Headlines

WPL 2026: ಯುಪಿ ವಿರುದ್ಧ ಗೆದ್ದ ಡೆಲ್ಲಿ; ಟೂರ್ನಿಯಿಂದ ಹೊರಬಿದ್ದ ಮುಂಬೈ

ಮಹಿಳಾ ಪ್ರೀಮಿಯರ್ ಲೀಗ್‌ನ ನಾಲ್ಕನೇ ಸೀಸನ್‌ನ ಲೀಗ್ ಹಂತದ 20ನೇ ಮತ್ತು ಅಂತಿಮ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಯುಪಿ ವಾರಿಯರ್ಸ್ ಪರಸ್ಪರ ಮುಖಾಮುಖಿಯಾಗಿದ್ದವು. ಬರೋಡಾದ ಕೋಟಂಬಿಯಲ್ಲಿರುವ ಬಿಸಿಎ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಯುಪಿ ವಾರಿಯರ್ಸ್​ ತಂಡವನ್ನು ಮಣಿಸಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಎಲಿಮಿನೇಟರ್ ಸುತ್ತಿಗೆ ಅರ್ಹತೆ ಪಡೆದುಕೊಂಡಿದೆ. ಡೆಲ್ಲಿ ತಂಡದ ಈ ಗೆಲುವಿನೊಂದಿಗೆ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ ಲೀಗ್ ಹಂತದಲ್ಲೇ ತನ್ನ ಪ್ರಯಾಣ ಮುಗಿಸಿದೆ. ವಾಸ್ತವವಾಗಿ ಮುಂಬೈ ತಂಡ ಎಲಿಮಿನೇಟರ್​ಗೆ ಅರ್ಹತೆ…

Read More

ಆರತಕ್ಷತೆಗೆ ತೆರಳುವಾಗ ಅಡ್ಡಗಟ್ಟಿ ವರನಿಗೆ ಚಾಕು ಇರಿತ ಕೇಸ್​​​ಗೆ ಬಿಗ್ ಟ್ವಿಸ್ಟ್​, ಮದ್ವೆಯಾಗಬೇಕಿದ್ದವಳೇ ವಿಲನ್ – Kannada News | Big Twist To Chamarajanagar Groom stabbed Case: Bride And Her Lover arrested Who Attacked On Ravish for Stop marriage

ಚಾಮರಾಜನಗರ, (ಫೆಬ್ರವರಿ 01): ಕೊಳ್ಳೇಗಾಲದಲ್ಲಿ (Kollegala) ಕಲ್ಯಾಣ ಮಂಟಪಕ್ಕೆ ತೆರಳುತ್ತಿದ್ದ ವರ ರವೀಶ್ ಗೆ ಚಾಕು ಇರಿದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್​ ಸಿಕ್ಕಿದೆ. ರವೀಶ್​​ನ ಮದ್ವೆಯಾಗಬೇಕಿದ್ದ ವಧು ನಯನಾ, ಪ್ರಿಯಕರ ದರ್ಶನ್​, ಓರ್ವ ಅಪ್ರಾಪ್ತನನ್ನು ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಅಸಲಿಯತ್ತು ಬಯಲಾಗಿದೆ. ಮದುವೆ ನಿಲ್ಲಿಸಲು ಪ್ರಿಯಕರನ ಜೊತೆ ಸೇರಿ ನಯನಾ (ರವೀಶ್​​ನ ಮದ್ವೆಯಾಗಬೇಕಿದ್ದ ಯುವತಿ) ಈ ರೀತಿ ಪ್ಲ್ಯಾನ್ ಮಾಡಿದ್ದಾಳೆ ಎನ್ನುವುದು ಕೊಳ್ಳೇಗಾಲ ಪೊಲೀಸ್ ತನಿಖೆಯಲ್ಲಿ ಬಟಾಬಯಲಾಗಿದೆ.​ ತಮಟೆ ಹೊಡೆಯುವ ಕೆಲಸ ಮಾಡ್ತಿದ್ದ ದರ್ಶನ್​ ಎನ್ನುವಾತನನ್ನು ನಯನಾ…

Read More

ಹೆಂಡತಿಗೆ ಮಾಡಿದ ಅವಮಾನಕ್ಕೆ ಸೇಡು ತೀರಿಸಿಕೊಳ್ಳಲು ಜ್ಯುವೆಲರಿ ಶಾಪ್​ನಿಂದ 7 ಕೋಟಿ ರೂ. ಚಿನ್ನ ಕದ್ದ ಗಂಡ! – Kannada News | Andhra Pradesh Eluru Man stolen 7 crore rs Gold for Revenge After Owner Insulted Wife

ಎಲೂರು, ಫೆಬ್ರವರಿ 1: ಆಂಧ್ರಪ್ರದೇಶದ ಎಲೂರಿನಲ್ಲಿ ತನ್ನ ಮಾಲೀಕ ತನ್ನ ಹೆಂಡತಿಗೆ ಮಾಡಿದ ಅವಮಾನದಿಂದ ಬೇಸತ್ತು ಉಮಾಮಹೇಶ್ ಎಂಬ ವ್ಯಕ್ತಿ ಸೇಡು ತೀರಿಸಿಕೊಳ್ಳಲು 7 ಕೋಟಿ ರೂ. ಮೌಲ್ಯದ ಚಿನ್ನವನ್ನು (Gold Theft) ಕದ್ದಿದ್ದಾರೆ. ಕನಕದುರ್ಗಾ ಫೈನಾನ್ಸ್ ಕಂಪನಿಯಲ್ಲಿ ನಡೆದ ಈ ಬೃಹತ್ ಕಳ್ಳತನದ ಹಿಂದಿನ ಉದ್ದೇಶ ಸೇಡು. ವೃತ್ತಿಯಲ್ಲಿ ಕಳ್ಳನಲ್ಲದಿದ್ದರೂ ಮಹೇಶ್ ತನ್ನ ಮಾಲೀಕನಿಗೆ ತೊಂದರೆಯನ್ನುಂಟುಮಾಡಲು ಈ ನಿರ್ಧಾರ ಮಾಡಿದರು. ಅದಾಗಿ 4 ತಿಂಗಳ ನಂತರ ಪೊಲೀಸರು ಆತನನ್ನು ಬಂಧಿಸಿ, ಚಿನ್ನವನ್ನು ವಶಪಡಿಸಿಕೊಂಡರು. ಆಂಧ್ರಪ್ರದೇಶದ ಎಲೂರಿನ…

Read More

ಹೀನಾಯವಾಗಿ ಸೋಲಿಸಿ ಪಾಕಿಸ್ತಾನದ ಕನಸನ್ನು ನುಚ್ಚುನೂರು ಮಾಡಿದ ಭಾರತ – Kannada News | India U19 Dominates Pakistan in Super Six: Secures ICC World Cup Semi Final Spot

2026 ರ ಐಸಿಸಿ ಅಂಡರ್-19 ವಿಶ್ವಕಪ್‌ನ ಸೂಪರ್ ಸಿಕ್ಸ್ ಹಂತದಲ್ಲಿ, ಭಾರತ ಅಂಡರ್-19 ತಂಡವು ಪಾಕಿಸ್ತಾನ ಅಂಡರ್-19 ತಂಡದ ವಿರುದ್ಧ 58 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಸೆಮಿಫೈನಲ್‌ನಲ್ಲಿ ಸ್ಥಾನ ಪಡೆಯುವ ನಿಟ್ಟಿನಲ್ಲಿ ಈ ಪಂದ್ಯ ಎರಡೂ ತಂಡಗಳಿಗೆ ನಿರ್ಣಾಯಕವಾಗಿತ್ತು. ಅದರಂತೆ ಟೀಂ ಇಂಡಿಯಾ ಪಾಕಿಸ್ತಾನವನ್ನು ಭಾರಿ ಅಂತರದಿಂದ ಸೋಲಿಸಿತು. ಈ ಗೆಲುವಿನೊಂದಿಗೆ ಟೀಂ ಇಂಡಿಯಾ ಸೆಮಿಫೈನಲ್ ತಲುಪಿದರೆ, ಇತ್ತ ಪಾಕಿಸ್ತಾನ ಟೂರ್ನಿಯಿಂದ ಹೊರಬಿದ್ದಿದೆ. ಸೂಪರ್ ಸಿಕ್ಸ್ ಹಂತದಲ್ಲಿ ಆಡಿದ 3 ಪಂದ್ಯಗಳನ್ನು ಗೆದ್ದುಕೊಂಡಿರುವ ಟೀಂ ಇಂಡಿಯಾ…

Read More

ಮತ್ತೆ ಬಾಲಿವುಡ್​​ನತ್ತ ಗನ್ನು ಗುರಿ ಇಟ್ಟ ಭೂಗತ ಜಗತ್ತು: ಎಲ್ಲೆಲ್ಲಿ ದಾಳಿ? – Kannada News | Under world mafia again troubling Bollywood here is the recent attacks

ಬಾಲಿವುಡ್ (Bollywood) ಮತ್ತು ಭೂಗತ ಜಗತ್ತಿನ ನಂಟು ಬಹಳ ಹಳೆಯದ್ದು. ದಾವೂದ್ ಇಬ್ರಾಹಿಂಗಿಂತಲೂ ಮುಂಚಿನಿಂದಲೂ ಭೂತದ ಪಾತಕಿಗಳು ಬಾಲಿವುಡ್​​ ಜೊತೆಗೆ ಸಕ್ರಿಯ ನಂಟು ಹೊಂದಿದ್ದಾರೆ. ಬಾಲಿವುಡ್​​ನಲ್ಲಿರುವ ರಾಶಿ-ರಾಶಿ ಹಣ ಭೂಗತ ಜಗತ್ತನ್ನು ಅದರತ್ತ ಸೆಳೆದಿದೆ. ದಾವೂದ್ ಕಾಲದಿಂದಲೂ ಸಿನಿಮಾಗಳ ನಿರ್ಮಾಣ, ನಟ-ನಟಿಯರ ಆಯ್ಕೆ, ಹಫ್ತಾ ವಸೂಲಿ, ಲಾಭ ಹಂಚಿಕೆ, ಸಿನಿಮಾ ಫೈನ್ಯಾನ್ಸ್ ಇನ್ನೂ ಹಲವು ವಿಷಯಗಳಲ್ಲಿ ಭೂಗತ ಲೋಕದವರು ಬಾಲಿವುಡ್​​ ಮೇಲೆ ಪ್ರಭಾವ ಬೀರುತ್ತಲೇ ಬರುತ್ತಿದ್ದಾರೆ. ಬಾಲಿವುಡ್​​ನ ಹಲವಾರು ನಟ-ನಟಿ, ನಿರ್ಮಾಪಕ, ನಿರ್ದೇಶಕರುಗಳು ಭೂಗತ ಪಾತಕಿಗಳಿಂದ ಬೆದರಿಕೆ…

Read More

‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’: ಮೈಲಾರಲಿಂಗನ ಈ ಕಾರ್ಣಿಕದ ಅರ್ಥವೇನು?

ವಿಜಯನಗರ, (ಫೆಬ್ರವರಿ 01):  ಭರತ್ ಹುಣ್ಣಿಮೆ ನಿಮಿತ್ತ ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲ್ಲೂಕಿನ ಹರಪನಹಳ್ಳಿy ದೊಡ್ಡ ಮೈಲಾರ ಮೈಲಾರ ಲಿಂಗೇಶ್ವರನ ಈ ವರ್ಷದ ಕಾರ್ಣಿಕ ಹೊರಬಿದ್ದಿದ್ದು, “ಅಂಬಲಿ ರಾಶಿ ಮುದ್ದಿನ ಗಿಣಿ ಸಮೃದ್ಧಿ ಐತಲೆ ಪರಾಕ್’ ಎಂದು ಗೊರವಪ್ಪ ನುಡಿದಿದ್ದಾನೆ. ಭಕ್ತರ ಜಯಘೋಷದ ನಡುವೆ ಬಿಲ್ಲನ್ನೇರಿದ ಗೊರವಯ್ಯ ಶೂನ್ಯವನ್ನು ದಿಟ್ಟಿಸಿ ನೋಡುತ್ತಾ, ಈ ವರ್ಷದ ಕಾರಣಿಕ ನುಡಿದರು. ಈ ವರ್ಷ ಗೊರವಯ್ಯ “ಅಂಬಲಿ ರಾಶಿ ಮುದ್ದಿನ ಗಿಣಿ ಸಮೃದ್ಧಿ ಐತಲೆ ಪರಾಕ್’ ಎಂಬ ಕಾರಣಿಕ ಹೇಳಿದ್ದಾರೆ. ಈ…

Read More

ಬರದ ನಾಡಲ್ಲಿ ಬಂಗಾರದ ಬೆಳೆ ಬೆಳೆದ ಯುವ ರೈತ: ಮೂರುವರೆ ಎಕರೆ ಜಮೀನಿನಲ್ಲಿ ಲಕ್ಷಾಂತರ ರೂ ಲಾಭ – Kannada News | Yadgir Farmer Earns 16 Lakh from Watermelon in Drought Prone Land

ಯಾದಗಿರಿ, ಫೆಬ್ರವರಿ 01: ಅದು ಬರದ ನಾಡು. ಮಳೆ ಬಂದರೆ ಬೆಳೆ, ಇಲ್ಲವೆಂದರೆ ಬರಗಾಲ ಎನ್ನುವಂತಿದೆ. ಹೀಗಾಗಿ ಬಹುತೇಕ ರೈತರು ಮಳೆ ಆಶ್ರಿತ ಬೆಳೆಗಳನ್ನ ಹೆಚ್ಚಾಗಿ ಬೆಳೆಯುತ್ತಾರೆ. ಅನೇಕ ರೈತರು ನಷ್ಟ ಅನುಭವಿಸುತ್ತಾರೆ. ಆದರೆ ಆ ಯುವ ರೈತ (Farmer) ಮಾತ್ರ ಇದಕ್ಕೆ ವಿರೋಧ ಎನ್ನುವ ಹಾಗೆ ತೋಟಗಾರಿಕೆ ಬೆಳೆಯನ್ನ ಬೆಳೆದು ಭರ್ಜರಿ ಲಾಭ ಗಳಿಸಿದ್ದಾರೆ. ಕೇವಲ ಮೂರುವರೆ ಎಕರೆ ಜಮೀನಿನಲ್ಲಿ ಕಲ್ಲಂಗಡಿ (Watermelon) ಬೆಳೆಯನ್ನ ಬೆಳೆದು ಲಕ್ಷಾಂತರ ರೂ. ಲಾಭ ಪಡೆದು ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾರೆ….

Read More

ಪ್ರಧಾನಿ ಮೋದಿಯಿಂದ ಪಂಜಾಬ್‌ನ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಏರ್​​ಪೋರ್ಟ್ ಎಂದು ಮರುನಾಮಕರಣ – Kannada News | PM Narendra Modi renames Punjabs Adampur airport after Sant Ravidas

ನವದೆಹಲಿ, ಫೆಬ್ರವರಿ 1: ಪ್ರಧಾನಿ ನರೇಂದ್ರ ಮೋದಿ (PM Modi) ಇಂದು ಪಂಜಾಬ್‌ನ ಆದಂಪುರ ವಿಮಾನ ನಿಲ್ದಾಣಕ್ಕೆ ಹೊಸ ಹೆಸರನ್ನು ಅನಾವರಣಗೊಳಿಸಿದ್ದಾರೆ. ಸಂತ ರವಿದಾಸ್ ಅವರ 649ನೇ ಜನ್ಮ ದಿನಾಚರಣೆಯ ಪ್ರಯುಕ್ತ ಈ ವಿಮಾನ ನಿಲ್ದಾಣಕ್ಕೆ ಸಂತ ಗುರು ರವಿದಾಸ್ ವಿಮಾನ ನಿಲ್ದಾಣ ಎಂದು ಮರುನಾಮಕರಣ ಮಾಡಲಾಗಿದೆ. ಇದರ ಜೊತೆಗೆ, ಪ್ರಧಾನಿ ಮೋದಿ ಲುಧಿಯಾನದ ಹಲ್ವಾರ ವಿಮಾನ ನಿಲ್ದಾಣದಲ್ಲಿ ಹೊಸದಾಗಿ ನಿರ್ಮಿಸಲಾದ ಟರ್ಮಿನಲ್ ಅನ್ನು ವರ್ಚುವಲ್ ಆಗಿ ಉದ್ಘಾಟಿಸಿದರು. ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್…

Read More

‘ಟಾಕ್ಸಿಕ್’ ಸಿನಿಮಾ ಟೀಸರ್ ಬಗ್ಗೆ ಅನುರಾಗ್ ಕಶ್ಯಪ್ ಹೇಳಿದ್ದೇನು? – Kannada News | Anurag Kashyap defends Yash’s Toxic movie

ಯಶ್ (Yash) ನಟನೆಯ ‘ಟಾಕ್ಸಿಕ್’ ಸಿನಿಮಾದ ಟೀಸರ್​​ ಕೆಲ ವಾರಗಳ ಹಿಂದೆ ಬಿಡುಗಡೆ ಆಗಿ ಭಾರಿ ವೈರಲ್ ಆಗಿತ್ತು. ಅತ್ಯಂತ ಕಡಿಮೆ ಅವಧಿಯಲ್ಲಿ ದಾಖಲೆ ಸಂಖ್ಯೆಯ ವೀಕ್ಷಣೆಗಳನ್ನು ‘ಟಾಕ್ಸಿಕ್’ ಸಿನಿಮಾ ಟೀಸರ್ ಗಳಿಸಿಕೊಂಡಿತ್ತು. ಸಿನಿಮಾದ ಟೀಸರ್ ನೋಡಿದವರು ಸಿನಿಮಾದ ರಿಚ್​​ಬೆಸ್, ಬೋಲ್ಡ್​​ನೆಸ್ ಅನ್ನು ಕೊಂಡಾಡಿದ್ದರು. ಆದರೆ ಇನ್ನು ಕೆಲವರು ಸಿನಿಮಾದ ಟೀಸರ್​​ನಲ್ಲಿರುವ ಕೆಲ ದೃಶ್ಯಗಳಿಗೆ ಆಕ್ಷೇಪ ಎತ್ತಿದ್ದರು. ‘ಟಾಕ್ಸಿಕ್’ ಸಿನಿಮಾದ ಟೀಸರ್ ಅಶ್ಲೀಲವಾಗಿದೆ, ಪುರುಷ ಅಹಂಕಾರದಿಂದ ತುಂಬಿದೆ ಎಂದೆಲ್ಲ ವಿಮರ್ಶೆ ಮಾಡಲಾಗಿತ್ತು. ಇದೀಗ ಬಾಲಿವುಡ್​ನ ಜನಪ್ರಿಯ ನಿರ್ದೇಶಕ…

Read More

PAK vs AUS: ಪಾಕ್ ವಿರುದ್ಧ 111 ರನ್​ಗಳಿಂದ ಸೋತ ಆಸ್ಟ್ರೇಲಿಯಾ – Kannada News | Pakistan Dominates Australia: 3 0 T20 Series Clean Sweep Before World Cup

ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ (Pakistan vs Australia) ನಡುವಿನ ಟಿ20 ಸರಣಿಯ ಮೂರನೇ ಮತ್ತು ಅಂತಿಮ ಪಂದ್ಯ ಫೆಬ್ರವರಿ 1 ರ ಭಾನುವಾರ ಲಾಹೋರ್‌ನ ಗಡಾಫಿ ಕ್ರೀಡಾಂಗಣದಲ್ಲಿ ನಡೆಯಿತು. ಈ ಪಂದ್ಯವನ್ನು ಆತಿಥೇಯ ಪಾಕಿಸ್ತಾನ ಬರೋಬ್ಬರಿ 111 ರನ್​ಗಳಿಂದ ಗೆದ್ದುಕೊಳ್ಳುವ ಮೂಲಕ ಸರಣಿಯನ್ನು 3-0 ಅಂತರದಿಂದ ಗೆದ್ದುಕೊಂಡಿದೆ. ಅಂದರೆ ಈ ಸರಣಿಯಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ಒಂದೇ ಒಂದು ಪಂದ್ಯವನ್ನು ಗೆಲ್ಲಲಾಗದೆ ಕ್ಲೀನ್ ಸ್ವೀಪ್ ಮುಜುಗರಕ್ಕೊಳಗಾಗಿದೆ. ಟಿ20 ವಿಶ್ವಕಪ್​ಗೂ (T20 World Cup) ಮುನ್ನ ಆಸೀಸ್ ತಂಡದ ಈ…

Read More