Karnataka Weather Forecast: ಕರಾವಳಿಯಲ್ಲಿ ಭಾರೀ ಮಳೆ, 15ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಬಿರುಗಾಳಿಯ ಭೀತಿ! – Kannada News | Karnataka Weather Update: Heavy Rain and Strong Winds Warned Across State

ಕರಾವಳಿಯಲ್ಲಿ ಭಾರೀ ಮಳೆ, 15ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಬಿರುಗಾಳಿಯ ಭೀತಿ!

ಬೆಂಗಳೂರು, ಜುಲೈ 19: ಕರ್ನಾಟಕದಾದ್ಯಂತ ಮುಂದಿನ ಕೆಲವು ದಿನಗಳ ಕಾಲ ಮಳೆ (Monsoon Rain) ಹಾಗೂ ಬಲವಾದ ಗಾಳಿ ಬೀಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯದ ಕರಾವಳಿ, ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಹವಾಮಾನ ವೈಪರೀತ್ಯ ಉಂಟಾಗಲಿದ್ದು, ಸಾರ್ವಜನಿಕರು ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ.

ಕರಾವಳಿ ಭಾಗದಲ್ಲಿ ಮುಂದುವರಿದ ಅಬ್ಬರ

ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ಮೂರು ಜಿಲ್ಲೆಗಳಿಗೂ ಯೆಲ್ಲೋ ಅಲರ್ಟ್​ ಸೂಚಿಸಲಾಗಿದೆ. ಮಳೆಯೊಂದಿಗೆ ಗಂಟೆಗೆ 30 ರಿಂದ 40 ಕಿಲೋಮೀಟರ್ ವೇಗದಲ್ಲಿ ಬಲವಾದ ಗಾಳಿ ಬೀಸಲಿದ್ದು, ಮೀನುಗಾರರು ಹಾಗೂ ನದಿ ತೀರದ ನಿವಾಸಿಗಳು ಜಾಗರೂಕರಾಗಿರಲು ಕೋರಲಾಗಿದೆ.

ಉತ್ತರ ಒಳನಾಡಿನಲ್ಲಿ ಬಿರುಗಾಳಿಯ ಭೀತಿ

ಬೆಳಗಾವಿ, ಧಾರವಾಡ, ಗದಗ್, ಬೀದರ್, ಕಲಬುರಗಿ ಮತ್ತು ಹಾವೇರಿ ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ. ಈ ಭಾಗದಲ್ಲಿ ಗಾಳಿಯ ವೇಗ ಹೆಚ್ಚಿರಲಿದ್ದು, ಗಂಟೆಗೆ 40 ರಿಂದ 50 ಕಿಲೋಮೀಟರ್ ವೇಗದಲ್ಲಿ ಸುಂಟರಗಾಳಿ ಮಾದರಿಯ ಬಲವಾದ ಗಾಳಿ ಬೀಸಲಿದೆ. ಇದರೊಂದಿಗೆ ಬಾಗಲಕೋಟೆ, ಕೊಪ್ಪಳ, ರಾಯಚೂರು, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಗಳಲ್ಲೂ ಸಹ ಮಳೆಯ ಮುನ್ಸೂಚನೆ ಇಲ್ಲದಿದ್ದರೂ, ಗಂಟೆಗೆ 40 ರಿಂದ 50 ಕಿಲೋಮೀಟರ್ ವೇಗದ ಬಲವಾದ ಗಾಳಿ ಬೀಸುವ ಸಾಧ್ಯತೆ ಹೆಚ್ಚಾಗಿದೆ.

ದಕ್ಷಿಣ ಒಳನಾಡಿನಲ್ಲೂ ಮಳೆ-ಗಾಳಿಯ ಆರ್ಭಟ

ಸಿಟಿ ಹಾಗೂ ಗ್ರಾಮಾಂತರ ಪ್ರದೇಶಗಳು ಸೇರಿದಂತೆ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಹವಾಮಾನ ಬದಲಾಗಲಿದೆ. ಶಿವಮೊಗ್ಗ, ಚಿಕ್ಕಮಗಳೂರು, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಮಂಡ್ಯ, ಮೈಸೂರು, ಹಾಸನ, ಕೊಡಗು, ಚಾಮರಾಜನಗರ ಹಾಗೂ ರಾಮನಗರ ಜಿಲ್ಲೆಗಳ ಕೆಲವು ಕಡೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಲಿದೆ. ಇಲ್ಲಿಯೂ ಸಹ ಗಾಳಿಯ ತೀವ್ರತೆ ಹೆಚ್ಚಿರಲಿದ್ದು, 40 ರಿಂದ 50 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸಲಿದೆ.

ಇನ್ನುಳಿದಂತೆ ಬಳ್ಳಾರಿ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ತುಮಕೂರು ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಪ್ರಮುಖವಾಗಿ ಗಂಟೆಗೆ 40 ರಿಂದ 50 ಕಿಲೋಮೀಟರ್ ವೇಗದ ಬಲವಾದ ಗಾಳಿ ಬೀಸಲಿದ್ದು, ಒಟ್ಟಾರೆ ರಾಜ್ಯದ ಬಹುತೇಕ ಭಾಗಗಳಲ್ಲಿ ಮೋಡ ಕವಿದ ವಾತಾವರಣ ಹಾಗೂ ತಂಪಾದ ಗಾಳಿ ಮುಂದುವರಿಯಲಿದೆ. ಬಲವಾದ ಗಾಳಿಯಿಂದಾಗಿ ಮರಗಳು ಹಾಗೂ ವಿದ್ಯುತ್ ಕಂಬಗಳು ಉರುಳುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಸುರಕ್ಷಿತ ಸ್ಥಳಗಳಲ್ಲಿ ಆಶ್ರಯ ಪಡೆಯಲು ಹವಾಮಾನ ಇಲಾಖೆ ಸಲಹೆ ನೀಡಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Horoscope Today: ಇಂದು ಈ ರಾಶಿಯವರಿಗೆ ದೈವಾನುಗ್ರಹದಿಂದ ಮಾಡಿದ ಕೆಲಸಗಳಲ್ಲಿ ಯಶಸ್ಸು

ಟಿವಿ9 ಡಿಜಿಟಲ್ ವಾಹಿನಿಯಲ್ಲಿ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಅವರು 2026ರ ಜುಲೈ 19, ಭಾನುವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ಪ್ರಸ್ತುತಪಡಿಸಿದ್ದಾರೆ. ಈ ದಿನ ಪರಾಭವನಾಮ ಸಂವತ್ಸರ, ದಕ್ಷಿಣಾಯನ, ಆಷಾಢ ಮಾಸ, ಗ್ರೀಷ್ಮ ಋತು, ಶುಕ್ಲಪಕ್ಷ ಪಂಚಮಿ, ಉತ್ತರಾ ನಕ್ಷತ್ರ, ಪರಿಘ ಯೋಗ ಮತ್ತು ಬಾಲವಕರಣ ಇರುತ್ತದೆ. ರಾಹುಕಾಲ ಸಂಜೆ 5:11 ರಿಂದ 6:47 ರವರೆಗೆ ಇರಲಿದ್ದು, ಸಂಕಲ್ಪ ಕಾಲ ಬೆಳಗ್ಗೆ 10:49 ರಿಂದ ಮಧ್ಯಾಹ್ನ 12:25 ರವರೆಗೆ ಇರುತ್ತದೆ. ಇಂದು ಅಮೃತ ಲಕ್ಷ್ಮಿ ವ್ರತ, ಅಗಡಿ ನಾರಾಯಣ ಜಯಂತಿ ಹಾಗೂ ಮಹಂಗಾವ ಮಹಾರಾಜರ ಪುಣ್ಯದಿನವೂ ಆಗಿದೆ. ರವಿ ಕರ್ಕಾಟಕ ರಾಶಿಯಲ್ಲಿ ಹಾಗೂ ಚಂದ್ರ ಕನ್ಯಾ ರಾಶಿಯ ಉತ್ತರಾ ನಕ್ಷತ್ರದಲ್ಲಿ ಸಂಚರಿಸಲಿದ್ದಾನೆ ಎಂದು ಬಸವರಾಜ ಗುರೂಜಿ ತಿಳಿಸಿದ್ದಾರೆ.

Source link

ಸಕಲ ಸರ್ಕಾರಿ ಗೌರವದೊಂದಿಗೆ ನಾಳೆ ಚೆನ್ನಮ್ಮ ಅಂತ್ಯಕ್ರಿಯೆ: ಮಾವಿನ‌ಕೆರೆ ರಂಗನಾಥಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಅಂತಿಮ ವಿಧಿ ವಿಧಾನ – Kannada News | Former PM H.D. Deve Gowda’s Wife Chennamma to Be Cremated with State Honours Tomorrow

ಸಕಲ ಸರ್ಕಾರಿ ಗೌರವದೊಂದಿಗೆ ನಾಳೆ ಚೆನ್ನಮ್ಮ ಅಂತ್ಯಕ್ರಿಯೆImage Credit source: Tv9 Kannada

ಬೆಂಗಳೂರು, ಜುಲೈ 19: ಅನಾರೋಗ್ಯದಿಂದ ನಿನ್ನೆ (ಜುಲೈ 18) ವಿಧಿವಶರಾಗಿರುವ ಮಾಜಿ ಪ್ರಧಾನಮಂತ್ರಿ ಹೆಚ್​. ಡಿ. ದೇವೇಗೌಡರ ಪತ್ನಿ ಚೆನ್ನಮ್ಮನವರ ಅಂತ್ಯಕ್ರಿಯೆ ನಾಳೆ ಹಾಸನದ ಮಾವಿನ‌ಕೆರೆ ರಂಗನಾಥಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ನಡೆಯಲಿದೆ.  ದೇವೇಗೌಡರ ಪದ್ಮನಾಭನಗರದ ನಿವಾಸ ಸಮೀಪದ ಮೈದಾನದಲ್ಲಿ ಇಂದು ಬೆಳಿಗ್ಗೆ 7 ರಿಂದ 11 ಗಂಟೆವರೆಗೆ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಬೆಳಗ್ಗೆ 11.05ಕ್ಕೆ ಬೆಂಗಳೂರಿನಿಂದ ಹಾಸನ ಜಿಲ್ಲೆಯ ಹೊಳೆನರಸೀಪುರವರೆಗೆ ಚೆನ್ನಮ್ಮ ಅಂತಿಮ ಯಾತ್ರೆ ನಡೆಯಲಿದೆ. ಹೊಳೆನರಸೀಪುರದ ರೇವಣ್ಣ ನಿವಾಸದಲ್ಲಿ ನಾಳೆ ಬೆಳಗ್ಗೆ 7 ರಿಂದ 9.30ರವರೆಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, 10 ಗಂಟೆಗೆ ಹೊಳೆನರಸೀಪುರದಿಂದ ಪಾರ್ಥಿವ ಶರೀರ ರವಾನೆಯಾಗಲಿದೆ. ಬೆಳಗ್ಗೆ 11.30ಕ್ಕೆ ಮಾವಿನ‌ಕೆರೆ ರಂಗನಾಥಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

ಅಂತಿಮಯಾತ್ರೆ ಸಾಗುವ ಮಾರ್ಗ

ಬೆಂಗಳೂರಿನಿಂದ ನೆಲಮಂಗಲ ಕ್ರಾಸ್, ಸೋಲೂರು ಕ್ರಾಸ್, ಮರೂರು ಹ್ಯಾಂಡ್ ಪೋಸ್ಟ್, ಕುಣಿಗಲ್ ಕ್ರಾಸ್, ಬೆಳ್ಳೂರು ಕ್ರಾಸ್, ಕದಬಳ್ಳಿ ಕ್ರಾಸ್, ಹಿರಿಸಾವೆ, ಚನ್ನರಾಯಪಟ್ಟಣ, ಎಲೆಯೂರು, ಹಾಸನ ಡೈರಿ ಸರ್ಕಲ್, ಭೂನಳ್ಳಿ ಕ್ರಾಸ್, ಶಾಂತಿ ಗ್ರಾಮ, N.R.ಸರ್ಕಲ್ ಮೂಲಕ ಮೊಸಳೆ ಹೊಸಳ್ಳಿಗೆ ತಲುಪಲಿದೆ.

ಇದನ್ನೂ ಓದಿ: ಆ್ಯಸಿಡ್‌ ದಾಳಿಗೂ ಮುನ್ನ ಮಾಜಿ ಪ್ರಧಾನಿ ಪತ್ನಿ ಚೆನ್ನಮ್ಮ ಹೇಗಿದ್ರು ಗೊತ್ತಾ? ಇಲ್ಲಿವೆ ಅಪರೂಪದ ಚಿತ್ರಗಳು

ಶೈತ್ಯಾಗಾರ ಪೆಟ್ಟಿಗೆ ಮೇಲೆರಗಿ ದೇವೇಗೌಡರು ಕಣ್ಣೀರು

ಇನ್ನು ಪತ್ನಿಯ ಅಗಲುವಿಕೆಯ ನೋವಲ್ಲಿರುವ ದೇವೇಗೌಡರು, ದುಃಖ ತಾಳಲಾರದೆ ಚೆನ್ನಮ್ಮ ಅವರ ಪಾರ್ಥಿವ ಶರೀರ ಇರಿಸಿದ್ದ ಶೈತ್ಯಾಗಾರ ಪೆಟ್ಟಿಗೆ ಮೇಲೆರಗಿ ಕಣ್ಣೀರು ಹಾಕಿದ್ದಾರೆ. ಈ ವೇಳೆ ಮಾಜಿ ಪ್ರಧಾನಿಗಳನ್ನು ಮಗಳು ಶೈಲಜಾ ಸಂತೈಸಿದ್ದಾರೆ.

ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ

ಚೆನ್ನಮ್ಮನ್ನವರ ಅಂತಿಮ ದರ್ಶನ ಪಡೆದ ಬಳಿಕ ಸಕಲ ಸರ್ಕಾರಿ ಗೌರವದೊಂದಿಗೆ ಅವರ ಅಂತ್ಯಕ್ರಿಯೆಗೆ ತೀರ್ಮಾನಿಸಿರೋದಾಗಿ ಸಿಎಂ ಡಿ.ಕೆ. ಶಿವಕುಮಾರ್​​ ತಿಳಿಸಿದ್ದಾರೆ. ಈ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ದೇಶದ ಮಾಜಿ ಪ್ರಧಾನಿಯ ಧರ್ಮಪತ್ನಿ, ಕೇಂದ್ರ ಸಚಿವರ ತಾಯಿ ಎಂಬುದನ್ನು ಗಮನದಲ್ಲಿರಿಸಿ ಈ ತೀರ್ಮಾನ ಮಾಡಿರೋದಾಗಿ ಹೇಳಿದ್ದಾರೆ. ಇಂದು ನಡೆಯಲಿರುವ ಕ್ಯಾಬಿನೆಟ್​​ ಸಭೆಯಲ್ಲಿಯೂ ಚೆನ್ನಮ್ಮನವರಿಗೆ ಗೌರವ ನಮನ ಸಲ್ಲಿಸಲಾಗುತ್ತೆ ಎಂದು ಮಾಹಿತಿ ನೀಡಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 6:41 am, Sun, 19 July 26

Source link

ಜಾಕ್ವೆಲಿನ್ ಫರ್ನಾಂಡಿಸ್​ಗೆ ಮುಜುಗರ ತಂದ ವಿಡಿಯೋ ಸಾಂಗ್; ಬ್ಲರ್ ಮಾಡಿದ ತಂಡ – Kannada News | Jacqueline Fernandez Music Video Controversy: Wardrobe Malfunction Rumors Go Viral

ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರ ಹೊಸ ಮ್ಯೂಸಿಕ್ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಸೋನು ತುಕ್ರಾಲ್ ಮತ್ತು ಬಿ ಪ್ರಾಕ್ ಧ್ವನಿಯಲ್ಲಿ ಮೂಡಿಬಂದಿರುವ ಈ ಹಾಡು ಜುಲೈ 15 ರಂದು ಬಿಡುಗಡೆಯಾಗಿದೆ. ಹಾಡು ಬಿಡುಗಡೆಯಾದ ಬೆನ್ನಲ್ಲೇ, ನಟಿಯ ಬಟ್ಟೆಯ ಮುಜುಗರದ ಕ್ಷಣದ ಕುರಿತು ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ. ಇದರಿಂದ ನಟಿ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಹಾಡಿನ ಒಂದು ಸಣ್ಣ ಭಾಗದಲ್ಲಿ ಜಾಕ್ವೆಲಿನ್ ಅವರ ಮುಜುಗರದ ಕ್ಷಣ ಸೆರೆಯಾಗಿದೆ ಎಂದು ನೆಟ್ಟಿಗರು ಆರೋಪಿಸಿದ್ದು, ಇದಕ್ಕೆ ಸಂಬಂಧಿಸಿದ ಕ್ಲಿಪ್ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಆದರೆ, ವಿವಾದ ಬೆಳೆಯುತ್ತಿದ್ದಂತೆ ಯೂಟ್ಯೂಬ್‌ನಲ್ಲಿ ಆ ನಿರ್ದಿಷ್ಟ ಭಾಗವನ್ನು ಬ್ಲರ್ ಮಾಡಲಾಗಿದೆ. ಇದು ಅಭಿಮಾನಿಗಳ ಗಮನಕ್ಕೆ ಬಂದಿದೆ.

ವಿಡಿಯೋ ವೈರಲ್ ಆದ ನಂತರ ಚಿತ್ರತಂಡ ಈ ತಪ್ಪು ತಿದ್ದಿಕೊಂಡಿರಬಹುದು ಎಂದು ಅಂದಾಜಿಸಲಾಗಿದೆ. ಈ ಇಡೀ ಘಟನೆಯ ಬಗ್ಗೆ ಜಾಕ್ವೆಲಿನ್ ಫರ್ನಾಂಡಿಸ್ ಆಗಲಿ ಅಥವಾ ವಿಡಿಯೋ ನಿರ್ಮಾಪಕರಾಗಲಿ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.

ಇನ್ನು ಸಿನಿಮಾಗಳ ವಿಷಯಕ್ಕೆ ಬಂದರೆ, ಜಾಕ್ವೆಲಿನ್ ಫರ್ನಾಂಡಿಸ್ ಇತ್ತೀಚೆಗಷ್ಟೇ ಅಕ್ಷಯ್ ಕುಮಾರ್ ನಟನೆಯ ‘ವೆಲ್‌ಕಮ್ ಟು ದಿ ಜಂಗಲ್’ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಇದು ದೊಡ್ಡ ತಾರಾಗಣದ ಸಿನಿಮಾವಾಗಿದ್ದು, ಸುನಿಲ್ ಶೆಟ್ಟಿ, ದಿಶಾ ಪಟಾನಿ, ಅರ್ಷದ್ ವಾರ್ಸಿ, ರವೀನಾ ಟಂಡನ್ ಮತ್ತು ಪರೇಶ್ ರಾವಲ್ ಸೇರಿದಂತೆ ಬಾಲಿವುಡ್‌ನ ಪ್ರಮುಖ ನಟರು ಈ ಚಿತ್ರದಲ್ಲಿದ್ದಾರೆ.

ಇದನ್ನೂ ಓದಿ:  ಸುಕೇಶ್ ಚಂದ್ರಶೇಖರ್ ಕೇಸ್: ಸುಪ್ರೀಂ ಕೋರ್ಟ್‌ನಿಂದ ಅರ್ಜಿ ಹಿಂಪಡೆದ ನಟಿ ಜಾಕ್ವೆಲಿನ್ ಫರ್ನಾಂಡಿಸ್

ಇನ್ನು 200 ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ಜಾಕ್ವೆಲಿನ್ ಫರ್ನಾಂಡಿಸ್ ಅವರು ಸಿಲುಕಿಕೊಂಡಿದ್ದಾರೆ. ಈ ಪ್ರಕರಣ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ಈ ಪ್ರಕರಣದ ಆರೋಪಿ ಸುಕೇಶ್ ಚಂದ್ರಶೇಖರ್ ಜೊತೆ ಜಾಕ್ವೆಲಿನ್ ಡೇಟಿಂಗ್ ಮಾಡುತ್ತಾ ಇದ್ದಿದ್ದೇ ಅವರಿಗೆ ಸಮಸ್ಯೆ ತಂದೊಡ್ಡಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ದಿನ ಭವಿಷ್ಯ: ಇಂದು ಈ ರಾಶಿಯವರು ಎಷ್ಟೇ ಆತ್ಮಪ್ರಶಂಸೆ ಮಾಡಿಕೊಂಡರೂ ಪ್ರಯೋಜನವಾಗದು – Kannada News | Daily Horoscope for July 18, 2026: Uttarayan Greeshma season, Ashada Masa shukla Paksha Sunday astrology Prediction

ಮೇಷ ರಾಶಿ:

ಉಚಿತವಾದ ಚಿಕಿತ್ಸೆಯಿಂದ ಆರಂಭದಲ್ಲಿಯೇ ಕಾಯಿಲೆಗೆ ಪರಿಹಾರ ಕಂಡುಕೊಳ್ಳಿ. ನಿಮ್ಮ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ವಿರೋಧಿಗಳು ತಡಯಬಹುದು. ಸ್ತ್ರೀ ನಾಯಕತ್ವಕ್ಕೆ ನಿಮ್ಮ ಆಯ್ಕೆ ಮಾಡುವ ಸಾಧ್ಯತೆ ಇದೆ. ಬಂಧುಗಳ ಸಹಕಾರದಿಂದ ನಿಮ್ಮ‌ಋಣ ಬಾಧೆ ಸದ್ಯ ತೀರುವುದು. ಅವಾಚ್ಯ ಮಾತುಗಳಿಂದ ನಿಮ್ಮನ್ನು ಯಾರಾದರೂ ನಿಂದಿಸಬಹುದು.‌ ಅಲಕ್ಷ್ಯ ಮಾಡಿದರೆ ಉತ್ತಮ. ಗೊತ್ತಿಲ್ಲದೇ ನಿಮ್ಮದಲ್ಲದ ವಸ್ತುವನ್ನು ತೆಗೆದುಕೊಳ್ಳುವಿರಿ.

ವೃಷಭ ರಾಶಿ:

ವಾಹನದ ಉದ್ಯಮವನ್ನು ನಡೆಸುತ್ತಿದ್ದರೆ ನಿಮಗೆ ಲಾಭವಾಗುವ ಸಾಧ್ಯತೆ ಹೆಚ್ಚು. ಆಕಸ್ಮಿಕ ಧನಲಾಭವು ನಿಮ್ಮನ್ನು ಖುಷಿಯಾಗಿಡಲಿದೆ. ಸಾಲವನ್ನು ಪಡೆಯಲು ಸ್ನೇಹಿತನ ಸಹಾಯ ಕೇಳುವಿರಿ. ರಾಜಕೀಯವಾಗಿ ಪ್ರೇರಿತವಾದ ಮಾತುಗಳು ನಿಮ್ಮಿಂದ ಬರಬಹುದು. ನಿಮ್ಮಿಂದಾದ ತಪ್ಪನ್ನು ನೀವೇ ಸರಿಮಾಡಿಕೊಳ್ಳಬೇಕು. ಎಲ್ಲದರಲ್ಲಿಯೂ ಉತ್ತಮವಾದುದನ್ನೇ ಆರಿಸಿಕೊಳ್ಳುವಿರಿ. ಆಪ್ತರು ಕಾರಣಾಂತರಗಳಿಂದ ದೂರಾಗಬಹುದು. ಸಕಾರಾತ್ಮಕ ಆಲೋಚನೆಯನ್ನು ನೀವು ಹೆಚ್ಚು ಮಾಡಿ. ಉತ್ತಮ ಕಾರ್ಯಕ್ಕೆ ಯಾರಿಂದಲಾದರೂ ಪ್ರೇರಣೆ ಪಡೆಯಿರಿ.

ಮಿಥುನ ರಾಶಿ:

ಸಂಗಾತಿಯನ್ನು ಸಮೂಹದಲ್ಲಿ ನಿಂದಿಸುವುದು ಸುಮ್ಮನೇ ಕಲಹಕ್ಕೆ ಕಾರಣವಾಗುವುದು. ವ್ಯಕ್ತಿತ್ವದಿಂದ ನೀವು ಸಮಾಜದಲ್ಲಿ ವಿಶೇಷ ಸ್ಥಾನವನ್ನು ಪಡೆದುಕೊಳ್ಳುತ್ತೀರಿ. ಆರೋಗ್ಯವು ಸುದೃಢವಾಗಿ ಇರಲಿದೆ. ಸಂಬಂಧಗಳನ್ನು ಕೂಡಿಸಿಕೊಳ್ಳುವ ಪ್ರಯತ್ನ ಮಾಡಿ. ಉತ್ಸಾಹದ ರಹಸ್ಯವನ್ನು ಹೇಳುವುದು ಬೇಡ. ತಾಯಿಗಾಗಿ ಹಣವನ್ನು ಖರ್ಚು ಮಾಡಬೇಕಾಗಬಹುದು. ದುರಭ್ಯಾಸವನ್ನು ರೂಢಿಸಿಕೊಂಡಿದ್ದು ಅರಿವಿಗೆ ಬರುವುದು. ನಿಮಗೆ ಪರೀಕ್ಷೆಯ ದಿನವಾಗಿರುವುದು. ಆತ್ಮವಿಶ್ವಾಸದ ಕೊರತೆಯನ್ನು ನೀಗಿಸಿಕೊಳ್ಳುವುದು ಮುಖ್ಯ.

ಕರ್ಕಾಟಕ ರಾಶಿ:

ಇಂದು ಯಾರ ಜೊತೆಗೂ ವಿವಾದಕ್ಕೆ ಸಿಲುಕುವುದು ಬೇಡ. ಅನ್ಯರ ತಪ್ಪಿದ್ದರೂ ಅದನ್ನು ಸರಿಮಾಡಿಕೊಳ್ಳುವ ಪ್ರಯತ್ನ ಮಾಡಿ. ದೌರ್ಬಲ್ಯಗಳನ್ನು ಮೆಟ್ಟಿ ನಿಲ್ಲುವ ಪ್ರಯತ್ನವನ್ನು ಮಾಡಬೇಕಾದೀತು. ಹಣವನ್ನು ಸಂಪಾದಿಸಬೇಕು ಎನ್ನುವ ಅತಿಯಾದ ಆಸೆ ನಿಮ್ಮ ಮನಸ್ಸಿನಲ್ಲಿ ಬೇರೂರುವುದು. ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚು ಗಮನಬೇಕು. ಕಾನೂನಿನ ಚೌಕಟ್ಟಿನಲ್ಲಿ ನಿಮ್ಮ ನಡೆವಳಿಕೆ ಇರಲಿ. ಕಾರಣಾಂತರಗಳಿಂದ ನಿಮ್ಮ ಜೀವನದ ಮಾರ್ಗವು ಬದಲಾಗುವುದು. ಇರುವ ಸಮಯವನ್ನು ಸದ್ವಿನಿಯೋಗ ಮಾಡಿ.

ಸಿಂಹ ರಾಶಿ:

ಇಂದು ನೀವು ಮನಸ್ಸಿಗೆ ಹಿಡಿಸದ ಸಂಗತಿಗಳ ವಿರುದ್ಧ ಧೈರ್ಯವಾಗಿ ಮಾತನಾಡುವಿರಿ. ಹಲವು ದಿಗಳಿಂದ ಮಾಡಿದ ನಿಮ್ಮ ಪ್ರಾಮಾಣಿಕ ಪ್ರಯತ್ನಕ್ಕೆ ಫಲವಿದೆ. ಮಾನಸಿಕ ಸ್ವಾಸ್ಥ್ಯವನ್ನು ಸರಿ ಮಾಡಿಕೊಳ್ಳಲು ಪ್ರಯತ್ನಿಸುವಿರಿ. ಕುಟುಂಬದ ವಾರ್ತೆಗಳು ನಿಮಗೆ ಸಂತೋಷವನ್ನು ತರುವುದು. ಪ್ರೇಮವು ಯಾವುದೇ ಗೊಂದಲವನ್ನು ಸೃಷ್ಟಿಸಬಹುದು. ನಿಂದನೆಯನ್ನು ಗಂಭೀರವಾಗಿ ತೆಗೆದುಕೊಳ್ಳುವುದು ಬೇಡ. ನಿಮ್ಮ ವಸ್ತುಗಳನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಿ. ಪ್ರಯಾಣದಲ್ಲಿ ಜಾಗರೂಕತೆಯಿಂದ ಇರಿ. ಕಷ್ಟವನ್ನು ಪರಿಹರಿಸಿಕೊಳ್ಳುವ ಮಾರ್ಗವು ಸಿಗದು.

ಕನ್ಯಾ ರಾಶಿ :

ಸಮಯ ಸಿಕ್ಕಾಗ ನೀವು ಸೃಜನಾತ್ಮಕ ಚಟುವಟಿಕೆಯಲ್ಲಿ ತೊಡಗಿಕೊಳ್ಳುವಿರಿ. ಇಂದು ಸಮಯವನ್ನು ವ್ಯರ್ಥ ಮಾಡಬೇಡಿ. ಇಂದು ಸಂಬಂಧಗಳಿಗೆ ಬೆಲೆ ಕೊಡದೇ ಹಣದ ಹಿಂದೆ ಹೋಗಿ ಅದು ಹಾಳುಮಾಡಿಕೊಳ್ಳುವಿರಿ. ಕೆಲವು ಸೂಕ್ಷ್ಮತೆಗಳನ್ನು ಅರ್ಥಮಾಡಿಕೊಳ್ಳಬೇಕಿದೆ. ಭೂಮಿಯ ಖರೀದಿಗೆ ಉತ್ತಮ ಕಾಲ. ಯಾವ ಕಾರ್ಯಕ್ಕೂ ಸಹಾಯ ಸಿಗದೇ ಕಷ್ಟವಾದೀತು. ಸ್ತ್ರೀಯರಿಗೆ ಸಹಾಯ ಮಾಡಲು ಹೋಗಿ ಹಾಸ್ಯಕ್ಕೆ ಒಳಗಾಗುವಿರಿ. ಹೂಡಿಕೆಯನ್ನು ಮಾಡುವುದು ನಿಮಗೆ ಅನಿವಾರ್ಯವಾಗಬಹುದು.

ತುಲಾ ರಾಶಿ:

ಒಂದೆ ಕಾಡೆ ಸಾಲ ಮುಚ್ಚಲು ಮತ್ತೊಂದು ಕಡೆ ಸಾಲವನ್ನು ಮಾಡಬೇಕಾಗಬಹುದು. ಸಮಯದಲ್ಲಿ ಅಹಿತಕರ ಸುದ್ದಿಗಳ ಸೂಚನೆಗಳೂ ಇವೆ. ಇಂದು ಮನಸ್ಸಿನಲ್ಲಿ ಭಯ ಮತ್ತು ಖಿನ್ನತೆಯಂತಹ ವಿಷಯಗಳಿಗೆ ಕಾರಣವಾಗಬಹುದು. ಸಹೋದರನ ಜೊತೆ ಆಪ್ತ ಮಾತುಕತೆ ನಡೆಯಲಿದೆ. ಸ್ನೇಹಿತರ ಸಹಾಯ ಪಡೆಯಲು ಧನವನ್ನು ವ್ಯಯಿಸಬೇಕಾಗುವುದು. ಅಪರಿಚಿತ ಕರೆಗಳಿಗೆ ಸೊಪ್ಪು ಹಾಕಬೇಡಿ. ಯಾವುದನ್ನೇ ಆದರೂ ಸ್ವಾಭಿಮಾನವನ್ನು ಬಿಟ್ಟು ಇರಲಾಗದು.

ವೃಶ್ಚಿಕ ರಾಶಿ:

ಕೆಲವು ವೈಫಲ್ಯಗಳಿಂದ ನೀವು ಪಾಠವನ್ನು ಕಲಿಯುವ ಅನಿವಾರ್ಯತೆ ಸೃಷ್ಟಿ. ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಲಿದ್ದೀರಿ. ನಿಮ್ಮವರ ಮಾತುಗಳಿಂದ ಗಾಬರಿಯಾಗಲಿದ್ದೀರಿ. ಊಹಿಸದೇ ಇರುವ ಮಾತುಗಳನ್ನು ಕೇಳಬೇಕಾದೀತು. ವಿದ್ಯಾರ್ಥಿಗಳು ಅಧ್ಯಯನಕ್ಕೆಂದು ಮನೆಯಿಂದ ದೂರ ಇರುವರು. ಪಾಲುದಾರಿಕೆ ವಿಷಯವು ಪ್ರಸ್ತಾಪವಾದಾಗ ಪ್ರಯೋಜನವನ್ನು ತಿಳಿದುಕೊಳ್ಳಿ. ಆಸ್ತಿಯ ಹಂಚಿಕೆಯು ನಿಮಗೆ ಸಮಾಧಾನ ತರದು. ಸಣ್ಣ ಕೆಲಸವಾದರೂ ಶ್ರದ್ಧೆಯಿಂದ ಮಾಡುವಿರಿ. ನಿಮ್ಮ ಹೆಚ್ಚಿನವರ ಭೇಟಿಯಾಗುವುದು.

ಧನು ರಾಶಿ:

ದೇಹ ಮತ್ತು ಮನಸ್ಸೂ ಸಮಾಧಾನದಿಂದ ಇರುವುದು. ಕೆಲವು ದುಃಖದ ಸುದ್ದಿಗಳು ಮನಸ್ಸನ್ನು ಹತಾಶೆಗೊಳಿಸಬಹುದು. ಆರಂಭದ ಉತ್ಸಾಹವು ಅಂತ್ಯದ ವರೆಗೆ ಇರಲಾರದು. ಆಹಾರವು ನಿಮ್ಮನ್ನು ಉತ್ಸಾಹದಿಂದ ಇಡುವುದು. ಇತರರಿಗೆ ಧನಸಹಾಯ ಮಾಡಿ ಕಳೆದುಕೊಳ್ಳುವಿರಿ. ಒತ್ತಡಗಳು ಸ್ವಲ್ಪ ಮಟ್ಟಿಗೆ ಕಡಿಮೆ ಆಗಲಿದೆ. ನಿಮ್ಮ ತಿಳುವಳಿಕೆಯ ಬಗ್ಗೆ ಅಹಂಕಾರ ಬೇಡ. ಪ್ರಶಂಸೆಯಿಂದ ಅಹಂಕಾರವು ಬರುವುದು. ‌ಮಿತ್ರರಿಗೆ ವಂಚಿಸುವ ಆಲೋಚನೆ ಬರಲಿದೆ.

ಮಕರ ರಾಶಿ:

ಮೋಜಿಗಾಗಿ ಹೂಡಿಕೆ ಮಾಡಿ ಹಣವನ್ನು ಕಳೆದುಕೊಳ್ಳುವ ಉದ್ಯಮಿಗಳಿಗೆ ಕಳೆದ ಆರಂಭದ ದಿನಗಳನ್ನು ನೆನೆದು ಸಂತೋಷವಾಗಲಿದೆ. ಬಹಳಷ್ಟು ಖರ್ಚಿದ್ದು ಹಣದ ಹೊಂದಾಣಿಕೆ ಕಷ್ಟವಾದೀತು. ನಿಮ್ಮ ಜೀವನದ ಪ್ರತಿಯೊಂದು ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ನೀವು ಬಯಸುವಿರಿ. ನಿಮ್ಮ ಕೋಪವನ್ನು ನಿಯಂತ್ರಿಸುವುದು ಬಹಳ ಮುಖ್ಯ. ಅನವಶ್ಯಕವಾಗಿ ಆಡುವ ಮಾತುಗಳು ನಿಮ್ಮ ಮೇಲಿನ ಗೌರವವನ್ನು ಕಡಿಮೆ ಮಾಡಿಸೀತು. ತಾರತಮ್ಯ ಭಾವವನ್ನು ಬಿಡಬೇಕಾಗುವುದು.

ಕುಂಭ ರಾಶಿ:

ಬಂಧುಗಳ ಜೊತೆ ಉತ್ತಮ ಬಾಂಧವ್ಯವನ್ನು ಇಟ್ಟುಕೊಳ್ಳುವ ಪ್ರಯತ್ನ ಮಾಡುವಿರಿ. ಹೊಸತನವನ್ನು ತಂದುಕೊಳ್ಳುವಲ್ಲಿ ನೀವು ಸದಾ ಪ್ರಯತ್ನಶೀಲರು. ಆದರೆ ಆಲಸ್ಯವನ್ನು ಬಿಡಬೇಕಾದೀತು. ಪ್ರೀತಿಗೋಸ್ಕರ ಹಣವನ್ನು ಖರ್ಚುಮಾಡುವಿರಿ. ಸುಮ್ಮನೇ ಕುಳಿತರೂ ನಿಮ್ಮನ್ನು ಕೆರಳಿಸಬಹುದು. ಅಪರಿಪೂರ್ಣ ಕೆಲಸದ ಯಾದಿಯನ್ನು ತಯಾರಿಸಿ ಮುಂದುವರಿಯಿರಿ. ಇಂದು ಹಸಿವು ಹೆಚ್ಚಾಗಿ ಸಂಕಟಪಡುವಿರಿ. ರಾಜಕೀಯವನ್ನು ಬಂಧುಗಳ ನಡುವೆಯೂ ಮಾಡುವಿರಿ

ಮೀನ ರಾಶಿ :

ಮಕ್ಕಳ ಜೊತೆ ಹೆಚ್ಚು ಸಮಯವನ್ನು ಕಳೆಯುವಿರಿ. ಉತ್ಸಾಹವು ನಿಮ್ಮಲ್ಲಿ ಇರುವುದು. ಅಪ್ರಯೋಜಕ ಕೆಲಸಗಳನ್ನು ಮಾಡಲು ನೀವು ಹಿಂದೇಟು ಹಾಕಬಹುದು. ಸ್ನೇಹಿತರ ಸಜವಾಸದಿಂದ‌ನಿಮಗೆ ಅಪವಾದ ಬರಬಹುದು. ಪ್ರಯಾಣ ಮಾಡಬೇಕಾಗಿದ್ದರೂ ಭಯವು ನಿಮ್ಮನ್ನು ಕಾಡಬಹುದು. ಅನಾರೋಗ್ಯದಿಂದಾಗಿ ಸಮಸ್ಯೆಯನ್ನು ಎದುರಿಸಬೇಕಾಗುವುದು. ನಿಮ್ಮ ವಸ್ತುವು ಕಳ್ಳರಿಂದ ಅಪಹರಣ ಆಗುತಗತದೆವೆಂಬ ಭಯವು ಇರುವುದು.

ಇಂದಿನ ಪಂಚಾಂಗ:

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ದಕ್ಷಿಣಾಯನ, ಋತು : ಗ್ರೀಷ್ಮ, ಚಾಂದ್ರಮಾಸ : ಆಷಾಢ, ಸೌರ ಮಾಸ : ಕರ್ಕಾಟಕ, ಮಹಾನಕ್ಷತ್ರ : ಪುನರ್ವಸು, ವಾರ : ಭಾನು, ಪಕ್ಷ : ಶುಕ್ಲ, ತಿಥಿ : ಪಂಚಮೀ, ನಿತ್ಯನಕ್ಷತ್ರ : ಉತ್ತರಾಫಲ್ಗುಣೀ, ಯೋಗ : ಸಿದ್ಧ, ಕರಣ : ಭದ್ರ, ಸೂರ್ಯೋದಯ – 06 – 03 am, ಸೂರ್ಯಾಸ್ತ – 06 – 48 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 17:13 – 18:49, ಯಮಗಂಡ ಕಾಲ 12:26 – 14:02, ಗುಳಿಕ ಕಾಲ 15:37 – 17:33

– ಲೋಹಿತ್ ಹೆಬ್ಬಾರ್ – 8762924271 (what’s app only)

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 12:11 am, Sun, 19 July 26

Source link

ಚೆನ್ನಮ್ಮನ ಅಂತಿಮ ದರ್ಶನ ಪಡೆದು ದೇವೇಗೌಡ, ಕುಮಾರಸ್ವಾಮಿಗೆ ಸಾಂತ್ವನ ಹೇಳಿದ ಸಿದ್ದರಾಮಯ್ಯ – Kannada News | Siddaramaiah Pays Last Respects to HD Devegowda Wife Chennamma

ಬೆಂಗಳೂರು, (ಜುಲೈ 18): ಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಪತ್ನಿ ಚೆನ್ನಮ್ಮ ಇಂದು (ಜುಲೈ 18) ವಿಧಿವಶರಾಗಿದ್ದಾರೆ. ಪದ್ಮನಾಭನಗರದ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಹಲವು ರಾಜಕೀಯ ನಾಯಕರು, ಸ್ವಾಮೀಜಿಗಳು ಅಂತಿಮ ದರ್ಶನಕ್ಕೆ ಆಗಮಿಸುತ್ತಿದ್ದಾರೆ. ಇನ್ನು ದೇವೇಗೌಡ ಅವರ ಶಿಷ್ಯ ಮಾಜಿ ಸಿಎಂ ಸಿದ್ದರಾಂಯ್ಯನವರು ಸಹ ಚೆನ್ನಮ್ಮನ ಅಂತಿಮ ದರ್ಶನ ಪಡೆದುಕೊಂಡರು. ಬಳಿಕ ದೇವೇಗೌಡರ ಪಕ್ಕದಲ್ಲೇ ಕುಳಿತು ಕೈಹಿಡಿದು ಸಾಂತ್ವನ ಹೇಳಿದರು. ಹಾಗೇ ಹೆಚ್.ಡಿ.ರೇವಣ್ಣ, ಕುಮಾರಸ್ವಾಮಿಗೆ ಸಾಂತ್ವನ ಹೇಳಿ ತೆರಳಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

IND vs ENG: ಲಾರ್ಡ್ಸ್‌ ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ 2 ಬದಲಾವಣೆ ಖಚಿತ – Kannada News | India vs England 3rd ODI: Predicted Playing XI and Key Changes at Lord’s

ಭಾರತ ಮತ್ತು ಇಂಗ್ಲೆಂಡ್ (India vs England) ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಎರಡು ಪಂದ್ಯಗಳು ಮುಗಿದಿದ್ದು ಉಭಯ ತಂಡಗಳು ತಲಾ ಒಂದೊಂದು ಪಂದ್ಯವನ್ನು ಗೆದ್ದಿವೆ. ಕಾರ್ಡಿಫ್‌ನಲ್ಲಿ ನಡೆದ ಎರಡನೇ ಪಂದ್ಯವನ್ನು ಇಂಗ್ಲೆಂಡ್ ಗೆದ್ದು ಸರಣಿಯನ್ನು ಸಮಬಲಗೊಳಿಸಿದೆ. ಸರಣಿಯ ಮೂರನೇ ಪಂದ್ಯ ಈಗ ಲಾರ್ಡ್ಸ್‌ನಲ್ಲಿ (Lord’s) ನಡೆಯಲಿದೆ. ಟೀಂ ಇಂಡಿಯಾ ಎರಡನೇ ಪಂದ್ಯವನ್ನು ಸೋಲಲು ತಂಡದ ಬ್ಯಾಟಿಂಗ್‌ ವಿಭಾಗದ ಅದರಲ್ಲೂ ಆಲ್‌ರೌಂಡರ್​ಗಳ ವೈಫಲ್ಯವೇ ಪ್ರಮುಖ ಕಾರಣವಾಗಿತ್ತು. ಅಲ್ಲದೆಯೇ ವಾಷಿಂಗ್ಟನ್ ಸುಂದರ್ ಅವರ ಗಾಯ ಕೂಡ ತಂಡಕ್ಕೆ ಬೌಲಿಂಗ್ ಕೊರತೆಯನ್ನುಂಟು ಮಾಡಿತು. ಇದೀಗ 3ನೇ ಪಂದ್ಯದಿಂದ ಸುಂದರ್ ಹೊರಬಿದ್ದಿದ್ದು, ಅವರ ಬದಲಿಗೆ ಯಾರಿಗೆ ಅವಕಾಶ ಸಿಗುತ್ತದೆ ಎಂಬುದನ್ನು ಕಾದುನೋಡಬೇಕಿದೆ. ಇದರರ್ಥ ಟೀಂ ಇಂಡಿಯಾದ ಪ್ಲೇಯಿಂಗ್ 11ನಲ್ಲಿ ಬದಲಾವಣೆಯಾಗುವುದು ಖಚಿತವಾಗಿದೆ.

ಬ್ಯಾಟಿಂಗ್ ವಿಭಾಗ ಹೇಗಿರಲಿದೆ?

ಎಂದಿನಂತೆ ರೋಹಿತ್ ಶರ್ಮಾ ಹಾಗೂ ಶುಭ್​ಮನ್ ಗಿಲ್ ತಂಡದ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಗಿಲ್ ಪ್ರಸ್ತುತ ಉತ್ತಮ ಫಾರ್ಮ್​ನಲ್ಲಿದ್ದು, ಅದನ್ನು ಮುಂದುವರೆಸಲಿದ್ದಾರೆ. ಆದರೆ ರೋಹಿತ್ ಶರ್ಮಾರ ಕಳಪೆ ಫಾರ್ಮ್​ ತಂಡಕ್ಕೆ ದೊಡ್ಡ ತಲೆನೋವಾಗಿದೆ. ಸರಣಿಯ ಎರಡೂ ಪಂದ್ಯಗಳಲ್ಲೂ ರೋಹಿತ್ ಅವರ ಪ್ರದರ್ಶನ ಕಳಪೆಯಾಗಿತ್ತು. ಇದರ ನಡುವೆ ರೋಹಿತ್ ಅವರ ವಿದಾಯದ ವದಂತಿ ಕೂಡ ದೊಡ್ಡ ಸಂಚಲನ ಮೂಡಿಸಿದೆ. ಹೀಗಾಗಿ ರೋಹಿತ್ ತನ್ನ ನಿವೃತ್ತಿಯನ್ನು ಬಯಸುತ್ತಿರುವವರಿಗೆ ಹಾಗೂ ತನ್ನ ಹಳೆಯ ಲಯಕ್ಕೆ ಮರಳಲು ಇದು ಉತ್ತಮ ಹಾಗೂ ಕೊನೆಯ ಅವಕಾಶ ಎನ್ನಬಹುದು.

ಇಶಾನ್ ಕಿಶನ್ ಔಟ್

ಮೂರನೇ ಕ್ರಮಾಂಕದಲ್ಲಿ ಕೊಹ್ಲಿ ಬ್ಯಾಟ್ ಬೀಸಲಿದ್ದು, ಕಳೆದ ಪಂದ್ಯದಲ್ಲಿ ಅವರು ಅರ್ಧಶತಕ ಬಾರಿಸಿರುವುದರಿಂದ ಅವರ ಬಗ್ಗೆ ಯಾವುದೇ ಕಳವಳವಿಲ್ಲ. ಆದರೆ ಲಾರ್ಡ್ಸ್‌ ಮೈದಾನದಲ್ಲಿ ಕೊಹ್ಲಿಗೆ ಇದುವರೆಗೆ ಒಂದೇ ಒಂದು ಅರ್ಧಶತಕವನ್ನು ಬಾರಿಸಲು ಸಾಧ್ಯವಾಗಿಲ್ಲ. ಹೀಗಾಗಿ ಕೊಹ್ಲಿ ಈ ಬಾರಿ ಆ ಬರವನ್ನು ನೀಗಿಸಿಕೊಳ್ಳುವ ಇರಾದೆಯೊಂದಿಗೆ ಕಣಕ್ಕಿಳಿಯಲಿದ್ದಾರೆ. ಇತ್ತ ನಾಲ್ಕನೇ ಕ್ರಮಾಂಕದಲ್ಲಿ ಇಶಾನ್ ಕಿಶನ್ ಅವರಿಂದ ನಿರೀಕ್ಷಿತ ಮೂಡಿಬಂದಿಲ್ಲ. ಆದ್ದರಿಂದ ಇಶಾನ್ ಕಿಶನ್​ ಅವರನ್ನು ಹೊರಗಿಡುವ ಸಾಧ್ಯತೆಗಳಿವೆ. ಹೀಗಾಗಿ 4ನೇ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್ ಆಡಲಿದ್ದಾರೆ.

IND vs ENG: ಲಾರ್ಡ್ಸ್‌ನಲ್ಲಿ ಶತಕಗಳ ಬರ! ಟೀಂ ಇಂಡಿಯಾಕ್ಕೆ ಗೆಲುವೊಂದೇ ಗುರಿಯಲ್ಲ

ಸುಂದರ್ ಬದಲಿಗೆ ಯಾರು?

ಇನ್ನು ಆಲ್‌ರೌಂಡರ್​ಗಳ ವಿಭಾಗದಲ್ಲಿ ವಾಷಿಂಗ್ಟನ್ ಸುಂದರ್ ಇಲ್ಲದಿರುವ ಕಾರಣ ಅವರ ಬದಲಿಗೆ ಅನಾರೋಗ್ಯದ ಕಾರಣ ಕಳೆದ ಪಂದ್ಯದಲ್ಲಿ ಆಡದ ಕೆಎಲ್ ರಾಹುಲ್​ಗೆ ಅವಕಾಶ ನೀಡುವ ಸಾಧ್ಯತೆಗಳಿವೆ. ಉಳಿದಂತೆ ಶಿವಂ ದುಬೆ ಹಾಗೂ ಅಕ್ಷರ್ ಪಟೇಲ್ ಆಲ್‌ರೌಂಡರ್​ಗಳಾಗಿ ಕಾಣಿಸಿಕೊಳ್ಳಲಿದ್ದಾರೆ. ಕುಲ್ದೀಪ್ ಯಾದವ್ ಸ್ಪಿನ್ ಬೌಲರ್ ಆಗಿ ಆಡುವ ಸಾಧ್ಯತೆಗಳಿವೆ. ಇನ್ನು ಬೌಲಿಂಗ್‌ ವಿಭಾಗದಲ್ಲಿ ಗುರ್ನೂರ್ ಬ್ರಾರ್, ಜಸ್ಪ್ರೀತ್ ಬುಮ್ರಾ ಮತ್ತು ಪ್ರಸಿದ್ಧ್ ಕೃಷ್ಣ ಆಡುವುದು ಖಚಿತ.

ಭಾರತದ ಸಂಭಾವ್ಯ ಆಡುವ 11: ಶುಭ್​ಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಶಿವಂ ದುಬೆ, ಅಕ್ಷರ್ ಪಟೇಲ್, ಗುರ್ನೂರ್ ಬ್ರಾರ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ ಮತ್ತು ಪ್ರಸಿದ್ಧ್ ಕೃಷ್ಣ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IND vs ENG: ಸರಣಿ ನಿರ್ಧಾರಕ ಪಂದ್ಯ ಎಷ್ಟು ಗಂಟೆಗೆ ಆರಂಭ; ಉಚಿತವಾಗಿ ವೀಕ್ಷಿಸುವುದು ಹೇಗೆ? – Kannada News | India vs England 3rd ODI: Lord’s Match Date, Time, Live Stream and Squads Info

ಭಾರತ ಮತ್ತು ಇಂಗ್ಲೆಂಡ್ (India vs England) ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಮೂರನೇ ಮತ್ತು ನಿರ್ಣಾಯಕ ಪಂದ್ಯ ಭಾನುವಾರ (ಜುಲೈ 19) ಲಂಡನ್‌ನ ಐತಿಹಾಸಿಕ ಲಾರ್ಡ್ಸ್ (Lord’s) ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ. ಎರಡೂ ತಂಡಗಳು ಸರಣಿ ಗೆಲುವಿನ ಮೇಲೆ ಕಣ್ಣಿಟ್ಟಿವೆ. ಹೀಗಾಗಿ ಸರಣಿಯ ಈ ಹೈವೋಲ್ಟೇಜ್ ಕದನ ಯಾವಾಗ, ಎಲ್ಲಿ, ಎಷ್ಟು ಗಂಟೆಗೆ ನಡೆಯಲಿದೆ ಎಂಬುದನ್ನು ನಾವು ನಿಮಗೆ ತಿಳಿಸಲಿದ್ದೇವೆ. ಸರಣಿಯ ಮೊದಲ ಪಂದ್ಯ ಭಾರತೀಯ ಕಾಲಮಾನ ಮಧ್ಯಾಹ್ನ 3:30ಕ್ಕೆ ಆರಂಭವಾಗಿತ್ತು. ಆದರೆ ಎರಡನೇ ಏಕದಿನ ಪಂದ್ಯ ಇನ್ನು ತಡವಾಗಿ ಆರಂಭವಾಗಿತ್ತು. ಅಂದರೆ ಪಂದ್ಯ ಭಾರತೀಯ ಕಾಲಮಾನ ಸಂಜೆ 5:30 ಕ್ಕೆ ಆರಂಭವಾಗಿತ್ತು. ಇದೀಗ ಮೂರನೇ ಏಕದಿನ ಪಂದ್ಯ ಬದಲಾದ ಸಮಯದಲ್ಲಿ ಶುರುವಾಗಲಿದೆ.

ಭಾರತ ಹಾಗೂ ಇಂಗ್ಲೆಂಡ್‌ ನಡುವಿನ ಮೂರನೇ ಏಕದಿನ ಪಂದ್ಯ ಯಾವಾಗ ನಡೆಯಲಿದೆ?

ಭಾರತ ಹಾಗೂ ಇಂಗ್ಲೆಂಡ್‌ ನಡುವಿನ ಮೂರನೇ ಏಕದಿನ ಪಂದ್ಯ ಜುಲೈ 18 ರಂದು ನಡೆಯಲಿದೆ.

ಭಾರತ ಹಾಗೂ ಇಂಗ್ಲೆಂಡ್‌ ನಡುವಿನ ಮೂರನೇ ಏಕದಿನ ಪಂದ್ಯ ಎಲ್ಲಿ ನಡೆಯಲಿದೆ?

ಭಾರತ ಹಾಗೂ ಇಂಗ್ಲೆಂಡ್‌ ನಡುವಿನ ಮೂರನೇ ಏಕದಿನ ಪಂದ್ಯ ಲಾರ್ಡ್ಸ್‌ನಲ್ಲಿ ನಡೆಯಲಿದೆ.

ಭಾರತ ಹಾಗೂ ಇಂಗ್ಲೆಂಡ್‌ ನಡುವಿನ ಮೂರನೇ ಏಕದಿನ ಪಂದ್ಯ ಎಷ್ಟು ಗಂಟೆಗೆ ಆರಂಭವಾಗಲಿದೆ?

ಭಾರತ ಹಾಗೂ ಇಂಗ್ಲೆಂಡ್‌ ನಡುವಿನ ಮೂರನೇ ಏಕದಿನ ಪಂದ್ಯ ಭಾರತೀಯ ಕಾಲಮಾನ ಮಧ್ಯಾಹ್ನ 3:30 ಕ್ಕೆ ಪ್ರಾರಂಭವಾಗಲಿದೆ.

ಭಾರತ ಹಾಗೂ ಇಂಗ್ಲೆಂಡ್‌ ನಡುವಿನ ಮೂರನೇ ಏಕದಿನ ಪಂದ್ಯವನ್ನು ಉಚಿತವಾಗಿ ವೀಕ್ಷಿಸುವುದು ಹೇಗೆ?

ಭಾರತ ಹಾಗೂ ಇಂಗ್ಲೆಂಡ್‌ ನಡುವಿನ ಮೂರನೇ ಏಕದಿನ ಪಂದ್ಯವನ್ನು ಸೋನಿ ಸ್ಪೋರ್ಟ್ಸ್ ಚಾನೆಲ್‌ಗಳಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ. ಹಾಗೆಯೇ ಡಿಸ್ನಿ+ ಹಾಟ್‌ಸ್ಟಾರ್ ಅಪ್ಲಿಕೇಶನ್ ಡಿಜಿಟಲ್ ಲೈವ್ ಸ್ಟ್ರೀಮಿಂಗ್ ವೀಕ್ಷಿಸುವ ಸೌಲಭ್ಯವನ್ನು ನೀಡುತ್ತದೆ.

IND vs ENG: ಲಾರ್ಡ್ಸ್‌ನಲ್ಲಿ ಶತಕಗಳ ಬರ! ಟೀಂ ಇಂಡಿಯಾಕ್ಕೆ ಗೆಲುವೊಂದೇ ಗುರಿಯಲ್ಲ

ಉಭಯ ತಂಡಗಳು

ಭಾರತ ತಂಡ: ಶುಭ್​ಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ (ಉಪನಾಯಕ), ಕೆಎಲ್ ರಾಹುಲ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ಹರ್ಷ್ ದುಬೆ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಪ್ರಸಿದ್ಧ್ ಕೃಷ್ಣ, ಪ್ರಿನ್ಸ್ ಯಾದವ್, ಅರ್ಶ್ದೀಪ್ ಸಿಂಗ್, ಗುರ್ನೂರ್ ಬ್ರಾರ್, ಶಿವಂ ದುಬೆ.

ಇಂಗ್ಲೆಂಡ್‌ ತಂಡ: ಹ್ಯಾರಿ ಬ್ರೂಕ್, ರೆಹಾನ್ ಅಹ್ಮದ್, ಜೋಫ್ರಾ ಆರ್ಚರ್, ಗಸ್ ಅಟ್ಕಿನ್ಸನ್, ಟಾಮ್ ಬ್ಯಾಂಟನ್, ಜಾಕೋಬ್ ಬೆಥೆಲ್, ಜೋಸ್ ಬಟ್ಲರ್, ಜೇಮ್ಸ್ ಕೋಲ್ಸ್, ಸ್ಯಾಮ್ ಕರನ್, ಲಿಯಾಮ್ ಡಾಸನ್, ಬೆನ್ ಡಕೆಟ್, ವಿಲ್ ಜ್ಯಾಕ್ಸ್, ಸಾಕಿಬ್ ಮಹಮೂದ್, ಆದಿಲ್ ರಶೀದ್, ಜೋ ರೂಟ್, ಜೋಶ್ ಟಂಗ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IND vs ENG: ಲಾರ್ಡ್ಸ್‌ನಲ್ಲಿ ಟಾಸ್ ಗೆದ್ದವನೇ ಬಾಸ್; ಪಂದ್ಯದ ದಿನ ಹವಾಮಾನ ಹೇಗಿರಲಿದೆ? – Kannada News | IND vs ENG 3rd ODI Preview: Lord’s Pitch, Weather, Head to Head and Series Decider

ಭಾರತ-ಇಂಗ್ಲೆಂಡ್ (India vs England ) ನಡುವಿನ ಏಕದಿನ ಸರಣಿಯ ನಿರ್ಣಾಯಕ ಮೂರನೇ ಮತ್ತು ಅಂತಿಮ ಪಂದ್ಯ ಜುಲೈ 19 ರಂದು ಲಂಡನ್‌ನ ಐತಿಹಾಸಿಕ ಲಾರ್ಡ್ಸ್‌ನಲ್ಲಿ (Lord’s) ನಡೆಯಲಿದೆ. ಮೂರು ಪಂದ್ಯಗಳ ಸರಣಿ ಪ್ರಸ್ತುತ 1-1 ರಲ್ಲಿ ಸಮಬಲಗೊಂಡಿರುವುದರಿಂದ ಈ ಪಂದ್ಯದಲ್ಲಿ ಗೆದ್ದವರಿಗೆ ಸರಣಿ ಕೈಸೇರಲಿದೆ. ಹೀಗಾಗಿ ಉಭಯ ತಂಡಗಳು ಗೆಲ್ಲುವ ಇರಾದೆಯೊಂದಿಗೆ ಕಣಕ್ಕಿಳಿಯುತ್ತಿವೆ. ಆದರೆ ಈಗಾಗಲೇ ಟಿ20 ಸರಣಿ ಸೋತಿರುವ ಟೀಂ ಇಂಡಿಯಾ ಏಕದಿನ ಸರಣಿಯನ್ನಾದರೂ ತನ್ನದಾಗಿಸಿಕೊಳ್ಳುವ ಇರಾದೆಯಲ್ಲಿದೆ. ಹೀಗಾಗಿ ಲಾರ್ಡ್ಸ್‌ ಪಿಚ್ ಹೇಗಿರಲಿದೆ? ಪಂದ್ಯದ ದಿನದಂದು ಹವಾಮಾನ ಹೇಗಿರಲಿದೆ ಎಂಬುದನ್ನು ನೋಡೋಣ.

ಪಿಚ್ ವರದಿ

ಲಾರ್ಡ್ಸ್ ಪಿಚ್ ಸಾಂಪ್ರದಾಯಿಕವಾಗಿ ವೇಗದ ಬೌಲರ್‌ಗಳಿಗೆ ಅನುಕೂಲಕರವಾಗಿದೆ. ಹೊಸ ಚೆಂಡು ಉತ್ತಮ ಸೀಮ್ ಮತ್ತು ಹೆಚ್ಚುವರಿ ಬೌನ್ಸ್ ನೀಡುತ್ತದೆ. ಆದಾಗ್ಯೂ, ಬ್ಯಾಟರ್‌ಗಳು ಒಮ್ಮೆ ನೆಲೆಗೊಂಡ ನಂತರ, ದೊಡ್ಡ ಸ್ಕೋರ್‌ ದಾಖಲಾಗುವ ಸಾಧ್ಯತೆಯೂ ಇರುತ್ತದೆ. ಅಂಕಿಅಂಶಗಳ ಪ್ರಕಾರ, ಈ ಮೈದಾನದಲ್ಲಿ ಸರಾಸರಿ ಮೊದಲ ಇನ್ನಿಂಗ್ಸ್ ಸ್ಕೋರ್ 289 ರನ್‌ಗಳು ಮತ್ತು ಸರಾಸರಿ ಎರಡನೇ ಇನ್ನಿಂಗ್ಸ್ ಸ್ಕೋರ್ 201 ರನ್‌ಗಳಾಗಿದೆ. ಇಲ್ಲಿಯವರೆಗೆ, ಮೊದಲು ಬ್ಯಾಟ್ ಮಾಡುವ ತಂಡಗಳು ಈ ಮೈದಾನದಲ್ಲಿ ಉತ್ತಮ ಗೆಲುವಿನ ಶೇಕಡಾವಾರು ಪ್ರಮಾಣವನ್ನು ಹೊಂದಿವೆ.

ಹವಾಮಾನ ವರದಿ

ಪಂದ್ಯದ ದಿನದಂದು ಲಂಡನ್‌ನಲ್ಲಿ ಹವಾಮಾನವು ಕ್ರಿಕೆಟ್‌ಗೆ ಅನುಕೂಲಕರವಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ತಾಪಮಾನವು ಸುಮಾರು 21 ಡಿಗ್ರಿ ಸೆಲ್ಸಿಯಸ್ ಇರುವ ನಿರೀಕ್ಷೆಯಿದೆ, ಮಳೆಯಾಗುವ ಸಾಧ್ಯತೆ ಕೇವಲ ಶೇ. 3 ರಷ್ಟು ಮಾತ್ರ. ಹೀಗಾಗಿ ಅಭಿಮಾನಿಗಳು ಯಾವುದೇ ಆತಂಕವಿಲ್ಲದೆ ಪೂರ್ಣ ಪಂದ್ಯವನ್ನು ವೀಕ್ಷಿಸುವ ಅವಕಾಶವಿದೆ.

IND vs ENG: ಲಾರ್ಡ್ಸ್‌ನಲ್ಲಿ ಮತ್ತೊಂದು ದಾಖಲೆ ನಿರ್ಮಿಸಲಿದ್ದಾರೆ ರೋಹಿತ್, ಕೊಹ್ಲಿ

ಹೆಡ್-ಟು-ಹೆಡ್ ದಾಖಲೆ

ಕಳೆದ ಹತ್ತು ಏಕದಿನ ಪಂದ್ಯಗಳಲ್ಲಿ ಉಭಯ ತಂಡಗಳ ಮುಖಾಮುಖಿ ನೋಡಿದರೆ, ಇದರಲ್ಲಿ ಭಾರತ ಸ್ಪಷ್ಟ ಮುನ್ನಡೆ ಸಾಧಿಸಿದೆ. ಭಾರತ 8 ಗೆಲುವುಗಳನ್ನು ದಾಖಲಿಸಿದ್ದರೆ, ಇಂಗ್ಲೆಂಡ್ ಕೇವಲ 2 ಪಂದ್ಯಗಳನ್ನು ಗೆದ್ದಿದೆ. ಆದಾಗ್ಯೂ, ಪ್ರಸ್ತುತ ಸರಣಿಯಲ್ಲಿ ಎರಡೂ ತಂಡಗಳು ತಲಾ ಒಂದು ಪಂದ್ಯವನ್ನು ಗೆದ್ದಿರುವುದರಿಂದ, ಮೂರನೇ ಏಕದಿನ ಪಂದ್ಯದ ಮೇಲೆ ಹೆಚ್ಚಿನ ಕುತೂಹಲ ಮೂಡಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಭಾರತದ ಕನಸು; ದೆಹಲಿ ‘ರಾಮಾಯಣ’ ಈವೆಂಟ್​​ನಲ್ಲಿ ಕನ್ನಡದಲ್ಲಿ ಮಾತು ಆರಂಭಿಸಿದ ಯಶ್ – Kannada News | Ramayana Is Indias Dream Says Rocking Star Yash in Pratham Sankalp Event

‘ರಾಮಾಯಣ’ ಸಿನಿಮಾ ಈ ವರ್ಷ ದೀಪಾವಳಿಯಂದು ರಿಲೀಸ್ ಆಗಲಿದೆ. ಜುಲೈ 24ರಂದು ಸಿನಿಮಾದ ಟ್ರೇಲರ್ ರಿಲೀಸ್ ಆಗಲಿದೆ. ಅದಕ್ಕೂ ಒಂದು ವಾರ ಮೊದಲು ಅಂದರೆ ಇಂದು (ಜುಲೈ 18) ದೆಹಲಿಯಲ್ಲಿ ವಿಶೇಷ ಕಾರ್ಯಕ್ರಮ ನಡೆದಿದೆ. ‘ಪ್ರಥಮ ಸಂಕಲ್ಪ’ ಅನ್ನೋದು ಈ ಕಾರ್ಯಕ್ರಮದ ಹೆಸರಾಗಿತ್ತು. ಈ ಕಾರ್ಯಕ್ರಮಕ್ಕೆ ಚಿತ್ರರಂಗದ ಅನೇಕ ಗಣ್ಯರು ಆಗಮಿಸಿದ್ದರು. ‘ರಾಮಾಯಣ’ ಸಿನಿಮಾ ಕಲಾವಿದರು ಕೂಡ ಬಂದಿದ್ದರು. ಈ ಚಿತ್ರದಲ್ಲಿ ರಾವಣನ ಪಾತ್ರ ಮಾಡಿದ್ದ ರಾಕಿಂಗ್ ಸ್ಟಾರ್ ಯಶ್ ಕೂಡ ಆಗಮಿಸಿದ್ದರು. ಅವರು ತಮ್ಮ ಪಾತ್ರದ ಬಗ್ಗೆ ಹಾಗೂ ಸಿನಿಮಾದ ಬಗ್ಗೆ ವಿವರಿಸಿದರು.

ಯಶ್​​ಗೆ ನಿರ್ಮಾಪಕ ನಿತೇಶ್​ ತಿವಾರಿ ಧನ್ಯವಾದ ಹೇಳಿದರು. ‘ರಾಮಾಯಣವನ್ನು ಇಲ್ಲಿಯವರೆಗೆ ತರೋಕೆ ಯಶ್ ಅವರು ಸಹ ನಿರ್ಮಾಪಕನಾಗಿ, ಗೆಳೆಯನಾಗಿ ಸಹಾಯ ಮಾಡಿದ್ದಾರೆ’ ಎಂದರು ನಿತೇಶ್.

ಇದನ್ನೂ ಓದಿ: ‘ರಾಮಾಯಣ’ ಸಿನಿಮಾ ಟ್ರೈಲರ್​ಗೆ ‘ಯು’ ಪ್ರಮಾಣ ಪತ್ರ, ಬಿಡುಗಡೆ ಯಾವಾಗ?

‘ಎಲ್ಲರಿಗೂ ನಮಸ್ಕಾರ’ ಎಂದು ಯಶ್ ಕನ್ನಡದಲ್ಲಿ ಮಾತು ಆರಂಭಿಸಿದರು. ಆ ಬಳಿಕ ಎಲ್ಲಾ ಭಾಷೆಯಲ್ಲಿ ನಮಸ್ಕಾರ ಹೇಳಿದರು. ‘ಇದು ನಿಜಕ್ಕೂ ಒಂದೊಳ್ಳೆಯ ಪ್ರಾಜೆಕ್ಟ್. ನಮಿತ್ ಮಲ್ಹೋತ್ರಾ ಅವರಿಗೆ ಇದರ ಕ್ರೆಡಿಟ್ ಹೋಗಬೇಕು.ಅವರು ನನಗೆ ಅವಕಾಶ ಕೊಟ್ಟರು. ಹಿಂದಿ ಕಲಿಯಲು ಕೂಡ ಅವಕಾಶ ಸಿಕ್ಕಿತು’ ಎಂದರು ಯಶ್.


‘ಇದು ಭಾರತದ ಕನಸು. ನಮ್ಮ ಕಥೆಯನ್ನು ವಿದೇಶದ ಪ್ರೇಕ್ಷಕರ ಎದುರು ಇಡಬೇಕು ಎಂಬುದು ಎಲ್ಲರ ಕನಸು. ರಣಬೀರ್ ಕಪೂರ್ ಅವರು ನೀವು ನಿಜಕ್ಕೂ ಗ್ರೇಟ್, ಅವರು ಈ ಪಾತ್ರಕ್ಕೆ ಎಷ್ಟು ಶರಣಾಗಿದ್ದರು ಎಂಬುದು ಸಿನಿಮಾ ನೋಡಿದ ಮೇಲೆ ಎಲ್ಲರಿಗೂ ಗೊತ್ತಾಗುತ್ತದೆ. ಸಾಯಿ ಕೂಡ ಫ್ಯಾಬುಲಸ್ ನಟಿ’ ಎಂದರು ಯಶ್.

‘ರಾಮಾಯಣ’ ಸಿನಿಮಾದಲ್ಲಿ ರಣಬೀರ್ ಕಪೂರ್ ರಾಮನ ಪಾತ್ರ ಮಾಡಿದರೆ, ಸೀತೆ ಪಾತ್ರದಲ್ಲಿ ಸಾಯಿ ಪಲ್ಲವಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರವನ್ನು ನಿತೇಶ್ ತಿವಾರಿ ನಿರ್ದೇಶನ ಮಾಡಿದ್ದಾರೆ. ನಮಿತ್ ಮಲ್ಹೋತ್ರ ಅವರು ಬರೋಬ್ಬರಿ 4 ಸಾವಿರ ಕೋಟಿ ರೂಪಾಯಿ (ಎರಡು ಪಾರ್ಟ್​ ಸೇರಿ) ಬಂಡವಾಳ ಹೂಡಿದ್ದಾರೆ. ಇದು ಭಾರತದ ಅತ್ಯಂತ ದುಬಾರಿ ಸಿನಿಮಾ ಆಗಿದೆ.

ಮತ್ತಷ್ಟು ಕನ್ನಡ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

Source link

Exit mobile version