Correct Way To Bath: ಸ್ನಾನ ಮಾಡುವ ಸಂದರ್ಭದಲ್ಲಿ ಮೊದಲು ದೇಹದ ಯಾವ ಭಾಗಕ್ಕೆ ನೀರು ಹಾಕಬೇಕು ಗೊತ್ತೇ? – Kannada News | Correct way to bath according to Ayurveda

ದೇಹವನ್ನು ಸ್ವಚ್ಛವಾಗಿಡಲು ಪ್ರತಿನಿತ್ಯ ಸ್ನಾನ (bath) ಮಾಡಲೇಬೇಕು. ಸ್ನಾನವು ದೇಹವನ್ನು ಶುದ್ಧೀಕರಿಸುವುದಲ್ಲದೆ, ನಮಗೆ ತಾಜಾತನವನ್ನು ನೀಡುತ್ತದೆ. ಆಯುರ್ವೇದದ ಪ್ರಕಾರ ಸ್ನಾನ ಮಾಡಲು ಸರಿಯಾದ ಕ್ರಮವಿದ್ದು, ಸ್ನಾನ ಮಾಡುವಾಗ, ಮೊದಲು ಪಾದಗಳ ಮೇಲೆ ನೀರನ್ನು ಸುರಿಯಬೇಕು. ಇದು ದೇಹದ ಉಷ್ಣತೆಯನ್ನು ಕಾಪಾಡಿಕೊಳ್ಳುತ್ತದೆ. ಆದರೆ ಅನೇಕ ಜನರು ಸ್ನಾನ ಮಾಡುವಾಗ ಮೊದಲು ನೀರನ್ನು ತಲೆ ಮೇಲೆ ಸುರಿಯುತ್ತಾರೆ. ಇದು ಸ್ನಾನ ಮಾಡುವ ಸರಿಯಾದ ಕ್ರಮವಲ್ಲ. ಇದರಿಂದ ದೇಹದ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಬೀರುತ್ತದೆ. ಹಾಗಾಗಿ ಆಯುರ್ವೇದದ ಪ್ರಕಾರ ಸ್ನಾನ ಮಾಡುವ ಸರಿಯಾದ ವಿಧಾನ ಯಾವುದೆಂದು ತಿಳಿಯೋಣ ಬನ್ನಿ.

ಸ್ನಾನ ಮಾಡುವಾಗ ದೇಹದ ಯಾವ ಭಾಗಕ್ಕೆ ಮೊದಲು ನೀರು ಸುರಿಯಬೇಕು?

ಆಯುರ್ವೇದ ಪ್ರಕಾರ, ಸ್ನಾನವನ್ನು ಪಾದಗಳಿಂದ ಪ್ರಾರಂಭಿಸುವುದು ಉತ್ತಮ. ಪಾದಗಳ ಮೇಲೆ ನೀರನ್ನು ಸುರಿಯುವುದರಿಂದ ದೇಹವು ಕ್ರಮೇಣ ನೀರಿನ ತಾಪಮಾನಕ್ಕೆ ಹೊಂದಿಕೊಳ್ಳುತ್ತದೆ. ಇದು ಮೆದುಳಿಗೆ ಇದ್ದಕ್ಕಿದ್ದಂತೆ ಶೀತದಿಂದ ತೊಂದರೆಗೊಳಗಾಗುವುದನ್ನು ತಡೆಯುತ್ತದೆ. ಇದು ರಕ್ತದ ಹರಿವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ತಣ್ಣೀರಿನಲ್ಲಿ ಸ್ನಾನ ಮಾಡುವಾಗ ಈ ನಿಯಮವು ವಿಶೇಷವಾಗಿ ಅನ್ವಯವಾಗುತ್ತದೆ.

ಪಾದಗಳ ಮೇಲೆ ನೀರನ್ನು ಸುರಿದ ನಂತರ, ನೀರನ್ನು ಕೈಗಳ ಮೇಲೆ ಮತ್ತು ನಂತರ ಎದೆಯ ಮೇಲೆ ಸುರಿಯಬೇಕು. ಕೊನೆಯದಾಗಿ ತಲೆಗೆ ನೀರು ಹಾಕಬೇಕು. ತಣ್ಣೀರನ್ನು ನೇರವಾಗಿ ಎದೆಯ ಮೇಲೆ ಸುರಿಯುವುದರಿಂದ ರಕ್ತದ ಹರಿವಿನಲ್ಲಿ ಅಸಮತೋಲನ ಉಂಟಾಗುತ್ತದೆ. ಸ್ನಾನ ಮಾಡುವಾಗ ಮೊದಲು ಪಾದಕ್ಕೆ ನೀರನ್ನು ಹಾಕುವುದರಿಂದ  ದೇಹವು ನೀರಿನ ತಾಪಮಾನಕ್ಕೆ ಕ್ರಮೇಣ ಹೊಂದಿಕೊಳ್ಳಲು ಸಮಯ ಸಿಗುತ್ತದೆ, ಹಠಾತ್ ತಾಪಮಾನ ಬದಲಾವಣೆಗಳಿಂದ ಉಂಟಾಗುವ ಅಸ್ವಸ್ಥತೆಯನ್ನು ಕಡಿಮೆ ಮಾಡುತ್ತದೆ.

ಇದನ್ನೂ ಓದಿ: ಮಳೆಯಲ್ಲಿ ನೆನೆದರೆ ಕೂದಲು ಉದುರುತ್ತದೆಯೇ? ಚರ್ಮರೋಗ ತಜ್ಞರು ಹೇಳುವುದೇನು?

ಸ್ನಾನ ಮಾಡುವಾಗ ತಲೆಯ ಮೇಲೆ ನೇರವಾಗಿ ಏಕೆ ನೀರು ಸುರಿಯಬಾರದು?

ಅನೇಕ ಜನರು ಸ್ನಾನ ಮಾಡುವಾಗ ಮೊದಲು ತಮ್ಮ ತಲೆಯ ಮೇಲೆ ನೀರನ್ನು ಸುರಿಯುತ್ತಾರೆ, ಆದರೆ ಆಯುರ್ವೇದ ಪ್ರಕಾರ ಇದು ಸ್ನಾನ ಮಾಡುವ ಸರಿಯಾದ ವಿಧಾನವಲ್ಲ. ಅದರಲ್ಲೂ ಮೊದಲು ತಣ್ಣೀರನ್ನು ತಲೆಗೆ ಸುರಿಯುವುದರಿಂದ ಕೆಲವು ಜನರಲ್ಲಿ ತಲೆನೋವು, ತಲೆತಿರುಗುವಿಕೆ ಅಥವಾ ಅಸ್ವಸ್ಥತೆ ಉಂಟಾಗಬಹುದು.

ಆಯುರ್ವೇದವು ಸ್ನಾನ ಮಾಡುವಾಗ ತಲೆಯ ಮೇಲೆ ನೀರನ್ನು ಕೊನೆಯದಾಗಿ ಹಾಕಬೇಕು ಎಂದು ಶಿಫಾರಸು ಮಾಡುತ್ತದೆ. ತಲೆಯು ದೇಹದ ಅತ್ಯಂತ ಸೂಕ್ಷ್ಮ ಭಾಗವಾಗಿದ್ದು, ತಣ್ಣೀರನ್ನು ನೇರವಾಗಿ ತಲೆಯ ಮೇಲೆ ಸುರಿಯುವುದರಿಂದ ನರಮಂಡಲದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಮತ್ತು ಕೆಲವೊಮ್ಮೆ ತಲೆನೋವು ಅಥವಾ ತಲೆತಿರುಗುವಿಕೆಗೆ ಕಾರಣವಾಗಬಹುದು. ಅಲ್ಲದೆ ತಲೆಯ ಮೇಲೆ ಬಿಸಿನೀರನ್ನು ಸುರಿಯುವುದು ಮೆದುಳು ಮತ್ತು ಕೂದಲಿಗೆ ಹಾನಿಕಾರಕ ಎಂದು ಆಯುರ್ವೇದವು ಸ್ಪಷ್ಟವಾಗಿ ಹೇಳುತ್ತದೆ. ಇದು ಕೂದಲಿನ ಬೇರುಗಳನ್ನು ದುರ್ಬಲಗೊಳಿಸುತ್ತದೆ ಮತ್ತು ಕೂದಲು ಉದುರುವಿಕೆಗೆ ಕಾರಣವಾಗಬಹುದು. ತುಂಬಾ ಬಿಸಿಯಾಗಿರುವ ನೀರನ್ನು ತಲೆಯ ಮೇಲೆ ಸುರಿಯುವುದರಿಂದ ಅದು ರಕ್ತದೊತ್ತಡದ ಮೇಲೆ ಪರಿಣಾಮ ಬೀರುತ್ತದೆ, ಮೆದುಳಿನಲ್ಲಿ ರಕ್ತಸ್ರಾವವಾಗುವ ಅಪಾಯವನ್ನು ಹೆಚ್ಚಿಸುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕೊಲೆ ಆರೋಪಿ ದರ್ಶನ್ ಭೇಟಿಗೆ ಆಗಮಿಸಿದ ನಟಿ ರಕ್ಷಿತಾ ಪ್ರೇಮ್, ಪತ್ನಿ ವಿಜಯಲಕ್ಷ್ಮೀ – Kannada News | Actress Rakshita Prem and Vijayalakshmi Meet Darshan in Jail

ನಟ ದರ್ಶನ್ ಅವರು ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲುಪಾಲಾಗಿ ಕಂಬಿ ಎಣಿಸುತ್ತಿದ್ದಾರೆ. ಜಾಮೀನು ಪಡೆಯಲು ಅವರು ಮಾಡಿದ ಎಲ್ಲ ಪ್ರಯತ್ನಗಳೂ ವ್ಯರ್ಥ ಆಗಿವೆ. ಅವರನ್ನು ನೋಡಲು ಆಪ್ತರು ಮತ್ತು ಕುಟುಂಬದವರು ಪರಪ್ಪನ ಅಗ್ರಹಾರ ಜೈಲಿಗೆ ಆಗಮಿಸುತ್ತಿದ್ದಾರೆ. ಮಂಗಳವಾರ (ಜುಲೈ 21) ನಟಿ ರಕ್ಷಿತಾ ಪ್ರೇಮ್ ಮತ್ತು ಪತ್ನಿ ವಿಜಯಲಕ್ಷ್ಮಿ ಅವರು ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿಗೆ ಭೇಟಿ ನೀಡಿ, ದರ್ಶನ್ (Darshan) ಜೊತೆ ಮಾತನಾಡಿದ್ದಾರೆ. ರಕ್ಷಿತಾ ಪ್ರೇಮ್ ಮತ್ತು ವಿಜಯಲಕ್ಷ್ಮೀ ಅವರು 2 ಕಾರುಗಳಲ್ಲಿ ಪ್ರತ್ಯೇಕವಾಗಿ ಜೈಲಿಗೆ ಬಂದಿದ್ದಾರೆ. ದರ್ಶನ್ ನೋಡಲು ರಕ್ಷಿತಾ ಅವರು ಜೈಲಿಗೆ ಬಂದಿರುವುದು ಇದು ಎರಡನೇ ಬಾರಿ. ದರ್ಶನ್ ಮತ್ತು ರಕ್ಷಿತಾ ನಡುವೆ ಅನೇಕ ವರ್ಷಗಳ ಸ್ನೇಹ ಇದೆ. ಹಲವು ಸಿನಿಮಾಗಳಲ್ಲಿ ಅವರು ಜೊತೆಯಾಗಿ ಅಭಿನಯಿಸಿದ್ದರು. ಈಗ ಅವರು ಜೈಲಿನಲ್ಲಿ ಭೇಟಿಯಾಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಸಂಧಾನದ ವೇಳೆ ಬೇಡಿಕೆ ಬದಲಾಯಿಸಿದ ರಾಹುಲ್ ಗಾಂಧಿ; ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಆರೋಪ – Kannada News | Went Back On His Word Union Minister Jitendra Singh accuses Rahul Gandhi for Changing his Demand

ನವದೆಹಲಿ, ಜುಲೈ 21: ದೆಹಲಿಯ ಪ್ರಧಾನಿ ಸರ್ಕಾರಿ ನಿವಾಸದ ಎದುರು ಇಂದು ಸಂಜೆ ದೊಡ್ಡ ಹೈಡ್ರಾಮಾ ನಡೆದಿದೆ. ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ನಿನ್ನೆ ಸಿಜೆಪಿ ಪ್ರತಿಭಟನಾಕಾರರ ಮೇಲೆ ನಡೆದ ಪೊಲೀಸ್ ದೌರ್ಜನ್ಯವನ್ನು ಖಂಡಿಸಿ ಕಾಂಗ್ರೆಸ್ ನಾಯಕರು (Congress Protest in Delhi) ಪ್ರಧಾನಿ ಮೋದಿ ನಿವಾಸದ ಹೊರಗೆ ಧರಣಿ ಸತ್ಯಾಗ್ರಹ ನಡೆಸಿದ್ದರು. ಈ ವೇಳೆ ಸಂಧಾನ ಮಾತುಕತೆಗೆ ತೆರಳಿದ್ದ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ರಾಹುಲ್ ಗಾಂಧಿ (Rahul Gandhi) ಮಾತುಕತೆಯ ವೇಳೆ ಯು-ಟರ್ನ್ ಹೊಡೆದಿದ್ದಾರೆ ಎಂದು ಆರೋಪಿಸಿದ್ದಾರೆ. ನಾವು ಕೆಲವೇ ನಿಮಿಷಗಳಲ್ಲಿ ರಾಹುಲ್ ಗಾಂಧಿಯ ಬೇಡಿಕೆಗಳಿಗೆ ಒಪ್ಪಿಗೆ ನೀಡಿದ್ದೆವು. ಆದರೆ, ರಾಹುಲ್ ಗಾಂಧಿ ತಮ್ಮ ಬೇಡಿಕೆಗಳನ್ನು ಬದಲಾಯಿಸಿದರು ಎಂದು ಜಿತೇಂದ್ರ ಸಿಂಗ್ ಆರೋಪ ಮಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ, ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್, ಗೃಹ ಸಚಿವ ಅಮಿತ್ ಶಾ ರಾಜೀನಾಮೆ ನೀಡಬೇಕೆಂದು ಧರಣಿ ಕುಳಿತಿದ್ದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಅಖಿಲೇಶ್ ಯಾದವ್ ಮುಂತಾದವರು ಒತ್ತಾಯಿಸಿದ್ದರು. ಈ ವೇಳೆ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಹಾಗೂ ಕೇಂದ್ರ ಗೃಹ ಕಾರ್ಯದರ್ಶಿ ಗೋವಿಂದ್ ಮೋಹನ್ ಅವರು ಪ್ರಧಾನಿ ನಿವಾಸದ ಬಳಿ ನಡೆಯುತ್ತಿದ್ದ ಧರಣಿಯ ಸ್ಥಳಕ್ಕೆ ತೆರಳಿ ರಾಹುಲ್ ಗಾಂಧಿ ಅವರೊಂದಿಗೆ ಚರ್ಚೆ ನಡೆಸಿದರು. ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವ ಕಾರಣ ಮತ್ತು ಪ್ರತಿಭಟನೆಗೆ ಸೂಕ್ತ ಸ್ಥಳವಲ್ಲದ ಕಾರಣದಿಂದ ಧರಣಿಯನ್ನು ಕೊನೆಗೊಳಿಸುವಂತೆ ಅವರು ರಾಹುಲ್ ಗಾಂಧಿಯವರಲ್ಲಿ ವಿನಂತಿ ಮಾಡಿದರು.

ಇದನ್ನೂ ಓದಿ:ನೀಟ್ ಅಕ್ರಮ ಖಂಡಿಸಿ ಪ್ರಧಾನಿ ನಿವಾಸದ ಹೊರಗೆ ಕಾಂಗ್ರೆಸ್ ಧರಣಿ; ಮೋದಿ ರಾಜೀನಾಮೆಗೆ ರಾಹುಲ್ ಗಾಂಧಿ, ಖರ್ಗೆ ಒತ್ತಾಯ

ಕೇಂದ್ರ ಸಚಿವರ ಆರೋಪವೇನು?:

ತಮ್ಮ ಹಾಗೂ ರಾಹುಲ್ ಗಾಂಧಿ ನಡುವಿನ ಮಾತುಕತೆಯ ವೇಳೆ ಏನಾಯಿತೆಂಬುದರ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಮಾಹಿತಿ ನೀಡಿದ್ದಾರೆ.

“ಆರಂಭದಲ್ಲಿ ರಾಹುಲ್ ಗಾಂಧಿ ನೀಟ್ (NEET) ಹಗರಣ ಹಾಗೂ ಅದಕ್ಕೆ ಸಂಬಂಧಿಸಿದ ಪ್ರತಿಭಟನೆಗಳ ಕುರಿತು ಸಂಸತ್ತಿನಲ್ಲಿ ಚರ್ಚೆ ನಡೆಸಲು ಸರ್ಕಾರ ಒಪ್ಪಿಕೊಂಡರೆ ನಾನು ತಕ್ಷಣವೇ ಧರಣಿ ಹಿಂಪಡೆಯುತ್ತೇನೆ ಎಂದು ಷರತ್ತು ವಿಧಿಸಿದರು. ಸರ್ಕಾರದ ಹಿರಿಯ ನಾಯಕರ ಅನುಮತಿ ಪಡೆದು, ಸಂಸತ್ತಿನಲ್ಲಿ ಚರ್ಚೆಗೆ ಸರ್ಕಾರ ಸಿದ್ಧವಿದೆ ಎಂಬ ಭರವಸೆಯನ್ನು ಅವರಿಗೆ ತಕ್ಷಣವೇ ನೀಡಲಾಯಿತು” ಎಂದು ಜಿತೇಂದ್ರ ಸಿಂಗ್ ತಿಳಿಸಿದ್ದಾರೆ.

“ರಾಹುಲ್ ಗಾಂಧಿಯ ಮೊದಲ ಷರತ್ತಿಗೆ ಸರ್ಕಾರದ ಒಪ್ಪಿಗೆಯನ್ನು ತಲುಪಿಸಿದ ತಕ್ಷಣವೇ ರಾಹುಲ್ ಗಾಂಧಿ ತಮ್ಮ ಬೇಡಿಕೆಯನ್ನು ಬದಲಾಯಿಸಿದರು. ‘ನಾನು ಕೇವಲ ಚರ್ಚೆಗೆ ಒಪ್ಪುವುದಿಲ್ಲ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಯ ಭರವಸೆಯೂ ಬೇಕು’ ಎಂದು ಹೊಸ ಬೇಡಿಕೆ ಮುಂದಿಟ್ಟರು. ಈಗ ನನಗೆ ಎರಡು ಬೇಡಿಕೆಗಳಿವೆ. ಸಂಸತ್ತಿನಲ್ಲಿ ಚರ್ಚೆ ನಡೆಯಬೇಕು ಮತ್ತು ಶಿಕ್ಷಣ ಸಚಿವರು ರಾಜೀನಾಮೆ ನೀಡಬೇಕು’ ಎಂದರು. ಆಗ ನಾನು ಆರಂಭದಲ್ಲಿ ಚರ್ಚೆಯೊಂದನ್ನೇ ಕೋರಿ ಈಗ ಇಷ್ಟೊಂದು ಬೇಗ ಮಾತು ಬದಲಾಯಿಸುವುದು ನಿಮ್ಮಂತಹ ಹಿರಿಯ ನಾಯಕರಿಗೆ ಶೋಭೆಯಲ್ಲ ಎಂದು ಹೇಳಿದೆ. ಅದಕ್ಕೆ ರಾಹುಲ್ ಗಾಂಧಿ ಅದು ನನ್ನ ಹಕ್ಕು ಎಂದರು” ಎಂದು ಜಿತೇಂದ್ರ ಸಿಂಗ್ ವಿವರಿಸಿದ್ದಾರೆ.

ಇದನ್ನೂ ಓದಿ: ಪ್ರಧಾನಿ ನಿವಾಸದ ಬಳಿ ಧರಣಿ ನಡೆಸುತ್ತಿದ್ದ ರಾಹುಲ್ ಗಾಂಧಿ ಪೊಲೀಸ್ ವಶಕ್ಕೆ 

“ರಾಹುಲ್ ಗಾಂಧಿ ಅವರಂತಹ ಹಿರಿಯ ನಾಯಕ ಹಾಗೂ ವಿರೋಧ ಪಕ್ಷದ ನಾಯಕರು ಕೊಟ್ಟ ಮಾತಿನಿಂದ ಹಿಂಜರಿಯುವುದು ದುರದೃಷ್ಟಕರ ಮತ್ತು ಪ್ರಜಾಪ್ರಭುತ್ವದ ಪ್ರತಿಯೊಂದು ನಿಯಮಕ್ಕೂ ವಿರುದ್ಧವಾಗಿದೆ. ನೀಟ್ ಮತ್ತು ಅದಕ್ಕೆ ಸಂಬಂಧಿಸಿದ ಚಳವಳಿಯ ಕುರಿತು ಸಂಸತ್ತಿನಲ್ಲಿ ಚರ್ಚಿಸಲು ಸರ್ಕಾರ ಸಂಪೂರ್ಣವಾಗಿ ಸಿದ್ಧವಾಗಿದೆ. ಕಾಂಗ್ರೆಸ್ ಪಕ್ಷವು ಈ ಗಂಭೀರ ವಿಷಯದ ಕುರಿತು ನಿಯಮಾವಳಿಗಳ ಪ್ರಕಾರ ಅಧಿಕೃತ ಚರ್ಚೆಗಾಗಿ ಈವರೆಗೆ ಯಾವುದೇ ನೋಟಿಸ್ ನೀಡಿಲ್ಲ. ರಾಹುಲ್ ಗಾಂಧಿ ಅವರ ಈ ನಡವಳಿಕೆಯು ಪ್ರಜಾಪ್ರಭುತ್ವದ ತತ್ವಗಳಿಗೆ ಸೂಕ್ತವಾದದ್ದಲ್ಲ.” ಎಂದು ಜಿತೇಂದ್ರ ಸಿಂಗ್ ಟೀಕಿಸಿದ್ದಾರೆ.


ರಾಹುಲ್ ಗಾಂಧಿ ಪೊಲೀಸ್ ವಶಕ್ಕೆ:

ಲೋಕ್ ಕಲ್ಯಾಣ್ ಮಾರ್ಗದಲ್ಲಿರುವ ಪ್ರಧಾನಮಂತ್ರಿಗಳ ಅಧಿಕೃತ ನಿವಾಸದ ಸಮೀಪ ನಡೆಯುತ್ತಿದ್ದ ಧರಣಿ ಸ್ಥಳದಿಂದ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸೇರಿ ಹಲವು ಕಾಂಗ್ರೆಸ್ ಸಂಸದರು ಮತ್ತು ಪಕ್ಷದ ನಾಯಕರನ್ನು ದೆಹಲಿ ಪೊಲೀಸರು ಬಲವಂತವಾಗಿ ತೆರವುಗೊಳಿಸಿ ವಶಕ್ಕೆ ಪಡೆದರು. ನೀಟ್ ವಿವಾದ ಮತ್ತು ಇತರ ಪ್ರಶ್ನೆಪತ್ರಿಕೆ ಸೋರಿಕೆಗಳ ವಿರುದ್ಧ ವಿದ್ಯಾರ್ಥಿಗಳು ನಡೆಸಿದ ಸಂಸತ್ ಮೆರವಣಿಗೆಯ ಮೇಲೆ ಪೊಲೀಸರು ಕ್ರಮ ಕೈಗೊಂಡ ಮರುದಿನವೇ ಈ ಘಟನೆ ನಡೆದಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Maruti Suzuki: 30,000 ರೂವರೆಗೂ ಏರಿಕೆಯಾಗಲಿದೆ ಮಾರುತಿ ಸುಜುಕಿಯ ವಿವಿಧ ಕಾರುಗಳ ಬೆಲೆ – Kannada News | Maruti Suzuki to hike prices of its various model cars by upto Rs 30k

ಮಾರುತಿ ಸುಜುಕಿ ಸ್ವಿಫ್ಟ್ ಕಾರುImage Credit source: PTI

ನವದೆಹಲಿ, ಜುಲೈ 21: ಭಾರತದ ನಂಬರ್ ಒನ್ ಕಾರು ತಯಾರಕ ಸಂಸ್ಥೆಯಾದ ಮಾರುತಿ ಸುಜುಕಿ ತನ್ನ ವಿವಿಧ ಕಾರುಗಳ ಬೆಲೆಯನ್ನು ಏರಿಸಲಿದೆ. ಮುಂದಿನ ತಿಂಗಳಿಂದ (ಆಗಸ್ಟ್ 2026) ಜಾರಿಗೆ ಬರುವಂತೆ ಮಾರುತಿ ಸುಜುಕಿ (Maruti Suzuki) ತನ್ನ ವಿವಿಧ ಮಾಡಲ್​ಗಳ ಕಾರುಗಳ ಬೆಲೆಯನ್ನು ₹30,000 ವರೆಗೆ ಏರಿಕೆ ಮಾಡುವುದಾಗಿ ಘೋಷಿಸಿದೆ.

ಕಾರು ಉತ್ಪಾದನಾ ವೆಚ್ಚಗಳು (Input costs) ಮತ್ತು ಹಣದುಬ್ಬರದ ಒತ್ತಡ ನಿರಂತರವಾಗಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕಂಪನಿ ಷೇರು ಮಾರುಕಟ್ಟೆಗೆ ನೀಡಿದ ಮಾಹಿತಿಯಲ್ಲಿ ತಿಳಿಸಿದೆ. ಹೊಸ ಬೆಲೆ ಏರಿಕೆಯು ಆಗಸ್ಟ್ 2026 ರಿಂದ ಜಾರಿಗೆ ಬರಲಿದ್ದು, ಕಾರಿನ ಮಾಡಲ್ ಹಾಗೂ ವೇರಿಯೆಂಟ್‌ಗಳಿಗೆ ಅನುಗುಣವಾಗಿ ದರ ಹೆಚ್ಚಳದ ಪ್ರಮಾಣ ಬದಲಾಗಲಿದೆ.

ಇದನ್ನೂ ಓದಿ: ಅದೃಷ್ಟ ಮತ್ತು ಅಂಡಾಶಯದ ಲಾಟರಿ; ತಮ್ಮ ಯಶಸ್ಸಿನ ಸೀಕ್ರೆಟ್ ಬಿಚ್ಚಿಟ್ಟ ವಾರನ್ ಬಫೆಟ್

ಎಂಟ್ರಿ ಲೆವೆಲ್ S-Presso ನಿಂದ ಹಿಡಿದು ಪ್ರೀಮಿಯಂ MPV Invicto ವರೆಗಿನ ಮಾಡೆಲ್‌ಗಳ ಮೇಲೆ ಈ ದರ ಏರಿಕೆ ಪರಿಣಾಮ ಬೀರಲಿದೆ. ಪ್ರಸ್ತುತ ಮಾರುತಿ ಕಾರುಗಳ ದರ ₹3.5 ಲಕ್ಷದಿಂದ ₹28.70 ಲಕ್ಷದ ವ್ಯಾಪ್ತಿಯಲ್ಲಿದೆ.

ಜೂನ್ ತಿಂಗಳಲ್ಲಿ ಪ್ರೈಸ್ ಪ್ರೊಟೆಕ್ಷನ್ ಆಫರ್ ಕೊಟ್ಟಿದ್ದ ಮಾರುತಿ

ಮಾರುತಿ ಸುಜುಕಿ ಜೂನ್ ತಿಂಗಳಿನಲ್ಲೂ ಕಾರುಗಳ ದರವನ್ನು ಹೆಚ್ಚಿಸಿತ್ತು. ಆಗ ಸಣ್ಣ ಕಾರು ಖರೀದಿದಾರರಿಗೆ (Alto K10, S-Presso, Celerio, WagonR) ‘ಬೆಲೆ ರಕ್ಷಣೆ’ (Price Protection) ಸೌಲಭ್ಯವನ್ನು ನೀಡಿತ್ತು. ಆದರೆ ಆಗಸ್ಟ್ ತಿಂಗಳ ಏರಿಕೆಗೆ ಇಂತಹ ಸೌಲಭ್ಯ ನೀಡಲಾಗುವುದೇ ಎಂಬುದನ್ನು ಕಂಪನಿ ಇನ್ನೂ ಸ್ಪಷ್ಟಪಡಿಸಿಲ್ಲ.

ಇದನ್ನೂ ಓದಿ: ಹೆಲ್ತ್ ಇನ್ಷೂರೆನ್ಸ್ ಖರೀದಿಸುವ ಮುನ್ನ, ಈ 5 ಅಂಶಗಳು ಗಮನದಲ್ಲಿರಲಿ…

ಜಾಗತಿಕ ವ್ಯಾಪಾರ ಅಡಚಣೆಗಳು ಹಾಗೂ ಕಚ್ಚಾವಸ್ತುಗಳ ವೆಚ್ಚ ಹೆಚ್ಚಾದ ಕಾರಣ ಟಾಟಾ ಮೋಟಾರ್ಸ್, ಮಹೀಂದ್ರಾ ಮತ್ತು ಹ್ಯುಂಡೈ ಸಂಸ್ಥೆಗಳು ಸಹ ಇತ್ತೀಚೆಗೆ ತಮ್ಮ ವಾಹನಗಳ ಬೆಲೆಯನ್ನು ಏರಿಸಿವೆ. ನೀವು ಹೊಸ ಮಾರುತಿ ಕಾರು ಖರೀದಿಸುವ ಯೋಜನೆಯಲ್ಲಿದ್ದರೆ, ಆಗಸ್ಟ್ ತಿಂಗಳು ಆರಂಭವಾಗುವ ಮುನ್ನವೇ ಬುಕ್ ಮಾಡುವುದರಿಂದ ದರ ಏರಿಕೆಯಿಂದ ಬಚಾವಾದರೂ ಆಗಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಪ್ರಧಾನಿ ನಿವಾಸದ ಬಳಿ ಧರಣಿ ನಡೆಸುತ್ತಿದ್ದ ರಾಹುಲ್ ಗಾಂಧಿ ಪೊಲೀಸ್ ವಶಕ್ಕೆ  – Kannada News | Delhi Police detained Rahul Gandhi, Priyanka Gandhi from Congress protest site near PM Modi residence

ನವದೆಹಲಿ, ಜುಲೈ 21: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ (NEET Paper Leak) ಹಗರಣ ಮತ್ತು ಸೋಮವಾರ ನಡೆಸಲಾದ ಯುವ ಪ್ರತಿಭಟನಾಕಾರರ ಮೇಲಿನ ಪೊಲೀಸ್ ದೌರ್ಜನ್ಯವನ್ನು ಖಂಡಿಸಿ ಪ್ರಧಾನಮಂತ್ರಿ ನರೇಂದ್ರ ಮೋದಿ (PM Narendra Modi) ಅವರ ನಿವಾಸದ ಬಳಿ ನಡೆಯುತ್ತಿದ್ದ ವಿರೋಧ ಪಕ್ಷಗಳ ಬೃಹತ್ ಧರಣಿ ಸತ್ಯಾಗ್ರಹವನ್ನು ದೆಹಲಿ ಪೊಲೀಸರು ಇಂದು ಸಂಜೆ ವೇಳೆ ಅಂತ್ಯಗೊಳಿಸಿದ್ದಾರೆ. ಸ್ಥಳದಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದು ರಸ್ತೆಯಲ್ಲೇ ಕುಳಿತಿದ್ದ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi), ಸಮಾಜವಾದಿ ಪಾರ್ಟಿ ಅಧ್ಯಕ್ಷ ಅಖಿಲೇಶ್ ಯಾದವ್ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ಹಲವು ಪ್ರಮುಖ ನಾಯಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇಂದು ರಾತ್ರಿಯಿಡೀ ಪ್ರಧಾನಿ ನಿವಾಸದ ಹೊರಗೆ ಧರಣಿ ಮುಂದುವರಿಸುವುದಾಗಿ ಕಾಂಗ್ರೆಸ್ ನಾಯಕರು ಘೋಷಿಸಿದ್ದರು. ಆದರೆ, ಇಂದು ಸಂಜೆ ಸುಮಾರು 6.40ರ ವೇಳೆಗೆ ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ಭದ್ರತಾ ಪಡೆಗಳ ಜೊತೆ ಸ್ಥಳಕ್ಕೆ ಆಗಮಿಸಿದ ದೆಹಲಿ ಪೊಲೀಸರು ಪ್ರತಿಭಟನಾನಿರತರನ್ನು ತೆರವುಗೊಳಿಸಲು ಆರಂಭಿಸಿದರು. ಆದರೆ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ರಸ್ತೆಯ ಮೇಲೆಯೇ ಕುಳಿತು, ತಮ್ಮ ಬೇಡಿಕೆಗಳು ಈಡೇರುವವರೆಗೆ ಆ ಜಾಗದಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದರು.

ಕೊನೆಗೆ ಅವರನ್ನು 10ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಸುತ್ತುವರಿದು ಬಲವಂತವಾಗಿ ಸ್ಥಳದಿಂದ ಎಬ್ಬಿಸಿ, ಹೊತ್ತುಕೊಂಡೇ ಬಸ್‌ನಲ್ಲಿ ಹತ್ತಿಸಿಕೊಂಡು ಕರೆದುಕೊಂಡು ಹೋದರು. ಪೋಲಿಸರ ಈ ಕ್ರಮವನ್ನು ತೀವ್ರವಾಗಿ ಖಂಡಿಸಿರುವ ಕಾಂಗ್ರೆಸ್ ಹಾಗೂ ‘ಇಂಡಿಯಾ’ ಕೂಟದ ನಾಯಕರು, “ಸರ್ಕಾರವು ಯುವಜನರ ಮತ್ತು ವಿದ್ಯಾರ್ಥಿಗಳ ಧ್ವನಿಯನ್ನು ಅಡಗಿಸಲು ಪ್ರಜಾಪ್ರಭುತ್ವ ವಿರೋಧಿ ಮಾರ್ಗಗಳನ್ನು ಅನುಸರಿಸುತ್ತಿದೆ” ಎಂದು ಆರೋಪಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅದೃಷ್ಟ ಮತ್ತು ಅಂಡಾಶಯದ ಲಾಟರಿ; ತಮ್ಮ ಯಶಸ್ಸಿನ ಸೀಕ್ರೆಟ್ ಬಿಚ್ಚಿಟ್ಟ ವಾರನ್ ಬಫೆಟ್ – Kannada News | Warren Buffett reveals Ovarian Lottery and Luck factors in his success

ವಾರನ್ ಬಫೆಟ್Image Credit source: Ankit Agrawal/Mint via Getty Images

ವಿಶ್ವದ ಅತ್ಯಂತ ಯಶಸ್ವಿ ಹಾಗೂ ಪ್ರಸಿದ್ಧ ಹೂಡಿಕೆದಾರರಲ್ಲಿ ಒಬ್ಬರಾದ ವಾರನ್ ಬಫೆಟ್ (Warren Buffett), ತಮ್ಮ ಅಪಾರ ಯಶಸ್ಸಿನ ಹಿಂದಿರುವ ಮುಖ್ಯ ರಹಸ್ಯ “ಅದೃಷ್ಟ” ಎಂದು ಮುಕ್ತವಾಗಿ ಒಪ್ಪಿಕೊಂಡಿದ್ದಾರೆ. ವಿಶ್ವದ ಟಾಪ್-10 ಶ್ರೀಮಂತರಲ್ಲಿ ಒಬ್ಬರಾದ ಅವರು, ಜಗತ್ತಿನ 800 ಕೋಟಿ ಜನಸಂಖ್ಯೆಯಲ್ಲಿ ತಾವು ಅತ್ಯಂತ ಅದೃಷ್ಟಶಾಲಿ 10 ಜನರಲ್ಲಿ ಒಬ್ಬರಿರಬಹುದು ಎಂದಿದ್ದಾರೆ. ತಮ್ಮ ಜೀವನದ ಯಶಸ್ಸಿಗೆ ‘ಅಂಡಾಶಯದ ಲಾಟರಿ’ಯೂ (Ovarian Lottery) ಕಾರಣವಿರಬಹುದು ಎಂದಿದ್ದಾರೆ ಅಮೆರಿಕದ ಈ ಹಿರಿಯ ಹೂಡಿಕೆದಾರ.

‘ಅಂಡಾಶಯದ ಲಾಟರಿ’ ಎಂದರೇನು?

ವಾರನ್ ಬಫೆಟ್ ಅವರು ತಮ್ಮ ಜೀವನದ ಯಶಸ್ಸನ್ನು ವಿವರಿಸಲು ‘ಅಂಡಾಶಯದ ಲಾಟರಿ’ (Ovarian Lottery) ಎಂಬ ಪರಿಕಲ್ಪನೆಯನ್ನು ಬಳಸುತ್ತಾರೆ. ಒಬ್ಬ ವ್ಯಕ್ತಿ ಯಾವ ದೇಶದಲ್ಲಿ, ಯಾವ ಕಾಲಘಟ್ಟದಲ್ಲಿ, ಯಾವ ಲಿಂಗದಲ್ಲಿ ಮತ್ತು ಎಂತಹ ಕುಟುಂಬದಲ್ಲಿ ಜನಿಸುತ್ತಾನೆ ಎಂಬುದು ಆತನ ನಿಯಂತ್ರಣದಲ್ಲಿರುವುದಿಲ್ಲ. ಇದು ಪೂರ್ಣವಾಗಿ ಲಾಟರಿ ಎತ್ತಿದಂತೆ.

ಇದನ್ನೂ ಓದಿ: ಹೆಲ್ತ್ ಇನ್ಷೂರೆನ್ಸ್ ಖರೀದಿಸುವ ಮುನ್ನ, ಈ 5 ಅಂಶಗಳು ಗಮನದಲ್ಲಿರಲಿ…

ಬಫೆಟ್ ಅವರು 1930ರಲ್ಲಿ ಅಮೆರಿಕದಲ್ಲಿ ಪುರುಷನಾಗಿ ಜನಿಸಿದ್ದನ್ನೇ ದೊಡ್ಡ ಅದೃಷ್ಟ ಎಂದು ಕರೆಯುತ್ತಾರೆ. “ಅಮೆರಿಕದಲ್ಲಿ ಜನಿಸುವ ಸಾಧ್ಯತೆ 30ರಲ್ಲಿ 1 ರಷ್ಟಿತ್ತು (30-to-1 against). ನಾನು ಆ ಲಾಟರಿಯನ್ನು ಗೆದ್ದೆ” ಎಂದು ಅವರು ಹೇಳುತ್ತಾರೆ. ನಿರ್ದಿಷ್ಟ ಕಾಲ, ನಿರ್ದಿಷ್ಟ ಪ್ರದೇಶ, ನಿರ್ದಿಷ್ಟ ಕುಟುಂಬದಲ್ಲಿ ಜನಿಸುವುದು ಅದೃಷ್ಟ. ಯಶಸ್ಸಿಗೆ ಬೇಕಾದ ವಾತಾವರಣ, ನೆರವು, ಪೋಷಣೆ ಎಲ್ಲವೂ ಸಿಗುತ್ತದೆ ಎಂಬುದು ಅವರ ಅನಿಸಿಕೆ.

ತಮ್ಮಲ್ಲಿರುವ ವ್ಯಾಪಾರ ಮತ್ತು ಹೂಡಿಕೆ ಮೌಲ್ಯಮಾಪನ ಮಾಡುವ ಕೌಶಲ್ಯವು ಅಮೆರಿಕದ ಬಂಡವಾಳಶಾಹಿ (Capitalist) ವ್ಯವಸ್ಥೆಯಲ್ಲಿ ಅಪಾರ ಯಶಸ್ಸು ನೀಡಿತು. ಅದೇ ತಾವು ಬೇರೆ ಯಾವುದಾದರೂ ದೇಶದಲ್ಲಿ ಅಥವಾ ಬೇರೆ ಕಾಲಘಟ್ಟದಲ್ಲಿ ಹುಟ್ಟಿದ್ದರೆ ಈ ಕೌಶಲ್ಯಕ್ಕೆ ಯಾವುದೇ ಮೌಲ್ಯವಿರುತ್ತಿರಲಿಲ್ಲ ಎಂದು ಬಫೆಟ್ ತಮ್ಮ ಅನಿಸಿಕೆಯನ್ನು ಸಮರ್ಥಿಸಿಕೊಳ್ಳುತ್ತಾರೆ.

ತಂದೆ ಪ್ಲಂಬರ್ ಆಗಿದ್ದರೆ ಸಾಧ್ಯವಿತ್ತೆ?

ಪ್ರತಿಯೊಬ್ಬರಿಗೂ ಹುಟ್ಟಿನಿಂದಲೇ ಸಮಾನ ಅವಕಾಶಗಳು ಸಿಗುವುದಿಲ್ಲ. ತಮ್ಮ ತಂದೆ ಸ್ಟಾಕ್ ಬ್ರೋಕರ್ ಆಗಿದ್ದರಿಂದ ಚಿಕ್ಕ ವಯಸ್ಸಲ್ಲೇ ಷೇರು ಪ್ರಪಂಚಕ್ಕೆ ಕಾಲಿಟ್ಟು ಈಜಿದೆ. ಅದೇ ತಮ್ಮ ತಂದೆ ಪ್ಲಂಬರ್ ಆಗಿದ್ದರೆ ಅದು ಸಾಧ್ಯವಾಗುತ್ತಿರಲಿಲ್ಲ ಎಂದು ಬರ್ಕ್​ಶೈರ್ ಹಾಥವೇ ಉದ್ಯಮ ಸಾಮ್ರಾಜ್ಯದ ಅಧಿಪತಿಯಾದ ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ಆದಾಯ ತೆರಿಗೆ ನೋಟೀಸ್ ಬಂತಾ? ಅದು ವಂಚಕರ ಜಾಲವಾ? ಆನ್​ಲೈನ್​ನಲ್ಲೇ ಪರಿಶೀಲಿಸಿ

ಕೆರೆಯ ನೀರನ್ನು ಕೆರೆಗೆ ಚೆಲ್ಲಿ…

ಹುಟ್ಟಿನ ಲಾಟರಿಯಲ್ಲಿ “ತಪ್ಪಾದ ಟಿಕೆಟ್” ಪಡೆದವರಿಗೆ (ಅಂದರೆ ಬಡತನ ಅಥವಾ ಕಷ್ಟದ ಪರಿಸ್ಥಿತಿಯಲ್ಲಿ ಹುಟ್ಟಿದವರಿಗೆ) ಸಮಾಜ ಮತ್ತು ಸರ್ಕಾರ ನೆರವಾಗಬೇಕು. ಶ್ರೀಮಂತರು ತಮಗಿರುವ ಸೌಲಭ್ಯ ಮತ್ತು ಅದೃಷ್ಟಕ್ಕೆ ಅನುಗುಣವಾಗಿ ಹೆಚ್ಚಿನ ತೆರಿಗೆ ಪಾವತಿಸಬೇಕು ಮತ್ತು ಸಮಾಜಕ್ಕೆ ಮರಳಿ ನೀಡಬೇಕು ಎಂದು ಬಫೆಟ್ ಪ್ರತಿಪಾದಿಸುತ್ತಾರೆ.

ಬಫೆಟ್ ಅವರ ಪ್ರಸಿದ್ಧ ಮಾತು

“ನನ್ನ ಕೌಶಲ್ಯವನ್ನು ಈ ಸಮಾಜವು ವಿಪರೀತವಾಗಿ ಪುರಸ್ಕರಿಸಿದೆ. ಆದರೆ, ದೇಶದ ಗಡಿಯಲ್ಲಿ ಹೋರಾಡುವ ಯೋಧ, ಶಿಕ್ಷಕ ಅಥವಾ ವೈದ್ಯರಿಗಿಂತ ನಾನೇನೂ ಹೆಚ್ಚು ಅರ್ಹನೆಂದಲ್ಲ, ನಾನು ಕೇವಲ ಸರಿಯಾದ ಸಮಯದಲ್ಲಿ ಸರಿಯಾದ ಸ್ಥಳದಲ್ಲಿ ಜನಿಸಿದ ಅದೃಷ್ಟಶಾಲಿ ಅಷ್ಟೇ” ಎಂದು ವಾರನ್ ಬಫೆಟ್ ವಿನಮ್ರವಾಗಿ ಹೇಳಿಕೊಳ್ಳುತ್ತಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On – 7:09 pm, Tue, 21 July 26

Source link

ಕೃಷ್ಣಾ ನದಿಗೆ ಹರಿದುಬಂತು 60,000 ಕ್ಯೂಸೆಕ್ ನೀರು: ಜಲಾವೃತವಾಯ್ತು ಸೇತುವೆ, ಗ್ರಾಮಗಳ ನಡುವೆ ಸಂಪರ್ಕ ಕಡಿತ

ಚಿಕ್ಕೋಡಿ, ಜು.21: ಮಹಾರಾಷ್ಟ್ರದ ಪಶ್ಚಿಮಘಟ್ಟ ಪ್ರದೇಶದಲ್ಲಿ ಅಬ್ಬರದ ಮಳೆಯಿಂದಾಗಿ ಕೃಷ್ಣಾ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿದುಬರುತ್ತಿದೆ. ಇದರಿಂದಾಗಿ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನಲ್ಲಿರುವ ಯಡೂರು ಮತ್ತು ಕಲ್ಲೋಳ ಗ್ರಾಮಗಳನ್ನು ಸಂಪರ್ಕಿಸುವ ಸೇತುವೆ ಸಂಪೂರ್ಣವಾಗಿ ಜಲಾವೃತಗೊಂಡಿದೆ. ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯ ಪರಿಣಾಮವಾಗಿ ನದಿ ನೀರಿನ ಮಟ್ಟದಲ್ಲಿ ಗಣನೀಯ ಏರಿಕೆ ಕಂಡುಬಂದಿದೆ. ಪ್ರಸ್ತುತ ಕೃಷ್ಣಾ ನದಿಯಲ್ಲಿ ಸುಮಾರು 60,000 ಕ್ಯೂಸೆಕ್ ನೀರು ಹರಿಯುತ್ತಿದ್ದು, ಇದು ಪ್ರವಾಹ ಪರಿಸ್ಥಿತಿಗೆ ಕಾರಣವಾಗಿದೆ. ನದಿ ಮಟ್ಟ ಏರಿಕೆಯಾಗಿದ್ದರಿಂದ ಸೇತುವೆ ಮುಳುಗಡೆಯಾಗಿದ್ದು, ಯಡೂರು ಮತ್ತು ಕಲ್ಲೋಳ ಗ್ರಾಮಗಳ ನಡುವಿನ ಸಂಪರ್ಕ ಕಡಿತಗೊಂಡಿದೆ. ಸ್ಥಳೀಯರು ಮತ್ತು ವಾಹನ ಸವಾರರು ಸಂಚಾರಕ್ಕೆ ತೊಂದರೆ ಅನುಭವಿಸುತ್ತಿದ್ದಾರೆ. ಪರಿಸ್ಥಿತಿಯನ್ನು ಗಮನಿಸುತ್ತಿದ್ದು, ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪ್ರಧಾನಿ ಮನೆ ಮುಂದೆ ಕರ್ನಾಟಕದ ಸಿಎಂ ಡಿ.ಕೆ. ಶಿವಕುಮಾರ್ ಕೂಡ ಧರಣಿ – Kannada News | Karnataka CM DK Shivakumar also joins the protest outside th PM Residence in Delhi

ನವದೆಹಲಿ, ಜುಲೈ 21: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ (NEET Paper Leak)  ಹಗರಣವನ್ನು ಖಂಡಿಸಿ ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ನವದೆಹಲಿಯ ಲೋಕ್ ಕಲ್ಯಾಣ್ ಮಾರ್ಗದಲ್ಲಿರುವ ಪ್ರಧಾನಮಂತ್ರಿಗಳ ಅಧಿಕೃತ ನಿವಾಸದ ಮುಂಭಾಗ ನಡೆಯುತ್ತಿರುವ ಕಾಂಗ್ರೆಸ್‌ನ ಬೃಹತ್ ಧರಣಿ ಸತ್ಯಾಗ್ರಹದಲ್ಲಿ ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar), ಕೇರಳದ ಮುಖ್ಯಮಂತ್ರಿ ಸತೀಶನ್ ಸೇರಿದಂತೆ ಹಲವು ಹಿರಿಯ ನಾಯಕರು ಬೆಂಬಲ ವ್ಯಕ್ತಪಡಿಸಿದ್ದಾರೆ.

ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಈ ಪ್ರತಿಭಟನಾ ಸ್ಥಳಕ್ಕೆ ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಹಾಗೂ ಕೇರಳದ ಸಿಎಂ ವಿ.ಡಿ. ಸತೀಶನ್ ಸೇರಿದಂತೆ ಪಕ್ಷದ ಪ್ರಮುಖ ರಾಷ್ಟ್ರೀಯ ಹಾಗೂ ರಾಜ್ಯಮಟ್ಟದ ನಾಯಕರು ಆಗಮಿಸಿ ಧರಣಿಯಲ್ಲಿ ಕುಳಿತಿದ್ದಾರೆ.

ದೇಶಾದ್ಯಂತ ಲಕ್ಷಾಂತರ ಯುವಕರ ಮತ್ತು ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿರುವ ನೀಟ್ (NEET) ಸೇರಿದಂತೆ ಪ್ರಮುಖ ಪರೀಕ್ಷೆಗಳ ಪ್ರಶ್ನೆಪತ್ರಿಕೆ ಸೋರಿಕೆ ಹಗರಣದ ಸಂಪೂರ್ಣ ಹೊಣೆಯನ್ನು ಕೇಂದ್ರ ಸರ್ಕಾರ ಹೊರಬೇಕು. ತಕ್ಷಣವೇ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕು ಎಂದು ಪ್ರತಿಭಟನಾನಿರತ ನಾಯಕರು ಕಟ್ಟುನಿಟ್ಟಾಗಿ ಆಗ್ರಹಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬ್ಯಾಂಕ್ ಅಕೌಂಟ್ ಹ್ಯಾಕ್ ಆದ್ರೆ ಮೊದ್ಲು ಈ ಕೆಲಸ ಮಾಡಿ – Kannada News | Bank Account: If your bank account gets hacked, do this first

ಇತ್ತೀಚೆಗಿನ ದಿನಗಳಲ್ಲಿ ಬ್ಯಾಂಕ್‌ಗೆ ತೆರಳಿ ವ್ಯವಹಾರ ಮಾಡುವುದಕ್ಕಿಂತ ಡಿಜಿಟಲ್ ಬ್ಯಾಂಕಿಂಗ್‌ನನ್ನು  (Digital Banking) ಹೆಚ್ಚು ಅವಲಂಬಿಸಿಕೊಂಡಿದ್ದಾರೆ. ಇತ್ತ ಡಿಜಿಟಲ್ ಬ್ಯಾಂಕಿಂಗ್ ಶುರುವಾದ ಬಳಿಕವಂತೂ ಹ್ಯಾಕರ್ಸ್ ಗಳ ಹಾವಳಿ ಹೆಚ್ಚಾಗಿದೆ. ಅಕೌಂಟ್ ಹ್ಯಾಕ್ ಮಾಡಿ ಖಾತೆಯಲ್ಲಿದ್ದ ಹಣವನ್ನು ದೋಚುತ್ತಿದ್ದಾರೆ. ಅಕೌಂಟ್ ಹ್ಯಾಕ್ ಆದ್ರೆ ನೀವು ಈ ಕೆಲವು ಸಲಹೆಗಳನ್ನು ಅನುಸರಿಸುವುದು ಸುರಕ್ಷತೆ ದೃಷ್ಟಿಯಿಂದ ಉತ್ತಮ.

ಬ್ಯಾಂಕ್ ಅಕೌಂಟ್‌ ಹ್ಯಾಕ್ ಆದ್ರೆ ನೀವು ಮೊದ್ಲು ಈ ಕೆಲಸ ಮಾಡಿ

ಹಂತ 1: ನಿಮ್ಮ ಬ್ಯಾಂಕಿನ ಅಧಿಕೃತ ಗ್ರಾಹಕ ಸೇವೆಗೆ ಕರೆ ಮಾಡಿ ಹಾಗೂ ನಿಮ್ಮ ಖಾತೆ ಹ್ಯಾಕ್ ಆಗಿರುವ ಬಗ್ಗೆ ಮಾಹಿತಿ ನೀಡಿ.

ಹಂತ 2: ನಿಮ್ಮ ಡೆಬಿಟ್, ಕ್ರೆಡಿಟ್ ಕಾರ್ಡ್‌ಗಳು ಹಾಗೂ ನೆಟ್‌ಬ್ಯಾಂಕಿಂಗ್ ನ್ನು ತಕ್ಷಣ ವೇ ಬ್ಲಾಕ್ ಮಾಡಿ.

ಹಂತ 3: ನಿಮ್ಮ ಎಲ್ಲಾ ಆನ್‌ಲೈನ್ ಬ್ಯಾಂಕಿಂಗ್ ಪಾಸ್‌ವರ್ಡ್‌ಗಳು ಮತ್ತು ಇಮೇಲ್ ಪಾಸ್‌ವರ್ಡ್‌ಗಳನ್ನು ತಕ್ಷಣವೇ ಬದಲಾಯಿಸಿ.

ಹಂತ 4: ನಿಮ್ಮ ಮೊಬೈಲ್ ಗೆ ಬಂದ ವಂಚನೆ ಸಂದೇಶಗಳು, ನಿಮ್ಮ ಖಾತೆಯಿಂದ ಹಣ ಕಡಿತಗೊಂಡ ವಿವರಗಳು ಹಾಗೂ ಹ್ಯಾಕರ್ ಗಳು ಕರೆ ಮಾಡಿದ ಮೊಬೈಲ್ ನಂಬರ್ ಗಳನ್ನು ಇಟ್ಟುಕೊಳ್ಳಿ.

ಹಂತ 5: ನಿಮ್ಮ ಹತ್ತಿರದ ಸೈಬರ್ ಅಪರಾಧ ಪೊಲೀಸ್ ಠಾಣೆಗೆ ಭೇಟಿ ನೀಡಿ ಲಿಖಿತ ದೂರನ್ನು ದಾಖಲಿಸಿ.

ಇದನ್ನೂ ಓದಿ: UPI without Internet: ಟ್ಯಾಪ್ ಟು ಪೇ, ಹೊಸ ಯುಪಿಐ ಫೀಚರ್; ಇಂಟರ್ನೆಟ್ ಇಲ್ಲದ ಫ್ಲೈಟ್, ಅಂಡರ್​ಗ್ರೌಂಡ್ ಮೆಟ್ರೋಗೂ ಹಣ ಪಾವತಿಸಿ

ಸಾಮಾನ್ಯವಾಗಿ ಕೇಳುವ ಪ್ರಶ್ನೆ ಮತ್ತು ಉತ್ತರ (FAQs)

ಪ್ರಶ್ನೆ: ಬ್ಯಾಂಕ್ ಖಾತೆ ಹ್ಯಾಕ್ ಆಗದಂತೆ ಎಚ್ಚರ ವಹಿಸುವುದು ಹೇಗೆ?

ಉತ್ತರ: ಬ್ಯಾಂಕ್ ಖಾತೆಗೆ ದೊಡ್ಡಕ್ಷರ, ಸಂಖ್ಯೆಗಳು ಹಾಗೂ ಚಿಹ್ನೆಗಳನ್ನು ಒಳಗೊಂಡ ಬಲವಾದ ಪಾಸ್ ವರ್ಡ್ ಬಳಸಿ

ಪ್ರಶ್ನೆ: ಬ್ಯಾಂಕ್ ಅಕೌಂಟ್ ಹ್ಯಾಕ್ ಆದ್ರೆ ಮೊದ್ಲು ಏನು ಮಾಡ್ಬೇಕು?

ಉತ್ತರ: ನಿಮ್ಮ ಆನ್‌ಲೈನ್ ಬ್ಯಾಂಕಿಂಗ್ ಪಾಸ್‌ವರ್ಡ್‌ಗಳು ಮತ್ತು ಇಮೇಲ್ ಪಾಸ್‌ವರ್ಡ್‌ಗಳನ್ನು ತಕ್ಷಣವೇ ಬದಲಾಯಿಸಿ.

ಪ್ರಶ್ನೆ: ಬ್ಯಾಂಕ್ ಅಕೌಂಟ್ ಹ್ಯಾಕ್ ಆದಾಗ ಸೈಬರ್ ಕ್ರೈಂಗೆ ದೂರು ಸಲ್ಲಿಸುವುದು ಹೇಗೆ?

ಉತ್ತರ: ಬ್ಯಾಂಕ್ ಅಕೌಂಟ್ ಹ್ಯಾಕ್ ಆದಾಗ ರಾಷ್ಟ್ರೀಯ ಸೈಬರ್ ಅಪರಾಧ ಸಹಾಯವಾಣಿಗೆ ಕರೆ ಮಾಡಿ ದೂರು ನೀಡಿ.

ಇನ್ನಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ತೀವ್ರ ಸ್ವರೂಪ ಪಡೆದ ಬಲ್ಡೋಟಾ ಹೋರಾಟದ ಕಿಚ್ಚು, ಕಬ್ಬಿಣದ ಬಾಗಿಲು ಮುರಿದು ಕಾರ್ಖಾನೆಗೆ ನುಗ್ಗಿದ ರೈತರು – Kannada News | Farmers Protest Intensifies Against Baldota Steel Factory In Koppal, Door Cut

ಕೊಪ್ಪಳ, (ಜುಲೈ 21): ಕೊಪ್ಪಳದಲ್ಲಿ ಬಲ್ಡೋಟಾ ಕಾರ್ಖಾನೆ (Baldota Steel Factory )ವಿರುದ್ಧರ ರೈತರ ಪ್ರತಿಭಟನೆ ತಣ್ಣಗಾಗುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ. ಕಳೆದ ಹಲವು ದಿನಗಳಿಂದ ಬಲ್ಡೋಟಾ ಕಾರ್ಖಾನೆ ತೆರವುಗೊಳಿಸುವಂತೆ ರೈತರು ಧರಣಿ ನಡೆಸಿದ್ದು, ಇದೀಗ ಈ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಹೌದು.. ಬಲ್ಡೋಟಾ ಕಾರ್ಖಾನೆಯೊಳಗಿರುವ ಕೆರೆಯನ್ನು ಸಾರ್ವಜನಿಕ ಮುಕ್ತ ಮಾಡುವಂತೆ ಆಗ್ರಹಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ವಿಕೋಪಕ್ಕೆ ತಿರುಗಿದೆ. ಕಬ್ಬಿಣದ ಡೋರ್ ಮುರಿದು ರೈತರು ಕಾರ್ಖಾನೆಗೆ ನುಗ್ಗಿದ್ದಾರೆ. ಇನ್ನು ಪ್ರತಿಭಟನೆ ವೇಳೆ ಏಕಾಏಕಿ ರೈತ ಯಮನೂರಪ್ಪ ಕೆರೆಗೆ ಹಾರಿದ್ದು, ಬಳಿಕ ಈಜಿ ದಡ ಸೇರಿದ್ದಾರೆ. ಇನ್ನು ಪ್ರತಿಭಟನೆ ವಿಕೋಪಕ್ಕೆ ಹೋಗುತ್ತಿದ್ದಂತೆಯೇ ಸ್ಥಳಕ್ಕೆ ಬಳ್ಳಾರಿ ವಲಯ ಐಜಿಪಿ ಹರ್ಷ ದೌಡಾಯಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Exit mobile version