Headlines

ಸುಪ್ರೀಂ ಕೋರ್ಟ್‌ಗೆ ಮತ್ತಷ್ಟು ಶಕ್ತಿ: ನ್ಯಾಯಮೂರ್ತಿಗಳ ಸಂಖ್ಯೆ 38ಕ್ಕೆ ಹೆಚ್ಚಿಸಲು ಲೋಕಸಭೆಯಲ್ಲಿ ಮಸೂದೆ ಮಂಡನೆ – Kannada News | Supreme Court Judges Strength to Rise to 38: Lok Sabha Bill Aims to Clear Case Backlog

ನವದೆಹಲಿ, ಜುಲೈ 20: ಸಂಸತ್ತಿನ ಮುಂಗಾರು ಅಧಿವೇಶನ(Parliament Monsoon Session)ದ ಮೊದಲ ದಿನವಾದ ಇಂದು, ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ಲೋಕಸಭೆಯಲ್ಲಿ ‘ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ತಿದ್ದುಪಡಿ ಮಸೂದೆ, 2026’ ಅನ್ನು ಯಶಸ್ವಿಯಾಗಿ ಮಂಡಿಸಿದರು. ಈ ಮಸೂದೆಯು 1956 ರ ಸುಪ್ರೀಂ ಕೋರ್ಟ್ ಕಾಯ್ದೆಗೆ ತಿದ್ದುಪಡಿ ತರಲಿದ್ದು, ಭಾರತದ ಮುಖ್ಯ ನ್ಯಾಯಮೂರ್ತಿಗಳು (CJI) ಸೇರಿದಂತೆ ಸುಪ್ರೀಂ ಕೋರ್ಟ್‌ನ ಒಟ್ಟು ನ್ಯಾಯಮೂರ್ತಿಗಳ ಸಂಖ್ಯೆ 34 ರಿಂದ 38 ಕ್ಕೆ ಹೆಚ್ಚಿಸಲಿದೆ. ಸುಗ್ರೀವಾಜ್ಞೆಯ ಬದಲಿಗೆ ಶಾಶ್ವತ…

Read More

ಒಂದು ದಿನದ ವೀಕೆಂಡ್‌ ಪ್ರವಾಸಕ್ಕೆ ಇದು ಒಳ್ಳೆಯ ಪ್ಯಾಕೇಜ್: ಕೆಎಸ್‌ಟಿಡಿಸಿಯಿಂದ ಕಡಿಮೆ ದರದಲ್ಲಿ ಜಲಪಾತಕ್ಕೆ ಟೂರ್ – Kannada News | Escape Bengaluru: KSTDC One Day Hogenakkal and Krishnagiri Dam Tour from Bangalore

ಬೆಂಗಳೂರು, ಜು.20: ವೀಕೆಂಡ್‌ನಲ್ಲಿ ಬೆಂಗಳೂರಿನ ಜಂಜಾಟದಿಂದ ದೂರ ಉಳಿದು ಪ್ರಕೃತಿಯ ಮಡಿಲಲ್ಲಿ ಒಂದು ದಿನ ಕಳೆಯಲು ಬಯಸುವ ಪ್ರವಾಸಿಗರಿಗಾಗಿ ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು (KSTDC) ಅತ್ಯಾಕರ್ಷಕ ಪ್ರವಾಸ ಪ್ಯಾಕೇಜ್ ಒಂದನ್ನು ಪರಿಚಯಿಸಿದೆ. ಬೆಂಗಳೂರಿನಿಂದ ಹೊರಟು ತಮಿಳುನಾಡಿನ ಪ್ರಸಿದ್ಧ ಪ್ರವಾಸಿ ತಾಣಗಳಾದ ಕೃಷ್ಣಗಿರಿ ಅಣೆಕಟ್ಟು (Krishnagiri Dam) ಮತ್ತು ಹೊಗೇನಕಲ್ ಜಲಪಾತಕ್ಕೆ (Hogenakkal Falls) ಕೇವಲ 1,480 ರೂ ದರದಲ್ಲಿ ಒಂದು ದಿನದ ಪ್ರವಾಸವನ್ನು ಕೈಗೊಳ್ಳಬಹುದಾಗಿದೆ. ಪ್ರವಾಸದ ದಿನಗಳು ಪ್ರತಿ ವಾರ ರೂಟಿನ್ ಆಗಿ ಶುಕ್ರವಾರ, ಶನಿವಾರ…

Read More

ನೆಟ್‌ಫ್ಲಿಕ್ಸ್‌ನಲ್ಲಿ ಇತಿಹಾಸ ಸೃಷ್ಟಿಸಿದ ‘ಧುರಂಧರ್’; ಜಾಗತಿಕ ಮಟ್ಟದಲ್ಲಿ ದಾಖಲೆ ಬರೆದ ರಣವೀರ್ ಸಿನಿಮಾ – Kannada News | Ranveer Singh Dhurandhar Becomes Netflix Most Watched Non English Film Internationally

ರಣವೀರ್ ಸಿಂಗ್ (Ranveer Singh) ನಟನೆಯ ಸೂಪರ್ ಹಿಟ್ ಸಿನಿಮಾ ‘ಧುರಂಧರ್’ ನೆಟ್‌ಫ್ಲಿಕ್ಸ್‌ನಲ್ಲಿ ಹೊಸ ದಾಖಲೆ ಬರೆದಿದೆ. ಜಾಗತಿಕ ಮಟ್ಟದಲ್ಲಿ ಅತಿ ಹೆಚ್ಚು ವೀಕ್ಷಣೆ ಪಡೆದ ಭಾರತೀಯ ಸಿನಿಮಾ ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಿದೆ. ನೆಟ್‌ಫ್ಲಿಕ್ಸ್ ತನ್ನ ಇತ್ತೀಚಿನ ವರದಿಯಲ್ಲಿ ಈ ಮಹತ್ವದ ಮಾಹಿತಿಯನ್ನು ಹಂಚಿಕೊಂಡಿದೆ. ಆದಿತ್ಯ ಧಾರ್ ನಿರ್ದೇಶನದ ‘ಧುರಂಧರ್’ ಸಿನಿಮಾ ಬರೋಬ್ಬರಿ 37 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ. ನೆಟ್‌ಫ್ಲಿಕ್ಸ್‌ನ ಇಂಗ್ಲಿಷೇತರ ಚಿತ್ರಗಳ ವಿಭಾಗದಲ್ಲಿ ಇದು ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಸಿನಿಮಾ ಎನಿಸಿಕೊಂಡಿದೆ. ಈ ಆಕ್ಷನ್…

Read More

ಇದು ಕೊನೆಯ ತುತ್ತು ತಿನ್ನಮ್ಮ, ನನಗೆ ಬೇಡ ಸಾಕು: ಕಣ್ಣೀರು ತರಿಸ್ತಿದೆ ದೇವೇಗೌಡ – ಚೆನ್ನಮ್ಮ ಈ ಅಪೂರ್ವದ ದೃಶ್ಯ – Kannada News | Chennamma Deve Gowda Demise: Emotional Viral Video of Deve Gowda Feeding Wife

ಬೆಂಗಳೂರು, ಜು.20: ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರ ನೆರಳಾಗಿ, ಸುದೀರ್ಘ ರಾಜಕೀಯ ಏಳುಬೀಳುಗಳ ಪಯಣದಲ್ಲಿ ಸದಾ ಜೊತೆಯಾಗಿ ನಿಂತಿದ್ದ ಅವರ ಧರ್ಮಪತ್ನಿ ಚೆನ್ನಮ್ಮ ದೇವೇಗೌಡ ನಿಧನರಾಗಿದ್ದಾರೆ. ಇಂದು ಅವರ ಅಂತ್ಯಸಂಸ್ಕಾರದ ವಿಧಿವಿಧಾನಗಳು ಸಕಲ ಗೌರವಗಳೊಂದಿಗೆ ನೆರವೇರುತ್ತಿವೆ. ಬರೋಬ್ಬರಿ ಏಳು ದಶಕಗಳ ಕಾಲ ಸಾರ್ಥಕ ದಾಂಪತ್ಯ ಜೀವನವನ್ನು ನಡೆಸಿದ ಚೆನ್ನಮ್ಮ ಅವರು, ಇದೀಗ ದೊಡ್ಡಗೌಡರನ್ನು ಒಬ್ಬಂಟಿ ಮಾಡಿ ಅನಂತ ಲೋಕಕ್ಕೆ ಪ್ರಯಾಣ ಬೆಳೆಸಿದ್ದಾರೆ. ಈ ದುಃಖದ ಸಂದರ್ಭದಲ್ಲಿ ದೇವೇಗೌಡರು ಮತ್ತು ಚೆನ್ನಮ್ಮ ಅವರ ಅಪೂರ್ವ ಪ್ರೀತಿ ಹಾಗೂ…

Read More

ಗೂಗಲ್ ಮ್ಯಾಪ್ ನಂಬಿ ಹೋಗಿ, ಸೇತುವೆ ನಿರ್ಮಾಣಕ್ಕೆಂದು ಅಗೆದಿದ್ದ ಹೊಂಡಕ್ಕೆ ಬಿದ್ದ ಕಾರು – Kannada News | Google Maps Leads Car into Tirupati Construction Ditch: Highway Safety Negligence Exposed

ತಿರುಪತಿ, ಜುಲೈ 20: ತಂತ್ರಜ್ಞಾನ ಎಷ್ಟೇ ಮುಂದುವರೆದಿದ್ದರೂ ಕೆಲವೊಮ್ಮೆ ಕಣ್ಣು ಮುಚ್ಚಿ ನಂಬಿದರೆ ಅಪಾಯ ಕಟ್ಟಿಟ್ಟಬುತ್ತಿ ಎಂಬುದಕ್ಕೆ ಆಂಧ್ರಪ್ರದೇಶದ ತಿರುಪತಿ ಜಿಲ್ಲೆಯಲ್ಲಿ ನಡೆದ ಈ ಘಟನೆಯೇ ಸಾಕ್ಷಿ. ಗೂಗಲ್ ಮ್ಯಾಪ್(Google Map) ತೋರಿಸಿದ ಮಾರ್ಗವನ್ನೇ ಅಂತಿಮ ಎಂದು ನಂಬಿ ಪ್ರಯಾಣಿಸುತ್ತಿದ್ದ ಕಾರೊಂದು, ಸೇತುವೆ ನಿರ್ಮಾಣಕ್ಕಾಗಿ ಅಗೆಯಲಾಗಿದ್ದ ಬೃಹತ್ ಹೊಂಡಕ್ಕೆ ಬಿದ್ದ ಆಘಾತಕಾರಿ ಘಟನೆ ನಡೆದಿದೆ. ವರದಿಗಳ ಪ್ರಕಾರ, ಕಾರು ವೆಂಕಟಗಿರಿಯಿಂದ ತಿರುಪತಿ ಜಿಲ್ಲೆಯ ದಕ್ಕಿಲಿಯ ಕಡೆಗೆ ಕಡೆಗೆ ಹೊರಟಿತ್ತು. ಎರ್ಪೇಡು-ಪೆಂಚಲಕೋಣ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಲಿಂಗಸಮುದ್ರಂ ಎಂಬಲ್ಲಿ ಪ್ರಸ್ತುತ…

Read More

ಬಂಡೀಪುರದಲ್ಲಿ ಏಕಾಏಕಿ ಕಾರುಗಳ ಮೇಲೆ ಕಾಡಾನೆ ದಾಳಿ, ಬೆಚ್ಚಿಬಿದ್ದ ಪ್ರಯಾಣಿಕರು: ವಿಡಿಯೋ ವೈರಲ್ – Kannada News | Bandipur Elephant Vegetable King Returns, Charges at Cars; Viral Video Sparks Concern

ಚಾಮರಾಜನಗರ, ಜುಲೈ 20: ಹಲವು ದಿನಗಳಿಂದ ಸೈಲೆಂಟಾಗಿದ್ದ ಬಂಡೀಪುರದ ‘ತರಕಾರಿ ರಾಜ’ ಕಾಡಾನೆ ಮತ್ತೆ ರಸ್ತೆಗೆ ಇಳಿದು ವಾಹನ ಸವಾರರಲ್ಲಿ ಆತಂಕ ಮೂಡಿಸಿದೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ-ಕೆಕ್ಕನಹಳ್ಳ ರಸ್ತೆಯಲ್ಲಿ ಆಹಾರ ಅರಸಿ ಬಂದ ಆನೆ, ರಸ್ತೆಯಲ್ಲಿ ಸಂಚರಿಸುತ್ತಿದ್ದ ಕಾರುಗಳ ಬಳಿ ತೆರಳಿ ದಾಳಿ ನಡೆಸಿದೆ. ತರಕಾರಿ ಸಾಗಿಸುವ ವಾಹನಗಳನ್ನು ಗುರಿಯಾಗಿಸಿಕೊಂಡು ನಡುರಸ್ತೆಯಲ್ಲೇ ನಿಲ್ಲುವ ಈ ಕಾಡಾನೆ, ಈ ಬಾರಿ ಕಾರುಗಳ ಬಳಿಗೂ ತೆರಳಿ ಪ್ರಯಾಣಿಕರನ್ನು ಬೆಚ್ಚಿಬೀಳಿಸಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ….

Read More

ಸಂಸತ್ ಮುಂಗಾರು ಅಧಿವೇಶನ: ನೀಟ್, ರಾಮಮಂದಿರ ಹಗರಣಗಳ ಬಗ್ಗೆ ಚರ್ಚೆಗೆ ವಿಪಕ್ಷಗಳ ಪಟ್ಟು, ಉಭಯ ಸದನಗಳಲ್ಲಿ ತೀವ್ರ ಗದ್ದಲ – Kannada News | Parliament Monsoon Session: Opposition Sparks Uproar Over NEET and Ram Mandir Issues

ದೆಹಲಿ, ಜುಲೈ 20: ಸಂಸತ್ತಿನ ಮುಂಗಾರು ಅಧಿವೇಶನದ ಮೊದಲ ದಿನವೇ ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ತೀವ್ರ ಗದ್ದಲ ಉಂಟಾಗಿದೆ. ವಿಪಕ್ಷ ಸದಸ್ಯರು ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ಮತ್ತು ಅಯೋಧ್ಯೆ ರಾಮಮಂದಿರ ಕಾಣಿಕೆ ಕಳ್ಳತನದ ವಿಷಯಗಳ ಬಗ್ಗೆ ಚರ್ಚೆಗೆ ಪಟ್ಟು ಹಿಡಿದ ಪರಿಣಾಮ ಕಲಾಪ ಆರಂಭವಾಗುತ್ತಿದ್ದಂತೆ ಗದ್ದಲ ಸೃಷ್ಟಿಯಾಗಿ, ಉಭಯ ಸದನಗಳ ಕಲಾಪ ಗೊಂದಲದ ಗೂಡಾಗಿ ಮಾರ್ಪಟ್ಟಿದೆ. ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯ ಬಗ್ಗೆ ಪ್ರಸ್ತಾಪಿಸಿದ್ದು, ಈ ಹಗರಣದ ವಿರುದ್ಧ…

Read More

ಸಹೋದ್ಯೋಗಿಗೆ ಲೈಂಗಿಕ ಕಿರುಕುಳ, ಬ್ಲ್ಯಾಕ್‌ಮೇಲ್ ಆರೋಪ: ತರಬೇತಿ ನಿರತ ಐಪಿಎಸ್ ಅಧಿಕಾರಿ ಉದಯ್ ಕೃಷ್ಣಾ ರೆಡ್ಡಿ ಆತ್ಮಹತ್ಯೆಗೆ ಯತ್ನ – Kannada News | Trainee IPS Officer Uday Krishna Reddy Hospitalised Amid Serious Harassment Allegations

ಹೈದರಾಬಾದ್, ಜುಲೈ 20: ಹೈದರಾಬಾದ್‌ನ ಸರ್ದಾರ್ ವಲ್ಲಭಭಾಯಿ ಪಟೇಲ್ ರಾಷ್ಟ್ರೀಯ ಪೊಲೀಸ್ ಅಕಾಡೆಮಿಯಲ್ಲಿ (NPA) ತರಬೇತಿ ಪಡೆಯುತ್ತಿದ್ದ ಐಪಿಎಸ್ (IPS) ಅಧಿಕಾರಿ ಉದಯ್ ಕೃಷ್ಣಾ ರೆಡ್ಡಿ ಖಾಸಗಿ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಕರ್ನಾಟಕ ಮೂಲದ ತರಬೇತಿ ನಿರತ ಮಹಿಳಾ ಐಪಿಎಸ್ ಅಧಿಕಾರಿಗೆ ಲೈಂಗಿಕ ಕಿರುಕುಳನೀಡಿದ್ದ ಆರೋಪ ಎದುರಿಸುತ್ತಿರುವ ಉದಯ್ ಇತ್ತೀಚೆಗೆ ಅಮಾನತುಗೊಂಡಿದ್ದರು. ಹೈದರಾಬಾದ್‌ನಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಪ್ರಸ್ತುತ ಅವರನ್ನು ಎಸ್.ಆರ್. ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ. ಕರ್ನಾಟಕದ ಮಹಿಳಾ ಐಪಿಎಸ್ ಅಧಿಕಾರಿಯಿಂದ…

Read More

ಸೋಲಿನ ಬೆನ್ನಲ್ಲೇ ಮೆಸ್ಸಿ ನಿವೃತ್ತಿ ಘೋಷಿಸಿದ್ರಾ? ಇಲ್ಲಿದೆ ಇನ್​ಸೈಡ್ ಸ್ಟೋರಿ – Kannada News | Did Lionel Messi Retire After World Cup Loss? Here’s the Truth

FIFA World Cup 2026: ಫಿಫಾ ವಿಶ್ವಕಪ್​ ಫೈನಲ್ ಸೋಲಿನ ಬೆನ್ನಲ್ಲೇ ಅರ್ಜೆಂಟೀನಾದ ಫುಟ್‌ಬಾಲ್ ದಂತಕಥೆ ಲಿಯೋನೆಲ್ ಮೆಸ್ಸಿ ಅಂತಾರಾಷ್ಟ್ರೀಯ ಆಟಕ್ಕೆ ನಿವೃತ್ತಿ ಘೋಷಿಸಿದ್ದಾರಾ? ಜಾಗತಿಕವಾಗಿ ಇಂತಹದೊಂದು ಪ್ರಶ್ನೆ ಹುಟ್ಟಿಕೊಳ್ಳಲು ಮುಖ್ಯ ಕಾರಣ ನ್ಯೂಜೆರ್ಸಿಯ ಮೆಟ್​ಲೈಫ್ ಸ್ಟೇಡಿಯಂನಲ್ಲಿ ಕಂಡು ಬಂದ ಆ ಭಾವುಕ ದೃಶ್ಯ. ಸ್ಪೇನ್ ವಿರುದ್ಧ ಮುಖಭಂಗ ಅನುಭವಿಸಿದ ತಕ್ಷಣ ಮೆಸ್ಸಿ ಮೈದಾನದಲ್ಲೇ ಕಣ್ಣೀರು ಹಾಕುತ್ತಾ ಹೊರನಡೆದಿದ್ದರು. ಈ ಕಣ್ಣೀರಿನ ಧಾರೆ ಕಂಡು, ಮೆಸ್ಸಿ ಅವರ ಅದ್ಭುತ ವೃತ್ತಿಜೀವನ ಇಲ್ಲಿಗೇ ಅಂತ್ಯವಾಯಿತು ಎಂಬ ವದಂತಿಗಳು ಸಾಮಾಜಿಕ…

Read More

ಯಲಬುರ್ಗಾ: ರೈತರ ಮೇಲೆ ಪಿಎಸ್​ಐ ಗುರುರಾಜ್​ ದೌರ್ಜನ್ಯ ಆರೋಪ, ವಿಡಿಯೋ ವೈರಲ್ – Kannada News | Koppal PSI Gururaj Accused of Misbehaving with Farmers During Power Station Dispute, Video goes viral

ಕೊಪ್ಪಳ, ಜುಲೈ 20: ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಕುದುರಿಮೋತಿ ಗ್ರಾಮದಲ್ಲಿ ವಿದ್ಯುತ್ ಸ್ಥಾವರ ಅಳವಡಿಕೆ ವಿಚಾರವಾಗಿ ರೈತರು ಹಾಗೂ ಪೊಲೀಸರ ನಡುವೆ ವಾಗ್ವಾದ ನಡೆದಿದೆ. ಇದೇ ವೇಳೆ, ಬೇವೂರು ಪೊಲೀಸ್ ಠಾಣೆಯ ಪಿಎಸ್‌ಐ ಗುರುರಾಜ್ ರೈತರ ಮೇಲೆ ದೌರ್ಜನ್ಯ ಎಸಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ರೈತರನ್ನು ಏಕವಚನದಲ್ಲಿ ನಿಂದಿಸಿ ಅವಾಚ್ಯ ಶಬ್ದಗಳಿಂದ ಮಾತನಾಡಿದ್ದಾರೆ ಎನ್ನಲಾಗಿದ್ದು, ಈ ಸಂಬಂಧದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪಿಎಸ್‌ಐ ಗುರುರಾಜ್ ಈ ಹಿಂದೆ ಕುಕನೂರು ಪೊಲೀಸ್ ಠಾಣೆಯಲ್ಲಿ ಕರ್ತವ್ಯ…

Read More