ನೆ ಮಧ್ಯಾಹ್ನದಿಂದ ಇದುವರೆಗೂ 4 ಬಾರಿ ಅವರನ್ನು ಮಾತುಕತೆಗೆ ಆಹ್ವಾನಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ವಿದ್ಯಾರ್ಥಿ ಸಂಘಟನೆಯ ಅನುಕೂಲಕ್ಕೆ ತಕ್ಕಂತೆ ಎಲ್ಲಾ ವಿಷಯಗಳ ಬಗ್ಗೆ ಚರ್ಚಿಸಲು ಸರ್ಕಾರ ಸಿದ್ಧವಿದೆ. ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಅವರ ಕಚೇರಿ ಅಥವಾ ನಿವಾಸ ಎರಡದಲ್ಲಿ ಎಲ್ಲಿ ಬೇಕಾದರೂ ಸಭೆಗಳನ್ನು ನಡೆಸಬಹುದು ಎಂದು ಜಿತೇಂದ್ರ ಸಿಂಗ್ ಹೇಳಿದ್ದಾರೆ.

ಇದನ್ನೂ ಓದಿ: ಸಂಧಾನದ ವೇಳೆ ಬೇಡಿಕೆ ಬದಲಾಯಿಸಿದ ರಾಹುಲ್ ಗಾಂಧಿ; ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಆರೋಪ

“ನಾವು ಯಾವುದೇ ಪ್ರತಿಷ್ಠೆಯ ಬಗ್ಗೆ ಯೋಚಿಸುತ್ತಿಲ್ಲ. ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಮತ್ತು ನಾನು ಇಬ್ಬರೂ ಚರ್ಚೆಯಲ್ಲಿ ಭಾಗವಹಿಸಲಿದ್ದೇವೆ. ಮಾತುಕತೆಯ ಮೂಲಕವೇ ನಾವು ಪರಿಹಾರ ಕಂಡುಕೊಳ್ಳಬಹುದು. ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ಮತ್ತು ಮಾತುಕತೆಯ ಮೂಲಕ ಪ್ರತಿಯೊಂದು ಸಮಸ್ಯೆಯನ್ನು ಬಗೆಹರಿಸುವುದೇ ಸರ್ಕಾರದ ಮುಖ್ಯ ಆದ್ಯತೆಯಾಗಿದೆ” ಎಂದು ಜಿತೇಂದ್ರ ಸಿಂಗ್ ಪುನರುಚ್ಚರಿಸಿದ್ದಾರೆ.

ಇದಕ್ಕೂ ಮುನ್ನ ಪ್ರಧಾನಮಂತ್ರಿ ನರೇಂದ್ರ ಮೋದಿ ಪೇಪರ್ ಲೀಕ್ ಪ್ರಕರಣಗಳಲ್ಲಿ ಭಾಗಿಯಾದವರಿಗೆ ತುರ್ತು ನ್ಯಾಯ ಒದಗಿಸಲು ಮತ್ತು ಕಠಿಣ ಶಿಕ್ಷೆ ವಿಧಿಸಲು ಫಾಸ್ಟ್ ಟ್ರ್ಯಾಕ್ ಕೋರ್ಟ್‌ಗಳನ್ನು ಸ್ಥಾಪಿಸುವುದಾಗಿ ಘೋಷಿಸಿದ್ದರು.

ಇದನ್ನೂ ಓದಿ: ನೀಟ್ ಪೇಪರ್ ಸೋರಿಕೆ: ಮೌನ ಮುರಿದ ಪ್ರಧಾನಿ, ಫಾಸ್ಟ್​ ಟ್ರ್ಯಾಕ್ ಕೋರ್ಟ್​ ಮಾಡಿ ಅಪರಾಧಿಗಳಿಗೆ ಶಿಕ್ಷೆ ಕೊಡ್ತೀವಿ ಎಂದ ಮೋದಿ

ನೀಟ್ (NEET) ಪೇಪರ್ ಲೀಕ್ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ಸಾವಿರಾರು ವಿದ್ಯಾರ್ಥಿಗಳು ಸಂಸತ್ತಿಗೆ ಮುತ್ತಿಗೆ ಹಾಕಲು ಯತ್ನಿಸಿದ ಬೆನ್ನಲ್ಲೇ ಕೇಂದ್ರ ಸರ್ಕಾರದಿಂದ ಈ ಸಂಧಾನ ಮಾತುಕತೆಯ ಆಫರ್ ಬಂದಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version