ಸತತ ಆರನೇ ದಿನ ಷೇರು ಮಾರುಕಟ್ಟೆ ಕುಸಿತ; ಹೂಡಿಕೆದಾರರಿಗೆ 17 ಲಕ್ಷ ಕೋಟಿ ರೂ ನಷ್ಟ – Kannada News | Indian Stock Market crash, 3pc down in 6 trading sessions, investors lose Rs 17 trillion
ನವದೆಹಲಿ, ಜನವರಿ 12: ಭಾರತದ ಷೇರು ಮಾರುಕಟ್ಟೆ (Stock Market) ಸತತವಾಗಿ ಕುಸಿಯುತ್ತಿದೆ. ಆರು ಟ್ರೇಡಿಂಗ್ ದಿನಗಳಿಂದ ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ಕೂಡ ಭಾರೀ ನಷ್ಟ ಕಂಡಿವೆ. ಬಾಂಬೆ ಸ್ಟಾಕ್ ಎಕ್ಸ್ಚೇಂಜ್ನ ಸೆನ್ಸೆಕ್ಸ್ ಆರು ಸೆಷನ್ಗಳಲ್ಲಿ 2,700 ಅಂಕಗಳನ್ನು ಕಳೆದುಕೊಂಡಿದೆ. ಅದು ಕಂಡ ನಷ್ಟ ಶೇ. 3. ಇನ್ನು, ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ನ ನಿಫ್ಟಿ ಸೂಚ್ಯಂಕ ಕೂಡ ಈ ಆರು ಸೆಷನ್ನಲ್ಲಿ ಶೇ. 3 ಹಿನ್ನಡೆ ಕಂಡಿದೆ. ಈ ಅವಧಿಯಲ್ಲಿ ಹೂಡಿಕೆದಾರರಿಗೆ 16-17 ಲಕ್ಷ ಕೋಟಿ…