ಚಿಪ್ ತಯಾರಿಸದಿದ್ದರೂ ಸೆಮಿಕಂಡಕ್ಟರ್ ಕ್ರಾಂತಿಯ ಲಾಭ ಪಡೆಯುತ್ತಿರುವ 3 ಭಾರತೀಯ ಕಂಪನಿಗಳು – Kannada News | India’s Semicon 2 programme to give boost to supply chain companies

ನವದೆಹಲಿ, ಜುಲೈ 17: ಸರ್ಕಾರವು ಇತ್ತೀಚೆಗೆ ಅನುಮೋದಿಸಿರುವ ₹1.3 ಲಕ್ಷ ಕೋಟಿ ಬಜೆಟ್‌ನ ‘ಸೆಮಿಕಾನ್ 2.0’ (Semicon 2.0) ಯೋಜನೆಯು ದೇಶದ ಬಾಹ್ಯಾಕಾಶ ಮತ್ತು ತಂತ್ರಜ್ಞಾನ ವಲಯದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಆದರೆ ಈ ಕ್ರಾಂತಿಯ ಅತ್ಯಂತ ಆಸಕ್ತಿದಾಯಕ ವಿಷಯವೆಂದರೆ, ಈ ಯೋಜನೆಯಿಂದ ತಕ್ಷಣವೇ ಭಾರಿ ಲಾಭ ಗಳಿಸುತ್ತಿರುವ ದೇಶದ ಪ್ರಮುಖ 3 ಕಂಪನಿಗಳು ನೇರವಾಗಿ ಯಾವುದೇ ಮೈಕ್ರೋಚಿಪ್‌ಗಳನ್ನು (Chips) ತಯಾರಿಸುವುದಿಲ್ಲ! ಬದಲಿಗೆ, ಚಿಪ್ ತಯಾರಿಕಾ ಘಟಕಗಳಿಗೆ (Fabs) ಅತ್ಯಗತ್ಯವಾಗಿ ಬೇಕಾಗುವ ಜಾಗತಿಕ ಗುಣಮಟ್ಟದ ರಾಸಾಯನಿಕಗಳು, ಗ್ಯಾಸ್‌ಗಳು ಮತ್ತು ಪ್ಲಾಸ್ಟಿಕ್ ಘಟಕಗಳನ್ನು ಪೂರೈಸುವ ಮೂಲಕ ಇವು ಮಾರುಕಟ್ಟೆಯಲ್ಲಿ ವಿಜೇತರಾಗಿ ಹೊರಹೊಮ್ಮುತ್ತಿವೆ.

ಗುಜರಾತ್ ಫ್ಲೋರೋಕೆಮಿಕಲ್ಸ್

ಚಿಪ್ ತಯಾರಿಕಾ ಘಟಕಗಳಲ್ಲಿ ಅತ್ಯಂತ ತೀವ್ರವಾದ ತಾಪಮಾನ ಮತ್ತು ರಾಸಾಯನಿಕ ತುಕ್ಕು (Chemical Corrosion) ತಡೆಯಲು ವಿಶೇಷ ‘ಫ್ಲೋರೋಪಾಲಿಮರ್ಸ್’ (Fluoropolymers – PTFE, PFA, PVDF) ಅಗತ್ಯವಿರುತ್ತದೆ. ಇವುಗಳಿಗೆ ಮಾರುಕಟ್ಟೆಯಲ್ಲಿ ಯಾವುದೇ ಪರ್ಯಾಯ ತಂತ್ರಜ್ಞಾನವಿಲ್ಲ.

ಮುಂಬರುವ 5G ನೆಟ್‌ವರ್ಕ್ ಮತ್ತು AI ಡೇಟಾ ಸೆಂಟರ್‌ಗಳ ಬೇಡಿಕೆ ಪೂರೈಸಲು ಈ GFL (Gujarat Fluorochemicals) ಸಂಸ್ಥೆಯು ಈಗಾಗಲೇ ಗ್ರಾಹಕರಿಂದ ಅಗತ್ಯ ಅನುಮೋದನೆ ಪಡೆದು ವಾಣಿಜ್ಯ ಪೂರೈಕೆ ಆರಂಭಿಸಿದೆ. ಸೆಮಿಕಂಡಕ್ಟರ್ ವಲಯದ ವಿಶೇಷ ಕೆಮಿಕಲ್‌ಗಳಿಗಾಗಿ ಕಂಪನಿಯು ₹222 ಕೋಟಿ ಹಾಗೂ ತನ್ನ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಲು ₹250 ಕೋಟಿ ಹೂಡಿಕೆ ಮಾಡುತ್ತಿದೆ.

ಇದನ್ನೂ ಓದಿ: ಕೇವಲ 4 ನಿಮಿಷಗಳಲ್ಲಿ ಚಾರ್ಜ್; ವಿಜ್ಞಾನಿಗಳಿಂದ ಸೋಡಿಯಂ ಮೆಟಲ್ ಬ್ಯಾಟರಿ ಕ್ರಾಂತಿ

ನವೀನ್ ಫ್ಲೋರಿನ್ ಇಂಟರ್ನ್ಯಾಷನಲ್

ಸ್ಮಾರ್ಟ್‌ಫೋನ್ ಮತ್ತು ಡೇಟಾ ಸೆಂಟರ್‌ಗಳ ಮೈಕ್ರೋಚಿಪ್‌ಗಳಿಗೆ ಆಧಾರವಾಗಿರುವ ಸಿಲಿಕಾನ್ ವೇಫರ್‌ಗಳನ್ನು (Silicon Wafers) ಸ್ವಚ್ಛಗೊಳಿಸಲು ಮತ್ತು ಅವುಗಳ ಮೇಲೆ ವಿನ್ಯಾಸ ಕೆತ್ತಲು (Etching) ಅಲ್ಟ್ರಾ-ಪ್ಯೂರ್ ಗುಣಮಟ್ಟದ ಆಸಿಡ್‌ಗಳು ಬೇಕಾಗುತ್ತವೆ. ನವಿನ್ ಫ್ಲೋರಿನ್ ಇಂಟರ್ನ್ಯಾಷನಲ್ ಸಂಸ್ಥೆ (Navin Fluorine International) ಈ ಆಸಿಡ್​​ಗಳನ್ನು ಪೂರೈಸುತ್ತದೆ.

ಸ್ವಿಸ್ ಮೂಲದ ಬಸ್ ಕೆಮ್ಟೆಕ್ (Buss ChemTech) ಕಂಪನಿಯೊಂದಿಗೆ ತಾಂತ್ರಿಕ ಪಾಲುದಾರಿಕೆ ಹೊಂದಿರುವ ನವೀನ್ ಫ್ಲೋರಿನ್, ಗುಜರಾತ್‌ನ ದಹೇಜ್‌ನಲ್ಲಿ ₹450 ಕೋಟಿ ವೆಚ್ಚದಲ್ಲಿ ಹೈಡ್ರೋಫ್ಲೋರಿಕ್ ಆಸಿಡ್ (HF) ಪ್ಲಾಂಟ್ ಸ್ಥಾಪಿಸಿ ಈಗಾಗಲೇ ವಾಣಿಜ್ಯ ಸರಬರಾಜು ಆರಂಭಿಸಿದೆ. ಇದಲ್ಲದೆ, ಹಾರ್ಡ್‌ವೇರ್ ಕೂಲಿಂಗ್ ತಂತ್ರಜ್ಞಾನಕ್ಕಾಗಿ ಮತ್ತೊಂದು ಜಾಗತಿಕ ಸಂಸ್ಥೆಯೊಂದಿಗೆ ₹120 ಕೋಟಿ ಒಪ್ಪಂದ ಮಾಡಿಕೊಂಡಿದೆ.

ಸ್ಟಾಲಿಯನ್ ಇಂಡಿಯಾ ಫ್ಲೋರೋಕೆಮಿಕಲ್ಸ್

ಸೆಮಿಕಂಡಕ್ಟರ್, ಸೋಲಾರ್ ಸೆಲ್ ಮತ್ತು ಆಪ್ಟಿಕಲ್ ಫೈಬರ್ ಉದ್ಯಮದಲ್ಲಿ ಅತಿ ಹೆಚ್ಚು ಶುದ್ಧತೆಯುಳ್ಳ ರೆಫ್ರಿಜರೆಂಟ್ ಹಾಗೂ ವಿಶೇಷ ಕೈಗಾರಿಕಾ ಗ್ಯಾಸ್‌ಗಳ (ಮುಖ್ಯವಾಗಿ ದ್ರವ ಹೀಲಿಯಂ – Liquid Helium) ಅಗತ್ಯವಿರುತ್ತದೆ.

ಇದನ್ನೂ ಓದಿ: ಶೇ. 100 ಚಾರ್ಜ್ ಆದರೂ ಫೋನ್ ಚಾರ್ಜಿಂಗ್ ಏಕೆ ನಿಲ್ಲುವುದಿಲ್ಲ?, ಆ ವಿದ್ಯುತ್ ಎಲ್ಲಿಗೆ ಹೋಗುತ್ತದೆ?

ಸ್ಟಾಲಿಯನ್ ಇಂಡಿಯಾ ಫ್ಲೋರೋಕೆಮಿಕಲ್ಸ್ ಕಂಪನಿಯು (Stallion India Fluorochemicals) ತನ್ನ ಖಾಲಾಪುರ ಮತ್ತು ಆಂಧ್ರಪ್ರದೇಶದ ಮಾಂಬಟ್ಟು ಘಟಕಗಳಲ್ಲಿ ದ್ರವ ಹೀಲಿಯಂ ಮೂಲಸೌಕರ್ಯವನ್ನು ದೊಡ್ಡ ಮಟ್ಟದಲ್ಲಿ ವಿಸ್ತರಿಸುತ್ತಿದ್ದು, ಇದು 2026 ರ ಮಧ್ಯಭಾಗದಲ್ಲಿ ಲಭ್ಯವಾಗಲಿದೆ. ತನ್ನ ಪೂರೈಕೆಯನ್ನು ಸುರಕ್ಷಿತಗೊಳಿಸಲು ಕತಾರ್ ಆಯಿಲ್‌ಫೀಲ್ಡ್ಸ್‌ನಿಂದ ಗ್ಯಾಸ್ ಪಡೆಯಲು ಶಾರ್ಜಾ ಆಕ್ಸಿಜನ್ ಕಂಪನಿಯೊಂದಿಗೆ ದೀರ್ಘಾವಧಿಯ ಒಪ್ಪಂದ ಮಾಡಿಕೊಂಡಿದೆ. 2030 ರ ವೇಳೆಗೆ ₹3,000 ಕೋಟಿ ಆದಾಯದ ಗುರಿಯನ್ನು ಕಂಪನಿ ಹೊಂದಿದೆ.

ಒಂದು ದೊಡ್ಡ ಉದ್ಯಮ ಬೆಳೆಯುವಾಗ ಕೇವಲ ಅಂತಿಮ ಉತ್ಪನ್ನ ತಯಾರಿಸುವ ಕಂಪನಿಗಳು ಮಾತ್ರವಲ್ಲದೆ, ಅದಕ್ಕೆ ಕಚ್ಚಾ ವಸ್ತು ಹಾಗೂ ಅಗತ್ಯ ಬಿಡಿಭಾಗಗಳನ್ನು ಒದಗಿಸುವ ‘ಸಪ್ಲೈ ಚೈನ್’ (Supply Chain) ಕಂಪನಿಗಳು ಕೂಡ ಹೂಡಿಕೆಗೆ ಅತ್ಯುತ್ತಮ ಅವಕಾಶಗಳನ್ನು ಸೃಷ್ಟಿಸುತ್ತವೆ ಎಂಬುದಕ್ಕೆ ಭಾರತದ ಸೆಮಿಕಂಡಕ್ಟರ್ ಯೋಜನೆ ಮತ್ತು ಈ ಮೂರು ಕಂಪನಿಗಳ ಬೆಳವಣಿಗೆಯೇ ಸಾಕ್ಷಿ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

IND vs ENG: ಸಚಿನ್ ತೆಂಡೂಲ್ಕರ್‌ ದಾಖಲೆ ಮುರಿದ ವಿರಾಟ್ ಕೊಹ್ಲಿ – Kannada News | Virat Kohli Breaks Sachin’s England Record: Most 50+ Scores in ODIs and New Milestones!

ಇಂಗ್ಲೆಂಡ್‌ ವಿರುದ್ಧದ ಎರಡನೇ ಏಕದಿನ ಪಂದ್ಯವನ್ನು ಟೀಂ ಇಂಡಿಯಾ ಸೋತಿರಬಹುದು. ಆದರೆ ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಹಲವು ದಾಖಲೆಗಳನ್ನು ಸೃಷ್ಟಿಸಿದರು. ಕಾರ್ಡಿಫ್​ನಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಅರ್ಧಶತಕದ ಇನ್ನಿಂಗ್ಸ್ ಆಡಿದ ಕೊಹ್ಲಿ, ಇದರೊಂದಿಗೆ ಇಂಗ್ಲೆಂಡ್‌ನಲ್ಲಿ ಅತಿ ಹೆಚ್ಚು ಐವತ್ತು ಪ್ಲಸ್ ರನ್​ಗಳ ಇನ್ನಿಂಗ್ಸ್ ಆಡಿದ ಸಾಧನೆಯನ್ನೂ ಮಾಡಿದರು(PC-PTI).

Source link

‘ರುಕ್ಮಿಣಿ ರಾಧಾಕೃಷ್ಣ’ ಸಿನಿಮಾದಿಂದ ಬಿಡುಗಡೆ ಆಯ್ತು 2 ಭಾಷೆಯ ವಿಶೇಷ ಹಾಡು – Kannada News | Rukhmini Radhakrishna Movie Songs Released Lahari Music Mokshitha Pai Bharath Kumar

‘ರುಕ್ಮಿಣಿ ರಾಧಾಕೃಷ್ಣ’ (Rukhmini Radhakrishna) ಸಿನಿಮಾದ ಚಿತ್ರೀಕರಣ ಕೊನೆಯ ಹಂತದಲ್ಲಿದೆ. ‘ಉಮೇಶ್ ಫಿಲ್ಮ್ಸ್’ ಬ್ಯಾನರ್ ಮೂಲಕ ಎನ್. ಹನುಮಂತರಾಜು, ಎನ್.ಹೆಚ್. ಉಮೇಶ್ ಅವರು ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಈ ಸಿನಿಮಾಗೆ ಪ್ರಾಣ್ ಸುವರ್ಣ ಅವರು ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಶಿಲ್ಪಾ ಶ್ರೀನಿವಾಸ್ ಅವರ ಪುತ್ರ ಭರತ್ ಕುಮಾರ್ (Bharath Kumar) ಅವರು ಈ ಸಿನಿಮಾದಲ್ಲಿ ಮುಖ್ಯಭೂಮಿಕೆ ನಿಭಾಯಿಸುತ್ತಿದ್ದಾರೆ. ನಟಿಯರಾದ ಮೋಕ್ಷಿತಾ ಪೈ (Mokshitha Pai) ಹಾಗೂ ರಿಯಾ ಸಚ್ ದೇವ್ ಅವರು ನಾಯಕಿಯರಾಗಿ ನಟಿಸುತ್ತಿದ್ದಾರೆ. ‘ರುಕ್ಮಿಣಿ ರಾಧಾಕೃಷ್ಣ’ ಚಿತ್ರಕ್ಕೆ ಸುನಾದ್ ಗೌತಮ್ ಅವರು ಸಂಗೀತ ನೀಡಿದ್ದು, 2 ಹಾಡುಗಳನ್ನು ಇತ್ತೀಚೆಗೆ ಬಿಡುಗಡೆ ಮಾಡಲಾಯಿತು.

ಲಹರಿ ವೇಲು ಅವರು ‘ರುಕ್ಮಿಣಿ ರಾಧಾಕೃಷ್ಣ’ ಹಾಡುಗಳನ್ನು ಬಿಡುಗಡೆ ಮಾಡಿದ್ದಾರೆ. ‘ಈ ಸಿನಿಮಾದಲ್ಲಿ 5 ಸುಮಧುರ ಹಾಡುಗಳಿವೆ. ಅವುಗಳನ್ನು ಅಷ್ಟೇ ಸುಂದರವಾಗಿ ಚಿತ್ರಿಸಲಾಗಿದೆ. ನಾನು ಕೂಡ ಈ ಸಿನಿಮಾ ಮೇಲೆ ನಿರೀಕ್ಷೆ ಇಟ್ಟುಕೊಂಡಿದ್ದೇನೆ’ ಎಂದು ಲಹರಿ ವೇಲು ಅವರು ಹೇಳಿದರು. ಹಿರಿಯ ಗೀತರಚನಕಾರ ಕೆ. ಕಲ್ಯಾಣ್ ಅವರು ಸಾಹಿತ್ಯ ಬರೆದಿದ್ದಾರೆ.

ಮೆಚ್ಚುಗೆ ಸೂಚಿಸಿದ ಕೆ. ಕಲ್ಯಾಣ್:

ಸುದ್ದಿಗೋಷ್ಠಿ ವೇಳೆ ಕೆ. ಕಲ್ಯಾಣ್ ಮಾತನಾಡಿದರು. ‘ನಿರ್ಮಾಪಕರಲ್ಲಿರುವ ಸಿದ್ದತೆ, ನಿರ್ದೇಶಕರಲ್ಲಿರುವ ಬದ್ದತೆ ಈ ಹಾಡುಗಳಲ್ಲಿ ಎದ್ದು ಕಾಣುತ್ತದೆ. ನಾಯಕಿ ಪಾತ್ರಕ್ಕೆ ತಮಿಳು ಹಿನ್ನೆಲೆ ಇರುತ್ತದೆ. ಹಾಗಾಗಿ ತಮಿಳು, ಕನ್ನಡ ಸೇರಿಸಿ ಒಂದು ಹಾಡನ್ನು ರಚಿಸಿದ್ದೇನೆ’ ಎಂದು ಅವರು ಹೇಳಿದರು. ಈ ಸಿನಿಮಾದ ಕಥೆ ತುಂಬಾ ವಿಶೇಷವಾಗಿದೆ ಎಂದು ಸಂಗೀತ ನಿರ್ದೇಶಕ ಸುನಾದ್ ಗೌತಮ್ ಅವರ ಹೇಳಿದ್ದಾರೆ.

‘ಲಹರಿ’ ಸಂಸ್ಥೆಗೆ ಆಡಿಯೋ ಹಕ್ಕುಗಳು:

ನಾಯಕ ನಟ ಭರತ್ ಕುಮಾರ್ ಮಾತನಾಡಿ, ‘ಒಳ್ಳೆಯ ಮೊತ್ತ ನೀಡಿ ಲಹರಿ ಸಂಸ್ಥೆಯು ಆಡಿಯೋ ಖರೀದಿ ಮಾಡಿದೆ. 2 ಭಾಷೆಯ ಸಾಂಗ್ ಬೇಕು ಎಂದಾಗ ಕೆ. ಕಲ್ಯಾಣ್ ಅವರು ಅದಕ್ಕೆ ತಕ್ಕಂತೆ ಸಾಲುಗಳನ್ನು ಪೋಣಿಸಿದರು. ರಾಧಾ ಪಾತ್ರವನ್ನು ಪಾರು ಖ್ಯಾತಿಯ ಮೋಕ್ಷಿತಾ ಮಾಡಿದರೆ ಚೆನ್ನಾಗಿರುತ್ತೆ ಎಂದು ನಮ್ಮಮ್ಮ ಸಲಹೆ ಕೊಟ್ಟರು. ನಿರ್ಮಪಕರಿಬ್ಬರೂ ನನ್ನ ಸಹೋದರರಿದ್ದಂತೆ’ ಎಂದು ಹೇಳಿದರು.

ಇದನ್ನೂ ಓದು: ಬಿಗ್ ಬಾಸ್ ಬೆಡಗಿ ಮೋಕ್ಷಿತಾ ಪೈ ಪಾಲಿಗೆ ರಾಧಾ ಪಾತ್ರ ಒಲಿದು ಬಂದಿದ್ದು ಹೇಗೆ?

ರಾಧಾ ಪಾತ್ರ ಸಿಕ್ಕಿದ್ದಕ್ಕೆ ಮೋಕ್ಷಿತಾಗೆ ಖುಷಿ:

ತಮ್ಮ ಪಾತ್ರದ ಬಗ್ಗೆ ನಟಿ ಮೋಕ್ಷಿತಾ ಪೈ ಅವರಿಗೆ ಬಹಳ ಖುಷಿ ಇದೆ. ‘ಕಥೆ ಹೇಳಲು ನಿರ್ಮಾಪಕರ ಜತೆ ಭರತ್ ಕೂಡ ಬಂದಿದ್ದರು. ನಿಮಗೆ ಯಾವ ಪಾತ್ರ ಬೇಕು ಎಂದಾಗ ನಾನು ರಾಧಾ ಪಾತ್ರವನ್ನೇ ಸೆಲೆಕ್ಟ್ ಮಾಡಿಕೊಂಡೆ. ಆ ಪಾತ್ರದ ತೀವ್ರತೆ ನನಗೆ ಬಹಳ ಇಷ್ಟವಾಯಿತು. ಕುಂಭಕೋಣಂನಲ್ಲಿ ಈ ಹಾಡನ್ನು ಚಿತ್ರೀಕರಿಸಿದ್ದೇವೆ’ ಎಂದು ಅವರು ಹೇಳಿದರು. ರುಕ್ಮಿಣಿ ಪಾತ್ರವನ್ನು ನಟಿ, ಮಾಡೆಲ್ ರಿಯಾ ಸಚ್ ದೇವ್ ಅವರು ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಲಂಚ ಪಡೆಯುವಾಗಲೇ ರೇಡ್​​: ಕಲಬುರಗಿ, ಚಿತ್ರದುರ್ಗದಲ್ಲಿ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿಗಳು – Kannada News | Lokayukta Raid: Government Officials Caught Red Handed Taking Bribes in Kalaburagi and Chitradurga

ಕಲಬುರಗಿ/ಚಿತ್ರದುರ್ಗ, ಜುಲೈ 17: 10 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದ ವೇಳೆಯೇ ಕಲಬುರಗಿ ಜಿಲ್ಲಾ ನ್ಯಾಯಾಲಯದಲ್ಲಿ ಎಪಿಪಿ ಲೋಕಾಯುಕ್ತ ಬಲೆಗೆ ಬಿದ್ದ ಪ್ರಸಂಗ ನಡೆದಿದೆ. ಕರಣವೊಂದರಲ್ಲಿ ನ್ಯಾಯಾಲಯಕ್ಕೆ ರಾಜಿ ಅರ್ಜಿ ಸಲ್ಲಿಸಲು ಹೈದರಾಬಾದ್ ಮೂಲದ ದೂರುದಾರ ರಾಹುಲ್​ರಿಂದ 5ನೇ ಜೆಎಂಎಫ್​ಸಿ ಕೋರ್ಟ್ ಎಪಿಪಿ ಸಂತೋಷ್ ಕುಮಾರ್ ಲೋಖಂಡೆ ಲಂಚ ಸ್ವೀಕರಿಸುತ್ತಿದ್ದರು. ಈ ವೇಳೆ ಕೋರ್ಟ್​ ಆವರಣದಲ್ಲಿಯೇ ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. 10 ಸಾವಿರ ನಗದು, 9 ಸೀರೆ, 4 ಶರ್ಟ್, 4 ಲಂಡನ್ ಜೀನ್ಸ್ ಪ್ಯಾಂಟ್, 1 ಜೊತೆ ಶೂ, ಮಹಿಳೆಯರ 4 ಡ್ರೆಸ್ ಮತ್ತು 6 ಜೊತೆ ಚಪ್ಪಲಿಗೆ ಸಂತೋಷ್​​ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಲೋಕಾಯುಕ್ತ ಇನ್ಸ್​ಪೆಕ್ಟರ್ ಅರುಣ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.

ಪ್ರವಾಸೋದ್ಯಮ ಇಲಾಖೆಯ ಜಂಟಿ ನಿರ್ದೇಶಕ ವಶಕ್ಕೆ

ಚಿತ್ರದುರ್ಗ ಜಿಲ್ಲೆ ಹಿರಿಯೂರು ಬಳಿ ಕಾರ್ಯಾಚರಣೆ ನಡೆಸಿರುವ ಲೋಕಾಯುಕ್ತ ಅಧಿಕಾರಿಗಳು ಕಲಬುರಗಿ ವಿಭಾಗದ ಪ್ರವಾಸೋದ್ಯಮ ಇಲಾಖೆ ಜಂಟಿ ನಿರ್ದೇಶಕ ತಿಪ್ಪೇಸ್ವಾಮಿ ಅವರನ್ನು ಖೆಡ್ಡಾಗೆ ಕೆಡವಿದ್ದಾರೆ. ಹೊಸಪೇಟೆಯ ಗುತ್ತಿಗೆದಾರ ಲಕ್ಷ್ಮೀಕಾಂತ್‌ ಎಂಬವರು ಮಾಡಿದ್ದ 48 ಲಕ್ಷದ ಕಾಮಗಾರಿ ಬಗ್ಗೆ ತನಿಖೆ ಮಾಡಿಸುತ್ತೇನೆಂದು ತಿಪ್ಪೇಸ್ವಾಮಿ ಬೆದರಿಸಿದ್ದರು. ಅಲ್ಲದೆ 10 ಲಕ್ಷ ರೂ. ಲಂಚ ನೀಡಿದರೆ ತನಿಖೆ ಮಾಡಲ್ಲ ಎಂದು ತಿಳಿಸಿದ್ದರು. ಈ ಸಂಬಂಧ ಹಿರಿಯೂರು ಬಳಿ 5 ಲಕ್ಷ ಲಂಚ ಸ್ವೀಕಾರ ವೇಳೆ ಪ್ರವಾಸೋದ್ಯಮ ಇಲಾಖೆ ಜಂಟಿ ನಿರ್ದೇಶಕ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಬಳ್ಳಾರಿ ಲೋಕಾಯುಕ್ತ ಎಸ್‌ಪಿ ವಾಸುದೇವರಾಮ್ ನೇತೃತ್ವದಲ್ಲಿ ದಾಳಿ ನಡೆದಿದ್ದು, ತಿಪ್ಪೇಸ್ವಾಮಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

ಇದನ್ನೂ ಓದಿ: ಲಂಚ ಪಡೆಯುತ್ತಿರುವಾಗಲೇ ಲೋಕಾ ಬಲೆಗೆ ಬಿದ್ದ ಇಬ್ಬರು ಅಧಿಕಾರಿಗಳು; ಬೆಂಗಳೂರಿನಲ್ಲಿ ಲೋಕಾಯುಕ್ತ ಭರ್ಜರಿ ಟ್ರ್ಯಾಪ್

ಶಿರಾ ನಗರಸಭೆ ಕಚೇರಿಯ ಮೇಲೆಯೂ ದಾಳಿ

ಇ-ಖಾತೆ, ಹಕ್ಕುಪತ್ರ ವರ್ಗಾವಣೆ, ಇ-ಸ್ವತ್ತು, ಯುಜಿಡಿ, ಕಟ್ಟಡ ಪರವಾನಿಗೆ ಕೊಡಲು ಭ್ರಷ್ಟಾಚಾರ ಆರೋಪ ಹಿನ್ನೆಲೆ ಶಿರಾ ನಗರಸಭೆ ಕಚೇರಿಯ ಮೇಲೆಯೂ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ನಗರಸಭೆ ಕಚೇರಿಯಲ್ಲಿ ದಾಖಲಾತಿ ಪರಿಶೀಲನೆ ನಡೆಸಲಾಗಿದ್ದು, ತುಮಕೂರು ಲೋಕಾಯುಕ್ತ ಎಸ್‌ಪಿ ನೇತೃತ್ವದಲ್ಲಿ ಇಬ್ಬರು DySP, ನಾಲ್ವರು ಇನ್ಸ್‌ಪೆಕ್ಟರ್‌, 10ಕ್ಕೂ ಹೆಚ್ಚು ಸಿಬ್ಬಂದಿಯಿಂದ ರೇಡ್ ನಡೆದಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 6:02 pm, Fri, 17 July 26

Source link

ಜುಲೈ 18ರಂದು ನಭಕ್ಕೆ ಹಾರಲಿದೆ ಐತಿಹಾಸಿಕ ವಿಕ್ರಮ್-1 ರಾಕೆಟ್; ಜೊತೆಯಲ್ಲಿ ಮೋದಿ ಹಸ್ತಾಕ್ಷರದ ವಂದೇ ಮಾತರಂ ಮೆಸೇಜ್ – Kannada News | Skyroot Aerospace’s Vikram 1 rocket launch on July 18, to carry Modi’s hand written letter among other payloads

ಸ್ಕೈರೂಟ್ ಏರೋಸ್ಪೇಸ್Image Credit source: X user @SkyrootA

ಹೈದರಾಬಾದ್, ಜುಲೈ 17: ಖಾಸಗಿ ಬಾಹ್ಯಾಕಾಶ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಭಾರತದ ಪಾಲಿಗೆ ಮತ್ತೊಂದು ಐತಿಹಾಸಿಕ ಕ್ಷಣ ಹತ್ತಿರವಾಗುತ್ತಿದೆ. ಹೈದರಾಬಾದ್ ಮೂಲದ ಖಾಸಗಿ ಬಾಹ್ಯಾಕಾಶ ನವೋದ್ಯಮ (Startup) ಆದ ‘ಸ್ಕೈರೂಟ್ ಏರೋಸ್ಪೇಸ್’ (Skyroot Aerospace) ಅಭಿವೃದ್ಧಿಪಡಿಸಿರುವ ‘ವಿಕ್ರಮ್-1’ (Vikram-1) ರಾಕೆಟ್‌ನ ಮೊದಲ ಪ್ರಾಯೋಗಿಕ ಉಡಾವಣೆ (Test Flight-1) ನಾಳೆ, ಜುಲೈ 18, ಶನಿವಾರದಂದು ಆಂಧ್ರದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ (SDSC-SHAR) ನಡೆಯಲಿದೆ.

ಈ ಐತಿಹಾಸಿಕ ಫ್ಲೈಟ್​ನಲ್ಲಿ ಹಲವು ಪೇಲೋಡ್​ಗಳು ಸಾಗಲಿವೆ. ಅದರಲ್ಲಿ ಪ್ರಧಾನಿ ಮೋದಿ ಹಸ್ತಾಕ್ಷರದ ‘ವಂದೇ ಮಾತರಂ’ ಸಂದೇಶವೂ ಇದೆ. ಸ್ಕೈರೂಟ್ ಏರೋಸ್ಪೇಸ್ ಸಂಸ್ಥೆಯು ಈ ವಿಶೇಷ ಉಪಕ್ರಮವನ್ನು ‘ಮಿಷನ್ ಆಗಮನ್’ ಎಂದು ಕರೆದಿದೆ. ಭಾರತದಲ್ಲಿ ಬೆಳೆಯುತ್ತಿರುವ ಖಾಸಗಿ ಬಾಹ್ಯಾಕಾಶ ಕ್ಷೇತ್ರಕ್ಕೆ ಇಡೀ ದೇಶದ ಬೆಂಬಲವನ್ನು ಬಿಂಬಿಸಲು ಈ ವಿಶಿಷ್ಟ ಯೋಜನೆಯನ್ನು ರೂಪಿಸಲಾಗಿದೆ. ಪ್ರಧಾನಿ ಮೋದಿ ಅವರ ಹಸ್ತಾಕ್ಷರದ ವಂದೇ ಮಾತರಂ ಸಂದೇಶದೊಂದಿಗೆ ಸ್ಕೈರೂಟ್ ತಂಡದ ಸದಸ್ಯರು, ಹೂಡಿಕೆದಾರರು, ನೀತಿ ನಿರೂಪಕರು ಮತ್ತು ಜಾಗತಿಕ ಹಿತೈಷಿಗಳು ಕೈಯಾರೆ ಬರೆದ ಪತ್ರಗಳು ಕೂಡ ಈ ರಾಕೆಟ್ ಮೂಲಕ ಬಾಹ್ಯಾಕಾಶಕ್ಕೆ ಸೇರಲಿವೆ.

ಇದನ್ನೂ ಓದಿ: ಕೇವಲ 4 ನಿಮಿಷಗಳಲ್ಲಿ ಚಾರ್ಜ್; ವಿಜ್ಞಾನಿಗಳಿಂದ ಸೋಡಿಯಂ ಮೆಟಲ್ ಬ್ಯಾಟರಿ ಕ್ರಾಂತಿ

ಭಾರತೀಯ ನೆಲದ ಮೊದಲ ಖಾಸಗಿ ಆರ್ಬಿಟಲ್ ಯತ್ನ

ಭಾರತೀಯ ನೆಲದಿಂದ ಉಡಾವಣೆಯಾಗಲಿರುವ ಮೊದಲ ಖಾಸಗಿ ಆರ್ಬಿಟಲ್ ದರ್ಜೆಯ (Orbital-class) ರಾಕೆಟ್ ಎಂಬ ಹೆಗ್ಗಳಿಕೆಗೆ ‘ವಿಕ್ರಮ್-1’ ಪಾತ್ರವಾಗಲಿದೆ. ಈ ಮೈಲಿಗಲ್ಲು ಭಾರತದ ವಾಣಿಜ್ಯ ಬಾಹ್ಯಾಕಾಶ ಉದ್ಯಮದ ಸಾಮರ್ಥ್ಯವನ್ನು ಜಗತ್ತಿಗೆ ಪ್ರದರ್ಶಿಸಲಿದೆ.

ಬಾಹ್ಯಾಕಾಶಕ್ಕೆ ಹೊತ್ತೊಯ್ಯಲಿರುವ ಇತರ ಪೇಲೋಡ್‌ಗಳು

ಕೇವಲ ಸ್ಮರಣಿಕೆಗಳು ಮಾತ್ರವಲ್ಲದೆ, ವಿಕ್ರಮ್-1 ರಾಕೆಟ್ ತಾಂತ್ರಿಕ ಪ್ರದರ್ಶನಕ್ಕಾಗಿ ದೇಶ-ವಿದೇಶಗಳ ವಿವಿಧ ಸ್ಟಾರ್ಟ್‌ಅಪ್‌ಗಳ ಉಪಗ್ರಹಗಳನ್ನು ಹೊತ್ತೊಯ್ಯಲಿದೆ. ಇವುಗಳಲ್ಲಿ, ಗ್ರಾಹಾ ಸ್ಪೇಸ್ (Grahaa Space), ಕಾಸ್ಮೋಸರ್ವ್ (Cosmoserve), ಡಿಕ್ಯೂಬ್ಡ್ (DCubed), ಸ್ಕೈರೂಟ್‌ನ ಸ್ವಂತದ ‘ಸ್ಕೋಪ್’ (SCOPE) ತಂತ್ರಜ್ಞಾನ ಸೇರಿವೆ.

ಇದನ್ನೂ ಓದಿ: ಬುಲೆಟ್ ರೈಲು ಕಾರಿಡಾರ್ ವೇಗದ ಪ್ರಗತಿ; ಜಪಾನ್​ನಿಂದ ಇ10 ಬರುವಷ್ಟರಲ್ಲೇ ಭಾರತ ನಿರ್ಮಿತ ಟ್ರೈನ್ ಬಳಕೆಗೆ ನಿರ್ಧಾರ

ಕಾಸ್ಮೋಸ್ ಡೈಮಂಡ್ಸ್ ಸಂಸ್ಥೆಯ ‘ಕಾಸ್ಮಿಕ್ ಬ್ಲೂಮ್’ ಎಂಬ ಡೈಮಂಡ್ ಕಲಾಕೃತಿ ಮತ್ತು ಸೂಕ್ಷ್ಮ-ಕಲೆಯ (Micro-art) ಪೇಲೋಡ್ ಕೂಡ ಬಾಹ್ಯಾಕಾಶ ಸೇರಲಿದೆ.

ಉಡಾವಣೆಗೆ ಅಗತ್ಯವಿರುವ ಎಲ್ಲಾ ರೀತಿಯ ವಾಯುಪ್ರದೇಶ (Airspace) ಮತ್ತು ಸಾಗರ ಸುರಕ್ಷತಾ ಅನುಮತಿಗಳನ್ನು ಈಗಾಗಲೇ ಪಡೆಯಲಾಗಿದೆ. ರಾಕೆಟ್ ಹಾರಾಟದ ಹಾದಿಯಲ್ಲಿ ಬರುವ ನಿರ್ಬಂಧಿತ ವಲಯಗಳ ಕುರಿತು ಅಧಿಕೃತ ಪ್ರಕಟಣೆಗಳನ್ನು ಕೂಡ ಹೊರಡಿಸಲಾಗಿದೆ. ಭಾರತದ ಬಾಹ್ಯಾಕಾಶ ಯಾನದಲ್ಲಿ ಈ ಜುಲೈ 18 ರ ಉಡಾವಣೆ ಒಂದು ಹೊಸ ಇತಿಹಾಸ ಬರೆಯಲಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

‘ಡಾಕ್ಟರ್ ಆಗಲು ನಾಲಾಯಕ್’; 4 ವರ್ಷದ ಬಾಲಕಿಯ ಅತ್ಯಾಚಾರ ಪ್ರಕರಣದಲ್ಲಿ ಆಸ್ಪತ್ರೆಗೆ ಸುಪ್ರೀಂ ಕೋರ್ಟ್ ಛೀಮಾರಿ – Kannada News | Drop Doctor From Your Name; Supreme Court slams Hospitals In 4 Year Old Child Rape Case

ನವದೆಹಲಿ, ಜುಲೈ 17: ಘಾಜಿಯಾಬಾದ್‌ನ 4 ವರ್ಷದ ಬಾಲಕಿಯ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಅತ್ಯಂತ ಅಮಾನವೀಯವಾಗಿ ನಡೆದುಕೊಂಡ ಆಸ್ಪತ್ರೆಗಳು ಮತ್ತು ವೈದ್ಯರ ವಿರುದ್ಧ ಭಾರತದ ಸುಪ್ರೀಂ ಕೋರ್ಟ್ (Supreme Court) ತೀವ್ರ ವಾಗ್ದಾಳಿ ನಡೆಸಿದೆ. “ನಿಮ್ಮ ಹೆಸರಿನ ಜೊತೆ ವೈದ್ಯರೆಂದು ಬರೆದುಕೊಳ್ಳುವ ಯಾವುದೇ ಅರ್ಹತೆ ನಿಮಗಿಲ್ಲ” ಎಂದು ನ್ಯಾಯಾಲಯ ಆಕ್ರೋಶ ಹೊರಹಾಕಿದೆ. ಅತ್ಯಾಚಾರಕ್ಕೊಳಗಾಗಿದ್ದ 4 ವರ್ಷದ ಪುಟ್ಟ ಬಾಲಕಿಗೆ ತುರ್ತು ವೈದ್ಯಕೀಯ ನೆರವು ನೀಡಲು ನಿರಾಕರಿಸಿದ ಮತ್ತು ಆಕೆಯನ್ನು ಗಂಭೀರ ಸ್ಥಿತಿಯಲ್ಲಿದ್ದರೂ ಬೇರೆಡೆಗೆ ಕಳುಹಿಸಿದ ಆಸ್ಪತ್ರೆಗಳ ಧೋರಣೆಯನ್ನು ಸುಪ್ರೀಂ ಕೋರ್ಟ್ ಬಲವಾಗಿ ಖಂಡಿಸಿದೆ.

“ಅತ್ಯಾಚಾರಕ್ಕೊಳಗಾದ ಮಗು ಬಡ ಕುಟುಂಬಕ್ಕೆ ಸೇರಿದ್ದಾಳೆ ಎಂಬ ಕಾರಣಕ್ಕೆ ನೀವು ಆಕೆಯನ್ನು ನಿರ್ಲಕ್ಷಿಸಿದಿರಾ? ಮಾನವೀಯತೆ ಎಲ್ಲಿ ಹೋಯಿತು?” ಎಂದು ನ್ಯಾಯಮೂರ್ತಿ ಅತ್ಯಂತ ಆಕ್ರೋಶದಿಂದ ಪ್ರಶ್ನಿಸಿದ್ದಾರೆ. ನೊಂದ ಮಗುವಿಗೆ ತಕ್ಷಣ ಚಿಕಿತ್ಸೆ ನೀಡಿ ಪ್ರಾಣ ರಕ್ಷಿಸುವುದನ್ನು ಬಿಟ್ಟು, ತಾಂತ್ರಿಕ ಕಾರಣಗಳನ್ನು ನೀಡಿ ಚಿಕಿತ್ಸೆ ನೀಡದ ವೈದ್ಯರ ವರ್ತನೆಗೆ ಸುಪ್ರೀಂ ಕೋರ್ಟ್ ತೀವ್ರ ಬೇಸರ ವ್ಯಕ್ತಪಡಿಸಿದೆ. ಆಸ್ಪತ್ರೆಗಳು ಮತ್ತು ವೈದ್ಯಕೀಯ ಸಿಬ್ಬಂದಿಯ ಬೇಜವಾಬ್ದಾರಿತನಕ್ಕೆ ಸುಪ್ರೀಂ ಕೋರ್ಟ್ ಆಕ್ರೋಶ ಹೊರಹಾಕಿದೆ.

ಇದನ್ನೂ ಓದಿ: 3 ವರ್ಷದ ಮಗು ಮೇಲೆ ಅತ್ಯಾಚಾರ ನಡೆಸಿದವನಿಗೆ ಗ್ರಾಮ ಪಂಚಾಯ್ತಿಯಿಂದ 1 ಲಕ್ಷ ರೂ. ದಂಡ; ಅದೇ ಹಣದಲ್ಲಿ ರಾತ್ರಿ ಎಣ್ಣೆ ಪಾರ್ಟಿ!

ವೈದ್ಯರೆಂದು ಕರೆದುಕೊಳ್ಳಲು ನಿಮಗೆ ಯೋಗ್ಯತೆಯಿಲ್ಲ:

“ನಿಮ್ಮ ಹೆಸರಿನ ಹಿಂದೆ ‘ಡಾಕ್ಟರ್’ ಎಂಬ ಪದವನ್ನು ಬಳಸುವುದನ್ನು ತಕ್ಷಣವೇ ನಿಲ್ಲಿಸಿ. ಸಾಯುವ ಪರಿಸ್ಥಿತಿಯಲ್ಲಿದ್ದ ಮಗುವಿಗೆ ಸ್ಪಂದಿಸದ ನಿಮಗೆ ‘ವೈದ್ಯರು’ ಎಂದು ಕರೆದುಕೊಳ್ಳುವ ಅಥವಾ ವೈದ್ಯಕೀಯ ವೃತ್ತಿ ನಡೆಸುವ ಯಾವುದೇ ಅರ್ಹತೆಯೂ ಇಲ್ಲ” ಎಂದು ಕೋರ್ಟ್ ಛೀಮಾರಿ ಹಾಕಿದೆ.

ಏನಿದು ಘಟನೆ?:

ಚಾಕೊಲೇಟ್ ಕೊಡಿಸುವ ಆಮಿಷವೊಡ್ಡಿ ಅಪಹರಣ ಮಾಡಿ, 4 ವರ್ಷದ ಮಗುವಿನ ಮೇಲೆ ಅತ್ಯಾಚಾರ ನಡೆಸಲಾಗಿತ್ತು. ಈ ಭೀಕರ ಘಟನೆಯು ಉತ್ತರ ಪ್ರದೇಶದ ಘಾಜಿಯಾಬಾದ್‌ನಲ್ಲಿ ಈ ವರ್ಷದ ಮಾರ್ಚ್ ತಿಂಗಳಲ್ಲಿ ನಡೆದಿತ್ತು. ಬಾಲಕಿಯ ನೆರೆಹೊರೆಯ ವ್ಯಕ್ತಿಯೊಬ್ಬ ಚಾಕೊಲೇಟ್ ಕೊಡಿಸುವುದಾಗಿ ನಂಬಿಸಿ ಮಗುವನ್ನು ಕರೆದೊಯ್ದಿದ್ದನು. ಮಗು ಎಷ್ಟು ಹೊತ್ತಾದರೂ ಮನೆಗೆ ಹಿಂತಿರುಗದಿದ್ದಾಗ ಗಾಬರಿಗೊಂಡ ಪೋಷಕರು ಹುಡುಕಾಟ ನಡೆಸಿದ್ದರು. ಅಂತಿಮವಾಗಿ ಮಗು ಪ್ರಜ್ಞಾಹೀನ ಸ್ಥಿತಿಯಲ್ಲಿ, ರಕ್ತದ ಮಡುವಿನಲ್ಲಿ ಪತ್ತೆಯಾಗಿತ್ತು. ಆ ಮಗುವನ್ನು ತಕ್ಷಣವೇ ಎರಡು ಖಾಸಗಿ ಆಸ್ಪತ್ರೆಗಳಿಗೆ ಕರೆದೊಯ್ಯಲಾಯಿತಾದರೂ, ಆಸ್ಪತ್ರೆಯ ಸಿಬ್ಬಂದಿ ಆಕೆಯನ್ನು ದಾಖಲಿಸಿಕೊಳ್ಳಲು ನಿರಾಕರಿಸಿದರು. ಕೊನೆಗೆ ಮಗುವನ್ನು ಘಾಜಿಯಾಬಾದ್ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅಲ್ಲಿನ ವೈದ್ಯರು ಮಗು ಈಗಾಗಲೇ ಮೃತಪಟ್ಟಿದೆ ಎಂದು ಘೋಷಿಸಿದ್ದರು.

ಇದನ್ನೂ ಓದಿ: ಅತ್ಯಾಚಾರ ನಡೆಸಿದ ತಂದೆ ವಿರುದ್ಧ ಒಬ್ಬಂಟಿಯಾಗಿ ಕಾನೂನು ಹೋರಾಟ ಗೆದ್ದ ಅಪ್ರಾಪ್ತೆ!: ಆರೋಪಿಗೆ 20 ವರ್ಷ ಜೈಲು ಶಿಕ್ಷೆ

ಅತ್ಯಾಚಾರಕ್ಕೊಳಗಾಗಿ ರಕ್ತದ ಮಡುವಿನಲ್ಲಿ ನರಳುತ್ತಿದ್ದ 4 ವರ್ಷದ ಮಗುವನ್ನು ಚಿಕಿತ್ಸೆಗಾಗಿ ಕರೆತಂದಾಗ, 2 ಸ್ಥಳೀಯ ಆಸ್ಪತ್ರೆಗಳು ಚಿಕಿತ್ಸೆ ನೀಡಲು ಒಪ್ಪಿರಲಿಲ್ಲ. ಮಗುವಿನ ಜೀವನ್ಮರಣದ ಹೋರಾಟದ ನಡುವೆಯೂ ಸೂಕ್ತ ಪ್ರಥಮ ಚಿಕಿತ್ಸೆ ನೀಡದೆ ಕಾಲಹರಣ ಮಾಡಲಾಗಿತ್ತು. ಇದಾದ ನಂತರ ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋದರೂ ಮಗುವನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಮಗುವಿಗೆ ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಕ್ಕಿದ್ದರೆ ಬದುಕುತ್ತಿತ್ತು ಎಂದು ಆ ಮಗುವಿನ ಪೋಷಕರು ದೂರು ದಾಖಲಿಸಿದ್ದರು. ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಮಗುವಿನ ಖಾಸಗಿ ಅಂಗಗಳಿಗೆ ತೀವ್ರ ಗಾಯಗಳಾಗಿರುವುದು ಸ್ಪಷ್ಟವಾಗಿದ್ದರೂ, ಆರಂಭದಲ್ಲಿ ಅತ್ಯಾಚಾರದ ಆರೋಪಗಳನ್ನು ಎಫ್‌ಐಆರ್‌ನಲ್ಲಿ ಸೇರಿಸಲಾಗಿರಲಿಲ್ಲ. ಇಡೀ ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನ ನಡೆದಿದೆ ಎಂದು ಗಂಭೀರವಾಗಿ ಪರಿಗಣಿಸಿದ ಸುಪ್ರೀಂ ಕೋರ್ಟ್, ಅಂತಿಮವಾಗಿ ಪ್ರಕರಣದ ತನಿಖೆಯನ್ನು ಸ್ವತಂತ್ರ ಎಸ್‌ಐಟಿಗೆ ಒಪ್ಪಿಸಿತ್ತು.

ಏಪ್ರಿಲ್‌ನಲ್ಲಿ ಸುಪ್ರೀಂ ಕೋರ್ಟ್ ಈ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡವನ್ನು (SIT) ರಚಿಸಲು ಆದೇಶಿಸಿತ್ತು. ಈ ಎಸ್‌ಐಟಿ ತನಿಖೆಯಲ್ಲಿ ಆಸ್ಪತ್ರೆಗಳು ಮಗುವಿಗೆ ಸಕಾಲದಲ್ಲಿ ಚಿಕಿತ್ಸೆ ನೀಡಲು ವಿಫಲವಾಗಿರುವುದು ದೃಢಪಟ್ಟಿದೆ. ಹೀಗಾಗಿ, ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂ ಕೋರ್ಟ್, ಮಗುವಿಗೆ ಚಿಕಿತ್ಸೆ ನಿರಾಕರಿಸಿದ ಆಸ್ಪತ್ರೆಗಳು ಹಾಗೂ ವೈದ್ಯರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲು ಸೂಚಿಸಿದೆ. ಹಾಗೇ, ಸಂಬಂಧಪಟ್ಟ ವೈದ್ಯಕೀಯ ಮಂಡಳಿಗಳಿಗೆ ಈ ಕುರಿತು ವರದಿ ಸಲ್ಲಿಸಲು ಆದೇಶಿಸಿದೆ. ಹಾಗೇ, ಮೃತ ಬಾಲಕಿಯ ಕುಟುಂಬಕ್ಕೆ ಸೂಕ್ತ ಪರಿಹಾರವನ್ನು ಪಾವತಿಸುವಂತೆ ಎರಡೂ ಆಸ್ಪತ್ರೆಗಳಿಗೆ ಆದೇಶಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 6:25 pm, Fri, 17 July 26

Source link

‘ಆಗಲೇ ಈ ನಿರ್ಧಾರ ಮಾಡಬೇಕಿತ್ತು’; ಬಿಸಿಸಿಐ ವಿರುದ್ಧ ಭಾರತದ ಮಾಜಿ ಆಟಗಾರ ಗರಂ – Kannada News | Rohit Sharma Out of ODIs? BCCI’s Controversial Move Sparks Debate; R Ashwin Criticizes Timing

ಇಂಗ್ಲೆಂಡ್‌ ವಿರುದ್ಧದ ಏಕದಿನ ಸರಣಿಯ ನಡುವೆ ಬಿಸಿಸಿಐ (BCCI) ತೆಗೆದುಕೊಂಡಿರುವ ಅದೊಂದು ನಿರ್ಧಾರ ಭಾರತ ಕ್ರಿಕೆಟ್​ನಲ್ಲಿ ಸಂಚಲನ ಸೃಷ್ಟಿಸಿದೆ. ಏಕದಿನ ವಿಶ್ವಕಪ್​ಗೆ ಇನ್ನೊಂದು ವರ್ಷ ಬಾಕಿ ಇರುವಾಗ ಬಿಸಿಸಿಐ ತೆಗೆದುಕೊಂಡಿರುವ ನಿರ್ಧಾರ ಕ್ರಿಕೆಟ್ ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ. ಟೀಂ ಇಂಡಿಯಾವನ್ನು ನಾಯಕನಾಗಿ ಮುನ್ನಡಸುವುದರ ಜೊತೆಗೆ ತಂಡವನ್ನು ಹಲವು ಸ್ಮರಣೀಯ ಗೆಲುವಿನತ್ತ ಕೊಂಡೊಯ್ದಿದ್ದ ಅನುಭವಿ ಆರಂಭಿಕ ಆಟಗಾರ ರೋಹಿತ್ ಶರ್ಮಾರನ್ನು (Rohit Sharma) ಏಕದಿನ ತಂಡದಿಂದಲೂ ಕೈಬಿಡುವುದಕ್ಕೆ ಬಿಸಿಸಿಐ ಮುಂದಾಗಿರುವುದು ಅಭಿಮಾನಿಗಳ ಕೋಪಕ್ಕೆ ಕಾರಣವಾಗಿದೆ. ಅಭಿಮಾನಿಗಳ ಜೊತೆಗೆ ಟೀಂ ಇಂಡಿಯಾದ ಮಾಜಿ ಆಟಗಾರರು ಕೂಡ ಬಿಸಿಸಿಐನ ಈ ನಿರ್ಧಾರವನ್ನು ಪ್ರಶ್ನಿಸಿದ್ದಾರೆ.

ಜುಲೈ 19 ರಂದು ಲಾರ್ಡ್ಸ್‌ನಲ್ಲಿ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಏಕದಿನ ಪಂದ್ಯ ರೋಹಿತ್ ಶರ್ಮಾ ಅವರ ಕೊನೆಯ ಅಂತರರಾಷ್ಟ್ರೀಯ ಪಂದ್ಯವಾಗಲಿದೆ ಎಂದು ವರದಿಯಾಗಿದೆ. ಈ ಪಂದ್ಯದ ನಂತರ ಅವರನ್ನು ಏಕದಿನ ತಂಡದಿಂದ ಕೈಬಿಡುವುದರ ಜೊತೆಗೆ 2027 ರ ವಿಶ್ವಕಪ್‌ಗೆ ರೋಹಿತ್ ಅವರನ್ನು ಆಯ್ಕೆ ಮಾಡಲಾಗುವುದಿಲ್ಲ ಎಂದು ಆಯ್ಕೆದಾರರು ತಿಳಿಸಿದ್ದಾರೆ ಎಂದು ವರದಿಗಳಾಗಿವೆ. ಇದೀಗ ಈ ಬಿಸಿಸಿಐನ ಈ ನಿರ್ಧಾರವನ್ನು ಪ್ರಶ್ನಿಸಿರುವ ಮಾಜಿ ಕ್ರಿಕೆಟಿಗ ಆರ್. ಅಶ್ವಿನ್, ಟೀಂ ಇಂಡಿಯಾದ ಚಿಂತನೆಯನ್ನು ಪ್ರಶ್ನಿಸಿದ್ದು, ವಿಶ್ವಕಪ್‌ಗೆ ಕೇವಲ ಒಂದು ವರ್ಷ ಬಾಕಿ ಇರುವಾಗ ಇಂತಹ ನಿರ್ಧಾರವನ್ನು ಏಕೆ ತೆಗೆದುಕೊಳ್ಳಲಾಗುತ್ತಿದೆ. ಹಾಗೊಂದು ವೇಳೆ ಈ ರೀತಿಯ ನಿರ್ಧಾರವನ್ನು ತೆಗೆದುಕೊಳ್ಳಬೇಕಾದರೆ, ಚಾಂಪಿಯನ್ಸ್ ಟ್ರೋಫಿ ಮುಗಿದ ತಕ್ಷಣವೇ ತೆಗೆದುಕೊಳ್ಳಬೇಕಾಗಿತ್ತು ಎಂದಿದ್ದಾರೆ.

ಆರ್ ಅಶ್ವಿನ್ ಹೇಳಿದ್ದೇನು?

‘ರೋಹಿತ್ ಮತ್ತು ವಿರಾಟ್‌ರಂತಹ ಆಟಗಾರರು ಗೌರವಕ್ಕೆ ಅರ್ಹರು. ಆಯ್ಕೆದಾರರು ಆಟಗಾರರೊಂದಿಗೆ ನೇರವಾಗಿ ಮಾತನಾಡಬೇಕು ಏಕೆಂದರೆ ಆಟಗಾರರು ಎಂದಿಗೂ ನಿವೃತ್ತರಾಗಬೇಕು ಎಂದು ಭಾವಿಸುವುದಿಲ್ಲ. ಬದಲಿಗೆ ಅವರು ಯಾವಾಗಲೂ ಆಡಲು ಬಯಸುತ್ತಾರೆ. ಹೀಗಾಗಿ ಬಿಸಿಸಿಐ, ರೋಹಿತ್​ರನ್ನು 2027 ರ ಏಕದಿನ ವಿಶ್ವಕಪ್​ಗೆ ಆಯ್ಕೆ ಮಾಡದಿರಲು ಚಿಂತಿಸಿದ್ದರೆ, ಚಾಂಪಿಯನ್ಸ್ ಟ್ರೋಫಿ ಗೆದ್ದ ನಂತರವೇ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕಿತ್ತು. ಈಗ, ವಿಶ್ವಕಪ್‌ಗೆ ಕೇವಲ 12-15 ತಿಂಗಳುಗಳು ಉಳಿದಿರುವಾಗ ಈ ರೀತಿಯ ನಿರ್ಧಾರವನ್ನು ತೆಗೆದುಕೊಳ್ಳುತ್ತಿರುವುದು ತುಂಬಾ ತಡವಾಗಿದೆ’ ಎಂದು ಅಶ್ವಿನ್ ತಮ್ಮ ಯೂಟ್ಯೂಬ್ ಚಾನೆಲ್​ನಲ್ಲಿ ಹೇಳಿಕೊಂಡಿದ್ದಾರೆ.

IND vs ENG: ಹಿಟ್​ಮ್ಯಾನ್ ಅಲ್ಲ, ಟೆಸ್ಟ್ ಮ್ಯಾನ್..! ಏನಾಯ್ತು ರೋಹಿತ್ ಶರ್ಮಾ?

ಕಳಪೆ ಫಾರ್ಮ್​ನಿಂದ ಬಳಲುತ್ತಿರುವ ರೋಹಿತ್

ಬಿಸಿಸಿಐನ ಈ ನಿರ್ಧಾರದ ಹಿಂದೆ ರೋಹಿತ್ ಶರ್ಮಾ ಅವರ ಫಾರ್ಮ್ ಮತ್ತು ಫಿಟ್ನೆಸ್ ಕೂಡ ಕಾರಣವಾಗಿದೆ. ಐಪಿಎಲ್ ಸಮಯದಲ್ಲಿ ಅವರು ಮಂಡಿರಜ್ಜು ಗಾಯದಿಂದ ಬಳಲುತ್ತಿದ್ದರು, ಇದರಿಂದಾಗಿ ಅವರು ಐದು ಪಂದ್ಯಗಳಿಂದ ಹೊರಗುಳಿದಿದ್ದರು. ಅಫ್ಘಾನಿಸ್ತಾನ ವಿರುದ್ಧದ ಸರಣಿಯ ಸಮಯದಲ್ಲಿಯೂ ರೋಹಿತ್ ಲಯದಲ್ಲಿ ಕಂಡುಬರಲಿಲ್ಲ. ಈಗ, ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ ಎರಡು ಪಂದ್ಯಗಳಲ್ಲಿ ಅವರ ಬ್ಯಾಟಿಂಗ್‌ ವಿಶೇಷವಾಗಿರಲಿಲ್ಲ. ಪವರ್‌ಪ್ಲೇನಲ್ಲಿ ಅವರ ಸ್ಟ್ರೈಕ್ ರೇಟ್ ಸಾಕಷ್ಟು ಪ್ರಶ್ನೆಗಳನ್ನು ಹುಟ್ಟಿಹಾಕಿದೆ. ಒಟ್ಟಾರೆಯಾಗಿ, ರೋಹಿತ್ ಅವರ ಫಾರ್ಮ್ ಮತ್ತು ಫಿಟ್‌ನೆಸ್ ಕೂಡ ಅವರಿಗೆ ವಿರುದ್ಧವಾಗಿದೆ. ಅದಕ್ಕಾಗಿಯೇ ಅವರ ವೃತ್ತಿಜೀವನವು ಈಗ ಅಂತ್ಯದ ಸಮೀಪದಲ್ಲಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವಿವಾದದ ನಡುವೆಯೇ ಬಿಡದಿ ಟೌನ್‌ಶಿಪ್ ಯೋಜನೆ ಪರ ರೈತರಿಂದ ಭೂ ಪರಿಹಾರಕ್ಕೆ ಅರ್ಜಿ ಸಲ್ಲಿಕೆ – Kannada News | Bidadi Township: Farmers Supporting Project Apply for Land Compensation

ರಾಮನಗರ, ಜುಲೈ 17: ಬಿಡದಿ ಟೌನ್‌ಶಿಪ್​​ ವಿರೋಧಿಸಿ ರೈತರು ಮತ್ತು ವಿಪಕ್ಷಗಳ ಹೋರಾಟದ ನಡುವೆಯೇ ಯೋಜನೆಯ ಪರವಾಗಿರುವ ರೈತರು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಜಿಬಿಡಿಎ) ಕಚೇರಿಯಲ್ಲಿ ಭೂ ಪರಿಹಾರಕ್ಕಾಗಿ ಅರ್ಜಿಗಳನ್ನು ಸಲ್ಲಿಸುತ್ತಿದ್ದಾರೆ. ಬನ್ನಿಗಿರಿ, ಹೊಸೂರು, ಅರಳಾಳುಸಂದ್ರ, ಕೆ.ಜಿ. ಗೊಲ್ಲರಪಾಳ್ಯ ಸೇರಿದಂತೆ ನಾಲ್ಕು ಗ್ರಾಮಗಳ ಭೂಸ್ವಾಧೀನಕ್ಕೆ ಆದೇಶಿಸಲಾಗಿದ್ದು, ಈ ರೈತರು ತಮ್ಮ ಭೂಮಿಯನ್ನು ನೀಡಲು ಸಿದ್ಧರಿದ್ದು, ಘೋಷಿತ ಪರಿಹಾರವನ್ನು ಪಡೆಯಲು ಮುಂದಾಗಿದ್ದಾರೆ. ಪ್ರಸ್ತುತ ಪ್ರತಿ ಎಕರೆಗೆ 2 ಕೋಟಿ ರೂ.ನಿಂದ 2.17 ಕೋಟಿ ರೂ.ವರೆಗೆ ಪರಿಹಾರ ನಿಗದಿಪಡಿಸಲಾಗಿದೆ. ರೈತರು ತಮ್ಮ ಜಮೀನಿನ ಮಾಲೀಕತ್ವದ ದಾಖಲೆಗಳು, ಆಧಾರ್ ಕಾರ್ಡ್, ಪಾಣಿ, ವಂಶವೃಕ್ಷ ಸೇರಿದಂತೆ ಅಗತ್ಯ ದಾಖಲೆಗಳನ್ನು ಒದಗಿಸುತ್ತಿದ್ದಾರೆ. ಅಧಿಕಾರಿಗಳು ಕೂಡ ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಆಂಧ್ರದಲ್ಲಿ ನಾಲ್ವರು ಕೊವಿಡ್ ಸೋಂಕಿತರು ಸಾವು: ಗಡಿಭಾಗದಲ್ಲಿ ಹೈ ಅಲರ್ಟ್; 8 ಗಡಿ ಮಾರ್ಗಗಳಲ್ಲಿ ತಪಾಸಣೆ – Kannada News | Four COVID 19 Deaths Reported in Andhra Pradesh; High Alert and Screening Intensified at Eight Border Checkposts

ತುಮಕೂರು, ಜುಲೈ 17: ಅತ್ತ ಆಂಧ್ರದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಸೋಂಕಿನಿಂದ (Coronavirus) ಸಾವನ್ನಪ್ಪಿರುವವರ ಸಂಖ್ಯೆ ಹೆಚ್ಚುತ್ತಿದೆ. ಇತ್ತ ರಾಜ್ಯದ ಗಡಿಭಾಗದಲ್ಲೂ ಕೊರೋನಾ ಭೀತಿ ಸೃಷ್ಟಿಯಾಗಿದೆ. ಈ ಬೆನ್ನಲ್ಲೇ ಕೊವಿಡ್​ ವೈರಸ್ ರಾಜ್ಯಕ್ಕೆ ಹರಡದಂತೆ ಕ್ರಮವಹಿಸುವ ನಿಟ್ಟಿನಲ್ಲಿ ಗಡಿಯಲ್ಲಿ ನಿಗಾ ವಹಿಸಲಾಗಿದೆ. ಪಾವಗಡ ಮತ್ತು ಆಂಧ್ರದ 8 ಗಡಿ ಮಾರ್ಗಗಳಲ್ಲಿ ತಪಾಸಣೆ ಮಾಡಲಾಗುತ್ತಿದೆ. ಅಗತ್ಯ ಚಿಕಿತ್ಸಾ ಕೇಂದ್ರಗಳನ್ನ ಈಗಾಗಲೇ ತೆರೆಯಲಾಗಿದೆ.

ಕರ್ನಾಟಕದ ಗಡಿ ಭಾಗಿವಾದ ಪಾವಗಡದಲ್ಲಿ ಮತ್ತಷ್ಟು ಆತಂಕ

ದಿನದಿಂದ ದಿನಕ್ಕೆ ಆಂಧ್ರದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಅಧಿಕವಾಗುತ್ತಿದೆ. ಇದರ ಜೊತೆಗೆ ಸಾವಿನ ಸಂಖ್ಯೆ ಸಹ ಹೆಚ್ಚಾಗುತ್ತಿದೆ. ಆಂಧ್ರ ಪ್ರದೇಶದ ಇಲಾಖೆಯ ಮಾಹಿತಿ ಪ್ರಕಾರ ಇಂದು ನಾಲ್ವರು ಕೊರೋನಾಗೆ ಮೃತಪಟ್ಟಿದ್ದಾರೆ. ಕಡಬದಲ್ಲೇ‌ ಮೂವರು ಮೃತಪಟ್ಟಿದ್ದಾರೆ. ಹೀಗಾಗಿ ಕರ್ನಾಟಕದ ಗಡಿ ಭಾಗಿವಾದ ಪಾವಗಡದಲ್ಲಿ ಮತ್ತಷ್ಟು ಆತಂಕ ಸೃಷ್ಟಿಯಾಗಿದೆ.

ಪಾವಗಡ-ಆಂಧ್ರದ 8 ಗಡಿ ಮಾರ್ಗಗಳಲ್ಲಿ ತಪಾಸಣೆ

ಎರಡು ದಿನಗಳಿಂದ ಪಾವಗಡ ಗಡಿಭಾಗದಲ್ಲಿ ಹೈ ಅಲರ್ಟ್ ಆಗಿದ್ದು, ಪಾವಗಡ-ಆಂಧ್ರದ 8 ಗಡಿ ಮಾರ್ಗಗಳಲ್ಲಿ ತಪಾಸಣೆ ಮಾಡಲಾಗುತ್ತಿದೆ. ನಾಗಲಮಡಿಕೆ, ಕೊಡಮಡುಗು, ವಳ್ಳೂರಿ ಸೇರಿದಂತೆ 8 ಕಡೆ ಚೆಕ್​ಪೊಸ್ಟ್ ನಿರ್ಮಿಸಿ ಥರ್ಮಲ್ ಸ್ಕ್ಯಾನಿಂಗ್ ಮೂಲಕ ಪ್ರಯಾಣಿಕರ ತಪಾಸಣೆ ಜೊತೆಗೆ ಪ್ರಯಾಣದ ವಿವರ ಸಂಗ್ರಹಿಸಲಾಗುತ್ತಿದೆ.

ಇದನ್ನೂ ಓದಿ: ಪಾವಗಡ – ಆಂಧ್ರ ಪ್ರದೇಶ ಗಡಿಯಲ್ಲಿ ಕೋವಿಡ್ ಚೆಕ್​ಪೋಸ್ಟ್: ತಪಾಸಣೆ ಶುರು

ಇನ್ನು ಆಂಧ್ರ-ಪಾವಗಡಕ್ಕೆ ಬರುವ ರಸ್ತೆ ಮಾರ್ಗದಲ್ಲಿ ಆರೋಗ್ಯ ಕೇಂದ್ರ ಸಿಬ್ಬಂದಿ ಸಹಿತ ಆಶಾ ಕಾರ್ಯಕರ್ತಯರನ್ನ ನಿಯೋಜಿಸಲಾಗಿದೆ. ಯಾವುದೇ ಹಂತದಲ್ಲೂ ರಾಜ್ಯಕ್ಕೆ ಕೊರೋನಾ ಹರಡದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಅಧಿಕಾರಿಗಳು ಇನ್ನು 11 ದಿನಗಳ ಕಾಲ ಪ್ರಯಾಣಿಕರ ತಪಾಸಣೆ ಹಾಗೂ ಮಾಹಿತಿ ಸಂಗ್ರಹ ಮುಂದುವರಿಸಲಿದ್ದಾರೆ.

ಕಳೆದ ಎರಡು ದಿನಗಳಿಂದ ಗಡಿಯಲ್ಲಿ ನಿರಂತರ ಪರಿಶೀಲನೆ ನಡೆಯುತಿದ್ದು, ಈವರೆಗೂ ಯಾವುದೇ ಪಾಸಿಟಿವ್ ಪ್ರಕರಣ ವರದಿಯಾಗಿಲ್ಲ. ಮುಂಜಾಗ್ರತಾ ಕ್ರಮವಾಗಿ ಪಾವಗಡ ತಾಲೂಕಾಸ್ಪತ್ರೆಯಲ್ಲಿ ಜಿಲ್ಲಾಡಳಿತ ಕೊವಿಡ್ ಕೇರ್ ಸೆಂಟರ್ ಸಹ ತೆರೆಯಲಾಗಿದೆ. ಅಗತ್ಯ ಹಾಗೂ ತುರ್ತು ಸಂದರ್ಭಕ್ಕೆ ಬೆಡ್ ಹಾಗೂ ಆಕ್ಸಿಜನ್ ವ್ಯವಸ್ಥೆ ಸಹ ಮಾಡಿಕೊಂಡಿದ್ದು, ಸಾರ್ವಜನಿಕರಿಗೆ ಎಚ್ಚರಿಕೆ ವಹಿಸಲು ಸೂಚಿಸಿದ್ದಾರೆ.

ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹೇಳಿದ್ದಿಷ್ಟು 

ಆಂಧ್ರದಲ್ಲಿ ಕೊವಿಡ್ ಸೋಂಕಿನಿಂದ ನಾಲ್ವರು ಸಾವು ವಿಚಾರವಾಗಿ ತುಮಕೂರಿನಲ್ಲಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಮಾತನಾಡಿದ್ದು, ‘‘ನೆರೆಯ ಅನಂತಪುರದಲ್ಲೂ ಕೊವಿಡ್‌ಗೆ ಇಬ್ಬರು ಬಲಿಯಾಗಿದ್ದಾರೆ. ತುಮಕೂರು ಜಿಲ್ಲೆಯಲ್ಲಿ ಡೆಂಘೀ, ಚಿಕುನ್ ಗುನ್ಯಾ ವರದಿಯಾಗಿದೆ. ಅನಂತಪುರದಿಂದ ಜಿಲ್ಲೆಗೆ ಬರಬಾರದೆಂದು ಚೆಕ್‌ಪೋಸ್ಟ್‌ ಹಾಕಲಾಗಿದೆ. ಆ ರೀತಿ ಯಾರಾದರೂ ಬಂದರೆ ಐಸೋಲೇಟ್‌ ಮಾಡಲು ಸೂಚಿಸಿದ್ದೇನೆ. ಕಲುಷಿತ ನೀರು ಪೂರೈಸದಂತೆಯೂ ಸೂಚನೆ ನೀಡಲಾಗಿದೆ. ಹಲವು ವರ್ಷಗಳಾದರೂ ನೀರಿನ ಟ್ಯಾಂಕ್‌ಗಳನ್ನು ಸ್ವಚ್ಛಗೊಳಿಸಲ್ಲ. ಇದರಿಂದ ಬ್ಯಾಕ್ಟೀರಿಯಾ ಉತ್ಪತ್ತಿಯಾಗಿ ಸಮಸ್ಯೆಯಾಗುವ ಸಾಧ್ಯತೆಯಿದೆ. ಹಿಂದೆಲ್ಲಾ ಆ ರೀತಿ ಆಗಿದೆ, ನೀರಿನ ಟ್ಯಾಂಕ್ ಸ್ವಚ್ಛಗೊಳಿಸಲು ಸೂಚಿಸಿದ್ದೇನೆ’’ ಎಂದಿದ್ದಾರೆ.

ಇದನ್ನೂ ಓದಿ: Coronavirus Returns: ಕರ್ನಾಟಕಕ್ಕೆ ಮತ್ತೆ ಒಕ್ಕರಿಸಲಿದೆಯೇ ಕೋವಿಡ್ ಮಹಾಮಾರಿ?

ಒಟ್ಟಾರೆ‌ ಆಂಧ್ರಪ್ರದೇಶದಲ್ಲಿ ಕೊರೋನಾ ಕೇಕೆ ಹಾಕಲು ಆರಂಭಿಸಿದೆ. ಇದರ ನಡುವೆ ರಾಜ್ಯಕ್ಕೆ ವೈರಸ್ ಎಂಟ್ರಿಯಾಗುವ ಭೀತಿ ಮೂಡಿದ್ದು, ಗಡಿಯಲ್ಲಿ ಅಗತ್ಯ ಕ್ರಮವಹಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಯಾದಗಿರಿ ಜಿಲ್ಲಾ ಪಂಚಾಯತ್ ನೇಮಕಾತಿ 2026: 12 ಗ್ರಂಥಾಲಯ ಮೇಲ್ವಿಚಾರಕರ ಹುದ್ದೆಗಳಿಗೆ ಅರ್ಜಿ ಆಹ್ವಾನ – Kannada News | Yadgiri District Recruitment 2026: Apply for Library Supervisor Posts Before July 27

ಯಾದಗಿರಿ ಜಿಲ್ಲಾ ಪಂಚಾಯತ್‌ನಲ್ಲಿ ಗ್ರಂಥಾಲಯ ಮೇಲ್ವಿಚಾರಕರ ನೇಮಕಾತಿImage Credit source: Getty Images

ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ಮತ್ತೊಂದು ಉತ್ತಮ ಅವಕಾಶ ಲಭ್ಯವಾಗಿದೆ. ಯಾದಗಿರಿ ಜಿಲ್ಲಾ ಪಂಚಾಯತ್ (Zilla Panchayat Yadgiri) ವತಿಯಿಂದ ಗ್ರಂಥಾಲಯ ಮೇಲ್ವಿಚಾರಕ (Library Supervisor) ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಪ್ರಕಟಿಸಲಾಗಿದೆ. ಒಟ್ಟು 12 ಹುದ್ದೆಗಳ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು 2026ರ ಜುಲೈ 27ರವರೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಗ್ರಾಮ ಪಂಚಾಯತ್‌ವಾರು ಹುದ್ದೆಗಳ ವಿವರ

  • ವರ್ಕನಳ್ಳಿ- 1
  • ಬೇಸ್ ಕ್ಯಾಂಪ್- 1
  • ಅರಕೇರಾ – 1
  • ಕೆ. ಬಿಜಾಸ್ಪುರ- 1
  • ವಡಗೇರಾ- 1
  • ತ್ರಿಹಂಡ್ರೆಡ್ (ಕೆ)- 1
  • ಬಂಡಳ್ಳಿ- 1
  • ಕಿಲ್ಲಾನಕೇರಾ- 1
  • ನಾರಾಯಣಪುರ- 1
  • ಅರಕೇರಾ ಜೆ- 1
  • ಪೇಜ್ ರೆಸಿಪಿ- 1
  • ರಾಜನಕೊಲ್ಲೂರು- 1

ವಿದ್ಯಾರ್ಹತೆ

ಅಭ್ಯರ್ಥಿಗಳು ಮಾನ್ಯತೆ ಪಡೆದ ಶಿಕ್ಷಣ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಪಿಯುಸಿ (PUC / 12ನೇ ತರಗತಿ) ಉತ್ತೀರ್ಣರಾಗಿರಬೇಕು.

ವಯೋಮಿತಿ

ಕನಿಷ್ಠ ವಯಸ್ಸು: 18 ವರ್ಷ
ಗರಿಷ್ಠ ವಯಸ್ಸು: 40 ವರ್ಷ
ವಯೋಮಿತಿ ಸಡಿಲಿಕೆ
SC/ST ಹಾಗೂ ಪ್ರವರ್ಗ-1 ಅಭ್ಯರ್ಥಿಗಳಿಗೆ: 5 ವರ್ಷ
2A, 2B, 3A, 3B ಅಭ್ಯರ್ಥಿಗಳಿಗೆ: 3 ವರ್ಷ

ಆಯ್ಕೆ ಪ್ರಕ್ರಿಯೆ

ಯಾದಗಿರಿ ಜಿಲ್ಲಾ ಪಂಚಾಯತ್ ಈ ನೇಮಕಾತಿಗೆ ಕೆಳಗಿನ ಹಂತಗಳ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಿದೆ.

ಮೆರಿಟ್ ಪಟ್ಟಿ (Merit List): ಅಭ್ಯರ್ಥಿಗಳ ವಿದ್ಯಾರ್ಹತೆ ಹಾಗೂ ಅಂಕಗಳ ಆಧಾರದ ಮೇಲೆ ಮೆರಿಟ್ ಪಟ್ಟಿ ಸಿದ್ಧಪಡಿಸಲಾಗುತ್ತದೆ.

ಸಂದರ್ಶನ (Interview): ಮೆರಿಟ್ ಪಟ್ಟಿಯಲ್ಲಿ ಸ್ಥಾನ ಪಡೆದ ಅಭ್ಯರ್ಥಿಗಳಿಗೆ ಸಂದರ್ಶನ ನಡೆಸಿ ಅಂತಿಮ ಆಯ್ಕೆ ಮಾಡಲಾಗುತ್ತದೆ.

ಇದನ್ನೂ ಓದಿ: ಕರ್ನಾಟಕ ಕಂದಾಯ ಇಲಾಖೆಯಲ್ಲಿ 572 ವಿಎಒ ಹುದ್ದೆಗಳ ನೇಮಕಾತಿ: ಪಿಯುಸಿ ಪಾಸಾದವರಿಗೆ ಸರ್ಕಾರಿ ಉದ್ಯೋಗದ ಅವಕಾಶ

ಅರ್ಜಿ ಸಲ್ಲಿಸುವ ವಿಧಾನ

ಹಂತ 1: ಮೊದಲು ಯಾದಗಿರಿ ಜಿಲ್ಲಾ ಪಂಚಾಯತ್‌ನ ಅಧಿಕೃತ ನೇಮಕಾತಿ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ.

ಹಂತ 2: ಕೆಲವು ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಬೇಕು ಅವುಗಳೆಂದರೆ ಮೊಬೈಲ್ ಸಂಖ್ಯೆ, ಇ-ಮೇಲ್ ಐಡಿ, ಪಿಯುಸಿ ಅಂಕಪಟ್ಟಿ, ಆಧಾರ್ ಅಥವಾ ಗುರುತಿನ ಚೀಟಿ, ಪಾಸ್‌ಪೋರ್ಟ್ ಗಾತ್ರದ ಫೋಟೋ, ಸಹಿ, ಮೀಸಲಾತಿ ಪ್ರಮಾಣಪತ್ರ

ಹಂತ 3: ಯಾದಗಿರಿ ಜಿಲ್ಲಾ ಪಂಚಾಯತ್ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.

ಹಂತ 4: Library Supervisor Recruitment 2026 ಅರ್ಜಿ ಲಿಂಕ್ ತೆರೆಯಿರಿ.

ಹಂತ 5: ವೈಯಕ್ತಿಕ ಹಾಗೂ ಶೈಕ್ಷಣಿಕ ಮಾಹಿತಿಯನ್ನು ಸರಿಯಾಗಿ ನಮೂದಿಸಿ.

ಹಂತ 6: ಅಗತ್ಯ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡಿ.

ಹಂತ 7: ಅರ್ಜಿ ಶುಲ್ಕ ಇಲ್ಲದ ಕಾರಣ ಮಾಹಿತಿಯನ್ನು ಪರಿಶೀಲಿಸಿ ನೇರವಾಗಿ ಅರ್ಜಿ ಸಲ್ಲಿಸಿ.

ಹಂತ 8: ಅರ್ಜಿ ಸಲ್ಲಿಸಿದ ಬಳಿಕ Application Number ಅಥವಾ ಅರ್ಜಿಯ ಪ್ರಿಂಟ್ ಅನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಿ.

ಸಾಮಾನ್ಯವಾಗಿ ಕೇಳಲಾಗುವ ಪ್ರಶ್ನೆಗಳು (FAQs)

ಪ್ರಶ್ನೆ: ಯಾದಗಿರಿ ಜಿಲ್ಲಾ ಪಂಚಾಯತ್ ಯಾವ ಹುದ್ದೆಗಳಿಗೆ ನೇಮಕಾತಿ ನಡೆಸುತ್ತಿದೆ?

ಉತ್ತರ: ಒಟ್ಟು 12 ಗ್ರಂಥಾಲಯ ಮೇಲ್ವಿಚಾರಕ (Library Supervisor) ಹುದ್ದೆಗಳ ನೇಮಕಾತಿ ನಡೆಸುತ್ತಿದೆ.

ಪ್ರಶ್ನೆ: ಅರ್ಜಿ ಸಲ್ಲಿಸಲು ಶುಲ್ಕವಿದೆಯೇ?

ಉತ್ತರ: ಇಲ್ಲ. ಈ ನೇಮಕಾತಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.


ಪ್ರಶ್ನೆ: ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ?

ಉತ್ತರ: 2026ರ ಜುಲೈ 27 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.

Published On – 6:11 pm, Fri, 17 July 26

Source link

Exit mobile version