Teacher Recruitment 2026: 15,000 ಸರ್ಕಾರಿ ಶಿಕ್ಷಕರ ಬೃಹತ್ ನೇಮಕಾತಿ; ಆ.18ರಿಂದ ಅರ್ಜಿ ಸಲ್ಲಿಕೆ ಆರಂಭ – Kannada News | Karnataka Teacher Recruitment 2026: 15,000 Govt Jobs! Apply Online from Aug 18

15,000 ಸರ್ಕಾರಿ ಶಿಕ್ಷಕರ ಬೃಹತ್ ನೇಮಕಾತಿ

ಬೆಂಗಳೂರು: ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆಯನ್ನು ನೀಗಿಸುವ ಉದ್ದೇಶದಿಂದ ಕರ್ನಾಟಕ ಶಾಲಾ ಶಿಕ್ಷಣ ಇಲಾಖೆ ಬೃಹತ್ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಿದೆ. ರಾಜ್ಯಾದ್ಯಂತ ಒಟ್ಟು 15,000 ಸರ್ಕಾರಿ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲು ನೇಮಕಾತಿ ನಡೆಸಲಾಗುತ್ತಿದ್ದು, ಆಗಸ್ಟ್ 18ರಿಂದ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ ಆರಂಭವಾಗಲಿದೆ. ಸಾವಿರಾರು ಉದ್ಯೋಗಾಕಾಂಕ್ಷಿಗಳಿಗೆ ಈ ನೇಮಕಾತಿ ಉತ್ತಮ ಅವಕಾಶವಾಗಲಿದೆ.

ಶಿಕ್ಷಕರ ಕೊರತೆ ನೀಗಿಸಲು ಮಹತ್ವದ ಹೆಜ್ಜೆ:

ರಾಜ್ಯದ ಹಲವು ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ಹೊಸ ನೇಮಕಾತಿಗೆ ಒತ್ತಡ ಹೆಚ್ಚಾಗಿತ್ತು. ಈ ಹಿನ್ನೆಲೆಯಲ್ಲಿ ಶಾಲಾ ಶಿಕ್ಷಣ ಇಲಾಖೆ ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ಕೈಗೊಂಡಿದೆ. ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದ ಮಾಹಿತಿಯನ್ನು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಂಡಿದ್ದಾರೆ. ನೇಮಕಾತಿ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ಹಾಗೂ ಯಾವುದೇ ಗೊಂದಲಕ್ಕೆ ಅವಕಾಶವಿಲ್ಲದಂತೆ ನಡೆಸಲು ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಲಾಗಿದೆ ಎಂದು ಶಿಕ್ಷಣ ಸಚಿವರು ತಿಳಿಸಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣವನ್ನು ಖಚಿತಪಡಿಸುವ ನಿಟ್ಟಿನಲ್ಲಿ ಶಿಕ್ಷಕರ ನೇಮಕಾತಿ ಮಹತ್ವದ ಹೆಜ್ಜೆಯಾಗಿದೆ.

ನೇಮಕಾತಿಗೆ ಇದ್ದ ತೊಡಕುಗಳು ನಿವಾರಣೆ:

ಒಳ ಮೀಸಲಾತಿ ವಿಚಾರ ಹಾಗೂ ನ್ಯಾಯಾಲಯದಲ್ಲಿದ್ದ ತಡೆಯಾಜ್ಞೆಗಳ ಹಿನ್ನೆಲೆಯಲ್ಲಿ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯಲ್ಲಿ ವಿಳಂಬವಾಗಿತ್ತು. ಇದೀಗ ಪ್ರಮುಖ ಕಾನೂನು ಹಾಗೂ ಆಡಳಿತಾತ್ಮಕ ತೊಡಕುಗಳು ನಿವಾರಣೆಯಾಗಿದ್ದು, ಶಿಕ್ಷಕರ ನೇಮಕಾತಿ ಪ್ರಕ್ರಿಯೆಗೆ ಅಧಿಕೃತವಾಗಿ ಚಾಲನೆ ನೀಡಲಾಗಿದೆ.

ಕಲ್ಯಾಣ ಕರ್ನಾಟಕಕ್ಕೆ 6,967 ಹುದ್ದೆಗಳು:

ಒಟ್ಟು 15,000 ಹುದ್ದೆಗಳನ್ನು ಪ್ರಾದೇಶಿಕ ಆಧಾರದ ಮೇಲೆ ಎರಡು ವೃಂದಗಳಾಗಿ ವಿಂಗಡಿಸಲಾಗಿದೆ. ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ 6,967 ಹುದ್ದೆಗಳನ್ನು ಮೀಸಲಿಡಲಾಗಿದೆ. ಈ ಪ್ರದೇಶದ ಸರ್ಕಾರಿ ಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ನೇಮಕಾತಿ ಮೂಲಕ ಭರ್ತಿ ಮಾಡಲಾಗುತ್ತದೆ.

ಉಳಿಕೆ ಮೂಲ ವೃಂದಕ್ಕೆ 8,033 ಹುದ್ದೆಗಳು:

ಉಳಿಕೆ ಮೂಲ ವೃಂದ (Residual Cadre)ಕ್ಕೆ ಒಟ್ಟು 8,033 ಹುದ್ದೆಗಳನ್ನು ನಿಗದಿಪಡಿಸಲಾಗಿದೆ. ಈ ಮೂಲಕ ಕಲ್ಯಾಣ ಕರ್ನಾಟಕ ಹಾಗೂ ಉಳಿಕೆ ಮೂಲ ವೃಂದ ಎರಡನ್ನೂ ಸೇರಿಸಿ ರಾಜ್ಯಾದ್ಯಂತ ಒಟ್ಟು 15,000 ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರ ಮುಂದಾಗಿದೆ.

ಯಾವೆಲ್ಲ ಹುದ್ದೆಗಳಿಗೆ ನೇಮಕಾತಿ?

ವಿವಿಧ ಹಂತಗಳ ಸರ್ಕಾರಿ ಶಾಲೆಗಳಲ್ಲಿ ಖಾಲಿ ಇರುವ ಬೋಧಕ ಹುದ್ದೆಗಳನ್ನು ಈ ನೇಮಕಾತಿ ಮೂಲಕ ಭರ್ತಿ ಮಾಡಲಾಗುತ್ತದೆ. ಪ್ರಮುಖವಾಗಿ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರು, ಗಣಕ ವಿಜ್ಞಾನ ಶಿಕ್ಷಕರು, ದೈಹಿಕ ಶಿಕ್ಷಣ ಶಿಕ್ಷಕರು ಹಾಗೂ ಪ್ರೌಢಶಾಲಾ ಸಹ ಶಿಕ್ಷಕರ ಹುದ್ದೆಗಳು ನೇಮಕಾತಿಯಲ್ಲಿ ಒಳಗೊಂಡಿವೆ.

ಜಿಲ್ಲಾವಾರು ಪ್ರತ್ಯೇಕ ಅಧಿಸೂಚನೆ

ಅಭ್ಯರ್ಥಿಗಳಿಗೆ ತಮ್ಮ ಜಿಲ್ಲೆಯಲ್ಲಿ ಲಭ್ಯವಿರುವ ಹುದ್ದೆಗಳ ಕುರಿತು ಸ್ಪಷ್ಟ ಮಾಹಿತಿ ನೀಡುವ ಉದ್ದೇಶದಿಂದ ಶೈಕ್ಷಣಿಕ ಜಿಲ್ಲಾವಾರು ಪ್ರತ್ಯೇಕ ಅಧಿಸೂಚನೆಗಳನ್ನು ಹೊರಡಿಸಲಾಗುತ್ತದೆ. ಇದರಲ್ಲಿ ಜಿಲ್ಲಾವಾರು ಹುದ್ದೆಗಳ ಸಂಖ್ಯೆ, ಹುದ್ದೆಗಳ ವಿವರ, ಮೀಸಲಾತಿ ಹಂಚಿಕೆ ಹಾಗೂ ನೇಮಕಾತಿಗೆ ಸಂಬಂಧಿಸಿದ ಬದಲಾವಣೆಗಳ ಕುರಿತು ಮಾಹಿತಿ ನೀಡಲಾಗುತ್ತದೆ.

ಇದನ್ನೂ ಓದಿ: ಬೆಂಗಳೂರು ದಕ್ಷಿಣ ಜಿಲ್ಲೆ;102 ಪೌರಕಾರ್ಮಿಕ ಹುದ್ದೆಗಳಿಗೆ ಅರ್ಜಿ ಆಹ್ವಾನ

ಆಗಸ್ಟ್ 18ರಿಂದ ಆನ್‌ಲೈನ್ ಅರ್ಜಿ:

ಶಿಕ್ಷಕರ ನೇಮಕಾತಿಗೆ ಆಗಸ್ಟ್ 18 ರಿಂದ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುತ್ತದೆ. ಅರ್ಹ ಅಭ್ಯರ್ಥಿಗಳು ನಿಗದಿತ ದಿನಾಂಕದಿಂದ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸುವ ಮೊದಲು ಅಭ್ಯರ್ಥಿಗಳು ಸಂಬಂಧಪಟ್ಟ ಜಿಲ್ಲೆ ಹಾಗೂ ಹುದ್ದೆಗೆ ಅನ್ವಯಿಸುವ ಅರ್ಹತಾ ಮಾನದಂಡಗಳನ್ನು ಪರಿಶೀಲಿಸಬೇಕು.

ಅಧಿಕೃತ ವೆಬ್‌ಸೈಟ್‌ನಲ್ಲಿ ಮಾಹಿತಿ:

ನೇಮಕಾತಿಗೆ ಸಂಬಂಧಿಸಿದ ಅಧಿಕೃತ ಅಧಿಸೂಚನೆಗಳನ್ನು ಸರ್ಕಾರದ ಇ-ರಾಜಪತ್ರ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಅಭ್ಯರ್ಥಿಗಳು ಜಿಲ್ಲಾವಾರು ಹುದ್ದೆಗಳ ವಿವರ, ಮೀಸಲಾತಿ ಹಾಗೂ ನೇಮಕಾತಿ ನಿಯಮಗಳ ಕುರಿತು www.erajyapatra.karnataka.gov.in ಮೂಲಕ ಮಾಹಿತಿ ಪಡೆಯಬಹುದು. ಅರ್ಜಿ ಸಲ್ಲಿಕೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಶಾಲಾ ಶಿಕ್ಷಣ ಇಲಾಖೆಯ ಅಧಿಕೃತ ವೆಬ್‌ಸೈಟ್ schooleducation.kar.nic.in ಗೆ ಭೇಟಿ ನೀಡಬಹುದು. ನೇಮಕಾತಿಗೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ಅಧಿಕೃತ ಮೂಲಗಳಿಂದಲೇ ಪರಿಶೀಲಿಸುವುದು ಸೂಕ್ತ.

ಸಾವಿರಾರು ಅಭ್ಯರ್ಥಿಗಳಿಗೆ ಉದ್ಯೋಗಾವಕಾಶ:

ರಾಜ್ಯಾದ್ಯಂತ 15,000 ಶಿಕ್ಷಕರ ಹುದ್ದೆಗಳ ನೇಮಕಾತಿ ನಡೆಯುತ್ತಿರುವುದರಿಂದ ಸರ್ಕಾರಿ ಶಿಕ್ಷಕರ ಉದ್ಯೋಗಕ್ಕಾಗಿ ಕಾಯುತ್ತಿರುವ ಸಾವಿರಾರು ಅಭ್ಯರ್ಥಿಗಳಿಗೆ ಇದು ಮಹತ್ವದ ಅವಕಾಶವಾಗಿದೆ. ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ, ತಮ್ಮ ಅರ್ಹತೆಗೆ ಅನುಗುಣವಾದ ಹುದ್ದೆಗಳಿಗೆ ಮಾತ್ರ ಅರ್ಜಿ ಸಲ್ಲಿಸುವುದು ಅತ್ಯಂತ ಮುಖ್ಯವಾಗಿದೆ.

ಉದ್ಯೋಗಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On – 3:17 pm, Fri, 14 August 26

Source link

AUS vs BAN: ಆಸ್ಟ್ರೇಲಿಯಾದಲ್ಲಿ ಈ ಸಾಧನೆ ಮಾಡಿದ ಮೊದಲ ಬಾಂಗ್ಲಾ ಆಟಗಾರ – Kannada News | Bangladesh Dominates Australia: Tanzid Hasan Tamim’s Historic Century Seals 153 Run Lead

ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶ (Australia vs Bangladesh) ತಂಡ ಸಂಪೂರ್ಣ ಮೇಲುಗೈ ಸಾಧಿಸಿದೆ. ಆತಿಥೇಯ ಆಸೀಸ್ ಪಡೆಯನ್ನು ಮೊದಲ ಇನ್ನಿಂಗ್ಸ್​ನಲ್ಲಿ 198 ರನ್​ಗಳಿಗೆ ಕಟ್ಟಿಹಾಕಿದ ಬಾಂಗ್ಲಾದೇಶ ತಂಡ ಎರಡನೇ ದಿನದಾಟದಂತ್ಯಕ್ಕೆ 6 ವಿಕೆಟ್‌ಗಳನ್ನು ಕಳೆದುಕೊಂಡು 351 ರನ್ ಕಲೆಹಾಕಿದೆ. ಅಂದರೆ ಮೊದಲ ಇನ್ನಿಂಗ್ಸ್​ನಲ್ಲಿ ಪ್ರಸ್ತುತ 153 ರನ್​ಗಳ ಮುನ್ನಡೆ ಪಡೆದುಕೊಂಡಿದೆ. ಬಾಂಗ್ಲಾ ತಂಡದ ಈ ಮುನ್ನಡೆಗೆ ಪ್ರಮುಖ ಕಾರಣ 25 ವರ್ಷದ ಆರಂಭಿಕ ಆಟಗಾರ ತಂಝಿದ್ ಹಸನ್ ತಮೀಮ್ (Tanzid Hasan Tamim). ತಂಡದ ಪರ ಆರಂಭಿಕನಾಗಿ ಕಣಕ್ಕಿಳಿದಿದ್ದ ತಂಝಿದ್ ಹಸನ್ ತಮೀಮ್ ಅದ್ಭುತ ಶತಕ ಬಾರಿಸಿದರು. ಇದರೊಂದಿಗೆ, ಆಸ್ಟ್ರೇಲಿಯಾ ನೆಲದಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಶತಕ ಸಿಡಿಸಿದ ಮೊದಲ ಬಾಂಗ್ಲಾದೇಶದ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ತಮೀಮ್ ಸ್ಮರಣೀಯ ಶತಕ

ಸೊನ್ನೆಗೆ ಸಿಕ್ಕ ಜೀವದಾನವನ್ನು ಸದುಪಯೋಗಪಡಿಸಿಕೊಂಡ ತಂಝಿದ್ ಹಸನ್ ತಮೀಮ್ ಸ್ಮರಣೀಯ ಶತಕ ಬಾರಿಸಿದಲ್ಲದೆ ತಂಡದ ಇನ್ನಿಂಗ್ಸ್ ನಿಭಾಯಿಸಿದರು. 188 ಎಸೆತಗಳಲ್ಲಿ ತಮ್ಮ ಮೊದಲ ಟೆಸ್ಟ್ ಶತಕವನ್ನು ಪೂರೈಸಿದ ತಂಝಿದ್, ಅಂತಿಮವಾಗಿ 197 ಎಸೆತಗಳಲ್ಲಿ 8 ಬೌಂಡರಿ ಮತ್ತು 1 ಸಿಕ್ಸರ್ ಸೇರಿದಂತೆ 101 ರನ್ ಗಳಿಸಿ ಔಟಾದರು. ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ ಇದು ತಂಝಿದ್ ಹಸನ್ ಅವರ ವೃತ್ತಿಜೀವನದ ಎರಡನೇ ಟೆಸ್ಟ್ ಪಂದ್ಯವಾಗಿದೆ.

ತಂಝಿದ್ ಹಸನ್ ವೃತ್ತಿಜೀವನ

ಈ ವರ್ಷದ ಮೇ ತಿಂಗಳಲ್ಲಿ ಪಾಕಿಸ್ತಾನ ವಿರುದ್ಧ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ತಂಝಿದ್ ಆ ಪಂದ್ಯದ ಮೊದಲ ಇನ್ನಿಂಗ್ಸ್​ನಲ್ಲಿ 26 ರನ್ ಮತ್ತು ಎರಡನೇ ಇನ್ನಿಂಗ್ಸ್​ನಲ್ಲಿ 4 ರನ್ ಬಾರಿಸಿದ್ದರು. ಆ ಪಂದ್ಯವನ್ನು ಬಾಂಗ್ಲಾದೇಶ 78 ರನ್‌ಗಳಿಂದ ಗೆದ್ದುಕೊಂಡಿತ್ತು. ವೈಟ್-ಬಾಲ್ ಕ್ರಿಕೆಟ್​ನಲ್ಲಿ ಬಾಂಗ್ಲಾದೇಶ ತಂಡದ ಖಾಯಂ ಆಟಗಾರನಾಗಿರುವ ತಂಝಿದ್ ಇದುವರೆಗೆ 40 ಏಕದಿನ ಮತ್ತು 53 ಟಿ20 ಪಂದ್ಯಗಳನ್ನು ಆಡಿದ್ದಾರೆ. ಆಸ್ಟ್ರೇಲಿಯಾಕ್ಕೆ ಬರುವ ಮೊದಲೇ ಅತ್ಯುತ್ತಮ ಫಾರ್ಮ್‌ನಲ್ಲಿದ್ದ ತಂಝಿದ್ ಜಿಂಬಾಬ್ವೆ ವಿರುದ್ಧದ ಕೊನೆಯ ಐದು ಇನ್ನಿಂಗ್ಸ್‌ಗಳಲ್ಲಿ ನಾಲ್ಕು ಅರ್ಧಶತಕಗಳನ್ನು ಬಾರಿಸಿದ್ದರು.

ICC Rankings: ಏಕದಿನ, ಟೆಸ್ಟ್, ಟಿ20 ಮಾದರಿಯಲ್ಲೂ ಭಾರತೀಯರದ್ದೇ ಪಾರುಪತ್ಯ

ಈ ಶತಕದ ವಿಶೇಷತೆಯಿದು

ತಂಝಿದ್ ಅವರ ಶತಕ ಹಲವು ವಿಧಗಳಲ್ಲಿ ಐತಿಹಾಸಿಕವಾಗಿದೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಬಾಂಗ್ಲಾದೇಶದ ಬ್ಯಾಟ್ಸ್‌ಮನ್‌ನೊಬ್ಬ ಗಳಿಸಿದ ಎರಡನೇ ಶತಕ ಇದು. ಈ ಹಿಂದೆ 2006 ರಲ್ಲಿ ಫತುಲ್ಲಾದಲ್ಲಿ ಶಹರಿಯಾರ್ ನಫೀಸ್ 138 ರನ್​ಗಳ ಇನ್ನಿಂಗ್ಸ್ ಆಡಿದ್ದರು. ಇದಲ್ಲದೆ, 2022 ರಲ್ಲಿ ಡರ್ಬನ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಮಹ್ಮದುಲ್ ಹಸನ್ ಜಾಯ್ ನಂತರ ವಿದೇಶಿ ನೆಲದಲ್ಲಿ ಬಾಂಗ್ಲಾದೇಶದ ಬ್ಯಾಟ್ಸ್‌ಮನ್‌ನೊಬ್ಬ ಗಳಿಸಿದ ಮೊದಲ ಟೆಸ್ಟ್ ಶತಕ ಇದಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 2:37 pm, Fri, 14 August 26

Source link

ದೇಶದ್ರೋಹಿ ಅನ್ನೋದಕ್ಕೆ ಇದಕ್ಕಿಂತೆ ಸಾಕ್ಷಿ ಬೇಕಾ? ಧ್ವಜಾರೋಹಣದಿಂದ ವಿನಾಯಿತಿ ಕೇಳಿದ ಜಮಿರ್ ವಿರುದ್ಧ ಬಿಜೆಪಿ ಆಕ್ರೋಶ – Kannada News | BJP Leaders Hits Out At Minister Zameer Ahmed Khan For Seeking Exemption From Vijayanagara District flag hoisting in charge

ಬೆಂಗಳೂರು, ಆಗಸ್ಟ್ 14): ವಿಜಯನಗರ ಜಿಲ್ಲಾ ಉಸ್ತುವಾರಿ ಹಾಗೂ ಸ್ವಾತಂತ್ರ್ಯ ದಿನಾಚರಣೆಯ (independence day) ಧ್ವಜಾರೋಹಣಕ್ಕೆ ಸಚಿವ ಜಮೀರ್ ಅಹಮ್ಮದ್ ಖಾನ್ (zameer ahmed Khan) ವಿನಾಯಿತಿ ಕೇಳಿ ಸಿಎಂಗೆ ಬರೆದ ಪತ್ರ ಭಾರೀ ಸಂಚಲನ ಮೂಡಿಸಿದೆ. ಇದು ಇಂದು (ಆಗಸ್ಟ್ 14) ಸದದನಲ್ಲೂ ಬಿಜೆಪಿ ನಾಯಕರು ಪ್ರಸ್ತಾಪಿಸಿ ಸರ್ಕಾರದ ವಿರುದ್ಧ ಮುಗಿಬಿದ್ದಿದ್ದಾರೆ. ಸ್ವಾತಂತ್ರ್ಯ ದಿನಾಚರಣೆದಂದು ಧ್ವಜಾರೋಹಣಕ್ಕೆ ಸಮಯ ಇಲ್ಲ ಎಂದು ಹೇಳುವ ಮೂಲಕ ಜಮೀರ್ ಅಹಮದ್ ದೇಶದ್ರೋಹ ಎಸಗಿದ್ದಾರೆ ಅನ್ನೋದಕ್ಕೆ ಇದಕ್ಕಿಂತ ಸಾಕ್ಷಿ ಬೇಕಾ? ಎಂದು ವಿಪಕ್ಷ ನಾಯಕರ ಆರ್ ಅಶೋಕ್ ವಾಗ್ದಾಳಿ ನಡೆಸಿದ್ದಾರೆ.

ಪಕ್ಷದ ಸಂಘಟನೆಯಲ್ಲಿ ಬ್ಯುಸಿಯಾಗಿದ್ದೇನೆ ಎಂಬುದು ನೆಪ

ಈ ಸಂಬಂಧ ಎಕ್ಸ್ ಪೋಸ್ಟ್ ಮಾಡಿರುವ ಅವರು, “ಕರ್ನಾಟಕದ ಕಾಂಗ್ರೆಸ್ ಸರ್ಕಾರದ ನಿಜವಾದ ಬಣ್ಣ ಮತ್ತೊಮ್ಮೆ ನಡುರಸ್ತೆಯಲ್ಲಿ ಬಯಲಾಗಿದೆ. ವಿಜಯನಗರ ಜಿಲ್ಲೆಯಲ್ಲಿ ಆಗಸ್ಟ್ 15ರ ಪವಿತ್ರ ಸ್ವಾತಂತ್ರ್ಯ ದಿನಾಚರಣೆಯಂದು ರಾಷ್ಟ್ರಧ್ವಜಾರೋಹಣ ಮಾಡಲು ನನಗೆ “ಸಮಯವಿಲ್ಲ”, ಹಾಗಾಗಿ ಅದರಿಂದ ವಿನಾಯಿತಿ ನೀಡಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ಮುಖ್ಯಮಂತ್ರಿಗಳಿಗೆ ಅಧಿಕೃತವಾಗಿ ಪತ್ರ ಬರೆದಿದ್ದಾರೆ. ಸ್ಥಳೀಯ ಸಂಸ್ಥೆಗಳ ಚುನಾವಣೆ, ಉಪಚುನಾವಣೆ ಮತ್ತು ಪಕ್ಷದ ಸಂಘಟನೆಯಲ್ಲಿ ಬ್ಯುಸಿಯಾಗಿದ್ದೇನೆ ಎಂಬುದು ಇವರು ನೀಡಿರುವ ಲಜ್ಜೆಗೆಟ್ಟ ನೆಪ” ಎಂದು ಕಿಡಿ ಕಾರಿದ್ದಾರೆ.

ರಾಷ್ಟ್ರಧ್ವಜ ಹಾರಿಸುವುದಕ್ಕೂ ಮನಸ್ಸಿಲ್ಲದಷ್ಟು ದೇಶದ್ರೋಹಿಗಳು

“ರಾಷ್ಟ್ರಧ್ವಜ ಹಾರಿಸುವುದಕ್ಕೂ ಮನಸ್ಸಿಲ್ಲದಷ್ಟು ದೇಶದ್ರೋಹಿಗಳು ಈ ಕಾಂಗ್ರೆಸ್ ಸರ್ಕಾರದಲ್ಲಿದ್ದಾರೆ. ಒಬ್ಬ ಜವಾಬ್ದಾರಿಯುತ ಸಚಿವನಿಗೆ ಸ್ವಾತಂತ್ರ್ಯ ದಿನಾಚರಣೆಯಂದು ತ್ರಿವರ್ಣ ಧ್ವಜಕ್ಕೆ ಗೌರವ ಸಲ್ಲಿಸುವ ಪವಿತ್ರ ಕರ್ತವ್ಯಕ್ಕಿಂತ ಪಕ್ಷ ರಾಜಕೀಯವೇ ದೊಡ್ಡದಾಯಿತೇ? ಸಚಿವ ಜಮೀರ್ ಮತ್ತು ಈ ಕಾಂಗ್ರೆಸ್ ಸರ್ಕಾರಕ್ಕೆ ರಾಷ್ಟ್ರದ ಹೆಮ್ಮೆ, ನಮ್ಮ ಕ್ರಾಂತಿಕಾರಿಗಳ ಬಲಿದಾನ ಮತ್ತು ಪವಿತ್ರ ತ್ರಿವರ್ಣ ಧ್ವಜಕ್ಕಿಂತ ಅಧಿಕಾರದ ದಾಹ ಹಾಗೂ ಚುನಾವಣಾ ಲೆಕ್ಕಾಚಾರಗಳೇ ಮೊದಲ ಆದ್ಯತೆಯಾಗಿದೆ” ಎಂದಿದ್ದಾರೆ.

ಈ ಅಹಂಕಾರ ಮತ್ತು ರಾಷ್ಟ್ರವಿರೋಧಿ ಮನಸ್ಥಿತಿ

“ಈ ಅಹಂಕಾರ ಮತ್ತು ರಾಷ್ಟ್ರವಿರೋಧಿ ಮನಸ್ಥಿತಿ ಕಾಂಗ್ರೆಸ್ ಸಂಸ್ಕೃತಿಯಲ್ಲೇ ರಕ್ತಗತವಾಗಿದೆ. ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಇಂತಹ ದೇಶದ್ರೋಹಿ ಧೋರಣೆಗೆ ಕಾಂಗ್ರೆಸ್ ಪಕ್ಷದಲ್ಲಿ ಬೆಂಬಲ ಸಿಗುತ್ತಿದೆ. ದೇಶದ ಸ್ವಾತಂತ್ರ್ಯೋತ್ಸವಕ್ಕಿಂತ ಚುನಾವಣಾ ತಂತ್ರವೇ ಮುಖ್ಯ ಎನ್ನುವ ನಾಯಕರಿಗೆ ಈ ಮಣ್ಣಿನ ಮೇಲಿರುವ ನಿಷ್ಠೆ ಎಂಥದ್ದು ಎಂಬುದು ಈಗ ಪ್ರತಿಯೊಬ್ಬ ಕನ್ನಡಿಗನಿಗೂ ಅರ್ಥವಾಗಿದೆ” ಎಂದು ಟೀಕಿಸಿದ್ದಾರೆ.

ಸದನದಲ್ಲಿ ಪ್ರಸ್ತಾಪಿಸಿದ ಸುನಿಲ್ ಕುಮಾರ್

ಇನ್ನು ಜಮೀರ್ ಅಹಮ್ಮದ ಖಾನ್ ಅವರ ಪತ್ರ ಬರೆದಿರುವುದನ್ನು ಬಿಜೆಪಿ ಶಾಸಕ ಸುನಿಲ್ ಕುಮಾರ್ ಸಹ ಸದನಲ್ಲಿಂದು ಪ್ರಸ್ತಾಪಿಸಿ ಸರ್ಕಾರದ ವಿರುದ್ಧ ಮುಗಿಬಿದ್ದರು. ರಾಷ್ಟ್ರಧ್ವಜ ಹಾರಿಸಲು ಸಮಯ ಇಲ್ಲದ ಸಚಿವರು ಏಕೆ ಬೇಕು? ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಈ ವೇಳೆ ಡಿಸಿಎಂ ಪರಮೇಶ್ವರ್, ಸಮರ್ಥನೆ ಮಾಡಿಕೊಳ್ಳಲು ಮುಂದಾದರು. ಇದಕ್ಕೆ ಡಾ ಅಶ್ವತ್ಥ್​ ನಾರಾಯಣ ಸಹ ಎದ್ದು ನಿಂತು ಭಾರತೀಯನಾಗಿರುವವನು ಈ ರೀತಿ ನಡೆದುಕೊಳ್ಳಲು ಸಾಧ್ಯವಿಲ್ಲ ಎಂದು ಕಿಡಿಕಾರಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Viral: 45 ದಿನಕ್ಕೂ ಮುಂಚಿತವಾಗಿ ರಜೆ ಕೇಳಿದ್ರೂ ಕೊಡದ ಮ್ಯಾನೇಜರ್; ನೆಟ್ಟಿಗರಲ್ಲಿ ಸಲಹೆ ಕೇಳಿದ ಉದ್ಯೋಗಿ – Kannada News | The manager refused to grant leave even though it was requested more than 45 days in advance.

ಕಾರ್ಪೊರೇಟ್ ಕಂಪನಿಗಳಲ್ಲಿ (corporate company) ಕೆಲಸ ಮಾಡುವವರಿಗೆ ರಜೆ ಸಿಗೋದೇ ಇಲ್ಲ. ರಜೆ ಕೇಳಿದ್ರೆ ಸಾಕು ಆಕಾಶ ಭೂಮಿ ಒಂದು ಮಾಡ್ತಾರೆ. ಇದೀಗ ಉದ್ಯೋಗಿಯೊಬ್ಬರು 45 ದಿನಗಳ ಮುಂಚಿತವಾಗಿ ರಜೆಗೆ ಅರ್ಜಿ ಹಾಕಿದ್ದಾರೆ. ಆದರೆ ಮ್ಯಾನೇಜರ್ ರಜೆ ಕೊಡಲ್ಲ ಎಂದಿದ್ದಾರೆ. ರೆಡ್ಡಿಟ್ ನಲ್ಲಿ ಟೆಕ್ಕಿಯೊಬ್ಬರು ತನ್ನ ಪತ್ನಿ ಭಾರತದ ಟೆಕ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಮ್ಯಾನೇಜರ್ ಆಕೆಯ ರಜೆಗೆ ನಿರಾಕರಿಸಿದ್ದನ್ನು ಕಂಡು ಪತಿ ಬೇಸರ ವ್ಯಕ್ತಪಡಿಸಿದ್ದಾರೆ. ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಮ್ಯಾನೇಜರ್ ವರ್ತನೆಗೆ ನೆಟ್ಟಿಗರು ಗರಂ ಆಗಿದ್ದಾರೆ.

ಡೆವಲಪರ್ಸ್ ಇಂಡಿಯಾ (r/developers India)ಹೆಸರಿನ ರೆಡ್ಡಿಟ್‌ ಪೋಸ್ಟ್‌ನಲ್ಲಿ ಉದ್ಯೋಗಿಯೊಬ್ಬರು, ಕಾರ್ಪೊರೇಟ್ ಜಗತ್ತಿನ ಕರಾಳ ಮುಖ ಬಿಚ್ಚಿಟ್ಟಿದ್ದಾರೆ. ಈ ಪೋಸ್ಟ್‌ನಲ್ಲಿ ನನ್ನ ಪತ್ನಿ ಭಾರತದ ದೊಡ್ಡ ಐಟಿ ಸೇವಾ ಕಂಪನಿಗಳಲ್ಲಿ ಒಂದಾದ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾಳೆ. ಹೀಗಾಗಿ ನನ್ನ ಪತ್ನಿ ಪ್ರವಾಸಕ್ಕೆ ಒಂದೂವರೆ ತಿಂಗಳು ಇರುವಾಗಲೇ ರಜೆಯ ಬಗ್ಗೆ ಮ್ಯಾನೇಜರ್ ಮತ್ತು ಟೀಮ್ ಲೀಡ್‌ಗೆ ತಿಳಿಸಿದ್ದಾಳೆ. 45 ದಿನಕ್ಕೂ ಮುಂಚಿತವಾಗಿ ರಜೆ ಕೇಳಿದ್ರು ಮ್ಯಾನೇಜರ್ ರಜೆ ನೀಡಲು ರೆಡಿ ಇಲ್ಲ. ಪ್ರವಾಸದ ದಿನವನ್ನು ಬದಲಾವಣೆ ಮಾಡಿ ಎಂದು ಹೇಳಿದ್ದಾರೆ.

ವೈರಲ್ ಪೋಸ್ಟ್ ಇಲ್ಲಿದೆ

Manager at WITCH level companies not approving leaves
by
u/Historical_day_364 in
developersIndia

ಟ್ರಿಪ್‌ನ ದಿನಾಂಕಗಳನ್ನು ಬದಲಾಯಿಸುವುದು ಹೇಳಿದ್ದಷ್ಟು ಸುಲಭವಲ್ಲ, ಈಗಾಗಲೇ ಟ್ರಿಪ್ ಗೆ ಬೇಕಾದ ಎಲ್ಲಾ ವ್ಯವಸ್ಥೆಗಳು ಆಗಿದೆ. ಒಂದು ದಿನ ನಿಗದಿ ಪಡಿಸಿದ ಡೇಟ್ ಬದಲಾದ್ರೆ ಖರ್ಚು ಹೆಚ್ಚಾಗಿ ಬೀಳುತ್ತದೆ. ಕಳೆದ ಐದು ವರ್ಷಗಳಿಂದ ಈ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಸಾಕಷ್ಟು ರಜೆ ಖಾಲಿಯಿವೆ. ಏನಾದ್ರು ಕೆಲಸವಿದ್ದರೆ ಸ್ಲಾಕ್ ಅಥವಾ ವಾಟ್ಸ್​ಆಪ್ ಮೂಲಕ ಕಾಂಟಾಕ್ಟ್ ಮಾಡುವೆ ಎಂದು ತನ್ನ ಪತ್ನಿ ಹೇಳಿದ್ದಾರಂತೆ. ಆದರೆ ಮ್ಯಾನೇಜರ್ ಮಾತ್ರ ಪಟ್ಟು ಬಿಡದೇ ರಜೆ ವಿಷ್ಯ ಬಿಟ್ಟು, ಟ್ರಿಪ್ ಡೇಟ್ ಬದಲಾವಣೆಗೆ ಹೆಚ್ಚು ಒತ್ತು ನೀಡುತ್ತಿದ್ದಾರೆ. ಕಂಪನಿಗಳಲ್ಲಿ ರಜೆಯ ವಿಷ್ಯದಲ್ಲಿ ಈ ರೀತಿ ವರ್ತಿಸುವುದು ಸಾಮಾನ್ಯ. ಟೂರ್ ದಿನಾಂಕವನ್ನು ಬುಕ್ ಮಾಡಲಾಗಿದೆ ಎಂದು ಮ್ಯಾನೇಜರ್‌ಗೆ ಮತ್ತೊಮ್ಮೆ ತಿಳಿಸುವುದು ಉತ್ತಮವೇ, ಇಲ್ಲವೆಂದರೆ ರಜೆಯ ಬಗ್ಗೆ ಎಚ್‌ಆರ್ ಬಳಿ ಮಾತನಾಡಬೇಕೇ ಎಂದು ನೆಟ್ಟಿಗರಲ್ಲಿ ಸಲಹೆ ಕೇಳಿದ್ದಾರೆ.

ಇದನ್ನೂ ಓದಿ: ಬೆಂಗಳೂರಲ್ಲಿ ಜೀವನ ಸಾಗಿಸಲು ವರ್ಷಕ್ಕೆ 50 ಲಕ್ಷ ರೂ. ಸಂಬಳವೂ ಸಾಕಾಗಲ್ಲವೇ? ಟೆಕ್ಕಿಯ ಲೆಕ್ಕಾಚಾರ ವೈರಲ್

ಈ ಪೋಸ್ಟ್ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಕಾರ್ಪೊರೇಟ್ ಕಂಪನಿಯಲ್ಲಿ ರಜೆ ಕೇಳಿದ್ರೆ ಮೈ ಮೇಲೆ ಬಿದ್ದವರಂತೆ ಆಡುತ್ತಾರೆ ಎಂದು ಹೇಳಿದ್ದಾರೆ. ಮತ್ತೊಬ್ಬರು, ಕೆಲಸ ಮುಖ್ಯವೇ ಆದರೆ ವೈಯುಕ್ತಿಕ ಜೀವನ ಕೂಡ ಅಷ್ಟೇ ಮುಖ್ಯ. ಹೀಗಾಗಿ ಸಾಧ್ಯವಾದರೆ ಆ ಕೆಲಸವನ್ನು ಬದಲಾಯಿಸಲು ನೋಡಿ ಎಂದು ಸಲಹೆ ನೀಡಿದ್ದಾರೆ. ಇನ್ನೊಬ್ಬರು, ರಜೆ ಬಗ್ಗೆ ಮತ್ತೊಮ್ಮೆ ಮ್ಯಾನೇಜರ್ ಹೇಳುವ ಅಗತ್ಯವಿಲ್ಲ, ಎಚ್ ಆರ್ ಗೆ ತಿಳಿಸಿ ರಜೆ ತೆಗೆದುಕೊಳ್ಳಿ ಎಂದು ಸಲಹೆ ನೀಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 2:48 pm, Fri, 14 August 26

Source link

‘ಜಡ್ಜ್​ ಆಗಿ ತಪ್ಪುಮಾಡಿದೆ’; ‘ಬಿಗ್ ಬಾಸ್ ಅಗ್ನಿಪರೀಕ್ಷೆ’ ಟ್ರೋಲ್ಸ್​ನಿಂದ ಸಂಗೀತಾ ಶೃಂಗೇರಿ ಕಂಗಾಲು – Kannada News | Bigg Boss Agnipariksha Trolls: Sangeetha Sringeri Expresses Anger Over Vinay Gowda In Viral Video

‘ಬಿಗ್ ಬಾಸ್ ಕನ್ನಡ’ (BBK) ಕಿರುತೆರೆಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ಒಂದು. ಇದೀಗ ‘ಬಿಗ್ ಬಾಸ್ ಅಗ್ನಿಪರೀಕ್ಷೆ’ ಎಂಬ ವಿಶಿಷ್ಟ ಹಾಗೂ ಹೊಸ ಮಾದರಿಯಲ್ಲಿ ಶೋ ಆರಂಭಗೊಂಡಿದೆ. ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವ ಪ್ರಮುಖ ಕಂಟೆಂಟ್ ಕ್ರಿಯೇಟರ್ಸ್‌ಗಳು ಸ್ಪರ್ಧಿಗಳಾಗಿ ಭಾಗವಹಿಸಿರುವ ಈ ಶೋಗೆ ನಟಿ ಸಂಗೀತಾ ಶೃಂಗೇರಿ, ವಿನಯ್ ಗೌಡ, ಚಂದನ್ ಶೆಟ್ಟಿ ಹಾಗೂ ನಟಿ ಶ್ರುತಿ ಜಡ್ಜ್‌ಗಳಾಗಿ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಆದರೆ ಶೋನಲ್ಲಿ ನೀಡಲಾಗುತ್ತಿರುವ ಟಾಸ್ಕ್ ಹಾಗೂ ಜಡ್ಜ್‌ಗಳ ನಿರ್ಣಯಗಳನ್ನು ಆಧರಿಸಿ ಜಾಲತಾಣಗಳಲ್ಲಿ ಭಾರೀ ಟ್ರೋಲ್ ಮಾಡಲಾಗುತ್ತಿದೆ.

ಈ ಟ್ರೋಲ್​ಗಳ ಕುರಿತು ಸ್ವತಃ ಕಲರ್ಸ್ ಕನ್ನಡ ವಿಡಿಯೋ ಹಂಚಿಕೊಂಡಿದೆ. ಜಡ್ಜಿಂಗ್ ಚೇರ್‌ನಲ್ಲಿದ್ದ ಸಂಗೀತಾ ಶೃಂಗೇರಿ ತಮ್ಮ ಮೊಬೈಲ್‌ನಲ್ಲಿ ಸೋಶಿಯಲ್ ಮೀಡಿಯಾ ಫೀಡ್ ನೋಡುತ್ತಾ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ‘ಜಡ್ಜ್ ಆಗಿ ಬಂದು ತಪ್ಪು ಮಾಡಿದೆ ಅನಿಸುತ್ತದೆ. ಫೀಡ್‌ತುಂಬಾ ಬರೀ ನೆಗೆಟಿವ್ ರಿವ್ಯೂಸ್ ಹಾಗೂ ಟ್ರೋಲ್‌ಗಳೇ ಕಾಣಿಸುತ್ತಿವೆ. ನಾವು ಪ್ರಾಮಾಣಿಕವಾಗಿ, ಕಟ್ಟುನಿಟ್ಟಾಗಿ ಜಡ್ಜ್ ಮಾಡುತ್ತಿರುವುದಕ್ಕೆ ನಮಗೆ ಹೀಗೆ ಟ್ರೋಲ್ ಮಾಡಬೇಕಾ?’ ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ‘ಬಿಗ್ ಬಾಸ್ ಅಗ್ನಿಪರೀಕ್ಷೆ’; 72 ವರ್ಷದ ರತ್ನ ಹಾಗೂ 20 ವರ್ಷ ಕುಮಾರಿ ಪಾಸ್

ಇದಕ್ಕೆ ಪ್ರತಿಕ್ರಿಯಿಸಿದ ವಿನಯ್ ಗೌಡ, ‘ಬರೀ ನಿನ್ನಷ್ಟೇ ಅಲ್ಲ ಸಂಗೀತಾ, ನನ್ನ ಮೇಲೂ ಟ್ರೋಲ್ ಆಗುತ್ತಿದೆ. ಇನ್‌ಸ್ಟಾಗ್ರಾಮ್ ಓಪನ್ ಮಾಡಿದರೆ ಬರೀ ಇವೇ ಬರುತ್ತಿವೆ’ ಎಂದಿದ್ದಾರೆ. ವಿನಯ್ ಅವರು ಈ ವಿಷಯವನ್ನು ತಮಾಷೆಯಾಗಿ ತೆಗೆದುಕೊಂಡು ನಗುತ್ತಿರುವುದನ್ನು ಕಂಡು ಸಂಗೀತಾ ಮತ್ತಷ್ಟು ಕೋಪಗೊಂಡಿದ್ದಾರೆ. ‘ನನ್ನ ಮೇಲಾಗುತ್ತಿರುವ ಟ್ರೋಲ್‌ಗಳನ್ನು ನೋಡಿ ನೀನು ಎಂಜಾಯ್ ಮಾಡುತ್ತಿದ್ದೀಯಾ? ಇದರಲ್ಲಿ ತಮಾಷೆ ಏನಿದೆ?’ ಎಂದು ವಿನಯ್ ವಿರುದ್ಧ ಸಂಗೀತಾ ಗರಂ ಆಗಿ ಅಲ್ಲಿಂದ ತೆರಳಿದ್ದಾರೆ.ಇದಕ್ಕೆ ಎರಡನೇ ಪಾರ್ಟ್ ಕೂಡ ಬರಲಿದೆ ಎಂಬ ಮಾಹಿತಿ ನೀಡಲಾಗಿದೆ.

ರಿಯಾಲಿಟಿ ಶೋ ಸುತ್ತ ಸಾಲು ಸಾಲು ವಿವಾದ ಹಾಗೂ ಟ್ರೋಲ್ಸ್

ಬಿಗ್ ಬಾಸ್ ರಿಯಾಲಿಟಿ ಶೋಗೆ ಕರೆದುಕೊಂಡು ಹೋಗಲು ‘ಬಿಗ್ ಬಾಸ್ ಅಗ್ನಿ ಪರೀಕ್ಷೆ’ ಮಾಡಲಾಗಿದೆ. 60 ಮಂದಿ ಪೈಕಿ ಕೆಲವರನ್ನು ಬಿಗ್ ಬಾಸ್ ಮನೆಗೆ ಕರೆದುಕೊಂಡು ಹೋಗಲಾಗುತ್ತಿದೆ. ‘ಬಿಗ್ ಬಾಸ್ ಅಗ್ನಿ ಪರೀಕ್ಷೆ’ ಆಗಸ್ಟ್ 16ರಿಂದ ಆರಂಭ ಆಗುತ್ತಿದೆ. ಮುಖ್ಯ ಶೋ ಸೆಪ್ಟೆಂಬರ್​ನಿಂದ 6ರಿಂದ ಆರಂಭ ಆಗುವ ನಿರೀಕ್ಷೆ ಇದೆ.

ಪ್ರಶ್ನೆ: ಬಿಗ್ ಬಾಸ್ ಅಗ್ನಿಪರೀಕ್ಷೆ ಯಾವಾಗಿನಿಂದ ಆರಂಭ?
ಉತ್ತರ: ಆಗಸ್ಟ್ 26

ಪ್ರಶ್ನೆ: ಬಿಗ್ ಬಾಸ್ ಅಗ್ನಿಪರೀಕ್ಷೆಗೆ ಜಡ್ಜ್​ ಯಾರು?
ಉತ್ತರ: ವಿನಯ್ ಗೌಡ, ಸಂಗೀತಾ ಶೃಂಗೇರಿ, ಚಂದನ್ ಶೆಟ್ಟಿ, ಶ್ರುತಿ

ಪ್ರಶ್ನೆ: ಬಿಗ್ ಬಾಸ್ ಅಗ್ನಿಪರೀಕ್ಷೆಯಲ್ಲಿ ಸ್ಪರ್ಧಿಗಳು ಯಾರು?
ಉತ್ತರ: ಕಂಟೆಂಟ್ ಕ್ರಿಯೇಟರ್ 

Source link

ಏಳು ವರ್ಷಗಳ ಬಳಿಕ ಇನ್​​ಸ್ಟಾಗ್ರಾಂ ಡಿಪಿ ಬದಲಿಸಿದ ಪ್ರಭಾಸ್ – Kannada News | Prabhas changed his Instagram DP after seven years

ಪ್ರಭಾಸ್ (Prabhas)​, ಭಾರತದ ಟಾಪ್ ಪ್ಯಾನ್ ಇಂಡಿಯಾ ಸ್ಟಾರ್ ನಟ. ಕೋಟ್ಯಂತರ ಅಭಿಮಾನಿಗಳನ್ನು ಅವರು ಹೊಂದಿದ್ದಾರೆ. ಇತರೆ ಸ್ಟಾರ್ ನಟ-ನಟಿಯರು ತಮ್ಮ ಅಭಿಮಾನಿಗಳೊಟ್ಟಿಗೆ ಸಂಪರ್ಕದಲ್ಲಿರಲು, ಸದಾ ಟ್ರೆಂಡಿಂಗ್​​ನಲ್ಲಿರಲು ಸೋಷಿಯಲ್ ಮೀಡಿಯಾ ಅನ್ನು ಬಲು ಪರಿಣಾಮಕಾರಿಯಾಗಿ ಬಳಸುತ್ತಾರೆ. ಈಗಿನ ಸ್ಟಾರ್ ನಟಿಯರು ಸಾಮಾಜಿಕ ಜಾಲತಾಣವನ್ನು ಬಲು ಗಂಭೀರವಾಗಿ ಪರಿಗಣಿಸಿದ್ದಾರೆ. ಆದರೆ ನಟ ಪ್ರಭಾಸ್ ಇದಕ್ಕೆ ವ್ಯತಿರಿಕ್ತ. ಅವರು ಸಾಮಾಜಿಕ ಜಾಲತಾಣದಲ್ಲಿ ಬಹಳ ಇನ್ಯಾಕ್ಟಿವ್. ಸಾಮಾಜಿಕ ಜಾಲತಾಣದಿಂದ ಪ್ರಭಾಸ್ ಅದೆಷ್ಟು ದೂರವೆಂದರೆ ಏಳು ವರ್ಷಗಳಿಂದಲೂ ಅವರು ತಮ್ಮ ಡಿಪಿ ಬದಲಿಸಿರಲಿಲ್ಲ. ಈಗ ಏಳು ವರ್ಷಗಳ ಬಳಿಕ ಇನ್​​ಸ್ಟಾಗ್ರಾಂ ಡಿಪಿ ಬದಲಿಸಿದ್ದಾರೆ.

ಹೌದು, ನಟ ಪ್ರಭಾಸ್ ಬರೋಬ್ಬರಿ ಏಳು ವರ್ಷಗಳ ಬಳಿಕ ತಮ್ಮ ಡಿಪಿ ಬದಲಾವಣೆ ಮಾಡಿದ್ದಾರೆ. ಏಳು ವರ್ಷಗಳ ಹಿಂದೆ ಪ್ರಭಾಸ್, ‘ಬಾಹುಬಲಿ’ ಸಿನಿಮಾದ ತಮ್ಮದೇ ಚಿತ್ರವನ್ನು ಇನ್​​ಸ್ಟಾಗ್ರಾಂಗೆ ಡಿಪಿಯಾಗಿ ಇರಿಸಿಕೊಂಡಿದ್ದರು. ಆ ಚಿತ್ರವನ್ನು ಇಷ್ಟು ವರ್ಷಗಳಾದರೂ ಅವರು ಬದಲಾವಣೆ ಮಾಡಿರಲಿಲ್ಲ. ಈಗ ಏಳು ವರ್ಷಗಳ ಬಳಿಕ ಮೊದಲ ಬಾರಿಗೆ ತಮ್ಮ ಡಿಪಿ ಬದಲಾಯಿಸಿದ್ದಾರೆ.

ಈಗ ‘ಬಾಹುಬಲಿ’ ಸಿನಿಮಾದ ಚಿತ್ರವನ್ನು ತೆಗೆದಿರುವ ಪ್ರಭಾಸ್, ತಮ್ಮ ಹೊಸ ಸಿನಿಮಾ ‘ಫೌಜಿ’ಯ ಪೋಸ್ಟರ್ ಅನ್ನು ತಮ್ಮ ಡಿಪಿ ಆಗಿ ಹಾಕಿಕೊಂಡಿದ್ದಾರೆ. ಪಂಚೆ ಧರಿಸಿ, ಬರಿ ಮೈಯಲ್ಲಿ ಪ್ರಭಾಸ್ ಕೂತಿರುವ ಚಿತ್ರ ಇದಾಗಿದೆ. ಪ್ರಭಾಸ್ ಸುತ್ತ ಹೆಣಗಳ ರಾಶಿ, ಪ್ರಭಾಸ್ ಮೈ ರಕ್ತದಿಂದ ನೆನೆದಿದೆ. ಕೆಲ ವಾರಗಳ ಹಿಂದಷ್ಟೆ ‘ಫೌಜಿ’ ಚಿತ್ರತಂಡವು ಈ ಪೋಸ್ಟರ್ ಅನ್ನು ಬಿಡುಗಡೆ ಮಾಡಿತ್ತು. ಇದೀಗ ಫೋಟೊವನ್ನು ಡಿಪಿ ಆಗಿ ಇರಿಸಿಕೊಂಡಿದ್ದಾರೆ ಪ್ರಭಾಸ್. ‘ಫೌಜಿ’ ಸಿನಿಮಾದ ಮೇಲೆ ಪ್ರಭಾಸ್ ಅವರಿಗೆ ಭಾರಿ ನಿರೀಕ್ಷೆ, ಆತ್ಮವಿಶ್ವಾಸ ಇರುವ ಕಾರಣದಿಂದಲೇ ಪ್ರಭಾಸ್ ಅವರು ಸಿನಿಮಾದ ಫೋಟೊವನ್ನು ತಮ್ಮ ಡಿಪಿಗೆ ಇರಿಸಿಕೊಂಡಿದ್ದಾರೆ ಎನ್ನುತ್ತಿದ್ದಾರೆ ಅಭಿಮಾನಿಗಳು.

ಇದನ್ನೂ ಓದಿ:‘ರಾಮಾಯಣ’ ಟ್ರೈಲರ್ ಬಿಡುಗಡೆ ಆದರೆ ಟ್ರೆಂಡ್ ಆಗುತ್ತಿರುವುದು ಪ್ರಭಾಸ್, ಏಕೆ?

‘ಫೌಜಿ’ ಸಿನಿಮಾವನ್ನು ರಘು ಹನುಪುಡಿ ನಿರ್ದೇಶನ ಮಾಡಿದ್ದಾರೆ. ತೆಲುಗಿನ ಕಲ್ಟ್ ಕ್ಲಾಸಿಕ್ ಸಿನಿಮಾ ‘ಸೀತಾ ರಾಮಂ’ ನಿರ್ದೇಶನ ಮಾಡಿರುವುದು ಇದೇ ರಘು ಹನುಪುಡಿ. ಸಿನಿಮಾ ಡಿಸೆಂಬರ್ 3ಕ್ಕೆ ರಿಲೀಸ್ ಆಗಲಿದೆ. ‘ಫೌಜಿ’ ಜೊತೆಗೆ ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ‘ಸ್ಪಿರಿಟ್’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಅದರ ಜೊತೆಗೆ ‘ಕಲ್ಕಿ 2898 ಎಡಿ’ ಸಿನಿಮಾನಲ್ಲೂ ನಟಿಸುತ್ತಿದ್ದಾರೆ. ಈ ಮೂರೂ ಸಿನಿಮಾಗಳ ಬಳಿಕ ‘ಸಲಾರ್ 2’ ಸಿನಿಮಾನಲ್ಲಿ ನಟಿಸಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

NTPC Recruitment 2026: ಕೇಂದ್ರ ಸರ್ಕಾರಿ ವಲಯದ ಸಂಸ್ಥೆಯಲ್ಲಿ ಉದ್ಯೋಗವಕಾಶ; ಡೆಪ್ಯುಟಿ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಆಹ್ವಾನ – Kannada News | NTPC Deputy Manager Recruitment 2026: 135 Engineering Jobs for Experienced Professionals

ದೇಶದ ಪ್ರಮುಖ ಕೇಂದ್ರ ಸರ್ಕಾರಿ ವಲಯದ ಸಂಸ್ಥೆಯಾದ ನ್ಯಾಷನಲ್ ಥರ್ಮಲ್ ಪವರ್ ಕಾರ್ಪೊರೇಷನ್ ಲಿಮಿಟೆಡ್ (NTPC), ಅನುಭವಿ ಎಂಜಿನಿಯರಿಂಗ್ ವೃತ್ತಿಪರರಿಗೆ ಅತ್ಯುತ್ತಮ ಉದ್ಯೋಗಾವಕಾಶವನ್ನು ತಂದಿದೆ. NTPC ಯಲ್ಲಿ ಖಾಲಿ ಇರುವ ಡೆಪ್ಯುಟಿ ಮ್ಯಾನೇಜರ್ (Deputy Manager) ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆ ಬಿಡುಗಡೆಯಾಗಿದೆ. ಎಲೆಕ್ಟ್ರಿಕಲ್, ಮೆಕ್ಯಾನಿಕಲ್ ಹಾಗೂ ಕಂಟ್ರೋಲ್ ಮತ್ತು ಇನ್ಸ್ಟ್ರುಮೆಂಟೇಶನ್ (C&I) ವಿಭಾಗಗಳಲ್ಲಿ ಒಟ್ಟು 135 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಆಯ್ಕೆಯಾದ ಅಭ್ಯರ್ಥಿಗಳು E4 ದರ್ಜೆಯಲ್ಲಿ ತಿಂಗಳಿಗೆ ರೂ. 70,000 ದಿಂದ ರೂ. 2,00,000 ವರೆಗಿನ ಆಕರ್ಷಕ ವೇತನವನ್ನು ಪಡೆಯಲಿದ್ದಾರೆ.

ಶೈಕ್ಷಣಿಕ ಅರ್ಹತೆಯ ವಿವರಗಳು:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಕನಿಷ್ಠ ಶೇ.60 ಅಂಕಗಳೊಂದಿಗೆ ಸಂಬಂಧಿತ ಎಂಜಿನಿಯರಿಂಗ್ ವಿಭಾಗದಲ್ಲಿ ಪೂರ್ಣಾವಧಿ BE/B.Tech ಪದವಿಯನ್ನು ಪೂರ್ಣಗೊಳಿಸಿರಬೇಕು. ಎಲೆಕ್ಟ್ರಿಕಲ್ ವಿಭಾಗಕ್ಕೆ ಎಲೆಕ್ಟ್ರಿಕಲ್ ಅಥವಾ ಎಲೆಕ್ಟ್ರಿಕಲ್ & ಎಲೆಕ್ಟ್ರಾನಿಕ್ಸ್, ಮೆಕ್ಯಾನಿಕಲ್ ವಿಭಾಗಕ್ಕೆ ಮೆಕ್ಯಾನಿಕಲ್ ಅಥವಾ ಪ್ರೊಡಕ್ಷನ್, ಹಾಗೂ C&I ವಿಭಾಗಕ್ಕೆ ಇನ್ಸ್ಟ್ರುಮೆಂಟೇಶನ್, ಕಂಟ್ರೋಲ್ & ಇನ್ಸ್ಟ್ರುಮೆಂಟೇಶನ್ ಅಥವಾ ಎಲೆಕ್ಟ್ರಾನಿಕ್ಸ್ & ಇನ್ಸ್ಟ್ರುಮೆಂಟೇಶನ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿರುವುದು ಕಡ್ಡಾಯವಾಗಿದೆ.

ಇದನ್ನೂ ಓದಿ: ಬೆಂಗಳೂರು ದಕ್ಷಿಣ ಜಿಲ್ಲೆ;102 ಪೌರಕಾರ್ಮಿಕ ಹುದ್ದೆಗಳಿಗೆ ಅರ್ಜಿ ಆಹ್ವಾನ

ಕಡ್ಡಾಯ ಕಾರ್ಯಾನುಭವ ಮತ್ತು ವಯೋಮಿತಿ:

ಈ ಹುದ್ದೆಗಳಿಗೆ ಕೇವಲ ಶೈಕ್ಷಣಿಕ ಅರ್ಹತೆ ಮಾತ್ರ ಸಾಕಾಗುವುದಿಲ್ಲ, ಬದಲಿಗೆ ಸಂಬಂಧಿತ ಕ್ಷೇತ್ರದಲ್ಲಿ ಕನಿಷ್ಠ 10 ವರ್ಷಗಳ ಕೆಲಸದ ಅನುಭವ ಕಡ್ಡಾಯವಾಗಿದೆ. ಅಭ್ಯರ್ಥಿಗಳು ವಿದ್ಯುತ್ ವಲಯ (Power Sector) ಅಥವಾ ಪ್ರಕ್ರಿಯೆ ಕೈಗಾರಿಕೆಗಳಲ್ಲಿ (Process Industry) ಎಕ್ಸಿಕ್ಯುಟಿವ್ ಕೇಡರ್‌ನಲ್ಲಿ ಸೇವೆ ಸಲ್ಲಿಸಿದ ಅನುಭವ ಹೊಂದಿರಬೇಕು. ಇನ್ನು ವಯೋಮಿತಿಯ ವಿಷಯಕ್ಕೆ ಬಂದರೆ, ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಹಾಗೂ ಗರಿಷ್ಠ 40 ವರ್ಷ ವಯಸ್ಸಾಗಿರಬೇಕು. ನಿಯಮಗಳ ಪ್ರಕಾರ ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ.

ಅರ್ಜಿ ಸಲ್ಲಿಕೆಯ ವಿಧಾನ ಮತ್ತು ಪ್ರಮುಖ ದಿನಾಂಕಗಳು:

ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು NTPC ಯ ಅಧಿಕೃತ ವೆಬ್‌ಸೈಟ್‌ www.ntpc.co.in ಮೂಲಕ ಆನ್‌ಲೈನ್‌ನಲ್ಲಿ ಮಾತ್ರ ಅರ್ಜಿ ಸಲ್ಲಿಸಬೇಕಾಗುತ್ತದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಆಗಸ್ಟ್ 12, 2026 ರಿಂದ ಆರಂಭವಾಗಿದ್ದು, ಆನ್‌ಲೈನ್ ಅರ್ಜಿ ಸಲ್ಲಿಸಲು ಆಗಸ್ಟ್ 26 ಕೊನೆಯ ದಿನಾಂಕವಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯಲ್ಲಿರುವ ಎಲ್ಲಾ ನಿಯಮಗಳು ಮತ್ತು ಅರ್ಹತೆಗಳನ್ನು ಸರಿಯಾಗಿ ಪರಿಶೀಲಿಸಿಕೊಳ್ಳಲು ಸೂಚಿಸಲಾಗಿದೆ, ಏಕೆಂದರೆ ನಿಯಮಗಳನ್ನು ಪೂರೈಸದ ಅರ್ಜಿಗಳನ್ನು ನೇರವಾಗಿ ತಿರಸ್ಕರಿಸಲಾಗುತ್ತದೆ.

ಉದ್ಯೋಗಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Source link

‘ಮುಂಗಾರು ಮಳೆ’ ಸಿನಿಮಾ ಆಗಲು ಕಾರಣನಾದೆ: ನಾಗತಿಹಳ್ಳಿ ಚಂದ್ರಶೇಖರ್ – Kannada News | Nagathihalli Chandrashekhar said he was the one of the reason Yogaraj Bhatt’s Mungaru Male

ನಾಗತಿಹಳ್ಳಿ ಚಂದ್ರಶೇಖರ್ (Nagathihalli Chandrashekhar) ಅವರು ಮತ್ತೊಮ್ಮೆ ‘ಅಮೆರಿಕ ಅಮೆರಿಕ’ (America America) ಸಿನಿಮಾ ಮಾಡಿದ್ದಾರೆ. ಸಿನಿಮಾಕ್ಕೆ ‘ಅಮೆರಿಕ ಅಮೆರಿಕ 2’ ಎಂದು ಹೆಸರಿಟ್ಟಿದ್ದು, ಸಿನಿಮಾಕ್ಕೆ ಮನೋಮೂರ್ತಿ ಅವರು ಸಂಗೀತ ನೀಡಿದ್ದಾರೆ. ಇತ್ತೀಚೆಗೆ ಆಯೋಜಿಸಿದ್ದ ‘ಅಮೆರಿಕ ಅಮೆರಿಕ 2’ ಸಿನಿಮಾದ ಹಾಡು ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ನಾಗತಿಹಳ್ಳಿ ಚಂದ್ರಶೇಖರ್ ಅವರು, ‘ಮನೋಮೂರ್ತಿ ಅವರು ನನ್ನ ಸಿನಿಮಾಗಳಿಗೆ ಮಾತ್ರ ಕೆಲಸ ಮಾಡುತ್ತಾರೆ ಎಂಬ ಸುದ್ದಿ ಹಬ್ಬಿತ್ತು, ಆದರೆ ನಾನು ಮನೋಮೂರ್ತಿಯವರನ್ನು ಯೋಗರಾಜ್ ಭಟ್​​ಗೆ ಪರಿಚಯಿಸಿ ಆ ಮೂಲಕ ‘ಮುಂಗಾರು ಮಳೆ’ ಆಗಲು ಪರೋಕ್ಷ ಕಾರಣನಾದೆ’ ಎಂದಿದ್ದಾರೆ. ನಾಗತಿಹಳ್ಳಿ ಚಂದ್ರಶೇಖರ್ ಹೇಳಿದ್ದೇನು? ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Source link

ಗುಟ್ಕಾ ನಿಷೇಧದ ಸುದ್ದಿ ಬೆನ್ನಲ್ಲೇ: ಚೀಲಗಳಲ್ಲಿ ತುಂಬಿಕೊಂಡು ಹೋದ ಜನ – Kannada News | Koppal Residents Rush to Stock Up on Gutka Amidst Karnataka Ban

ಕೊಪ್ಪಳ, ಆ.14: ಕರ್ನಾಟಕದಲ್ಲಿ ಗುಟ್ಕಾ ಮಾರಾಟದ ಮೇಲೆ ನಿಷೇಧ ಹೇರುವ ನಿರ್ಧಾರವು ಕೊಪ್ಪಳದಲ್ಲಿ ವ್ಯಾಪಕ ಖರೀದಿ ಭರಾಟೆಗೆ ಕಾರಣವಾಗಿದೆ. ನಿಷೇಧದ ಸುದ್ದಿ ಹೊರಬೀಳುತ್ತಿದ್ದಂತೆ, ವ್ಯಾಪಾರಿಗಳು ಮತ್ತು ಗ್ರಾಹಕರು ಗುಟ್ಕಾ ಖರೀದಿಗೆ ಅಂಗಡಿಗಳತ್ತ ಧಾವಿಸಿದ್ದು, ದೊಡ್ಡ ಪ್ರಮಾಣದಲ್ಲಿ ದಾಸ್ತಾನು ಮಾಡಿಕೊಳ್ಳಲು ಮುಂದಾಗಿದ್ದಾರೆ. ಕೊಪ್ಪಳದಲ್ಲಿ ಈ ವಿದ್ಯಮಾನವು ಗುಟ್ಕಾ ಸೇವನೆಯ ಚಟದ ಪ್ರಮಾಣವನ್ನು ಸ್ಪಷ್ಟವಾಗಿ ಬಿಂಬಿಸಿದೆ. ನಿಷೇಧ ಜಾರಿಯಾಗುವ ಮುನ್ನವೇ ಗುಟ್ಕಾ ಸಿಗುವುದಿಲ್ಲ ಎಂಬ ಭಯದಿಂದ ಜನರು ಚೀಲಗಳಲ್ಲಿ ಹಾಗೂ ಜೇಬುಗಳಲ್ಲಿ ತುಂಬಿಕೊಂಡು ಹೋಗಿದ್ದಾರೆ. ತಮ್ಮ ಶಕ್ತ್ಯಾನುಸಾರ ಹಣ ಖರ್ಚು ಮಾಡಿ, ಮುಂದೆ ಸಿಗದಿರಬಹುದು ಎಂಬ ಆತಂಕದಿಂದ ಸಾಧ್ಯವಾದಷ್ಟು ಗುಟ್ಕಾವನ್ನು ಸಂಗ್ರಹಿಸಿದ್ದಾರೆ. ಸರಕಾರವು ತಂಬಾಕು ಮತ್ತು ನಿಕೋಟಿನ್ ಉತ್ಪನ್ನಗಳ ಬಳಕೆಯನ್ನು ನಿಯಂತ್ರಿಸುವ ಮೂಲಕ ಸಾರ್ವಜನಿಕ ಆರೋಗ್ಯವನ್ನು ಸುಧಾರಿಸುವ ಗುರಿಯನ್ನು ಹೊಂದಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸರಕಾರದ ಈ ನಿರ್ಧಾರವು ಆರೋಗ್ಯ ಇಲಾಖೆಯ ಪ್ರಯತ್ನಗಳನ್ನು ಪ್ರತಿಬಿಂಬಿಸುತ್ತದೆ. ಆದಾಗ್ಯೂ, ಕೊಪ್ಪಳದಲ್ಲಿ ಕಂಡುಬಂದ ದೃಶ್ಯವು ಈ ಉತ್ಪನ್ನಗಳ ಮೇಲೆ ಜನರ ಅವಲಂಬನೆ ಎಷ್ಟು ಆಳವಾಗಿದೆ ಎಂಬುದನ್ನು ತೋರಿಸುತ್ತದೆ. ಗುಟ್ಕಾ ಹುಚ್ಚು ಒಮ್ಮೆ ಶುರುವಾದರೆ ಅದರಿಂದ ಹೊರಬರುವುದು ಬಹಳ ಕಷ್ಟ ಎಂಬುದು ಈ ಘಟನೆಯಿಂದ ಮತ್ತೆ ಸಾಬೀತಾಗಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಭಾರತದಲ್ಲೇ ‘ರೇರ್ ಅರ್ಥ್ ಮ್ಯಾಗ್ನೆಟ್ಸ್’ ತಯಾರಿಕೆಗೆ ಎಲ್‌&ಟಿ ಸಜ್ಜು; ಚೀನಾ ಪ್ರಾಬಲ್ಯಕ್ಕೆ ಸವಾಲು – Kannada News | L&T to bid for manufacturing rare earth magnets in India, as part of government’s incentive programme

ನವದೆಹಲಿ, ಆಗಸ್ಟ್ 14: ಲಾರ್ಸೆನ್ ಅಂಡ್ ಟೂಬ್ರೊ (L&T) ಭಾರತದಲ್ಲಿಯೇ ‘ರೇರ್ ಅರ್ಥ್ ಮ್ಯಾಗ್ನೆಟ್ಸ್’ (Rare-earth magnets) ತಯಾರಿಸಲು ಯೋಜನೆ ರೂಪಿಸುತ್ತಿದೆ. ಇದು ಈಡೇರಿದ್ದೇ ಆದಲ್ಲಿ, ಚೀನಾದ ಮೇಲಿನ ಭಾರತದ ಪ್ರಮುಖ ಅವಲಂಬನೆಯೊಂದು ಕಡಿಮೆ ಆಗಲಿದೆ. ಕೇಂದ್ರ ಸರ್ಕಾರವು ದೇಶೀಯವಾಗಿ ಲಭ್ಯ ಇರುವ ವಿರಳ ಭೂ ಖನಿಜಗಳನ್ನು ತಯಾರಿಸಲು ವಿವಿಧ ಯೋಜನೆಗಳನ್ನು ಹಾಕಿದೆ. ಈ ಹಿನ್ನೆಲೆಯಲ್ಲಿ, ಪ್ರಮುಖ ಎಂಜಿನಿಯರಿಂಗ್ ಕಂಪನಿಯಾದ ಎಲ್ ಅಂಡ್ ಟಿ ಈ ಕಾರ್ಯಕ್ಕೆ ಕೈಹಾಕಲು ಯೋಜಿಸುತ್ತಿದೆ.

ಜಾಗತಿಕವಾಗಿ ರೇರ್ ಅರ್ಥ್ ಮ್ಯಾಗ್ನೆಟ್ ಉತ್ಪಾದನೆಯಲ್ಲಿ ಚೀನಾ ಸುಮಾರು 90% ಹಿಡಿತ ಹೊಂದಿದೆ. ಈ ಅವಲಂಬನೆಯನ್ನು ತಪ್ಪಿಸಲು ಮತ್ತು ಭಾರತದಲ್ಲಿಯೇ ದೇಶಿಯ ಪೂರೈಕೆ ಸರಪಳಿಯನ್ನು (Domestic Supply Chain) ಬಲಪಡಿಸಲು ಎಲ್‌&ಟಿ ಮುಂದಾಗಿದೆ.

ಇದನ್ನೂ ಓದಿ: ಸರಕುಗಳ ಮೇಲೆ ಟ್ಯಾರಿಫ್ ತಪ್ಪಿಸಲು ಚೀನಾದ ಕಳ್ಳದಾರಿಗಳಲ್ಲಿ ಭಾರತವೂ ಒಂದು: ಅಮೆರಿಕ ಗಂಭೀರ ಆರೋಪ

ಈ ಉತ್ಪನ್ನಗಳ ತಯಾರಿಕೆಯನ್ನು ಉತ್ತೇಜಿಸಲು ಭಾರತ ಸರ್ಕಾರವು ಸುಮಾರು 7,280 ಕೋಟಿ ರೂಪಾಯಿಗಳ ಪ್ರೋತ್ಸಾಹಕ ಯೋಜನೆಯನ್ನು (Incentive Policy) ಘೋಷಿಸಿದೆ. ಎಲ್‌&ಟಿ ಈ ಯೋಜನೆಯಡಿ ಬಿಡ್ ಮಾಡಲು ತಯಾರಿ ನಡೆಸುತ್ತಿದೆ. ಎಲ್ ಅಂಡ್ ಟಿಯದ್ದು ಸೇರಿದಂತೆ ಒಟ್ಟು 15 ಬಿಡ್​ಗಳು ಸಲ್ಲಿಕೆಯಾಗಿರುವುದು ತಿಳಿದುಬಂದಿದೆ. ಜಪಾನ್​ನ ಪ್ರೋಟೆರಿಯಲ್ ಲಿಮಿಟೆಡ್ ಕಂಪನಿ ಒಳಗೊಂಡ ಒಂದು ಗುಂಪು ಹಾಗೂ ಒಂದೆರಡು ಭಾರತೀಯ ವಾಹನ ಕಂಪನಿಗಳೂ ಕೂಡ ಬಿಡ್ ಸಲ್ಲಿಸಿವೆ ಎನ್ನಲಾಗಿದೆ.

ಈ ವಿರಳ ಭೂ ಖನಿಜ ಅಯಸ್ಕಾಂತಗಳು ಯಾಕೆ ಮುಖ್ಯ?

ರೇರ್ ಅರ್ಥ್ ಮ್ಯಾಗ್ನೆಟ್‌ಗಳು ಎಲೆಕ್ಟ್ರಿಕ್ ವಾಹನಗಳ (EV) ಮೋಟಾರ್‌ಗಳು, ವಿಂಡ್ ಟರ್ಬೈನ್‌ಗಳು, ಕೈಗಾರಿಕಾ ರೋಬೋಟ್‌ಗಳು ಮತ್ತು ವಿವಿಧ ಎಲೆಕ್ಟ್ರಾನಿಕ್ಸ್ ಉಪಕರಣಗಳಲ್ಲಿ ಅತ್ಯಗತ್ಯವಾಗಿವೆ. ಎಲ್‌&ಟಿ ತನ್ನ ಎಲೆಕ್ಟ್ರಿಕ್ ವಾಹನ ಮೋಟಾರ್ ತಯಾರಿಕಾ ಯೋಜನೆಗೂ ಈ ಮ್ಯಾಗ್ನೆಟ್‌ಗಳನ್ನು ಬಳಸಿಕೊಳ್ಳಲು ಉದ್ದೇಶಿಸಿದೆ.

ಇದನ್ನೂ ಓದಿ: ಪ್ರಿ-ರೈಡ್ ಟಿಪ್ಸ್ ಬಂದ್‌: ಓಲಾ, ಉಬರ್, ರ‍್ಯಾಪಿಡೋ ಗ್ರಾಹಕರಿಗೆ ಕೇಂದ್ರ ಸರ್ಕಾರದಿಂದ ಬಿಗ್ ರಿಲೀಫ್

ಈ ಕ್ಷೇತ್ರವು ಉನ್ನತ ಮಟ್ಟದ ನಿಖರ ಇಂಜಿನಿಯರಿಂಗ್ ಅನ್ನು ಬೇಡುವುದರಿಂದ, ಸೂಕ್ತ ತಾಂತ್ರಿಕ ಪರಿಣತಿಯನ್ನು ಹೊಂದಿರುವ ಪಾಲುದಾರರನ್ನು ಹುಡುಕುವ ಪ್ರಕ್ರಿಯೆಯಲ್ಲಿ ಎಲ್‌&ಟಿ ತೊಡಗಿದೆ.

ಒಟ್ಟಾರೆಯಾಗಿ, ಎಲ್‌&ಟಿಯ ಈ ಹೆಜ್ಜೆಯು ಭಾರತದ ಉತ್ಪಾದನಾ ವಲಯದಲ್ಲಿ ಸ್ವಾವಲಂಬನೆ ಸಾಧಿಸಲು ಮತ್ತು ನಿರ್ಣಾಯಕ ತಂತ್ರಜ್ಞಾನಗಳಲ್ಲಿ ಚೀನಾದ ಮೇಲಿನ ಅವಲಂಬನೆಯನ್ನು ತಗ್ಗಿಸಲು ಸಹಕಾರಿಯಾಗಲಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Exit mobile version