ಮೊಮ್ಮಗನನ್ನು ಮಡಿಲಿನಲ್ಲಿ ಹೊತ್ತುಕೊಂಡು ಮದುವೆ ಶೂಟ್‌ ಮಾಡಿದ ಫೋಟೋಗ್ರಾಫರ್ – Kannada News | A female photographer took a photo at a wedding while carrying her grandson in her lap.

ತಾಯಿಯಂತೆ ಪ್ರೀತಿಸುವ ಮತ್ತೊಂದು ಜೀವ ಇದ್ದರೆ ಅದು ಅಜ್ಜಿ (grandmother) ಮಾತ್ರ. ಅಜ್ಜ ಅಜ್ಜಿಯಂದಿರು ಮೊಮ್ಮಕ್ಕಳನ್ನು ತಮ್ಮ ಮಕ್ಕಳಂತೆ ನೋಡಿಕೊಳ್ಳುತ್ತಾರೆ. ಈ ಹಿರಿಜೀವಗಳ ಮಡಿಲಿನಲ್ಲಿ ಬೆಳೆದು ದೊಡ್ಡವರಾದವರು ಅದೆಷ್ಟೋ ಮೊಮ್ಮಕ್ಕಳು.ಇದೀಗ ಮೊಮ್ಮಗನನ್ನು ಮಡಿಲಿನಲ್ಲಿ ಹೊತ್ತು ಮಹಿಳಾ ಫೋಟೋಗ್ರಾಫರ್ ತನ್ನ  ಪೋಟೋಗ್ರಾಫಿ ಕೆಲಸ ಮಾಡಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರ ಗಮನ ಸೆಳೆದಿದೆ.

ನವೀನ್ ಫೋಟೋಗ್ರಾಫಿ (Naveen photography) ಹೆಸರಿನ ಫೇಸ್ಬುಕ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್‌ನಲ್ಲಿ ಮಹಿಳೆಯೊಬ್ಬರು ತನ್ನ ಮಡಿಲಿನಲ್ಲಿ ಹೊತ್ತುಕೊಂಡು ತನ್ನ ವೃತ್ತಿಯನ್ನು ನಿರ್ವಹಿಸಿದ್ದಾರೆ. ಮದುವೆ ಫೋಟೋಗಳನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿಯುತ್ತಿರುವ ಜತೆಗೆ ಮೊಮ್ಮಗನಿಗೆ ಆಹಾರ ನೀಡುತ್ತಿರುವುದನ್ನು
ಕಾಣಬಹುದು.

ಇದನ್ನೂ ಓದಿ: ಬೀಚ್ ಕಂಡೊಡನೆ ಮೈ ಮರೆತು ಮಕ್ಕಳಂತೆ ಆಟ ಆಡಿದ ಅಜ್ಜಿ, ವೈರಲ್ ಆಯ್ತು ದೃಶ್ಯ

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಈ ಪುಟ್ಟ ಕಂದಮ್ಮ ನಿಮ್ಮ ಮೊಮ್ಮಗ ಹೇಳಿ ಶಾಕ್ ಆಯ್ತು, ನಾನು ನಿಮ್ಮದು ಮಗ ಅಂದುಕೊಂಡೆ ಎಂದು ಹೇಳಿದ್ದಾರೆ. ಇನ್ನೊಬ್ಬರು, ನೀವು ಈ ಮೊಮ್ಮಗನ ಅಜ್ಜಿಯಂತೆ ಕಾಣಲ್ಲ ಎಂದಿದ್ದಾರೆ. ಮತ್ತೊಬ್ಬರು, ಹೆಣ್ಮಕ್ಳಳೇ ಸ್ಟ್ರಾಂಗ್ ಗುರು ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 10:47 am, Wed, 22 July 26

Source link

ಜೈಲು ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಶವಪೆಟ್ಟಿಗೆಯಲ್ಲಿ ಮಲಗಿ ಊರು ಬಿಟ್ಟ ವ್ಯಕ್ತಿ, ಸಿಕ್ಕಿಬಿದ್ದಿದ್ಹೇಗೆ? – Kannada News | Drunk Driver Fakes Death in Coffin to Escape Jail in China; Police Catch Him

ಬೀಜಿಂಗ್, ಜುಲೈ 22: ಕುಡಿದು ವಾಹನ ಚಲಾಯಿಸಿದ್ದ ವ್ಯಕ್ತಿ ಜೈಲು(Jail) ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಚೀನಾದ ವ್ಯಕ್ತಿಯೊಬ್ಬ ತಾನೇ ಸತ್ತಂತೆ ನಟಿಸಿ, ಶವ ಪೆಟ್ಟಿಗೆಯೊಳಗೆ ಮಲಗಿ ನೂರಾರು ಕಿ.ಮೀ ದೂರ ಅದರಲ್ಲಿ ಹೋಗಿ ಅಲ್ಲಿಂದ ಕಾಲ್ಕಿತ್ತಿರುವ ಘಟನೆ ಹೆನಾನ್ ಪ್ರಾಂತ್ಯದ ಅನ್ಯಾಂಗ್​ನಲ್ಲಿ ನಡೆದಿದೆ. ಚೀನಾದ ಸಾಮಾಜಿಕ ಜಾಲತಾಣಗಳಲ್ಲಿ ಈ ಸುದ್ದಿ ಈಗ ಸಖತ್ ವೈರಲ್ ಆಗಿದೆ.

ಈ ವ್ಯಕ್ತಿ ಹಿಂದೆ ಎರಡು ಬಾರಿ ಚಾಲನಾ ಪರವಾನಗಿ ಇಲ್ಲದೆ ಕುಡಿದು ವಾಹನ ಚಲಾಯಿಸಿ ಸಿಕ್ಕಿಬಿದ್ದಿದ್ದ. ಕಳೆದ ವರ್ಷದ ಜನವರಿಯಲ್ಲಿ ಮೂರನೇ ಬಾರಿಗೆ ಮದ್ಯಪಾನ ಮಾಡಿ ವಾಹನ ಚಲಾಯಿಸುವಾಗ ಪೊಲೀಸರು ಈತನನ್ನು ಬಂಧಿಸಿದ್ದರು. ಚೀನಾದ ಕಠಿಣ ಕಾನೂನಿನ ಪ್ರಕಾರ, ಕುಡಿದು ವಾಹನ ಚಲಾಯಿಸುವುದು ಗುರುತರ ಅಪರಾಧವಾಗಿದ್ದು, 6 ತಿಂಗಳ ಜೈಲು ಶಿಕ್ಷೆ ಹಾಗೂ ಭಾರಿ ದಂಡ ವಿಧಿಸಲಾಗುತ್ತದೆ. ಸಾಲದ ಸುಳಿಯಲ್ಲಿದ್ದ ಈ ವ್ಯಕ್ತಿ ಮತ್ತೊಮ್ಮೆ ಜೈಲು ಶಿಕ್ಷೆಯಾದರೆ ತನ್ನ ಜೀವನವೇ ನಾಶವಾಗುತ್ತದೆ ಎಂದು ಹೆದರಿ ಈ ಯೋಜನೆ ರೂಪಿಸಿದ್ದ.

ಸ್ವತಃ ಶವಪೆಟ್ಟಿಗೆಯನ್ನು ಮುಂಚಿತವಾಗಿಯೇ ಖರೀದಿಸಿದ ಈತ, ಮನೆಯಲ್ಲಿ ಮಾತ್ರೆಗಳನ್ನು ಸೇವಿಸಿ ಸತ್ತಂತೆ ನಟಿಸಲು ಖಾಲಿ ಔಷಧ ಬಾಟಲಿಗಳನ್ನು ಹರಡಿದ್ದ. ದೇಹ ತಣ್ಣಗಾಗಿಸಲು ಕೂಲಿಂಗ್ ಉಪಕರಣಗಳನ್ನು ಬಳಸಿ, ಉಸಿರು ಬಿಗಿಹಿಡಿದು ಶವಪೆಟ್ಟಿಗೆಯಲ್ಲಿ ಮಲಗಿದ್ದ.

ಆತನ ಮುಖ ವಿರೂಪಗೊಂಡಿದೆ ಎಂದು ಹೇಳಿ ತಾಯಿ ಮತ್ತು ಅಜ್ಜಿ ಮುಖವನ್ನು ಸಂಪೂರ್ಣವಾಗಿ ಮುಚ್ಚಿದ್ದರು. ರಾತ್ರಿಯಾಗುತ್ತಿದ್ದಂತೆ ಯಾರೂ ನೋಡದಂತೆ ಆತನನ್ನು ರಹಸ್ಯವಾಗಿ ಎಬ್ಬಿಸಿ, ನೈಋತ್ಯ ಚೀನಾದ ಯುನ್ನಾನ್ ಪ್ರಾಂತ್ಯಕ್ಕೆ ಕಳುಹಿಸಿಕೊಟ್ಟರು. ಆ ವ್ಯಕ್ತಿ ಸಾವನ್ನಪ್ಪಿದ್ದಾನೆ ಎಂಬ ಸುದ್ದಿ ತಿಳಿದು ಪೊಲೀಸರು ತನಿಖೆಗೆ ಬಂದಾಗ ಅನುಮಾನ ಹುಟ್ಟಿತ್ತು.

ಮತ್ತಷ್ಟು ಓದಿ: ಅರೆಸ್ಟ್​​ ಆಗಿದ್ದ ಆರೋಪಿ 6 ಗಂಟೆಯಲ್ಲೇ ಪೊಲೀಸ್​ ಠಾಣೆಯಿಂದ ಎಸ್ಕೇಪ್! ನಿರ್ಲಕ್ಷ್ಯ ಆರೋಪ

ವ್ಯಕ್ತಿ ಸತ್ತಾಗ ಕುಟುಂಬದವರು ಯಾವುದೇ ವೈದ್ಯರಿಗಾಗಲಿ, ತುರ್ತು ಆಂಬ್ಯುಲೆನ್ಸ್‌ಗಾಗಲಿ ಕರೆ ಮಾಡಿರಲಿಲ್ಲ. ಯಾವುದೇ ಅಧಿಕೃತ ಮರಣ ಪ್ರಮಾಣಪತ್ರ ಅಥವಾ ದಹನ ದಾಖಲೆ ಇರಲಿಲ್ಲ. ತಾಯಿ ಮತ್ತು ಅಜ್ಜಿಯನ್ನು ಹೊರತುಪಡಿಸಿ ಬೇರೆ ಯಾರೂ ಶವವನ್ನು ನೋಡಿರಲಿಲ್ಲ. ಪೋಲಿಸರು ಸಿಸಿಟಿವಿ ದೃಶ್ಯಾವಳಿ, ಬ್ಯಾಂಕ್ ವಹಿವಾಟು ಹಾಗೂ ಫೋನ್ ಡೇಟಾವನ್ನು ಆಧರಿಸಿ ತನಿಖೆ ನಡೆಸಿದಾಗ ಆತ ಜೀವಂತವಾಗಿರುವುದು ಖಾತ್ರಿಯಾಯಿತು.

ಸಿಕ್ಕಿಬಿದ್ದ ಆರೋಪಿ: ತಾಯಿ-ಅಜ್ಜಿ ವಿರುದ್ಧವೂ ಕ್ರಿಮಿನಲ್ ಕೇಸ್
ದೀರ್ಘ ಶೋಧದ ನಂತರ ಈ ವರ್ಷದ ಏಪ್ರಿಲ್‌ನಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸಿದರು. ನ್ಯಾಯಾಲಯ ಆತನಿಗೆ 5 ತಿಂಗಳ ಜೈಲು ಶಿಕ್ಷೆ ಹಾಗೂ 20,000 ಯುವಾನ್ ( ಅಂದರೆ ಸುಮಾರು 2.35 ಲಕ್ಷ ರೂ.) ದಂಡ ವಿಧಿಸಿದೆ.

ಅಷ್ಟೇ ಅಲ್ಲದೆ, ಅಪರಾಧಿಗೆ ರಕ್ಷಣೆ ನೀಡಿ, ಪೊಲೀಸರ ದಾರಿ ತಪ್ಪಿಸಲು ಯತ್ನಿಸಿದ ಆರೋಪದ ಮೇಲೆ ಜೂನ್ 11 ರಂದು ಆತನ ತಾಯಿ ಮತ್ತು ಅಜ್ಜಿಯ ವಿರುದ್ಧವೂ ಕ್ರಿಮಿನಲ್ ತನಿಖೆ ಆರಂಭಿಸಲಾಗಿದೆ. “ಸಣ್ಣ ತಪ್ಪನ್ನು ಮುಚ್ಚಿಡಲು ಹೋಗಿ ಇಡೀ ಕುಟುಂಬವೇ ಜೈಲು ಸೇರುವಂತಾಯಿತು” ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಭಾರತಕ್ಕೆ ಸರಾಗವಾಗಿ ಬರುತ್ತಿರುವ ವಿದೇಶೀ ನೇರ ಹೂಡಿಕೆ; ಕರ್ನಾಟಕಕ್ಕೆ ಭರ್ಜರಿ ಹೂಡಿಕೆ ಹೆಚ್ಚಳ; ಎರಡನೇ ಸ್ಥಾನಕ್ಕೆ ಜಿಗಿತ – Kannada News | FDI inflow, investment into Karnataka almost doubles in 26fy, jumps to No. 2 after Maharashtra

ನವದೆಹಲಿ, ಜುಲೈ 22: ಭಾರತದ ವಿವಿಧ ಕ್ಷೇತ್ರಗಳಿಗೆ ವಿದೇಶೀ ನೇರ ಹೂಡಿಕೆಗಳು (FDI- Foreign Direct Investment) ಭರಪೂರವಾಗಿ ಹರಿದುಬರುವುದು ಮುಂದುವರಿದಿದೆ. ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಖಾತೆ ರಾಜ್ಯ ಸಚಿವ ಜಿತಿನ್ ಪ್ರಸಾದ (Jitin Prasada) ಅವರು 2020-21ರಿಂದ 2025-26ರವರೆಗೆ ಭಾರತದಲ್ಲಿ ರಾಜ್ಯವಾರು ಎಫ್​ಡಿಐ ಹರಿವಿನ ಮಾಹಿತಿ ನೀಡಿದ್ದಾರೆ. ಅದರ ಪ್ರಕಾರ, ಕರ್ನಾಟಕದಲ್ಲಿ ಎಫ್​ಡಿಐ ಹರಿವು ಸಖತ್ ಏರಿಕೆಯಾಗಿದೆ. ಮಹಾರಾಷ್ಟ್ರದ ನಂತರ ಅತಿಹೆಚ್ಚು ಎಫ್​ಡಿಐ ಪಡೆದಿರುವ ರಾಜ್ಯವೆಂದರೆ ಕರ್ನಾಟಕ.

ಎಫ್​ಡಿಐ, ಎರಡನೇ ಸ್ಥಾನಕ್ಕೆ ಏರಿದ ಕರ್ನಾಟಕ

2025-26ರಲ್ಲಿ ಕರ್ನಾಟಕಕ್ಕೆ 12.94 ಬಿಲಿಯನ್ ಡಾಲರ್​ನಷ್ಟು (ಸುಮಾರು 1.25 ಲಕ್ಷ ಕೋಟಿ ರೂ) ಎಫ್​ಡಿಐ ಬಂದಿದೆ. ಹಿಂದಿನ ವರ್ಷದಕ್ಕೆ ಹೋಲಿಸಿದರೆ ಈ ವಿದೇಶೀ ಹೂಡಿಕೆಗಳು ದುಪ್ಪಟ್ಟಾಗಿವೆ. ಭಾರತಕ್ಕೆ ಬಂದ ಒಟ್ಟು ಎಫ್​ಡಿಐನಲ್ಲಿ ಕರ್ನಾಟಕಕ್ಕೆ ಸಿಕ್ಕ ಪಾಲು ಶೇ. 21.99. ಅತಿಹೆಚ್ಚು ವಿದೇಶೀ ನೇರ ಹೂಡಿಕೆ ಪಡೆದ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ನಂ. 2 ಎನಿಸಿದೆ.

ಇದನ್ನೂ ಓದಿ: ಈಗ 0, ನಂತರ 100, ಬಳಿಕ 200; ಜೆನೆರಿಕ್ ಔಷಧಗಳಿಗೆ ಟ್ರಂಪ್ ಟ್ಯಾರಿಫ್ ಪ್ಲಾನ್ ಪ್ರಕಟ; ಭಾರತದ ಪ್ರಬಲ ಫಾರ್ಮಾ ಉದ್ಯಮಕ್ಕೆ ಹೊಡೆತ?

2025-26ರಲ್ಲಿ ಅತಿಹೆಚ್ಚು ಎಫ್​ಡಿಐ ಪಡೆದ ರಾಜ್ಯಗಳು

  1. ಮಹಾರಾಷ್ಟ್ರ: 18.42 ಬಿಲಿಯನ್ ಡಾಲರ್
  2. ಕರ್ನಾಟಕ: 12.94 ಬಿಲಿಯನ್ ಡಾಲರ್
  3. ಕೇಂದ್ರಾಡಳಿತ ಪ್ರದೇಶಗಳು: 6.37 ಬಿಲಿಯನ್ ಡಾಲರ್
  4. ಗುಜರಾತ್: 5.71 ಬಿಲಿಯನ್ ಡಾಲರ್
  5. ತಮಿಳುನಾಡು: 4.72 ಬಿಲಿಯನ್ ಡಾಲರ್
  6. ಹರ್ಯಾಣ: 4.53 ಬಿಲಿಯನ್ ಡಾಲರ್
  7. ತೆಲಂಗಾಣ: 2.25 ಬಿಲಿಯನ್ ಡಾಲರ್
  8. ರಾಜಸ್ಥಾನ: 1.01 ಬಿಲಿಯನ್ ಡಾಲರ್
  9. ಉತ್ತರಪ್ರದೇಶ: 950 ಮಿಲಿಯನ್ ಡಾಲರ್
  10. ಆಂಧ್ರಪ್ರದೇಶ: 609 ಮಿಲಿಯನ್ ಡಾಲರ್

ಇಲ್ಲಿ ಕೇಂದ್ರಾಡಳಿತ ಪ್ರದೇಶಗಳಲ್ಲಿ ದೆಹಲಿ, ಚಂಡೀಗಡ ನಗರಗಳೂ ಸೇರುತ್ತವೆ. ಹೀಗಾಗಿ, ಅತಿಹೆಚ್ಚು ಹೂಡಿಕೆ ಪಡೆದಿರುವ ರಾಜ್ಯಗಳ ಪಟ್ಟಿಯಲ್ಲಿ ಇದು ಸೇರಿದೆ. ಮಹಾರಾಷ್ಟ್ರ, ಕರ್ನಾಟಕ ಮತ್ತು ಗುಜರಾತ್, ಈ ಮೂರು ರಾಜ್ಯಗಳು ಶೇ. 50ರಷ್ಟು ಎಫ್​ಡಿಐ ಆಕರ್ಷಿಸಿವೆ.

ಇದನ್ನೂ ಓದಿ: 30,000 ರೂವರೆಗೂ ಏರಿಕೆಯಾಗಲಿದೆ ಮಾರುತಿ ಸುಜುಕಿಯ ವಿವಿಧ ಕಾರುಗಳ ಬೆಲೆ

ಭಾರತಕ್ಕೆ ಕಳೆದ ಎರಡು ವರ್ಷದಿಂದ ವಿದೇಶೀ ಹೂಡಿಕೆಗಳ ಒಳಹರಿವು ಹೆಚ್ಚುತ್ತಿದೆ. ಕೋವಿಡ್​ಗಿಂತ ಮುಂಚೆ ಭಾರತಕ್ಕೆ ಬಂದ ವಿದೇಶೀ ಹೂಡಿಕೆಯು ಜಿಡಿಪಿ ಶೇ. 2.4ರಷ್ಟಿತ್ತು. 2024ರಲ್ಲಿ ಅದು ಶೇ. 0.7ಕ್ಕೆ ಕುಸಿಯಿತು. ನಂತರ 2025ರಲ್ಲಿ ಅದು ಶೇ. 1 ಮುಟ್ಟಿತು. ಈಗ ಅದು ಇನ್ನಷ್ಟು ಏರಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ದೆಹಲಿ ಬೆನ್ನಲ್ಲೇ ಬೆಂಗಳೂರಿನಲ್ಲೂ ಪ್ರತಿಭಟನೆ ಕಾವು: ವಕೀಲರ ಸಂಘದಿಂದ ಭಾರೀ ಪ್ರತಿಭಟನೆ – Kannada News | Bengaluru High Court Lawyers Protest Over Lack of Basic Facilities, Demand Immediate Judicial Infrastructure Reforms

ಬೆಂಗಳೂರು, ಜುಲೈ 22: ಮೂಲಭೂತ ಸೌಕರ್ಯಗಳ ಕೊರತೆ ಮತ್ತು ನ್ಯಾಯಾಂಗದಲ್ಲಿನ ಸಮಸ್ಯೆಗಳನ್ನು ವಿರೋಧಿಸಿ ಬೆಂಗಳೂರಿನ ಹೈಕೋರ್ಟ್‌ ಆವರಣದಲ್ಲಿ ವಕೀಲರು ಬುಧವಾರ ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ ಮಾತನಾಡಿ, ವಕೀಲರಿಗೆ ಶೌಚಾಲಯ, ಲಿಫ್ಟ್ ಮತ್ತು ಪಾರ್ಕಿಂಗ್‌ನಂತಹ ಮೂಲಭೂತ ಸೌಲಭ್ಯಗಳೂ ದೊರೆಯುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ಇಡೀ ಏಷ್ಯಾದಲ್ಲೇ ಅತಿದೊಡ್ಡ ವಕೀಲರ ಸಂಘಕ್ಕೆ ಕನಿಷ್ಠ ಸೌಲಭ್ಯಗಳಿಗಾಗಿ ಪ್ರತಿಭಟಿಸುವುದು ನಿಜಕ್ಕೂ ಹಾಸ್ಯಾಸ್ಪದ’ ಎಂದು ಸುಬ್ಬಾರೆಡ್ಡಿ ಹೇಳಿದ್ದಾರೆ.

ಮ್ಯಾಜಿಸ್ಟ್ರೇಟ್ ಕೋರ್ಟ್‌ನ ಏಳು ಅಂತಸ್ತಿನ ಕಟ್ಟಡದಲ್ಲಿ ಕೇವಲ ಒಂದೇ ಲಿಫ್ಟ್ ಇರುವುದರಿಂದ ಹಿರಿಯ ವಕೀಲರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಸಿವಿಲ್ ಕೋರ್ಟ್‌ಗಳಲ್ಲಿ 100ರಲ್ಲಿ 25 ನ್ಯಾಯಾಲಯಗಳು ಖಾಲಿ ಇದ್ದು, ಇದರಿಂದ ಉಳಿದ ನ್ಯಾಯಮೂರ್ತಿಗಳ ಮೇಲೆ ಕೆಲಸದ ಒತ್ತಡ ಹೆಚ್ಚಾಗಿದೆ ಎಂದು ಅವರು ಹೇಳಿದ್ದಾರೆ. ಪ್ರಧಾನ ನ್ಯಾಯಮೂರ್ತಿಗಳಿಗೆ ಈ ಸಮಸ್ಯೆಗಳ ಕುರಿತು ಹಲವು ಬಾರಿ ಮನವಿ ಸಲ್ಲಿಸಿದ್ದರೂ, ಯಾವುದೇ ಸ್ಪಂದನೆ ದೊರೆತಿಲ್ಲ. ಈ ಸಮಸ್ಯೆಗಳನ್ನು ಕೂಡಲೇ ಬಗೆಹರಿಸುವಂತೆ ವಕೀಲರ ಸಂಘವು ಸರ್ಕಾರ ಮತ್ತು ನ್ಯಾಯಾಂಗ ಇಲಾಖೆಯನ್ನು ಒತ್ತಾಯಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Raichur News: ರಾಯಚೂರಿನಲ್ಲಿ ಬೀದಿ ನಾಯಿಗಳ ದಾಳಿಗೆ ತತ್ತರಿಸಿದ ಜನತೆ; 3 ವರ್ಷದ ಬಾಲಕಿಗೆ ಗಂಭೀರ ಗಾಯ! – Kannada News | Raichur Stray Dog Attack: 3 Year Old Girl Injured in Manvi

ರಾಯಚೂರು, ಜುಲೈ 22: ಜಿಲ್ಲೆಯಲ್ಲಿ ಬೀದಿ ನಾಯಿಗಳ (Street Dogs) ಸರಣಿ ದಾಳಿಗೆ ಜನತೆ ಬೆಚ್ಚಿಬಿದ್ದಿದ್ದಾರೆ. ಮೊನ್ನೆಯಷ್ಟೇ ರಾಯಚೂರಿನಲ್ಲಿ ಒಂದೂವರೆ ವರ್ಷದ ಮಗು ನಾಯಿ ದಾಳಿಗೆ ಬಲಿಯಾಗಿತ್ತು. ಹಾಗೂ ನಿನ್ನೆಯಷ್ಟೇ 4 ವರ್ಷದ ಬಾಲಕನೋರ್ವ ಜೀವನ್ಮರಣ ಹೋರಾಟ ನಡೆಸುತ್ತಿರುವ ನಡುವೆಯೇ ಜಿಲ್ಲೆಯಲ್ಲಿ ನಾಯಿಗಳ ಉಪಟಳ ಮುಂದುವರಿದಿದೆ. ಇದೀಗ ಮಾನ್ವಿ ಪಟ್ಟಣದಲ್ಲಿ 3 ವರ್ಷದ ಬಾಲಕಿಯ ಮೇಲೆ ಬೀದಿ ನಾಯಿಯೊಂದು ಕ್ರೂರವಾಗಿ ದಾಳಿ ನಡೆಸಿದೆ. ಅದಲ್ಲದೆ ನಗರದಲ್ಲಿ ಮಾರುಕಟ್ಟೆಗೆ ಬಂದಿದ್ದ ವ್ಯಕ್ತಿಯೊಬ್ಬರೂ ನಾಯಿ ಕಡಿತಕ್ಕೊಳಗಾಗಿದ್ದಾರೆ.

3 ವರ್ಷದ ಬಾಲಕಿಯ ಕಣ್ಣು, ಎದೆ ಭಾಗಕ್ಕೆ ಕಚ್ಚಿ ಹಾಕಿದ ನಾಯಿ

ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದಲ್ಲಿ ತಮ್ಮ ಮನೆ ಬಳಿ ಆಟವಾಡುತ್ತಿದ್ದ 3 ವರ್ಷದ ಇನಾಯಾ ಎಂಬ ಬಾಲಕಿಯ ಮೇಲೆ ಏಕಾಏಕಿ ನಾಯಿಯೊಂದು ಹಾರಿಬಿದ್ದು ದಾಳಿ ನಡೆಸಿದೆ. ನಾಯಿಯ ಆಕ್ರೋಶ ಎಷ್ಟಿತ್ತೆಂದರೆ, ಬಾಲಕಿಯ ಮುಖ, ಕಣ್ಣಿನ ಭಾಗ ಹಾಗೂ ಎದೆಯ ಭಾಗಕ್ಕೆ ತೀವ್ರವಾಗಿ ಕಚ್ಚಿ ಗಂಭೀರ ಗಾಯಗೊಳಿಸಿದೆ.

ಕೂಡಲೇ ಬಾಲಕಿಯ ನರಳಾಟ ಕೇಳಿ ಸ್ಥಳೀಯರು ಧಾವಿಸಿ ನಾಯಿಯನ್ನು ಓಡಿಸಿದ್ದಾರೆ. ಒಂದು ವೇಳೆ ಸ್ಥಳೀಯರು ಸ್ಥಳಕ್ಕೆ ಓಡಿ ಬರದಿದ್ದರೆ ಮಗು ಜೀವಂತವಾಗಿ ಉಳಿಯುತ್ತಿರಲಿಲ್ಲ ಎಂದು ಕುಟುಂಬಸ್ಥರು ಆತಂಕದಿಂದ ಕಣ್ಣೀರಿಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡ ಬಾಲಕಿ ಇನಾಯಾ ಪ್ರಸ್ತುತ ರಾಯಚೂರಿನ ರಿಮ್ಸ್ (RIMS) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

ಮಾನ್ವಿ ಪುರಸಭೆ ಹಾಗೂ ಅಧಿಕಾರಿಗಳ ವಿರುದ್ಧ ಸಾರ್ವಜನಿಕರ ಆಕ್ರೋಶ

ಸರಣಿ ನಾಯಿ ದಾಳಿಗಳಿಂದ ಕಂಗಾಲಾಗಿರುವ ಬಾಲಕಿಯ ಕುಟುಂಬಸ್ಥರು ಹಾಗೂ ಸ್ಥಳೀಯರು ಮಾನ್ವಿ ಪುರಸಭೆ ಆಡಳಿತ ಮತ್ತು ಅಧಿಕಾರಿಗಳ ವಿರುದ್ಧ ಕೆಂಡಾಮಂಡಲರಾಗಿದ್ದಾರೆ. ಇದೇ ರೀತಿಯ ಘಟನೆ ಅಧಿಕಾರಿಗಳ ಅಥವಾ ಜನಪ್ರತಿನಿಧಿಗಳ ಮನೆಯಲ್ಲಿ ನಡೆದಿದ್ದರೆ ಎಲ್ಲವನ್ನೂ ತಕ್ಷಣವೇ ಸರಿಪಡಿಸುತ್ತಿದ್ದರು. ಆದರೆ ಬಡವರ ಕಷ್ಟ ಕೇಳುವವರು ಯಾರೂ ಇಲ್ಲದಂತಾಗಿದೆ ಎಂದು ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಕಿಡಿಕಾರಿದ್ದಾರೆ.

ರಾಯಚೂರು ನಗರ ಮಾರುಕಟ್ಟೆಯಲ್ಲೂ ನಾಯಿ ದಾಳಿ!

ಇನ್ನೊಂದೆಡೆ ರಾಯಚೂರು ನಗರದ ಸದರಬಜಾರ್ ರಸ್ತೆಯಲ್ಲೂ ಬೀದಿ ನಾಯಿಯೊಂದರ ಹಾವಳಿ ವರದಿಯಾಗಿದೆ. ನಗರದ ಮಾರುಕಟ್ಟೆಗೆ ಪತ್ನಿ ಜೊತೆ ವಸ್ತುಗಳನ್ನು ಖರೀದಿಸಲು ಬಂದಿದ್ದ ಸತ್ಯಪ್ಪ (40) ಎಂಬುವವರು ಬೈಕ್ ನಿಲ್ಲಿಸುತ್ತಿದ್ದಾಗ, ಏಕಾಏಕಿ ಬಂದ ಬೀದಿ ನಾಯಿಯೊಂದು ಅವರ ಮೇಲೂ ದಾಳಿ ನಡೆಸಿ ಕಡಿದಿದೆ. ತಕ್ಷಣವೇ ಸತ್ಯಪ್ಪ ನಾಯಿಯನ್ನು ಬೆದರಿಸಿ ಓಡಿಸಿದ್ದು, ದೊಡ್ಡ ಅನಾಹುತದಿಂದ ಪಾರಾಗಿದ್ದಾರೆ. ಗಾಯಗೊಂಡ ಸತ್ಯಪ್ಪ ಅವರಿಗೆ ರಾಯಚೂರಿನ ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನೂ ಓದಿ ರಾಯಚೂರು, ಚಿತ್ರದುರ್ಗದಲ್ಲಿ ಮತ್ತೆ ಬೀದಿನಾಯಿಗಳ ದಾಳಿ: 4 ವರ್ಷದ ಬಾಲಕನ ಸ್ಥಿತಿ ಗಂಭೀರ, ನಾಲ್ವರು ಮಕ್ಕಳಿಗೆ ಗಾಯ

ದಿನದಿಂದ ದಿನಕ್ಕೆ ಜಿಲ್ಲೆಯಲ್ಲಿ ಬೀದಿ ನಾಯಿಗಳ ಡೆಡ್ಲಿ ಅಟ್ಯಾಕ್ ಹೆಚ್ಚುತ್ತಲೇ ಇದ್ದು, ಸಾರ್ವಜನಿಕರು ರಸ್ತೆಯಲ್ಲಿ ಓಡಾಡಲು ಭಯಪಡುವ ವಾತಾವರಣ ನಿರ್ಮಾಣವಾಗಿದೆ. ಇನ್ನಾದರೂ ಸಂಬಂಧಪಟ್ಟ ಪೌರಾಡಳಿತ ಹಾಗೂ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಂಡು ಸಾರ್ವಜನಿಕರಿಗೆ ರಕ್ಷಣೆ ನೀಡಬೇಕಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 10:54 am, Wed, 22 July 26

Source link

ರಿಲೀಸ್​​ಗೂ ಮೊದಲೇ ‘ಕರಾವಳಿ’ಗೆ ಮೆಚ್ಚುಗೆ; ಪ್ರೀಮಿಯರ್ ಶೋಗೆ ಪಾಸಿಟಿವ್ ರೆಸ್ಪಾನ್ಸ್

ಪ್ರಜ್ವಲ್ ದೇವರಾಜ್, ರಾಜ್ ಬಿ ಶೆಟ್ಟಿ ನಟನೆಯ ‘ಕರಾವಳಿ’ ಚಿತ್ರ ವಿವಿಧ ಕಡೆ ಪ್ರೀಮಿಯರ್ ಶೋ ಆಯೋಜನೆ ಮಾಡುತ್ತಿದೆ. ಇದಕ್ಕೆ ಪಾಸಿಟಿವ್ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ದಾವಣಗೆರೆಯಲ್ಲಿ ನಡೆದ ಪ್ರೀಮಿಯರ್ ಪ್ರದರ್ಶನಕ್ಕೆ ಸಿನಿಪ್ರೇಮಿಗಳಿಂದ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ. ಚಿತ್ರವನ್ನು ನೋಡಿದ ಪ್ರೇಕ್ಷಕರು ಭಾವನಾತ್ಮಕವಾಗಿ ಚಿತ್ರಕ್ಕೆ ಕನೆಕ್ಟ್ ಆಗಿದ್ದು, ಮೈಯಲ್ಲೆಲ್ಲಾ ಗೂಸ್​ಬಂಪ್ಸ್ ಬಂದ ಅನುಭವ ಹಂಚಿಕೊಂಡಿದ್ದಾರೆ. ಪಾತ್ರವರ್ಗದ ಅಭಿನಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದ್ದು, ಅದರಲ್ಲೂ ಮಹಾಬಲನ ಪಾತ್ರಕ್ಕೆ ಮಾತೇ ಇಲ್ಲ ಎಂದು ಹಲವರು ಹೇಳಿದ್ದಾರೆ.

ಈ ಹಿಂದೆ ಕಾಮಿಡಿ ಪಾತ್ರಗಳಲ್ಲಿ ಹೆಚ್ಚಾಗಿ ಕಂಡ ಮಿತ್ರ ಅವರ ಅಭಿನಯ ನೆಕ್ಸ್ಟ್ ಲೆವೆಲ್ ಎಂದು ಅಭಿಮಾನಿಗಳು ಹಾಡಿ ಹೊಗಳಿದ್ದಾರೆ. ಪ್ರಜ್ವಲ್ ದೇವರಾಜ್ ಅವರ ಅಭಿನಯ ಕೂಡ ಸೂಪರ್ ಆಗಿದ್ದು, ಇದು ಅವರಿಗೆ ಒಳ್ಳೆಯ ಕಮ್‌ಬ್ಯಾಕ್ ಎಂದು ಬಣ್ಣಿಸಿದ್ದಾರೆ. ರಾಜ್ ಬಿ ಶೆಟ್ಟಿ ನಟನೆಯೂ ಸಖತ್ ಆಗಿದೆ ಎಂದಿದ್ದಾರೆ. ‘ಕರಾವಳಿ ಸಿನಿಮಾಗೆ ಗುರುದತ್ತ್ ಗಾಣಿಗ ನಿರ್ದೇಶನ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Source link

ಸಹಪಾಠಿ ಯುವತಿಗೆ ಇನ್​ಸ್ಟಾದಲ್ಲಿ ‘Pretty’ ಎಂದು ಮೆಸೇಜ್​​ ಮಾಡಿದ ಹುಡುಗನ ಮೇಲೆ ಬಿತ್ತು ಕೇಸ್! ಹೈಕೋರ್ಟ್ ಹೇಳಿದ್ದೇನು ಗೊತ್ತಾ? – Kannada News | Gen Z Lingo is Not a Crime: Karnataka HC Quashes Stalking and Voyeurism Case Against Student Who Called Classmate ‘Pretty’ in Instagram DM

ಬೆಂಗಳೂರು, ಜುಲೈ 22: ಸಯಪಾಠಿ ವಿದ್ಯಾರ್ಥಿನಿಗೆ ​​”Pretty” (ನೀವು ತುಂಬಾ ಸುಂದರ) ಎಂದು ಇನ್‌ಸ್ಟಾಗ್ರಾಂನಲ್ಲಿ ಡೈರೆಕ್ಟ್ ಮೆಸೇಜ್ (DM) ಕಳುಹಿಸಿದ್ದ ಪ್ರಕರಣದಲ್ಲಿ ಕಾಲೇಜು ವಿದ್ಯಾರ್ಥಿಯ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ ರದ್ದುಪಡಿಸಿದೆ. ಸುಮಾರು 2 ವರ್ಷಗಳ ಹಿಂದೆ ಘನತೆಗೆ ಚ್ಯುತಿ ಸೇರಿ ಕೆಲ ಆರೋಪಗಳಡಿ 20 ವರ್ಷದ ವಿದ್ಯಾರ್ಥಿಯ ವಿರುದ್ಧ ಐಪಿಎಸ್​ ಅಧಿಕಾರಿಯೋರ್ವರ ಪುತ್ರಿ ದೂರು ನೀಡಿದ್ದರು. ಪ್ರಕರಣ ಸಂಬಂಧ ಯುವಕನ ಅರ್ಜಿಯನ್ನು ಮಾನ್ಯ ಮಾಡಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು, ಇದು ಇಬ್ಬರು ಸಹಪಾಠಿಗಳ ನಡುವಿನ ಖಾಸಗಿ ಸಂಭಾಷಣೆ. ಇದು ಸಾರ್ವಜನಿಕವಾಗಿ ಪ್ರಕಟವಾದ ಸಂದೇಶವಲ್ಲ. ಇಂದಿನ ಯುವಜನರು ಬಳಸುವ ‘ಜನರೇಷನ್ Z’ (Gen Z) ಭಾಷೆಯನ್ನು ಅಪರಾಧ ಎಂದು ಪರಿಗಣಿಸಲು ಸಾಧ್ಯವಿಲ್ಲ. ಈ ಪ್ರಕರಣದ ತನಿಖೆ ಮುಂದುವರಿಸುವುದು ಕಾನೂನು ಪ್ರಕ್ರಿಯೆಯ ದುರುಪಯೋಗವಾಗುತ್ತದೆ ಎಂದು ಮೌಖಿಕವಾಗಿ ಅಭಿಪ್ರಾಯಪಟ್ಟರು. ಪ್ರಕರಣ ಸಂಬಂಧ ಮುಂದಿನ ಕ್ರಮಕ್ಕೆ ಈ ಹಿಂದೆ ಹೈಕೋರ್ಟ್ ತಾತ್ಕಾಲಿಕ ತಡೆ ನೀಡಿತ್ತು ಎನ್ನುವುದೂ ಇಲ್ಲಿ ಗಮನಾರ್ಹ.

ವಿದ್ಯಾರ್ಥಿ ಪರ ವಕೀಲರ ವಾದವೇನು?

ನ್ಯಾಯಾಲಯಕ್ಕೆ ಸಲ್ಲಿಸಲಾದ ದಾಖಲೆಗಳ ಪ್ರಕಾರ, ವಿದ್ಯಾರ್ಥಿ ಕಳುಹಿಸಿದ್ದ ಡಿಎಂಗೆ ಯುವತಿ ಕೂಡ ಧನ್ಯವಾದ ಎಂದು ಉತ್ತರಿಸಿದ್ದರು. ಆದರೆ ವಿದ್ಯಾರ್ಥಿ ಕಳುಹಿಸಿದ್ದ ಇನ್‌ಸ್ಟಾಗ್ರಾಂ ಸಂದೇಶವನ್ನು ಯುವತಿ ತನ್ನ ತಂದೆಗೆ ತೋರಿಸಿದ ಬಳಿಕ ಈ ಪ್ರಕರಣ ದಾಖಲಾಗಿತ್ತು ಎನ್ನಲಾಗಿದೆ. ವಿದ್ಯಾರ್ಥಿಯ ಪರ ವಾದ ಮಂಡಿಸಿದ ವಕೀಲರು, ಯುವಕ ಪ್ರತಿಭಾವಂತ ಕ್ರಿಕೆಟಿಗನಾಗಿದ್ದು, ತಮಿಳುನಾಡು ತಂಡವನ್ನು ಪ್ರತಿನಿಧಿಸುವ ಕನಸು ಹೊಂದಿದ್ದಾನೆ. ಈ ಕ್ರಿಮಿನಲ್ ಪ್ರಕರಣದಿಂದ ಆತನ ಕ್ರೀಡಾ ಬದುಕಿಗೆ ಗಂಭೀರ ಹಾನಿಯಾಗಿದೆ ಎಂದು ನ್ಯಾಯಾಲಯಕ್ಕೆ ಮನವರಿಕೆ ಮಾಡಿದ್ದರು.

ಇದನ್ನೂ ಓದಿ: ಕೆಪಿಎಸ್‌ಸಿ ನೇಮಕಾತಿ ಅಕ್ರಮ; ರಾಜ್ಯ ಸರ್ಕಾರ, ಸಿಬಿಐಗೆ ಕರ್ನಾಟಕ ಹೈಕೋರ್ಟ್ ನೋಟಿಸ್

ನ್ಯಾಯಾಲಯ ಹೇಳಿದ್ದೇನು?

ತನಿಖೆಯ ವೇಳೆ ಪೊಲೀಸರು ವಿದ್ಯಾರ್ಥಿಯ ಲ್ಯಾಪ್‌ಟಾಪ್ ಮತ್ತು ಮೊಬೈಲ್ ಫೋನ್‌ಗಳನ್ನು ಜಪ್ತಿ ಮಾಡಿದ್ದರು. ಆದರೆ ಕಾನೂನಿನಲ್ಲಿ ಕಡ್ಡಾಯವಾಗಿ ಅನುಸರಿಸಬೇಕಾದ ವಿಧಾನವನ್ನು ಪಾಲಿಸದೇ ಈ ಕ್ರಮ ಕೈಗೊಳ್ಳಲಾಗಿದೆ ಎಂದು ವಕೀಲರು ಆಕ್ಷೇಪಿಸಿದ್ದರು. ದಾಖಲೆಗಳನ್ನು ಪರಿಶೀಲಿಸಿದ ಬಳಿಕ ನ್ಯಾಯಮೂರ್ತಿ ನಾಗಪ್ರಸನ್ನ, ಈ ಪ್ರಕರಣದಲ್ಲಿ ಹಿಂಬಾಲಿಸುವುದು (Stalking), ವಾಯರಿಸಂ (Voyeurism) ಅಥವಾ ಮಹಿಳೆಯ ಘನತೆಗೆ ಧಕ್ಕೆ ತರುವ ಯಾವುದೇ ಕೃತ್ಯ ನಡೆದಿರುವುದು ಕಂಡುಬಂದಿಲ್ಲ ಎಂದು ಅಭಿಪ್ರಾಯಪಟ್ಟು, ವಿದ್ಯಾರ್ಥಿಯ ವಿರುದ್ಧದ ಕ್ರಿಮಿನಲ್ ಪ್ರಕರಣವನ್ನು ರದ್ದುಗೊಳಿಸಿದ್ದಾರೆ ಎಂದು ದಿ ಟೈಮ್ಸ್​​ ಆಫ್​​ ಇಂಡಿಯಾ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 1:00 pm, Wed, 22 July 26

Source link

ಕೈತುಂಬಾ ಸಂಬಳ ಕೊಡ್ತಾರೆ ಅಂತಾ ಫಾರಿನ್ ಹೋಗೋ ಮುನ್ನ ಎಚ್ಚರ! ನಿಮ್ಮಿಂದಲೆ ಸೈಬರ್ ಕ್ರೈಮ್ ಮಾಡಿಸ್ತಾರೆ ದುಷ್ಟರು – Kannada News | Two Karnataka Youths Rescued from Chinese Cyber Scam Compound in Myanmar

ಮಯನ್ಮಾರ್​ನ ಚೀನಾ ಆಪರೇಟೆಡ್ ಸ್ಕ್ಯಾಮ್ ಸೆಂಟರ್‌ನಲ್ಲಿ ಸಿಲುಕಿದ್ದ ಕರ್ನಾಟಕದ ಇಬ್ಬರು ಯುವಕರ ರಕ್ಷಣೆ!

ಬೆಂಗಳೂರು, ಜುಲೈ 22: ವಿದೇಶದಲ್ಲಿ ಹೆಚ್ಚಿನ ಸಂಬಳದ ಕೆಲಸದ ಆಮಿಷಕ್ಕೆ ಒಳಗಾಗಿ ಮಯನ್ಮಾರ್​ನ ಚೀನಿ ಸೈಬರ್ ಗ್ಯಾಂಗ್ ಕೈಗೆ ಸಿಲುಕಿದ್ದ ಕರ್ನಾಟಕದ ಇಬ್ಬರು ಯುವಕರನ್ನು ಯಶಸ್ವಿಯಾಗಿ ರಕ್ಷಿಸಿ ತಾಯ್ನಾಡಿಗೆ ಕರೆತರಲಾಗಿದೆ. ಕರ್ನಾಟಕ ಸೈಬರ್ ಕಮಾಂಡ್, ಸೈಬರ್ ಕ್ರೈಮ್ ಕೋ-ಆರ್ಡಿನೇಷನ್ ಸೆಂಟರ್ (I4C), ಜಾರಿ ನಿರ್ದೇಶನಾಲಯ (ED) ಹಾಗೂ ಮಯನ್ಮಾರ್​ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಜಂಟಿ ಕಾರ್ಯಾಚರಣೆಯ ಮೂಲಕ ಈ ರಕ್ಷಣಾ ಕಾರ್ಯ ನಡೆದಿದೆ.

ಕೆಲಸದ ಆಮಿಷ ಒಡ್ಡಿ ವಂಚನೆ

ಕರ್ನಾಟಕ ಮೂಲದ ಯುವಕರಿಗೆ ಥೈಲ್ಯಾಂಡ್‌ನಲ್ಲಿ ಡೇಟಾ ಎಂಟ್ರಿ ಮತ್ತು ಕಂಪ್ಯೂಟರ್ ಸಂಬಂಧಿತ ಅತ್ಯುತ್ತಮ ಸಂಬಳದ ಉದ್ಯೋಗ ನೀಡುವುದಾಗಿ ಮಾನವ ಕಳ್ಳಸಾಗಣೆದಾರರು (Human Traffickers) ಆಮಿಷ ಒಡ್ಡಿದ್ದರು. ಆದರೆ, ಅಲ್ಲಿಗೆ ಕರೆದೊಯ್ದ ಬಳಿಕ ಯುವಕರನ್ನು ಅಕ್ರಮವಾಗಿ ಗಡಿ ದಾಟಿಸಿ ಮಯನ್ಮಾರ್​ನಲ್ಲಿದ್ದ ‘ಚೀನೀ ಸೈಬರ್ ಸ್ಕ್ಯಾಮ್’ ಕೇಂದ್ರಕ್ಕೆ ತಳ್ಳಲಾಗಿತ್ತು. ಅಲ್ಲಿ ಈ ಯುವಕರ ಪಾಸ್‌ಪೋರ್ಟ್ ಹಾಗೂ ದಾಖಲೆಗಳನ್ನು ಕಸಿದುಕೊಂಡಿದ್ದ ಸಶಸ್ತ್ರ ಸಿಬ್ಬಂದಿ, ಜಾಗತಿಕ ಮಟ್ಟದಲ್ಲಿ ಆನ್‌ಲೈನ್ ಸೈಬರ್ ವಂಚನೆ (Cyber Fraud) ಹಾಗೂ ಕ್ರಿಪ್ಟೋ ಸ್ಕ್ಯಾಮ್‌ಗಳನ್ನು ಮಾಡುವಂತೆ ಅವರ ಮೇಲೆ ತೀವ್ರ ಒತ್ತಡ ಹೇರಿದ್ದರು. ಕೆಲಸ ಮಾಡಲು ನಿರಾಕರಿಸಿದರೆ ಮಾನಸಿಕ ಹಾಗೂ ಶಾರೀರಿಕ ಕಿರುಕುಳ ನೀಡಲಾಗುತ್ತಿತ್ತು ಎಂಬುದು ತಿಳಿದುಬಂದಿದೆ.

ವಿದೇಶಾಂಗ ಸಚಿವಾಲಯದಿಂದ ರಕ್ಷಣಾ ಕಾರ್ಯಾಚರಣೆ

ಸಂತ್ರಸ್ತ ಯುವಕರು ಹೇಗೋ ಮಾಡಿ ತಮ್ಮ ಕುಟುಂಬಸ್ಥರನ್ನು ಸಂಪರ್ಕಿಸಿ ತಮಗಾಗುತ್ತಿರುವ ಅನ್ಯಾಯವನ್ನು ತಿಳಿಸಿದ್ದರು. ತಕ್ಷಣವೇ ಕಾರ್ಯಪ್ರವೃತ್ತರಾದ ಭಾರತೀಯ ರಾಯಭಾರ ಕಚೇರಿ (Indian Embassy) ಹಾಗೂ ವಿದೇಶಾಂಗ ಸಚಿವಾಲಯ (MEA), ಸ್ಥಳೀಯ ಅಧಿಕಾರಿಗಳ ನೆರವಿನಿಂದ ಕಾರ್ಯಾಚರಣೆ ನಡೆಸಿ ಯುವಕರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದೆ.

ಈ ಕುರಿತು ಇಡಿ ನೀಡಿದ ನಿಖರ ಮಾಹಿತಿ ಆಧಾರದ ಮೇಲೆ ತಕ್ಷಣ ಕರ್ನಾಟಕ ಸೈಬರ್ ಕಮಾಂಡ್, ಕೇಂದ್ರ ಸಂಸ್ಥೆಗಳು ಮತ್ತು ರಾಯಭಾರ ಕಚೇರಿಯೊಂದಿಗೆ ನಿರಂತರ ಸಂಪರ್ಕ ಸಾಧಿಸಿ ಅತ್ಯಂತ ಕಡಿಮೆ ಅವಧಿಯಲ್ಲಿ ಯುವಕರನ್ನು ಮುಕ್ತಗೊಳಿಸಿದೆ. ಇದೀಗ ಯುವಕರು ಸುರಕ್ಷಿತವಾಗಿ ತಾಯ್ನಾಡಿಗೆ ಮರಳಿದ್ದು, ಯುವಜನತೆ ವಿದೇಶಿ ಉದ್ಯೋಗಗಳ ಹೆಸರಿನಲ್ಲಿ ಬರುವ ನಕಲಿ ಏಜೆಂಟ್‌ಗಳ ಬಗ್ಗೆ ಎಚ್ಚರದಿಂದಿರುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

ವಿದೇಶಗಳಲ್ಲಿ ಆಕರ್ಷಕ ಸಂಬಳ ನೀಡುವ ನಕಲಿ ಉದ್ಯೋಗ ಜಾಹೀರಾತುಗಳು ಮತ್ತು ಏಜೆಂಟರ ಬಗ್ಗೆ ಯುವಜನರು ತೀವ್ರ ಎಚ್ಚರ ವಹಿಸಬೇಕು. ಅಧಿಕೃತ ಸಂಸ್ಥೆಗಳ ಮೂಲಕ ಮಾತ್ರ ಉದ್ಯೋಗ ಪರಿಶೀಲನೆ ನಡೆಸುವಂತೆ ಕರ್ನಾಟಕ ಸೈಬರ್ ಕಮಾಂಡ್ ಡಿಜಿಪಿ ಪ್ರಣಬ್ ಮೊಹಾಂತಿ ಮನವಿ ಮಾಡಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಟಾಕ್ಸಿಕ್’ ಬಗ್ಗೆ ತೆಲುಗು ನಟ ಕಿರಣ್ ಅಬ್ಬವರಂ ಹೇಳಿದ್ದು ಹೀಗೆ: ವಿಡಿಯೋ

ಟಾಕ್ಸಿಕ್’ (Toxic Movie) ಸಿನಿಮಾ ಕೆಲವೇ ದಿನಗಳಲ್ಲಿ ತೆರೆಗೆ ಬರುತ್ತಿದ್ದು ಕರ್ನಾಟಕದಲ್ಲಿ ಮಾತ್ರವಲ್ಲ ದೇಶದಾದ್ಯಂತ ಈ ಸಿನಿಮಾದ ಬಗ್ಗೆ ನಿರೀಕ್ಷೆ ದೊಡ್ಡ ಮಟ್ಟದಲ್ಲಿದೆ. ಕೇವಲ ಸಿನಿಮಾ ಪ್ರೇಮಿಗಳು ಮಾತ್ರವಲ್ಲ, ಸಿನಿಮಾ ರಂಗದ ಸೆಲೆಬ್ರಿಟಿಗಳು ಸಹ ‘ಟಾಕ್ಸಿಕ್’ ಸಿನಿಮಾಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ. ತೆಲುಗಿನ ‘ಚೆನ್ನೈ ಲವ್ ಸ್ಟೋರಿ‘ ಹೆಸರಿನ ಸಿನಿಮಾ ಬಿಡುಗಡೆ ಆಗುತ್ತಿದ್ದು, ಸಿನಿಮಾದ ಪ್ರಚಾರಕ್ಕಾಗಿ ಸಿನಿಮಾದ ನಾಯಕ ಕಿರಣ್ ಅಬ್ಬವರಂ ಮತ್ತು ನಾಯಕಿ ಶ್ರೀ ಗೌರಿ ಪ್ರಿಯಾ ಬೆಂಗಳೂರಿಗೆ ಬಂದಿದ್ದರು. ಈ ವೇಳೆ ‘ಟಾಕ್ಸಿಕ್’ ಸಿನಿಮಾಕ್ಕಾಗಿ ತಾವು ಕಾತರದಿಂದ ಕಾಯುತ್ತಿರುವುದಾಗಿ ನಟ ಕಿರಣ್ ಅಬ್ಬವರಂ ಹೇಳಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Source link

Video: ಓಡುತ್ತಿದ್ದ ಕಂದಮ್ಮನ ಬಾಲ ಹಿಡಿದು ಎಳೆದು ನಿಲ್ಲಿಸಿದ ತಾಯಾನೆ, ವೈರಲ್‌ ಆಯ್ತು ದೃಶ್ಯ – Kannada News | The mother elephant grabbed and pulled the tail of the running baby elephant

ತಾಯಿಯ (mother) ಪ್ರೀತಿಯೇ ಹಾಗೆ, ಈ ವಿಚಾರದಲ್ಲಿ ಪ್ರಾಣಿಗಳು ಕೂಡ ಹೊರತಾಗಿಲ್ಲ. ಕಂದಮ್ಮಗಳ ಮೇಲೆ ಕಾಳಜಿ ವಹಿಸುವ ವಿಡಿಯೋಗಳನ್ನು ವೈರಲ್ ಆಗುತ್ತಿರುತ್ತವೆ. ಇದೀಗ ಅಂತಹದ್ದೇ ಹೃದಯ ಸ್ಪರ್ಶಿ ವಿಡಿಯೋ ಇದಾಗಿದೆ. ಮರಿಯಾನೆ ಓಡಲು ಶುರು ಮಾಡಿದ್ದು, ಇದೇ ವೇಳೆ ತಾಯಾನೆಯೊಂದು (mother elephant) ತನ್ನ ಕಂದಮ್ಮನ ಬಾಲ ಹಿಡಿದು ಓಡದಂತೆ ತಡೆದು ನಿಲ್ಲಿಸಿದೆ. ಈ ಹೃದಯ ಸ್ಪರ್ಶಿ ವಿಡಿಯೋ ಸದ್ಯ ನೆಟ್ಟಿಗರ ಹೃದಯ ಗೆದ್ದಿದೆ.

ಗ್ಲೋಬಲ್ ನೇಚರ್ ರಿಸರ್ವ್ (globalnaturereserve) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್ ನಲ್ಲಿ ಮರಿಯಾನೆಯೊಂದು ಒಂದೇ ಸಮನೆ ಓಡಲು ಶುರು ಮಾಡಿದೆ. ಇದನ್ನು ನೋಡಿದ ತಾಯಾನೆ ಮರಿಯಾನೆಯ ಬಾಲ ಹಿಡಿದು ಓಡಿ ಹೋಗದಂತೆ ತಡೆದು ನಿಲ್ಲಿಸಿರುವುದನ್ನು ನೀವಿಲ್ಲಿ ನೋಡಬಹುದು.

ವೈರಲ್ ವಿಡಿಯೋ ಇಲ್ಲಿದೆ

ʻ

ಇದನ್ನೂ ಓದಿ: ತಾಯಾನೆಯಂತೆ ಮರಳನ್ನು ಮೈ ಮೇಲೆ ಎರಚಿಕೊಂಡು ಸ್ನಾನ ಮಾಡಿದ ಮರಿಯಾನೆ

ಈ ವಿಡಿಯೋ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು, ಒಬ್ಬ ಬಳಕೆದಾರ, ತಾಯಿ ಪ್ರೀತಿಗೆ ಸರಿಸಾಟಿ ಇಲ್ಲ ಎಂದಿದ್ದಾರೆ. ಇನ್ನೊಬ್ಬರು, ಕ್ಯೂಟ್ ಎಂದರೆ, ಮತ್ತೊಬ್ಬರು, ಮರಿಯಾನೆಗಳು ಏನು ಮಾಡಿದ್ರೂ ಚಂದನೇ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version