Mileage in E20 Petrol: ಇ20 ಪೆಟ್ರೋಲ್‌ನಿಂದ ವಾಹನದ ಎಂಜಿನ್ ಹಾಳಾಗುವುದಿಲ್ಲ, ಮೈಲೇಜ್‌ ಸ್ವಲ್ಪ ಕಡಿಮೆ ಆಗಬಹುದು, ಸಂಸತ್ತಿನಲ್ಲಿ ಕೇಂದ್ರ ಸರ್ಕಾರ ಸ್ಪಷ್ಟನೆ – Kannada News | E20 Petrol Mileage and Engine Safety: Govt Clarifies No Damage, Slight Mileage Drop

ನವದೆಹಲಿ, ಜುಲೈ 22: ದೇಶದಲ್ಲಿ ಬಳಕೆಯಲ್ಲಿರುವ ಇ20 ಪೆಟ್ರೋಲ್(Petrol) ಅಂದರೆ ಎಥೆನಾಲ್ ಮಿಶ್ರಿತ ಪೆಟ್ರೋಲ್ ಹಳೆಯ ವಾಹನಗಳ ಎಂಜಿನ್​ಗಳು ಹಾಳಾಗುತ್ತಿವೆ ಎಂಬ ಸಾರ್ವಜನಿಕರ ಆತಂಕಕ್ಕೆ ಕೇಂದ್ರ ಸರ್ಕಾರ ತೆರೆ ಎಳೆದಿದೆ. ಇ20 ಇಂಧನ ಬಳಕೆಯಿಂದ ಹಳೆಯವ ವಾಹನಗಳಲ್ಲಿ ಮೈಲೇಜ್ ಶೇ.3 ರಿಂದ 5ರಷ್ಟು ಕಡಿಮೆಯಾಗಬಹುದೇ ವಿನಃ ಯಾವುದೇ ದೊಡ್ಡ ಹಾನಿಯಾಗುವುದಿಲ್ಲ ಎಂದು ಸರ್ಕಾರ ಸಂಸತ್ತಿನಲ್ಲಿ ಸ್ಪಷ್ಟಪಡಿಸಿದೆ. ರಾಜ್ಯಸಭೆಯಲ್ಲಿ ಎತ್ತಲಾದ ಪ್ರಶ್ನೆಗೆ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ರಾಜ್ಯ ಸಚಿವ ಸುರೇಶ್ ಗೋಪಿ ಅವರು ಲಿಖಿತ ಉತ್ತರ ನೀಡಿದ್ದಾರೆ.

ಮೈಲೇಜ್ ಇಳಿಕೆಗೆ ಹಲವು ಕಾರಣ

ಹಳೆಯ ಇ10 ಹೊಂದಿಕೊಳ್ಳುವ ವಾಹನಗಳಲ್ಲಿ ಇ20 ಪೆಟ್ರೋಲ್ ಬಳಸಿದಾಗ ಮೈಲೇಜ್‌ ಶೇ. 3 ರಿಂದ 5 ರಷ್ಟು ಮಾತ್ರ ಕಡಿತಗೊಳ್ಳಬಹುದು. ಆದರೆ, ವಾಹನದ ಮೈಲೇಜ್‌ ಎನ್ನುವುದು ಕೇವಲ ಇಂಧನವನ್ನಷ್ಟೇ ಅಲ್ಲದೆ, ಚಾಲನೆ ಮಾಡುವ ಶೈಲಿ, ಟೈರ್ ಒತ್ತಡ , ಎಸಿ ಬಳಕೆ ಮತ್ತು ವಾಹನದ ನಿರ್ವಹಣೆಯನ್ನು ಅವಲಂಬಿಸಿರುತ್ತದೆ.

ಎಂಜಿನ್‌ಗೆ ತೊಂದರೆಯಿಲ್ಲ

ದೇಶಾದ್ಯಂತ ಕೋಟ್ಯಂತರ ಕಾರುಗಳು ಹಾಗೂ ದ್ವಿಚಕ್ರ ವಾಹನಗಳು ಕಳೆದ 2.5 ವರ್ಷಗಳಿಂದ ಇ20 ಇಂಧನದಲ್ಲೇ ಚಲಿಸುತ್ತಿವೆ. ಇಂಧನದಿಂದಾಗಿ ಎಂಜಿನ್ ಕೈಕೊಟ್ಟ ಯಾವುದೇ ನಿಖರ ಸಾಕ್ಷ್ಯಾಧಾರಗಳು ಸಿಕ್ಕಿಲ್ಲ. ಆಟೋಮೊಬೈಲ್ ಕಂಪನಿಗಳು ಕೂಡ ಇ20 ಪೆಟ್ರೋಲ್ ಬಳಸುವ ವಾಹನಗಳಿಗೆ ಖಾತರಿ ಸೇವೆಗಳನ್ನು ನೀಡುತ್ತಿವೆ. ಇ20 ಪೆಟ್ರೋಲ್‌ನಲ್ಲಿ ಆಕ್ಟೇನ್ ಮಟ್ಟ ಹೆಚ್ಚಿರುವುದರಿಂದ, ಎಂಜಿನ್ ಸುಲಭವಾಗಿ ಚಲಿಸಲು ಮತ್ತು ವಾಹನ ಶೀಘ್ರವಾಗಿ ವೇಗ ಪಡೆದುಕೊಳ್ಳಲು ಇದು ನೆರವಾಗುತ್ತದೆ.

ಹಳೆಯ ಪೆಟ್ರೋಲ್‌ಗೆ ಮರಳುವ ಪ್ರಶ್ನೆಯೇ ಇಲ್ಲ

ಸಾಮಾನ್ಯ ಪೆಟ್ರೋಲ್ (E0) ಅಥವಾ ಇ10 ಪೆಟ್ರೋಲ್‌ಗೆ ಸರ್ಕಾರ ಮತ್ತೆ ಮರಳುವುದಿಲ್ಲ. ದೇಶದ 1 ಲಕ್ಷಕ್ಕೂ ಹೆಚ್ಚು ಪೆಟ್ರೋಲ್ ಬಂಕ್‌ಗಳಲ್ಲಿ ಬೇರೆ ಬೇರೆ ಮಾದರಿಯ ಪೆಟ್ರೋಲ್ ಪೂರೈಸುವುದು ಪ್ರಾಯೋಗಿಕವಾಗಿ ಮತ್ತು ಸಾಫ್ಟ್‌ವೇರ್ ಲಾಜಿಸ್ಟಿಕ್ಸ್ ದೃಷ್ಟಿಯಿಂದ ವೆಚ್ಚದಾಯಕವಾಗಿದೆ ಎಂದು ಸರ್ಕಾರ ತಿಳಿಸಿದೆ.

ಮತ್ತಷ್ಟು ಓದಿ:

Budget EV Car: ಮೈಲೇಜ್ ಬಗ್ಗೆ ಚಿಂತೆಯೇ? ಭಾರತದಲ್ಲಿ ಸಿಗುವ ಅಗ್ಗದ 5 ಎಲೆಕ್ಟ್ರಿಕ್ ಕಾರುಗಳು ಇಲ್ಲಿವೆ

ಏನಿದು E20 ಪೆಟ್ರೋಲ್?

ಎಥೆನಾಲ್ ಮಿಶ್ರಣ: ಇ20 ಎಂದರೆ ಶೇಕಡಾ 80 ರಷ್ಟು ಸಾಂಪ್ರದಾಯಿಕ ಪೆಟ್ರೋಲ್ ಮತ್ತು ಶೇಕಡಾ 20 ರಷ್ಟು ‘ಎಥೆನಾಲ್’ (ಕಬ್ಬು ಮತ್ತು ಧಾನ್ಯಗಳಿಂದ ತಯಾರಿಸುವ ಜೈವಿಕ ಇಂಧನ) ಮಿಶ್ರಣವಾಗಿರುತ್ತದೆ. ಪರಿಸರ ಮತ್ತು ಆರ್ಥಿಕತೆ: ಕಚ್ಚಾ ತೈಲಕ್ಕಾಗಿ ಇತರ ದೇಶಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವುದು ಹಾಗೂ ವಾಹನಗಳಿಂದ ಬರುವ ಇಂಗಾಲದ ಹೊರಸೂಸುವಿಕೆಯನ್ನು ತಗ್ಗಿಸುವುದು ಭಾರತ ಸರ್ಕಾರದ ಮುಖ್ಯ ಉದ್ದೇಶವಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಬಿಜೆಪಿ ಶಾಸಕ ಬಿ.ಪಿ. ಹರೀಶ್‌ ಮೇಲೆ ಮೊಟ್ಟೆ ಎಸೆದು ಕಾಂಗ್ರೆಸ್​​​ ಕಾರ್ಯಕರ್ತರ ಆಕ್ರೋಶ – Kannada News | Protest Erupts in Bengaluru: Egg Hurled at BJP MLA BP Harish Near KPCC Office

ಬೆಂಗಳೂರು ಜು. 22: ಬೆಂಗಳೂರಿನ ಕಂಟೋನ್ಮೆಂಟ್ ಹಾಗೂ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ರಾಜ್ಯ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಬಿಜೆಪಿ ನಾಯಕರ ಪ್ರತಿಭಟನೆ ವೇಳೆ ತೀವ್ರ ಹೈಡ್ರಾಮಾ ನಡೆದಿದೆ. ಕಚೇರಿ ಮುಂದೆ ಬಂದ ದಾವಣಗೆರೆ ಜಿಲ್ಲೆಯ ಹರಿಹರ ಕ್ಷೇತ್ರದ ಬಿಜೆಪಿ ಶಾಸಕ ಬಿ.ಪಿ. ಹರೀಶ್ ಅವರ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಮೊಟ್ಟೆ ಎಸೆದು, ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ವಿರುದ್ಧ ಕರಪತ್ರ ಹಾಗೂ ಮುತ್ತಿಗೆ ಚಳವಳಿಗೆ ನಿರ್ಧರಿಸಿದ್ದ ಬಿಜೆಪಿ ನಾಯಕರನ್ನು ಪೊಲೀಸರು ಕಂಟೋನ್ಮೆಂಟ್ ಪ್ರದೇಶದ ಬಳಿಯೇ ತಡೆದು ವಶಕ್ಕೆ ಪಡೆದಿದ್ದರು. ಆದರೆ, ಈ ಪ್ರತಿಭಟನಾ ಸ್ಥಳದ ಸರಿಯಾದ ಮಾಹಿತಿ ಇಲ್ಲದೆ, ಶಾಸಕ ಬಿ.ಪಿ. ಹರೀಶ್ ಅವರು ನೇರವಾಗಿ ಕೆಪಿಸಿಸಿ ಕಚೇರಿಯ ಮುಂಭಾಗಕ್ಕೇ ಆಗಮಿಸಿದ್ದರು. ಶಾಸಕರು ಕಾರಿನಿಂದ ಇಳಿಯುತ್ತಿದ್ದಂತೆ ಕಚೇರಿಯಲ್ಲಿದ್ದ ಕಾಂಗ್ರೆಸ್ ಕಾರ್ಯಕರ್ತರು ಅವರ ವಿರುದ್ಧ ಬೃಹತ್ ಪ್ರಮಾಣದಲ್ಲಿ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು. ಬಿಜೆಪಿ ಶಾಸಕ ಕೆಪಿಸಿಸಿ ಕಚೇರಿಯಂಗಳಕ್ಕೆ ಬರುತ್ತಿದ್ದಂತೆಯೇ ಕೃತ್ಯಕ್ಕಿಳಿದ ಕಾಂಗ್ರೆಸ್ ಕಾರ್ಯಕರ್ತರು, ಬಿ.ಪಿ. ಹರೀಶ್‌ ಅವರತ್ತ ಮೊಟ್ಟೆ ಎಸೆದಿದ್ದಾರೆ. ಪರಿಸ್ಥಿತಿ ಕೈಮೀರುತ್ತಿದ್ದಂತೆ ತಕ್ಷಣವೇ ಸ್ಥಳದಲ್ಲಿದ್ದ ಪೊಲೀಸರು ಕಾರ್ಯಾಚರಣೆಗೆ ಇಳಿದು, ಶಾಸಕರನ್ನು ರಕ್ಷಿಸಿ ಪಕ್ಕದ ಗಲ್ಲಿಗೆ ಕರೆದುಕೊಂಡು ಹೋಗಿದ್ದಾರೆ. ಬಳಿಕ ತಮ್ಮ ಪೊಲೀಸ್ ಜೀಪ್‌ನಲ್ಲೇ ಹರೀಶ್ ಅವರನ್ನು ಸುರಕ್ಷಿತವಾಗಿ ಬೇರೆಡೆಗೆ ರವಾನಿಸಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬರ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಗೆ ಡಿಸಿಎಂ ಪರಮೇಶ್ವರ್ ತರಾಟೆ: ಜಲ ಯೋಜನೆಗಳ ಅನುಷ್ಠಾನ ವಿಚಾರವಾಗಿ ಕಿಡಿ – Kannada News | DyCM Parameshwar Expresses Anger Over Delayed Jal Jeevan Mission in Chikkaballapura

ಚಿಕ್ಕಬಳ್ಳಾಪುರ, ಜುಲೈ 22: ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ನಡೆದ ಬರ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳ ಕಾರ್ಯವೈಖರಿಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜಲ ಜೀವನ್ ಮಿಷನ್ ಯೋಜನೆ ಅನುಷ್ಠಾನದಲ್ಲಿ ವಿಳಂಬವಾಗಿರುವ ಬಗ್ಗೆ ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗವೂ ನಡೆದಿದೆ. ಯೋಜನೆಗೆ ಹಣದ ಕೊರತೆ ಇಲ್ಲ ಎಂದು ಸ್ಪಷ್ಟಪಡಿಸಿದ ಡಿಸಿಎಂ, ಕೇಂದ್ರ ಸರ್ಕಾರ ಕೂಡ ತನ್ನ ಪಾಲನ್ನು ನೀಡಿದೆ, ನಾವು ಕೂಡ ನಮ್ಮ ಪಾಲನ್ನು ನೀಡಿರುವ ಕಾರಣ ಹಣದ ಕೊರತೆ ಇಲ್ಲ. ಆದರೆ ಅಧಿಕಾರಿಗಳು ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ವಿಫಲರಾಗಿದ್ದಾರೆ ಎಂದು ಅವರು ಗರಂ ಆಗಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಎಫ್​ಸಿಆರ್​ಎ ತಿದ್ದುಪಡಿ ಮಸೂದೆ, ಸದ್ಯ ಭಾರತಕ್ಕೆ ಯಾಕೆ ಮುಖ್ಯ ಗೊತ್ತಾ? ಇಲ್ಲಿದೆ ವಿವಿಧ ಕಾರಣಗಳು – Kannada News | FCRA amendment bill and its significance and importance

ಡಾಲರ್​ನ ಸಾಂದರ್ಭಿಕ ಚಿತ್ರImage Credit source: Getty Images

ಭಾರತದ ಅಭಿವೃದ್ಧಿಗೆ ಅಡ್ಡಿಪಡಿಸಲು, ಭಯೋತ್ಪಾದನೆಗೆ ಸಂಬಂಧಿಸಿದ ಚಟುವಟಿಕೆಗಳಿಗೆ ಬೆಂಬಲ ನೀಡಲು ಮತ್ತು ದುರ್ಬಲ ಸಮುದಾಯಗಳನ್ನು ಗುರಿಯಾಗಿಸಿಕೊಂಡು ಸಂಘಟಿತ ಧಾರ್ಮಿಕ ಮತಾಂತರಗಳಿಗೆ ವಿದೇಶಿ ಹಣವನ್ನು ಬಳಸಲಾಗುತ್ತಿದೆ ಎಂಬುದಕ್ಕೆ ಹಲವು ತನಿಖೆಗಳಲ್ಲಿ ಸಾಕ್ಷ್ಯಗಳು ಲಭ್ಯವಾಗಿರುವ ಸಮಯದಲ್ಲಿ FCRA ತಿದ್ದುಪಡಿ ವಿಧೇಯಕ, 2026 ಬಂದಿದೆ. 2019 ಮತ್ತು 2022 ರ ನಡುವೆ, 13,500 ಕ್ಕೂ ಹೆಚ್ಚು ಸಂಸ್ಥೆಗಳು ₹55,741 ಕೋಟಿ ವಿದೇಶಿ ದೇಣಿಗೆಯನ್ನು ಪಡೆದಿವೆ. ವಿದೇಶೀ ಕೊಡುಗೆ ನಿಯಂತ್ರಕ ಕಾಯ್ದೆ (FCRA) ತಿದ್ದುಪಡಿ ವಿಧೇಯಕ, 2026 ಭಾರತಕ್ಕೆ ಬರುವ ವಿದೇಶಿ ಹಣವು ಪಾರದರ್ಶಕವಾಗಿರಲು, ಭಾರತೀಯ ಕಾನೂನಿಗೆ ಬದ್ಧವಾಗಿರಲು ಮತ್ತು ದೇಶದ ಹಿತಾಸಕ್ತಿಗಳಿಗೆ ಕುಂದು ತರುವ ರೀತಿಯಲ್ಲಿ ದುರುಪಯೋಗವಾಗದಂತೆ ನೋಡಿಕೊಳ್ಳುವ ಮೂಲಕ ಹೊಣೆಗಾರಿಕೆಯನ್ನು ಬಲಪಡಿಸುವ ಉದ್ದೇಶವನ್ನು ಹೊಂದಿದೆ.

ಆಸ್ತಿಗಳ ವಶ ಮತ್ತು ನಿರ್ದಿಷ್ಟ ಪ್ರಾಧಿಕಾರ ಸ್ಥಾಪನೆ

ಒಂದು ಸಂಸ್ಥೆಯ FCRA ನೋಂದಣಿಯು ರದ್ದಾದಾಗ, ಹಿಂಪಡೆದಾಗ ಅಥವಾ ಅವಧಿ ಮುಗಿದಾಗ (expire), ವಿದೇಶಿ ಅನುದಾನಿತ ಆಸ್ತಿಗಳನ್ನು ತಾತ್ಕಾಲಿಕವಾಗಿ ತನ್ನ ವಶಕ್ಕೆ ತೆಗೆದುಕೊಳ್ಳಲು ಈ ವಿಧೇಯಕವು ಅನುವು ಮಾಡಿಕೊಡುತ್ತದೆ. ಅಧಿಕಾರಿಗಳು ಕ್ರಮ ಕೈಗೊಳ್ಳುವ ಮುನ್ನವೇ ಕೆಲವು ಸಂಸ್ಥೆಗಳು ಆಸ್ತಿಗಳನ್ನು ವರ್ಗಾಯಿಸಲು ಅಥವಾ ವಿಲೇವಾರಿ ಮಾಡಲು ಅವಕಾಶ ಇತ್ತು. ವಿಧೇಯಕವು ಕಾನೂನಾಗಿ ಜಾರಿಗೆ ಬಂದರೆ ಈ ದೋಷ ನಿವಾರಣೆ ಆಗುತತ್ತದೆ.

‘ಲ್ಯಾಪ್ಸ್ ಆಂಡ್ ಕೀಪ್’ ಸಾಧ್ಯವಾಗುವುದಿಲ್ಲ

ಈ ವಿಧೇಯಕವು ಅವಧಿ ಮುಗಿದ FCRA ನೋಂದಣಿಗಳನ್ನು ರದ್ದಾದ ನೋಂದಣಿಗಳಂತೆಯೇ ಪರಿಗಣಿಸುವ ಮೂಲಕ ಬಹುಕಾಲದ “ಲ್ಯಾಪ್ಸ್ ಆಂಡ್ ಕೀಪ್” (ಅವಧಿ ಮುಗಿದರೂ ಆಸ್ತಿ ಇಟ್ಟುಕೊಳ್ಳುವ) ಲೋಪದೋಷವನ್ನು ನಿವಾರಿಸುತ್ತದೆ. ಇದರಿಂದ ಸಂಸ್ಥೆಗಳು ವಿದೇಶಿ ಅನುದಾನಿತ ಆಸ್ತಿಗಳನ್ನು ಅನಿರ್ದಿಷ್ಟಾವಧಿಗೆ ಇಟ್ಟುಕೊಳ್ಳುವುದನ್ನು ಅಥವಾ ಬಳಸುವುದನ್ನು ತಡೆಯುತ್ತದೆ. ಅಲ್ಲದೆ, ವಿದೇಶಿ ಹಣದ ಬಳಕೆಗೆ ಸಂಸ್ಥೆಯ ಪ್ರಮುಖ ಪದಾಧಿಕಾರಿಗಳನ್ನು ವೈಯಕ್ತಿಕವಾಗಿ ಹೊಣೆಗಾರರನ್ನಾಗಿ ಮಾಡುತ್ತದೆ.

ಇದನ್ನೂ ಓದಿ: ಭಾರತಕ್ಕೆ ಸರಾಗವಾಗಿ ಬರುತ್ತಿರುವ ವಿದೇಶೀ ನೇರ ಹೂಡಿಕೆ; ಕರ್ನಾಟಕಕ್ಕೆ ಭರ್ಜರಿ ಹೂಡಿಕೆ ಹೆಚ್ಚಳ; ಎರಡನೇ ಸ್ಥಾನಕ್ಕೆ ಜಿಗಿತ

ಮತಾಂತರದ ನಿಷೇಧ ಮತ್ತು ಧಾರ್ಮಿಕ ಸ್ವಾತಂತ್ರ್ಯದ ರಕ್ಷಣೆ

ಧಾರ್ಮಿಕ ಶಿಕ್ಷಣ, ಪ್ರವಚನಗಳು, ಧಾರ್ಮಿಕ ಸಭೆಗಳು ಮತ್ತು ಸ್ಥಳೀಯ ನಂಬಿಕೆಗಳ ಸಂರಕ್ಷಣೆಯಂತಹ ಧಾರ್ಮಿಕ ಚಟುವಟಿಕೆಗಳಿಗೆ ಧನಸಹಾಯವನ್ನು ಮುಂದುವರಿಸಲು ಅನುಮತಿಸುತ್ತದೆ. ಅದೇ ಸಮಯದಲ್ಲಿ, ಧಾರ್ಮಿಕ ಮತಾಂತರಗಳಿಗೆ ವಿದೇಶಿ ಹಣವನ್ನು ಬಳಸುವುದನ್ನು ಈ ವಿಧೇಯಕವು ನಿಷೇಧಿಸುತ್ತದೆ. ಈ ಕಾನೂನಿನಡಿಯಲ್ಲಿ ಸ್ವಾಧೀನಪಡಿಸಿಕೊಂಡ ಪ್ರಾರ್ಥನಾ ಮಂದಿರಗಳ ಧಾರ್ಮಿಕ ಸ್ವರೂಪವನ್ನು ರಕ್ಷಿಸಬೇಕು ಎಂದೂ ಇದು ಕಡ್ಡಾಯಗೊಳಿಸುತ್ತದೆ.

ಎನ್​ಜಿಒ ಮುಖವಾಡದಲ್ಲಿ ವಿವಿಧ ಜಾಲಗಳ ಮೇಲೆ ಕಣ್ಣು

ಮಿಷನರಿಗಳು, ಇಸ್ಲಾಂ ಮೂಲಭೂತವಾದಿಗಳು ಮೊದಲಾದ ಬೇರೆ ಬೇರೆ ವೈಚಾರಿಕ ಜಾಲಗಳು ವಿದೇಶಿ ಅನುದಾನಿತ ಎನ್‌ಜಿಒ (NGO) ವ್ಯವಸ್ಥೆಗಳ ಮೂಲಕ ಕಾರ್ಯನಿರ್ವಹಿಸುತ್ತಿರುವುದು ಕಂಡು ಬಂದಿದೆ. ಅವರ ಉದ್ದೇಶಗಳು ಭಿನ್ನವಾಗಿದ್ದರೂ, ಅವರ ಚಟುವಟಿಕೆಗಳು ಜಂಟಿಯಾಗಿ ಅಭಿವೃದ್ಧಿಗೆ ಅಡ್ಡಿಪಡಿಸಲು, ಸಾಮಾಜಿಕ ಸಾಮರಸ್ಯವನ್ನು ಕುಗ್ಗಿಸಲು ಮತ್ತು ಸಾಂಸ್ಥಿಕ ಸ್ಥಿರತೆಯನ್ನು ಹಾಳುಮಾಡಲು ಕಾರಣವಾಗುತ್ತವೆ ಎಂದು ಗುಪ್ತಚರ ವರದಿಗಳು ಹೇಳುತ್ತವೆ. ಇಂಥ ಎನ್​ಜಿಒಗಳ ಹಣಕಾಸು ಹರಿವಿನ ಮೇಲೆ ಕಣ್ಣಿಡಲು ಎಫ್​ಸಿಆರ್​ಎ ನೆರವಾಗುತ್ತದೆ.

ಅಭಿವೃದ್ಧಿ ಯೋಜನೆಗಳಿಗೆ ಅಡಚಣೆ ಮತ್ತು ಡೆಮೋಗ್ರಫಿ ಬದಲಾವಣೆ

ಕೆಲವು ವಿದೇಶಿ ಅನುದಾನಿತ ಸಂಸ್ಥೆಗಳು ಪ್ರಮುಖ ಮೂಲಸೌಕರ್ಯ ಮತ್ತು ಇಂಧನ ಯೋಜನೆಗಳನ್ನು ವಿರೋಧಿಸಲು, ಮೂಲಭೂತವಾದ ಮತ್ತು ಭಯೋತ್ಪಾದನಾ ನಿಧಿಗೆ ಬೆಂಬಲ ನೀಡಲು ಹಾಗೂ ದೇಶದ ಜನಸಂಖ್ಯಾಶಾಸ್ತ್ರ (demography) ಮತ್ತು ಅಭಿವೃದ್ಧಿಯ ಮೇಲೆ ಪರಿಣಾಮ ಬೀರುವಂತೆ ದುರ್ಬಲ ಸಮುದಾಯಗಳ ಮತಾಂತರಕ್ಕೆ ಪರಿಸರ ವಾದವನ್ನು (environmental activism) ಬಳಸಿಕೊಂಡಿವೆ ಎಂದು ಗುಪ್ತಚರ ವರದಿಗಳು ಆರೋಪಿಸಿವೆ. 2026 ರ FCRA ತಿದ್ದುಪಡಿ ವಿಧೇಯಕವು ಭವಿಷ್ಯದಲ್ಲಿ ಇಂತಹ ಚಟುವಟಿಕೆಗಳಿಗೆ ವಿದೇಶಿ ಹಣ ದುರುಪಯೋಗವಾಗುವುದನ್ನು ತಡೆಯುತ್ತದೆ.

ಇದನ್ನೂ ಓದಿ: ಈಗ 0, ನಂತರ 100, ಬಳಿಕ 200; ಜೆನೆರಿಕ್ ಔಷಧಗಳಿಗೆ ಟ್ರಂಪ್ ಟ್ಯಾರಿಫ್ ಪ್ಲಾನ್ ಪ್ರಕಟ; ಭಾರತದ ಪ್ರಬಲ ಫಾರ್ಮಾ ಉದ್ಯಮಕ್ಕೆ ಹೊಡೆತ?

ಗ್ರೀನ್‌ಪೀಸ್ ಇಂಡಿಯಾ ಪ್ರಕರಣ

ಹಣ ವರ್ಗಾವಣೆ, ನಿಯಮಾವಳಿಗಳ ಉಲ್ಲಂಘನೆ ಮತ್ತು ಭಾರತದ ಆರ್ಥಿಕ ಹಿತಾಸಕ್ತಿಗಳಿಗೆ ಹಾನಿಕಾರಕವೆಂದು ಪರಿಗಣಿಸಲಾದ ಪ್ರಚಾರಗಳು ಇತ್ಯಾದಿ ಕಾರಣದಿಂದ ಗ್ರೀನ್‌ಪೀಸ್ ಇಂಡಿಯಾದ (Greenpeace India) FCRA ನೋಂದಣಿಯನ್ನು ರದ್ದುಗೊಳಿಸಲಾಯಿತು. ವಿದೇಶಿ ಧನಸಹಾಯವನ್ನು ಭಾರತೀಯ ಕಾನೂನಿಗೆ ಅನುಗುಣವಾಗಿ ಬಳಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ಕಠಿಣ ಮೇಲ್ವಿಚಾರಣೆಯ ಅಗತ್ಯವನ್ನು ಈ ಪ್ರಕರಣವು ಎತ್ತಿ ತೋರಿಸುತ್ತದೆ ಎಂದು ವಿಧೇಯಕದ ಬೆಂಬಲಿಗರು ವಾದಿಸುತ್ತಾರೆ.

ಅಮ್ನೆಸ್ಟಿ ಇಂಟರ್ನ್ಯಾಷನಲ್ ಇಂಡಿಯಾ ಪ್ರಕರಣ

ಅಮ್ನೆಸ್ಟಿ ಇಂಟರ್ನ್ಯಾಷನಲ್ ಇಂಡಿಯಾ, FCRA ನಿರ್ಬಂಧಗಳನ್ನು ಮೀರಲು ‘ಅಮ್ನೆಸ್ಟಿ ಇಂಟರ್ನ್ಯಾಷನಲ್ ಯುಕೆ’ (Amnesty International UK) ಮೂಲಕ ನೇರ ವಿದೇಶಿ ಹೂಡಿಕೆ (FDI) ಮತ್ತು “ಸಲಹಾ ಶುಲ್ಕ” (consultancy fees) ರೂಪದಲ್ಲಿ ₹36 ಕೋಟಿ ಹಣವನ್ನು ತರಲು ಕಾರ್ಪೊರೇಟ್ ರಚನೆಯನ್ನು ಸೃಷ್ಟಿಸಿತು. FCRA ಉಲ್ಲಂಘನೆಗಾಗಿ ಸಿಬಿಐ (CBI) ಹಲವು ಘಟಕಗಳ ವಿರುದ್ಧ ಪ್ರಕರಣ ದಾಖಲಿಸಿದೆ. ಈ ಹಿಂದೆ 2016 ರ JNU ಪ್ರತಿಭಟನೆಯ ಸಂದರ್ಭದಲ್ಲೂ ಇದರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಾಗಿತ್ತು.

ಲಾಯರ್ಸ್ ಕಲೆಕ್ಟಿವ್ ಪ್ರಕರಣ

ಅಂತೆಯೇ, ‘ಲಾಯರ್ಸ್ ಕಲೆಕ್ಟಿವ್’ (Lawyers Collective) ಪ್ರಕರಣವನ್ನು ವಿದೇಶಿ ಹಣದ ದುರುಪಯೋಗದ ಉದಾಹರಣೆಯಾಗಿ ವಿಧೇಯಕದ ಬೆಂಬಲಿಗರು ಉಲ್ಲೇಖಿಸುತ್ತಾರೆ. ಸಂಸ್ಥೆಯು FCRA ನಿಯಮಗಳನ್ನು ಉಲ್ಲಂಘಿಸಿದೆ ಎಂದು ಆರೋಪಿಸಿ ಸಿಬಿಐ ಪ್ರಕರಣ ದಾಖಲಿಸಿದ್ದು, ವಿದೇಶಿ ದೇಣಿಗೆ ಪಡೆಯುವ ಸಂಸ್ಥೆಗಳಿಗೆ ಕಠಿಣ ನಿಯಮಾವಳಿಗಳು ಮತ್ತು ಹೊಣೆಗಾರಿಕೆಯ ಸೌಲಭ್ಯಗಳು ಅಗತ್ಯವಿದೆ ಎಂದು ವಾದಿಸಲಾಗಿದೆ.

ಪಿಎಫ್‌ಐ ಮತ್ತು ಎಸ್‌ಡಿಪಿಐ ಜಾಲ

2022 ರಲ್ಲಿ ನಿಷೇಧಿಸಲ್ಪಟ್ಟ PFI (ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ), 13,000 ಕ್ಕೂ ಹೆಚ್ಚು ವಿದೇಶಿ ಕಾರ್ಯಕರ್ತರನ್ನು ಹೊಂದಿತ್ತು ಮತ್ತು ₹620 ಮಿಲಿಯನ್‌ಗಿಂತಲೂ ಹೆಚ್ಚು ಹಣವನ್ನು ಅಕ್ರಮವಾಗಿ ವರ್ಗಾಯಿಸಿತ್ತು. ಮಸೀದಿಗಳು, ಮದ್ರಸಾ ಮತ್ತು ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಸಂಗ್ರಹಿಸಿದ ಹಣವನ್ನು ಮೂಲಭೂತವಾದ, ಶಸ್ತ್ರಾಸ್ತ್ರ ತರಬೇತಿ ಮತ್ತು ಭಯೋತ್ಪಾದಕ ನಿಧಿಗೆ ನೀಡಲಾಗಿತ್ತು. ನಿಷೇಧದ ನಂತರ, ಅದೇ ಜಾಲವು SDPI ಅಡಿಯಲ್ಲಿ ಮರುಸಂಘಟಿತಗೊಂಡು ವಿದೇಶಿ ಧನಸಹಾಯವನ್ನು ಪಡೆಯುವುದನ್ನು ಮುಂದುವರಿಸಿದೆ.

ರಾಜೀವ್ ಗಾಂಧಿ ಫೌಂಡೇಶನ್ ಪ್ರಕರಣ

ಚೀನಾ ಸರ್ಕಾರದೊಂದಿಗೆ ಸಂಬಂಧ ಹೊಂದಿವೆ ಎನ್ನಲಾದ ಸಂಸ್ಥೆಗಳಿಂದ ಧನಸಹಾಯ ಪಡೆದದ್ದು ಸೇರಿದಂತೆ ನಿಯಮಾವಳಿ ಉಲ್ಲಂಘನೆ ಮತ್ತು ರಾಷ್ಟ್ರೀಯ ಭದ್ರತಾ ಕಳವಳಗಳ ಆಧಾರದ ಮೇಲೆ ರಾಜೀವ್ ಗಾಂಧಿ ಫೌಂಡೇಶನ್‌ನ (Rajiv Gandhi Foundation) FCRA ನೋಂದಣಿಯನ್ನು ಅಮಾನತುಗೊಳಿಸಲಾಗಿದೆ. ಈ ಪ್ರಕರಣ ಹಾಗೂ ಇತರ ಹಲವು ಎನ್‌ಜಿಒಗಳ ವಿರುದ್ಧದ ಕ್ರಮವನ್ನು ವಿದೇಶಿ ಧನಸಹಾಯದ ಮೇಲಿನ ಬಲವಾದ ಮೇಲ್ವಿಚಾರಣೆಗೆ ಸಾಕ್ಷಿಯಾಗಿ ಬೆಂಬಲಿಗರು ಉಲ್ಲೇಖಿಸುತ್ತಾರೆ.

ರಾಷ್ಟ್ರೀಯ ಹಿತಾಸಕ್ತಿಗಳ ರಕ್ಷಣೆ

SDPI, ಲೆಫ್ಟ್ ಲಿಬರಲ್ ಇಕೋಸಿಸ್ಟಂನ ಎನ್​ಜಿಒಗಳು, ಕ್ರೈಸ್ತ ಮಿಷನರಿಗಳಿಗೆ ಸಂಬಂಧಿಸಿದ ಸಂಸ್ಥೆಗಳಂತಹ ವಿದೇಶಿ ಧನಸಹಾಯದ ವಿಚಾರದಲ್ಲಿ ಪರಿಶೀಲನೆ ಎದುರಿಸುತ್ತಿರುವ ಸಂಸ್ಥೆಗಳು ಪ್ರಸ್ತಾವಿತ ತಿದ್ದುಪಡಿಗಳನ್ನು ವಿರೋಧಿಸಿವೆ. ಈ ಶಾಸನವು ವಿದೇಶಿ ದೇಣಿಗೆಗಳ ಪಾರದರ್ಶಕತೆ, ಹೊಣೆಗಾರಿಕೆ ಮತ್ತು ಮೇಲ್ವಿಚಾರಣೆಯನ್ನು ಬಲಪಡಿಸುವ ಉದ್ದೇಶವನ್ನು ಹೊಂದಿದೆ, ರಾಷ್ಟ್ರೀಯ ಹಿತಾಸಕ್ತಿಗಳನ್ನು ರಕ್ಷಿಸಲು ಇದರ ಅಂಗೀಕಾರ ಅಗತ್ಯವಾಗಿದೆ ಎಂದು ಬೆಂಬಲಿಗರು ವಾದಿಸುತ್ತಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

13 ಭಯೋತ್ಪಾದಕರಲ್ಲಿ ಇಬ್ಬರು ವಡೋದರಾ ಹೋಟೆಲ್‌ನಲ್ಲಿ ತಂಗಿದ್ದರು; ಎಟಿಎಸ್ ತನಿಖೆಯಲ್ಲಿ ಬಯಲು – Kannada News | 2 terrorists stayed in a hotel in Vadodara ATS Probe Reveals

ವಡೋದರಾ, ಜುಲೈ 22: ಗುಜರಾತ್‌ನಲ್ಲಿ ಉಗ್ರರ ಜಾಲವನ್ನು ಮಟ್ಟಹಾಕಲು ಗುಜರಾತ್ ಎಟಿಎಸ್ ನಡೆಸುತ್ತಿರುವ ಬೃಹತ್ ಕಾರ್ಯಾಚರಣೆಯಲ್ಲಿ ದಿನಕ್ಕೊಂದು ಆಘಾತಕಾರಿ ಸತ್ಯಗಳು ಹೊರಬೀಳುತ್ತಿವೆ. ಪಾಕಿಸ್ತಾನ (Pakistan) ಮೂಲದ ಜೈಶ್-ಎ-ಮೊಹಮ್ಮದ್ (JeM) ಉಗ್ರ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದ ಪ್ರಕರಣದಲ್ಲಿ ಎಟಿಎಸ್ ವಶಕ್ಕೆ ಪಡೆದಿರುವ ಒಟ್ಟು 13 ಉಗ್ರರಲ್ಲಿ ಇಬ್ಬರು ಉಗ್ರರು ವಡೋದರಾದ ಪ್ರಸಿದ್ಧ ಹೋಟೆಲ್‌ನಲ್ಲಿ ತಂಗಿದ್ದರು ಎಂಬ ವಿಷಯ ತನಿಖೆಯಿಂದ ಬಹಿರಂಗವಾಗಿದೆ.

ಎಟಿಎಸ್​ನಿಂದ ಬಂಧನಕ್ಕೊಳಗಾಗಿರುವ ಉಗ್ರರಾದ ಅಹಮದ್ ಗಾಜಿವಾಲಾ ಮತ್ತು ಇಬ್ರಾಹಿಂ ಘಘಾ ಎಂಬಿಬ್ಬರು ವಡೋದರಾದ ಸಯಾಜಿಗಂಜ್ ಪ್ರದೇಶದಲ್ಲಿರುವ ಅಂಬಾಸಿಡರ್ ಹೋಟೆಲ್​ನಲ್ಲಿ ತಂಗಿದ್ದರು ಎಂಬುದು ಖಚಿತಪಟ್ಟಿದೆ. ಈ ಇಬ್ಬರೂ ಉಗ್ರರು ಈ ಹೋಟೆಲ್‌ನಲ್ಲಿ ಉಳಿದುಕೊಂಡು, ಕಾಶ್ಮೀರದಿಂದ ಮತ್ತೊಬ್ಬ ಶಂಕಿತ ಉಗ್ರನನ್ನು ವಡೋದರಾಗೆ ಕರೆಸಿಕೊಂಡು ರಹಸ್ಯ ಸಭೆ ನಡೆಸಿದ್ದರು ಎನ್ನಲಾಗಿದೆ.

ಇದನ್ನೂ ಓದಿ: ಪಾಕಿಸ್ತಾನದಲ್ಲಿ ಕುಳಿತು ಪಹಲ್ಗಾಮ್​ನಲ್ಲಿ ಲಷ್ಕರ್ ಉಗ್ರರು ಭಯೋತ್ಪಾದಕ ದಾಳಿ ನಡೆಸಿದ್ಹೇಗೆ? ಎನ್​ಐಎ ಚಾರ್ಜ್​ಶೀಟ್​​ನಲ್ಲೇನಿದೆ?

ಈ ಆಘಾತಕಾರಿ ಸುದ್ದಿ ಹೊರಬಿದ್ದ ತಕ್ಷಣವೇ ಗುಜರಾತ್ ಎಟಿಎಸ್‌ನ ವಿಶೇಷ ತಂಡಗಳು ವಡೋದರಾದ ಸಯಾಜಿಗಂಜ್‌ಗೆ ಧಾವಿಸಿ ಹೋಟೆಲ್ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ತೀವ್ರ ಶೋಧ ಕಾರ್ಯಾಚರಣೆ ಆರಂಭಿಸಿವೆ. ಹೋಟೆಲ್‌ನ ಮಾಲೀಕರು ತಮ್ಮಲ್ಲಿ ತಂಗಿದ್ದವರು ಉಗ್ರರು ಎಂಬ ವಿಷಯ ತಮಗೆ ತಿಳಿದಿರಲಿಲ್ಲ ಎಂದು ಹೇಳಿದ್ದಾರೆ. ಆದರೂ ಈ ವಿಷಯದಲ್ಲಿ ಹೋಟೆಲ್ ಮಾಲೀಕರ ಪಾತ್ರ ಅಥವಾ ನಿರ್ಲಕ್ಷ್ಯದ ಕುರಿತೂ ಎಟಿಎಸ್ ಅನುಮಾನ ವ್ಯಕ್ತಪಡಿಸಿದ್ದು, ವಿಚಾರಣೆ ನಡೆಸುತ್ತಿದೆ.

ಇದನ್ನೂ ಓದಿ: ಪಹಲ್ಗಾಮ್ ದಾಳಿ ತನಿಖೆಯಲ್ಲಿ ಮಹತ್ವದ ಸುಳಿವು: ಉಗ್ರರು ಬಳಸಿದ್ದ ಫೋನ್​ಗೆ ಪಾಕಿಸ್ತಾನ ಬ್ಯಾಂಕ್​ ಲಿಂಕ್

ಕಾಶ್ಮೀರಿ ನಂಟು:

ವಡೋದರಾದಲ್ಲಿ ಇಬ್ಬರೂ ಉಗ್ರರು ಭೇಟಿಯಾದ ಕಾಶ್ಮೀರಿ ವ್ಯಕ್ತಿ ಯಾರು? ಆತನಿಗೆ ಈ ಉಗ್ರ ಮಾಡ್ಯೂಲ್ ಜೊತೆಗಿರುವ ಸಂಬಂಧವೇನು ಎಂಬ ದಿಕ್ಕಿನಲ್ಲಿ ಎಟಿಎಸ್ ತನಿಖೆ ನಡೆಸುತ್ತಿದೆ. ಗುಜರಾತ್‌ನಲ್ಲಿ ದೊಡ್ಡ ಮಟ್ಟದ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದ ಜೈಶ್-ಎ-ಮೊಹಮ್ಮದ್ ಸಂಘಟನೆಯ ಜಾಲವನ್ನು ಭೇದಿಸಿರುವ ಎಟಿಎಸ್, ಜುಲೈ ಆರಂಭದಲ್ಲಿ 8 ಉಗ್ರರನ್ನು ಮತ್ತು ಇತ್ತೀಚೆಗೆ ಮತ್ತಷ್ಟು ವಿಚಾರಣೆಯ ನಂತರ 5 ಉಗ್ರರನ್ನು ಸೇರಿದಂತೆ ಒಟ್ಟು 13 ಶಂಕಿತ ಉಗ್ರರನ್ನು ಬಂಧಿಸಿದೆ.

ಇವರು ತರಬೇತಿ ಪಡೆದು ಕಚ್ಚಾ ಟೈಮ್ ಬಾಂಬ್ ಪ್ರಯೋಗಗಳನ್ನು ನಡೆಸಿ, ರಾಜ್ಯದಲ್ಲಿ ನೆಟ್‌ವರ್ಕ್ ವಿಸ್ತರಿಸಲು ಯತ್ನಿಸುತ್ತಿದ್ದರು ಎಂದು ಎಟಿಎಸ್ ತಿಳಿಸಿದೆ. ವಡೋದರಾದಲ್ಲಿ ನಡೆದಿರುವ ಈ ಹೊಸ ಸೀಕ್ರೆಟ್ ಮೀಟಿಂಗ್ ಸುಳಿವು ಈ ಪ್ರಕರಣದ ಗಂಭೀರತೆಯನ್ನು ಮತ್ತಷ್ಟು ಹೆಚ್ಚಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

PNB Recruitment 2026: ಪಂಜಾಬ್ ನ್ಯಾಷನಲ್ ಬ್ಯಾಂಕ್​ನಲ್ಲಿ ನೇಮಕಾತಿ; 545 ಲೋಕಲ್ ಬ್ಯಾಂಕ್ ಆಫೀಸರ್ ಹುದ್ದೆಗೆ ಅರ್ಜಿ ಆಹ್ವಾನ – Kannada News | PNB Recruitment 2026: 545 Local Bank Officer Jobs, Karnataka 78 Vacancies

ಉದ್ಯೋಗಾಕಾಂಕ್ಷಿಗಳಿಗೆ ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) ಸಿಹಿ ಸುದ್ದಿ ನೀಡಿದೆ. ದೇಶಾದ್ಯಂತ ವಿವಿಧ ಶಾಖೆಗಳಲ್ಲಿ ಖಾಲಿ ಇರುವ ಲೋಕಲ್ ಬ್ಯಾಂಕ್ ಆಫೀಸರ್ (LBO) ಹುದ್ದೆಗಳ ಭರ್ತಿಗೆ ಬೃಹತ್ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದೆ. ಈ ನೇಮಕಾತಿ ಅಭಿಯಾನದ ಮೂಲಕ ಒಟ್ಟು 545 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಇದರಲ್ಲಿ ಕರ್ನಾಟಕ ರಾಜ್ಯಕ್ಕೆ 78 ಹುದ್ದೆಗಳನ್ನು ಕಾಯ್ದಿರಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ತಮ್ಮ ಅರ್ಜಿಗಳನ್ನು ಸಲ್ಲಿಸಬಹುದು.

ರಾಜ್ಯವಾರು ಖಾಲಿ ಹುದ್ದೆಗಳ ಹಂಚಿಕೆ:

ಈ ಅಧಿಸೂಚನೆಯಡಿ ವಿವಿಧ ರಾಜ್ಯಗಳಲ್ಲಿ ಖಾಲಿ ಇರುವ ಹುದ್ದೆಗಳ ವಿವರ ಹೀಗಿದೆ: ಕರ್ನಾಟಕ (78), ಅಸ್ಸಾಂ (85), ಪಶ್ಚಿಮ ಬಂಗಾಳ (80), ಗುಜರಾತ್ (77), ಮಹಾರಾಷ್ಟ್ರ (67), ತಮಿಳುನಾಡು (51), ತೆಲಂಗಾಣ (41), ತ್ರಿಪುರಾ (18), ಜಮ್ಮು ಮತ್ತು ಕಾಶ್ಮೀರ (09), ಮೇಘಾಲಯ (08), ಮಣಿಪುರ (06), ಮಿಜೋರಾಂ (05), ನಾಗಾಲ್ಯಾಂಡ್ (05), ಸಿಕ್ಕಿಂ (05), ಆಂಧ್ರಪ್ರದೇಶ (04), ಅರುಣಾಚಲ ಪ್ರದೇಶ (04) ಹಾಗೂ ಲಡಾಖ್ (02).

ಶೈಕ್ಷಣಿಕ ಅರ್ಹತೆ ಮತ್ತು ಭಾಷಾ ಪ್ರಾವೀಣ್ಯತೆ:

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಭಾಗದಲ್ಲಿ ಪದವಿ (Graduation) ಪೂರ್ಣಗೊಳಿಸಿರಬೇಕು. ಇದರೊಂದಿಗೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕನಿಷ್ಠ ಒಂದು ವರ್ಷದ ಕಾರ್ಯಾನುಭವ ಹೊಂದಿರುವುದು ಕಡ್ಡಾಯವಾಗಿದೆ. ಮುಖ್ಯವಾಗಿ, ಅಭ್ಯರ್ಥಿಗಳು ತಾವು ಅರ್ಜಿ ಸಲ್ಲಿಸುವ ರಾಜ್ಯದ ಸ್ಥಳೀಯ ಭಾಷೆಯನ್ನು ಓದಲು, ಬರೆಯಲು ಮತ್ತು ಮಾತನಾಡಲು ಉತ್ತಮ ಪ್ರಾವೀಣ್ಯತೆಯನ್ನು ಹೊಂದಿರಬೇಕು.

ವಯೋಮಿತಿ ಮತ್ತು ಸಡಿಲಿಕೆ ನಿಯಮಗಳು:

ಅರ್ಜಿದಾರರ ವಯಸ್ಸು ಕನಿಷ್ಠ 20 ವರ್ಷದಿಂದ ಗರಿಷ್ಠ 30 ವರ್ಷಗಳ ಒಳಗಿರಬೇಕು. ಸರ್ಕಾರದ ನಿಯಮಾವಳಿಗಳ ಪ್ರಕಾರ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯವಿದ್ದು, ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡದ (ST) ಅಭ್ಯರ್ಥಿಗಳಿಗೆ 5 ವರ್ಷಗಳು ಹಾಗೂ ಇತರೆ ಹಿಂದುಳಿದ ವರ್ಗಗಳ (OBC) ಅಭ್ಯರ್ಥಿಗಳಿಗೆ 3 ವರ್ಷಗಳ ವಯೋಮಿತಿ ಸಡಿಲಿಕೆ ಇರುತ್ತದೆ.

ಇದನ್ನೂ ಓದಿ: ಇಸ್ರೋದಲ್ಲಿ 460 ಅಪ್ರೆಂಟಿಸ್ ಹುದ್ದೆಗಳ ಭರ್ತಿ; ಲಿಖಿತ ಪರೀಕ್ಷೆಯಿಲ್ಲದೆ ನೇರ ಆಯ್ಕೆ!

ಅರ್ಜಿ ಸಲ್ಲಿಕೆ ಮತ್ತು ಶುಲ್ಕದ ವಿವರ:

ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಆಗಸ್ಟ್ 9 ರವರೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಸಾಮಾನ್ಯ ಮತ್ತು ಇತರೆ ವರ್ಗದ ಅಭ್ಯರ್ಥಿಗಳಿಗೆ 1,180ರೂ. ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ದಿವ್ಯಾಂಗ ಅಭ್ಯರ್ಥಿಗಳಿಗೆ 59 ರೂ. ಶುಲ್ಕವಿರುತ್ತದೆ.

ಆಯ್ಕೆ ಪ್ರಕ್ರಿಯೆ ಮತ್ತು ವೇತನ ಶ್ರೇಣಿ:

ಅಭ್ಯರ್ಥಿಗಳ ಅಂತಿಮ ಆಯ್ಕೆಯನ್ನು ಆನ್‌ಲೈನ್ ಲಿಖಿತ ಪರೀಕ್ಷೆ, ಸ್ಥಳೀಯ ಭಾಷಾ ಪ್ರಾವೀಣ್ಯತಾ ಪರೀಕ್ಷೆ, ದಾಖಲೆಗಳ ಪರಿಶೀಲನೆ ಮತ್ತು ವೈಯಕ್ತಿಕ ಸಂದರ್ಶನದ ಆಧಾರದ ಮೇಲೆ ಮಾಡಲಾಗುತ್ತದೆ. ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 48,480 ರಿಂದ 85,920 ರೂ. ರವರೆಗೆ ಆಕರ್ಷಕ ವೇತನ ದೊರೆಯಲಿದೆ.

ಲಿಖಿತ ಪರೀಕ್ಷಾ ವಿಧಾನ (Exam Pattern):

ಆನ್‌ಲೈನ್ ಲಿಖಿತ ಪರೀಕ್ಷೆಯನ್ನು ಆಗಸ್ಟ್ ಅಥವಾ ಸೆಪ್ಟೆಂಬರ್​​ನಲ್ಲಿ ನಡೆಸಲು ಯೋಜಿಸಲಾಗಿದೆ. ಪರೀಕ್ಷೆಯು ಒಟ್ಟು 150 ಅಂಕಗಳಿಗೆ 150 ಬಹು ಆಯ್ಕೆ ಪ್ರಶ್ನೆಗಳನ್ನು (MCQs) ಒಳಗೊಂಡಿರುತ್ತದೆ. ಇದರಲ್ಲಿ ಜನರಲ್, ಫೈನಾನ್ಶಿಯಲ್, ಬ್ಯಾಂಕಿಂಗ್ ಅವೇರ್‌ನೆಸ್ ವಿಷಯದಿಂದ 50 ಅಂಕಗಳಿಗೆ 50 ಪ್ರಶ್ನೆಗಳು ಹಾಗೂ ರೀಸನಿಂಗ್ ಮತ್ತು ಕಂಪ್ಯೂಟರ್ ಆಪ್ಟಿಟ್ಯೂಡ್, ಡೇಟಾ ಅನಾಲಿಸಿಸ್ ಮತ್ತು ಇಂಟರ್‌ಪ್ರಿಟೇಷನ್, ಕ್ವಾಂಟಿಟೇಟಿವ್ ಆಪ್ಟಿಟ್ಯೂಡ್ ಮತ್ತು ಇಂಗ್ಲಿಷ್ ಭಾಷೆ – ಈ ಪ್ರತಿಯೊಂದು ವಿಷಯಗಳಿಂದ ತಲಾ 25 ಅಂಕಗಳಿಗೆ 25 ಪ್ರಶ್ನೆಗಳನ್ನು ಕೇಳಲಾಗುತ್ತದೆ. ಪರೀಕ್ಷೆಯಲ್ಲಿ ಋಣಾತ್ಮಕ ಮೌಲ್ಯಮಾಪನ (Negative Marking) ಇದ್ದು, ಪ್ರತಿ ತಪ್ಪು ಉತ್ತರಕ್ಕೆ 0.25 ಅಂಕಗಳನ್ನು ಕಡಿತಗೊಳಿಸಲಾಗುತ್ತದೆ.

ಉದ್ಯೋಗಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On – 2:52 pm, Wed, 22 July 26

Source link

ಐಎನ್ಎಸ್ ಮಾಲ್ವನ್: ಭಾರತೀಯ ನೌಕಾಪಡೆಗೆ ಸೇರ್ಪಡೆಗೊಂಡ ಸ್ವದೇಶಿ ನಿರ್ಮಿತ ಯುದ್ಧ ನೌಕೆ – Kannada News | INS Malvan: Indias New Indigenous Warship Joins Naval Fleet at Karwar Base

ಕಾರವಾರ, ಜುಲೈ 22: ಭಾರತೀಯ ನೌಕಾಪಡೆಗೆ ಮತ್ತೊಂದು ಮಹತ್ವದ ಹೆಜ್ಜೆಯಾಗಿ ಸ್ವದೇಶಿ ನಿರ್ಮಿತ ಯುದ್ಧ ನೌಕೆ ಐಎನ್ಎಸ್ ಮಾಲ್ವನ್ ಕಾರವಾರದ ಕದಂಬ ನೌಕಾನೆಲೆಯಲ್ಲಿ ಸೇರ್ಪಡೆಯಾಗಿದೆ. ಕೇರಳದ ಕೊಚ್ಚಿ ಶಿಪ್‌ಯಾರ್ಡ್‌ನಲ್ಲಿ ನಿರ್ಮಿಸಲಾದ ಐಎನ್ಎಸ್ ಮಾಲ್ವನ್ ಶೇಕಡಾ 80ರಷ್ಟು ಸ್ವದೇಶಿ ನಿರ್ಮಿತವಾಗಿದೆ. 78 ಮೀಟರ್ ಉದ್ದ, 11.2 ಮೀಟರ್ ಅಗಲ ಮತ್ತು 2.7 ಮೀಟರ್ ಆಳ ಹೊಂದಿರುವ ಈ ಯುದ್ಧ ನೌಕೆಯು 7 ಅಧಿಕಾರಿಗಳು ಮತ್ತು 57 ನಾವಿಕರಿಗೆ ಸ್ಥಳಾವಕಾಶ ಕಲ್ಪಿಸುತ್ತದೆ. ಇದರ ಪ್ರಮುಖ ವೈಶಿಷ್ಟ್ಯವೆಂದರೆ ಜಲಾಂತರ್ಗಾಮಿ ವಿರೋಧಿ ಕಾರ್ಯಾಚರಣೆ (ASW) ಸಾಮರ್ಥ್ಯ. ಸಮುದ್ರದ ಆಳದಲ್ಲಿನ ಶತ್ರು ಜಲಾಂತರ್ಗಾಮಿಗಳನ್ನು ಪತ್ತೆ ಹಚ್ಚಿ ನಾಶಪಡಿಸಲು ಅಗತ್ಯವಿರುವ ಸುಧಾರಿತ ಶಸ್ತ್ರಾಸ್ತ್ರಗಳು ಮತ್ತು ಆಧುನಿಕ ತಂತ್ರಜ್ಞಾನವನ್ನು ಇದು ಹೊಂದಿದೆ. ಅಭಯ್ ಸೋನಾರ್ ವ್ಯವಸ್ಥೆಯು ಧ್ವನಿ ತರಂಗಗಳನ್ನು ಬಳಸಿ ಜಲಾಂತರ್ಗಾಮಿಗಳ ಇರುವಿಕೆಯನ್ನು ಗುರುತಿಸುತ್ತದೆ. ಸಮುದ್ರದ ಮೇಲ್ಮೈಯಲ್ಲಿ ಯುದ್ಧ ಮತ್ತು ಆತ್ಮರಕ್ಷಣೆಗಾಗಿ 30 ಮಿಲಿಮೀಟರ್ ನೇವೇಲ್ ಸರ್ಫೇಸ್ ಗನ್ ಅಳವಡಿಸಲಾಗಿದೆ. ಮಹಾರಾಷ್ಟ್ರದ ಮಾಲ್ವನ್ ಸಮೀಪದ ಸಿಂಧುದುರ್ಗ ಕೋಟೆ ಶಿವಾಜಿಯ ಮರಾಠ ನೌಕಾಪಡೆಯ ಪ್ರಮುಖ ಕೇಂದ್ರವಾಗಿದ್ದ ಕಾರಣ ಈ ನೌಕೆಗೆ ಮಾಲ್ವನ್ ಎಂದು ಹೆಸರಿಸಲಾಗಿದೆ. ಭಾರತೀಯ ವಾಯುಪಡೆಯ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಎ. ಪಿ. ಸಿಂಗ್ ಅವರ ಸಮ್ಮುಖದಲ್ಲಿ ಈ ನೌಕೆಗೆ ಚಾಲನೆ ನೀಡಲಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

6 ಮಂದಿ ಎಡಗೈ ದಾಂಡಿಗರು: ಹೀಗಿರಲಿದೆ ಟೀಮ್ ಇಂಡಿಯಾ ಪ್ಲೇಯಿಂಗ್ 11 – Kannada News | India’s Probable XI for 1st T20 vs Zimbabwe

ಭಾರತ ಮತ್ತು ಝಿಂಬಾಬ್ವೆ ನಡುವಣ ಮೂರು ಮ್ಯಾಚ್​ಗಳ ಟಿ20 ಸರಣಿ ಗುರುವಾರದಿಂದ (ಜು.23) ಶುರುವಾಗಲಿದೆ. ಹರಾರೆಯಲ್ಲಿ ನಡೆಯಲಿರುವ ಈ ಸರಣಿಯ ಮೊದಲ ಪಂದ್ಯಕ್ಕಾಗಿ ಟೀಮ್ ಇಂಡಿಯಾ ಬಲಿಷ್ಠ ಪ್ಲೇಯಿಂಗ್ ಇಲೆವೆನ್ ರೂಪಿಸಲಿದೆ. ಈ ಪ್ಲೇಯಿಂಗ್ ಇಲೆವೆನ್​ನಲ್ಲಿ ಎಡಗೈ ದಾಂಡಿಗರ ದಂಡೇ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.

ಏಕೆಂದರೆ ಭಾರತ ತಂಡದಲ್ಲಿರುವ 9 ಬ್ಯಾಟರ್​ಗಳಲ್ಲಿ ಆರು ಮಂದಿ ಎಡಗೈ ದಾಂಡಿಗರು. ಇವರಲ್ಲಿ ಬಹುತೇಕರು ಆಡುವ ಬಳಗದ ಖಾಯಂ ಸದಸ್ಯರು. ಹೀಗಾಗಿ ಝಿಂಬಾಬ್ವೆ ವಿರುದ್ಧದ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ಪರ ಆರು ಎಡಗೈ ಬ್ಯಾಟ್ಸ್​ಮನ್​ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ.

ಇಲ್ಲಿ ಆರಂಭಿಕರಾಗಿ ಅಭಿಷೇಕ್ ಶರ್ಮಾ ಹಾಗೂ ವೈಭವ್ ಸೂರ್ಯವಂಶಿ ಕಣಕ್ಕಿಳಿಯುವುದು ಖಚಿತ. ಇವರಿಬ್ಬರು ಎಡಗೈ ದಾಂಡಿಗರು ಎಂಬುದು ವಿಶೇಷ. ಇನ್ನು ಮೂರನೇ ಕ್ರಮಾಂಕದಲ್ಲಿ ಲೆಫ್ಟ್ ಹ್ಯಾಂಡರ್ ಇಶಾನ್ ಕಿಶನ್ ಕಣಕ್ಕಿಳಿಯಲಿದ್ದಾರೆ.

ನಾಲ್ಕನೇ ಕ್ರಮಾಂಕದಲ್ಲಿ ಬಲಗೈ ದಾಂಡಿಗ ಶ್ರೇಯಸ್ ಅಯ್ಯರ್ ಕಾಣಿಸಿಕೊಂದರೆ, ಐದನೇ ಕ್ರಮಾಂಕದಲ್ಲಿ ಮತ್ತೆ ಎಡಗೈ ದಾಂಡಿಗ ತಿಲಕ್ ವರ್ಮಾ ಬ್ಯಾಟ್ ಬೀಸಲಿದ್ದಾರೆ.

ಆರನೇ ಮತ್ತು ಏಳನೇ ಕ್ರಮಾಂಕಗಳಲ್ಲಿ ಲೆಫ್ಟ್ ಹ್ಯಾಂಡ್ ಬ್ಯಾಟರ್​ಗಳಾದ ಶಿವಂ ದುಬೆ ಹಾಗೂ ರಿಂಕು ಸಿಂಗ್ ಕಣಕ್ಕಿಳಿಯುವ ಸಾಧ್ಯತೆಯಿದೆ. ಅಂದರೆ ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್​ನಲ್ಲಿ ಆರು ಮಂದಿ ಎಡಗೈ ದಾಂಡಿಗರೇ ಸ್ಥಾನ ಪಡೆಯುವ ಸಾಧ್ಯತೆ ಹೆಚ್ಚಿದೆ.

ಇನ್ನು ಬೌಲರ್​ಗಳಾಗಿ ಪ್ರಿನ್ಸ್ ಯಾದವ್, ಮಯಾಂಕ್ ಯಾದವ್, ಅಶೋಕ್ ಶರ್ಮಾ ಹಾಗೂ ಹರ್ಷ್ ದುಬೆ ಆಡುವ ಬಳಗದಲ್ಲಿ ಸ್ಥಾನ ಪಡೆಯಲಿದ್ದಾರೆ. ಅದರಂತೆ ಟೀಮ್ ಇಂಡಿಯಾದ ಸಂಭಾವ್ಯ ಪ್ಲೇಯಿಂಗ್ ಇಲೆವೆನ್ ಈ ಕೆಳಗಿನಂತಿರಲಿದೆ…

  • ವೈಭವ್ ಸೂರ್ಯವಂಶಿ
  • ಅಭಿಷೇಕ್ ಶರ್ಮಾ
  • ಇಶಾನ್ ಕಿಶನ್
  • ಶ್ರೇಯಸ್ ಅಯ್ಯರ್ (ನಾಯಕ)
  • ತಿಲಕ್ ವರ್ಮಾ
  • ಶಿವಂ ದುಬೆ
  • ರಿಂಕು ಸಿಂಗ್
  • ಹರ್ಷ್ ದುಬೆ
  • ಮಯಾಂಕ್ ಯಾದವ್
  • ಅಶೋಕ್ ಶರ್ಮಾ
  • ಪ್ರಿನ್ಸ್ ಯಾದವ್

ಇದನ್ನೂ ಓದಿ: ನೋ ಬಾಲ್ ಎಸೆದರೆ ಬೌಲರ್ ಬೌಲ್ಡ್​: 10 ಹೊಸ ನಿಯಮ ಪರಿಚಯಿಸಿದ ಬಿಸಿಸಿಐ

ಭಾರತ ಟಿ20 ತಂಡ: ಶ್ರೇಯಸ್ ಅಯ್ಯರ್, ತಿಲಕ್ ವರ್ಮಾ , ಇಶಾನ್ ಕಿಶನ್ (ವಿಕೆಟ್ ಕೀಪರ್), ಪ್ರಭ್‌ಸಿಮ್ರಾನ್ ಸಿಂಗ್ (ವಿಕೆಟ್ ಕೀಪರ್), ವೈಭವ್ ಸೂರ್ಯವಂಶಿ, ಅಭಿಷೇಕ್ ಶರ್ಮಾ, ಶಿವಂ ದುಬೆ, ಸೂರ್ಯಾಂಶ್ ಶೆಡ್ಗೆ, ರಿಂಕು ಸಿಂಗ್, ಹರ್ಷ್ ದುಬೆ, ರವಿ ಬಿಷ್ಣೋಯ್, ಪ್ರಿನ್ಸ್ ಯಾದವ್, ಯಶ್ ಠಾಕೂರ್, ಅಶೋಕ್ ಶರ್ಮಾ ಮತ್ತು ಮಯಾಂಕ್ ಯಾದವ್.

Source link

ಅವನನ್ನು ಯಾವಾಗ ಕರ್ಕೊಂಡು ಬರ್ತೀಯಾ ಎಂದು ಕೇಳಿದ್ದರು ಚೆನ್ನಮ್ಮ: ಪರೋಕ್ಷವಾಗಿ ಪ್ರಜ್ವಲ್ ವಿಚಾರ ಪ್ರಸ್ತಾಪಿಸಿದ ಹೆಚ್​ಡಿಕೆ – Kannada News | HD Kumaraswamy Recalls Chennamma’s Emotional Words, Indirectly Refers to Prajwal Revanna During Memorial Ceremony

ಹಾಸನ, ಜುಲೈ 22: ‘ನಮ್ಮ ಕುಟುಂಬದಲ್ಲಿ ನಡೆದ ಕೆಲವು ಘಟನೆಗಳಿಂದ ತಾಯಿ ಚೆನ್ನಮ್ಮ (ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡರ ಪತ್ನಿ) ಮಾನಸಿಕ ಯಾತನೆಗೆ ಒಳಗಾಗಿದ್ದರು. ‘‘ಅವನನ್ನು ಯಾವಾಗ ಕರ್ಕೊಂಡು ಬರ್ತೀಯಪ್ಪ’’ ಎಂದು ಪದೇ ಪದೇ ಕೇಳುತ್ತಿದ್ದರು. ಆ ಮಾತು ಇಂದಿಗೂ ತಮಗೆ ನೋವುಂಟು ಮಾಡುತ್ತದೆ’ ಎಂದು ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ಪರೋಕ್ಷವಾಗಿ ಪ್ರಜ್ವಲ್ ರೇವಣ್ಣ ಪ್ರಕರಣವನ್ನು ಉಲ್ಲೇಖಿಸಿದರು. ಚೆನ್ನಮ್ಮ ಸಮಾಧಿಗೆ ಮೂರನೇ ದಿನದ ಹಾಲು ತುಪ್ಪ ಕಾರ್ಯದ ಸಂದರ್ಭ ಮಾತನಾಡಿದ ಕುಮಾರಸ್ವಾಮಿ, ಕಳೆದ ಒಂದೂವರೆ ವರ್ಷದಿಂದ ತಾಯಿ ಅನುಭವಿಸಿದ ಹಿಂಸೆ, ಮಾನಸಿಕ ಯಾತನೆ ನೆನೆದು ಭಾವುಕರಾದರು.

ತಾಯಿ ಚೆನ್ನಮ್ಮ ಕಳೆದ ಒಂದೂವರೆ ವರ್ಷದಿಂದ ಹಾಸಿಗೆ ಹಿಡಿದು ಹಿಂಸೆ ಅನುಭವಿಸಿದ್ದರು. ನೆನಪಿನ ಶಕ್ತಿ ಕುಂದಿ ಹೋಗಿ ಯಾರನ್ನೂ ಗುರುತಿಸಲಾಗದ ಪರಿಸ್ಥಿತಿಗೆ ತಲುಪಿದ್ದರು. ಆದರೂ ಈ ಅವಧಿಯಲ್ಲಿ ಅವರು ಯಾರೇ ಬಂದರೂ ‘ಊಟ ಮಾಡಿದೀರಾ? ಊಟ ಮಾಡಿ’ ಎಂಬ ಎರಡು ಪದಗಳನ್ನು ಹೊರತುಪಡಿಸಿ ಬೇರೇನೂ ಮಾತನಾಡುತ್ತಿರಲಿಲ್ಲ ಎಂದು ಹೇಳಿದರು. ಆದಾಗ್ಯೂ, ತಮ್ಮನ್ನು ಮತ್ತು ತಮ್ಮಿಬ್ಬರು ತಂಗಿಯರನ್ನು ನೆನಪಿನಲ್ಲಿ ಇಟ್ಟುಕೊಂಡಿದ್ದರು ಎಂದು ನೆನೆದು ಕುಮಾರಸ್ವಾಮಿ ಭಾವುಕರಾದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕಾಮನ್‌ವೆಲ್ತ್ ಗೇಮ್ಸ್ ಯಾವಾಗ ಶುರು? ಇಲ್ಲಿದೆ ಸಂಪೂರ್ಣ ಮಾಹಿತಿ – Kannada News | Commonwealth Games 2026 Starting Date

Commonwealth Games 2026: ಬಹುನಿರೀಕ್ಷಿತ ಕಾಮನ್‌ವೆಲ್ತ್ ಗೇಮ್ಸ್​ ನಾಳೆಯಿಂದ (ಜುಲೈ 23) ಶುರುವಾಗಲಿದೆ. ಸ್ಕಾಟ್‌ಲ್ಯಾಂಡ್‌ನ ಪ್ರಸಿದ್ಧ ನಗರ ಗ್ಲ್ಯಾಸ್ಗೋದಲ್ಲಿ ನಡೆಯಲಿರುವ 23ನೇ ಆವೃತ್ತಿಯ ಈ ಕ್ರೀಡಾಕೂಟದಲ್ಲಿ ಒಟ್ಟು 74 ದೇಶಗಳ ಸುಮಾರು 3000 ಅಥ್ಲೀಟ್​ಗಳು ಭಾಗವಹಿಸುತ್ತಿದ್ದಾರೆ.

ಆಸ್ಟ್ರೇಲಿಯಾದಿಂದ ಸ್ಥಳಾಂತರ:

ಮೊದಲು ಈ ಕ್ರೀಡಾಕೂಟವನ್ನು ಆಸ್ಟ್ರೇಲಿಯಾದ ವಿಕ್ಟೋರಿಯಾ ರಾಜ್ಯದಲ್ಲಿ ಆಯೋಜಿಸಲು ನಿರ್ಧರಿಸಲಾಗಿತ್ತು. ಆದರೆ ವಿಪರೀತ ವೆಚ್ಚದ ಕಾರಣದಿಂದಾಗಿ ಆಸ್ಟ್ರೇಲಿಯಾ ಹಿಂದೆ ಸರಿಯಿತು. ಕೊನೆಗೆ ಕ್ರೀಡಾಕೂಟವನ್ನು ಆಯೋಜನೆಯ ಉಸ್ತುವಾರಿಯನ್ನು ಸ್ಕಾಟ್‌ಲ್ಯಾಂಡ್‌ ಸರ್ಕಾರ ವಹಿಸಿಕೊಂಡಿದೆ. ಅದರಂತೆ ಈ ಬಾರಿ ಗ್ಲ್ಯಾಸ್ಗೋ ನಗರದಲ್ಲಿ ಕಾಮನ್‌ವೆಲ್ತ್ ಗೇಮ್ಸ್ ನಡೆಯಲಿದೆ.

  • ಗ್ಲ್ಯಾಸ್ಗೋ ನಗರದಲ್ಲಿ ಕಾಮನ್‌ವೆಲ್ತ್ ಗೇಮ್ಸ್ ನಡೆಯುತ್ತಿರುವುದು ಇದು 2ನೇ ಬಾರಿ.
  • 2014 ರಲ್ಲಿ ಗ್ಲ್ಯಾಸ್ಗೋ ನಗರದಲ್ಲಿ ಕಾಮನ್‌ವೆಲ್ತ್ ಕ್ರೀಡಾಕೂಟವನ್ನು ಆಯೋಜಿಸಲಾಗಿತ್ತು.

ಕ್ರೀಡೆಗಳ ಕಡಿತ:

ಈ ಬಾರಿಯ ಕ್ರೀಡಾಕೂಟವು ಇತಿಹಾಸದಲ್ಲೇ ಅತ್ಯಂತ ಸರಳ ಹಾಗೂ ಕಡಿಮೆ ವೆಚ್ಚದ ಮಾದರಿಯಾಗಿದೆ. ಹೀಗಾಗಿ ಕ್ರೀಡೆಗಳ ಸಂಖ್ಯೆಯನ್ನು ಭಾರಿ ಪ್ರಮಾಣದಲ್ಲಿ ಕಡಿತಗೊಳಿಸಲಾಗಿದೆ. ಕೇವಲ 8 ಮೈಲಿ ವ್ಯಾಪ್ತಿಯಲ್ಲಿರುವ 4 ಕ್ರೀಡಾಂಗಣಗಳಲ್ಲಿ ಇಡೀ ಕೂಟ ಮುಕ್ತಾಯಗೊಳ್ಳಲಿದೆ.

10 ಪ್ರಮುಖ ಕ್ರೀಡೆಗಳು:

  • ಅಥ್ಲೆಟಿಕ್ಸ್ ಮತ್ತು ಪ್ಯಾರಾ ಅಥ್ಲೆಟಿಕ್ಸ್
  • ಈಜು ಮತ್ತು ಪ್ಯಾರಾ ಈಜು
  • ಟ್ರ್ಯಾಕ್ ಸೈಕ್ಲಿಂಗ್ ಮತ್ತು ಪ್ಯಾರಾ ಟ್ರ್ಯಾಕ್ ಸೈಕ್ಲಿಂಗ್
  • ಜಿಮ್ನಾಸ್ಟಿಕ್
  • ನೆಟ್​ಬಾಲ್
  • ವೇಟ್ ಲಿಫ್ಟಿಂಗ್ ಮತ್ತು ಪ್ಯಾರಾ ಪವರ್‌ಲಿಫ್ಟಿಂಗ್
  • ಬಾಕ್ಸಿಂಗ್
  • ಲಾನ್ ಬೌಲ್ಸ್ ಮತ್ತು ಪ್ಯಾರಾ ಬೌಲ್ಸ್
  • 3×3 ಬಾಸ್ಕೆಟ್‌ಬಾಲ್ ಮತ್ತು ವೀಲ್‌ಚೇರ್ ಬಾಸ್ಕೆಟ್‌ಬಾಲ್

ಭಾರತಕ್ಕೆ ಹಿನ್ನಡೆ:

ಈ ಬಾರಿಯ ಕಾಮನ್‌ವೆಲ್ತ್ ಕ್ರೀಡಾಕೂಟದಿಂದ ಕೆಲ ಪ್ರಮುಖ ಕ್ರೀಡೆಗಳನ್ನು ಕೈ ಬಿಟ್ಟಿರುವುದರಿಂದ ಭಾರತಕ್ಕೆ ಹಿನ್ನಡೆಯಾಗಲಿದೆ. ಅದರಲ್ಲೂ ಭಾರತಕ್ಕೆ ಅತಿ ಹೆಚ್ಚು ಪದಕ ತಂದು ಕೊಡುತ್ತಿದ್ದ ಕುಸ್ತಿ, ಬ್ಯಾಡ್ಮಿಂಟನ್, ಹಾಕಿ, ಟೇಬಲ್ ಟೆನಿಸ್, ಕ್ರಿಕೆಟ್ ಮತ್ತು ಶೂಟಿಂಗ್ ಆಟಗಳನ್ನು ಈ ಬಾರಿ ಕೈಬಿಡಲಾಗಿದೆ. ಹೀಗಾಗಿ ಈ ಬಾರಿ ಹೆಚ್ಚಿನ ಪದಕವನ್ನು ನಿರೀಕ್ಷಿಸುವಂತಿಲ್ಲ.

ಇದನ್ನೂ ಓದಿ: ನೋ ಬಾಲ್ ಎಸೆದರೆ ಬೌಲರ್ ಬೌಲ್ಡ್​: 10 ಹೊಸ ನಿಯಮ ಪರಿಚಯಿಸಿದ ಬಿಸಿಸಿಐ

ಭಾರತದ ಭರವಸೆಯ 126 ಕ್ರೀಡಾಪಟುಗಳು:

ಪ್ರಮುಖ ಆಟಗಳು ರದ್ದಾಗಿದ್ದರೂ, ಭಾರತವು ಒಟ್ಟು 126 ಸದಸ್ಯರ ಬಲಿಷ್ಠ ತಂಡವನ್ನು ಗ್ಲ್ಯಾಸ್ಗೋಗೆ ಕಳುಹಿಸಿಕೊಟ್ಟಿದೆ. ಈ ಪಟ್ಟಿಯಲ್ಲಿ ಪ್ರಮುಖ ಆಟಗಾರರೆಂದರೆ…

  • ನೀರಜ್ ಚೋಪ್ರಾ: ಒಲಿಂಪಿಕ್ಸ್ ತಾರೆ ನೀರಜ್ ಚೋಪ್ರಾ ಜಾವೆಲಿನ್ ಥ್ರೋನಲ್ಲಿ ಭಾರತದ ಪ್ರಮುಖ ಚಿನ್ನದ ಭರವಸೆಯಾಗಿದ್ದಾರೆ. ಪಾಕಿಸ್ತಾನದ ಅರ್ಷದ್ ನದೀಮ್ ವಿರುದ್ಧ ಇವರ ಹೋರಾಟ ಕುತೂಹಲ ಮೂಡಿಸಿದೆ.
  • ಮೀರಾಬಾಯಿ ಚಾನು: ವೇಟ್‌ ಲಿಫ್ಟಿಂಗ್‌ನಲ್ಲಿ ಭಾರತದ ಪದಕದ ಖಾತೆಯನ್ನು ಚಿನ್ನದೊಂದಿಗೆ ಆರಂಭಿಸುವ ಇರಾದೆಯಲ್ಲಿದ್ದಾರೆ ಮೀರಾಬಾಯಿ ಚಾನು.
  • ಲವ್ಲಿನಾ ಬೊರ್ಗೊಹೈನ್: ಬಾಕ್ಸಿಂಗ್ ವಿಭಾಗದಲ್ಲಿ ಭಾರತದ ಸವಾಲನ್ನು ಲವ್ಲಿನಾ ಮುನ್ನಡೆಸಲಿದ್ದಾರೆ.

ಈ ಮೂವರು ಪ್ರಮುಖ ಕ್ರೀಡಾಪಟುಗಳಿಂದ ಈ ಬಾರಿ ಚಿನ್ನದ ಪದಕವನ್ನು ನಿರೀಕ್ಷಿಸಬಹುದು. ಇವರೊಂದಿಗೆ 123 ಕ್ರೀಡಾಪಟುಗಳು ಕೂಡ ಐತಿಹಾಸಿಕ ಸಾಧನೆ ಮಾಡುವ ವಿಶ್ವಾಸದಲ್ಲಿದ್ದಾರೆ.

Published On – 10:35 am, Wed, 22 July 26

Source link

Exit mobile version