Headlines

ಎಫ್​ಸಿಆರ್​ಎ ತಿದ್ದುಪಡಿ ಮಸೂದೆ, ಸದ್ಯ ಭಾರತಕ್ಕೆ ಯಾಕೆ ಮುಖ್ಯ ಗೊತ್ತಾ? ಇಲ್ಲಿದೆ ವಿವಿಧ ಕಾರಣಗಳು – Kannada News | FCRA amendment bill and its significance and importance

ಡಾಲರ್​ನ ಸಾಂದರ್ಭಿಕ ಚಿತ್ರImage Credit source: Getty Images ಭಾರತದ ಅಭಿವೃದ್ಧಿಗೆ ಅಡ್ಡಿಪಡಿಸಲು, ಭಯೋತ್ಪಾದನೆಗೆ ಸಂಬಂಧಿಸಿದ ಚಟುವಟಿಕೆಗಳಿಗೆ ಬೆಂಬಲ ನೀಡಲು ಮತ್ತು ದುರ್ಬಲ ಸಮುದಾಯಗಳನ್ನು ಗುರಿಯಾಗಿಸಿಕೊಂಡು ಸಂಘಟಿತ ಧಾರ್ಮಿಕ ಮತಾಂತರಗಳಿಗೆ ವಿದೇಶಿ ಹಣವನ್ನು ಬಳಸಲಾಗುತ್ತಿದೆ ಎಂಬುದಕ್ಕೆ ಹಲವು ತನಿಖೆಗಳಲ್ಲಿ ಸಾಕ್ಷ್ಯಗಳು ಲಭ್ಯವಾಗಿರುವ ಸಮಯದಲ್ಲಿ FCRA ತಿದ್ದುಪಡಿ ವಿಧೇಯಕ, 2026 ಬಂದಿದೆ. 2019 ಮತ್ತು 2022 ರ ನಡುವೆ, 13,500 ಕ್ಕೂ ಹೆಚ್ಚು ಸಂಸ್ಥೆಗಳು ₹55,741 ಕೋಟಿ ವಿದೇಶಿ ದೇಣಿಗೆಯನ್ನು ಪಡೆದಿವೆ. ವಿದೇಶೀ ಕೊಡುಗೆ ನಿಯಂತ್ರಕ ಕಾಯ್ದೆ (FCRA)…

Read More

13 ಭಯೋತ್ಪಾದಕರಲ್ಲಿ ಇಬ್ಬರು ವಡೋದರಾ ಹೋಟೆಲ್‌ನಲ್ಲಿ ತಂಗಿದ್ದರು; ಎಟಿಎಸ್ ತನಿಖೆಯಲ್ಲಿ ಬಯಲು – Kannada News | 2 terrorists stayed in a hotel in Vadodara ATS Probe Reveals

ವಡೋದರಾ, ಜುಲೈ 22: ಗುಜರಾತ್‌ನಲ್ಲಿ ಉಗ್ರರ ಜಾಲವನ್ನು ಮಟ್ಟಹಾಕಲು ಗುಜರಾತ್ ಎಟಿಎಸ್ ನಡೆಸುತ್ತಿರುವ ಬೃಹತ್ ಕಾರ್ಯಾಚರಣೆಯಲ್ಲಿ ದಿನಕ್ಕೊಂದು ಆಘಾತಕಾರಿ ಸತ್ಯಗಳು ಹೊರಬೀಳುತ್ತಿವೆ. ಪಾಕಿಸ್ತಾನ (Pakistan) ಮೂಲದ ಜೈಶ್-ಎ-ಮೊಹಮ್ಮದ್ (JeM) ಉಗ್ರ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದ ಪ್ರಕರಣದಲ್ಲಿ ಎಟಿಎಸ್ ವಶಕ್ಕೆ ಪಡೆದಿರುವ ಒಟ್ಟು 13 ಉಗ್ರರಲ್ಲಿ ಇಬ್ಬರು ಉಗ್ರರು ವಡೋದರಾದ ಪ್ರಸಿದ್ಧ ಹೋಟೆಲ್‌ನಲ್ಲಿ ತಂಗಿದ್ದರು ಎಂಬ ವಿಷಯ ತನಿಖೆಯಿಂದ ಬಹಿರಂಗವಾಗಿದೆ. ಎಟಿಎಸ್​ನಿಂದ ಬಂಧನಕ್ಕೊಳಗಾಗಿರುವ ಉಗ್ರರಾದ ಅಹಮದ್ ಗಾಜಿವಾಲಾ ಮತ್ತು ಇಬ್ರಾಹಿಂ ಘಘಾ ಎಂಬಿಬ್ಬರು ವಡೋದರಾದ ಸಯಾಜಿಗಂಜ್ ಪ್ರದೇಶದಲ್ಲಿರುವ ಅಂಬಾಸಿಡರ್…

Read More

PNB Recruitment 2026: ಪಂಜಾಬ್ ನ್ಯಾಷನಲ್ ಬ್ಯಾಂಕ್​ನಲ್ಲಿ ನೇಮಕಾತಿ; 545 ಲೋಕಲ್ ಬ್ಯಾಂಕ್ ಆಫೀಸರ್ ಹುದ್ದೆಗೆ ಅರ್ಜಿ ಆಹ್ವಾನ – Kannada News | PNB Recruitment 2026: 545 Local Bank Officer Jobs, Karnataka 78 Vacancies

ಉದ್ಯೋಗಾಕಾಂಕ್ಷಿಗಳಿಗೆ ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) ಸಿಹಿ ಸುದ್ದಿ ನೀಡಿದೆ. ದೇಶಾದ್ಯಂತ ವಿವಿಧ ಶಾಖೆಗಳಲ್ಲಿ ಖಾಲಿ ಇರುವ ಲೋಕಲ್ ಬ್ಯಾಂಕ್ ಆಫೀಸರ್ (LBO) ಹುದ್ದೆಗಳ ಭರ್ತಿಗೆ ಬೃಹತ್ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದೆ. ಈ ನೇಮಕಾತಿ ಅಭಿಯಾನದ ಮೂಲಕ ಒಟ್ಟು 545 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಇದರಲ್ಲಿ ಕರ್ನಾಟಕ ರಾಜ್ಯಕ್ಕೆ 78 ಹುದ್ದೆಗಳನ್ನು ಕಾಯ್ದಿರಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ತಮ್ಮ ಅರ್ಜಿಗಳನ್ನು ಸಲ್ಲಿಸಬಹುದು. ರಾಜ್ಯವಾರು ಖಾಲಿ ಹುದ್ದೆಗಳ ಹಂಚಿಕೆ: ಈ ಅಧಿಸೂಚನೆಯಡಿ ವಿವಿಧ ರಾಜ್ಯಗಳಲ್ಲಿ…

Read More

ಐಎನ್ಎಸ್ ಮಾಲ್ವನ್: ಭಾರತೀಯ ನೌಕಾಪಡೆಗೆ ಸೇರ್ಪಡೆಗೊಂಡ ಸ್ವದೇಶಿ ನಿರ್ಮಿತ ಯುದ್ಧ ನೌಕೆ – Kannada News | INS Malvan: Indias New Indigenous Warship Joins Naval Fleet at Karwar Base

ಕಾರವಾರ, ಜುಲೈ 22: ಭಾರತೀಯ ನೌಕಾಪಡೆಗೆ ಮತ್ತೊಂದು ಮಹತ್ವದ ಹೆಜ್ಜೆಯಾಗಿ ಸ್ವದೇಶಿ ನಿರ್ಮಿತ ಯುದ್ಧ ನೌಕೆ ಐಎನ್ಎಸ್ ಮಾಲ್ವನ್ ಕಾರವಾರದ ಕದಂಬ ನೌಕಾನೆಲೆಯಲ್ಲಿ ಸೇರ್ಪಡೆಯಾಗಿದೆ. ಕೇರಳದ ಕೊಚ್ಚಿ ಶಿಪ್‌ಯಾರ್ಡ್‌ನಲ್ಲಿ ನಿರ್ಮಿಸಲಾದ ಐಎನ್ಎಸ್ ಮಾಲ್ವನ್ ಶೇಕಡಾ 80ರಷ್ಟು ಸ್ವದೇಶಿ ನಿರ್ಮಿತವಾಗಿದೆ. 78 ಮೀಟರ್ ಉದ್ದ, 11.2 ಮೀಟರ್ ಅಗಲ ಮತ್ತು 2.7 ಮೀಟರ್ ಆಳ ಹೊಂದಿರುವ ಈ ಯುದ್ಧ ನೌಕೆಯು 7 ಅಧಿಕಾರಿಗಳು ಮತ್ತು 57 ನಾವಿಕರಿಗೆ ಸ್ಥಳಾವಕಾಶ ಕಲ್ಪಿಸುತ್ತದೆ. ಇದರ ಪ್ರಮುಖ ವೈಶಿಷ್ಟ್ಯವೆಂದರೆ ಜಲಾಂತರ್ಗಾಮಿ ವಿರೋಧಿ ಕಾರ್ಯಾಚರಣೆ…

Read More

6 ಮಂದಿ ಎಡಗೈ ದಾಂಡಿಗರು: ಹೀಗಿರಲಿದೆ ಟೀಮ್ ಇಂಡಿಯಾ ಪ್ಲೇಯಿಂಗ್ 11 – Kannada News | India’s Probable XI for 1st T20 vs Zimbabwe

ಭಾರತ ಮತ್ತು ಝಿಂಬಾಬ್ವೆ ನಡುವಣ ಮೂರು ಮ್ಯಾಚ್​ಗಳ ಟಿ20 ಸರಣಿ ಗುರುವಾರದಿಂದ (ಜು.23) ಶುರುವಾಗಲಿದೆ. ಹರಾರೆಯಲ್ಲಿ ನಡೆಯಲಿರುವ ಈ ಸರಣಿಯ ಮೊದಲ ಪಂದ್ಯಕ್ಕಾಗಿ ಟೀಮ್ ಇಂಡಿಯಾ ಬಲಿಷ್ಠ ಪ್ಲೇಯಿಂಗ್ ಇಲೆವೆನ್ ರೂಪಿಸಲಿದೆ. ಈ ಪ್ಲೇಯಿಂಗ್ ಇಲೆವೆನ್​ನಲ್ಲಿ ಎಡಗೈ ದಾಂಡಿಗರ ದಂಡೇ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಏಕೆಂದರೆ ಭಾರತ ತಂಡದಲ್ಲಿರುವ 9 ಬ್ಯಾಟರ್​ಗಳಲ್ಲಿ ಆರು ಮಂದಿ ಎಡಗೈ ದಾಂಡಿಗರು. ಇವರಲ್ಲಿ ಬಹುತೇಕರು ಆಡುವ ಬಳಗದ ಖಾಯಂ ಸದಸ್ಯರು. ಹೀಗಾಗಿ ಝಿಂಬಾಬ್ವೆ ವಿರುದ್ಧದ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ಪರ ಆರು…

Read More

ಅವನನ್ನು ಯಾವಾಗ ಕರ್ಕೊಂಡು ಬರ್ತೀಯಾ ಎಂದು ಕೇಳಿದ್ದರು ಚೆನ್ನಮ್ಮ: ಪರೋಕ್ಷವಾಗಿ ಪ್ರಜ್ವಲ್ ವಿಚಾರ ಪ್ರಸ್ತಾಪಿಸಿದ ಹೆಚ್​ಡಿಕೆ – Kannada News | HD Kumaraswamy Recalls Chennamma’s Emotional Words, Indirectly Refers to Prajwal Revanna During Memorial Ceremony

ಹಾಸನ, ಜುಲೈ 22: ‘ನಮ್ಮ ಕುಟುಂಬದಲ್ಲಿ ನಡೆದ ಕೆಲವು ಘಟನೆಗಳಿಂದ ತಾಯಿ ಚೆನ್ನಮ್ಮ (ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡರ ಪತ್ನಿ) ಮಾನಸಿಕ ಯಾತನೆಗೆ ಒಳಗಾಗಿದ್ದರು. ‘‘ಅವನನ್ನು ಯಾವಾಗ ಕರ್ಕೊಂಡು ಬರ್ತೀಯಪ್ಪ’’ ಎಂದು ಪದೇ ಪದೇ ಕೇಳುತ್ತಿದ್ದರು. ಆ ಮಾತು ಇಂದಿಗೂ ತಮಗೆ ನೋವುಂಟು ಮಾಡುತ್ತದೆ’ ಎಂದು ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ಪರೋಕ್ಷವಾಗಿ ಪ್ರಜ್ವಲ್ ರೇವಣ್ಣ ಪ್ರಕರಣವನ್ನು ಉಲ್ಲೇಖಿಸಿದರು. ಚೆನ್ನಮ್ಮ ಸಮಾಧಿಗೆ ಮೂರನೇ ದಿನದ ಹಾಲು ತುಪ್ಪ ಕಾರ್ಯದ ಸಂದರ್ಭ ಮಾತನಾಡಿದ ಕುಮಾರಸ್ವಾಮಿ, ಕಳೆದ ಒಂದೂವರೆ ವರ್ಷದಿಂದ…

Read More

ಕಾಮನ್‌ವೆಲ್ತ್ ಗೇಮ್ಸ್ ಯಾವಾಗ ಶುರು? ಇಲ್ಲಿದೆ ಸಂಪೂರ್ಣ ಮಾಹಿತಿ – Kannada News | Commonwealth Games 2026 Starting Date

Commonwealth Games 2026: ಬಹುನಿರೀಕ್ಷಿತ ಕಾಮನ್‌ವೆಲ್ತ್ ಗೇಮ್ಸ್​ ನಾಳೆಯಿಂದ (ಜುಲೈ 23) ಶುರುವಾಗಲಿದೆ. ಸ್ಕಾಟ್‌ಲ್ಯಾಂಡ್‌ನ ಪ್ರಸಿದ್ಧ ನಗರ ಗ್ಲ್ಯಾಸ್ಗೋದಲ್ಲಿ ನಡೆಯಲಿರುವ 23ನೇ ಆವೃತ್ತಿಯ ಈ ಕ್ರೀಡಾಕೂಟದಲ್ಲಿ ಒಟ್ಟು 74 ದೇಶಗಳ ಸುಮಾರು 3000 ಅಥ್ಲೀಟ್​ಗಳು ಭಾಗವಹಿಸುತ್ತಿದ್ದಾರೆ. ಆಸ್ಟ್ರೇಲಿಯಾದಿಂದ ಸ್ಥಳಾಂತರ: ಮೊದಲು ಈ ಕ್ರೀಡಾಕೂಟವನ್ನು ಆಸ್ಟ್ರೇಲಿಯಾದ ವಿಕ್ಟೋರಿಯಾ ರಾಜ್ಯದಲ್ಲಿ ಆಯೋಜಿಸಲು ನಿರ್ಧರಿಸಲಾಗಿತ್ತು. ಆದರೆ ವಿಪರೀತ ವೆಚ್ಚದ ಕಾರಣದಿಂದಾಗಿ ಆಸ್ಟ್ರೇಲಿಯಾ ಹಿಂದೆ ಸರಿಯಿತು. ಕೊನೆಗೆ ಕ್ರೀಡಾಕೂಟವನ್ನು ಆಯೋಜನೆಯ ಉಸ್ತುವಾರಿಯನ್ನು ಸ್ಕಾಟ್‌ಲ್ಯಾಂಡ್‌ ಸರ್ಕಾರ ವಹಿಸಿಕೊಂಡಿದೆ. ಅದರಂತೆ ಈ ಬಾರಿ ಗ್ಲ್ಯಾಸ್ಗೋ ನಗರದಲ್ಲಿ ಕಾಮನ್‌ವೆಲ್ತ್…

Read More

ಮೊಮ್ಮಗನನ್ನು ಮಡಿಲಿನಲ್ಲಿ ಹೊತ್ತುಕೊಂಡು ಮದುವೆ ಶೂಟ್‌ ಮಾಡಿದ ಫೋಟೋಗ್ರಾಫರ್ – Kannada News | A female photographer took a photo at a wedding while carrying her grandson in her lap.

ತಾಯಿಯಂತೆ ಪ್ರೀತಿಸುವ ಮತ್ತೊಂದು ಜೀವ ಇದ್ದರೆ ಅದು ಅಜ್ಜಿ (grandmother) ಮಾತ್ರ. ಅಜ್ಜ ಅಜ್ಜಿಯಂದಿರು ಮೊಮ್ಮಕ್ಕಳನ್ನು ತಮ್ಮ ಮಕ್ಕಳಂತೆ ನೋಡಿಕೊಳ್ಳುತ್ತಾರೆ. ಈ ಹಿರಿಜೀವಗಳ ಮಡಿಲಿನಲ್ಲಿ ಬೆಳೆದು ದೊಡ್ಡವರಾದವರು ಅದೆಷ್ಟೋ ಮೊಮ್ಮಕ್ಕಳು.ಇದೀಗ ಮೊಮ್ಮಗನನ್ನು ಮಡಿಲಿನಲ್ಲಿ ಹೊತ್ತು ಮಹಿಳಾ ಫೋಟೋಗ್ರಾಫರ್ ತನ್ನ  ಪೋಟೋಗ್ರಾಫಿ ಕೆಲಸ ಮಾಡಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರ ಗಮನ ಸೆಳೆದಿದೆ. ನವೀನ್ ಫೋಟೋಗ್ರಾಫಿ (Naveen photography) ಹೆಸರಿನ ಫೇಸ್ಬುಕ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್‌ನಲ್ಲಿ ಮಹಿಳೆಯೊಬ್ಬರು ತನ್ನ ಮಡಿಲಿನಲ್ಲಿ…

Read More

ಜೈಲು ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಶವಪೆಟ್ಟಿಗೆಯಲ್ಲಿ ಮಲಗಿ ಊರು ಬಿಟ್ಟ ವ್ಯಕ್ತಿ, ಸಿಕ್ಕಿಬಿದ್ದಿದ್ಹೇಗೆ? – Kannada News | Drunk Driver Fakes Death in Coffin to Escape Jail in China; Police Catch Him

ಬೀಜಿಂಗ್, ಜುಲೈ 22: ಕುಡಿದು ವಾಹನ ಚಲಾಯಿಸಿದ್ದ ವ್ಯಕ್ತಿ ಜೈಲು(Jail) ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಚೀನಾದ ವ್ಯಕ್ತಿಯೊಬ್ಬ ತಾನೇ ಸತ್ತಂತೆ ನಟಿಸಿ, ಶವ ಪೆಟ್ಟಿಗೆಯೊಳಗೆ ಮಲಗಿ ನೂರಾರು ಕಿ.ಮೀ ದೂರ ಅದರಲ್ಲಿ ಹೋಗಿ ಅಲ್ಲಿಂದ ಕಾಲ್ಕಿತ್ತಿರುವ ಘಟನೆ ಹೆನಾನ್ ಪ್ರಾಂತ್ಯದ ಅನ್ಯಾಂಗ್​ನಲ್ಲಿ ನಡೆದಿದೆ. ಚೀನಾದ ಸಾಮಾಜಿಕ ಜಾಲತಾಣಗಳಲ್ಲಿ ಈ ಸುದ್ದಿ ಈಗ ಸಖತ್ ವೈರಲ್ ಆಗಿದೆ. ಈ ವ್ಯಕ್ತಿ ಹಿಂದೆ ಎರಡು ಬಾರಿ ಚಾಲನಾ ಪರವಾನಗಿ ಇಲ್ಲದೆ ಕುಡಿದು ವಾಹನ ಚಲಾಯಿಸಿ ಸಿಕ್ಕಿಬಿದ್ದಿದ್ದ. ಕಳೆದ ವರ್ಷದ ಜನವರಿಯಲ್ಲಿ ಮೂರನೇ…

Read More

ಭಾರತಕ್ಕೆ ಸರಾಗವಾಗಿ ಬರುತ್ತಿರುವ ವಿದೇಶೀ ನೇರ ಹೂಡಿಕೆ; ಕರ್ನಾಟಕಕ್ಕೆ ಭರ್ಜರಿ ಹೂಡಿಕೆ ಹೆಚ್ಚಳ; ಎರಡನೇ ಸ್ಥಾನಕ್ಕೆ ಜಿಗಿತ – Kannada News | FDI inflow, investment into Karnataka almost doubles in 26fy, jumps to No. 2 after Maharashtra

ನವದೆಹಲಿ, ಜುಲೈ 22: ಭಾರತದ ವಿವಿಧ ಕ್ಷೇತ್ರಗಳಿಗೆ ವಿದೇಶೀ ನೇರ ಹೂಡಿಕೆಗಳು (FDI- Foreign Direct Investment) ಭರಪೂರವಾಗಿ ಹರಿದುಬರುವುದು ಮುಂದುವರಿದಿದೆ. ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಖಾತೆ ರಾಜ್ಯ ಸಚಿವ ಜಿತಿನ್ ಪ್ರಸಾದ (Jitin Prasada) ಅವರು 2020-21ರಿಂದ 2025-26ರವರೆಗೆ ಭಾರತದಲ್ಲಿ ರಾಜ್ಯವಾರು ಎಫ್​ಡಿಐ ಹರಿವಿನ ಮಾಹಿತಿ ನೀಡಿದ್ದಾರೆ. ಅದರ ಪ್ರಕಾರ, ಕರ್ನಾಟಕದಲ್ಲಿ ಎಫ್​ಡಿಐ ಹರಿವು ಸಖತ್ ಏರಿಕೆಯಾಗಿದೆ. ಮಹಾರಾಷ್ಟ್ರದ ನಂತರ ಅತಿಹೆಚ್ಚು ಎಫ್​ಡಿಐ ಪಡೆದಿರುವ ರಾಜ್ಯವೆಂದರೆ ಕರ್ನಾಟಕ. ಎಫ್​ಡಿಐ, ಎರಡನೇ ಸ್ಥಾನಕ್ಕೆ ಏರಿದ ಕರ್ನಾಟಕ…

Read More