Headlines

ತುಳಸಿ ಸಸ್ಯ ಸೊಂಪಾಗಿ ಬೆಳೆಯಬೇಕೆಂದರೆ, ಮಳೆಗಾಲದಲ್ಲಿ ಈ ರೀತಿ ಗಿಡವನ್ನು ಆರೈಕೆ ಮಾಡಿ – Kannada News | How to care for tulsi plants during the rainy season

ಹಿಂದೂ ಧರ್ಮದಲ್ಲಿ ತುಳಸಿ (tulsi) ಗಿಡಕ್ಕೆ ವಿಶೇಷ ಮಹತ್ವವಿದೆ. ಪ್ರತಿಯೊಬ್ಬ ಹಿಂದೂಗಳ ಮನೆಯಲ್ಲೂ ತುಳಸಿ ಗಿಡ ಇದ್ದೇ ಇರುತ್ತದೆ. ಆದರೆ ಈ ತುಳಸಿ ಗಿಡ ಮಳೆಗಾಲದಲ್ಲಿ ಹಾಳಾಗಲು ಪ್ರಾರಂಭಿಸುತ್ತದೆ. ತೇವಾಂಶದಿಂದಾಗಿ ತುಳಸಿ ಎಲೆಗಳೆಲ್ಲಾ ಹಳದಿ ಬಣ್ಣಕ್ಕೆ ತಿರುಗಿ ಉದುರಲು ಪ್ರಾರಂಭಿಸುತ್ತವೆ. ಹಾಗಾಗಿ ಮಳೆಗಾಲದಲ್ಲಿ ಇತರ ಗಿಡಗಳ ಬಗ್ಗೆ ಕಾಳಜಿ ವಹಿಸುವಂತೆ ತುಳಗಿ ಗಿಡದ ಬಗ್ಗೆಯೂ ತುಸು ಆರೈಕೆ ಮಾಡಬೇಕು. ಆಗ ಮಾತ್ರ ಮಳೆಗಾಲದಲ್ಲಿಯೂ ಸಹ ತುಳಸಿ ಸೊಂಪಾಗಿ, ಆರೋಗ್ಯಕರವಾಗಿ ಬೆಳೆಯುತ್ತದೆ. ಮಳೆಗಾಲದಲ್ಲಿ ತುಳಸಿ ಗಿಡವನ್ನು ಯಾವ ರೀತಿ…

Read More

Viral: ಕಾಣೆಯಾದ ಸಾಕು ನಾಯಿ ಹುಡುಕಿಕೊಟ್ಟವರಿಗೆ 10,000 ರೂ ನಗದು ಬಹುಮಾನ ಘೋಷಿಸಿದ ಮಾಲೀಕ – Kannada News | Telangana: Owner announces Rs 10,000 cash reward for finding missing pet dog in Nalgonda district

ತೆಲಂಗಾಣ, ಜುಲೈ 22: ನೀವು ಹಣ, ಚಿನ್ನಾಭರಣ, ವಾಹನ, ಬೆಳೆ ಬಾಳುವ ವಸ್ತುಗಳು ಕಳೆದು ಹೋದರೆ ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲಿಸುವುದು ಸಾಮಾನ್ಯ.  ಆದರೆ, ನಾಗರಾಜು ಎಂಬ ವ್ಯಕ್ತಿ ಸಾಕು ನಾಯಿ (pet dog) ಕಾಣೆಯಾಗಿದೆ ಎಂದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ತನ್ನ ಪ್ರೀತಿಯ ಶ್ವಾನವನ್ನು ಹುಡುಕಿ ಕೊಟ್ಟವರಿಗೆ 10,000 ರೂ. ನಗದು ಬಹುಮಾನ ಘೋಷಿಸಿದ್ದಾರೆ. ತೆಲಂಗಾಣದ ನಲ್ಗೊಂಡ ಜಿಲ್ಲೆಯ (Nalgonda district in Telangana) ಮಿರಿಯಾಲಗುಡದಲ್ಲಿ ಈ ಘಟನೆ ನಡೆದಿದೆ. ಇದೇ ತಿಂಗಳ ಜುಲೈ…

Read More

‘ಪ್ರಾಣ ಕೊಟ್ಟೇವು, ಆದರೆ ಜಮೀನು ಬಿಡಲ್ಲ’: ಹೆಚ್​​ಎಎಲ್​​ಗಾಗಿ 600 ಎಕರೆ ಭೂಸ್ವಾಧೀನಕ್ಕೆ ರೈತರ ವಿರೋಧ – Kannada News | ‘We Will Give Our Lives, Not Our Land’: Tumakuru Farmers Siege KIADB Office Against 600 Acre Land Acquisition for HAL

ತುಮಕೂರು, ಜುಲೈ 22: ಬಿಡದಿ ಟೌನ್​​ಶಿಪ್​​ಗಾಗಿ ಭೂಸ್ವಾಧೀನ ವಿಚಾರ ಭಾರಿ ಹೋರಾಟಕ್ಕೆ ನಾಂದಿ ಹಾಡಿರುವ ನಡುವೆಯೇ ಇತ್ತ ತುಮಕೂರಲ್ಲೂ (Tumakuru) ತಮ್ಮ ಜಾಗಕ್ಕಾಗಿ ರೈತರು ಬೀದಿಗಿಳಿದಿರುವ ಘಟನೆ ನಡೆದಿದೆ. ಗುಬ್ಬಿ ತಾಲೂಕಿನಲ್ಲಿರು ಹೆಚ್‌ಎಎಲ್‌ ಘಟಕದ ವಿಸ್ತರಣೆಗೆ 600 ಎಕರೆ ಜಮೀನು ನೀಡುವ ಪ್ರಸ್ತಾವನೆಗೆ ರೈತರು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಕೆಐಎಡಿಬಿ ಕಚೇರಿಗೆ ಮುತ್ತಿಗೆ ಹಾಕಿದ್ದಾರೆ. ಪ್ರಾಣ ಕೊಟ್ಟೇವು, ಆದರೆ ಜಮೀನು ಬಿಡಲ್ಲ ಎಂದು ಐದು ಗ್ರಾಮಗಳ ರೈತರು ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. ಫಲವತ್ತಾದ ಕೃಷಿ ಭೂಮಿ ಸ್ವಾಧೀನಕ್ಕೆ…

Read More

ಕೈಕೊಟ್ಟ ಮಳೆ: ಬಳ್ಳಾರಿ, ವಿಜಯನಗರದಿಂದ ಬರೋಬ್ಬರಿ 13,000 ಮಂದಿ ಗುಳೆ? – Kannada News | Drought Hits Hard: Over 13,000 People Migrate from Ballari and Vijayanagara Thandas as Monsoon Fails

ಖಾಲಿ ಖಾಲಿಯಾಗಿರುವ ಮನೆಗಳುImage Credit source: Tv9 Kannada ಬಳ್ಳಾರಿ, ಜುಲೈ 22: ಮುಂಗಾರು ಮಳೆ ಕೈಕೊಟ್ಟಿರುವ ಪರಿಣಾಮ ಬಳ್ಳಾರಿ, ವಿಜಯನಗರ ಜಿಲ್ಲೆಗಳ ಜನ ಕಂಗೆಟ್ಟಿದ್ದು, ಕುಟುಂಬ ಸಮೇತ ಗುಳೆ ಹೊರಟಿದ್ದಾರೆ. ಜಿಲ್ಲೆಯ ನೂರಾರು ತಾಂಡಾ ಹಾಗೂ ಹಳ್ಳಿಗಳ ಸಾವಿರಾರು ಜನ ತಂಡೋಪ ತಂಡವಾಗಿ ಊರುಬಿಡುತ್ತಿದ್ದು, ಇದು ಜಿಲ್ಲೆಯಲ್ಲಿನ ಭೀಕರ ಬರಗಾಲಕ್ಕೆ ಹಿಡಿದ ಕೈಗನ್ನಡಿಯಂತಿದೆ. ಮನೆಯಲ್ಲಿ ಹಿರಿ ಜೀವಗಳು ಹಾಗೂ ಪುಟಾಣಿ ಮಕ್ಕಳನ್ನ ಬಿಟ್ಟು ಉಳಿದವರೆಲ್ಲ ಹೊಟ್ಟೆ ತುಂಬಿಸಿಕೊಳ್ಳಲು ಅನ್ಯ ಊರುಗಳತ್ತ ಮುಖ ಮಾಡಿದ್ದಾರೆ. 140 ತಾಂಡಾಗಳಿಂದ…

Read More

ಪತ್ನಿಗೆ ಗೃಹಲಕ್ಷ್ಮಿ ಹಣ ಬಂದಿಲ್ಲ: ಕೊಪ್ಪಳದಲ್ಲಿ ಸಿಎಂಗೆ ಪತ್ರ ಬರೆದು ಪತಿ ಏಕಾಂಗಿ ಧರಣಿ – Kannada News | Gruhalakshmi Fund Denied: Koppal Man Protests Technical Glitch Hiding Wife’s Aid

ಕೊಪ್ಪಳ ಜು 22: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಗೃಹಲಕ್ಷ್ಮಿ’ ಯೋಜನೆಯ ಹಣ ಪತ್ನಿಗೆ ತಲುಪಿಲ್ಲ ಎಂದು ಆಕ್ರೋಶಗೊಂಡ ಪತಿಯೊಬ್ಬರು ಕೊಪ್ಪಳದ ಜಿಲ್ಲಾಡಳಿತ ಭವನದ ಮುಂಭಾಗದಲ್ಲಿ ಏಕಾಂಗಿಯಾಗಿ ಪ್ರತಿಭಟನೆಗೆ ಕುಳಿತ ಅಪರೂಪದ ಘಟನೆ ನಡೆದಿದೆ. ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಹಾಬಲಕಟ್ಟಿ ಗ್ರಾಮದ ಶರಣಪ್ಪ ಭೋವಿ ಎಂಬುವರೇ ತಮ್ಮ ಪತ್ನಿ ಶಿಲ್ಪಾ ಭೋವಿ ಅವರಿಗೆ ಗೃಹಲಕ್ಷ್ಮಿ ಹಣ ಸಿಗದಿದ್ದಕ್ಕೆ ಧರಣಿ ಕುಳಿತಿರುವ ವ್ಯಕ್ತಿಯಾಗಿದ್ದಾರೆ. ಶರಣಪ್ಪ ಅವರ ಪತ್ನಿ ಶಿಲ್ಪಾ ಭೋವಿ ಅವರು ಸರ್ಕಾರಿ ಶಾಲೆಯಲ್ಲಿ ಅತಿಥಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ….

Read More

ಈ ವಾರ ತೆರೆಗೆ ಬರುತ್ತಿವೆ ಆಸಕ್ತಿಕರ ಸಿನಿಮಾಗಳು, ಪಟ್ಟಿ ಇಲ್ಲಿದೆ – Kannada News | Movies releasing this week in theaters here is the list

ಪ್ರಜ್ವಲ್ ದೇವರಾಜ್, ರಾಜ್ ಬಿ ಶೆಟ್ಟಿ, ಮಿತ್ರ, ರಮೇಶ್ ಇಂದಿರಾ, ಸಂಪದಾ ಸೇರಿ ಹಲವು ಪ್ರತಿಭಾವಂತ ನಟ, ನಟಿಯರು ಒಟ್ಟಿಗೆ ಸೇರಿ ನಟಿಸಿರುವ ‘ಕರಾವಳಿ’ ಸಿನಿಮಾ ಈ ವಾರ ಬಿಡುಗಡೆ ಆಗುತ್ತಿದೆ. ಸಿನಿಮಾ ಅನ್ನು ಗುರುದತ್ ಗಾಣಿಗಾ ನಿರ್ದೇಶನ ಮಾಡಿದ್ದು ಸಿನಿಮಾದ ಬಗ್ಗೆ ಸಾಕಷ್ಟು ನಿರೀಕ್ಷೆಗಳಿವೆ. ಇದೇ ಶುಕ್ರವಾರ ಸಿನಿಮಾ ಬಿಡುಗಡೆ ಆಗುತ್ತಿದೆ. Source link

Read More

‘ಜನ ನಾಯಗನ್’ ಪ್ರಚಾರ ಮಾಡದ ಸಿಎಂ ವಿಜಯ್; ಆದರೂ ಹೇಗಿದೆ ಅಭಿಮಾನಿಗಳ ಕ್ರೇಜ್? – Kannada News | CM Vijay Last Movie Jana Nayagan releasing on 23 July dull buzz fans celebration

ತಮಿಳು ಚಿತ್ರರಂಗದ ಖ್ಯಾತ ನಟ ದಳಪತಿ ವಿಜಯ್ (CM Vijay) ಅಭಿನಯದ ಬಹುನಿರೀಕ್ಷಿತ ‘ಜನ ನಾಯಗನ್’ (Jana Nayagan) ಸಿನಿಮಾ ಜುಲೈ 23ರಂದು ಪ್ರಪಂಚದಾದ್ಯಂತ ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ತೆರೆಕಾಣುತ್ತಿದೆ. ತೆಲುಗಿನಲ್ಲಿ ಈ ಚಿತ್ರವು ‘ಜನ ನಾಯಕಡು’ ಎಂಬ ಶೀರ್ಷಿಕೆಯಲ್ಲಿ ಬಿಡುಗಡೆಯಾಗುತ್ತಿದೆ. ಹಿಂದಿಯಲ್ಲಿ ‘ಜನ್ ನೇತ’ ಎಂದು ಕರೆಯಲಾಗುತ್ತಿದೆ. ಈ ಸಿನಿಮಾ ಎಷ್ಟು ಕಲೆಕ್ಷನ್ ಮಾಡಬಹುದು ಎಂಬ ನಿರೀಕ್ಷೆ ಮನೆ ಮಾಡಿದೆ. ಈ ನಡುವೆ ದಳಪತಿ ವಿಜಯ್ (Thalapathy Vijay) ಅವರು ಈ ಸಿನಿಮಾವನ್ನು ಪ್ರಚಾರ ಮಾಡದೇ ಇರುವುದು…

Read More

‘ಬಿಜೆಪಿಗರ ಮೇಲೆ ಮೊಟ್ಟೆ ಎಸೆತ ಪೂರ್ವ ನಿಯೋಜಿತ ಕೃತ್ಯ’ ಎಂದ ಆರ್​​ ಅಶೋಕ್ – Kannada News | R Ashoka Calls Egg Throwing Incident Targeting BJP Members a Pre Planned Act

ಬೆಂಗಳೂರು, ಜುಲೈ 22: ‘ಬಿಜೆಪಿಗರ ಮೇಲೆ ಮೊಟ್ಟೆ ಎಸೆತ ಪೂರ್ವ ನಿಯೋಜಿತ ಕೃತ್ಯ’ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್​. ಅಶೋಕ್​ ಆರೋಪ ಮಾಡಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಪಾಕ್ ಏಜೆಂಟರು ಹಿಂದೂಗಳ ಮೇಲೆ ಹಲ್ಲೆ ಮಾಡಿದ್ದಾರೆ. ಹಲ್ಲೆ ಖಂಡಿಸಿ ಪಾದಯಾತ್ರೆ ಮೂಲಕ ಕಮಿಷನರ್​ ಕಚೇರಿಗೆ ಹೋಗುತ್ತೇವೆ. 15ಕ್ಕೂ ಹೆಚ್ಚು ಶಾಸಕರು ಮತ್ತು ಎಂಎಲ್ಸಿಗಳಿದ್ದರೂ ರಕ್ಷಣೆ ಇಲ್ಲವಾದರೆ ಸಾಮಾನ್ಯ ಜನರ ಗತಿಯೇನು? ಗೂಂಡಾ ಕಾಯ್ದೆಯಡಿ ಈ ಗೂಂಡಾಗಳ ಬಂಧನ ಆಗಬೇಕು. ಗೂಂಡಾ ಸಿಎಂ, ಗೂಂಡಾ ಸರ್ಕಾರ…

Read More

ಇಂಗ್ಲೆಂಡ್‌- ಆಸ್ಟ್ರೇಲಿಯಾ ನಡುವೆ ‘ವಿಶೇಷ’ ಆಶಸ್ ಸರಣಿ – Kannada News | Historic Mixed Disability Ashes 2027: Australia vs England T20 Series

ಈಗ, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವೆ ಹೊಸ ರೀತಿಯ ಆಶಸ್ ಪಂದ್ಯಗಳು ನಡೆಯಲಿವೆ. ಉಭಯ ದೇಶಗಳ ವಿಶೇಷ ಅಂಗವೈಕಲ್ಯ ತಂಡಗಳ ನಡುವೆ ಈ ಆಶಸ್ ಸರಣಿ ನಡೆಯಲಿದೆ. 2027 ರಲ್ಲಿ, ಆಸ್ಟ್ರೇಲಿಯಾದ ಪುರುಷರ ಮಿಶ್ರ ಅಂಗವಿಕಲರ ತಂಡವು ಇಂಗ್ಲೆಂಡ್‌ಗೆ ಪ್ರವಾಸ ಕೈಗೊಳ್ಳಲಿದ್ದು, ಅಲ್ಲಿ ಎರಡೂ ದೇಶಗಳ ನಡುವೆ ಮೊದಲ ಬಾರಿಗೆ ಮಿಶ್ರ ಅಂಗವಿಕಲರ ಆಶಸ್ ಅಂತರರಾಷ್ಟ್ರೀಯ ಟಿ20 ಸರಣಿ ನಡೆಯಲಿದೆ(PC-PTI). Source link

Read More

Best Color for Dusky Skin: ಕಪ್ಪು ಮೈಬಣ್ಣದವರು ಈ ಕಲರ್‌ ಬಟ್ಟೆಗಳನ್ನು ಧರಿಸಿದರೆ ಸಖತ್‌ ಸುಂದರವಾಗಿ ಕಾಣಿಸುತ್ತಾರೆ – Kannada News | Best Color for Dusky Skin: These are color clothes that suit for dusky skin

ಎಷ್ಟೇ ಸುಂದರವಾದ ಬಟ್ಟೆಯಾದರೂ (clothes) ಸರಿ, ಅದು ನಮ್ಮ ಸ್ಕಿನ್‌ ಟೋನ್‌ಗೆ ಮ್ಯಾಚ್‌ ಆಗದಿದ್ದರೆ, ಅದು ನಮ್ಮ ಸೌಂದರ್ಯವನ್ನು ಕುಗ್ಗಿಸುತ್ತದೆ. ಹಾಗಾಗಿ ನಮ್ಮ ಮೈಬಣ್ಣಕ್ಕೆ ಹೊಂದಿಕೆಯಾಗುವ ಸೂಕ್ತ ಬಣ್ಣದ ಬಟ್ಟೆಗಳನ್ನು ಆರಿಸುವುದು ತುಂಬಾನೇ ಮುಖ್ಯ. ಹೆಚ್ಚಾಗಿ ಈ ಡಸ್ಕಿ ಸ್ಕಿನ್‌ ಟೋನ್‌ ಇರುವವರಿಗೆ ಬಟ್ಟೆಗಳನ್ನು ಆಯ್ಕೆ ಮಾಡುವ ವಿಚಾರದಲ್ಲಿ ತುಂಬಾನೇ ಗೊಂದಲಗಳಿರುತ್ತವೆ. ಈ ಬಣ್ಣ ನನಗೆ ಸೂಟ್‌ ಆಗೋತ್ತೋ, ಈ ಬಣ್ಣದ ಬಟ್ಟೆ ಧರಿಸಿದರೆ ನಾನು ಇನ್ನಷ್ಟು ಕಪ್ಪಾಗಿ ಕಾಣಿಸುತ್ತೀನೋ ಎಂಬ ಗೊಂದಲದಲ್ಲಿರುತ್ತಾರೆ. ನೀವು ಕೂಡ ಕಪ್ಪು…

Read More