ಈಗ 0, ನಂತರ 100, ಬಳಿಕ 200; ಜೆನೆರಿಕ್ ಔಷಧಗಳಿಗೆ ಟ್ರಂಪ್ ಟ್ಯಾರಿಫ್ ಪ್ಲಾನ್ ಪ್ರಕಟ; ಭಾರತದ ಪ್ರಬಲ ಫಾರ್ಮಾ ಉದ್ಯಮಕ್ಕೆ ಹೊಡೆತ? – Kannada News | Donald Trump announces tariff measures on Generic drugs, how Indian Pharma sector affected

ವಾಷಿಂಗ್ಟನ್, ಜುಲೈ 22: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೆ ಹೊಸ ಟ್ಯಾರಿಫ್ ಬೆದರಿಕೆ ಹಾಕಿದ್ದಾರೆ. ಈ ಬಾರಿ ಜೆನೆರಿಕ್ ಔಷಧಗಳ ಆಮದು ಮೇಲೆ ಸುಂಕ ಹಾಕುವ ಪ್ಲಾನ್ ಪ್ರಕಟಿಸಿದ್ದಾರೆ. ಎರಡು ವರ್ಷಗಳವರೆಗೆ ಜೆನೆರಿಕ್ ಔಷಧಗಳ ಕಂಪನಿಗಳಿಗೆ ಟ್ಯಾರಿಫ್​ನಿಂದ ವಿನಾಯಿತಿ ನೀಡಿದ್ದಾರೆ. ಆದರೆ, ನಂತರ ಶೇ. 200ರಷ್ಟು ಸುಂಕ ಹಾಕುವುದಾಗಿ ಅವರು ತಮ್ಮ ಟ್ರೂತ್ ಸೋಷಿಯಲ್​ನಲ್ಲಿ ತಿಳಿಸಿದ್ದಾರೆ. ಔಷಧ ಸಂಸ್ಥೆಗಳು ಅಮೆರಿಕದಲ್ಲಿ ತಯಾರಿಸಲು ಉತ್ತೇಜಿಸಲು ಸರ್ಕಾರ ಈ ಕ್ರಮ ತೆಗೆದುಕೊಳ್ಳುತ್ತಿದೆ ಎಂದು ಅವರು ಹೇಳಿದ್ದಾರೆ.

2026ರ ಆಗಸ್ಟ್ 1ರಿಂದ ಆರಂಭಗೊಂಡು ಎರಡು ವರ್ಷಗಳ ಕಾಲ, ಅಂದರೆ, 2028ರ ಜುಲೈ 31ರವರೆಗೆ ಜೆನೆರಿಕ್ ಔಷಧಗಳ ಆಮದು ಮೇಲೆ ಯಾವುದೇ ಟ್ಯಾರಿಫ್ ಇರುವುದಿಲ್ಲ. 2028ರ ಆಗಸ್ಟ್​ನಿಂದ ಒಂದು ವರ್ಷ ಕಾಲ ಈ ಔಷಧಗಳ ಮೇಲೆ ಶೇ. 100ರಷ್ಟು ಟ್ಯಾರಿಫ್ ಹಾಕಲಾಗುವುದು, 2029ರ ಆಗಸ್ಟ್​ನಿಂದ ಈ ಟ್ಯಾರಿಫ್ ಶೇ. 200ಕ್ಕೆ ಏರುತ್ತದೆ ಎಂದು ಅಮೆರಿಕ ಅಧ್ಯಕ್ಷರು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: 30,000 ರೂವರೆಗೂ ಏರಿಕೆಯಾಗಲಿದೆ ಮಾರುತಿ ಸುಜುಕಿಯ ವಿವಿಧ ಕಾರುಗಳ ಬೆಲೆ

ಅಮೆರಿಕದ ಟ್ಯಾರಿಫ್​ನಿಂದ ಭಾರತದ ಫಾರ್ಮಾ ಉದ್ಯಮಕ್ಕೆ ಯಾಕೆ ಆತಂಕ?

ಭಾರತದ ಔಷಧ ಉದ್ಯಮ ಬಹಳ ಪ್ರಬಲವಾಗಿ ಬೆಳೆದಿದೆ. ವಿಶ್ವದ ಫಾರ್ಮಸಿ ಎಂದೇ ಖ್ಯಾತವಾಗಿರುವ ಭಾರತದ ಫಾರ್ಮಾ ಕಂಪನಿಗಳು ಜೆನೆರಿಕ್ ಮೆಡಿಸಿನ್​ಗಳನ್ನು ತಯಾರಿಸಲು ನಿಷ್ಣಾತವಾಗಿವೆ. 2024-25ರ ಹಣಕಾಸು ವರ್ಷದಲ್ಲಿ ಭಾರತದ ಫಾರ್ಮಾ ಸೆಕ್ಟರ್​ನಿಂದ 30 ಬಿಲಿಯನ್ ಡಾಲರ್​ನಷ್ಟು ರಫ್ತಾಗಿದೆ. ಅಂದರೆ, ಸುಮಾರು 2.7 ಲಕ್ಷ ಕೋಟಿ ರೂನಷ್ಟು ರಫ್ತನ್ನು ಈ ಸಂಸ್ಥೆಗಳು ಮಾಡಿವೆ. ಇದರಲ್ಲಿ ಅಮೆರಿಕವೊಂದಕ್ಕೇ ಶೇ. 30ಕ್ಕಿಂತಲೂ ಹೆಚ್ಚಿನ ರಫ್ತು ಹೋಗುತ್ತದೆ. ಅದರಲ್ಲೂ ಜೆನೆರಿಕ್ ಔಷಧಗಳನ್ನು ಭಾರತ ಹೆಚ್ಚಾಗಿ ರಫ್ತು ಮಾಡುತ್ತದೆ.

ಹೀಗಾಗಿ, ಡೊನಾಲ್ಡ್ ಟ್ರಂಪ್ ಅವರು ಜೆನೆರಿಕ್ ಮೆಡಿಸಿನ್ ಮೇಲೆ ಟ್ಯಾರಿಫ್ ವಿಧಿಸುವ ಯೋಜನೆ ಪ್ರಕಟಿಸಿರುವುದು ಭಾರತದ ಫಾರ್ಮಾ ಉದ್ಯಮದ ಮೇಲೆ ಆತಂಕ ಛಾಯೆ ಮೂಡುವಂತೆ ಮಾಡಿದೆ. ಅಮೆರಿಕದ ಮಾರುಕಟ್ಟೆಗೆ ಅತಿಹೆಚ್ಚು ರಫ್ತು ಮಾಡುವ ಭಾರತೀಯ ಔಷಧ ಕಂಪನಿಗಳಿಗೆ ಹೊಡೆತ ಬೀಳಲಿದೆ. ಸನ್ ಫಾರ್ಮಾ, ಡಾಕ್ಟರ್ ರೆಡ್ಡಿಸ್ ಲ್ಯಾಬೊರೇಟರಿಸ್ ಮತ್ತು ಅರಬಿಂದೋ ಫಾರ್ಮಾ ಸಂಸ್ಥೆಗಳು ಅಮೆರಿಕದಿಂದ ಹೆಚ್ಚಿನ ವರಮಾನ ಹೊಂದಿವೆ. ಸಿಪ್ಲಾ, ಲುಪಿನ್, ಗ್ಲ್ಯಾಂಡ್ ಫಾರ್ಮಾ ಮೊದಲಾದ ಭಾರತೀಯ ಕಂಪನಿಗಳು ಕೂಡ ಸಾಕಷ್ಟು ಔಷಧಗಳನ್ನು ಅಮೆರಿಕಕ್ಕೆ ರಫ್ತು ಮಾಡುತ್ತವೆ.

ಇದನ್ನೂ ಓದಿ: ಅದೃಷ್ಟ ಮತ್ತು ಅಂಡಾಶಯದ ಲಾಟರಿ; ತಮ್ಮ ಯಶಸ್ಸಿನ ಸೀಕ್ರೆಟ್ ಬಿಚ್ಚಿಟ್ಟ ವಾರನ್ ಬಫೆಟ್

ಡೊನಾಲ್ಡ್ ಟ್ರಂಪ್ ಅವರು ಜೆನೆರಿಕ್ ಔಷಧ ಮೇಲೆ ಟ್ಯಾರಿಫ್ ಅಸ್ತ್ರ ಬಿಟ್ಟಿದ್ದು ಯಾಕೆ?

ಡೊನಾಲ್ಡ್ ಟ್ರಂಪ್ ಅವರು ಅಮೆರಿಕವನ್ನು ಮತ್ತೊಮ್ಮೆ ಮ್ಯಾನುಫ್ಯಾಕ್ಚರಿಂಗ್ ದೈತ್ಯ ದೇಶವನ್ನಾಗಿ ಮಾಡುವ ಗುರಿ ಇಟ್ಟು, ಆ ನಿಟ್ಟಿನಲ್ಲಿ ಟ್ಯಾರಿಫ್ ಅಸ್ತ್ರ ಬಳಸುತ್ತಿದ್ದಾರೆ. ಅಮೆರಿಕದಲ್ಲಿ ಫಾರ್ಮಾ ಕಂಪನಿಗಳಿಗೆ ಉತ್ಕೃಷ್ಟ ಮೂಲಸೌಕರ್ಯಗಳನ್ನು ನಿರ್ಮಿಸುತ್ತಿರುವುದಾಗಿ ಭರವಸೆ ನೀಡಿದ್ದಾರೆ. ಫಾರ್ಮಾ ಆಮದು ಮೇಲೆ ಎರಡು ವರ್ಷದ ಟ್ಯಾರಿಫ್ ವಿನಾಯಿತಿ ಅವಧಿಯು, ಅಮೆರಿಕದಲ್ಲಿ ಮ್ಯಾನುಫ್ಯಾಕ್ಚರಿಂಗ್ ಘಟಕ ಆರಂಭಿಸಲು ನೀಡಿರುವ ಗಡವು ಅದಾಗಿದೆ. ಈಗ ಭಾರತೀಯ ಕಂಪನಿಗಳು ಅಮೆರಿಕದಲ್ಲಿ ಹೂಡಿಕೆ ಹೆಚ್ಚಿಸಬೇಕು, ಅಥವಾ ಬೇರೆ ಮಾರುಕಟ್ಟೆಗಳಿಗೆ ರಫ್ತು ವಿಸ್ತರಿಸುವ ಪ್ಲಾನ್ ಹಾಕಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

‘ಜನ ನಾಯಗನ್’ ಸಿನಿಮಾ ಲೀಕ್: ತನಿಖೆ ಹೇಗಿತ್ತು? ಆರೋಪಿಗಳು ಸಿಕ್ಕಿದ್ದು ಹೇಗೆ? – Kannada News | How Jana Nayagan movie leak happened explains director Vinod

ದಳಪತಿ ವಿಜಯ್ (Thalapathy Vijay) ನಟಿಸಿರುವ ಕೊನೆಯ ಸಿನಿಮಾ ಎನ್ನಲಾಗುತ್ತಿರುವ ‘ಜನ ನಾಯಗನ್’ ಹಲವು ತಿಂಗಳ ವಿಳಂಬದ ಬಳಿಕ ನಾಳೆ (ಜುಲೈ 23) ಬಿಡುಗಡೆ ಆಗಲಿದೆ. ಜನವರಿ ತಿಂಗಳಲ್ಲಿ ಬಿಡುಗಡೆ ಆಗಬೇಕಿದ್ದ ಸಿನಿಮಾ ಹಲವಾರು ರೀತಿಯ ಸಮಸ್ಯೆಗಳನ್ನು ಎದುರಿಸಿದೆ. ಮೊದಲಿಗೆ ಸಿಬಿಎಫ್​​ಸಿ ಪ್ರಮಾಣ ಪತ್ರ ನೀಡಲು ನಿರಾಕರಿಸಿತು. ಬಳಿಕ ನ್ಯಾಯಾಲಯದಲ್ಲೂ ತ್ವರಿತ ನ್ಯಾಯ ಸಿಗಲಿಲ್ಲ. ಇದೆಲ್ಲ ಆಗುತ್ತಿರುವಾಗ ಇದ್ದಕ್ಕಿಂದ್ದಂತೆ ಸಿನಿಮಾ ಆನ್​​ಲೈನ್​​ನಲ್ಲಿ ಲೀಕ್ ಆಯ್ತು. ಕೋಟ್ಯಂತರ ಜನ ಅನಧಿಕೃತವಾಗಿ ಡೌನ್​​ಲೋಡ್ ಮಾಡಿಕೊಂಡು ಸಿನಿಮಾ ನೋಡಿದರು. ದೂರುಗಳು ಸಹ ದಾಖಲಾದವು. ಕೆಲವರು ಚಿತ್ರತಂಡದವರೇ ಲೀಕ್ ಮಾಡಿದ್ದಾರೆ ಎಂದು ಸಹ ಆರೋಪಿಸಿದರು. ಇದೀಗ ಸಿನಿಮಾ ಅಧಿಕೃತವಾಗಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುತ್ತಿರುವಾಗ ‘ಜನ ನಾಯಗನ್’ ಲೀಕ್ ಬಗ್ಗೆ ನಿರ್ದೇಶಕ ವಿನೋದ್ ಸಂಪೂರ್ಣ ಮಾಹಿತಿ ಹಂಚಿಕೊಂಡಿದ್ದಾರೆ.

‘ಜನ ನಾಯಗನ್’ ಸಿನಿಮಾ ಲೀಕ್ ಆದಾಗ ನನಗೆ ಆಘಾತವಾಯ್ತು. ಅದೊಂದು ಕೆಟ್ಟ ಘಟನೆ, ಅದರಿಂದ ಆದ ನಷ್ಟವನ್ನು, ಹಾನಿಯನ್ನು ತುಂಬಲು ಸಾಧ್ಯವೇ ಇಲ್ಲ. ಆದರೆ ಪರಿಸ್ಥಿತಿ ನಮ್ಮ ನಿಯಂತ್ರಣದಲ್ಲಿ ಇರಲಿಲ್ಲ’ ಎಂದಿದ್ದಾರೆ. ಸಿನಿಮಾ ಲೀಕ್ ಅನ್ನು ವಿಜಯ್ ಅವರೇ ಮಾಡಿಸಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ವಿನೋದ್, ‘ಈ ಸಿನಿಮಾ ಲೀಕ್ ಆಗದಿದ್ದರೂ ವಿಜಯ್ ಯಶಸ್ವಿ ಆಗುತ್ತಿದ್ದರು. ಅವರಿಗೆ ಸಿನಿಮಾದ ಬೆಂಬಲ ಬೇಕಿರಲಿಲ್ಲ’ ಎಂದಿದ್ದಾರೆ.

‘ಲೀಕ್ ಆದ ಸಿನಿಮಾ ದೃಶ್ಯಗಳಲ್ಲಿ ಎಡಿಟಿಂಗ್ ಮಾರ್ಕ್​​ಗಳು ಸ್ಪಷ್ಟವಾಗಿತ್ತು. ಆಗಲೇ ನಮಗೆ ಗೊತ್ತಾಯ್ತು, ಈ ಸಿನಿಮಾ ಎಡಿಟಿಂಗ್ ಟೇಬಲ್​​ನಿಂದ ಲೀಕ್ ಆಗಿದೆ ಎಂದು. ಸಿನಿಮಾದ ಎಡಿಟಿಂಗ್ ತಂಡದಲ್ಲಿದ್ದ ಪ್ರತಿಯೊಬ್ಬರನ್ನೂ ವಿಚಾರಣೆ ಮಾಡಲಾಯ್ತು. ಗೂಗಲ್​​ ಸಂಸ್ಥೆಯನ್ನು ಸಹ ಸಂಪರ್ಕಿಸಿ, ಸಿನಿಮಾ ಗೂಗಲ್ ಡ್ರೈವ್ ಮೂಲಕ ಏನಾದರೂ ಟ್ರಾನ್ಸ್​​ಫರ್ ಆಗಿದೆಯೇ ಎಂಬ ತನಿಖೆಯನ್ನು ಸಹ ಮಾಡಲಾಯ್ತು’ ಎಂದಿದ್ದಾರೆ.

ಇದನ್ನೂ ಓದಿ:ಮಗ ಆಯುಷ್ ಸಿನಿಮಾ ಬಗ್ಗೆ ದೊಡ್ಡ ಅಪ್​​ಡೇಟ್ ಕೊಟ್ಟ ಪ್ರಿಯಾಂಕಾ ಉಪೇಂದ್ರ

ತನಿಖೆಯ ಬಳಿಕ ಗೊತ್ತಾಗಿದ್ದು ಏನೆಂದರೆ ಫ್ಲೀಲ್ಯಾನ್ಸ್ ನೌಕರನೊಬ್ಬ ಎಡಿಟಿಂಗ್ ರೂಂನಲ್ಲಿದ್ದ ಸೀನ್​​ಗಳನ್ನು ಕಾಪಿ ಮಾಡಿಕೊಂಡು ತೆಗೆದುಕೊಂಡು ಹೋಗಿದ್ದ. ಸೀನ್​​ಗಳನ್ನು ತಾನೇ ಜೋಡಿಸಿ, ತನ್ನ ಕೆಲವು ಗೆಳೆಯರನ್ನು ಕರೆಸಿಕೊಂಡು ಒಟ್ಟಿಗೆ ಸಿನಿಮಾ ನೋಡಿದ್ದರು. ಆದರೆ ಸಿನಿಮಾ ಒಬ್ಬರ ಮೂಲಕ ಇನ್ನೊಬ್ಬರಿಗೆ ಹರಿದಾಡಿ ಕೊನೆಗೆ ಆನ್​​ಲೈನ್​​​ಗೆ ಸಹ ಅಪ್​​ಲೋಡ್ ಮಾಡಲ್ಪಟ್ಟಿತ್ತು. ಅಲ್ಲಿಂದ ಸಿನಿಮಾ ದೊಡ್ಡ ಮಟ್ಟದಲ್ಲಿ ಲೀಕ್ ಆಯ್ತು’ ಎಂದಿದ್ದಾರೆ.

ಪೊಲೀಸರು ಆ ಯುವಕನನ್ನು ಪ್ರಶ್ನೆ ಮಾಡಿದಾಗಲೂ ಸಹ ಆತ ಹೆಚ್ಚಿಗೆ ಏನೂ ಹೇಳಿರಲಿಲ್ಲ. ಬಳಿಕ ನಾನು ಆತನನ್ನು ಭೇಟಿ ಆದಾಗ ಆತ ಅಳುತ್ತಾ ನನ್ನ ಕಾಲಿಗೆ ಬಿದ್ದು ಕ್ಷಮೆ ಕೇಳಿದ. ಆತನೇ ಈ ಕೃತ್ಯ ಮಾಡಿದನಾ ಅಥವಾ ಯಾರಾದರೂ ಆತನ ಹಿಂದೆ ಇದ್ದಾರಾ ಎಂಬುದು ನಮಗೆ ಈಗಲೂ ಗೊತ್ತಿಲ್ಲ’ ಎಂದಿದ್ದಾರೆ ವಿನೋದ್. ‘ಜನ ನಾಯಗನ್’ ಸಿನಿಮಾ ನಾಳೆ (ಜುಲೈ 23) ಬಿಡುಗಡೆ ಆಗುತ್ತಿದೆ. ಸಿನಿಮಾನಲ್ಲಿ ಪೂಜಾ ಹೆಗ್ಡೆ ಮತ್ತು ಮಮಿತಾ ಬಿಜು ನಾಯಕಿಯರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಬಿಡಿಎ ಓಪನ್ ಹೌಸ್ ಸಭೆಗೆ ಉತ್ತಮ ಸ್ಪಂದನೆ: 3,092 ದೂರುಗಳ ವಿಚಾರಣೆ, 2,206 ಸಮಸ್ಯೆಗಳ ಇತ್ಯರ್ಥ – Kannada News | BDA Open House Initiative Wins Public Trust: Over 2,200 Complex Grievances Resolved, 75 Meetings Held So Far

ಬಿಡಿಎ ಓಪನ್ ಹೌಸ್ ಸಭೆImage Credit source: Bangalore Development Authority Facebook page

ಬೆಂಗಳೂರು, ಜುಲೈ 22: ಸಾರ್ವಜನಿಕರ ದೀರ್ಘಕಾಲದ ಸಮಸ್ಯೆಗಳನ್ನು ಪರಿಹರಿಸುವ ಉದ್ದೇಶದಿಂದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ಆರಂಭಿಸಿರುವ ಓಪನ್ ಹೌಸ್ ಮೀಟಿಂಗ್ (OHM) ಯೋಜನೆಗೆ ಉತ್ತಮ ಸ್ಪಂದನೆ ದೊರೆತಿದ್ದು, ಹಲವು ವರ್ಷಗಳಿಂದ ಬಾಕಿ ಉಳಿದಿದ್ದ ದೂರುಗಳ ಇತ್ಯರ್ಥಕ್ಕೆ ವೇದಿಕೆಯಾಗುತ್ತಿದೆ. 2025ರ ಆಗಸ್ಟ್‌ನಲ್ಲಿ ಬಿಡಿಎಯ ಸಿಟಿಜನ್ ಆಕ್ಷನ್ ಸೆಲ್ (CAC) ಮೂಲಕ ಆರಂಭಿಸಲಾದ ಈ ಯೋಜನೆಯಡಿ, ಜೂನ್ 30ರ ವೇಳೆಗೆ ನಗರದಲ್ಲಿನ ನಾಲ್ಕು ವಲಯಗಳಿಂದ ದಾಖಲಾಗಿದ್ದ 5,829 ದೂರುಗಳಲ್ಲಿ 3,092 ದೂರುಗಳ ವಿಚಾರಣೆ ನಡೆಸಲಾಗಿದ್ದು, 2,206 ದೂರುಗಳನ್ನು ಇತ್ಯರ್ಥಪಡಿಸಲಾಗಿದೆ.

ವಲಯವಾರು ದೂರುಗಳ ವಿವರ

  • ಪಶ್ಚಿಮ ವಲಯ: 2,228
  • ಉತ್ತರ ವಲಯ: 1,588
  • ದಕ್ಷಿಣ ವಲಯ: 1,312
  • ಪೂರ್ವ ವಲಯ: 701

ಇದನ್ನೂ ಓದಿ: ಕೆಪಿಎಸ್‌ಸಿ ನೇಮಕಾತಿ ಅಕ್ರಮ; ರಾಜ್ಯ ಸರ್ಕಾರ, ಸಿಬಿಐಗೆ ಕರ್ನಾಟಕ ಹೈಕೋರ್ಟ್ ನೋಟಿಸ್

ಯಾವ ರೀತಿಯ ದೂರುಗಳು?

  • ಪರ್ಯಾಯ ನಿವೇಶನ ಹಂಚಿಕೆ
  • ಒಂದೇ ನಿವೇಶನವನ್ನು ಹಲವರಿಗೆ ಹಂಚಿಕೆ ಮಾಡಿದ ಪ್ರಕರಣಗಳು
  • ದಿನಾಂಕವಿಲ್ಲದ ಹಂಚಿಕೆ ಪತ್ರಗಳು
  • ಡಿಜಿಟಲೀಕರಣಕ್ಕೂ ಮುಂಚಿನ ಲೇಔಟ್‌ಗಳಲ್ಲಿನ ದೋಷಗಳು
  • ಅತಿಕ್ರಮಿತ ನಿವೇಶನಗಳ ಸಮಸ್ಯೆ
  • ದಾಖಲೆಗಳ ಕೊರತೆಯಿಂದ ಉಂಟಾದ ವಿವಾದಗಳು

75 ಓಪನ್ ಹೌಸ್ ಸಭೆಗಳು

ಬಿಡಿಎ ಮಾಹಿತಿಯ ಪ್ರಕಾರ, ಇದುವರೆಗೆ 75 ಓಪನ್ ಹೌಸ್ ಸಭೆಗಳು ನಡೆದಿವೆ. ಒಟ್ಟು 4,895 ದೂರುಗಳನ್ನು ವಿಚಾರಣೆಗೆ ಪಟ್ಟಿ ಮಾಡಲಾಗಿದ್ದು, ಅವುಗಳಲ್ಲಿ 3,092 ಪ್ರಕರಣಗಳನ್ನು ಆಲಿಸಿ 2,206 ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲಾಗಿದೆ.

ದೂರು ಪರಿಹಾರ ವ್ಯವಸ್ಥೆ ಕಾರ್ಯನಿರ್ವಹಣೆ ಹೇಗೆ?

ಬಿಡಿಎ ಅಧಿಕಾರಿಗಳ ಪ್ರಕಾರ, ಹೊಸ ವ್ಯವಸ್ಥೆಯಲ್ಲಿ ದೂರುಗಳನ್ನು ಅವುಗಳ ಸ್ವರೂಪಕ್ಕೆ ಅನುಗುಣವಾಗಿ ವಿಂಗಡಿಸಲಾಗುತ್ತದೆ. ಸಾಮಾನ್ಯ ಪ್ರಶ್ನೆಗಳಿಗೆ ದೂರವಾಣಿ ಮೂಲಕ ಉತ್ತರದ ಜೊತೆಗೆ, ಸರಳ ದೂರುಗಳಿಗೆ 24 ಗಂಟೆಗಳೊಳಗೆ ಪರಿಹಾರ ನೀಡಲಾಗುತ್ತೆ. ತುರ್ತು ಹಾಗೂ ಸಂಕೀರ್ಣ ಸಮಸ್ಯೆಗಳಿಗೆ 7 ದಿನಗಳಲ್ಲಿ ಕ್ರಮವಾದರೆ, ನೀತಿ ಸಂಬಂಧಿತ ಅಥವಾ ಹಲವು ಇಲಾಖೆಗಳ ಸಮನ್ವಯ ಅಗತ್ಯವಿರುವ ಪ್ರಕರಣಗಳನ್ನು ಓಪನ್ ಹೌಸ್ ಸಭೆಗೆ ವರ್ಗಾಯಿಸಲಾಗುತ್ತದೆ.

ಬಿಡಿಎ ಅಧ್ಯಕ್ಷ ಎನ್.ಎ. ಹ್ಯಾರಿಸ್ ಮಾತನಾಡಿ, ಈ ವ್ಯವಸ್ಥೆಯಿಂದ ಸಂಪೂರ್ಣ ಪಾರದರ್ಶಕತೆ ಬಂದಿದೆ. ಭ್ರಷ್ಟಾಚಾರಕ್ಕೆ ಕಡಿವಾಣ ಬಿದ್ದಿದ್ದು, ಸಮಸ್ಯೆ ಬಗೆಹರಿಯದಿದ್ದರೆ ಅಥವಾ ಯಾರಾದರೂ ಹಣ ಕೇಳಿದರೆ, ಸಹಾಯವಾಣಿ ಮೂಲಕ ಮತ್ತೊಮ್ಮೆ ಓಪನ್ ಹೌಸ್ ಸಭೆಗೆ ನೋಂದಾಯಿಸಿಕೊಂಡು ಅಧಿಕಾರಿಗಳ ಎದುರೇ ತಮ್ಮ ಸಮಸ್ಯೆ ಮಂಡಿಸಬಹುದು ಎಂಬ ವಿಶ್ವಾಸ ಸಾರ್ವಜನಿಕರಲ್ಲಿ ಮೂಡಿದೆ ಎಂದು ತಿಳಿಸಿದ್ದಾರೆ ಎಂದು ದಿ ಟೈಮ್ಸ್​​ ಆಫ್​​ ಇಂಡಿಯಾ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ರಾಹುಲ್ ಗಾಂಧಿಗೆ ವಿದ್ಯಾರ್ಥಿಗಳ ಹಿತಕ್ಕಿಂತ ರಾಜಕೀಯವೇ ಮುಖ್ಯ, ನೀಟ್ ವಿವಾದಕ್ಕೆ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಿರುಗೇಟು – Kannada News | NEET Controversy: Pradhan Slams Rahul Gandhi, Alleges Politics Over Student Welfare

ನವದೆಹಲಿ, ಜುಲೈ 22: ದೆಹಲಿಯ ಜಂತರ್ ಮಂತರ್​ನಲ್ಲಿ ಕಾಕ್ರೋಚ್ ಜನತಾ ಪಾರ್ಟಿ (CJP) ನಡೆಸಿದ ‘ಸಂಸತ್ ಚಲೋ’ ಮೆರವಣಿಗೆ ಮತ್ತು ಪೋಲಿಸ್ ಘರ್ಷಣೆಯ ನಂತರ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ನೀಟ್(NEET) ಪೇಪರ್ ಸೋರಿಕೆ ವಿವಾದದ ಕುರಿತು ತಮ್ಮ ಮೊದಲ ಸಾರ್ವಜನಿಕ ಪ್ರತಿಕ್ರಿಯೆ ನೀಡಿದ್ದಾರೆ. ತಮ್ಮ ರಾಜೀನಾಮೆಗೆ ಆಗ್ರಹಿಸುತ್ತಿರುವ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ವಿರುದ್ಧ ಭಾರಿ ವಾಗ್ದಾಳಿ ನಡೆಸಿರುವ ಸಚಿವರು, ಕಾಂಗ್ರೆಸ್ ಪಕ್ಷವು ರಾಜಕೀಯ ಲಾಭಕ್ಕಾಗಿ ವಿದ್ಯಾರ್ಥಿಗಳನ್ನು ನಾಚಿಕೆಯಿಲ್ಲದೆ ದಾಳವಾಗಿ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ.

ಸಂಸತ್ತಿನ ಮಳೆಗಾಲದ ಅಧಿವೇಶನದಲ್ಲಿ ಪ್ರಜಾಪ್ರಭುತ್ವ ಮಾದರಿಯ ಚರ್ಚೆಯಲ್ಲಿ ಭಾಗವಹಿಸುವ ಬದಲು, ಅಧಿವೇಶನಕ್ಕೆ ಅಡ್ಡಿಪಡಿಸುವುದೇ ವಿಪಕ್ಷಗಳ ಮುಖ್ಯ ಉದ್ದೇಶವಾಗಿದೆ ಎಂದು ಅವರು ಕಿಡಿಕಾರಿದ್ದಾರೆ. ನೀಟ್ ಪರೀಕ್ಷಾ ಅಕ್ರಮಗಳು ಹಾಗೂ ಪರೀಕ್ಷಾ ವ್ಯವಸ್ಥೆಯ ಸುಧಾರಣೆಗಳ ಕುರಿತು ಸಂಸತ್ತಿನಲ್ಲಿ ವಿವರವಾದ ಸಮಗ್ರ ಚರ್ಚೆ ನಡೆಸಲು ಕೇಂದ್ರ ಸರ್ಕಾರ ಸಂಪೂರ್ಣ ಸಿದ್ಧವಿದೆ. ಆದರೆ ಕಾಂಗ್ರೆಸ್‌ಗೆ ಚರ್ಚೆಗಿಂತ ರಾಜಕೀಯ ಪ್ರದರ್ಶನವೇ ಮುಖ್ಯವಾಗಿದೆ ಎಂದು ಪ್ರತಿಪಾದಿಸಿದರು.

ನಮ್ಮ ದೇಶದ ವಿದ್ಯಾರ್ಥಿಗಳ ಆಕ್ರೋಶಕ್ಕೆ ನಾವು ಸ್ಪಂದಿಸಬೇಕಿದೆ. ಅವರಿಗೆ ಸರಿಯಾದ ಉತ್ತರ, ಪರೀಕ್ಷಾ ಸುಧಾರಣೆ ಹಾಗೂ ಪಾರದರ್ಶಕ ಹೊಣೆಗಾರಿಕೆಯನ್ನು ನೀಡಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಅವರು ಸ್ಪಷ್ಟಪಡಿಸಿದರು. ರಾಹುಲ್ ಗಾಂಧಿಯವರಿಗೆ ಇದು ವಿದ್ಯಾರ್ಥಿಗಳ ಭವಿಷ್ಯದ ಪ್ರಶ್ನೆಯಲ್ಲ, ಬದಲಿಗೆ ಅನಗತ್ಯ ಮುಖಾಮುಖಿ ಮತ್ತು ರಾಜಕೀಯ ಸುದ್ದಿ ಸೃಷ್ಟಿಸುವ ಕುತಂತ್ರ ಎಂದು ಸಚಿವರು ಟೀಕಿಸಿದರು.

ಮತ್ತಷ್ಟು ಓದಿ: ಆಸ್ಪತ್ರೆಯಲ್ಲೇ ಸೋನಮ್ ವಾಂಗ್ಚುಕ್ ಭೇಟಿಯಾದ ಜೆಪಿ ನಡ್ಡಾ, ಜಿತೇಂದ್ರ ಸಿಂಗ್

ಇತ್ತೀಚೆಗೆ ದೆಹಲಿಯಲ್ಲಿ ಜಿಜಿಪಿ (CJP) ನೇತೃತ್ವದಲ್ಲಿ ನಡೆದ ‘ಸಂಸತ್ ಚಲೋ’ ಮೆರವಣಿಗೆಯ ವೇಳೆ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಭಾರಿ ಘರ್ಷಣೆ ನಡೆದು ಹಲವರು ಗಾಯಗೊಂಡಿದ್ದರು. ವಿದ್ಯಾರ್ಥಿಗಳ ಮೇಲಿನ ಪೋಲಿಸ್ ಕ್ರಮವನ್ನು ಖಂಡಿಸಿ ಹಾಗೂ ಶಿಕ್ಷಣ ಸಚಿವರ ರಾಜೀನಾಮೆಗೆ ಒತ್ತಾಯಿಸಿ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಪ್ರಮುಖ ಕಾಂಗ್ರೆಸ್ ನಾಯಕರು ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸದ ಹೊರಗೆ ಅಚ್ಚರಿಯ ಧರಣಿ ಪ್ರತಿಭಟನೆ ನಡೆಸಿದ್ದರು.

ಪರೀಕ್ಷಾ ಅಕ್ರಮಗಳ ವಿರುದ್ಧ ಜೂನ್ 28 ರಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಸಾಮಾಜಿಕ ಕಾರ್ಯಕರ್ತ ಸೋನಮ್ ವಾಂಗ್ಚುಕ್ ಅವರ ಬೆಂಬಲಕ್ಕೂ ಕಾಂಗ್ರೆಸ್ ಧ್ವನಿಗೂಡಿಸಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

SP Warning Rowdysheeters: ರೌಡಿಶೀಟರ್‌ಗಳಿಗೆ ಚಳಿ ಬಿಡಿಸಿದ ದಾವಣಗೆರೆ ಎಸ್‌ಪಿ ಡಾ. H T ಶೇಖರ್‌

ದಾವಣಗೆರೆ, ಜುಲೈ 22: ನಗರದಲ್ಲಿ ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ದಾವಣಗೆರೆ ಜಿಲ್ಲಾ ಪೊಲೀಸ್ ವತಿಯಿಂದ ಮಹತ್ವದ ಕಾರ್ಯಾಚರಣೆ ನಡೆಸಲಾಗಿದೆ. ಪೊಲೀಸ್ ವರಿಷ್ಠಾಧಿಕಾರಿ ಡಾ. ಎಚ್.ಟಿ. ಶೇಖರ್ ಅವರ ನೇತೃತ್ವದಲ್ಲಿ, ಮುಂಬರುವ ಹಬ್ಬಗಳ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಉದ್ದೇಶದಿಂದ 145 ರೌಡಿಶೀಟರ್‌ಗಳಿಗೆ ಕಠಿಣ ಎಚ್ಚರಿಕೆ ನೀಡಲಾಗಿದೆ.

ಕಾರ್ಯಾಚರಣೆಯ ಭಾಗವಾಗಿ, ಎರಡು ದಿನಗಳ ಹಿಂದೆ ಬೆಳಗಿನ ಜಾವದಲ್ಲಿ ರೌಡಿಶೀಟರ್‌ಗಳ ಮನೆಗಳ ಮೇಲೆ ಅನಿರೀಕ್ಷಿತ ದಾಳಿ ನಡೆಸಲಾಯಿತು. ನಂತರ ಎಲ್ಲರನ್ನು ಡಿಆರ್ ಮೈದಾನಕ್ಕೆ ಕರೆತಂದು ಅವರ ಪೂರ್ವಾಪರ ಮತ್ತು ಇತ್ತೀಚಿನ ಚಟುವಟಿಕೆಗಳ ಬಗ್ಗೆ ಕೂಲಂಕಷ ಪರಿಶೀಲನೆ ನಡೆಸಲಾಯಿತು. ಜಿಲ್ಲೆಯಲ್ಲಿ ಒಟ್ಟು 468 ರೌಡಿಶೀಟರ್‌ಗಳಿದ್ದು, ದಾವಣಗೆರೆ ನಗರದಲ್ಲಿನ 145 ರೌಡಿಶೀಟರ್‌ಗಳಿಗೆ ಈ ಎಚ್ಚರಿಕೆ ನೀಡಲಾಗಿದೆ. ಕಾನೂನು ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್‌ಪಿ ಡಾ. ಎಚ್.ಟಿ. ಶೇಖರ್ ತಿಳಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Karnataka Dam Water Level: ಆಲಮಟ್ಟಿ ಡ್ಯಾಂ ಒಳಹರಿವು ಹೆಚ್ಚಳ, ಕರ್ನಾಟಕದ ಪ್ರಮುಖ ಜಲಾಶಯಗಳ ನೀರಿನ ಮಟ್ಟದ ವಿವರ – Kannada News | Karnataka Dam Water Levels on July 22: Almatti Inflow Rises as Maharashtra Rains Intensify, KRS Still Below 100 Feet

ಕೃಷ್ಣಾ ನದಿಯ ಒಳಹರಿವು ಮತ್ತೆ ಏರಿಕೆImage Credit source: tv9

ಬೆಂಗಳೂರು, ಜುಲೈ 22: ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಕಳೆದ ಮೂರು-ನಾಲ್ಕು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯ (Monsoon Rain) ಪರಿಣಾಮ ಕೃಷ್ಣಾ ನದಿಯ (Krishna River) ಒಳಹರಿವು ಮತ್ತೆ ಏರಿಕೆಯಾಗಿದೆ. ಒಂದೇ ದಿನದಲ್ಲಿ ಸುಮಾರು 80 ಸಾವಿರ ಕ್ಯೂಸೆಕ್ ನೀರು ಕೃಷ್ಣಾ ನದಿಗೆ ಹರಿದು ಬರುತ್ತಿದ್ದು, ವೇದಗಂಗಾ ಹಾಗೂ ದೂದಗಂಗಾ ನದಿಗಳಲ್ಲೂ ನೀರಿನ ಹರಿವು ಹೆಚ್ಚಿದೆ. ಇದರ ಪರಿಣಾಮ ನಿಪ್ಪಾಣಿ ಹಾಗೂ ಚಿಕ್ಕೋಡಿ ತಾಲೂಕಿನ ಐದಕ್ಕೂ ಹೆಚ್ಚು ಸೇತುವೆಗಳು ಜಲಾವೃತಗೊಂಡಿದ್ದು, ಯಡೂರು-ಕಲ್ಲೋಳ ಸಂಪರ್ಕ ಸೇತುವೆ ಎರಡನೇ ಬಾರಿ ಮುಳುಗಡೆಯಾಗಿದೆ. ಇದರ ಪರಿಣಾಮ ವಿಜಯಪುರ ಜಿಲ್ಲೆಯ ಆಲಮಟ್ಟಿ ಜಲಾಶಯಕ್ಕೂ ಒಳಹರಿವು ಹೆಚ್ಚಾಗಿದ್ದು, ಜಲಾಶಯದ ನೀರಿನ ಮಟ್ಟದಲ್ಲಿ ಏರಿಕೆ ಕಂಡುಬಂದಿದೆ.

ಮತ್ತೊಂದೆಡೆ, ಜುಲೈ ತಿಂಗಳು ಅಂತ್ಯ ಬರುತ್ತಿದ್ದರೂ ಬೆಂಗಳೂರಿನ ಪ್ರಮುಖ ಕುಡಿಯುವ ನೀರಿನ ಮೂಲವಾದ ಕೆಆರ್‌ಎಸ್ ಜಲಾಶಯದ ನೀರಿನ ಮಟ್ಟ ಇನ್ನೂ 100 ಅಡಿ ದಾಟದಿರುವುದು ಗಮನಾರ್ಹವಾಗಿದೆ.

ಆಲಮಟ್ಟಿ ಜಲಾಶಯ (ಲಾಲ್ ಬಹದ್ದೂರ್ ಶಾಸ್ತ್ರಿ ಸಾಗರ)

  • ಗರಿಷ್ಠ ಮಟ್ಟ: 519.60 ಮೀಟರ್
  • ಇಂದಿನ ನೀರಿನ ಮಟ್ಟ: 518.25 ಮೀಟರ್
  • ಒಳಹರಿವು: 63,792 ಕ್ಯೂಸೆಕ್
  • ಹೊರಹರಿವು: 25,000 ಕ್ಯೂಸೆಕ್

ಬಸವಸಾಗರ ಜಲಾಶಯ – ನಾರಾಯಣಪುರ (ಯಾದಗಿರಿ)

  • ಗರಿಷ್ಠ ಮಟ್ಟ: 492.25 ಮೀಟರ್
  • ಇಂದಿನ ನೀರಿನ ಮಟ್ಟ: 489.26 ಮೀಟರ್
  • ಒಳಹರಿವು: 14,771 ಕ್ಯೂಸೆಕ್
  • ಹೊರಹರಿವು: 6,000 ಕ್ಯೂಸೆಕ್

ಕೆಆರ್‌ಎಸ್ ಜಲಾಶಯ (ಮಂಡ್ಯ)

  • ಗರಿಷ್ಠ ಮಟ್ಟ: 124.80 ಅಡಿ
  • ಇಂದಿನ ನೀರಿನ ಮಟ್ಟ: 92.24 ಅಡಿ
  • ಒಳಹರಿವು: 852 ಕ್ಯೂಸೆಕ್
  • ಹೊರಹರಿವು: 1,801 ಕ್ಯೂಸೆಕ್
  • ಗರಿಷ್ಠ ಸಾಮರ್ಥ್ಯ: 49.452 ಟಿಎಂಸಿ
  • ಇಂದಿನ ನೀರಿನ ಸಂಗ್ರಹ: 17.317 ಟಿಎಂಸಿ

ಜುಲೈ ತಿಂಗಳ ಕೊನೆಯ ವಾರ ಸಮೀಪಿಸುತ್ತಿದ್ದರೂ, ಬೆಂಗಳೂರಿಗೆ ಕುಡಿಯುವ ನೀರು ಪೂರೈಸುವ ಪ್ರಮುಖ ಮೂಲವಾದ ಕೆಆರ್‌ಎಸ್ ಜಲಾಶಯದ ನೀರಿನ ಮಟ್ಟ ಇನ್ನೂ 100 ಅಡಿ ಗಡಿ ದಾಟಿಲ್ಲ. ಒಳಹರಿವು ಕೂಡ ಸೀಮಿತ ಪ್ರಮಾಣದಲ್ಲೇ ಮುಂದುವರಿದಿರುವುದು ಆತಂಕ ಮೂಡಿಸಿದೆ.

ಕಬಿನಿ ಜಲಾಶಯ (ಮೈಸೂರು)

  • ಇಂದಿನ ನೀರಿನ ಮಟ್ಟ: 72.65 ಅಡಿ
  • ಕಳೆದ ವರ್ಷ ಇದೇ ದಿನ: 83.63 ಅಡಿ
  • ಇಂದಿನ ನೀರಿನ ಸಂಗ್ರಹ: 13.01 ಟಿಎಂಸಿ
  • ಕಳೆದ ವರ್ಷ ಇದೇ ದಿನ ನೀರಿನ ಸಂಗ್ರಹ: 19.27 ಟಿಎಂಸಿ
  • ಇಂದಿನ ಒಳಹರಿವು: 3,132 ಕ್ಯೂಸೆಕ್
  • ಕಳೆದ ವರ್ಷ: 11,746 ಕ್ಯೂಸೆಕ್
  • ನದಿಗೆ ಬಿಡುಗಡೆ: 500 ಕ್ಯೂಸೆಕ್
  • ಕಳೆದ ವರ್ಷ ಬಿಡುಗಡೆ: 12,000 ಕ್ಯೂಸೆಕ್
  • ಕಳೆದ 24 ಗಂಟೆ ಮಳೆ: 5 ಮಿ.ಮೀ.

ಕಳೆದ ವರ್ಷಕ್ಕೆ ಹೋಲಿಸಿದರೆ, ಕಬಿನಿ ಜಲಾಶಯದ ನೀರಿನ ಮಟ್ಟ, ಸಂಗ್ರಹ ಹಾಗೂ ಒಳಹರಿವು ಈ ಬಾರಿ ಗಮನಾರ್ಹವಾಗಿ ಕಡಿಮೆಯಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 11:25 am, Wed, 22 July 26

Source link

ಸೋಮಣ್ಣ ಹೇಳಿಕೆಗೆ ದನಿಗೂಡಿಸಿದ ಡಿಸಿಎಂ ಪರಮೇಶ್ವರ್​​: ತುಮಕೂರಲ್ಲೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಆಗ್ರಹ – Kannada News | Bengaluru’s 2nd Airport: DyCM Parameshwara Backs Union Minister Somanna’s Push for International Airport in Tumakuru

ತುಮಕೂರು, ಜುಲೈ 22: ಬೆಂಗಳೂರು ಸಮೀಪ ಎರಡನೇ ವಿಮಾನ ನಿಲ್ದಾಣ ನಿರ್ಮಿಸುವ ಬದಲು ತುಮಕೂರು ಜಿಲ್ಲೆಯ ಶಿರಾದಲ್ಲಿ ಸ್ಥಾಪಿಸಬೇಕು ಎಂಬ ಕೇಂದ್ರ ಸಚಿವ ವಿ. ಸೋಮಣ್ಣ ಅವರ ಆಗ್ರಹದ ನಡುವೆ ಕರ್ನಾಟಕದ ಡಿಸಿಎಂ ಪರಮೇಶ್ವರ್​​ ಕೂಡ ಇದೇ ರೀತಿ ಅಭಿಪ್ರಾಯಪಟ್ಟಿದ್ದಾರೆ. ಅಂತಾರಾಷ್ಟ್ರೀಯ ಏರ್‌ಪೋರ್ಟ್​​ಮನ ತುಮಕೂರಿನಲ್ಲಿ ನಿರ್ಮಿಸಿ ಅಂತಾ 25 ವರ್ಷಗಳಿಂದ ಹೇಳುತ್ತಿದ್ದೇನೆ. ಆ‌ ಮೇಲೆ ಬಿಡಿದಿ ಸೇರಿದಂತೆ ಬೇರೆಬೇರೆ ಜಾಗ ಗುರುತಿಸಿದ್ದಾರೆ. ತುಮಕೂರು 20 ಜಿಲ್ಲೆಗಳ ಹೆಬ್ಬಾಗಿಲು, ನಮಗೂ ಅನುಕೂಲವಾಗುತ್ತೆ ಎಂದವರು ತಿಳಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

‘ನಂದ ಗೋಕುಲ’: ಗಂಡನಿಗಾಗಿ ಹೆತ್ತ ತಂದೆಯನ್ನೇ ಎದುರು ಹಾಕಿಕೊಂಡ ಅಮೂಲ್ಯ – Kannada News | Nandagokula Promo Twist: Amulya Turns Rebel Against Her Own Family For Husband Vallabha

ಕಲರ್ಸ್ ಕನ್ನಡ ವಾಹಿನಿಯ ‘ನಂದ ಗೋಕುಲ’ ಧಾರಾವಾಹಿ ದಿನದಿಂದ ದಿನಕ್ಕೆ ಭಾರಿ ರೋಚಕ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಸದ್ಯ ವಲ್ಲಭ ಮತ್ತು ಅಮೂಲ್ಯ ಬದುಕಿನಲ್ಲಿ ಸಂಚಲನ ಸೃಷ್ಟಿಯಾಗಿದ್ದು, ಪ್ರೇಕ್ಷಕರಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಗಂಡನ ಮೇಲಿನ ಅಪಾರ ಪ್ರೀತಿಗಾಗಿ ಅಮೂಲ್ಯ ಈಗ ಹೆತ್ತ ಕುಟುಂಬದ ವಿರುದ್ಧವೇ ರೆಬೆಲ್ ಆಗಿ ನಿಂತಿದ್ದಾಳೆ.

ಜೈಲು ಪಾಲಾದ ವಲ್ಲಭ: ಸುಳ್ಳು ಕೇಸ್‌ನಲ್ಲಿ ಸಿಲುಕಿದ ಗಂಡ!

ಧಾರಾವಾಹಿಯ ಕಥೆಯ ಪ್ರಕಾರ, ವಲ್ಲಭ ಜೀವನ ನಡೆಸಲು ಬಾಡಿಗೆ ಕಾರು ಓಡಿಸುತ್ತಿರುತ್ತಾನೆ. ಆದರೆ, ಆತನ ಕಾರಿನಲ್ಲಿ ಪ್ರಯಾಣ ಬೆಳೆಸಿದ್ದ ಹುಡುಗಿಯೊಬ್ಬಳು ಹಠಾತ್ತನೆ ಕಿಡ್ನ್ಯಾಪ್ ಆಗುತ್ತಾಳೆ. ಈ ಅಪಹರಣದ ಹಿಂದೆ ವಲ್ಲಭನ ಕೈವಾಡವಿದೆ ಎಂದು ಆರೋಪಿಸಿ ಪೊಲೀಸರು ಆತನನ್ನು ಬಂಧಿಸಿ ಜೈಲಿಗಟ್ಟುತ್ತಾರೆ. ವಲ್ಲಭ ಯಾವುದೇ ತಪ್ಪು ಮಾಡದಿದ್ದರೂ ಈ ದೊಡ್ಡ ಸಂಚಿನಲ್ಲಿ ಸಿಲುಕಿ ನಲುಗುವಂತಾಗಿದೆ.

ಅಮೂಲ್ಯ ಕುಟುಂಬದ ಕ್ರೌರ್ಯ: ಹೆಚ್ಚಿದ ದ್ವೇಷ

ಮತ್ತೊಂದೆಡೆ, ವಲ್ಲಭನನ್ನು ಮದುವೆಯಾಗಿದ್ದಾನೆ ಎಂಬ ಕಾರಣಕ್ಕೆ ಅಮೂಲ್ಯ ಕುಟುಂಬದವರು ಅವಳನ್ನು ಹಾಗೂ ವಲ್ಲಭನ ಕುಟುಂಬವನ್ನು ತೀವ್ರವಾಗಿ ದ್ವೇಷಿಸುತ್ತಿರುತ್ತಾರೆ. ಈಗ ವಲ್ಲಭ ಜೈಲು ಪಾಲಾಗಿರುವುದನ್ನು ಕಂಡು ಆಕೆಯ ತಂದೆ ಸೂರ್ಯಕಾಂತ್ ಮತ್ತು ಕುಟುಂಬಸ್ಥರು ಸಂಭ್ರಮಿಸುತ್ತಿದ್ದಾರೆ. ವಲ್ಲಭ ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸಲಿ, ಆತ ಕೊನೆವರೆಗೆ ಜೈಲಿನಲ್ಲೇ  ಕೊಳೆಯಲಿ ಎಂದು ಆಶಿಸುತ್ತಾ ವಿಕೃತಿ ಮೆರೆಯುತ್ತಿದ್ದಾರೆ.

ಇದನ್ನೂ ಓದಿ: ಪತ್ನಿಯರ ಎದುರು ಬಯಲಾಯ್ತು ಸಹೋದರರ ಸವಾಲು; ಗುಟ್ಟು-ರಟ್ಟು

ಗಂಡನಿಗಾಗಿ ಸೀಡಿ ಎದ್ದ ಅಮೂಲ್ಯ

ತನ್ನ ಪತಿ ವಲ್ಲಭ ಅಮಾಯಕ ಎಂಬುದು ಅಮೂಲ್ಯಳಿಗೆ ಚೆನ್ನಾಗಿ ತಿಳಿದಿದೆ. ತನ್ನ ಹೆತ್ತವರು ಆತನಿಗೆ ದ್ರೋಹ ಬಗೆಯುತ್ತಿರುವುದನ್ನು ಕಂಡು ಆಕೆ ಈಗ ರೌದ್ರಾವತಾರ ತಾಳಿದ್ದಾಳೆ. ‘ತಪ್ಪು ಮಾಡದ ವಲ್ಲಭನಿಗೆ ಶಿಕ್ಷೆಯಾದರೆ ನಾನು ಸುಮ್ಮನಿರಲ್ಲ. ನನ್ನ ಗಂಡನಿಗಾಗಿ ನಾನು ಯಾರನ್ನೂ ಕೇರ್ ಮಾಡಲ್ಲ, ಎದುರಿಗಿರೋದು ತಂದೆ ಸೂರ್ಯಕಾಂತ್ ಅಂತನೂ ನೋಡಲ್ಲ’ ಎಂದು ನೇರವಾಗಿ ತಂದೆಗೆ ಬೆರಳು ತೋರಿಸಿ ಎಚ್ಚರಿಕೆ ನೀಡಿದ್ದಾಳೆ. ತಂಗಿಯ ಮೇಲೆ ಕೈ ಮಾಡಲು ಬಂದ ಅಣ್ಣನ ಕೈಯನ್ನೇ ಗಟ್ಟಿಯಾಗಿ ಹಿಡಿದು ಹೆಣ್ಣಿನ ತಾಕತ್ತು ಏನೆಂಬುದನ್ನು ತೋರಿಸಿದ್ದಾಳೆ.

ತನ್ನ ಗಂಡನನ್ನು ಜೈಲಿನಿಂದ ಬಿಡಿಸಲು ಅಮೂಲ್ಯ ಯಾವ ಹಂತಕ್ಕೆ ಹೋಗುತ್ತಾಳೆ? ಮಗಳ ಈ ರೆಬೆಲ್ ಅವತಾರಕ್ಕೆ ಸೂರ್ಯಕಾಂತ್ ಕುಟುಂಬದ ಮುಂದಿನ ನಡೆ ಏನು ಎಂಬುದನ್ನು ಧಾರಾವಾಹಿಯ ಮುಂದಿನ ಸಂಚಿಕೆಗಳಲ್ಲಿ ಕಾದು ನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಶಿವಾಜಿನಗರದಲ್ಲಿ ಫುಟ್‌ಪಾತ್ ಒತ್ತುವರಿ ತೆರವು ವೇಳೆ ಹಲ್ಲೆ: 7 ಆರೋಪಿಗಳ ಬಂಧನ, ಕ್ಷಮೆಯಾಚನೆ ವೀಡಿಯೋ ಹಂಚಿಕೊಂಡ ಪೊಲೀಸ್‌! – Kannada News | Shivajinagar Encroachment Drive: 7 Arrested for Assault, Apologize in Police Video

ಆರೋಪಿಗಳ ಕ್ಷಮೆಯಾಚನೆ ವೀಡಿಯೋ ವೈರಲ್

ಬೆಂಗಳೂರು, ಜುಲೈ 22: ಶಿವಾಜಿನಗರದಲ್ಲಿ ಗೇಟರ್ ಬೆಂಗಳೂರು ಪ್ರಾಧಿಕಾರ (GBA) ವತಿಯಿಂದ ಮಂಗಳವಾರ ನಡೆದ ಫುಟ್‌ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ವೇಳೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಉಚ್ಚ ನ್ಯಾಯಾಲಯದ ನಿರ್ದೇಶನದಂತೆ ಜೆಸಿಬಿ ಬಳಸಿ ಅತಿಕ್ರಮಣ ತೆರವುಗೊಳಿಸಲು ಮುಂದಾದ ಪಾಲಿಕೆ ಸಿಬ್ಬಂದಿ ಹಾಗೂ ಪೊಲೀಸರ ಮೇಲೆ ಸ್ಥಳೀಯ ಸಂಘಟನೆಗಳ ಕಾರ್ಯಕರ್ತರು ಹಲ್ಲೆಗೆ ಯತ್ನಿಸಿದ್ದರು. ಈ ವೇಳೆ 7 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಕ್ಷಮೆಯಾಚನೆಯ ವೀಡಿಯೋ ಹಂಚಿಕೊಂಡಿದ್ದಾರೆ.

ಪೆಪ್ಪರ್ ಸ್ಪ್ರೇ ಬಳಸಿ ಹಲ್ಲೆ ಯತ್ನ!

ಕಾರ್ಯಾಚರಣೆಗೆ ಅಡ್ಡಿಪಡಿಸಿದ ಪ್ರತಿಭಟನಾಕಾರರು ಪಾಲಿಕೆಯ ಇಂಜಿನಿಯರ್‌ಗಳು, ಜೆಸಿಬಿ ಚಾಲಕ ಹಾಗೂ ಸಿಬ್ಬಂದಿ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ಒಬ್ಬ ಸಿಬ್ಬಂದಿಗೆ ಹೆಲ್ಮೆಟ್‌ನಿಂದ ಹೊಡೆಯಲು ಯತ್ನಿಸಿದ್ದು ಮಾತ್ರವಲ್ಲದೆ, ಚಾಲಕನ ಕಣ್ಣಿಗೆ ಪೆಪ್ಪರ್ ಸ್ಪ್ರೇ (Pepper Spray) ಸಿಂಪಡಿಸಿ ಉದ್ಧಟತನ ಮೆರೆದಿದ್ದಾರೆ. ಇದರಿಂದಾಗಿ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು.

ಸಚಿವ ಕೃಷ್ಣ ಭೈರೇಗೌಡ ಖಡಕ್ ಎಚ್ಚರಿಕೆ

ಈ ಘಟನೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ನಗರಾಭಿವೃದ್ಧಿ ಸಚಿವ ಕೃಷ್ಣ ಭೈರೇಗೌಡ, ಇವರು ಜೀವನೋಪಾಯಕ್ಕೆ ಕಷ್ಟಪಡುವ ಬಡವರಲ್ಲ, ಸಮಾಜಘಾತುಕ ಶಕ್ತಿಗಳು. ಕರ್ತವ್ಯನಿರತ ಅಧಿಕಾರಿಗಳ ಮೇಲೆ ಕೈಮಾಡಿದ ಯಾರನ್ನೂ ಬಿಡುವುದಿಲ್ಲ ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದರು.

ಆರೋಪಿಗಳ ಕ್ಷಮೆಯಾಚನೆ ವೀಡಿಯೋ ವೈರಲ್

ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ (AEE) ಮಾಧವ ರಾವ್ ನೀಡಿದ ದೂರಿನನ್ವಯ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, 7 ಜನ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೂರ್ವ ವಿಭಾಗದ ಡಿಸಿಪಿ ವಿಕ್ರಮ್ ಆಮ್ಟೆ ತಿಳಿಸಿದ್ದಾರೆ.

ಇದನ್ನೂ ಓದಿ ಶಿವಾಜಿನಗರ ಹಲ್ಲೆ ಪ್ರಕರಣ: ‘ನಾವು ಮಾಡಿದ್ದು ತಪ್ಪು’ ಎಂದು ಕೈಮುಗಿದು ಬೇಡಿಕೊಂಡ ಆರೋಪಿಗಳು!

ಇನ್ನೊಂದೆಡೆ, ಬೆಂಗಳೂರು ನಗರ ಪೊಲೀಸರು ತಮ್ಮ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಬಂಧಿತ ಆರೋಪಿಗಳು “ನಾವು ಮಾಡಿದ್ದು ತಪ್ಪು, ಯಾರೂ ಕಾನೂನನ್ನು ಕೈಗೆ ತೆಗೆದುಕೊಳ್ಳಬೇಡಿ” ಎಂದು ಕೈಮುಗಿದು ಸಾರ್ವಜನಿಕರಲ್ಲಿ ಕ್ಷಮೆಯಾಚಿಸುತ್ತಿರುವುದು ಕಂಡುಬಂದಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ದಯವಿಟ್ಟು ನಿಲ್ಲಿಸಿ’ ಪ್ರೇಮ್​​ಗೆ ಹಂಸಲೇಖ ಮನವಿ – Kannada News | Hamsalekha says he does not want Padma awards request to stop campaign

ಹಂಸಲೇಖ (Hamsalekha), ಕನ್ನಡ ಚಿತ್ರರಂಗದ ಲಿಜೆಂಡರಿ ಸಂಗೀತ ನಿರ್ದೇಶಖ ಮತ್ತು ಗೀತ ಸಾಹಿತಿ. ಕನ್ನಡಕ್ಕೆ ಸಾವಿರಾರು ಅತ್ಯದ್ಭುತ ಹಾಡುಗಳನ್ನು ನೀಡಿದ್ದಾರೆ. ಈಗಲೂ ಚಿತ್ರರಂಗದಲ್ಲಿ, ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯರಾಗಿದ್ದಾರೆ. ಈ ಲಿಜೆಂಡರಿ ಸಂಗೀತ ನಿರ್ದೇಶಕರಿಗೆ ಪದ್ಮ ಪ್ರಶಸ್ತಿ ಅಥವಾ ಜ್ಞಾನಪೀಠ ಪ್ರಶಸ್ತಿಯನ್ನು ಕೊಡಬೇಕು ಎಂದು ಇತ್ತೀಚೆಗಷ್ಟೆ ಅಭಿಯಾನವೊಂದು ಆರಂಭವಾಗಿತ್ತು, ಅಭಿಯಾನ ಆರಂಭಿಸಿದವರು ನಟ ನೆನಪಿರಲಿ ಪ್ರೇಮ್. ಆದರೆ ಇದೀಗ ಖುದ್ದು ಹಂಸಲೇಖ ಅವರೇ ಅಭಿಯಾನ ನಿಲ್ಲಿಸಿ ಎಂದು ಮನವಿ ಮಾಡಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿರುವ ಹಂಸಲೇಖ ಅವರು, ‘ಕನ್ನಡದಾಣೆ, ಇದಕ್ಕೆ (ಅಭಿಯಾನ) ನನ್ನ ಒಪ್ಪಿಗೆ ಇಲ್ಲ ಇದೊಂದು ಅನಗತ್ಯವಾದ ಅಭಿಮಾನದ ದುಡುಕು ಮತ್ತು ಪ್ರೀತಿಯ ತೊಂದರೆ. ಸೀನ್​​ಗೂ, ಟ್ಯೂನ್​​ಗೂ, ಲಿರಿಕ್ಸ್​ಗೂ ಹೊಂದಾಣಿಕೆಯೇ ಇಲ್ಲ. ಫ್ಲಾಫ್ ಸಾಂಗಿದು, ದಯವಿಟ್ಟು ನಿಲ್ಲಿಸಿ, ನೆನಪಿರಲಿ, ಪ್ರೀತಿಯ ಪ್ರೇಮ್’ ಎಂದು ಹಂಸಲೇಖ ಹೇಳಿದ್ದಾರೆ.

‘ಕನ್ನಡ ನಮ್ಮ ಹಕ್ಕಿನ ಭಾಷೆ, ಈ ಸತ್ಯವನ್ನು ಪ್ರತಿದಿನವೂ ಸಾಬೀತು ಪಡಿಸಬೇಕಾದ ಸಮಯದಲ್ಲಿದ್ದೇವೆ. ಅದಕ್ಕೆ ಬೇಕಾಗಿರುವುದು ಅಭಿಮಾನದ ಅಭಿಯಾನಗಳು’ ಎಂದು ಹಂಸಲೇಖ ಹೇಳಿದ್ದಾರೆ. ಆ ಮೂಲಕ ತಮಗೆ ಪ್ರಶಸ್ತಿ, ಗೌರವಗಳ ಅಗತ್ಯವಿಲ್ಲ ಎಂದಿದ್ದಾರೆ. ಜೊತೆಗೆ ಕೂಡಲೇ ಈ ಅಭಿಯಾನವನ್ನು ನಿಲ್ಲಿಸಿ ಎಂದು ಮನವಿಯನ್ನು ಸಹ ಹಂಸಲೇಖ ಮಾಡಿದ್ದಾರೆ.

ಇದನ್ನೂ ಓದಿ:ಪದ್ಮ ಪ್ರಶಸ್ತಿ ಅಥವಾ ಜ್ಞಾನಪೀಠ ನೀಡಿ: ಹಂಸಲೇಖ ಪರ ನಟ ಪ್ರೇಮ್ ಅಭಿಯಾನ

ಹಂಸಲೆಖ ಅವರು ಅರ್ಥ ಶತಮಾನಕ್ಕೂ ಹೆಚ್ಚು ಸಮಯದಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಅವರಷ್ಟು ಯಶಸ್ವಿ ಸಂಗೀತ ನಿರ್ದೇಶಕ ಮತ್ತು ಚಿತ್ರ ಸಾಹಿತಿಯನ್ನು ಕನ್ನಡ ಚಿತ್ರರಂಗ ಈ ವರೆಗೆ ನೋಡಿಲ್ಲ. ಕನ್ನಡಕ್ಕೆ ಹಲವಾರು ಅತ್ಯದ್ಭುತ ಹಾಡುಗಳನ್ನು ಹಂಸಲೇಖ ನೀಡಿದ್ದಾರೆ. ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು, ಹಿಂದಿ ಸಿನಿಮಾಗಳಿಗೂ ಸಹ ಅವರು ಸಂಗೀತ ನೀಡಿದ್ದಾರೆ. ಆದರೂ ಸಹ ಅವರಿಗೆ ಯಾವುದೇ ಕೇಂದ್ರ ಸರ್ಕಾರದ ನಾಗರೀಕ ಪ್ರಶಸ್ತಿಗಳು ಲಭಿಸಿಲ್ಲ. ಹಂಸಲೇಖ ಅವರಿಗೆ ನಾಗರೀಕ ಪ್ರಶಸ್ತಿ ಕೊಡಬೇಕೆಂದು ನಟ ನೆನಪಿರಲಿ ಪ್ರೇಮ್ ಅಭಿಯಾನ ಆರಂಭಿಸಿದ್ದರು. ಆದರೆ ಖುದ್ದು ಹಂಸಲೇಖ ಅವರೇ ಅಭಿಯಾನವನ್ನು ನಿಲ್ಲಿಸುವಂತೆ ಮನವಿ ಮಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Exit mobile version