Gold Rate: ಚಿನ್ನದ ಬೆಲೆ ಗ್ರಾಮ್​ಗೆ 70 ರೂ ಹೆಚ್ಚಳ; ಬೆಳ್ಳಿ ಬೆಲೆ ಬದಲಾವಣೆ ಇಲ್ಲ – Kannada News | Gold Price Today on 21st July 2026, Gold And Silver Rates In Bengaluru, Delhi, Mumbai | Latest News in Kannada

ನವದೆಹಲಿ, ಜುಲೈ 21: ಚಿನ್ನದ ಬೆಲೆಯ ಸತತ ಏರಿಕೆ ಮುಂದುವರಿದಿದೆ. ನಿನ್ನೆ ಗ್ರಾಮ್​ಗೆ 15 ರೂ ಹೆಚ್ಚಿದ್ದ ಚಿನ್ನದ ಬೆಲೆ (Gold Price) ಇವತ್ತು 70 ರೂ ಜಂಪ್ ಪಡೆದಿದೆ. ಕಳೆದ ಮೂರ್ನಾಲ್ಕು ದಿನದಲ್ಲಿ ಬಂಗಾರದ ದರ ಒಂದು ಗ್ರಾಮ್​ಗೆ 155 ರೂನಷ್ಟು ಹೆಚ್ಚಳಗೊಂಡಿದೆ. ನಿನ್ನೆ 5 ರೂ ಹೆಚ್ಚಿದ್ದ ಬೆಳ್ಳಿ ಬೆಲೆಯಲ್ಲಿ ಇವತ್ತು ಬದಲಾವಣೆ ಆಗಿಲ್ಲ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,32,200 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,44,220 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 23,500 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,32,200 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 23,500 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 24,000 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಜುಲೈ 21ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,422 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,220 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 10,816 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 235 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,422 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,220 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 235 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 13,220 ರೂ
  • ಚೆನ್ನೈ: 13,220 ರೂ
  • ಮುಂಬೈ: 13,220 ರೂ
  • ದೆಹಲಿ: 13,235 ರೂ
  • ಕೋಲ್ಕತಾ: 13,220 ರೂ
  • ಕೇರಳ: 13,220 ರೂ
  • ಅಹ್ಮದಾಬಾದ್: 13,225 ರೂ
  • ಜೈಪುರ್: 13,235 ರೂ
  • ಲಕ್ನೋ: 13,235 ರೂ
  • ಭುವನೇಶ್ವರ್: 13,220 ರೂ

ಇದನ್ನೂ ಓದಿ: ಎಥನಾಲ್ ಮಿಶ್ರಿತ ಪೆಟ್ರೋಲ್ ಯೋಜನೆಯನ್ನು ವೈಜ್ಞಾನಿಕವಾಗಿ, ಹಂತ ಹಂತವಾಗಿ ಜಾರಿಗೊಳಿಸಲಾಗಿದೆ: ಸಚಿವ ಸುರೇಶ್ ಗೋಪಿ

ವಿದೇಶಗಳಲ್ಲಿ 24 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 540 ರಿಂಗಿಟ್ (12,722 ರುಪಾಯಿ)
  • ದುಬೈ: 483 ಡಿರಾಮ್ (12,665 ರುಪಾಯಿ)
  • ಅಮೆರಿಕ: 132.50 ಡಾಲರ್ (12,763 ರುಪಾಯಿ)
  • ಸಿಂಗಾಪುರ: 177.70 ಸಿಂಗಾಪುರ್ ಡಾಲರ್ (13,267 ರುಪಾಯಿ)
  • ಕತಾರ್: 484.50 ಕತಾರಿ ರಿಯಾಲ್ (12,803 ರೂ)
  • ಸೌದಿ ಅರೇಬಿಯಾ: 499 ಸೌದಿ ರಿಯಾಲ್ (12,799 ರುಪಾಯಿ)
  • ಓಮನ್: 51.35 ಒಮಾನಿ ರಿಯಾಲ್ (12,846 ರುಪಾಯಿ)
  • ಕುವೇತ್: 40.42 ಕುವೇತಿ ದಿನಾರ್ (12,657 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 235 ರೂ
  • ಚೆನ್ನೈ: 240 ರೂ
  • ಮುಂಬೈ: 235 ರೂ
  • ದೆಹಲಿ: 235 ರೂ
  • ಕೋಲ್ಕತಾ: 235 ರೂ
  • ಕೇರಳ: 240 ರೂ
  • ಅಹ್ಮದಾಬಾದ್: 235 ರೂ
  • ಜೈಪುರ್: 235 ರೂ
  • ಲಕ್ನೋ: 235 ರೂ
  • ಭುವನೇಶ್ವರ್: 240 ರೂ
  • ಪುಣೆ: 235

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಪ್ರಶ್ನೆಪತ್ರಿಕೆ ಸೋರಿಕೆ ತಡೆಯುವುದು ಕೇವಲ ಸರ್ಕಾರದ ಜವಾಬ್ದಾರಿಯಲ್ಲ, ರಾಷ್ಟ್ರೀಯ ಜವಾಬ್ದಾರಿ: ಎನ್​ಡಿಎ ಸಭೆಯಲ್ಲಿ ಮೋದಿ – Kannada News | NEET Paper Leak: PM Modi Demands Harsh Punishments and Flawless Exam System

ನವದೆಹಲಿ, ಜುಲೈ 21: ಆಡಳಿತಾರೂಢ ಎನ್‌ಡಿಎ (NDA) ಸಂಸದೀಯ ಪಕ್ಷದ ‘ಮಂಗಲ್ ಮಿಲನ್’ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನೀಟ್ (NEET) ಮತ್ತು ಇತರ ಪರೀಕ್ಷೆಗಳ ಪ್ರಶ್ನೆಪತ್ರಿಕೆ ಸೋರಿಕೆ ವಿವಾದದ ಕುರಿತು ಅತ್ಯಂತ ಗಂಭೀರವಾಗಿ ಮಾತನಾಡಿದ್ದಾರೆ. “ದೇಶದಲ್ಲಿ ಪ್ರಶ್ನೆಪತ್ರಿಕೆ ಸೋರಿಕೆಯನ್ನು ತಡೆಗಟ್ಟುವುದು ಸರ್ಕಾರದ ಕೇವಲ ಕರ್ತವ್ಯವಲ್ಲ, ಅದೊಂದು ‘ರಾಷ್ಟ್ರೀಯ ಜವಾಬ್ದಾರಿ’ ಎಂದು ಪ್ರಧಾನಿ ಮೋದಿ ಪ್ರತಿಪಾದಿಸಿದ್ದಾರೆ. ಸಭೆಯ ನಂತರ ಕೇಂದ್ರ ಸಚಿವ ಕಿರಣ್ ರಿಜಿಜು ಅವರು ಪ್ರಧಾನಿಯವರ ಮಾತುಗಳನ್ನು ಮಾಧ್ಯಮಗಳಿಗೆ ವಿವರಿಸಿದರು.

ಆರೋಪಿಗಳಿಗೆ ಅತ್ಯಂತ ಕಠಿಣ ಶಿಕ್ಷೆಯಾಗಲಿ
ಪರೀಕ್ಷಾ ಅಕ್ರಮದಲ್ಲಿ ಭಾಗಿಯಾಗಿರುವ ಅಪರಾಧಿಗಳಿಗೆ ಯಾವುದೇ ಕಾರಣಕ್ಕೂ ವಿನಾಯಿತಿ ನೀಡಬಾರದು ಎಂದಿರುವ ಪ್ರಧಾನಿ. ಪರೀಕ್ಷಾ ಪ್ರಕ್ರಿಯೆಯನ್ನು ಕಲುಷಿತಗೊಳಿಸಿ, ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಆಟವಾಡುವ ಕಿಡಿಗೇಡಿಗಳಿಗೆ ಕಾನೂನಿನಡಿಯಲ್ಲಿ ಸಿಗಬಹುದಾದ ಅತ್ಯಂತ ಕಠಿಣ ಶಿಕ್ಷೆಯನ್ನು ವಿಧಿಸಬೇಕು ಎಂದು ಪ್ರಧಾನಿ ಮೋದಿ ಖಡಕ್ ಆಗಿ ಸೂಚಿಸಿದ್ದಾರೆ.

ಭವಿಷ್ಯದಲ್ಲಿ ಯಾವುದೇ ರೀತಿಯ ಸೋರಿಕೆ ನಡೆಯದಂತೆ ಅತ್ಯಂತ ಪಾರದರ್ಶಕ ಹಾಗೂ ದೋಷರಹಿತ ಪರೀಕ್ಷಾ ವ್ಯವಸ್ಥೆಯನ್ನು ರೂಪಿಸಲು ಸರ್ಕಾರಿ ಮತ್ತು ಸಾಂಸ್ಥಿಕ ಮಟ್ಟದಲ್ಲಿ ಸಾಮೂಹಿಕ ಪ್ರಯತ್ನಗಳು ನಡೆಯಬೇಕೆಂದು ಕರೆ ನೀಡಿದ್ದಾರೆ. ಸಂಸತ್ತಿನ ಕಲಾಪಗಳು ಸುಗಮವಾಗಿ ನಡೆಯುವಂತೆ ಮಾಡಲು ಪ್ರಧಾನಿ ನಾಯಕರೊಂದಿಗೆ ಚರ್ಚಿಸಿದರು.

ಮತ್ತಷ್ಟು ಓದಿ: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ ದೆಹಲಿಯಲ್ಲಿ ತೀವ್ರ ಪ್ರತಿಭಟನೆ; ಅಮಿತ್ ಶಾ- ಧರ್ಮೇಂದ್ರ ಪ್ರಧಾನ್ ತುರ್ತು ಸಭೆ

ರಾಜಕೀಯ ಭಿನ್ನಾಭಿಪ್ರಾಯಗಳು ಏನೇ ಇರಲಿ, ದೇಶದ ಭವಿಷ್ಯ ಮತ್ತು ಯುವಜನತೆಯ ಕಲ್ಯಾಣಕ್ಕಾಗಿ ಕೆಲಸ ಮಾಡುವ ಜವಾಬ್ದಾರಿ ಪ್ರತಿಯೊಬ್ಬ ಸಂಸದರ ಮೇಲಿದೆ. ಶಾಸಕಾಂಗ ವ್ಯವಹಾರಗಳನ್ನು ಬೆಂಬಲಿಸಲು ಎನ್‌ಡಿಎ ಮೈತ್ರಿಕೂಟದ ಎಲ್ಲಾ ನಾಯಕರು ಒಗ್ಗಟ್ಟಿನಿಂದ ಇರಬೇಕು. ಹಾಗೆಯೇ ಸಂಸತ್ತಿನಲ್ಲಿ ವಿರೋಧ ಪಕ್ಷಗಳು ಸಹ ಗದ್ದಲ ಎಬ್ಬಿಸದೆ ರಚನಾತ್ಮಕವಾಗಿ ದೇಶದ ಹಿತದೃಷ್ಟಿಯಿಂದ ಭಾಗವಹಿಸಬೇಕು” ಎಂದು ಪ್ರಧಾನಿ ಮೋದಿ ಆಶಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

‘ಸಲ್ಮಾನ್ ಫಾರ್ಮ್‌ಹೌಸ್‌ಗೆ ಹೋಗೋದು ಸುಲಭ, ಆದ್ರೆ ವಾಪಸ್ ಬರೋದು ಭಾಯ್ ಇಷ್ಟ’ – Kannada News | Salman Khan Panvel Farmhouse Secrets: Aayush Sharma Reveals Entry Rules and Bhai Exit

ಬಾಲಿವುಡ್ ಸುಲ್ತಾನ್ ಸಲ್ಮಾನ್ ಖಾನ್ ಪನ್ವೇಲ್ ಫಾರ್ಮ್‌ಹೌಸ್ ಸದಾ ಸುದ್ದಿಯಲ್ಲಿರುತ್ತದೆ. ಸಿನಿಮಾ ತಾರೆಯರು ಹಾಗೂ ಆಪ್ತರಿಂದ ತುಂಬಿ ತುಳುಕುವ ಈ ಐಷಾರಾಮಿ ಫಾರ್ಮ್‌ಹೌಸ್ ಪ್ರವೇಶದ ಬಗ್ಗೆ ನಟನ ಸೋದರ ಭಾವ ಆಯುಷ್ ಶರ್ಮಾ ಇತ್ತೀಚಿನ ಸಂದರ್ಶನವೊಂದರಲ್ಲಿ ಅತ್ಯಂತ ಆಸಕ್ತಿದಾಯಕ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.

ಪ್ರವೇಶಕ್ಕೂ ಮುನ್ನ ಸಲ್ಮಾನ್ ಪರ್ಮಿಷನ್ ಕಡ್ಡಾಯ

‘ದಿ ಲಲ್ಲನ್‌ಟಾಪ್’ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಆಯುಷ್, ‘ಸಲ್ಮಾನ್ ಖಾನ್ ಅವರ ಫಾರ್ಮ್‌ಹೌಸ್‌ಗೆ ಯಾರೂ ಅಷ್ಟು ಸುಲಭವಾಗಿ ಹೋಗಲು ಸಾಧ್ಯವಿಲ್ಲ. ಸ್ವತಃ ಸಲ್ಮಾನ್ ಅವರೇ ಆಹ್ವಾನ ನೀಡಿದವರಿಗೆ ಮಾತ್ರ ಅಲ್ಲಿಗೆ ಎಂಟ್ರಿ ಇರುತ್ತದೆ. ಭಾಯ್ ಅನುಮತಿಯಿಲ್ಲದೆ ಯಾರೂ ಆ ಜಾಗಕ್ಕೆ ಕಾಲಿಡಲು ಸಾಧ್ಯವಿಲ್ಲ’ ಎಂದಿದ್ದಾರೆ.

ಹೋಗೋದು ನಿಮ್ಮಿಷ್ಟ, ವಾಪಸ್ ಬರೋದು ಸಲ್ಮಾನ್ ಇಷ್ಟ

ಫಾರ್ಮ್‌ಹೌಸ್ ಒಳಗಿನ ಮತ್ತೊಂದು ಮಜಾದ ವಿಚಾರವನ್ನು ಹಂಚಿಕೊಂಡ ಆಯುಷ್, ‘ಅಲ್ಲಿಗೆ ಹೋದ ಮೇಲೆ ಇನ್ನೊಂದು ಕುತೂಹಲಕಾರಿ ಘಟನೆ ನಡೆಯುತ್ತದೆ. ಅತಿಥಿಗಳು ತಮ್ಮ ಇಷ್ಟದಂತೆ ಅಲ್ಲಿಗೆ ಹೋಗಬಹುದು. ಆದರೆ, ಅಲ್ಲಿಂದ ಯಾವಾಗ ಹೊರಡಬೇಕು ಎಂಬುದನ್ನು ಸಲ್ಮಾನ್ ಖಾನ್ ಅವರೇ ನಿರ್ಧರಿಸುತ್ತಾರೆ! ಅವರು ಗ್ರೀನ್ ಸಿಗ್ನಲ್ ಕೊಡುವವರೆಗೂ ಅತಿಥಿಗಳು ಅಲ್ಲೇ ಕಾಯಬೇಕಾಗುತ್ತದೆ’ ಎಂದು ನಗುತ್ತಾ ರಹಸ್ಯ ಬಿಚ್ಚಿಟ್ಟಿದ್ದಾರೆ.

ಇದನ್ನೂ ಓದಿ: ಸಲ್ಮಾನ್ ಖಾನ್ ವಿಡಿಯೋ ನೋಡಿ ಅಭಿಮಾನಿಗಳಲ್ಲಿ ಆತಂಕ: ಸಲ್ಲುಗೆ ಕಾಡುತ್ತಿದೆಯೇ ಅನಾರೋಗ್ಯ?

ಮೊದಲ ಭೇಟಿಯಲ್ಲೇ ಕಿವಿಮಾತು ಹೇಳಿದ್ದ ಭಾಯ್‌ಜಾನ್

ಇದೇ ಸಂದರ್ಶನದಲ್ಲಿ ಆಯುಷ್, ತಾವು ನಟನಾಗಲು ಹೆಣಗಾಡುತ್ತಿದ್ದ ದಿನಗಳಲ್ಲಿ ಸಲ್ಮಾನ್ ಖಾನ್ ಅವರನ್ನು ಮೊದಲ ಬಾರಿಗೆ ಭೇಟಿಯಾದ ಕ್ಷಣವನ್ನು ನೆನಪಿಸಿಕೊಂಡಿದ್ದಾರೆ. ‘ಆಗ ಸಲ್ಮಾನ್ ನನ್ನನ್ನು ನೋಡಿ, ನಿನ್ನಲ್ಲಿ ಉತ್ತಮ ನಟನಾಗುವ ಸಾಮರ್ಥ್ಯವಿದೆ. ಆದರೆ ನೀನಿನ್ನೂ ಸಂಪೂರ್ಣವಾಗಿ ಸಿದ್ಧವಾಗಿಲ್ಲ ಎಂದು ನೇರವಾಗಿಯೇ ಹೇಳಿದರು. ಅಲ್ಲದೆ, ನಟನೆಯ ಜೊತೆಗೆ ಇತರ ವಿಷಯಗಳ ಮೇಲೂ ಗಮನಹರಿಸಿ ಶ್ರಮಪಡುವಂತೆ ಸಲಹೆ ನೀಡಿದ್ದರು’ ಎಂದು ಹಳೇ ನೆನಪನ್ನು ಹಂಚಿಕೊಂಡಿದ್ದಾರೆ.

ಖಾಸಗಿ ಬದುಕಿನ ಝಲಕ್

ಸಲ್ಮಾನ್ ಖಾನ್ ಅವರ ಸಹೋದರಿ ಅರ್ಪಿತಾ ಖಾನ್ ಮತ್ತು ಆಯುಷ್ ಶರ್ಮಾ ಅವರ ವಿವಾಹವು ನವೆಂಬರ್ 18, 2014ರಂದು ಹೈದರಾಬಾದ್‌ನ ಐತಿಹಾಸಿಕ ಫಲಕ್ನುಮಾ ಅರಮನೆಯಲ್ಲಿ ನಡೆದಿತ್ತು. ಪ್ರಸ್ತುತ ಈ ದಂಪತಿಗೆ ಅಹಿಲ್ ಮತ್ತು ಆಯತ್ ಎಂಬ ಇಬ್ಬರು ಮಕ್ಕಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ರೋಹಿತ್-ಕೊಹ್ಲಿಯನ್ನು ಕೈಬಿಡುವ ಧೈರ್ಯ ಮಾಡಬೇಡಿ: ಅಶ್ವಿನ್ ಎಚ್ಚರಿಕೆ – Kannada News | Rohit Sharma, Virat Kohli Are Untouchable: R Ashwin Blasts Critics

ಟೀಮ್ ಇಂಡಿಯಾದ ಅನುಭವಿ ಆಟಗಾರರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರ ಫಾರ್ಮ್ ಹಾಗೂ ತಂಡದಲ್ಲಿನ ಸ್ಥಾನದ ಬಗ್ಗೆ ಕೇಳಿಬರುತ್ತಿರುವ ಟೀಕೆಗಳಿಗೆ ಮಾಜಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ತಮ್ಮದೇ ಶೈಲಿಯಲ್ಲಿ ಖಡಕ್ ಉತ್ತರ ನೀಡಿದ್ದಾರೆ. ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಅಶ್ವಿನ್, ರೋಹಿತ್ ಮತ್ತು ಕೊಹ್ಲಿ ಅವರ ಸ್ಥಾನವನ್ನು ಮುಟ್ಟಲು ಯಾರಿಂದಲೂ ಸಾಧ್ಯವಿಲ್ಲ. ಹೀಗಾಗಿ ಅವರನ್ನು ತಂಡದಿಂದ ಕೈ ಬಿಡುವ ಧೈರ್ಯ ಮಾಡಬೇಡಿ ಎಂದು ಎಚ್ಚರಿಸಿದ್ದಾರೆ.

ಅಶ್ವಿನ್ ಪ್ರಕಾರ, ಈ ಇಬ್ಬರು ದಿಗ್ಗಜರನ್ನು ಪ್ರಸ್ತುತ ಸನ್ನಿವೇಶದಲ್ಲಿ ತಂಡದಿಂದ ಕೈಬಿಡಲು ಸಾಧ್ಯವೇ ಇಲ್ಲ. ಇದಕ್ಕೆ ಮುಖ್ಯ ಕಾರಣಗಳು ಈ ಕೆಳಗಿನಂತಿವೆ…

ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಬೆಟ್ಟದಷ್ಟು ರನ್ ಗಳಿಸಿ ದಶಕಗಳಿಂದ ಭಾರತ ತಂಡವನ್ನು ಮುನ್ನಡೆಸಿದ್ದಾರೆ. ಇದೀಗ ರೋಹಿತ್ ಶರ್ಮಾ ಅವರನ್ನು ಕೈ ಬಿಡುವ ಮಾತುಗಳು ಕೇಳಿ ಬರುತ್ತಿದೆ. ಆದರೆ ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶ ಎಂದರೆ, ರೋಹಿತ್ ಒಬ್ಬರೇ ಏಕದಿನ ಕ್ರಿಕೆಟ್‌ನಲ್ಲಿ ಸುಮಾರು 12,000 ರನ್‌ಗಳಿಸಿದ್ದಾರೆ.

ಇಂತಹ ದಿಗ್ಗಜ ಆಟಗಾರರನ್ನು ಕೇವಲ ಕೆಲವು ಪಂದ್ಯಗಳ ಕಳಪೆ ಫಾರ್ಮ್ ಆಧರಿಸಿ ದಿಢೀರನೆ ತಂಡದಿಂದ ಹೊರಹಾಕುವ ಧೈರ್ಯ ಯಾವುದೇ ಆಯ್ಕೆಗಾರರಿಗೆ ಇರುವುದಿಲ್ಲ. ಅಂತಹ ಧೈರ್ಯವನ್ನು ಸಹ ಮಾಡಬೇಡಿ ಎಂದು ಅಶ್ವಿನ್ ಕಿವಿಮಾತು ಹೇಳಿದ್ದಾರೆ.

ಭಾರಿ ಆಕ್ರೋಶದ ಎಚ್ಚರಿಕೆ:

ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರಿಗೆ ಭಾರತ ಸೇರಿದಂತೆ ವಿಶ್ವದಾದ್ಯಂತ ಕೋಟ್ಯಂತರ ನಿಷ್ಠಾವಂತ ಅಭಿಮಾನಿಗಳ ದೊಡ್ಡ ಪಡೆಯೇ ಇದೆ.

ಒಂದು ವೇಳೆ ಆಯ್ಕೆ ಸಮಿತಿಯು ಇವರಿಬ್ಬರನ್ನು ತಂಡದಿಂದ ಕೈಬಿಡುವ ತೀರ್ಮಾನಕ್ಕೆ ಬಂದರೆ, ದೇಶಾದ್ಯಂತ ಅಭಿಮಾನಿಗಳಿಂದ ತಡೆಯಲು ಸಾಧ್ಯವಾಗದಂತಹ ಭಾರಿ ಆಕ್ರೋಶ ವ್ಯಕ್ತವಾಗುತ್ತದೆ.

ಇವರಿಬ್ಬರ ಅಭಿಮಾನಿಗಳ ಸಾರ್ವಜನಿಕ ಆಕ್ರೋಶವು ಭಾರತೀಯ ಕ್ರಿಕೆಟ್ ಮಂಡಳಿಯ ಮೇಲ್ಛಾವಣಿಯನ್ನೇ ಉರುಳಿಸುವಷ್ಟು ತೀವ್ರವಾಗಿರುತ್ತದೆ. ಹೀಗಾಗಿ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿಯನ್ನು ತಂಡದಿಂದ ಕೈ ಬಿಡುವಂತಹ ನಿರ್ಧಾರಕ್ಕೆ ಕೈ ಹಾಕಬೇಡಿ  ಅಶ್ವಿನ್ ಎಚ್ಚರಿಸಿದ್ದಾರೆ.

ಅಶ್ವಿನ್ ಪ್ರಕಾರ, ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಮುಂಬರುವ ಏಕದಿನ ವಿಶ್ವಕಪ್ ಬಳಿಕ ನಿವೃತ್ತಿ ಘೋಷಿಸಲಿದ್ದಾರೆ. ಅಲ್ಲಿಯವರೆಗೆ ಅವರು ಭಾರತ ತಂಡದ ಅವಿಭಾಜ್ಯ ಅಂಗವಾಗಿ ಮುಂದುವರೆಯಲಿ. ಕೆಲ ಪಂದ್ಯಗಳಲ್ಲಿನ ಕಳಪೆ ಫಾರ್ಮ್ ಅನ್ನೇ ಮುಂದಿಟ್ಟುಕೊಂಡು ಇಬ್ಬರು ದಿಗ್ಗಜರನ್ನು ಟಾರ್ಗೆಟ್ ಮಾಡುವುದು ಸರಿಯಾದ ನಡೆಯಲ್ಲ. ಹೀಗಾಗಿ ಇಬ್ಬರ ವಿಷಯದಲ್ಲಿ ಆಯ್ಕೆ ಸಮಿತಿ ಎಚ್ಚರಿಕೆಯಿಂದ ಇರಬೇಕೆಂದು ಅಶ್ವಿನ್ ಮಾರ್ಮಿಕವಾಗಿ ತಿಳಿಸಿದ್ದಾರೆ.

ಇದನ್ನೂ ಓದಿ: ‘ಸೂಪರ್ ಜೈಂಟ್ಸ್’ ಪರ ಕಣಕ್ಕಿಳಿಯಲಿದ್ದಾರೆ ಸ್ಮೃತಿ ಮಂಧಾನ!

ಒಟ್ಟಾರೆಯಾಗಿ ಹೇಳುವುದಾದರೆ, ಟೀಮ್ ಇಂಡಿಯಾದಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರ ಸ್ಥಾನ ಕೇವಲ ಫಾರ್ಮ್ ಮೇಲೆ ನಿರ್ಧಾರವಾಗುವುದಿಲ್ಲ, ಬದಲಿಗೆ ಅವರು ಭಾರತೀಯ ಕ್ರಿಕೆಟ್‌ಗೆ ನೀಡಿರುವ ಕೊಡುಗೆ ಮತ್ತು ಅವರ ಹಿಂದಿರುವ ಕೋಟ್ಯಂತರ ಅಭಿಮಾನಿಗಳ ಶಕ್ತಿಯೇ ಅವರನ್ನು ರಕ್ಷಿಸುತ್ತದೆ. ಹೀಗಾಗಿ ಆಯ್ಕೆಗಾರರು ಎಚ್ಚರವಹಿಸುವುದು ಉತ್ತಮ ಎಂದು ಅಶ್ವಿನ್ ಬಹಿರಂಗ ಹೇಳಿಕೆಯ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.

Source link

ಮೈಸೂರಿನಲ್ಲಿ ಪಶ್ಚಿಮ ಬಂಗಾಳ ಮೂಲದ ಯುವತಿಯ ಮೇಲೆ ಗ್ಯಾಂಗ್ ರೇಪ್: ಮೂವರು ಅರೆಸ್ಟ್ – Kannada News | West Bengal Women Kidnapped and assaulted in T Narasipur Mysuru; Accused Arrested

ಮೈಸೂರು, ಜುಲೈ 21: ಕರ್ನಾಟಕ ರಾಜ್ಯದಲ್ಲಿ ಮಹಿಳೆಯರು ಮತ್ತು ಅಪ್ರಾಪ್ತರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಲೇ ಇದ್ದು, ಮೈಸೂರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ನಡೆದ ಮೂರು ಪ್ರತ್ಯೇಕ ಭೀಕರ ಘಟನೆಗಳಲ್ಲಿ ಪೊಲೀಸರು ತ್ವರಿತ ಕಾರ್ಯಾಚರಣೆ ನಡೆಸಿ ಹಲವು ಆರೋಪಿಗಳನ್ನು ಬಂಧಿಸಿದ್ದಾರೆ.

ಟಿ. ನರಸೀಪುರದಲ್ಲಿ ಘಟನೆ

ಮೈಸೂರು ಜಿಲ್ಲೆಯ ಟಿ. ನರಸೀಪುರ ಪಟ್ಟಣದಲ್ಲಿ ಪಶ್ಚಿಮ ಬಂಗಾಳ ಮೂಲದ ಯುವತಿಯೊಬ್ಬಳನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ ಎಸಗಿದ ಭೀಕರ ಘಟನೆ ನಡೆದಿದೆ. ಎರಡು ದಿನಗಳ ಹಿಂದೆ ಟಿ. ನರಸೀಪುರದ ಖಾಸಗಿ ಬಸ್ ನಿಲ್ದಾಣದ ಬಳಿ ಇದ್ದ ಯುವತಿಯನ್ನು ಮೂವರು ಆರೋಪಿಗಳು ಅಪಹರಿಸಿದ್ದರು. ಬಳಿಕ ಚಾಮರಾಜನಗರ ತಾಲೂಕಿನ ಸಂತೆಮರಳ್ಳಿಯ ಲಾಡ್ಜ್‌ವೊಂದಕ್ಕೆ ಕರೆದೊಯ್ದು ಆಕೆಯ ಮೇಲೆ ಗ್ಯಾಂಗ್‌ರೇಪ್ ಎಸಗಿದ್ದರು. ಘಟನೆ ನಡೆದ 24 ಗಂಟೆಗಳಲ್ಲಿ ಕಾರ್ಯಾಚರಣೆ ನಡೆಸಿದ ಟಿ. ನರಸೀಪುರ ಪೊಲೀಸರು ಸ್ಥಳೀಯ ನಿವಾಸಿಗಳಾದ ಕಿರಣ್, ಕಿಶೋರ್ ಮತ್ತು ರಿಯಾನ್ ಎಂಬ ಮೂವರು ಆರೋಪಿಗಳನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಮನೆಯಲ್ಲಿ ಒಂಟಿಯಾಗಿದ್ದ ಬಾಲಕಿಯ ಮೇಲೆ ಅತ್ಯಾಚಾರ ಯತ್ನ!

ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮತ್ತೊಂದು ಅಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಬಾಲಕಿಯ ತಂದೆ-ತಾಯಿ ಕೂಲಿ ಕೆಲಸಕ್ಕೆ ತೆರಳಿದ್ದ ಸಮಯವನ್ನು ಕಾಯ್ದು 23 ವರ್ಷದ ಯುವಕನೊಬ್ಬ ಮನೆಗೆ ನುಗ್ಗಿ ಅಪ್ರಾಪ್ತೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಬಾಲಕಿಯ ಕೂಗಾಟ ಕೇಳಿ ಓಡಿಬಂದ ಅಕ್ಕಪಕ್ಕದ ಮನೆಯವರು ಆರೋಪಿಯನ್ನು ಕೃತ್ಯದ ಸ್ಥಳದಲ್ಲೇ ಹಿಡಿದು, ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.

ದೇವಸ್ಥಾನಕ್ಕೆಂದು ಪುಸಲಾಯಿಸಿ ಕರೆದೊಯ್ದು ಅಪ್ರಾಪ್ತೆ ಮೇಲೆ ಗ್ಯಾಂಗ್‌ರೇಪ್!

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜುಲೈ 17ರ ರಾತ್ರಿ ನಡೆದಿದ್ದ ದೌರ್ಜನ್ಯದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ರೇಣುಕಾ ಎಂಬ ಮಹಿಳೆ ಅಪ್ರಾಪ್ತ ಬಾಲಕಿಗೆ ದೇವಸ್ಥಾನಕ್ಕೆ ಹೋಗೋಣವೆಂದು ಪುಸಲಾಯಿಸಿ ಆಟೋದಲ್ಲಿ ಕರೆದೊಯ್ದಿದ್ದಳು. ಬಳಿಕ ನವೀನ್ ಮತ್ತು ವೆಂಕಟರಮಣ ಎಂಬುವರ ಜೊತೆ ಸೇರಿ ಬಾಲಕಿಗೆ ಮದ್ಯ ಕುಡಿಸಿ, ನಿರ್ಮಾಣ ಹಂತದ ಕಟ್ಟಡದಲ್ಲಿ ಇಡೀ ರಾತ್ರಿ ಲೈಂಗಿಕ ದೌರ್ಜನ್ಯವೆಸಗಿ ಹಲ್ಲೆ ನಡೆಸಿದ್ದರು.

ಇದನ್ನೂ ಓದಿ SIR ಪ್ರಕ್ರಿಯೆ ವೇಳೆ ಕರ್ತವ್ಯನಿರತ ಸಿಬ್ಬಂದಿಗೆ ನಿಂದನೆ, ಬೆದರಿಕೆ: FIR ದಾಖಲು!

ಮರುದಿನ ಬೆಳಿಗ್ಗೆ ಮನೆ ಬಳಿ ಬಿಟ್ಟು, ಯಾರ ಬಳಿಯಾದರೂ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು. ತಾಯಿಯ ಪ್ರಶ್ನೆಗೆ ಬಾಲಕಿ ನಡೆದ ಘಟನೆಯನ್ನು ತಿಳಿಸಿದ್ದು, ದೂರು ದಾಖಲಿಸಿಕೊಂಡ ದೇವನಹಳ್ಳಿ ಪೊಲೀಸರು ನವೀನ್, ವೆಂಕಟರಮಣ ಮತ್ತು ರೇಣುಕಾ ಮೂವರನ್ನೂ ಬಂಧಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಟಾಕ್ಸಿಕ್’ ಸಿನಿಮಾ ಟಿಕೆಟ್ ಬೆಲೆ ಬಗ್ಗೆ ಅಭಿಮಾನಿಗಳಿಗೆ ಶುರುವಾಗಿದೆ ಭಯ – Kannada News | Toxic Ticket Price Scare: Will Yash Next Cost a Bomb After Jana Nayagan?

ಕೆವಿಎನ್ ಪ್ರೊಡಕ್ಷನ್​ ನಿರ್ಮಾಣದ ‘ಜನ ನಾಯಗನ್’ ಸಿನಿಮಾ (Jana Nayagan) ರಿಲೀಸ್​​ಗೆ ರೆಡಿ ಇದೆ. ಈ ಚಿತ್ರದ ಟಿಕೆಟ್ ಬೆಲೆ ಈಗಾಗಲೇ ಗಗನಕ್ಕೇರಿದೆ. ಏಕಪರದೆ ಚಿತ್ರಮಂದಿರಗಳಲ್ಲೇ ಈ ಚಿತ್ರದ ಟಿಕೆಟ್ ಬೆಲೆ ಬರೋಬ್ಬರಿ ಸಾವಿರ ರೂಪಾಯಿ ತಲುಪಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾ ಹಾಗೂ ಗಾಂಧಿನಗರದಲ್ಲಿ ಈಗಾಗಲೇ ದೊಡ್ಡ ಮಟ್ಟದ ಚರ್ಚೆ ಮತ್ತು ಆಕ್ರೋಶಗಳು ವ್ಯಕ್ತವಾಗುತ್ತಿವೆ. ಇದೇ ಹೊತ್ತಲ್ಲಿ, ಇದೇ ಕೆವಿಎನ್ ಸಂಸ್ಥೆ ನಿರ್ಮಾಣ ಮಾಡಿರೋ, ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್’ ಚಿತ್ರ ಆಗಸ್ಟ್ 26ರಂದು ವಿಶ್ವಾದ್ಯಂತ ಬಿಡುಗಡೆಯಾಗುತ್ತಿದೆ. ‘ಜನ ನಾಯಗನ್’ ಚಿತ್ರದ ಟಿಕೆಟ್ ದರ ನೋಡಿ ಬೆಚ್ಚಿಬಿದ್ದಿರುವ ಅಭಿಮಾನಿಗಳಿಗೆ, ಈಗ ‘ಟಾಕ್ಸಿಕ್’ ಸಿನಿಮಾದ ಟಿಕೆಟ್ ಬೆಲೆ ಏನಾಗಬಹುದು ಎಂಬ ಆತಂಕ ಹಾಗೂ ಭಯ ಈಗಾಗಲೇ ಶುರುವಾಗಿದೆ.

‘ಟಾಕ್ಸಿಕ್’ ಚಿತ್ರದಲ್ಲಿ ಯಶ್ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ನಯನತಾರಾ, ರುಕ್ಮಿಣಿ ವಸಂತ್ ಮೊದಲಾದವರು ನಟಿಸಿದ್ದಾರೆ. ಈ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ನಿರೀಕ್ಷೆ ಇದೆ. ಇದೇ ನಿರೀಕ್ಷೆಯನ್ನೇ ಬಂಡವಾಳ ಮಾಡಿಕೊಳ್ಳಲು ನಿರ್ಮಾಣ ಸಂಸ್ಥೆ ಮುಂದಾದರೆ ಹೇಗೆ ಎಂದು ಅಭಿಮಾನಿಗಳು ಆತಂಕದಲ್ಲಿದ್ದಾರೆ. ‘ಟಾಕ್ಸಿಕ್’ ಟಿಕೆಟ್ ದರ ಹೆಚ್ಚಲು ಕಾರಣವಾಗಬಹುದಾದ ಅಂಶಗಳು ಈ ಕೆಳಗಿನಂತಿವೆ.

ಬಿಗ್ ಬಜೆಟ್ ಸಿನಿಮಾ: ‘ಟಾಕ್ಸಿಕ್’ ಅತಿ ದೊಡ್ಡ ಬಜೆಟ್‌ನಲ್ಲಿ ಅದ್ದೂರಿಯಾಗಿ ನಿರ್ಮಾಣವಾಗುತ್ತಿರುವ ಚಿತ್ರ. ಪ್ಯಾನ್-ಇಂಡಿಯಾ ಮಟ್ಟದಲ್ಲಿ ಮೂಡಿಬರುತ್ತಿರುವ ಕಾರಣ ನಿರ್ಮಾಣ ವೆಚ್ಚ 500 ಕೋಟಿ ರೂಪಾಯಿ ದಾಟಿದೆ. ಈ ಭಾರಿ ವೆಚ್ಚವನ್ನು ಸರಿದೂಗಿಸಲು ಟಿಕೆಟ್ ದರ ಹೆಚ್ಚಾಗುವ ಸಾಧ್ಯತೆ ದಟ್ಟವಾಗಿದೆ.

ಹೆಚ್ಚು ಕಮಾಯಿ ಮಾಡುವ ಉದ್ದೇಶ: ಇತ್ತೀಚಿನ ದಿನಗಳಲ್ಲಿ ದೊಡ್ಡ ಸಿನಿಮಾಗಳು ಮೊದಲ ವಾರದಲ್ಲೇ ಗರಿಷ್ಠ ಕಲೆಕ್ಷನ್ ಮಾಡುವ ಗುರಿ ಹೊಂದಿರುತ್ತವೆ. ಆರಂಭದ ದಿನಗಳ ಕ್ರೇಜ್ ಬಳಸಿಕೊಂಡು ಬಾಕ್ಸ್ ಆಫೀಸ್‌ನಲ್ಲಿ ದಾಖಲೆ ಬರೆಯಲು ನಿರ್ಮಾಪಕರು ಮತ್ತು ವಿತರಕರು ಟಿಕೆಟ್ ದರವನ್ನು ಹೆಚ್ಚಿಸಲು ಮುಂದಾಗುತ್ತಾರೆ.

ಬಹುನಿರೀಕ್ಷಿತ ಸಿನಿಮಾ: ‘ಕೆಜಿಎಫ್ 2’ ನಂತರ ತೆರೆಗೆ ಬರುತ್ತಿರುವ ಯಶ್ ಚಿತ್ರ ಇದಾಗಿರುವುದರಿಂದ ಚಿತ್ರದ ಮೇಲಿನ ನಿರೀಕ್ಷೆ ಬೆಟ್ಟದಷ್ಟಿದೆ. ಇಂತಹ ಹೈ-ಹೈಪ್ ಇರುವ ಬಹುನಿರೀಕ್ಷಿತ ಸಿನಿಮಾಗಳನ್ನು ನೋಡಲು ಅಭಿಮಾನಿಗಳು ಮುಗಿಬೀಳುತ್ತಾರೆ ಎಂಬ ನಂಬಿಕೆಯಿಂದ ಸಹಜವಾಗಿಯೇ ಟಿಕೆಟ್ ದರ ದುಬಾರಿಯಾಗುವ ಆತಂಕ ಎದುರಾಗಿದೆ.

ಇದನ್ನೂ ಓದಿ: ಸೆನ್ಸಾರ್ ಕಟ್ ಇಲ್ಲದೆ ಜನ ನಾಯಗನ್ ಸಿನಿಮಾ ನೋಡಲು ವಿಜಯ್ ಅಭಿಮಾನಿಗಳಿಗೆ ಸುವರ್ಣಾವಕಾಶ

ಒಟ್ಟಿನಲ್ಲಿ ‘ಜನ ನಾಯಗನ್’ ಹಾದಿಯಲ್ಲೇ ‘ಟಾಕ್ಸಿಕ್’ ಸಿನಿಮಾ ಕೂಡ ಸಾಗಿದರೆ, ಸಾಮಾನ್ಯ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರುವುದು ಕಷ್ಟ ಎಂಬ ಮಾತುಗಳು ಕೇಳಿಬರುತ್ತಿವೆ. ಯಶ್ ಕೂಡ ಈ ಚಿತ್ರದ ಸಹನಿರ್ಮಾಪಕರು. ಅವರು ಅಭಿಮಾನಿಗಳಿಗಾಗಿ ಟಿಕೆಟ್ ಬೆಲೆ ಕಡಿಮೆ ಇಡೋ ನಿರ್ಧಾರ ತೆಗೆದುಕೊಳ್ಳಬೇಕು ಎಂಬುದು ಅನೇಕರ ಒತ್ತಾಯ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

SIR ಪ್ರಕ್ರಿಯೆ ವೇಳೆ ಕರ್ತವ್ಯನಿರತ ಸಿಬ್ಬಂದಿಗೆ ನಿಂದನೆ, ಬೆದರಿಕೆ: FIR ದಾಖಲು! – Kannada News | FIR Filed in Nanjangud After SIR Duty Staff Threaten and Abuse Allegation

ಮೈಸೂರು, ಜುಲೈ 21: ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ನಿರತರಾಗಿದ್ದ ಸಿಬ್ಬಂದಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಮನೆಗೆ ನುಗ್ಗಿ ಬೆದರಿಕೆಯೊಡ್ಡಿ ಅನುಚಿತವಾಗಿ ವರ್ತಿಸಿದ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಬಿಳಿಗೆರೆ ಗ್ರಾಮದಲ್ಲಿ ನಡೆದಿದೆ. ಈ ಸಂಬಂಧ ಮುಳ್ಳೂರು ಗ್ರಾಮದ ನಿವಾಸಿ ಮಹೇಂದ್ರ ಕುಮಾರ್ ಎಂಬಾತನ ವಿರುದ್ಧ ಬಿಳಿಗೆರೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ (FIR) ದಾಖಲಾಗಿದೆ.

ನಡೆದಿದ್ದೇನು?

ಮತದಾರರ ಪಟ್ಟಿ ಪರಿಷ್ಕರಣೆಯ (SIR) ಕರ್ತವ್ಯದಲ್ಲಿದ್ದ ಸಿಬ್ಬಂದಿ ಲತಾ ಎಂಬುವರ ಮನೆಗೆ ಜುಲೈ 13ರಂದು ರಾತ್ರಿ ಕುಡಿದು ಬಂದಿದ್ದ ಮಹೇಂದ್ರ ಕುಮಾರ್, ಅಕ್ರಮವಾಗಿ ಮನೆಗೆ ನುಗ್ಗಿದ್ದಾನೆ. ಈ ವೇಳೆ ಲತಾ ಅವರ ಕೈ ಹಿಡಿದು ಎಳೆದಾಡಿ, ಅನುಚಿತವಾಗಿ ವರ್ತಿಸಿದ್ದಾನೆ. ಅಲ್ಲದೆ, ನೀನು 300 ಜನರ ಮತಗಳನ್ನು ಹಾಳು ಮಾಡಿದ್ದೀಯಾ, ನಮ್ಮ ಗ್ರಾಮದಲ್ಲಿ ನೀನು ಹೇಗೆ ಕೆಲಸ ಮಾಡುತ್ತೀಯಾ ನೋಡುತ್ತೇನೆ? ನಿನ್ನನ್ನು ಕೆಲಸದಿಂದಲೇ ತೆಗೆದುಹಾಕಿಸುತ್ತೇನೆ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಪ್ರಾಣಬೆದರಿಕೆ ಒಡ್ಡಿದ್ದಾನೆ ಎಂದು ಆರೋಪಿಸಲಾಗಿದೆ. ಸಿಬ್ಬಂದಿ ನೀಡಿದ ದೂರಿನನ್ವಯ ಬಿಳಿಗೆರೆ ಪೊಲೀಸರು ಮಹೇಂದ್ರ ಕುಮಾರ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಹಿಂದೆಯೂ ನಡೆದಿತ್ತು ಇದೇ ರೀತಿಯ ಘಟನೆ

SIR ಪ್ರಕ್ರಿಯೆಯ ವೇಳೆ ಕರ್ತವ್ಯನಿರತ ಸಿಬ್ಬಂದಿ ಹಾಗೂ ಬಿಎಲ್‌ಒ (BLO)ಗಳ ಮೇಲೆ ಇಂತಹ ದೌರ್ಜನ್ಯ ನಡೆದಿರುವುದು ಇದೇ ಮೊದಲೇನಲ್ಲ. ಇತ್ತೀಚೆಗಷ್ಟೇ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಶಿರ್ಲಾಲು ಗ್ರಾಮದಲ್ಲೂ ಇಂತಹುದೇ ಅಮಾನವೀಯ ಘಟನೆ ವರದಿಯಾಗಿತ್ತು.

ಅಲ್ಲಿ ದಲಿತ ಸಮುದಾಯಕ್ಕೆ ಸೇರಿದ ಬಿಎಲ್‌ಒ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸ್ಥಳೀಯ ಅಂಗನವಾಡಿ ಕಾರ್ಯಕರ್ತೆಯೊಬ್ಬರು ಶಿರ್ಲಾಲು ಗ್ರಾಮದ ಕಾಳಿಕಾಂಬ ನಿವಾಸಿ ಯಶೋಧ ಆಚಾರಿ ಎಂಬುವರ ಮನೆಗೆ ಎಸ್‌ಐಆರ್ ಪ್ರಕ್ರಿಯೆಗೆಂದು ತೆರಳಿದ್ದರು. ಆದರೆ, ಆ ಸಮಯದಲ್ಲಿ ಮನೆಮಾಲಿಕರು ನಿಮ್ಮ ಜಾತಿಯವರು ಒಳಗೆ ಬರಬಾರದು ಎಂದು ಜಾತಿ ನಿಂದನೆ ಮಾಡಿ, ಅವರನ್ನು ಅಂಗಳದಲ್ಲೇ ನಿಲ್ಲಿಸಿ ತೀವ್ರವಾಗಿ ಅಪಮಾನಿಸಿದ್ದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕಂದಾಯ ಇಲಾಖೆಯ ರೆಕಾರ್ಡ್ ರೂಂನಲ್ಲಿ ಕೋತಿಗಳದ್ದೇ ಕಾರುಬಾರು! ವಿಡಿಯೋ ವೈರಲ್ – Kannada News | Monkeys Enter Revenue Record Room in Mulbagal Taluk Office, Viral Video Raises Safety Concerns

ಕೋಲಾರ, ಜುಲೈ 21: ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕು ಕಚೇರಿಯ ಕಂದಾಯ ಇಲಾಖೆಯ ರೆಕಾರ್ಡ್ ರೂಂನಲ್ಲಿ ಕೋತಿಗಳು ನಿರ್ಬಂಧವಿಲ್ಲದೆ ಓಡಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಪ್ರಮುಖ ಸರ್ಕಾರಿ ಕಂದಾಯ ದಾಖಲೆಗಳನ್ನು ಸಂರಕ್ಷಿಸಬೇಕಾದ ಕೊಠಡಿಯಲ್ಲೇ ಈ ರೀತಿಯ ಅವ್ಯವಸ್ಥೆ ಕಂಡುಬಂದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಈಗಾಗಲೇ ಜಿಲ್ಲೆಯ ಹಲವು ಭಾಗಗಳಲ್ಲಿ ನಕಲಿ ದಾಖಲೆಗಳ ಮೂಲಕ ಭೂಮಿ ವಂಚನೆ ಪ್ರಕರಣಗಳು ಬೆಳಕಿಗೆ ಬರುತ್ತಿರುವ ಸಂದರ್ಭದಲ್ಲೇ ದಾಖಲೆಗಳ ಸುರಕ್ಷತೆ ಪ್ರಶ್ನಾರ್ಹವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ತಾಲ್ಲೂಕು ಕಚೇರಿ ಸಿಬ್ಬಂದಿ ನಿರ್ಲಕ್ಷ್ಯದ ವಿರುದ್ಧ ಕ್ರಮ ಕೈಗೊಂಡು, ದಾಖಲೆಗಳ ಭದ್ರತೆ ಖಚಿತಪಡಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಸೂಪರ್ ಜೈಂಟ್ಸ್’ ಪರ ಕಣಕ್ಕಿಳಿಯಲಿದ್ದಾರೆ ಸ್ಮೃತಿ ಮಂಧಾನ! – Kannada News | Smriti Mandhana is ready for The Hundred with Manchester Super Giants

ಬಹುನಿರೀಕ್ಷಿತ ‘ದಿ ಹಂಡ್ರೆಡ್ ವುಮೆನ್ಸ್’ ಕ್ರಿಕೆಟ್ ಟೂರ್ನಿ ಇಂದಿನಿಂದ (ಜುಲೈ 21) ಶುರುವಾಗಲಿದೆ. ಈ ಟೂರ್ನಿಯಲ್ಲಿ ಭಾರತದ ಸ್ಟಾರ್ ಆಟಗಾರ್ತಿ ಸ್ಮೃತಿ ಮಂಧಾನ ‘ಮ್ಯಾಂಚೆಸ್ಟರ್ ಸೂಪರ್ ಜೈಂಟ್ಸ್’ ಪರ ಕಣಕ್ಕಿಳಿಯಲಿದ್ದಾರೆ. ಕಳೆದ ಬಾರಿ ಮ್ಯಾಂಚೆಸ್ಟರ್ ಒರಿಜಿನಲ್ಸ್ ತಂಡಕ್ಕೆ ಆಯ್ಕೆಯಾಗಿದ್ದ ಸ್ಮೃತಿ ವೈಯುಕ್ತಿಕ ಕಾರಣಗಳಿಂದಾಗಿ ಟೂರ್ನಿಯಿಂದ ಹಿಂದೆ ಸರಿದಿದ್ದರು. ಇದೀಗ ನೇರ ಒಪ್ಪಂದ ಮೂಲಕ ಸ್ಮೃತಿ ‘ಮ್ಯಾಂಚೆಸ್ಟರ್ ಸೂಪರ್ ಜೈಂಟ್ಸ್’ ತಂಡಕ್ಕೆ ಸೇರ್ಪಡೆಯಾಗಿದ್ದಾರೆ.

ಸ್ಟಾರ್ ಆಟಗಾರ್ತಿಯರ ದಂಡು:

ಈ ಬಾರಿಯ ಮ್ಯಾಂಚೆಸ್ಟರ್ ಸೂಪರ್ ಜೈಂಟ್ಸ್ ತಂಡದಲ್ಲಿ ಮಹಿಳಾ ಕ್ರಿಕೆಟ್‌ನ ಸ್ಟಾರ್ ಆಟಗಾರ್ತಿಯರ ದಂಡೇ ಕಾಣಿಸಿಕೊಂಡಿದೆ. ಸ್ಮೃತಿ ಮಂಧಾನ ಅವರೊಂದಿಗೆ ಆಸ್ಟ್ರೇಲಿಯಾದ ಯಶಸ್ವಿ ಮಾಜಿ ನಾಯಕಿ ಮೆಗ್ ಲ್ಯಾನಿಂಗ್ ಮತ್ತು ಇಂಗ್ಲೆಂಡ್‌ನ ವಿಶ್ವದ ನಂ.1 ಸ್ಪಿನ್ನರ್ ಸೋಫಿ ಎಕ್ಲಿಸ್ಟೋನ್ ಜೊತೆಯಾಗಿ ಕಣಕ್ಕಿಳಿಯಲಿದ್ದಾರೆ.

ಇವರೊಂದಿಗೆ ಟೀಮ್ ಇಂಡಿಯಾದ ಸ್ಫೋಟಕ ವಿಕೆಟ್ ಕೀಪರ್-ಬ್ಯಾಟರ್ ರಿಚಾ ಘೋಷ್ ಕೂಡ ಆಯ್ಕೆಯಾಗಿದ್ದಾರೆ. ಅಂದರೆ ಸ್ಮೃತಿ ಮಂಧಾನ-ರಿಚಾ ಘೋಷ್ ಜೋಡಿಯು ಜೊತೆಯಾಗಿ ಕಣಕ್ಕಿಳಿಯಲಿದ್ದಾರೆ.

ಫ್ರಾಂಚೈಸಿ ಮರುನಾಮಕರಣ:

ಐಪಿಎಲ್‌ನ ಲಕ್ನೋ ಸೂಪರ್ ಜೈಂಟ್ಸ್ ಮಾಲೀಕರಾದ ಆರ್‌ಪಿಎಸ್‌ಜಿ (RPSG) ಗ್ರೂಪ್ ಈ ಮ್ಯಾಂಚೆಸ್ಟರ್ ಫ್ರಾಂಚೈಸಿಯಲ್ಲಿ ಹೂಡಿಕೆ ಮಾಡಿದೆ. ಈ ಖಾಸಗೀಕರಣದ ಬೆನ್ನಲ್ಲೇ ತಂಡದ ಹೆಸರನ್ನು ‘ಮ್ಯಾಂಚೆಸ್ಟರ್ ಒರಿಜಿನಲ್ಸ್’ ತಂಡದ ಹೆಸರನ್ನು ‘ಮ್ಯಾಂಚೆಸ್ಟರ್ ಸೂಪರ್ ಜೈಂಟ್ಸ್’ ಎಂದು ಬದಲಾಯಿಸಲಾಗಿದೆ.

‘ದಿ ಹಂಡ್ರೆಡ್’ ಟೂರ್ನಿಯಲ್ಲಿ ಸ್ಮೃತಿ ದಾಖಲೆ:

‘ದಿ ಹಂಡ್ರೆಡ್ ವುಮೆನ್ಸ್ ‘ ಲೀಗ್ ಇತಿಹಾಸದಲ್ಲೇ ಅತಿ ವೇಗವಾಗಿ 500 ರನ್ ರನ್​ ಕಲೆಹಾಕಿದ ಆಟಗಾರ್ತಿ ಎಂಬ ದಾಖಲೆ ಸ್ಮೃತಿ ಮಂಧಾನ ಹೆಸರಿನಲ್ಲಿದೆ. ಈ ಹಿಂದೆ ಸದರ್ನ್ ಬ್ರೇವ್ ತಂಡದ ಪರ ಆಡಿದ್ದ ಸ್ಮೃತಿ, 29 ಇನ್ನಿಂಗ್ಸ್‌ಗಳಲ್ಲಿ 139.09ರ ಅದ್ಭುತ ಸ್ಟ್ರೈಕ್ ರೇಟ್‌ನಲ್ಲಿ ಒಟ್ಟು 676 ರನ್ ಕಲೆಹಾಕಿದ್ದಾರೆ.

ಇದನ್ನೂ ಓದಿ: ಓವರ್ ಇಲ್ಲ, ಸೂಪರ್ ಫೈವ್, ಬೋನಸ್ ರನ್: ದಿ ಹಂಡ್ರೆಡ್ ಲೀಗ್ ಹೊಸ ನಿಯಮ

ಇದೀಗ ಇಂಗ್ಲೆಂಡ್‌ನ ಖ್ಯಾತ ಎಡಗೈ ಸ್ಪಿನ್ನರ್ ಸೋಫಿ ಎಕ್ಲಿಸ್ಟೋನ್ ಮುಂದಾಳತ್ವದಲ್ಲಿ ಸ್ಮೃತಿ ಮಂಧಾನ ಮ್ಯಾಂಚೆಸ್ಟರ್ ಸೂಪರ್ ಜೈಂಟ್ಸ್ ಪರ ಹೊಸ ಇನಿಂಗ್ಸ್ ಆರಂಭಿಸಲು ಸಜ್ಜಾಗಿದ್ದಾರೆ.

Source link

Shani Sade Sati: ಶನಿ ಸಾಡೇ ಸಾತಿಯ ಯಾವ ಹಂತ ಅತ್ಯಂತ ಕಷ್ಟಕರ? ಇಲ್ಲಿದೆ ಪೂರ್ಣ ಮಾಹಿತಿ – Kannada News | Shani Sade Sati: Understand Its 3 Phases and Remedies for a Peaceful 7.5 Years

ಶನಿ ದೇವರೆಂದರೆ ಅನೇಕರಲ್ಲಿ ಒಂದು ರೀತಿಯ ಭಯ ಮೂಡುವುದು ಸಹಜ. ಅದರಲ್ಲೂ ‘ಶನಿ ಸಾಡೇ ಸಾತಿ’ ಎಂಬ ಹೆಸರು ಕೇಳಿದ ತಕ್ಷಣ ಭವಿಷ್ಯದ ಬಗ್ಗೆ ಚಿಂತೆ ಪ್ರಾರಂಭವಾಗುತ್ತದೆ. ಆದರೆ, ಸಾಡೇ ಸಾತಿಯ ಬಗ್ಗೆ ಸರಿಯಾದ ತಿಳುವಳಿಕೆ ಇದ್ದರೆ, ಈ ಅವಧಿಯನ್ನು ಸುಲಭವಾಗಿ ಮತ್ತು ಧೈರ್ಯವಾಗಿ ಎದುರಿಸಬಹುದು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಸಾಡೇ ಸಾತಿಯು ಪ್ರತಿಯೊಬ್ಬ ವ್ಯಕ್ತಿಯ ಜೀವಿತಾವಧಿಯಲ್ಲಿ ಕನಿಷ್ಠ ಒಮ್ಮೆ ಅಥವಾ ಅದಕ್ಕಿಂತ ಹೆಚ್ಚು ಬಾರಿ ಬರುತ್ತದೆ. ‘ಸಾಡೇ ಸಾತಿ’ ಎಂದರೆ ಅಕ್ಷರಶಃ ಏಳೂವರೆ ವರ್ಷಗಳು ಎಂದರ್ಥ.

ಸಾಡೇ ಸಾತಿ ಹೇಗೆ ಪ್ರಾರಂಭವಾಗುತ್ತದೆ?

ಶನಿ ಗ್ರಹವು ಅತ್ಯಂತ ನಿಧಾನವಾಗಿ ಚಲಿಸುವ ಗ್ರಹವಾಗಿದ್ದು, ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಸಂಚರಿಸಲು ಸುಮಾರು ಎರಡೂವರೆ ವರ್ಷಗಳನ್ನು (2.5 ವರ್ಷ) ತೆಗೆದುಕೊಳ್ಳುತ್ತದೆ. ಯಾವಾಗ ಶನಿಯು ನಿಮ್ಮ ಜನ್ಮ ಚಂದ್ರ ರಾಶಿಗಿಂತ ಒಂದು ರಾಶಿ ಹಿಂದೆ (12ನೇ ಮನೆ) ಪ್ರವೇಶಿಸುತ್ತದೆಯೋ, ಅಂದಿನಿಂದ ಸಾಡೇ ಸಾತಿ ಪ್ರಾರಂಭವಾಗುತ್ತದೆ. ಅಲ್ಲಿಂದ ಮುಂದಿನ ಮೂರು ರಾಶಿಗಳನ್ನು ದಾಟಲು ಶನಿಗೆ ಒಟ್ಟು 7.5 ವರ್ಷಗಳು ಬೇಕಾಗುತ್ತವೆ. ಈ ಸಂಪೂರ್ಣ ಅವಧಿಯನ್ನೇ ‘ಸಾಡೇ ಸಾತಿ’ ಎಂದು ಕರೆಯಲಾಗುತ್ತದೆ.

ಸಾಡೇ ಸಾತಿಯ 3 ಹಂತಗಳು:

ಸಾಡೇ ಸಾತಿಯ ಏಳೂವರೆ ವರ್ಷಗಳನ್ನು ಮೂರು ಪ್ರತ್ಯೇಕ ಹಂತಗಳಾಗಿ ವಿಂಗಡಿಸಲಾಗಿದೆ:

ಮೊದಲ ಹಂತ ಆರಂಭಿಕ ಒತ್ತಡ (12ನೇ ಮನೆ):

ಶನಿಯು ಚಂದ್ರ ರಾಶಿಯಿಂದ 12ನೇ ಮನೆಗೆ ಬಂದಾಗ ಮೊದಲ ಹಂತ ಶುರುವಾಗುತ್ತದೆ. 12ನೇ ಮನೆಯು ವೆಚ್ಚ, ಒಂಟಿತನ ಮತ್ತು ಮಾನಸಿಕ ಅಶಾಂತಿಯನ್ನು ಸೂಚಿಸುತ್ತದೆ. ಧನ ನಷ್ಟ, ಹಠಾತ್ ವೆಚ್ಚಗಳು ಹೆಚ್ಚಾಗುವುದು, ನಿದ್ರಾಹೀನತೆ, ಮಾನಸಿಕ ಗೊಂದಲ ಮತ್ತು ಉದ್ಯೋಗ ಬದಲಾವಣೆಯಂತಹ ಸವಾಲುಗಳು ಎದುರಾಗಬಹುದು.

ಎರಡನೇ ಹಂತ ಅತ್ಯಂತ ಕಷ್ಟಕರ ಸಮಯ (ಚಂದ್ರ ರಾಶಿಯ ಮೇಲೆ):

ಶನಿಯು ನೇರವಾಗಿ ನಿಮ್ಮ ಚಂದ್ರ ರಾಶಿಯ ಮೇಲೆಯೇ ಸಂಚರಿಸುವಾಗ ಎರಡನೇ ಹಂತ ಪ್ರಾರಂಭವಾಗುತ್ತದೆ. ಚಂದ್ರನು ಮನಸ್ಸು ಮತ್ತು ಭಾವನೆಗಳ ಸಂಕೇತ. ಇದನ್ನು ಸಾಡೇ ಸಾತಿಯ ಅತ್ಯಂತ ಪ್ರಭಾವಶಾಲಿ ಮತ್ತು ಕಷ್ಟಕರ ಹಂತ ಎಂದು ಪರಿಗಣಿಸಲಾಗುತ್ತದೆ. ತೀವ್ರ ಭಾವನಾತ್ಮಕ ಒತ್ತಡ, ಆತ್ಮವಿಶ್ವಾಸದ ಕೊರತೆ, ಕೆಲಸ ಕಾರ್ಯಗಳಲ್ಲಿ ಅಡೆತಡೆಗಳು ಮತ್ತು ಆಪ್ತರಿಂದಲೇ ನಿರಾಕರಣೆ ಅಥವಾ ನಿರ್ಲಕ್ಷ್ಯವನ್ನು ಅನುಭವಿಸಬೇಕಾಗಬಹುದು.

ಮೂರನೇ ಹಂತ ಕರ್ಮಫಲ ಮತ್ತು ಪರಿಹಾರ (2ನೇ ಮನೆ):

ಶನಿಯು ಚಂದ್ರ ರಾಶಿಯಿಂದ 2ನೇ ಮನೆಗೆ ಪ್ರವೇಶಿಸಿದಾಗ ಕೊನೆಯ ಹಂತ ಪ್ರಾರಂಭವಾಗುತ್ತದೆ. ಇದು ಎರಡನೇ ಹಂತಕ್ಕಿಂತ ಕೊಂಚ ಸಮಾಧಾನಕರವಾಗಿರುತ್ತದೆ. ಶನಿಯು ನಿಮ್ಮ ಸತ್ಕರ್ಮಗಳಿಗೆ ತಕ್ಕ ಫಲವನ್ನು ನೀಡುವ ಸಮಯವಿದು. ನೀವು ಜೀವನದಲ್ಲಿ ಒಳ್ಳೆಯ ಕಾರ್ಯಗಳನ್ನು ಮಾಡಿದ್ದರೆ, ಉತ್ತಮ ಫಲಿತಾಂಶಗಳು ಸಿಗುತ್ತವೆ. ಕುಟುಂಬ ಮತ್ತು ಉದ್ಯೋಗದಲ್ಲಿದ್ದ ಅಡೆತಡೆಗಳು ನಿಧಾನವಾಗಿ ದೂರವಾಗಿ, ಸ್ಥಿರತೆ ತಲುಪುತ್ತೀರಿ.

ಅತ್ಯಂತ ನೋವಿನ ಹಂತ ಯಾವುದು?

ಜ್ಯೋತಿಷ್ಯದ ಪ್ರಕಾರ, ಸಾಡೇ ಸಾತಿಯ ಎರಡನೇ ಹಂತವು ಅತ್ಯಂತ ಕಷ್ಟಕರವಾದದ್ದು. ಏಕೆಂದರೆ ಈ ಸಮಯದಲ್ಲಿ ಶನಿಯ ಪ್ರಭಾವವು ನೇರವಾಗಿ ಮನಸ್ಸಿನ (ಚಂದ್ರ) ಮೇಲೆ ಬೀರುವುದರಿಂದ ವ್ಯಕ್ತಿಯು ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ಹೆಚ್ಚಿನ ಸವಾಲುಗಳನ್ನು ಎದುರಿಸಬೇಕಾಗುತ್ತದೆ.

ಇದನ್ನೂ ಓದಿ: ಚಿಕ್ಕ ಮಕ್ಕಳಿಗೆ ಕನ್ನಡಿ ತೋರಿಸಬಾರದು ಏಕೆ? ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ಕಾರಣ ಇಲ್ಲಿದೆ

ಸಾಡೇ ಸಾತಿಯ ಕಷ್ಟಗಳನ್ನು ಕಡಿಮೆ ಮಾಡಲು ಸರಳ ಪರಿಹಾರಗಳು:

ಶನಿಯು ಕೇವಲ ಶಿಕ್ಷಿಸುವ ಗ್ರಹವಲ್ಲ, ಬದಲಿಗೆ ಶಿಸ್ತು ಮತ್ತು ಸರಿಯಾದ ಹಾದಿಯನ್ನು ಕಲಿಸುವ ‘ಕರ್ಮಫಲ ದಾತ’. ಸಾಡೇ ಸಾತಿಯ ನಕಾರಾತ್ಮಕ ಪ್ರಭಾವವನ್ನು ಕಡಿಮೆ ಮಾಡಲು ಈ ಕೆಳಗಿನ ಪರಿಹಾರಗಳನ್ನು ಮಾಡಬಹುದು:

  • ಪ್ರತಿ ಶನಿವಾರ ಶನಿ ದೇವಾಲಯಕ್ಕೆ ತೆರಳಿ ಶನಿ ದೇವರಿಗೆ ಸಾಸಿವೆ ಎಣ್ಣೆಯನ್ನು ಅರ್ಪಿಸಿ.
  • ನಿಯಮಿತವಾಗಿ ‘ಹನುಮಾನ್ ಚಾಲೀಸಾ’ ಪಠಿಸುವುದರಿಂದ ಶನಿ ದೋಷದ ಪ್ರಭಾವ ಶಮನವಾಗುತ್ತದೆ.
  • ಜೀವನದಲ್ಲಿ ಪ್ರಾಮಾಣಿಕತೆ, ಶಿಸ್ತು ಮತ್ತು ಒಳ್ಳೆಯ ಕಾರ್ಯಗಳನ್ನು ಕಾಯ್ದುಕೊಳ್ಳುವುದು ಶನಿಯ ಶುಭ ದೃಷ್ಟಿಗೆ ಕಾರಣವಾಗುತ್ತದೆ.

ಸಾಡೇ ಸಾತಿಯು ನಿಮ್ಮನ್ನು ಕುಗ್ಗಿಸುವುದಕ್ಕಲ್ಲ, ಬದಲಿಗೆ ಜೀವನದಲ್ಲಿ ಪ್ರಬುದ್ಧತೆ ಮತ್ತು ಶಿಸ್ತನ್ನು ಕಲಿಸಿಕೊಡಲು ಬರುತ್ತದೆ. ಧೈರ್ಯ ಮತ್ತು ಪರಿಹಾರ ಮಾರ್ಗಗಳ ಮೂಲಕ ಈ ಅವಧಿಯನ್ನು ಸುಲಭವಾಗಿ ದಾಟಬಹುದು.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version