‘ಪ್ರಾಣ ಕೊಟ್ಟೇವು, ಆದರೆ ಜಮೀನು ಬಿಡಲ್ಲ’: ಹೆಚ್​​ಎಎಲ್​​ಗಾಗಿ 600 ಎಕರೆ ಭೂಸ್ವಾಧೀನಕ್ಕೆ ರೈತರ ವಿರೋಧ – Kannada News | ‘We Will Give Our Lives, Not Our Land’: Tumakuru Farmers Siege KIADB Office Against 600 Acre Land Acquisition for HAL

ತುಮಕೂರು, ಜುಲೈ 22: ಬಿಡದಿ ಟೌನ್​​ಶಿಪ್​​ಗಾಗಿ ಭೂಸ್ವಾಧೀನ ವಿಚಾರ ಭಾರಿ ಹೋರಾಟಕ್ಕೆ ನಾಂದಿ ಹಾಡಿರುವ ನಡುವೆಯೇ ಇತ್ತ ತುಮಕೂರಲ್ಲೂ (Tumakuru) ತಮ್ಮ ಜಾಗಕ್ಕಾಗಿ ರೈತರು ಬೀದಿಗಿಳಿದಿರುವ ಘಟನೆ ನಡೆದಿದೆ. ಗುಬ್ಬಿ ತಾಲೂಕಿನಲ್ಲಿರು ಹೆಚ್‌ಎಎಲ್‌ ಘಟಕದ ವಿಸ್ತರಣೆಗೆ 600 ಎಕರೆ ಜಮೀನು ನೀಡುವ ಪ್ರಸ್ತಾವನೆಗೆ ರೈತರು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಕೆಐಎಡಿಬಿ ಕಚೇರಿಗೆ ಮುತ್ತಿಗೆ ಹಾಕಿದ್ದಾರೆ. ಪ್ರಾಣ ಕೊಟ್ಟೇವು, ಆದರೆ ಜಮೀನು ಬಿಡಲ್ಲ ಎಂದು ಐದು ಗ್ರಾಮಗಳ ರೈತರು ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.

ಫಲವತ್ತಾದ ಕೃಷಿ ಭೂಮಿ ಸ್ವಾಧೀನಕ್ಕೆ ಆಕ್ಷೇಪ

ಗುಬ್ಬಿ ತಾಲೂಕಿನ ಬಿದರೆಹಳ್ಳಿ ಕಾವಲ್‌ನಲ್ಲಿ ಇರುವ ಹೆಚ್‌ಎಎಲ್‌ ವಿಸ್ತರಣೆಗೆ ಮತ್ತೆ ಭೂಸ್ವಾಧೀನ ಪ್ರಕ್ರಿಯೆ ಆರಂಭವಾಗಿರುವ ಬೆನ್ನಲ್ಲೇ ರೈತರ ಆಕ್ರೋಶ ಭುಗಿಲೆದ್ದಿದೆ. ಈಗಾಗಲೇ ಸುಮಾರು ಸಾವಿರ ಎಕರೆ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಹೆಚ್‌ಎಎಲ್‌, ಈಗ ಮತ್ತೂ 600 ಎಕರೆ ಭೂಮಿಗಾಗಿ ಸರ್ಕಾರದ ಮೊರೆ ಹೋಗಿದೆ. ಆದರೆ ತಮ್ಮ ಫಲವತ್ತಾದ ಕೃಷಿ ಭೂಮಿಯನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ರೈತರು ಸ್ಪಷ್ಟಪಡಿಸಿದ್ದಾರೆ. ಕೆಐಎಡಿಬಿ ಗುರುತಿಸಿರುವ ಜಾಗದಲ್ಲಿ ತೆಂಗು, ಅಡಿಕೆ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆದು ರೈತರು ಜೀವನ ಸಾಗಿಸುತ್ತಿದ್ದಾರೆ. ನಮ್ಮ ಮುಂದಿನ ಪೀಳಿಗೆಯ ಭವಿಷ್ಯವೇ ಈ ಭೂಮಿ ಎಂಬುದು ಅನ್ನದಾತ ಮಾತು.

ಇದನ್ನೂ ಓದಿ: ಸೋಮಣ್ಣ ಹೇಳಿಕೆಗೆ ದನಿಗೂಡಿಸಿದ ಡಿಸಿಎಂ ಪರಮೇಶ್ವರ್​​; ತುಮಕೂರಲ್ಲೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಆಗ್ರಹ

ಭರವಸೆ ಉಲ್ಲಂಘಿಸಿರುವ ಆರೋಪ

ಸೋಪನಹಳ್ಳಿ, ಯಲ್ಲಾಪುರ, ತಿಮ್ಲಪಾಳ್ಯ, ಬಿದರೆಹಳ್ಳಿ ಕಾವಲ್ ಸೇರಿದಂತೆ ಐದು ಗ್ರಾಮಗಳ ರೈತರಿಂದ ಭೂಸ್ವಾಧೀನಕ್ಕೆ ತೀವ್ರ ವಿರೋಧ ಕೇಳಿಬಂದಿದ್ದು, ಫಲವತ್ತಾದ ಜಮೀನಿನ ಬದಲು ಸಾಮಾಜಿಕ ಅರಣ್ಯ, ಗೋಮಾಳ ಹಾಗೂ ಹುಲ್ಲುಬಂದಿ ಭೂಮಿಯನ್ನು ಬಳಸಿಕೊಳ್ಳುವಂತೆ ಒತ್ತಾಯಿಸಿದ್ದಾರೆ. ಮೊದಲ ಹಂತದಲ್ಲಿ ಭೂಮಿ ಕಳೆದುಕೊಂಡ ರೈತರಿಗೆ ಶಾಶ್ವತ ಉದ್ಯೋಗ ನೀಡದೆ, ಗುತ್ತಿಗೆ ಆಧಾರದಲ್ಲಿ ಮಾತ್ರ ಡಿ ದರ್ಜೆ ಕೆಲಸ ನೀಡಿ ಭರವಸೆ ಉಲ್ಲಂಘಿಸಲಾಗಿದೆ ಎಂದೂ ಪ್ರತಿಭಟನಾಕಾರರು ದೂರಿದ್ದಾರೆ. ಕಾಂಗ್ರೆಸ್ ಮುಖಂಡ ಮುರಳೀಧರ ಹಾಲಪ್ಪ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದ್ದು, ಶಾಸಕ ಎಸ್.ಆರ್. ಶ್ರೀನಿವಾಸ್ ಅವರ ಪತ್ನಿ ಆರತಿ ಕೂಡ ರೈತರ ಪರವಾಗಿ ಧ್ವನಿ ಎತ್ತಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 5:40 pm, Wed, 22 July 26

Source link

ಕೈಕೊಟ್ಟ ಮಳೆ: ಬಳ್ಳಾರಿ, ವಿಜಯನಗರದಿಂದ ಬರೋಬ್ಬರಿ 13,000 ಮಂದಿ ಗುಳೆ? – Kannada News | Drought Hits Hard: Over 13,000 People Migrate from Ballari and Vijayanagara Thandas as Monsoon Fails

ಖಾಲಿ ಖಾಲಿಯಾಗಿರುವ ಮನೆಗಳುImage Credit source: Tv9 Kannada

ಬಳ್ಳಾರಿ, ಜುಲೈ 22: ಮುಂಗಾರು ಮಳೆ ಕೈಕೊಟ್ಟಿರುವ ಪರಿಣಾಮ ಬಳ್ಳಾರಿ, ವಿಜಯನಗರ ಜಿಲ್ಲೆಗಳ ಜನ ಕಂಗೆಟ್ಟಿದ್ದು, ಕುಟುಂಬ ಸಮೇತ ಗುಳೆ ಹೊರಟಿದ್ದಾರೆ. ಜಿಲ್ಲೆಯ ನೂರಾರು ತಾಂಡಾ ಹಾಗೂ ಹಳ್ಳಿಗಳ ಸಾವಿರಾರು ಜನ ತಂಡೋಪ ತಂಡವಾಗಿ ಊರುಬಿಡುತ್ತಿದ್ದು, ಇದು ಜಿಲ್ಲೆಯಲ್ಲಿನ ಭೀಕರ ಬರಗಾಲಕ್ಕೆ ಹಿಡಿದ ಕೈಗನ್ನಡಿಯಂತಿದೆ. ಮನೆಯಲ್ಲಿ ಹಿರಿ ಜೀವಗಳು ಹಾಗೂ ಪುಟಾಣಿ ಮಕ್ಕಳನ್ನ ಬಿಟ್ಟು ಉಳಿದವರೆಲ್ಲ ಹೊಟ್ಟೆ ತುಂಬಿಸಿಕೊಳ್ಳಲು ಅನ್ಯ ಊರುಗಳತ್ತ ಮುಖ ಮಾಡಿದ್ದಾರೆ.

140 ತಾಂಡಾಗಳಿಂದ 13,000 ಮಂದಿ ಗುಳೆ?

ಬರದ ಛಾಯೆ ಹಿನ್ನೆಲೆ ತಾಂಡಾಗಳಿಂದಲೇ ಅತೀ ಹೆಚ್ಚು ಜನ ಗುಳೆ ಹೊರಟಿದ್ದಾರೆ. ಸ್ಥಳೀಯರು ಹೇಳುವಂತೆ ಬಳ್ಳಾರಿ ಜಿಲ್ಲೆಯಲ್ಲಿರುವ 20 ತಾಂಡಾಗಳಿಂದ 3,000ಕ್ಕೂ ಹೆಚ್ಚು ಜನ ಮತ್ತು ವಿಜಯನಗರ ಜಿಲ್ಲೆಯಲ್ಲಿನ 120 ತಾಂಡಾಗಳಿಂದ 10,000ಕ್ಕೂ ಹೆಚ್ಚು ಮಂದಿ ಊರು ತೊರೆದಿದ್ದಾರೆ. ಬೆಂಗಳೂರು, ಗೋವಾ, ಮಹಾರಾಷ್ಟ್ರ ಹೀಗೆ ಬೇರೆ ಬೇರೆ ಕಡೆ ಉದ್ಯೋಗ ಅರಸಿ ಹೊರಟಿದ್ದಾರೆ ಎನ್ನಲಾಗಿದೆ. ಆದರೆ ಈ ಬಗ್ಗೆ ಜಿಲ್ಲಾಡಳಿತವಾಗಲಿ ಅಧಿಕಾರಿಗಳಾಗಲೀ ಇನ್ನೂ ಅಧಿಕೃತ ಮಾಹಿತಿಯನ್ನು ಹಂಚಿಕೊಂಡಿಲ್ಲ.

ಇದನ್ನೂ ಓದಿ: ರಾಜ್ಯದಲ್ಲಿ ಭೀಕರ ಬರಗಾಲದ ಛಾಯೆ; ಕೆರೆಗಳು ಬರಡು, ಬೆಳೆ ಒಣಗಿ ಅನ್ನದಾತ ಕಂಗಾಲು!

ಸ್ಥಳೀಯವಾಗಿ ಉದ್ಯೋಗದ ಅಭಾವ

ಮಳೆ ಇಲ್ಲದೆ ಕೃಷಿ ಚಟುವಟಿಕೆಗಳನ್ನು ಮಾಡಲು ಸಾಧ್ಯವಿಲ್ಲ. ಇದುವರೆಗೂ ಬಿತ್ತನೆ ಕಾರ್ಯವೂ ಆರಂಭವಾಗಿಲ್ಲ. ಇತ್ತ ಉದ್ಯೋಗ ಖಾತ್ರಿ ಯೋಜನೆಗಳಡಿಯೂ (ಈಗಿನ ವಿಬಿ ಜಿ ರಾಮ್​​ ಜಿ) ಸಮರ್ಪಕವಾಗಿ ಕೆಲಸ ಸಿಗುತ್ತಿಲ್ಲ. ಉದ್ಯೋಗ ಕೊಡಿಸುವಲ್ಲಿ ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದ್ದು, ಅಧಿಕಾರಿಗಳ ಕಿವಿ ಹಿಂಡಿ ಸ್ಥಳೀಯವಾಗಿ ಕೆಲಸ ಕೊಡಿಸಬೇಕಿದ್ದ ಜನಪ್ರತಿನಿಧಿಗಳೂ ಮೌನಕ್ಕೆ ಜಾರಿದ್ದಾರೆ. ಹೀಗಾಗಿ ಇಲ್ಲೇ ಇದ್ದರೆ ಮುಂದೆ ಉಪವಾಸ ಇರಬೇಕಾದ ಸ್ಥಿತಿ ಬರಲಿದೆ ಎಂಬ ಕಾರಣಕ್ಕೆ ಊರು ತೊರೆಯೋದು ಇಲ್ಲಿನವರಿಗೆ ಅನಿವಾರ್ಯ ಎಂಬುದು ಸಾರ್ವಜನಿಕರ ಮಾತು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಪತ್ನಿಗೆ ಗೃಹಲಕ್ಷ್ಮಿ ಹಣ ಬಂದಿಲ್ಲ: ಕೊಪ್ಪಳದಲ್ಲಿ ಸಿಎಂಗೆ ಪತ್ರ ಬರೆದು ಪತಿ ಏಕಾಂಗಿ ಧರಣಿ – Kannada News | Gruhalakshmi Fund Denied: Koppal Man Protests Technical Glitch Hiding Wife’s Aid

ಕೊಪ್ಪಳ ಜು 22: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಗೃಹಲಕ್ಷ್ಮಿ’ ಯೋಜನೆಯ ಹಣ ಪತ್ನಿಗೆ ತಲುಪಿಲ್ಲ ಎಂದು ಆಕ್ರೋಶಗೊಂಡ ಪತಿಯೊಬ್ಬರು ಕೊಪ್ಪಳದ ಜಿಲ್ಲಾಡಳಿತ ಭವನದ ಮುಂಭಾಗದಲ್ಲಿ ಏಕಾಂಗಿಯಾಗಿ ಪ್ರತಿಭಟನೆಗೆ ಕುಳಿತ ಅಪರೂಪದ ಘಟನೆ ನಡೆದಿದೆ. ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಹಾಬಲಕಟ್ಟಿ ಗ್ರಾಮದ ಶರಣಪ್ಪ ಭೋವಿ ಎಂಬುವರೇ ತಮ್ಮ ಪತ್ನಿ ಶಿಲ್ಪಾ ಭೋವಿ ಅವರಿಗೆ ಗೃಹಲಕ್ಷ್ಮಿ ಹಣ ಸಿಗದಿದ್ದಕ್ಕೆ ಧರಣಿ ಕುಳಿತಿರುವ ವ್ಯಕ್ತಿಯಾಗಿದ್ದಾರೆ. ಶರಣಪ್ಪ ಅವರ ಪತ್ನಿ ಶಿಲ್ಪಾ ಭೋವಿ ಅವರು ಸರ್ಕಾರಿ ಶಾಲೆಯಲ್ಲಿ ಅತಿಥಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಳೆದ ಮೂರು ವರ್ಷಗಳಿಂದ ಗೃಹಲಕ್ಷ್ಮಿ ಯೋಜನೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಶರಣಪ್ಪ ಅವರು ಅಲೆದಾಡುತ್ತಿದ್ದಾರೆ. ಆದರೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಪ್ರತಿ ಬಾರಿಯೂ ‘ತಾಂತ್ರಿಕ ಕಾರಣ’ ನೆಪವೊಡ್ಡಿ ಹಣ ತಡೆಹಿಡಿದಿದ್ದಾರೆ ಎಂದು ಆರೋಪಿಸಲಾಗಿದೆ. ಅರ್ಜಿ ಸಲ್ಲಿಸಲು, ಅಧಿಕಾರಿಗಳ ಕಚೇರಿಗೆ ಅಲೆಯಲು ಮತ್ತು ತಾಂತ್ರಿಕ ದೋಷ ಸರಿಪಡಿಸಲು ಶರಣಪ್ಪ ಭೋವಿ ಅವರು ಇದುವರೆಗೆ ಬರೋಬ್ಬರಿ 25,000 ರೂಪಾಯಿ ಖರ್ಚು ಮಾಡಿಕೊಂಡಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಈ ವಾರ ತೆರೆಗೆ ಬರುತ್ತಿವೆ ಆಸಕ್ತಿಕರ ಸಿನಿಮಾಗಳು, ಪಟ್ಟಿ ಇಲ್ಲಿದೆ – Kannada News | Movies releasing this week in theaters here is the list

ಪ್ರಜ್ವಲ್ ದೇವರಾಜ್, ರಾಜ್ ಬಿ ಶೆಟ್ಟಿ, ಮಿತ್ರ, ರಮೇಶ್ ಇಂದಿರಾ, ಸಂಪದಾ ಸೇರಿ ಹಲವು ಪ್ರತಿಭಾವಂತ ನಟ, ನಟಿಯರು ಒಟ್ಟಿಗೆ ಸೇರಿ ನಟಿಸಿರುವ ‘ಕರಾವಳಿ’ ಸಿನಿಮಾ ಈ ವಾರ ಬಿಡುಗಡೆ ಆಗುತ್ತಿದೆ. ಸಿನಿಮಾ ಅನ್ನು ಗುರುದತ್ ಗಾಣಿಗಾ ನಿರ್ದೇಶನ ಮಾಡಿದ್ದು ಸಿನಿಮಾದ ಬಗ್ಗೆ ಸಾಕಷ್ಟು ನಿರೀಕ್ಷೆಗಳಿವೆ. ಇದೇ ಶುಕ್ರವಾರ ಸಿನಿಮಾ ಬಿಡುಗಡೆ ಆಗುತ್ತಿದೆ.

Source link

‘ಜನ ನಾಯಗನ್’ ಪ್ರಚಾರ ಮಾಡದ ಸಿಎಂ ವಿಜಯ್; ಆದರೂ ಹೇಗಿದೆ ಅಭಿಮಾನಿಗಳ ಕ್ರೇಜ್? – Kannada News | CM Vijay Last Movie Jana Nayagan releasing on 23 July dull buzz fans celebration

ತಮಿಳು ಚಿತ್ರರಂಗದ ಖ್ಯಾತ ನಟ ದಳಪತಿ ವಿಜಯ್ (CM Vijay) ಅಭಿನಯದ ಬಹುನಿರೀಕ್ಷಿತ ‘ಜನ ನಾಯಗನ್’ (Jana Nayagan) ಸಿನಿಮಾ ಜುಲೈ 23ರಂದು ಪ್ರಪಂಚದಾದ್ಯಂತ ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ತೆರೆಕಾಣುತ್ತಿದೆ. ತೆಲುಗಿನಲ್ಲಿ ಈ ಚಿತ್ರವು ‘ಜನ ನಾಯಕಡು’ ಎಂಬ ಶೀರ್ಷಿಕೆಯಲ್ಲಿ ಬಿಡುಗಡೆಯಾಗುತ್ತಿದೆ. ಹಿಂದಿಯಲ್ಲಿ ‘ಜನ್ ನೇತ’ ಎಂದು ಕರೆಯಲಾಗುತ್ತಿದೆ. ಈ ಸಿನಿಮಾ ಎಷ್ಟು ಕಲೆಕ್ಷನ್ ಮಾಡಬಹುದು ಎಂಬ ನಿರೀಕ್ಷೆ ಮನೆ ಮಾಡಿದೆ. ಈ ನಡುವೆ ದಳಪತಿ ವಿಜಯ್ (Thalapathy Vijay) ಅವರು ಈ ಸಿನಿಮಾವನ್ನು ಪ್ರಚಾರ ಮಾಡದೇ ಇರುವುದು ಅಭಿಮಾನಿಗಳ ಚಿಂತೆಗೆ ಕಾರಣ ಆಗಿದೆ.

ಸಾಮಾನ್ಯವಾಗಿ ವಿಜಯ್ ಅಭಿನಯದ ಹೊಸ ಸಿನಿಮಾಗಳು ಬಿಡುಗಡೆಯಾಗುತ್ತಿವೆ ಎಂದರೆ ಚಿತ್ರಮಂದಿರಗಳ ಬಳಿ ಹಬ್ಬದ ವಾತಾವರಣ ನಿರ್ಮಾಣವಾಗುತ್ತಿತ್ತು. ಆದರೆ, ಈ ಬಾರಿಯ ಚಿತ್ರಕ್ಕೆ ನಿರೀಕ್ಷಿತ ಮಟ್ಟದ ಹೈಪ್ ಅಥವಾ ಕ್ರೇಜ್ ಕಂಡುಬರುತ್ತಿಲ್ಲ. ಇದಕ್ಕೆ ಹಲವು ಪ್ರಮುಖ ಕಾರಣಗಳಿವೆ. ಈ ಚಿತ್ರವು ರಿಮೇಕ್ ಆಗಿರುವುದು ಅಭಿಮಾನಿಗಳಲ್ಲಿ ನಿರೀಕ್ಷೆಯನ್ನು ಕೊಂಚ ತಗ್ಗಿಸಿದೆ.

ಸಿನಿಮಾ ಬಿಡುಗಡೆಗೂ ಮುನ್ನವೇ ಅಂತರ್ಜಾಲದಲ್ಲಿ ಲೀಕ್ ಆಗಿದ್ದು ಪ್ರಚಾರಕ್ಕೆ ಹಿನ್ನಡೆಯಾಗಿದೆ. ರಾಜಕೀಯದಲ್ಲಿ ನಿರತರಾದ ಬಳಿಕ ವಿಜಯ್ ಅವರು ಚಿತ್ರದ ಪ್ರಚಾರ ಕಾರ್ಯಕ್ರಮಗಳಿಂದ ದೂರ ಉಳಿದಿರುವುದು ಅಭಿಮಾನಿಗಳಿಗೆ ಕೊಂಚ ನಿರಾಶೆ ಮೂಡಿಸಿದೆ. ಈ ಎಲ್ಲ ಮೈನಸ್ ಅಂಶಗಳ ನಡುವೆಯೂ ಈ ಚಿತ್ರಕ್ಕೆ ಹಲವು ಕಡೆಗಳಲ್ಲಿ ಟಿಕೆಟ್ ಬುಕಿಂಗ್ ಚೆನ್ನಾಗಿ ಆಗುತ್ತಿದೆ. ಹಾಗಾಗಿ ದೊಡ್ಡ ಕಲೆಕ್ಷನ್ ಆಗುವ ನಿರೀಕ್ಷೆ ಇದೆ.

ಅಭಿಮಾನಿಗಳಿಗೆ ಇದು ಕೊನೆಯ ಅವಕಾಶ:

ತಮಿಳುನಾಡು ವಿಧಾನಸಭೆ ಚುನಾವಣೆಗೂ ಮುನ್ನವೇ ಈ ಚಿತ್ರವನ್ನು ಬಿಡುಗಡೆ ಮಾಡಲು ಚಿತ್ರತಂಡ ಯೋಜಿಸಿತ್ತು. ಆದರೆ, ವಿವಿಧ ತಾಂತ್ರಿಕ ಹಾಗೂ ಕಾನೂನು ಕಾರಣಗಳಿಂದಾಗಿ ಸಿನಿಮಾದ ಬಿಡುಗಡೆ ಮುಂದೂಡಲ್ಪಟ್ಟಿತ್ತು. ಪ್ರಸ್ತುತ ವಿಜಯ್ ಅವರು ಪೂರ್ಣಪ್ರಮಾಣದ ರಾಜಕೀಯ ಪ್ರವೇಶ ಮಾಡಿದ್ದು, ಸಿನಿಮಾ ರಂಗದಿಂದ ಸಂಪೂರ್ಣವಾಗಿ ಹೊರನಡೆದು ಸಾರ್ವಜನಿಕ ಸೇವೆ ಹಾಗೂ ಆಡಳಿತಾತ್ಮಕ ಕೆಲಸಗಳಲ್ಲಿ ನಿರತರಾಗಿದ್ದಾರೆ. ಹೀಗಾಗಿ, ಬೆಳ್ಳಿಪರದೆ ಮೇಲೆ ವಿಜಯ್ ಅವರ ನಟನೆಯನ್ನು ಕಣ್ತುಂಬಿಕೊಳ್ಳಲು ಅವರ ಅಭಿಮಾನಿಗಳಿಗೆ ಇದು ಕೊನೆಯ ಅವಕಾಶವಾಗಿದೆ.

ಇನ್ನೈದು ವರ್ಷ ನಟನೆಯಿಂದ ದೂರ:

ಕನಿಷ್ಠ ಮುಂಬರುವ 5 ವರ್ಷಗಳ ಕಾಲ ವಿಜಯ್ ನಟನೆಯತ್ತ ಗಮನಹರಿಸುವುದಿಲ್ಲ. ಸಾರ್ವಜನಿಕ ಹಿತಾಸಕ್ತಿ ಹಾಗೂ ರಾಜಕೀಯ ಕಾರ್ಯಗಳಿಗಾಗಿ ನಟನೆಯನ್ನು ಸಂಪೂರ್ಣವಾಗಿ ತೊರೆಯಲು ಅವರು ನಿರ್ಧರಿಸಿದ್ದಾರೆ. ಮುಂದಿನ ದಿನಗಳಲ್ಲಿ ಅವರು ಸಿನಿಮಾ ಸಂಬಂಧಿ ಪ್ರಚಾರ ಕಾರ್ಯಕ್ರಮಗಳಲ್ಲಿ ಭಾಗವಹಿಸಬಹುದಾದರೂ, ಮತ್ತೆ ಬಣ್ಣ ಹಚ್ಚಿ ನಟಿಸುವುದು ಅಸಂಭವ. ಭವಿಷ್ಯದಲ್ಲಿ ಅವರು ಮತ್ತೆ ಚಿತ್ರರಂಗಕ್ಕೆ ಮರಳುತ್ತಾರೋ ಇಲ್ಲವೋ ಎಂಬುದು ಇನ್ನೂ ಅಸ್ಪಷ್ಟ. ಆದ್ದರಿಂದ, ಅಭಿಮಾನಿಗಳಿಗೆ ಈ ಸಿನಿಮಾ ಅತ್ಯಂತ ಭಾವುಕ ಕ್ಷಣವಾಗಿದೆ.

ಇದನ್ನೂ ಓದಿ: ಬಿಡುಗಡೆಗೂ ಮುನ್ನ ‘ಜನ ನಾಯಗನ್’ ಚಿತ್ರದಲ್ಲಿ ಬದಲಾವಣೆ: ಟೈಟಲ್ ಕಾರ್ಡ್‌ನಲ್ಲಿ ವಿಜಯ್ ಹೆಸರು ಹೇಗಿದೆ?

ಹೊಸ ಅನುಭವ ನೀಡಲು ಬದಲಾವಣೆ:

ಚಿತ್ರದ ಗಳಿಕೆ, ಪ್ರೇಕ್ಷಕರ ಸಂಖ್ಯೆ ಅಥವಾ ಗಲ್ಲಾಪೆಟ್ಟಿಗೆಯ ಅಂಕಿ-ಅಂಶಗಳನ್ನು ಹೊರತುಪಡಿಸಿ, ವಿಜಯ್ ಅವರ ಹವಾ ಹಾಗೂ ಅವರ ಅತ್ಯುತ್ತಮ ಅಭಿನಯವನ್ನು ದೊಡ್ಡ ಪರದೆಯ ಮೇಲೆ ಕಣ್ತುಂಬಿಕೊಳ್ಳಲು ಇದುವೇ ಕಡೆ ಅವಕಾಶ. ಪ್ರೇಕ್ಷಕರಿಗೆ ಮತ್ತು ಅಭಿಮಾನಿಗಳಿಗೆ ಒಂದು ವಿಶಿಷ್ಟ ಅನುಭವ ನೀಡುವ ಸಲುವಾಗಿ, ಮೂಲ ಕಥೆಗೆ ಮತ್ತು ರಿಮೇಕ್ ಆವೃತ್ತಿಗೆ ಚಿತ್ರತಂಡ ಹಲವು ಪ್ರಮುಖ ಬದಲಾವಣೆಗಳನ್ನು ಮಾಡಿದೆ ಎಂದು ತಿಳಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

‘ಬಿಜೆಪಿಗರ ಮೇಲೆ ಮೊಟ್ಟೆ ಎಸೆತ ಪೂರ್ವ ನಿಯೋಜಿತ ಕೃತ್ಯ’ ಎಂದ ಆರ್​​ ಅಶೋಕ್ – Kannada News | R Ashoka Calls Egg Throwing Incident Targeting BJP Members a Pre Planned Act

ಬೆಂಗಳೂರು, ಜುಲೈ 22: ‘ಬಿಜೆಪಿಗರ ಮೇಲೆ ಮೊಟ್ಟೆ ಎಸೆತ ಪೂರ್ವ ನಿಯೋಜಿತ ಕೃತ್ಯ’ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್​. ಅಶೋಕ್​ ಆರೋಪ ಮಾಡಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಪಾಕ್ ಏಜೆಂಟರು ಹಿಂದೂಗಳ ಮೇಲೆ ಹಲ್ಲೆ ಮಾಡಿದ್ದಾರೆ. ಹಲ್ಲೆ ಖಂಡಿಸಿ ಪಾದಯಾತ್ರೆ ಮೂಲಕ ಕಮಿಷನರ್​ ಕಚೇರಿಗೆ ಹೋಗುತ್ತೇವೆ. 15ಕ್ಕೂ ಹೆಚ್ಚು ಶಾಸಕರು ಮತ್ತು ಎಂಎಲ್ಸಿಗಳಿದ್ದರೂ ರಕ್ಷಣೆ ಇಲ್ಲವಾದರೆ ಸಾಮಾನ್ಯ ಜನರ ಗತಿಯೇನು? ಗೂಂಡಾ ಕಾಯ್ದೆಯಡಿ ಈ ಗೂಂಡಾಗಳ ಬಂಧನ ಆಗಬೇಕು. ಗೂಂಡಾ ಸಿಎಂ, ಗೂಂಡಾ ಸರ್ಕಾರ ಲಾಂಗ್, ಚಾಕು, ಮೊಟ್ಟೆ ತಂದಿದ್ದಾರೆ. ಬಾಂಬುಗಳೂ ತಂದಿರಬೇಕು. ಕಾಂಗ್ರೆಸ್ ಕಚೇರಿಯಲ್ಲಿ ಬಾಂಬುಗಳಿರಬಹುದು. ಕೆಪಿಸಿಸಿ ಕಚೇರಿ ಮೇಲೆ ರೈಡ್​ ಮಾಡಿ ಪೊಲೀಸರು ತನಿಖೆ ಮಾಡಲಿ’ ಎಂದು ಆರ್​. ಅಶೋಕ್ ವಾಗ್ದಾಳಿ ಮಾಡಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಇಂಗ್ಲೆಂಡ್‌- ಆಸ್ಟ್ರೇಲಿಯಾ ನಡುವೆ ‘ವಿಶೇಷ’ ಆಶಸ್ ಸರಣಿ – Kannada News | Historic Mixed Disability Ashes 2027: Australia vs England T20 Series

ಈಗ, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವೆ ಹೊಸ ರೀತಿಯ ಆಶಸ್ ಪಂದ್ಯಗಳು ನಡೆಯಲಿವೆ. ಉಭಯ ದೇಶಗಳ ವಿಶೇಷ ಅಂಗವೈಕಲ್ಯ ತಂಡಗಳ ನಡುವೆ ಈ ಆಶಸ್ ಸರಣಿ ನಡೆಯಲಿದೆ. 2027 ರಲ್ಲಿ, ಆಸ್ಟ್ರೇಲಿಯಾದ ಪುರುಷರ ಮಿಶ್ರ ಅಂಗವಿಕಲರ ತಂಡವು ಇಂಗ್ಲೆಂಡ್‌ಗೆ ಪ್ರವಾಸ ಕೈಗೊಳ್ಳಲಿದ್ದು, ಅಲ್ಲಿ ಎರಡೂ ದೇಶಗಳ ನಡುವೆ ಮೊದಲ ಬಾರಿಗೆ ಮಿಶ್ರ ಅಂಗವಿಕಲರ ಆಶಸ್ ಅಂತರರಾಷ್ಟ್ರೀಯ ಟಿ20 ಸರಣಿ ನಡೆಯಲಿದೆ(PC-PTI).

Source link

Best Color for Dusky Skin: ಕಪ್ಪು ಮೈಬಣ್ಣದವರು ಈ ಕಲರ್‌ ಬಟ್ಟೆಗಳನ್ನು ಧರಿಸಿದರೆ ಸಖತ್‌ ಸುಂದರವಾಗಿ ಕಾಣಿಸುತ್ತಾರೆ – Kannada News | Best Color for Dusky Skin: These are color clothes that suit for dusky skin

ಎಷ್ಟೇ ಸುಂದರವಾದ ಬಟ್ಟೆಯಾದರೂ (clothes) ಸರಿ, ಅದು ನಮ್ಮ ಸ್ಕಿನ್‌ ಟೋನ್‌ಗೆ ಮ್ಯಾಚ್‌ ಆಗದಿದ್ದರೆ, ಅದು ನಮ್ಮ ಸೌಂದರ್ಯವನ್ನು ಕುಗ್ಗಿಸುತ್ತದೆ. ಹಾಗಾಗಿ ನಮ್ಮ ಮೈಬಣ್ಣಕ್ಕೆ ಹೊಂದಿಕೆಯಾಗುವ ಸೂಕ್ತ ಬಣ್ಣದ ಬಟ್ಟೆಗಳನ್ನು ಆರಿಸುವುದು ತುಂಬಾನೇ ಮುಖ್ಯ. ಹೆಚ್ಚಾಗಿ ಈ ಡಸ್ಕಿ ಸ್ಕಿನ್‌ ಟೋನ್‌ ಇರುವವರಿಗೆ ಬಟ್ಟೆಗಳನ್ನು ಆಯ್ಕೆ ಮಾಡುವ ವಿಚಾರದಲ್ಲಿ ತುಂಬಾನೇ ಗೊಂದಲಗಳಿರುತ್ತವೆ. ಈ ಬಣ್ಣ ನನಗೆ ಸೂಟ್‌ ಆಗೋತ್ತೋ, ಈ ಬಣ್ಣದ ಬಟ್ಟೆ ಧರಿಸಿದರೆ ನಾನು ಇನ್ನಷ್ಟು ಕಪ್ಪಾಗಿ ಕಾಣಿಸುತ್ತೀನೋ ಎಂಬ ಗೊಂದಲದಲ್ಲಿರುತ್ತಾರೆ. ನೀವು ಕೂಡ ಕಪ್ಪು ಮೈಬಣ್ಣದವರೇ, ಹಾಗಿದ್ರೆ ಈ ಕೆಲವು ಬಣ್ಣದ ಬಟ್ಟೆಗಳನ್ನೇ ಧರಿಸಿ, ಖಂಡಿತವಾಗಿಯೂ ಇದು ನಿಮ್ಮ ಸೌಂದರ್ಯವನ್ನು ದುಪ್ಪಟ್ಟುಗೊಳಿಸುತ್ತದೆ. ನಿಮ್ಮನ್ನು ರಾಯಲ್‌ ಆಗಿ ಕಾಣಿಸುವಂತೆ ಮಾಡಿಸುತ್ತದೆ.

ಡಸ್ಕಿ ಸ್ಕಿನ್‌ಟೋನ್‌ಗೆ ಯಾವ ಬಣ್ಣದ ಬಟ್ಟೆ ಸೂಕ್ತ?

ರಾಯಲ್‌ ಬ್ಲೂ ಬಣ್ಣದ ಬಟ್ಟೆ: ಗಾಢ ನೀಲಿಬಣ್ಣದ ಬಟ್ಟೆಗಳು ಡಸ್ಕಿ ಸ್ಕಿನ್‌ ಟೋನ್‌ಗೆ ಹೊಂದಿಕೆಯಾಗುತ್ತದೆ. ಕಪ್ಪು ಮೈಬಣ್ಣದವರು  ಈ ಬಣ್ಣದ ಬಟ್ಟೆಗಳನ್ನು ಸುಂದರವಾಗಿ ಹಾಗೂ ರಾಯಲ್‌ ಅಗಿ ಕಾಣಿಸುತ್ತಾರೆ. ಈ ಬಣ್ಣವು ಡಸ್ಕಿ ಸ್ಕಿನ್‌ ಟೋನ್‌ ಜೊತೆ ಸುಂದರವಾದ ಸಮತೋಲಿತ ವ್ಯತಿರಿಕ್ತತೆಯನ್ನು ಸೃಷ್ಟಿಸುತ್ತದೆ, ಇದು ನಿಮ್ಮ ನೋಟವನ್ನು ಎದ್ದು ಕಾಣುವಂತೆ ಮಾಡುತ್ತದೆ.

ಮಸ್ಟರ್ಡ್‌ ಎಲ್ಲೋ: ಸಾಮಾನ್ಯವಾಗಿ ಡಾರ್ಕ್‌ ಸ್ಕಿನ್‌ ಟೋನ್‌ ಇರುವವರು ಹಳದಿ ಬಣ್ಣದ ಬಟ್ಟೆಯನ್ನು ಧರಿಸಲು ಹಿಂದೆ ಸರಿಯುತ್ತಾರೆ. ಡಾರ್ಕ್‌ಸ್ಕಿನ್‌ ಟೋನ್‌ಗೆ ಹಳದಿ ಬಣ್ಣ ಮ್ಯಾಚ್‌ ಆಗೋದಿಲ್ಲ ಎಂದು ಭಾವಿಸುತ್ತಾರೆ. ಆದರೆ ಮಸ್ಟರ್ಡ್‌ ಎಲ್ಲೋ ಅಂದರೆ ಗಾಢ ಹಳದಿ ಬಣ್ಣದ ಬಟ್ಟೆಗಳು ಕಪ್ಪು ಮೈಬಣ್ಣದವರಿಗೆ ತುಂಬಾನೇ ಚೆನ್ನಾಗಿ ಕಾಣಿಸುತ್ತದೆ.

ಗಾಢ ಹಸಿರು: ಡಾರ್ಕ್‌ ಗ್ರೀನ್‌ ಬಣ್ಣದ ಬಟ್ಟೆಗಳು ಕಪ್ಪು ಮೈಬಣ್ಣದವರಿಗೆ ಸುಂದರ ನೋಟವನ್ನು ನೀಡುತ್ತದೆ. ಈ ಬಣ್ಣವು ತುಂಬಾ ಪ್ರಕಾಶಮಾನವಾಗಿಲ್ಲ ಜೊತೆಗೆ ಹೊಳೆಯುವಂತಿಲ್ಲ ಹಾಗಾಗಿ ಡಾರ್ಕ್‌ ಸ್ಕಿನ್‌ ಟೋನ್‌ಗೆ ಈ ಬಣ್ಣ ಹೊಂದಿಕೆಯಾಗುತ್ತದೆ. ಮದುವೆ ಇತ್ಯಾದಿ ಸಮಾರಂಭಗಳಲ್ಲಿ ರಾಯಲ್‌ ಆಗಿ ಕಾಣಿಸಿಕೊಳ್ಳಲು ಕಪ್ಪು ಮೈಬಣ್ಣದವರು ಗಾಢ ಹಸಿರು ಬಣ್ಣದ ಸೀರೆ, ಸಲ್ವಾರ್‌, ಕುರ್ತಾ ಧರಿಸಬಹುದು.

ಆಫ್-ವೈಟ್ ಅಥವಾ ಕ್ರೀಮ್: ಬಿಳಿ ಬಣ್ಣದ ಬಟ್ಟೆಗಳನ್ನು ಧರಿಸಲು ಬಹುತೇಕ ಎಲ್ಲರೂ ಇಷ್ಟಪಡುತ್ತಾರೆ. ಆದರೆ ಕಪ್ಪು ಮೈಬಣ್ಣದವರಿಗೆ ಹಾಲಿನಂತಿರುವ ಶುದ್ಧ ಬಿಳಿ ಬಣ್ಣ ಹೊಂದಿಕೆಯಾಗುವುದಿಲ್ಲ. ಅವರು ಯಾವಾಗಲೂ ಆಫ್‌ ವೈಟ್‌ ಅಥವಾ ಕ್ರೀಮ್‌ ಬಣ್ಣದ ಬಟ್ಟೆಗಳನ್ನೇ ಆಯ್ಕೆ ಮಾಡಬೇಕು. ಈ ಕ್ರೀಮ್‌ ಬಣ್ಣದ ಬಟ್ಟೆಗಳು ಕಪ್ಪು ಮೈಬಣ್ಣದವರ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸುತ್ತದೆ.

ಇದನ್ನೂ ಓದಿ: ನೀವು ರಾತ್ರಿಯಲ್ಲಿ ಬಟ್ಟೆ ಒಗೆಯುತ್ತೀರಾ?, ತಪ್ಪು ನಿಮ್ಮನ್ನು ಬಡವರನ್ನಾಗಿ ಮಾಡುತ್ತವೆ

ವೈನ್ ರೆಡ್ ಅಥವಾ ಮೆರೂನ್: ಮೆರೂನ್‌ ತುಂಬಾನೇ ಸುಂದರವಾಗಿರುವಂತಹ ಬಣ್ಣ. ಈ ಬಣ್ಣದ ಬಟ್ಟೆಗಳು ಡಸ್ಕಿ ಸ್ಕಿನ್‌ಟೋನ್‌ಗೆ ಮ್ಯಾಚ್‌ ಆಗುತ್ತೆ. ಕೆಂಪು ಬಣ್ಣವನ್ನು ಇಷ್ಟಪಡುವವರು ಪ್ರಕಾಶಮಾನವಾಗಿರುವ ಟೊಮೆಟೊದಂತಹ ಕೆಂಪು ಬಣ್ಣದ ಉಡುಗೆಯನ್ನು ಆಯ್ಕೆ ಮಾಡುವ ಬದಲು ವೈನ್‌ ರೆಡ್‌, ಬರ್ಗಂಟಿ, ಮೆರೂನ್‌ ಬಣ್ಣದ ಬಟ್ಟೆಯನ್ನು ಆಯ್ಕೆ ಮಾಡಿ. ಇದು ನಿಮ್ಮ ನೋಟವನ್ನು ದುಪ್ಪಟ್ಟುಗೊಳಿಸುತ್ತದೆ.

ಪೀಚ್ ಬಣ್ಣ: ಹಸಿರು, ಮೆರೂನ್‌, ರಾಯಲ್‌ ಬ್ಲೂನಂತಹ ಡಾರ್ಕ್‌ ಬಣ್ಣ ಮಾತ್ರವಲ್ಲ ಕಿತ್ತಳೆ ಮತ್ತು ಗುಲಾಬಿ ಬಣ್ಣದ ಮಿಶ್ರಣವಾದ ಪೀಚ್‌ ಬಣ್ಣವೂ ಡಸ್ಕಿ ಸ್ಕಿನ್‌ ಟೋನ್‌ಗೆ ಹೊಂದಿಕೆಯಾಗುತ್ತದೆ. ನೀವು ಮೃದು ಮತ್ತು ತಿಳಿ ಬಣ್ಣವನ್ನು ಇಷ್ಟಪಡುವವರಾಗಿದ್ದರೆ, ಪೀಚ್‌ ಬಣ್ಣವನ್ನು ಆಯ್ಕೆ ಮಾಡಿ. ಇದು ನಿಮಗೆ ಖಂಡಿತವಾಗಿ ಆಕರ್ಷಕ ನೋಟವನ್ನು ನೀಡುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Pan Card: ಪ್ಯಾನ್‌ ಕಾರ್ಡ್ ಕಳೆದು ಹೋಗಿದ್ರೆ ಈ ರೀತಿ ಹೊಸ ಕಾರ್ಡ್ ಪಡೆಯಿರಿ – Kannada News | Pan Card: If you have lost your PAN card, apply in this manner to get a new one.

ಪ್ಯಾನ್‌ ಕಾರ್ಡ್ (Pan Card) ಭಾರತೀಯ ಆದಾಯ ತೆರಿಗೆ ಇಲಾಖೆಯಿಂದ ನೀಡಲ್ಪಡುವ 10 ಅಕ್ಷರಗಳ ವಿಶಿಷ್ಟ ಗುರುತಿನ ಸಂಖ್ಯೆ ಇದಾಗಿದೆ. ಹಣಕಾಸಿನ ವಹಿವಾಟು, ತೆರಿಗೆ ಪಾವತಿ ಮತ್ತು ಬ್ಯಾಂಕ್ ಖಾತೆ ತೆರೆಯಲು ಇದು ಅವಶ್ಯಕ ದಾಖಲೆಯಾಗಿದೆ. ಆದರೆ ಈ ಪ್ಯಾನ್‌ ಕಾರ್ಡ್ ಕಳೆದುಕೊಂಡರೆ ಚಿಂತಿಸುವ ಅಗತ್ಯವಿಲ್ಲ, ಮರುಮುದ್ರಣಕ್ಕೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಒಂದು ವೇಳೆ ಪ್ಯಾನ್‌ ಕಾರ್ಡ್ ಕಳೆದು ಹೋದರೆ ಮರು ಪಡೆಯುವುದು ಹೇಗೆ? ಎನ್ನುವ ಕುರಿತಾದ ಸ್ಟೋರಿ ಇಲ್ಲಿದೆ.

ಪ್ಯಾನ್‌ ಕಾರ್ಡ್ ಕಳೆದು ಏನು ಮಾಡ್ಬೇಕು?

ನಿಮ್ಮ ಕಣ್ಣು ತಪ್ಪಿನಿಂದ ಅಗತ್ಯ ದಾಖಲೆಯಲ್ಲಿ ಒಂದಾದ ಪ್ಯಾನ್ ಕಾರ್ಡ್ ಕಳೆದುಹೋದ್ರೆ ಮೊದಲು ನೀವು ತೆರಿಗೆ ಇಲಾಖೆಗೆ ಮಾಹಿತಿ ನೀಡುವುದು ಅಗತ್ಯ. ಹೀಗಾಗಿ ನೀವು ಹತ್ತಿರದ ಆದಾಯ ತೆರಿಗೆ ಕಚೇರಿಯನ್ನು ಸಂಪರ್ಕ ಮಾಡಿ. ಇಲ್ಲವಾದರೆ ಎನ್‌ಎಸ್‌ ಡಿಎಲ್‌ ಅಥವಾ ಯುಟಿಐಐಟಿಎಸ್‌ಎಲ್‌  ವೆಬ್‌ಸೈಟ್‌ನ ಮೂಲಕ ಆನ್‌ಲೈನ್‌ನಲ್ಲಿ ಈ ಬಗ್ಗೆ ಮಾಹಿತಿ ನೀಡಬಹುದು.

ಪ್ಯಾನ್‌ ಕಾರ್ಡ್ ಮರು ಪಡೆಯುವುದು ಹೇಗೆ?

ಹಂತ 1: Protean ಅಥವಾ UTIITSL ವೆಬ್‌ಸೈಟ್‌ಗೆ ಭೇಟಿ ನೀಡಿ, ರೀಪ್ರಿಂಟ್ ಆಫ್ ಪ್ಯಾನ್‌ ಕಾರ್ಡ್ ಆಯ್ಕೆಯನ್ನು ಆರಿಸಿಕೊಳ್ಳಿ

ಹಂತ 2: ನಿಮ್ಮ ಆಧಾರ್ ಸಂಖ್ಯೆ, ಜನ್ಮದಿನಾಂಕ ನಮೂದಿಸಿ.

ಹಂತ 3: ಈ ಪ್ರಕ್ರಿಯೆ ಮುಗಿದ ಬಳಿಕ ಇಂತಿಷ್ಟು ಶುಲ್ಕ ಪಾವತಿಸಿ.

ಹಂತ 4: ಆಧಾರ್ ಮೂಲಕ ಒಟಿಪಿ (OTP) ಪರಿಶೀಲನೆ ಮಾಡಬಹುದು.

ಹಂತ 5: ಈ ಪ್ರಕ್ರಿಯೆ ಮುಗಿದ ನಂತರ ಆದಾಯ ತೆರಿಗೆ ಇಲಾಖೆಯ ಇನ್ಕಮ್ ಟ್ಯಾಕ್ಸ್ ಇ ಫೀಲಿಂಗ್ ಪೋರ್ಟಲ್‌ನಿಂದ ನಿಮ್ಮ ಇ-ಪ್ಯಾನ್‌ನ್ನು  ಡೌನ್‌ಲೋಡ್ ಮಾಡಿಕೊಳ್ಳಿ.

ಇದನ್ನೂ ಓದಿ: UPI without Internet: ಟ್ಯಾಪ್ ಟು ಪೇ, ಹೊಸ ಯುಪಿಐ ಫೀಚರ್; ಇಂಟರ್ನೆಟ್ ಇಲ್ಲದ ಫ್ಲೈಟ್, ಅಂಡರ್​ಗ್ರೌಂಡ್ ಮೆಟ್ರೋಗೂ ಹಣ ಪಾವತಿಸಿ

ಸಾಮಾನ್ಯವಾಗಿ ಕೇಳುವ ಪ್ರಶ್ನೆ ಮತ್ತು ಉತ್ತರ (FAQs)

ಪ್ರಶ್ನೆ: ಪ್ಯಾನ್‌ ಕಾರ್ಡ್ ಯಾಕೆ ಅಷ್ಟೊಂದು ಅವಶ್ಯಕ?

ಉತ್ತರ: ಹಣಕಾಸಿನ ವಹಿವಾಟು, ತೆರಿಗೆ ಪಾವತಿ ಮತ್ತು ಬ್ಯಾಂಕ್ ಖಾತೆ ತೆರೆಯಲು ಇದು ಅವಶ್ಯಕ ದಾಖಲೆಯಾಗಿದೆ.

ಪ್ರಶ್ನೆ: ಪ್ಯಾನ್‌ ಕಾರ್ಡ್ ಕಳೆದು ಹೋದ್ರೆ ಏನು ಮಾಡ್ಬೇಕು?

ಉತ್ತರ: ಪ್ಯಾನ್‌ ಕಾರ್ಡ್ ಕಳೆದು ಹೋದ್ರೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಕಳೆದುಹೋದ ದಾಖಲೆಯ ಕುರಿತು ದೂರು ದಾಖಲಿಸಿ.

ಪ್ರಶ್ನೆ: ಪ್ಯಾನ್‌ ಕಾರ್ಡ್ ಮರು ಪಡೆಯುವುದು ಹೇಗೆ?

ಉತ್ತರ: ಪ್ಯಾನ್‌ ಕಾರ್ಡ್ ಮರು ಪಡೆಯಲು ಆದಾಯ ತೆರಿಗೆ ಇಲಾಖೆಯಲ್ಲಿ ಮರುಮುದ್ರಣಕ್ಕೆ ಅರ್ಜಿ ಸಲ್ಲಿಸಿ.

ಇನ್ನಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

10 ವರ್ಷಗಳಲ್ಲಿ 152 ಪ್ರಶ್ನೆಪತ್ರಿಕೆ ಸೋರಿಕೆ, ಒಬ್ಬರಿಗೂ ಶಿಕ್ಷೆಯಾಗಿಲ್ಲ; ಕೇಂದ್ರ ಸರ್ಕಾರದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ – Kannada News | 152 Paper Leaks In 10 Years No Convictions; Congress Leader Rahul Gandhi accuses Modi Government

ನವದೆಹಲಿ, ಜುಲೈ 22: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಗೆ (NEET Paper Leak) ಇಡೀ ದೇಶಾದ್ಯಂತ ಭಾರೀ ವಿರೋಧ ವ್ಯಕ್ತವಾಗುತ್ತಿದ್ದರೂ ಕೇಂದ್ರ ಸರ್ಕಾರದ ನಾಯಕರು ಈ ಬಗ್ಗೆ ಯಾವುದೇ ಗಟ್ಟಿ ನಿಲುವನ್ನು ತಳೆದಿಲ್ಲ. ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಪಡೆಯಬೇಕೆಂದು ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ವಿಪಕ್ಷಗಳು ಒತ್ತಡ ಹೇರುತ್ತಲೇ ಇದ್ದರೂ ಇದುವರೆಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಮಂಗಳವಾರ ಈ ಕುರಿತು ಧರಣಿ ನಡೆಸುತ್ತಿದ್ದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಇದರ ಬೆನ್ನಲ್ಲೇ ಇಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಮಹತ್ವದ ಸುದ್ದಿಗೋಷ್ಠಿ ನಡೆಸಿದ್ದಾರೆ.

ಇಂದು (ಬುಧವಾರ) ನಡೆಸಿದ ಮಾಧ್ಯಮ ಗೋಷ್ಠಿಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಯುವ ಮೋರ್ಚಾ ಮತ್ತು ವಿದ್ಯಾರ್ಥಿಗಳ ಹೋರಾಟಕ್ಕೆ ಬೆಂಬಲವಾಗಿ 3 ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ. ರಾಷ್ಟ್ರ ರಾಜಧಾನಿ ಹಾಗೂ ಹಲವು ರಾಜ್ಯಗಳಲ್ಲಿ ಭಾರಿ ಪ್ರತಿಭಟನೆಗೆ ಕಾರಣವಾಗಿರುವ ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆ ಹಗರಣದ ಹಿನ್ನೆಲೆಯಲ್ಲಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ನೀಡಬೇಕೆಂದು ರಾಹುಲ್ ಗಾಂಧಿ ತಮ್ಮ ಮೊದಲ ಹಾಗೂ ಪ್ರಮುಖ ಬೇಡಿಕೆಯನ್ನು ಪುನರುಚ್ಚರಿಸಿದ್ದಾರೆ.

ಇದನ್ನೂ ಓದಿ: ಪ್ರಧಾನಿ ನಿವಾಸದ ಬಳಿ ಧರಣಿ ನಡೆಸುತ್ತಿದ್ದ ರಾಹುಲ್ ಗಾಂಧಿ ಪೊಲೀಸ್ ವಶಕ್ಕೆ 

“ಕಳೆದ 10 ವರ್ಷಗಳಲ್ಲಿ ದೇಶದಲ್ಲಿ 152 ಪ್ರಶ್ನೆಪತ್ರಿಕೆ ಸೋರಿಕೆ ಘಟನೆಗಳು ಸಂಭವಿಸಿವೆ. ಆದರೆ ಈವರೆಗೆ ಯಾರೊಬ್ಬರಿಗೂ ಶಿಕ್ಷೆಯಾಗಿಲ್ಲ. ಯಾರೋ ಒಬ್ಬರು ಅಥವಾ ಜನರ ಗುಂಪು ಭಾರತದ ಅತ್ಯಂತ ಮೌಲ್ಯಯುತ ಆಸ್ತಿಯಾಗಿರುವ ಶಿಕ್ಷಣ ವ್ಯವಸ್ಥೆಯನ್ನು ನಾಶಪಡಿಸುತ್ತಿದೆ. ನಮ್ಮ ವಿದ್ಯಾರ್ಥಿಗಳ ಭವಿಷ್ಯವನ್ನು ಹಾಳುಮಾಡುತ್ತಿದೆ. ಆದರೆ ಸರ್ಕಾರ ಏನು ಮಾಡುತ್ತಿದೆ? ಯಾರೊಬ್ಬರಿಗೂ ಶಿಕ್ಷೆ ವಿಧಿಸಿಲ್ಲ. ಆದ್ದರಿಂದಲೇ ನಮ್ಮ ಯುವಕರು ಪ್ರತಿಭಟನೆ ನಡೆಸುತ್ತಿದ್ದಾರೆ, ಇದು ಸಂಪೂರ್ಣವಾಗಿ ನ್ಯಾಯಸಮ್ಮತ ಕಾರಣವಾಗಿದೆ” ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ಕಪ್ಪು ಪಟ್ಟಿ ಧರಿಸಿ ಸುದ್ದಿಗೋಷ್ಠಿ:

ಇಂದು ತೋಳಿಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಸುದ್ದಿಗೋಷ್ಠಿ ನಡೆಸಿರುವ ರಾಹುಲ್ ಗಾಂಧಿ, “ದೇಶದ ಕಳಪೆ ಶಿಕ್ಷಣ ವ್ಯವಸ್ಥೆಯಿಂದಾಗಿ ಸುಮಾರು 7.5 ಕೋಟಿ ವಿದ್ಯಾರ್ಥಿಗಳು ಹಾಗೂ ಅವರ ಕುಟುಂಬಗಳು ತೊಂದರೆಗೆ ಒಳಗಾಗಿವೆ. ಅವರೆಲ್ಲರೂ ಮಧ್ಯಮ ವರ್ಗದ ಮತ್ತು ಬಡ ಕುಟುಂಬಗಳ ಜನ. ಈ ಹಗರಣಗಳಲ್ಲಿ ಯಾರೊಬ್ಬರಿಗೂ ಶಿಕ್ಷೆಯಾಗಿಲ್ಲ. ಜನರ ಗುಂಪೊಂದು ನಮ್ಮ ಶಿಕ್ಷಣ ವ್ಯವಸ್ಥೆಯನ್ನು ನಾಶಪಡಿಸುತ್ತಿದೆ. ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿರುವುದಕ್ಕೆ ನ್ಯಾಯವಾದ ಕಾರಣಗಳಿವೆ. ಅವರದ್ದು ಮೂರು ಪ್ರಮುಖ ಬೇಡಿಕೆಗಳಿವೆ. ಅವುಗಳನ್ನು ಸರ್ಕಾರ ಈಡೇರಿಸಲಿ” ಎಂದು ಹೇಳಿದ್ದಾರೆ.

ಮೋದಿ ಕ್ಷಮೆ ಕೋರಬೇಕು:

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಮತ್ತು ನೀಟ್ ಪರೀಕ್ಷಾ ಸೋರಿಕೆ ವಿರುದ್ಧ ಹೋರಾಡುತ್ತಿರುವ ವಿದ್ಯಾರ್ಥಿಗಳ ಬೆಂಬಲಕ್ಕೆ ನಿಂತ ರಾಹುಲ್ ಗಾಂಧಿ, “ಧರ್ಮೇಂದ್ರ ಪ್ರಧಾನ್ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು. ಅವರು ಈ ಹುದ್ದೆಯನ್ನು ವಹಿಸಿಕೊಳ್ಳಲು ಅಸಮರ್ಥರಾಗಿದ್ದಾರೆ. ಹಾಗೇ, ಪ್ರತಿಭಟನೆ ವೇಳೆ ವಿದ್ಯಾರ್ಥಿಗಳ ಮೇಲೆ ನಡೆಸಲಾದ ದೌರ್ಜನ್ಯಕ್ಕೆ ಕಾರಣರಾದ ಅಧಿಕಾರಿಗಳನ್ನು ಕೂಡ ಹೊಣೆಗಾರರನ್ನಾಗಿ ಮಾಡಬೇಕು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವಿದ್ಯಾರ್ಥಿಗಳ ಕ್ಷಮೆಯಾಚಿಸಬೇಕು” ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಪೊಲೀಸ್ ಠಾಣೆಗೆ ಸೋನಿಯಾ ಗಾಂಧಿ ಭೇಟಿ; ಕೊನೆಗೂ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಬಿಡುಗಡೆ

ಶಿಕ್ಷಣ ವ್ಯವಸ್ಥೆ ಭ್ರಷ್ಟಗೊಂಡಿದೆ:

ಪಶ್ನೆಪತ್ರಿಕೆ ಸೋರಿಕೆ ಹಗರಣಗಳಿಂದಾಗಿ ದೇಶದ ಶಿಕ್ಷಣ ವ್ಯವಸ್ಥೆಯ ಕುರಿತು ವಿಪಕ್ಷ ನಾಯಕರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. “ನಮ್ಮ ವಿದ್ಯಾರ್ಥಿಗಳ ಮೇಲೆ ಭಾರಿ ಮಾನಸಿಕ ಒತ್ತಡ ಹೇರಲಾಗುತ್ತಿದೆ. ಕೊನೆಯ ಕ್ಷಣದಲ್ಲಿ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ ಎಂದು ಅವರಿಗೆ ಹೇಳಲಾಗುತ್ತದೆ. ಜಗತ್ತಿನ ಅತ್ಯುತ್ತಮ ಶಿಕ್ಷಣ ವ್ಯವಸ್ಥೆಗಳಲ್ಲಿ ಒಂದೆಂದು ಹೆಸರುವಾಸಿಯಾಗಿದ್ದ ನಮ್ಮ ಶಿಕ್ಷಣ ವ್ಯವಸ್ಥೆಯು ಇಂದು ಭ್ರಷ್ಟಗೊಂಡಿದೆ ಎಂಬುದು ಎಲ್ಲರಿಗೂ ಸ್ಪಷ್ಟವಾಗಿದೆ. ಇದನ್ನು ನಾನು ಸುಮ್ಮನೆ ಹೇಳುತ್ತಿಲ್ಲ. ಹೊರಗೆ ಹೋರಾಡುತ್ತಿರುವ ಸಾವಿರಾರು ವಿದ್ಯಾರ್ಥಿಗಳೂ ಸುಮ್ಮನೆ ಹೇಳುತ್ತಿಲ್ಲ. ಇದಕ್ಕೆ ಸಾಕ್ಷಿ ಏನು? ನಮಗೆ ನಿಜವಾದ ಸಂಖ್ಯೆ ತಿಳಿದಿಲ್ಲದಿರುವುದರಿಂದ ಇದು ಕೇವಲ ಮೇಲ್ನೋಟದ ಸಾಕ್ಷಿಯಷ್ಟೇ. ಆದರೆ ಕಳೆದ ದಶಕದಲ್ಲಿ 152 ಪೇಪರ್ ಲೀಕ್‌ಗಳು ನಡೆದಿರುವುದು ನಮಗೆ ತಿಳಿದಿದೆ. ಅಂದರೆ ಸರಾಸರಿ ತಿಂಗಳಿಗೆ ಒಂದು ಪ್ರಶ್ನೆ ಪತ್ರಿಕೆ ಸೋರಿಕೆಯಾಗುತ್ತಿದೆ” ಎಂದು ಅವರು ಟೀಕಿಸಿದ್ದಾರೆ.

ಭಾರತದಲ್ಲಿ ನೀಟ್ (NEET) ಆಕಾಂಕ್ಷಿಗಳ ವಾರ್ಷಿಕ ಕೋಚಿಂಗ್ ವೆಚ್ಚವನ್ನು 1.32 ಲಕ್ಷ ಕೋಟಿ ಎಂದು ಅಂದಾಜಿಸಿದ ರಾಹುಲ್ ಗಾಂಧಿ, ಇದು ದೇಶದ ವಾರ್ಷಿಕ ಶಿಕ್ಷಣ ಬಜೆಟ್ ಆದ 1.4 ಲಕ್ಷ ಕೋಟಿಗೆ ಬಹುತೇಕ ಸಮನಾಗಿದೆ ಎಂದು ಪ್ರತಿಪಾದಿಸಿದರು. “ಈ ಭ್ರಷ್ಟ ವ್ಯವಸ್ಥೆಯು ಬಡವರು ಮತ್ತು ಮಧ್ಯಮ ವರ್ಗದವರನ್ನು ಶಿಕ್ಷಣದಿಂದ ಹೊರಗಿಟ್ಟಿದೆ. ಈ ವ್ಯವಸ್ಥೆಯು ಕೇವಲ ಶ್ರೀಮಂತರಿಗೆ ಮಾತ್ರ ಸೀಮಿತವಾಗಿದೆ. ಇದರಲ್ಲಿ ಬಡವರಿಗೆ ಯಾವುದೇ ಜಾಗವಿಲ್ಲದಂತಾಗಿದೆ” ಎಂದು ರಾಹುಲ್ ಗಾಂಧಿ ಬೇಸರ ವ್ಯಕ್ತಪಡಿಸಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version