‘ವುಡ್ ಯು ರಾದರ್’ ವಿವಾದ, ಸಮಯ್ ರೈನಾ, ರಣ್ವೀರ್ ವಿರುದ್ಧದ ಎಲ್ಲ ಎಫ್​​ಐಆರ್ ರದ್ದು – Kannada News | Supreme Court quashes all FIR against Samay Raina and Ranveer Alhabadia

ಸಮಯ್ ರೈನಾ (Samay Raina) ನಡೆಸಿಕೊಡುತ್ತಿದ್ದ ಜನಪ್ರಿಯ ಯೂಟ್ಯೂಬ್ ಶೋ, ‘ಇಂಡಿಯಾಸ್ ಗಾಟ್ ಲೇಟೆಂಟ್’ನ ಮೊದಲ ಸೀಸನ್​​ನಲ್ಲಿ ಪಾಡ್​​ಕಾಸ್ಟರ್ ರಣ್ವೀರ್ ಅಲ್ಹಾಬಾದಿಯಾ ಅತಿಥಿಯಾಗಿ ಬಂದಾಗ ಆಡಿದ್ದ ಅತ್ಯಂತ ಅಶ್ಲೀಲ ಮಾತಿನಿಂದಾಗಿ ಸಮಯ್ ರೈನಾ, ರಣ್ವೀರ್ ಅಲ್ಹಾಬಾದಿಯಾ ಸೇರಿದಂತೆ ಹಲವರ ವಿರುದ್ಧ ದೂರುಗಳು ದಾಖಲಾಗಿದ್ದವು. ವಿಶೇಷವಾಗಿ ಸಮಯ್ ರೈನಾ ಮತ್ತು ರಣ್ವೀರ್ ಅಲ್ಹಾಬಾದಿಯಾ ವಿರುದ್ಧ ಹಲವು ಕಡೆ ಎಫ್​​ಐಆರ್​​ಗಳು ದಾಖಲಾಗಿದ್ದವು. ಅದೇ ‘ಇಂಡಿಯಾಸ್ ಗಾಟ್ ಲೇಟೆಂಟ್’ ಶೋನಲ್ಲಿ ಅಂಗವಿಕಲರ ಕುರಿತು ಅವಹೇಳನಕಾರಿ ಟೀಕೆಗಳನ್ನು ಮಾಡಿದ್ದಕ್ಕೂ ಸಹ ಎಫ್​​ಐಆರ್ ದಾಖಲಾಗಿತ್ತು. ಇದೀಗ ಎಲ್ಲ ಎಫ್​​ಐಆರ್​​ಗಳನ್ನು ರದ್ದು ಮಾಡಲಾಗಿದೆ.

ವಿವಾದದ ಬಳಿಕ ಸಮಯ್ ರೈನಾ ಮತ್ತು ರಣ್ವೀರ್ ವಿರುದ್ಧ ಹಲವು ರಾಜ್ಯಗಳಲ್ಲಿ ದೂರುಗಳು ದಾಖಲಾಗಿದ್ದವು. ಅದರಂತೆ ಎಫ್​​ಐಆರ್ ಸಹ ದಾಖಲಾಗಿತ್ತು. ಸಮಯ್ ರೈನಾ ಮತ್ತು ರಣ್ವೀರ್ ಅಲ್ಹಾಬಾದಿಯಾ ಅವರನ್ನು ಮುಂಬೈ ಪೊಲೀಸರು ವಿಚಾರಣೆ ಸಹ ನಡೆಸಿದ್ದರು. ಅವರನ್ನು ಮಾತ್ರವೇ ಅಲ್ಲದೆ, ‘ಇಂಡಿಯಾ ಗಾಟ್ ಲೇಟೆಂಟ್’ಶೋನ ಆ ನಿಗದಿತ ಎಪಿಸೋಡ್​​ನಲ್ಲಿ ಭಾಗಿ ಆಗಿದ್ದ ಪ್ರೇಕ್ಷಕರನ್ನು ಸಹ ವಿಚಾರಣೆ ಮಾಡಲಾಗಿತ್ತು. ಶೋಗೆ ಅದಕ್ಕೆ ಮುಂಚೆ ಅತಿಥಿಗಳಾಗಿ ಹೋಗಿದ್ದವರನ್ನು ಸಹ ವಿಚಾರಣೆ ಮಾಡಲಾಗಿತ್ತು.

ನಂತರ ರಣ್ವೀರ್ ಅಲಹಾಬಾದಿಯಾ ಹಾಗೂ ಸಮಯ್ ರೈನಾ ಸುಪ್ರೀಂ ಕೋರ್ಟ್‌ನ ಮೊರೆ ಹೋಗಿ, ತಮ್ಮ ವಿರುದ್ಧ ದಾಖಲಾಗಿರುವ ಎಲ್ಲಾ ಎಫ್‌ಐಆರ್‌ಗಳನ್ನು ಒಂದೆಡೆ ಸೇರಿಸುವಂತೆ ಮತ್ತು ತಮ್ಮ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳದಂತೆ ಕೋರಿದ್ದರು. ವಿಚಾರಣೆಯ ಸಂದರ್ಭದಲ್ಲಿ, ನ್ಯಾಯಾಲಯವು ಅವರ ಹೇಳಿಕೆಗಳನ್ನು ಬಲವಾಗಿ ಟೀಕಿಸಿತು ಮತ್ತು ಇಬ್ಬರಿಗೂ ದಂಡವನ್ನು ಸಹ ಹೇರಿತು ಹಾಗೂ ಅಂಗವಿಕಲರ ಕಲ್ಯಾಣಕ್ಕಾಗಿ ಕೆಲಸ ಮಾಡುವಂತೆ ಸಮಯ್​​ ರೈನಾಗೆ ಆದೇಶಿಸಿತ್ತು.

ಇದನ್ನೂ ಓದಿ:ಆಲಿಯಾ ಮೇಲೆ ಪ್ರೀತಿ, ‘ಆಲ್ಫಾ’ ನೋಡಲು ಇಡೀ ಚಿತ್ರಮಂದಿರ ಬುಕ್ ಮಾಡಿದ ಸಮಯ್ ರೈನಾ

ಇದೀಗ ಸುಪ್ರೀಂಕೋರ್ಟ್, ಶುಕ್ರವಾರ ನೀಡಿದ ಆದೇಶದಲ್ಲಿ ಸಮಯ್ ರೈನಾ ಮತ್ತು ರಣ್ವೀರ್ ಅಲ್ಹಾಬಾದಿಯಾ ವಿರುದ್ಧ ದಾಖಲಾಗಿದ್ದ ಎಲ್ಲ ಎಫ್​​ಐಆರ್​​ಗಳನ್ನು ರದ್ದು ಮಾಡಿದೆ. ಈ ಮೂಲಕ ಸಮಯ್ ರೈನಾ ಮತ್ತು ರಣ್ವೀರ್ ಇಬ್ಬರೂ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಸಮಯ್ ರೈನಾ ಇದೀಗ ‘ಇಂಡಿಯಾ ಗಾಟ್ ಲೇಟೆಂಟ್’ ಶೋನ ಎರಡನೇ ಸರಣಿ ಪ್ರಾರಂಭ ಮಾಡಿದ್ದಾರೆ. ಈ ಬಾರಿ ಶೋ, ಯೂಟ್ಯೂಬ್ ಮತ್ತು ನೆಟ್​​ಫ್ಲಿಕ್ಸ್​ ಎರಡರಲ್ಲೂ ಒಟ್ಟಿಗೆ ಪ್ರಸಾರ ಆಗುತ್ತಿದೆ. ಕಳೆದ ಬಾರಿಗಿಂತಲೂ ಒಳ್ಳೆಯ ಪ್ರತಿಕ್ರಿಯೆಯನ್ನು ಶೋ ಪಡೆದುಕೊಳ್ಳುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಟೆಸ್ಟ್ ಆರಂಭಕ್ಕೂ ಮುನ್ನ ಶ್ರೀಲಂಕಾದಲ್ಲಿ ಅವಘಡ; ಕೋಚ್ ಹತ್ಯೆಗೈದ 17 ವರ್ಷದ ಯುವ ಕ್ರಿಕೆಟಿಗ – Kannada News | Kusal Mendis’ Former Coach Sumith Fernando Killed in Sri Lanka Cricket Brawl

ಭಾರತ ಹಾಗೂ ಶ್ರೀಲಂಕಾ (India vs Sri Lanka ) ನಡುವಿನ ಮೊದಲ ಟೆಸ್ಟ್ ಆರಂಭವಾಗುವುದಕ್ಕೆ ಕೆಲವೇ ಗಂಟೆಗಳ ಮೊದಲು ಶ್ರೀಲಂಕಾದಲ್ಲಿ ಅವಘಡವೊಂದು ಸಂಭವಿಸಿದೆ. ಕುಡಿಯುವ ನೀರಿನ ವಿಚಾರಕ್ಕೆ ಶುರುವಾದ ಜಗಳ ಕ್ರಿಕೆಟ್ ಪಾಠವನ್ನು ಹೇಳಿಕೊಡುವ ಗುರುವಿನ ಹತ್ಯೆಯಲ್ಲಿ ಅಂತ್ಯಗೊಂಡಿದೆ. ಈ ಘಟನೆ ಕೊಲಂಬೊದಲ್ಲಿ ನಡೆದಿದ್ದು, ಕ್ರಿಕೆಟ್ ಪಂದ್ಯದ ಸಮಯದಲ್ಲಿ ಇಬ್ಬರು ಕ್ರಿಕೆಟಿಗರ ನಡುವೆ ಕುಡಿಯುವ ನೀರಿನ ವಿಚಾರಕ್ಕೆ ವಾಗ್ವಾದ ಶುರುವಾಗಿದೆ. ಈ ವಾಗ್ವಾದವನ್ನು ತಿಳಿಗೊಳಿಸಲು 62 ವರ್ಷದ ಕೋಚ್ ಸುಮಿತ್ ಫರ್ನಾಂಡೊ ಮಧ್ಯಪ್ರವೇಶಿದ್ದಾರೆ. ಕ್ರಮೇಣ ಜಗಳ ವಿಕೋಪಕ್ಕೆ ತಿರುಗಿ ಜಗಳವಾಡುತ್ತಿದ್ದ ಇಬ್ಬರು ಯುವ ಕ್ರಿಕೆಟಿಗರಲ್ಲಿ ಒಬ್ಬ ಕೋಚ್ ಮೇಲೆ ತೀವ್ರವಾಗಿ ಹಲ್ಲೆ ಮಾಡಿದ್ದಾನೆ. ಕೂಡಲೇ ಕೋಚ್ ಸುಮಿತ್ ಫರ್ನಾಂಡೊ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸುಮಿತ್ ಫರ್ನಾಂಡೊ ಸಾವನ್ನಪ್ಪಿದ್ದಾರೆ.

ಚಿಕಿತ್ಸೆ ಫಲಕಾರಿಯಾಗದೆ ಸಾವು

ಈ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ಪೊಲೀಸರು 17 ವರ್ಷದ ಶಾಲಾ ಕ್ರಿಕೆಟಿಗನನ್ನು ಬಂಧಿಸಿದ್ದಾರೆ. ಪೊಲೀಸರ ಪ್ರಕಾರ, ಆಗಸ್ಟ್ 8 ರಂದು ಇಬ್ಬರು ಆಟಗಾರರ ನಡುವೆ ಕುಡಿಯುವ ನೀರಿನ ವಿಚಾರದಲ್ಲಿ ವಾಗ್ವಾದ ನಡೆದು, ಅದು ನಂತರ ಕೈಕೈ ಮೀಲಾಯಿಸುವ ಹಂತಕ್ಕೆ ಹೋಗಿದೆ. ಇಬ್ಬರ ನಡುವಿನ ಈ ಜಗಳವನ್ನು ಬಿಡಿಸಲು ಹೋದ ಕೋಚ್ ಸುಮಿತ್ ಫರ್ನಾಂಡೊ ಮೇಲೆ 17 ವರ್ಷದ ಶಾಲಾ ಕ್ರಿಕೆಟಿಗ ದಾಳಿ ಮಾಡಿದ್ದಾನೆ. ಇದರಿಂದ ತೀವ್ರವಾಗಿ ಗಾಯಗೊಂಡಿದ್ದ ಸುಮಿತ್ ಫರ್ನಾಂಡೊ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆರು. ಪ್ರಕರಣದಲ್ಲಿ ಬಂಧಿಸಲ್ಪಟ್ಟ 17 ವರ್ಷದ ಆಟಗಾರನನ್ನು ಕೊಲಂಬೊ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಆಗಸ್ಟ್ 17 ರವರೆಗೆ ಆತನನ್ನು ಬಾಲಾಪರಾಧಿ ಬಂಧನದಲ್ಲಿಡಲು ನ್ಯಾಯಾಲಯ ಆದೇಶಿಸಿದೆ.

ಕುಶಾಲ್ ಮೆಂಡಿಸ್ ಅವರ ಮಾಜಿ ಕೋಚ್

ಸಾವಿಗೀಡಾಗಿರುವ ಸುಮಿತ್ ಫರ್ನಾಂಡೊ ಶ್ರೀಲಂಕಾದ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಕುಸಲ್ ಮೆಂಡಿಸ್ ಅವರ ತರಬೇತುದಾರರಾಗಿದ್ದರು. ಫರ್ನಾಂಡೊ ಶ್ರೀಲಂಕಾದ ಶಾಲಾ ಮತ್ತು ಕ್ಲಬ್ ಕ್ರಿಕೆಟ್‌ನಲ್ಲಿ ಅತ್ಯಂತ ಗೌರವಾನ್ವಿತ ಹೆಸರು. ಅವರು ಈ ಹಿಂದೆ ಪ್ರಿನ್ಸ್ ಆಫ್ ವೇಲ್ಸ್ ಕಾಲೇಜಿನಲ್ಲಿ ಕೆಲಸ ಮಾಡಿದ್ದರು, ಅಲ್ಲಿ ಅವರು ಕುಸಲ್ ಮೆಂಡಿಸ್ ಸೇರಿದಂತೆ ಅನೇಕ ಯುವ ಕ್ರಿಕೆಟಿಗರಿಗೆ ತರಬೇತಿ ನೀಡಿದ್ದರು. ಮೆಂಡಿಸ್ ಪ್ರಸ್ತುತ ಶ್ರೀಲಂಕಾದ ಏಕದಿನ ಮತ್ತು ಟಿ 20 ತಂಡಗಳ ನಾಯಕರಾಗಿದ್ದಾರೆ. ಅವರು ಬ್ಲೂಮ್‌ಫೀಲ್ಡ್ ಕ್ರಿಕೆಟ್ ಮತ್ತು ಅಥ್ಲೆಟಿಕ್ ಕ್ಲಬ್‌ನೊಂದಿಗೆ ತರಬೇತುದಾರರಾಗಿ ಮಾತ್ರವಲ್ಲದೆ, ನಂತರ ಕ್ಲಬ್‌ನ ಕ್ಯುರೇಟರ್ ಆಗಿಯೂ ಸೇವೆ ಸಲ್ಲಿಸಿದ್ದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 4:02 pm, Fri, 14 August 26

Source link

ಖರ್ಗೆ ಟ್ರಸ್ಟ್‌ಗೆ ಭೂಮಿ ಹಂಚಿಕೆ ಕೇಸ್​: ಕ್ರಮಕೈಗೊಳ್ಳದ ಲೋಕಾಯುಕ್ತ ಪೊಲೀಸರಿಗೆ ಹೈಕೋರ್ಟ್ ಶಾಕ್ – Kannada News | Kharge Family Government Land Case: High Court Issues Notice to Lokayukta Police Over Alleged Inaction

ಬೆಂಗಳೂರು, ಆಗಸ್ಟ್​​ 14: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ಹಾಗೂ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯಿಂದ (KIEDBI) ಸಿದ್ದಾರ್ಥ ವಿಹಾರ ಟ್ರಸ್ಟ್‌ಗೆ ಭೂಮಿ ಹಂಚಿಕೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ, ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಪ್ರಕ್ರಿಯೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್, ಲೋಕಾಯುಕ್ತ ಪೊಲೀಸರಿಗೆ ನೋಟಿಸ್ ಜಾರಿಗೊಳಿಸುವಂತೆ ಆದೇಶಿಸಲಾಗಿದೆ.

ಮಹತ್ವದ ಆದೇಶ ನೀಡಿದ ಹೈಕೋರ್ಟ್ 

ದೂರುದಾರ ವಿಜಯರಾಘವ ಮರಾಠೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಮಾಡಿ ಹೈಕೋರ್ಟ್ ಈ ಮಹತ್ವದ ನಿರ್ದೇಶನ ನೀಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಲ್ಲಿಕಾರ್ಜುನ ಖರ್ಗೆ, ರಾಧಾಕೃಷ್ಣ, ರಾಧಾಬಾಯಿ ಖರ್ಗೆ, ರಾಹುಲ್ ಖರ್ಗೆ, ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಸಚಿವ ಎಂ.ಬಿ. ಪಾಟೀಲ್​​ ವಿರುದ್ಧ ದೂರು ದಾಖಲಾಗಿತ್ತು.

ಇದನ್ನೂ ಓದಿ: ‘ಕರ್ನಾಟಕದಲ್ಲಿ ಖರ್ಗೆ ಕುಟುಂಬದಿಂದ 100 ಕೋಟಿ ಮೌಲ್ಯದ ಸರ್ಕಾರಿ ಭೂಮಿ ಲೂಟಿ’; ಬಿಜೆಪಿಯಿಂದ ಗಂಭೀರ ಆರೋಪ

ತಮ್ಮ ಸಿದ್ದಾರ್ಥ ವಿಹಾರ ಟ್ರಸ್ಟ್‌ಗೆ ಲಾಭ ಮಾಡಿಕೊಡುವ ಉದ್ದೇಶದಿಂದ, ಪರಿಶಿಷ್ಟ ಜಾತಿಯ ಟ್ರಸ್ಟ್ ಎಂಬ ಕಾರಣ ನೀಡಿ ಶೇಕಡ 50ರಷ್ಟು ರಿಯಾಯಿತಿ ಪಡೆದುಕೊಳ್ಳಲಾಗಿದೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ. ಏರೋಸ್ಪೇಸ್ ಹಾಗೂ ಸಂಶೋಧನೆಯಲ್ಲಿ ಯಾವುದೇ ಅನುಭವವಿಲ್ಲದಿದ್ದರೂ ದೇವನಹಳ್ಳಿಯ ಏರೋಸ್ಪೇಸ್ ಪಾರ್ಕ್‌ನಲ್ಲಿ ಭೂಮಿ ಮಂಜೂರು ಮಾಡಲಾಗಿದೆ ಹಾಗೂ ಬಿಟಿಎಂ ಬಡಾವಣೆಯಲ್ಲಿ ಶೇಕಡಾ 50ರಷ್ಟು ಸಬ್ಸಿಡಿ ಪಡೆದು 2 ಎಕರೆ ಬಿಡಿಎ ಜಮೀನು ಹಂಚಿಕೆ ಮಾಡಿಕೊಳ್ಳಲಾಗಿದೆ. ಈ ಕುರಿತು ಆರೋಪಗಳು ಕೇಳಿಬಂದ ಬಳಿಕ ಜಮೀನನ್ನು ಹಿಂತಿರುಗಿಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ದೂರು ನೀಡಿದ್ದರೂ ಕ್ರಮಕೈಗೊಳ್ಳದ ಲೋಕಾಯುಕ್ತ ಪೊಲೀಸ್​​

ಈ ಕುರಿತು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಅಧೀನ ನ್ಯಾಯಾಲಯವು ಲೋಕಾಯುಕ್ತ ಪೊಲೀಸರ ತನಿಖೆಗೆ ಆದೇಶಿಸಬೇಕಿತ್ತು. ಆದರೆ, ಸಲ್ಲಿಕೆಯಾಗಿದ್ದ ಪ್ರಮಾಣಪತ್ರ ಕ್ರಮಬದ್ಧವಾಗಿಲ್ಲ ಎಂಬ ಕಾರಣ ನೀಡಿ ತನಿಖೆಗೆ ಆದೇಶಿಸದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು, ತಾನೇ ನೇರವಾಗಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ  ಸೆಕ್ಷನ್ 223ರ ಅಡಿಯಲ್ಲಿ ವಿಚಾರಣೆಗೆ ಮುಂದಾಗಿದೆ. ಆದ್ದರಿಂದ ಈ ಆದೇಶದಲ್ಲಿ ಮಾರ್ಪಾಡು ಮಾಡುವ ಅಗತ್ಯವಿದೆ ಎಂದು ದೂರುದಾರರ ಪರ ವಕೀಲರು ವಾದಿಸಿದರು. ವಾದವನ್ನು ಆಲಿಸಿದ ಹೈಕೋರ್ಟ್, ಲೋಕಾಯುಕ್ತ ಪೊಲೀಸರಿಗೆ ನೋಟಿಸ್ ಜಾರಿಗೊಳಿಸುವಂತೆ ಆದೇಶಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Independence Day: ನಾಳೆ ಬೆಳಗ್ಗೆ ಕೆಂಪು ಕೋಟೆಯಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯ ನೇತೃತ್ವ ವಹಿಸಲಿದ್ದಾರೆ ಪ್ರಧಾನಿ ಮೋದಿ – Kannada News | PM Narendra Modi to lead 80th Independence Day Celebrations at Red Fort Tomorrow Where to Watch Live

ನವದೆಹಲಿ, ಆಗಸ್ಟ್ 14: ದೇಶಾದ್ಯಂತ 80ನೇ ಸ್ವಾತಂತ್ರ್ಯ ದಿನಾಚರಣೆಗೆ (Independence Day 2026) ಎಲ್ಲಾ ವ್ಯವಸ್ಥೆಗಳು ಸಿದ್ಧವಾಗಿವೆ. ಪ್ರಧಾನಿ ನರೇಂದ್ರ ಮೋದಿ (PM Narendra Modi) ದೆಹಲಿಯ ಕೆಂಪು ಕೋಟೆಯಿಂದ ರಾಷ್ಟ್ರೀಯ ಆಚರಣೆಗಳನ್ನು ಮುನ್ನಡೆಸಲಿದ್ದಾರೆ. ಈ ಬಾರಿ, ಆಚರಣೆಗಳು ವಂದೇ ಮಾತರಂನ 150 ವರ್ಷಗಳ ಪರಂಪರೆಯನ್ನು ವಿಶೇಷವಾಗಿ ಸ್ಮರಿಸಲಿವೆ. ಕೆಂಪು ಕೋಟೆಯಲ್ಲಿ ನಡೆಯಲಿರುವ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಮೊದಲ ಬಾರಿಗೆ ವಂದೇ ಮಾತರಂ ಹಾಡುವುದು ವಿಶೇಷ ಆಕರ್ಷಣೆಯಾಗಲಿದೆ.

ಈ ವರ್ಷದ ಕೆಂಪುಕೋಟೆಯ ಸ್ವಾತಂತ್ರ್ಯ ದಿನಾಚರಣೆಯ ನೇರಪ್ರಸಾರವನ್ನು ಆಲ್ ಇಂಡಿಯಾ ರೇಡಿಯೋ (ಆಕಾಶವಾಣಿ), ದೂರದರ್ಶನದಲ್ಲಿ ವೀಕ್ಷಿಸಬಹುದು. ಜೊತೆಗೆ, ಟಿವಿ9 ಕನ್ನಡದಲ್ಲಿ ಕೂಡ ಈ ನೇರಪ್ರಸಾರವನ್ನು ವೀಕ್ಷಿಸಬಹುದು.

ಲೈವ್ ವಿಡಿಯೋ ವೀಕ್ಷಿಸಿ:


ಈ ವರ್ಷದ ಆಚರಣೆಗಳು ವಿಕಸಿತ ಭಾರತ @2047 ಗುರಿಯನ್ನು ಸಾಧಿಸುವಲ್ಲಿ ಯುವಕರ ಪಾತ್ರವನ್ನು ಎತ್ತಿ ತೋರಿಸುತ್ತವೆ. ರಾಷ್ಟ್ರ ನಿರ್ಮಾಣದಲ್ಲಿ ಯುವಕರ ಶಕ್ತಿ, ಆಕಾಂಕ್ಷೆಗಳು ಮತ್ತು ಭಾಗವಹಿಸುವಿಕೆಯನ್ನು ಪ್ರತಿಬಿಂಬಿಸಲು ಈ ಕಾರ್ಯಕ್ರಮಗಳನ್ನು ವಿನ್ಯಾಸಗೊಳಿಸಲಾಗಿದೆ. ನಾಳೆ ಬೆಳಗ್ಗೆ ಪ್ರಧಾನ ಮಂತ್ರಿ ಮೋದಿಯವರನ್ನು ಕೆಂಪು ಕೋಟೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಕ್ಷಣಾ ಖಾತೆ ರಾಜ್ಯ ಸಚಿವ ಸಂಜಯ್ ಸೇಠ್ ಮತ್ತು ರಕ್ಷಣಾ ಕಾರ್ಯದರ್ಶಿ ರಾಜೇಶ್ ಕುಮಾರ್ ಸಿಂಗ್ ಅವರು ಸ್ವಾಗತಿಸಲಿದ್ದಾರೆ. ನಂತರ, ಪ್ರಧಾನ ಮಂತ್ರಿಗಳಿಗೆ ಜಂಟಿ ಮಿಲಿಟರಿ ಮತ್ತು ದೆಹಲಿ ಪೊಲೀಸ್ ಗಾರ್ಡ್‌ನಿಂದ ಸಾಮಾನ್ಯ ವಂದನೆ ಸಲ್ಲಿಸಲಾಗುವುದು. ನಂತರ ಪ್ರಧಾನಿ ಗಾರ್ಡ್ ಆಫ್ ಹಾನರ್ ಸ್ವೀಕರಿಸಲಿದ್ದಾರೆ.

ಇದನ್ನೂ ಓದಿ: Independence Day 2026: 79 ಅಥವಾ 80? ಸ್ವಾತಂತ್ರ್ಯ ದಿನಾಚರಣೆಯ ಲೆಕ್ಕಾಚಾರದಲ್ಲಿ ನಿಮಗೂ ಗೊಂದಲವಿದೆಯೇ? ಇಲ್ಲಿದೆ ಸ್ಪಷ್ಟ ಉತ್ತರ!

ಇದಾದ ನಂತರ ಕೆಂಪು ಕೋಟೆಯ ಆವರಣವನ್ನು ತಲುಪುವ ಪ್ರಧಾನಿ ಮೋದಿ, ರಾಷ್ಟ್ರಧ್ವಜವನ್ನು ಹಾರಿಸಲಿದ್ದಾರೆ. ಈ ಸಮಯದಲ್ಲಿ 1721 ಫೀಲ್ಡ್ ಬ್ಯಾಟರಿಯ ಗನ್ನರ್‌ಗಳು ಸ್ಥಳೀಯ 105 ಎಂಎಂ ಲೈಟ್ ಫೀಲ್ಡ್ ಗನ್‌ಗಳೊಂದಿಗೆ 21-ಗನ್ ಸೆಲ್ಯೂಟ್ ಅನ್ನು ಪ್ರದರ್ಶಿಸಲಿದ್ದಾರೆ. ಈ ಗನ್ ಸೆಲ್ಯೂಟ್ ಅನ್ನು ರಾಷ್ಟ್ರಧ್ವಜ ಹಾರಿಸುವುದರೊಂದಿಗೆ ಏಕಕಾಲದಲ್ಲಿ ನಡೆಸಲಾಗುತ್ತದೆ. ತ್ರಿವರ್ಣ ಧ್ವಜವನ್ನು ಹಾರಿಸಿದ ನಂತರ, ಸೇನಾ ಬ್ಯಾಂಡ್ ವಂದೇ ಮಾತರಂ ಹಾಡಲಿದೆ. ಇದರ ನಂತರ ರಾಷ್ಟ್ರಗೀತೆ ಹಾಡಲಾಗುವುದು. ಪ್ರಧಾನಿ ರಾಷ್ಟ್ರಧ್ವಜವನ್ನು ಹಾರಿಸಿದ ತಕ್ಷಣ, ಭಾರತೀಯ ವಾಯುಪಡೆಯ ಎರಡು ಎಂಐ-17 ಹೆಲಿಕಾಪ್ಟರ್‌ಗಳು ಸಮಾರಂಭದ ಮೈದಾನದಲ್ಲಿ ಹೂವುಗಳನ್ನು ಸುರಿಸಲಿವೆ. ಒಂದು ಹೆಲಿಕಾಪ್ಟರ್ ರಾಷ್ಟ್ರಧ್ವಜವನ್ನು ಪ್ರದರ್ಶಿಸುತ್ತದೆ ಮತ್ತು ಇನ್ನೊಂದು ಹೆಲಿಕಾಪ್ಟರ್ ‘ವಂದೇ ಮಾತರಂ’ ಚಿಹ್ನೆಯೊಂದಿಗೆ ಧ್ವಜವನ್ನು ಪ್ರದರ್ಶಿಸುತ್ತದೆ.

ಪ್ರಧಾನಿ ಮೋದಿ ಭಾಷಣ:

ಇದಾದ ನಂತರ, ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಭಾಷಣದ ನಂತರ ‘ವಂದೇ ಮಾತರಂ’ ಹಾಡಲಾಗುತ್ತದೆ. ಭಾರತದ ಇತಿಹಾಸದಲ್ಲೇ ಮೊದಲ ಬಾರಿಗೆ ಕೆಂಪುಕೋಟೆಯಲ್ಲಿ ನಡೆಯುವ ಸ್ವಾತಂತ್ರ್ಯ ದಿನಾಚರಣೆಯ ಸಮಾರಂಭದಲ್ಲಿ ‘ವಂದೇ ಮಾತರಂ’ ಗೀತೆಯನ್ನು ಅಧಿಕೃತವಾಗಿ ಗಾಯನ ಮಾಡಲಾಗುತ್ತಿದೆ. ನ್ಯಾಷನಲ್ ಕೆಡೆಟ್ ಕಾರ್ಪ್ಸ್ (NCC) ಕೆಡೆಟ್‌ಗಳು ಹಾಗೂ ‘ಮೈ ಭಾರತ್’ (My Bharat) ಸ್ವಯಂಸೇವಕರು ರಾಷ್ಟ್ರೀಯ ಗೀತೆ ‘ವಂದೇ ಮಾತರಂ’ ಅನ್ನು ಹಾಡಲಿದ್ದು, ನಂತರ ರಾಷ್ಟ್ರಗೀತೆಯನ್ನು ಹಾಡಲಾಗುತ್ತದೆ.

ಇದನ್ನೂ ಓದಿ: Independence Day 2026: ಕೆಂಪುಕೋಟೆಯಲ್ಲಿ ಮೊದಲ ಬಾರಿಗೆ ಮೊಳಗಲಿದೆ ‘ವಂದೇ ಮಾತರಂ’ ಗಾಯನ, ಎಷ್ಟು ಗಂಟೆಗೆ ಧ್ವಜಾರೋಹಣ?

ಈ ಬಾರಿ ಒಟ್ಟು 2,500 ಬಾಲಕ ಮತ್ತು ಬಾಲಕಿಯರ ಎನ್‌ಸಿಸಿ ಕೆಡೆಟ್‌ಗಳು ಮತ್ತು ‘ಮೈ ಭಾರತ್’ ಸ್ವಯಂಸೇವಕರು ಇದರಲ್ಲಿ ಭಾಗವಹಿಸಲಿದ್ದಾರೆ. ಅಲ್ಲದೆ, ಜ್ಞಾನಪಥ್‌ನಲ್ಲಿ ಕುಳಿತ ಕೆಡೆಟ್‌ಗಳು ಮತ್ತು ಸ್ವಯಂಸೇವಕರು ‘ವಂದೇ ಮಾತರಂ’ ಆಕಾರವನ್ನು ರೂಪಿಸಲಿರುವುದು ವಿಶೇಷ.

ವಿಶೇಷ ಅತಿಥಿಗಳಿಗೆ ಆಹ್ವಾನ:

ಈ ವರ್ಷ ಸಮಾಜದ ವಿವಿಧ ಕ್ಷೇತ್ರಗಳ ಸುಮಾರು 5,000 ವಿಶೇಷ ಅತಿಥಿಗಳನ್ನು ಕೆಂಪುಕೋಟೆಯ ಈ ಸಂಭ್ರಮಕ್ಕೆ ಸಾಕ್ಷಿಯಾಗಲು ಆಹ್ವಾನಿಸಲಾಗಿದೆ. ‘ಪಿಎಂ ವಿಶ್ವಕರ್ಮ’ ಯೋಜನೆಯಡಿ ನೋಂದಾಯಿತ ಕುಶಲಕರ್ಮಿಗಳು ‘ಪಿಎಂ ಮುದ್ರಾ’ ಯೋಜನೆಯ ಮಹಿಳಾ ಉದ್ಯಮಿಗಳು ‘ಪಿಎಂ ಸ್ವನಿಧಿ’ ಯೋಜನೆಯ ಬೀದಿ ಬದಿ ವ್ಯಾಪಾರಿಗಳು ‘ಭಾರತ್ ಟ್ಯಾಕ್ಸಿ’ ಚಾಲಕರು ಈ ವಿಶೇಷ ಅತಿಥಿಗಳ ಸಾಲಿನಲ್ಲಿ ಸೇರಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಟಾಕ್ಸಿಕ್’ ಸೆಟ್‌ನಲ್ಲಿ ಗರ್ಭಿಣಿ ಕಿಯಾರಾಗೆ ಬಾಡಿಗಾರ್ಡ್ ಆಗಿ ನಿಂತಿದ್ದ ಯಶ್, ಗೀತು – Kannada News | Yash reveals protecting Pregnant Kiara Advani like Bodyguard on Toxic set

‘ರಾಕಿಂಗ್ ಸ್ಟಾರ್’ ಯಶ್ ಅಭಿನಯದ, ಬಹುನಿರೀಕ್ಷಿತ ‘ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್-ಅಪ್ಸ್’ (Toxic: A Fairytale for Grown-Ups) ಸಿನಿಮಾದ ಪ್ರಚಾರ ಕಾರ್ಯ ಭರದಿಂದ ಸಾಗಿದೆ. ಇತ್ತೀಚೆಗೆ ಮುಂಬೈನಲ್ಲಿ ನಡೆದ ಚಿತ್ರದ ಆಡಿಯೋ ಲಾಂಚ್ ಕಾರ್ಯಕ್ರಮದಲ್ಲಿ, ನಾಯಕಿ ಕಿಯಾರಾ ಅಡ್ವಾಣಿ ಅವರ ವೃತ್ತಿಪರತೆ ಹಾಗೂ ಶ್ರದ್ಧೆಯನ್ನು ನಟ ಯಶ್ (Yash) ಮುಕ್ತಕಂಠದಿಂದ ಹೊಗಳಿದ್ದಾರೆ. ಚಿತ್ರೀಕರಣದ ಸಮಯದಲ್ಲಿ ಕಿಯಾರಾ ಅಡ್ವಾಣಿ (Kiara Advani) ಗರ್ಭಿಣಿಯಾಗಿದ್ದರು. ಅಂತಹ ಕಷ್ಟದ ಸಂದರ್ಭದಲ್ಲೂ ಅವರು ತೋರಿದ ಬದ್ಧತೆಯ ಬಗ್ಗೆ ಮಾತನಾಡಿದ ಯಶ್, ‘ಶೂಟಿಂಗ್ ಸೆಟ್‌ನಲ್ಲಿ ನಾನು ಮತ್ತು ನಿರ್ದೇಶಕಿ ಗೀತು ಮೋಹನ್‌ದಾಸ್, ಕಿಯಾರಾಗೆ ಬಾಡಿಗಾರ್ಡ್ ಮತ್ತು ಬೌನ್ಸರ್‌ಗಳಂತೆ ಕೆಲಸ ಮಾಡುತ್ತಿದ್ದೆವು’ ಎಂದು ಸ್ವಾರಸ್ಯಕರ ನೆನಪನ್ನು ಹಂಚಿಕೊಂಡಿದ್ದಾರೆ.

ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಯಶ್, ‘ಕಿಯಾರಾ ತುಂಬಾ ವೃತ್ತಿಪರ ನಟಿ. ಈ ಸಿನಿಮಾ ಅತ್ಯಂತ ಶ್ರಮ ಬೇಡುವಂತಹದ್ದಾಗಿತ್ತು. ಮೊದಲ ಬಾರಿ ಅವರೊಂದಿಗೆ ಮಾತನಾಡಿದಾಗ, ‘ಮಳೆ ಸೀಕ್ವೆನ್ಸ್ ಇತ್ಯಾದಿಗಳಲ್ಲಿ ಅಭಿನಯಿಸಿದ್ದೀರಾ?’ ಎಂದು ಕೇಳಿದ್ದೆ. ‘ಇಲ್ಲ’ ಎಂದು ಅವರು ಹೇಳಿದ್ದರು. ಆದರೆ ಅವರು ಗರ್ಭಿಣಿಯಾಗಿದ್ದರೂ ಸಹ ಶೇ.100ರಷ್ಟು ಬದ್ಧತೆಯಿಂದ ಸೆಟ್‌ಗೆ ಬಂದು ಅಭಿನಯಿಸಿದರು. ನಮಗೆ ಅವರ ಆರೋಗ್ಯದ ಬಗ್ಗೆ ಹೆಚ್ಚು ಆತಂಕವಿತ್ತು. ಹೀಗಾಗಿ ಸೆಟ್‌ನಲ್ಲಿ ಅವರ ರಕ್ಷಣೆಗೆ ನಾವೇ ಬಾಡಿಗಾರ್ಡ್‌ಗಳಂತೆ ನಿಂತು ಕಾಳಜಿ ವಹಿಸಿದೆವು. ಥ್ಯಾಂಕ್ ಯೂ ಕಿಯಾರಾ, ಈ ಸಿನಿಮಾ ಅತ್ಯಂತ ವಿಶೇಷವಾದದ್ದು’ ಎಂದಿದ್ದಾರೆ.

ಟ್ರೋಲ್‌ಗಳಿಗೆ ಯಶ್ ಉತ್ತರ:

ಚಿತ್ರದ ‘ತಬಾಹಿ’ ಹಾಡು ಬಿಡುಗಡೆಯಾದಾಗ, ಅದರಲ್ಲಿನ ಕೆಲವು ದೃಶ್ಯಗಳಿಗಾಗಿ ಕಿಯಾರಾ ಸಾಮಾಜಿಕ ಜಾಲತಾಣಗಳಲ್ಲಿ ಅನಗತ್ಯವಾಗಿ ಟ್ರೋಲ್ ಹಾಗೂ ಟೀಕೆಗೆ ಒಳಗಾಗಿದ್ದರು. ಕಳೆದ ವಾರ ಬೆಂಗಳೂರಿನಲ್ಲಿ ನಡೆದ ಟ್ರೇಲರ್ ಲಾಂಚ್ ಕಾರ್ಯಕ್ರಮದಲ್ಲಿಯೂ ಯಶ್ ಅವರು ಕಿಯಾರಾ ಬೆಂಬಲಕ್ಕೆ ನಿಂತಿದ್ದರು. ‘ಒಬ್ಬ ನಟಿಯಾಗಿ ಅನುಭವಿಸುವ ಸವಾಲುಗಳಿಗೆ ತಲೆಕೆಡಿಸಿಕೊಳ್ಳಬಾರದು. ನಾವು ನಮ್ಮ ಕೆಲಸವನ್ನು ನಂಬಿ ಮುನ್ನಡೆಯಬೇಕು. ಕಾಲಕ್ರಮೇಣ ಜನರು ಅದನ್ನು ಮೆಚ್ಚಿಕೊಳ್ಳುತ್ತಾರೆ’ ಎಂದು ಪ್ರತಿಕ್ರಿಯಿಸಿದ್ದರು.

ಇದನ್ನೂ ಓದಿ: ಯಶ್ ಜತೆ ಕ್ಲ್ಯಾಶ್ ತಪ್ಪಿಸಿಕೊಂಡ ಶ್ರದ್ಧಾ ಕಪೂರ್; ‘ಟಾಕ್ಸಿಕ್’ ಎದುರು ಬರಲ್ಲ ‘ಈಠಾ’ ಚಿತ್ರ

ಆಗಸ್ಟ್ 26ಕ್ಕೆ ವಿಶ್ವದಾದ್ಯಂತ ರಿಲೀಸ್:

ಗ್ಯಾಂಗ್‌ಸ್ಟರ್ ಡ್ರಾಮಾ ಹಿನ್ನೆಲೆಯ ‘ಟಾಕ್ಸಿಕ್’ ಸಿನಿಮಾವನ್ನು ಗೀತು ಮೋಹನ್‌ದಾಸ್ ನಿರ್ದೇಶಿಸಿದ್ದು, ಯಶ್ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕಿಯಾರಾ ಅಡ್ವಾಣಿ ಜೊತೆಗೆ ಹುಮಾ ಖುರೇಷಿ, ರುಕ್ಮಿಣಿ ವಸಂತ್, ತಾರಾ ಸುತಾರಿಯಾ ಹಾಗೂ ನಯನತಾರಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ತಂದೆ-ಮಗನ ನಡುವಿನ ಸಂಕೀರ್ಣ ಬಾಂಧವ್ಯದ ಕಥಾಹಂದರ ಹೊಂದಿರುವ ಈ ಚಿತ್ರವು ಆಗಸ್ಟ್ 26ರಂದು ಕನ್ನಡ, ಇಂಗ್ಲಿಷ್, ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಹೊಸ ಕಾಯ್ದೆ ಮೂಲಕ RSS ಚಟುವಟಿಕೆಗಳಿಗೆ ಬ್ರೇಕ್ ಆರೋಪ: ವಿಧೇಯಕದ ಅಂಶಗಳನ್ನ ಬಚ್ಚಿಟ್ಟ ಗೃಹ ಸಚಿವ – Kannada News | Karnataka’s Bill To Regulate Use Of Public Spaces Has Irked BJP Leaders, Priyank Kharge Hits Back

ಬೆಂಗಳೂರು, (ಆಗಸ್ಟ್ 13): ಸರಕಾರಿ ಆವರಣ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ನೋಂದಾಯಿತವಲ್ಲದ ಸಂಘಟನೆಗಳ ಚಟುವಟಿಕೆಗಳನ್ನು ನಿಯಂತ್ರಿಸುವ ‘ಕರ್ನಾಟಕ ಸಾರ್ವಜನಿಕ ಪ್ರದೇಶ ಪ್ರವೇಶ ನಿಯಂತ್ರಣ ವಿಧೇಯಕ-2026’ಕ್ಕೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ. ಆರ್‌ಎಸ್‌ಎಸ್‌ನ ಪಥಸಂಚಲನ ಹಾಗೂ ಸಮಾವೇಶಗಳಿಗೆ ತಡೆ ಒಡ್ಡುವ ಉದ್ದೇಶ ಹೊಂದಿರುವ ಈ ವಿಧೇಯಕದಲ್ಲಿ ಸಾರ್ವಜನಿಕ ಸ್ಥಳ ಬಳಕೆಗೆ ಪೂರ್ವಾನುಮತಿ ಕಡ್ಡಾಯಗೊಳಿಸಲಾಗಿದೆ. ನಿಯಮ ಉಲ್ಲಂಘನೆಯನ್ನು ಶಿಕ್ಷಾರ್ಹ ಅಪರಾಧವೆಂದು ಪರಿಗಣಿಸಲು ನಿರ್ಧರಿಸಲಾಗಿದೆ.ಇದಕ್ಕೆ ವಿಪಕ್ಷ ಬಿಜೆಪಿ ನಾಯಕರು ವಿರೋಧ ವ್ಯಕ್ತಪಡಿಸಿದ್ದಾರೆ.

ಇನ್ನು ಈ ವಿಧೇಯಕದ ಬಗ್ಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿದ್ದು, ವಿಪಕ್ಷಗಳು ವಿಧೇಯಕವನ್ನು ಓದಿದ್ದಾರಾ? ವಿಧೇಯಕದ ಚರ್ಚೆ ಮಾಡಲಿ, ಏನಾದರೂ ತಪ್ಪಿದ್ರೆ ನೋಡೋಣ. ಈ ವಿಧೇಯಕದಲ್ಲಿ ಆರ್​ಎಸ್​ಎಸ್ ಬಗ್ಗೆ ಇದೆಯಾ? ಸರ್ಕಾರಿ ಜಾಗವನ್ನು ಉಪಯೋಗಿಸುವುದಕ್ಕೆ ಅನುಮತಿ ಬೇಕಲ್ವಾ? ಇದರಲ್ಲಿ ಸಮಸ್ಯೆ ಏನಿದೆ? ನಮ್ಮ ಪಕ್ಷ 140 ವರ್ಷ ಹಳೆಯದ್ದು, ಆದ್ರೂ ಅನುಮತಿ ಪಡೆಯುತ್ತೇವೆ. ಈ ವಿಧೇಯಕಕ್ಕೂ ನೋಂದಣಿ ಆಗದಿರುವುದಕ್ಕೂ ಸಂಬಂಧವಿಲ್ಲ. ನೀವು ಸಲಹೆ ಕೊಡಿ ನಾವು ಸ್ವಾಗತ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ: ಹೊಸ ಕಾಯ್ದೆಯೊಂದಿಗೆ ಕರ್ನಾಟಕದಲ್ಲಿ RSS ಚಟುವಟಿಕೆಗೆ ಬ್ರೇಕ್ ಹಾಕಲು ಸರ್ಕಾರ ಮುಂದಾಗಿದ್ಯಾ?

Source link

ಅತ್ತ ಚಿಲ್ಲರೆ ಹಣದುಬ್ಬರ ಏರಿದರೆ, ಇತ್ತ ಸಗಟು ಹಣದುಬ್ಬರ ಇಳಿಕೆ; ನಾಲ್ಕು ವರ್ಷದಲ್ಲಿ ಮೊದಲ ಬಾರಿ ತಗ್ಗಿದ ಡಬ್ಲ್ಯುಪಿಐ ದರ – Kannada News | WPI inflation rate in 2026 July down month on month, few days after retail inflation rate go up

ನವದೆಹಲಿ, ಆಗಸ್ಟ್ 14: 2026ರ ಜುಲೈ ತಿಂಗಳಲ್ಲಿ ಭಾರತದ ಸಗಟು ಬೆಲೆ ಸೂಚ್ಯಂಕ (WPI) ಆಧಾರಿತ ಹಣದುಬ್ಬರವು (WPI inflation) ಸಣ್ಣ ಮಟ್ಟದ ಇಳಿಕೆಯನ್ನು ದಾಖಲಿಸಿದೆ. ಜೂನ್ ತಿಂಗಳಲ್ಲಿ 9.87% ಇದ್ದ ಹಣದುಬ್ಬರವು ಜುಲೈನಲ್ಲಿ 9.78%ಕ್ಕೆ ಇಳಿದಿದೆ. ಇಂಧನ, ವಿದ್ಯುತ್ ಮತ್ತು ಆಹಾರ ಪದಾರ್ಥಗಳ ಬೆಲೆಗಳಲ್ಲಿನ ಇಳಿಕೆಯೇ ಇದಕ್ಕೆ ಮುಖ್ಯ ಕಾರಣವಾಗಿದೆ. ಹೊಸ 2022-23ರ ಮೂಲ ವರ್ಷದ (base year) ಅಡಿಯಲ್ಲಿ ಸಗಟು ಹಣದುಬ್ಬರವು ತಿಂಗಳಿನಿಂದ ತಿಂಗಳಿಗೆ (month-on-month) ಇಳಿಕೆ ಕಂಡಿರುವುದು ಇದೇ ಮೊದಲು.

ಇಂಧನ ಮತ್ತು ವಿದ್ಯುತ್: ಇಂಧನ ಮತ್ತು ವಿದ್ಯುತ್ ವಲಯದ ಹಣದುಬ್ಬರವು ಜೂನ್‌ನಲ್ಲಿ 27.41% ಇದ್ದದ್ದು, ಜುಲೈನಲ್ಲಿ 20.05%ಕ್ಕೆ ತೀವ್ರವಾಗಿ ಇಳಿದಿದೆ.

ಆಹಾರ ಪದಾರ್ಥಗಳು: ಆಹಾರ ಪದಾರ್ಥಗಳ ಹಣದುಬ್ಬರವೂ ಕೂಡ ಜೂನ್‌ನ 5.49% ರಿಂದ ಜುಲೈನಲ್ಲಿ 5.44%ಕ್ಕೆ ಅಲ್ಪ ಪ್ರಮಾಣದಲ್ಲಿ ಇಳಿಕೆ ಕಂಡಿದೆ.

ತಯಾರಿಕಾ ಉತ್ಪನ್ನಗಳು: ಇತರೆ ವಲಯಗಳು ಇಳಿಕೆ ಕಂಡಿದ್ದರೆ, ತಯಾರಿಕಾ ಉತ್ಪನ್ನಗಳ (Manufactured Products) ಹಣದುಬ್ಬರವು ಜೂನ್‌ನ 7.48% ರಿಂದ ಜುಲೈನಲ್ಲಿ 8.29%ಕ್ಕೆ ಏರಿಕೆಯಾಗಿದೆ.

ಇದನ್ನೂ ಓದಿ: ರೀಟೇಲ್ ಹಣದುಬ್ಬರ ಜುಲೈನಲ್ಲಿ ಶೇ. 4.45ಕ್ಕೆ ಏರಿಕೆ; ಆರ್​ಬಿಐನ ತಾಳಿಕೆ ಮಿತಿಯೊಳಗಿದೆ ಬೆಲೆ ಏರಿಕೆ ದರ

ಪಶ್ಚಿಮ ಏಷ್ಯಾದಲ್ಲಿನ ಯುದ್ಧ ಮತ್ತು ತೈಲ ಪೂರೈಕೆಯ ಮೇಲಿನ ಪರಿಣಾಮದಿಂದಾಗಿ ಈ ವರ್ಷದ ಆರಂಭದಿಂದಲೂ ಸಗಟು ಹಣದುಬ್ಬರವು ಏರಿಕೆ ಕಾಣುತ್ತಿತ್ತು. ಈಗ ತೈಲ ಮತ್ತು ಕಚ್ಚಾ ವಸ್ತುಗಳ ಬೆಲೆಯಲ್ಲಿನ ಅಲ್ಪ ತಂಪಿನಿಂದಾಗಿ ಸ್ವಲ್ಪ ಮಟ್ಟಿಗೆ ನಿಯಂತ್ರಣಕ್ಕೆ ಬಂದಿದೆ. ಆದಾಗ್ಯೂ, ಈ ವಾರ ಬಿಡುಗಡೆಯಾದ ಚಿಲ್ಲರೆ ಹಣದುಬ್ಬರ (Retail inflation) ದತ್ತಾಂಶವು ಆಹಾರ ಬೆಲೆ ಏರಿಕೆಯಿಂದಾಗಿ ಜೂನ್‌ನ 4.38% ರಿಂದ ಜುಲೈನಲ್ಲಿ 4.45%ಕ್ಕೆ ಏರಿಕೆ ಕಂಡಿದೆ ಎಂಬುದು ಗಮನಾರ್ಹ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಇಂದು ಸಂಜೆ ದೇಶವನ್ನು ಉದ್ದೇಶಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಷಣ; ನೇರಪ್ರಸಾರ ವೀಕ್ಷಿಸುವುದು ಹೇಗೆ? – Kannada News | President Droupadi Murmu To Address the Nation today ahead of 80th Independence Day; When And Where To Watch Live?

ನವದೆಹಲಿ, ಆಗಸ್ಟ್ 14: 80ನೇ ಸ್ವಾತಂತ್ರ್ಯ ದಿನಾಚರಣೆಗೂ (Independence Day 2026) ಮುನ್ನ ಇಂದು ಸಂಜೆ 7 ಗಂಟೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು (President Droupadi Murmu) ರಾಷ್ಟ್ರವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಈ ಭಾಷಣವನ್ನು ಆಲ್ ಇಂಡಿಯಾ ರೇಡಿಯೋ ರಾಷ್ಟ್ರೀಯ ಜಾಲ ಮತ್ತು ದೂರದರ್ಶನ ಚಾನೆಲ್‌ಗಳಲ್ಲಿ ಪ್ರಸಾರ ಮಾಡಲಾಗುವುದು. ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮಕ್ಕೂ ಮುನ್ನ ನಡೆಯುವ ಈ ಭಾಷಣವು ರಾಷ್ಟ್ರದ ಪ್ರಮುಖ ಘಟನೆಯಾಗಿದ್ದು, ರಾಷ್ಟ್ರಪತಿಗಳ ಸಂದೇಶವು ದೇಶದ ಸಾಧನೆಗಳು, ಪ್ರಸ್ತುತ ಸವಾಲುಗಳು ಮತ್ತು ಭವಿಷ್ಯದ ಆಕಾಂಕ್ಷೆಗಳನ್ನು ಪ್ರತಿಬಿಂಬಿಸುವ ಸಾಧ್ಯತೆಯಿದೆ.

ಅಧಿಕೃತ ಪ್ರಕಟಣೆಯ ಪ್ರಕಾರ, ರಾಷ್ಟ್ರಪತಿಯವರ ಭಾಷಣವು ಮೊದಲು ಹಿಂದಿಯಲ್ಲಿ, ನಂತರ ಇಂಗ್ಲಿಷ್ ಆವೃತ್ತಿಯಲ್ಲಿ ಪ್ರಸಾರವಾಗಲಿದೆ. ಹಿಂದಿ ಮತ್ತು ಇಂಗ್ಲಿಷ್ ಪ್ರಸಾರದ ನಂತರ, ದೂರದರ್ಶನದ ಪ್ರಾದೇಶಿಕ ಚಾನೆಲ್‌ಗಳು ವಿವಿಧ ಪ್ರಾದೇಶಿಕ ಭಾಷೆಗಳಲ್ಲಿ ಭಾಷಣವನ್ನು ಪ್ರಸಾರ ಮಾಡಲಿವೆ. ಆಕಾಶವಾಣಿಯು ರಾತ್ರಿ 9.30ಕ್ಕೆ ಆಯಾ ಪ್ರಾದೇಶಿಕ ಜಾಲಗಳಲ್ಲಿ ಪ್ರಾದೇಶಿಕ ಭಾಷಾ ಆವೃತ್ತಿಗಳನ್ನು ಪ್ರಸಾರ ಮಾಡಲಿದೆ.

ಇದನ್ನೂ ಓದಿ: Independence Day 2026: ಕರ್ನಾಟಕದ 17 ಪೊಲೀಸ್ ಅಧಿಕಾರಿ, ಸಿಬ್ಬಂದಿಗೆ ಪ್ರತಿಷ್ಠಿತ ರಾಷ್ಟ್ರಪತಿ ಪದಕ ಗೌರವ

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಭಾಷಣವನ್ನು ದೂರದರ್ಶನ, ಡಿಡಿ ನ್ಯೂಸ್ ಮತ್ತು ಆಲ್ ಇಂಡಿಯಾ ರೇಡಿಯೋದ ಅಧಿಕೃತ ಪ್ರಸಾರ ವೇದಿಕೆಗಳಲ್ಲಿ ವೀಕ್ಷಿಸಬಹುದು. ಪ್ರಸಾರ ಭಾರತಿ ಮತ್ತು ದೂರದರ್ಶನದ ಅಧಿಕೃತ ಡಿಜಿಟಲ್ ವೇದಿಕೆಗಳಲ್ಲಿಯೂ ಪ್ರಸಾರ ಲಭ್ಯವಿರುತ್ತದೆ. ಆಲ್ ಇಂಡಿಯಾ ರೇಡಿಯೋ ರಾಷ್ಟ್ರೀಯ ನೆಟ್‌ವರ್ಕ್ ಮೂಲಕ ರೇಡಿಯೊದಲ್ಲಿ ನೇರ ಪ್ರಸಾರವೂ ಲಭ್ಯವಿರುತ್ತದೆ. ಪ್ರಾದೇಶಿಕ ದೂರದರ್ಶನ ಚಾನೆಲ್‌ಗಳು ಮತ್ತು ಪ್ರಾದೇಶಿಕ ಆಲ್ ಇಂಡಿಯಾ ರೇಡಿಯೋ ನೆಟ್‌ವರ್ಕ್‌ಗಳ ಮೂಲಕ ಪ್ರಾದೇಶಿಕ ಭಾಷೆಗಳಲ್ಲಿ ರಾಷ್ಟ್ರಪತಿಗಳ ಭಾಷಣವನ್ನು ಕೇಳಬಹುದು. ದ್ರೌಪದಿ ಮುರ್ಮು ಅವರ ಭಾಷಣ ಟಿವಿ9 ಕನ್ನಡ ನ್ಯೂಸ್ ಚಾನೆಲ್‌ನಲ್ಲಿಯೂ ಪ್ರಸಾರವಾಗಲಿದೆ.

ಇದನ್ನೂ ಓದಿ: ದೇಶಕ್ಕಾಗಿ ಪ್ರಾಣತೆತ್ತ ಮಗನ ನೆನೆದು ರಾಷ್ಟ್ರಪತಿಯ ಹೆಗಲಿಗೊರಗಿ ಕಣ್ಣೀರಿಟ್ಟ ತಾಯಿ; ಮನಕಲಕುವ ವಿಡಿಯೋ ಇಲ್ಲಿದೆ

ಈ ಕೆಳಗಿನ ಲಿಂಕ್ ಕ್ಲಿಕ್ ಮಾಡುವ ಮೂಲಕ ಇಂದು ಸಂಜೆ ಟಿವಿ9 ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಭಾಷಣವನ್ನು ನೀವು ವೀಕ್ಷಿಸಬಹುದು.


ನವದೆಹಲಿಯ ಕೆಂಪುಕೋಟೆಯಿಂದ ಪ್ರಧಾನಿ ನರೇಂದ್ರ ಮೋದಿ ಮಾಡಲಿರುವ ಸ್ವಾತಂತ್ರ್ಯ ದಿನಾಚರಣೆಯ ಭಾಷಣಕ್ಕೂ ಒಂದು ದಿನ ಮುಂಚಿತವಾಗಿ ರಾಷ್ಟ್ರಪತಿಗಳ ಈ ಭಾಷಣ ಪ್ರತಿವರ್ಷ ಪ್ರಸಾರವಾಗುತ್ತದೆ. ಭಾರತವು ಸ್ವಾತಂತ್ರ್ಯದ 80 ವರ್ಷಗಳನ್ನು ಪೂರೈಸುತ್ತಿರುವ ಈ ಸಂದರ್ಭದಲ್ಲಿ ಈ ವರ್ಷದ ಭಾಷಣವು ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರಿನ ರಸ್ತೆ ಗುಂಡಿಗಳನ್ನು ಮುಚ್ಚಲು ಕೈಗೊಂಡ ಕ್ರಮಗಳೇನು? ವಿವರ ನೀಡಲು ಜಿಬಿಎಗೆ ಹೈಕೋರ್ಟ್ ಸೂಚನೆ – Kannada News | Bengaluru Pothole Repairs: High Court Directs GBA to Provide Details on Measures Taken

ರಸ್ತೆ ಗುಂಡಿ, ಹೈಕೋರ್ಟ್Image Credit source: google

ಬೆಂಗಳೂರು, ಆಗಸ್ಟ್​​​ 14: ರಾಜಧಾನಿ ಬೆಂಗಳೂರಿನಲ್ಲಿ (Bangaluru) ವಾಹನ ಸವಾರರಿಗೆ ರಸ್ತೆ ಗುಂಡಿಗಳೇ ದೊಡ್ಡ ತಲೆನೋವು. ರಸ್ತೆ ಗುಂಡಿಗೆ (potholes) ಸಾಕಷ್ಟು ಸಾವು ನೋವುಗಳು ಸಂಭವಿಸುತ್ತಿವೆ. ಏಪ್ರಿಲ್​ನಿಂದ ಈವರೆಗೆ 10,202 ರಸ್ತೆ ಗುಂಡಿಗಳನ್ನು ಮುಚ್ಚಲಾಗಿದೆ. ಹಾಗಾಗಿ ರಸ್ತೆ ಗುಂಡಿಗಳು ಮುಚ್ಚಲು ಕೈಗೊಂಡಿರುವ ಕ್ರಮಗಳ ಕುರಿತು ಪ್ರಮಾಣಪತ್ರದ (ಅಫಿಡವಿಟ್) ಮೂಲಕ ಸಮಗ್ರ ವಿವರ ನೀಡುವಂತೆ ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ (ಜಿಬಿಎ) ಕರ್ನಾಟಕ ಹೈಕೋರ್ಟ್ ಮಹತ್ವದ ನಿರ್ದೇಶನ ನೀಡಿದೆ.

ಬೆಂಗಳೂರಿನ ಪ್ರಮುಖ ಹಾಗೂ ಸಂಪರ್ಕ ರಸ್ತೆಗಳ ಗುಂಡಿಗಳನ್ನು ಮುಚ್ಚುವುದು ಮತ್ತು ರಾಜಕಾಲುವೆಗಳ ಒತ್ತುವರಿ ತೆರವುಗೊಳಿಸಲು ಕೋರಿ ವಿಜಯನ್ ಮೆನನ್ ಅವರು 2015ರಲ್ಲಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಇಂದು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮತ್ತು ನ್ಯಾಯಮೂರ್ತಿ ಕೆ.ಎಸ್. ಹೇಮಲೇಖಾ ಅವರಿದ್ದ ವಿಭಾಗೀಯ ಪೀಠವು ವಿಚಾರಣೆ ಮಾಡಿದೆ.

ಮುಚ್ಚಲಾದ ರಸ್ತೆ ಗುಂಡಿಗಳ ಸಮಗ್ರ ವಿವರ ಕೇಳಿದ ಕೋರ್ಟ್

ರಸ್ತೆ ದುರಸ್ತಿಗಾಗಿ ಪ್ರಸ್ತುತ ಜಾರಿಯಲ್ಲಿರುವ ವ್ಯವಸ್ಥೆಯ ಬಗ್ಗೆ ಮಾಹಿತಿ ನೀಡುವಂತೆ ನ್ಯಾಯಾಲಯವು ಜಿಬಿಎಗೆ ಸೂಚಿಸಿದೆ. ರಸ್ತೆ ಗುಂಡಿಗಳ ಸಮಸ್ಯೆಯನ್ನು ನಿವಾರಿಸಲು ಪ್ರತಿವರ್ಷ ಕೈಗೊಳ್ಳುವ ಕ್ರಮಗಳು, ಹಾಳಾದ ರಸ್ತೆಗಳನ್ನು ಸರಿಪಡಿಸಲು ಹಾಗೂ ಅವುಗಳ ಸ್ಥಿತಿ ಮತ್ತಷ್ಟು ಹದಗೆಡದಂತೆ ತಡೆಯಲು ತೆಗೆದುಕೊಂಡಿರುವ ಕ್ರಮಗಳು ಮತ್ತು ಇದುವರೆಗೆ ಗುರುತಿಸಿ ಮುಚ್ಚಲಾದ ಗುಂಡಿಗಳ ಸಮಗ್ರ ವಿವರಗಳನ್ನು ಈ ಅಫಿಡವಿಟ್‌ನಲ್ಲಿ ಸೇರಿಸಿರಬೇಕು ಎಂದು ಪೀಠವು ಸ್ಪಷ್ಟಪಡಿಸಿದೆ.

ಇದನ್ನೂ ಓದಿ: ಆರೋಗ್ಯ ಇಲಾಖೆ ಕಾರ್ಯದರ್ಶಿಗೆ ಸಿಎಂ ಕ್ಲಾಸ್: ಗುಟ್ಕಾ ನಿಷೇಧ ಆದೇಶ ಶೀಘ್ರದಲ್ಲೇ ಹಿಂಪಡೆಯಲು ಸೂಚನೆ

ಇದಲ್ಲದೆ, ರಸ್ತೆ ಗುಂಡಿಗಳಿಂದಾಗಿ ಸಂಭವಿಸಿದ ಸಾವು ಮತ್ತು ಗಾಯದ ಪ್ರಕರಣಗಳಿಗೆ ಸಂಬಂಧಿಸಿದಂತೆ ದಾಖಲಾಗಿರುವ ಎಫ್‌ಐಆರ್‌ ಕುರಿತು ಮಾಹಿತಿ ಪಡೆದು ತಿಳಿಸುವಂತೆ ರಾಜ್ಯ ಸರ್ಕಾರದ ವಕೀಲರಿಗೆ ನ್ಯಾಯಾಲಯವು ನಿರ್ದೇಶನ ನೀಡಿದೆ.

ರಸ್ತೆ ಗುಂಡಿ ಮುಚ್ಚುವುದು ನಿರಂತರ ಪ್ರಕ್ರಿಯೆ ಎಂದ ಜಿಬಿಎ ಪರ ವಕೀಲರು

ರಸ್ತೆ ಗುಂಡಿಗಳನ್ನು ಮುಚ್ಚುವ ಕಾಲಮಿತಿಯ ಬಗ್ಗೆ ನ್ಯಾಯಾಲಯ ಪ್ರಶ್ನಿಸಿದಾಗ, ‘ಇದು ನಿರಂತರ ಪ್ರಕ್ರಿಯೆ ಎಂದು ಜಿಬಿಎ ಪರ ವಕೀಲರು ಉತ್ತರಿಸಿದರು. ಈ ಹಿಂದೆ 2025ರ ಜೂನ್ 2 ರಂದೂ ಸಹ ಹೈಕೋರ್ಟ್, ಪಾದಚಾರಿಗಳು ಮತ್ತು ವಾಹನ ಸವಾರರ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ರಸ್ತೆಗಳನ್ನು ಉತ್ತಮ ಸ್ಥಿತಿಯಲ್ಲಿಡಲು ಮತ್ತು ರಸ್ತೆ ಗುಂಡಿಗಳ ಸಮಸ್ಯೆಯನ್ನು ನಿಭಾಯಿಸಲು ಕೈಗೊಂಡ ಕ್ರಮಗಳ ಕುರಿತು ಅಫಿಡವಿಟ್ ಸಲ್ಲಿಸಲು ಸೂಚಿಸಿತ್ತು. ಕಳೆದ 2024ರ ಸೆಪ್ಟೆಂಬರ್‌ನಲ್ಲಿ ನಡೆದ ವಿಚಾರಣೆ ವೇಳೆ ಅರ್ಜಿದಾರರು ವಾದ ಮಂಡಿಸಿ, ರಸ್ತೆ ದುರಸ್ತಿಗೆ ಸಮಗ್ರ ನೀತಿಯ ಅಗತ್ಯವಿದೆ, ಜಿಬಿಎಯು ದಾಖಲೆಗಳಲ್ಲಿ ವೈಜ್ಞಾನಿಕ ವಿಧಾನಗಳನ್ನು ಅಳವಡಿಸಿಕೊಂಡಿರುವುದಾಗಿ ಹೇಳಿಕೊಳ್ಳುತ್ತಿದ್ದರೂ, ವಾಸ್ತವದಲ್ಲಿ ನೆಲಮಟ್ಟದಲ್ಲಿ ಅದನ್ನು ಜಾರಿಗೆ ತರುತ್ತಿಲ್ಲ’ ಎಂದು ವಾದಿಸಿದರು.

ಇದನ್ನೂ ಓದಿ: ಪಿಎಸ್‌ಐ ಮೇಲೆ ಪುತ್ರಿ ಕಪಾಳಮೋಕ್ಷ ಪ್ರಕರಣ: ಮಗಳ ಪರವಾಗಿ ಬಹಿರಂಗ ಕ್ಷಮೆ ಕೇಳಿದ ಶಾಸಕ ಬಿ.ಸುರೇಶ್‌ಗೌಡ

ಬೆಂಗಳೂರು ನಗರದಲ್ಲಿ ರಸ್ತೆಗಳ ಸ್ಥಿತಿ ಅತ್ಯಂತ ಶೋಚನೀಯವಾಗಿದ್ದು, ಗುಂಡಿಗಳನ್ನು ಮುಚ್ಚಲು ಅಧಿಕಾರಿಗಳು ಸೂಕ್ತ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ ಎಂಬ ಆಕ್ಷೇಪಣೆಯೊಂದಿಗೆ ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಲಾಗಿದೆ. ನಗರದ ರಸ್ತೆ ಗುಂಡಿ ಸಮಸ್ಯೆಗೆ ದೀರ್ಘಕಾಲೀನ ಪರಿಹಾರ ಕಂಡುಕೊಳ್ಳಲು ಅರ್ಜಿದಾರರು ಹಲವು ಮಹತ್ವದ ಮನವಿ ಮಾಡಿದ್ದಾರೆ. ರಸ್ತೆ ನಿರ್ಮಾಣ ಮತ್ತು ನಿರ್ವಹಣೆಯ ಗುತ್ತಿಗೆ ವಿವರಗಳನ್ನು ಜಿಬಿಎ ವೆಬ್‌ಸೈಟ್‌ನಲ್ಲಿ ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡುವುದು, ದುರಸ್ತಿ ಕಾಮಗಾರಿಗೆ ಮುನ್ನ ಕೇಂದ್ರೀಯ ರಸ್ತೆ ಸಂಶೋಧನಾ ಸಂಸ್ಥೆಯಿಂದ ತಂತ್ರಜ್ಞಾನ ಮತ್ತು ಸಾಮಗ್ರಿಗಳ ಕುರಿತು ಶಿಫಾರಸು ಪಡೆಯುವುದು, ಗುತ್ತಿಗೆದಾರರ ಹಿಂದಿನ ಕಾಮಗಾರಿಯ ಗುಣಮಟ್ಟ ಹಾಗೂ ಆರ್ಥಿಕ ಸಾಮರ್ಥ್ಯವನ್ನು ಆಧರಿಸಿ ಗುತ್ತಿಗೆ ನೀಡುವ ನೀತಿ ರೂಪಿಸುವುದು ಮತ್ತು ರಸ್ತೆ ಗುಂಡಿಗಳಿಂದಾಗಿ ಸಂಭವಿಸುವ ಅಪಘಾತಗಳ ಸಂತ್ರಸ್ತರಿಗೆ ಪರಿಹಾರ ನೀಡಲು ಸೂಕ್ತ ಕಾರ್ಯವಿಧಾನವನ್ನು ರೂಪಿಸುವಂತೆ ಅರ್ಜಿಯಲ್ಲಿ ಕೋರಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಸಣ್ಣ ಸಾಲಗಳಿಗೆ ಮನಬಂದಂತೆ ಬಡ್ಡಿವಿಧಿಸುವ ಬ್ಯಾಂಕುಗಳ ಆಟಕ್ಕೆ ಬ್ರೇಕ್ ಹಾಕಹೊರಟ ಆರ್​ಬಿಐ – Kannada News | Lenders should cap costs for small loans, RBI proposed few changes

ನವದೆಹಲಿ, ಆಗಸ್ಟ್ 14: ಬ್ಯಾಂಕುಗಳು ಮತ್ತು ಎನ್‌ಬಿಎಫ್‌ಸಿಗಳು (NBFCs) ಸಣ್ಣ ಸಾಲಗಾರರಿಗೆ ವಿಧಿಸುವ ಬಡ್ಡಿ ದರ ಮತ್ತು ಹೆಚ್ಚುವರಿ ಶುಲ್ಕಗಳಿಗೆ ಸಂಬಂಧಿಸಿದಂತೆ ಭಾರತೀಯ ರಿಸರ್ವ್ ಬ್ಯಾಂಕ್ (RBI) ಹೊಸ ನಿಯಮಗಳನ್ನು ಪ್ರಸ್ತಾವಿಸಿದೆ. ಸಾಲದ ಮೇಲಿನ ಅತಿಯಾದ ದರ ಅಥವಾ ವೆಚ್ಚವನ್ನು ಕಡಿಮೆ ಮಾಡುವುದು ಮತ್ತು ಪಾರದರ್ಶಕತೆಯನ್ನು ಹೆಚ್ಚಿಸುವುದು ಇದರ ಮುಖ್ಯ ಉದ್ದೇಶವಾಗಿದೆ.

ಹಲವು ಬ್ಯಾಂಕುಗಳು ಕ್ರೆಡಿಟ್ ಸ್ಕೋರ್ ಕಡಿಮೆ ಇರುವ ಗ್ರಾಹಕರಿಗೆ ವರ್ಷಕ್ಕೆ ಶೇ. 36ರವರೆಗಿನ ಬಡ್ಡಿದರಲ್ಲಿ ವೈಯಕ್ತಿಕ ಸಾಲ ನೀಡುವುದುಂಟು. ಕೆಲ ಎನ್​ಬಿಎಫ್​ಸಿಗಳು ಇನ್ನೂ ಹೆಚ್ಚಿನ ಬಡ್ಡಿದರ ನಿಗದಿ ಮಾಡುವುದುಂಟು. ಫೈನಾನ್ಷಿಯರ್​ಗಳ ರೀತಿಯಲ್ಲಿ ಈ ಹಣಕಾಸು ಸಂಸ್ಥೆಗಳು ಗ್ರಾಹಕರಿಂದ ಬಹುತೇಕ ಸುಲಿಗೆ ಮಾಡುತ್ತವೆ. ಆರ್​ಬಿಐ ಪ್ರಸ್ತಾಪಿಸಿದ ಈ ನಿಯಮಗಳು ಜಾರಿಗೆ ಬಂದಲ್ಲಿ ಈ ಸುಲಿಗೆಗಳಿಗೆ ಕಡಿವಾಣ ಬಿದ್ದೀತು. ಬ್ಯಾಂಕುಗಳು ಮಿತಿ ಮೀರಿದ ಬಡ್ಡಿದರದಲ್ಲಿ ಸಾಲ ನೀಡಲಾಗುವುದಿಲ್ಲ.

ಇದನ್ನೂ ಓದಿ: ಏರ್​ಟೆಲ್​ನ ಜನಪ್ರಿಯ 299 ರೂ ಪ್ಲಾನ್ ರದ್ದು; ಕನಿಷ್ಠ ಅನ್​ಲಿಮಿಟೆಡ್ ಡೇಟಾ ಪ್ಲಾನ್ ಈಗ 349 ರೂ

ಆರ್​ಬಿಐನ ಪ್ರಸ್ತಾಪಿತ ನಿಯಮಗಳ ಹೈಲೈಟ್ಸ್

  • ವಾರ್ಷಿಕ ದರ ನಿಯಂತ್ರಣ: ಆರ್‌ಬಿಐ ಪ್ರಸ್ತಾವನೆಯಂತೆ, ಸಾಲದಾತರು ವಾರ್ಷಿಕ ಶೇಕಡಾವಾರು ದರಕ್ಕೆ (Annual Percentage Rate – APR) ಗರಿಷ್ಠ ಮಿತಿಯನ್ನು ನಿಗದಿಪಡಿಸಬೇಕು. ಈ APR ದರದಲ್ಲಿ ಸಾಲದ ಬಡ್ಡಿ ದರದೊಂದಿಗೆ ಎಲ್ಲಾ ಇತರ ಗುಪ್ತ ಶುಲ್ಕಗಳು ಕೂಡ ಸೇರಿರುತ್ತವೆ.
  • ಸಣ್ಣ ಸಾಲದ ವ್ಯಾಖ್ಯಾನ: ಒಬ್ಬ ವ್ಯಕ್ತಿ ಪಡೆಯುವ ₹50,000 ವರೆಗಿನ ವೈಯಕ್ತಿಕ ಸಾಲವನ್ನು ‘ಸಣ್ಣ ಮೌಲ್ಯದ ಸಾಲ’ (Small value loan) ಎಂದು ವರ್ಗೀಕರಿಸಲಾಗಿದೆ. ಇಂತಹ ಸಾಲಗಳಿಗೆ ವಿಧಿಸುವ ಬಡ್ಡಿ ಮತ್ತು ಶುಲ್ಕಗಳು ಸುಲಿಗೆಯಂತಿರಬಾರದು ಎಂದು ಆರ್‌ಬಿಐ ಎಚ್ಚರಿಸಿದೆ.
  • ಯಾರಿಗೆ ಅನ್ವಯ?: ಈ ನಿಯಮಗಳು ಅಂತಿಮಗೊಂಡ ನಂತರ ಎಲ್ಲಾ ವಾಣಿಜ್ಯ ಬ್ಯಾಂಕುಗಳು, ಎನ್‌ಬಿಎಫ್‌ಸಿಗಳು (NBFCs), ಅಡಮಾನ ಸಾಲದಾತರು (Mortgage lenders), ಸಹಕಾರಿ ಬ್ಯಾಂಕುಗಳು ಮತ್ತು ಅಖಿಲ ಭಾರತ ಹಣಕಾಸು ಸಂಸ್ಥೆಗಳಿಗೆ ಅನ್ವಯವಾಗುತ್ತದೆ.
  • ಪಾರದರ್ಶಕತೆ: ಸಾಲದ ದರ ನಿಗದಿಪಡಿಸುವ ವಿಧಾನವು ಪಾರದರ್ಶಕವಾಗಿರಬೇಕು ಮತ್ತು ಸಾಲದಾತರು ತಮ್ಮ ಬೋರ್ಡ್ ಆಫ್ ಡೈರೆಕ್ಟರ್‌ಗಳಿಂದ ಅನುಮೋದಿತವಾದ ಸಮಗ್ರ ನೀತಿಯನ್ನು ಹೊಂದಿರಬೇಕು.
  • ಬಡ್ಡಿದರ ನಿರ್ಧಾರ: ಸಾಲದ ಬಡ್ಡಿದರಗಳನ್ನು ಆಂತರಿಕ ಮಾನದಂಡ (Internal benchmark) ಅಥವಾ ಬಾಹ್ಯ ಮಾನದಂಡ (External benchmark) ಮತ್ತು ರಿಸ್ಕ್ (Risk-based spread) ಆಧರಿಸಿ ನಿರ್ಧರಿಸಬೇಕು. ಯಾವುದೇ ಸಾಲವನ್ನು ನಿಗದಿಪಡಿಸಿದ ಮಾನದಂಡಕ್ಕಿಂತ ಕಡಿಮೆ ದರದಲ್ಲಿ ನೀಡುವಂತಿಲ್ಲ.

ಇದನ್ನೂ ಓದಿ: ಪ್ರಿ-ರೈಡ್ ಟಿಪ್ಸ್ ಬಂದ್‌: ಓಲಾ, ಉಬರ್, ರ‍್ಯಾಪಿಡೋ ಗ್ರಾಹಕರಿಗೆ ಕೇಂದ್ರ ಸರ್ಕಾರದಿಂದ ಬಿಗ್ ರಿಲೀಫ್

ಈ ಕ್ರಮವು ಸಾಲಗಾರರಿಗೆ, ವಿಶೇಷವಾಗಿ ಸಣ್ಣ ಪ್ರಮಾಣದ ಸಾಲ ಪಡೆಯುವವರಿಗೆ ಹೆಚ್ಚಿನ ರಕ್ಷಣೆ ನೀಡಲಿದೆ. ಇದು ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು ಅತಿಯಾದ ಬಡ್ಡಿ ಅಥವಾ ಗುಪ್ತ ಶುಲ್ಕಗಳನ್ನು ವಿಧಿಸುವುದನ್ನು ತಡೆಯುವ ಉದ್ದೇಶವನ್ನು ಹೊಂದಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Exit mobile version