ಒಂದೇ ವಿಮಾನದಲ್ಲಿ ಕ್ಯಾಲಿಫೋರ್ನಿಯಾ ಹೊರಟ ರಣಬೀರ್-ಯಶ್ – Kannada News | Ramayana Movie: Yash and Ranbir Leaves for San Diego Comic Con From Mumbai

ನಿತೇಶ್ ತಿವಾರಿ ನಿರ್ದೇಶನದ ‘ರಾಮಾಯಣ’ ಸಿನಿಮಾ (Ramayana Movie) ದಿನದಿಂದ ದಿನಕ್ಕೆ ಭಾರಿ ಕುತೂಹಲ ಮೂಡಿಸುತ್ತಿದೆ. ಈಗ ಚಿತ್ರತಂಡ ಭರ್ಜರಿ ಟ್ರೇಲರ್ ಲಾಂಚ್ ಮಾಡಲು ರೆಡಿಯಾಗಿದೆ. ಜುಲೈ 24ರಂದು ಚಿತ್ರದ ಅದ್ದೂರಿ ಟ್ರೇಲರ್ ಬಿಡುಗಡೆಯಾಗಲಿದೆ. ಅದಕ್ಕೂ ಮೊದಲು ಕ್ಯಾಲಿಫೋರ್ನಿಯಾದ ಸ್ಯಾನ್ ಡಿಯಾಗೋ ಕಾಮಿಕ್ ಕಾನ್‌ ಈವೆಂಟ್ ಅಟೆಂಡ್ ಮಾಡಲು ಯಶ್ ಹಾಗೂ ರಣಬೀರ್ ಕಪೂರ್ ತೆರಳಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.

ಮುಂಬೈನಿಂದ ಹೊರಟ ಸ್ಟಾರ್ ನಟರು

ಬುಧವಾರ (ಜುಲೈ 22) ಮುಂಜಾನೆ ರಣಬೀರ್ ಕಪೂರ್ ಮತ್ತು ಯಶ್ ಏರ್‌ಪೋರ್ಟ್‌ನಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಇವರಿಬ್ಬರು ಸ್ಟಾರ್ ನಟರು ಕ್ಯಾಲಿಫೋರ್ನಿಯಾಗೆ ತೆರಳುತ್ತಿದ್ದಾರೆ. ಅಲ್ಲಿ ನಡೆಯಲಿರುವ ಪ್ರತಿಷ್ಠಿತ ‘ಸ್ಯಾನ್ ಡಿಯಾಗೋ ಕಾಮಿಕ್ ಕಾನ್’ ಕಾರ್ಯಕ್ರಮದಲ್ಲಿ ಇವರು ಭಾಗವಹಿಸಲಿದ್ದಾರೆ. ಟ್ರೇಲರ್ ರಿಲೀಸ್ ಆಗುವ ಮುನ್ನವೇ ಈ ವೇದಿಕೆಯಲ್ಲಿ ಸಿನಿಮಾದ ದೃಶ್ಯಗಳನ್ನು ಪ್ರದರ್ಶನ ಮಾಡಲಾಗುತ್ತದೆ.

ಬಿಗ್ ಸ್ಟೇಜ್‌ನಲ್ಲಿ ‘ರಾಮಾಯಣ’ ಗ್ಲಿಂಪ್ಸ್

ನಟರ ಜೊತೆಗೆ ಚಿತ್ರದ ನಿರ್ದೇಶಕ ನಿತೇಶ್ ತಿವಾರಿ ಹಾಗೂ ನಿರ್ಮಾಪಕ ನಮಿತ್ ಮಲ್ಹೋತ್ರಾ ಕೂಡ ಈ ಕಾರ್ಯಕ್ರಮದಲ್ಲಿ ಜಂಟಿಯಾಗಲಿದ್ದಾರೆ. ಜುಲೈ 23ರಂದು ಅಲ್ಲಿನ ಬಾಲ್‌ರೂಮ್ 20ರಲ್ಲಿ ರಾಮಾಯಣ ಚಿತ್ರದ ಪ್ಯಾನಲ್ ಡಿಸ್ಕಷನ್ ನಡೆಯಲಿದೆ. ಇದು ಬರೋಬ್ಬರಿ 4,800 ಆಸನಗಳ ಸಾಮರ್ಥ್ಯ ಹೊಂದಿರುವ ಬೃಹತ್ ವೇದಿಕೆಯಾಗಿದೆ.ಇಲ್ಲಿ ಭಾಗವಹಿಸುವ ಪ್ರೇಕ್ಷಕರಿಗೆ ಸಿನಿಮಾದ ಮೊದಲ ಝಲಕ್ ನೋಡುವ ಸುವರ್ಣಾವಕಾಶ ಸಿಗಲಿದೆ. ಈ ವರ್ಷದ ಕಾಮಿಕ್ ಕಾನ್‌ನಲ್ಲಿ ಭಾರತದ ಪರವಾಗಿ ನಡೆಯುತ್ತಿರುವ ಅತಿ ದೊಡ್ಡ ಪ್ರೆಸೆಂಟೇಷನ್ ಇದಾಗಿದೆ.

ಇದನ್ನೂ ಓದಿ: ಜಟಾಯು ಪಾತ್ರಕ್ಕೆ ಅನುಪಮ್ ಖೇರ್ ಎಂಟ್ರಿ; ಇಲ್ಲಿದೆ ‘ರಾಮಾಯಣ’ ಕಲಾವಿದರ ಫುಲ್ ಲಿಸ್ಟ್

ದೀಪಾವಳಿಗೆ ಸಿನಿಮಾ ರಿಲೀಸ್

‘ರಾಮಾಯಣ’ ಸಿನಿಮಾದಲ್ಲಿ ದೊಡ್ಡ ತಾರಾಬಳಗವೇ ಇದೆ. ಯಶ್, ರಣಬೀರ್ ಕಪೂರ್, ಸಾಯಿ ಪಲ್ಲವಿ, ಸನ್ನಿ ಡಿಯೋಲ್, ರಕುಲ್ ಪ್ರೀತ್ ಸಿಂಗ್, ಕಾಜಲ್ ಅಗರ್ವಾಲ್, ರವಿ ದುಬೆ ಮತ್ತು ಕುನಾಲ್ ಕಪೂರ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಪ್ರೈಮ್ ಫೋಕಸ್ ಸ್ಟುಡಿಯೋಸ್ ಮತ್ತು ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಸಂಸ್ಥೆಗಳು ಜಂಟಿಯಾಗಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿವೆ. ಆಸ್ಕರ್ ಪ್ರಶಸ್ತಿ ವಿಜೇತ ವಿಎಫ್‌ಎಕ್ಸ್ ಸಂಸ್ಥೆ ‘ಡಿಎನ್‌ಇಜಿ’ ಈ ಚಿತ್ರಕ್ಕೆ ಗ್ರಾಫಿಕ್ಸ್ ಕೆಲಸಗಳನ್ನು ಮಾಡುತ್ತಿದೆ. 2026ರ ದೀಪಾವಳಿ ಹಬ್ಬಕ್ಕೆ ಸಿನಿಮಾ ಥಿಯೇಟರ್‌ಗಳಿಗೆ ಬರಲಿದೆ.

ಪ್ರಶ್ನೆ: ರಾಮಾಯಣ ರಿಲೀಸ್ ಯಾವಾಗ?
ಉತ್ತರ: ದೀಪಾವಳಿ

ಪ್ರಶ್ನೆ: ಯಶ್ ಪಾತ್ರವೇನು?
ಉತ್ತರ: ರಾವಣನ ಪಾತ್ರ

ಪ್ರಶ್ನೆ: ರಾಮಾಯಣ ಬಜೆಟ್ ಎಷ್ಟು
ಉತ್ತರ: 4000 ಕೋಟಿ ರೂಪಾಯಿ

Source link

Gold Rate: 10 ಗ್ರಾಮ್ ಚಿನ್ನದ ಬೆಲೆಯಲ್ಲಿ 2,100 ರೂ ಹೆಚ್ಚಳ; ಬೆಳ್ಳಿಯೂ ದುಬಾರಿ – Kannada News | Gold Price Today on 22nd July 2026, Gold And Silver Rates In Bengaluru, Delhi, Mumbai | Latest News in Kannada

ನವದೆಹಲಿ, ಜುಲೈ 22: ಕಳೆದ ಕೆಲ ದಿನಗಳಿಂದ ನಿರಂತರವಾಗಿ ಅಲ್ಪ ಹೆಚ್ಚಳಗೊಳ್ಳುತ್ತಾ ಬಂದಿರುವ ಚಿನ್ನದ ಬೆಲೆ (Gold Rates) ಇವತ್ತು ಬುಧವಾರ ಗ್ರಾಮ್​ಗೆ 200ಕ್ಕೂ ಹೆಚ್ಚು ರುಪಾಯಿಗಳಷ್ಟು ಜಿಗಿದಿದೆ. 18 ಕ್ಯಾರಟ್ ಚಿನ್ನದ ಬೆಲೆ ಹನ್ನೊಂದು ಸಾವಿರ ರೂ ಗಡಿ ಸಮೀಪಕ್ಕೆ ಹೋಗಿದೆ. ವಿದೇಶಗಳಲ್ಲೂ ಹೆಚ್ಚಿನ ಕಡೆ ಬಂಗಾರದ ದರ ಭರ್ಜರಿ ಏರಿಕೆಗೊಂಡಿದೆ. ಬೆಳ್ಳಿ ಬೆಲೆಯೂ ಇಂದು 5 ರೂಗಳಷ್ಟು ಹೆಚ್ಚಳಗೊಂಡಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,34,300 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,46,510 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 24,000 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,34,300 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 24,000 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 24,500 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಜುಲೈ 22ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,651 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,430 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 10,988 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 235 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,651 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,430 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 235 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 13,430 ರೂ
  • ಚೆನ್ನೈ: 13,430 ರೂ
  • ಮುಂಬೈ: 13,430 ರೂ
  • ದೆಹಲಿ: 13,445 ರೂ
  • ಕೋಲ್ಕತಾ: 13,430 ರೂ
  • ಕೇರಳ: 13,430 ರೂ
  • ಅಹ್ಮದಾಬಾದ್: 13,435 ರೂ
  • ಜೈಪುರ್: 13,445 ರೂ
  • ಲಕ್ನೋ: 13,445 ರೂ
  • ಭುವನೇಶ್ವರ್: 13,430 ರೂ

ಇದನ್ನೂ ಓದಿ: ಅದೃಷ್ಟ ಮತ್ತು ಅಂಡಾಶಯದ ಲಾಟರಿ; ತಮ್ಮ ಯಶಸ್ಸಿನ ಸೀಕ್ರೆಟ್ ಬಿಚ್ಚಿಟ್ಟ ವಾರನ್ ಬಫೆಟ್

ವಿದೇಶಗಳಲ್ಲಿ 24 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 555 ರಿಂಗಿಟ್ (13,051 ರುಪಾಯಿ)
  • ದುಬೈ: 492 ಡಿರಾಮ್ (12,895 ರುಪಾಯಿ)
  • ಅಮೆರಿಕ: 134 ಡಾಲರ್ (12,904 ರುಪಾಯಿ)
  • ಸಿಂಗಾಪುರ: 181.50 ಸಿಂಗಾಪುರ್ ಡಾಲರ್ (13,539 ರುಪಾಯಿ)
  • ಕತಾರ್: 492 ಕತಾರಿ ರಿಯಾಲ್ (12,995 ರೂ)
  • ಸೌದಿ ಅರೇಬಿಯಾ: 506 ಸೌದಿ ರಿಯಾಲ್ (12,978 ರುಪಾಯಿ)
  • ಓಮನ್: 52 ಒಮಾನಿ ರಿಯಾಲ್ (13,004 ರುಪಾಯಿ)
  • ಕುವೇತ್: 41 ಕುವೇತಿ ದಿನಾರ್ (12,827 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 240 ರೂ
  • ಚೆನ್ನೈ: 245 ರೂ
  • ಮುಂಬೈ: 240 ರೂ
  • ದೆಹಲಿ: 240 ರೂ
  • ಕೋಲ್ಕತಾ: 240 ರೂ
  • ಕೇರಳ: 245 ರೂ
  • ಅಹ್ಮದಾಬಾದ್: 240 ರೂ
  • ಜೈಪುರ್: 240 ರೂ
  • ಲಕ್ನೋ: 240 ರೂ
  • ಭುವನೇಶ್ವರ್: 245 ರೂ
  • ಪುಣೆ: 240

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಮೊಳಕೆ ಬಂದ ಹೆಸರುಕಾಳು vs ಮೊಳಕೆ ಬಂದ ಕಪ್ಪು ಕಡಲೆ: ಯಾವುದು ನಿಜವಾದ ಸೂಪರ್‌ಫುಡ್ ತಿಳಿದುಕೊಳ್ಳಿ – Kannada News | Green Gram or Black Chickpeas: Which Sprouts Are Better for Your Health?

ಮೊಳಕೆ ಬಂದ ಹೆಸರುಕಾಳು vs ಕಪ್ಪು ಕಡಲೆImage Credit source: Getty Images

ಮೊಳಕೆ ಬಂದ ಧಾನ್ಯಗಳು ಆರೋಗ್ಯಕರ ಆಹಾರಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿವೆ. ವಿಶೇಷವಾಗಿ ಮೊಳಕೆ ಬಂದ ಹೆಸರುಕಾಳು (Sprouted Green Gram) ಮತ್ತು ಮೊಳಕೆ ಬಂದ ಕಪ್ಪು ಕಡಲೆ (Sprouted Black Chickpeas) ಎರಡೂ ಹೆಚ್ಚಿನ ಪೌಷ್ಟಿಕಾಂಶಗಳನ್ನು ಹೊಂದಿದ್ದು, ದೇಹಕ್ಕೆ ಹಲವು ರೀತಿಯ ಆರೋಗ್ಯ ಪ್ರಯೋಜನಗಳನ್ನು ನೀಡುತ್ತವೆ. ಆದರೆ ಇವೆರಡರಲ್ಲಿ ಯಾವುದು ಒಳ್ಳೆಯದು ಮತ್ತು ಆರೋಗ್ಯಕ್ಕೆ ಯಾವವು ಉತ್ತಮ ಎಂಬುದನ್ನು ತಿಳಿದುಕೊಂಡರೆ ಅದರ ಅನುಸಾರ ಸೇವನೆ ಮಾಡಲು ಸುಲಭವಾಗುತ್ತದೆ. ಆರೋಗ್ಯ ತಜ್ಞರ ಪ್ರಕಾರ, ಧಾನ್ಯಗಳು ಮೊಳಕೆಯೊಡೆಯುವಾಗ ಅವುಗಳಲ್ಲಿ ವಿಟಮಿನ್‌ಗಳು, ಖನಿಜಾಂಶಗಳು, ಆಂಟಿಆಕ್ಸಿಡೆಂಟ್‌ಗಳು ಮತ್ತು ಜೀರ್ಣವಾಗುವ ಸಾಮರ್ಥ್ಯ ಹೆಚ್ಚಾಗುತ್ತದೆ. ಜೊತೆಗೆ ದೇಹಕ್ಕೆ ಅಗತ್ಯವಾದ ಕೆಲವು ಪೋಷಕಾಂಶಗಳು ಹೆಚ್ಚು ಸುಲಭವಾಗಿ ಹೀರಿಕೊಳ್ಳುವಂತೆ ರೂಪಾಂತರಗೊಳ್ಳುತ್ತವೆ. ಹಾಗಾದರೆ ಇವೆರಡರ ನಡುವೆ ಇರುವ ವ್ಯತ್ಯಾಸ ತಿಳಿದುಕೊಳ್ಳಿ.

ಮೊಳಕೆ ಬಂದ ಹೆಸರುಕಾಳಿನ ಆರೋಗ್ಯ ಪ್ರಯೋಜನಗಳು:

ಸಾಮಾನ್ಯವಾಗಿ ಮೊಳಕೆ ಬಂದ ಹೆಸರುಕಾಳು ಅತ್ಯಂತ ಹಗುರವಾದ ಆಹಾರವಾಗಿದ್ದು, ಸುಲಭವಾಗಿ ಜೀರ್ಣವಾಗುತ್ತದೆ. ಇದರಲ್ಲಿ ಪ್ರೋಟೀನ್, ಫೈಬರ್, ವಿಟಮಿನ್ ಸಿ, ವಿಟಮಿನ್ ಕೆ, ಫೋಲೇಟ್, ಮೆಗ್ನೀಷಿಯಮ್, ಆಂಟಿಆಕ್ಸಿಡೆಂಟ್‌ಗಳು ಸಮೃದ್ಧವಾಗಿದ್ದು ಇದರ ಸೇವನೆಯಿಂದ ಹಲವು ರೀತಿಯ ಪ್ರಯೋಜನಗಳನ್ನು ಪಡೆಯಬಹುದಾಗಿದೆ.

ತೂಕ ಇಳಿಕೆಗೆ ಸಹಕಾರಿ: ಹೆಸರುಕಾಳಿನಲ್ಲಿ ಕ್ಯಾಲೊರಿಗಳು ಕಡಿಮೆ ಇರುತ್ತವೆ. ಆದ್ದರಿಂದ ತೂಕ ಕಡಿಮೆ ಮಾಡಿಕೊಳ್ಳಲು ಬಯಸುವವರಿಗೆ ಇದು ಉತ್ತಮ ಆಹಾರ.

ಹೆಚ್ಚು ಸಮಯ ಹೊಟ್ಟೆ ತುಂಬಿದ ಅನುಭವ: ಇದರಲ್ಲಿರುವ ಫೈಬರ್ ಹೊಟ್ಟೆಯನ್ನು ಹೆಚ್ಚು ಸಮಯ ತುಂಬಿರುವಂತಹಹ ಅನುಭವವನ್ನು ನೀಡುತ್ತದೆ. ಇದರಿಂದ ಪದೇ ಪದೇ ಹಸಿವು ಕಾಣಿಸಿಕೊಳ್ಳುವ ಸಾಧ್ಯತೆ ಕಡಿಮೆಯಾಗುತ್ತದೆ.

ಜೀರ್ಣಕ್ರಿಯೆ ಸುಧಾರಣೆ: ಮೊಳಕೆ ಬಂದ ಹೆಸರುಕಾಳು ಸುಲಭವಾಗಿ ಜೀರ್ಣವಾಗುವುದರಿಂದ ಹೊಟ್ಟೆಯ ಆರೋಗ್ಯಕ್ಕೂ ಒಳ್ಳೆಯದು.

ರೋಗನಿರೋಧಕ ಶಕ್ತಿ ಹೆಚ್ಚಳ: ವಿಟಮಿನ್ ಸಿ ಮತ್ತು ಆಂಟಿಆಕ್ಸಿಡೆಂಟ್‌ಗಳು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತವೆ.

ಮೊಳಕೆ ಬಂದ ಕಪ್ಪು ಕಡಲೆಯ ಆರೋಗ್ಯ ಪ್ರಯೋಜನಗಳು

ಮೊಳಕೆ ಬಂದ ಕಪ್ಪು ಕಡಲೆ ಅತ್ಯುತ್ತಮ ಪ್ರೋಟೀನ್ ಮೂಲಗಳಲ್ಲಿ ಒಂದಾಗಿದ್ದು, ಇದರಲ್ಲಿ ಹೆಚ್ಚಿನ ಪ್ರೋಟೀನ್, ಕಬ್ಬಿಣ (Iron), ಕ್ಯಾಲ್ಸಿಯಮ್, ಫಾಸ್ಫರಸ್, ಫೈಬರ್, ಬಿ-ವಿಟಮಿನ್‌ಗಳು ಸಮೃದ್ಧವಾಗಿದೆ.

ಸ್ನಾಯುಗಳ ಬೆಳವಣಿಗೆಗೆ ಒಳ್ಳೆಯದು: ಜಿಮ್ ಮಾಡುವವರು, ಕ್ರೀಡಾಪಟುಗಳು ಹಾಗೂ ಹೆಚ್ಚಿನ ದೈಹಿಕ ಶ್ರಮ ವಹಿಸುವವರಿಗೆ ಕಪ್ಪು ಕಡಲೆ ಉತ್ತಮ ಪ್ರೋಟೀನ್ ಆಹಾರವಾಗಿದೆ.

ದೀರ್ಘಕಾಲದ ಶಕ್ತಿ: ಕಪ್ಪು ಕಡಲೆ ನಿಧಾನವಾಗಿ ಜೀರ್ಣವಾಗುವುದರಿಂದ ದೇಹಕ್ಕೆ ಹೆಚ್ಚು ಸಮಯ ಶಕ್ತಿ ನೀಡುತ್ತದೆ.

ರಕ್ತಹೀನತೆ ತಡೆಗಟ್ಟಲು ಸಹಕಾರಿ: ಇದರಲ್ಲಿರುವ ಕಬ್ಬಿಣದ ಅಂಶ ಹೆಚ್ಚಾಗಿದ್ದು ಹಿಮೋಗ್ಲೋಬಿನ್ ಮಟ್ಟವನ್ನು ಕಾಪಾಡಲು ಸಹಾಯ ಮಾಡುತ್ತದೆ ಜೊತೆಗೆ ರಕ್ತಹೀನತೆ ಅಪಾಯವನ್ನು ಕಡಿಮೆ ಮಾಡುತ್ತದೆ.

ಎಲುಬಿನ ಆರೋಗ್ಯ: ಕ್ಯಾಲ್ಸಿಯಮ್ ಮತ್ತು ಫಾಸ್ಫರಸ್ ಎಲುಬುಗಳನ್ನು ಬಲಪಡಿಸಲು ಸಹಕಾರಿಯಾಗುತ್ತವೆ.

ಇದನ್ನೂ ಓದಿ: ನೇರಳೆ ಹಣ್ಣು ತಿಂದರೆ ನಿಜವಾಗಿಯೂ ಡಯಾಬಿಟಿಸ್ ನಿಯಂತ್ರಿಸಬಹುದೇ?

ಯಾವುದು ಒಳ್ಳೆಯದು?

ತೂಕ ಇಳಿಸಿಕೊಳ್ಳಲು, ಜೀರ್ಣಕ್ರಿಯೆ ಸುಧಾರಿಸಬೇಕೆಂದಿದ್ದರೆ ಅಥವಾ ಮಧುಮೇಹ ಸ್ನೇಹಿ ಆಹಾರ ಹುಡುಕುತ್ತಿದ್ದರೆ ಮೊಳಕೆ ಬಂದ ಹೆಸರುಕಾಳನ್ನು ಆಯ್ಕೆ ಮಾಡುವುದು ಆರೋಗ್ಯಕ್ಕೆ ಒಳ್ಳೆಯದು. ಇನ್ನು, ಹೆಚ್ಚಿನ ಪ್ರೋಟೀನ್ ಅಗತ್ಯವಿದ್ದರೆ, ಜಿಮ್ ಅಥವಾ ವ್ಯಾಯಾಮ ಮಾಡುವವರಾಗಿದ್ದರೆ, ಕ್ರೀಡಾಪಟುವಾಗಿದ್ದರೆ, ಕಬ್ಬಿಣದ ಕೊರತೆಯನ್ನು ನಿವಾರಿಸಬೇಕೆಂದಿದ್ದರೆ, ದೀರ್ಘಕಾಲ ಶಕ್ತಿ ಬೇಕಾದರೆ ಮೊಳಕೆ ಬಂದ ಕಪ್ಪು ಕಡಲೆ ಆಯ್ಕೆ ಮಾಡಿಕೊಳ್ಳಿ.

ಯಾರು ಎಚ್ಚರಿಕೆ ವಹಿಸಬೇಕು?

ಗ್ಯಾಸ್ಟ್ರಿಕ್ ಅಥವಾ ಹೊಟ್ಟೆ ಉಬ್ಬರ ಸಮಸ್ಯೆ ಇರುವವರು ಕಡಿಮೆ ಪ್ರಮಾಣದಲ್ಲಿ ಸೇವಿಸಬೇಕು. ಮೊಳಕೆಗಳನ್ನು ಸ್ವಚ್ಛವಾಗಿ ತೊಳೆದು ಸೇವಿಸಬೇಕು. ಮಕ್ಕಳು, ಗರ್ಭಿಣಿಯರು, ವಯೋವೃದ್ಧರು ಹಾಗೂ ರೋಗನಿರೋಧಕ ಶಕ್ತಿ ಕಡಿಮೆ ಇರುವವರು ಮೊಳಕೆ ಕಾಳುಗಳ ಬದಲು ಸ್ವಲ್ಪ ಬೇಯಿಸಿ ಸೇವಿಸುವುದು ಸುರಕ್ಷಿತ.

ಯಾವುದು ನಿಜವಾದ ಸೂಪರ್‌ಫುಡ್?

ಪೌಷ್ಟಿಕ ತಜ್ಞರ ಅಭಿಪ್ರಾಯದಂತೆ, ಮೊಳಕೆ ಬಂದ ಹೆಸರೆಕಾಳು ಮತ್ತು ಮೊಳಕೆ ಬಂದ ಕಪ್ಪು ಕಡಲೆ ಎರಡೂ ತಮ್ಮದೇ ಆದ ವಿಶೇಷ ಆರೋಗ್ಯ ಪ್ರಯೋಜನಗಳನ್ನು ಹೊಂದಿವೆ. ಒಂದನ್ನು ಮತ್ತೊಂದಕ್ಕಿಂತ ಉತ್ತಮ ಎಂದು ಹೇಳುವುದಕ್ಕಿಂತ, ನಿಮ್ಮ ಆರೋಗ್ಯಕ್ಕೆ ಅನುಗುಣವಾಗಿ ಆಯ್ಕೆ ಮಾಡುವುದು ಉತ್ತಮ.

ಸೂಚನೆ: ಈ ಲೇಖನವು ಆರೋಗ್ಯ ಜಾಗೃತಿಗಾಗಿ ಮಾತ್ರ. ನಿಮ್ಮ ಆರೋಗ್ಯ ಸ್ಥಿತಿ, ಅಲರ್ಜಿ ಅಥವಾ ವೈದ್ಯಕೀಯ ಸಮಸ್ಯೆಗಳಿಗೆ ಅನುಗುಣವಾಗಿ ಆಹಾರದಲ್ಲಿ ಬದಲಾವಣೆ ಮಾಡುವ ಮೊದಲು ವೈದ್ಯರು ಅಥವಾ ನೋಂದಾಯಿತ ಪೌಷ್ಟಿಕ ತಜ್ಞರ ಸಲಹೆ ಪಡೆಯಿರಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಶಿವಾಜಿನಗರ ಹಲ್ಲೆ ಪ್ರಕರಣ: ‘ನಾವು ಮಾಡಿದ್ದು ತಪ್ಪು’ ಎಂದು ಕೈಮುಗಿದು ಬೇಡಿಕೊಂಡ ಆರೋಪಿಗಳು! – Kannada News | Shivajinagar Encroachment Drive Row: Accused Apologize After Assaulting GBA Staff in Bengaluru

ಬೆಂಗಳೂರು, ಜುಲೈ 22: ಶಿವಾಜಿನಗರದಲ್ಲಿ ಜಿಬಿಎ ವತಿಯಿಂದ ಮಂಗಳವಾರ ನಡೆದ ಫುಟ್​ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ವೇಳೆ ಸಿಬ್ಬಂದಿ ಮೇಲೆ ಸ್ಥಳೀಯ ಸಂಘಟನೆಗಳ ಕಾರ್ಯಕರ್ತರು ಹಲ್ಲೆ ನಡೆಸಲಾಗಿತ್ತು. ಈ ಬಗ್ಗೆ ನಗರಾಭಿವೃದ್ಧಿ ಸಚಿವ ಕೃಷ್ಣ ಭೈರೇಗೌಡ ಮಾತನಾಡಿ, ಇವರು ಜೀವನೋಪಾಯಕ್ಕಾಗಿ ಕಷ್ಟಪಟ್ಟು ದುಡಿಯುವ ಬಡಜನರಲ್ಲ. ಇವರು ಸಮಾಜಘಾತುಕ ಶಕ್ತಿಗಳು ಎಂದು ಕಿಡಿಕಾರಿದ್ದರು. ಇದೀಗ ಬೆಂಗಳೂರು ಪೊಲೀಸರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಹಂಚಿಕೊಂಡಿದ್ದು, ಈ ವೀಡಿಯೋದಲ್ಲಿ ಕಾನೂನನ್ನು ಯಾರೂ ಕೈಗೆ ತೆಗೆದುಕೊಳ್ಳಬಾರದು. ನಾವು ಮಾಡಿದ್ದು ತಪ್ಪು ಎಂದು ಆರೋಪಿಗಳು ಕೈ ಮುಗಿದು ಬೇಡಿಕೊಂಡಿದ್ದಾರೆ.

(Video Source: Bengaluru Police)

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Guru Purnima 2026: ಜಾತಕದಲ್ಲಿ ಗುರು ಬಲ ಹೆಚ್ಚಿಸಲು ಗುರು ಪೂರ್ಣಿಮೆಯಂದು ಈ ರೀತಿ ಮಾಡಿ – Kannada News | Guru Purnima 2026: Boost Career and Finance with Powerful Astrological Remedies

ಗುರು ಪೂರ್ಣಿಮೆಯ ವಿಶೇಷImage Credit source: vecteezy.com

ಪ್ರತಿ ವರ್ಷ ಆಷಾಢ ಮಾಸದ ಪೂರ್ಣಿಮೆಯಂದು (ಹುಣ್ಣಿಮೆ) ಅತ್ಯಂತ ಪವಿತ್ರವಾದ ಗುರು ಪೂರ್ಣಿಮೆಯನ್ನು ಆಚರಿಸಲಾಗುತ್ತದೆ. ಈ ವರ್ಷ ಜುಲೈ 29ರಂದು ಗುರು ಪೂರ್ಣಿಮೆಯನ್ನು ಆಚರಿಸಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಜ್ಞಾನ, ಬುದ್ಧಿವಂತಿಕೆ, ಶಿಕ್ಷಣ, ಸದಾಚಾರ ಮತ್ತು ಉನ್ನತ ಸ್ಥಾನಮಾನಗಳಿಗೆ ಅಧಿಪತಿಯಾದ ಬೃಹಸ್ಪತಿ ಅಂದರೆ ಗುರು ಗ್ರಹಕ್ಕೂ ಈ ದಿನಕ್ಕೂ ನೇರ ಸಂಪರ್ಕವಿದೆ.

ಗುರು ಗ್ರಹವು ದುರ್ಬಲವಾಗಿದ್ದರೆ ಈ ಪರಿಹಾರ ಮಾಡಿ:

ನಿಮ್ಮ ಜನ್ಮ ಕುಂಡಲಿಯಲ್ಲಿ ಗುರು ಗ್ರಹವು ದುರ್ಬಲವಾಗಿದ್ದು, ಜೀವನದಲ್ಲಿ ಸತತ ಅಡೆತಡೆಗಳು ಎದುರಾಗುತ್ತಿದ್ದರೆ ಗುರು ಪೂರ್ಣಿಮೆಯ ದಿನ ಮಾಡುವ ಕೆಲವು ಸಾಂಪ್ರದಾಯಿಕ ಪರಿಹಾರಗಳು ಅತ್ಯಂತ ಫಲಪ್ರದವಾಗುತ್ತವೆ ಎಂಬ ನಂಬಿಕೆಯಿದೆ. ವಿಶೇಷವಾಗಿ ಉದ್ಯೋಗದಲ್ಲಿ ಬಡ್ತಿ ಸಿಗದಿರುವುದು, ಕೆಲಸದ ಸ್ಥಳದಲ್ಲಿ ಸಮಸ್ಯೆಗಳು ಹಾಗೂ ಅನಗತ್ಯ ಆರ್ಥಿಕ ನಷ್ಟಗಳನ್ನು ಅನುಭವಿಸುತ್ತಿರುವವರು ಈ ದಿನ ಕೆಲವೊಂದು ಪ್ರಮುಖ ನಿಯಮಗಳನ್ನು ಅನುಸರಿಸುವುದು ಶ್ರೇಷ್ಠ.

ವೈದಿಕ ಜ್ಯೋತಿಷ್ಯದಲ್ಲಿ ಬೃಹಸ್ಪತಿಯ ಮಹತ್ವ:

ಮೊದಲನೆಯದಾಗಿ, ವೈದಿಕ ಜ್ಯೋತಿಷ್ಯದಲ್ಲಿ ದೇವಗುರು ಬೃಹಸ್ಪತಿ ಹಾಗೂ ಶ್ರೀಮನ್ನಾರಾಯಣನನ್ನು ಒಟ್ಟಿಗೆ ಆರಾಧಿಸುವುದಕ್ಕೆ ವಿಶೇಷ ಮಹತ್ವವಿದೆ. ಗುರು ಪೂರ್ಣಿಮೆಯ ಪವಿತ್ರ ದಿನದಂದು ಜಗನ್ನಿಯಾಮಕನಾದ ವಿಷ್ಣುವಿಗೆ ಹಳದಿ ವರ್ಣದ ಹೂವುಗಳನ್ನು ಅರ್ಪಿಸಿ, ಶುದ್ಧ ಹಸುವಿನ ತುಪ್ಪದ ದೀಪವನ್ನು ಬೆಳಗಿಸಬೇಕು. ಹೀಗೆ ಮಾಡುವುದರಿಂದ ವೃತ್ತಿಜೀವನದಲ್ಲಿ ಎದುರಾಗುವ ವಿಘ್ನಗಳು ನಿವಾರಣೆಯಾಗಿ, ಕೆಲಸದಲ್ಲಿ ಬಡ್ತಿ (ಪ್ರಮೋಷನ್) ದೊರೆಯುವ ಸಾಧ್ಯತೆಗಳು ಹೆಚ್ಚಾಗುತ್ತವೆ.

ಗುರು ಪೂರ್ಣಿಮೆಯಂದು ಈ ಮಂತ್ರ ಪಠಿಸಿ:

ಮನಸ್ಸಿನ ಏಕಾಗ್ರತೆ ಹಾಗೂ ಜೀವನದಲ್ಲಿ ಶುಭ ಫಲಗಳನ್ನು ಪಡೆಯಲು ಮಂತ್ರ ಜಪವು ಅತ್ಯಂತ ಪರಿಣಾಮಕಾರಿ. ಗುರು ಪೂರ್ಣಿಮೆಯಂದು ಇಷ್ಟದೇವತೆಯನ್ನು ಧ್ಯಾನಿಸುತ್ತಾ, “ಓಂ ಬೃಂ ಬೃಹಸ್ಪತೇ ನಮಃ” ಎಂಬ ಗುರು ಮಂತ್ರವನ್ನು ಪಠಿಸುವುದರಿಂದ ಮನಸ್ಸು ಶಾಂತಗೊಳ್ಳುತ್ತದೆ. ಈ ಮಂತ್ರದ ಜಪವು ಜಾತಕದಲ್ಲಿರುವ ಗುರು ದೋಷವನ್ನು ಶಮನಗೊಳಿಸಿ, ಜೀವನದಲ್ಲಿ ಹೊಸ ಸೌಭಾಗ್ಯ ಮತ್ತು ಸಮೃದ್ಧಿಯ ಬಾಗಿಲುಗಳನ್ನು ತೆರೆಯುತ್ತದೆ.

ಇದನ್ನೂ ಓದಿ: ಚಿಕ್ಕ ಮಕ್ಕಳಿಗೆ ಕನ್ನಡಿ ತೋರಿಸಬಾರದು ಏಕೆ? ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ಕಾರಣ ಇಲ್ಲಿದೆ

ವೃತ್ತಿ ಕ್ಷೇತ್ರದಲ್ಲಿ ಯಶಸ್ಸು ಪಡೆಯಲು ಈ ರೀತಿ ಮಾಡಿ:

ಶ್ರೀ ಸತ್ಯನಾರಾಯಣ ಸ್ವಾಮಿಯ ವ್ರತ ಕಥಾಪಠಣವು ಮನೆಗೆ ದೈವಿಕ ಕಳೆಯನ್ನು ತರುತ್ತದೆ. ಗುರು ಪೂರ್ಣಿಮೆಯ ದಿನದಂದು ಮನೆಯಲ್ಲಿ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಕಥಾ ಶ್ರವಣವನ್ನು ಆಯೋಜಿಸುವುದು ಅಥವಾ ತಾವೇ ಸ್ವತಃ ಕಥೆಯನ್ನು ಪಠಿಸುವುದರಿಂದ ಜೀವನದ ದೊಡ್ಡ ದೊಡ್ಡ ಸವಾಲುಗಳು ಸುಲಭವಾಗಿ ಬಗೆಹರಿಯುತ್ತವೆ. ಇದು ಆರ್ಥಿಕ ಸ್ಥಿರತೆಯನ್ನು ತರುವುದರ ಜೊತೆಗೆ ವೃತ್ತಿ ಕ್ಷೇತ್ರದಲ್ಲಿ ಅಭೂತಪೂರ್ವ ಯಶಸ್ಸನ್ನು ನೀಡುತ್ತದೆ.

ಚಂದ್ರದೇವನಿಗೆ ಅರ್ಘ್ಯ ಅರ್ಪಿಸಿ:

ಗುರು ಪೂರ್ಣಿಮೆಯ ರಾತ್ರಿ ಚಂದ್ರನು ತನ್ನ ಪೂರ್ಣ ಕಳೆಯಿಂದ ಶೋಭಿಸುತ್ತಿರುತ್ತಾನೆ. ಈ ಶುಭ ರಾತ್ರಿಯಂದು ಚಂದ್ರದೇವನಿಗೆ ಅರ್ಘ್ಯವನ್ನು ಅರ್ಪಿಸುವುದು ವಿಶೇಷ ಫಲವನ್ನು ನೀಡುತ್ತದೆ. ನೀರಿಗೆ ಕೆಲವು ಹನಿ ಹಸಿ ಹಾಲನ್ನು ಬೆರೆಸಿ ಚಂದ್ರನಿಗೆ ಅರ್ಪಿಸುವುದರಿಂದ ಮಾನಸಿಕ ಒತ್ತಡ ಕರಗಿ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಜೊತೆಗೆ, ಲಕ್ಷ್ಮೀದೇವಿಯ ಕೃಪೆಯಿಂದ ಆರ್ಥಿಕ ಬಿಕ್ಕಟ್ಟುಗಳು ನಿವಾರಣೆಯಾಗಿ ಧನಲಾಭವಾಗುತ್ತದೆ. ಇಂತಹ ಸರಳ ಹಾಗೂ ಪವಿತ್ರ ಪರಿಹಾರಗಳನ್ನು ಅನುಸರಿಸುವ ಮೂಲಕ ಗುರು ಪೂರ್ಣಿಮೆಯಂದು ದೈವಿಕ ಆಶೀರ್ವಾದವನ್ನು ಪಡೆಯಬಹುದು.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮುಸ್ಲಿಂ ಹೆಸರು ಬೇಡ, ಮದುವೆ ವೇಳೆ ಬದಲಿಸಿದ್ದ ಹೆಸರು ಬೇಡ, ಹಳೆಯ ಹೆಸರೇ ಬೇಕೆಂದು ಹೈಕೋರ್ಟ್ ಮೆಟ್ಟಿಲೇರಿದ 66 ವರ್ಷದ ಮಹಿಳೆ – Kannada News | Gujarat HC Hears Woman’s Plea: Revert to Christian Name Amid Housing Discrimination

ಅಹಮದಾಬಾದ್,ಜುಲೈ 22: ಮುಸ್ಲಿಂ ವ್ಯಕ್ತಿಯನ್ನು ಮದುವೆ(Marriage)ಯಾದ ನಂತರ ಬದಲಿಸಿಕೊಂಡಿದ್ದ ಹೆಸರು ಈಗ ನನಗೆ ಬೇಡ ಎಂದು ಹೇಳುತ್ತಾ 66 ವರ್ಷದ ಮಹಿಳೆಯೊಬ್ಬರು ಹೈಕೋರ್ಟ್​ ಮೆಟ್ಟಿಲೇರಿರುವ ಘಟನೆ ಗುಜರಾತ್​ನ ವಡೋದರಾದಲ್ಲಿ ನಡೆದಿದೆ. ಮುಸ್ಲಿಂ ಹೆಸರಿನಿಂದಾಗಿ ವಡೋದರಾದಲ್ಲಿ ಮನೆ ಬಾಡಿಗೆಗೆ ಅಥವಾ ಖರೀದಿಸಲು ತೀವ್ರ ತೊಂದರೆ ಎದುರಿಸುತ್ತಿರುವ 66 ವರ್ಷದ ನಿವೃತ್ತ ಕೇಂದ್ರ ಸರ್ಕಾರಿ ಉದ್ಯೋಗಿಯೊಬ್ಬರು, ತಮ್ಮ ಹಳೆಯ ಕ್ರಿಶ್ಚಿಯನ್ ಹೆಸರನ್ನು ಮರಳಿ ಪಡೆಯಲು ಗುಜರಾತ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ನಿರ್ಜರ್ ದೇಸಾಯಿ ಅವರಿದ್ದ ಹೈಕೋರ್ಟ್ ಪೀಠವು, ಹೆಸರು ಬದಲಾವಣೆಯ ವಿನಂತಿಯನ್ನು ಅಧಿಕೃತ ಸರ್ಕಾರಿ ಗೆಜೆಟ್‌ನಲ್ಲಿ ಪ್ರಕಟಿಸಲು ನಿರಾಕರಿಸಿದ್ದಕ್ಕೆ ರಾಜ್ಯ ಸರ್ಕಾರ ಹಾಗೂ ಸರ್ಕಾರಿ ಮುದ್ರಣಾಲಯ ನಿರ್ದೇಶನಾಲಯಕ್ಕೆ ನೋಟಿಸ್ ಜಾರಿ ಮಾಡಿದ್ದು, ಆಗಸ್ಟ್ 27 ರೊಳಗೆ ಉತ್ತರ ನೀಡುವಂತೆ ಸೂಚಿಸಿದೆ.

ಪ್ರಕರಣದ ಹಿನ್ನೆಲೆ ಏನು?
ಕ್ರಿಶ್ಚಿಯನ್ ಕುಟುಂಬದಲ್ಲಿ ಜನಿಸಿದ್ದ ಈ ಮಹಿಳೆ, ಮುಸ್ಲಿಂ ವ್ಯಕ್ತಿಯೊಬ್ಬರನ್ನು ವಿವಾಹವಾದ ನಂತರ ಮುಸ್ಲಿಂ ಧರ್ಮದ ಹೆಸರು ಹಾಗೂ ಉಪನಾಮವನ್ನು ಅಳವಡಿಸಿಕೊಂಡಿದ್ದರು. 2021 ರಲ್ಲಿ ಆಕೆಯ ಪತಿ ನಿಧನರಾದರು. ಪತಿಯ ನಿಧನದ ನಂತರ ಆಕೆ ಅತ್ತೆಯ ಮನೆಯನ್ನು ತೊರೆದು, ತಮ್ಮ ಹುಟ್ಟೂರಿನ ಪೋಷಕರು ಮತ್ತು ಹಳೆಯ ಕ್ರಿಶ್ಚಿಯನ್ ಕುಟುಂಬದ ಸಂಬಂಧಿಕರೊಂದಿಗೆ ಮತ್ತೆ ಒಂದಾಗಲು ನಿರ್ಧರಿಸಿದರು.

ಮತ್ತಷ್ಟು ಓದಿ: ಬೆಚ್ಚಿಬಿದ್ದ ಬಳ್ಳಾರಿ: ವಿಚ್ಛೇದಿತ ಮಹಿಳೆಯನ್ನು ಪ್ರೀತಿಸಿ ಮದುವೆಯಾಗಿದ್ದ ನವ ವಿವಾಹಿತನ ಬರ್ಬರ ಕೊಲೆ

ವಡೋದರಾದ ಮುಸ್ಲಿಮೇತರ ಪ್ರದೇಶಗಳಲ್ಲಿ ಮನೆ ಹುಡುಕಲು ಹೊರಟಾಗ, ಆಕೆಯ ‘ಮುಸ್ಲಿಂ ಹೆಸರು’ ದೊಡ್ಡ ಅಡ್ಡಿಯಾಗಿ ಪರಿಣಮಿಸಿತು. ಇದರಿಂದಾಗಿ ಆಕೆಗೆ ಎಲ್ಲೂ ಮನೆ ಸಿಗದ ವಾತಾವರಣ ನಿರ್ಮಾಣವಾಯಿತು. ತನ್ನ ಮೊದಲ ಕ್ರಿಶ್ಚಿಯನ್ ಹೆಸರನ್ನು ಮರಳಿ ಪಡೆಯಲು ಆಕೆ ಸರ್ಕಾರಿ ಗೆಜೆಟ್‌ಗೆ ಅರ್ಜಿ ಸಲ್ಲಿಸಿದ್ದರು.

ನಿಮ್ಮ ಬಳಿ ಅಧಿಕೃತ ವಿಚ್ಛೇದನ ಪತ್ರವಿಲ್ಲದಿರುವುದರಿಂದ ಪತಿಯ ಉಪನಾಮವನ್ನು ತೆಗೆದು, ತಂದೆಯ ಹೆಸರು ಹಾಗೂ ಹಳೆಯ ಉಪನಾಮವನ್ನು ಸೇರಿಸಲು ಸಾಧ್ಯವಿಲ್ಲ ಎಂದು ಹೇಳಿ ಅರ್ಜಿಯನ್ನು ತಿರಸ್ಕರಿಸಿದ್ದರು. ಇದರಿಂದ ಕಂಗಾಲಾದ ಮಹಿಳೆ ಹೈಕೋರ್ಟ್ ಮೆಟ್ಟಿಲೇರಿದರು.

ಹೈಕೋರ್ಟ್‌ನಲ್ಲಿ ಮಹಿಳೆಯ ವಾದವೇನು?
ಮಹಿಳೆಯ ಪರ ವಕೀಲ ರುಷಭ್ ಷಾ ಸಲ್ಲಿಸಿರುವ ಹೆಚ್ಚುವರಿ ಅಫಿಡವಿಟ್‌ನಲ್ಲಿ ಪ್ರಮುಖ ವಿಷಯಗಳನ್ನು ಸ್ಪಷ್ಟಪಡಿಸಲಾಗಿದೆ, ಹೆಸರು ಬದಲಾವಣೆಯು ಯಾವುದೇ ಸಿವಿಲ್ ಅಥವಾ ಕ್ರಿಮಿನಲ್ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ಮಾಡುತ್ತಿಲ್ಲ, ಬದಲಿಗೆ ಕೇವಲ ಸಾಮಾಜಿಕ ಪರಿಸ್ಥಿತಿಗಳಿಂದಾಗಿ ಮಾಡಲಾಗುತ್ತಿದೆ.

ಪತಿಯ ಮನೆಯನ್ನು ತೊರೆದಿರುವುದರಿಂದ ಆತನ ಆಸ್ತಿಯ ಮೇಲಿನ ಎಲ್ಲಾ ಹಕ್ಕುಗಳನ್ನು ಮಹಿಳೆ ಈಗಾಗಲೇ ಸಂಪೂರ್ಣವಾಗಿ ಬಿಟ್ಟುಕೊಟ್ಟಿದ್ದಾರೆ. ವಡೋದರಾದ ಮುಸ್ಲಿಮೇತರ ಪ್ರದೇಶಗಳಲ್ಲಿ ವಸತಿ ಪಡೆಯಲು ಹೆಸರು ಅಡ್ಡಿಯಾಗುತ್ತಿರುವುದರಿಂದ, ಪ್ರಜೆಯಾಗಿ ಸ್ವತಂತ್ರವಾಗಿ ಜೀವಿಸಲು ಹಳೆಯ ಹೆಸರು ಮರಳಿ ಪಡೆಯುವುದು ಅತ್ಯಗತ್ಯವಾಗಿದೆ. ಪ್ರಸ್ತುತ ನ್ಯಾಯಾಲಯವು ಅರ್ಜಿದಾರರ ಮನವಿಯನ್ನು ಸಾಮಾಜಿಕ ಸ್ವರೂಪದ್ದು ಎಂದು ಪರಿಗಣಿಸಿದ್ದು, ಆಗಸ್ಟ್ 27 ರಂದು ಸರ್ಕಾರ ನೀಡುವ ಉತ್ತರದ ಆಧಾರದ ಮೇಲೆ ಮುಂದಿನ ತೀರ್ಪು ಹೊರಬೀಳಲಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 10:32 am, Wed, 22 July 26

Source link

ತುಮಕೂರು-ಬೆಂಗಳೂರು ಹೆದ್ದಾರಿಯಲ್ಲಿ ಲಾರಿ ಪಲ್ಟಿ; ಕ್ಲೋರೈಡ್ ಸೋರಿಕೆಯಿಂದ ಆತಂಕ, ಭಾರೀ ಟ್ರಾಫಿಕ್ ಜಾಮ್ – Kannada News | Chemical Laden Lorry Overturns Near Nelamangala, Chloride Leak Triggers Traffic Jam on Tumakuru Bengaluru Highway

ಬೆಂಗಳೂರು ಗ್ರಾಮಾಂತರ, ಜುಲೈ 22: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಕುಲುವನಹಳ್ಳಿ ಗ್ರಾಮದ ಬಳಿ ಕ್ಲೋರೈಡ್ ಕೆಮಿಕಲ್ ತುಂಬಿಕೊಂಡು ಸಾಗುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಪರಿಣಾಮ ಕೆಮಿಕಲ್ ಸೋರಿಕೆಯಾಗಿದ್ದು, ಸ್ಥಳೀಯರಲ್ಲಿ ಆತಂಕ ಉಂಟಾಗಿದೆ. ಅಪಘಾತದಿಂದ ತುಮಕೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಮಾರು ಒಂದು ಕಿಲೋಮೀಟರ್‌ವರೆಗೆ ವಾಹನ ಸಂಚಾರ ದಟ್ಟಣೆ ಉಂಟಾಯಿತು. ಮಾಹಿತಿ ತಿಳಿದು ಸ್ಥಳಕ್ಕೆ ನೆಲಮಂಗಲ ಸಂಚಾರಿ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಭೇಟಿ ನೀಡಿ ಪರಿಸ್ಥಿತಿಯನ್ನು ನಿಯಂತ್ರಿಸುವ ಕಾರ್ಯಾಚರಣೆ ಕೈಗೊಂಡಿದ್ದಾರೆ.

ವರದಿ: ಮಂಜುನಾಥ್, ಟಿವಿ9, ನೆಲಮಂಗಲ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

National Mango Day 2026: ರಾಷ್ಟ್ರೀಯ ಮಾವು ದಿನದ ಇತಿಹಾಸ, ಮಹತ್ವವನ್ನು ತಿಳಿದುಕೊಳ್ಳಿ – Kannada News | National Mango Day 2026: Why is National Mango Day celebrated? Here’s the information

ರಾಷ್ಟ್ರೀಯ ಮಾವು ದಿನImage Credit source: Getty Images

ಭಾರತದಲ್ಲಿ ಮಾವು (Mango) ಕೇವಲ ಹಣ್ಣಲ್ಲ, ಬದಲಾಗಿ ಅದು ಹಣ್ಣುಗಳ ರಾಜ. ಅಷ್ಟೇ ಅಲ್ಲದೆ ಇದು ರಾಷ್ಟ್ರೀಯ ಹಣ್ಣು ಕೂಡ ಹೌದು. ಬೇಸಿಗೆಯ ಆಗಮನದೊಂದಿಗೆ ವಿವಿಧ ಪ್ರಭೇದದ ಮಾವಿನ ಹಣ್ಣುಗಳು ಕಾಣಿಸಿಕೊಳ್ಳುತ್ತವೆ. ಭಾರತದಲ್ಲಿನ ಈ ವಿವಿಧ ಪ್ರಭೇದ ಮಾವುಗಳಿಗೆ ವಿಶ್ವಾದ್ಯಂತ ಬೇಡಿಕೆಯಿದ್ದು, ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಮಾವು ಬೆಳೆಯುವ ಮತ್ತು ರಫ್ತು ಮಾಡುವ ರಾಷ್ಟ್ರವಾಗಿದೆ. ಈ ಹಣ್ಣಿನ ಜನಪ್ರಿಯತೆ, ಅವುಗಳ ಪ್ರಬೇಧ, ಸಾಂಸ್ಕೃತಿಕ ಮಹತ್ವದ ಬಗ್ಗೆ ಜನರಿಗೆ ತಿಳಿಸಲು ಹಾಗೂ ಮಾವಿನ ಹಣ್ಣಿನ ಗೌರವಾರ್ಥವಾಗಿ ಪ್ರತಿವರ್ಷ ಜುಲೈ 22 ರಂದು ರಾಷ್ಟ್ರೀಯ ಮಾವು ದಿನವನ್ನು ಆಚರಿಸಲಾಗುತ್ತದೆ. ಈ ವಿಶೇಷ ದಿನದ ಇತಿಹಾಸ ಮತ್ತು ಮಹತ್ವವನ್ನು ತಿಳಿಯೋಣ ಬನ್ನಿ.

ರಾಷ್ಟ್ರೀಯ ಮಾವು ದಿನದ ಇತಿಹಾಸವೇನು?

ಮಾವು ಭಾರತೀಯ ಸಾಂಸ್ಕೃತಿಕ ಸಮೃದ್ಧಿಯ ಸಂಕೇತವೆಂದು ಪರಿಗಣಿಸಲ್ಪಟ್ಟಿದೆ ಮತ್ತು ಪ್ರಕೃತಿಯೊಂದಿಗೆ ಸಂಬಂಧ ಹೊಂದಿದೆ. ರಾಷ್ಟ್ರೀಯ ಮಾವಿನ ದಿನವನ್ನು ಮೊದಲ ಬಾರಿಗೆ ಜುಲೈ 22, 2005 ರಂದು ಆಚರಿಸಲಾಯಿತು. ಅಂದಿನಿಂದ ಪ್ರತಿವರ್ಷ ಭಾರತದಲ್ಲಿ ಈ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ. ಈ ದಿನದ ಉದ್ದೇಶ ಮಾವಿನ ಹಣ್ಣಿನ ಮಹತ್ವ ಮತ್ತು ಅದರ ಇತರ ಪ್ರಯೋಜನಕಾರಿ ಗುಣಗಳು, ಈ ಹಣ್ಣಿನ ಜನಪ್ರಿಯತೆ, ಅವುಗಳ ಪ್ರಬೇಧ, ಸಾಂಸ್ಕೃತಿಕ ಮಹತ್ವವನ್ನು ಎತ್ತಿ ತೋರಿಸುವುದಾಗಿದೆ.

ಮಾವಿನ ದಿನದ ಮಹತ್ವವೇನು?

  • ಮಾವಿನಹಣ್ಣಿನ ಮೇಲಿನ ಜನರ ಪ್ರೀತಿ ಮತ್ತು ಅವುಗಳ ಸಾಂಸ್ಕೃತಿಕ ಮಹತ್ವವನ್ನು ಆಚರಿಸುವುದು ಈ ದಿನದ ಉದ್ದೇಶವಾಗಿದೆ.
  • ಈ ದಿನವು ಮಾವಿನ ವೈವಿಧ್ಯತೆ ಮತ್ತು ಅದಕ್ಕೆ ಸಂಬಂಧಿಸಿದ ರುಚಿಯ ಆಚರಣೆಯನ್ನು ಸೂಚಿಸುತ್ತದೆ.
  • ಮಾವಿನ ವಿವಿಧ ಪ್ರಭೇದಗಳು, ಅದರ ಪೌಷ್ಟಿಕಾಂಶದ ಮೌಲ್ಯ ಮತ್ತು ಭಾರತೀಯ ಸಂಸ್ಕೃತಿಯಲ್ಲಿ ಅದರ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವುದು ರಾಷ್ಟ್ರೀಯ ಮಾವಿನ ದಿನದ ಪ್ರಮುಖ ಉದ್ದೇಶವಾಗಿದೆ.

ಇದನ್ನೂ ಓದಿ: ತ್ರಿವರ್ಣ ಧ್ವಜ ಭಾರತದ ಹೆಮ್ಮೆಯ ಸಂಕೇತ

ಮಾವಿನ ಹಣ್ಣಿನ ಆರೋಗ್ಯ ಪ್ರಯೋಜನಗಳೇನು?

  • ಮಾವು ಹಣ್ಣುಗಳ ರಾಜ ಮಾತ್ರವಲ್ಲ, ಪೋಷಕಾಂಶಗಳ ನಿಧಿಯೂ ಆಗಿದೆ. ಮಾವಿನಹಣ್ಣು ಮೆಗ್ನೀಸಿಯಮ್, ಪೊಟ್ಯಾಸಿಯಮ್, ಪ್ರೋಟೀನ್, ವಿಟಮಿನ್‌ಗಳು ಮತ್ತು ಫೋಲೇಟ್ ಸೇರಿದಂತೆ ಅನೇಕ ಪೋಷಕಾಂಶಗಳನ್ನು ಹೊಂದಿವೆ.
  • ಮಾವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹ ಸಹಾಯ ಮಾಡುತ್ತದೆ.
  • ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.
  • ಮಾವಿನಹಣ್ಣು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹ ಸಹಾಯ ಮಾಡುತ್ತದೆ.
  • ಮಾವು ಹೃದಯದ ಆರೋಗ್ಯಕ್ಕೆ ಅತ್ಯಂತ ಪ್ರಯೋಜನಕಾರಿ ಹಣ್ಣು ಏಕೆಂದರೆ ಇದು ಪೊಟ್ಯಾಸಿಯಮ್‌ನಲ್ಲಿ ಸಮೃದ್ಧವಾಗಿದೆ.
  • ಮಾವಿನಹಣ್ಣಿನಲ್ಲಿ ಲುಟೀನ್, ಜಿಯಾಕ್ಸಾಂಥಿನ್ ಮತ್ತು ವಿಟಮಿನ್ ಎ ಇದ್ದು, ಇವೆಲ್ಲವೂ ಕಣ್ಣಿನ ಆರೋಗ್ಯಕ್ಕೆ ಪ್ರಯೋಜನಕಾರಿ.
  • ಮಾವಿನಹಣ್ಣು ನಿಮ್ಮ ದೇಹದ ತೂಕವನ್ನು ನಿಯಂತ್ರಿಸಲು ಸಹ ಸಹಾಯ ಮಾಡುತ್ತದೆ.
  • ಮಾವಿನಹಣ್ಣಿನಲ್ಲಿರುವ ಪಾಲಿಫಿನಾಲ್‌ಗಳು ಆಕ್ಸಿಡೇಟಿವ್ ಒತ್ತಡದ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಭಾರತೀಯ ನೌಕಾಪಡೆಗೆ ಸೇರ್ಪಡೆಯಾಗುತ್ತಿದೆ ‘ಮಾಲ್ವಾಣ್’ ಯುದ್ಧನೌಕೆ: ಸ್ವದೇಶಿ ನಿರ್ಮಿತ ಹಡಗಿನ ವಿಶೇಷಗಳೇನು? ಇಲ್ಲಿದೆ ನೋಡಿ – Kannada News | INS Malvan to Join Indian Navy Today at Karwar: Indigenous Warship with Advanced Anti Submarine Capabilities

ಕಾರವಾರ, ಜುಲೈ 22: ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿರುವ ಏಷ್ಯಾದ ಅತಿದೊಡ್ಡ ನೌಕಾನೆಲೆ ಐಎನ್‌ಎಸ್ ಕದಂಬದಲ್ಲಿ ಇಂದು ಭಾರತೀಯ ನೌಕಾಪಡೆಗೆ ಮತ್ತೊಂದು ಸ್ವದೇಶಿ ನಿರ್ಮಿತ ಯುದ್ಧನೌಕೆ ‘ಐಎನ್‌ಎಸ್ ಮಾಲ್ವಾಣ್’ ಸೇರ್ಪಡೆಯಾಗಲಿದೆ. ಕೇರಳದ ಕೊಚ್ಚಿ ಶಿಪ್‌ಯಾರ್ಡ್‌ನಲ್ಲಿ ಸುಮಾರು ಶೇ 80ರಷ್ಟು ಸ್ವದೇಶಿ ತಂತ್ರಜ್ಞಾನ ಬಳಸಿ ನಿರ್ಮಿಸಿರುವ ಈ ನೌಕೆ, ಭಾರತೀಯ ನೌಕಾಪಡೆಯ ಸಾಮರ್ಥ್ಯವನ್ನು ಇನ್ನಷ್ಟು ಬಲಪಡಿಸಲಿದೆ.

78 ಮೀಟರ್ ಉದ್ದ, 11.26 ಮೀಟರ್ ಅಗಲ ಹಾಗೂ 2.7 ಮೀಟರ್ ಆಳ ಹೊಂದಿರುವ ಈ ಯುದ್ಧನೌಕೆ ಗಂಟೆಗೆ 25 ನಾಟಿಕಲ್ ಮೈಲುಗಳ ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದೆ. ನೌಕೆಯಲ್ಲಿ 7 ಅಧಿಕಾರಿಗಳು ಸೇರಿದಂತೆ 57 ಮಂದಿ ನಾವಿಕರು ಕಾರ್ಯನಿರ್ವಹಿಸಲು ಅವಕಾಶ ಕಲ್ಪಿಸಲಾಗಿದೆ.

ಈ ನೌಕೆಯ ಪ್ರಮುಖ ವಿಶೇಷತೆ ಎಂದರೆ ಸಮುದ್ರದ ಆಳದಲ್ಲಿರುವ ಜಲಾಂತರ್ಗಾಮಿಗಳನ್ನು ಪತ್ತೆಹಚ್ಚಿ ದಾಳಿ ನಡೆಸುವ ಸಾಮರ್ಥ್ಯ. ಹಡಗಿನ ತಳಭಾಗದಲ್ಲಿ ಅಳವಡಿಸಿರುವ ‘ಅಭಯ್ ಸೋನಾರ್’ ವ್ಯವಸ್ಥೆಯು ಧ್ವನಿ ತರಂಗಗಳ ಮೂಲಕ ಜಲಾಂತರ್ಗಾಮಿಗಳ ಇರುವಿಕೆಯನ್ನು ಗುರುತಿಸಲಿದೆ. ಜೊತೆಗೆ ಜಲಾಂತರ್ಗಾಮಿ ನಿರೋಧಕ ಶಸ್ತ್ರಾಸ್ತ್ರಗಳು ಹಾಗೂ ಆಧುನಿಕ ರಕ್ಷಣಾ ವ್ಯವಸ್ಥೆಯನ್ನೂ ನೌಕೆ ಹೊಂದಿದೆ. ಅಲ್ಲದೆ, ಸಮುದ್ರ ಮೇಲ್ಮೈಯಲ್ಲಿ ಶತ್ರುಗಳ ವಿರುದ್ಧ ಕಾರ್ಯಾಚರಣೆ ನಡೆಸಲು ಮತ್ತು ಆತ್ಮರಕ್ಷಣೆಗಾಗಿ 30 ಮಿ.ಮೀ. ನೇವಲ್ ಸರ್ಫೇಸ್ ಗನ್ ಅಳವಡಿಸಲಾಗಿದೆ. ಸ್ವದೇಶಿ ರಕ್ಷಣಾ ಉತ್ಪಾದನೆಗೆ ಮತ್ತೊಂದು ಮೈಲುಗಲ್ಲಾಗಿರುವ ಈ ಯುದ್ಧನೌಕೆ ಭಾರತೀಯ ನೌಕಾಪಡೆಯ ಕಾರ್ಯಕ್ಷಮತೆಯನ್ನು ಮತ್ತಷ್ಟು ವೃದ್ಧಿಸುವ ನಿರೀಕ್ಷೆಯಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪ್ರಶ್ನೆಪತ್ರಿಕೆ ಸೋರಿಕೆ ಇಡೀ ದೇಶದ ಸಮಸ್ಯೆ, ತಡೆಯಲು ಗೆಹ್ಲೋಟ್ ಯತ್ನಿಸಿದರೂ ಸಾಧ್ಯವಾಗಲಿಲ್ಲ, ಪ್ರಿಯಾಂಕಾ ಗಾಂಧಿ ಮುಕ್ತ ಮಾತು – Kannada News | Exam Paper Leaks: India’s Crisis and Priyanka Gandhi’s Candid Admission

ನವದೆಹಲಿ, ಜುಲೈ 22: ದೇಶದಲ್ಲಿ ಸಾಲು ಸಾಲು ಪರೀಕ್ಷಾ ಅಕ್ರಮಗಳು ಮತ್ತು ಪ್ರಶ್ನೆಪತ್ರಿಕೆ ಸೋರಿಕೆ(Question Paper Leak) ಪ್ರಕರಣಗಳು ಯುವಕರನ್ನು ತೀವ್ರ ನಿರಾಶೆಗೆ ತಳ್ಳಿವೆ. ಸರ್ಕಾರಗಳು ಬದಲಾದರೂ, ರಾಜಕೀಯ ಪಕ್ಷಗಳು ಅಧಿಕಾರದಲ್ಲಿದ್ದಾಗ ಒಂದಲ್ಲ ಒಂದು ರೀತಿಯಲ್ಲಿ ಈ ‘ಸಾಂಸ್ಥಿಕ ಅಕ್ರಮ’ಗಳನ್ನು ತಡೆಯಲು ವಿಫಲವಾಗುತ್ತಿವೆ. ಅಧಿಕಾರದಲ್ಲಿದ್ದಾಗ ತಡೆಯಲಾಗದ ವಿಷಯಗಳನ್ನು, ವಿರೋಧ ಪಕ್ಷದಲ್ಲಿದ್ದಾಗ ಅದೇ ವಿಷಯವನ್ನು ಎತ್ತಿ ಹಿಡಿಯುವ ರಾಜಕೀಯ ಚಕ್ರ ನಿರಂತರವಾಗಿ ನಡೆಯುತ್ತಿದೆ. ಈ ಸತ್ಯವನ್ನು ಸ್ವತಃ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರೇ ಮುಕ್ತವಾಗಿ ಒಪ್ಪಿಕೊಂಡಿದ್ದು, ರಾಜಸ್ಥಾನದ ಪರೀಕ್ಷಾ ಸೋರಿಕೆ ಘಟನೆಗಳನ್ನು ಉಲ್ಲೇಖಿಸಿ ನೀಡಿರುವ ಹೇಳಿಕೆ ಈಗ ಮತ್ತೆ ಮುನ್ನೆಲೆಗೆ ಬಂದಿದೆ.

ರಾಜಸ್ಥಾನದಲ್ಲಿ ನಾವು ಪ್ರಯತ್ನಿಸಿದೆವು, ಆದರೆ ಆಗಲಿಲ್ಲ

ರಾಜಸ್ಥಾನದಲ್ಲಿ ಕಾಂಗ್ರೆಸ್ ಸರ್ಕಾರವಿದ್ದಾಗ ನಡೆದ ಪರೀಕ್ಷಾ ಅಕ್ರಮಗಳ ಬಗ್ಗೆ ಮಾತನಾಡಿದ್ದ ಪ್ರಿಯಾಂಕಾ ಗಾಂಧಿ, ಪ್ರಶ್ನೆಪತ್ರಿಕೆ ಸೋರಿಕೆ ಎನ್ನುವುದು ಕೇವಲ ಒಂದು ರಾಜ್ಯದ ಸಮಸ್ಯೆಯಲ್ಲ, ಅದು ಇಡೀ ದೇಶವನ್ನು ಬಾಧಿಸುತ್ತಿರುವ ಬೃಹತ್ ಜ್ವಲಂತ ಸಮಸ್ಯೆ. ರಾಜಸ್ಥಾನದಲ್ಲಿ ನಮ್ಮ ಸರ್ಕಾರವಿದ್ದಾಗ ಇದನ್ನು ತಡೆಯಲು ನಾವು ಶಕ್ತಿಮೀರಿ ಪ್ರಯತ್ನಿಸಿದೆವು, ಅಂದಿನ ಸಿಎಂ ಅಶೋಕ್ ಗೆಹ್ಲೋಟ್ ಜೀ ಕೂಡ ಸಾಕಷ್ಟು ಶ್ರಮಿಸಿದರು. ಆದರೆ, ನಮಗೂ ಅದನ್ನು ಸಂಪೂರ್ಣವಾಗಿ ತಡೆಯಲು ಸಾಧ್ಯವಾಗಲಿಲ್ಲ ಎಂದಿದ್ದಾರೆ.

ಮತ್ತಷ್ಟು ಓದಿ: ನೀಟ್ ಪರೀಕ್ಷಾ ಅಕ್ರಮದ ತೀವ್ರ ಪ್ರತಿಭಟನೆ ನಡುವೆ ವೈರಲ್ ಆಯ್ತು ಅರವಿಂದ್ ಅವರ ಎರಡು ವರ್ಷಗಳ ಹಳೆಯ ಭವಿಷ್ಯವಾಣಿ

ಪರೀಕ್ಷಾ ವ್ಯವಸ್ಥೆಯಲ್ಲಿನ ಅಕ್ರಮಗಳು ಕೇವಲ ಒಬ್ಬಿಬ್ಬರು ಮಾಡುವ ತಪ್ಪುಗಳಲ್ಲ, ಪರೀಕ್ಷಾ ಮಂಡಳಿ, ಉಸ್ತುವಾರಿ ವಹಿಸುವವರು, ಕೆಲವು ಪೋಷಕರು ಮತ್ತು ಮಧ್ಯವರ್ತಿಗಳು ಸೇರಿ ಇಡೀ ವ್ಯವಸ್ಥೆಯೊಳಗಿನ ಲೋಪದೋಷಗಳನ್ನು ಬಳಸಿಕೊಂಡು ಪರೀಕ್ಷೆಗೂ ಮುನ್ನವೇ ಕುತಂತ್ರ ನಡೆಸಿ ಶಾರ್ಟ್‌ಕಟ್‌ಗಳನ್ನು ಕಂಡುಕೊಳ್ಳುತ್ತಾರೆ.

ಹೆಲ್ಮೆಟ್ ಇಲ್ಲದೆ ವಾಹನ ಚಲಾಯಿಸುವುದು ಅಥವಾ ಎಲ್ಲೆಂದರಲ್ಲಿ ಕಸ ಚೆಲ್ಲುವುದನ್ನು ಜನರು ತಮ್ಮ ‘ಹಕ್ಕು’ ಅಥವಾ ಸಾಹಸ ಎಂಬಂತೆ ಬಿಂಬಿಸಿಕೊಳ್ಳುವಂತೆಯೇ, ಶಾರ್ಟ್‌ಕಟ್‌ನಲ್ಲಿ ಯಶಸ್ಸು ಗಳಿಸಲು ಅಕ್ರಮ ಎಸಗುವುದು ಕೂಡ ಸಮಾಜದಲ್ಲಿ ಸಹಜವೆಂಬಂತಾಗಿದೆ ಎಂದು ಲೆಫ್ಟಿನೆಂಟ್ ಜನರಲ್ ಡಿಪಿ ಪಾಂಡೆ ಪೋಸ್ಟ್​ ಮಾಡಿದ್ದಾರೆ.

ವಿಡಿಯೋ

ರಾಜಕೀಯ ಪಕ್ಷಗಳ ಇಬ್ಬಂದಿ ತನ

ಪರೀಕ್ಷಾ ಪಾರದರ್ಶಕತೆ ತರುವುದು ತೀವ್ರ ಕಷ್ಟಕರವೆನಿಸಿ, ಅಕ್ರಮಗಳನ್ನು ತಡೆಯಲು ಸರ್ಕಾರಗಳು ಹೆಣಗಾಡುತ್ತವೆ. ಅದೇ ವಿಪಕ್ಷದಲ್ಲಿದ್ದಾಗ ಪರೀಕ್ಷಾ ಸೋರಿಕೆಯನ್ನೇ ಅಸ್ತ್ರವಾಗಿಸಿಕೊಂಡು ಆಡಳಿತ ಪಕ್ಷದ ವಿರುದ್ಧ ಬೃಹತ್ ಹೋರಾಟಗಳನ್ನು ರೂಪಿಸುತ್ತವೆ. ಪ್ರಿಯಾಂಕಾ ಗಾಂಧಿ ಅವರ ಈ ಪ್ರಾಮಾಣಿಕ ಒಪ್ಪಿಗೆಯು, ಪ್ರಶ್ನೆಪತ್ರಿಕೆ ಸೋರಿಕೆ ಎನ್ನುವುದು ಕೇವಲ ರಾಜಕೀಯ ಕೆಸರೆರಚಾಟದ ವಿಷಯವಾಗದೆ, ಪಕ್ಷಾತೀತವಾಗಿ ಇಡೀ ದೇಶದ ಶಿಕ್ಷಣ ವ್ಯವಸ್ಥೆಯನ್ನೇ ಆಳವಾಗಿ ಸ್ವಚ್ಛಗೊಳಿಸಬೇಕಾದ ತುರ್ತು ಅಗತ್ಯವನ್ನು ಎತ್ತಿ ತೋರಿಸುತ್ತದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 10:01 am, Wed, 22 July 26

Source link

Exit mobile version